ವಿಷಯದ ವಿವರಗಳಿಗೆ ದಾಟಿರಿ

Posts from the ‘ಭಾರತ’ Category

6
ಜುಲೈ

ಅಂಬೇಡ್ಕರ್ ಅವರಿಗೂ ಬೇಡವಾಗಿತ್ತು ಆರ್ಟಿಕಲ್ 370

– ರಾಕೇಶ್ ಶೆಟ್ಟಿ

“ಮಿ.ಅಬ್ದುಲ್ಲಾ, ಭಾರತ ಕಾಶ್ಮೀರವನ್ನು ರಕ್ಷಿಸಬೇಕು, ಅಭಿವೃದ್ಧಿಗೊಳಿಸಬೇಕು ಮತ್ತು ಕಶ್ಮೀರಿಗಳಿಗೆ ಭಾರತದ ಇತರ ಪ್ರಜೆಗಳಂತೆಯೇ ಸಮಾನ ಹಕ್ಕುಗಳಿರಬೇಕೆಂದು ನೀವು ಬಯಸುತ್ತೀರ. ಆದರೆ, ಭಾರತ ಮತ್ತು ಭಾರತೀಯರಿಗೆ ಕಾಶ್ಮೀರ ರಾಜ್ಯದಲ್ಲಿ ಯಾವುದೇ ಹಕ್ಕುಗಳು ಇರಬಾರದು ಎನ್ನುತ್ತೀರ. ನಾನು ಭಾರತದ ಕಾನೂನು ಮಂತ್ರಿ, ನನ್ನ ದೇಶದ ಹಿತಾಸಕ್ತಿಯನ್ನು ನಾನು ಕಡೆಗಣಿಸಲಾರೆ… “, ಆರ್ಟಿಕಲ್ 370ರನ್ನು ಸಂವಿಧಾನದಲ್ಲಿ ಸೇರಿಸಿ ಜಮ್ಮು ಕಾಶ್ಮೀರದಲ್ಲಿ ಜಾರಿಗೊಳಿಸುವ ವಿಷಯದಲ್ಲಿ ಅಂಬೇಡ್ಕರ್ ಅವರನ್ನು ಒಪ್ಪಿಸಲು ನೆಹರೂ ಸಲಹೆ ಮೇರೆಗೆ ಬಂದಿದ್ದ ಶೇಖ್ ಅಬ್ದುಲ್ಲಾನ ಮುಖಕ್ಕೆ ಹೊಡೆದಂತೆ ಡಾ.ಅಂಬೇಡ್ಕರ್ ಅವರು ಹೇಳಿ ಕಳುಹಿಸಿದ್ದು ಹೀಗೆ. ಖುದ್ಧು  ಸಂವಿಧಾನ  ಶಿಲ್ಪಿಯೇ ವಿರೋಧಿಸಿದ್ದ ಈ ಆರ್ಟಿಕಲ್ 370ಯನ್ನು ಅಂದು ಅವರ ಬಾಯಿ  ಮುಚ್ಚಿಸಲು  “ತಾತ್ಕಾಲಿಕ” ಎಂಬ ಪದ ಬಳಸಲಾಯಿತು. ಹೆಂಡ ಕುಡಿದ ಮರ್ಕಟದಂತಾಡುತ್ತಿದ್ದ  ನೆಹರೂ  ಸಾಹೇಬರು, ತಮ್ಮ ಬಾಲವನ್ನು ಶೇಖ್ ಅಬ್ದುಲ್ಲಾನ ಕೈಗೆ ಇಟ್ಟಾಗಿತ್ತು. ಆರ್ಟಿಕಲ್  370  ಜಾರಿಯಾಗುತ್ತಿದಂತೆ ಹಿಂಬಾಗಿಲ ಮೂಲಕ ಅದಕ್ಕಿಂತಲೂ ಘೋರವಾದ ವಿಧಿ 35A ಅನ್ನು  ಜಮ್ಮು ಕಾಶ್ಮೀರಕ್ಕೆ ಅನ್ವಯಿಸಲಾಯಿತು. ಅಂದು ಅಂಬೇಡ್ಕರ್ ಅವರು ವಿರೋಧಿಸಿದ್ದ ಆರ್ಟಿಕಲ್ 370 ರದ್ಧತಿ ಬಗ್ಗೆ ಮಾತನಾಡುತ್ತಿರುವುದು ಕೇವಲ ಬಿಜೆಪಿ ಮಾತ್ರವೇ. ಹಾಗೂ ಇದನ್ನು ವಿರೋಧಿಸುವವರು ಕಾಂಗ್ರೆಸ್ ಇತ್ಯಾದಿ ಸೆಕ್ಯುಲರ್ ಪಕ್ಷಗಳು ಹಾಗೂ ಸೋ-ಕಾಲ್ಡ್ ಸಂವಿಧಾನ ರಕ್ಷಕರು…! ಮತ್ತಷ್ಟು ಓದು »

3
ಜುಲೈ

ಜನ್ಮಾಷ್ಟಮಿಗೂ ಇಮಾಮ್ ಸಾಹೇಬ್ರಿಗೂ ಏನು ಸಂಬಂಧ ಎಂದು ಕೇಳುತ್ತಿರಾ?? ಖಂಡಿತಾ ಸಂಬಂಧ ಇದೆ..!!

