ಪ್ರಜಾಪ್ರಭುತ್ವ ಭಾರತದಲ್ಲಿ ಗಾಂಧಿತ್ವದ ಮೌಲ್ಯಗಳು
– ಅರಹೊಳೆ ಸದಾಶಿವರಾಯರು
ಪ್ರತೀ ವರ್ಷವೂ ನಾವು ಗಣರಾಜ್ಯದಿನ, ಸ್ವಾತಂತ್ರ್ಯ ದಿನ, ಗಾಂಧಿ ಜಯಂತಿ ಹಾಗೂ ಗಾಂಧೀಜಿ ಪುಣ್ಯತಿಥಿಗಳನ್ನು ಆಚರಿಸುತ್ತೇವೆ-ಒಂದು ರೀತಿಯ ಅನಿವಾರ್ಯತೆಯಿಂದ ಆಚರಿಸಿದಂತೆ. ಈ ಸಂದರ್ಭಗಳಲ್ಲಿ ಮಾತ್ರ ನಮಗೆ, ಗಾಂಧೀಜಿಯವರ ತತ್ವ-ಚಿಂತನೆಗಳು ಪ್ರವಾಹೋಪಾದಿಯಲ್ಲಿ ನೆನಪಾಗುತ್ತವೆ ಮತ್ತು ಆ ಕ್ಷಣದಲ್ಲಿಯೇ ಅವುಗಳು ಮರೆತೂ ಹೋಗುತ್ತವೆ. ಈ ಹಿನ್ನೆಲೆಯಲ್ಲಿ ನಮ್ಮನ್ನು ನಾವು ಚಿಂತನೆಗೊಡ್ಡಿಕೊಂಡಾಗ, ಒಂದು ರೀತಿಯ ಖೇದಾಶ್ಚರ್ಯಗಳು ಹುಟ್ಟುತ್ತವೆ.
ಪರಿಮಿತಿಯರಿತಾಶೆ, ಪರವಶತೆಯಳಿದ ಸುಖ
ವಿರತಿಯೊಡವೆರೆದ ಲೋಕೋದ್ಯೋಗಯುಕ್ತಿ
ಪರಿಕಿಸುತ ಜೀವಿತವ ಸತ್ಯವನೆ ಪಿಡಿವ ಮತಿ
ವರಗಳೀ ನಾಲ್ಕೆ ವರ-ಮಂಕುತಿಮ್ಮ
ಪರಿಮಿತವಾದ ಆಸೆ ಇರಬೇಕು, ವ್ಯಾಮೋಹ ತೊರೆದ ಸುಖವಿರಬೇಕು, ವಿರಕ್ತಿಯಿಂದ ಕೂಡಿದ ಉದ್ಯೋಗ ಯುಕ್ತಿ ಇರಬೇಕು. ಜೀವನವನ್ನು ಪರೀಕ್ಷಿಸುತ್ತಾ, ಸತ್ಯವನ್ನು ಪ್ರೀತಿಸುವ ಬುದ್ದಿ ಇರಬೇಕು.ಇದು ಕನ್ನಡದ ಭಗವದ್ಗೀತೆಯೆಂದೇ ಜನಜನಿತವಾಗಿರುವ ಮಂಕುತಿಮ್ಮನ ಕಗ್ಗದ ಸಾಲುಗಳು. ಇದರ ಉದ್ಧರಣೆಯೊಂದಿಗೆ ನಾನು ಇಂದು ಪ್ರಸ್ತುತ ಪಡಿಸಲಿರುವ ವಿಚಾರಧಾರೆಗೆ ಮೊದಲಂಕಿತ ಇಡುತ್ತಿದ್ದೇನೆ. ಮತ್ತಷ್ಟು ಓದು 
ಜಾತಿ ವಿನಾಶವೋ? ಸಂಪ್ರದಾಯಗಳ ವಿನಾಶವೋ?
