ಹೊಣೆಗಾರಿಕೆ ಮರೆತಿರುವ ಮಾಧ್ಯಮಗಳು…!
– ಸಂತೋಷಕುಮಾರ ಮೆಹೆಂದಳೆ.
(ಇವತ್ತು ಮನೆಯಲ್ಲೊಂದು ಮದುವೆ ನಡೆಯುತ್ತಿದೆ ಎಂದಾದರೆ ಅನಾಮತ್ತು ತಿಂಗಳಗಟ್ಟಲೆಯಿಂದ ತಯಾರಿ ಮಾಡಿಕೊಳ್ಳುವ ಯಜಮಾನ ಮತ್ತವನ ಕುಟುಂಬ ಕೊನೆಯ ಕ್ಷಣದಲ್ಲಿ ಎನೋ ಮರೆತು ಬಿಟ್ಟಿರುತ್ತದೆ. ಮಂಟಪದಲ್ಯಾರೊ ಅದಕ್ಕಾಗಿ ಓಡಾಡುತ್ತಾರೆ. ಕೊನೆಗೆಲ್ಲಾ ಸಾಂಗವಾಗುತ್ತದೆ. ಒಂದು ಟೂರ್ ಅಂತಾ ಹೊರಟವರು ಅಯ್ಯೋ ಅದನ್ನು ಮರೆತು ಬಂದೆನೆನ್ನುವುದೇ ಸಾಮಾನ್ಯ ಆಗಿರುವಾಗ ನೂರೂ ಚಿಲ್ರೆ ಕೋಟಿ ಜನರನ್ನು ಸಂಭಾಳಿಸುವ ನಾಯಕ ಭವಿಷ್ಯಕ್ಕಾಗಿ ಅನಿವಾರ್ಯವಾಗಿ ಧೃಢ ನಿರ್ಧಾರ ಕೈಗೊಂಡು ಅಲ್ಲಲ್ಲಿ ಕೊಂಚ ಕ್ಯೂ ನಿಲ್ಲಿಸಿದಾಗಲೂ ಅದು ಕಾಮನ್ ಮ್ಯಾನ್‍ಗೆ ಹಬ್ಬದಂತೆ ಅನ್ನಿಸುತ್ತಿದ್ದಾಗಲೂ, ಏನು ಪ್ರಕಟಿಸಬೇಕು ಪ್ರಕಟಿಸಬಾರದು ಎನ್ನುವ ಪರಿಜ್ಞಾನ ಮಾಧ್ಯಮಗಳಿಗಿರಲೇ ಬೇಕಿತ್ತು.. ) ಮತ್ತಷ್ಟು ಓದು 
ಪ್ರಧಾನಿಗಳ ನಡೆಯ ಹಿಂದೆ ಎಷ್ಟೆಲ್ಲ ಚಿಂತನೆ ಇದೆಯೆಂದರೆ…
– ರೋಹಿತ್ ಚಕ್ರತೀರ್ಥ
ಪ್ರಧಾನಿ ನರೇಂದ್ರ ಮೋದಿ ನವೆಂಬರ್ 8ರಂದು ಸಂಜೆ ಮಾಡಿದ ಭಾಷಣದಲ್ಲಿ ಐನೂರು ಮತ್ತು ಸಾವಿರ ರುಪಾಯಿ ಮುಖಬೆಲೆಯ ನೋಟುಗಳನ್ನು ಸರಕಾರ ವಾಪಸು ಪಡೆಯಲಿದೆ ಎಂಬ ಘೋಷಣೆ ಮಾಡಿದರು. ಈ ಕಾರ್ಯಾಚರಣೆ 4 ವಿಷಯಗಳನ್ನು ಗುರಿಯಾಗಿಟ್ಟುಕೊಂಡಿದೆ: ಭ್ರಷ್ಟಾಚಾರ, ಕಪ್ಪುಹಣ, ಭಯೋತ್ಪಾದನೆ ಮತ್ತು ಖೋಟಾನೋಟು. ಈ ನಾಲ್ಕೂ ವಿಷಯಗಳು ಒಂದಕ್ಕೊಂದು ತಳುಕು ಹಾಕಿಕೊಂಡಿರುವುದರಿಂದ ಅವನ್ನು ಒಟ್ಟಾಗಿ ಪರಿಹರಿಸುವ ಇಲ್ಲವೇ ನಿಶ್ಶಕ್ತಗೊಳಿಸುವ ಅತ್ಯಂತ ಪ್ರಬಲ, ಪರಿಣಾಮಕಾರಿ ಪರಿಹಾರದ ಅಗತ್ಯ ಹಲವು ವರ್ಷಗಳಿಂದ ಇತ್ತು. ಹತ್ತು ವರ್ಷ ದೇಶವನ್ನು ಆಳಿದ ನಾಮಕಾವಾಸ್ತೆ ಆರ್ಥಿಕತಜ್ಞರಿಗಾಗದ ಗಟ್ಟಿ-ದಿಟ್ಟ ನಡೆಯನ್ನು ಮೋದಿ ತೋರಿಸಿ ನಾಯಕತ್ವದಲ್ಲಿ ಜ್ಞಾನದ ಜೊತೆ ಧೈರ್ಯವೂ ಬೇಕೆಂಬ ಸಂದೇಶ ರವಾನಿಸಿದ್ದಾರೆ. ಮತ್ತಷ್ಟು ಓದು 
