ಚಿಂಗಾರಿ
– ಫಿಲ್ಮಿ ಪವನ್
ಫೋರಂ ಮಾಲ್ ಅಲ್ಲಿ ಮಾಸ್ ಸಿನಿಮಾ ನೋಡೋದಂದ್ರೆ ಮಜಾನೆ ಇರಲ್ಲ ಬಿಡಿ, ಸುತ್ತ ಮುತ್ತ ಆಂಟಿಗಳು, ಅಂಕಲ್ಗಳು, ಲವರ್ಸ್ಗಳು. ಅದ್ರಲ್ಲು ದರ್ಶನ್ ಸಿನಿಮಾ ಅಂದ್ರೆ ಇನ್ನು ಉರ್ದೋಗುತ್ತೆ, ಪಂಚಿಂಗ್ ಡೈಲಾಗು ಬಂದ್ರೆ ಒಂದು ಶಿಲ್ಲೆ ಹೊಡ್ಯೋದು ಇಲ್ಲ ಯಾರುವೆ 😦 ಆದ್ರೆ ಏನ್ ಮಾಡೋದು ಈ ಹುಡುಗೀರು ಬಿಡ್ಲಿಲ್ಲ. ಫೋರಂ ಪಿ.ವಿ.ಅರ್. ಅಂತ ಚಿಂಗಾರಿ ಗೆ ಕರ್ಕೊಂಡೋಗಿದ್ರು ಮೊದ್ಲೇ ಬಾಸ್ ಸಿನಿಮ, ಎಲ್ಲಾದ್ರು ಮಾಸ್ ಆಗಿರೋ ಚಿತ್ರಂದಿರದಲ್ಲಿ ಕೂತು ಮಾಸ್ ಆಗಿ ಅರ್ಧ ಕಿಲೋ ಚಿಪ್ಸ್ ಮತ್ತೆ ೨ ಲೀಟರ್ ಪೆಪ್ಸಿ ೧ ಪ್ಯಾಕ್ ಕಿಂಗ್ ಇಟ್ಕೊಂಡು ಸಿನಿಮಾ ನೋಡೊಣ ಒಳ್ಳೊಳ್ಳೆ ಪಂಚಿಂಗ್ ಡೈಲಾಗ್ ಹೊಡೆದಾಗ ಶಿಲ್ಲೆ ಹೊಡ್ಯಾಣ ಮಾಸ್ ಸಾಂಗ್ ಗೆ ಪರದೆ ಬಳಿ ಹೋಗಿ ಸ್ಟೆಪ್ ಹಾಕೋಣ ಅನ್ನೋ ಆಸೆಗೆಲ್ಲಾ ತಣ್ಣೀರು ಬಿದ್ದಿತ್ತು.ಇನ್ನೊಂದು ವಿಷಯ ಅಂದ್ರೆ ಟಿಕೆಟ್ ಬೆಲೆ ಬೇರೆ ಜಾಸ್ತಿ ಕಣ್ರಿ 😦
ಈ ಸಿನಿಮಾದ ಒಪೆನಿಂಗೇ ವಿಶೇಷವಿತ್ತು, ಯಾಕಂದ್ರೆ ಯಾವುದೇ ಸಿನಿಮಾದ ಟೈಟಲ್ ಕಾರ್ಡಲ್ಲಿ ತಾಂತ್ರಿಕ ವರ್ಗದವರ ಹೆಸರು ಮಾತ್ರ ಹಾಕ್ತಿದ್ರು. ಆದ್ರೆ ಈ ಸಿನಿಮಾದಲ್ಲಿ ಅವರ ಫೋಟೊ ಸಹ ನೋಡಿ ಖುಶಿ ಆಯ್ತು.ಪ್ರತಿಯೊಬ್ಬ ತಾಂತ್ರಿಕ ವರ್ಗದವರ ಭಾವಚಿತ್ರ ಅವರ ಹೆಸರಿನೊಂದಿಗೆ ಬಂದಾಗ ಖುಶಿ ಆಯ್ತು. ತಾಂತ್ರಿಕ ವರ್ಗದವರಿಗೆ ಅಷ್ಟು ಪ್ರಾಮುಖ್ಯತೆ ಕೊಟ್ಟಿರುವ ನಿರ್ದೇಶಕ ಹರ್ಷ ಅವರಿಗೆ ಕುಡೋಸ್. ಮತ್ತಷ್ಟು ಓದು 
ಜೊಳ್ಳೇ ಎಲ್ಲ – ಇದು ಸಿದ್ಲಿಂಗು ಸಿನಿಮಾ ಕಣ್ಲಾ
ಫಿಲ್ಮಿ ಪವನ್
