ವೇಳಿ ನಾಚಿಯರ್
– ರಂಜನ್ ಕೇಶವ
ಅದು ೧೭೭೩ ರ ಸಮಯ. ಕಪಟ ದೊರೆ ಆರ್ಕೋಟ್ ನವಾಬ ಬ್ರಿಟಿಷರೊಂದಿಗೆ ಕೈ ಜೋಡಿಸಿ ಶಿವಗಂಗೆಯ ರಾಜ ಬಡಗನಾಥ ಪೆರಿಯ ಒಡೆಯದೇವರ್ ದೇವಸ್ಥಾನದ ಪ್ರವಾಸದಲ್ಲಿ ನಿಶ್ಯಸ್ತ್ರನಾಗಿದ್ದಾಗ ಧಾಳಿ ಮಾಡಿ ಹತ್ಯೆಗೈದು ಶಿವಗಂಗೆಯನ್ನು ವಶಪಡಿಸಿಕೊಂಡಿದ್ದ. ಇದಾಗಿ ೮ ವರ್ಷಗಳು ಕಳೆದಾಗಿತ್ತು. ಆಗ ಒಡೆಯ ದೇವರ್ ರ ಪತ್ನಿ ವೇಳಿ ನಾಚಿಯರ್ ತಮ್ ಮಂತ್ರಿ ತಾಂಡವ ಪಿಳೈಯ ಸಹಾಯದ ಮೇರೆಗೆ ದಿಂಡಿಗಲ್ ಸಮೀಪದ ವಿರೂಪಾಚಿಪಾಳಯಮ್ ಗೆ ತಪ್ಪಿಸಿಕೊಂಡು ಹೋಗಿರುತ್ತಾರೆ. ಅಲ್ಲಿನ ಪಾಳೇಗಾರ ಗೋಪಾಲನಾಯಕನ ರಕ್ಷಣೆಯಲ್ಲಿ ಕಾಲಕಳೆಯುತ್ತಾ ಕಳೆದುಹೋದ ಶಿವಗಂಗೆಯನ್ನು ಮರಳಿ ಪಡೆಯಲು ಸಕಲ ಸಿದ್ಧತೆಯನ್ನು ನಾಚಿಯರ್ ನಡೆಸುತ್ತಿದ್ದರು. ಇದಕ್ಕಾಗಿ ನೆರೆಹೊರೆಯವರೆಲ್ಲರ ಸಹಾಯವನ್ನು ಜೊತೆಗೂಡಿಸುತ್ತಿದ್ದರು . ಮತ್ತಷ್ಟು ಓದು 
ಒಬ್ಬಳೇ ಒಬ್ಬಳು ಓಬವ್ವ…
– ಗಿರಿಪ್ರಸಾದ್
ಅರಮನೆಯ ಒಡ್ಡೋಲಗದಲ್ಲಿ ಸಿಂಹಾಸನದಲ್ಲಿ ಕುಳಿತು, ಮದಕರಿನಾಯಕ ಸಭೆಯನ್ನುದ್ದೇಶಿಸಿ ನುಡಿದಿದ್ದ.”ನಲಿವೂ ಇದೆ, ನೋವೂ ಇದೆ ನಿನ್ನೆಯ ಘಟನಾವಳಿಗಳ ಸುತ್ತ. ಹೈದರಾಲಿಯನ್ನು ಮಣಿಸಿದ್ದಕ್ಕೆ ನಲಿವು, ಕೋಟೆಯ ನಿಜದತಾಯಿ ಓಬವ್ವಳನ್ನು ಕಳೆದುಕೊಂಡಿದ್ದಕ್ಕೆ ಅಗಾಧ ನೋವು. ಕಾಲನಾಯಕಾ….”..
ಕಾಲನಾಯಕ ತಲೆತಗ್ಗಿಸಿ ನಿಂತಿದ್ದ. ಅನ್ಯಮನಸ್ಕನಾಗಿದ್ದ, ಅಂಜಲೀಬದ್ಧನಾಗಿದ್ದ. ಯಾವುದೇ ಗುಣಗಾನ ಅವನಿಗೆ ಬೇಕಿರಲಿಲ್ಲ. ನಾಯಕ ಮುಂದುವರೆಸಿದ “ಕಾಲನಾಯಕಾ, ಧನ್ಯ ನೀನು ನಾಯಕಾ. ಧನ್ಯ ಈ ಹೆಬ್ಬುಲಿಯನ್ನು ನಮ್ಮ ಕೋಟೆ ಪಡೆದಿದ್ದಕ್ಕೆ. ನಮ್ಮ ಕನ್ನಡ ನಾಡು ಹಡೆದಿದ್ದಕ್ಕೆ”. ಕಾಲನಾಯಕನಿಗೆ ತಡೆಯಲಾಗಲಿಲ್ಲ, ಕಣ್ಣೀರ ಕಟ್ಟೆಯೊಡೆದಿತು, ಗದ್ಗದಿಸಿದ “ಎಲ್ಲಿಯಿನ್ನು ನನ್ನ ಓಬವ್ವ…ನೀರು ತರಲೆಂದು ಹೋದವಳು ಚರಿತ್ರೆಯಲ್ಲಿ ನೀರಾಗಿ ಹೋದಳು”. ಮೌನಿಯಾದ. ಮದಕರಿನಾಯಕನಿಗೆ ಚುರುಕ್ಕೆಂದಿತು, ನುಡಿದ “ನೀರಾಗಲಿಲ್ಲ ಓಬವ್ವ, ಕಲ್ಲಾದಳು. ಮುಂದೆ ಶತಮಾನಗಳನೇಕ ಕನ್ನಡಿಗರು ಸವರುವ ಕಲ್ಲಾದಳು”. ಸಭಿಕರು ಓಬವ್ವಳನ್ನು ನೆನೆದು ಮಾತನಾಡಲಾರಂಭಿಸಿದರು.ಕಾಲನಾಯಕ ಕಿವಿಯಾಗಲಿಲ್ಲ. ಅವನ ಮನಸ್ಸು ತುಂಬಿಕೊಂಡಿದ್ದು ಓಬವ್ವ…ಓಬವ್ವ…ಓಬವ್ವ…
ತನ್ನಲ್ಲಿಯೇ ಮಾತಾಗಿದ್ದ ಕಾಲನಾಯಕ. “ಓಬವ್ವಳ ಸಾವು, ಗೆಲುವಿನ ಹರ್ಷವನ್ನು ನುಂಗಿದೆ. ಇಲ್ಲಿ ಕೋಟೆ ಉಳಿದಿದೆ, ಅಲ್ಲಿ ಬದುಕು ಒಡೆದಿದೆ. ನನ್ನ ಕಹಳೆಯ ಕೂಗಿಗಿಂತ ಓಬವ್ವ, ಆಕೆಯ ಒನಕೆ ಇಂದು ಕೋಟೆಯನ್ನುಳಿಸಿದೆ.”. ತನ್ನ ಗುಡಿಸಲಿಗೆ ಮರಳಿದ ಕಾಲನಾಯಕನಿಗೆ ನಿದ್ದೆಯಿರಲಿಲ್ಲ. ಓಬವ್ವಳ ಚಿತ್ರವೇ, ಆಕೆಯ ಶೌರ್ಯವೇ ಮನದಲ್ಲಿ ಸುಳಿದಿತ್ತು.
