ಕಣ್ಣೀರ ಭಾಷೆ ಅರ್ಥವಾಗದವರಿಗೆ…
– ಚಿತ್ರಾ ಸಂತೋಷ್
“ಒಬ್ಬ ವ್ಯಕ್ತಿಯ ಕಣ್ಣೀರು, ದುಃಖ, ವಿಷಾದಗಳು ಅರ್ಥವಾಗದವನಿಗೆ ಅಧಿಕಾರವೂ ಅರ್ಥವಾಗಲು ಸಾಧ್ಯವಿಲ್ಲ. ಈ ಮೂರು ಅರ್ಥವಾಗದವನು ಅಧಿಕಾರ ಎಂದರೆ ಮೋಜು ಎಂದು ಅರ್ಥಮಾಡಿಕೊಳ್ಳುವ ಅಪಾಯವಿದೆ” ಬ್ರಿಟನ್ ಮಾಜಿ ಪ್ರಧಾನಿ ವಿನ್ ಸ್ಟನ್ ಚರ್ಚಿಲ್ ತನ್ನ ಆತ್ಮಕಥೆಯಲ್ಲಿ ಹೇಳಿದ್ದು ಹೀಗೆ. ಜನರ ಕಣ್ಣೀರು, ಕಣ್ಣೀರ ಭಾಷೆ ಅರ್ಥವಾದವನಿಗೆ ಮಾತ್ರ ಅಧಿಕಾರ ಎಂದರೆ ಏನೂಂತ ಅರ್ಥವಾಗಬಹುದು ಎನ್ನುವುದು ಚರ್ಚಿಲ್ ಮಾತು.
ಹೌದು, ನನಗೂ ನೆನಪಾಯಿತು. ನಮ್ಮಲ್ಲೂ ಜನಪ್ರಿಯ ರಾಜಕಾರಣಿಗಳಿದ್ದಾರೆ. ಜನರ ಕಣ್ಣೀರ ಜೊತೆ ತಾವೂ ಕಣ್ಣೀರಧಾರೆಯಾಗುವ ಜನಪ್ರತಿನಿಧಿಗಳಿದ್ದಾರೆ. ಕೆಲತಿಂಗಳ ಹಿಂದೆ ರಾಜ್ಯದಲ್ಲಿ ನೆರೆ ಬಂದಾಗ, ಜನರು ಕಷ್ಟಗಳನ್ನು ತೋಡಿಕೊಂಡು ಅತ್ತಾಗ ತಾವೂ ಅತ್ತು ನೀರಾದವರು ಇದ್ದಾರೆ! ಗೋಲಿಬಾರ್‌ನಲ್ಲಿ ರೈತ ಗುಂಡೇಟಿಗೆ ಬಲಿಯಾದಾಗ ರೈತನ ಶವದೆದುರು ಗಳಗಳನೆ ಅತ್ತು ಮಾಧ್ಯಮದಲ್ಲಿ ದೊಡ್ಡ ಫೋಟೋವಾಗಿ ರಾರಾಜಿಸಿದ ರಾಜಕಾರಣಿಗಳಿಗೇನು ನಮ್ಮಲ್ಲಿ ಬರಗಾಲವಿಲ್ಲ.
ಕನ್ನಡದ ಕತ್ತು ಹಿಚುಕುತ್ತಿರುವ ಕೇರಳ ಸರಕಾರ…!?
– ಕುಮಾರ ರೈತ
ಶೀರ್ಷಿಕೆ ಓದಿದಾಗ ಆಶ್ವರ್ಯ-ಪ್ರಶ್ನಾರ್ಥಕ ಭಾವಗಳು ಮೂಡುವುದು ಸಹಜ. ಆದರೆ ‘ಕನ್ನಡದ ಕತ್ತು ಹಿಚುಕುತ್ತಿರುವ ಕೇರಳ ಸರಕಾರ ಎನ್ನುವುದು ಅಕ್ಷರಶಃ ಸತ್ಯ. ಗಡಿ ಅಂಚಿನ ಕಾಸರಗೋಡಿನಿಂದ ಕನ್ನಡಕ್ಕೆ ಸ್ಥಾನವೇ ಇಲ್ಲದಂತೆ ಮಾಡುವ ನಿಟ್ಟಿನಲ್ಲಿ ಆ ಸರಕಾರ ನಾನಾ ಬಗೆಯ ತಂತ್ರಗಾರಿಕೆಯನ್ನು ಮಾಡುತ್ತಲೇ ಬಂದಿದೆ. ಭಾಷಾವಾರು ಪ್ರಾಂತ್ಯ ರಚನೆಯಾಗಿ 54 ವರ್ಷ ಸಂದರೂ ಕಾಸರಗೋಡಿನಲ್ಲಿ ಕನ್ನಡ ಉಳಿದಿರುವುದನ್ನು ಕಂಡು ಈ ಬಾರಿ ಪ್ರಬಲ ಅಸ್ತ್ತ ಪ್ರಯೋಗಿಸಿದೆ. ಇದಕ್ಕೆ ತಕ್ಕ ಪ್ರತ್ಯಸ್ತ್ರ ಹೂಡದೇ ಇದ್ದರೆ ಸಂಭವಿಸುವ ಅಪಾಯಗಳು ಅನೇಕ. ಅವುಗಳೇನು…..?