ಬಹಳ ದಿನದಿಂದ ಸಿದ್ಲಿಂಗು ನೋಡ್ಬೇಕು ಅಂತ ಕಾದಿದ್ದೆ, ಮೆಜೆಸ್ಟಿಕ್ ತನಕ ಹೋಗಿ ಪಿಕ್ಚರ್ ನೋಡೋ ಅಷ್ಟು ಸಮಯ ಸಿಕ್ಲೆ ಇಲ್ಲ, ಅದಕ್ಕೆ ನಮ್ಮೂರಲ್ಲೇ ಹಾಕಲಿ ಅಂತ ಕಾಯ್ತಾ ಇದ್ದೆ. ಬೆಳಿಗ್ಗೆ ಆಫಿಸ್ ಗೆ ಹೋಗೋವಾಗ ಬ್ಹೊಜಣ್ಣನ ಟೀ ಅಂಗಡಿ ಹತ್ರ ಪೋಸ್ಟರ್ ನೋಡಿ ಸಿಕ್ಕಾಪಟ್ಟೆ ಖುಷಿ ಆಗೋಯ್ತು. ಸಂಜೆ ಏನೇ ಅಗಲಿ ಮಿಸ್ ಮಾಡಬಾರದು ಅಂತ ನಮ್ ಮ್ಯಾನೇಜರ್ ಗೆ ಹೇಳದೇನೆ ಅರ್ಧ ಘಂಟೆ ಮುಂಚೆನೇ escape ಆಗ್ಬಿಟ್ಟೆ. ಆಫಿಸ್ ಗೇಟ್ ಇಂದಾನೆ ದೋಸ್ತ್ ಯಾದವ್ ಗೆ ಫೋನ್ ಹಾಕಿ ಮಗಾ bioscope ಅಂದೆ. ಅವ್ನು ನಾನೆ ಫೋನ್ ಮಡ್ಬೇಕಂದಿದ್ದೆ ಬಾ ಥಿಯೇಟರ್ ಹತ್ರ ಸಿಕ್ತೀನಿ ಅಂದ, ಆಟೋ ಬಸ್ಸು ಎಲ್ಲ ಹಿಡ್ಕೊಂಡು ೫ ನಿಮಿಷ ಮುಂಚೆನೇ ಅರ್ಧ ಪ್ಯಾಕ್ ಕಿಂಗ್ ಮತ್ತೆ ೨೦೦ gm ಚಿಪ್ಸ್ ತೊಗೊಂಡು ಗೇಟ್ ಮುಂದೆ ಹಾಜರ್ ಆದೆ. ಆಗಲೇ ಯಾದವ್ ಟಿಕೆಟ್ ತೊಗೊಂಡಿದ್ದ ಒಳಗೋಗಿ ಮರದ ಬೆಂಚ್ ಮೇಲೆ ಕೂತಿದ್ದೆ ಕೂತಿದ್ದು bioscope ಶುರು ಆಗೋಯ್ತು.
petrOmax ಪುರಾಣ ಹೇಳ್ಕೊಂಡು ಶುರು ಆಗೋ ಕಥೆ, ಪುಟ್ಟ ಹುಡುಗನ ಕಾರ್ ಪ್ರೀತಿ ತೋರುಸ್ತ ಕಾರ್ ಗಾಗಿ classmate ನ dove ಹೊಡೆಯೋ ತನಕ ತಂದು ನಿಲ್ಸುತ್ತೆ, ನಿಜಕ್ಕೂ dove ಹೊಡ್ಯೋದು ಕಾರ್ ಗೋಸ್ಕರ ಆದ್ರು ನಿಜವಾಗೆ ಪ್ರೀತಿ ಮುಡಿರುತ್ತೆ. ಆದ್ರೆ ಆ ಪ್ರೀತಿ ಬಹಳ ದಿನ ಉಳ್ಯಲ್ಲ. ಅದೇ ನೋವಲ್ಲೆ ಬೆಳೆದ ಸಿದ್ಲಿಂಗು ಕಾರ್ ಗೋಸ್ಕರ ಅಂತಾನೆ ಟೀಚರ್ ಹಿಂದಿಂದೆ ತಿರ್ಗಾಡ್ತಾನೆ, ಗಂಡ ಇಲ್ಲದ ಟೀಚರ್ ಸಿದ್ಲಿಂಗು ನ ಆಕಸ್ಮಿಕವಾಗಿ ಉಪಯೋಗಿಸಿಕೊಂಡುಬಿಡುತ್ತಾಳೆ. ಅಷ್ಟರಲ್ಲೇ ಮತ್ತೊಂದು ಆಕಸ್ಮಿಕ, ಸಿದ್ಲಿಂಗು ತಂದೆ ತಾಯಿ ನ ಕಳ್ಕೊತಾನೆ. ಇನ್ನೂ ಓದಿ ದಬ್ಬಕೊದೇನು ಅಂತ ದುಡಿಮೆ ಮಾಡಕ್ಕೆ ಸಿಟಿ ಗೆ ಪ್ರಯಾಣ. ಅಲ್ಲಿಂದ ಕಾರ್ ಪ್ರೀತಿ ಬದುಕಲ್ಲಿ ಎನೆನಲ್ಲ ಮಾಡ್ಸುತ್ತೆ. ಯಾರ ಯಾರನ್ನೆಲ್ಲಾ ಪರಿಚಯ ಮಾಡ್ಸುತ್ತೆ, ಆಕಸ್ಮಿಕಗಳು ಹೇಗೆಲ್ಲ ನಡೆಯುತ್ತೆ ಅನ್ನೋದೇ ಸೀಡ್ಲೆಸ್ಸ್ ಕಡ್ಲೆಕಾಯಿ ಸಿದ್ಲಿಂಗು ಪುರಾಣ.
