ವಿಷಯದ ವಿವರಗಳಿಗೆ ದಾಟಿರಿ

Posts from the ‘ಭಾರತ’ Category

27
ಆಗಸ್ಟ್

ಉಪನಿಷತ್ ವಾಙ್ಮಯ 2: ಆಮಿಷ ಒಡ್ಡದೆ ಉತ್ತರಿಸು; ಅರಿವಿನ ಮಟ್ಟವನೆತ್ತರಿಸು!

– ಸ್ವಾಮಿ ಶಾಂತಸ್ವರೂಪಾನಂದ
ಉಪನಿಷತ್ ವಾಙ್ಮಯ :- ಉಪನಿಷತ್ ವಾಙ್ಮಯ 1

yama_nachiketaನಚಿಕೇತ ಯಮಸದನಕ್ಕೆ ಹೋದ. ಅಲ್ಲಿ ಮೂರು ದಿನ ಕಾದ. ಭೂಮಿಯಿಂದ ಸೂಕ್ಷ್ಮದೇಹಿಯಾಗಿ ಮೃತ್ಯುವಿನ ಲೋಕಕ್ಕೆ ಹೋಗುತ್ತಿರುವಾಗ ಅವನು ಒಬ್ಬನೇ ಇದ್ದದ್ದಲ್ಲ. ಅವನ ಮುಂದೆ ಸಾವಿರಾರು ಜನ, ಹಿಂದೆ ಸಾವಿರಾರು ಜನ ಸಾಗರದ ರೀತಿಯಲ್ಲಿ ಹೋಗುತ್ತಿದ್ದರಂತೆ. ಅವರೆಲ್ಲರೂ ಯಾವಾವುದೋ ಕಾರಣಕ್ಕೆ ತೀರಿಕೊಂಡರು. ಬದುಕಿನ ಯಾತ್ರೆ ಮುಗಿಸಿ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡವರು. ಭೂಮಿಯ ಮೇಲಿನ ವ್ಯವಹಾರಗಳನ್ನು ಮುಗಿಸಿ ಪರಲೋಕಕ್ಕೆ ಹೊರಟವರು. ಇಲ್ಲಿ ನಾವು ಉಪನಿಷತ್‍ಕಾರನ ಲೋಕಪ್ರಜ್ಞೆಯನ್ನು ಗಮನಿಸಬೇಕು. ಕತೆ ಕೇವಲ ನಚಿಕೇತ ಮತ್ತು ಯಮನ ಮಾತುಕತೆಯ ಸುತ್ತ ಸುತ್ತುವುದಾದರೂ ಉಪನಿಷತ್‍ಕಾರ ಇವೆಲ್ಲ ಸಣ್ಣಸಣ್ಣ ವಿವರಗಳನ್ನು ಕೂಡ ನಮ್ಮ ಕಣ್ಮುಂದೆ ತಂದು ಬೆಚ್ಚಿಬೀಳಿಸುತ್ತಾನೆ. ಭೂಮಿಯಲ್ಲಿ ಪ್ರತಿಕ್ಷಣದಲ್ಲೂ ನೂರಾರು ಜೀವಗಳು ಕೈಕಾಲು-ಪಪ್ಪುಸಗಳ ಕಾರ್ಯ ನಿಲ್ಲಿಸಿ ನಿಶ್ಚೇಷ್ಟಿತವಾಗುತ್ತಲೇ ಇರುತ್ತವೆ; ಪ್ರತಿ ನಿಮಿಷದಲ್ಲೂ ಅಸಂಖ್ಯಾತ ಜನರು ಮೃತ್ಯುವಿಗೆ ಪಕ್ಕಾಗುತ್ತಲೇ ಇರುತ್ತಾರೆ ಎಂಬ ಎಚ್ಚರಿಕೆಯನ್ನು ಓದುಗನಿಗೆ ಅದುಹೇಗೆ ಉಪನಿಷತ್ ದಾಟಿಸುತ್ತದೆ ನೋಡಿ! ಇಂಥ ನೂರಾರು ಜೀವರ ನಡುವಿನಲ್ಲಿ ನಚಿಕೇತನೂ ಇದ್ದ. ಅವನಿಗೆ ಭೂಲೋಕವನ್ನು ಬಿಟ್ಟು ಬಂದೆನಲ್ಲಾ ಎಂಬ ಚಿಂತೆಯೂ ಇರಲಿಲ್ಲ; ದೇವರ ಲೋಕ ಸೇರುವ ದಾರಿಯಲ್ಲಿದ್ದೇನೆಂಬ ಸಂತೋಷವೂ ಇರಲಿಲ್ಲ. ದುಃಖ ಸಂತೋಷಗಳಿಲ್ಲದ ಒಂದು ವಿಚಿತ್ರ ಸ್ಥಿತಿಯಲ್ಲಿ ಅವನು ಯಮಪುರಿಗೆ ಹೋದ. ಮತ್ತಷ್ಟು ಓದು »

