ಯಾವುದು ನಿಜವಾದ ದೇಶಪ್ರೇಮ ?
ವಿಶ್ವ ಕಪ್ ಗೆದ್ದ ಭಾರತಕ್ಕೆ ಅಭಿನಂದನೆಗಳು. ಹಾಗೆಯೇ ಕೊನೆಯವರೆಗೂ ಅತ್ಯಂತ ಸ್ಪರ್ಧಾತ್ಮಕ ಕ್ರಿಕೆಟ್ ಆಡಿದ ಶ್ರೀಲಂಕೆಗೂ ಶುಭಾಶಯಗಳು. ಮೊನ್ನೆ ಮೊನ್ನೆಯ ಪಾಕಿಸ್ತಾನದ ಎದುರಿನ ಸೆಮಿ ಫೈನಲ್ ಬಗ್ಗೆ ಮಾಧ್ಯಮಗಳಲ್ಲಿ ಇದ್ದ ಕ್ರೇಜ್, ಇದೊಂದು ಯುದ್ಧ ಅನ್ನುವ ಮನಸ್ಥಿತಿ ಫೈನಲ್ ಪಂದ್ಯದಲ್ಲಿ ಅಷ್ಟಾಗಿ ಕಾಣಲಿಲ್ಲ. ಸೆಮಿ ಫೈನಲ್ ನಲ್ಲಿ ಪಾಕಿಸ್ತಾನವನ್ನು ಸೋಲಿಸಿದರೆ ಸಾಕು, ಫೈನಲ್ ಗೆಲ್ಲದಿದ್ದರೂ ಆದೀತು ಅನ್ನುವ ಅನಿಸಿಕೆಗಳನ್ನು ಅಲ್ಲಲ್ಲಿ ಕಂಡೆ. ಹಾಗೆಯೇ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತಕ್ಕೆ ಈ ಕಪ್ಪು ಬೇಕೇ ಬೇಕು ಅನ್ನುವ ತರಹದ ಚರ್ಚೆಗಳನ್ನು ಅಲ್ಲಲ್ಲಿ ಕಂಡೆ. ಕೊನೆಯಲ್ಲಿ, ಕಪ್ ಗೆದ್ದ ತಂಡಕ್ಕೆ ಹೆಚ್ಚಿನ ಸರ್ಕಾರಗಳು (ನಮ್ಮ ರಾಜ್ಯ ಸರ್ಕಾರವು ಸೇರಿದಂತೆ ) ಬಹುಮಾನದ ಸುರಿಮಳೆ ಗೈದು ತಮ್ಮ ಅಸಂಖ್ಯ ಪಾಪುಲಿಸ್ಟ್ ಕ್ರಮಗಳಿಗೆ ಇನ್ನೊಂದು ಸೇರ್ಪಡೆ ಮಾಡಿದ್ದನ್ನು ಕಂಡೆ. ಒಂದು ಆಟಕ್ಕೆ ಈ ಮಟ್ಟದ ಗಮನ, ಆದ್ಯತೆ ಕೊಡುವಷ್ಟರಲ್ಲಿ ಅದರ ಅರ್ಧದಷ್ಟು ಗಮನ ಈ ದೇಶದ, ಅದರ ಜನರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲೂ ಕೊಟ್ಟಿದ್ದಲ್ಲಿ ನಮ್ಮೆದುರು ಇರುವ ಸಮಸ್ಯೆಗಳಲ್ಲಿ ಕೆಲವಕ್ಕಾದರು ಪರಿಹಾರ ಸಿಕ್ಕಿರುತಿತ್ತೇನೋ ಅನ್ನಿಸಿತು.
ಆತನಿಗೆ ಮದುವೆಯ ಮೊದಲೆ ಗೊತ್ತಿತು!?