ಉಕ್ಕಿನ ಮನುಷ್ಯನಿಗೆ ಸಿಗಲಿ ತಕ್ಕ ಗೌರವ
– ರೋಹಿತ್ ಚಕ್ರತೀರ್ಥ
1909ರ ಒಂದು ದಿನ. ನ್ಯಾಯಾಲಯದಲ್ಲಿ ಕ್ರಾಸ್ ಎಕ್ಸಾಮಿನೇಶನ್ ನಡೆಯುತ್ತಿದೆ. ನಿರಪರಾಧಿಯೊಬ್ಬ ಅಪರಾಧಿ ಸ್ಥಾನದಲ್ಲಿ ನಿಂತಿದ್ದಾನೆ. ವಕೀಲರು ಪಾಟೀಸವಾಲು ಹಾಕುತ್ತಿರುವಾಗಲೇ ಮಧ್ಯದಲ್ಲಿ ಅವರಿಗೊಂದು ಟೆಲಿಗ್ರಾಂ ಬಂತು. ಆ ಕಾಲದಲ್ಲಿ ಯಾರಿಗಾದರೂ ತಂತಿ ಸಂದೇಶ ಬಂತೆಂದರೆ ಅದು ಸಾವಿನ ಸುದ್ದಿಯೆಂದೇ ಲೆಕ್ಕ. ಚೀಟಿಯತ್ತ ಒಮ್ಮೆ ಕಣ್ಣುಹಾಯಿಸಿ, ಕ್ಷಣಕಾಲ ಕಣ್ಣುಮುಚ್ಚಿ ದೀರ್ಘವಾಗಿ ಉಸಿರೆಳೆದು, ಅವರು ಆ ಚೀಟಿಯನ್ನು ತನ್ನ ಕೋಟಿನ ಜೇಬಿನೊಳಗಿಳಿಸಿ ವಾದ ಮುಂದುವರಿಸಿದರು. ಕೊನೆಗೆ ಕಟಕಟೆಯಲ್ಲಿ ನಿಂತಿದ್ದ ವ್ಯಕ್ತಿ ನಿರಪರಾಧಿಯೆಂದು ಸಾಬೀತಾಯಿತು. ಕೋರ್ಟಿನ ಕಲಾಪಗಳು ಮುಗಿದ ನಂತರ ನ್ಯಾಯಮೂರ್ತಿಗಳು ಟೆಲಿಗ್ರಾಂ ವಿಷಯ ಪ್ರಸ್ತಾಪಿಸಿದಾಗ ವಕೀಲರು, “ಅದು ನನ್ನ ಪತ್ನಿಯ ಸಾವಿನ ಸುದ್ದಿ. ನಾನು ಆ ಕೂಡಲೇ ನ್ಯಾಯಾಲಯದಿಂದ ಹೊರಟುಬಿಡುತ್ತಿದ್ದರೆ ಇಲ್ಲಿ ನಿರಪರಾಧಿಯ ಪರವಾಗಿ ವಾದಿಸುವವರು ಯಾರೂ ಇಲ್ಲದೆ ಅವನು ಶಿಕ್ಷೆಗೆ ಗುರಿಯಾಗುತ್ತಿದ್ದನೇನೋ. ಒಂದು ಪ್ರಾಣ ಹೇಗೂ ಹೋಗಿಯಾಗಿದೆ. ಇಲ್ಲಿಂದ ಹೊರನಡೆದಿದ್ದರೆ ಈ ದಿನ ನಾನು ಎರಡನೇ ಸಾವನ್ನೂ ನೋಡಬೇಕಾಗಿತ್ತಲ್ಲ” ಎಂದರು. ಸರ್ದಾರ್ ವಲ್ಲಭಭಾಯಿ ಪಟೇಲರನ್ನು ಉಕ್ಕಿನ ಮನುಷ್ಯ ಎಂದು ಕರೆಯುವುದು ಸುಮ್ಮನೇ ಅಲ್ಲ ಎನ್ನುವುದಕ್ಕೆ ಇದೊಂದು ದೃಷ್ಟಾಂತ ಸಾಕು.
ಪಟೇಲರು 1875ನೇ ಇಸವಿ ಅಕ್ಟೋಬರ್ 31ರಂದು ಗುಜರಾತ್‍ನಲ್ಲಿ ಜನಿಸಿದರು. ಪಟೇಲ್ ಸಮುದಾಯದ ಸಂಪ್ರದಾಯದಂತೆ ಹುಡುಗನಿಗೆ 18ರ ಹರೆಯದಲ್ಲೇ ಮದುವೆಯಾಯಿತು. ಕುಟುಂಬ ದೊಡ್ಡದು. ಜೀವನ ನಿರ್ವಹಣೆಗೆ ಶಕ್ತಿಮೀರಿ ದುಡಿಯುವುದು ಅನಿವಾರ್ಯ ಕರ್ಮವಾಗಿದ್ದ ಕಾಲ. ಪಟೇಲರು ಸ್ವಂತ ಪರಿಶ್ರಮದಿಂದ ಓದಿ, ಪದವಿ ಪಡೆದು, ಉನ್ನತ ವ್ಯಾಸಂಗಕ್ಕೆ ಇಂಗ್ಲೆಂಡಿಗೆ ಹೋಗುವ ಕನಸು ಕಂಡಿದ್ದರು. ಅವರ ಕನಸಿಗೆ ನೀರೆರೆಯುವಂತೆ ಇಂಗ್ಲೆಂಡಿನಿಂದ ವಕೀಲಿ ವ್ಯಾಸಂಗದ ಪ್ರವೇಶಾತಿಯ ಕಾಗದಪತ್ರಗಳೂ ಪ್ರಯಾಣದ ಟಿಕೇಟೂ ಬಂದವು. ಆ ಎಲ್ಲ ದಾಖಲೆಗಳಲ್ಲೂ ಪಟೇಲರ ಹೆಸರನ್ನು ವಿ.ಜೆ. ಪಟೇಲ್ ಎಂದು ನಮೂದಿಸಲಾಗಿತ್ತು. ಆಗ, ಇಂಗ್ಲೆಂಡಿಗೆ ಹೋಗಿ ಕಲಿಯಲು ತನಗೂ ಆಸೆಯಿದೆ ಎಂದು ಸೋದರ ವಿಠಲಭಾಯಿ ಝಾವೆರ್‍ಬಾಯಿ ಪಟೇಲ್ ಮುಂದೆ ಬಂದು ಅಣ್ಣನ ಬಳಿ ಹೇಳಿಕೊಂಡ. ಅಣ್ಣ ವಲ್ಲಭಭಾಯಿ ತಮ್ಮನ ಆಸೆ ಮನ್ನಿಸಿ ಆತನಿಗೆ ವಿದೇಶಕ್ಕೆ ಹೋಗಲು ಅವಕಾಶ ಮಾಡಿಕೊಟ್ಟು ತಾನು ಭಾರತದಲ್ಲೆ ಉಳಿದರು. ವಜ್ರದಂಥ ವ್ಯಕ್ತಿಯ ಮನಸ್ಸು ಹೂವಿನಷ್ಟು ಮೃದುವೂ ಆಗಿತ್ತೆನುವುದಕ್ಕೆ ಈ ಘಟನೆ ಸಾಕ್ಷಿ.
ಶೇರ್ ಷಾ !