25
ಆಗಸ್ಟ್

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

ದಿನ– 11
ಸೋದರಿ ನಿವೇದಿತಾ (ಮಾರ್ಗರೇಟ್ ಎಲಿಜಬೆತ್ ನೊಬೆಲ್)
– ರಾಮಚಂದ್ರ ಹೆಗಡೆ

220px-Sœur_Niveditaವಿದೇಶಿ ನೆಲದಲ್ಲಿ ಹುಟ್ಟಿ ಭಾರತದ ಸೇವೆಗೆ ತನ್ನ ಅರ್ಪಿಸಿಕೊಂಡ, ಭಾರತಕ್ಕಾಗಿಯೇ ತನ್ನ ಪೂರ್ತಿ ಜೀವನ ಅರ್ಪಿಸಿದ ಐರ್ಲೆಂಡ್ ದೇಶದ ಹೆಣ್ಣುಮಗಳು ಮಾರ್ಗರೇಟ್ ಎಲಿಜಬೆತ್ ನೊಬೆಲ್. ಸ್ವಾಮಿ ವಿವೇಕಾನಂದರ ಭಾಷಣ ಹಾಗೂ ಚಿಂತನೆಗಳ ಪ್ರಭಾವಕ್ಕೆ ಒಳಗಾಗಿ ಭಾರತದೆಡೆಗೆ ಆಕರ್ಷಿತರಾದ ಮಾರ್ಗರೇಟ್ ಸ್ವಾಮಿ ವಿವೇಕಾನಂದರಿಂದ ಬ್ರಹ್ಮಚರ್ಯ ಹಾಗೂ ಸೇವೆಯ ದೀಕ್ಷೆ ಪಡೆದು ‘ಸೋದರಿ ನಿವೇದಿತಾ’ ಆದರು. ಬಾಲ್ಯದಿಂದಲೇ ಆಧ್ಯಾತ್ಮದ ಸೆಳೆತ ಹೊಂದಿದ್ದ ಮಾರ್ಗರೇಟ್ ನೊಬೆಲ್ಲರಿಗೆ ಲಂಡನ್ನಿನಲ್ಲಿ ಸ್ವಾಮಿ ವಿವೇಕಾನಂದರ ದರ್ಶನವಾಯಿತು. ಭಾರತೀಯ ಧರ್ಮ, ಸಂಸ್ಕೃತಿ, ವೇದ ಉಪನಿಷತ್ತುಗಳ ಕುರಿತ ಅವರ ಚಿಂತನೆಗಳಿಂದ ಮಂತ್ರಮುಗ್ಧರಾದ ಆಕೆ ಅವರನ್ನೇ ತನ್ನ ‘ಗುರುದೇವ’ ರೆಂದು ಸ್ವೀಕರಿಸಿದರು. ಭಾರತೀಯ ಚಿಂತನೆಗಳ ಅಧ್ಯಯನದಲ್ಲಿ ತೊಡಗಿದ ಆಕೆಗೆ ಭಾರತವನ್ನು ಕಾಣುವ ಹೆಬ್ಬಯಕ್ಕೆ ಹುಟ್ಟಿತು. ಸ್ವಾಮೀಜಿ ಅವರೊಂದಿಗೆ ನಿರಂತರವಾಗಿ ಪತ್ರ ಸಂಪರ್ಕದಲ್ಲಿದ್ದ ಅವರಿಗೆ ಒಮ್ಮೆ ಸ್ವಾಮೀಜಿ ಹೀಗೆ ಬರೆದರು: “ನನ್ನ ದೇಶದ ಸ್ತ್ರೀಯರಿಗೆ ವಿದ್ಯಾಭ್ಯಾಸ ಕೊಡುವ ಅಗತ್ಯ ತುಂಬಾ ಇದೆ. ಅದಕ್ಕೆ ತಕ್ಕ ಯೋಜನೆಗಳನ್ನು ಹಾಕುತ್ತಿದ್ದೇನೆ. ನಿನ್ನಿಂದ ನನಗೆ ತುಂಬಾ ಸಹಾಯವಾದೀತು. ಇಲ್ಲಿ ನಿನಗಾಗಿ ಸಹಸ್ರಾರು ಮಹಿಳೆಯರು ಕಾಯುತ್ತಿದ್ದಾರೆ.” ಎಂದು ಬರೆದರು. ಈ ಕರೆಗೆ ಓಗೊಟ್ಟ ಮಾರ್ಗರೆಟ್ ಭಾರತಕ್ಕೆ ಬಂದು ಇಲ್ಲಿಯ ಸ್ತ್ರೀಯರ ಅನಕ್ಷರತೆ, ಅಜ್ಞಾನಗಳನ್ನು ತೊಡೆದು ಅವರ ಸರ್ವಾಂಗೀಣ ಉದ್ಧಾರಕ್ಕೆ ತೊಡಗಬೇಕೆಂಬ ನಿರ್ಧಾರವನ್ನು ಮನದಾಳದಿಂದ ಕೈಗೊಂಡರು. ಮತ್ತಷ್ಟು ಓದು »

24
ಆಗಸ್ಟ್

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

ದಿನ – 10
ಹಲಗಲಿಯ ಬೇಡರು
– ರಾಮಚಂದ್ರ ಹೆಗಡೆ
bedaಬ್ರಿಟಿಷ್ ಸರ್ಕಾರದ ದೌರ್ಜನ್ಯ ದೇಶದಾದ್ಯಂತ ಆವರಿಸಿದ್ದ ಕಾಲ. ಅದಕ್ಕೆ ಉತ್ತರವಾಗಿ 1857 ರಲ್ಲಿ ದೇಶದ ವಿವಿದೆಡೆಗಳಲ್ಲಿ ಪ್ರಖರ ಹೋರಾಟ ಆರಂಭವಾಯಿತು. 1857 ರ ನವೆಂಬರ್ ನಲ್ಲಿ ಆಂಗ್ಲ ಸರ್ಕಾರ ‘ನಿಶ್ಶಸ್ತ್ರೀಕರಣ ಕಾನೂನನ್ನು’ ಜಾರಿಗೆ ತಂದು ದೇಶದ ಯಾರೂ ತಮ್ಮ ಬಳಿ ಯಾವುದೇ ಶಸ್ತ್ರಗಳನ್ನು ಹೊಂದುವಂತಿಲ್ಲ ಎಂಬ ಕರಾಳ ನಿಯಮವನ್ನು ಹೇರಿತು. ಅದರ ಪ್ರಕಾರ ಎಲ್ಲರೂ ತಮ್ಮಲ್ಲಿದ್ದ ಶಸ್ತ್ರಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕಾಯ್ತು. ಆದರೆ ಬೇಡರಿಗೆ ಆಯುಧಗಳೇ ಜೀವನೋಪಾಯದ ಆಧಾರಗಳು. ಹಾಗಾಗಿ ಆಯುಧಗಳನ್ನು ಹಿಂತಿರುಗಿಸುವುದಿಲ್ಲ ಎಂದು ಇದರ ವಿರುದ್ಧ ದಿಟ್ಟ ದನಿಯೆತ್ತಿ ಬ್ರಿಟಿಷ್ ಸರ್ಕಾರವನ್ನು ಬೆಚ್ಚಿ ಬೀಳಿಸಿ ಪ್ರಾಣಾರ್ಪಣೆಗೈದವರು ನಮ್ಮ ಕರ್ನಾಟಕದ ಹಲಗಲಿಯ ಬೇಡರು. ಮತ್ತಷ್ಟು ಓದು »

23
ಆಗಸ್ಟ್

“ಭಾರತ್ ಕಿ ಬರ್ಬಾದಿ” ಕೂಗಿನ ಹಿಂದಿರುವ ಕೈಗಳು ಯಾರದ್ದು?