ಮೋದಿಜಿ ಮಾಡುವುದೆಲ್ಲ ವೋಟಿಗಲ್ಲಾ…!
– ವಿಕ್ರಮ್ ಎಂ.ಆರ್
ನಲವತ್ತು ವರ್ಷಗಳಿಂದ ಹಾಗೆಯೇ ಮೂಲೆ ಗುಂಪಾಗಿ ಬಿದ್ದಿತ್ತು. 1973ರಲ್ಲಿ ಇಂದಿರಾಗಾಂಧಿ OROP ಪ್ರಸ್ತಾಪವನ್ನೇ ಕಿತ್ತು ಎಸೆದಿದ್ದರು. ಇಂದು ಮೋದಿ ಸರ್ಕಾರ ದೇಶಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಸೈನಿಕರ ಕನಸನ್ನು ನನಸು ಮಾಡಿದೆ. GST ಎಷ್ಟು ವರ್ಷದಿಂದ ಚರ್ಚೆಯಲ್ಲಿತ್ತು, ನೀವೇ ವಿಚಾರ ಮಾಡಿ! ಗಾಂಧಿ ಮನೆತನದ ತಂದಿಟ್ಟ ನೂರೆಂಟು ವಿಘ್ನಗಳ ನಡುವೆಯೂ ಮೋದಿಜಿ GST ಬಿಲ್ಲನ್ನು ಸಂಸತ್ತಿನಲ್ಲಿ ತಂದು ಎರಡೂ ಸದನದಲ್ಲಿ ಮಂಡನೆ ಮಾಡಿ ಎಲ್ಲರ ಒಪ್ಪಂದ ಪಡೆದು ಪಾಸು ಮಾಡಲಾಗಿದೆ. ಪ್ರಧಾನಮಂತ್ರಿ ಧನ ಜನ ಯೋಜನೆ ಅಸ್ತಿತ್ವಕ್ಕೆ ಬಂದಾಗಿನಿಂದ ಎಷ್ಟೋ ಕೋಟಿ ಬಡ ಜನರು ಬ್ಯಾಂಕಿನಲ್ಲಿ ತಮ್ಮ ಖಾತೆ ಹೊಂದಿದ್ದಾರೆ. ಮೊದಲು ಅವರಿಗೆ ಸಿಗಬೇಕಾದ ಹಣ ಕೈಗೆ ಬರುತ್ತಿರಲಿಲ್ಲ ಆದರೆ ಈಗ ನೇರವಾಗಿ ಅವರ ಖಾತೆಗೆ ಜಮಾ ಆಗುತ್ತದೆ. ನಮ್ಮ ಕಂಪನಿಯಲ್ಲಿರುವ ಕಾಂಟ್ರಾಕ್ಟ್ ಕೆಲಸಗಾರನೊಬ್ಬ ಹೀಗೆ ಹೇಳುತ್ತಾನೆ “ಸರ್, ಮೊದಲು ನೂರು ರೂಪಾಯಿ ವೇತನ ಇದ್ದರೆ ಅದರಲ್ಲಿ ಇಪ್ಪತ್ತು ರೂಪಾಯಿಯನ್ನು ಮೇಲ್ವಿಚಾರಕ ಇಟ್ಟುಕೊಂಡು ಉಳಿದಿದ್ದನ್ನು ನನಗೆ ಕೊಡುತ್ತಿದ್ದ ಆದರೆ ಈಗ ನೇರವಾಗಿ ನೂರು ರುಪಾಯಿ ನನ್ನ ಬ್ಯಾಂಕಿಗೆ ಬರುತ್ತದೆ”. ಇದು ಒಂದು ಉದಾಹರಣೆ ಅಷ್ಟೇ, ಇಂತಹ ಸಾವಿರ ನಿದರ್ಶನಗಳನ್ನು ಹಂಚಿಕೊಳ್ಳಬಹುದು. ಇವೆಲ್ಲ ಒಂದಲ್ಲಾ ಒಂದುಕಡೆ ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಆದರೆ ಮೋದಿ ಸರ್ಕಾರ ಏನೇ ಮಾಡಿದರೂ ಕೆಲವರಿಗೆ ಉರಿ. ವಿರೋಧ ಪಕ್ಷ ಅಥವಾ ಕೆಲವು ಬುದ್ಧಿಜೀವಿಗಳು ಮೋದಿಜಿಯವರ ಪ್ರತಿ ಪ್ರಯತ್ನವನ್ನೂ ವಿರೋಧಿಸುವುದು ಯಾತಕ್ಕೆ? ಮಾಡಬೇಕು ಇಲ್ಲವೇ ಮಾಡಲು ಬಿಡಬೇಕು. ಅರವತ್ತು ವರ್ಷವಾಯಿತು, ಇನ್ನೂ ದೇಶ ಎಷ್ಟು ಮುಂದುವರಿಯಬೇಕೋ ಅಷ್ಟು ಮುಂದುವರಿದಿಲ್ಲ. ಮೋದಿಜಿ ಬಂದಾಗಿನಿಂದ ಒಂದು ರಿದಮ್ ಸಿಕ್ಕಿದೆ ಅದನ್ನು ಹಾಳು ಮಾಡಲು ಕಾರಣಗಳೇನು? ಏನೇ ಮಾಡಿದರೂ ಅದು ಚುನಾವಣೆಯಲ್ಲಿ ಮತ ಗಳಿಸಲೇ ಮಾಡಿದ್ದು ಎಂದು ಡಂಗುರ ಬಾರಿಸುತ್ತ ಸಾರುವ ಈ ಎಡಬಿಡಂಗಿಗಳ ಉದ್ದೇಶವಾದರೂ ಏನು? ಮತ್ತಷ್ಟು ಓದು 
ಅಬ್ ಕಿ ಬಾರ್, ‘ಟ್ರಂಪ್ ಸರ್ಕಾರ್’
– ಶ್ರೇಯಾಂಕ ಎಸ್ ರಾನಡೆ
ಎಲ್ಲಾ ರಾಜಕೀಯ ಪಂಡಿತರ ಲೆಕ್ಕಾಚಾರವನ್ನು ತಲೆಕೆಳಗೆ ಮಾಡುವ ಮೂಲಕ, ಸ್ಥಾಪಿತ ರಾಜಕೀಯ ಶಕ್ತಿಗಳನ್ನು ಬೀಳಿಸಿದ ಡೊನಾಲ್ಡ್ ಟ್ರಂಪ್ ಅಮೆರಿಕದ 45ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದು ಮೋದಿಯವರನ್ನು ಟ್ರಂಪ್ ರೀತಿಯ ವ್ಯಕ್ತಿತ್ವದವರೆಂದೋ, ಟ್ರಂಪ್ ಮೋದಿಯವರಷ್ಟೇ ಉತ್ತಮರೆಂದೋ ಹೇಳುವ ಪ್ರಯತ್ನವಲ್ಲ. ಆದರೆ ಭಾರತದ ಅನುಕೂಲಕ್ಕೆ ತಕ್ಕಂತಹ ಸೂಕ್ತ ಸಮಯ, ವಾತಾವರಣ “ನ ಭೂತೋ ಭವಿಷ್ಯತಿಃ” ಎಂಬಂತೆ ಅಮೆರಿಕದಲ್ಲಿ ನಿರ್ಮಾಣಗೊಂಡಿದೆ. 21ನೇ ಶತಮಾನ ಭಾರತ ಹಾಗೂ ಉಪಖಂಡದ್ದಾಗಲು ಭಾರತ ಈ ಸಮಯವನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು. ಭಾರತ ಹಾಗೂ ಅಮೆರಿಕದ ಸಮಾನ ಆಸಕ್ತಿಗಳನ್ನು ದ್ವಿಪಕ್ಷೀಯ ಬಾಂಧವ್ಯದ ಮತ್ತೊಂದು ದಿಕ್ಕಿಗೆ ಕೊಂಡೊಯ್ಯಬೇಕು. ಮತ್ತಷ್ಟು ಓದು 
ಯಾರಿಗೂ ಬೇಡವಾದ ಪಾತಕಿ.. ದಾವೂದ್..!
