ವಿಷಯದ ವಿವರಗಳಿಗೆ ದಾಟಿರಿ

Posts from the ‘ರಾಜಕೀಯ’ Category

29
ಡಿಸೆ

ಭೈರಪ್ಪ ಎಂಬ STAR WRITER

ವಿಕಾಸ್ ಹೆಗಡೆ
ಪ್ರಕಟವಾದ ಮೊದಲನೇ ವಾರವೇ ಮೂರು ಮುದ್ರಣ, ಅಧಿಕೃತವಾಗಿ ಪುಸ್ತಕ ಬಿಡುಗಡೆ ಮಾಡಿದ್ದು ಎಂಟನೇ ಮುದ್ರಣ, ಪ್ರಕಟವಾಗುವ ಮೊದಲೇ ಬುಕ್ಕಿಂಗ್, ಎಲ್ಲಾ ಪ್ರತಿಗಳು ಖಾಲಿ, ಬೆಲೆ ದುಬಾರಿಯಾದರೂ ಎಲ್ಲಾ ಕಡೆ ಪುಸ್ತಕಗಳ ಜೋರು ಮಾರಾಟ, ಪತ್ರಿಕೆಗಳಲ್ಲಿ ಚರ್ಚೆ, ವಾದ, ವಿವಾದ, ಸಮರ್ಥನೆ, ದೂಷಣೆ – ಇಷ್ಟು ಹೇಳುತ್ತಿದ್ದಂತೆ ಎಲ್ಲರಿಗೂ ತಿಳಿದುಬಿಡುತ್ತದೆ. ಇದು ಇತ್ತೀಚೆಗೆ ಕನ್ನಡ ಸಾಹಿತ್ಯ ಲೋಕದ ವಿದ್ಯಮಾನ. ಅದು ಎಸ್.ಎಲ್. ಭೈರಪ್ಪನವರ ’ಕವಲು’ ಕಾದಂಬರಿ. ೨೩ ಮುದ್ರಣಗಳನ್ನು ಕಂಡ ಅವರ ಹಿಂದಿನ ಕಾದಂಬರಿ ‘ಆವರಣ’ದ ವಿಷಯವಂತೂ ಹೇಳುವುದೇ ಬೇಡ. ಬಹುಶಃ ಈ ಮಟ್ಟಿಗೆ ಸಂಚಲನ ಉಂಟು ಮಾಡುವ ಮತ್ತೊಬ್ಬ ಬರಹಗಾರ ಭಾರತದಲ್ಲಿಲ್ಲ. ಆ ಮಟ್ಟಿಗೆ ಜನಪ್ರಿಯ. ಎಲ್ಲಾ ವಯೋಮಾನದ ಓದುಗರನ್ನು ಹೊಂದಿರುವ ಲೇಖಕರಲ್ಲೊಬ್ಬರು. ಅಧ್ಯಯನ ಶೀಲ, ಸಮರ್ಪಣಾ ಮನೋಭಾವದ ಕಾದಂಬರಿಕಾರರಾಗಿ, ಅದ್ಭುತ ಬರಹಗಾರರಾಗಿ ಭೈರಪ್ಪನವರು ಪ್ರಸಿದ್ಧಿ. ಪಕ್ಕದ ರಾಜ್ಯದ ಸಾಹಿತ್ಯ ಲೋಕದಲ್ಲೇನಾಗುತ್ತಿದೆ ಎಂದು ಸರಿಯಾಗಿ ಗೊತ್ತಾಗದಿರುವ ಈ ಪರಿಸ್ಥಿತಿಯಲ್ಲೂ ಇವರ ಹಲವಾರು ಕಾದಂಬರಿಗಳು ಭಾರತದ ಅನೇಕ ಭಾಷೆಗಳಿಗೆ ಅನುವಾದಗೊಳ್ಳುತ್ತವೆ.ನಾನು ಓದಿದ ಇವರ ಮೊದಲ ಕಾದಂಬರಿ ‘ಧರ್ಮಶ್ರೀ’. ಅದಾದ ಮೇಲೆ ಅವರ ಅಂಚು, ದಾಟು, ಪರ್ವ, ವಂಶವೃಕ್ಷ, ನಿರಾಕರಣ, ಜಲಪಾತ, ಸಾರ್ಥ ಮುಂತಾದ ಹಲವು ಕಾದಂಬರಿಗಳನ್ನು ಓದಿದ್ದೇನೆ. ಒಂದೊಂದೂ ಕೂಡ ವಿಷಯಗಳ ಆಗರವಾಗಿ ಕಂಡಿವೆ. ಇನ್ನೂ ಕೆಲವು ಓದುವುದು ಬಾಕಿ ಇವೆ. ಘಟನೆಗಳನ್ನು ಕತೆಯಂತೆ ಹೇಳಿಬಿಡಬಹುದು, ಕಾಲ್ಪನಿಕ ಕತೆಗಳನ್ನು ಹೆಣೆದುಬಿಡಬಹುದು ಆದರೆ ಅದರಲ್ಲಿನ ಪಾತ್ರಗಳ ಮನಸ್ಸಿನ ತುಮುಲಗಳನ್ನು, ಸಮಾಜ, ಧರ್ಮ, ಸಂಪ್ರದಾಯ ಸಂಬಂಧಿತ ಸಂಗತಿಗಳನ್ನು ಚಿತ್ರಿಸುವುದು ಮಾತ್ರ ಎಲ್ಲರಿಗೂ ಸಾಧ್ಯವಿಲ್ಲ. ಅದನ್ನು ಸಮರ್ಥವಾಗಿ ಮಾಡುವುದರಿಂದಲೇ ಭೈರಪ್ಪನವರು ಅತ್ಯಂತ ಯಶಸ್ವಿ ಬರಹಗಾರರೆನ್ನಬಹುದು. ಭೈರಪ್ಪನವರ ಬರವಣಿಗೆಯ ವಿಷಯಗಳು ಎಷ್ಟರ ಮಟ್ಟಿಗೆ ಸೂಕ್ಷ್ಮವಾಗಿರುತ್ತವೆ ಎಂದರೆ ಅವು ಮೇಲ್ನೋಟಕ್ಕೆ ಸುಮ್ಮನೇ ಕಥೆಯಾಗಿದ್ದರೂ ಅದು ಸರಿಯಾಗಿ ಅರ್ಥವಾಗಲು ಅಂತಹ ಸನ್ನಿವೇಶಗಳನ್ನು, ಪರಿಸ್ಥಿತಿಗಳನ್ನು, ಮನಸ್ಥಿತಿಯನ್ನು ಸ್ವತಃ ಅನುಭವಿಸಿರಬೇಕು, ಇಲ್ಲವೇ ಕಂಡಿರಬೇಕು. ಆವಾಗಲಷ್ಟೇ ಅದು ಇನ್ನೂ ಚೆನ್ನಾಗಿ ತಾಗಬಲ್ಲುದು. ಜೊತೆಗೆ ಅವರ ಕಾದಂಬರಿಗಳ ವಿಷಯ ವ್ಯಾಪ್ತಿ ಮತ್ತು ಆಳ ಎಂತವರಿಗೂ ಹೊಸ ಹೊಸ ಲೋಕಗಳನ್ನು, ಸತ್ಯಗಳನ್ನು ತೋರಿಸಿಕೊಡುವಂತವು. ಮತ್ತಷ್ಟು ಓದು »
19
ಡಿಸೆ