– ಸಂತೋಷ್ ಕುಮಾರ್ ಪಿ.ಕೆ, ಶಂಕರಘಟ್ಟ
ಇತ್ತೀಚೆಗೆ ಶಿವಮೊಗ್ಗದಲ್ಲಿ ಜಾತಿ ವಿನಾಶ ಸಮಾವೇಶವೊಂದು ಜರುಗುತ್ತಿರುವುದು ಒಳ್ಳೆಯ ಸುದ್ದಿ. ಸಮಾಜದಲ್ಲಿರುವ ಅನ್ಯಾಯ ಶೋಷಣೆಗಳನ್ನು ಹೋಗಲಾಡಿಸಲು ಚಳುವಳಿಗಳು, ಸಮಾವೇಶಗಳು ಯಾವ ಸ್ವರೂಪದಲ್ಲಾದರೂ ನಡೆಯಲೇಬೆಕು. ಅದು ಭೌದ್ದಿಕ ಚಳುವಳಿಯಾಗಲಿ, ಸಾಮಾಜಿಕ ಚಳುವಳಿಯಾಗಲೀ ಎರಡೂ ಸಹ ಅಷ್ಟೇ ಪ್ರಮುಖವಾದವು. ಶಿವಮೊಗ್ಗದಲ್ಲಿ ನಡೆಯುತ್ತಿರುವ ಸಮಾವೇಶ ಜಾತಿಯನ್ನು ನಾಶಮಾಡಲು ಅಂತರಜಾತಿವಿವಾಹಿತರನ್ನು ಹಾಗೂ ಅದಕ್ಕೆ ಸಂಬಂಧಿಸಿದ ಸಮಾನ ಮನಸ್ಕರನ್ನು ಒಟ್ಟಿಗೆ ಸೇರಿಸುವ ಪ್ರಯತ್ನವನ್ನು ಮಾಡುತ್ತಿದೆ. ಅದರ ಜೊತೆ ಜೊತೆಗೆ ಭೌದ್ಧಿಕ ಚಳುವಳಿಯೂ ಸಹ ಆಗಿಂದಾಗ್ಗೆ ನಡೆಯುತ್ತಲೇ ಇದೆ. ಅಂತಹ ಚಳುವಳಿಯ ಕುರುಹಾಗಿ ಹಲವಾರು ಲೇಖನಗಳು ಮಾದ್ಯಮಗಳಲ್ಲಿ ಬರುತ್ತಿವೆ. ಹಾಗೆ ಬಂದಂತಹ ಒಂದು ಲೇಖನದ ವಿಮರ್ಶೆಯನ್ನು ಇಲ್ಲಿ ಮಾಡಲು ಪ್ರಯತ್ನಿಸಲಾಗುವುದು. ಇಂತಹ ಪ್ರಯತ್ನ ಏಕೆಂದರೆ ಕಳೆದ ೬೦, ೭೦ ವರ್ಷಗಳಿಂದಲೂ ಇಂತಹ ಚಳುವಳಿ ಸಮಾವೇಶ ನಡೆಯುತ್ತಿದ್ದರೂ ಜಾತಿ, ಶೋಷಣೆ, ಅನ್ಯಾಯ ದಿನೆದಿನೇ ಹೆಚ್ಚಾಗುತ್ತಿವೆ. ಕೇವಲ ಹಳೆಯ ಹಲಸಲು ವಿಚಾರಗಳನ್ನೇ ಪುನರಾವರ್ತಿಸುವ ಬದಲು ಸಮಸ್ಯೆ ಎಲ್ಲಿಂದ ಉಗಮವಾಗುತ್ತಿದೆ ಎಂಬುದನ್ನು ತುರ್ತಾಗಿ ಅರಿಯಬೇಕಾಗಿದೆ. ಆದ್ದರಿಂದ ಪ್ರಸಕ್ತ ಕಾಲಘಟ್ಟದಲ್ಲಿ ಇದುವರೆಗೂ ನಾವು ಕೇಳಿಕೊಂಡು ಬಂದಂತಹ ವಿಚಾರಗಳನ್ನು ಹಾಗೂ ಇಂದು ಹೇಳುತ್ತಿರು ವ ವಿಚಾರಗಳನ್ನು ಜೊತೆಗೆ ನಮ್ಮನ್ನು ನಾವೇ ಪುನರಾವಲೋಕಿಸುವ ಸಂದರ್ಭ ಇಂದು ನಮ್ಮ ಮುಂದಿದೆ.