ಅಸಂವಿಧಾನಿಕ ಡಬ್ಬಿಂಗ್ ನಿಷೇಧದಿಂದ ಕನ್ನಡಕ್ಕಿಲ್ಲದ ಹ್ಯಾರಿ ಪಾಟರ್..!

ಇತ್ತೀಚಿಗೆ ಬಂದ ಸುದ್ದಿಯಂತೆ, ಹ್ಯಾರಿ ಪಾಟರಿನ ಹೊಸ ಚಿತ್ರ ತೆರೆಗೆ ಬಂದಿದೆ. ಅಶ್ಟೆ ಅಲ್ಲ ಇದು ಬಾರತದ ಪ್ರಾದೇಶಿಕ ಬಾಶೆಗಳತ್ತ ತನ್ನ ಗಮನವನ್ನು ಹರಿಸುತ್ತ, ಚಿತ್ರವನ್ನು ಇಂಗ್ಲೀಶಿನ ಜೊತೆಗೆ ತೆಲುಗು, ತಮಿಳು, ಹಿಂದಿಯಲ್ಲೂ ಬಿಡುಗಡೆ ಮಾಡುತ್ತಿದೆ. ಇದರರ್ಥ ಆಂದ್ರಪ್ರದೇಶ, ತಮಿಳುನಾಡಿನ ಮತ್ತು ಉತ್ತರ ಬಾರತದ ಅನೇಕ ರಾಜ್ಯಗಳ ಜನರು ಹ್ಯಾರಿ ಪಾಟರನ್ನು ತಮ್ಮ ತಾಯ್ನುಡಿಯಲ್ಲೇ ನೋಡಿ ಸವಿಯಬಹುದಾಗಿದೆ. ಆದರೆ ಈ ಸೌಬಾಗ್ಯ ಕನ್ನಡ ಬಾಶೆಯನ್ನಾಡುವ, ಕನ್ನಡದಲ್ಲೇ ಮನರಂಜನೆಯನ್ನು ಬಯಸುವ ನಮಗೆ ಇಲ್ಲ.
ಕರ್ನಾಟಕದಲ್ಲಿ ಇಂಗ್ಲೀಶ ಚಿತ್ರಗಳು ಇಂಗ್ಲೀಶಿನಲ್ಲೇ ಬಿಡುಗಡೆಯಾಗಬೇಕು ಎಂಬ ನಿಯಮವೇನು ಇಲ್ಲ. ಅದರರ್ಥ ಈ ಚಿತ್ರ ಕರ್ನಾಟಕದಲ್ಲಿ ಇಂಗ್ಲೀಶ ಜೊತೆಗೆ ತೆಲುಗು, ತಮಿಳು, ಹಿಂದಿಯಲ್ಲೂ ಬಿಡುಗಡೆ ಆಗಬಹುದು. ಹೀಗೆ ಕರ್ನಾಟಕದಲ್ಲಿ ಇಂಗ್ಲೀಶ ಚಿತ್ರ ಇಂಗ್ಲೀಶೇತರ ಇತರ ಬಾಶೆಗಳಲ್ಲಿ ಬಿಡುಗಡೆಯಾದರೆ ಅಲ್ಲಿಗೆ ಡಬ್ಬಿಂಗ್ ನಿಶೇದವಿದೆ ಎಂಬ ಮಾತು ಶುದ್ದ ಸುಳ್ಳಾಗುತ್ತದೆ. ಅದರರ್ಥ ಕರ್ನಾಟಕದಲ್ಲಿ ಡಬ್ಬಿಂಗ್ ಚಿತ್ರಗಳಿಗೆ ಅನುಮತಿಯಿದೆ, ಆದರೆ ಕನ್ನಡಕ್ಕೆ ಡಬ್ ಆದ ಚಿತ್ರಗಳಿಗೆ ಅನುಮತಿಯಿಲ್ಲ. ಹ್ಯಾರಿ ಪಾಟರ್ ತೆಲುಗು, ತಮಿಳು, ಹಿಂದಿಗಳಿಗೆ ಡಬ್ ಆಗಿ ಕರ್ನಾಟಕದಲ್ಲಿ ಬಿಡುಗಡೆಯಾದರೆ ಓಕೆ,, ಆದರೆ ಅದೇ ಚಿತ್ರ ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗಲಿ ಅಂದ್ರೆ ಯಾಕೆ.? ಅಂತ ಕೇಳ್ತಾರೆ ನಮ್ಮ ಚಲನಚಿತ್ರ ಮಂಡಳಿ. ಈ ಪ್ರಶ್ನೆಯಲ್ಲಿ ಸ್ವಲ್ಪನಾದ್ರೂ ನ್ಯಾಯ ಇದೆಯಾ.!