– ಅಜಿತ್ ಶೆಟ್ಟಿ ಹೆರಾಂಜೆ

ಹೌದು ಉಡುಪಿಯ ಮಟ್ಟಿಗೆ ಜನ್ಮಾಷ್ಟಮಿಗೂ ಇಮಾಮ್ ಸಾಹೇಬ್ರಿಗೂ ಖಂಡಿತಾ ಸಂಬಂಧ ಇದೆ. ದುರಂತ ಅಂದ್ರೆ ಈ ಸಂಬಂಧದ ಬಗ್ಗೆ ನಮಗೆ ಯಾರೂ ಎಂದೂ ಹೆಳಿದವರೇ ಇಲ್ಲ. ಶಾಲಾ ಕಾಲೇಜುಗಳಲ್ಲಿ ನಮ್ಮ ಯಾವುದೇ ಶಿಕ್ಷಕರು ಈ ಸಂಬಂಧದ ಬಗ್ಗೆ ಪಾಠ ಮಾಡಲಿಲ್ಲ. ನಮಗೆ ಗಾಂಧಿ ಗೊತ್ತಿತ್ತು, ನಮಗೆ ಬುದ್ದ ಗೊತ್ತಿತ್ತು, ನಮಗೆ ಅಕ್ಬರ್ ಗೊತ್ತಿತ್ತು, ನಮಗೆ ಮುಸೊಲಿನಿ, ಹಿಟ್ಲರ್ ಚಗುವೇರ ಗೊತ್ತಿತ್ತು. ಆದ್ರೆ ನಮ್ಮೂರಿನ ಮಹಾತ್ಮರ ಬಗ್ಗೆ ಗೊತ್ತೇ ಇಲ್ಲ. ಅವರು ನಮ್ಮ ಸಮಾಜವನ್ನು ಕಟ್ಟಲು ತಮ್ಮ ಇಡಿ ಜೀವಮಾನದ ಗಳಿಕೆಯನ್ನೆಲ್ಲವೂ ಸಮಾಜದ ಉದ್ದಾರಕ್ಕಾಗಿ ನೀರಿನಂತೆ ಹರಿಸಿ, ತಮ್ಮ ಇಡಿ ಜೀವನವನ್ನು ಸಮಾಜಕ್ಕಾಗಿ ತೇದಿ ಸವೆದು ಸದ್ದಿಲ್ಲದೆ ಮರೆಯಾದವರು. ಅವರಿಗೆ ಯಾವುದೇ ಪ್ರಚಾರದ ಹಂಗಿರಲಿಲ್ಲ, ಅವರಿಗೆ ತಮ್ಮ ಸಮಾಜದ ಬಗೆಗಿನ ತಾವು ನಿಭಾಯಿಸಬೇಕಿದ್ದ ಕರ್ತವ್ಯಗಳ ಅರಿವಿತ್ತು, ಸಮಸ್ಯೆಗಳು ಬಂದಾಗ ಅದನ್ನ ಸರ್ಕಾರ ಅಥವಾ ಇನ್ಯಾರೋ ಪರಿಹರಿಸಲಿ ಎಂದು ಯಾವತ್ತೂ ಕಾದವರಲ್ಲ. ಅವರು ಸ್ವತಃ ತಾವೇ ಅಂತಹಾ ಸಮಸ್ಯೆಗಳಿಗೆ ಎದೆಯೊಡ್ಡಿ ನಿಂತು ಪರಿಹರಿಸಿದವರು. ಆಗ ಅವರ ಕಣ್ಣಲ್ಲಿ ಜಾತಿ, ಮತ ,ಪಂತ, ಪಂಗಡ, ಇವ ನಮ್ಮವ ಇವ ಬೇರೆಯವನು ಎಂಬುವ ಯಾವುದೆ ಬೇಧ ಭಾವ ಇರಲಿಲ್ಲ. ಅವ್ರಲ್ಲಿ ಇದ್ದದ್ದು ಸಮಾಜದಲ್ಲಿ ತಾನು ಮಾಡಬೇಕಾಗಿದ್ದ ಕೆಲಸಗಳ ಬಗ್ಗೆ ಇದ್ದ ತುಡಿತ ಮಾತ್ರ. ಅಂತಹ ಅದೆಷ್ಟೋ ಗಣ್ಯರು ಕಾಲದ ಪುಟಗಳಲ್ಲಿ ಮರೆಯಾಗಿ ಹೋದರು. ಅವರನ್ನ ಅವರ ಸಾಧನೆಗಳನ್ನ ಮುಂದಿನ ತಲೆಮಾರಿಗೆ ಪರಿಚಯಿಸುವ ಹೊಣೆ ಹೊತ್ತ ಸರ್ಕಾರಗಳು ಇಂತವರ ಪರಿಚಯನ್ನು ಯಾವತ್ತೂ ಮುಂದಿನ ಪೀಳಿಗೆಗೆ ಮಾಡಲೇ ಇಲ್ಲ. ಅದಿರಲಿ ಸಮಾಜವೂ ಅಂತವರನ್ನ ಮರೆತಿತು. ಇಂತಹಾ ಅನೇಕ ಮರೆತುಹೋದ ಮಹಾನುಭಾವರಲ್ಲಿ ಉಡುಪಿಯ ಖಾನ ಬಹದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಕಾಸಿಮ್ ಸಾಹೇಬ್ ಬಹದ್ದೂರ್ ಕೂಡ ಒಬ್ಬರು. ಚಿಕ್ಕದಾಗಿ‌ ಹೇಳೋದಾದರೆ ಹಾಜಿ ಅಬ್ದುಲ್ಲಾ ಸಾಹೇಬರು . ಹಾಜಿ ಅಬ್ದುಲ್ಲಾ ಸಾಹೆಬರು !! ? ಯಾರೀತ?? ಮತ್ತಷ್ಟು ಓದು »

19
ಜೂನ್

ಮತಾಂಧರ ಮುಂದೆ ಸಧ್ಭಾವನೆಯ ಕನಸೇ?

-ರಾಕೇಶ್ ಶೆಟ್ಟಿ

images (1)ದಿನಾ ಸಾಯೋರಿಗೆ ಅಳೋರು ಯಾರು ಅನ್ನೋ ಗಾದೆ ಜಮ್ಮುಕಾಶ್ಮೀರ ರಾಜ್ಯದ ದಿನನಿತ್ಯದ ಹಿಂಸಾಚಾರಕ್ಕೆ ಹೇಳಿ ಮಾಡಿಸಿದಂತಿದೆ. ಆದರೆ ಈ ಗಾದೆಗೆ ಅಪವಾದವೆಂಬಂತೆ ಉಗ್ರರು, ಉಗ್ರರ ಸಿಂಪಥೈಸರ್ ಗಳು ಸತ್ತಾಗ ಅಳಲಿಕ್ಕೆ ದೇಶದಾದ್ಯಂತ ಗಂಜಿಗಿರಾಕಿಗಳು, ಸೆಕ್ಯುಲರ್ ಮಾಧ್ಯಮಗಳು ತಯಾರಾಗುತ್ತವೆ. ಆದರೆ ಕಣಿವೆಯಲ್ಲಿ ಪಾಕಿಗಳು ಗಡಿಯಾಚೆಯಿಂದ ನಡೆಸುವ ಅಪ್ರಚೋದಿತ ಗುಂಡಿನ ದಾಳಿಗೆ, ಉಗ್ರರ ದಾಳಿಗೆ ಬಲಿಯಾಗುವ ಭಾರತೀಯ ಯೋಧರಿಗೆ ಮಾತ್ರ ಈ ಭಾಗ್ಯವಿಲ್ಲ. ಇವರ ಸಾವಿನ ಸುದ್ದಿಗಳು ದಿನಪತ್ರಿಕೆಗಳಲ್ಲಿ ಕಾರ್ನರ್ ಸುದ್ದಿಯಾಗಿರುತ್ತದೆ. ಓದುವ ಜನರಿಗೂ ಇದೆಲ್ಲಾ ಅಲ್ಲಿ ಮಾಮೂಲು ಎನಿಸಿಬಿಡುತ್ತದೆ. ಆದರೆ, ಭುಜದೆತ್ತರಕ್ಕೆ ಬೆಳೆದು ನಿಂತ ಮಗನನ್ನು ಕಳೆದುಕೊಂಡ ಹೆತ್ತವರಿಗಷ್ಟೇ ಆ ನೋವಿನ ತೀವ್ರತೆ ತಟ್ಟುವುದು. ಅದೇ ನೋವಿನಲ್ಲಿ ಮಾತನಾಡಿದವರು ಹುತಾತ್ಮ ಯೋಧ ಔರಂಗಜೇಬ್ ತಂದೆ. ದೇಶಕ್ಕಾಗಿ ಪ್ರಾಣ ಕೊಡುತ್ತೇನೆಂದಿದ್ದ ನನ್ನ ಮಗ ತನ್ನ ಮಾತನ್ನು ಉಳಿಸಿಕೊಂಡಿದ್ದಾನೆ, ಅವನ ಸಾವಿಗೆ ತಕ್ಕ ಉತ್ತರವನ್ನು 72 ಗಂಟೆಗಳೊಳಗೇ ನೀಡಿ ಎಂದು ಪ್ರಧಾನಿ ಮೋದಿಯವರನ್ನು ಅವರು ಆಗ್ರಹಿಸಿದ್ದಾರೆ. ಮೊನ್ನೆ ರಂಜಾನ್ ಹಬ್ಬಕ್ಕೆಂದು ರಜೆಯಲ್ಲಿ ಮನೆಗೆ ತೆರಳುತ್ತಿದ್ದ ಯೋಧ ಔರಂಗಜೇಬ್ ರನ್ನು ಅಪಹರಿಸಿದ ಉಗ್ರಗ್ರಾಮಿಗಳು ತಲೆ, ಕತ್ತಿನ ಭಾಗಕ್ಕೆ ಗುಂಡಿಟ್ಟು ಕೊಂದಿದ್ದಾರೆ. ಅದೇ ದಿನ ರೈಸಿಂಗ್ ಕಾಶ್ಮೀರ್ ಎಂಬ ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ ಮತ್ತವರ ಖಾಸಗಿ ಅಂಗರಕ್ಷಕರನ್ನು ಉಗ್ರರು ಕೊಂದಿದ್ದಾರೆ. ಇವೆಲ್ಲಾ ಕೇಂದ್ರ ಸರ್ಕಾರದ ತಲೆಕೆಟ್ಟ ನಿರ್ಧಾರವಾಗಿದ್ದ ಪವಿತ್ರ ತಿಂಗಳಲ್ಲಿ ಭದ್ರತಾಪಡೆಗಳ ಮೇಲೆ ಏಕಪಕ್ಷೀಯ ಕದನವಿರಾಮ ಹೇರಿಕೆಯ ಫಲ. ಮತ್ತಷ್ಟು ಓದು »

13
ಜೂನ್

ಭಾರತದ ನಾಯಕರ ಹತ್ಯೆಯ ಹಿಂದಿನ ಕಾಣದ ಕೈಗಳು

– ರಾಕೇಶ್ ಶೆಟ್ಟಿ

ಆ ಮನುಷ್ಯ ಮನಸ್ಸು ಮಾಡಿದ್ದರೆ, ಬ್ರಿಟಿಷ್ ಸರ್ಕಾರದಲ್ಲಿ ‘ಐ.ಸಿ.ಎಸ್’ ಅಧಿಕಾರಿಯಾಗಿ ನೆಮ್ಮದಿಯ ಬದುಕು ಬದುಕಬಹುದಿತ್ತು, ಆದರೆ ಚಿನ್ನದ ಮೊಟ್ಟೆಯಿಡುವ ಐ.ಸಿ.ಎಸ್ ಅನ್ನು ಎಡಗಾಲಲ್ಲಿ ಒದ್ದು, ಸರ್ಕಾರಿ ಪದವಿ ನಿರಾಕರಿಸಿ ಇಂಗ್ಲೆಂಡ್ನಿಂದ ಸೀದಾ ಭಾರತಕ್ಕೆ ಬಂದ ಸುಭಾಷ್ ರವರು ಮೊದಲಿಗೆ ಕಾಂಗ್ರೆಸ್ ಪಕ್ಷ ಸೇರಿಕೊಂಡರು. ತಮ್ಮ ಸಾಮರ್ಥ್ಯದಿಂದಲೇ ಪಕ್ಷದ ಅಧ್ಯಕ್ಷ ಸ್ಥಾನಕ್ಕೂ ಏರಿದ್ದರು. ಆಗಲಾದರೂ ಅವರು ಸುಮ್ಮನೇ ಇದ್ದಿದ್ದರೂ ಸ್ವತಂತ್ರ ಭಾರತದಲ್ಲಿ ಯಾವುದಾದರೊಂದು ಸಚಿವ ಸ್ಥಾನ ಪಡೆದು ಇರುತ್ತಿದ್ದರೋ ಏನೋ. ಆದರೆ ಹುಟ್ಟಾ ಸ್ವಾಭಿಮಾನಿ ಮತ್ತು ಹೋರಾಟಗಾರರಾಗಿದ್ದ ನೇತಾಜಿಯವರು ಕಾಂಗ್ರೆಸ್ಸನ್ನೇ ಬದಲಿಸ ಹೊರಟರು. ಈಗ ಕಾಂಗ್ರೆಸ್ ಎಂಬ ಪುರಾತನ ಪಕ್ಷ ಹೇಗೆ ನೆಹರೂ ಮನೆತನದ ಅಡಿಯಾಳಾಗಿದೆಯೋ, ಆಗ ಗಾಂಧೀಜಿಯವರ ಕೈಯಲ್ಲೇ ಇತ್ತು. ಅದನ್ನು ಧಿಕ್ಕರಿಸಿ ನಿಂತ ಸುಭಾಷರನ್ನು ಗಾಂಧೀ ಬೆಂಬಲಿಗರು ಬಿಟ್ಟಾರೇನು? ಬೆಂಬಲಿಗರು ಬಿಟ್ಟರೂ, ಗಾಂಧೀಜಿ ಪಕ್ಷದ ಮೇಲಿನ ತನ್ನ ಪಾರುಪತ್ತೇದಾರಿಕೆಯನ್ನು ಬಿಡಲು ಸಿದ್ಧರಿದ್ದರಿರಲಿಲ್ಲ. ಹಾಗೆಯೇ, ಭಾರತದ ಸ್ವಾತಂತ್ರ್ಯವೊಂದೇ ಅಂತಿಮ ಗಮ್ಯವಾಗಿದ್ದ ಸುಭಾಷರಿಗೆ ಗಾಂಧೀಜಿಯವರ ಚಿಲ್ಲರೆ ರಾಜಕೀಯದ ಜಂಜಾಟಗಳು ಬೇಕಿರಲಿಲ್ಲ. ಕಾಂಗ್ರೆಸ್ಸಿನಿಂದ ಹೊರ ಬಂದ ಅವರು ಫಾರ್ವರ್ಡ್ ಬ್ಲಾಕ್ ಸ್ಥಾಪಿಸಿದರು. ಬ್ರಿಟಿಷರಿಗೆ ಸುಭಾಷ್ Potential Threat ಎನ್ನುವುದು ಅರಿವಾಗಿತ್ತು. ಅವರನ್ನು ಗೃಹಬಂಧನದಲ್ಲಿರಿಸಿದ್ದರು, ಈ ಪುಣ್ಯಾತ್ಮ ಅಲ್ಲಿಂದ ತಪ್ಪಿಸಿಕೊಂಡರು. ನಂತರದ್ದು ಭಾರತ ಸ್ವಾತಂತ್ರ್ಯ ಇತಿಹಾಸದ ರೋಚಕ ಅಧ್ಯಾಯ, ಬರಿಗೈಯಲ್ಲಿ ದೇಶಬಿಟ್ಟ ಸುಭಾಷ್, ೪೫ ಸಾವಿರ ಜನರ ಆಜಾದ್ ಹಿಂದ್ ಫೌಜ್ ಸ್ಥಾಪಿಸಿ ಬ್ರಿಟಿಷರ ನಿದ್ದೆಗೆಡಿಸಿದ್ದರು. ಎರಡನೇ ವಿಶ್ವ ಯುದ್ಧದಲ್ಲಿ ಜಪಾನ್ ಜೊತೆ ಸೇರಿಕೊಂಡು ೪೪ರಲ್ಲೇ ಅಂಡಮಾನ್-ನಿಕೋಬಾರ್ ದ್ವೀಪಗಳನ್ನು ಬ್ರಿಟಿಷರಿಂದ ಮುಕ್ತಿಗೊಳಿಸಿದರು, ಅಂತಿಮವಾಗಿ ಜಪಾನ್ ಹಾಗೂ ಆಜಾದ್ ಹಿಂದ್ ಫೌಜಿಗೆ ಈಶಾನ್ಯ ಭಾರತದಲ್ಲಿ ಹಿನ್ನಡೆಯಾಯಿತಾದರೂ, ಸುಭಾಷರು ಹೊತ್ತಿಸಿದ್ದ ಕ್ರಾಂತಿಯ ಕಿಡಿ ಸರ್ವವ್ಯಾಪಿಯಾಗಿತ್ತು. ಆಜಾದ್ ಹಿಂದ್ ಫೌಜಿನ ರುದ್ರನರ್ತನ ಬ್ರಿಟಿಷ್ ಭಾರತೀಯ ಆರ್ಮಿಯನ್ನು ಆವರಿಸಿಕೊಂಡಿತ್ತು. ಅದೇ ಸಮಯಕ್ಕೆ ಸರಿಯಾಗಿ ಅತ್ತ ಜಪಾನ್ ಶರಣಾಗಾತಿಯಾಗುವುದರಲ್ಲಿತ್ತು, ಇತ್ತ ಬ್ರಿಟಿಷರಿಗೆ ಭಾರತದಲ್ಲಿ ಉಳಿಗಾಲವಿರಲಿಲ್ಲವಾಗಿತ್ತು, ಆಗಲೇ ಶುರುವಾಗಿದ್ದು ಸುಭಾಷರ ನಿಗೂಢ ವಿಮಾನಾಪಘಾತದ ಕತೆ. ಅಪಘಾತದಲ್ಲಿ ಸುಭಾಷರು ಅಸುನೀಗಿದರು ಎನ್ನುವುದನ್ನು ಯಾರೆಂದರೇ ಯಾರೂ ನಂಬುವ ಸ್ಥಿತಿಯಲ್ಲಿರಲಿಲ್ಲ. ಅಮೇರಿಕನ್/ಬ್ರಿಟಿಷ್ ಗುಪ್ತಚರರು ವರ್ಷಗಟ್ಟಲೆ ಸುಭಾಷರ ಇರುವಿಕೆಯ ಪತ್ತೆ ಹಚ್ಚಲೆಂದೇ ಹಿಂದೆ ಬಿದ್ದಿದ್ದರು. ಇತ್ತ ಭಾರತದಲ್ಲಿ ಬ್ರಿಟಿಷರ ಹೈಫೈ ಆತಿಥ್ಯದ ಜೈಲಿನಲ್ಲಿದ್ದುಕೊಂಡೇ ಆಜಾದ್ ಹಿಂದ್ ಫೌಜಿನವರು ಭಾರತಕ್ಕೆ ಬಂದರೆ ಕತ್ತಿ ಹಿಡಿದು ಹೋರಾಡುತ್ತೇನೆಂದಿದ್ದ ಕಠಾರಿ ವೀರ ನೆಹರೂ ಸಾಹೇಬರಿಗೆ, ಸುಭಾಷ್ ವಾಪಸ್ ಬಂದರೆ ತನ್ನ ಖುರ್ಚಿಯ ಗತಿಯೇನು ಎಂದು ಚಿಂತೆ ಹತ್ತಿತ್ತು. ಅದೇ ಕಾರಣಕ್ಕೆ, ಬ್ರಿಟನ್ ಪ್ರಧಾನಿ ಆಟ್ಲಿಯವರಿಗೆ ಬರೆದ ಪತ್ರದಲ್ಲಿ, ನಿಮ್ಮ ಯುದ್ಧ ಖೈದಿ ಸುಭಾಷ್ ಗೆ ರಷ್ಯಾ ಆಶ್ರಯ ಕೊಟ್ಟಿದೆ ಎಂದು ಚಿಲ್ಲರೆ ದೂರು ನೀಡಿದ್ದರು. ಅಂದು ತೈಪೆಯಲ್ಲಿ ಯಾವುದೇ ವಿಮಾನ ಹಾರಾಟ ನಡೆದಿಲ್ಲವೆನ್ನುವುದು ಈಗ ಅಧಿಕೃತವಾಗಿದೆ. ವಿಮಾನವೇ ಹಾರದೇ, ಅಪಘಾತವಾಗಿದ್ದು ಎಲ್ಲಿಂದ? ಅಪಘಾತವೇ ನಡೆಯದಿದ್ದ ಮೇಲೆ ಸುಭಾಷರು ಹೋದರೆಲ್ಲಿ? ಹಾಗೆ ನಾಪತ್ತೆಯಾದವರನ್ನು ಹುಡುಕಿ ಕೊಲ್ಲಲಾಯಿತೇ? ಈ ನಿಗೂಢತೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಸ್ವತಂತ್ರ ಭಾರತದ ಮೊದಲ ನಿಗೂಢ ರಾಜಕೀಯ ಕಣ್ಮರೆ/ಹತ್ಯೆಯ ಸಾಲಿಗೆ ಸೇರುವುದು ಸುಭಾಷರ ಹೆಸರು. ಸುಭಾಷರು ಮಾಡಿದ ತಪ್ಪೆಂದರೆ ಸ್ವತಂತ್ರ-ಸ್ವಾಭಿಮಾನಿ-ಸಶಕ್ತ ಭಾರತದ ಕನಸು ಕಂಡಿದ್ದು. ಸುಭಾಷರಿಂದ ಶುರುವಾದ ಈ ನಿಗೂಢ ರಾಜಕೀಯ ಹತ್ಯೆ/ಕಣ್ಮರೆಯ ಸರಣಿ ಸ್ವತಂತ್ರ ಭಾರತದಲ್ಲೂ ಮುಂದುವರೆಯುತ್ತಲೇ ಹೋಯಿತು. ಮತ್ತಷ್ಟು ಓದು »

