ಬೆಂಗಳೂರು ಕನ್ನಡಿಗರಿಗೊಂದು ಬಹಿರಂಗ ಪತ್ರ
-ಭರತ್ ಬಿಕೆ
ಬೆಂಗಳೂರಲ್ಲೀ ಇದೀರಾ ? ಬೆಂಗಳೂರಿಗೆ ಬಂದ್ರಾ ?? ಸಂತೋಷ 🙂 ಬೆಂಗಳೂರಲ್ಲೇ ಹುಟ್ಟೀ, ಬೆಂಗಳೂರಲ್ಲೇ ಬೆಳೆದ್ರಾ ?? ತುಂಬಾ ಸಂತೋಷ 🙂
ಬೆಂಗಳೂರಲ್ಲೇ ಬದುಕಬೇಕು ಅಂತಾ ಇದೀರಾ ?? ಇನ್ನೂ ಸಂತೋಷ:)
ಆದರೇ ಇಲ್ಲಿನ ಭಾಷೆ, ನೆಲ, ಜಲ, ವ್ಯವಸ್ಥೆ, ಅವಸ್ಥೆ,ಸಮಸ್ಯೆಗಳ ಬಗ್ಗೆ ಸ್ವಲ್ಪ ಯೋಚನೆ ಮಾಡಿದ್ದೀರಾ? ಅದಕ್ಕಾಗಿ, ಅದಕ್ಕೆ ಸಂಬಂಧಿಸಿದ ವಿಚಾರಗಳಲ್ಲೀ ಭಾಗವಹಿಸಿದ್ದೀರಾ ??
ಸಾರ್ವಜನಿಕವಾಗಿ ?? ವಯಕ್ತಿಕವಾಗಿ ??
ಅಷ್ಟೆಲ್ಲಾ ಯಾಕೇ ಬಿಡಿ.. ಫೇಸ್ ಬುಕ್ ಪ್ರೋಫೈಲಲ್ಲೀ ಪೋಸ್ಟ್ ಮಾಡಿದಿರಾ ? ಸಂಬಂಧಿಸಿದ ಪೋಸ್ಟ್ ಗಳಿಗೇ ಲೈಕ್ ಮಾಡಿಡ್ಡೀರಾ ?? ಕಮೇಂಟ್ ಕೊಟ್ಟಿದ್ದೀರಾ ??
ಪ್ರಶ್ನೆಯಾಗಿ ಕಾಡುತ್ತಿರುವ ಕರುತ್ತಮ್ಮ..
-ರಶ್ಮಿ ಕಾಸರಗೋಡು
ಹೌದು, ಈ ಕರುತ್ತಮ್ಮ ಕಾಡಿದಷ್ಟು ಇನ್ಯಾರೂ ನನ್ನನ್ನು ಕಾಡಿರಲಿಲ್ಲ. ಬಾಲ್ಯದಿಂದ ಹಿಡಿದು ಇಲ್ಲಿಯವರೆಗೆ ನಾನು ಇಷ್ಟಪಡುವ ಹೆಂಗಸರಲ್ಲಿ ಇವಳೂ ಒಬ್ಬಳು. ನಾನು ಹೀಗೆಹೇಳುತ್ತಿದ್ದರೆ ಆ ಕರುತ್ತಮ್ಮ ಯಾರು ಎಂಬ ಪ್ರಶ್ನೆ ನಿಮ್ಮನ್ನೂ ಕಾಡುತ್ತಿರಬಹುದು ಅಲ್ಲವೇ? ಅವಳು ಮತ್ಯಾರೂ ಅಲ್ಲ ಪ್ರಶಸ್ತಿ ವಿಜೇತ ಹಳೇ ಕಾಲದ ಮಲಯಾಳಂ ಚಿತ್ರ ಚೆಮ್ಮೀನ್್ನ ನಾಯಕಿ. ಚಿತ್ರದಲ್ಲಿ ಕರುತ್ತಮ್ಮನ ಪಾತ್ರ ನಿರ್ವಹಣೆ ಮಾಡಿದ್ದು ನಟಿಶೀಲ. ಮಲಯಾಳಂನಲ್ಲಿ ಚೆಮ್ಮೀನ್ ಅಂದ್ರೆ ಸಿಗಡಿ ಮೀನು. ತಗಳಿ ಶಿವಶಂಕರ ಪಿಳ್ಳೆ ಬರೆದ ಚೆಮ್ಮೀನ್ ಎಂಬ ಕಾದಂಬರಿ ಆಧರಿತ ಚಿತ್ರವಾದ ಚೆಮ್ಮೀನ್ 1965ರಲ್ಲಿ ತೆರೆಕಂಡರೂ ಅದರಯಶಸ್ಸು ಇಂದಿಗೂ ಚಿರನೂತನ. ಅವರ ಕಥೆ, ಹಾಡು, ನಟನೆ ಅಬ್ಬಾ…ಆ ಚಿತ್ರವನ್ನು ನೋಡಿಯೇ ಅನುಭವಿಸಬೇಕು.