– ಆತ್ಮನ್ ಭಟ್,ಚಿತ್ರದುರ್ಗ
ಆತ ಭಾರತೀಯ ಸೇನೆಯ ಮಗದೊಬ್ಬ ಕ್ಯಾಪ್ಟನ್ ಅಷ್ಟೆ! ಆವತ್ತೂ ೭ ಜುಲೈ. ಕರೆಕ್ಟಾಗಿ ಹದಿನಾರು ವರ್ಷಗಳ ಹಿಂದಿನ’ ಫ್ಲ್ಯಾಷ್ ಬ್ಯಾಕು’. ಕಾರ್ಗಿಲ್ ಯುದ್ಧದ ರಣರಂಗ. ಅದೇ ಕಾರ್ಗಿಲ್ ಯುದ್ಧದ ಒಂದು ಗುಡ್ಡಗಾಡು. ವಂಚಕ ಹೇಡಿ ಪಾಕಿಸ್ತಾನೀ ನುಸುಳುಕೋರರ ಹಾಗೂ ಭಾರತೀಯ ಸೇನೆಯ ತುಕಡಿಯೊಂದರ ನಡುವಣ ಕಾಳಗ. Right now, ಆ ಕಾಳಗದ ಕ್ಲೈಮ್ಯಾಕ್ಸ್. ಒಬ್ಬ ಕ್ಯಾಪ್ಟನ್, ಅದೇ ಮೇಲೆ ಹೇಳಿದ್ದೆನಲ್ಲ ಆತ. ತನಗಿಂತ ಮೊದಲು ಹೋಗಬೇಕಿದ್ದ ಸುಬೇದಾರನಿಗೆ “तू बाल-बच्चेदार है, हट जा पीचे” ಅಂತ ಕೂಗಿದ. “ನಿನಗೆ ಮಕ್ಕಳು ಮರಿ ಇದಾವ. ನಡೀಲೆ ಆಚೆ!” ಅಂತ ಅರ್ಥ! ಹೋಲ್ಡ್ ಡೌನ್, ಈತನೇನು ಜೀವನ ಸಾಕಾದವನಲ್ಲ, ಈತನ ಕಾಲುಭಾಗ ಜೀವನವೂ ಮುಗಿದಿರಲಿಲ್ಲ. ಅವನಿಗಾಗ 24ರ ಹರೆಯ! ತಾನು ಮುಂದುವರೆದ. ಗುಂಡೇಟು ತಿಂದ, ಎಡವಿದ, ದಾಳಿಗೆ ಎದೆಗೊಟ್ಟ, ಆದರೂ ತ್ರಿವಿಕ್ರಮನಂತೆ ನುಗ್ಗಿದ. ಕೊನೆಗೊಮ್ಮೆ, ಅಲ್ಲೇ ‘जय माता दि ‘ ಅಂತ ಕೂಗಿ ಯುದ್ಧಾಂಕಣದಲ್ಲೇ ಕೊನೆಯುಸಿರೆಳೆದ. ಕೊನೆಯುಸಿರೆಳೆಯುವ ಮುನ್ನ ಉಸಿರಿಗೊಬ್ಬನಂತೆ ಐದು ಶತ್ರು ಸೈನಿಕರನ್ನ ಕೊಂದ. ಅವರ ತೀರ ಹತ್ತಿರಕ್ಕೆ, ಅಂದರೆ ಶತ್ರುವಿನ ಸುಮಾರು ಒಂದು ಮಾರು ಹತ್ತಿರದಿಂದ ಅವರ ಎದೆಗೆ ಗುಂಡು ಹೊಕ್ಕಿಸಿದ. ಇವನ ಶೌರ್ಯ ಇಲ್ಲಿಗೆ ಮುಗಿಯುವುದಿಲ್ಲ, ಇಲ್ಲಿಂದ ಶುರುವಾಗುವುದೂ ಇಲ್ಲ. ಮುಂದೆ ಓದಿ. ನೆನಪಿರಲಿ, ಈತ ಭಾರತದ ಅತ್ಯುನ್ನತ ಶೌರ್ಯ ಪ್ರಶಸ್ತಿ ಪಡೆದವ. ‘ದಿ ಪರಮವೀರ ಚಕ್ರ’ವನ್ನು ಯುದ್ಧದಲ್ಲಿ ಭಾಗವಹಿಸಿದವರಿಗೆಲ್ಲ ಕೊಡುವುದಿಲ್ಲ! It is not surely a satisfactory certificate! ಆತನ ಹೆಸರೊಂದನ್ನು ಹೇಳಿಬಿಡುತ್ತೇನೆ, ಅದು ‘ವಿಕ್ರಮ್ ಬಾತ್ರಾ’!
ನೆಹರೂ ಎಂಬ ಸ್ವಾರ್ಥ ರಾಜಕಾರಣಿ ಮತ್ತು ನೇತಾಜಿ ಎಂಬ ಸ್ವಾತಂತ್ರ್ಯ ಸೇನಾನಿ
– ರಾಕೇಶ್ ಶೆಟ್ಟಿ
“ಸುಭಾಷ್ ಸೈನ್ಯವೇನಾದರೂ ಭಾರತಕ್ಕೆ ಬಂದರೆ ನಾನು ಕತ್ತಿ ಹಿಡಿದು ಹೋರಾಡುತ್ತೇನೆ”. ಹೀಗೆ ಹೇಳಿದ ಕಠಾರಿವೀರ ಯಾವುದೋ ಬ್ರಿಟಿಷನಲ್ಲ.ಗಾಂಧಿ ಪಕ್ಷದೊಳಗಿನ ಬ್ರಿಟಿಷ್ ಶ್ರೀಮಾನ್ ಚಾಚಾ ನೆಹರೂ.ಅಷ್ಟಕ್ಕೂ ನೆಹರೂವನ್ನು “ಗಾಂಧಿ ಪಕ್ಷದೊಳಗಿನ ಬ್ರಿಟಿಷ್” ಎಂದು ನಾನು ಕರೆಯುತ್ತಿಲ್ಲ.ಖುದ್ದು ನೆಹರೂ ಅವರ ಅಮೇರಿಕಾದ ಗೆಳೆಯನಾಗಿದ್ದ ಜಾನ್ ಕೆನೆತ್ ಗಾಲ್ಬ್ರೈತ್ ಬಳಿ “ಭಾರತವನ್ನು ಆಳುವ ಕಡೆಯ ಬ್ರಿಟಿಷ್ ನಾನೇ” ಎಂದು ಹೇಳಿಕೊಂಡಿದ್ದರು. (ಈ ಜಾನ್ ಎಂತ ಮಹಾನುಭಾವನೆಂದರೆ, ಭಾರತವು ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟಿದ್ದು ಪುಣ್ಯ ಎನ್ನುವಂತ ಮನಸ್ಥಿತಿಯವ)