6
ಜೂನ್

ಕಮ್ಯೂನಿಸ್ಟರು ಕಮ್ಯೂನಿಸಂನನ್ನು ಕೊಂದದ್ದು ಹೀಗೆ (ಭಾಗ – ೨)

– ಪ್ರೇಮಶೇಖರ

ಸುಂದರ ಕನಸೊಂದು ಹಳವಂಡವಾದ ದುರಂತಕ್ಕೆ ಮರುಗುತ್ತಾ…

ಥಾಮಸ್ ಹಾಬ್ಸ್, ಜಾನ್ ಲಾಕ್, ಜೀನ್ ಯಾಕ್ಸ್ ರೂಸೂ ಮುಂತಾದ ಸಾಮಾಜಿಕ ಒಪ್ಪಂದ ಸಿದ್ಧಾಂತದ ಪ್ರತಿಪಾದಕರ ಪ್ರಕಾರ ‘ಬಲವೇ ಹಕ್ಕು’ ಎಂಬ ಮಾನವತಾವಿರೋಧಿ ಅರಣ್ಯ ಕಾನೂನಿನಿಂದ ಅಶಕ್ತರನ್ನು ರಕ್ಷಿಸಿ, ಸಮಾಜದ ಎಲ್ಲರ ನಡುವೆ ಸಮಾನ ನ್ಯಾಯಹಂಚಿಕೆಗಾಗಿ ರಾಜ್ಯ ಸ್ಥಾಪನೆಗೊಂಡಿತಂತೆ. ಆದರೆ ಮಾನವಜನಾಂಗ ಮುಂದೆ ಹಿಡಿದ ದಾರಿಯಲ್ಲಿ ರಾಜ್ಯವೇ ಶೋಷಕನಾಗಿ ಬದಲಾದದ್ದನ್ನು ಇತಿಹಾಸ ಹೇಳುತ್ತದೆ. ಸಾಮಾಜಿಕ ಒಪ್ಪಂದಗಳ ಮೂಲಕ ಸಮಾನನ್ಯಾಯ ಹಂಚಿಕಾವ್ಯವಸ್ಥೆ ಸಾಧ್ಯವಾಗದೇ ಹೋದಾಗ, ಬಲವಂತದ ಮೂಲಕ, ರಕ್ತಪಾತದ ಮೂಲಕ ಅದು ಅಸ್ತಿತ್ವಕ್ಕೆ ಬರುತ್ತದೆಂದು ಭವಿಷ್ಯ ನುಡಿದ ಕಾರ್ಲ್ ಮಾರ್ಕ್ಸ್ ಒಬ್ಬ ವಾಸ್ತವವಾದಿ. ಅಂತಹ ವ್ಯವಸ್ಥೆಯನ್ನು ಚಿತ್ರಿಸಿದ ಕಮ್ಯೂನಿಸಂ ಒಂದು ಉದಾತ್ತ ಮಾನವಪರ ಚಿಂತನೆ. ಆದರೆ ವಾಸ್ತವವಾದಿ ರೂಪಿಸಿದ ಉದಾತ್ತ ಮಾನವಪರ ಸಿದ್ಧಾಂತ ತನ್ನ ಅವಾಸ್ತವವಾದಿ ಹಾಗೂ ಮಾನವವಿರೋಧಿ ಹಿಂಬಾಲಕರಿಂದಲೇ ಕಳಂಕ ಹಚ್ಚಿಸಿಕೊಂಡದ್ದೊಂದು ದುರಂತ. ಈ ಪ್ರಕ್ರಿಯೆ ಭಾರತದಲ್ಲಿ ಅನಾವರಣಗೊಂಡ ಬಗೆಯನ್ನು ಸಂಕ್ಷಿಪ್ತವಾಗಿ ಈಗಿಲ್ಲಿ ಹೇಳುತ್ತೇನೆ. ಮತ್ತಷ್ಟು ಓದು »

29
ಮೇ

ಮಾನಹೀನ ಮಾತುಗಳಿಂದ ಬದುಕಬೇಕಿದೆಯೇ ನಮ್ಮ ಡೆಮಾಕ್ರಸಿ…?

