ವಿಷಯದ ವಿವರಗಳಿಗೆ ದಾಟಿರಿ

Posts from the ‘ರಾಜಕೀಯ’ Category

7
ಮಾರ್ಚ್

ಬಿಜೆಪಿಯ ಕಮಾಂಡಿಂಗ್ ಲೀಡರ್ಗೊಂದು ಪತ್ರ

-ಅರವಿಂದ್

ನಿಮ್ಮ ಹುಟ್ಟು ಹಬ್ಬಕ್ಕೆ ಕರ್ನಾಟಕದ ಜನತೆಯ ಪರವಾಗಿ ಹಾರ್ದಿಕ ಶುಭಾಶಯಗಳು. ಜೀವನದ ಸಂಜೆಯಲ್ಲಿ ೭೦ ವರ್ಷಗಳನ್ನು ದಾಟಿಹೊರಟಿರುವಿರಿ. ನಿಮ್ಮ ಅನುಭವ ನಿಜಕ್ಕೂ ಅವಿಸ್ಮರಣೀಯವಾದದ್ದೇ. ಮುಖ್ಯಮಂತ್ರಿಯಾಗಿದ್ದಾಗಲೂ ನೀವು ಇಷ್ಟು ವಿಜೃಂಭಣೆಯಿಂದ ಆಚರಿಸಿಕೊಳ್ಳದ ಹುಟ್ಟುಹಬ್ಬ, ಅಧಿಕಾರ ಕಳೆದುಕೊಂಡ ನಂತರ ಆಚರಿಸಿಕೊಂಡದ್ದು ನಿಮ್ಮ ವ್ಯೆರಿಗಳಿಗೆ ಒಂದು ಕಡೆ ನೋವಾದರೆ, ಮತ್ತೊಂದಿಷ್ಟು ಸಂತೋಷ ಸಾರ್. ನೋವು ಯಾಕೆಂದರೆ ನೀವು ೭೦ವರ್ಷವಾದರೂ ಇನ್ನು ಅಧಿಕಾರದ ಆಸೆ ಹೋಗದೇ ಇರೋದು. ಸಂತೋಷ ಏಕೆಂದರೆ ನೀವು ನಿಮ್ಮ ಪ್ರತಿ ಕೆಲಸಗಳಲ್ಲೂ ಅಪವಾದಕ್ಕೀಡಾಗೋದು.

ಒಮ್ಮೆ ಮನಬಿಚ್ಚಿ ಮಾತಾಡಿ ಸಾರ್, ನನ್ನ ಕೆಳಗಿನ ಕೆಲವು ಪ್ರಶ್ನೆಗಳಿಗೆ ಉತ್ತರಿಸೋಕೆ ಸಾಧ್ಯವಾದ್ರೆ ಉತ್ತರಿಸಿ. ಆಗದಿದ್ರೆ ಬಿಡಿ, ನಾವು ನಿಮ್ಮನ್ನು ಒಪ್ಪಿಕೊಂಡಿರುವ ತಪ್ಪಿಗೆ ಈ ಪ್ರಶ್ನೆಗಳ ಪ್ರಶ್ನೆಯೊಳಗೇ ಅಪ್ಪಿಕೊಂಡಿರ್ತೀವಿ.

ಮತ್ತಷ್ಟು ಓದು »

5
ಮಾರ್ಚ್

ಮಾಧ್ಯಮದವರು ನಡೆದುಕೊಂಡ ರೀತಿ ಸರಿಯೇ…?

-ಸತೀಶ್ ಡಿ. ಆರ್. ರಾಮನಗರ

ಟೀವಿ ವಾಹಿನಿಯವರು ನಡೆದುಕೊಂಡ ರೀತಿಯ ಬಗ್ಗೆ ಇಷ್ಟೊಂದು ಬಹು ಪರಾಕ್ ಹೇಳುತಿದ್ದೀರಲ್ಲ. ನಿನ್ನೆ ನಡೆದ ಘಟನೆಗಳ ಬಗ್ಗೆ ಅದರ ಹಿನ್ನೆಲೆಯನ್ನು ಸ್ವಲ್ಪವಾದರೂ ಮನುಷ್ಯತ್ವದಿಂದ ಯೋಚಿಸಿದ್ದೀರ. ವಸ್ತು ನಿಷ್ಠೆ ಮೆರೆವ ಮಾಧ್ಯಮದವರು ನಿನ್ನೆ ಮಾಡಿದ್ದು ಏನು. ಪೋಲೀಸಿನವರು ಕೋರ್ಟ್ ಹಾಲ್ ಗಳಿಗೆ ನುಗ್ಗಿ ವಕೀಲರನ್ನು ಮನ ಬಂದಂತೆ ತಳಿಸುತಿದ್ದರೆ ಮಾಧ್ಯಮದವರು ಅದನ್ನು ಏಕೆ ಪ್ರಸಾರ ಮಾಡಲಿಲ್ಲ. ವಕೀಲ ಸಿಂಬಲ್ ಇರುವ ಕಾರು ಬೈಕ್ಗಳನ್ನು ಎಲ್ಲರ ಮುಂದೆಯೇ ಸುಡುತಿದ್ದ ಪೋಲೀಸಿನವರ ಕೃತ್ಯವನ್ನು ಏಕೆ ಮಾಧ್ಯಮದವರು ಪ್ರಸಾರ ಮಾಡಲಿಲ್ಲ. ಮಾರಣಾಂತಿಕ ಹಲ್ಲೆಗೆ ಒಳಗಾಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿರುವ ವಕೀಲರನ್ನು ಯಾವೊಬ್ಬ ಮಾಧ್ಯಮದವರು ಏಕೆ ತೋರಿಸಲಿಲ್ಲ. ಮೊದಲು ಮಾಧ್ಯಮದವರೇ ಪೋಲೀಸೀವರಿಗೆ ಧಿಕ್ಕಾರ ಕೂಗುತಿದ್ದವರು, ರೆಡ್ಡಿ ಬೆಂಬಲಿಗರೆಂದು ಬಂದಿದ್ದ ಕರಿ ಕೋಟು ದರಿಸಿದ್ದ ಕೆಲವು ವಕೀಲರು ತೆಗೆದ ಜಗಳಕ್ಕೆ ಇಡೀ ವಕೀಲ ಸಮುದಾಯವನ್ನು ಭಯೋತ್ಪಾದಕರ ರೀತಿ ಚಿತ್ರಿಸುತಿದ್ದೀರಲ್ಲ ಏಕೆ. ಬಾರ್ ಅಸೋಸಿಯೇಶನ್, ಕ್ಯಾಂಟೀನ್, ನ್ಯಾಯಾಲಯದ ಒಳ ಹೊಕ್ಕು, ಕುಳಿತಿದ್ದ ವಕೀಲರನ್ನು ನಾಯಿಗೆ ಬದಿದಂತೆ ಬಡಿದು ರಕ್ತ ಹರಿಸಿದ್ದಾರಲ್ಲ ಪೋಲೀಸಿನವರು ಅವರ ಬಗ್ಗೆ ಏಕೆ ಮೌನವಾಗಿದ್ದೀರಿ.