ಯಾವುದೇ ತೊಂದರೆಯಿಲ್ಲದೆ ಸುಂದರವಾಗಿ ಜೀವನಮಾಡುತ್ತಿದ್ದ ವಿದ್ಯಾವಂತಳಾದ ಆಕೆಯ ಬಾಳಿನಲ್ಲಿ ಮದುವೆಯ ಸಂದರ್ಭವೊಂದು ಬಂದಿತು. ದೂರದ ಮುಂಬೈಯಿಂದ ಯುವಕನೊರ್ವ ಆಕೆಯನ್ನು ನೋಡಲು ಬಂದ. ಆ ವರನಿಗೆ ವಧು ಇಷ್ಟವಾದಳು. ಮುಂಬೈಯಲ್ಲಿರುವ ಹುಡುಗ, ಒಳ್ಳೆಯ ಸಂಪಾದನೆ, ಸುಂದರ, ಇದೆಲ್ಲವನ್ನು ಕಂಡ ವಧುವಿನ ಕಡೆಯವರಿಗೂ ವರ ಇಷ್ಟವಾದನು. ವರನ ಕಡೆಯವರು ಆತುರದಲ್ಲಿ ಮದುವೆಯನ್ನು ಪಿಕ್ಸ್ ಮಾಡಿದರು. ಮದುವೆಯೂ ಆಯಿತು. ಮದುವೆಯಾಗಿ ಮೊದಲ ಮಗುವಾಗುವ ಸಮಯದಲ್ಲಿ ಆಕೆಗೆ ತಿಳಿಯಿತು ನನಗೆ ಎಚ್‌ಐವಿ ಬಂದಿದೆ ಎಂದು. ಇದನ್ನು ಆಕೆಯ ಗಂಡ ಉಡುಗೊರೆಯಾಗಿ ನೀಡಿದ್ದ ಆತನಿಗೆ ಮದುವೆಗೆ ಮೊದಲೇ ಈ ರೋಗವಿದ್ದರೂ ಅದನ್ನು ಎಲ್ಲರೂ ಸೇರಿ ಮುಚ್ಚಿ ಹಾಕಿ ಆಕೆಯ ಜೀವನದಲ್ಲಿ ಆಟವಾಡಿದ್ದರು. ಆದರೆ ಸಂಘಟನೆಯ ಸಹಾಯ ಪಡೆದು ಎಆರ್‌ಟಿ ಚಿಕಿತ್ಸೆಯನ್ನು ಪಡೆದು ಎಲ್ಲರಂತೆ ಬದುಕುತ್ತಿದ್ದಾಳೆ. ನೋಡಿ ಈ ಮಾತನ್ನು ಎಚ್‌ಐವಿ ಪೀಡಿತೆಯಾದ ಅಮಾಯಕ ಹೆಣ್ಣುಮಗಳೊಬ್ಬಳು ಹೇಳುತ್ತಿರುವಂತಹದ್ದು. ಈ ರೀತಿ ಮೋಸವನ್ನು ಹೋಗುವುದಕ್ಕೆ ಮೊದಲು ವಿವಾಹ ಸಂಬಂಧವನ್ನು ಮಾಡುವಾಗ ನೀವೆಲ್ಲ ಸ್ವಲ್ಪ ಯೋಚನೆಮಾಡಿ ನಿರ್ಧಾರ ತೆಗೆದುಕೊಳ್ಳಿ. ಆವಾಗ ಮುಂದೆ ಪರಿತಪಿಸುವ ಅಗತ್ಯ ಬರಲ್ಲ. ಆ ಮಾತು ಆಗಿರಲಿ ಈಗ ಎಚ್‌ಐವಿ ಬಂದವರು ಏನು ಮಾಡುವುದು ಎಂಬುದರ ಬಗ್ಗೆ ಸ್ವಲ್ಪ ಗಮನಹರಿಸೋಣ. ಮತ್ತಷ್ಟು ಓದು 
ಸುದ್ದಿ ‘ಮೋಹ’ದ ಪತ್ರಿಕೆಗಳ ಬಗ್ಗೆ…..
ಅರೆಹೊಳೆ ಸದಾಶಿವರಾಯರು
ಕಟೀಲು ದೇವಳಕ್ಕೆ ಶಿಲ್ಪಾ ಶೆಟ್ಟಿ ಬಂದರು!. ಇದು ನಮ್ಮ ಪತ್ರಿಕೆಗಳ ಮಟ್ಟಿಗೆ ಬಹು ಮುಖ್ಯ ಸುದ್ದಿಯಾಯಿತು! ಆಶ್ಚರ್ಯವೆಂದರೆ, ನಮ್ಮ ಪತ್ರಿಕೆಗಳು ಇದನ್ನು ಮುಖ ಪುಟದಲ್ಲಿ ಪ್ರಕಟಿಸಿ ಕೃತಾರ್ಥವಾದುವು. ಆಕೆ ತನ್ನದೇ ಹುಟ್ಟೂರಿಗೆ ಬಂದದ್ದು, ತನ್ನ ಅಜ್ಜಿಮನೆಯಲ್ಲಿ ಓಡಾಡಿದ್ದು, ಕೋಳಿ ಸುಕ್ಕಾ ತಿಂದದ್ದು…..ಎಲ್ಲವು ಸುದ್ದಿಯಾಯಿತು. ಮತ್ತೂ ಒಂದು ವಿಶೇಷ ಸುದ್ದಿ ಎಂದರೆ ಕಟೀಲು ಕ್ಷೇತ್ರವೇ ಈಕೆಯ ಭೇಟಿಯಿಂದ ಪವಿತ್ರವಾಯಿತೇನೋ ಎಂಬಷ್ಟೂ ಸುದ್ದಿಯನ್ನು ಆಕೆ ವಿಮಾನದಲ್ಲಿ ಬಂದಿಳಿದಿದ್ದರಿಂದ, ಮರಳಿ ವಿಮಾನವೇರುವ ತನಕ ಬರೆಯಲಾಯಿತು. ಎಲ್ಲಾ ಪತ್ರಿಕೆಗಳ ಒಬ್ಬೊಬ್ಬ ಪತ್ರಕರ್ತನೂ ಅಷ್ಟು ಹೊತ್ತಿನ ಮಟ್ಟಿಗೆ ಆಕೆಯ ಸಂಸಾರದ ಹಿಂದಿದ್ದ.!