– ಸುಜಿತ್ ಕುಮಾರ್

ಸಣ್ಣವರಿದ್ದಾಗ ಶಿಕ್ಷಕರು ನಮಗೆ ಕಲಿಸಿದ್ದ ಅಮೋಘ ಶಿಕ್ಷಣಗಳಲ್ಲಿ ಸರಿಯೆನಿಸದ್ದಿದ್ದನ್ನು ಪ್ರಶ್ನಿಸುವುದೂ ಒಂದು. ಅದು ‘ಏನಲೇ..!?’ ಎಂದು ಕೊಳಪ್ಪಟ್ಟಿಯನ್ನು ಹಿಡಿದು ಜಾಡಿಸಿ ಕೇಳುವುದಕ್ಕಿಂತ ಮಿಗಿಲಾಗಿ, ಹರಿತವಾದ ಮಾತಿನಿಂದ ಸತ್ಯವೆಂಬ ಹಿಡಿತದೊಂದಿಗೆ ಮುಂದಿರುವವನ ಕಪಟ ವಂಚಕ ಮನಸ್ಥಿತಿಯನ್ನು ಬೆದರುಗೊಳಿಸುವ ಬಗೆಯಾಗಿದ್ದಿತು. ಅರ್ಥಾತ್ ಅವು ವೈಚಾರಿಕ ಬಗೆಯ ನೇರ ಪ್ರಶ್ನೆಗಳಾಗಿದ್ದವು. ಆದರೆ ಅಂದಿನ ಆ ಪಾಠವನ್ನು ಮರೆತ ಬಹುಮಂದಿ ಜನರು ಇಂದು ಕೇಳುವ ಪ್ರಶ್ನೆಗಳು ಏಕವಚನ ಪದಗುಚ್ಛಗಳ ಚಪ್ಪಲಿ ಏಟಿನಂತೆ ಮುಂದಿರುವ ವ್ಯಕ್ತಿಯ ಮಾನಹರಣ ಮಾಡುವ ಅಸ್ತ್ರಗಳಾಗಿವೆ. ಪುಕ್ಕಟೆಯಾಗಿ ಸಿಗುವ ಹೊಲಸು ಪದಗಳ ವಿಶೇಷಣಗಳನ್ನು ಬಳಸಿ ಮುಂದಿರುವವರ ಸ್ಥಾನ ಜೊತೆಗೆ ಮಾನವನ್ನೂ ತಿವಿದು ಹಾಕುವ ಇಂದಿನ ದಿನಗಳಲ್ಲಿ ವಿಷಯಕ್ಕೆ ತಕ್ಕನಾದಂತಹ ನೇರವಾದ ಪ್ರಶ್ನೆಗಳನ್ನೂ ಕೇಳುವವರ ಸಂಖ್ಯೆ ಕ್ಷೀಣಿಸುತ್ತಿದೆ! ಒಂದೋ ಆತ/ಅವಳು ಸಮಾಜದ ಅತಿ ಪ್ರಭಾವಿ ಗುಂಪಿನ ಇಂಪಾರ್ಟೆಂಟ್ ವ್ಯಕ್ತಿಗಳೆನಿಸಿಕೊಂಡಿರಬೇಕು ಅಥವಾ ಯಾರಿಗೂ ಕ್ಯಾರೇ ಎನ್ನದ ಖಡಕ್ ಅಧಿಕಾರಿಗಳಾಗಿರಬೇಕು. ಅಂತವರಿಗಷ್ಟೇ ಇಂದು ಪ್ರಶ್ನೆಗಳನ್ನು ಕೇಳುವ ‘ಅಧಿಕಾರ’  ಹಾಗು ‘ಧೈರ್ಯ’ ಸೀಮಿತವಾಗುತ್ತಿದೆ ಎಂದರೆ ಸುಳ್ಳಾಗದು. ಸಾಮಾನ್ಯನೊಬ್ಬನಿಗೆ ಇಂದು ಪ್ರಶ್ನಿಸುವ ಧೈರ್ಯವನ್ನು ತುಂಬುವ ಸಮಾಜವೇ ಇಲ್ಲವಾದರೆ ವಿಧ್ಯಾವಂತರಾಗಿಯೂ ಕುರಿಗಳು ಸಾರ್ ಕುರಿಗಳು ಎಂಬಂತೆ ಪ್ರಶ್ನಿಸುವ ನರಗಳನ್ನೇ ಕಳೆದುಕೊಂಡು ಒಬ್ಬರ ಬಾಲವನ್ನು ಇನ್ನೊಬ್ಬರು ಮೂಸುತ್ತಾ ಸಾಗುವ ಪಯಣ ಇದಾದಿತು. ಪೀಠಿಕೆ ಇಷ್ಟಿರಲಿ. ಈಗ ವಿಷಯಕ್ಕೆ ಬರೋಣ. ಅದಕ್ಕೂ ಮೊದಲು ಒಂದೆರೆಡು ನೇರ ನುಡಿ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ಪಕ್ಷ, ಜಾತಿ, ಪಂಥ ಎಂಬ ಯಾವುದೇ ಬಗೆಯ ತುರಿಕೆಗಳಾಗಲಿ, ಖಾಯಿಲೆಯಗಳಾಗಲೀ ಅಂಟಿಕೊಂಡಿಲ್ಲ. ಭಾರತೀಯರಾಗಿ ಅದಕ್ಕಿಂತಲೂ ಹೆಚ್ಚಾಗಿ ಸ್ವಸ್ಥ ಮಾನವರಾಗಿ ಕೇಳಲೇ ಬೇಕಾದ ಪ್ರಶ್ನೆಗಳಿವು. ಮುಂದಿರುವ ಇನ್ನೊಬ್ಬರಿಗಲ್ಲದಿದ್ದರೂ ತಮಗೆ ತಾವೇ ಚುಚ್ಚಿಕೊಳ್ಳಬೇಕಾದದ ಸೂಜಿಗಳಿವು! ಮತ್ತಷ್ಟು ಓದು »

14
ಮೇ

ದಲಿತರನ್ನು ಇತರರಿಂದ ದೂರವಿಡಲು ನಡೆಸುತ್ತಿರುವ ಹುನ್ನಾರ ಇನ್ನೆಷ್ಟು ದಿನ ಮುಂದುವರೆಯುವುದು?

– ಶಿವಾನಂದ ಸೈದಾಪೂರ
ಪಿ.ಜಿ ಡಿಪ್ಲೊಮಾ ಇನ್ ಅಂಬೇಡ್ಕರ್ ಸ್ಟಡಿಸ್
ಆರ್. ಸಿ. ಯು ಬೆಳಗಾವಿ.

ಈಗಲೇ ಎರಡು ದಿನಗಳಲ್ಲಿ ನಡೆದ ಘಟನೆಗಳು; ನೂರಕ್ಕೆ ನೂರರಷ್ಟು ಮತದಾನದ ಜಾಗೃತಿಗಾಗಿ ಊರೂರುಗಳಿಗೆ ಸಂಪರ್ಕ ಮಾಡುತ್ತಿರುವ ಹೊತ್ತಲ್ಲಿ ಆದ ಸ್ವಂತ ಅನುಭವ. ದಲಿತರ ಓಣಿಗಳನ್ನು ಪ್ರವೇಶಿಸುವಾಗ ನಡೆದಂತದ್ದವುಗಳು.

ಘಟನೆ ೧ : ಓಣಿಯ ಪ್ರವೇಶಕ್ಕೂ ಮೊದಲು ಗಮನಿಸಿದಾಗ ಕಣ್ಣಿಗೆ ರಾಚುವಂಥದ್ದು; ಈ ಕೇರಿಯಲ್ಲಿ ಕಾಂಗ್ರೆಸ್ ಒಂದನ್ನು ಬಿಟ್ಟು ಬಿಜೆಪಿಯವರಿಗೆ ಪ್ರವೇಶವಿಲ್ಲ! ಈ ರೀತಿ ಫಲಕ ನೇತಾಡುತಿತ್ತು. ಇಂತಹ ವಾತಾವರಣ ಇನ್ನೂ ಯಾಕೆ ಹೀಗಿದೆ? ಚುನಾವಣೆ ಸಂದರ್ಭದಲ್ಲಿಯೇ ಯಾಕೆ ಹೀಗೆ? ಇದನ್ನು ಏನು ಅಂತ ತರ್ಕಿಸಬಹುದು? ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದರೂ ಯಾಕೆ ಈ ವಾತಾವರಣ? ಅಸ್ಪೃಶ್ಯತೆ ನಿವಾರಣೆಗಾಗಿ ಒಂದು ಕಡೆ ಹೋರಾಟಗಳು ನಡೆಯುತ್ತಿದ್ದರೆ, ಮತ್ತೊಂದು ಕಡೆ ಅವರನ್ನು ಸ್ವೃಶ್ಯ ಸಮಾಜ ವಾಸಿಯಾಗಲು ಬಿಡದೆ ನಡೆಸುತ್ತಿರುವ ರಾಜಕೀಯ ಷಡ್ಯಂತ್ರವೇ ಬಹಳಷ್ಟಿವೆ. ಮತ್ತಷ್ಟು ಓದು »

3
ಜನ

ಹಿಂದೂ ಧರ್ಮಕ್ಕೆ ಹಿಂದು ಮುಂದಿಲ್ಲವೇ..?