ಎಸ್. ಕೆ ಭಗವಾನ್ ದಿನಾಂಕ 3 ಜೂನ್ 2011 ರಂದು ಪ್ರಜಾವಾಣಿಯಲ್ಲಿ ಬರೆದ ಅವರ ಲೇಖನದ ಒಟ್ಟಾರೆ ವಾದ ಈ ರೀತಿಯಾಗಿತ್ತು, ಜಾತಿಯನ್ನು ಇದುವರೆಗೂ ದೂರಿದ್ದು ಸಾಕು, ಇನ್ನು ಅದನ್ನು ನಾಶ ಮಾಡಲೇಬೇಕು. ಜಾತಿ ನಾಶವಾದರೆ ಹಲವಾರು ಸವಲತ್ತುಗಳು ಸಹ ಸುಮುದಾಯಗಳಿಗೆ ದೊರೆಯುತ್ತವೆ ಎಂದು ಲೇಖಕರು ಹೇಳುತ್ತಾರೆ. ಆದರೆ ಹಾಗೆ ಹೇಳುವ ಮುನ್ನ ಕೆಳಕಾಣಿಸಿರುವ ಪ್ರಶ್ನೆಗಳಿಗೆ ಯಾರಾದರೂ ಉತ್ತರಿಸಲೇಬೇಕು. ಮತ್ತಷ್ಟು ಓದು 
ಆಧುನಿಕ ಬೇತಾಳನೂ ವಿಕ್ರಮಾದಿತ್ಯನೂ ಮತ್ತು ಕಾಲೇಜು ಹುಡುಗರು…
ಸಾತ್ವಿಕ್ ಎನ್ ವಿ
ಯಥಾ ಪ್ರಕಾರ ಹಠಬಿಡದೇ ಸೆಪ್ಟೆಂಬರ್ ಮಾರ್ಚ್ ಸೆಪ್ಟೆಂಬರ್ ಎಕ್ಸಮ್ ಬರೆಯೋ ರಿಪಿಟರ್ ವಿದ್ಯಾರ್ಥಿ ಥರಾ ವಿಕ್ರಮ ರಾಜನು ಮರದಲ್ಲಿದ್ದ ಬೇತಾಳವನ್ನು ಪ್ರೈಮರಿ ಶಾಲೆಯ ಮಕ್ಕಳ ಮಣ ಭಾರದ ಪುಸ್ತಕದ ಚೀಲದಂತೆ ಹೆಗಲಿಗೇರಿಸಿ ನಡೆಯುತ್ತಿದ್ದನು. ವಶೀಲಿ ಗೊತ್ತಿಲ್ಲದ ಸರ್ಕಾರಿ ನೌಕರನಂತೆ ದುಡಿಯುವುದನ್ನು ನೋಡಿ ಬೇತಾಳನಿಗೆ ಅಯ್ಯೋ ಪಾಪ ಎನಿಸಿ ‘ ವಿಕ್ರಮ ಮಹಾರಾಜ ನಿನ್ನ ಕರ್ತವ್ಯ ಪ್ರಜ್ಞೆ ಮೆಚ್ಚಿದ್ದೇನೆ. ದಾರಿಸಾಗಲು ಕಥೆಯೊಂದನ್ನು ಹೇಳುತ್ತೇನೆ. ಮೊಬೈಲ್ ಅಲ್ಲಿ ಮಾತಾಡುತ್ತಾ ಸಾಗೋ ಪ್ರೇಮಿಯ ಹಾಗೆ ನಿನಗೆ ದಾರಿ ಸಾಗಿದ್ದೇ ಗೊತ್ತಾಗುವುದಿಲ್ಲ’ ಎಂದಿತು. ವ್ರತ ನಿಷ್ಠನಾದ ವಿಕ್ರಮ ಮಾತಾಡದೇ ಇದ್ದರೂ ಹುಡುಗಿಯರ ಮೌನವನ್ನೇ ಒಪ್ಪಿಗೆ ಎಂದು ಭಾವಿಸುವ ಪ್ರಿಯಕರನಂತೆ ತನ್ನ ಪಾಡಿಗೆ ತಾನು ಕಥೆ ಹೇಳಲು ಪ್ರಾರಂಭಿಸಿತು.
ಪುಣ್ಯ ಭರತ ಭೂಮಿಯಲ್ಲಿ ಕನ್ನಡನಾಡು ಎಂಬ ರಾಜ್ಯ. ಅಂತಿಪ್ಪ ರಾಜ್ಯದಲ್ಲಿ ತಂಗಳೂರು ವಿಶ್ವವಿದ್ಯಾನಿಲಯವೆಂಬ ವಿದ್ಯಾದೇಗುಲವಿತ್ತು. ಅಲ್ಲಿ ಉತ್ತಮ ದರ್ಜೆಯ ವಿದ್ಯಾಭ್ಯಾಸ ಸಿಗುತ್ತಿದ್ದ ಕಾರ್‍ಅಣ ಇಡೀ ದೇಶದಲ್ಲಿಯೇ ಪ್ರಸಿದ್ಧವಾಗಿತ್ತು. ಅಂಥ ವಿ ವಿ ಗೆ ಸುಭಗನೆಂಬ ವಿದ್ಯಾರ್ಥಿ ಕಲಿಯಲು ಸೇರಿದನು. ಕ್ರೀಡೆ, ಸಾಹಿತ್ಯ, ವಿಷಯಗಳಲ್ಲಿ ಒಳ್ಳೆಯ ಆಸಕ್ತಿ ಇತ್ತು. ಉತ್ತಮ ವಿದ್ಯಾರ್ಥಿಯಾದ ಈತನು ಬೇರೆ ವಿದ್ಯಾರ್ಥಿಗಳಿಗೆ ಅಸೂಯೆ ಮೂಡಿಸುವಷ್ಟು ಮಟ್ಟಿಗೆ ಬೆಳೆದನು. ವಿಭಾಗದಲ್ಲಿಯೂ ತೀವ್ರ ಚಟುವಟಿಕೆಯಿಂದ ಕೂಡಿದ್ದ ಇತನಿಗೆ ತನ್ನ ಸಮಾಜದ ಕೊಳಕುತನಗಳನ್ನು ಕಿತ್ತುಹಾಕಬೇಕೆಂಬ ತುಡಿತ. ಎಳೆ ವಯಸ್ಸು ಹುರಿಗಟ್ಟಿದ ದೇಹ, ಕನಸು ಬಿತ್ತುವ ಉಪನ್ಯಾಸಕರು ಇನ್ನೇನೂ ಬೇಕು ಸ್ವರ್ಗಕ್ಕೆ ಕಿಚ್ಚು ಹಚ್ಚಲು. ಮತ್ತಷ್ಟು ಓದು 
ರಾಜಕಾರಣದಲ್ಲಿ ಆಣೆ ಮತ್ತು ಆಣೆಯ ರಾಜಕಾರಣ
ಸಂತೋಷ್ ಕುಮಾರ್ ಪಿ.ಕೆ
ಇತ್ತೀಚಿನ ರಾಜಕಾರಣದ ಬೆಳವಣಿಗೆಯಲ್ಲಿ ಹೆಚ್.ಡಿ.ಕುಮಾರ ಸ್ವಾಮಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ ಇವರ ನಡುವೆ ಸಂಧಾನವೇರ್ಪಟ್ಟಿಲ್ಲ ಎಂಬುದನ್ನು ಸಾಬೀತುಪಡಿಸಲು ಧರ್ಮಸ್ಥಳದ ಮಂಜುನಾಥ ಕ್ಷೇತ್ರದಲ್ಲಿ ಆಣೆ ಮಾಡಲು ಸನ್ನದ್ದರಾಗಿರುವುದು ಬಹುಟೀಕೆಗೆ ಒಳಗಾಗಿದೆ. ಇದು ಮೇಲ್ನೋಟಕ್ಕೆ ಕೇವಲ ಆಣೆ ಪ್ರಮಾಣದ ಸಮಸ್ಯೆಯಂತೆ ಕಂಡರೂ ಸಹ ಆ ಸಮಸ್ಯೆಯ ಆಳ ಅಗಲ ನಾವು ಊಹಿಸಲು ಸಾಧ್ಯವಿರದ ಮಟ್ಟಿಗೆ ಇದೆ. ಬಹುತೇಕ ಚಿಂತಕರು, ಲೇಖಕರು ಹಾಗೂ ವಿದ್ವಾಂಸರನ್ನೊಳಗೊಂಡು ಆ ಆಣೆ ಮಾಡುವ ಪ್ರವೃತ್ತಿಯನ್ನು ಕಟುವಾಗಿ ಟೀಕಿಸುತ್ತಿದ್ದಾರೆ, ಇಲ್ಲಿ ಕೇವಲ ಆಣೆ ಪ್ರಮಾಣದ ವಿಚಾರವನ್ನುವಿವಮರ್ಶಿಸಿದರೆ ಒಂದೊ, ರಾಜಕಾರಣಿಗಳ ಮೇಲೆ ಕೋಪ ಮಾಡಿಕೊಳ್ಳಬೇಕಾಗುತ್ತದೆ, ಇಲ್ಲವೆ ಅಂತಹ ಪ್ರೃತ್ತಿಯೇ ಕೆಟ್ಟದೆಒಳ್ಳೆಯದೋ ಎಂಬ ನಿರಪಯುಕ್ತ ಚರ್ಚೆಯನ್ನು ಮಾಡಬೇಕಾಗುತ್ತದೆ. ಆದ್ದರಿಂದ ಆಣೆ ಮಾಡುವ ಪ್ರವೃತ್ತಿಯನ್ನು ಪ್ರಶ್ನೆಮಾಡುವ ನೆಪದಲ್ಲಿ ನಮ್ಮ ರಾಜ್ಯಾಂಗದ ಅಥವಾ ಸೆಕ್ಯುಲರಿಸಂ ಸಮಸ್ಯೆಯನ್ನು ಇಲ್ಲಿ ಚರ್ಚಿಸಲು ಪ್ರಯತ್ನಿಸುತ್ತೇನೆ. ಹಾಗಾಗಿ ಆಣೆ ಮಾಡುವುದರಲ್ಲಿ ತಪ್ಪೇನಿದೆ ಎಂಬುದನ್ನು ನೋಡುವಾ ಅಥವಾ ಆಣೆ ಮಾಡುವುದು ನಮಗೇಕೆ ತಪ್ಪಾಗಿ ಗೋಚರಿಸುತ್ತಿದೆ ಎಂಬುದನ್ನು ಅವಲೋಕಿಸುವ. ಮತ್ತಷ್ಟು ಓದು 
ಮಂಜುನಾಥನ ದಯೆ ಇರಲಿ!!!
