ವಿಷಯದ ವಿವರಗಳಿಗೆ ದಾಟಿರಿ

Posts from the ‘ರಾಜಕೀಯ’ Category

17
ಜುಲೈ

ಕುಮಾರಸ್ವಾಮಿಯವರ ಕಣ್ಣೀರಿಗೆ ಕಾರಣ ಯಾರು?

-ರಾಕೇಶ್ ಶೆಟ್ಟಿ

‘ಈ ಮೊದಲು, ಕಂಡ ಕಂಡಲ್ಲಿ ನಿದ್ದೆ ಮಾಡುವ ಮುಖ್ಯಮಂತ್ರಿಯನ್ನು ಕರ್ನಾಟಕ ಕಂಡಿತ್ತು.ಈಗ ಖರ್ಚಿಫು ಒದ್ದೆ ಮಾಡುವ ಮುಖ್ಯಮಂತ್ರಿಯನ್ನು ಕಾಣುತ್ತಿದೆ.’ ಹೀಗೊಂದು ಜೋಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ನಾನೊಬ್ಬ ಸಾಂದರ್ಭಿಕ ಶಿಶು,ನಾನು ಕರ್ಣ,ನಾನು ವಿಷಕಂಠ… ಹೀಗೆ ಗಂಟೆಗೊಮ್ಮೆ- ಘಳಿಗೆಗೊಮ್ಮೆ ತಮ್ಮನ್ನು ಪೌರಾಣಿಕ ಪಾತ್ರಗಳೊಂದಿಗೆ ಹೋಲಿಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕುರಿತು ತರೇವಾರಿ ಜೋಕುಗಳು ಹರಿದಾಡುತ್ತಿವೆ.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್ ಅವರ ಗಾದಿಯನ್ನು ಪಲ್ಲಟಗೊಳಿಸಿ ಬಿಜೆಪಿಯ ಜೊತೆಗೂಡಿ ೨೦-೨೦ ಒಪ್ಪಂದದ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗುವ ಮೂಲಕ, ರಾಜ್ಯ ರಾಜಕೀಯದಲ್ಲಿ ಒಮ್ಮೆಲೇ ಸ್ಟಾರ್ ಆಗಿ ಹೊರಹೊಮ್ಮಿದವರು ಕುಮಾರಸ್ವಾಮಿಯವರು.ಆಗಿನ ಸಂದರ್ಭದಲ್ಲಿ ಅವರೆಂದೂ ತನ್ನನ್ನು ಹೀಗಿನಂತೆ ‘ಸಾಂದರ್ಭಿಕ ಶಿಶು,ಕರ್ಣ” ಅಂತೆಲ್ಲ ಹೋಲಿಸಿಕೊಂಡು ಕಣ್ಣೀರಿಟ್ಟಿರಲಿಲ್ಲ. ಕಣ್ಣೀರಿಡುವ ಸಂದರ್ಭವೂ ಬಂದಿರಲಿಲ್ಲ.ಯಾಕೆಂದರೆ ಅದು ಒಪ್ಪಿಕೊಂಡು ಆಗಿದ್ದ ಮದುವೆ.ಮದುವೆಯ ನಂತರ ಬರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಆಗಿನ ಸರ್ಕಾರದಲ್ಲಿ ಬಂದರೂ ತಮ್ಮ ೨೦ ತಿಂಗಳ ಅವಧಿಯನ್ನಂತೂ ಕುಮಾರಸ್ವಾಮಿ ಯಶಸ್ವಿಯಾಗಿಯೇ ದಾಟಿದ್ದರು. ಕೇವಲ ದಾಟಿದ್ದು ಮಾತ್ರವಲ್ಲ,ದಶಕಗಳ ಹಿಂದೆ ಅವರು ನೀಡಿದ ೨೦ ತಿಂಗಳ ಆಳ್ವಿಕೆಯನ್ನೇ ಮೊನ್ನೆ ಮೊನ್ನೆಯ ಚುನಾವಣೆಯಲ್ಲೂ ಅವರ ಪಕ್ಷ ಪ್ರಮುಖವಾಗಿ ಬಿಂಬಿಸಿಕೊಂಡಿತ್ತು. ಮಾತೆತ್ತಿದರೆ ಕುಮಾರಸ್ವಾಮಿಯವರ ೨೦ ತಿಂಗಳಲ್ಲಿ ನೀಡಿದ ಆಡಳಿತವನ್ನು ನೋಡಿ ಜನರು ನಮ್ಮ ಪಕ್ಷಕ್ಕೆ ಮತ ನೀಡಬೇಕು ಎನ್ನುತ್ತಿದ್ದರು. ಬಿಜೆಪಿಯೊಂದಿಗಿನ ಸಮ್ಮಿಶ್ರ ಸರ್ಕಾರದ ೨೦ ತಿಂಗಳ ಆಡಳಿತದಲ್ಲಿ ಗಳಿಸಿಕೊಂಡಿದ್ದ ಅಂತಹ ಹೆಸರನ್ನು, ಕಾಂಗ್ರೆಸ್ ಜೊತೆ ಸೇರಿ ೨ ತಿಂಗಳಲ್ಲೇ ಕಳೆದುಕೊಂಡಿದ್ದಾರೆ ಕುಮಾರಸ್ವಾಮಿಯವರು.ಕಳೆದುಕೊಂಡ ನಂತರ ಕಣ್ಣೀರಿಟ್ಟು ಮಾಧ್ಯಮವನ್ನು,ಜನರನ್ನು ದೂಷಿಸಿದರೆ ಏನು ಪ್ರಯೋಜನ? ಅಸಲಿಗೆ ಕುಮಾರಸ್ವಾಮಿಯವರ ಕಣ್ಣೀರಿಗೆ ಕಾರಣ ಯಾರು ಎಂದು ನೋಡಲಿಕ್ಕೆ ಹೋದರೆ ಖುದ್ದು ಅವರು ಹಾಗೂ ಅವರ ತಂದೆಯವರೇ ಎಂದು ಹೇಳಬೇಕಾಗುತ್ತದೆ.

ಮತ್ತಷ್ಟು ಓದು »