– ರಾಕೇಶ್ ಶೆಟ್ಟಿ

downloadಉಗ್ರ ಬರ್ಹನ್ ವಾನಿಯ ಹತ್ಯೆಯಾಗಿ ಒಂದು ತಿಂಗಳು ಕಳೆದು ಕಾಶ್ಮೀರ ಕಣಿವೆಯ ಒಂದೆರಡು ಜಿಲ್ಲೆಗಳನ್ನು ಬಿಟ್ಟು ಉಳಿದೆಲ್ಲವೂ ತಣ್ಣಗಾಗಿದ್ದರೂ ಕಾಶ್ಮೀರಿ ಪ್ರತ್ಯೇಕತಾವಾದಿಗಳಿಗೆ ಬೆಂಬಲ ನೀಡುತ್ತಿರುವ ದೇಶದ್ರೋಹಿಗಳ ಕೂಗು ಇನ್ನು ತಣ್ಣಗಾಗಿಲ್ಲ. ಇಷ್ಟು ದಿನ ಶ್ರೀನಗರದಲ್ಲೋ, ದೆಹಲಿಯ JNUವಿನಲ್ಲೋ, ಉತ್ತರ ಭಾರತದಲ್ಲೆಲ್ಲೋ ಕಾಣಿಸಿಕೊಳ್ಳುತ್ತಿದ್ದ ಈ Urban Naxalರು ಈಗ ನಮ್ಮ ಬೆಂಗಳೂರಿಗೂ ಕಾಲಿಟ್ಟಿದ್ದಾರೆ. ಕಾಶ್ಮೀರದಲ್ಲಿ ಪಾಕಿಸ್ತಾನಿ ಪ್ರಾಯೋಜಿತ ಗಲಭೆ ಶುರುವಾಗಿ ಒಂದು ವಾರ ಕಳೆಯುವಷ್ಟರಲ್ಲೇ (ಜುಲೈ15,16) We Stand with Kashmir ಎನ್ನುವ ಹೆಸರಿನೊಂದಿಗೆ ಬೆಂಗಳೂರಿನ ಟೌನ್ ಹಾಲ್ ಮುಂದೆ ನಿಂತು “ಕಾಶ್ಮೀರದ ಆಜಾದಿ” ಕೇಳಲು ಹೊರಟಿದ್ದ ಈ ಅರ್ಬನ್ ನಕ್ಸಲರ ಆಸೆಗೆ ನಾವೊಂದಿಷ್ಟು ಜನರು ಸೇರಿ ತಣ್ಣಿರೇರಚಿದ್ದೆವು. ಅದಾದ ನಂತರ, ‘ತಾತ್ಕಾಲಿಕವಾಗಿ’ ನಾವು ಅವರನ್ನು ತಡೆದಿದ್ದೇವೆ ಅಂತಲೇ ನಾನು ಬರೆದಿದ್ದೆ. ಆ ಆತಂಕ ನಿಜವೆಂಬಂತೆ ಮೊನ್ನೆ ಆಗಸ್ಟ್ 13ರಂದು ಅಮ್ನೆಸ್ಟಿ ಇಂಡಿಯಾ ಎಂಬ NGO ಹೆಸರಿನಡಿಯಲ್ಲಿ, ಕಳ್ಳರೆಲ್ಲಾ ಸಂತೆಯಲ್ಲಿ ಒಂದಾಗುವಂತೆ ಬಂದು ಸೇರಿಕೊಂಡಿದ್ದಾರೆ. ಮತ್ತಷ್ಟು ಓದು »