ಗಾಂಧಿ ಪಕ್ಷದೊಳಗಿನ ಬ್ರಿಟಿಷ್ ಎನ್ನಲಿಕ್ಕೆ ಇನ್ನೊಂದು ಸತ್ಯವೂ ಈಗ ಬಹಿರಂಗವಾಗಿದೆ.ಭಾರತವು ಸ್ವತಂತ್ರವಾಗಿ, ಸುಮಾರು ೨೦ ವರ್ಷಗಳ ಕಾಲ ನೇತಾಜಿ ಕುಟುಂಬದ ಮೇಲೆ ಶ್ರೀಮಾನ್ ನೆಹರೂ ಅವರ ಘನ ಸರ್ಕಾರ “ಗೂಢಚಾರಿಕೆ”ಯನ್ನು ಮಾಡಿದೇ ಎಂಬುದೇ ಆ ಸತ್ಯ.ಅದೂ ಬ್ರಿಟಿಷರ MI15 ಎಂಬ ಗೂಢಚಾರ ಸಂಸ್ಥೆಯೊಂದಿಗೆ ಸೇರಿಕೊಂಡು! ಹೀಗಿರುವಾಗ ನೆಹರೂ ತನ್ನನ್ನು ತಾನು “I am the last Englishman to rule in India.” ಎಂದಿದ್ದು ಸರಿಯಾಗಿಯೇ ಇದೆ ಅಲ್ಲವೇ? ಅಷ್ಟಕ್ಕೂ ಬ್ರಿಟಿಷರಿಗೆ ನೇತಾಜಿಯವರ ಮೇಲೆ ಗೂಢಚಾರಿಕೆ ಮಾಡಲಿಕ್ಕೆ ಕಾರಣಗಳಿದ್ದವು.ಆದರೆ ನೆಹರೂ ಮಹಾಶಯರಿಗೇನಿತ್ತು ಅಂತ ಕಾರಣ? “ಅಭದ್ರತೆ” ಭಾವವೇ?ನೇತಾಜಿಯವರು ತೈಪೆಯ ವಿಮಾನಾಪಘಾತದಲ್ಲಿ ಮರಣಹೊಂದಿದರು ಎಂದು ಸೃಷ್ಟಿಸಲಾಗಿದ್ದ ಸುದ್ದಿಯನ್ನು ಇತರರಂತೆ ನೆಹರೂ ಸಹ ನಂಬಿರಲಿಲ್ಲ.ಒಂದು ವೇಳೆ ಸ್ವತಂತ್ರ ಭಾರತಕ್ಕೆ ನೇತಾಜಿ ಕಾಲಿಟ್ಟರೆ,ಗಾಂಧೀಜಿಯ ಮರಣದ ನಂತರ ಏಕಮೇವಾದ್ವೀತಿಯನಂತಿರುವ ತನ್ನ ಕುರ್ಚಿ ಉಳಿಯುವುದಿಲ್ಲವೆಂಬ ಘೋರ ಸತ್ಯ ತಿಳಿದಿದ್ದರಿಂದಲೇ? ನೆಹರೂವಿಗೆ,ನೇತಾಜಿಯವರ ಮೇಲೆ ಅಂತದ್ದೊಂದು ಅಭದ್ರತೆ,ಈರ್ಷ್ಯೆ ಇರಲಿಲ್ಲವೆಂದಾದರೇ, ಬ್ರಿಟನ್ ಪ್ರಧಾನಿಯಾಗಿದ್ದ ಕ್ಲೆಮೆಂಟ್ ಆಟ್ಲಿಯವರಿಗೆ,ಸುಭಾಷ್ ರಷ್ಯಾದಲ್ಲಿ ಇರುವ ಬಗ್ಗೆ ಮತ್ತು ರಷ್ಯಾ ಮಿತ್ರಪಡೆಗಳಿಗೆ ನಂಬಿಕೆ ದ್ರೋಹ ಮಾಡಿದಂತೆ ಎಂಬಂತ ಸಾಲುಗಳಿರುವ ಪತ್ರವೊಂದನ್ನು ಬರೆದಿದ್ದರು ಎನ್ನುವುದು ಸುಳ್ಳೇ? ಅದೆಲ್ಲಾ ಬಿಡಿ.ಸ್ವಾತಂತ್ರ್ಯ ಸಿಕ್ಕ ನಂತರ ಐ.ಎನ್.ಎ ಸೈನಿಕರನ್ನು ನೆಹರೂ ನಡೆಸಿಕೊಂಡ ರೀತಿ ನೋಡಿ.ಆ ಸೈನಿಕರಿಗೆ ಭಾರತೀಯ ಸೈನ್ಯದಲ್ಲಿ ಕಾಲಿಡಲು ಬಿಡಲಿಲ್ಲ.ಪಿಂಚಣಿಗಾಗಿ ಆ ಸೈನಿಕರು ೧೯೭೭ರವರೆಗೂ ಕಾಯಬೇಕಾಯಿತು! ಆಜಾದ್ ಹಿಂದ್ ಸೈನಿಕರು ಭಾರತೀಯ ಸೇನೆ ಸೇರಿಕೊಂಡ ಮೇಲೆ ನೇತಾಜಿ ಪ್ರತ್ಯಕ್ಷವಾದರೇ,ಸೈನ್ಯ ಅವರ ಪರ ನಿಂತೀತೂ ಎಂಬ ಭಯವಿತ್ತೇ? ನೆಹರೂ ಅವರ ಈ ನಡೆಗಳನ್ನೆಲ್ಲ ಹೇಗೆ ಅರ್ಥೈಸಿಕೊಳ್ಳಬೇಕು?
ಚಿದಂಬರಂ ಪಿಳ್ಳೆ
– ನವೀನ್ ನಾಯಕ್
ಭರತಖಂಡದ ಒಂದೊಂದೆ ಭಾಗಗಳನ್ನು ತಮ್ಮ ಕುತಂತ್ರದಿಂದ ಕಬಳಿಸಿದ ಬ್ರಿಟೀಶರು ಎಲ್ಲೆಲ್ಲೂ ತಮ್ಮ ಧಾರ್ಷ್ಟ್ಯವನ್ನು ತೋರತೊಡಗಿದರು. ನಮ್ಮ ಸಂಸ್ಕೃತಿಯನ್ನು ಒಂದೆಡೆ ಹೀಯಾಳಿಸುತ್ತ ಇನ್ನೊಂದೆಡೆ ಮತಾಂತರಿಸುತ್ತ ತಮ್ಮ ಸಾಮ್ರಾಜ್ಯವನ್ನು ಶಾಶ್ವತಗೊಳಿಸಲು ಸರ್ವಪ್ರಯತ್ನವನ್ನು ಮಾಡುತ್ತಲೇ ಇದ್ದರು. ತೆರಿಗೆ ಪದ್ದತಿಯ ವಿರೂಪದಿಂದ ಲಕ್ಷಾಂತರ ನೇಕಾರರು , ಕಾರ್ಮಿಕರು ಬೀದಿಗೆ ಬಿದ್ದರು.ದೇಶಿಯ ಮಾರುಕಟ್ಟೆಯನ್ನು ತಮ್ಮ ಕೈವಶ ಮಾಡಿಕೊಂಡು ಅನಾವಶ್ಯಕ ತೆರಿಗೆಗಳನ್ನು ಹೇರಿ ಸಾಮಾನ್ಯ ಜನರು ತತ್ತರಿಸುವಂತೆ ಮಾಡತೊಡಗಿದರು. ಸಮುದ್ರ ಪಯಣಗಳಿಗೂ ಇದರ ಬಿಸಿ ತಟ್ಟಿತ್ತು. ಆ ದಿನಗಳಲ್ಲಿ ಕೊಲೊಂಬೊ ಹಾಗು ತೂತ್ತುಕುಡಿಯ ನಡುವಿನ ಹಡಗು ಪಯಣದ ಸಂಪೂರ್ಣ ಅಧಿಕಾರ ಬ್ರಿಟೀಶರ ಕೈಯಲ್ಲಿತ್ತು. ಬ್ರಿಟೀಶ್ ಇಂಡಿಯಾ ಸ್ಟೀಮ್ ನ್ಯಾವಿಗೇಶನ್ ಕಂಪನಿ ಎಂಬ ಈ ಸಂಸ್ಥೆ ತಮಗಿಷ್ಟ ಬಂದಂತೆ ಪ್ರಯಾಣ ವೆಚ್ಚವನ್ನು ಏರಿಸತೊಡಗಿದರು. ಇವರ ದುರಹಂಕಾರಕ್ಕೆ ಸೆಡ್ಡು ಹೊಡೆಯಲು ಲೆಕ್ಕಚಾರ ಹಾಕಿ ಕುಳಿತವರೇ ಚಿದಂಬರಂ ಪಿಳ್ಳೆ.