ಭಾರತಕ್ಕೆ ರಾಹುಲ್ ಡೇಂಜರ್!

ರಾಕೇಶ್ ಶೆಟ್ಟಿ

’ಭಾರತಕ್ಕೆ ರಾಹುಲ್ ಡೇಂಜರ್!’ ಅನ್ನೋ ಹೇಳಿಕೆಯನ್ನ ಕೊಟ್ರೆ ಕಾಂಗ್ರೆಸ್ಸಿಗರು,ರಾಹುಲ್ ಅಭಿಮಾನಿಗಳಿಗೆ ನನ್ನ ಅಟ್ಟಾಡಿಸಿಕೊಂಡು ಹೊಡಿಬೇಕು ಅನ್ನಿಸೋದಿಲ್ವಾ? ಅವ್ರಿಗ್ ಯಾಕೆ ಬೇರೆಯವರಿಗೂ ಇದೆಂತ ಎಡಬಿಡಂಗಿ ಹೇಳಿಕೆ ಮಾರಾಯ? ಅಂತ ಅನ್ನಿಸ್ಬಹುದು.ಆದ್ರೆ,ಒಂದ್ನಿಮಿಷ ಕೆಳಗೆ ಓದಿಬಿಡೀಪ್ಪಾ 😉

ಜಗತ್ತಿನ ರಾಜತಾಂತ್ರಿಕರ ಅದರಲ್ಲೂ ಮುಖ್ಯವಾಗಿ ಅಮೆರಿಕಾದ ಇಬ್ಬಗೆ ನೀತಿಯನ್ನ ಬಯಲು ಮಾಡುತ್ತ ಬಂದ ಜುಲಿಯನ್ ಅಸಾಂಜ್ನ ವಿಕಿಲೀಕ್ಸ್ ವರದಿಯಿಂದ ಈವರೆಗೂ ಭಾರತದಲ್ಲಿ ಅಂತ ಹಂಗಾಮವೇನು ಆಗಿರ್ಲಿಲ್ಲ,ಆದ್ರೆ ಮೊನ್ನೆ ಮೊನ್ನೆ ಕಾಂಗ್ರೆಸ್ಸಿನ ಪ್ರಧಾನಿ ರಾಹುಲ್ ಗಾಂಧಿ (ಸದ್ಯ! ಭಾರತದ ಪ್ರಧಾನಿ ಅಲ್ಲ! 😉 ) “ಮುಸ್ಲಿಂ ಉಗ್ರ ಸಂಘಟನೆಗಳಾದ ಲಷ್ಕರ್-ಇ-ತೊಯ್ಬಾದಂಥ ಸಂಘಟನೆಗಳಿಗೆ ಭಾರತದ ಕೆಲ ಮುಸ್ಲಿಂ ಸಂಘಟನೆಗಳಿಂದ ಬೆಂಬಲವಿದೆ. ಆದರೆ, ಅವರಿಗಿಂತ ಹಿಂದೂ ಉಗ್ರವಾದಿಗಳಿಂದ ಹೆಚ್ಚು ಆತಂಕವನ್ನು ಭಾರತ ಎದುರಿಸುತ್ತಿದೆ” ಅಂತ ಅಮೆರಿಕಾದ ರಾಜತಾಂತ್ರಿಕನ ಜೊತೆ ಹೇಳ್ಕೊಂಡಿದ್ರು ಅನ್ನೋ ಕೇಬಲ್ ಬಿಡುಗಡೆ ಮಾಡಿದಾಗ ನಂಗೂ ಮೇಲೆ ಹೇಳಿದಂತೆ ಅನ್ನಿಸಿತ್ತು,ಕಾಮನ್ ಸೆನ್ಸ್ ಇರೋ ಭಾರತದ ಬಹುತೇಕರಿಗೆ ರಾಹುಲ್ನ ಹೇಳಿಕೆಯು ಎಡಬಿಡಂಗಿತನದ್ದು ಅನ್ನಿಸಿರಿಬಹ್ದು. ಮತ್ತಷ್ಟು ಓದು »