ಸಿದ್ಲಿಂಗು – ಚಿತ್ರ ವಿಮರ್ಶೆ
-ಹೇಮಾ ಪವಾರ್
ತನ್ನ ಪೋಲಿ ಹುಡುಗಾಟಿಕೆಯ ಪ್ರೋಮೋಗಳಿಂದಲೇ ಜನಪ್ರಿಯತೆ ಗಳಿಸಿದ್ದ ತೀವ್ರ ನಿರೀಕ್ಷೆಯ ಚಿತ್ರ ಸಿದ್ಲಿಂಗು ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. Stereotype ಸಿನಿಮಾಗಳಿಂದ ಬೇಸತ್ತ ಜನರಿಗೆ ಒಂದು ಸಾಧಾರಣ ಕತೆಯನ್ನು ವಿಭಿನ್ನವಾಗಿ ಹೇಳಲಾಗಿರುವ ಕನ್ನಡದ ಚಿತ್ರಗಳಲ್ಲೊಂದು. ಕತೆಯ ಮಾದರಿಯಿಂದ ಹಿಡಿದು, ನಿರೂಪಣೆ, ಸಂಭಾಷಣೆ ಹಾಗು ನಟನೆಯಲ್ಲೂ ಕೂಡ ಹೊಸತನ್ನು ಹೊತ್ತು ತಂದಿರುವಂತಹ ಚಿತ್ರವೂ ಹೌದು.
ಚಿತ್ರದ ಕತೆಯನ್ನು ನಾಯಕ narrate ಮಾಡುತ್ತ ಹೋಗುತ್ತಾನೆ, ಆತ ಹುಟ್ಟಿದ್ದು, ಆತನ ಅಪ್ಪ ಚಿಕ್ಕಮ್ಮ, ಸ್ಕೂಲು, ಸ್ಕೂಲಿನ ಗೆಳತಿ, ಕಾರಿನ ಬಗ್ಗೆ ಆತನಿಗೆ ವ್ಯಾಮೋಹ ಬೆಳೆದು ಬಂದ ರೀತಿ. ಕಾರಿದ್ದದ್ದಕ್ಕೆ ಹತ್ತಿರವಾದ ಲೆಕ್ಚರರ್, ಸಲೀಸಾಗಿ ಎಂಬಂತೆ ಆಕೆಯೊಂದಿಗೆ ಕಾರಿನಲ್ಲೇ ನಡೆದು ಹೋಗುವ ದೈಹಿಕ ಸಂಪರ್ಕ, ಹಠಾತ್ತನೆ ಸತ್ತು ಹೋಗುವ ಅಪ್ಪ ಅಮ್ಮ, ಒಂಟಿಯಾಗಿ ಬೆಳೆಯುವ ಆತ, ಕಾರು ಕೊಳ್ಳಬೇಕೆಂಬ ಆತನ ಕನಸು, ಕಾರ್ ಮಾಲೀಕನ ಒಂದಷ್ಟು ಎಮೋಷನ್ಸು, ಬಡ್ಡಿಗೆ ದುಡ್ಡು ಕೊಡುವ ವ್ಯಾಪಾರಿ, ಅದರಿಂದ ಪರಿಚಯವಾಗುವ ನಾಯಕಿ, ಆಕೆಯೊಂದಿಗಿರುವ ಆಯಾ, ಧಿಡೀರ್ ಎಂದು ಮತ್ತೆ ಕಾಣಿಸಿಕೊಳ್ಳುವ ಲೆಕ್ಚರರ್ ’ತುರುವೇಕೆರೆ ಆಂಡಾಳಮ್ಮ’, ಆಕೆಯನ್ನು ನೋಡಿ ಕಾರಿನ ದಾಖಲೆಗಳನ್ನು ಕಳೆದುಕೊಳ್ಳುವ ನಾಯಕ, ಕಾರ್ ಮಾಲೀಕನ ಮಗನ ವಿಲನ್ ರೂಪದ ಎಂಟ್ರಿ, ಆತನಿಗೊಬ್ಬ ಇನ್ಸ್ ಪೆಕ್ಟರ್ ಶತ್ರು, ಇನ್ಸ್ ಪೆಕ್ಟರ್ ಗೆ ಹತ್ತಿರವಾಗುವ ಸಿದ್ಲಿಂಗು ಮತ್ತು ನಾಯಕಿ, ಕ್ಲೈಮ್ಯಾಕ್ಸ್ ನಲ್ಲಿ ವೈರಿ ನಾಶಕ್ಕಾಗಿ ಇನ್ಸ್ ಪೆಕ್ಟರ್ ಹಾಗು ಸಿದ್ಲಿಂಗು ಹೊಡೆದಾಡಬೇಕಾದರೆ, ಅಚಾತುರ್ಯದಿಂದ ಸತ್ತು ಹೋಗುವ ನಾಯಕಿ. ಕ್ಲೈಮ್ಯಾಕ್ಸ್ ಅನ್ನು ಪ್ರೇಕ್ಷಕರನ್ನು ದಿಗ್ಬ್ರಮಿಸಲೆಂದೇ ಮೂಡಿಸಿರುವುದು ತಿಳಿದರು ಇಡೀ ಕತೆ ಹಾಗು ಅದರ ರೀತಿ ಕ್ಲೈಮ್ಯಾಕ್ಸನ್ನು ಜಸ್ಟಿಫೈ ಮಾಡುವುದಿಲ್ಲ. ಹಾಗಾಗಿ ಅದು ಅಲ್ಟಿಮೇಟ್ ಶಾಕ್ ಎನಿಸದೆ ಅತೀ ಭಾವುಕವೂ ಎನಿಸದೆ ಪ್ರೇಕ್ಷಕರ ಮನಸ್ಸಿನಲ್ಲಿ ನಿಲ್ಲಲು ಸೋಲುತ್ತದೆ.
ಪ್ರಪಾತ……ವಿಮಾನಯಾನ ಬಲುಪ್ರಾಚಿನ….!!!
– ಫಿಲ್ಮಿ ಪವನ್
ವಿಮಾನ ಎಂದರೆ ಏನೋ ಅಚ್ಚರಿ, ರಾಮಾಯಣದಲ್ಲಿ ಪುಷ್ಪಕ ವಿಮಾನ ಇತ್ತಂತೆ. ಕಾಡಿಂದ ಸೀತೆಯನ್ನು ಅದರಲ್ಲೇ ರಾವಣ ಎತ್ಕೊಂದೋಗಿದ್ದಂತೆ. ಇವೆಲ್ಲ ಕೇಳ್ದಾಗ ನಮ್ಮೋರು ವಿದೆಶಿಯರಿಗಿಂತ ಮುಂಚೆಯೇ ವಿಮಾನ ಕಂಡುಹಿಡಿದಿದ್ರ ಅಂತ ಡೌಟ್ ಬರೋದು ಸಾಮಾನ್ಯ. ಇಂತಹ ಡೌಟ್ clear ಮಾಡೋ ಸಿನಿಮ ನೋಡೋ ಅವಕಾಶ ಈ ನಡುವೆ ಒದಗಿ ಬಂದಿತ್ತು.