6
ಜುಲೈ

ಅಂಬೇಡ್ಕರ್ ಅವರಿಗೂ ಬೇಡವಾಗಿತ್ತು ಆರ್ಟಿಕಲ್ 370

– ರಾಕೇಶ್ ಶೆಟ್ಟಿ

“ಮಿ.ಅಬ್ದುಲ್ಲಾ, ಭಾರತ ಕಾಶ್ಮೀರವನ್ನು ರಕ್ಷಿಸಬೇಕು, ಅಭಿವೃದ್ಧಿಗೊಳಿಸಬೇಕು ಮತ್ತು ಕಶ್ಮೀರಿಗಳಿಗೆ ಭಾರತದ ಇತರ ಪ್ರಜೆಗಳಂತೆಯೇ ಸಮಾನ ಹಕ್ಕುಗಳಿರಬೇಕೆಂದು ನೀವು ಬಯಸುತ್ತೀರ. ಆದರೆ, ಭಾರತ ಮತ್ತು ಭಾರತೀಯರಿಗೆ ಕಾಶ್ಮೀರ ರಾಜ್ಯದಲ್ಲಿ ಯಾವುದೇ ಹಕ್ಕುಗಳು ಇರಬಾರದು ಎನ್ನುತ್ತೀರ. ನಾನು ಭಾರತದ ಕಾನೂನು ಮಂತ್ರಿ, ನನ್ನ ದೇಶದ ಹಿತಾಸಕ್ತಿಯನ್ನು ನಾನು ಕಡೆಗಣಿಸಲಾರೆ… “, ಆರ್ಟಿಕಲ್ 370ರನ್ನು ಸಂವಿಧಾನದಲ್ಲಿ ಸೇರಿಸಿ ಜಮ್ಮು ಕಾಶ್ಮೀರದಲ್ಲಿ ಜಾರಿಗೊಳಿಸುವ ವಿಷಯದಲ್ಲಿ ಅಂಬೇಡ್ಕರ್ ಅವರನ್ನು ಒಪ್ಪಿಸಲು ನೆಹರೂ ಸಲಹೆ ಮೇರೆಗೆ ಬಂದಿದ್ದ ಶೇಖ್ ಅಬ್ದುಲ್ಲಾನ ಮುಖಕ್ಕೆ ಹೊಡೆದಂತೆ ಡಾ.ಅಂಬೇಡ್ಕರ್ ಅವರು ಹೇಳಿ ಕಳುಹಿಸಿದ್ದು ಹೀಗೆ. ಖುದ್ಧು  ಸಂವಿಧಾನ  ಶಿಲ್ಪಿಯೇ ವಿರೋಧಿಸಿದ್ದ ಈ ಆರ್ಟಿಕಲ್ 370ಯನ್ನು ಅಂದು ಅವರ ಬಾಯಿ  ಮುಚ್ಚಿಸಲು  “ತಾತ್ಕಾಲಿಕ” ಎಂಬ ಪದ ಬಳಸಲಾಯಿತು. ಹೆಂಡ ಕುಡಿದ ಮರ್ಕಟದಂತಾಡುತ್ತಿದ್ದ  ನೆಹರೂ  ಸಾಹೇಬರು, ತಮ್ಮ ಬಾಲವನ್ನು ಶೇಖ್ ಅಬ್ದುಲ್ಲಾನ ಕೈಗೆ ಇಟ್ಟಾಗಿತ್ತು. ಆರ್ಟಿಕಲ್  370  ಜಾರಿಯಾಗುತ್ತಿದಂತೆ ಹಿಂಬಾಗಿಲ ಮೂಲಕ ಅದಕ್ಕಿಂತಲೂ ಘೋರವಾದ ವಿಧಿ 35A ಅನ್ನು  ಜಮ್ಮು ಕಾಶ್ಮೀರಕ್ಕೆ ಅನ್ವಯಿಸಲಾಯಿತು. ಅಂದು ಅಂಬೇಡ್ಕರ್ ಅವರು ವಿರೋಧಿಸಿದ್ದ ಆರ್ಟಿಕಲ್ 370 ರದ್ಧತಿ ಬಗ್ಗೆ ಮಾತನಾಡುತ್ತಿರುವುದು ಕೇವಲ ಬಿಜೆಪಿ ಮಾತ್ರವೇ. ಹಾಗೂ ಇದನ್ನು ವಿರೋಧಿಸುವವರು ಕಾಂಗ್ರೆಸ್ ಇತ್ಯಾದಿ ಸೆಕ್ಯುಲರ್ ಪಕ್ಷಗಳು ಹಾಗೂ ಸೋ-ಕಾಲ್ಡ್ ಸಂವಿಧಾನ ರಕ್ಷಕರು…! ಮತ್ತಷ್ಟು ಓದು »

19
ಜೂನ್

ಮತಾಂಧರ ಮುಂದೆ ಸಧ್ಭಾವನೆಯ ಕನಸೇ?

-ರಾಕೇಶ್ ಶೆಟ್ಟಿ

images (1)ದಿನಾ ಸಾಯೋರಿಗೆ ಅಳೋರು ಯಾರು ಅನ್ನೋ ಗಾದೆ ಜಮ್ಮುಕಾಶ್ಮೀರ ರಾಜ್ಯದ ದಿನನಿತ್ಯದ ಹಿಂಸಾಚಾರಕ್ಕೆ ಹೇಳಿ ಮಾಡಿಸಿದಂತಿದೆ. ಆದರೆ ಈ ಗಾದೆಗೆ ಅಪವಾದವೆಂಬಂತೆ ಉಗ್ರರು, ಉಗ್ರರ ಸಿಂಪಥೈಸರ್ ಗಳು ಸತ್ತಾಗ ಅಳಲಿಕ್ಕೆ ದೇಶದಾದ್ಯಂತ ಗಂಜಿಗಿರಾಕಿಗಳು, ಸೆಕ್ಯುಲರ್ ಮಾಧ್ಯಮಗಳು ತಯಾರಾಗುತ್ತವೆ. ಆದರೆ ಕಣಿವೆಯಲ್ಲಿ ಪಾಕಿಗಳು ಗಡಿಯಾಚೆಯಿಂದ ನಡೆಸುವ ಅಪ್ರಚೋದಿತ ಗುಂಡಿನ ದಾಳಿಗೆ, ಉಗ್ರರ ದಾಳಿಗೆ ಬಲಿಯಾಗುವ ಭಾರತೀಯ ಯೋಧರಿಗೆ ಮಾತ್ರ ಈ ಭಾಗ್ಯವಿಲ್ಲ. ಇವರ ಸಾವಿನ ಸುದ್ದಿಗಳು ದಿನಪತ್ರಿಕೆಗಳಲ್ಲಿ ಕಾರ್ನರ್ ಸುದ್ದಿಯಾಗಿರುತ್ತದೆ. ಓದುವ ಜನರಿಗೂ ಇದೆಲ್ಲಾ ಅಲ್ಲಿ ಮಾಮೂಲು ಎನಿಸಿಬಿಡುತ್ತದೆ. ಆದರೆ, ಭುಜದೆತ್ತರಕ್ಕೆ ಬೆಳೆದು ನಿಂತ ಮಗನನ್ನು ಕಳೆದುಕೊಂಡ ಹೆತ್ತವರಿಗಷ್ಟೇ ಆ ನೋವಿನ ತೀವ್ರತೆ ತಟ್ಟುವುದು. ಅದೇ ನೋವಿನಲ್ಲಿ ಮಾತನಾಡಿದವರು ಹುತಾತ್ಮ ಯೋಧ ಔರಂಗಜೇಬ್ ತಂದೆ. ದೇಶಕ್ಕಾಗಿ ಪ್ರಾಣ ಕೊಡುತ್ತೇನೆಂದಿದ್ದ ನನ್ನ ಮಗ ತನ್ನ ಮಾತನ್ನು ಉಳಿಸಿಕೊಂಡಿದ್ದಾನೆ, ಅವನ ಸಾವಿಗೆ ತಕ್ಕ ಉತ್ತರವನ್ನು 72 ಗಂಟೆಗಳೊಳಗೇ ನೀಡಿ ಎಂದು ಪ್ರಧಾನಿ ಮೋದಿಯವರನ್ನು ಅವರು ಆಗ್ರಹಿಸಿದ್ದಾರೆ. ಮೊನ್ನೆ ರಂಜಾನ್ ಹಬ್ಬಕ್ಕೆಂದು ರಜೆಯಲ್ಲಿ ಮನೆಗೆ ತೆರಳುತ್ತಿದ್ದ ಯೋಧ ಔರಂಗಜೇಬ್ ರನ್ನು ಅಪಹರಿಸಿದ ಉಗ್ರಗ್ರಾಮಿಗಳು ತಲೆ, ಕತ್ತಿನ ಭಾಗಕ್ಕೆ ಗುಂಡಿಟ್ಟು ಕೊಂದಿದ್ದಾರೆ. ಅದೇ ದಿನ ರೈಸಿಂಗ್ ಕಾಶ್ಮೀರ್ ಎಂಬ ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ ಮತ್ತವರ ಖಾಸಗಿ ಅಂಗರಕ್ಷಕರನ್ನು ಉಗ್ರರು ಕೊಂದಿದ್ದಾರೆ. ಇವೆಲ್ಲಾ ಕೇಂದ್ರ ಸರ್ಕಾರದ ತಲೆಕೆಟ್ಟ ನಿರ್ಧಾರವಾಗಿದ್ದ ಪವಿತ್ರ ತಿಂಗಳಲ್ಲಿ ಭದ್ರತಾಪಡೆಗಳ ಮೇಲೆ ಏಕಪಕ್ಷೀಯ ಕದನವಿರಾಮ ಹೇರಿಕೆಯ ಫಲ. ಮತ್ತಷ್ಟು ಓದು »