ಚಿಕ್ಕವರಿರುವಾಗ ಶಾಲೆಯಲ್ಲಿ ಕ್ವಿಜ್್ಗೆ ಚೆಮ್ಮೀನ್ ಕಾದಂಬರಿ ಬರೆದವರು ಯಾರು? ಎಂಬ ಪ್ರಶ್ನೆ ಕಾಮನ್ ಆಗಿತ್ತು. ಮೊದಲಬಾರಿಗೆ ಚೆಮ್ಮೀನ್ ಕಾದಂಬರಿ ಬಗ್ಗೆ ಕುತೂಹಲ ಹುಟ್ಟಿಕೊಂಡದ್ದೇ ಹೀಗೆ. ಅಂತೂ ಕೊನೆಗೂ ಅದೊಂದು ದಿನ ಡಿಡಿ 1 ಚಾನೆಲ್್ನಲ್ಲಿ ಆದಿತ್ಯವಾರ ಪ್ರಾದೇಶಿಕ ಚಲನಚಿತ್ರ ವಿಭಾಗದಲ್ಲಿ ಚೆಮ್ಮೀನ್ ಚಿತ್ರ ಪ್ರಸಾರವಾಗಿತ್ತು.ನಮ್ಮ ಬ್ಲಾಕ್ ಆ್ಯಂಡ್ ವೈಟ್ ಟೀವಿಯಲ್ಲಿ ಚೆಮ್ಮೀನ್ ಚಿತ್ರ ಮೂಡಿಬರುತ್ತಿದ್ದಂತೆ ಟೀವಿಯಲ್ಲೇ ಗಮನ ಕೇಂದ್ರೀಕರಿಸಿ ಕುಳಿತಿದ್ದೆ. ಚಿತ್ರದುದ್ದಕ್ಕೂ ಕಡಲ ಕಿನಾರೆ…ಮೀನು…ಮೀನುಗಾರರ ಸಂಭಾಷಣೆ..ಅದ್ಭುತ ಸಂಗೀತ…ಒಂದಷ್ಟು ರೊಮ್ಯಾಂಟಿಕ್ ದೃಶ್ಯಗಳು…ನಾವು ಮಾತನಾಡುವ ಮಲಯಾಳಂಗೂ ಮೀನುಗಾರರು ಮಾತನಾಡುವ ಮಲಯಾಳಂಗೂವ್ಯತ್ಯಾಸವಿರುವುದರಿಂದ ಚಿತ್ರದಲ್ಲಿನ ಎಲ್ಲ ಸಂಭಾಷಣೆಗಳು ನನಗೆ ಅರ್ಥವಾಗುತ್ತಿರಲಿಲ್ಲ. ಚಿತ್ರ ನೋಡುತ್ತಿರುವಾಗ ಅವಳು ಆಗಿನ ಕಾಲದ ‘ಸೆಕ್ಸೀ ನಟಿ’ಎಂದು ಅಪ್ಪ ಹೇಳುತ್ತಿದ್ದರೆ, ಮಕ್ಕಳ ಮುಂದೆ ಹಾಗೆಲ್ಲಾ ಹೇಳ್ಬೇಡ್ರಿ ಎಂದು ಅಮ್ಮ ಗುರ್ ಅಂತಿದ್ರು 🙂