ಮತ್ತಷ್ಟು ಓದು »

5
ಮಾರ್ಚ್

ಉತ್ತರ ಪ್ರದೇಶದಲ್ಲಿ ಆನೆಗೆ ಬಲ ಬರಲಿದೆಯೇ ಅಥವಾ ಸಮ್ಮಿಶ್ರ ಸರ್ಕಾರ ರಚನೆಯಾಗಲಿದೆಯೇ ?

-ನಾಗಣ್ಣ ಜಿಕೆ

ಮಾಚ್೯ ನ 6ರಂದು 5 ರಾಜ್ಯಗಳ ಚುನಾವಣಿ ಫಲಿತಾಂಶ ಘೋಷಣೆಯಾಗಲ್ಲಿದ್ದು ಇಡಿ ದೇಶ ಐದು ರಾಜ್ಯಗಳ ಕಡೆ ಗಮನ ಹರಿಸಿದೆ. ಮುಖ್ಯವಾಗಿ ಉತ್ತರಪ್ರದೇಶದ ಚುನಾವಣಾ ಫಲಿತಾಂಶ ಜನತೆಯಲ್ಲಿ ಕುತೂಹಲ ಕೆರಳಿಸಿದೆ ಕಾರಣ ಉತ್ತರಪ್ರದೇಶದ ರಾಜಕಾರಣ ರಾಷ್ಟ್ರರಾಜಕರಣಕ್ಕೆ ದಿಕ್ಸೂಚಿ ಮತ್ತು ನಿಣ೯ಯಕ ಶಕ್ತಿ.
ಉತ್ತರಪ್ರದೇಶದಲ್ಲಿ ಚುನಾವಣಿಗೆ ಸ್ಪಧ೯ಸಿದ್ದ ಪ್ರಮುಖ ರಾಜಕೀಯ ಪಕ್ಷಗಳೆಲ್ಲವೂ ತಮ್ಮ ಪ್ರತಿಷ್ಟೆಯನ್ನು ಪಣಕಿಟ್ಟು ಚುನಾವಣಿ ಆಕಾಡಕ್ಕೆ ದುಮುಕಿದ್ದವು ಇಲ್ಲಿ ಪಕ್ಷಕದ ಸೋಲು ಗೆಲವುಗಿಂತ ವ್ಯಕ್ತಿಗತ ಸೋಲು ಗೆಲವು ಬಹಳ ಮುಖ್ಯವಾದ್ದದ್ದು ಭವಿಷ್ಯದ ಪ್ರಧಾನಿಯೆಂದು ಬಿಂಬಿಸಿಕೊಳ್ಳುತ್ತಿರುವ ರಾಹುಲ್ಗಾಂಧಿ ಮತ್ತೊಂದು ಕಡೆ ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಮಾಯಾವತಿ ಮತ್ತು ಉತ್ತರಪ್ರದೇಶದಲ್ಲಿ ಅಸ್ತಿತ್ವ ಸ್ಥಾಪಿಸಲು ಹೊರಟಿರುವ ಆಖಿಲೇಶ್ ಯಾದವ್ ಇವರ ಸೋಲು ಗೆಲುವೆ ಮುಖ್ಯವಾಗಿದೆ. 2008ರ ವಿಧಾನಸಭಾ ಚುನಾವಣಿಯಲ್ಲಿ ಬಿ.ಎಸ್.ಪಿಗಿದ್ದ ವಚ್ಚ್ರಸ್ಸು ಈ ಚುನಾವಣಿಯಲ್ಲಿ ಇದ್ದಂತೆ ಕಾಣುತ್ತಿಲ್ಲ ಇದಕ್ಕೆ ಹಲವಾರು ಕಾರಣಗಳಿವೆ, ಬಿ.ಎಸ್.ಬಿ ನಾಯಕಿಯಾದ ಮಾಯಾವತಿ ಕಳೆದ ಚುನಾವಣಿಯಲ್ಲಿ ಬ್ರಾಹ್ಮಣರು ಸೇರಿದ್ದಂತೆ ಮೇಲ್ವಗ್ರದವರ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರು ಅದರೆ ಚುನಾವಣಿಯ ನಂತರ ಅವರು ಬ್ರಾಹ್ಮಣರಿಗೆ ಕೊಟ್ಟ ಭರವಸೆಯನ್ನ ಹಿಡೇರಿಸಿಲ್ಲ ಸಹಜವಾಗಿ ಈ ವಗ್ರದ ಜನ ಬೇರೆ ಪಕ್ಷಕ್ಕೆ ಒಲವು ತೋರಿಸಿದ್ದಾರೆ.