ಅಸಂವಿಧಾನಿಕ ನಿಯಮ:
ಆಂಗ್ಲ ಬಾಶೆಯ ಬಹುಕೋಟಿ ವೆಚ್ಚದ, ಉನ್ನತ ತಂತ್ರಜ್ನಾನ, ಗ್ರಾಫಿಕ್ಸ್ ಇರುವ ಚಿತ್ರಗಳನ್ನು ಬರೀ ಇಂಗ್ಲೀಶ ಬಲ್ಲವರಶ್ಟೇ ನೋಡಬೇಕು ಎಂಬಂತಿದೆ ನಮ್ಮ ಚಿತ್ರರಂಗದ ಈಗಿನ ನಿಯಮ. ಕರ್ನಾಟಕದಲ್ಲಿ ಇಂಗ್ಲೀಶ್ ಬಾರದವರು ಈ ಚಿತ್ರ ನೋಡಬೇಕೆಂದರೆ ಅವರು ತಮಿಳು, ತೆಲುಗು, ಹಿಂದಿಗೆ ಮೊರೆ ಹೋಗಬೇಕಾದ ಪರಿಸ್ಥಿತಿಯನ್ನು ಈ ಡಬ್ಬಿಂಗ್ ನಿಶೇದದ ನಿಯಮ ತಂದೊಡ್ಡಿದೆ. ಚಿತ್ರರಂಗದ ಈ ಅಸಂವಿದಾನಿಕ ಡಬ್ಬಿಂಗ್ ನಿಶೇದದ ನಿಯಮದಿಂದ ಕೆಲವು ಒಳ್ಳೆಯ ಮನರಂಜನೆಯಿಂದ ಕರ್ನಾಟಕದ ಜನರು ವಂಚಿತರಾಗುತ್ತಿದ್ದಾರೆ. ಈ ಹ್ಯಾರಿ ಪಾಟರ್ ಚಿತ್ರ ಹೆಚ್ಚು ಮಕ್ಕಳ ಮನರಂಜನೆ ಉದ್ದೇಶಿಸಿ ಮಾಡಿರೋದ್ರಿಂದ ಡಬ್ಬಿಂಗ್ ನಿಶೇದದಿಂದಾಗಿ ಕನ್ನಡದ ಮಕ್ಕಳಿಗೆ ಮೋಸವಾಗ್ತಿದೆ ಎಂಬುದನ್ನು ಕೂಡ ಇಲ್ಲಿ ಗಮನಿಸಬೇಕು. ಪ್ರೇಕ್ಷಕನಿಗೆ ನೀನು ಇದನ್ನೇ ನೋಡು ಅಥವಾ ಇದೇ ಬಾಶೆಯಲ್ಲಿ ನೋಡು ಎಂದು ಡಬ್ಬಿಂಗ್ ನಿಶೇದ ಎಂಬ ಅಸ್ತ್ರದ ಮೂಲಕ ಒತ್ತಾಯಿಸುವುದು ಸಂವಿದಾನ ವಿರೋದಿಯಾದ ನಡೆ. ಜಗತ್ತಿನ ಎಲ್ಲ ಒಳ್ಳೆಯ ಮನರಂಜನೆಯನ್ನು ತನ್ನ ನುಡಿಯಲ್ಲಿ ನೋಡುವ ಹಕ್ಕು ಅವನಿಗಿದೆ. ಡಬ್ಬಿಂಗ್ ನಿಶೇದದಿಂದ ಈ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಡಬ್ಬಿಂಗ್ ಬರಲಿ. ಒಳ್ಳೆಯ ಮನರಂಜನೆ ಅನ್ನೋದು ನಗರ ಪ್ರದೇಶಗಳ ಅಥವಾ ಇಂಗ್ಲೀಶ್ ಬಲ್ಲ ಕೆಲವ್ರಿಗೆ ಮಾತ್ರ ಸೀಮಿತ ಆಗದೇ ರಾಜ್ಯದ ಎಲ್ಲರಿಗೂ ಅವರು ಆಡುವ ನುಡಿಯಲ್ಲೇ ಅದುಸಿಗುವಂತಾಗಲಿ. ಕರ್ನಾಟಕದಲ್ಲಿ ಎಲ್ಲರಿಗೂ ಕನ್ನಡದಲ್ಲಿ ಮನರಂಜನೆ ಸಿಗುತ್ತದೆ ಎಂಬ ಉದ್ದೇಶವನ್ನು ಡಬ್ಬಿಂಗ್ ಹೊಂದಿದೆ ಎಂಬ ಸಾಮಾನ್ಯ ತಿಳುವಳಿಕೆಯನ್ನು ಡಬ್ಬಿಂಗ್ ವಿರೋದಿಗಳು ಅರಿಯಬೇಕಿದೆ.!