ಕಾವೇರಿ ನದಿನೀರು ಹಂಚಿಕೆಯಲ್ಲಿ ನಾಡಿಗಾದ ಅನ್ಯಾಯ – ಕಿರು ವರದಿ
– ಜಯಪ್ರಕಾಶ್ ಪಿ., ಕರುನಾಡ ದನಿ
ಕಾವೇರಿ ನದಿಯು ಕರ್ನಾಟಕದ ಕೊಡಗು ಜಿಲ್ಲೆಯಲ್ಲಿರುವ ಬ್ರಹ್ಮಗಿರಿ ತಪ್ಪಲಿನ ’ತಲಕಾವೇರಿ’ ಯಲ್ಲಿ ಹುಟ್ಟಿ ಕರ್ನಾಟಕದ ಬಹುತೇಕ ಭಾಗದಲ್ಲಿ ಹರಿದು ತಮಿಳುನಾಡು ಮತ್ತು ಕೇರಳದ ಕೆಲ ಭಾಗಗಳಲ್ಲಿ ಹರಿದು ಹೋಗುತ್ತದೆ. 1883 ರಲ್ಲಿ ಅಂದಿನ ಮೈಸೂರು ಪ್ರಾಂತ್ಯದ ದಿವಾನರು ಕಾವೇರಿ ನದಿನೀರನ್ನು ನೀರಾವರಿ ಯೋಜನೆಗೆ ಬಳಸಿಕೊಳ್ಳಲು ಮುಂದಾದಾಗ, ಅಂದಿನ ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಮದರಾಸು ಪ್ರಾಂತ್ಯ ಅದನ್ನು ಸಹಿಸದೆ, ಮದರಾಸಿಗೆ ಅನುಕೂಲವಾಗುವಂತ ಅನೇಕ ಕಟ್ಟಳೆಗಳನ್ನು ಮಾಡುವ ಮೂಲಕ ತಾರತಮ್ಯ ನೀತಿ ಆರಂಭಿಸಿತು. ಅಂದು ಆರಂಭವಾದ ಕಾವೇರಿ ನದಿನೀರಿನ ಸಮಸ್ಯೆ ಸುಮಾರು 120ವರ್ಷಗಳೇ ಕಳೆದಿದ್ದರೂ,ಸರಿಯಾದ ಒಂದು ನಿಷ್ಪಕ್ಷಪಾತ ಜಲನೀತಿ ಇಲ್ಲದ ಪರಿಣಾಮವಾಗಿ ಇಂದು ಬಗೆಹರಿಯದ ಕಗ್ಗಂಟಾಗಿ ಬೆಳೆದು ನಿಂತಿದೆ.ಲಕ್ಷ್ಮೀ ಪುತ್ರರಾಗುವುದು ಹೇಗೆ?