ತಮಿಳುನಾಡಿನ ಓಟ್ಟಪ್ಪಿದಪುರಂನಲ್ಲಿ ಉಳಗನಾಥಂ ಮತ್ತು ಪರಮಾಯಿ ಅಮ್ಮಾಳ್ ದಂಪತಿಗೆ ಸೆಪ್ಟಂಬರ್ 5 1827 ರಲ್ಲಿ ಚಿದಂಬರಂ ಪಿಳ್ಳೆಯವರು ಜನಿಸಿದರು. ತನ್ನ ಹದಿಮೂರನೇ ವಯಸ್ಸಿನವರೆಗೆ ಜನ್ಮಸ್ಥಳದಲ್ಲೇ ಕಳೆದ ಚಿದಂಬರಂರವರು ಮುಂದಿನ ವಿದ್ಯಾಭ್ಯಾಸಕ್ಕಾಗಿ ತೂತ್ತುಕುಡಿ ಎಂಬಲ್ಲಿಗೆ ಬಂದರು. ತಮ್ಮ ವಿದ್ಯಾಭ್ಯಾಸ ಮಾಡುತ್ತ ಜೊತೆಗೆ ಇಂಗ್ಲಿಷ್ ಭಾಷೆಯಲ್ಲಿ ತಮ್ಮ ಪ್ರಭುತ್ವ ಸ್ಥಾಪಿಸಿಕೊಂಡರು. ತದನಂತರ ಕೆಲಕಾಲ ತಾಲ್ಲೂಕು ಕಛೇರಿಯಲ್ಲಿ ಗುಮಾಸ್ತನಾಗಿ ದುಡಿದರು. ಈ ಕೆಲಸ ಚಿದಂಬರಂರವರಿಗೆ ತೃಪ್ತಿಯನ್ನು ತಂದು ಕೊಡುವಲ್ಲಿ ವಿಫಲವಾಯಿತು. ಚಿದಂಬರಂರವರ ವಂಶದ ಹಿರಿತಲೆಗಳು ವಕೀಲಿ ವೃತ್ತಿಯಲ್ಲಿ ನಿಷ್ಣಾತರಾಗಿದ್ದರು. ಇದೇ ಪ್ರಭಾವವನ್ನು ಬಳಸಿಕೊಂಡು ಅನ್ಯಾಯವಾಗಿ ಪೋಲಿಸ್ ಇಲಾಕೆಯ ಕಪಿಮುಷ್ಟಿಯಲ್ಲಿ ಸಿಲುಕಿದ ನಿರಪರಾಧಿಗಳ ಪರವಾಗಿ ವಾದಿಸಲು ವಕೀಲಿ ಅಭ್ಯಸಿಸಿ ತಿರುಚ್ಚಿಯ ಸಬ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು. ಎಷ್ಟೋ ಬಾರಿ ನಿರಪರಾಧಿಗಳ ಪರವಾಗಿ ನಿಃಶುಲ್ಕವಾಗಿ ಮೊಕದ್ದಮೆ ನಡೆಸಿಕೊಟ್ಟು ಜನರ ಪ್ರೀತಿ ವಿಶ್ವಾಸವನ್ನು ಗಳಿಸಿದರು. ಚಿದಂಬರಂರವರ ಈ ಕೆಲಸದಿಂದ ಬ್ರಿಟೀಶರು,ಪೋಲಿಸ್ ಅಧಿಕಾರಿಗಳ ದ್ವೇಷಕ್ಕೆ ಒಳಗಾಗತೊಡಗಿದರು.
ಆಧ್ಯಾತ್ಮ ಮತ್ತು ಶಿವನ ಕುರಿತು ಅಪಾರ ಶ್ರದ್ದೆಯನ್ನು ಚಿದಂಬರಂ ಬೆಳೆಸಿಕೊಂಡಿದ್ದರು.ತಮಿಳು ಸಾಹಿತ್ಯವನ್ನು ಓದಿ ಅದ್ಭುತ ಜ್ಞಾನವನ್ನು ಮೈಗೂಡಿಸಿಕೊಂಡಿದ್ದರಲ್ಲದೇ ಯೋಗ್ಯ ಗುರುಗಳ ಮತ್ತು ಸಾಧುಗಳ ಸಂಪರ್ಕವನ್ನು ಸಹ ಬೆಳೆಸಿಕೊಂಡಿದ್ದರು. ಜೊತೆಗೆ ರಾಷ್ಟ್ರೀಯ ವಿಚಾರಗಳಲ್ಲಿ ಅತೀವ ಆಸಕ್ತಿಯನ್ನು ಹೊಂದಿದ್ದರು. 1898 ಡಿಸೆಂಬರ್ ಸಮಯದಲ್ಲಿ ಮದ್ರಾಸಿನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಾಗತ ಸಮಿತಿಯ ಕಾರ್ಯದರ್ಶಿ ಮತ್ತು ಕೋಶಾಧಿಕಾರಿಯ ಹೊಣೆಯನ್ನು ಹೊತ್ತಿಕೊಂಡಿದ್ದರು. ಆ ಮಹಾಧಿವೇಶನದಲ್ಲಿ ಭಾಗವಹಿಸಿದ ಒಟ್ಟು 614 ಪ್ರತಿನಿಧಿಗಳಲ್ಲಿ 519ಜನ ತಮಿಳುನಾಡಿನಿಂದಲೇ ಬಂದಿದ್ದರು. ಅಷ್ಟು ಜನರನ್ನು ಅಧಿವೇಶನಕ್ಕಾಗಿ ಕಲೆಹಾಕಿದ್ದ ಶ್ರೇಯಸ್ಸು ಚಿದಂಬರಂರವರದೇ !
ಮತ್ತಷ್ಟು ಓದು 
ಸಾಯುವ ಕೊನೆ ಕ್ಷಣದಲ್ಲೂ ಆ ಮೂವರ ಬಾಯಲ್ಲಿ ಮೊಳಗಿದ ಮಂತ್ರ…. ಭಾರತ್ ಮಾತಾ ಕೀ ಜೈ!