– ಸಂತೋಷಕುಮಾರ ಮೆಹೆಂದಳೆ.
( ಮೈಗಿಷ್ಟು ಪುಕ್ಕಟ್ಟೆ ಅನ್ನ, ತಂತಮ್ಮ ಮೋಜು ಮಸ್ತಿಯ ಚಟಕ್ಕಿಷ್ಟು ಯಾರದ್ದೋ ತಲೆ ಒಡೆದ ದುಡ್ಡು.. ಅದಕ್ಕೆ ಸರಿಯಾಗಿ ಮೆರೆಯೋದಕ್ಕೆ ಪಾಪಿಲೋಕದ ಕಡುಗತ್ತಲೆಯ ಸಾಮ್ರಾಜ್ಯ. ಕೊನೆಗೆ ಇದೆಲ್ಲದರಿಂದ ತಲೆ ತಪ್ಪಿಸಿಕೊಂಡು ಬದುಕಿಕೊಳ್ಳಲು ತೀರ ಪರಮ ನಿರ್ಲಜ್ಯ ಪಾಕಿಸ್ತಾನ. ಇಷ್ಟನ್ನಿಟ್ಟುಕೊಂಡು ಕತ್ತಲ ಲೋಕವನ್ನು ಆಳುತ್ತೇನೆಂದು ಹೊರಟು ಬಿಡುವವರು ತಮ್ಮ ಕೊನೆಯ ಕಾಲಾವಧಿಯುದ್ದಕ್ಕೂ ಇದೆಲ್ಲಾ ಶಾಶ್ವತ ಎಂದೇ ತಿಳಿದಿರುತ್ತಾರೆ. ದುರಾದೃಷ್ಟ ಮತ್ತು ನೂರಾರು ಹೆಣ್ಣುಮಕ್ಕಳ ಶಾಪ ಅವರನ್ನು ಜೀವಂತ ನರಕಕ್ಕೆ ನೂಕುತ್ತದೆ ಎನ್ನುವುದಕ್ಕೆ ಅಷ್ಟೆ ಉದಾಃ ಗಳು ನಮ್ಮ ಮುಂದಿವೆ. ಆದರೂ ಪಾತಕ ಲೋಕದ ಪಾತಕಿಗಳು ಬುದ್ಧಿ ಕಲಿತದ್ದೇ ಇಲ್ಲ. ಅದರಲ್ಲೂ ಪಾಕಿಸ್ತಾನದ ಕೊಚ್ಚೆಯಲ್ಲಿ ಹೊರಳುವ ಕ್ರಿಮಿಗಳಿಗೆ ಬುದ್ಧಿ ಮತ್ತು ವಿವೇಚನಾ ಶಕ್ತಿ ಬಿಟ್ಟು ಬೇರೆಲ್ಲ ಬೆಳೆಯುತ್ತದೆ. ಅದೇ ವಿನಾಶಕ್ಕೂ ಕಾರಣವಾಗುತ್ತದೆ. ಇಂಥ ಕೊಚ್ಚೆಯಂತಿರುವ ಕಥಾನಕದ ಕೊನೆಯ ತುಂಡು, ಅರೆಜೀವವಾಗಿರುವ ಪಾತಕಿ ತನಗೇ ತಾನೇ ಡಾನ್ ಎಂದು ಕರೆದುಕೊಂಡ ದಾವೂದ್ ಇಬ್ರಾಹಿಂ ಯಾವ ನೆಲಕ್ಕೆ ದ್ರೋಹ ಬಗೆದಿದ್ದನೋ ಅಲ್ಲಿವತ್ತು ಕಾಲೂರುವ ಬಗ್ಗೆ ಚಡಪಡಿಸುತ್ತಿದ್ದಾನೆ. ಆದರೆ ಊರಲು ಒಂದು ಕಾಲೇ ಉಳಿದಿಲ್ಲ. ಬದುಕಿನ ವಿಪರ್ಯಾಸ ಅಂದರೆ ಇದೇ ಅಲ್ಲವೇ..?) ಮತ್ತಷ್ಟು ಓದು 