-ವೆಂಕಟೇಶ್ ಗುರುರಾಜ್
ಲಕ್ಷ್ಮೀ ಪುತ್ರರಾಗುವುದು ಹೇಗೆ? ಭಾಗ-೧
ವಿಶ್ವದ ಅತೀ ಶ್ರೀಮಂತರಲ್ಲಿ ಪ್ರಥಮ ಸ್ಥಾನದಲ್ಲಿರುವ ಮೆಕ್ಸಿಕೋದೇಶದ ಕಾರ್ಲೋಸ್, ದ್ವಿತೀಯ ಸ್ಥಾನದ ಅಮೇರಿಕಾದವರಾದ ಬಿಲ್ ಗೇಟ್ಸ್, ಮೂರನೇ ಸ್ಥಾನದ ಅಮೇರಿಕಾದವರೇಆದ ವಾರೆನ್ ಬಫೆಟ್ ಮುಂತಾದ ವಿಶ್ವದ ಅತೀ ಶ್ರೀಮಂತ ೧೦ ವ್ಯಕ್ತಿಗಳು ಹೇಗೆ ಲಕ್ಷ್ಮೀ ಪುತ್ರರಾದರುಎನ್ನುವ ಬಗ್ಗೆ ಒಂದು ಸೊಗಸಾದ ಕಾರ್ಯಕ್ರಮವನ್ನು ಟಿ.ವಿ.೯ ಇತ್ತೀಚೆಗೆ ಪ್ರಸಾರಮಾಡಿತ್ತು. ಚರ್ಚೆಯಲ್ಲಿಭಾಗವಹಿಸಿದ್ದ ವಿಶ್ವದ ಶ್ರೀಮಂತರಲ್ಲಿ ೧೦೫೧ನೇ ಸ್ಥಾನದ ಮತ್ತು ಕರ್ನಾಟಕದ ೬ನೇ ಶ್ರೀಮಂತರಾದ ರಾಜೇಶ್ಎಕ್ಸ್ ಪೋರ್ಟ್ ಸಿ.ಇ.ಒ.ರಾಜೀವ್ ಮೆಹ್ತಾ, ಐ.ಐ.ಎಂ.ನಿರ್ದೇಶಕರಾದ ಮುರಳೀಧರ್ ಮತ್ತು ಹಣಕಾಸು ಹೂಡಿಕೆತಜ್ಞರಾದ ರುದ್ರಮೂರ್ತಿಯವರು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಶ್ರೀಮಂತರಾಗುವುದು ಹೇಗೆ? ಎಂಬ ಮೂಲಭೂತ ವಿಷಯವನ್ನು ಬಹಳ ಚೆನ್ನಾಗಿ ತಿಳಿಯಪಡಿಸಿದರು.
ಪರ್ದಾ ಹಿಂದಿನ ಕತ್ತಲ ಕಥೆ – ‘ಗದ್ದಾಮ’
– ಡಾ ಅಶೋಕ್ ಕೆ ಆರ್
ಕೇರಳದಲ್ಲಿ, ಮಂಗಳೂರಿನಲ್ಲಿ, ಮೈಸೂರಿನ ಬನ್ನಿಮಂಟಪದಲ್ಲಿ ದೊಡ್ಡ ದೊಡ್ಡ ಮನೆಗಳನ್ನು ಕಟ್ಟಿಕೊಂಡಿರುವ ಮುಸ್ಲಿಮರನ್ನು, ಕೆಲವು ಹಿಂದೂಗಳನ್ನು ನೋಡಿದಾಗ ನಮ್ಮ ಮನದಲ್ಲಿ ಮೂಡುವ ಮೊದಲ ಅಭಿಪ್ರಾಯ “ದುಬೈಗ್ ಹೋಗಿ ಚೆನ್ನಾಗಿ ದುಡ್ಕೊಂಡ್ ಬಂದಿದಾನ್ ನೋಡು” ಎಂಬುದೇ ಆಗಿರುತ್ತದೆ. ಸ್ವಲ್ಪಮಟ್ಟಿಗದು ಸತ್ಯವೂ ಹೌದು. ಹೆಚ್ಚು ಹಣ ದುಡಿದ ದೊಡ್ಡ ಮನೆಗಳಿಂದಾಚೆಗೆ ಇರುವ ‘ದುಬೈ ರಿಟರ್ನ್ಡ್’ ಬಡಜನರ ಬವಣೆ ನಮ್ಮ ಕಣ್ಣಿಗೆ ಬೀಳುವುದೇ ಇಲ್ಲ. ಐಷಾರಾಮಕ್ಕಲ್ಲದೆ ಜೀವನೋಪಾಯಕ್ಕಾಗಿ ಮನೆಯ ಆರ್ಥಿಕ ಸಂಕಷ್ಟಗಳ ನಿವಾರಣೆಗಾಗಿ ಸೌದಿ ಅರೇಬಿಯಾದಂಥಹ ದೇಶಗಳಿಗೆ ವಲಸೆ ಹೋಗುವ ಜನರ ಪಡಿಪಾಟಲುಗಳನ್ನು ವಿವರಿಸುವ ಚಿತ್ರವೇ ಮಲಯಾಳಂನ ‘ಗದ್ದಾಮ’ ಅರ್ಥಾತ್ ಮನೆಗೆಲಸದವಳು. ಮನೆಗೆಲಸಕ್ಕೆ ಹೋದ ಹೆಣ್ಣುಮಕ್ಕಳ ನೋವು, ಗಾರೆ ಕೆಲಸ, ಡ್ರೈವರ್ ಕೆಲಸಕ್ಕೆ ಹೋದ ಗಂಡಸರ ಆಕ್ರಂದನವನ್ನು ಎಳೆಎಳೆಯಾಗಿ ಬಿಚ್ಚಿಡುತ್ತದೆ ‘ಗದ್ದಾಮ’. ಇವರ ಸಂಕಷ್ಟಗಳ ಜೊತೆಗೆ ಮುಸ್ಲಿಮರ ಪವಿತ್ರ ಸ್ಥಳಗಳಿರುವ ನಾಡಿನ ಅಪವಿತ್ರ ಮನಸ್ಸುಗಳ ಅನಾವರಣವೂ ಆಗುತ್ತದೆ. ಪ್ರವಾದಿ ಹುಟ್ಟಿದ ಓಡಾಡಿದ ನಾಡಿನ ಸೈತಾನರ ಪರಿಚಯ ಮಾಡಿಕೊಡುತ್ತದೆ.ಟಿ ವಿ ಎಂಬ ಸುಂದರಿ ..
– ಅನಿತ ನರೇಶ್ ಮಂಚಿ
ವಾಶಿಂಗ್ ಪೌಡರ್ ನಿರ್ಮ, ವಾಶಿಂಗ್ ಪೌಡರ್ ನಿರ್ಮ..’ ಇದು ಗೆಳತಿಯ ಬಾಯಲ್ಲಿ ಕೇಳಿ ಬರುತ್ತಿದ್ದ ಹೊಸ ಹಾಡು. ‘ಯಾರೇ ಹೇಳ್ಕೊಟ್ಟಿದ್ದು’ ಕೊಂಚ ಅಸೂಯೆ ಇತ್ತು ನನ್ನ ಧ್ವನಿಯಲ್ಲಿ. ‘ಹೇಳ್ಕೊಡೋದ್ಯಾಕೆ..? ನಾನೇ ಕೇಳಿ ಕಲ್ತಿದ್ದು, ಟಿ ವಿ ನೋಡಿ… ಗೊತ್ತಾ ನಿಂಗೆ , ನಮ್ಮಲ್ಲಿ ಹೊಸ ಟಿ ವಿ ತಂದಿದ್ದಾರೆ.., ಇದರ ಡ್ಯಾನ್ಸ್ ಕೂಡ ಇದೆ ನಿಲ್ಲು ತೋರಿಸ್ತೀನಿ,ಮೊದ್ಲು ಬಟ್ಟೆ ಮಣ್ಣಾಗಿರುತ್ತೆ, ಹೀಗೆ ಮಾಡಿದ ಮೇಲೆ ಬಟ್ಟೆ ಹೊಸದಾಗಿ ಹೊಳೆಯುತ್ತೆ’ ಎಂದು ತನ್ನ ಫ್ರಾಕಿನ ಎರಡೂ ತುದಿಗಳನ್ನು ಬೆರಳುಗಳಲ್ಲಿ ಅಗಲಿಸಿ ಹಿಡಿದು ಉರುಟುರುಟಾಗಿ ಸುತ್ತಿದಳು ರಸ್ತೆಯಲ್ಲಿಯೇ.. !!