ಅರೆಹೊಳೆ ಸದಾಶಿವ ರಾವ್
ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ,
ನಿನಗೊಂದು ಪತ್ರ ಬರೆಯಬೇಕಾದ ಅನಿವಾರ್ಯತೆ ಬಂದೀತು ಎಂದು ನಾವು ಅಂದುಕೊಂಡಿರಲಿಲ್ಲ. ಒಂದು ನಂಬುಗೆ ಇದೆ. ಅದೆಂದರೆ, ನಿನ್ನ ಬಳಿ ಯಾವುದೇ ಭಕ್ತ ಬಂದು, ತನ್ಮಯತೆಂದ ಏನಾದರೂ ಕೇಳಿಕೊಂಡರೆ, ಕಷ್ಟ ಪರಿಹಾರವಾಗಿ, ಕೋರಿಕೆ ನೆರವೇರುತ್ತದೆ ಎಂದು. ಆದರೆ ತಪ್ಪು ಮಾಡಿದವರನ್ನು ನೀನೇ ನೋಡಿಕೊಳ್ಳುತ್ತಿ ಎಂದು ಒಮ್ಮೆ ಬಾಮಾತಿನಲ್ಲಿ ಹೇಳಿದರೂ, ಮತ್ತೆ ಅದನ್ನು ಹಿಂಪಡೆಯಲು ನಿನ್ನ ಬಳಿಯೇ ಬರಬೇಕಾಗುತ್ತದೆ. ವಿಷಯವನ್ನು ನಿನ್ನ ಮಡಿಲಿಗೆ ಹಾಕಿ ಬಿಟ್ಟರೆ, ಫಲಾಫಲ ನಿನ್ನ ಇಚ್ಛೆಯಂತೆ ನಡೆಯುತ್ತದೆ ಮತ್ತು ಇದು ಇಡೀ ಕುಟುಂಬಕ್ಕೇ ಅನ್ವುಸುತ್ತದೆ.
ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ಇಡೀ ರಾಜ್ಯ ಅಥವಾ ದೇಶದ ಕುಟುಂಬವೇ ಒಂದಾಗಿ ಒಬ್ಬ ಯಜಮಾನನನ್ನಾಗಿ ಆಯ್ಕೆ ಮಾಡಿ ಕಳುಹಿಸುತ್ತೇವೆ. ನಮ್ಮ ದುರಾದ್ರಷ್ಟವೆಂದರೆ ಅದಾದ ಮೇಲೆ ನಮಗೆ ಅಂತಹ ಯಜಮಾನನ ಮೇಲೆ ಯಾವುದೇ ನಿಯಂತ್ರಣ ಇರುವುದಿಲ್ಲ. ಆಗೆಲ್ಲಾ ನಾವು ನಮ್ಮನ್ನು ದೇವರೇ ಕಾಪಾಡಬೇಕು ಎಂದುಕೊಂಡು ನಿನ್ನ ತಲೆಯ ಮೇಲೆ ಭಾರ ಹಾಕಿ ಸುಮ್ಮನುಳಿಯುತ್ತೇವೆ.
ಗೌಡರ ವಂಶ ಇರಬಹುದು, ಯಡ್ಯೂರಪ್ಪನವರ ವಂಶವಿರಬಹುದು, ಎಲ್ಲರ ಮೇಲೂ ನಾವು ವಿಶ್ವಾಸ ಇಟ್ಟು, ದೇಶದ ಪರಮಾಧಿಕಾರಗಳ ವಿವಿಧ ಹಂತಗಳನ್ನು ನೀಡಿದವರು. ಆದರೆ ಅವರೆಲ್ಲಾ ಅಧಿಕಾರ ಸಿಕ್ಕ ನಂತರ, ಈ ಎಲ್ಲದೂ ತಮಗೆ ಕಟ್ಟಿಟ್ಟದ್ದು ಎಂಬಂತೆ ವರ್ತಿಸಿದ್ದು ಮಾತ್ರ ನಿಜ. ಎಲ್ಲರೂ ಅವರವರ ಮಟ್ಟಿಗೆ ರಾಜ್ಯದ ಬೊಕ್ಕಸದಿಂದ ಸಾಧ್ಯವಾದಷ್ಟೂ ಎತ್ತಿದವರೇ ಎಂದು ಇಬ್ಬರೂ ಆರೋಪಿಸಿಕೊಳ್ಳುತ್ತಿದ್ದಾರೆ. ಸತ್ಯ ಏನು ಎನ್ನುವುದು ರಾಜ್ಯದ ಎಲ್ಲರಿಗೂ ಗೊತ್ತಿದೆ. ಯಡ್ಯೂರಪ್ಪ ಮತ್ತು ಕುಮಾರ ಸ್ವಾಮಿ-ಇಬ್ಬರೂ ಎಲ್ಲೆಲ್ಲಾ ಸಾಧ್ಯವೋ ಅಲ್ಲೆಲ್ಲಾ ಮೆಂದವರೇ ಎಂಬುದೇ ಈ ಸತ್ಯ!(ನಿನಗೆ ಗೊತ್ತಿಲ್ಲದ್ದೇನಲ್ಲ ಬಿಡು) ಮತ್ತಷ್ಟು ಓದು 
