ವಿಷಯದ ವಿವರಗಳಿಗೆ ದಾಟಿರಿ

Posts from the ‘ಮನೋರಂಜನೆ’ Category

27
ಏಪ್ರಿಲ್

’ಸತ್ಯ ಮೇವ ಜಯತೇ’ ಅನ್ನಲು ಕನ್ನಡಿಗರು ಅಪ್ಪಣೆ ಪಡೆಯಬೇಕಾ?

– ರಾಕೇಶ್ ಶೆಟ್ಟಿ

ಕಳೆದ ವರ್ಷ ‘ಕನ್ನಡ ಚಲನ ಚಿತ್ರ ಅಕಾಡೆಮಿ’ಯು ಬಿಡುಗಡೆ ಮಾಡಿದ್ದ ವರದಿ ಡಬ್ಬಿಂಗ್ ಪರವಾಗಿತ್ತು.ಆ ವರದಿ ಬಿಡುಗಡೆಯಾದ ತಕ್ಷಣ ಚಿತ್ರರಂಗದ ಬಹುತೇಕ ಮಂದಿ ನಾಗಾಭರಣರ ಮೇಲೆ ಮುಗಿಬಿದ್ದರು.ಕಡೆಗೆ ಅವ್ರು ವರದಿಯನ್ನ ಹಿಂಪಡೆದರು.ಇಲ್ಲಿ ನಷ್ಟ ಆಗಿದ್ದು ಯಾರಿಗೆ? ಕನ್ನಡ ಚಿತ್ರ ರಂಗಕ್ಕಾ? ಅಲ್ಲ … ಕನ್ನಡ ಪ್ರೇಕ್ಷಕನಿಗೆ.

ಇಷ್ಟಕ್ಕೂ, ಡಬ್ಬಿಂಗ್ ಬೇಕೋ ಬೇಡವೋ ಅಂತ ನಿರ್ಧರಿಸಬೇಕಾದವನು “ಕನ್ನಡ ಪ್ರೇಕ್ಷಕನೋ?” ಇಲ್ಲ “ಕನ್ನಡ ಚಿತ್ರ ರಂಗವೋ?”

ಡಬ್ಬಿಂಗ್ ಯಾಕೆ ಬೇಡ ಅಂದ್ರೆ, ಅದರಿಂದ ಕನ್ನಡದ ಮಕ್ಕಳಿಗೆ ಕೆಲಸವಿರೋದಿಲ್ಲ ಅಂತ ಹಳೆ ಕತೆ ಹೇಳ್ತಾ ಇದ್ದಾರೆ.ಈಗ ಬರ್ತಾ ಇರೋ ಅದಿನ್ನೆಷ್ಟು ಚಿತ್ರಗಳಲ್ಲಿ ಕನ್ನಡದ ಕಲಾವಿದರು,ತಂತ್ರಜ್ಞರು,ನಟಿಯರು,ಪೋಷಕ ನಟರು,ಖಳನಟರು,ಸಂಗೀತ ನಿರ್ದೇಶಕರು,ಗಾಯಕ-ಗಾಯಕಿಯರಿಗೆ ಕೆಲ್ಸ ಇದೆ?,ಎಲ್ಲದಕ್ಕೂ ಬೇರೆ ಭಾಷೆಯವರೇ ಬೇಕು.ಆಗ ಮಾತ್ರ ಯಾರು ಕನ್ನಡ ಮಕ್ಕಳಿಗೆ ಅನ್ಯಾಯವಾಗ್ತಾ ಇದೆ ಅಂತ ಉಸಿರೆತ್ತುವುದಿಲ್ಲ. ಭಾಷೆಯ ಉಚ್ಚಾರಣೆ ಬರದೆ ಇದ್ರೂ ನಮಗೆ ಬಾಲಿವುಡ್ ಗಾಯಕರು ಬಂದು ಉಸಿರು ಕಟ್ಟಿ ಹಾಡ್ಬೇಕು,ಬಾಯಿ ಅಲ್ಲಾಡಿಸಲು ಬರದ ಖಳ ನಟರು ಅಲ್ಲಿಂದಲೇ ಬರಬೇಕು.ಒಟ್ಟಿನಲ್ಲಿ ಬೇರೆ ಕಡೆಯಿಂದ ಜನ ಆಮದಾದಷ್ಟು ಚಿತ್ರ ಅದ್ದೂರಿ ಅನ್ನೋ ಭ್ರಮೆ! ಈಗಲೂ ಕನ್ನಡದ ಮಕ್ಕಳಿಗೆ ಆಗುತ್ತಿರುವುದು ಅನ್ಯಾಯವೇ ಅಲ್ಲವೆ?

ಇಷ್ಟಕ್ಕೂ ಡಬ್ಬಿಂಗ್ಗೆ ಅವಕಾಶ ಕೊಟ್ರೆ ಎಲ್ರೂ ಅದೇ ಮಾಡ್ತಾರೆ ಅನ್ನೋ ಅತಂಕವಿದ್ದರೆ,ಅದಕ್ಕಾಗಿ ಕೆಲ ನೀತಿ ನಿಯಮಗಳನ್ನ ಮಾಡಿಕೊಳ್ಳಬಹುದು. ಡಬ್ಬಿಂಗ್ ಮಾಡುವ ಹಕ್ಕನ್ನ ಮುಕ್ತವಾಗಿಡದೆ ‘ವಾಣಿಜ್ಯ ಮಂಡಳಿ’ ಯೇ ಆಯ್ದ ಚಿತ್ರಗಳನ್ನ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡಬಹುದು.ಹಾಗೆ ಡಬ್ಬಿಂಗ್ ಮಾಡಿದ ಸಿನೆಮಾಗಳಲ್ಲಿ ನಮ್ಮ ನೇಟಿವಿಟಿ ಇಲ್ಲ ಅಂದ್ರೆ ಅವು ಗೆಲ್ಲೋದು ಅಷ್ಟರಲ್ಲೇ ಇದೆ,ಅದರಿಂದ ಯಾವ ಅಪಾಯವು ಇಲ್ಲ. ವಿಷಯ ಹೀಗಿರುವಾಗ ಇನ್ನು ಆಗಿನ ಕಾಲದ ಕತೆಯನ್ನೇ ಹೇಳಿ ಕನ್ನಡ ಪ್ರೇಕ್ಷಕರಿಗೆ ಒಳ್ಳೊಳ್ಳೆ ಚಿತ್ರವನ್ನ ನಮ್ಮ ಭಾಷೆಯಲ್ಲಿ ನೋಡದಂತೆ ಚಿತ್ರ ರಂಗದ ಕೆಲವರು ಯಾಕೆ ಮಾಡುತಿದ್ದಾರೆ!?, ಹಾಗೆ ಡಬ್ಬಿಂಗ್ನಿಂದ ಮುಳುಗಿ ಹೋಗುವಷ್ಟು ‘ಕನ್ನಡ ಚಿತ್ರ ರಂಗ’ ದುರ್ಬಲವಾಗಿಲ್ಲ.೭೫ ವರ್ಷದ ಇತಿಹಾಸವಿರುವ ಚಿತ್ರ ರಂಗದ ಮಾರುಕಟ್ಟೆ ವ್ಯಾಪ್ತಿ ಚಿಕ್ಕದು ಅಂತ ಇನ್ನ ಎಷ್ಟು ದಿನ ಹೆದರ್ತಿರ ಸ್ವಾಮೀ?