– ನಿತ್ಯಾನಂದ ವಿವೇಕವಂಶಿ
ಈ ದೇಶಕ್ಕೆ ಸ್ವಾತಂತ್ರ್ಯವೆಂಬುದು ಸುಮ್ಮನೆ ಬರಲಿಲ್ಲ. ಸುಮಾರು ಆರೂವರೆ ಲಕ್ಷ ವೀರ ವೀರಾಂಗನೆಯರ ಪ್ರಾಣತ್ಯಾಗದ ಫಲವಾಗಿ ಈ ಸ್ವಾತಂತ್ರ್ಯ ದೊರಕಿದೆ. ಅವರು ತಮ್ಮ ನೆತ್ತರು ಹರಿಸಿ ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಈ ಸ್ವಾತಂತ್ರ್ಯ ಹೋರಾಟವೆಂಬ ಮಹಾ ಯಜ್ಞದಲ್ಲಿ ತಮ್ಮ ಪ್ರಾಣವನ್ನೇ ಆಹುತಿಯನ್ನಾಗಿ ನೀಡಿದ ವೀರರ ತ್ಯಾಗ ಬಲಿದಾನಗಳು ಅನನ್ಯವಾದವು. ಹೋರಾಟದ ಈ ಇತಿಹಾಸದಲ್ಲಿ ಹಲವಾರು ರೋಚಕ ಘಟನೆಗಳು, ರೋಮಾಂಚನಕಾರಿ ಕಥೆಗಳು, ಅದ್ವಿತೀಯ ತ್ಯಾಗ ಬಲಿದಾನದ ಘಟನೆಗಳಿವೆ. ಅವುಗಳಲ್ಲಿ ಕೆಲವು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟಿದ್ದರೆ, ಇನ್ನು ಕೆಲವು ಅಜ್ಞಾತವಾಗಿ, ಹೊರ ಪ್ರಪಂಚಕ್ಕೆ ಪ್ರಕಟಗೊಳ್ಳದೇ, ಕಾಲಗರ್ಭದಲ್ಲಿ ಹೂತುಹೋಗಿ ಕಣ್ಮರೆಯಾಗಿವೆ. ಹೀಗೆ ಇತಿಹಾಸದ ಪುಟಗಳಲ್ಲಿ ದಾಖಲಾಗಿ ಉಳಿದಿರುವ ರೋಚಕ ಘಟನೆಗಳಲ್ಲಿ ಭಗತ್‍ಸಿಂಗ್, ರಾಜಗುರು, ಸುಖದೇವ್‍ರ ತ್ಯಾಗ ಬಲಿದಾನಗಳು ಚಿರಸ್ಮರಣೀಯವಾದುದಾಗಿದೆ. ತಮ್ಮ ಮಾತೃಭೂಮಿಯನ್ನು ಪರಕೀಯರ ಆಳ್ವಿಕೆಯಿಂದ ಮುಕ್ತಗೊಳಿಸಲು, ದಾಸ್ಯದ ಸಂಕೋಲೆಯನ್ನು ಕಿತ್ತೊಗೆಯಲು ಬ್ರಿಟೀಷ್ ಸಾಮ್ರಾಜ್ಯಶಾಹಿಯ ವಿರುದ್ಧ ಸಮರವನ್ನೇ ಸಾರಿದ ಈ ಮೂವರು ಕ್ರಾಂತಿಕಾರಿಗಳಿಗೆ ಬ್ರಿಟೀಷ್ ನ್ಯಾಯಾಲಯವು ಗಲ್ಲು ಶಿಕ್ಷೆಯನ್ನು ವಿಧಿಸಿತು. 23 ಮಾರ್ಚ್ 1931 ರಂದು ತಮ್ಮ 23-24 ನೇ ವಯಸ್ಸಿನಲ್ಲಿಯೇ ಈ ಮೂವರು ಕ್ರಾಂತಿಸೋದರರು ನಗುನಗುತ್ತಾ ಬಲಿಗಂಬವನ್ನೇರಿದರು. ದುರದೃಷ್ಟಕರ ಸಂಗತಿಯೆಂದರೆ ನಮಗ್ಯಾರಿಗೂ ಆ ದಿನದ ನೆನಪೇ ಇಲ್ಲ. ಪ್ರತೀ ವರ್ಷ ಮಾರ್ಚ್ 23 ರಂದು ವಾರ್ತಾ ಇಲಾಖೆಯಿಂದ ದಿನಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ಜಾಹಿರಾತು ಬಿಟ್ಟರೆ, ‘ಶಹೀದ್ ಡೇ’ಯನ್ನು ಆಚರಿಸುವ ಕೆಲವು ಸಂಘಟನೆಗಳನ್ನು ಬಿಟ್ಟರೆ ಇಡೀ ದೇಶದಲ್ಲಿ ಎಲ್ಲಿಯೂ ಈ ಅಪೂರ್ವ ಬಲಿದಾನವನ್ನು ಸ್ಮರಿಸಿಕೊಳ್ಳುತ್ತಿಲ್ಲ. ಕಾರಣವೇನೆಂದರೆ ನಮಗೆ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದವರ ಹೆಸರೂ ಕೂಡಾ ನೆನಪಿಲ್ಲ.
ಮತ್ತಷ್ಟು ಓದು 
ಸುಭಾಷರ ನೆನಪಿನೊಂದಿಗೆ ಮರೆಯಬಾರದ ಹೆಣ್ಣು
– ಚೇತನಾ ತೀರ್ಥಹಳ್ಳಿ
ಹೆಣ್ಣು- ಮಣ್ಣಿನ ಹಿಂದೆ ಬಿದ್ದವರೆಲ್ಲ ಕೆಡುತ್ತಾರೆ- ಹಾಗನ್ನುತ್ತಾರಲ್ಲವೆ? ಆದರೆ, ಸುಭಾಷರು ಮಾತ್ರ ಕೆಡಲಿಲ್ಲ. ಬದಲಾಗಿ ಉನ್ನತ ಗೌರವವನ್ನೇ ಪಡೆದರು. ಶತಮಾನಗಳ ಕಾಲ ಉಳಿಯುವಂತಾದರು. ಯಾಕೆ ಗೊತ್ತಾ? ಅವರು ಹಂಬಲಿಸಿದ ನೆಲ ಭಾರತ. ಮತ್ತು, ಅವರು ಪ್ರೇಮಿಸಿದ ಹೆಣ್ಣು ಎಮಿಲೀ!……….. ಸುಭಾಷ್ ಅವರನ್ನ ನೆನೆಸಿಕೊಂಡರೆ, ಎಮಿಲಿಗೂ ನಮ್ಮಿಂದ ಒಂದು ಗೌರವ ಸಲ್ಲಲಿ ಅಂತ ಹಾರೈಸ್ತಾ….