ಈ ಕ್ಷಣದಲ್ಲಿ ನನಗೊಂದು ವಿಷಯ ನೆನಪಿಗೆ ಬರುತ್ತದೆ. ಇತ್ತೀಚೆಗೆ ನಾವು ಒಂದು ಸಮ್ಮೇಳನವನ್ನು ಆಯೋಜಿಸಿದ್ದೆವು. ಅದರ ಉದ್ಘಾಟನಾ ಸಮಾರಂಭದ ವರದಿ ಸವಿಸ್ತಾರವಾಗಿ ಪ್ರಕಟವಾಯಿತು. ಉದ್ಘಾಟನೆ ಮುಗಿಯುತ್ತಲೇ, ಒಂದು ಮಗು ವಾಮಾಚಾರಕ್ಕೆ ಬಲಿಯಾದ ಘಟನೆ ಬಹಿರಂಗ ಗೊಂಡಿತು. ಅದೇ ಸಂಜೆ ನಮ್ಮ ಸಮ್ಮೇಳನದ ಸಮಾರೋಪವೂ ನಡೆಯುತ್ತಿತ್ತು. ಆದರೆ ಸಂಜೆ ಒಬ್ಬನೇ ಒಬ್ಬ ಪತ್ರಕರ್ತನೂ ಅಲ್ಲಿರಲಿಲ್ಲ. ಅಲ್ಲಿನ ಯಾವ ವರದಿಯೂ ದಾಖಲಾಗಲಿಲ್ಲ. ಸಮ್ಮೇಳನದಲ್ಲಿಯೇ ತಲ್ಲೀನರಾಗಿದ್ದ ನಮಗೆ ಇದೇಕೆ ಎಂದು ಆಶ್ಚರ್ಯವಾಯಿತು. ನಂತರ, ನಮಗೆ ಆ ವಾಮಾಚಾರದ ಘಟನೆಯಿಂದ ಸಂಭ್ರಮದ ಘಟನೆಯನ್ನೂ ಮರೆಯುವಷ್ಟು ಘಾಸಿಯಾಯಿತು-ಖೇದವಾಯಿತು. ಮತ್ತಷ್ಟು ಓದು 
ಹಳ್ಳಿಗರೇ ಕರೆಂಟ್ ಉಳಿಸಿ, ಎಂಜಿ ರೋಡಿಗೆ ಲೈಟ್ ಹಾಕಬೇಕು
ಪ್ರಪಂಚ ಹೀಗೆನೇ!
ಯಾರು ಪಾಲಿಸ್ತಾರೋ ಅವರ ಮೇಲೆಯೇ ಎಲ್ಲವನ್ನು ಹೇರಿ ಅರಾಮದಲ್ಲಿ ಇದ್ದು ಬಿಡುತ್ತೆ. ‘ಉಳಿಸಿ’ ಅಂತ ಸರ್ಕಾರ ಯಾವುದಾದ್ರು ಅಭಿಯಾನ ಮಾಡಿದ್ರೆ ಅದರ ಟಾರ್ಗೆಟ್ ಮಧ್ಯಮ ಇಲ್ಲವೇ ಕೆಳವರ್ಗವೇ ಆಗಿರುತ್ತೆ. ಅದು ನೀರುಳಿಸಿ ಎಂಬುದೋ, ಪೆಟ್ರೋಲ್ ಉಳಿಸಿ ಅಂತಲೋ, ಕಡೆಗೆ ವಿದ್ಯುತ್ ಉಳಿಸಿ ಅಂತಾನೋ ಇರಬಹುದು. ಇಲ್ಲಿ ‘ಉಳಿಸಬೇಕಾದವರು’ ಯಾವುದನ್ನು ಕಡಿಮೆ ಪಡೆಯುತ್ತಿರುತ್ತಾರೋ ಅವರೇ! ವಿಚಿತ್ರ, ಆದ್ರೂ ಸತ್ಯ.