ಸಂಸ್ಕೃತಿ ಸಂಕಥನ – ೨
-ರಮಾನಂದ ಐನಕೈ
ಸಂಸ್ಕೃತಿ ಸಂಕಥನ – ೧
ಭಾರತೀಯ ಸಂಸ್ಕೃತಿಯ ಕುರಿತಾದ ನಮ್ಮ ಸ್ಮೃತಿ ವಿಸ್ಮೃತಿಯಾಗಿದೆ. ಇದಕ್ಕೆ ಕಾರಣವೇನು ಈ ಮರೆವನ್ನು ಪುನಃ ನೆನಪಿಸಿಕೊಳ್ಳುವುದು ಹೇಗೆ? ಸಂಸ್ಕೃತಿಯನ್ನು ಮರೆತದ್ದರಿಂದ ಆದ ಪರಿಣಾಮಗಳೇನು? ಹೀಗೆ ಯೋಚಿಸಲು ಹೋದರೆ ನಮ್ಮೆದುರು ನೂರಾರು ಪ್ರಶ್ನೆಗಳುಂಟು. ಭಾರತೀಯರು ತಮ್ಮ ಸಂಸ್ಕೃತಿಯ ಕುರಿತಾಗಿ ಕೇಳುತ್ತಿರುವ, ಓದುತ್ತಿರುವ, ನಂಬಿಕೊಂಡಿರುವ ಹಲವು ಸಂಗತಿಗಳು ತಪ್ಪು ತಿಳುವಳಿಕೆಂದ ಕೂಡಿದ್ದರಿಂದ ವರ್ತಮಾನದ ಭಾರತದಲ್ಲಿ ಅನೇಕಾನೇಕ ಸಮಸ್ಯೆಗಳು ಜೀವಪಡೆಯುತ್ತಲೇ ಇವೆ. ಈ ಸತ್ಯ ಅರ್ಥವಾಗಬೇಕಾದರೆ ಇತ್ತೀಚೆಗೆ ಪ್ರಕಟಗೊಂಡ ಎರಡು ಕನ್ನಡದ ಪುಸ್ತಕಗಳನ್ನು ಪ್ರತಿಯೊಬ್ಬರೂ ಓದಲೇಬೇಕು.
ಒಂದು ಸ್ಮೃತಿ-ವಿಸ್ಮೃತಿ ಭಾರತೀಯ ಸಂಸ್ಕೃತಿ ಎಂಬ ಪುಸ್ತಕ ಇದು ಪ್ರೊ. ಬಾಲಗಂಗಾಧರರ ಸಂಶೋಧನಾ ಗ್ರಂಥ ಇದನ್ನು ಪ್ರೊ. ರಾಜಾರಾಮ ಹೆಗಡೆ ಕನ್ನಡಕ್ಕೆ ಅನುವಾದಿಸಿದ್ದಾರೆ. ಇನ್ನೊಂದು ಪುಸ್ತಕ ಪೂರ್ವಾವಲೋಕನ. ಇದು ಬಾಲಗಂಗಾಧರರ ಬಿಡಿ ಲೇಖನಗಳ ಅನುವಾದಗಳ ಸಂಗ್ರಹ. ಇವೆರಡೂ ಕೂಡಾ ಭಾರತೀಯ ಸಮಾಜ ವಿಜ್ಞಾನವನ್ನು ಪುನರ್‌ಪರಿಶೀಲನೆಗೆ ಹಚ್ಚುವ ಮಹತ್ವದ ಕೃತಿಗಳು.
“ತಾವು ಕುಳಿತ ಮರದ ಕೊಂಬೆಯನ್ನು ತಾವೇ ಕಡಿದು ಕೊಳ್ಳುವ ನಮ್ಮ ಸ್ಯಾಂಡಲ್ ವುಡ್ ಮಂದಿ”
-ರತೀಶ
ನಮ್ಮ ಕನ್ನಡ ಚಿತ್ರರಂಗಕ್ಕೆ ನೇರ ಅಥವಾ ದೂರ ಸಂಪರ್ಕ ಹೊಂದಿರುವ ಯಾರದರನ್ನು ಒಬ್ಬರನ್ನು ‘ನಮ್ಮ ಸ್ಯಾಂಡಲ್ ವುಡ್ ಸಮಸ್ಯೆ ಏನು?’ ಎಂದು ಕೇಳಿ, ‘ಪರಭಾಷೆ ಚಿತ್ರಗಳ ಧಾಳಿ, ಕನ್ನಡಿಗರು ಚಿತ್ರಮಂದಿರಕ್ಕೆ ಬರವುದಿಲ್ಲ, ಕನ್ನಡ ಚಿತ್ರಗಳನ್ನು ನೋಡುವುದಿಲ್ಲ….’ ಎಂದೆಲ್ಲ ಉದ್ದುದ್ದ ಭಾಷಣ ಬಿಗಿಯುತ್ತಾರೆ. ಅವರು ಹೇಳುವ ಮಾತು ಸರಿಯಾಗಿಯೇ ಇರಬಹುದು ಹಾಗೆಯೇ ಅದಕ್ಕೆ ಕಾರಣಗಳು ಹಲವಿರಬಹುದು ಆದರೆ ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ನನಗೆ ತೋಚುವುದು ಏನೆಂದರೆ ಈ ಎಲ್ಲ ಸಮಸ್ಯೆಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಚಿತ್ರರಂಗದವರೇ ಹೊಣೆ! ಅದು ಪ್ರತ್ಯಕ್ಷವಾಗಿರಬಹುದು ಅಥವಾ ಪರೋಕ್ಷವಾಗಿರಬಹುದು.