13
ಜೂನ್

ಭಾರತದ ನಾಯಕರ ಹತ್ಯೆಯ ಹಿಂದಿನ ಕಾಣದ ಕೈಗಳು

– ರಾಕೇಶ್ ಶೆಟ್ಟಿ

ಆ ಮನುಷ್ಯ ಮನಸ್ಸು ಮಾಡಿದ್ದರೆ, ಬ್ರಿಟಿಷ್ ಸರ್ಕಾರದಲ್ಲಿ ‘ಐ.ಸಿ.ಎಸ್’ ಅಧಿಕಾರಿಯಾಗಿ ನೆಮ್ಮದಿಯ ಬದುಕು ಬದುಕಬಹುದಿತ್ತು, ಆದರೆ ಚಿನ್ನದ ಮೊಟ್ಟೆಯಿಡುವ ಐ.ಸಿ.ಎಸ್ ಅನ್ನು ಎಡಗಾಲಲ್ಲಿ ಒದ್ದು, ಸರ್ಕಾರಿ ಪದವಿ ನಿರಾಕರಿಸಿ ಇಂಗ್ಲೆಂಡ್ನಿಂದ ಸೀದಾ ಭಾರತಕ್ಕೆ ಬಂದ ಸುಭಾಷ್ ರವರು ಮೊದಲಿಗೆ ಕಾಂಗ್ರೆಸ್ ಪಕ್ಷ ಸೇರಿಕೊಂಡರು. ತಮ್ಮ ಸಾಮರ್ಥ್ಯದಿಂದಲೇ ಪಕ್ಷದ ಅಧ್ಯಕ್ಷ ಸ್ಥಾನಕ್ಕೂ ಏರಿದ್ದರು. ಆಗಲಾದರೂ ಅವರು ಸುಮ್ಮನೇ ಇದ್ದಿದ್ದರೂ ಸ್ವತಂತ್ರ ಭಾರತದಲ್ಲಿ ಯಾವುದಾದರೊಂದು ಸಚಿವ ಸ್ಥಾನ ಪಡೆದು ಇರುತ್ತಿದ್ದರೋ ಏನೋ. ಆದರೆ ಹುಟ್ಟಾ ಸ್ವಾಭಿಮಾನಿ ಮತ್ತು ಹೋರಾಟಗಾರರಾಗಿದ್ದ ನೇತಾಜಿಯವರು ಕಾಂಗ್ರೆಸ್ಸನ್ನೇ ಬದಲಿಸ ಹೊರಟರು. ಈಗ ಕಾಂಗ್ರೆಸ್ ಎಂಬ ಪುರಾತನ ಪಕ್ಷ ಹೇಗೆ ನೆಹರೂ ಮನೆತನದ ಅಡಿಯಾಳಾಗಿದೆಯೋ, ಆಗ ಗಾಂಧೀಜಿಯವರ ಕೈಯಲ್ಲೇ ಇತ್ತು. ಅದನ್ನು ಧಿಕ್ಕರಿಸಿ ನಿಂತ ಸುಭಾಷರನ್ನು ಗಾಂಧೀ ಬೆಂಬಲಿಗರು ಬಿಟ್ಟಾರೇನು? ಬೆಂಬಲಿಗರು ಬಿಟ್ಟರೂ, ಗಾಂಧೀಜಿ ಪಕ್ಷದ ಮೇಲಿನ ತನ್ನ ಪಾರುಪತ್ತೇದಾರಿಕೆಯನ್ನು ಬಿಡಲು ಸಿದ್ಧರಿದ್ದರಿರಲಿಲ್ಲ. ಹಾಗೆಯೇ, ಭಾರತದ ಸ್ವಾತಂತ್ರ್ಯವೊಂದೇ ಅಂತಿಮ ಗಮ್ಯವಾಗಿದ್ದ ಸುಭಾಷರಿಗೆ ಗಾಂಧೀಜಿಯವರ ಚಿಲ್ಲರೆ ರಾಜಕೀಯದ ಜಂಜಾಟಗಳು ಬೇಕಿರಲಿಲ್ಲ. ಕಾಂಗ್ರೆಸ್ಸಿನಿಂದ ಹೊರ ಬಂದ ಅವರು ಫಾರ್ವರ್ಡ್ ಬ್ಲಾಕ್ ಸ್ಥಾಪಿಸಿದರು. ಬ್ರಿಟಿಷರಿಗೆ ಸುಭಾಷ್ Potential Threat ಎನ್ನುವುದು ಅರಿವಾಗಿತ್ತು. ಅವರನ್ನು ಗೃಹಬಂಧನದಲ್ಲಿರಿಸಿದ್ದರು, ಈ ಪುಣ್ಯಾತ್ಮ ಅಲ್ಲಿಂದ ತಪ್ಪಿಸಿಕೊಂಡರು. ನಂತರದ್ದು ಭಾರತ ಸ್ವಾತಂತ್ರ್ಯ ಇತಿಹಾಸದ ರೋಚಕ ಅಧ್ಯಾಯ, ಬರಿಗೈಯಲ್ಲಿ ದೇಶಬಿಟ್ಟ ಸುಭಾಷ್, ೪೫ ಸಾವಿರ ಜನರ ಆಜಾದ್ ಹಿಂದ್ ಫೌಜ್ ಸ್ಥಾಪಿಸಿ ಬ್ರಿಟಿಷರ ನಿದ್ದೆಗೆಡಿಸಿದ್ದರು. ಎರಡನೇ ವಿಶ್ವ ಯುದ್ಧದಲ್ಲಿ ಜಪಾನ್ ಜೊತೆ ಸೇರಿಕೊಂಡು ೪೪ರಲ್ಲೇ ಅಂಡಮಾನ್-ನಿಕೋಬಾರ್ ದ್ವೀಪಗಳನ್ನು ಬ್ರಿಟಿಷರಿಂದ ಮುಕ್ತಿಗೊಳಿಸಿದರು, ಅಂತಿಮವಾಗಿ ಜಪಾನ್ ಹಾಗೂ ಆಜಾದ್ ಹಿಂದ್ ಫೌಜಿಗೆ ಈಶಾನ್ಯ ಭಾರತದಲ್ಲಿ ಹಿನ್ನಡೆಯಾಯಿತಾದರೂ, ಸುಭಾಷರು ಹೊತ್ತಿಸಿದ್ದ ಕ್ರಾಂತಿಯ ಕಿಡಿ ಸರ್ವವ್ಯಾಪಿಯಾಗಿತ್ತು. ಆಜಾದ್ ಹಿಂದ್ ಫೌಜಿನ ರುದ್ರನರ್ತನ ಬ್ರಿಟಿಷ್ ಭಾರತೀಯ ಆರ್ಮಿಯನ್ನು ಆವರಿಸಿಕೊಂಡಿತ್ತು. ಅದೇ ಸಮಯಕ್ಕೆ ಸರಿಯಾಗಿ ಅತ್ತ ಜಪಾನ್ ಶರಣಾಗಾತಿಯಾಗುವುದರಲ್ಲಿತ್ತು, ಇತ್ತ ಬ್ರಿಟಿಷರಿಗೆ ಭಾರತದಲ್ಲಿ ಉಳಿಗಾಲವಿರಲಿಲ್ಲವಾಗಿತ್ತು, ಆಗಲೇ ಶುರುವಾಗಿದ್ದು ಸುಭಾಷರ ನಿಗೂಢ ವಿಮಾನಾಪಘಾತದ ಕತೆ. ಅಪಘಾತದಲ್ಲಿ ಸುಭಾಷರು ಅಸುನೀಗಿದರು ಎನ್ನುವುದನ್ನು ಯಾರೆಂದರೇ ಯಾರೂ ನಂಬುವ ಸ್ಥಿತಿಯಲ್ಲಿರಲಿಲ್ಲ. ಅಮೇರಿಕನ್/ಬ್ರಿಟಿಷ್ ಗುಪ್ತಚರರು ವರ್ಷಗಟ್ಟಲೆ ಸುಭಾಷರ ಇರುವಿಕೆಯ ಪತ್ತೆ ಹಚ್ಚಲೆಂದೇ ಹಿಂದೆ ಬಿದ್ದಿದ್ದರು. ಇತ್ತ ಭಾರತದಲ್ಲಿ ಬ್ರಿಟಿಷರ ಹೈಫೈ ಆತಿಥ್ಯದ ಜೈಲಿನಲ್ಲಿದ್ದುಕೊಂಡೇ ಆಜಾದ್ ಹಿಂದ್ ಫೌಜಿನವರು ಭಾರತಕ್ಕೆ ಬಂದರೆ ಕತ್ತಿ ಹಿಡಿದು ಹೋರಾಡುತ್ತೇನೆಂದಿದ್ದ ಕಠಾರಿ ವೀರ ನೆಹರೂ ಸಾಹೇಬರಿಗೆ, ಸುಭಾಷ್ ವಾಪಸ್ ಬಂದರೆ ತನ್ನ ಖುರ್ಚಿಯ ಗತಿಯೇನು ಎಂದು ಚಿಂತೆ ಹತ್ತಿತ್ತು. ಅದೇ ಕಾರಣಕ್ಕೆ, ಬ್ರಿಟನ್ ಪ್ರಧಾನಿ ಆಟ್ಲಿಯವರಿಗೆ ಬರೆದ ಪತ್ರದಲ್ಲಿ, ನಿಮ್ಮ ಯುದ್ಧ ಖೈದಿ ಸುಭಾಷ್ ಗೆ ರಷ್ಯಾ ಆಶ್ರಯ ಕೊಟ್ಟಿದೆ ಎಂದು ಚಿಲ್ಲರೆ ದೂರು ನೀಡಿದ್ದರು. ಅಂದು ತೈಪೆಯಲ್ಲಿ ಯಾವುದೇ ವಿಮಾನ ಹಾರಾಟ ನಡೆದಿಲ್ಲವೆನ್ನುವುದು ಈಗ ಅಧಿಕೃತವಾಗಿದೆ. ವಿಮಾನವೇ ಹಾರದೇ, ಅಪಘಾತವಾಗಿದ್ದು ಎಲ್ಲಿಂದ? ಅಪಘಾತವೇ ನಡೆಯದಿದ್ದ ಮೇಲೆ ಸುಭಾಷರು ಹೋದರೆಲ್ಲಿ? ಹಾಗೆ ನಾಪತ್ತೆಯಾದವರನ್ನು ಹುಡುಕಿ ಕೊಲ್ಲಲಾಯಿತೇ? ಈ ನಿಗೂಢತೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಸ್ವತಂತ್ರ ಭಾರತದ ಮೊದಲ ನಿಗೂಢ ರಾಜಕೀಯ ಕಣ್ಮರೆ/ಹತ್ಯೆಯ ಸಾಲಿಗೆ ಸೇರುವುದು ಸುಭಾಷರ ಹೆಸರು. ಸುಭಾಷರು ಮಾಡಿದ ತಪ್ಪೆಂದರೆ ಸ್ವತಂತ್ರ-ಸ್ವಾಭಿಮಾನಿ-ಸಶಕ್ತ ಭಾರತದ ಕನಸು ಕಂಡಿದ್ದು. ಸುಭಾಷರಿಂದ ಶುರುವಾದ ಈ ನಿಗೂಢ ರಾಜಕೀಯ ಹತ್ಯೆ/ಕಣ್ಮರೆಯ ಸರಣಿ ಸ್ವತಂತ್ರ ಭಾರತದಲ್ಲೂ ಮುಂದುವರೆಯುತ್ತಲೇ ಹೋಯಿತು. ಮತ್ತಷ್ಟು ಓದು »