ಉದಾಹರಣೆಗೆ ನೀರು ಉಳಿಸಿ-ಮಿತವಾಗಿ ಬಳಸಿ ಅಂತ ಹೇಳಲಾಗುತ್ತೆ. ಆದ್ರೆ ಅದನ್ನು ಪಾಲಿಸಬೇಕಾದ ಜನತೆಗೆ ವಾರಕ್ಕೆ ಒಮ್ಮೆಯೋ ಎರಡು ಬಾರಿಯೋ ನೀರು ಬಂದ್ರೆ ಅದೇ ಹೆಚ್ಚು. ಒಮ್ಮೆ ಎಲ್ಲಿಯಾದ್ರೂ ಈ ಜನರು ಈ ನಿಯಮಗಳನ್ನು ಪಾಲಿಸುವಲ್ಲಿ ಸೋತರೆ ನಾವೆಲ್ಲ ಬೊಬ್ಬೆ ಹಾಕಿ ಬಿಡ್ತೇವೆ. ಅದ್ರೆ ಆ ಬೊಬ್ಬೆಯಲ್ಲಿ ಸತ್ಯವೊಂದು ಮುಚ್ಚಿ ಹೋಗಿರುತ್ತೆ. ಒಬ್ಬ ಶ್ರೀಮಂತನ ಮನೆಯ ಟಾಯ್ಲೆಟ್ ನಲ್ಲಿ ಬಳಕೆಯಾಗುವ ನೀರಿನಷ್ಟು ಸಾಮಾನ್ಯ ಜನರ ಕುಡಿಯುವ ನೀರು ಶುದ್ಧವಾಗಿರಲ್ಲ.
ಭಾರತ-ಪಾಕ್ ಮಧ್ಯೆ ನಡೆಯುವುದು ಕೇವಲ ಪಂದ್ಯವಲ್ಲ!
– ರಾಕೇಶ್ ಶೆಟ್ಟಿ
ಅದನ್ನ ಕೇವಲ ಕ್ರಿಕೆಟ್ ಪಂದ್ಯ ಅಂತ ಹೇಳಲು ಸಾಧ್ಯವಾ? ನಾಳೆ ಬುಧವಾರ ಮಧ್ಯಾನ್ಹ ೨.೩೦ರ ನಂತರ ಬಹುತೇಕ ರಸ್ತೆಗಳು ಬಿಕೋ ಎನ್ನಲು ಶುರುವಾಗುತ್ತವೆ! ಎಂ.ಎನ್.ಸಿಗಳು ಸಹ ಉದ್ಯೊಗಿಗಳಿಗೆ ನಾಳೆ ವಿನಾಯಿತಿ ಕೊಡಲಿವೆ.(ಕೊಡದಿದ್ರೆ ಮಾಡೋ ಕೆಲ್ಸದಲ್ಲಿ ಯಡವಟ್ಟು ಮಾಡಿಬಿಡ್ತಾರೇನೋ ಅನ್ನೋ ಭಯಕ್ಕಾಗಿ 😉 ).ಜನ ಟೀವಿ ಮುಂದೆ ಕೂತ್ರೆ ಮುಗಿತು ಭಾರತ-ಪಾಕ್ ಕ್ರಿಕೆಟ್ ಸಮರದ ಫ಼ಲಿತಾಂಶ ಬರುವವರೆಗೂ ಅಲ್ಲಾಡಲಿಕ್ಕಿಲ್ಲ.