ನಿನ್ನೆ ನಾನು ಸುವರ್ಣ ಟಿವಿಯಲ್ಲಿ, ಸುವರ್ಣ ಫಿಲಂ ಅವಾರ್ಡ್ಸ್ ಕಾರ್ಯಕ್ರಮ ವೀಕ್ಷಿಸುತ್ತಿದ್ದೆ, ಬಹಳ ಅಪರೂಪಕ್ಕೆ ಅನ್ನುವಂತೆ ಕನ್ನಡಿಗರಿಗೆ ಇಂಥಹ ಕಾರ್ಯಕ್ರಮಗಳನ್ನು ನೋಡಲು ಅವಕಾಶ ಸಿಗುವುದು. ಜೊತೆಗೆ ಕನ್ನಡ ಚಿತ್ರರಂಗದವರಿಗೆ ಇದು ಅತಿ ಮುಖ್ಯ ಹಾಗು ಅತಿ ವಿರಳವಾಗಿ ದೊರಕುವಂತಹ ಅವಕಾಶ, ಇಲ್ಲಿ ಕನ್ನಡ ಚಿತ್ರರಂಗದ ವಿಶೇಷಗಳನ್ನು, ಸಾಧನೆಗಳನ್ನು, ಮುಂದಿನ ಗುರಿಗಳನ್ನು ಹಾಗು ಚಿತ್ರರಂಗದ ಹಿರಿಮೆಯನ್ನು ಜನರಿಗೆ ಹತ್ತಿರವಾಗುವಂತೆ ತಿಳಿಸುವ ಬಹುದಾದಂಥಹ ಬಹು ದೊಡ್ಡ ವೇದಿಕೆ ನಿರ್ಮಾಣವಾಗಿತ್ತು, ಆದರೆ ನಮ್ಮವರು ಅದನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲವಾಗಿದ್ದು ಬೇಸರದ ಸಂಗತಿ. ಮತ್ತಷ್ಟು ಓದು 
ಅಷ್ಟಕ್ಕೂ,ಈ ಪ್ರಜಾಪ್ರಭುತ್ವ ಅಂದರೇನು!?
– ರಾಕೇಶ್ ಶೆಟ್ಟಿ
ಮನಮೋಹನರಿಗಿಂತ ಅಡಾಲ್ಫ್ ಹಿಟ್ಲರ್ ಮೇಲು…!
ದೇಶಕ್ಕಾದ ಅವಮಾನಕ್ಕೆ ಪ್ರತಿಯಾಗಿ ನಂಜು ಕಾರುತಿದ್ದ ಅಡಾಲ್ಫ್ ಹಿಟ್ಲರ್ ಅನ್ನುವ ರಕ್ತ ಪಿಪಾಸು ಸರ್ವಾಧಿಕಾರಿಯನ್ನ, ದೇಶ ಭ್ರಷ್ಟಚಾರದಲ್ಲಿ ಮುಳುಗೇಳುತಿದ್ದರೂ ಸಂಬಂಧವೇ ಇಲ್ಲದಂತಿರುವ,ಕಣ್ಣೆದುರೇ ಅನಾಚಾರ ನಡೆಯುತಿದ್ದರು ಕಣ್ಮುಚ್ಚಿ ಕುಳಿತಿರುವ ಪ್ರಾಮಾಣಿಕ ಪ್ರಧಾನಿ ಮನಮೋಹನರಿಗೆ ಹೋಲಿಸಿದ್ದು ಅತಿಯಾಯ್ತು ಅನ್ನಿಸುತ್ತೆ ಅಲ್ವಾ?
ಹಾಗಿದ್ರೆ, ಅಣ್ಣಾ ಸತ್ಯಾಗ್ರಹ ಮಾಡಿ ಮೊಂಡ ಸರ್ಕಾರವನ್ನ ಮಂಡಿಯೂರಿಸಿದಾಗ ’ಓ! ಸರ್ಕಾರ ಈ ತರ ಬಗ್ಗಿದರೆ, ಎಲ್ಲರೂ ಸತ್ಯಾಗ್ರಹ ಮಾಡಿ ಸರ್ಕಾರವನ್ನ ಬ್ಲಾಕ್ ಮೇಲ್ ಮಾಡಲು ಶುರು ಮಾಡುತ್ತಾರೆ!’ ಅಂತ ಆತಂಕ ಪಡುವವರನ್ನ ಕಂಡಾಗ; ’ಪ್ರಜಾಪ್ರಭುತ್ವವಲ್ಲದ ಭ್ರಷ್ಟಚಾರ ಮುಕ್ತ ಸರ್ಕಾರಕ್ಕಿಂತ, ಭ್ರಷ್ಟಚಾರವಿರುವ ಪ್ರಜಾಪ್ರಭುತ್ವ ಸರ್ಕಾರವೇ ಮೇಲು’ ಅನ್ನುವಂತ ಲೇಖನವನ್ನ ಓದಿದಾಗ; ಪ್ರಬಲ ಜನಲೋಕಪಾಲ ಮಸೂದೆಗಾಗಿ ನಡೆಯುತ್ತಿರುವ ಹೋರಾಟ ’ಪ್ರಜಾಪ್ರಭುತ್ವದ ಬುಡವನ್ನೇ ಅಲುಗಾಡಿಸುತ್ತಿದೆ’ ಅಂತ ಕೆಲ ಮಂದಿ ಗುಲ್ಲೆಬ್ಬಿಸುತ್ತಿರುವುದನ್ನ ನೋಡಿದಾಗ ಇದೂ ಅತಿಯಾಯ್ತು ಅನ್ನಿಸುವುದಿಲ್ವಾ?
ಅಷ್ಟಕ್ಕೂ,ಜನರಿಂದ ಆರಿಸಿ ಬಂದ ಸರ್ಕಾರ ತನ್ನ ಪಾಲಿನ ಕೆಲಸವನ್ನ ತಾನು ಸರಿಯಾಗಿ ಮಾಡುತಿದ್ದರೆ ಅಣ್ಣಾ ಹಜ಼ಾರೆ ಯಾಕೆ ಬರಬೇಕಿತ್ತು? ಕಫ್ಫು ಹಣದ ಕಳ್ಳರ ಹೆಸರನ್ನ ಬಾಯ್ಬಿಡಿ ಅಂದಾಗ ’ಅವೆಲ್ಲ ಆಗಲಿಕ್ಕಿಲ್ಲ’ ಅಂತ ವಿತ್ತ ಸಚಿವ ಅಂದ ಮೇಲೆ ತಾನೇ ಜನರ ಪಿತ್ತ ನೆತ್ತಿಗೇರಿದ್ದು? ಸುಪ್ರೀಂ ಕೋರ್ಟ್ ತಪರಾಕಿ ಹಾಕಿದ ಮೇಲೆಯೆ ತೆರಿಗೆ ಕಳ್ಳ ಹಸನ್ ಅಲಿಯನ್ನ ಬಂಧಿಸಿದ್ದೇಕೆ? ಕಳೆದ ಚುನಾವಣೆಗಿಂತಲೂ ಮೊದಲೇ 2G ಹಗರಣ ಬಾಯ್ತೆರೆದು ನಂತರವೂ ಅದೇ ರಾಜನನ್ನ ಮತ್ತೆ ಕರೆದು ಮತ್ತದೇ ಖಾತೆಯನ್ನ ವಹಿಸಿದ ಸರ್ಕಾರಕ್ಕೆ ನೈತಿಕತೆಯಿದಯೇ? ಈಗ ಆತಂಕ ಪಡುತ್ತಿರುವ ಪ್ರಜಾಪ್ರಭುತ್ವದ ಕಾವಲು ಭಟರೆಲ್ಲ ಆಗ ಏನು ಮಾಡುತಿದ್ದರು?ಎಲ್ಲಿದ್ದರು?
ದಿಲ್ಲಿಯ ’ಹುಳಿ ದ್ರಾಕ್ಷೆ’ ಹಿಡಿಯಲು ಹೋಗಿ
ದಿಲ್ಲಿ ಕನ್ನಡದ ಪತ್ರಕರ್ತರಿಗೆ ದೂರ. 3000 ಕಿ.ಮೀ. ಅಷ್ಟೇ ಅಲ್ಲ. ಅದರಾಚೆಗೂ ದೂರ. ಕನ್ನಡದ ಪತ್ರಕರ್ತರು ದಿಲ್ಲಿಯಲ್ಲಿ ಹೆಜ್ಜೆ ಗುರುತು ಮೂಡಿಸುವುದು ಸುಲಭದ ಮಾತಲ್ಲ. ಏರು ಬಿಸಿಲು ಅಥವಾ ತೀವ್ರ ಚಳಿಯಲ್ಲಿ ನಿರಂತರ ಆಲೂ ಪಲ್ಯವನ್ನೂ ಅರಗಿಸಿಕೊಳ್ಳುತ್ತಲೇ ಇರಬೇಕು.