17
ಆಗಸ್ಟ್

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

ದಿನ – 8
ಮೇಡ೦ ಭಿಕಾಜಿ ಕಾಮಾ:
– ರಾಮಚಂದ್ರ ಹೆಗಡೆ

download (2)ಭಾರತದ ಸ್ವಾತ೦ತ್ರ್ಯ ಸ೦ಗ್ರಾಮದ ಇತಿಹಾಸದಲ್ಲಿ ಧ್ರುವತಾರೆಯಾಗಿ ಮೆರೆದ ಮಹಿಳೆಯರಲ್ಲಿ ಒಬ್ಬರು ಮು೦ಬೈನ ಮೇಡ೦ ಭಿಕಾಜಿ ಕಾಮಾ. ಮೇಡಂ ಕಾಮಾ ಚಿಕ್ಕಂದಿನಿಂದಲೂ ಆಪಾರ ದೇಶಾಭಿಮಾನಿ. ತೀವ್ರ ಪ್ಲೇಗ್ ರೋಗಕ್ಕೆ ತುತ್ತಾಗಿ ಆಕೆ ಬಂಧುಗಳ ಒತ್ತಾಯದ ಮೇರೆಗೆ ದೇಶ ತ್ಯಜಿಸಿ ಲಂಡನ್ ಗೆ ಹೋಗಬೇಕಾಯಿತು. ಅಲ್ಲಿ ಗುಣಮುಖಳಾದ ಕಾಮಾ ಅಲ್ಲೇ ತನ್ನ ರಾಷ್ಟ್ರ ಜಾಗೃತಿಯ ಕಾರ್ಯಗಳನ್ನು ಆರಂಭಿಸಿದಳು. ಪರದೇಶದಲ್ಲೇ ಇತರ ದೇಶಭಕ್ತರೊಡಗೂಡಿ ಭಾರತದ ಧ್ವಜವನ್ನು ರೂಪಿಸಿದ ಮೇಡಂ ಕಾಮಾ ಜರ್ಮನಿಯ ಸ್ಪಟ್‌ಗಾರ್ಟ್‌‌ನಲ್ಲಿ ನಡೆದ ಅಂತರರಾಷ್ಟ್ರೀಯ ಸಮಾಜವಾದಿ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿ ಅಲ್ಲಿ ಭಾರತೀಯರ ಕಷ್ಟ ಕಾರ್ಪಣ್ಯ ಹಾಗೂ ಬ್ರಿಟಿಷರ ದೌರ್ಜನ್ಯಗಳ ಕುರಿತು ದಿಟ್ಟವಾಗಿ ವಾದ ಮಂಡಿಸಿದಳು. ಅಲ್ಲೇ ಭಾರತ ಧ್ವಜವನ್ನು ಹಾರಿಸಿ ನೆರೆದಿದ್ದ ಎಲ್ಲರೂ ಅದಕ್ಕೆ ಗೌರವ ಸಲ್ಲಿಸುವಂತೆ ಮಾಡಿದಳು. ಮತ್ತಷ್ಟು ಓದು »

17
ಆಗಸ್ಟ್

ಅಂದು ಜೆ ಎನ್ ಯು, ಇಂದು ಬೆಂಗಳೂರು

– ತನ್ಮಯೀ ಪ್ರೇಮ್ ಕುಮಾರ್

downloadಜೆಎನ್‌ಯುನಲ್ಲಿ ನಡೆದ ದೇಶದ್ರೋಹದ ಕೆಲಸಗಳು, ಘೋಷಣೆಗಳು, ಬೌದ್ಧಿಕ ದಾರಿದ್ರ್ಯತನವನ್ನು, ವೈಚಾರಿಕ ಗುಲಾಮಿತನದ ಪರಿಸ್ಥಿತಿ ಕಂಡು ಮರುಗಿದ್ದೆ. ಎಷ್ಟೋ ಅಸಹನೆಯ ರಾತ್ರಿಗಳನ್ನು ನಿದ್ದೆಯಿಲ್ಲದೆ ಕಳೆದಿದ್ದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಭಟನೆ, ವಿಚಾರ ಸಂಕಿರಣ, ಆಂದೋಲನದ ಭಾಗವಾಗಿದ್ದೆ ಕೂಡ. ಆದರೆ ಶಾಂತಿಪ್ರಿಯ ಬೆಂಗಳೂರಿನಲ್ಲಿ ಇಂಥದೇ ಘಟನೆ ನಡೆಯಬಹುದೆಂಬ ಕಲ್ಪನೆ ಕನಸಿನಲ್ಲೂ ಬಂದಿರಲಿಲ್ಲ. ಮೊನ್ನೆ ಜೆಎನ್‌ಯು ವಿವಿಯ ಸ್ನೇಹಿತೆಯೊಬ್ಬಳು ಸಿಕ್ಕಾಗಲೂ ಕರ್ನಾಟಕ ಇಂಥ ಘಟನೆಗಳಿಂದ ಮುಕ್ತವಾಗಿದೆ ಎಂಬ ಗರ್ವದಿಂದ ಮಾತನಾಡಿದ್ದೆ. ಮೊನ್ನೆಯವರೆಗೆ ಎಲ್ಲರ ನಂಬಿಕೆಯೂ ಅದೇ ಆಗಿತ್ತು. ಆದರೆ ಆಗಸ್ಟ್ 13ರ ಸಂಜೆ ಭಾರತ 70ನೇ ಸ್ವಾತಂತ್ರ್ಯ ಸಂಭ್ರಮದ ಹೊಸ್ತಿಲಲ್ಲಿ ನಿಂತ ಸಂದರ್ಭದಲ್ಲಿ ನಮ್ಮ ವಿಶ್ವಾಸಕ್ಕೆ, ನೆಮ್ಮದಿಯ ಬಾಳಿಗೆ ಕೊಡಲಿ ಪೆಟ್ಟು ಬೀಳುವಂತ ಘಟನೆ ನಡೆದಿದೆ. ಮತ್ತಷ್ಟು ಓದು »