6
ಜೂನ್

ಕಮ್ಯೂನಿಸ್ಟರು ಕಮ್ಯೂನಿಸಂನನ್ನು ಕೊಂದದ್ದು ಹೀಗೆ (ಭಾಗ – ೨)

– ಪ್ರೇಮಶೇಖರ

ಸುಂದರ ಕನಸೊಂದು ಹಳವಂಡವಾದ ದುರಂತಕ್ಕೆ ಮರುಗುತ್ತಾ…

ಥಾಮಸ್ ಹಾಬ್ಸ್, ಜಾನ್ ಲಾಕ್, ಜೀನ್ ಯಾಕ್ಸ್ ರೂಸೂ ಮುಂತಾದ ಸಾಮಾಜಿಕ ಒಪ್ಪಂದ ಸಿದ್ಧಾಂತದ ಪ್ರತಿಪಾದಕರ ಪ್ರಕಾರ ‘ಬಲವೇ ಹಕ್ಕು’ ಎಂಬ ಮಾನವತಾವಿರೋಧಿ ಅರಣ್ಯ ಕಾನೂನಿನಿಂದ ಅಶಕ್ತರನ್ನು ರಕ್ಷಿಸಿ, ಸಮಾಜದ ಎಲ್ಲರ ನಡುವೆ ಸಮಾನ ನ್ಯಾಯಹಂಚಿಕೆಗಾಗಿ ರಾಜ್ಯ ಸ್ಥಾಪನೆಗೊಂಡಿತಂತೆ. ಆದರೆ ಮಾನವಜನಾಂಗ ಮುಂದೆ ಹಿಡಿದ ದಾರಿಯಲ್ಲಿ ರಾಜ್ಯವೇ ಶೋಷಕನಾಗಿ ಬದಲಾದದ್ದನ್ನು ಇತಿಹಾಸ ಹೇಳುತ್ತದೆ. ಸಾಮಾಜಿಕ ಒಪ್ಪಂದಗಳ ಮೂಲಕ ಸಮಾನನ್ಯಾಯ ಹಂಚಿಕಾವ್ಯವಸ್ಥೆ ಸಾಧ್ಯವಾಗದೇ ಹೋದಾಗ, ಬಲವಂತದ ಮೂಲಕ, ರಕ್ತಪಾತದ ಮೂಲಕ ಅದು ಅಸ್ತಿತ್ವಕ್ಕೆ ಬರುತ್ತದೆಂದು ಭವಿಷ್ಯ ನುಡಿದ ಕಾರ್ಲ್ ಮಾರ್ಕ್ಸ್ ಒಬ್ಬ ವಾಸ್ತವವಾದಿ. ಅಂತಹ ವ್ಯವಸ್ಥೆಯನ್ನು ಚಿತ್ರಿಸಿದ ಕಮ್ಯೂನಿಸಂ ಒಂದು ಉದಾತ್ತ ಮಾನವಪರ ಚಿಂತನೆ. ಆದರೆ ವಾಸ್ತವವಾದಿ ರೂಪಿಸಿದ ಉದಾತ್ತ ಮಾನವಪರ ಸಿದ್ಧಾಂತ ತನ್ನ ಅವಾಸ್ತವವಾದಿ ಹಾಗೂ ಮಾನವವಿರೋಧಿ ಹಿಂಬಾಲಕರಿಂದಲೇ ಕಳಂಕ ಹಚ್ಚಿಸಿಕೊಂಡದ್ದೊಂದು ದುರಂತ. ಈ ಪ್ರಕ್ರಿಯೆ ಭಾರತದಲ್ಲಿ ಅನಾವರಣಗೊಂಡ ಬಗೆಯನ್ನು ಸಂಕ್ಷಿಪ್ತವಾಗಿ ಈಗಿಲ್ಲಿ ಹೇಳುತ್ತೇನೆ. ಮತ್ತಷ್ಟು ಓದು »