– ಪ್ರೊ. ಪ್ರೇಮಶೇಖರ

ಹಿಂದೂ ಧರ್ಮದ ಅಪಹಾಸ್ಯ, ಅವಹೇಳನ ಇಂದು ನಿನ್ನೆಯದಲ್ಲ. ಅದು ಆರಂಭವಾಗಿ ಶತಮಾನಗಳೇ ಕಳೆದುಹೋಗಿವೆ. ತನ್ನ ಚಿಪ್ಪಿನೊಳಗೇ ಅಡಗಿಕೊಂಡು ಹೊರಪ್ರಪಂಚಕ್ಕೆ ಬಹುತೇಕ ಅಪರಿಚವಾಗಿಯೇ ಇದ್ದ ಹಿಂದೂ ಸಮಾಜ ತನ್ನ ಅಪರಿಚಿತತೆಯಿಂದಲೇ ಮೊದಲಿಗೆ ಅರಬ್ ಮುಸ್ಲಿಮ್ ಧಾಳಿಕಾರರಲ್ಲಿ, ನಂತರ ಕ್ರಿಶ್ಚಿಯನ್ ವರ್ತಕರು ಮತ್ತು ಸೈನಿಕರಲ್ಲಿ ಅಚ್ಚರಿಯನ್ನುಂಟುಮಾಡಿತು. ಅನೇಕ ದೇವದೇವಿಯರುಳ್ಳ, ಒಂದೇ ಒಂದು ನಿರ್ದಿಷ್ಟ ಧರ್ಮಗ್ರಂಥವಿಲ್ಲದ, ಶ್ರೇಣೀಕೃತ ಜಾತಿವ್ಯವಸ್ಥೆಯ ಅನಿಷ್ಟದಲ್ಲಿ ಒಡೆದು ಹಂಚಿಹೋಗಿದ್ದ ಹಿಂದೂ ಸಮಾಜ ಏಕದೈವವನ್ನು, ಏಕಧರ್ಮಗ್ರಂಥವನ್ನೂ ಹೊಂದಿದ್ದ, ಸಮಾನತೆಯ ತಳಹದಿಯ ಮೇಲೆ ರಚಿತವಾಗಿದ್ದ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮಾಜಗಳಿಗೆ ಸಂಪೂರ್ಣ ವಿರುದ್ಧವಾಗಿದ್ದುದರಿಂದಾಗಿ ಆ ಧರ್ಮಗಳ ಅನುಯಾಯಿಗಳಲ್ಲಿ ಕುತೂಹಲ, ಅಪನಂಬಿಕೆಗಳನ್ನುಂಟುಮಾಡಿದ್ದು ಸಹಜವೇ ಆಗಿತ್ತು. ಆದರೆ ಈ ಭಾವನೆಗಳು ಕ್ಷಿಪ್ರಕಾಲದಲ್ಲೇ ಅವಹೇಳನದ ರೂಪ ಪಡೆದುಕೊಂಡದ್ದು ದುರ್ಭಾಗ್ಯದ ಬೆಳವಣಿಗೆ. ಅದಕ್ಕಿಂತಲೂ ದೌರ್ಭಾಗ್ಯದ ಸಂಗತಿಯೆಂದರೆ ಪರಧರ್ಮೀಯರು ಆರಂಭಿಸಿದ ಹಿಂದೂ ಅವಹೇಳನವನ್ನು ಈಗ ಸ್ವತಃ ಹಿಂದೂಗಳೇ ಮುಂದುವರೆಸಿಕೊಂಡುಹೋಗುತ್ತಿರುವುದು.ಅವರ ಈ ಕೃತ್ಯ ಆರೋಗ್ಯಕರವಾಗಿದ್ದು ಹಿಂದೂಧರ್ಮದ ಕೆಲವೊಂದು ಅನಾಚಾರಗಳನ್ನು ತೊಡೆದುಹಾಕುವಂತಿದ್ದರೆ ಅದು ಸ್ವಾಗತಾರ್ಹ ಹಾಗೂ ಶ್ಲಾಘನೀಯವಾಗಿರುತ್ತಿತ್ತು. ಆದರೆ ದುರದೃಷ್ಟವಶಾತ್ ವಾಸ್ತವ ಹಾಗಿಲ್ಲ. ಅವರ ಟೀಕೆಗಳಲ್ಲಿ ಎದ್ದುಕಾಣುತ್ತಿರುವುದು ಹೆಚ್ಚಿನಂಶ ಕಿಡಿಗೇಡಿತನ. ಅಂಥವರಿಗೆ ಚಿಂತಕರೆಂಬ ಹಣೆಪಟ್ಟಿ ದಕ್ಕುತ್ತಿರುವುದು ಸಮಕಾಲೀನ ಸಮಾಜದ ಒಂದು ವರ್ಗದ ಬೌದ್ಧಿಕ ದಾರಿದ್ರ್ಯದ ದ್ಯೋತಕ. ಇವರು ಈಗ ಎತ್ತುತ್ತಿರುವ ಪ್ರಶ್ನೆ ಹಿಂದೂಧರ್ಮದ ಅದಿಯ ಕುರಿತಾಗಿ, ಇತರ ಧರ್ಮಗಳಿಗಿರುವಂತೆ ಹಿಂದೂಧರ್ಮಕ್ಕೆ ಸ್ಥಾಪಕನೊಬ್ಬ ಇಲ್ಲ ಎನ್ನುವ ಕುರಿತಾಗಿ. ಮತ್ತಷ್ಟು ಓದು »

25
ಡಿಸೆ

ಪ್ರಶ್ನೆ ರಾಹುಲ್ ಪಟ್ಟಾಭಿಷೇಕದ್ದಲ್ಲ; ಕಾಂಗ್ರೆಸ್ಸಿನ ನಿಗೂಢ ನಡೆಗಳದ್ದು

– ರಾಕೇಶ್ ಶೆಟ್ಟಿ

ಸೋನಿಯಾ ಗಾಂಧಿಯವರನ್ನು ಅಧ್ಯಕ್ಷೆಯನ್ನಾಗಿಸುವಾಗ,ವಯೋವೃದ್ಧ ಕೇಸರಿಯವರನ್ನು ಹೇಗೆ ನಡೆಸಿಕೊಳ್ಳಲಾಗಿತ್ತು ಎನ್ನುವುದು ಈಗ ಇತಿಹಾಸ. ಆದರೆ ಕೇಸರಿಯವರ ರಾಜಕೀಯ ಅಧ್ಯಾಯ ತೀರಾ,ಇಂದಿರಾ ಗಾಂಧಿಯವರ ಕಾಲದಲ್ಲಿ ದಲಿತ ನಾಯಕ ಜಗಜೀವನ್ ರಾಮ್ ಅವರ ರಾಜಕೀಯ ಜೀವನವನ್ನು ಮುಗಿಸಿದಷ್ಟು ಕ್ರೂರವಾಗಿರಲಿಲ್ಲವೆಂಬುದೇ ಸಮಾಧಾನ!