“ನಿನ್ನ ನೋಡಲು ಮತ್ತೆಂದೂ ಸಾಧ್ಯವಾಗದೆ ಹೋಗಬಹುದು. ಆದರೆ ನನ್ನ ನಂಬು. ನೀನು ಸದಾ ನನ್ನ ಹೃದಯದಲ್ಲಿ, ಆಲೋಚನೆಗಳಲ್ಲಿ, ಕನಸಲ್ಲಿ ಇದ್ದೇ ಇರುತ್ತೀಯೆ. ಹಾಗೇನಾದರೂ ವಿಧಿ ನಮ್ಮಿಬ್ಬರನ್ನು ಶಾಶ್ವತವಾಗಿ ಅಗಲಿಸಿದನೆಂದುಕೋ… ಮುಂದಿನ ಹುಟ್ಟಿನಲ್ಲಿ ಮತ್ತೆ ನಿನ್ನ ಸೇರಲು ನಾನು ಪರಿತಪಿಸುವೆ. ನನ್ನ ಕಿನ್ನರೀ… Jeden tag denke ich an sie- ನಿನ್ನನ್ನ ಪ್ರತಿದಿನವೂ ನೆನೆಸಿಕೊಳ್ಳುತ್ತೇನೆ”
( ಸುಭಾಷ್ ಚಂದ್ರ ಬೋಸ್, ಎಮಿಲೀ ಶೆಂಕಲ್ ಗೆ ಬರೆದ ಪತ್ರದಲ್ಲಿ)
ನರನರದಲ್ಲಿ ನೆಲದ ಉನ್ಮಾದ. ಹೋರಾಟದ ಕೆಚ್ಚು. ತನ್ನನ್ನೇ ದೇಶದ ಹೆಸರಿಗೆ ಬರೆದಿಟ್ಟ ಪ್ರೌಢ ಗಂಡಸಿನ ಎದೆಯಲ್ಲೂ ಒಂದು ಬೆಚ್ಚಗಿನ ಗೂಡು. ಪುಟ್ಟದೊಂದು ಖಾಸಗಿ ಬದುಕು. ಅಲ್ಲಿ, ಮೊಗೆದಷ್ಟೂ ಚಿಮ್ಮುವ ಪ್ರೀತಿ. ಎದೆ ಸೀಯುವ ವಿರಹದ ಕಾವು. ಕಾಸಗಲ ಕಣ್ಣೆದುರು ಮುಕ್ತ ಭಾರತದ ಕನಸು. ಒಳಗಿನೊಳಗಲ್ಲಿ ಅವಳ ಪ್ರೇಮ ಬಂಧನದ ನೆನಪು.
ಸುಭಾಷ್ ಚಂದ್ರ ಬೋಸ್… ಮತ್ತಷ್ಟು ಓದು 
‘ಸತ್ತು ಬದುಕುವುದು ಹೇಗೆ!?’ ಎಂದು ತೋರಿಸಿಕೊಟ್ಟವನ ನೆನಪಿಗೆ…
– ರಾಕೇಶ್ ಶೆಟ್ಟಿ
ಕ್ರಾಂತಿಕಾರಿಗಳೆಂದರೆ ಹಾದಿ ತಪ್ಪಿದ ದೇಶ ಭಕ್ತರಲ್ಲ, ಅವರಿಗೂ ಧ್ಯೇಯ,ಗುರಿ,ಆದರ್ಶಗಳಿರುತ್ತವೆ.ಮತ್ತು ಆ ಆದರ್ಶಗಳನ್ನ ಪಾಲಿಸಲು ತಮ್ಮ ಜೀವವನ್ನು ಸಹ ಅವರು ಅರ್ಪಿಸಬಲ್ಲರು ಅಂತ ಜಗತ್ತಿಗೆ ತೋರಿಸಿಕೊಟ್ಟವರು, ಹುಟ್ಟಿ ಬಂದು ಅಷ್ಟೇ ಬೇಗ ಅದಿನ್ಯಾವ್ದೋ ತುರ್ತು ಕೆಲಸವಿದೆ ಅನ್ನುವಂತೆ ಎದ್ದು ಹೊರಟವರು,ಸತ್ತು ಬದುಕುವುದು ಹೇಗೆ ಅಂತ ತೋರಿಸಿಕೊಟ್ಟು ಹೋದವರು ಭಗತ್ ಸಿಂಗ್,ರಾಜಗುರು ಮತ್ತು ಸುಖದೇವ್.
ಅವರು ಹುತಾತ್ಮರಾಗಿ ಇಂದಿಗೆ ೮೦ ವರ್ಷಗಳಾಯಿತು.ಬಹುಷಃ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕ್ರಾಂತಿಯ ಕಿಡಿಯನ್ನ ಭಾರತೀಯರಲ್ಲಿ ಬಡಿದ್ದೆಬ್ಬಿಸಿದ ಅಪ್ರತಿಮ ವ್ಯಕ್ತಿ ಭಗತ್ ಸಿಂಗ್.ಚಂದ್ರ ಶೇಖರ್ ಆಜಾದ್ರಂತ ಮಹಾನ್ ಗುರುವಿನ ಶಿಷ್ಯ ಗುರುವನ್ನು ಮೀರಿಸುವಂತೆ ಮುನ್ನಡೆದು ಬಿಟ್ಟರು.ಜಲಿಯನ್ ವಾಲ ಬಾಗ್ನ ದುರಂತ ಭಾರತದ ಸ್ವಾತಂತ್ರ್ಯ ಹೋರಾಟದ ಕ್ರಾಂತಿಯ ಕಿಡಿಯ ಉದಯಕ್ಕೆ ಮುನ್ನುಡಿ ಬರೆದಿತ್ತು.ಗಾಂಧೀಜಿಯವರ ಅಸಹಕಾರ ಚಳುವಳಿಗೆ ಓ ಕೊಟ್ಟು ಬೀದಿಗಿಳಿದ ಭಾರತೀಯರಲ್ಲಿ ಪುಟ್ಟ ಮಕ್ಕಳಿಂದ ಹಿಡಿದು ಮುದುಕರವರೆಗೂ ಎಲ್ಲರು ಇದ್ದರು.ಅಂತವರ ಮಧ್ಯೆ ಬಾಲಕ ಭಗತ್ ಕೂಡ ಇದ್ದ.ಚೌರಿ-ಚೌರಾದ ಘಟನೆಯ ನಂತರ ಗಾಂಧೀಜಿ ಏಕಾಏಕಿ ಚಳುವಳಿಯನ್ನ ಹಿಂದೆ ಪಡೆದಾಗ,ಮತ್ತು ಆ ನಂತರ ಗಾಂಧೀಜಿಯ ಮಾತು ಕೇಳಿ ಶಾಲೆ ಬಿಟ್ಟು ಹೊರಬಂದು ಪಟ್ಟ ಪಾಡು ಇವೆಲ್ಲ ಭಗತ್ ಮನಸಿನಲ್ಲಿ ಗಾಂಧೀವಾದದ ಬಗ್ಗೆ ನಂಬಿಕೆ ಕಳೆಯುವಂತೆ ಮಾಡಿತು.ಬಹುಷಃ ಇವೆರಡು ಘಟನೆಗಳು ಭಗತ್ ಸಿಂಗ್ನ ಮುಂದಿನ ಜೀವನ ದಿಕ್ಕನ್ನು ಬದಲಾಯಿಸಿದವು ಅನ್ನಬಹುದೇನೋ?