ಟಿಪ್ಪು ಜಯಂತಿ ಬೇಕಿರುವುದು ಯಾರಿಗೆ ?
– ರೋಹಿತ್ ಚಕ್ರತೀರ್ಥ
ಟಿಪ್ಪು ಜಯಂತಿಯಿಂದ ಯಾರಿಗೆ ಉಪಕಾರ ಎಂದು ಕೆಲವರು ಕೇಳುತ್ತಿದ್ದಾರೆ. ಕಳೆದ ವರ್ಷ ಸರಕಾರ ಪ್ರತಿ ಜಿಲ್ಲಾಡಳಿತಕ್ಕೆ 50,000 ರುಪಾಯಿ, ಪ್ರತಿ ತಾಲೂಕು ಕಚೇರಿಗೆ 25,000 ರುಪಾಯಿ ಕೊಟ್ಟು “ಟಿಪ್ಪು ಸುಲ್ತಾನ್ ಜಯಂತಿಯನ್ನು ಕಡ್ಡಾಯವಾಗಿ ಆಚರಿಸತಕ್ಕದ್ದು” ಎಂಬ ಖಡಕ್ ಸುತ್ತೋಲೆ ಕಳಿಸಿತ್ತು. ನಮ್ಮೂರ ಕಡೆ ಒಂದು ತಾಲೂಕು ಪಂಚಾಯಿತಿಗೂ 25,000 ರುಪಾಯಿಗಳು ಸಂದಾಯವಾಗಿದ್ದವು. ಆ ಕಚೇರಿಯಲ್ಲಿ ನೀರಿನ ವ್ಯವಸ್ಥೆ ಇಲ್ಲ; ಇದ್ದೊಂದು ಕೊಳ ಒಡೆದುಹೋಗಿ ಆರು ತಿಂಗಳ ಮೇಲಾಯಿತು; ಗೋಡೆಗೆ ಸುಣ್ಣಬಣ್ಣ ಹೊಡೆಸದೆ ನಾಲ್ಕು ವರ್ಷಗಳಾಗುತ್ತ ಬಂತು; ಊರಿನಲ್ಲೊಂದು ಸಣ್ಣ ಸಂಕ ಕಟ್ಟಿಸಬೇಕೆಂದು ಬೇಡಿಕೆ ಇಟ್ಟೂ ಇಟ್ಟೂ ಅರ್ಜಿ ಕೊಟ್ಟೂ ಕೊಟ್ಟೂ ಬೇಸತ್ತು ಕೊನೆಗೆ ಊರವರೇ ಒಂದಷ್ಟು ದುಡ್ಡು ಹಾಕಿ ಏನೋ ತಮ್ಮ ಸಂಕ ತಾವೇ ಕಟ್ಟಿಕೊಂಡಿದ್ದಾರೆ. ಆ ತಾಲೂಕಿನ ಕೆಲವು ರಸ್ತೆಗಳಿಗೆ ಒಂದೊಮ್ಮೆ ಓಬೀರಾಯನ ಕಾಲದಲ್ಲಿ ಜಲ್ಲಿ ಹೊಡೆಸಿದ್ದು, ಅದೀಗ ಡಾಂಬರಿಗೆ ಅನುದಾನ ಸಿಗದೆ ಮತ್ತೆ ಮಣ್ಣಿನ ರಸ್ತೆಯಾಗುವ ಸ್ಥಿತಿಗೆ ಬಂದಿದೆ. ಮತ್ತಷ್ಟು ಓದು 
ಸಮಾಜ ಒಡೆಯುವ ಜಯಂತಿ, ಉತ್ಸವಗಳು ಬೇಕೆ…?