19
ಡಿಸೆ

ಹೊಲಸು ತುಂಬಿದ ರಾಜಕೀಯವೂ….. ಮಹಿಳಾ ರಾಜಕೀಯದ ಹೊಸ ಬದಲಾವಣೆಯೂ…

-ಶಂಶೀರ್, ಬುಡೋಳಿ, ಪತ್ರಕರ್ತ

ನಿಮಗೆ ಇದನ್ನು ಹೇಳಲೇಬೇಕು. ಕರ್ನಾಟಕ ರಾಜ್ಯದಲ್ಲಿ ಹೆಣ್ಣುಮಕ್ಕಳಿಗಾಗಿ ಭಾಗ್ಯಲಕ್ಷ್ಮಿ ಯೋಜನೆ ಇರುವುದು ನಿಮಗೆ ತಿಳಿದಿರಬಹುದು. ಈ ಯೋಜನೆ ಕರ್ನಾಟಕದಲ್ಲಿ ಇನ್ನಷ್ಟೇ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಗೊಳ್ಳಬೇಕಷ್ಟೇ. ಹೀಗಾಗಿ ಈ ಯೋಜನೆಯ ಯಶಸ್ಸಿನ ಕುರಿತು ಈಗ ಮಾತನಾಡುವುದು ಔಚಿತ್ಯವಲ್ಲ. ನಮ್ಮ ನೆರೆಯ ರಾಜ್ಯ ಕೇರಳದಲ್ಲಿ ಮಹಿಳೆಯರು ಸ್ಥಳೀಯ ಹಾಗೂ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಹೊಸ ರಾಜಕೀಯದ ಭಾಷ್ಯಕ್ಕೆ ಮುನ್ನುಡಿ ಬರೆದರು. ಕಳೆದ ಚುನಾವಣೆ ಸಂದರ್ಭದಲ್ಲಿ ಕೇರಳದಲ್ಲಿ ಶೇಕಡಾ ೫೦ರಷ್ಟು ಮಹಿಳೆಯರು ಚುನಾವಣಾ ಕಣಕ್ಕಿಳಿದಿದ್ದರು. ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ. ರೈತ ಮಹಿಳೆ, ಟೈಲರಿಂಗ್ ವೃತ್ತಿಯಲ್ಲಿರುವ , ಬೀದಿ ಬದಿ ವ್ಯಾಪಾರ ಮಾಡುವ, ಲೆಕ್ಕಪರಿಶೋಧಕಿಯರ ಜೊತೆಗೆ ಸ್ನಾತಕೋತ್ತರ ಪದಧರೆಯರು ಕೇರಳದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದವರು. ಇವರಲ್ಲಿ ಹೆಚ್ಚಿನವರು ಕೇರಳದಲ್ಲಿ ಬಹಳ ಯಶಸ್ಸನ್ನು ಗಳಿಸಿಕೊಂಡಿರುವ ಕುಟುಂಬಶ್ರೀ ಯೋಜನೆಯಡಿಯಲ್ಲಿ ಪಳಗಿದವರಾಗಿದ್ದಾರೆ. ವಿವಿಧ ಪಕ್ಷಗಳಲ್ಲಿ, ಪಕ್ಷೇತರರಾಗಿ ಕಣಕ್ಕಿಳಿದಿದ್ದ ಕೇರಳಿ ಮಹಿಳೆಯರು ಹೊಸ ರಾಜಕೀಯದ ಭಾಷ್ಯ ಬರೆಯುವತ್ತ ದಾಪುಗಾಲು ಇಟ್ಟಿದ್ದಾರೆ ಎಂದು ಹೇಳಬಹುದು. ಮತ್ತಷ್ಟು ಓದು »

14
ಡಿಸೆ

ಭೈರಪ್ಪ ಮತ್ತು ತರ್ಲೆ ರಾಜ್ಯ ರಾಜಕೀಯ…

-ಶಂಶೀರ್, ಬುಡೋಳಿ

ಇವರೆಗೆ ನೀವು  ಜೆಡಿ‌ಎಸ್, ಕಾಂಗ್ರೆಸ್ಸನ್ನು ಬಿಜೆಪಿ ತಮ್ಮ ತರಲೆ ಮನೋಸ್ಥಿತಿಯ ಮೂಲಕ ತರಾಟೆಗೆ ತೆಗೆದುಕೊಂಡಿರುವುದನ್ನು ನೋಡಿರಬಹುದು. ಆದರೆ ಈಗ ನಡೆದಿರುವುದು ವಿಶೇಷವೇನೂ ಅಲ್ಲವಾದರೂ ರಾಜಕೀಯ ವ್ಯಕ್ತಿಯಲ್ಲದ, ರಾಜಕೀಯ ಪರ ಮಾತನಾಡುವ ಸಾಹಿತಿಯೊಬ್ಬರು ತಮ್ಮ ಮನೋಸ್ಥಿತಿಯನ್ನು, ಕೋಮುವಾದಿ ಸಾಹಿತಿ ಎಂಬ ಹಣೆಪಟ್ಟಿ ಕಟ್ಟಿಕೊಂಡ ಕನ್ನಡ ಸಾಹಿತಿ ಎಸ್.ಎಲ್.ಭೈರಪ್ಪ ಹೊರಗೆಡುವ ಮೂಲಕ ಮತ್ತೊಮ್ಮೆ ಸುದ್ದಿಗೆ ಬಂದಿದ್ದಾರೆ.