ಮತ್ತಷ್ಟು ಓದು »

31
ಮಾರ್ಚ್

ಶಿಕಾರಿ ಮಿಸ್ ಆಯ್ತು..!

– ಶ್ರೀಧರ್ ಜಿ.ಸಿ ಬನವಾಸಿ

ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ಸಂಪೂರ್ಣನಾಯಕನಾಗಿ ಅಭಿನಯಿಸಿದ ಮಲಯಾಳಂ ಸೂಪರ್ ಸ್ಟಾರ್ ಮುಮ್ಮುಟ್ಟಿ ಅಭಿನಯದ `ಶಿಕಾರಿ’ ಬಿಡುಗಡೆಯ ಭಾಗ್ಯವನ್ನು ಕಂಡಿದೆ. ಪ್ರಶಸ್ತಿ ಪುರಸ್ಕೃತ
`ಗುಬ್ಬಚ್ಚಿಗಳು’ಸಿನಿಮಾ ಖ್ಯಾತಿಯ ಅಭಯಸಿಂಹ ನಿರ್ದೇಶಕರು. ಚಿತ್ರ ನೋಡಿಬಂದ ಮೇಲೆ ನನಗೆ ಚಿತ್ರದ ಬಗ್ಗೆ ನನಗನಿಸಿದ ಅಂಶಗಳು:
ಇಡೀ ಚಿತ್ರಕ್ಕೆ ಮುಮ್ಮಟ್ಟಿ ಬೇಕಿತ್ತೋ, ಅಥವಾ ಇಲ್ಲವೋ ಅಂತ ನಾವು ತರ್ಕ ಹಾಕಿ ನೋಡಿದಾಗ ಮುಮ್ಟಟ್ಟಿ ಬದಲು ನಮ್ಮ ಕನ್ನಡದಲ್ಲಿಯ ಯಾವುದಾದರೂ ಹೀರೋಗಳನ್ನು ಬಳಸಿಕೊಳ್ಳಬಹುದಿತ್ತು ಎಂಬುದನ್ನು  ಒಂದೇ ಮಾತಿನಲ್ಲಿ ಹೇಳಬಹುದು. ಇಲ್ಲವೇ ಕನ್ನಡದಲ್ಲಿರುವ ದೇವರಾಜ್ ರಂತಹ ಜನಪ್ರಿಯ ಗಡಸು ದನಿಯ ಕಲಾವಿದರು ಮುಮ್ಮುಟ್ಟಿ ಪಾತ್ರಕ್ಕೆ ದನಿ ನೀಡಬಹುದಿತ್ತು. ಚಿತ್ರದಲ್ಲಿ ಅದು ಆಗಲಿಲ್ಲ. ಅದಕ್ಕೆ ಕಾರಣ ಕೂಡ ಸ್ಟಷ್ಟವಾಗಿದೆ, ಮುಮ್ಮಟ್ಟಿ ಕನ್ನಡದಲ್ಲಿ ಮಾತನಾಡಲು ರಿಸ್ಕು ತೆಗೆದುಕೊಂಡಿದ್ದು, ಕೊನೆಪಕ್ಷ ಮಾತನಾಡಿಸಿದ್ದರೂ, ಡಬ್ಬಿಂಗ್ನಲ್ಲಿ ನಿರ್ದೇಶಕರು ಸ್ವಲ್ಪ ಹುಷಾರಾಗಿರಬೇಕಿತ್ತು.ಮುಮ್ಮಟ್ಟಿ ಕನ್ನಡ ಮಾತನಾಡುತ್ತಿದ್ದಾರೋ, ಮಲಯಾಳಂ ಮಾತನಾಡುತ್ತಿದ್ದಾರೋ ಎಂಬುದು ಅರ್ಥವಾಗುವುದೇ ಇಲ್ಲ. ಏಷ್ಟೋ ಸೀನ್ಗಳಲ್ಲಿ ಅವರು ಶಬ್ಗಗಳನ್ನು ನುಂಗಿ ಮಾತನಾಡುತ್ತಾರೆ. ಅವರು ಏನು ಹೇಳಿದರು ಅನ್ನುವುದೇ ಅರ್ಥವಾಗುವುದೇ ಇಲ್ಲ.  ಮುಮ್ಮಟ್ಟಿ ಮಾತನಾಡಿದ ಕನ್ನಡ,ನಮ್ಮ ಕನ್ನಡದವರಿಗೆ ಅರ್ಥವಾಗುವುದು ತುಂಬಾ ಕಷ್ಟ.  ಅದೇನಿದ್ದರೂ ಮಲಯಾಳಂ ಶೈಲಿಯಲ್ಲಿ ಕನ್ನಡ ಮಾತನಾಡುವ ಮಲ್ಲುಗಳಿಗೆ ಮಾತ್ರ ಅರ್ಥವಾದೀತು. ಹೆಚ್ಚಿನವರಿಗೆ ಇದು ಇಷ್ಟವಾಗಲೂಬಹುದು.
27
ಮಾರ್ಚ್