16
ಆಗಸ್ಟ್

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

ದಿನ – 7:
ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಷ್ಫಾಕ್ ಉಲ್ಲಾ ಖಾನ್

– ರಾಮಚಂದ್ರ ಹೆಗಡೆ

collage_305_121915014504ಭಾರತ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಷ್ಫಾಕ್ ಉಲ್ಲಾ ಖಾನ್ ರದ್ದು ಒಂದು ವಿಶೇಷ ಅಧ್ಯಾಯ. ಹಿಂದೂ ಮುಸ್ಲಿಂ ಭ್ರಾತೃತ್ವದ ಒಂದು ಅಪರೂಪದ ಉದಾಹರಣೆ ಈ ಇಬ್ಬರದು. ಇವರಿಬ್ಬರ ಮಧ್ಯೆ ಮತೀಯ ಸಂಘರ್ಷ ತಂದಿಡುವ ಬ್ರಿಟಿಷರ ಹುನ್ನಾರಕ್ಕೆ ದಿಟ್ಟ ಉತ್ತರವಾಗಿ ನೇಣಿಗೇರುವವರೆಗೂ ಒಂದಾಗಿ ರಾಷ್ಟ್ರೀಯ ಚಿಂತನೆಗೆ ತಮ್ಮನ್ನು ಅರ್ಪಿಸಿಕೊಂಡ ಮಹಾನ್ ದೇಶಭಕ್ತರು. ತಮ್ಮ ತಮ್ಮ ಧರ್ಮಗಳಿಗೆ ಬದ್ಧರಾಗಿಯೂ ಈ ದೇಶಕ್ಕೆ ನಿಷ್ಠರಾಗಲು ಸಾಧ್ಯ ಎಂಬುದನ್ನು ಈ ದೇಶಭಕ್ತ ಜೋಡಿ ತೋರಿಸಿಕೊಟ್ಟಿದೆ ಹಾಗೂ ಇಂದಿನ ಪ್ರತ್ಯೇಕತಾವಾದಿಗಳಿಗೆ ಇವರ ಬದುಕು ಒಂದು ಪಾಠ. ಮತ್ತಷ್ಟು ಓದು »