ಮತ್ತಷ್ಟು ಓದು »

3
ಮಾರ್ಚ್

” ಅನ್ಯಾಯವಾದಿಗಳ ಹುಟ್ಟಡಗಿ ಪ್ರಜಾ ಪ್ರಭುತ್ವ ವ್ಯವಸ್ಥೆ ಗಟ್ಟಿಗೊಳ್ಳಲಿ”

-ಬನವಾಸಿ ಸೋಮಶೇಖರ್

ಕೆಲವು ಗೂಂಡಾ ವಕೀಲರುಗಳು ಪೂರ್ವಾಗ್ರಹ ಪೀಡಿತರಾಗಿ ಮಾಧ್ಯಮದವರು ಹಾಗೂ ಪೋಲೀಸರ ಮೇಲೆ ಅಮಾನವೀಯ ದೌರ್ಜನ್ಯ,ಹಲ್ಲೆ ನಡೆಸುವ ಮೂಲಕ ನಮ್ಮ ಪವಿತ್ರ ನ್ಯಾಯಾಂಗ ವ್ಯವಸ್ಥೆಗೆ ಅಕ್ಷರಶಃ ಚ್ಯುತಿ ತಂದರು.ಇವರು ತಮ್ಮನ್ನು ಏನೆಂದುಕೊಂಡಿರುವರೋ?

ಪ್ರಜಾಪ್ರಭುತ್ವದ ಸಾರ್ವಭೌಮ ಪರಮಾಧಿಕಾರದ ಉತ್ತುಂಗ ವ್ಯವಸ್ಥೆಯನ್ನು ಹೊಂದಿರುವ ಭಾರತೀಯ ಸಂವಿಧಾನದ ಆಶಯ,ಮೂಲೋದ್ಧೇಶ ಹಾಗೂ ನಿಯಮಗಳ ಮೇಲೆ ದಬ್ಬಾಳಿಕೆ ನಡೆಸಿರುವ ಈ ಅನ್ಯಾಯವಾದಿಗಳ ಹುಟ್ಟಡಗಲೇಬೇಕು.ಸಂವಿಧಾನದ 19 (1) ನೇ ವಿಧಿಗೆ ಕಳಂಕ ತಂದು ಅಭಿವ್ಯಕ್ತಿ ಸ್ವಾತಂತ್ರ್ಯದ  ಹರಣ ಮಾಡಿರುವ ಈ ವಿಕೃತ ಮನಸುಗಳ ಮರ್ಧನ ಆಗಲೇಬೇಕು.ನಮ್ಮ ಪರಂಪರೆಗೆ,ನ್ಯಾಯ ದೇವತೆಯ ಕಣ್ಣಿಗೆ ಮಣ್ಣೆರಚಿರುವ ಈ ಕೂಳರ ಅಟ್ಟಹಾಸದ ಹಿಂದಿನ ಪಟ್ಟಭದ್ರರ ಬಣ್ಣ ಬಯಲಾಗಿ ಪ್ರಜಾಪ್ರಭುವಿಗೆ ಸತ್ಯದರಿವು ಆಗಲೇಬೇಕು.ಮೌಲ್ಯಾಧಾರಿತ ನ್ಯಾಯವಾದಿಗಳ ಮನಸ್ಸನ್ನು ಘಾಸಿಗೊಳಿಸಿರುವ ಈ ಘಟನೆ ಪ್ರಜಾಪ್ರಭುತ್ವವನ್ನೇ ಕಗ್ಗೊಲೆ ಮಾಡುವ ಹುನ್ನಾರುವುಳ್ಳದ್ದು.ಇಂಥ ವಿಚಾರ ಹೀನ,ಬುದ್ಧಿ ಹೀನ,ಅವಿವೇಕಿ ಲಂಪಟರಿಗೆ ಕೈಕೊಳತೊಡಿಸಿ ಜೈಲಿಗಟ್ಟಲೇಬೇಕು.ಬುಡಮೇಲು ಕೃತ್ಯವೆಸಗುವ ಯಾರನ್ನೇ ಆಗಲಿ ರಕ್ಷಿಸುವ,ಹಿನ್ನೆಲೆಯಲ್ಲಿ ಆಶ್ರಯ ನೀಡುವ ಕಾರ್ಯ ಸರ್ವಥಾ ಸಲ್ಲದು.ನಮ್ಮ ಶ್ರೀಮಂತ ಸಂಸ್ಕ್ರತಿ,ಪರಂಪರೆ,ಜನ ಜೀವನ,ನ್ಯಾಯ-ಅನ್ಯಾಯ ಇತ್ಯಾದಿ ಅಂಶಗಳ ಮೇಲೆ ಬೆಳಕು ಚೆಲ್ಲಿ ಸತ್ಯ ದರ್ಶನ ಮಾಡಿಸುವ ಮಾಧ್ಯಮ ಹಾಗೂ ಅದರ ಪ್ರತಿನಿಧಿಗಳ ಬದುಕಿಗೆ ಭದ್ರತೆ ಮತ್ತು ರಕ್ಷಣೆಯೇ ಇಲ್ಲವಾಗಿದೆ.ಜೀವದ ಹಂಗು ತೊರೆದು ಕಾವಲು ನಾಯಿಯಂತೆ ಕಾರ್ಯವೆಸಗುವ ಪತ್ರಕರ್ತರಿಗೆ,ಕಾನೂನು ಮತ್ತು ಸುವ್ಯವಸ್ಥೆಯ ಸೇವೆಗೈಯುವ ಪೊಲೀಸರಿಗೆ ಸೂಕ್ತ ರಕ್ಷಣೆ ನೀಡುವ ಹೊಣೆಗಾರಿಕೆ ಹಿಂದಿಗಿಂತಲೂ ಈಗ ಅತ್ಯಂತಯ ಅಗತ್ಯವಾಗಿದೆ ಎಂಬುದನ್ನು ದಿನಾಂಕ:02-03-2012 ರಂದು ಬೆಂಗಳೂರಿನ ನ್ಯಾಯ ದೇವತೆಯ ಅಂಗಳದಲ್ಲಿ ನಡೆದ ಅನ್ಯಾಯವಾದಿಗಳ ಕ್ರೌರ್ಯ,ಅನಾಗರಿಕ  ಕೃತ್ಯ  ಜೀವಂತ ಸಾಕ್ಷಿಯಾಗಿ ಕರ್ನಾಟಕ ಇತಿಹಾಸದ ಪುಟಗಳಲ್ಲಿ ದಾಖಲಾಯಿತು.