ದಿಲ್ಲಿಯ ಆಡುಭಾಷೆ ಹಿಂದಿ – ಉರ್ದು ಮಾತ್ರ. ಇಂಗ್ಲೀಷು ಅಷ್ಟಕ್ಕಷ್ಟೆ. ಇನ್ನು ಕನ್ನಡದ ಕಥೆ? ಪತ್ರಿಕಾರಂಗವೇನು? ಸುಪ್ರೀಂ ಕೋರ್ಟು, ಪಾರ್ಲಿಮೆಂಟು, ಐಎ ಎಸ್ ಲಾಬಿಯಲ್ಲಿಯೂ ಕನ್ನಡದ ಧ್ವನಿ ಕ್ಷೀಣವೇ.
ಕನ್ನಡದ ಪತ್ರಿಕೋದ್ಯಮಕ್ಕೆ ‘ಕೊಂಬು-ಕಹಳೆ’ ಎಲ್ಲ ಆದವರೂ ದಿಲ್ಲಿಯಲ್ಲಿ ಏನೂ ಅಲ್ಲ.
ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ಅಂದರೆ ಅದು ಅಡ್ವಾಣಿಯದ್ದೋ – ಪ್ರಕಾಶ್ ಕಾರಟರದ್ದೋ – ಚಿದಂಬರರದ್ದೋ – ಯಾವುದೇ ರಾಷ್ಟ್ರೀಯ ನಾಯಕರದ್ದಾಗಲಿ. ಅಂದೊಂದು ಮದುವೆ ಮನೆಯ ಬಾಬತ್ತು. ಬರೋಬ್ಬರಿ 600 ಜನ. ಇಂಗ್ಲೀಷ್ ಚಾನೆಲ್ ಗಳು, ಹಿಂದಿ ಚಾನೆಲ್ ಗಳು, ರಾಷ್ಟ್ರೀಯ ಪತ್ರಿಕೆಗಳು, ಅವರವರ ಕ್ಯಾಮರಾಮೆನ್ ಗಳು, ಮೈಕ್‍ಮೆನ್ ಗಳು, ಅದರಾಚೆಗೆ ಎಲ್ಲೋ ಕಳೆದು ಹೋಗುವ ಕನ್ನಡದ ಪತ್ರಕರ್ತ. ಪ್ರಶ್ನೆ ಕೇಳುವುದು, ಉತ್ತರ ಬರೆಯುವುದು ದೂರದ ಮಾತು. ಎಷ್ಟು ದೂರವೆಂದರೆ ದೆಲ್ಲಿಯ ನಮ್ಮ ಧ್ವನಿಗಳು ಆ ಬಾಬತ್ತಿನ ತನಕ ಹೋಗುವುದೇ ಇಲ್ಲ. ದಿಲ್ಲಿಯ ತಮ್ಮ ಮನೆಯಲ್ಲಿಯೇ ಕೂತು NDTVಯದೋ ಆಜ್ ತಕ್ ನದೋ Direct Rellay ನೋಡ್ತಾ ನೋಡ್ತಾನೇ ಇವರು ಸುದ್ದಿ ಕೊಟ್ಟು ಕೈತೊಳೆದುಕೊಳ್ಳುತ್ತಾರೆ. ಮತ್ತಷ್ಟು ಓದು 
ಟ್ರಾಪಿಕ್ ಸಮಸ್ಯೆ ಯ ಜಾಗ್ರುತಿ ಕನ್ನಡದಲ್ಲಿರಲಿ
ಆದ್ರೆ, ಬೆಂಗಳೂರಿನ ಟ್ರಾಪಿಕ್ ಸಮಸ್ಯ್ತೆಯನ್ನು ನಿಯಂತ್ರಣ ಮಾಡುವಲ್ಲಿ ಸಾರ್ವಜನಿಕರು ಪೋಲೀಸರಿಗೆ ಸರಿಯಾಗಿ ಸಹಕರಿಸಿಲ್ಲ ಎಂದು ಬೆಂಗಳೂರಿನ ಪೋಲೀಸ್ ಕಮಿಶನರ್ ಆದ ಜ್ಯೋತಿ ಪ್ರಕಾಶ್ ಮಿರ್ಜಿಯವರು ಇಂದು ನಗರದ ಒಂದು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಸರ್ಕಾರಿ ಇಂಗ್ಲಿಶ್ ಶಾಲೆ – ಬೇಲಿಯೇ ಎದ್ದು ಹೊಲವ ಮೇಯ್ದೊಡೆ ಕಾಯುವರಾರು ?

ಭ್ರಷ್ಟಾಚಾರ ಮತ್ತು ಕಪ್ಪು ಹಣದ ಬಗ್ಗೆ ದನಿ ಎತ್ತಿದ್ದಕ್ಕೆ ಜನಸಾಮಾನ್ಯನಿಗೆ ಯು.ಪಿ.ಎ ಇ೦ದ ಶಿಕ್ಷೆ…!!!