ಹೆಚ್ಚಿನದಾಗಿ ತಮ್ಮ ಕೃತಿಗಳಲ್ಲಿ ಜಾತಿ, ಧರ್ಮಗಳ ಬಗ್ಗೆ ಮಾತನಾಡುತ್ತಿದ್ದ ಭೈರಪ್ಪನವರು, ಏಕಾ‌ಏಕಿ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿರುವುದರ ಹೊತ್ತಿನಲ್ಲಿ ಗುಜರಾತ್ ಮಾದರಿ ರಾಜಕೀಯವನ್ನು ಮುಂದಿಟ್ಟುಕೊಂಡು ಕರ್ನಾಟಕ ಸರಕಾರವನ್ನು ಬೆಂಬಲಿಸಬೇಕೆಂದು ಪರೋಕ್ಷವಾಗಿ ಕರೆ ಕೊಟ್ಟಿದ್ದಾರೆ. ತಾನು ವಾಸಿಸುವ, ಜನ್ಮ ತಾಳಿದ ಕರ್ನಾಟಕದ  ರಾಜ್ಯದ ಜನರ ಮನಸ್ಥಿತಿಯನ್ನು ತರಲೆಗೆ ಹೊಲಿಸಿರುವ ಇಂತಹವರನ್ನು ಏನೆನ್ನಬೇಕು? ಕರ್ನಾಟಕ ರಾಜ್ಯದ ಜನರ ತರ‍್ಲೆ  ಮನೋಸ್ಥಿತಿಯೇ  ರಾಜ್ಯದ ಅಭಿವೃದ್ದಿಗೆ ಅಡ್ಡಿಯಾಗಿದೆ ಎಂದು ಇವರು ಹೇಳಿದ್ದು ತಪ್ಪಾಗಿದೆ ಎಂದೆನಿಸುತ್ತದೆ. ನಿಜವಾದ ಕಾರಣವೆಂದರೆ ರಾಜ್ಯ ಸಚಿವ ಸಂಪುಟದ ತರ‍್ಲೆ ಮನೋಸ್ಥಿತಿಯೆ ರಾಜ್ಯದ ಅಭಿವೃದ್ದಿಗೆ ಅಡ್ಡಿಯಾಗುತ್ತಿದೆ ಎಂದು ಹೇಳಬೇಕಾಗಿತ್ತು. ಆದರೆ ಭೈರಪ್ಪನವರು ಬೇಕೆಂತಲೂ ಅಥವಾ ಗೊತ್ತಿಲ್ಲದೆಯೋ ಇಂತಹ ಹೇಳಿಕೆ  ಕೊಡುವ ಮೂಲಕ ಮತ್ತೊಮ್ಮೆ ತಮ್ಮ ಮನೋಸ್ಥಿತಿಯ ಅತಂತ್ರತೆಯನ್ನು ಬಿಚ್ಚಿಟ್ಟಿದ್ದಾರೆ ಎಂದೆನಿಸುತ್ತದೆ. ಮತ್ತಷ್ಟು ಓದು »

9
ಡಿಸೆ

ಇದು ನಿತೀಶಣ್ಣನ ದರ್ಬಾರು!! ಕಾರುಬಾರು!!

ಕೆ ಎಸ್ ರಾಘವೇಂದ್ರ ನಾವಡ

ಛೇ!ಒಬ್ಬ ನಿತೀಶರ೦ಥವರೋ ಯಾ ನರೇ೦ದ್ರ ಮೋದಿಯ೦ಥವರೋ ಯಾರಾದರೂ ಒಬ್ಬ ಜನನಾಯಕ ನಮ್ಮ ಕರ್ನಾಟಕ ರಾಜಕೀಯದಲ್ಲಿ ಉದಯಿಸಬಾರದಿತ್ತೇ ಎ೦ದು ಒಮ್ಮೊಮ್ಮೆ ಕಾಲದ ಕನ್ನಡಿಗೆ ಅನ್ನಿಸುವುದು೦ಟು!ಆದರೆ ಏನು ಮಾಡುವುದು? ಕಾ೦ಗ್ರೆಸ್ಸೂ ಬೇಡ, ಕುಮಾರಣ್ಣನೂ ಬೇಡ ಅ೦ತ ಅವರಿಗೂ  ಹಾಗೂ ನಮಗೂ ಒಮ್ಮೆ ಬದಲಾವಣೆಯ ಗಾಳಿ ಬೀಸಲೆ೦ಬ ಕಾರಣದಿ೦ದಲೋ ಯಾ ಒಳ ಮನಸ್ಸಿನಲ್ಲಿ ಭಾ.ಜ.ಪಾದ ಮೇಲಿದ್ದ ನಿರೀಕ್ಷೆ ಕಾತುರತೆಗಳಿ೦ದ ಮತ್ತು ಕುಮಾರಣ್ಣನಿ೦ದ ವ೦ಚನೆಗೊಳಗಾದ ಯಡಿಯೂರಪ್ಪನವರ ಮೇಲಿನ ಕರುಣೆಯಿ೦ದಲೋ  ಮತದಾರರು ಎರಡೂವರೆ ವರ್ಷಗಳ ಹಿ೦ದೆ ಯಡಿಯೂರಪ್ಪನವರನ್ನು ಆರಿಸಿದರೆ, ಅವರೋ ಇವರನ್ನೆಲ್ಲಾ ಮೀರಿಸಿದರು!!ಕರ್ನಾಟಕದ ಸಮಸ್ತ ಜನತೆ ಬೇಸರದಿ೦ದ ನಿಟ್ಟುಸಿರು ಬಿಡುತ್ತಿರುವ ಈ ಸ೦ರ್ಭದಲ್ಲಿ ದೂರದ ಗುಜರಾತ್ ನಲ್ಲಿ ಮೋದಿಯವರ ಮೋಡಿ ಎರಡನೇ ಅವಧಿಗೂ ಮು೦ದುವರೆದಿದ್ದು ಹಾಗೂ ಬಿಹಾರದಲ್ಲಿ ನಿತೀಶರು ಎರಡನೇ ಅವಧಿಗೆ ಪುನರಾಯ್ಕೆಯಾಗಿದ್ದು ನೈಜ ಜಾತ್ಯಾತೀತವಾದಿಗಳಿಗೆ ಹಾಗೂ ಅಭಿವೃಧ್ಧಿಯನ್ನು ಬಯಸುವ ಮನಸ್ಸುಗಳಿಗೆ ತುಸುವಾದರೂ ನೆಮ್ಮದಿ ನೀಡಿದೆ ಎ೦ದೇ ಹೇಳಬೇಕಾಗುತ್ತದೆ!! ಏಕೆ೦ದರೆ ಈ ಎರಡೂ ಗೆಲುವುಗಳು ಭಾರತೀಯ ಜನತಾ ಪಕ್ಷದ ವೈಯಕ್ತಿಕ ದೃಷ್ಟಿಯಿ೦ದ ಹಾಗೂ ಆಯಾ ರಾಜ್ಯಗಳ ಮಹಾ ಜನತೆಗಳ ದೃಷ್ಟಿಯಿ೦ದ ಮೈಲುಗಲ್ಲುಗಳೆ೦ದೇ ಹೇಳಬಹುದು! ಆ ನಿಟ್ಟಿನಲ್ಲಿ ನರೇ೦ದ್ರ ಮೋದಿಯವರ ಮೇಲೆ ಕಾಲದ ಕನ್ನಡಿ ತನ್ನ ಕ್ಷಕಿರಣ ಈಗಾಗಲೇ ಬೀರಿದೆ. ಈಗ “ಬಿಹಾರಿ ಬಾಬು“ ನಿತೀಶ“ರ ಸರದಿ. ಮತ್ತಷ್ಟು ಓದು »