ಮತ್ತಷ್ಟು ಓದು »

29
ಫೆಬ್ರ

“ಸ್ಥಾನ” ಕೇಳಿಕೊಂಡು ಹೋಗಿ “ಮಾನ” ಕಳೆದುಕೊಂಡ ಯಡಿಯೂರಪ್ಪ

 ನಿತಿನ್ ರೈ ಕುಕ್ಕುವಳ್ಳಿ
ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷವನ್ನ ಮೊದಲ ಬಾರಿಗೆ ಅಧಿಕಾರಕ್ಕೆ ತಂದ ಶ್ರೀಯುತ ಯಡಿಯೂರಪ್ಪನವರು ಈನ್ನ ಪಕ್ಷದ ಹೈಕಮಾಂಡ್ ಗೆ ಬೇಡವಾಗಿದ್ದಾರೆ. ಅಕ್ರಮ ಆಸ್ತಿ ಕಬಳಿಕೆ ಪ್ರಕರಣದಲ್ಲಿ ಸಿಲುಕಿ ಜೈಲು ಊಟದ ರುಚಿ ಸವಿದು ಹೊರಬಂದಿರುವ ಯಡ್ಡಿ ಅವರಿಗೆ ಮತ್ತೊಮ್ಮೆ ಬಿ ಜೆ ಪಿ ಯಲ್ಲಿ ತನ್ನ ಹಿಡಿತವನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ.

ಬಿಜೆಪಿ ರಾಷ್ಟೀಯ ಅದ್ಯಕ್ಷರಾದ ನಿತಿನ್ ಗಡ್ಕರಿ ಅವರು ರಾಜ್ಯಕ್ಕೆ ಬಂದ ಸಂದರ್ಭದಲ್ಲಿ ಅವರನ್ನ ಬೇಟಿಯಾದ ಯಡ್ಡಿಯವರು “ಗಡ್ಕರಿ ಸಾಹೇಬ್ರೆ ಮುಖ್ಯಮಂತ್ರಿ ಸ್ಥಾನ ಕೊಡದಿದ್ರು ನಡಿತ್ರಿ ಆದ್ರೆ ರಾಜ್ಯಾದ್ಯಕ್ಷ ಸ್ಥಾನ ಕೊಡಿ ಸರ್ ” ಎಂದು ಗೋಗರೆದರು, ಆದರೆ ನಮ್ಮ ರಾಷ್ಟ್ರದ್ಯಕ್ಷರು ಸರ್ ನಿಮ್ಮ ಸಾಧನೆ ಅಪಾರ ನಿಮ್ಮ ನೇತೃತ್ವದಲ್ಲಿ ನಮ್ಮ ಮಂತ್ರಿಗಳ ಸಾಧನೆ ದೇಶ ವಿದೇಶದ ಪೇಪರ್ ಗಳ ಮುಖ್ಯಪುಟದಲ್ಲಿ ಬಂದಿದೆ ಹಾಗೆ ಒಬ್ಬ ಜೈಲ್ ನಿಂದ ಹೊರಬಂದರೆ ಮತ್ತೊಬ್ಬ ಜೈಲ್ ಕಡೆ ಹೋಗುತ್ತಿದ್ದ ಆದ್ದರಿಂದ ಸರ್ ನೀವ್ ಆರಾಮವಾಗಿ ವಿಶ್ರಾಂತಿ ಪಡೆದು ಮೊಮ್ಮಕ್ಕಳ ಜೊತೆ ಆಟಡ್ತಿರಿ ರಾಜಕೀಯ ಸಾಕು. ನಮ್ಮ ಸದಾನಂದ ಗೌಡರು ಬಿ ಜೆ ಪಿ ಯನ್ನ ಅಧಿಕಾರದಲ್ಲಿ ಮುಂದುವರಿಸಲಿ ಎಂದು ಹೇಳಿದ್ದೆ ತಡ ಯಡ್ಡಿ ಸಾಹೇಬರು ಬಲ ಪ್ರದರ್ಶನಕ್ಕೆ ತನ್ನ ಹುಟ್ಟು ಹಬ್ಬದ ದಿನ 70 ಕೆಜಿ ಕೇಕ್ ರೆಡಿ ಮಾಡಿಬಿಟ್ರು .. ಅದನ್ನ ತನ್ನ ಬೆಂಬಲಿಗರ ಹಾಗು ಅಭಿಮಾನಿ ದೇವರುಗಳ ಮುಂದೆ ಚೂರಿಯಿಂದ ಕಟ್ ಮಾಡೋ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಾರ್ಯಕ್ರಮ ಬಹಳ ಜೋರಾಗೆ ನಡಿತು ಸ್ವಾಮೀಜಿಗಳು ಕೆಲವೊಂದು ಶಾಸಕರು ಆಪ್ತರು ಸೇರಿಕೊಂಡು ಹ್ಯಾಪಿ ಬರ್ತ್ ಡೇ ಹಾಡಿದ್ದೆ ಹಾಡಿದ್ದು ಯಡ್ಡಿ ಫುಲ್ ಕುಶಿ.

ಆದರೆ ಬರ್ತ್ ಡೇ ಪಾರ್ಟಿಗೆ ಬಂದವರೆಷ್ಟು ಜನ ? ಯಡಿಯೂರಪ್ಪ ಅವರಿಂದ ಎಲ್ಲ ರೀತಿಯ ಸಹಾಯ ಪಡೆದ ಅವರ ಆಪ್ತ ನೆಂಟರು ಯಡ್ಡಿ ಅವರನ್ನ ನಡು ಬೀದಿಯಲ್ಲಿ ಬಿಟ್ಟು ಹೋದರೆ ? ಅನ್ನೋ ಪ್ರಶ್ನೆಗಳು ಕಾಡತೊಡಗಿದೆ..ರಾಜಕೀಯ ಅನ್ನೋದು ಅಧಿಕಾರ ಇರುವ ತನಕ ಅಷ್ಟೇ ಅನ್ನೋದಕ್ಕೆ ಯಡ್ಡಿ ಅವರ ಜೀವನವೇ ಸಾಕ್ಷಿ ..ರಾಜಕೀಯದಲ್ಲಿ ಸ್ವಲ್ಪ ಯಾಮಾರಿದರು ತನ್ನ ಹಿಡಿತ ಸಡಿಲಗೊಳ್ಳುವುದು ಅನ್ನೋದಕ್ಕೆ ಯಡ್ಡಿ ಸಾಹೇಬರ ಜೀವನ ಪ್ರತ್ಯಕ್ಷ ಸಾಕ್ಷಿಯಾಗಿ ಕಾಣಿಸುತ್ತೆ .ಯಡಿಯೂರಪ್ಪ ಎಷ್ಟಾದರೂ ಸುಮ್ಮನೆ ಕೂರುವ ಮನುಷ್ಯನಲ್ಲ ರಾಜಕೀಯ ಆಟ ಯಡ್ಡಿ ಅವರಿಗೆ ಹುಟ್ಟಿನಿಂದಲೇ ಬಂದ ಕಲೆಯಾಗಿದೆ ಸದಾನಂದ ಗೌಡ ರ ಕುರ್ಚಿಯನ್ನ ಅಲುಗಾಡಿಸಲು ಏನೆಲ್ಲಾ ಮಾಡಬೇಕು ಅದನ್ನೆಲ್ಲ ಮಾಡುದರಲ್ಲಿ ನೋ ಡೌಟ್. ಮತ್ತಷ್ಟು ಓದು »