5
ಜೂನ್

ಕಮ್ಯೂನಿಸ್ಟರು ಕಮ್ಯೂನಿಸಂನನ್ನು ಕೊಂದದ್ದು ಹೀಗೆ ( ಭಾಗ-೧ )

– ಪ್ರೇಮಶೇಖರ

ನಮ್ಮ ವಿಚಾರವಂತರು, ಸಾಂಸ್ಕೃತಿಕ ನಾಯಕರು ಶಕ್ತಿಮೀರಿ ಪ್ರಶಂಸಿಸಿದ್ದು, ಪ್ರಚುರ ಪಡಿಸಲು ಹೆಣಗಿದ್ದು ಕಮ್ಯೂನಿಸಂ ಮತ್ತು ಸೆಕ್ಯೂಲರಿಸಂಗಳನ್ನು. ಆದರೆ ಅವರ ನಿರೀಕ್ಷೆಗೆ ವಿರುದ್ಧವಾಗಿ ಕಮ್ಯೂನಿಸಂ ನಮ್ಮ ಸಮಾಜೋ-ರಾಜಕೀಯವಲಯದಲ್ಲಿ ಮುಂಚೂಣಿಗೆ ಬರಲೇ ಇಲ್ಲ. ಜತೆಗೆ, ತಾವು ಬಯಸಿದಂಥ ಸೆಕ್ಯೂಲರಿಸಂ ಇಲ್ಲಿ ನೆಲೆಯೂರಿಲ್ಲವೆಂದು ಅಲವತ್ತುಕೊಳ್ಳುತ್ತಲೇ ಇದ್ದಾರೆ. ಕರ್ನಾಟಕದ ಸಂದರ್ಭದಲ್ಲಿ ಇಂಥಾ ಗೋಳಾಟವನ್ನು ರಂಜನೀಯವಾಗಿ ಪ್ರದರ್ಶಿಸಿದ್ದು ಪತ್ರಕರ್ತ ಲಂಕೇಶ್, ಅವರಿಗೆ ಆಗಾಗ ‘ಅವಶ್ಯಕತೆ’ ಗನುಗುಣವಾಗಿ ಸಾಥ್ ನೀಡಿದ್ದು ಜ್ಞಾನಪೀಠಿ ಯು. ಆರ್. ಅನಂತಮೂರ್ತಿ. ಇವರ ಇಷ್ಟೆಲ್ಲಾ ಪ್ರಯತ್ನಗಳು ‘ಯಶಸ್ವಿ’ಯಾಗದಿರಲು ಕಾರಣವೇನು? ಸಾಮಾನ್ಯ ಜನತೆ ಇವರ ವಿಚಾರಗಳಿಗೆ ಇವರು ಬಯಸಿದಷ್ಟು ಸಹಮತಿ ತೋರದಿರಲು ಇರುವ ಕಾರಣವಾದರೂ ಏನು?  ಜನ ದಡ್ಡರೇ?  ಅಥವಾ ಈ ಬುದ್ದಿಜೀವಿಗಳಿಗಿಂತಲೂ ಹೆಚ್ಚಿನ ಬುದ್ಧಿವಂತರೇ?  ಅಥವಾ ಈ ಬುದ್ಧಿಜೀವಿಗಳ ಪ್ರಚಾರ/ಪ್ರಲಾಪದಲ್ಲೇ ದೋಷವಿದೆಯೇ?  ಈ ಪ್ರಶ್ನೆಗಳನ್ನು ಎರಡು ಭಾಗಗಳ ಈ ಲೇಖನದಲ್ಲಿ ಚರ್ಚೆಗೆತ್ತಿಕೊಳ್ಳುತ್ತಿದ್ದೇನೆ. ಮತ್ತಷ್ಟು ಓದು »

29
ಮೇ

ಪುಕಾರೋ ದಿಲೇ ಸೇ , ನಮೋ ಫಿರ್ ಸೇ

– ರಾಕೇಶ್ ಶೆಟ್ಟಿ

ರಾಜ್ಯ ವಿಧಾನಸಭೆಯ ಚುನಾವಣೆಯ ನಂತರ ಕಚೇರಿಯಲ್ಲಿ, ನನ್ನ ತಂಡದವರು ಹೀಗೆ ಹರಟೆ ಹೊಡೆಯುತ್ತ ಕುಳಿತಿದ್ದರು. ಮಾತಿನ ಮಧ್ಯೆ, ನೀನು ಯಾವ ಪಕ್ಷಕ್ಕೆ ವೋಟ್ ಹಾಕಿದ್ದು? ಒಬ್ಬಳನ್ನು ಕೇಳಿದರು. ಆಕೆ ಕಾಂಗ್ರೆಸ್ಸಿಗೆ ಎಂದಳಷ್ಟೇ! ಸುತ್ತ ಮುತ್ತಲಿದ್ದವರೆಲ್ಲಾ, OMG!, What? ಅಂತೆಲ್ಲಾ ಉದ್ಗಾರ ತೆಗೆದರು. ಈ ಕಾಲದಲ್ಲೂ ಕಾಂಗ್ರೆಸ್ಸಿಗೆ ಮತ ನೀಡುವ ವಿದ್ಯಾವಂತರಿದ್ದಾರಲ್ಲಪ್ಪ ಎನ್ನುವುದು ಅವರ ಆಶ್ಚರ್ಯಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ಸಿಗೆ ಯಾಕೆ ಮತ ನೀಡಿದೆ ಎಂದು ಕೇಳಿದರೆ,ಮೊದಲಿಗೆ ಅವಳದು ಶುದ್ಧ ಕಾರ್ಪೊರೇಟ್ ಜಗತ್ತಿನವರ ಡಿಪ್ಲೋಮಾಟಿಕ್ ಉತ್ತರದಂತೆ,ಅವೆಲ್ಲಾ ಟೂ ಪರ್ಸನಲ್ ಯು ನೋ ಎಂದಳು,ನಂತರ ಮುಂದುವರೆದು ನನಗೆ ಮೋದಿಯವರ ವಿರುದ್ಧ ಕಂಪ್ಲೇಂಟುಗಳಿವೆ ಅದಕ್ಕೆ ಎಂದಳು. ಅದೇನು ಕಂಪ್ಲೇಂಟು? ಅಂತ ಕೇಳಿದರೆ ಉತ್ತರವಿಲ್ಲ.