20
ನವೆಂ

ಕೋಮುವಾದವೂ ಮೂಲಭೂತವಾದವೂ

ಅಜಕ್ಕಳ ಗಿರೀಶ ಭಟ್

ದಕ್ಷಿಣ ಕನ್ನಡದಲ್ಲಿ ಈಚಿನ ವರ್ಷಗಳಲ್ಲಿ ಹಿಂದೂ- ಮುಸ್ಲಿಂ ಸಂಘರ್ಷಗಳು ಹೆಚ್ಚಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಈ ಬಗ್ಗೆ ಸಾಕಷ್ಟು ಲೇಖನಗಳು ಕಾಲಕಾಲಕ್ಕೆ ವಿವಿಧ ಪತ್ರಿಕೆಗಳಲ್ಲಿ ಬಂದಿವೆ. ಪುಸ್ತಕಗಳೂ ಬಂದಿವೆ. ಆದರೆ , ಹೆಚ್ಚಿನ ಲೇಖನಗಳು ಸಮಸ್ಯೆಯ ಆಳಕ್ಕಿಳಿದು ಚರ್ಚಿಸುವುದಿಲ್ಲ. ಮೇಲು ಮೇಲಿಂದ ನೊಡಿ ಎಲ್ಲ ಕೋಮುವಾದಿಗಳನ್ನು ಖಂಡಿಸಬೇಕು ಎಂದು ಹೇಳಿದಾಕ್ಷಣ ಸಮಸ್ಯೆ ಪರಿಹಾರವಾಗದು.

ವಾಸ್ತವವಾಗಿ ಹಿಂದೂ ಮತ್ತು ಮುಸ್ಲಿಂ ಸಂಸ್ಕೃತಿಗಳು ಬದುಕನ್ನು ಗ್ರಹಿಸುವ ಬಗೆಯಲ್ಲಿಯೇ ವ್ಯತ್ಯಾಸಗಳಿವೆ.

ಹಿಂದೂ ಎಂಬೊಂದು ಏಕರೂಪಿ ಘಟಕ ಇಲ್ಲ ನಿಜ. ಆದರೆ ಸೃಷ್ಟಿ ಮತ್ತು ಸೃಷ್ಟಿಕರ್ತ ಇವೆಲ್ಲ ಪೂಜನೀಯ ಎಂದು ಗ್ರಹಿಸುವ ,ಅಂಥ ನಂಬಿಕೆಗಳನ್ನು ಹೊಂದಿರುವುದೇ ಈ “ಹಿಂದು” ಎಂದು ನಾವು ಅನುಕೂಲಕ್ಕಾಗಿ ಕರೆಯುವ ಗುಂಪುಗಳ ನಡುವೆ ಇರುವ ಸಾಮ್ಯತೆ ಎನ್ನಬಹುದು. ಇಂಥ ನಂಬಿಕೆಗಳು ಬಹುಸಂಸ್ಕೃತಿಗಳ ಅಸ್ತಿತ್ವಕ್ಕೆ ಪೂರಕ ಎಂದು ಬೇರೆ ಹೇಳಬೇಕಾಗಿಲ್ಲ. ಹಿಂದೂ ಧರ್ಮಗಳ ಒಳಗೇ ಭೇದಭಾವ ಇತ್ಯಾದಿ ಸಮಸ್ಯೆಗಳಿವೆ.ಅದು ಸಾಕಷ್ಟು ಚರ್ಚಿತವಾದ ವಿಷಯವೇ ಆಗಿದೆ.

ವಾಸ್ತವವಾಗಿ ಹಿಂದೂ-ಮುಸ್ಲಿಂ ಸಂಘರ್ಷವೆಂದರೆ ಅದು ಆಧುನಿಕತೆಗೆ ತೆರೆದುಕೊಂಡ ಮತ್ತು ಹಾಗೆ ತೆರೆದುಕೊಳ್ಳಲು ಹಿಂಜರಿಯುವ ಸಂಸ್ಕೃತಿಗಳ ನಡುವಿನ ಸಂಘರ್ಷವೂ ಹೌದು.ಅವರವರು ಅವರವರಷ್ಟಕ್ಕೇ ಇರಲಿ ಏನು ಸಮಸ್ಯೆ ಎನ್ನಲು ಸಾಧ್ಯವಿಲ್ಲ ಯಾಕೆಂದರೆ ಇವೆರಡೂ ಸಂಸ್ಕೃತಿಗಳೂ ಒಟ್ಟಿಗೇ ಬದುಕಬೇಕಾಗಿದೆ ಇಲ್ಲಿ.