29
ಫೆಬ್ರ

ಗಡಾಫಿಯಿಲ್ಲದ ಲಿಬಿಯಾ

-ಉದಯ್ ಇಟಗಿ

ಲಿಬಿಯಾದಲ್ಲಿ ಎದ್ದ ಕ್ರಾಂತಿ ಗಡಾಫಿ ಹತ್ಯೆ, ಹಾಗೂ ಆತನ ಮಗ ಸೈಫ್‍ನ ಬಂಧನದಲ್ಲಿ ಕೊನೆಯಾದ ಮೇಲೆ NTC (National Transition Council) ಗೆ ಇದ್ದ ಎಲ್ಲ ಕಂಟಕಗಳು ಮುಗಿದು ನೆಮ್ಮದಿಯ ನಿಟುಸಿರು ಬಿಟ್ಟಿತ್ತು. ಇದರ ಬೆನ್ನಹಿಂದೆಯೇ ತಾತ್ಕಾಲಿಕವಾಗಿ ಹಂಗಾಮಿ ಸರಕಾರವೊಂದನ್ನು ರಚಿಸಿ ತತ್‍ಕ್ಷಣದ ಸವಾಲುಗಳನ್ನು ಎದುರಿಸುವದೇ ಅದರ ಮುಂದಿನ ಗುರಿಯಾಗಿತ್ತು. ಅದರಲ್ಲೂ ಬಹುಮುಖ್ಯವಾಗಿ ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿನ ಸವಾಲುಗಳನ್ನು ಎದುರಿಸುವದು ಮೊದಲ ಆದ್ಯತೆಯಾಗಿತ್ತು. ಹೀಗಾಗಿ ಕ್ರಾಂತಿಯ ಸಮಯದಲ್ಲಿ ಇಲ್ಲಿಂದ ತೆರೆವುಗೊಳಿಸಲಾದ ಬಹಳಷ್ಟು ವಿದೇಶಿ ವೈದ್ಯರುಗಳನ್ನು ಹಾಗೂ ವಿದೇಶಿ ಉಪನ್ಯಾಸಕರುಗಳನ್ನು ಮತ್ತೆ ವಾಪಾಸು ಕರೆಸಿಕೊಳ್ಳಬೇಕೆಂದು ಹಂಗಾಮಿ ಸರಕಾರ ಫರ್ಮಾನು ಹೊರಡಿಸಿತ್ತು. ಆ ಪ್ರಕಾರ ನನಗೆ ವೀಸಾ ಸಿಕ್ಕು ನಾನು ಜನೇವರಿ ೧೦ಕ್ಕೆ ಬೆಂಗಳೂರಿನಿಂದ ಲಿಬಿಯಾಕ್ಕೆ ಹಾರಿ ಬಂದಿದ್ದೆ. “ಎಮಿರೇಟ್ಸ್ ಏರ್ಲೈನ್ಸ್” ಲಿಬಿಯಾಕ್ಕೆ ಇನ್ನೂ ತನ್ನ ಸಂಚಾರವನ್ನು ಆರಂಭಿಸದೇ ಇದ್ದ ಕಾರಣ ನಾನು ಕೈರೋಗೆ ಬಂದು ಅಲ್ಲಿಂದ ‘ಈಜಿಪ್ಟ್ ಏರ್’ ಮೂಲಕ ನೇರವಾಗಿ ಬೆಂಗಾಜಿಗೆ ಬಂದಿಳಿದಿದ್ದೆ.

ಈ ಬೆಂಗಾಜಿ ಇಡಿ ಲಿಬಿಯಾದಲ್ಲಿಯೇ ಮೊಟ್ಟಮೊದಲ ಬಾರಿಗೆ ಮೌಮರ್ ಗಡಾಫಿಯ ವಿರುದ್ಧ ಕ್ರಾಂತಿಯ ಕಹಳೆಯನ್ನು ಊದಿದ ನೆಲ. ಇಲ್ಲಿಯ ಜನ ೨೦೦೬ ಫೆಬ್ರುವರಿ ೧೭ ರಂದು ಗಡಾಫಿಯ ವಿರುದ್ಧ ಬಂಡೆದ್ದಿದ್ದರು. ಆದರೆ ಆ ಹೋರಾಟವನ್ನು ಹತ್ತಿಕ್ಕುವಲ್ಲಿ ಗಡಾಫಿ ಯಶಸ್ವಿಯಾಗಿದ್ದ. ಆದರೆ ಮತ್ತೆ ಐದು ವರ್ಷಗಳ ನಂತರ ಅದೇ ನೆಲದ ಜನ ಅಂದರೆ ೨೦೧೧ ಫೆಬ್ರುವರಿ ೧೭ ರಂದು ಗಡಾಫಿ ವಿರುದ್ಧ ಹೋರಾಟಕ್ಕೆ ಇಳಿದರು. ಈ ಬಾರಿ ತಮ್ಮ ಹೋರಾಟವನ್ನು ಇಡಿ ಲಿಬಿಯಾದ ತುಂಬಾ ಒಂದು ದೊಡ್ಡಮಟ್ಟದ ಕ್ರಾಂತಿಯನ್ನಾಗಿ ತೀವ್ರಗೊಳಿಸುವಲ್ಲಿ ಯಶಸ್ವಿಯಾಗಿ ಬಲಿಷ್ಠ ಸರ್ವಾಧಿಕಾರಿ ಮೌಮರ್ ಗಡಾಫಿಯನ್ನು ಹೇಳಹೆಸರಿಲ್ಲದಂತೆ ನಾಶಮಾಡಿದರು. ಮತ್ತಷ್ಟು ಓದು »