ಭಾರತ-ಪಾಕ್ ನಡುವೆ ನಡೆಯುವ ವಿಶ್ವಕಪ್ ಪಂದ್ಯ ಅಂದರೆ ಅದು ಸಮರವೇ ಸರಿ! ವಿಶ್ವಕಪ್ನಲ್ಲಿ ಭಾರತ-ಪಾಕ್ ಇದುವರೆಗು ೯೨,೯೬,೯೯ ಮತ್ತು ೨೦೦೩ ರಲ್ಲಿ ೪ ಬಾರಿ ಮುಖಾಮುಖಿಯಾಗಿವೆ.ಮತ್ತು ೪ ಬಾರಿಯು ಭಾರತ ಪಾಕಿಗಳಿಗೆ ಬಡಿದಿದೆ.ಅದರಲ್ಲೂ ವಿಶೇಷವಾಗಿ ಸಚಿನ್ನದ್ದು ಪಾಕ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಆರ್ಭಟ ತುಸು ಹೆಚ್ಚು! ಅದರಲ್ಲೂ ೨೦೦೩ರಲ್ಲಿ ಸೌತ್ ಆಫ಼್ರೀಕಾದ ಲ್ಲಿ ನಡೆದ ಪಂದ್ಯದಲ್ಲಂತೂ, ’ಸಚಿನ್ನನ್ನ ಮೊದಲನೆ ಚೆಂಡಿನಲ್ಲೆ ಔಟ್ ಮಾಡಿ ಕಳಿಸುತ್ತೇನೆ’ ಅಂತ ಪಂದ್ಯದ ಮೊದಲೆ ಕಿರುಚಿದ್ದ ಶೋಯೆಬ್ ಅಖ್ತರ್ನನ್ನ ಅಟ್ಟಾಡಿಸಿ ಬಡಿದಿದ್ದ! ಬಹುಷಃ ಆ ಅನುಭವದಿಂದಾಗಿಯೋ ಏನೋ,ಈ ಭಾರಿ ಅಖ್ತರ್ ಬಾಯಿ ಬಿಟ್ಟಿಲ್ಲ. ಆದರೆ ಅಫ಼್ರಿದಿ ಮಾತ್ರ ಸಚಿನ್ ನೂರನೇ ಶತಕ ಬಾರಿಸಲು ಇನ್ನಷ್ಟು ಸಮಯ ಕಾಯಬೇಕು ಅಂದಿದ್ದಾನೆ.ಯಥಾ ಪ್ರಕಾರ ಬ್ಯಾಟಿನಲ್ಲೆ ಉತ್ತರ ಕೊಡೊ ಅಭ್ಯಾಸವಿರೋ ನಮ್ಮ ಲಿಟಲ್ ಮಾಸ್ಟರ್ ಪ್ರತಿಕ್ರಿಯಿಸಿಲ್ಲ!
ಎಂಡೋಸಲ್ಫನ್ ತಯಾರಕರ ದೇಶ ಸೇವೆ ಮುಖವಾಡ
– ಗೋವಿಂದ್ ಭಟ್
ಎಂಡೋಸಲ್ಫನ್ ತಯಾರಕರ ಹೊಸ ವರಸೆ ಗಾಬರಿಯಾಗುತ್ತದೆ. ಅವರೀಗ ಯುರೋಪಿನ ವಿಷ ತಯಾರಕರು ಎಂಡೋಸಲ್ಫನ್ ಬಹಿಷ್ಕಾರ ಚಳುವಳಿಯ ಹಿಂದಿದ್ದಾರೆ ಎಂದು ಆಪಾದಿಸುತ್ತಿದ್ದಾರೆ. ಬಾರತದ ತಯಾರಕರು ಜೀವ ಉಳಿಸುವ ಔಷದಿಯಲ್ಲಿ ಮೂಲವಸ್ತುಗಳ ಹೆಸರಿನಲ್ಲಿ ತಯಾರಿಸಿ ಕಡಿಮೆ ಬೆಲೆಯಲ್ಲಿ ಮಾರಿದ್ದು ಹಾಗೂ ಸಮಾಜ ಇವರಿಗೆ ಬೆಂಬಲಿಸಿದ್ದು ಈಗ ಇತಿಹಾಸ. ಈಗ ಈ ಕೀಟನಾಶಕ ವನ್ನೂ generic ಅನ್ನೋ ಮುಖವಾಡದ ಹವಣಿಕೆಯಲ್ಲಿದ್ದಾರೆ. ನಾವು ಕಡಿಮೆ ಬೆಲೆಯಲ್ಲಿ ಎಂಡೋಸಲ್ಫನ್ ತಯಾರು ಮಾಡಿ ಮಾರುವುದು ಬಾರತದ ರೈತರ ಉದ್ದಾರ ಮಾಡುವುದನ್ನು ಯುರೊಪಿಯನರು ಸಹಿಸುತ್ತಿಲ್ಲ. ನಾವು ಬಾಗಿಲು ಹಾಕಿದರೆ ಯುರೋಪಿನ ತಯಾರಕರು ಇದಕ್ಕಿಂತ ಹಲವು ಪಾಲು ದುಬಾರಿಯ ಮಾಲುಗಳನ್ನು ಬಾರತದ ರೈತರು ಅವಲಂಬಿಸಬೇಕಾಗುತ್ತದೆ.ಡಾ.ಅಬ್ದುಲ್ ಕಲಾಂರನ್ನ ನಿನ್ನೆ ಸಾಯಿಸುವವರಿದ್ದರು!