ದಕ್ಷಿಣ ಕನ್ನಡದಲ್ಲಿ “ಹಿಂದೂ ಹುಡುಗಿ ” ಮತ್ತು “ಮುಸ್ಲಿಂ ಹುಡುಗ” ಜತೆಯಾಗಿ ಬಸ್ಸಲ್ಲಿ ಪ್ರಯಾಣಿಸಿದರೆ ಅಥವಾ ಪರಸ್ಪರ ಮಾತನಾಡಿದರೆ ಹಲ್ಲೆಗೆ ಒಳಗಾಗುವ ಪ್ರಸಂಗಗಳು ವರದಿಯಾಗುತ್ತವೆ.ಇಂಥ ಹಲ್ಲೆಗಳು ಖಂಡನೀಯವೇ ಹೌದು. ಇದರ ಹಿಂದೆ ಪುರುಷಾಹಂಕಾರದ ಪ್ರವೃತ್ತಿ ಇದೆ ಎನ್ನುವುದು ಎಲ್ಲರಿಗೂ ಅರ್ಥವಾಗುವ ವಿಚಾರ. ಆದರೆ ಇಂಥ ಪ್ರಸಂಗಗಳ ಬಗ್ಗೆ ಚಿಂತಿಸುವಾಗ ಇನ್ನಷ್ಟು ಸೂಕ್ಷ್ಮವಾಗಿ ನೋಡಬೇಕಾದ ಅಗತ್ಯವಿದೆ. ಉದಾಹರಣೆಗೆ ಮಂಗಳೂರಿನ ಕುಪ್ರಸಿದ್ಧ ಪಬ್ ದಾಳಿಯ ನಂತರ ಮಂಗಳೂರು ಹೇಗೆ ಕೋಮುವಾದಿಗಳ ತಾಣವಾಗುತ್ತಿದೆ ಎನ್ನುವ ಲೇಖನ ದ ವೀಕ್ ಪತ್ರಿಕೆಯಲ್ಲಿ ಪ್ರಕಟವಾಯಿತು. ( ಎನ್, ಭಾನುತೇಜ್, ವೀಕ್, ಫೆಬ್ರವರಿ -೨೦೦೯). ಎಲ್ಲ ಸರಿ; ಆದರೆ ಅದರಲ್ಲಿದ್ದ ಕೆಲವು ಸಾಲುಗಳು ಹೀಗಿದ್ದವು.”ಮುಸ್ಲಿಂ ಹುಡುಗರು ಮತ್ತು ಹಿಂದೂ ಹುಡುಗಿಯರ ನಡುವಿನ ಸ್ನೇಹಕ್ಕೆ ಗರಿಷ್ಟ ಶಿಕ್ಷೆ. ಹಿಂದು ಹುಡುಗ-ಮುಸ್ಲಿಂ ಹುಡುಗಿ ಸ್ನೇಹದ ವಿರುದ್ಧ ಯಾವುದೇ ಅಟ್ಯಾಕ್ ಆದ ಬಗ್ಗೆ ವರದಿಗಳಿಲ್ಲ.”(ಪು.೧೬). ಈ ಹೇಳಿಕೆ ನಿಜವಾಗಿ ಮಿಸ್ ಲೀಡ್ ಮಾಡುವಂಥದ್ದು. ದ.ಕ.ದಲ್ಲಿ ಹಿಂದು ಹುಡುಗ ಮತ್ತು ಮುಸ್ಲಿಂ ಹುಡುಗಿ ಝತೆಯಾಗಿ ಓಡಾಡುವ ಸನ್ನಿವೇಶಗಳು ಇಲ್ಲವೆಂಬಷ್ಟು ಕಡಮೆ ಎನ್ನುವ ಸತ್ಯವನ್ನು ಈ ಹೇಳಿಕೆ ಮರೆಮಾಚುತ್ತದೆ. ಮತ್ತಷ್ಟು ಓದು »

10
ನವೆಂ

ಬರಾಕ್ ಓಬಾಮನ ವಿವಿಧ ವೇಷಗಳು

ಅರವಿಂದ್

ಒಬಾಮ ಭಾರತೀಯ ರಾಜಕಾರಣಿಗಳ ವೇಷಧಾರಿಯಾದರೆ ಹೇಗಿರಬಹುದು ?

ಹೀಗೆಲ್ಲಾ ಇರಬಹುದಾ………….


image001

image002

image003

image004

image005

 ಮತ್ತಷ್ಟು ಓದು »

8
ನವೆಂ

ಭಾರತಕ್ಕೆ ಒಬಾಮ ಹಾಕಿದ ಟೋಪಿ!

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಬಂದಿದ್ದಾರೆ. ತನ್ನ ದೇಶದಲ್ಲಿ ಐವತ್ತು ಸಾವಿರ ಉದ್ಯೋಗಗಳನ್ನು ಸಷ್ಟಿಸಲು 44 ಸಾವಿರ ಕೋಟಿ ರೂಪಾಯಿ ಒಪ್ಪಂದವನ್ನು ಮಾಡಿಕೊಂಡಿದ್ದಾರೆ. ಅಮೆರಿಕದ ರಫ್ತು ದ್ವಿಗುಣ ಮಾಡುವುದೇ ತನ್ನ ಗುರಿ ಎಂದು ಇಂಡಿಯಾಕ್ಕೆ ಭರ್ಜರಿ ಟೋಪಿ ಹಾಕಿದ್ದಾರೆ. ಭಾರತದ ಶಸ್ತ್ರಾಸ್ತ್ರ ಮಾರುಕಟ್ಟೆಯ ಮೇಲೂ ಕಣ್ಣು ಹಾಕಿದ್ದಾರೆ. ನಮ್ಮ ದೇಶವನ್ನು ಇಕ್ಕಟ್ಟಿಗೆ ಸಿಲುಕಿಸಲೆಂದೇ ಪರಮಾಣು ಪೂರೈಕೆದಾರರ ಕೂಟದಲ್ಲಿ (ಎನ್‌ಎಸ್‌ಜಿ) ಭಾರತಕ್ಕೆ ಪೂರ್ಣ ಪ್ರಮಾಣದ ಸದಸ್ಯತ್ವ ದೊರಕಿಸಿಕೊಡುವ ಆಶ್ವಾಸನೆಯನ್ನು ನೀಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಈ ದೇಶದ ಸಂಪನ್ಮೂಲಗಳನ್ನು ಲೂಟಿ ಮಾಡಲು ಏನೇನು ಮಾಡಬೇಕೋ ಅದನ್ನೆಲ್ಲ ಮಾಡಿದ್ದಾರೆ.