22
ಫೆಬ್ರ

ವಿಶ್ವಕ್ಕೆ ಸೆಡ್ಡು ಹೊಡೆದು ನಿಂತಿರುವ ಇರಾನ್ ಎಂಬ ಪರಾಕ್ರಮಿ

-ನಿತಿನ್ ರೈ ಕುಕ್ಕುವಳ್ಳಿ
ಒಂದು ಕಾಲದಲ್ಲಿ ಇರಾಕ್ ಅನ್ನೋ ರಾಷ್ಟ್ರ ಅಮೆರಿಕ ಸೇರಿದಂತೆ ಇಡೀ ವಿಶ್ವಕ್ಕೆ ಸವಾಲೆಸೆದಿತ್ತು. ಆದರೆ ಆ ದೇಶದ ಬತ್ತಳಿಕೆಯಲ್ಲಿ ಅಷ್ಟೊಂದು ಅಸ್ತ್ರಗಳಿರಲಿಲ್ಲ. ಆದರೆ ಇರಾನ್ ಅನ್ನೋ ದೇಶ ಇದೀಗ ಪೂರ್ಣ ಸಿದ್ದತೆಯ ಜೊತೆ ವಿಶ್ವದ ಮುಂದೆ ನಾನೆಷ್ಟು ಪರಾಕ್ರಮಿ ಅನ್ನೋದನ್ನ ತೋರಿಸಿದೆ.

ನಿನ್ನೆ ಅಂದರೆ ಬುಧವಾರ ಇರಾನ್ ಪ್ರಥಮ ಬಾರಿಗೆ ದೇಶೀಯವಾಗಿ ನಿರ್ಮಿಸಿರುವ ಪರಮಾಣು ಇಂಧನದ ಸರಳುಗಳನ್ನು ಸಂಶೋಧನಾ ಸ್ಥಾವರಗಳಿಗೆ ಭರ್ತಿ ಮಾಡುವ ಕಾರ್ಯಕ್ಕೆ ಚಾಲನೆ ನೀಡುವ ಮೂಲಕ ತನ್ನ ತಾಕತ್ತನ್ನ ಹಾಗು “ತನ್ನನ್ನ ಮುಟ್ಟಿದರೆ ತಟ್ಟದೆ ಬಿಡೆನು” ಅನ್ನೋ ಎಚ್ಚರಿಕೆಯನ್ನ ಅಮೆರಿಕ ಸೇರಿದಂತೆ ಎಲ್ಲಾ ಪಾಶ್ಚಾತ್ಯ ದೇಶಗಳಿಗೆ ರವಾನೆ ಮಾಡಿದೆ. ಟೆಹರಾನ್ ಉತ್ತರ ಭಾಗದಲ್ಲಿರುವ ಸ್ಥಾವರಕ್ಕೆ ಸಲಾಕೆಗಳನ್ನ ಅಳವಡಿಸುವ ಮೂಲಕ ಇರಾನ್ ಅಧ್ಯಕ್ಷ ಮಹಮೂದ್ ಅಹ್ಮದಿ ನೆಜಾದ್ ಚಾಲನೆ ನೀಡಿದರು. ಇದರ ಜೊತೆ ಮತ್ತೊಂದು ಆಘಾತ ನೀಡಿದ ಇರಾನ್ ಅದ್ಯಕ್ಷ ನೆದರ್ಲ್ಯಾಂಡ್ಸ್, ಸ್ಪೇನ್, ಇಟಲಿ, ಫ್ರಾನ್ಸ್, ಗ್ರೀಸ್, ಪೋರ್ಚುಗಲ್‌ಗಳಿಗೆ ಇಂಧನ ರಫ್ತು ನಿಲ್ಲಿಸಲಾಗಿದೆ ಎಂದು ಘೋಷಣೆ ಮಾಡುವ ಮೂಲಕ ತಾನು ಯುದ್ದಕ್ಕೆ ಸಿದ್ದ ಅನ್ನೋದನ್ನ ಪರೋಕ್ಷವಾಗಿ ಜಗತ್ತಿಗೆ ಎಚ್ಚರಿಕೆಯ ಗಂಟೆಯನ್ನ ಹೊಡೆದರು. ತದ ನಂತರ ಮಾತನಾಡಿದ ಈ ಪರಾಕ್ರಮಿ “ನಮ್ಮವಿರೋಧಿಗಳೇನು ಬಲಾಢ್ಯರಲ್ಲ. ಅವರ ದುರಹಂಕಾರಕ್ಕೆ ತಕ್ಕ ಪಾಠ ಕಲಿಸದೇ ಬಿಡುವುದಿಲ್ಲ” ಎಂದು ಅಮೆರಿಕಕ್ಕೆ ನೇರವಾಗಿ ಎಚ್ಚರಿಕೆ ನೀಡಿದರು.

ಮತ್ತಷ್ಟು ಓದು »