ಜಾತಿ ಎಂಬ ಜಾಡ ಹಿಡಿದು…
– ವಸಂತ್ ಕೋಡಿಹಳ್ಳೀ ಲಕ್ಕೂರು
ಮನುಷ್ಯ ಹುಟ್ಟುತ್ತಾ ಹುಟ್ಟುತ್ತಾ ಸ್ವಾತಂತ್ರ ಜೀವಿ!, ಅವನು ಬೆಳೆದಂತೆಲ್ಲ ಸಮಾಜದ ಕಟ್ಟುಪಾಡುಗಳು ಅವನ ಸ್ವಾತಂತ್ರವನ್ನು ಕಸಿದುಕೊಳ್ಳುತ್ತಾ ಬರುತ್ತದೆ. ಕರ್ನಾಟಕದ ಶ್ರೇಷ್ಟ ಕವಿ ಕುಂವೆಂಪುರವರು ತನ್ನ ವಿಶ್ವಮಾನವ ಸಂದೇಶದಲ್ಲಿ ಹೀಗೆ ಹೇಳುತ್ತಾರೆ. “ಪ್ರತಿಯೊಂದು ಮಗುವೂ ಹುಟ್ಟುತ್ತಲೆ ವಿಶ್ವಮಾನವ. ಬೆಳೆದಂತೆ ನಾವು ಅದನ್ನು ‘ಅಲ್ಪಮಾನವ’ನನ್ನಾಗಿ ಮಾಡುತ್ತೇವೆ. ಎಂದರೆ ಹುಟ್ಟುವಾಗ ಎಲ್ಲರೂ ವಿಶ್ವಮಾನವರಾಗಿಯೇ ಹುಟ್ಟುತ್ತಾರೆ. ಬೆಳೆದಂತೆ ನಾವು ಅವರನ್ನು ಜಾತಿ, ಧರ್ಮ, ಬಾಷೆ, ದೇಶ, ಜನಾಂಗ ಎಂಬಲ್ಲ ಕಟ್ಟು ಪಾಡುಗಳಿಂದ ಬಂಧಿಸುತ್ತೇವೆ. ಬಹುಶಃ ಅವನು ಹುಟ್ಟಿದ ಸಮಜ ಅವನನ್ನು ಅಲ್ಪನನ್ನಾಗಿಸುತ್ತದೆ. ಇಲ್ಲಿ ‘ಸಮಾಜ’ವೆಂಬುದು ಮನುಷ್ಯ ಕಳಂಕವಲ್ಲವೇ
ಸರಿ ನಾನು ಕವಲುದಾರಿಗಳಲ್ಲಿ ಸಾಗಿ ಮನುಷ್ಯನ ನಿಗೂಢ ಜಾಡು ಹಿಡಿದು. ಅವನ ಕೆಲವು ಪದರುಗಳನ್ನು ಇಲ್ಲಿ ಮಂಡಿಸಲು ಪ್ರಯತ್ನಿಸುತ್ತೇನೆ. ಕುವೆಂಪುರವರು ಒಂದು ಜನಾಂಗ ಮತ್ತೊಂದು ಜನಾಂಗವನ್ನು ಮೆಟ್ಟಿ ತುಳಿಯುವುದು ವಿರಾಟ್ ಶಕ್ತಿ, ವಿರೋಧಿ ಕೃತ್ಯ, ಹೇಡಿತನ ಎಂದು ಬಣ್ಣಿಸುತ್ತಾರೆ. ಸಮಾಜದ ನೆರಳಿನಲ್ಲಿ ನಮ್ಮ ಬೆಳವಣಿಗೆಗಾಗಿ ತಮ್ಮ ಜೀವನದ ಮೌಲ್ಯಗಳನ್ನು ಸರಿದೂಗಿಸುವ ನೆಪದಲ್ಲಿ “ಜಾತಿ, ಬಾಷೆ, ಸಂಸ್ಕೃತಿಗಳ ಮೊರೆ ಹೋಗುವುದಂತೂ ಸರಿ ?. ಅಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬಂತೆ ವಿಂಗಡಿಸಿ ಉನ್ನತವಾದ ಸ್ತಾನಗಳನ್ನು ಮೇಲಿನ ಮೂರೂ ವರ್ಗದವರು ಪಡೆದುಕೊಂಡು ಶೂದ್ರರನ್ನು ಇಂದಿಗೂ ತುಳಿಯುತ್ತಾ ಶೋಷಣೆ ಗೈಯುವುದು ಯಾವ ನ್ಯಾಯ ? ಮತ್ತಷ್ಟು ಓದು 
ಇದರ ಕತೆ ಇಷ್ಟೇ ಕಣಪ್ಪೋ….