ಕನ್ನಡಮ್ಮನ ಹೆಮ್ಮೆಯ ಪುತ್ರನೂ ಅಣ್ಣಾವರ ಮಗನೂ

– ಜಿ.ವಿ ಜಯಶ್ರೀ

ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಚಂದ್ರ ಮೇಲೆ ಬಂದ
ಮಿನುಗು ತಾರೆ ಅಂದ ನೋಡು ಎಂಥ ಚಂದ
ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ,

ಇದು ಎಂಬತ್ತರ ದಶಕದ ಹಾಡು. ತುಂಬಾ ಇಷ್ಟ ಪಟ್ಟು ಈಗಲೋ ಕೇಳುವಂತಹ ಸುಂದರ ಗೀತೆ.ಈ ಚಿತ್ರದಲ್ಲಿ ನಟಿಸಿದ ಪುನೀತ್ ರಾಜ್ ಕುಮಾರ್ ನಟನೆಯಷ್ಟೇ ಮನಸೆಳೆದ ಸಂಗತಿ ಅಂದ್ರೆ ಅವರು ಹಾಡಿದ ಈ ಹಾಡು .
ಮೊದಲಿನಿಂದ ವೀಕ್ಷಕ ದೇವರ ಮನ ಸೆಳೆದ ಕಲಾವಿದ ಪುನೀತ್. ಅವರ ಅಣ್ಣಂದಿರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಖುದ್ದು ಪುನೀತ್ ವಿಷಯದಲ್ಲಿ ತೋರುವ ಅಭಿಮಾನ ಅಪಾರ.

ಈತನ ಬಗ್ಗೆ ತಮಗೆ ತುಂಬಾ ಹೆಮ್ಮೆ ಇದೆ. ಅಪ್ಪಾಜಿಯ ನಂತರ ಬಣ್ಣ ಹಚ್ಚಿದ (ಪೂರ್ಣಿಮಾ ಸಹ ಹಚ್ಚಿದ್ದಾರೆ ) ಪುನೀತ್ ತಮಗೆ ಮಾದರಿ ಎನ್ನುವ ಮಾತು ಹೇಳಿರುವುದು ಅವರು ತಮ್ಮನ ಮೇಲೆ ಇಟ್ಟಿರುವ ಪ್ರೀತಿಯನ್ನು ಎತ್ತಿ ತೋರುತ್ತದೆ.

ಶಿವಣ್ಣ ಜೀ ಕನ್ನಡ ವಾಹಿನಿಯಲ್ಲಿ ಕಾರ್ಯಕ್ರಮ ನಡೆಸಿ ಕೊಟ್ಟಾಗ ಅಪಾರ ಸಂಖ್ಯೆಯ ವೀಕ್ಷಾಕಾಭಿಮಾನ ಹೊಂದಿದ್ದರು.ಆ ಕಾರ್ಯಕ್ರಮದ ಮೂಲಕ  ಹೆಚ್ಚು ಗೊತ್ತಾದರೂ ಶಿವಣ್ಣ. ಕಾರಣ ಇಷ್ಟೇ ಸಿನಿಮಾದಲ್ಲಿ ಗಿಣಿಗೆ ಕಲಿಸಿದ ಪಾಠದಂತೆ   ಡೈಲಾಗ್ ಹೇಳುವ ಶಿವಣ್ಣನಿಗಿಂತ  ತನ್ನ ಹೃದಯದಿಂದ ಮಾತನಾಡಿದ ಶಿವಣ್ಣ ಇಷ್ಟ ಆಗಿತ್ತು.. ಮಾತಲ್ಲಿ ಯಾವುದೇ ರೀತಿಯ ನಾಟಕೀಯತೆ, ಕಲಿತ ಮಾತು ಇರದೇ ಸಾಮಾನ್ಯ ಮನೆಕನ್ನಡ ಮಾತಾಡಿ , ತಮ್ಮ ಸರಳತೆ, ವಿಶೇಷ ವ್ಯಕ್ತಿತ್ವ್ದದಿಂದ ಗೆದ್ದಿದ್ದರು.

ಮತ್ತಷ್ಟು ಓದು »

23
ಮಾರ್ಚ್

ಕಹಾನಿ, ವಿದ್ಯಾಬಾಲನ್ ಮತ್ತೆ ಮಿಂಚಿಂಗ್

ಫಿಲ್ಮಿ ಪವನ್

ಈ ನಡುವೆ ಎಲ್ಲಾ ಕಡೆಯೂ ವಿದ್ಯಾಬಾಲನ್ ದೇ ದುನಿಯಾ, ಡರ್ಟಿ ಪಿಕ್ಚರ್ ಬಂದಮೇಲೇನೆ ವಿದ್ಯಾ ಬಾಲನ್ ಗೆ ಈ ಪಾಟಿ ಡಿಮ್ಯಾಂಡ್ ಬಂದಿದ್ದು. ಇತ್ತೀಚೆಗೆ ರಾಷ್ಟ್ರ ಪ್ರಶಸ್ತಿ ಸಹ ಬಾಚಿಕೊಂಡಿದ್ದರು ವಿದ್ಯಾ, ಅವರಿಗೆ ನಿಲುಮೆ ತಂಡದಿಂದ ಶುಭಾಶಯಗಳು. ಶನಿವಾರ ಭಾನುವಾರ ಐ.ಟಿ ಹುಡುಗರಿಗೆ ಹಬ್ಬ ಇದ್ದ ಹಾಗೆ, ಗುರುವಾರವೇ ಎಲ್ಲ ಪ್ಲಾನ್ ಆಗಿ ಬಿಡುತ್ತೆ ಶುಕ್ರವಾರ ಮತ್ತು ಶನಿವಾರದ ಪ್ರೋಗ್ರಾಮ್. ಹಾಗೇ ಪ್ಲಾನ್ ಮಾಡಿ ಶನಿವಾರ ಕಹಾನಿ ಚಿತ್ರ ನೋಡಲು ಹೋಗಿದ್ದೆವು, ಮೊದಲ ಬಾರಿ ನನ್ನ ಸಹೋದ್ಯೋಗಿಗಳೊಂದಿಗೆ ಸಿನಿಮಾ ಪಯಣ.