– ಸಂತೋಷಕುಮಾರ ಮೆಹೆಂದಳೆ.
( ಬುದ್ಧಿಜೀವಿಗಳು ಆಳುವವರನ್ನು ಮೆಚ್ಚಿಸಲು ಬರೆದ ಲೇಖನಗಳನ್ನು ನಾನು ನೋಡಿದ್ದೇನೆ. ಟಿಪ್ಪು ರಾಕೇಟ್ ಹಾರಿಸಿದ, ಟಿಪ್ಪು ತನ್ನ ಮಕ್ಕಳನ್ನು ಬಲಿಕೊಟ್ಟ ಎನ್ನುವವರಿಗೆ, ಸಾಲುಸಾಲಾಗಿ ತಮ್ಮ ಗಂಡಂದಿರನ್ನೇ ಇವತ್ತು ಕಾಶ್ಮೀರ ಗಡಿಯಲ್ಲಿ ನಮ್ಮ ಮಹಿಳೆಯರು ತ್ಯಾಗಮಾಡುತ್ತಿದ್ದರೆ, ಅವರ ಮಕ್ಕಳು ಅಪ್ಪನ ಹೆಣಕ್ಕೆ ಸೆಲ್ಯೂಟ್ ಹೋಡೆದು `..ಜೈ ಹಿಂದ್..’ ಎಂದು ಕಿರುಚುತ್ತಾ ಕಣ್ಣೀರು ಹಾಕುತ್ತವಲ್ಲ ಅದು ಯಾವನಿಗೂ ಕಾಣುತ್ತಲೇ ಇಲ್ಲವಲ್ಲ. )
ಇಂದು ಜಯಂತಿ, ಒಂದು ಹಬ್ಬ ಹರಿದಿನ ಎನ್ನುವುದು ಖುಶಿಯಾಗಿ ಮನೆ ಮತ್ತು ಕುಟುಂಬ ಕೊನೆಗೆ ಸಮಾಜವೊಂದು ಸಂಪೂರ್ಣವಾಗಿ ಪಾಲ್ಗೊಳ್ಳುವಿಕೆಯ ಸಾಮೂಹಿಕ ಹಬ್ಬವಾಗಿರುತ್ತದೆಯೇ ಹೊರತಾಗಿ ಮುಖ ತಿರುವುವ, ಇದ್ದಬದ್ದ ಸಾಮರಸ್ಯದ ಸಂಬಂಧವೂ ಮುರಿದುಕೊಳ್ಳುವ ಜಾಡ್ಯವಾಗಬಾರದು. ಇವತ್ತು ಮನೆ, ವಠಾರಗಳಲ್ಲಿ ನಡೆಯುವ ಸಮಾರಂಭಗಳನ್ನು ಗಮನಿಸಿ. ಮನೆಯಲ್ಲಿಷ್ಟು ಸಂತಸ, ನೆಂಟರಿಷ್ಟರಿಗೆ ಸಿಹಿ, ಮಾಂಸಾಹಾರಿಗಳಾಗಿದ್ದರೆ ಕೊನೆಯ ದಿನ ಬಾಡೂಟ ಹಾಕಿಸಿ ಹಿಂದಿನ ಇದ್ದಬದ್ದ ಕಹಿಯನ್ನೂ ಮರೆಯುವ ಸಂಪ್ರದಾಯ ಮತ್ತು ಸಾಮಾಜಿಕ ಅಗತ್ಯತೆಗಳನ್ನು ಗಮನಿಸಿಯೇ ನಮ್ಮ ನಮ್ಮಲ್ಲಿ ಆಯಾ ಕಾಲವಾರು ಮತ್ತು ಸಾಮಾಜಿಕ ನಡವಳಿಕೆ ಜಾತಿ ಧರ್ಮಾಧಾರಿತ ಆಚರಣೆಗಳು ಬೆಳಕಿಗೆ ಬಂದವು. ಮತ್ತಷ್ಟು ಓದು 