15
ಆಗಸ್ಟ್

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

ದಿನ – 6:
ಭೂಪೇಂದ್ರನಾಥ ದತ್ತ :
– ರಾಮಚಂದ್ರ ಹೆಗಡೆ

170px-Swami_Vivekananda_July_1895_Thousand_Island_Parkದೇಶವನ್ನು ದಾಸ್ಯದಿಂದ ಮುಕ್ತಿಗೊಳಿಸಲು ಒಂದೇ ಕುಟುಂಬದ ತಾಯಿ ಮಗ ಸೊಸೆ ಸೆರೆವಾಸ ಅನುಭವಿಸಿದ ಕಥೆಯನ್ನು ನಿನ್ನೆಯ ಮೈಲಾರ ಮಹಾದೇವರ ಸ್ಮರಣೆಯಲ್ಲಿ ಓದಿದ್ದೇವೆ. ದೇಶಾದ್ಯಂತ ಹಾಗೆ ಅನೇಕ ಕುಟುಂಬಗಳು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ತಮ್ಮನ್ನು ಸಂಪೂರ್ಣ ದಾಸ್ಯ ವಿಮೋಚನೆಯ ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಇದು ಅಂತಹದೇ ಮತ್ತೊಂದು ದೇಶಭಕ್ತ ಕುಟುಂಬದ ಸ್ಮರಣೆ. ಇದು ಕಲಕತ್ತೆಯ ವಿಶ್ವನಾಥ ದತ್ತ ಹಾಗೂ ಭುವನೇಶ್ವರಿ ದೇವಿ ದಂಪತಿಗಳ ಇಬ್ಬರು ಪುತ್ರರತ್ನಗಳು ದೇಶದ ದಾಸ್ಯ ವಿಮುಕ್ತಿ ಹಾಗೂ ಭವಿಷ್ಯದ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ಅರ್ಪಿಸಿಕೊಂಡ ಪ್ರೇರಣಾದಾಯಿ ಕಥೆ. ಒಬ್ಬರು ನರೇಂದ್ರನಾಥ ದತ್ತ ಮುಂದೆ ‘ಸ್ವಾಮಿ ವಿವೇಕಾನಂದ’ ರಾಗಿ ಭಾರತದ ಆಧ್ಯಾತ್ಮ ಯೋಗ ವೇದಾಂತಗಳ ಸಾರವನ್ನು ಜಗತ್ತಿಗೇ ಬೋಧಿಸಿ ವಿಶ್ವದ ಮನಗೆದ್ದರೆ ಮತ್ತೊಬ್ಬರು ಭೂಪೇಂದ್ರನಾಥ ದತ್ತ ಶ್ರೇಷ್ಠ ಕ್ರಾಂತಿಕಾರಿಯಾಗಿ ಭಾರತೀಯ ಸ್ವಾತಂತ್ರ್ಯ ಚಳುವಳಿಯ ಕ್ರಾಂತಿಕಾರಿ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದರು. ಭೂಪೇಂದ್ರರು ಕ್ರಾಂತಿಕಾರಿ ಸಂಘಟನೆಗಳಾದ ಯುಗಾಂತರ ಹಾಗೂ ಅನುಶೀಲನ ಸಮಿತಿಯ ಪ್ರಮುಖ ಸದಸ್ಯರಾಗಿದ್ದರು. ಬ್ರಿಟಿಷರನ್ನು ಹೊಡೆದೋಡಿಸಲು ಹಾಗೂ ಭಾರತವನ್ನು ಸ್ವಾತಂತ್ರ್ಯಗೊಳಿಸಲು ಕ್ರಾಂತಿಯೇ ಸರಿಯಾದ ಮಾರ್ಗ ಎಂಬುದು ಯುಗಾಂತರದ ನಂಬಿಕೆಯಾಗಿತ್ತು. ಮತ್ತಷ್ಟು ಓದು »

14
ಆಗಸ್ಟ್

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

ದಿನ– 5 : ಮೈಲಾರ ಮಹದೇವ
– ರಾಮಚಂದ್ರ ಹೆಗಡೆ

31byd11857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲಿನಿಂದಲೇ ಆರಂಭಿಸಿ, ಕ್ವಿಟ್ ಇಂಡಿಯಾ ಚಳುವಳಿ, ನಂತರ ಬ್ರಿಟಿಷರು ಭಾರತ ಬಿಟ್ಟು ತೊಲಗುವವರೆಗೆ ಕರ್ನಾಟಕದಲ್ಲೂ ದೊಡ್ಡ ಮಟ್ಟದಲ್ಲಿ ವಿವಿಧ ರೀತಿಯ ಹೋರಾಟಗಳು ನಡೆದವು. ಹೋರಾಟದ ಕಿಚ್ಚು, ಕ್ರಾಂತಿಯ ಕಿಡಿ ವಿವಿಧ ರೂಪದಲ್ಲಿ ಪ್ರಕಟಗೊಂಡು ಸಾವಿರಾರು ಮಂದಿ ಭಾರತ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದರು. ಹಾಗೆ ಬ್ರಿಟಿಷರ ಗುಂಡಿಗೆ ಎದೆಕೊಟ್ಟು ವೀರಸ್ವರ್ಗವೇರಿದ ಅಪ್ರತಿಮ ಬಲಿದಾನಿಗಳಲ್ಲಿ ಹಾವೇರಿ ಜಿಲ್ಲೆ ಮೋಟೆಬೆನ್ನೂರಿನ ಮೈಲಾರ ಮಹದೇವ ಅವರ ಪಾತ್ರ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿದೆ. ಸ್ವಾತಂತ್ರ್ಯಾಂದೋಲನದಲ್ಲಿ ಮಹದೇವರ ತಾಯಿ ಬಸಮ್ಮ ಕೂಡಾ ಸೆರೆಮನೆವಾಸ ಅನುಭವಿಸಿದವರು. ಮತ್ತಷ್ಟು ಓದು »