ಉಮೇಶ್ ದೇಸಾಯಿ
ಹೌದು ಆ ಕತೆಬರೆದವ ಸಹ ಈ ತಿರುವು ಊಹಿಸಿರಲಿಕ್ಕಿಲ್ಲ. ನಾವು ಆರಿಸಿ ಕಳಿಸಿದ ಪಕ್ಷ ಅದರ ಮುಖಂಡ ಇಂದು ಆಣೆ ಪ್ರಮಾಣ ಮಾಡುತ್ತಾರಂತೆ ಅವರ ಹಿಂದಿನ ಸಿಎಮ್ಮು..

ಕನ್ನಡ ನಾಡೆಂಬ ಕರುಣೆಯ ಬೀಡೂ, ರಾಬಿನ್ ಚುಗ್ ಎಂಬ ಅವಿವೇಕಿಯೂ
(ಇತ್ತೀಚೆಗೆ ಫೇಸ್ ಬುಕ್ ನಡೆಯಿತು ಎನ್ನಲಾದ ವಿವಾದ ಕುರಿತು ನಿಲುಮೆ ತಂಡದ ವಿಜಯ್ ಹೆರಗು ಅವರು ವಿವಾದಿತ ವ್ಯಕ್ತಿ ರಾಬಿನ್ ಚುಗ್ ರನ್ನು ಸ್ವತಃ ಸಂಪರ್ಕಿಸಿ ಮಾತಾಡಿ ಅದರ ವಿವರಗಳನ್ನು ದಾಖಲಿಸಿದ ಲೇಖನವಿದು. -ನಿಲುಮೆ)

ಪಕ್ಯ…!
– ಹರೀಶ್ ಶೆಟ್ಟಿ, ಶಿರ್ವ
ಪಕ್ಯ…ಪಕ್ಯ ನನ್ನ ಬಿಲ್ಡಿಂಗ್ನಲ್ಲಿ ಗ್ರೌಂಡ್ ಫ್ಲೂರ್ ನಲ್ಲಿ ಇರುತಿದ್ದ. ಅವನ ತಂದೆ ದೊಡ್ಡ ಕುಡುಕ ಹಾಗು ಪ್ರಯೋಜನ ಇಲ್ಲದವ, ಪಕ್ಯನ ತಾಯಿ ಅಲ್ಲಿ ಇಲ್ಲಿ ದುಡಿದು ಹೇಗಾದರೂ ಜೀವನ ಸಾಗಿಸುತಿದ್ದರು. ಪಕ್ಯ ನನ್ನಿಂದ ಎರಡು ಮೂರೂ ವರುಷ ದೊಡ್ಡವ. ಪಕ್ಯ ಚಿಕ್ಕಂದಿನಿಂದಲೂ ಮಂದ ಬುದ್ದಿ (Special Abnormal child), ಜೀವ ದೊಡ್ಡದಾದರೂ ಅವನ ಬುದ್ದಿ ಬೆಳವಣಿಗೆ ಆಗಲಿಲ್ಲ, ಪಕ್ಯನಿಗೆ ಇಬ್ಬರು ತಂಗಿಯರಿದ್ದರು . ೧೨ ವರುಷ ದಲ್ಲಿಯೇ ಪಕ್ಯನ ಜೀವ ೬ ಫೀಟ್ ಉದ್ದ ಆಗಿತ್ತು, ಆದರೆ ಅವನ ಬುದ್ದಿ ಚಿಕ್ಕ ಮಕ್ಕಳ ಹಾಗೆ. ಪಕ್ಯ ಇಡಿ ದಿನ ಅಲ್ಲಿಂದ ಇಲ್ಲಿ ಇಲ್ಲಿಂದ ಅಲ್ಲಿ ತಿರುಗುತ ಇರುತ್ತಿದ, ಅವನ ತಾಯಿ ಹೊಟ್ಟೆ ಪಾಡಿಗಾಗಿ ದುಡಿಯಲ್ಲಿಕೆ ಹೋಗುತತ್ತಿದ್ದಳು, ಅವನ ತಂದೆಗೆ ಕುಡಿಯುದರಲ್ಲಿ ಪುರ್ಸ್ಹೊತ್ತು ಇರುತ್ತಿರಲಿಲ್ಲ .
ಹಣ ಕೊಟ್ಟು ಅತಿಥಿಯಾಗಿ..!