ದೇವೇಗೌಡರ ನೇತೃತ್ವದ ಸರ್ಕಾರವನ್ನು ವಿನಾಕಾರಣ ಬೀಳಿಸಿದ್ದ ಕಾಂಗ್ರೆಸ್ಸಿಗೆ ಮುಂದಿನ ಚುನಾವಣೆ ಗೆಲ್ಲಲು ನಾಯಕರೇ ಇರಲಿಲ್ಲವೆಂಬ ನೆಪವೊಡ್ಡಿ ಸೋನಿಯಾ ಅವರನ್ನು ಮುನ್ನೆಲೆಗೆ ತರಲಾಯಿತು. ರಾಜೀವ್ ಗಾಂಧಿಯವರ ಕೊಲೆಯ ನಂತರ ದೇಶವನ್ನು,ಪಕ್ಷವನ್ನು ಸಮರ್ಥವಾಗಿ ಮುಂದುವರೆಸಿದ್ದ ಪಿವಿ ನರಸಿಂಹರಾವ್ ಕಾಂಗ್ರೆಸ್ಸಿನಲ್ಲಿ ಯಾರಿಗೂ ಆಗ ಬೇಡವಾಗಿದ್ದರು. ಕಾರಣ ಸ್ಪಷ್ಟ, ನೆಹರೂ ಕುಟುಂಬದ ಸುತ್ತ ಸುತ್ತುವ ಕ್ಷುದ್ರ ಗ್ರಹಗಳಿಗೆ, ನಕಲಿ ಗಾಂಧಿ ಕುಟುಂಬದ ಮುಖ ಸ್ತುತಿ ಮಾಡುವ ಗುಲಾಮರು ಇಷ್ಟವಾಗುತ್ತಾರೆಯೇ ಹೊರತು ಸ್ವಂತ ಬುದ್ಧಿಶಕ್ತಿ,ಚಿಂತನೆಯುಳ್ಳ ನಾಯಕರಲ್ಲ. ಇಂದಿರಾ ಕಾಲದಲ್ಲಿ ಜಗಜೀವನ್ ರಾಮ್,ಮೊರಾರ್ಜಿ ದೇಸಾಯಿಯಂತವರನ್ನು ಹಣಿಯಲಾಗಿತ್ತು. ಸೋನಿಯಾ ಕಾಲಕ್ಕೆ ನರಸಿಂಹರಾವ್,ಕೇಸರಿಯವರು ನೆಹರೂ ಕುಟುಂಬದ ರಾಜಕೀಯ ಬೇಟೆಗೆ ಬಲಿಯಾದರು.ಕೇಸರಿಯವರನ್ನು ಕಾಂಗ್ರೆಸ್ ಪಕ್ಷದ ಸಂವಿಧಾನಕ್ಕೆ ವ್ಯತಿರಿಕ್ತವಾಗಿ ಅಧ್ಯಕ್ಷ  ಹುದ್ದೆಯಿಂದ ಇಳಿಸಿ, ಸೋನಿಯಾ ಅವರಿಗೆ ಪಟ್ಟ ಕಟ್ಟಲು,ಸೋನಿಯಾರ ಟೀಮು ಸೇರಿಕೊಂಡಿದ್ದ ಪ್ರಣಬ್ ಮುಖರ್ಜಿ,ಶರದ್ ಪವಾರ್ ಅವರಂತವರಿಗೂ ಮುಂದೊಂದು ದಿನ ಕೇಸರಿಯವರಿಗೆ ಸಿಕ್ಕ ಅದೇ ರುಚಿಯ ಸ್ವಾದವೂ ಸಿಕ್ಕಿತು. ಶರದ್ ಪವಾರ್, ಸಂಗ್ಮಾ, ತಾರೀಖ್ ಅನ್ವರ್ ಅವರನ್ನು ಪಕ್ಷದಿಂದ ಹೊರಹಾಕಿದರು. ಮುಂದೊಂದು ದಿನ ಅಡ್ಡಿಯಾಗಬಹುದಾಗಿದ್ದ ರಾಜೇಶ್ ಪೈಲಟ್,ಮಾಧರಾವ್ ಸಿಂಧಿಯಾ ರಸ್ತೆ ಮತ್ತು ವಿಮಾನಾಪಘಾತಗಳಲ್ಲಿ ಸತ್ತರು.ಈ ರೀತಿ ವಿಮಾನಾಪಘಾತ/ರಸ್ತೆ ಅಪಘಾತಗಳಲ್ಲಿ ಸಾಯುವವರ ಪಟ್ಟಿ ಭಾರತದ ರಾಜಕೀಯ ಇತಿಹಾಸದಲ್ಲಿ ಅಲ್ಲಲ್ಲಿ ಸಿಗುತ್ತದೆ.ಆದರೆ ಹಾಗೆ ಸಿಗುವ ಪಟ್ಟಿ ಇದೇ ನೆಹರು ಕುಟುಂಬದ ಆಸುಪಾಸಿನಲ್ಲಿ ಸುತ್ತುತ್ತದೆ. ನಿಗೂಢತೆ ಮತ್ತು ನೆಹರೂ ಕುಟುಂಬಕ್ಕೂ ಅದೇನೋ ಒಂದು ನಂಟು.

ಮತ್ತಷ್ಟು ಓದು »

13
ಡಿಸೆ

ಬುದ್ಧಿಜೀವಿಗಳು ಹಾಗೂ ಪೌರಾಣಿಕ ವ್ಯಕ್ತಿಗಳು

– ವಿನಾಯಕ ವಿಶ್ವನಾಥ ಹಂಪಿಹೊಳಿ

ಈ ಲೇಖನವು ಭಾರತೀಯ ಸಂಸ್ಕೃತಿಯಲ್ಲಿ ಪರಂಪರಾಗತವಾಗಿ ಹರಿದು ಬಂದಿರುವ ಪೌರಾಣಿಕ ಕಥೆಗಳಲ್ಲಿ ಕಂಡು ಬರುವ ವ್ಯಕ್ತಿಗಳ ಕುರಿತು ನಮ್ಮ ದೇಶದ ಬುದ್ಧಿಜೀವಿಗಳು ಯಾವ ಅಭಿಪ್ರಾಯವನ್ನು ಹೊಂದಿದ್ದಾರೆ ಎನ್ನುವದನ್ನು ಸಮಂಜಸವಾಗಿ ವಿವರಿಸುವ ಒಂದು ಚಿಕ್ಕ ಪ್ರಯತ್ನವಾಗಿದೆ. ಬೇರೆ ಬೇರೆ ಪೌರಾಣಿಕ ವ್ಯಕ್ತಿಗಳ ಕುರಿತು ಬುದ್ಧಿಜೀವಿಗಳು ಏಕೆ ಬೇರೆ ಬೇರೆ ನಿಲುವುಗಳನ್ನು ತಾಳುತ್ತಾರೆ ಹಾಗೂ ಒಂದೇ ಪೌರಾಣಿಕ ವ್ಯಕ್ತಿಯ ಕುರಿತು ಮೇಲ್ನೋಟಕ್ಕೆ ಪರಸ್ಪರ ವಿರೋಧಾಭಾಸದಂತೆ ಕಾಣುವ ಹೇಳಿಕೆಗಳನ್ನು ಏಕೆ ಕೊಡುತ್ತಾರೆ ಎನ್ನುವದನ್ನು ಇಲ್ಲಿ ವಿವರಿಸಲು ಯತ್ನಿಸಲಾಗಿದೆ. ಮತ್ತಷ್ಟು ಓದು »