ಕೊಲ್ಕತ್ತಾದಂತಹ ಮಹಾನಗರದಲ್ಲಿ ತೆಗೆದುಕೊಳ್ಳುವ ಸಿನಿಮಾ ಕೊಲ್ಕತ್ತಾದ ದೈನಂದಿನ ಬದುಕನ್ನು ತೆರೆದುಕೊಳ್ಳುತ್ತಾ ನಾಯಕಿಯ ಎಂಟ್ರಿ ಕೊಡಿಸುತ್ತೆ. ನಾಯಕಿ ಕೊಲ್ಕತ್ತಾ ಬಂದೊಡನೆ ಪೋಲೀಸ್ ಠಾಣೆಗೆ ತೆರಳಿ ತನ್ನ ಗಂಡ ನಾಪತ್ತೆಯಾದ ಬಗ್ಗೆ ದೂರು ನೀಡುತ್ತಾಳೆ. ಆಗ ಪ್ರೇಕ್ಷಕನಿಗೂ ಸಹ ಟ್ಯಾಕ್ಸಿ ಚಾಲಕನಿಗೆ ಬಂದ ಅನುಮಾನವೆ ಬರುತ್ತೆ, ಯಾಕೆ ನೇರ ಪೋಲೀಸ್ ಠಾಣೆ ಅಂತ. ನಾಯಕಿ ತುಂಬು ಗರ್ಭಿಣಿ, ಲಂಡನ್ ಅಲ್ಲಿದ್ದ ಪತಿ ಕೊಲ್ಕತ್ತಾಗೆಂದು ಹೊರಟು ಬಂದವರು ಮತ್ತೆ ಕರೆ ಮಾಡಿಲ್ಲ, ಸಂದೇಶ ಕಳುಹಿಸಿಲ್ಲ, ಕಾಣೆಯಾಗಿದ್ದಾರೆ ಎಂದು ನೀಡುವ ದೂರನ್ನು ಪೋಲೀಸರು ಯುವ ಆಫೀಸರ್ ರಾಣಾಗೆ ವಹಿಸುತ್ತಾರೆ. ರಾಣಾ ಮತ್ತು ಪೋಲೀಸ್ ಅಲ್ಲದಿದ್ದರು ಪೋಲೀಸರಂತೆ ತನಿಖೆಯ ಎಲ್ಲ ಕಡೆಗಳಲ್ಲು ತನ್ನನ್ನು ತಾನು ತೊಡಗಿಸಿಕೊಳ್ಳುವ ವಿದ್ಯಾಬಾಲನ್ ಜೊತೆಯಾಗಿ ನಡೆಸುವ ಸಸ್ಪನ್ಸ್ ಥ್ರಿಲ್ಲರ್ ಕಹಾನಿ.

ವಿದ್ಯಾ ಬಾಲನ್ ಗೆ ಸಿನಿಮಾದಲ್ಲಿ ಸಹ ವಿದ್ಯಾ ಎಂಬ ಹೆಸರು, ತಮ್ಮ ಪತಿ ಕಳೆದು ಹೋದ ಎಂದು ದೂರು ನೀಡಿದ ದಿನದಿಂದ ಸಂಪೂರ್ಣ ತನಿಖೆ ಮುಗಿಯುವವರೆಗೂ ಪೋಲೋಸರೊಂದಿಗೇ ಇರುತ್ತಾರೆ. ವಿದ್ಯಾ ವೃತ್ತಿಯಲ್ಲಿ ನೆಟ್ವರ್ಕ್ ಸೆಕ್ಯೂರಿಟಿ ಇಂಜಿನಿಯರ್, ಈ ತನಿಖೆ ನಡೆಯುವಾಗ ಅವರ ಕಂಪ್ಯೂಟರ್ ತಲೆ ಬಹಳವಾಗಿ ಉಪಯೋಗವಾಗುತ್ತದೆ, ಅದೇ ಭರದಲ್ಲಿ ನಿರ್ದೇಶಕರು ಪೋಲೀಸರಿಗೆ ಕಂಪ್ಯೂಟರ್ ಬಗೆಗಿನ ಅಲ್ಪ ತಿಳುವಳಿಕೆಯನ್ನೂ ಸಹ ತೋರಿಸಿದ್ದಾರೆ. ಬರೀ ಫೋನಿನಲ್ಲಿ ಮಾತನಾಡಿದ್ದನ್ನೆ ಅರ್ಥ ಮಾಡಿಕೊಂಡು ನನ್ನ ಗಂಡ ಇದೇ ಲಾಡ್ಜಿನಲ್ಲಿ ಇರುತಿದ್ದರು, ಇದೇ ಅಂಗಡಿಯಲ್ಲಿ ಟೀ ಕುಡಿಯುತಿದ್ದರು ಎಂದೆಲ್ಲ ಗೆಸ್ ಮಾಡುವ ವಿದ್ಯಾ ಬುದ್ದಿವಂತಿಕೆ ನಂಬಲು ಸಾಧ್ಯವಾಗದಿದ್ದರು ಸಿನಿಮಾ ಆದ್ದರಿಂದ ನಂಬಿ ಬಿಡಬೇಕಾಗುತ್ತದೆ. ಮತ್ತಷ್ಟು ಓದು »

16
ಮಾರ್ಚ್

ಗುಡ್ಡದ ಭೂತ: ಪ್ರಯೋಗಶೀಲತೆಯೋ? ಅನಿವಾರ್ಯತೆಯೋ?

-ಕಾಲಂ ೯

ಜನಶ್ರೀ ಸುದ್ದಿವಾಹಿನಿ 90ರ ದಶಕದ ದೂರದರ್ಶನದ ಜನಪ್ರಿಯ ಧಾರಾವಾಹಿಯ ಮರುಪ್ರಸಾರ ಆರಂಭಿಸಿದೆ. ತಾಂತ್ರಿಕತೆ, ಅಭಿನಯ, ನಿರೂಪಣೆಯ ದೃಷ್ತಿಯಿಂದ ಅಸಾಧಾರಣವೆನಿಸಿದ ಧಾರಾವಾಹಿಗೆ ಮತ್ತೆ ಮನ್ನಣೆ ಸಿಕ್ಕಿದ್ದು ಸ್ವಾಗತಾರ್ಹವೇ. ಈಗ ೪೦ರ ಗಡಿಯಲ್ಲಿರುವ ಧಾರಾವಾಹಿ ನಿರ್ದೇಶಕ ಸದಾನಂದ ಸುವರ್ಣರಿಗೆ ಮತ್ತವರ ತಂಡಕ್ಕೆ ಈ ಮನ್ನಣೆ ಖುಷಿ ತಂದಿರಬೇಕು.