ಬರಾಕ್ ಒಬಾಮ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಾಗ ಅಮೆರಿಕಕ್ಕೊಬ್ಬ ಕಪ್ಪು ವರ್ಣಿಯ ವ್ಯಕ್ತಿ ನಾಯಕತ್ವ ವಹಿಸಿದನೆಂದು ಸಂಭ್ರಮ ಪಟ್ಟವರಿದ್ದರು. ನಮ್ಮ ದೇಶದಲ್ಲೂ ಇಂಥ ವಿಜಯೋತ್ಸಾಹ ಕಂಡು ಬಂದಿತ್ತು. ಆದರೆ, ಎಡ ಪಂಥಿಯರಲ್ಲಿ ಯಾವುದೇ ಭ್ರಮೆ ಇರಲಿಲ್ಲ. ಯಾವುದೇ ಬಣ್ಣದ ವ್ಯಕ್ತಿ ಅಧಿಕಾರಕ್ಕೆ ಬಂದನೆಂದ ಮಾತ್ರಕ್ಕೆ ಒಂದು ಸಾಮ್ರಾಜ್ಯಶಾಹಿ ದೇಶದ ನೀತಿ ಧೋರಣೆಗಳು ಒಮ್ಮಿಂದೊಮ್ಮೆಲೆ ಬದಲಾಗಿ ಬಿಡುವುದಿಲ್ಲ. ಬರಾಕ್ ಒಬಾಮ ಒಳ್ಳೆಯವರೇ ಇರಬಹುದು. ವರ್ಣಭೇದದ ಬೆಂಕಿಯಲ್ಲಿ ನಲುಗಿದವರಿರಬಹುದು. ಮತ್ತಷ್ಟು ಓದು »

31
ಆಕ್ಟೋ

ರಾಜ್ಯ ರಾಜಕೀಯ ಗದ್ದಲಕ್ಕೆ ಗುದ್ದು ನೀಡಿದ ಐಟಿ ದಾಳಿ

ಶಂಶೀರ್ ಬುಡೋಳಿ
 

ರಾಜಕಾರಣ ಕುರಿತಂತೆ ಹರಿಣಿಯವರ ವ್ಯಂಗ್ಯಚಿತ್ರ

ಒಂದೆಡೆ ರಾಜ್ಯ ರಾಜಕೀಯದಲ್ಲಿ ಅಭದ್ರತೆ.  ಇನ್ನೊಂದೆಡೆ  ಸರಕಾರದ ಉಳಿವಿಗಾಗಿ ಅಪರೇಷನ್ ಕಮಲದ ಮೂಲಕ ಇತರ ಪಕ್ಷಗಳ ಶಾಸಕರನ್ನು ದತ್ತು ತೆಗೆದುಕೊಳ್ಳುವ ಹಾವಳಿ. ಇದಕ್ಕಾಗಿ ಕೋಟಿ ಕೋಟಿ ರೂಪಾಯಿಗಳ ವ್ಯಯ. ಇದನ್ನೆಲ್ಲಾ ನೋಡಿ ರೋಸಿ ಹೋಗಿರುವ ಜನತೆಗೆ ರಾಜಕೀಯವೆಂದರೆ ಇದೇನಾ ಎಂಬ ಭಾವನೆ ಹುಟ್ಟಿಕೊಂಡಿದೆ.  ಸರಕಾರದ ಉಳಿವಿಗಾಗಿ  ಮುಖ್ಯಮಂತ್ರಿಯಾದಿಗಳು ಹಣದ ಮೂಲಕ ಶಾಸಕರನ್ನು ಖರೀದಿಸುವ ಬೆನ್ನಲ್ಲೇ  ಆದಾಯ ತೆರಿಗೆ ಇಲಾಖಾಧಿಕಾರಿಗಳು (೩೦೦ ಕ್ಕೂ ಹೆಚ್ಚಿನ ಅಧಿಕಾರಿಗಳಿದ್ದರು)  ರಾಜ್ಯದ ಆರುವತ್ತು ಸ್ಥಳಗಳಲ್ಲಿ ಶಾಸಕರ ನಿವಾಸ, ಕಚೇರಿಗೆ ದಾಳಿ ಮಾಡಿದ್ದಾರೆ.  ಇದನ್ನು ಬಿಜೆಪಿ ಕಾಂಗ್ರೆಸ್ಸಿಗರ ಪಿತೂರಿ ಎಂದು ದೂರುತ್ತಿದ್ದಾರೆ. ಇಂತಹ ದಾಳಿ ಆದ ಸಂದರ್ಭದಲ್ಲಿ  ಇಂತಹ ಆರೋಪಗಳನ್ನು  ರಾಜಕೀಯ ಪಕ್ಷಗಳು ಮಾಡುವುದು ಸಾಮಾನ್ಯವಾಗಿಬಿಟ್ಟಿದೆ.

ಇದೇ  ರೀತಿ ಈ ಹಿಂದೆ ತಾಜ್ ಕಾರಿಡಾರ್ ಪ್ರಕರಣದಲ್ಲಿ ಮಾಯಾವತಿ ವಿರುದ್ಧ  ಅಕ್ರಮ ಸಂಪತ್ತು    ಕ್ರೋಡಿಕರಣದ ಆರೋಪಕ್ಕೆ ಸಂಬಂಧಿಸಿ ಮುಲಾಯಂ ಸಿಂಗ್ ಯಾದವ್ ವಿರುದ್ಧ ರಾಜಕೀಯ ಸೇಡು ತೀರಿಸಿಕೊಳ್ಳಲು  ಕೇಂದ್ರ ಸರಕಾರ ಸಿಬಿ‌ಐಯನ್ನು ದುರುಪಯೋಗಪಡಿಸಿಕೊಂಡಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಐಟಿ ದಾಳಿ ನಡೆದ ಬೆನ್ನಲ್ಲೇ ರಾಜ್ಯ ಸಚಿವ ಸಂಪುಟದ ಶಾಸಕರು ಇದೊಂದು ಪಿತೂರಿ, ಷಡ್ಯಂತ್ರ ಎಂದು ಆರೋಪಿಸುವುದು ಎಷ್ಟು ಸರಿ?  ಪ್ರಾಮಾಣಿಕತೆಯಿಂದ ಸಂಪತ್ತು ಗಳಿಸಿದ ಶಾಸಕರು ಈ ರೀತಿಯ ಆರೋಪ  ಮಾಡಲು ಸಾಧ್ಯವೇ? ನಮ್ಮದು ಪ್ರಾಮಾಣಿಕ ಮಾರ್ಗದಲ್ಲಿ ಸಂಗ್ರಹಿಸಿದ ಹಣ, ಸಂಪತ್ತು ಎಂದು ಹೇಳಿಕೊಳ್ಳುವ ಶಾಸಕರು, ಸಚಿವರು  ತಮ್ಮ ತೆರಿಗೆಯ ಪೂರ್ಣ ಪ್ರಮಾಣದ ದಾಖಲೆಗಳನ್ನು ತೆರಿಗೆ ಇಲಾಖಾಧಿಕಾರಿಗಳು ಸಲ್ಲಿಸಲು ಹಿಂದೆಡೆ ಹಾಕುವುದೇಕೆ? ಇದು ನಮ್ಮ ಮುಂದಿರುವ ಪ್ರಶ್ನೆಯಾಗಿದೆ. ಕೇವಲ ಅಧಿಕಾರ ಲಾಲಸೆ, ರಾಜಕೀಯದಲ್ಲಿ  ಸರ್ವಾಧಿಕಾರಿ ಮೆರೆಯಲು ಕೋಟಿ ಕೋಟಿ ಹಣ ನೀಡಿ, ರಾಜಕೀಯ ಸಿದ್ಧಾಂತಗಳನ್ನು ಅಪಮೌಲ್ಯ ಮಾಡಿ ಇತರ ಪಕ್ಷದ ಶಾಸಕರನ್ನು ಖರೀದಿಸುವುದು ನೈತಿಕತೆಯೇ? ಅಥವಾ ಸಂವಿಧಾನದ ಪರಿಮಿತಿಯಲ್ಲಿ  ಬರುವ  ಚಟುವಟಿಕೆಯೇ? ಅಲ್ಲ. ಇದೊಂದು ಮಿತಿಮೀರಿದ ಚಟುವಟಿಕೆಯಾಗಿದೆ. ಮತ್ತಷ್ಟು ಓದು »