ಹೋದವಾರ ಗಣರಾಜ್ಯೋತ್ಸವದ ಪ್ರಯುಕ್ತ ನಮ್ ಕಂಪನಿ ರಜೆ ಇತ್ತು. ಏನು ಮಾಡೋದು ಅಂತ ಯೋಚಿಸುತ್ತಿರುವಾಗಲೇ ನಮ್ಮ ನೆಂಟರೋಬ್ರು ಫೋನ್ ಮಾಡಿ, ಅವರು ಅಬಿನಯಿಸಿರೋ ಚಿತ್ರದ ಉಚಿತ ಪ್ರದರ್ಶನ ಇದೆ ಬಾ ಅಂತ ಕರೆದರು. ಬಿಟ್ಟಿಯಾಗಿ ಆಗೋಹಾಗಿದ್ರೆ 100 ರು ಕೆಲಸಕ್ಕೆ ಇನ್ನೂರು ರು ಖರ್ಚು ಮಾಡಕ್ಕು ತಯಾರು ಅಲ್ವೇ ನಾವು, ಸರಿ ಸರ್ ಬರ್ತೀನಿ ಅಡ್ರೆಸ್ ಕೊಡಿ ಅಂದೆ. ಸೀತ ಸರ್ಕಲ್ ಹತ್ರ ಯೋಗಶ್ರಿ ಆಶ್ರಮ ಸಿನಿಮ ಹೆಸರು ಪ್ರಪಾತ ಅಂದ್ರು. ನನಗೆ ಆ ಸಿನಿಮ ಬಗ್ಗೆ ಮೊದಲೇ ಸ್ವಲ್ಪ ಗೊತ್ತಿತ್ತು. ಥಿಯೇಟರ್ ಅಲ್ಲಿ ರಿಲೀಸ್ ಆಗಲಿ ಅಂತ ಕಾಯ್ತಿದ್ದೆ, ಆದ್ರೆ ಅಲ್ಲಿ ಹೋಗಿ ನೋಡಿದಾಗಲೇ ತಿಳಿದಿದ್ದು ಇದು ಪ್ರಪಾತದ ನೂರ ಎರಡನೇ ಶೋ ಅಂತ. ಅಷ್ಟು ಕಡೆ ಅದು ಸ್ಕ್ರೀನಿಂಗ್ ಆಗಿದೆ ಆದರೆ ಥಿಯೇಟರ್ ಅಲ್ಲಿ ರಿಲೀಸ್ ಆಗೋ ಯೋಗ ಮಾತ್ರ ಬಂದಿಲ್ಲ ಯಾಕೆ ಅಂತ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರೇ ಹೇಳ್ಬೇಕು. ಚಿತ್ರದ ನಿರ್ದೇಶಕ ಕನ್ನಡದ ಕಿರುತೆರೆ ಹಿರಿತೆರೆ ಮತ್ತು ಆಕಾಶವಾಣಿಗೆ ಬಹಳಷ್ಟು ಕೊಡುಗೆ ನಿದಿರುವಂತಹ ವಜ್ರ ಖಂಟದ ಶ್ರೀ ಸುಚೇಂದ್ರ ಪ್ರಸಾದರು. ಆ ದಿನ ಅಲ್ಲಿ ಪ್ರದರ್ಶನ ಹಮ್ಮಿಕೊಂದಿದ್ದವರು ಪ್ರೇರಣ ಟ್ರಸ್ಟ್ ಎಂಬ NGO ಅವರು ಬಡವರಿಗೆ ಉಚಿತ ಡಯಾಲಿಸಿಸ್ ಮಾಡಿಸುವ ಉತ್ತಮ ಕಾರ್ಯಕ್ಕೆ ಕೈ ಹಾಕಿದ್ದಾರೆ. ಮತ್ತಷ್ಟು ಓದು 
ಒನ್ ಟು ತ್ರೀ ವಿಷ್ಣುವರ್ಧನ
– ಫಿಲ್ಮಿ ಪವನ್
ಏನ್ರಿ ಗ್ರಹಚಾರ, ಏನೇ ಹೇಳಿ ಮೊದಲ ಸರಿ ಬರದಾಗ ಬಾರೋ ಮಜಾ ಎರಡನೇ ಸರಿ ಬರಲ್ಲ. ಇ ಬರಹಾನ ಮೊದಲೇ ಬರೆದಿದ್ದೆ, ನನ್ನ ಗ್ರಹಚಾರ ಸರಿ ಇಲ್ದೆ ಬರೆದಿದ್ದ ಬರಹವೆಲ್ಲ ಹೇಗೋ ಮಿಸ್ ಆಗೋಗಿತ್ತು.ಎರಡು ದಿನ ಅಷ್ಟು ಕಷ್ಟ ಪಟ್ಟು ಬರೆದು ವೇಸ್ಟ್ ಆಯ್ತಲ್ಲ ಅಂತ ಫೀಲಿಂಗ್ ಅಲ್ಲಿದ್ದೆ. ಈಗ ಮತ್ತೆ ಬರಿತ ಇದ್ದೀನಿ. ಹೇಗಿದ್ಯೋ ನೀವೇ ಹೇಳ್ಬೇಕು. ಮೊದಲ ಬರಹದಲ್ಲಿದ್ದೆ ಬಹಳಷ್ಟು ಪಾಯಿಂಟ್ ಗಳು ಇಲ್ಲಿ ಖಂಡಿತ ಮಿಸ್ ಆಗಿರುತ್ತೆ.