ಆದರೆ ಸುದ್ದಿ ವಾಹಿನಿಯೊಂದು ಧಾರಾವಾಹಿಯ ಪ್ರಸಾರಾಕ್ಕೆ ಅದೂ ಮರು ಪ್ರಸಾರಕ್ಕೆ ಹೊರಟಿರುವುದು ಪ್ರಯೋಗಶೀಲತೆಯೇ ಅಥವಾ ಅದರಾಚೆಯ ಅನಿವಾರ್ಯತೆಗಳೂ ಕೆಲಸ ಮಾಡುತ್ತಿದೆಯೇ?

‘ಸುದ್ದಿ’ಯ ಸೋಂಕಿಲ್ಲದ ಜ್ಯೋತಿಷ್ಯ, ಸೆಕ್ಸು, ಕ್ರೈಮು, ಸಿನೆಮಾ, ಕ್ರಿಕೆಟ್ಟು, ಹಾಸ್ಯಗಳ ‘ಶೋ’ಗೆ ಹತ್ತಿರ ಹತ್ತಿರ ಶೇ 50ರಷ್ಟು ಸಮಯ ವಿನಿಯೋಗಿಸುವ ಸುದ್ದಿ ವಾಹಿನಿಗಳೇ  ನಮಗಿಂದು ಕಾಣುತ್ತಿವೆ. ಟಿವಿ9 ಹಾಕಿಕೊಟ್ಟ ಮಾದರಿಯಿಂದ ಹೊರ ಬರಲಾಗದ  ಎಲ್ಲ ವಾಹಿನಿಗಳು ಅದೇ ಚರ್ವಿತಗಳಲ್ಲೇ ಸುತ್ತುತ್ತಿವೆ.

ಕರ್ನಾಟಕದಂತಹ ಸೀಮಿತ ಪರಿಧಿಯಲ್ಲಿ ದಿನವಿಡೀ ವಿದ್ಯಮಾನಗಳು ಘಟಿಸುತ್ತಲೇ ಇರಬೇಕೆಂಬುದು ಅಸಾಧ್ಯದ ಮಾತು. ಈ ಕೊರತೆ ದೇಶ ವ್ಯಾಪ್ತಿಯ ರಾಷ್ಟ್ರೀಯ ಚಾನೆಲ್‍ಗಳನ್ನೂ ಕಾಡುತ್ತಿರುತ್ತದೆ. ಹೀಗಿರುವಾಗ ನಮ್ಮ ಸುದ್ದಿವಾಹಿನಿಗಳಿಗೆ ದಿನವಿಡೀ ಉಣಬಡಿಸಲು ಸುದ್ದಿ ಖಾದ್ಯಗಳಾದರೂ ಏನು ಉಳಿದಿರುತ್ತದೆ? ಈ ಅನಿವಾರ್ಯತೆಯ ಹೊಸ ಫಸಲೆಂಬಂತೆ ಗುಡ್ಡದ ಭೂತ ಮತ್ತೆ ಅವತರಿಸಿದೆ.

ಧಾರಾವಾಹಿ ರಂಗದ ಸಾಮ್ರಾಟರೆಂದೇ ಖ್ಯಾತರಾಗಿರುವ ಟಿಎನ್ ಸೀತಾರಾಂ ಬಿಜೆಪಿ ಸರ್ಕಾರದ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸುತ್ತಾ, ‘ಈ ಬಿಜೆಪಿ ಸರ್ಕಾರ ಬಂದ ಮೇಲೆ ನಮ್ಮ ಸೀರಿಯಲ್ ನೋಡೋರೇ ಇಲ್ಲದಂತಾಗಿದೆ. ಜನ ನ್ಯೂಸನ್ನೇ ಸೀರಿಯಲ್ ಅಂತ ಅಂದುಕೊಂಡಿದ್ದಾರೆ.’ ಅಂತ ಹೇಳಿಕೊಂಡಿದ್ದರು. ಮತ್ತಷ್ಟು ಓದು »

24
ಫೆಬ್ರ

ಚಿಂಗಾರಿ

– ಫಿಲ್ಮಿ ಪವನ್

ಫೋರಂ ಮಾಲ್ ಅಲ್ಲಿ ಮಾಸ್ ಸಿನಿಮಾ ನೋಡೋದಂದ್ರೆ ಮಜಾನೆ ಇರಲ್ಲ ಬಿಡಿ, ಸುತ್ತ ಮುತ್ತ ಆಂಟಿಗಳು, ಅಂಕಲ್ಗಳು, ಲವರ್ಸ್ಗಳು. ಅದ್ರಲ್ಲು ದರ್ಶನ್ ಸಿನಿಮಾ ಅಂದ್ರೆ ಇನ್ನು ಉರ್ದೋಗುತ್ತೆ, ಪಂಚಿಂಗ್ ಡೈಲಾಗು ಬಂದ್ರೆ ಒಂದು ಶಿಲ್ಲೆ ಹೊಡ್ಯೋದು ಇಲ್ಲ ಯಾರುವೆ 😦 ಆದ್ರೆ ಏನ್ ಮಾಡೋದು ಈ ಹುಡುಗೀರು ಬಿಡ್ಲಿಲ್ಲ. ಫೋರಂ ಪಿ.ವಿ.ಅರ್. ಅಂತ ಚಿಂಗಾರಿ ಗೆ ಕರ್ಕೊಂಡೋಗಿದ್ರು ಮೊದ್ಲೇ ಬಾಸ್ ಸಿನಿಮ, ಎಲ್ಲಾದ್ರು ಮಾಸ್ ಆಗಿರೋ ಚಿತ್ರಂದಿರದಲ್ಲಿ ಕೂತು ಮಾಸ್ ಆಗಿ ಅರ್ಧ ಕಿಲೋ ಚಿಪ್ಸ್ ಮತ್ತೆ ೨ ಲೀಟರ್ ಪೆಪ್ಸಿ ೧ ಪ್ಯಾಕ್ ಕಿಂಗ್ ಇಟ್ಕೊಂಡು ಸಿನಿಮಾ ನೋಡೊಣ ಒಳ್ಳೊಳ್ಳೆ ಪಂಚಿಂಗ್ ಡೈಲಾಗ್ ಹೊಡೆದಾಗ ಶಿಲ್ಲೆ ಹೊಡ್ಯಾಣ ಮಾಸ್ ಸಾಂಗ್ ಗೆ ಪರದೆ ಬಳಿ ಹೋಗಿ ಸ್ಟೆಪ್ ಹಾಕೋಣ ಅನ್ನೋ ಆಸೆಗೆಲ್ಲಾ ತಣ್ಣೀರು ಬಿದ್ದಿತ್ತು.ಇನ್ನೊಂದು ವಿಷಯ ಅಂದ್ರೆ ಟಿಕೆಟ್ ಬೆಲೆ ಬೇರೆ ಜಾಸ್ತಿ ಕಣ್ರಿ 😦