-ರಾಕೇಶ್ ಶೆಟ್ಟಿ
ನನ್ನ ಶಾಲೆಯ ದಿನಗಳವು ಆಗಿನ್ನೂ ಶಂಕರ್ ನಾಗ್ ಅಪಘಾತದಲ್ಲಿ ನಮ್ಮಿಂದ ದೂರವಗಿದ್ದರು,ಅದೇ ಸಮಯದಲ್ಲಿ ಕಿಡಿಗೇಡಿಗಳು ವಿಷ್ಣು ಇನ್ನಿಲ್ಲ ಅಂತ ಸುದ್ದಿ ಹಬ್ಬಿಸಿದ್ದರು.ಕಡೆಗದು ಟುಸ್ಸ್ ಪಟಾಕಿಯಾಗಿತ್ತು.ಈ ರೀತಿಯ ಸುದ್ದಿಗಳನ್ನ ಕೇಳಿ ಕೇಳಿ,ಕಡೆಗೆ ನಿಜವಾಗಿ ವಿಷ್ಣು ನಮ್ಮನ್ನ ಅಗಲಿದ ದಿನ,ಬೆಳ್ಳಂ ಬೆಳಿಗ್ಗೆ ಗೆಳೆಯ ಶ್ರೀಕಾಂತ ಬಂದು ವಿಷ್ಣು ಹೊದ್ರಂತೆ ಅಂದಾಗ, ’ಜೊತೆಗ್ ನೀನೂ ಹೋಗಲೆ’ ಅಂತ ಬೈದು ಕಳಿಸಿದ್ದೆ.ಆದರೆ ನಿಜ ಅಂತ ಗೊತ್ತಾದಗ ಮನಸ್ಸು ಕಳವಳಗೊಂಡಿತ್ತು.
ಈ ಗಾಳಿ ಸುದ್ದಿಗಳೇ ಹಾಗೆ ಅಲ್ವಾ? ನಿಜ ಸುದ್ದಿಗಳಿಗೊಂದು ಗುದ್ದು ನೀಡಿ ಹೊರಟು ನಿಲ್ಲುತ್ತವೆ! ಕಳೆದವಾರ ತಾನೆ ಆಫ಼ೀಸಿನಲ್ಲಿ ಕುಳಿತಿದ್ದವನಿಗೆ ಅತ್ತಿಗೆ ಕರೆ ಮಾಡಿ ಜಪಾನ್ ಮುಳುಗುತ್ತಿದೆ ನೋಡು ಅಂದಾಗಲು ನಂಬಲಿಕ್ಕಾಗಲಿಲ್ಲ.ಆದರೆ ಅದೂ ನಿಜವಾಗಿತ್ತು 😦
ಮತ್ತೆ ನಿನ್ನೆ ಮಧ್ಯಾನ ಗೆಳೆಯ ಸಾತ್ವಿಕ್ ಕರೆ ಮಾಡಿ ’ವಿಷ್ಯ ಗೊತ್ತಾಯ್ತ?’ ಅಂದ್ರು. ’ಏನ್ರಿ’ ಕೇಳ್ದೆ. ’ಅಬ್ದುಲ್ ಕಲಾಂ ಹೋಗ್ಬಿಟ್ರಂತೆ’ ಅನ್ನೋದಾ!…’ನೋಡಿ confirm ಮಾಡಿ ಹೇಳ್ರಿ’ ಅಂದ್ರು.’ಹೌದಾ!?’ ಅಂತ ತಡಬಡಾಯಿಸಿ ಗೂಗಲ್ ದೇವರಲ್ಲಿ ಪ್ರಶ್ನೆ ಹಾಕಿದರೆ ಮೊದಲ ಸುದ್ದಿ ಇದ್ದದ್ದು ’Abdul Kalam’s Advisor Dr.Hafiz Saleh Muhammad Alladin died’ ಅಂತ.ನಾನೋ ಗಾಬರಿಯಲ್ಲಿ ಅದನ್ನ ಅಬ್ದುಲ್ ಕಲಾಮ್ ಅವರೇ ಹೋಗ್ಬಿಟ್ರು ಅಂತಲೇ ಓದಿ ಕೊಂಡು, ಆಫ಼ಿಸಿನಲ್ಲೂ ಕಲಾಂ ಹೋಗ್ಬಿಟ್ರು ಅಂದು,ಕಡೆಗೆ ಇನ್ನೊಮ್ಮೆ ಶಾಂತನಾಗಿ ನೋಡಿ. ’ಹೇ,ಇಲ್ಲಾ ರೀ,ಯಾವನೋ ಕಿಡಿಗೇಡಿ ಸುದ್ದಿ ಮಾಡಿದ್ದಾನೆ’ ಅಂದೆ.
ಮತ್ತಷ್ಟು ಓದು 
ಸುನಾಮಿ ಕಾವು – ಮಾಧ್ಯಮಗಳಿಗೆ ಮೇವು
ತಲೆಕೆಟ್ಟ ಮಾಧ್ಯಮಗಳ ಮಾತಿಗೆ ಹೆದರಿ ಕಂಗಾಲಾದವರು, ಮತ್ತೆ ಮತ್ತೆ ಮುರ್ಖರಾಗುವವರು ಅದೇ ಸಾಮಾನ್ಯ ಜನ.