14
ಆಗಸ್ಟ್

ವೇದಾಂತದ ಕಥೆಗಳ ಆಧಾರದಲ್ಲಿ ಇತಿಹಾಸ ಶಬ್ದದತ್ತ ಕಿರುನೋಟ

– ವಿನಾಯಕ ಹಂಪಿಹೊಳಿ

download (3)ಹಿಸ್ಟರಿ ಎನ್ನುವ ಶಬ್ದದ ಸ್ವರೂಪವು ಬೈಬಲ್ಲಿನ ಥಿಯಾಲಜಿಯಲ್ಲಿ ನಮಗೆ ಕಾಣಸಿಗುತ್ತದೆ. ಪ್ರತಿಯೊಂದು ಸಮಾಜಕ್ಕೂ ಗಾಡ್ ತನ್ನ ಸಂದೇಶಗಳನ್ನು ಪ್ರವಾದಿಗಳ ಮೂಲಕ ತಲುಪಿಸಿರುತ್ತಾನೆ. ಇದು ಒಂದಾನೊಂದು ಕಾಲದಲ್ಲಿ ಆ ಸಮಾಜದಲ್ಲಿ ನಡೆದಿರುವ ಘಟನೆಯಾಗಿರುತ್ತದೆ. ಆ ಸಮಾಜದ ಜನರನ್ನು ಅರಿತುಕೊಳ್ಳಲು ಹಾಗೂ ಅಲ್ಲಿನ ಜನರು ಆಚರಿಸುವ ಪದ್ಧತಿಗಳಲ್ಲಿ ರಿಲಿಜಿಯಸ್ ಯಾವುದು ಎಂದು ಗುರುತಿಸಿಕೊಳ್ಳಲು ಈ ಸಂದೇಶಗಳು ಅಗತ್ಯ. ಹೀಗಾಗಿ ಸಮುದಾಯವೊಂದನ್ನು ಅಧ್ಯಯನ ಮಾಡುವಾಗ ಆ ಸಮುದಾಯದಲ್ಲಿ ಗಾಡ್ ಯಾವಾಗ ಮಧ್ಯಪ್ರವೇಶಿಸಿ ತನ್ನ ಸಂದೇಶಗಳನ್ನು ನೀಡಿದ್ದ ಎನ್ನುವುದನ್ನು ಕಂಡುಕೊಳ್ಳುವದು ಅಗತ್ಯ. ಹಿಸ್ಟರಿ ಎನ್ನುವ ಅಧ್ಯಯನ ಕ್ರಮವು ಈ ಪ್ರಕ್ರಿಯೆಯಿಂದಲೇ ಹುಟ್ಟಿರುತ್ತದೆ. ಲಭ್ಯವಿರುವ ಶಾಸನಗಳ ಆಧಾರದಲ್ಲಿ ಸಮಂಜಸವಾದ ವಿವರಣೆಯೊಂದನ್ನು ಕಟ್ಟಿಕೊಡುವುದೇ ಹಿಸ್ಟರಿಯ ಧ್ಯೇಯ. ಹಿಸ್ಟರಿ ಶಬ್ದಕ್ಕೆ ಪರ್ಯಾಯವಾಗಿ ನಾವು ಇತಿಹಾಸ ಎಂಬ ಶಬ್ದವನ್ನು ಬಳಸುತ್ತ ಬಂದಿದ್ದೇವೆ. ಆದರೆ ವಸಾಹತು ಪ್ರಜ್ಞೆಗೂ ಪೂರ್ವದಲ್ಲಿ ಇತಿಹಾಸ ಎಂಬ ಶಬ್ದವು ಏನನ್ನು ಪ್ರತಿನಿಧಿಸುತ್ತಿತ್ತು? ಸದ್ಯಕ್ಕೆ ಉಪನಿಷತ್ತುಗಳ ಕಥೆ ಮತ್ತು ಅದಕ್ಕೆ ಶಂಕರಾಚಾರ್ಯರು ಬರೆದ ಭಾಷ್ಯಗಳನ್ನು ಆಧಾರವಾಗಿಟ್ಟುಕೊಂಡು ಚರ್ಚಿಸೋಣ. ಮತ್ತಷ್ಟು ಓದು »