ಭಾರತ ಕಂಡ ವಿಶ್ವಶ್ರೇಷ್ಠ ಗುರು ಶ್ರೀರಾಮಕೃಷ್ಣ ಪರಮಹಂಸ
– ಶ್ರೀವಿದ್ಯಾ,ಮೈಸೂರು
ರಾಮಕೃಷ್ಣ ಪರಮಹಂಸರು ಪರಮದೈವಭಕ್ತ. ಯಾವಾಗಲೂ ದೇವರನ್ನು ಕುರಿತು ಚಿಂತಿಸುತ್ತಿದ್ದರು. ಅವರಿಗೆ ಎಲ್ಲರಲ್ಲಿಯೂ ದೇವರ ಭಾವನೆಯಿತ್ತು. ಅವರು ಸಾಧಾರಣ ಗುರುಗಳಲ್ಲ. ದೇವರನ್ನು ನೋಡುವ ಶಕ್ತಿಯ ಮಟ್ಟದಲ್ಲಿರುವ ಗುರುಗಳು. ಧ್ಯಾನ ಮಾಡುವಾಗಲೆಲ್ಲಾ ದೇವರ ಜೊತೆ ಮಾತನಾಡುತ್ತಾ ಕಾಲ ಕಳೆಯುತ್ತಿದ್ದರು ಎಂದು ಅವರ ಶಿಷ್ಯರು ಹೇಳುತ್ತಿದ್ದರು. ಅವರು ನಮ್ಮನ್ನು ಪ್ರೀತಿಯಿಂದ ಮಕ್ಕಳ ತರಹ ನೋಡುವರು.ಅವರು ಹೇಳುತ್ತಿದ್ದರು “ಮುಗ್ಧ ಮನಸ್ಸುಳ್ಳವರು ದೊಡ್ಡ ಜ್ಞಾನಿಗಳಾಗುವರು”. ಅವರ ಮನಸ್ಸನ್ನು ನಾವು ಅರ್ಥ ಮಾಡಿಕೊಂಡರೆ ಅವರೆಷ್ಟು ಮಹಾತ್ಮರೆಂದು ಗೊತ್ತಾಗುವುದು. ಅವರು ಎಲ್ಲಾ ಧರ್ಮಗಳನ್ನು ಹಾಗೂ ದೇವರನ್ನು ಗೌರವದಿಂದ ನೋಡುತ್ತಿದ್ದರು. ಅವರು ತನ್ನ ಪತ್ನಿ ಶಾರದಾದೇವಿಯವರನ್ನು ತಾಯಿಯ ಭಾವನೆಯಿಂದ ನೋಡುತ್ತಿದ್ದರು. ಕಾಳಿಮಾತೆಯ ಭಕ್ತರಾಗಿದ್ದರು. ಅವರಿಗೆ ವಿಷಿಷ್ಟವಾದ ಶಕ್ತಿ ಇದ್ದರೂ ಕೂಡ ಜನರಿಗೆ ಸುಲಭವಾಗಿ ಹಂತ ಹಂತವಾಗಿ ವಿಗ್ರಹ ಪೂಜೆ ಮಾಡುವುದನ್ನು ತೋರಿಸಿದರು. ಅವರು ಕರುಣಾಮಯಿ. ವಿವೇಕಾನಂದನನ್ನು ತನ್ನ ಸ್ನೇಹಿತ ಹಾಗೂ ಮಗನಂತೆ ನೋಡಿಕೊಳ್ಳುತ್ತಿದ್ದರು. ರಾಮಕೃಷ್ಣರಿಗೆ ವಿವೇಕಾನಂದನಲ್ಲಿ ಅಪಾರ ವಿಶ್ವಾಸವಿತ್ತು ಹಾಗೂ ವಿವೇಕಾನಂದ ಮಹಾನ್ ವ್ಯಕ್ತಿ ಆಗುವನೆಂದು ಭರವಸೆ ಇತ್ತು. ಆದರೆ, ವಿವೇಕಾನಂದ ಅದನ್ನು ನನಸಾಗಿಸಿದರು. ವಿವೇಕಾನಂದ ರಾಮಕೃಷ್ಣರ ಸಂದೇಶಗಳನ್ನು ಜಗತ್ತಿಗೆ ಸಾರಿದರು.ರಾಮಕೃಷ್ಣರಲ್ಲಿ ಅಹಂಕಾರ, ಕಾಮ, ಮೋಹ, ವಂಚನೆ ಯಾವುದೂ ನುಸುಳುತ್ತಿರಲಿಲ್ಲ. ಆದರೆ ಕೆಲವರಿಗೆ ರಾಮಕೃಷ್ಣ- ಶಾರದಾದೇವಿ ಪ್ರೀತಿಯ ಮೇಲೆ ತಪ್ಪಾಗಿ ಭಾವಿಸಿದ್ದಾರೆ. ಆದರೆ ಅವರಿಗೆ ಲೈಂಗಿಕ ಜೀವನದ ಮೇಲೆ ಒಂದು ಚೂರು ಆಸಕ್ತಿ ಇರಲಿಲ್ಲ. ಶಾರದಾದೇವಿಯವರು ರಾಮಕೃಷ್ಣರ ಸೇವೆ ಮಾಡುತ್ತಿದ್ದರು. ರಾಮಕೃಷ್ಣರು ಶಾರದಾದೇವಿಯವರನ್ನು ತಾಯಿ-ಮಗು ಭಾವನೆಯಿಂದ ನೋಡುತ್ತಿದ್ದರು. ಶಾರದಾದೇವಿಯವರಿಗೆ ಆರೋಗ್ಯ ಸರಿ ಇಲ್ಲದಿರುವಾಗ ಮಹಿಳೆಯರನ್ನು ಕಳುಹಿಸಿ ಶುಶ್ರೂಷೆ ಮಾಡಿಸುತ್ತಿದ್ದರು. ಶಾರದಾಮಾತೆಗೆ ಒಂದು ಚೂರು ನೋವಾಗದಂತೆ ಹೂವಿನ ತರಹ ನೋಡಿಕೊಳ್ಳುತ್ತಿದ್ದರು. ಇದರಲ್ಲಿ ಯಾಕೆ ಅನುಮಾನ, ತಪ್ಪು ಭಾವನೆ ?? ಅವರ ಗುಣಗಳು, ಆದರ್ಶಗಳು ತುಂಬಾ ಅದ್ಭುತ. ಅವರಿಂದ ವಿವೇಕಾನಂದ ಜಗತ್ತಿನಲ್ಲಿ ಮಹಾನ್ ವ್ಯಕ್ತಿಯಾಗಿದ್ದು !! ಅವರ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ !! ಹಿಂದೂ ಪಂಚಾಂಗದ ಪ್ರಕಾರ ಇಂದು ಅವರ ಜನ್ಮಜಯಂತಿ ಪ್ರಯುಕ್ತ ಅವರ ಜೀವನವನ್ನು ಓದಿ ..
ಬಂಗಾಳದ ಕಾಮಾರಪುಕುರದಲ್ಲಿ ಧರ್ಮಿಷ್ಠ ಬ್ರಾಹ್ಮಣ ಕುಟುಂಬ. ಭಕ್ತಿ-ಭವ್ಯತೆಯ ಸಾತ್ವಿಕ ಜೀವನಕ್ಕೆ ಹೆಸರುವಾಸಿಯಾದ ಮನೆತನ. ಕ್ಷುದೀರಾಮ ಚಟ್ಟೋಪಾಧ್ಯಾಯ ಮನೆಯ ಯಜಮಾನ. ಚಿನ್ನ-ಬೆಳ್ಳಿ, ಹಣ-ಕಾಸು, ಭೂಮಿ-ಕಾಣಿ ಅಷ್ಟಾಗಿ ಏನೂ ಇಲ್ಲದ ದೌಭಾಗ್ಯ ದೇವತೆಯ ದಾಸನಾಗಿದ್ದರೂ, ಪ್ರಾಮಾಣಿಕತೆ, ಸತ್ಯಸಂಧತೆ, ನ್ಯಾಯನಿಷ್ಠತೆ, ಧರ್ಮ ಪರಾಯಣತೆಗೆ ಕಾಮಾರಪುಕುರದಲ್ಲಿಯೇ ಅಲ್ಲ, ನೆರೆಹೊರೆಯ ಗ್ರಾಮಗಳಲ್ಲಿಯೂ ಹೆಸರುವಾಸಿಯಾಗಿದ್ದನು.