ಮಾರ್ಚ್ ೧೯ ರಂದು ಸುಪರ್ ಮೂನ್ ಪ್ರಭಾವದಿಂದ ಸಮುದ್ರ ಉಕ್ಕಿ ಹರಿದು ಇಡೀ ಮಂಗಳೂರಿಗೆ ಮಂಗಳೂರೇ ಮುಳುಗಿ ಹೋಗುತ್ತೆ ಅಂತ ಯಾವಾಗ ಟೀವಿಯಲ್ಲಿ ಸುದ್ದಿ ಬಂತೋ ಪರವೂರಗಳಿಂದ ಬಂದು ಇಲ್ಲಿ ಕೆಲಸ ಮಾಡ್ತಾ ಇರೋ ಜನ ಬೆವತು ಹೋದರು. ಮೊದಲೇ ಇಲ್ಲಿನ ಪ್ರಕೃತಿಯ ಸರಿಯಾದ ಅಂದಾಜಿಲ್ಲದ ಜನರಂತೂ ನಿಜಕ್ಕೂ ಒಂದು ಕ್ಷಣ ಅವಕ್ಕಾದರು. ಅವರವರ ಮನೆಗಳಿಂದ ಪೋನಿನ ಮೇಲೆ ಪೋನ್ ಬರತೊಡಗಿದವು. ಎಲ್ಲರದ್ದೂ ಒಂದೇ ಮಾತು ಈ ಕ್ಷಣವೇ ಅಲ್ಲಿಂದ ಹೊರಟು ಬಾ ಅಂತ.
ಹೆದರಿದವರ ಮೇಲೆ ಹಾವು ಎಸೆದಂತೆ ಜಪಾನಿನಲ್ಲಿ ಎದ್ದ ಸುನಾಮಿ ಇನ್ನಷ್ಟು ಹೆದರಿಕೆ ಹುಟ್ಟಿಸಿತು. ಇದರೆಲ್ಲರ ಪರಿಣಾಮ ದೂರದ ಊರಿಗೆ ಹೋಗೋ ಎಲ್ಲ ಬಸ್ಸುಗಳು ಬಸುರಿಯಂತೆ ತುಂಬಿ ಹೋದವು. ರಾತ್ರೋ ರಾತ್ರಿ ಖಾಸಗಿ ಬಸ್ಸಿನವರು ಪ್ರಯಾಣ ದರವನ್ನು ಹೆಚ್ಚಿಸಿ ಉರಿಯುವ ಮನೆಯಲ್ಲಿ ಗಳ ಹಿರಿಯುವ ಕೆಲಸ ಮಾಡಿದರು. ಒಂದಕ್ಕೆ ಎರಡು ನೀಡಿ ತಮ್ಮ ಊರಿಗೆ ಹೊರಟು ನಿಂತಿತು ಜನತೆ. ೫೦ ಜನರು ಇರಬೇಕಾದ ಬಸ್ಸಿಲ್ಲಿ ೬೦-೭೦ ಜನ ಪ್ರಯಾಣ ಮಾಡಿದರು.
ಮಕ್ಕಳು, ಮರಿ, ಹೆಂಗಸರು, ಗಂಡಸರು ಎಂಬ ಬೇಧಭಾವವಿಲ್ಲದೇ ಹೊರಟೆ ಹೊರಟರು. ಇವರೆಲ್ಲ ಮಾಸಿಕ ಪಗಾರ ಎಣಿಸೋ ಸರ್ಕಾರಿ ಬಾಬುಗಳಲ್ಲ. ದಿನಗೂಲಿಗೆ ದೂರದ ಉತ್ತರ ಕರ್ನಾಟಕದಿಂದ ಬಂದ ಜನ. ಒಪ್ಪತ್ತಿಗೆ ಪರದಾಡುತ್ತಿರುವ ಇವರು, ಪ್ರಕೃತಿಯ ಮುನಿಸಿಗೆ ಒಳಗಾದ ನೆರೆಪೀಡಿತ ಜನ.
ಪಕ್ಷಗಳ ಆಟಕ್ಕೆ ಜನರ ಹಣವೇಕೆ ಬಲಿ?