ಅರೆಹೊಳೆ ಸದಾಶಿವ ರಾವ್
ಆಶ್ಚರ್ಯವಾಗಬಹುದು ನಿಮಗೆ ಈ ಲೇಖನದ ರ್ಶೀಕೆ ನೋಡಿ. ಇದು ಇತ್ತೀಚಿನ ಒಂದು ಹವ್ಯಾಸವಾಗಿ ಬಿಟ್ಟಿದೆ. ಇತ್ತೀಚೆಗೆ ನನಗೊಂದು ಸಭೆಗೆ ಅತಿಥಿಯಾಗಿ ಭಾಗವಹಿಸಲು ಕರೆ ಬಂತು. ಸಂತಸದಿಂದ ಒಪ್ಪಿಕೊಂಡೆ. ಅಂತಹಾ ವಿಶೇಷ ವ್ಯಕ್ತಿ ನಾನಲ್ಲ ಎಂಬ ಅರಿವಿದ್ದೂ ಒಪ್ಪಿಕೊಂಡೆ. ಒಂದು ವಾರ ಕಳೆದಿತ್ತು. ಆಯೋಜಕರಿಂದ ಮತ್ತೆ ಕರೆ ಬಂತು. ಅತಿಥಿಯಾಗಿ ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳನ್ನು ಹೇಳಿದರು. ಮುಂದುವರಿದು ಕಾರ್ಯಕ್ರಮದ ಒಟ್ಟೂ ಖರ್ಚಿನ ಬಗ್ಗೆ ನಾನು ಕೇಳದೆಯೇ ಹೇಳುತ್ತಾ, ನಿಮ್ಮಿಂದ ನಾವು ಕನಿಷ್ಟ ಇಂತಿಷ್ಟು ನಿರೀಕ್ಷಿಸುತ್ತಿದ್ದೇವೆ ಎಂದರು. ಒಮ್ಮೆ ಆಶ್ಚರ್ಯವಾದರೂ, ನಾನು ಅತಿಥಿಯಾಗಿ ಬರುತ್ತಿದ್ದೂ, ನಾನೇ ವಂತಿಗೆ ನೀಡಬೇಕಾದ ಅನಿವಾರ್ಯತೆಯ ಬಗ್ಗೆ ಪ್ರಶ್ನಿಸಿದೆ. ನಾವು ಇದೇ ಸಂಪ್ರದಾಯ ಪಾಲಿಸುತ್ತಿದ್ದೇವೆ ಎಂಬ ಉತ್ತರ ಬಂತು. ಕ್ಷಮಿಸಿ, ನಾನು ಈ ಸಂಪ್ರದಾಯ ಪಾಲಿಸುವುದಿಲ್ಲ ಎಂದೆ. ಸರಿ, ಮತ್ತೆ ಸಂಪರ್ಕಿಸುತ್ತೇವೆ ಎಂದು ಫೋನ್ ಇಟ್ಟರು… ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ನಾಪತ್ತೆ!
ಇದು ಇತ್ತೀಚೆಗೆ ಬೆಳೆದು ಬಂದಿರುವ ಸಂಪ್ರದಾಯ. ಇತ್ತೀಚೆಗೆ ನಾವೂ ಒಂದು ಕಾರ್ಯಕ್ರಮ ಆಯೋಜಿಸಿದ್ದೆವು. ಸಮಾಜದಲ್ಲಿ ಉನ್ನತ ಸ್ಥಾನ ಹೊಂದಿದ್ದ ಒಬ್ಬರಲ್ಲಿ ನಾವು ಅತಿಥಿಯಾಗಿ ಬರುವಂತೆ ವಿನಂತಿಸಿದೆವು. ನಿರ್ದಿಷ್ಠ ದಿನಾಂಕದಂದು ಅವರಿಗೆ ಬೇರಾವುದೋ ಕಾರ್ಯಕ್ರಮ ಇದ್ದುದಕ್ಕೆ ಬರಲಾಗುವುದಿಲ್ಲ ಎಂದರು. ಸರಿ, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾದರೂ ಬರುವಂತೆ ಅವರನ್ನು ವಿನಂತಿಸಿದೆವು. ಅದಕ್ಕೆ ಥಟ್ಟಂತ ಆ ವ್ಯಕ್ತಿ ಆಗದು, ಆ ದಿನ ನಾನು ಫ್ರೀ ಆಗಿದ್ದರೂ, ಬರಲಾಗದು, ನನ್ನ ‘ಸ್ಥಾನ ಮಾನ’ ನೋಡಬೇಕಲ್ಲವೇ ಎಂದು ಬಿಟ್ಟರು!!. ಕೊನೆಗೆ ಸರಿ ಎಂದು ನಾವು ಹೋದ ದಾರಿಗೆ ಸುಂಕವಿಲ್ಲದಂತೆ ಮರಳ ಹೊರಟಾಗ, ಮುಂದೆ ಏನಾದರೂ ಇಂತಾದ್ದೇ ‘ದೊಡ್ಡ’ ಮಟ್ಟದ ಕಾರ್ಯಕ್ರಮ ಇದ್ದರೆ ಬನ್ನಿ, ಅತಿಥಿಯಾಗಿಯೂ ಬರುತ್ತೇನೆ ಮತ್ತು ಸ್ವಲ್ಪ ಧನ ಸಹಾಯವನ್ನೂ ಮಾಡುತ್ತೇನೆ ಎಂದರು. ಧನ್ಯೋಸ್ಮಿ ಎಂದುಕೊಂಡೆವು!! ಮತ್ತಷ್ಟು ಓದು 