ಈ ಸಿನಿಮಾದ ಒಪೆನಿಂಗೇ ವಿಶೇಷವಿತ್ತು, ಯಾಕಂದ್ರೆ ಯಾವುದೇ ಸಿನಿಮಾದ ಟೈಟಲ್ ಕಾರ್ಡಲ್ಲಿ ತಾಂತ್ರಿಕ ವರ್ಗದವರ ಹೆಸರು ಮಾತ್ರ ಹಾಕ್ತಿದ್ರು. ಆದ್ರೆ ಈ ಸಿನಿಮಾದಲ್ಲಿ ಅವರ ಫೋಟೊ ಸಹ ನೋಡಿ ಖುಶಿ ಆಯ್ತು.ಪ್ರತಿಯೊಬ್ಬ ತಾಂತ್ರಿಕ ವರ್ಗದವರ ಭಾವಚಿತ್ರ ಅವರ ಹೆಸರಿನೊಂದಿಗೆ ಬಂದಾಗ ಖುಶಿ ಆಯ್ತು. ತಾಂತ್ರಿಕ ವರ್ಗದವರಿಗೆ ಅಷ್ಟು ಪ್ರಾಮುಖ್ಯತೆ ಕೊಟ್ಟಿರುವ ನಿರ್ದೇಶಕ ಹರ್ಷ ಅವರಿಗೆ ಕುಡೋಸ್. ಮತ್ತಷ್ಟು ಓದು »

24
ಫೆಬ್ರ

ಚಿತ್ರ ವಿಮರ್ಶೆ – ಪಿ ಎಸ್ ಐ ಲವ್ ಯು

-ಸಂದೀಪ್ ಎನ್

“I just want to see you

When youre all alone

I just want to catch you if I can

I just want to be there

When the morning light explodes

On your face it radiates

I cant escape

I love you till the end…”  ಎಂಬ ಹಿನ್ನೆಲೆ ಗಾಯನದೊಂದಿಗೆ, ಇಬ್ಬರು ಯುವ ಜೋಡಿಗಳಾದ  Holly ಮತ್ತು Gerryಯ ನಡುವಿನ ಸರಸ/ವಿರಸದ  ಸಂಬಾಷಣೆಯೊಂದಿಗೆ ಚಿತ್ರವನ್ನು Richard Lagravenese ನಿರ್ದೇಶಿಸಿದ್ದಾರೆ. ಚಿತ್ರವೂ 2004 ನೇ ಇಸವಿಯಲ್ಲಿ Ceclia Ahern  ಎಂಬ Irish ಕವಿ ಬರೆದ  ಕಾದಂಬರಿ ಆಧಾರಿತವಾಗಿದೆ.

ಮತ್ತಷ್ಟು ಓದು »

22
ಫೆಬ್ರ

ಪತ್ರಕರ್ತರ ಕೊರಳಿಗೆ ಗಂಟೆ ಕಟ್ಟುವರು ಯಾರು?

– ಪೂರ್ಣಚಂದ್ರ

ಬಡವರಿಗೆ ಬಣ್ಣದ ಟಿವಿ ಎಂದು ತಮಿಳುನಾಡಿನ ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ಘೋಷಿಸಿದಾಗ, ಪತ್ರಕರ್ತರು ಇದೊಂದು ಜನಪ್ರಿಯ ಘೋಷಣೆ ಎಂದು ಗೇಲಿ ಮಾಡಿದರು. ಸರಕಾರಗಳು ಘೋಷಿಸುವ ಜನಪ್ರಿಯ ಕಾರ್ಯಕ್ರಮಗಳನ್ನು ಗೇಲಿ ಮಾಡುವುದು, ವಿಶ್ಲೇಷಿಸುವುದು ಅವರ ಕರ್ತವ್ಯ ಅವರು ಮಾಡಿದರು. ಆದರೆ, ಅಂತಹ ಜನಪ್ರಿಯ ಘೋಷಣೆಯ ಫಲಾನುಭವಿಗಳೇ ತಾವೇ ಆಗಿಬಿಟ್ಟರೆ !
ಕರ್ನಾಟಕದ ಬಿಜೆಪಿ ಸರಕಾರ ರಾಜ್ಯದ ಎಲ್ಲ ಪತ್ರಕರ್ತರಿಗೆ ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಂಪೂರ್ಣ ಉಚಿತವಾಗಿ ಪ್ರಯಾಣ ಮಾಡಬಹುದು ಎಂಬ ಆದೇಶವನ್ನು ಸದ್ಯದಲ್ಲಿಯೇ ಹೊರಡಿಸಲಿದೆಯಂತೆ. ಇದು ಕೂಡ ಜನಪ್ರಿಯ ಘೋಷಣೆಯೇ. ಆದರೆ, ಅದೇಕೋ ಹೆಚ್ಚು ಪತ್ರಕರ್ತರು ಈ ಬಗ್ಗೆ ಮಾತನಾಡುತ್ತಿಲ್ಲ.
ಈ ಬಗ್ಗೆ ಪೂರ್ಣಚಂದ್ರ ಬರೆದಿದ್ದಾರೆ.

ಬೀದರ್‌ನಿಂದ ಹಿಡಿದು ಚಾಮರಾಜನಗರ ಜಿಲ್ಲೆಯವರೆಗೆ ರಾಜ್ಯದ ಎಲ್ಲ ಜಿಲ್ಲೆ, ತಾಲೂಕುಗಳಲ್ಲಿರುವ ಮಾನ್ಯತೆ ಪಡೆದ ಪತ್ರಕರ್ತರು ಈಗ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಸಂಪೂರ್ಣ ಉಚಿತವಾಗಿ ಎಲ್ಲಿ ಬೇಕಾದರಲ್ಲಿ ಓಡಾಡಬಹುದು !