– ರಾಕೇಶ್ ಶೆಟ್ಟಿ
ಮತ್ತೆ ೩ ಕ್ಷೇತ್ರಗಳಲ್ಲಿ ಉಪಚುನಾವಣೆ ಬಂದು ನಿಂತಿದೆ.ಮೊದಲೆಲ್ಲ ಜನಪ್ರತಿನಿಧಿಗಳ ಮರಣದಿಂದಾಗಿಯೇ ಉಪಚುನಾವಣೆಗಳು ನಡೆಯುತಿದ್ವು.ಅದರ ನಡುವೆ ನಮ್ಮ ಚುನಾವಣ ಆಯೋಗದ
ತಲೆ ಕೆಟ್ಟ ಒಂದು ಕಾನೂನು ಇದ್ಯಲ್ಲ : ’ಒಂದೇ ಕಾಲದಲ್ಲಿ ಒಬ್ಬ ಅಭ್ಯರ್ಥಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಬಹುದು’ ಅಂತ.ಅದೂ ಕೂಡ ಕೆಲವೊಮ್ಮೆ ಉಪಚುನಾವಣೆಗೆ ಕಾರಣವಾಗಿದ್ದಿದೆ.ಉದಾಹರಣೆಗೆ ಸೋನಿಯ ಮೇಡಂ ಬಳ್ಳಾರಿಲಿ ಗೆದ್ದು ’ಕೈ’ ಎತ್ತಿ ಹೊರಟಿದ್ದು ಗೊತ್ತಿದೆ ಅಲ್ವಾ?
ನಮ್ ದೇವೆಗೌಡ್ರು ಪ್ರಧಾನಿ ಕುರ್ಚಿಯಿಂದ ಇಳಿದು ಬಂದ್ಮೇಲೆ ಎದುರಿಸಿದ ಲೋಕಸಭಾಚುನಾವಣೆಯಲ್ಲಿ ಹಾಸನದಿಂದ ಸ್ಪರ್ಧಿಸಿ ಸೋತು,ಆ ನಂತರ ಕನಕಪುರದಲ್ಲಿ ನಡೆದ ಉಪಲೋಕಸಭೆ ಚುನಾವಣೆಯಲ್ಲಿ ಗೆದ್ದು ಬಂದಿದ್ರು.ಆ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಹಾಸನ ಮತ್ತೆ ಕನಕಪುರ ಎರಡೂ ಕ್ಷೇತ್ರದಿಂದ ಸ್ಪರ್ಧಿಸಿದ್ರು.ಒಂದು ವೇಳೆ ಎರಡೂ ಕಡೆ ಗೆದ್ದಿದ್ರೆ ಹಾಸನ ಕೈ ಬಿಡ್ತಾ ಇದ್ರೂ ಅಂತ ಆಗ ಜನ ಮಾತಡಿಕೊಳ್ತಾ ಇದ್ರು.ದೇವರ ದಯೆ ಹಾಸನದಲ್ಲಿ ಮಾತ್ರ ಗೆದ್ರು! 🙂
ದೇವರ ದಯೆ ಅಂತ್ಯಾಕ್ ಹೇಳ್ದೆ ಅಂದ್ರೆ, ಹೀಗೆ ಎರಡೂ ಕಡೆ ನಿಂತೂ ಎರಡೂ ಕಡೆ ಗೆದ್ರೆ, ಅವ್ರು ಒಂದು ಕ್ಷೇತ್ರವನ್ನ ಬಿಟ್ಟುಕೊಡಲೇಬೇಕಲ್ವಾ? ಆಗ ತೆರವಾದ ಸ್ಥಾನಕ್ಕೆ ಮತ್ತೊಮ್ಮೆ ಉಪಚುನಾವಣೆ ಬಂದು ನಿಲ್ಲುತ್ತೆ. ಮತ್ತೆ ನಮ್ಮ ಜನರು ಬೆವರು ಸುರಿಸಿದ ತೆರಿಗೆ ಹಣ ಪೋಲು ಆಗೋದಿಲ್ವಾ?
ಈ ಬಾರಿಯ ಬಿಜೆಪಿ ಸರ್ಕಾರ ಬಂದು ಆಪರೇಶನ್ ಕಮಲ ಅಂತ ಹೇಳಿಕೊಂಡು ಮಾಡಿದ್ದು ಜನರ ತೆರಿಗೆ ಹಣದ ಆಪರೇಶನ್ ಅಲ್ವಾ?… ಈ ಮಧ್ಯೆ ಕುಮಾರಸ್ವಾಮಿಯವ್ರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂ.ಪಿ ಆದ್ರು,ಈಗ ಮತ್ತೆ ಚನ್ನಪಟ್ಟಣ ಉಪಚುನಾವಣೆಗೆ ನಿಲ್ತಾ ಇದ್ದರೆ.ಅಲ್ಲಿ ಗೆದ್ರೆ ಮತ್ತೆ ಲೋಕಸಭೆಯ ಸ್ಥಾನಕ್ಕೆ ಉಪಚುನಾವಣೆ ನಡಿಬೇಕಲ್ವಾ?…







![Media_goofup_photo[1]](https://nilume.net/wp-content/uploads/2011/03/media_goofup_photo1.jpg?w=300&h=240)