ಮತ್ತೊಬ್ಬರು ಆಂಧ್ರದವರು.ಫಲಿತಾಂಶದ ದಿನ, ಬಿಜೆಪಿ ಗೆಲ್ಲಬಾರದು ಎನ್ನುತ್ತಿದ್ದರು. ಬಿಜೆಪಿ ಯಾಕೆ ಗೆಲ್ಲಬಾರದು? ಅಂತ ಕೇಳಿದೆ.ನನಗೆ ಮೋದಿ ಕಂಡರೆ ಆಗುವುದಿಲ್ಲ ಎಂದರು.ಯಾಕೆ ಎಂದರೇ ಅವರು ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡದೇ ಮೋಸ ಮಾಡಿದ್ದಾರೆ ಆ ಕಾರಣಕ್ಕೆ ಅವರು ಇಲ್ಲೂ ಗೆಲ್ಲಬಾರದು ಎನ್ನುವ ಉತ್ತರ. ಆಂಧ್ರಕ್ಕೆ ಅವರು ಮೋಸ ಮಾಡಿದ್ದಾರೆ ಅಂತ ನಿನಗೆ ಹೇಗೆ ಗೊತ್ತು? ಎಂದರೆ,ಎಲ್ಲರೂ ಹೇಳುತ್ತಿದ್ದಾರಲ್ಲ ಎನ್ನುವ ಉತ್ತರ.ತಕ್ಷಣವೇ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಕುರಿತು ಅರುಣ್ ಜೈಟ್ಲಿ ಏನು ಹೇಳಿದ್ದಾರೆ ಎನ್ನುವುದನ್ನು ಅವರ ಗಮನಕ್ಕೆ ತಂದು ತೋರಿಸಿದೆ. ಯುಪಿಎ ಎಡವಟ್ಟಿನಿಂದ ವಿಭಜನೆಯಾಗಿ ಆರ್ಥಿಕವಾಗಿ ದುರ್ಬಲವಾಗಿರುವ ಆಂಧ್ರಪ್ರದೇಶಕ್ಕೆ ಸಂಪೂರ್ಣ ಹಣಕಾಸಿನ ನೆರವು ನೀಡಲು ಕೇಂದ್ರ ಬದ್ಧವಾಗಿದೆ. ಆದರೆ,ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡುವುದನ್ನು ೧೪ನೇ ಹಣಕಾಸು ಸಮಿತಿ ಕೇವಲ ಈಶಾನ್ಯ ರಾಜ್ಯಗಳಿಗೆ ಮಾತ್ರ ಸೀಮಿತಗೊಳಿಸಿದೆ.ಹಾಗಾಗಿ ಆ ಸ್ಥಾನಮಾನ ನೀಡಲು ಸಾಧ್ಯವಿಲ್ಲ. ವಿಶೇಷ ಸ್ಥಾನಮಾನ ಪಡೆದ ರಾಜ್ಯಕ್ಕೆ ಕೇಂದ್ರದಿಂದ ಶೇ.೯೦ರಷ್ಟು ಅನುದಾನ ಸಿಗುತ್ತದೆ,ಉಳಿದ ರಾಜ್ಯಗಳಿಗೆ ಶೇ. ೬೦ರಷ್ಟು ಸಿಗುತ್ತದೆ.ಆಂಧ್ರಪ್ರದೇಶಕ್ಕೂ ಕೇಂದ್ರದಿಂದ ಶೇ.೯೦ ರಷ್ಟು ಅನುದಾನ ಕೊಡಲು ನಾವು ಬದ್ಧರಿದ್ದೇವೆ ಎಂದಿದ್ದರು. ಒಟ್ಟಾರೆಯಾಗಿ ವಿಶೇಷ ರಾಜ್ಯದ ಸ್ಥಾನಮಾನ ನೀಡಲು ೧೪ನೇ ಹಣಕಾಸು ಆಯೋಗದ ಅಡ್ಡಿಯಿದ್ದರೂ,ಅದಕ್ಕೆ ಸರಿಸಮಾನವಾದ ವಿಶೇಷ ಪ್ಯಾಕೇಜ್ ನೀಡಲು ಕೇಂದ್ರ ಸರ್ಕಾರ ಸಿದ್ಧವಾಗಿತ್ತು. ನಿಮ್ಮ ಚಂದ್ರಬಾಬು ನಾಯ್ಡು ಅವರೇ ರಾಜಕೀಯ ಲಾಭಕ್ಕಾಗಿ,ಎನ್ಡಿಎ ತೊರೆದು ಈಗ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದೇ.ಎಂತ ಲಾಭ ಎಂದರು? ನಿಮ್ಮ ವೈಎಸಾರ್ ಪಕ್ಷದ ಜಗನ್, ಈ ವಿಶೇಷ ಸ್ಥಾನಮಾನದ ನಿರಾಕರಣೆಯ ಕತೆ ಹೇಳಿಕೊಂಡೇ ಆಡಳಿತ ವಿರೋಧಿ ಅಲೆ ಎಬ್ಬಿಸಿ ಬಿಡುತ್ತಾನೋ ಎಂಬ ಭಯದಿಂದಲೂ ಇದ್ದಿರಬಹುದು ಎಂದೇ. ನಾಯ್ಡು ಅಭಿಮಾನಿಯಾದ ಅವರು ಒಪ್ಪಲು ಸಿದ್ಧರಿರಲಿಲ್ಲ,ಆದರೆ ಕೇಂದ್ರ ಸರ್ಕಾರ ಕೊಡಲು ಸಿದ್ಧವಿತ್ತು,ಆಂಧ್ರವೇ ಪಡೆಯಲಿಲ್ಲ ಎನ್ನುವುದು ಅವರಿಗೆ ಅರ್ಥವಾಗಿತ್ತು. ಮತ್ತಷ್ಟು ಓದು »

29
ಮೇ

ಮಾನಹೀನ ಮಾತುಗಳಿಂದ ಬದುಕಬೇಕಿದೆಯೇ ನಮ್ಮ ಡೆಮಾಕ್ರಸಿ…?

– ಸುಜಿತ್ ಕುಮಾರ್

ಸಣ್ಣವರಿದ್ದಾಗ ಶಿಕ್ಷಕರು ನಮಗೆ ಕಲಿಸಿದ್ದ ಅಮೋಘ ಶಿಕ್ಷಣಗಳಲ್ಲಿ ಸರಿಯೆನಿಸದ್ದಿದ್ದನ್ನು ಪ್ರಶ್ನಿಸುವುದೂ ಒಂದು. ಅದು ‘ಏನಲೇ..!?’ ಎಂದು ಕೊಳಪ್ಪಟ್ಟಿಯನ್ನು ಹಿಡಿದು ಜಾಡಿಸಿ ಕೇಳುವುದಕ್ಕಿಂತ ಮಿಗಿಲಾಗಿ, ಹರಿತವಾದ ಮಾತಿನಿಂದ ಸತ್ಯವೆಂಬ ಹಿಡಿತದೊಂದಿಗೆ ಮುಂದಿರುವವನ ಕಪಟ ವಂಚಕ ಮನಸ್ಥಿತಿಯನ್ನು ಬೆದರುಗೊಳಿಸುವ ಬಗೆಯಾಗಿದ್ದಿತು. ಅರ್ಥಾತ್ ಅವು ವೈಚಾರಿಕ ಬಗೆಯ ನೇರ ಪ್ರಶ್ನೆಗಳಾಗಿದ್ದವು. ಆದರೆ ಅಂದಿನ ಆ ಪಾಠವನ್ನು ಮರೆತ ಬಹುಮಂದಿ ಜನರು ಇಂದು ಕೇಳುವ ಪ್ರಶ್ನೆಗಳು ಏಕವಚನ ಪದಗುಚ್ಛಗಳ ಚಪ್ಪಲಿ ಏಟಿನಂತೆ ಮುಂದಿರುವ ವ್ಯಕ್ತಿಯ ಮಾನಹರಣ ಮಾಡುವ ಅಸ್ತ್ರಗಳಾಗಿವೆ. ಪುಕ್ಕಟೆಯಾಗಿ ಸಿಗುವ ಹೊಲಸು ಪದಗಳ ವಿಶೇಷಣಗಳನ್ನು ಬಳಸಿ ಮುಂದಿರುವವರ ಸ್ಥಾನ ಜೊತೆಗೆ ಮಾನವನ್ನೂ ತಿವಿದು ಹಾಕುವ ಇಂದಿನ ದಿನಗಳಲ್ಲಿ ವಿಷಯಕ್ಕೆ ತಕ್ಕನಾದಂತಹ ನೇರವಾದ ಪ್ರಶ್ನೆಗಳನ್ನೂ ಕೇಳುವವರ ಸಂಖ್ಯೆ ಕ್ಷೀಣಿಸುತ್ತಿದೆ! ಒಂದೋ ಆತ/ಅವಳು ಸಮಾಜದ ಅತಿ ಪ್ರಭಾವಿ ಗುಂಪಿನ ಇಂಪಾರ್ಟೆಂಟ್ ವ್ಯಕ್ತಿಗಳೆನಿಸಿಕೊಂಡಿರಬೇಕು ಅಥವಾ ಯಾರಿಗೂ ಕ್ಯಾರೇ ಎನ್ನದ ಖಡಕ್ ಅಧಿಕಾರಿಗಳಾಗಿರಬೇಕು. ಅಂತವರಿಗಷ್ಟೇ ಇಂದು ಪ್ರಶ್ನೆಗಳನ್ನು ಕೇಳುವ ‘ಅಧಿಕಾರ’  ಹಾಗು ‘ಧೈರ್ಯ’ ಸೀಮಿತವಾಗುತ್ತಿದೆ ಎಂದರೆ ಸುಳ್ಳಾಗದು. ಸಾಮಾನ್ಯನೊಬ್ಬನಿಗೆ ಇಂದು ಪ್ರಶ್ನಿಸುವ ಧೈರ್ಯವನ್ನು ತುಂಬುವ ಸಮಾಜವೇ ಇಲ್ಲವಾದರೆ ವಿಧ್ಯಾವಂತರಾಗಿಯೂ ಕುರಿಗಳು ಸಾರ್ ಕುರಿಗಳು ಎಂಬಂತೆ ಪ್ರಶ್ನಿಸುವ ನರಗಳನ್ನೇ ಕಳೆದುಕೊಂಡು ಒಬ್ಬರ ಬಾಲವನ್ನು ಇನ್ನೊಬ್ಬರು ಮೂಸುತ್ತಾ ಸಾಗುವ ಪಯಣ ಇದಾದಿತು. ಪೀಠಿಕೆ ಇಷ್ಟಿರಲಿ. ಈಗ ವಿಷಯಕ್ಕೆ ಬರೋಣ. ಅದಕ್ಕೂ ಮೊದಲು ಒಂದೆರೆಡು ನೇರ ನುಡಿ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ಪಕ್ಷ, ಜಾತಿ, ಪಂಥ ಎಂಬ ಯಾವುದೇ ಬಗೆಯ ತುರಿಕೆಗಳಾಗಲಿ, ಖಾಯಿಲೆಯಗಳಾಗಲೀ ಅಂಟಿಕೊಂಡಿಲ್ಲ. ಭಾರತೀಯರಾಗಿ ಅದಕ್ಕಿಂತಲೂ ಹೆಚ್ಚಾಗಿ ಸ್ವಸ್ಥ ಮಾನವರಾಗಿ ಕೇಳಲೇ ಬೇಕಾದ ಪ್ರಶ್ನೆಗಳಿವು. ಮುಂದಿರುವ ಇನ್ನೊಬ್ಬರಿಗಲ್ಲದಿದ್ದರೂ ತಮಗೆ ತಾವೇ ಚುಚ್ಚಿಕೊಳ್ಳಬೇಕಾದದ ಸೂಜಿಗಳಿವು! ಮತ್ತಷ್ಟು ಓದು »