ನಾನಾ ಆರೋಪಗಳನ್ನು ಹೊತ್ತು ಮನೆಗೆ ಹೋಗಿರುವ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಬೆಂಗಳೂರು ಪತ್ರಕರ್ತರಿಗಷ್ಟೇ ದಯಪಾಲಿಸಿದ್ದ ಈ ಕೊಡುಗೆಯನ್ನು, ನಗುಮೊಗದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು, ರಾಜ್ಯದ ಎಲ್ಲ ಪತ್ರಕರ್ತರಿಗೂ ವಿಸ್ತರಿಸಲಿದ್ದಾರೆ ಎಂಬ ವರ್ತಮಾನ ಬಂದಿದೆ.
ಅದೂ, ರಾಜಹಂಸ, ವೋಲ್ವೋ ಸಹಿತ ಎಲ್ಲ ಬಸ್‌ಗಳಲ್ಲೂ ! ಮತ್ತಷ್ಟು ಓದು »

17
ಫೆಬ್ರ

ಕನ್ನಡಿಗರಿಗೆ ಮೋಸ ಮಾಡಿದ ಸಿಸಿಎಲ್ ಆಡಳಿತ ಮಂಡಳಿ !?

-ನಿತಿನ್ ರೈ ಕುಕ್ಕುವಳ್ಳಿ

ಇಂಡಿಯನ್ ಪ್ರಿಮಿಯರ್ ಲೀಗ್ ಪಂದ್ಯಾವಳಿಗೆ ಸರಿಸಾಟಿಯಾಗೆ ಜನಪ್ರಿಯತೆ ಪಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ ಕೊನೆಯ ಹಂತದಲ್ಲಿ ವಿವಾದದ ಗೂಡಾಗಿ ಪರಿವರ್ತನೆಗೊಂಡು ವಿವಾದದಲ್ಲೇ ಅಂತ್ಯಗೊಂಡಿತು.

ಫೈನಲ್ ತನಕ ಅತ್ಯಂತ ಶುದ್ಧವಾಗಿ ನಡೆದುಕೊಂಡು ಬಂದ ಸಿಸಿಎಲ್ ಪಂದ್ಯಾವಳಿ ಫೈನಲ್ ನಲ್ಲಿ ಮಾತ್ರ ಆಡಳಿತ ಮಂಡಳಿ ನಡೆದುಕೊಂಡ ರೀತಿ ಕನ್ನಡಿಗರನ್ನ ಸೋಲಿಸಲು ಪೂರ್ವ ತಯಾರಿ ಮಾಡಿದಂತಿತ್ತು. ಪಂದ್ಯ ಪ್ರಾರಂಭಗೊಳ್ಳುವುದಕ್ಕಿಂತ ಮುಂಚೆನೇ ಇದಕ್ಕೆಲ್ಲ ಸಿದ್ದತೆಗಳನ್ನ ಆಡಳಿತ ಮಂಡಳಿ ಮಾಡಿದಂತಿತ್ತು. ಪಂದ್ಯ ಸರಿಯಾದ ಸಮಯಕ್ಕಿಂತ ಸುಮಾರು ಎರಡು ತಾಸುಗಳಷ್ಟು ತಡವಾಗಿ ಪ್ರಾರಂಭಗೊಂಡದ್ದು, ಸುದೀಪ್ ಮತ್ತು ತಂಡ ಸರಿಯಾದ ಹೊತ್ತಿಗೆ ಬಂದು ಮೈದಾನದಲ್ಲಿ ಚೆನ್ನೈ ರೈನೋಸ್ ತಂಡದ ಆಟಗಾರರಿಗೆ ಕಾದು ಕುಳಿತು ಸುಸ್ತಾಗಿದ್ದರು. ಚೆನ್ನೈ ತಂಡ ಮೈದಾನ ಪ್ರವೇಶ ಮಾಡಿದ್ದು ಎರಡು ಗಂಟೆ ತಡವಾಗಿ ಇದರ ಬಗ್ಗೆ ಆಡಳಿತ ಮಂಡಳಿ ಕಿಂಚೀತು ಚಕಾರ ಎತ್ತಲಿಲ್ಲ ಯಾಕೆ ?, ಪಂದ್ಯ ಆರಂಭದ ನಂತರ ತಮಿಳು ನಟರ ತಂಡ ಪ್ರತಿ ಹಂತದಲ್ಲೂ ಕರ್ನಾಟಕದ ನಟರ ವಿರುದ್ದ ಜಿದ್ದಾಜಿದ್ದಿಗೆ ಬಿದ್ದಿತ್ತು. ಗುಂಪು ಸೇರಿ ಅಂಪೈರ್ ಗಳ ಮೇಲೆ ಒತ್ತಡ ತರುತ್ತಿದ್ದರು. ಸಕ್ರಮವಲ್ಲದ ರನೌಟ್ ತೀರ್ಪನ್ನು ಅಂಪೈರ್ ಗಳಿಂದ ಹೊರಡಿಸಿದ ನಂತರ, ಡೆಡ್ ಬಾಲ್ ಅನ್ನೋ ತೀರ್ಪಿಗೂ ಅವರು ಅವಕಾಶ ನೀಡಲಿಲ್ಲ. ಮತ್ತಷ್ಟು ಓದು »

17
ಫೆಬ್ರ

ಮೀಡಿಯಾದಲ್ಲಿ ಮೌಢ್ಯ

-ದಿನೇಶ್ ಕುಮಾರ್ ಎಸ್.ಸಿ.

ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮೂಢನಂಬಿಕೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮೂಢನಂಬಿಕೆ ಎಂಬ ವಿಷಯದ ಕುರಿತು ವಿಚಾರಸಂಕಿರಣದಲ್ಲಿ ಭಾಗವಹಿಸುತ್ತಿದ್ದೇನೆ ಎಂದಾಗ ನನ್ನ ಕವಿಮಿತ್ರರೊಬ್ಬರು ಹೇಳಿದ್ದು, ವಿದ್ಯುನ್ಮಾನ ಮಾಧ್ಯಮ ಎಂಬುದೇ ಈ ಯುಗದ ಅತಿ ದೊಡ್ಡ ಮೂಢನಂಬಿಕೆ ಎಂದು. ಹಲವರಿಗೆ ಒಪ್ಪಿಕೊಳ್ಳುವುದಕ್ಕೆ ತುಸು ಕಷ್ಟವಾದರೂ ಮೀಡಿಯಾ ಅನ್ನೋದೇ ಒಂದು ದೊಡ್ಡ ಮೌಢ್ಯವಾಗಿರುವುದು ಸತ್ಯದ ಮಾತು. ಈ ಮ…ಾತನ್ನು ಸಮರ್ಥಿಸುವುದಕ್ಕೆ ಸಾಕಷ್ಟು ಆಧಾರಗಳಿವೆ. ಆದರೆ ಮೀಡಿಯಾದಲ್ಲಿ ಮೌಢ್ಯ ಎಂಬ ವಿಷಯ ಇವತ್ತಿನ ಚರ್ಚೆಯ ವಿಷಯವಾಗಿರುವುದರಿಂದ ಮೀಡಿಯಾ ಎಂಬ ಮೌಢ್ಯ ಎಂಬ ವಿಶಾಲ ವ್ಯಾಪ್ತಿಯ ವಿಷಯವನ್ನು ಸದ್ಯಕ್ಕೆ ಕೈಬಿಡುತ್ತಿದ್ದೇನೆ. ಎಲೆಕ್ಟ್ರಾನಿಕ್ ಮಾಧ್ಯಮವೆಂಬುದು ಆಧುನಿಕ ವಿಜ್ಞಾನ ತಂತ್ರಜ್ಞಾನದ ವಿಶಿಷ್ಠ ಕೊಡುಗೆ. ಆದರೆ ಅದು ಮೌಢ್ಯವನ್ನು ಬಿತ್ತರಿಸಲು ಬಳಕೆಯಾಗುತ್ತಿದೆ ಎಂಬುದೇ ಒಂದು ವ್ಯಂಗ್ಯ.

ಅಗ್ಗದ ಜನಪ್ರಿಯತೆಗಾಗಿ ಅವುಗಳಿಗೆ ಅಂಧಶ್ರದ್ಧೆಗಳು ಬೇಕು, ಸೆಕ್ಸ್ ಮತ್ತು ಕ್ರೈಂಗಳು ಬೇಕು. ಮೂವರು ಸಚಿವರು ಬ್ಲೂ ಫಿಲ್ಮ್ ನೋಡಿದ್ದನ್ನು ಈ ಚಾನಲ್‌ಗಳು ಬಹಿರಂಗಪಡಿಸಿ ಅವರ ಸಚಿವ ಸ್ಥಾನ ಕಳೆದವು. ಆದರೆ ಅದೇ ಸಮಯದಲ್ಲಿ ಕರ್ನಾಟಕದ ಜನತೆಗೆ ಬ್ಲೂ ಫಿಲ್ಮ್ ತೋರಿಸಿದವು, ಮಸುಕು ಕೂಡ ಮಾಡದೆ. ಎಲೆಕ್ಟ್ರಾನಿಕ್ ಮಾಧ್ಯಮ ಉತ್ತರದಾಯಿತ್ವವನ್ನು ಕಳೆದುಕೊಂಡಿದೆ. ಉತ್ತರದಾಯಿತ್ವ ಇಲ್ಲದ ಮಾಧ್ಯಮ ಯಾವತ್ತಿಗೂ ವಿನಾಶಕಾರಿಯಾಗಿರುತ್ತದೆ ಮಾತ್ರವಲ್ಲ, ಸಮಾಜದ್ರೋಹದ ಕೆಲಸವನ್ನು ಎಗ್ಗಿಲ್ಲದೆ ಮಾಡುತ್ತಿರುತ್ತದೆ. ನಮ್ಮ ಚಾನಲ್‌ಗಳು ಈಗ ಆ ಕೆಲಸವನ್ನು ಮಾಡುತ್ತಿವೆ. ಈ ತರಹದ ಗೋಷ್ಠಿಗಳಿಗೆ ಸಾಧಾರಣವಾಗಿ ಎಲೆಕ್ಟ್ರಾನಿಕ್ ಮೀಡಿಯಾದ ಪ್ರತಿನಿಧಿಗಳು ಬರುವುದು ಕಡಿಮೆ. ಬಂದರೂ ಇಲ್ಲಿನ ಚರ್ಚೆಯ ವಿಷಯಗಳು ಆ ಚಾನಲ್‌ಗಳಲ್ಲಿ ಪ್ರಸಾರವಾಗುವುದಿಲ್ಲ. ಹೀಗಾಗಿ ಇಲ್ಲಿ ಮಾತನಾಡುವ ವಿಷಯಗಳು ಯಾರನ್ನು ತಲುಪಬೇಕೋ ಅವರನ್ನು ತಲುಪುವುದೇ ಇಲ್ಲ. ಅದಕ್ಕೆ ಕಾರಣಗಳೂ ಇವೆ. ಎಲೆಕ್ಟ್ರಾನಿಕ್ ಮೀಡಿಯಾಗಳಿಗೆ ತಾವು ಮೌಢ್ಯವನ್ನು ಹರಡುತ್ತಿದ್ದೇವೆ ಎಂಬ ವಿಷಯ ಚೆನ್ನಾಗಿಯೇ ಗೊತ್ತು. ಪ್ರಜ್ಞಾಪೂರ್ವಕವಾಗಿಯೇ ಈ ಕೆಲಸವನ್ನು ಅವು ಮಾಡುತ್ತಿವೆ. ಹೀಗಾಗಿ ಯಾವ ಸಲಹೆ-ಸೂಚನೆ-ನಿರ್ದೇಶನಗಳೂ ಅವುಗಳಿಗೆ ಬೇಕಾಗಿಲ್ಲ. ನಿದ್ದೆ ಮಾಡುತ್ತಿರುವವರನ್ನು ಎಚ್ಚರಿಸಬಹುದು, ನಿದ್ದೆಯ ನಾಟಕವಾಡುತ್ತಿರುವವರನ್ನು ಅಲ್ಲ. ಮತ್ತಷ್ಟು ಓದು »