ನಮ್ಮೂರಿನ ಡಬ್ಬ ಥಿಯೇಟರಲ್ಲಿ ಒಂದಾದ ವೆಂಕಟೇಶ್ವರದಲ್ಲಿ, ವಿಷ್ಣುವರ್ಧನ ಫಿಲಂ ಬಂದೈತೆ ಅಂತ ಸರ್ಕಲ್ ನಲ್ಲಿ ಹಾಕಿರೋ ದೊಡ್ಡ ಪೋಸ್ಟರ್ಗಳು ನೋಡಿದಾಗ ತಿಳೀತು, ಹಾಗೇ ಗೆಳೆಯ ಯಾದವ್ ಗೆ ಫೋನ್ ಮಡಿ ಮಗ bioscope ಅಂದೇ. ಲೇ ಅಪ್ಪಿ ನ ಈಗ ನ ಶಿವಾಜಿನಗರದಲ್ಲಿದ್ದಿನಿ, ಬರಕ್ಕೆ ಇನ್ನ ಬಹಳ ಹೊತ್ತಾಗುತ್ತೆ ಇವಿನಿಂಗ್ ಶೋ ಹೋಗಣ ಅಂದ. ನಾನು ಮಗ ಸಿನಿಮ ಚೆನ್ನಾಗಿದ್ರೆ ಇನ್ನೊಂದು ಸಲಿ ನೋಡನ, ಕಾಯಕ್ಕಂತು ಸಾಧ್ಯ ಇಲ್ಲ ಅಂತ ಹೇಳಿ ನಮ್ ಮುರುಗನ್ ಚಿಪ್ಸ್ ಅಂಗಡಿಲಿ 100gm ಸೈಕಲ್ ಚಿಪ್ಸ್ ತಗೊಂಡು ಟಾಕಿಸ್ ಅಲ್ಲಿ 50 ರು ಟಿಕೆಟ್ ತೊಗೊಂಡು ಸಿನಿಮ ಹಾಲ್ ಅಲ್ಲಿ ಕೂತೆ.
7up ಆಡ್ ಅಲ್ಲಿ ಕೂದಲು ಮೇಲಕ್ಕೆ ಮಾಡಿಕೊಂಡಿರೋ ಬೊಂಬೆ ತಾರಾ ಇದ್ದ ಒಂದು ಕಾರ್ಟೂನ್ ಬಂದು, ನಾನೆ ದಿರೆಕ್ಟೊರ್ ಕಣ್ರೀ ಅಂತು. ನ ನಂಬಲಿಲ್ಲ ಅದ್ರು ಸಿನಿಮದ ಯಾವ ಪ್ರಚಾರ ಕಾರ್ಯಕ್ರಮದಲ್ಲೂ ನಿರ್ದೇಶಕರನ್ನು ನೋಡೇ ಇಲ್ಲ ಎಲ್ಲಿ ನೋಡಿದರು ಖಿಲಾಡಿ ಕುಳ್ಳ ಮತ್ತು ನಾಯಕ ನಾಯಕಿಯರು. ಹಾಗಾಗಿ ಇ 7up ಬೊಂಬೆನೆ director ಅಂದ್ಕೊಂಡು ಕೂತೆ. ಬಂದ ನಿರ್ದೇಶಕ ಜೇಬಲ್ಲಿ ಮೊಬೈಲ್ ಇದ್ದೀಯ ನೋಡ್ಕೊಲ್ರಿ ಅಂದಾಗ ಸಿನಿಮಾ ಹಾಲ್ ಅಲ್ಲಿ ಇದ್ದ 50 ಭಾಗದಷ್ಟು ಜನ ಒಮ್ಮೆ ಮೊಬೈಲ್ ಮುಟ್ಟಿ ನೋಡ್ಕೊಂಡಿದ್ದು ನಿಜ. ನಾ ಕೂಡ ನೋಡಿ, ಮೊಬೈಲ್ ನ ಸೈಲೆಂಟ್ ಮೋಡ್ ಗೆ ಹಾಕಿದೆ. ಒಪೆನಿಂಗ್ ರೀಲ್ ಅಲ್ಲೇ ಇದು ಸಾಹಸ ಸಿಂಹನಿಗೆ ಅವನ ಆಪ್ತಮಿತ್ರನ ಅರ್ಪಣೆ ಎಂಬ ಮಾತು ದ್ವಾರಕೀಶ್ ಅವರ ಧ್ವನಿಯಲ್ಲಿ ಕೇಳಿ ಬಂತು. ಸುದೀಪ್ introduction ಡಿಟ್ಟೋ ಆಪ್ತಮಿತ್ರ ಮೊದಲನೇ ಸಾಹಸ ದೃಶ್ಯದಂತೆ ಮಾಡಿದ್ದರು. ಡೈಲಾಗು ಫೈಟು ಎಲ್ಲ same t same. ಎಲ್ಲೋ ಒಂದು ಮುಲೆಯಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ನಮ್ಮೊಡನೆ ಇಲ್ಲ ಎಂಬ ನೋವನ್ನು ಸಾಹಸ ದೃಶ್ಯದ ಮೂಲಕ ನಿರ್ದೇಶಕರು ಬಹಳ ಜಾಣ್ಮೆಯಿಂದ ತೆರೆಯ ಮೇಲೆ ಮುಡಿಸಿದ್ದರು.