22
ಮೇ

ಕರ್ನಾಟಕದ ರಮಣರು,ಬಿಜೆಪಿಯೆಂಬ ಯು.ಜಿ ಕೃಷ್ಣಮೂರ್ತಿ

– ರಾಕೇಶ್ ಶೆಟ್ಟಿ

ಕಳೆದೊಂದು ವಾರದಲ್ಲಿ ರಾಜ್ಯದ ಜನ ಸಾಕ್ಷಿಯಾಗಿದ್ದ ರಾಜಕೀಯ ಹಗ್ಗ-ಜಗ್ಗಾಟಕ್ಕೆ ತಾತ್ಕಾಲಿಕ ಪರದೆ ಬಿದ್ದಿದೆ. ರಾಜಕಾರಣಿಗಳ ಬೃಹನ್ನಾಟಕದಿಂದಾಗಿ ಟಿಆರ್ಪಿ ಕಳೆದುಕೊಂಡಿದ್ ಮೆಗಾ ಸಿರಿಯಲ್ಲುಗಳ ನಿರ್ಮಾಪಕರು ನಿಟ್ಟುಸಿರು ಬಿಟ್ಟಿರಬಹುದು.ಗೋವಾದ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿಯಿಂದ ಹಲ್ವಾ ತಿಂದಿದ್ದ ಕಾಂಗ್ರೆಸ್ ಕರ್ನಾಟಕದಲ್ಲಿ ಮತ್ತೆ ಅಂತ ಉದಾಸೀನಕ್ಕೆ ಜಾರಲಿಲ್ಲ.ಜಾರಲಿಲ್ಲ ಎನ್ನುವುದಕ್ಕಿಂತಲೂ ಮುಖ್ಯವಾಗಿ ಕಾಂಗ್ರೆಸ್ ಅಧಿಕಾರದಲ್ಲಿ ಉಳಿಯಬಹುದಾದ ಸಾಧ್ಯತೆಯಿರುವ ದೇಶದ ದೊಡ್ಡ ರಾಜ್ಯಗಳಲ್ಲಿ ಕರ್ನಾಟಕ ಮಾತ್ರವೇ ಉಳಿದಿದ್ದರಿಂದ,ಕರ್ನಾಟಕವೆನ್ನುವುದು ಕಾಂಗ್ರೆಸ್ ಪಾಲಿಗೆ ಅಸ್ತಿತ್ವದ ಪ್ರಶ್ನೆಯೂ ಆಗಿತ್ತು. PIN ಇಲ್ಲದ ATMನಂತಾಗಿರುವ ರಾಜ್ಯವನ್ನು ಅವರಾದರೂ ಹೇಗೆ ಬಿಟ್ಟುಕೊಟ್ಟಾರು ಹೇಳಿ?

ಚುನಾವಣಾ ಪ್ರಚಾರದಲ್ಲಿ, ಕುಮಾರಸ್ವಾಮಿಯವರ ಬಗ್ಗೆ ‘ಅವರಪ್ಪನಾಣೆ ಮುಖ್ಯಮಂತ್ರಿಯಾಗಲ್ಲ” ಎಂದು ಪದೇ ಪದೇ ಹೀಯಾಳಿಸಿದ್ದ ಸಿದ್ಧರಾಮಯ್ಯನವರೇ ಖುದ್ದಾಗಿ ಮುಂದೆ ಬಂದು ನೀವೇ ನಮ್ ಸಿಎಂ ಎಂದೂ ನಡುಬಗ್ಗಿಸಿ ನಿಲ್ಲಬೇಕಾದ ಸ್ಥಿತಿಗೆ ತಂದು ನಿಲ್ಲಿಸಿದ್ದು ಚುನಾವಣಾ ಫಲಿತಾಂಶ.ಕಳೆದ ೫ ವರ್ಷಗಳಲ್ಲಿ ಉಡಾಫೆ,ಅಹಂಕಾರವೇ ಮೈವೆತ್ತಂತೆ ವರ್ತಿಸುತ್ತಿದ್ದ ವ್ಯಕ್ತಿಗೆ ಮತದಾರ ಮಹಾಪ್ರಭು ಭರ್ಜರಿ ಏಟನ್ನೇ ಕೊಟ್ಟಿದ್ದಾನೆ. ಚಾಮುಂಡೇಶ್ವರಿಯಲ್ಲಿ ಸಿದ್ಧರಾಮಯ್ಯನವರು ದೊಡ್ಡ ಮಟ್ಟದ ಅಂತರದಲ್ಲಿ ಸೋತಿದ್ದಾರೆ, ಇನ್ನು ಬಾದಾಮಿಯಲ್ಲಿ 2000 ದಷ್ಟು NOTA ಚಲಾವಣೆಯಾಗಿದೆ,ಸಿದ್ಧರಾಮಯ್ಯ ಗೆದ್ದಿರುವುದು 1600 ಚಿಲ್ಲರೆ ಮತಗಳ ಅಂತರದಲ್ಲಿ ಮಾತ್ರ.ಎರಡು ಕಡೆ ಏಕೆ ನಿಲ್ಲುತ್ತಿದ್ದೀರಿ ಎನ್ನುವ ಪ್ರಶ್ನೆಗೆ ಸಿದ್ಧರಾಮಯ್ಯನವರು ನಿಂತರೆ ಆ ಭಾಗದಲ್ಲಿ ಹೆಚ್ಚು ಸೀಟು ಗೆಲ್ಲಬಹುದು ಎನ್ನುತ್ತಿದ್ದರು ಅವರ ಬೆಂಬಲಿಗರು. ಬಾಗಲಕೋಟೆ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದ್ದು 2 ಮಾತ್ರ ಉಳಿದೆಲ್ಲವೂ ಬಿಜೆಪಿಯ ಪಾಲಾಗಿದೆ? ಎಲ್ಲೋಯ್ತು ಸಿದ್ಧರಾಮಯ್ಯನವರ ಪ್ರಭಾವಳಿ? ಖುದ್ದು ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಅಭ್ಯರ್ಥಿಯೇ ಸೋತಿದ್ದು ಆಡಳಿತ ವಿರೋಧಿ ಅಲೆಯ ಸಂದೇಶ ಅಲ್ಲವೇ? ಸಿದ್ಧರಾಮಯ್ಯನವರ ಸಂಪುಟದ 16 ಸಚಿವರು ಸೋತು ಮನೆ ಸೇರಿದ್ದಾರೆ.ಸಿದ್ಧರಾಮಯ್ಯ ಆಪ್ತ ಬಳಗದಲ್ಲಿದ್ದ ಮಹದೇವಪ್ರಸಾದ್,ಆಂಜನೇಯ,ಉಮಾಶ್ರಿಯಂತವರು ಸೋಲಿನ ರುಚಿ ಸವಿದಿದ್ದಾರೆ.ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೂ ಕಾಂಗ್ರೆಸ್ ಮೂಲೆ ಸೇರಿದೆ.