ಸಾಮಾಜಿಕ ಕಳಕಳಿಯೆಂದರೆ…..
-ಡಾ.ಅಶೋಕ್ ಕೆ.ಆರ್
ಸುಂದರ್ ರಾಜ್ ನೆನಪಿಸಿಕೊಂಡಂತೆ ಅಂಬರೀಷ್ !
– ಶ್ರೀಧರ್ ಜಿ ಸಿ ಬನವಾಸಿ
ಅಂಬರೀಷ್ ಜೊತೆಗಿನ ನನ್ನ ಸ್ನೇಹವನ್ನು ಈ ಮೂಲಕ ವರ್ಣಿಸೋದು ತುಂಬಾ ಕಷ್ಟ. ಅಂಬರೀಷ್ ಜೊತೆಗಿನ ನನ್ನ ಒಡನಾಟ, ಸ್ನೇಹ, ಓಡಾಟ, ಕೆಲಸಮಾಡಿದ್ದು ನನಗೆ ಬೆಟ್ಟದಷ್ಟು ಅಪಾರ ನೆನಪುಗಳು ನನ್ನ ಮನಸ್ಸಿನಲ್ಲಿವೆ. ಆತ ಹೀಗೆ ಅಂತ ಹೇಳೋದು ತುಂಬಾ ಕಷ್ಟ, ಆತನ ತರಹ ನೀವಾಗಬೇಕು ಅಂತಾನೂ ಹೇಳೋದು ತುಂಬಾ ಕಷ್ಟ. ಅಂಬರೀಷನಿಗೆ ಅಂಬರೀಷನೇ ಸಾಟಿ. ಅಂಬರೀಷ್ ಯಾಕೆ ಇಷ್ಟವಾಗ್ತಾರೆ ಅಂತ ಅವರನ್ನ ಇಷ್ಟಪಡೋ ಎಲ್ಲರನ್ನು ಕೇಳಿ ಒಬ್ಬೋಬ್ಬರು ಆತನನ್ನು ಒಂದೊಂದು ರೀತಿಯಲ್ಲಿ ವರ್ಣಿಸುತ್ತಾರೆ. ಹಾಗಾಗಿ ಅಂಬರೀಷ್ ಇಷ್ಟವಾಗಲು ಬಹಳಷ್ಟು ಕಾರಣಗಳಿವೆ. ಕನ್ನಡಚಿತ್ರರಂಗವೇಕೇ, ರಾಜಕೀಯ, ಬೇರೆ ಚಿತ್ರರಂಗ, ರಾಜ್ಯ ರಾಜಕೀಯ, ದೆಹಲಿ ರಾಜಕೀಯದ ವ್ಯಕ್ತಿಗಳು ಕೂಡ ಆತನನ್ನು ಇಷ್ಟಪಡುತ್ತಾರೆ. ಆತನ ವ್ಯಕ್ತಿತ್ವೇ ಅಂತಹದ್ದು. ಅಜಾತಶತ್ರು, ಹುಂಬತನ, ಎದೆಗಾರಿಕೆ, ಬೇರೆಯವರಿಗೆ ಮರುಗುವ ಮನಸ್ಸು ಆತನ ಗುಣಗಾನ ಮಾಡುವುದು ನಿಜವಾಗಿಯೂ ಕಷ್ಟ ಸಾಧ್ಯ. ಇಂತಹ ಅಂಬರೀಷ್ ನನ್ನ ಆತ್ಮೀಯ ಸ್ನೇಹಿತ ಅನ್ನುವುದೇ ನನ್ನ ಹೆಮ್ಮೆಗೆ ಕಾರಣ.