27
ಆಕ್ಟೋ

” ಸೇವೆಯಲ್ಲೇ ಸಂಘ ದಕ್ಷ”

ರಾಜೇಶ್ ಪದ್ಮಾರ್, ಬೆಂಗಳೂರು

ಅಕ್ಟೋಬರ್ ೨೫ರ ಆರೆಸ್ಸೆಸ್ ಪ್ರಾಂತ ಪ್ರಚಾರಕ್ ಮುಕುಂದ ಅವರ ಲೇಖನಕ್ಕೆ ಪ್ರತಿಯಾಗಿ ನಿನ್ನೆ ಸಚ್ಚಿದಾನಂದ ಜೋಷಿಯವರ ಪ್ರತಿಕ್ರಿಯೆ  ಮೂಡಿಬಂದ ರೀತಿ ನೀರಸ ಮಾತ್ರವಲ್ಲ, ಒಂಥರಾ ಚಡಪಡಿಸುವಿಕೆಯಿಂದ ಜನ್ಮ ತಾಳಿದ ಲೇಖನದಂತೆ ಭಾಸವಾಯಿತು. ಸಾರ್ವಜನಿಕವಾಗಿ ತುಸು ಮೌನಿಯಾಗಿರುವ ಆರೆಸ್ಸೆಸ್ ನಂಥಹಾ ಸಂಘಟನೆಯ ಪ್ರಮುಖರು ಮಂಡಿಸಿದ ಸಂಘಟನಾತ್ಮಕ ಅಭಿಪ್ರಾಯಗಳು ಬಿಜೆಪಿ ಮಾತ್ರವಲ್ಲ,  ರಾಜಕೀಯ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತನಾಗಿರುವ  ಓರ್ವಸಾಮಾನ್ಯ ವ್ಯಕ್ತಿಗೂ ಆಲೋಚನೆಗೀಡುಮಾಡುವ ಅಂಶಗಳನ್ನು ಉದಾಹರಿಸಿತ್ತು.
‘ಸಂಘ ಪ್ರಾರಂಭಿಸಿದ ರಾಜಕೀಯ ಪಕ್ಷ ಹಾಳಾದರೆ ಅದನ್ನು ನಾಶ ಮಾಡುವ ಶಕ್ತಿಯೂ ಸಂಘಕ್ಕೆ ಇದೆ’ ಎಂಬ ಅಂಶವು ಸಣ್ಣ ಮಾತೇನಲ್ಲ. ದಶಕಗಳ ಸಾಮಾಜಿಕ ಸಂಘಟನಾ ಕೌಶಲ್ಯ ಹೊಂದಿರುವ, ಸಾಮಾಜಿಕ ಧ್ಯೇಯಕ್ಕಾಗಿಯೇ ಜೀವನ-ಸಮಯ  ಮೀಸಲಿಟ್ಟ ಆರೆಸ್ಸೆಸ್ ಪೂರ್ಣಾವಧಿ ಕಾರ್ಯಕರ್ತರ ಚಿಂತನೆಯಿಂದ ಮೊಗೆದು ಬಂದ ಧೃಡ ಮಾನಸಿಕತೆಯ ಪ್ರತೀಕ ಅದು. ಸೃಷ್ಟಿ-ನಾಶ-ಮರುಸೃಷ್ಟಿ ಈ ಮೂರೂ ಸಾಧ್ಯ ಎಂದು ಆತ್ಮವಿಶ್ವಾಸದಿಂದಲೇ ಆರೆಸ್ಸೆಸ್ ಪ್ರಮುಖರಾದ ಮುಕುಂದ ಹೇಳಿರುವುದನ್ನು ಲೇಖನದಲ್ಲಿ ಗಮನಿಸಬಹುದು. ಸಾರ್ವಜನಿಕವಾಗಿ ಈ ರೀತಿಯ ಹೇಳಿಕೆ ಕೊಡುವ ಮುಂಚೆ ಖಂಡಿತವಾಗಿಯೂ ತನ್ನ ಶಕ್ತಿ-ಸಾಮರ್ಥ್ಯದ, ಹೇಳಿಕೆ ಮಾಡಬಹುದಾದ ಪರಿಣಾಮಗಳ, ಇತರ ಎಲ್ಲಾ ಸಾಧ್ಯಾಸಾಧ್ಯತೆಗಳನ್ನು ಆರೆಸ್ಸೆಸ್ ಯೋಚಿಸುತ್ತದೆ ಎಂದೇಕೆ ಸಚ್ಚಿದಾನಂದ ಜೋಶಿಯವರಿಗೆ ಅನಿಸದು? ಮತ್ತಷ್ಟು ಓದು »