ಮತದಾರರಿಂದ ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡ ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆಯಿದ್ದಿದ್ದರೆ ವಿರೋಧ ಪಕ್ಷದಲ್ಲಿ ಕೂರಬೇಕಾಗಿತ್ತು. ಆದರೆ ಪಕ್ಷದ ಅಳಿವು-ಉಳಿವಿನ ಪ್ರಶ್ನೆಯಾದ್ದರಿಂದ, “ಕೋಮುವಾದಿಗಳನ್ನು ದೂರವಿಡಲು,ಸೆಕ್ಯುಲರಿಸಂ ರಕ್ಷಿಸಲು’ ಎಂಬ ತಗಡು ಸ್ಲೋಗನ್ ಇಟ್ಟುಕೊಂಡು ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಮುಂದಾಗಿವೆ. ತುಘಲಕ್ ಸರ್ಕಾರವನ್ನು ಜನರು ತಿಪ್ಪೆಗೆ ಎಸೆದರೂ, ತಿಪ್ಪೆಯಿಂದ ಎದ್ದು ಬಂದು ಜೆಡಿಎಸ್ ಜೊತೆ ಕೈಜೋಡಿಸಿ ಕಾಂಗ್ರೆಸ್ ಉಸಿರಾಡುತ್ತಿದೆ,ಜೆಡಿಎಸ್ ಪಕ್ಷದ ಕತೆಯೂ ಅಸ್ತಿತ್ವ ಉಳಿಸಿಕೊಳ್ಳುವ ವಿಚಾರದಲ್ಲಿ ಕಾಂಗ್ರೆಸ್ಸಿಗಿಂತ ಭಿನ್ನವಾಗೇನೂ ಇಲ್ಲ. ಹತ್ತು ವರ್ಷಗಳಿಂದ ಅಧಿಕಾರದಿಂದ ದೂರ ಇರುವ ಪಕ್ಷ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಇನ್ನೇನೂ ಮಾಡೀತು ಹೇಳಿ?ಚುನಾವಣೆಗೆ ಮೊದಲು ಕಾಂಗ್ರೆಸ್ ಸರ್ಕಾರದ ಅಧ್ವಾನಗಳ ಬಗ್ಗೆ ಮಾತನಾಡಿ ಮತ ಪಡೆದ ಜೆಡಿಎಸ್ ಇಂದು ಕಾಂಗ್ರೆಸ್ ಜೊತೆ ಕೈ ಜೋಡಿಸಿದೆ. ಈಗ ಇಬ್ಬರೂ ಸೇರಿಕೊಂಡು ಪ್ರಜಾಪ್ರಭುತ್ವ ಉಳಿಸುವ ತುತ್ತೂರಿ ಊದಿದರೆ ಜನರಿಗೆ ಸತ್ಯ ಅರ್ಥವಾಗುವುದಿಲ್ಲವೇ?

ಮತ್ತಷ್ಟು ಓದು »

14
ಮೇ

ದಲಿತರನ್ನು ಇತರರಿಂದ ದೂರವಿಡಲು ನಡೆಸುತ್ತಿರುವ ಹುನ್ನಾರ ಇನ್ನೆಷ್ಟು ದಿನ ಮುಂದುವರೆಯುವುದು?

– ಶಿವಾನಂದ ಸೈದಾಪೂರ
ಪಿ.ಜಿ ಡಿಪ್ಲೊಮಾ ಇನ್ ಅಂಬೇಡ್ಕರ್ ಸ್ಟಡಿಸ್
ಆರ್. ಸಿ. ಯು ಬೆಳಗಾವಿ.

ಈಗಲೇ ಎರಡು ದಿನಗಳಲ್ಲಿ ನಡೆದ ಘಟನೆಗಳು; ನೂರಕ್ಕೆ ನೂರರಷ್ಟು ಮತದಾನದ ಜಾಗೃತಿಗಾಗಿ ಊರೂರುಗಳಿಗೆ ಸಂಪರ್ಕ ಮಾಡುತ್ತಿರುವ ಹೊತ್ತಲ್ಲಿ ಆದ ಸ್ವಂತ ಅನುಭವ. ದಲಿತರ ಓಣಿಗಳನ್ನು ಪ್ರವೇಶಿಸುವಾಗ ನಡೆದಂತದ್ದವುಗಳು.

ಘಟನೆ ೧ : ಓಣಿಯ ಪ್ರವೇಶಕ್ಕೂ ಮೊದಲು ಗಮನಿಸಿದಾಗ ಕಣ್ಣಿಗೆ ರಾಚುವಂಥದ್ದು; ಈ ಕೇರಿಯಲ್ಲಿ ಕಾಂಗ್ರೆಸ್ ಒಂದನ್ನು ಬಿಟ್ಟು ಬಿಜೆಪಿಯವರಿಗೆ ಪ್ರವೇಶವಿಲ್ಲ! ಈ ರೀತಿ ಫಲಕ ನೇತಾಡುತಿತ್ತು. ಇಂತಹ ವಾತಾವರಣ ಇನ್ನೂ ಯಾಕೆ ಹೀಗಿದೆ? ಚುನಾವಣೆ ಸಂದರ್ಭದಲ್ಲಿಯೇ ಯಾಕೆ ಹೀಗೆ? ಇದನ್ನು ಏನು ಅಂತ ತರ್ಕಿಸಬಹುದು? ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದರೂ ಯಾಕೆ ಈ ವಾತಾವರಣ? ಅಸ್ಪೃಶ್ಯತೆ ನಿವಾರಣೆಗಾಗಿ ಒಂದು ಕಡೆ ಹೋರಾಟಗಳು ನಡೆಯುತ್ತಿದ್ದರೆ, ಮತ್ತೊಂದು ಕಡೆ ಅವರನ್ನು ಸ್ವೃಶ್ಯ ಸಮಾಜ ವಾಸಿಯಾಗಲು ಬಿಡದೆ ನಡೆಸುತ್ತಿರುವ ರಾಜಕೀಯ ಷಡ್ಯಂತ್ರವೇ ಬಹಳಷ್ಟಿವೆ. ಮತ್ತಷ್ಟು ಓದು »