ಅಂಬಿ ‘ನಾನೊಬ್ಬ ಅದ್ಭುತ ನಟ’ ಅಂತ ಎಲ್ಲೂ, ಯಾರ ಹತ್ತಿರವೂ ಹೇಳಿಕೊಂಡವರಲ್ಲ. ಆದರೆ, ವ್ಯಕ್ತಿಯಾಗಿ, ಸಮಾಜದ ಶಕ್ತಿಯಾಗಿ, ಉತ್ತಮ ಮನುಷ್ಯನಾಗಿ ಅಂಬಿಗೆ ಅಂಬಿಯೇ ಸಾಟಿ. ಇಂಥ ವೈವಿಧ್ಯತೆಯ ಮನುಷ್ಯನನ್ನು ಎಲ್ಲಿ ಹುಡುಕಿದರೂ ಸಿಕ್ಕುವುದಿಲ್ಲ. ಆ ದಿನಗಳಲ್ಲಿ ನನಗೆ ಅಂಬಿ ಕಂಡರೆ ಸಣ್ಣ ಒಳ್ಳೆಯ ಹೊಟ್ಟೆಕಿಚ್ಚಂತೂ ಇತ್ತು, ಏನಪ್ಪಾ ಈ ಮನುಷ್ಯ ಪುಟ್ಟಣ್ಣನಂತಹ ನಿರ್ದೇಶಕರ ಮನಸ್ಸನ ಹೇಗಂಪಾ ಗೆದ್ದು ಬಿಟ್ಟಿದ್ದಾನೆ. ನಾವೇನೋ ಬಾಲಚಂದರ್ ಸಿನಿಮಾಗಳಲ್ಲಿ ಗುರುತಿಸಿಕೊಂಡುಬಿಟ್ಟಿದ್ವಿ. ಆದರೆ ಪುಟ್ಟಣ್ಣರ ಸಿನಿಮಾಗಳಲ್ಲಿ ನಮಗೆ ಅವಕಾಶ ಸಿಕ್ಕಿರಲಿಲ್ಲ. ಈತನ್ನ ನೋಡಿದ್ರೆ ಪುಟ್ಟಣ್ಣನವರ ಹೆಚ್ಚಿನ ಸಿನಿಮಾಗಳಲ್ಲಿ ಚಾನ್ಸ್ ತಗೋತಾ ಇದಾನೆ. ಪುಟ್ಟಣ್ಣ ಕಣಗಾಲ್ ಗುರುಕೃಪೆಗೆ ಹೆಚ್ಚು ಒಳಗಾದ ನಟ ಅಂಬರೀಶ್ನನ್ನು ಕಂಡಾಗ ಈ ರೀತಿಯ ಅವ್ಯಕ್ತ ಅಸೂಹೆಯ ಪ್ರೀತಿ ಆತನ ಮೇಲಿತ್ತು. ಆದರೆ ಅಂಬರೀಷ್ ತನ್ನ ನಿಷ್ಕಲ್ಮಶ ಪ್ರೀತಿಯಿಂದ ನನ್ನನ್ನು ಗೆದ್ದುಬಿಟ್ಟಿದ್ದ.
ಡಬ್ಬಿಂಗ್ ಅವಶ್ಯಕವೇ?

ಡಬ್ಬಿಂಗ್ ಎಂಬ ರುಚಿಗೆಟ್ಟ ದಿಢೀರ್ ಅಡುಗೆ ಏಕೆ?
– ರೂಪ ರಾವ್
ಇತ್ತೀಚಿಗೆ ಡಬ್ಬಿಂಗ್ ಬೇಕು ಬೇಡ ಅನ್ನುವ ಹುಯಿಲು ಮತ್ತೆ ಕಾಣ್ತಿದೆ. ರಾಕೇಶ್ ಶೆಟ್ಟಿಯವರ ಲೇಖನ ಓದಿದ ಮೇಲೆ ಇದರ ಬಗ್ಗೆ ನನ್ನದೊಂದಿಷ್ಟು ಅನಿಸಿಕೆ.