16
ಫೆಬ್ರ

ರಾಜಕೀಯಕ್ಕೆ ಮಹಿಳೆಯರು ಬರಲಿ ರಾಜಕಾರಣಿಗಳ ಪಲ್ಲಂಗಕ್ಕಲ್ಲ

-ರಾಕೇಶ್ ಎನ್ ಎಸ್

 
ಭಾರತದ ರಾಷ್ಟ್ರಪತಿ ಹುದ್ದೆ, ಮುಖ್ಯ ನ್ಯಾಯಾಧೀಶ ಸ್ಥಾನ ಹೀಗೆ ಬಹುತೇಕ ಎಲ್ಲ ಪ್ರಮುಖ ಹುದ್ದೆಗಳನ್ನು ದಲಿತರು ಒಂದಿಲ್ಲ ಒಂದು ಕಾಲಘಟ್ಟದಲ್ಲಿ ಅಲಂಕರಿಸಿದ್ದಾರೆ. ಆದರೆ ಪ್ರಧಾನ ಮಂತ್ರಿ ಹುದ್ದೆ ಮಾತ್ರ ಅವರಿಗೆ ಇಂದಿಗೂ ಮರೀಚಿಕೆಯಾಗಿಯೇ ಉಳಿದಿದೆ. ಎಲ್ಲವೂ ಲೆಕ್ಕಾಚಾರ, ಸಾಮರ್ಥ್ಯ ಮತ್ತು ಪ್ರತಿಭೆಗನುಗುಣವಾಗಿ ನಡೆದಿದ್ದರೆ ಇಂದು ಲೋಕಸಭೆಯ ಸ್ಪೀಕರ್ ಆಗಿರುವ ಮೀರಾಕುಮಾರ್‌ರವರ ತಂದೆ, ದೇಶದ ಮಾಜಿ ಉಪ ಪ್ರಧಾನಿ ಬಾಬು ಜಗ ಜೀವನ್ ರಾಮ್ ೮೦ರ ದಶಕದ ಅಸುಪಾಸಿನಲ್ಲೇ ಈ ದೇಶದ ಮೊದಲ ದಲಿತ ಪ್ರಧಾನಿಯಾಗಬೇಕಿತ್ತು. ಆದರೆ ಆಗಲಿಲ್ಲ, ಆಗಲೂ ಬಿಡಲಿಲ್ಲ! ಕಾರಣ ಅವರ ಮಗ, ಮೀರಕುಮಾರ್‌ರ ಸೋದರ ಸುರೇಶ್ ರಾಮ್‌ನ ಚಿತ್ರ ೧೯೭೮ರಲ್ಲಿ ಮಾಸಿಕ ಪತ್ರಿಕೆಯೊಂದರಲ್ಲಿ ಒಬ್ಬಳು ಮಹಿಳೆಯ ಜೊತೆ ಪ್ರಕಟಗೊಂಡು ಲೈಂಗಿಕ ಹಗರಣದ ಕಿಡಿ ಹೊತ್ತಿಸಿದ್ದು. ಈ ರೀತಿ ಭಾರತ ಕಂಡ ಒಬ್ಬ ಧೀಮಂತ ನಾಯಕನ ರಾಜಕೀಯ ಅಧಃಪತನಕ್ಕೆ ಆತನ ಮಗನೇ ಮುನ್ನುಡಿಯಾದ.ಇಂದು ಭಾರತೀಯ ರಾಜಕಾರಣದಲ್ಲಿ ಜಗ ಜೀವನ್ ರಾಮ್‌ರ ಪರಂಪೆಯನ್ನು ಬಳವಳಿಯಾಗಿ ಪಡೆದವರು ದುರ್ಬಿನಿಟ್ಟು ಹುಡುಕಿದರು ಸಿಗುವುದು ಅನುಮಾನ. ಆದರೆ ಅವರ ಮಗನಂತವರ ಸಂತತಿ ಸಾವಿರ ಸಾವಿರವಾಗಿ ದೇಶದ ಬಹುತೇಕ ಎಲ್ಲ ಶಾಸನ ಸಭೆಗಳೊಳಗೆ ನುಸುಳಿ ಬಿಟ್ಟಿವೆ. ಕರ್ನಾಟಕ, ಉತ್ತರ ಪ್ರದೇಶ, ಕೇರಳ, ಉತ್ತರಖಂಡ, ಜಾರ್ಖಂಡ್, ರಾಜಸ್ತಾನ ಹೀಗೆ ದೇಶದ ಬಹುತೇಕ ಎಲ್ಲ ರಾಜ್ಯಗಳ ಶಾಸನ ಸಭೆಗಳಲ್ಲಿ ದುಶ್ಯಾಸನರು ಆಸೀನರಾಗಿದ್ದಾರೆ. ಮತ್ತೊಂದು ಸಂಗತಿಯೆಂದರೆ ಈ ದುಶ್ಯಾಸನರು ಉತ್ತರದ ಜಮ್ಮು ಮತ್ತು ಕಾಶ್ಮೀರದಿಂದ ಹಿಡಿದು ದಕ್ಷಿಣದ ಕೇರಳದವರೆಗೆ ಹೆಚ್ಚಿನೆಲ್ಲ ರಾಜಕೀಯ ಪಕ್ಷಗಳಲ್ಲಿದ್ದು ಪಕ್ಷಾತೀತ ರಾಜ(ಕಾಮ)ಕಾರಣ ಮಾಡುತ್ತಿದ್ದಾರೆ. ಮತ್ತಷ್ಟು ಓದು »
15
ಫೆಬ್ರ