ಸಾರಥಿ – The lion king
– ಫಿಲ್ಮಿ ಪವನ್
ಸಾರಥಿ ಬಿಡುಗಡೆಯಾಗಿ ಬಹಳ ದಿನಗಳಾಯ್ತು. ಆದರೆ ನಮ್ಮೂರಿನ ಕಿತ್ತೋದ ಥಿಯೇಟರ್ ನಲ್ಲಿ ಕೂತು ಯಾರಾದ್ರು ಬೀಡಿ ಅಂಟಿಸಿದಾಗ, ಅಣ್ಣ ಒಂದು ಬೀಡಿ ಕೊಡಣ್ಣ ಅಂತ ತೊಗೊಂಡು mAss ಹೀರೋ ಚಿತ್ರವನ್ನು mAss ಆಗಿ ನೋಡೋದ್ರಲ್ ಇರೋ ಮಜನೆ ಬೇರೆ. ಅದಕ್ಕೆ ನೆನ್ನೆ ಕಾಲ ಬಂದಿತ್ತು , ಯಾಕೋ ಏನೋ ಇ ಚಿತ್ರ ಎಲ್ಲಿ ರಿಲೀಸ್ ಅದ್ರು ಟೈಮ್ ಗೆ ಸರ್ಯಾಗಿ ಸ್ಟಾರ್ಟ್ ಆಗ್ತಾ ಇಲ್ಲ ಅನ್ನೋ ವಿಷಯ ಮತ್ತೊಮ್ಮೆ ನಮ್ಮೂರಲ್ಲೂ ಪ್ರೋವ್ ಆಗೋಯ್ತು. ೭-೩೦ ರ ಶೋ ಗೆ ೭-೦೦ ಘಂಟೆಗೆ ಹೋಗಿದ್ರು ಥಿಯೇಟರ್ ಒಳಗೆ ಬಿಟ್ಟಿದ್ದೆ ೭-೪೦ಕ್ಕೆ. ಅಷ್ಟರಲ್ಲೇ ನಮ್ಮ ಮಾಮಂದಿರು ತಮ್ಮ ಟಾಟಾ ಸುಮೋದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಅಲ್ಲಲ್ಲಿ ನಿಂತಿದ್ದವರಿಗೆ ಬೊ… ಮಗನೆ, ಬೊ… ಡಿಕೆ, ಇನ್ನು ಮುಂತಾದ ಅಷ್ಟೋತ್ತರಗಳನ್ನು ಒದರಿ ಹೋಗಿದ್ದರು. ಟಿಕೆಟ್ ಕೌಂಟರ್ ಅಲ್ಲಿ ಹತ್ತಿ ಇಳಿದು ಸಾಹಸ ಮಾಡೋ ಗೋಜು ಸಾಧ್ಯ ಇರ್ಲಿಲ್ಲ. ಸಾಲಿನಲ್ಲಿ ಯಾರದ್ರು ನಮ್ಮೋರು ಕಾಣಿಸ್ತರ ಅಂತ ನೋಡ್ತಿರ್ಬೇಕಾದ್ರೆನೆ ನಮ್ ಬಾಡಿಗೆ ಮನೆ ಹುಡುಗ ಗುಂಡ ಕಾಣಿಸಕೊಂಡ, ಲೇ ಚುಡೆಲ್ , ನನಗೊಂದು ಟಿಕೆಟ್ ತೊಗೊಳ್ಳ ಅಂತ ೫೦ ರು ನೋಟು ಕೊಟ್ಟು entrance ಬಳಿ ಕಾಯ್ತಾ ನಿಂತಿದ್ದೆ. ಹಂಗು ಹಿಂಗು ನುಕಾಡಿ, ತಲ್ಲಾಡಿ, ಗುದ್ದಾಡಿ, ಗುಂಡ ಟಿಕೆಟ್ ತಂದೆ ಬಿಟ್ಟಿದ್ದ, ತೊಗೋ ಗುರು ಅಂತ ಟಿಕೆಟ್ ಕೊಟ್ಟ ಅದ್ರ ಮೇಲೆ ೪೦ ರು ಅಂತ ಇತ್ತು. ಲೋ ಅಪ್ಪಿ ಇನ್ ಹತ್ತು ರುಪಾಯಿ ವಾಪಾಸ್ ಕೊಡೊ ಅಂದ್ರೆ, ಅನ್ನೋ ನಿನ್ ಹೆಸರಲ್ಲಿ ಇಂಟರ್ವಲ್ ಅಲ್ ಒಂದು ಚಿಪ್ಸ್ ಪ್ಯಾಕೆಟ್ ತಿನ್ಕೊತಿನಿ ಬಿಡಣ್ಣ ಅಂದ. ನನ್ ಮಗ ನಂಗೆ ಬ್ಲಾಕ್ ಟಿಕೆಟ್ ಮಾರಿಬಿಟ್ನಲ್ಲ ಅನ್ನೋ ಬೇಜಾರಲ್ಲೇ ಒಳಗೋಗಿ ಮುರಿದೋಗಿರೋ ಪ್ಲಾಸ್ಟಿಕ್ ಚೀರ್ ಗಳ ಮಧ್ಯೆ ಚೆನ್ನಾಗಿರೋದನ್ನ ಹುಡುಕಿ ಮೊಬೈಲ್ ನ ಸೈಲೆಂಟ್ ಮೋಡಲ್ಲಿ ಹಾಕಿ ಕೂತೆ.
title ಕಾರ್ಡ್ ಅಲ್ಲೇ ಸ್ವಲ್ಪ ವಿಭಿನ್ನವಾಗಿ ಶುರುವಾದ ಚಿತ್ರ, ಮೊದಲರ್ಧ ಪೂರ್ತಿ ಕಾಮಿಡಿ ಯಾ ಝಾಲಕ್ ಜೊತೆಗೆ ಅಕ್ಷ್ಯನ್ ಪ್ಯಾಕ್, ಇವೆರಡರ ಜೊತೆಗೆ ಒಂದು ಸ್ವೀಟ್ ಲವ್ ಸ್ಟೋರಿ. ಲವ್ ಸ್ಟೋರಿ ಸ್ವೀಟ್ ಅನ್ನುವುದಕ್ಕಿಂತಲೂ cute ಅನ್ನಬೋಹುದು, ನಿಜವಾಗಿಯೂ ಬಹಳ ಮುದ್ದಾಗಿದೆ. ಹೀರೋ ಇನ್ ಗೆ expose ಮಾಡಿಸಿಲ್ಲ, ಕುಟುಂಬದೊಂದಿಗೆ ಬಂದವರಿಗೆ ಅದು ನಿರಾಳವಾದರೆ ಪಡ್ಡೆಗಳಿಗೆ ಸ್ವಲ್ಪ ಬೇಜಾರು. ಶಂಕರ್ ನಾಗ್ ಅವರನ್ನು ಹಾಡಿನಲ್ಲಿ ಬಳಸಿಕೊಂಡಿರುವ ರೀತಿಗೆ ದಿನಕರ್ ಗೆ ನಿಜಕ್ಕೂ ಒಂದು ಸಲಾಂ. ಅವರು ಇಹಲೋಕ ತ್ಯಜಿಸಿ ೧೬ ವರ್ಷಗಳದ್ರು ಅವರು ತೆರೆಯ ಮೇಲೆ ಬಂದಾಗ ಪ್ರೇಕ್ಷಕರ ಅರುಚಾಟ, ಕಿರುಚಾಟ, ಶಿಲ್ಲೆಗಳನ್ನು ಕೇಳಿದಾಗ ಶಂಕರಣ್ಣ ಇದ್ದಿದ್ರೆ ಇನ್ ಹೆಗಿರ್ತಿದ್ರೋ ಅನ್ನೋ ಯೋಚನೆ ಮನದಲ್ಲಿ ಮೂಡಿತ್ತು. ಮತ್ತೆ ಆಗಾಗ ಡಿಶುಂ ಡಿಶುಂ, ಪೋಲಿಸ್ ಗೆ ಬುದ್ದಿ ಹೇಳಿ ಕೊಡೊ ದೃಶ್ಯ. ಮತ್ತು ರೈತರನ್ನು ಹೊಗಳೋ ದೃಶ್ಯ ಮುಂತಾದವೆಲ್ಲ ಬಂದಾಗ ಸುಪರ್ರೋ ಸೂಪರ್ರು. ಮತ್ತಷ್ಟು ಓದು 