ಸ್ವಾಮಿ ಡಬ್ಬಿಂಗ್ ಬೇಡ ಅನ್ನೋದು ಹಳೆಯ ರಾಗವಿರಬಹುದು. ಆದರೆ ಕಾರಣ ಮಾತ್ರ ನಿಚ್ಚಳ… ಅದು ಕನ್ನಡದ ಕಲಾವಿದರಿಗೆ ಆಗೋ ಅನ್ಯಾಯ ಅಷ್ಟೆ. ಅದು ಯಾವತ್ತಿಗೂ ಸಲ್ಲುವ ಕಾರಣ. ಚಿತ್ರರಂಗವನ್ನೇ ನಂಬಿಕೊಂಡು ನಿಂತ ಅಸಂಖ್ಯಾತ ಕಲಾವಿದರಿಗೆ. ನಾಯಕ ,ನಾಯಕಿ ಪಾತ್ರದಿಂದ ಹಿಡಿದು ಪೋಷಕ ಪಾತ್ರಧಾರಿಗಳು, ಛಾಯಾಗ್ರಾಹಕರು, ನಿರ್ದೇಶಕರು,ನೂರಾರು ಜನ ನೇರವಾಗಿ ಇಲ್ಲವೇ ಪರೋಕ್ಷವಾಗಿ ಒಂದು ಚಿತ್ರದ ಮೇಲೆ ಅವಲಂಬಿತರಾಗಿರುತ್ತಾರೆ.. ಅಷ್ಟೂ ಜನರ ಹೊಟ್ಟೆಯ ಮೇಲೆ ಹೊಡೆಯುವ ಹುನ್ನಾರವಿದು.
ರಿಮೇಕ್ ಚಿತ್ರಗಳ ಆರ್ಭಟಕ್ಕೆ ನಿರ್ದೇಶಕರ ಸೃಜನಾತ್ಮಕತೆ ಈಗಾಗಲೇ ಕಡಿಮೆಯಾಗಿದೆ.ಒಂದು ವೇಳೆ ಡಬ್ಬಿಂಗ್ ನಿಷೇಧ ತೆರವು ಗೊಳಿಸಿದರೆ,ಕನ್ನಡದಲ್ಲಿ ನಿರ್ದೇಶಕ, ಕತೆಗಾರ, ಸತ್ತಂತೆ…..! ಉಪೇಂದ್ರ, ಸೂರಿ, ಶಶಾಂಕ್, ಚಂದ್ರು,ಯೋಗರಾಜ್ ಭಟ್ ರವರಂತೆ ಆಗಬೇಕೆನ್ನುವ ಯುವ ನಿರ್ದೇಶಕರ ಗತಿ ?
ಮತ್ತೆ ಯಾವುದೋ ಪ್ರಾದೇಶಿಕತೆಗೆ ಹೊಂದುವ ಅಲ್ಲಿನ ವಾತಾವರಣಕ್ಕೆ ನಿರ್ಮಿಸಲಾಗಿರುವ ಚಿತ್ರವೊಂದನ್ನ ಹಾಗೆಯೇ ಡಬ್ಬಿಂಗ್ ಮಾಡಿದಲ್ಲಿ ಅದನ್ನು ಕೂತು ನೋಡುವ ಕರ್ಮ ನಮ್ಮದಾಗುತ್ತದೆ.ಪಾತ್ರದ ತುಟಿಯ ಚಲನೆ ಒಂದಾದರೆ. ಹಿನ್ನಲೆ ದ್ವನಿಯ ಮಾತು ಒಂದಾಗಿರುತ್ತದೆ. ಅದಕ್ಕೂ ಇದಕ್ಕೂ ಜೋಡಿಸಿ ನೋಡುವ ದರ್ದು ನಮಗೆ ಬೇಕಾ?
ಮತ್ತಷ್ಟು ಓದು 