ಪ್ರಾದೇಶಿಕ ಪಕ್ಷಗಳಿಗೆ ಇಲ್ಲಿ ನೆಲೆಯಿಲ್ಲ

-ರಾಕೇಶ್ ಎನ್ ಎಸ್

ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಕ್ಕೆ ದೇಶದ ರಾಜಧಾನಿ ದೆಹಲಿಯಲ್ಲಿ ರಾಜಕೀಯವಾಗಿ ವಿಶೇಷ ಆದ್ಯತೆಯಿದೆ. ಆ ರಾಜ್ಯಗಳಲ್ಲಿನ ರಾಜಕೀಯ ಸಂರಚನೆ ಮತ್ತು ದೇಶದ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ಅಥವಾ ಸಂಚಲನ ಸೃಷ್ಟಿಸುವ ಆವುಗಳ ಸಾಮರ್ಥ್ಯದಿಂದಾಗಿಯೇ ಆ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಏನನ್ನೂ ಬೇಕಾದರೂ ನಾವು ಕಿತ್ತುಕೊಳ್ಳುತ್ತೇವೆ ಎಂಬ ದಾರ್ಷ್ಟ್ಯ ಅನಾಮತ್ತಾಗಿಯೇ ಸಿಕ್ಕಿದೆ. ಹಾಗೆಯೇ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಗಳು ಕೂಡ ತಮ್ಮ ’ಗೌರವ’ ಮೂರಾಬಟ್ಟೆಯಾದರೂ ಪರವಾಗಿಲ್ಲ ಆ ರಾಜ್ಯಗಳ ತಂಟೆಗೆ ಮಾತ್ರ ಹೋಗದೆ ಅಲ್ಲಿನ ನಾಯಕರನ್ನು ಓಲೈಸಿಕೊಂಡೇ ರಾಜಕಾರಣ ಮಾಡುತ್ತವೆ.ಇದಕ್ಕೆಲ್ಲ ಕಾರಣವೇನು? ಕರ್ನಾಟಕದಲ್ಲಿರದ್ದು ಆ ರಾಜ್ಯಗಳಲ್ಲಿ ಏನಿದೆ? ನಮ್ಮ ರಾಜ್ಯದೊಳಗೆ ಘರ್ಜಿಸುವ ಸಿಂಹಗಳಿಗೆ ರಾಜ್ಯದ ಗಡಿ ದಾಟಿದೊಡನೆ ಕವಡೆ ಕಿಮ್ಮತ್ತು ಸಿಗದಿರಲು ಕಾರಣವೇನು? ದೆಹಲಿಯಲ್ಲಿ ರಾಜ್ಯದ ನೋವಿಗೆ ದನಿ ಸಿಗುತ್ತಿಲ್ಲವೇಕೆ ಅಥವಾ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅವಿರತವಾಗಿ ಅನ್ಯಾಯ ಏಕೆ ಆಗುತ್ತಿದೆ? ಇದಕ್ಕಿರುವ ಏಕೈಕ ಉತ್ತರ ನಮ್ಮಲ್ಲಿ ಬಲಿಷ್ಠ ಪ್ರಾದೇಶಿಕ ಪಕ್ಷ ಇಲ್ಲದಿರುವುದು.ತನ್ನ ರಾಜ್ಯದ ಹಿತ ಕಾಯುವುದರಲ್ಲಿ ಸದಾ ಮುಂಚೂಣಿಯಲ್ಲಿರುವ ರಾಜ್ಯ ಎಂಬ ಹೆಗ್ಗಳಿಕೆ ತಮಿಳುನಾಡಿಗೆ ಸುಮ್ಮ ಸುಮ್ಮನೆ ಸಿಕ್ಕಿಲ್ಲ. ಅಲ್ಲಿನ ಎರಡು ಪ್ರಬಲ ರಾಜಕೀಯ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆಯನ್ನು ಎದುರು ಹಾಕಿಕೊಳ್ಳುವ ಧೈರ್ಯ ರಾಷ್ಟ್ರೀಯ ಪಕ್ಷಗಳಿಗಿಲ್ಲ. ದೇಶದಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಹುಟ್ಟಿಕೊಂಡದ್ದು ಮತ್ತು ಪ್ರಾದೇಶಿಕ ಅನನ್ಯತೆಯನ್ನು ಉಳಿಸುವುದಕ್ಕಾಗಿನ ಹೋರಾಟ ಮತ್ತು ಲಾಬಿ ರಾಜಕಾರಣ ಹುಟ್ಟಿಕೊಂಡದ್ದೆ ತಮಿಳುನಾಡಿನಿಂದ.  ಮತ್ತಷ್ಟು ಓದು »
13
ಫೆಬ್ರ

ಕಾಂಗ್ರೆಸಿಗರು ತಮ್ಮ ’ಕೈ’ಯಲ್ಲಿ ತೊಳದದ್ದೇನನ್ನು ಹಾಗು ಬಳಿದದ್ದೇನನ್ನು ?

-ಅರುಣ್ ಕಶ್ಯಪ್

ಬಿಜೆಪಿ ಸಚಿವತ್ರಯರ ವಿರುದ್ದ ಮಂಗಳೂರಿನಲ್ಲಿ ಪ್ರತಿಭಟಿಸಿದ ಜಿಲ್ಲಾ ಕಾಂಗ್ರೆಸ್ ಮುಖಂಡರು ಬೆಂಗಳೂರಿನ ವಿಧಾನಸೌಧದ ಚಿತ್ರದ ಬದಲಾಗಿ, ಅದೇ ರೀತಿ ಕಾಣುವ ಮೈಸೂರಿನ ಲಲಿತ ಮಹಲ್ ಅರಮನೆಯ (ಹೋಟೆಲ್) ಚಿತ್ರವನ್ನು ಶುಚಿಗೊಳಿಸಿ ಪ್ರತಿಭಟನೆ ನಡೆಸಿದರು. !!!  ಪ್ರತಿಭಟನೆ ನಡೆಸಿದವರನ್ನು ಕೇಳಿದರೆ ಈ ಚಿತ್ರವನ್ನು ಮಂಗಳೂರಿನ ಲ್ಯಾಬ್ ಒಂದರಿಂದ ಕಾರ್ಯಕರ್ತರೊಬ್ಬರು ತೆಗೆದುಕೊಂಡು ಬಂದಿದ್ದರು. ಗೂಗಲ್ ನಲ್ಲಿ ವಿಧಾನಸೌಧಕ್ಕೆ ಸಂಬಂಧಿಸಿದ 14 ಬೇರೆ ಬೇರೆ ಮಾದರಿಯ ಚಿತ್ರಗಳಿದ್ದು ಅದರಿಂದ ಒಂದನ್ನು ಆಯ್ದು ಮುದ್ರಿಸಲಾಗಿತ್ತು ಎಂದು ಸ್ಪಷ್ಟೀಕರಣ ನೀಡಿದ್ದಾಗಿ ಪತ್ರಿಕೆಯೊಂದು ವರದಿ ಮಾಡಿದೆ. ಕಳೆದ ವರ್ಷ ಸದನದಲ್ಲೇ ಇವರ ನಾಯಕರು ಮಾಂಸದೂಟ ಮಾಡಿ ಅಗೌರವ ತೋರಿದ ಮೇಲೆ ಇನ್ನು ಇವರ ಬೆಂಬಲಿಗರಿಗೆ ವಿಧಾನಸೌಧ ಪಂಚತಾರ ಹೋಟೇಲ್ ನಂತೆ ಕಾಣುತ್ತಿರುವುದು ತಪ್ಪೇನಿಲ್ಲ ಬಿಡಿ.

ಹಾಗು….
ಮತ್ತಷ್ಟು ಓದು »