ಮಂಜುನಾಥ್ ಮಠದ್
(ಬೆಲೆಯೇರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯನ ಮನದಾಳದ ಮಾತು ಈ ಲೇಖನವಾಗಿ ಮೂಡಿ ಬಂದಿದೆ – ನಿಲುಮೆ )
ಭ್ರಷ್ಟಾಚಾರ ಮತ್ತು ಕಪ್ಪು ಹಣದ ಬಗ್ಗೆ ದನಿ ಎತ್ತಿದ ಬಾಬ ರಾಮ್ ದೇವ್ ಅವರನ್ನು ರಾತ್ರೋರಾತ್ರಿ ಬ೦ಧಿಸಿ,ಲೋಕ ಪಾಲ್ ಮಸೂದೆ ಜಾರಿಗೆ ತರಲು ಯತ್ನಿಸುತ್ತಿರುವ ಅಣ್ಣಾ ಹಜಾರೆಯವರನ್ನು ವ೦ಚಿಸುತ್ತಿರುವ ಕೇ೦ದ್ರದ ಯು.ಪಿ.ಎ ಸರ್ಕಾರ, ಅದರ ವಿರುದ್ದ ದನಿ ಎತ್ತಿದ ಜನ ಸಾಮಾನ್ಯನ ಮೇಲೂ ಡೀಸೆಲ್,ಅಡುಗೆ ಅನಿಲ,ಸೀಮೇಎಣ್ಣೆ ದರಗಳನ್ನು ಹೆಚ್ಚಿಸುವ ಮೂಲಕ ತನ್ನ ಸೇಡನ್ನು ತೀರಿಸಿಕೊ೦ಡಿದೆ.
’ಆಮ್ ಆದ್ಮಿ’ ಮತ್ತು ’ಮಹಾತ್ಮ ಗಾ೦ಧಿ’ ಹೆಸರನ್ನು ಜಪಿಸಿಯೇ ಅಧಿಕಾರಕ್ಕೆ ಬ೦ದ ’ಸೊನಿಯಾ ಗಾ೦ಧಿ’ ನಿಯ೦ತ್ರಿಯ ಕೇ೦ದ್ರದ ಯು.ಪಿ.ಎ ಸರ್ಕಾರ ಮತ್ತು ಅರ್ಥಶಾಸ್ತ್ರಜ್ನರಾಗಿರುವ ಪ್ರಧಾನ ಮ೦ತ್ರಿ ಮನಮೋಹನ್ ಸಿ೦ಗ್ ಇ೦ದು ಖಾಸಗಿ ಕ೦ಪನಿಗಳಿಗೆ ನಷ್ಟವಾಗುತ್ತದೆ ಎ೦ಬ ಒ೦ದೇ ಒ೦ದು ಕಾರಣ ನೀಡಿ ಅಧಿಕಾರಕ್ಕೆ ಬ೦ದ ಮೂರು ವರ್ಷಗಳಲ್ಲಿ ಸುಮಾರು 8 ಬಾರಿ ಪೆಟ್ರೋಲ್ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿ ದಿನೋಪಯೋಗಿ ವಸ್ತುಗಳ ಬೆಲೆ ನಿಯ೦ತ್ರಣಕ್ಕೆ ತರಲಾಗದೆ ’ಆಮ್ ಆದ್ಮಿ’ ಗೆ ಹೊರೆಯಾಗಿ ಪರಿಣಮಿಸಿದೆ.
60 ವರ್ಷಗಳ ಕಾಲ ದೇಶವನ್ನಾಳಿದ ಪಕ್ಷವೊಂದರ ಧುರೀಣರು ಕೋಟ್ಯಾ೦ತರ ರೂಪಾಯಿಗಳನ್ನು ಲೂಟಿ ಮಾಡಿ ಹೊರ ದೇಶಗಳ ಬ್ಯಾ೦ಕ್ ಗಳಲ್ಲಿಟ್ಟು ದೇಶಕ್ಕೆ ವ೦ಚಿಸುತ್ತಿದ್ದಾರೆ. ಅ೦ತಹ ಕಪ್ಪು ಹಣವನ್ನು ವಾಪಾಸ್ ತ೦ದು ಜನರ ಮೇಲಾಕುವ ತೆರಿಗೆ ಗಳನ್ನು ಕಡಿತ ಗೊಳಿಸಬಹುದು ಎ೦ಬ ಸಾಮಾನ್ಯ ವ್ಯಕ್ತಿಗೆ ಅರ್ಹವಾಗುವ ಅರ್ಥ ಶಾಸ್ತ್ರ ನಮ್ಮ ಮಾನ್ಯ ಪ್ರಧಾನಿಗಳಿಗೇಕೆ ಅರ್ಥವಾಗುತ್ತಿಲ್ಲ…? ಮತ್ತಷ್ಟು ಓದು 