ದೀಪಾವಳಿಯ ಬೆಳಕಿಗೆ ಶಾಶ್ವತ ಕತ್ತಲೆ ತುಂಬಿದ ಸೈತಾನ
– ಸಂತೋಷ್ ತಮ್ಮಯ್ಯ
ಮಂಡ್ಯದಲ್ಲಿ ಅಕಸ್ಮಾತ್ತಾಗಿ ಪರಿಚಯವಾದ ಒಬ್ಬರು ತನ್ನನ್ನು ಸೂರಜ್ ರಂಗಯ್ಯನ್ ಎಂದು ಹೇಳಿಕೊಂಡರು. ಕನ್ನಡದ್ದಲ್ಲದ ಕನ್ನಡದ ಹೆಸರು. ಕನ್ನಡದಂತೆಯೇ ಕೇಳಿಸುವ ಆ ಹೆಸರಿನ ಮೂಲವನ್ನು ಹೇಳುತ್ತಾ ಹೋದಂತೆ ಅದೊಂದು ಕಥೆಯೇ ಆದೀತು. ಆ ಕಥೆ ಮತ್ತೆಲ್ಲಿಗೋ ತಿರುವನ್ನು ಪಡೆದುಕೊಳ್ಳತೊಡಗಿತು. ಆ ಕಥೆ ಇತಿಹಾಸವಾಯಿತು. ಇತಿಹಾಸ ಭೀಕರತೆಯನ್ನು ಹೇಳಿತು. ಭೀಕರತೆ ಸೂತಕವನ್ನು ಹೇಳಿತು. ಆ ಇತಿಹಾಸ ವಿಚಿತ್ರವಾಗಿತ್ತು. ಅಪರೂಪವಾಗಿತ್ತು. ನೋವಿನಿಂದ ಕೂಡಿತ್ತು. ಆ ಇತಿಹಾಸ, ಭೀಕರತೆ, ನೋವಿನ ಉಳಿಕೆಯಂತೆ ಸೂರಜ್ ರಂಗಯ್ಯನ್ ಕಂಡರು. ಸೂಕ್ಷ್ಮವಾಗಿ ನೋಡಿದರೆ ಇನ್ನೂರು ವರ್ಷಗಳ ಹಿಂದಿನ ನೋವು ಇಂದೂ ಅವರ ಮುಖದಲ್ಲಿ ಇಣುಕುತ್ತಿತ್ತು. ಇತಿಹಾಸವನ್ನು ಹೇಳುತ್ತಾ ಹೇಳುತ್ತಾ ಸೂರಜ್ “ಹಾಗಾಗಿ ನಾವು ಇಂದಿಗೂ ದೀಪಾವಳಿ ಆಚರಿಸುತ್ತಿಲ್ಲ” ಎಂದು ಮುಗಿಸಿದರು. ಸೌಜನ್ಯಕ್ಕೂ ಹಬ್ಬಕ್ಕೆ ಕರೆಯಲಾರದ ಸ್ಥಿತಿ ಅವರದ್ದು. ಅವರು ಮಂಡ್ಯದ ಸದ್ಗಹಸ್ಥರು. ಅತಿ ವಿರಳ ಸಂಖ್ಯೆಯಲ್ಲಿರುವ ಮಂಡಯಂ ಅಯ್ಯಂಗಾರರರು ಎಂಬ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಮತ್ತಷ್ಟು ಓದು 
ದಲಿತರ ಹೆಗಲ ಮೇಲೆ ಬಂದೂಕಿಟ್ಟಿರುವ ಕೈಗಳು ಯಾರದ್ದು?
– ರಾಕೇಶ್ ಶೆಟ್ಟಿ
‘ಅಧಿಕಾರದಲ್ಲಿರುವ ಕಾಂಗ್ರೆಸ್ಸಿಗಿಂತಲೂ, ಅಧಿಕಾರದಲ್ಲಿರದ ಕಾಂಗ್ರೆಸ್ಸ್ ದೇಶಕ್ಕೆ ಅಪಾಯಕಾರಿ’ ಅಂತ ಗೆಳೆಯನೊಬ್ಬ ಆಗಾಗ್ಗೆ ಹೇಳ್ತಾ ಇರ್ತಾನೆ. 2014ರ ಮೇ 16 ರಂದು ಬಿಜೆಪಿ ಅಧಿಕಾರ ಹಿಡಿದ ದಿನದಿಂದ ಇವತ್ತಿನವರೆಗೂ ಕಾಂಗ್ರೆಸ್ಸ್ ಪಕ್ಷದವರ ಆರ್ಭಟಗಳನ್ನು ನೋಡಿದರೇ, ಗೆಳೆಯನ ಮಾತು ನಿಜವೆನಿಸುತ್ತದೆ. 2014ರ ಲೋಕಸಭಾ ಚುನಾವಣೆಯ ಫಲಿತಾಂಶ ಈ ಹಿಂದಿನ ಯಾವುದೇ ಚುನಾವಣೆಗಳಂತಿರಲಿಲ್ಲ. ಕಾಂಗ್ರೆಸ್ ಎಂಬ ಪುರಾತನ ಪಕ್ಷ ಮಕಾಡೆ ಮಲಗಿದರೇ, ಉಳಿದ ಅವಕಾಶವಾದಿ ಪ್ರಾದೇಶಿಕ, ಕೌಟುಂಬಿಕ, ಸೆಕ್ಯುಲರ್, ಕಮ್ಯುನಿಸ್ಟ್ ಪಕ್ಷಗಳು ಹೇಳ ಹೆಸರಿಲ್ಲದಂತಾದವು. ಮತ್ತಷ್ಟು ಓದು 
ಪಕ್ಷ ರಾಜಕಾರಣದ ಮರ್ಮಗಳು
ಡಾ. ಸಂತೋಷ್ ಕುಮಾರ್ ಪಿ.ಕೆ
ಶಿವಮೊಗ್ಗ
ರಾಜಕಾರಣವೆಂಬುದು ಇಂದಿಗೆ ಪಕ್ಷಕ್ಕೆ ಮಾತ್ರ ಸೀಮಿತವಾಗಿ, ಪ್ರದೇಶಗಳು ಎರಡನೇ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಕರ್ನಾಟಕ ಸರ್ಕಾರವೆಂಬುದು ಕಾಂಗ್ರೆಸ್ ಸರ್ಕಾರ ಎಂಬ ಮಿತಿಯ ಒಳಗೆ ಕಾರ್ಯನಿರ್ವಹಿಸಲು ಇಚ್ಚಿಸುತ್ತದೆಯೇ ಹೊರತು ರಾಜ್ಯ ಸರ್ಕಾರವಾಗಿ ಅಲ್ಲ. ಇದು ಕಾಂಗ್ರೆಸ್ ಪಕ್ಷದ ಮಿತಿ ಎಂದು ಭಾವಿಸದೆ ಆಡಳಿತಕ್ಕೆ ಬರುವ ಬಹುತೇಕ ಪಕ್ಷಗಳ ಹಣೆಬರಹವಾಗಿದೆ. ಆದ್ದರಿಂದ ಸರ್ವತೋಮುಖ ಅಭಿವೃದ್ಧಿಯ ಬದಲು ಭಾಗಶಃ ಅಭಿವೃದ್ಧಿಯ ಕಾರ್ಯಚಟುವಟಿಕೆಗಳನ್ನು ಸರ್ಕಾರಗಳು ಕೈಗೆತ್ತಿಕೊಳ್ಳುತ್ತವೆ. ಹಾಗಾಗಿ ತುಷ್ಟೀಕರಣದ ರಾಜಕಾರಣ ಹೆಚ್ಚಾಗಿ ಇಂದು ಕಾಣಬಹುದಾಗಿದೆ. ಮತ್ತಷ್ಟು ಓದು 




