ತಡೆವವರು ಬನ್ನಿರೋ ಹೊಡೆವವರು ಬನ್ನಿರೋ ಎನ್ನುತ್ತಾ ಸಾಗುತ್ತಿದೆ #ಜನರಕ್ಷಾಯಾತ್ರೆ
– ಸಂತೋಷ್ ತಮ್ಮಯ್ಯ
೨೯ ವರ್ಷದ ಹಿಂದೆ ಅವರು ಪಾಲಕ್ಕಾಡಿನಲ್ಲಿ ಸಂಘದ ಶಾರೀರಿಕ್ ಪ್ರಮುಖ್ ಆಗಿದ್ದ ವಿ.ಸುಧಾಕರನ್‌ರನ್ನು ಬಸ್ಸಿನಿಂದೆಳೆದು ಬರ್ಬರವಾಗಿ ಕೊಲೆಮಾಡಿದ್ದರು. ಸುಧಾಕರನ್ ಕೋಯಿಕ್ಕೋಡಿನ ಬಿಜೆಪಿಯ ಕಾರ್ಯಕರ್ತನೆಂಬುದೊಂದೇ ಕಾರಣ. ೨೧ ವರ್ಷದ ಹಿಂದೆ ತ್ರಿಶೂರಿನಲ್ಲಿ ಟಿ.ಎಸ್ ಸಂತೋಷ್ ಎಂಬ ಸಣ್ಣ ವ್ಯಾಪಾರಿಯನ್ನೂ ಕೊಂದರು. ಅದಕ್ಕೂ ಕಾರಣ ಬಿಜೆಪಿ ಕಾರ್ಯಕರ್ತ ಎಂಬುದೊಂದೇ. ೩೯ ವರ್ಷದ ಹಿಂದೆ ಕಣ್ಣೂರು ಜಿಲ್ಲೆಯ ಪನ್ನನೂರ್ ಚಂದ್ರನ್ ಎಂಬವರನ್ನು ಸಂಘ ಸ್ಥಾನದಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಅದಕ್ಕೆ ಕಾರಣ ಕಮ್ಯುನಿಸ್ಟ್ ಗ್ರಾಮದಲ್ಲಿ ಶಾಖೆ ನಡೆಸಿದ ಎಂಬ ಒಂದೇ ಕಾರಣ. ೩೦ ವರ್ಷದ ಹಿಂದೆ ಕೋಯಿಕ್ಕೋಡಿನ ಬಿಎಂಎಸ್ ಕಾರ್ಯಕರ್ತ ಸಿ.ಕೆ ರಾಮಚಂದ್ರನ್ ಅವರನ್ನು ಮುಖದ ಗುರುತು ಕೂಡಾ ಸಿಗದಂತೆ ಕಮ್ಯುನಿಸ್ಟರು ಕೊಂದಿದ್ದರು. ಕಾರಣ, ಕಾರ್ಮಿಕ ಯೂನಿಯನ್ನುಗಳು ಕೇವಲ ಕಮ್ಯುನಿಸ್ಟರ ಸ್ವತ್ತು ಎಂಬ ಮತಾಂಧತೆ. ೧೫ ವರ್ಷದ ಹಿಂದೆ ವೃತ್ತಿಯಲ್ಲಿ ಡ್ರೈವರ್ ಅಗಿದ್ದ ಆರೆಸ್ಸೆಸ್ ಕಾರ್ಯಕರ್ತ ಉತ್ತಮನ್‌ರನ್ನೂ ಕಮ್ಯುನಿಸ್ಟರು ಹೀಗೇ ಕೊಂದಿದ್ದರು. ೧೨ ವರ್ಷಗಳ ಹಿಂದೆ ಕಣ್ಣೂರಿನ ಆರೆಸ್ಸೆಸ್ ಜಿಲ್ಲಾ ಬೌದ್ಧಿಕ್ ಪ್ರಮುಖ್ ಅಶ್ವಿನ್ ಕುಮಾರ್‌ರನ್ನೂ ಕಮ್ಯುನಿಸ್ಟರು ಧಾರುಣವಾಗಿ ಕೊಚ್ಚಿಹಾಕಿದ್ದರು.
೧೯೬೯ರಿಂದ ಕಮ್ಯುನಿಸ್ಟರು ಹೀಗೆ ಕೊಂದ ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಸಂಖ್ಯೆ ೨೮೪. ಈಗಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಕಾರಕ್ಕೆ ಬಂದ ನಂತರ ನಡೆದ ಕೊಲೆಗಳ ಸಂಖ್ಯೆಯೇ ೧೪! ಎಲ್ಲಾ ಕೊಲೆಗಳಿಗೆ ಕಾರಣ ಕೇರಳದಲ್ಲಿ ಕಮ್ಯುನಿಸಮ್ಮಿಗೆ ಹೊರತಾದ ಯಾವುದೂ ಅಸ್ತಿತ್ವದಲ್ಲಿರಬಾರದು ಎಂಬ ಅಸಹನೆ, ರಾಷ್ಟ್ರೀಯತೆಯೆಂಬುದು ಅಳಿಯಬೇಕು, ಸಂಘರ್ಷ ಉಂಟಾಗಬೇಕು, ಮತೀಯ ದಾಹ. ಒಟ್ಟಾರೆ ಬಲಪಂಥೀಯರು ಹೆದರಿ ಮೂಲೆಸೇರಬೇಕು ಎಂಬುದು. ವಿಶೇಷವೆಂದರೆ ಕೇರಳದಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಕೊಲೆಗಳಾದಷ್ಟೂ ಅವೆರಡೂ ಬೆಳೆಯುತ್ತಲೇ ಇವೆ. ಹರಿದ ರಕ್ತವನ್ನೇ ಕಾರ್ಯಕರ್ತರು ಗಂಧದಂತೆ ಹಣೆಗೆ ಹಚ್ಚಿಕೊಂಡಿದ್ದಾರೆ. ವ್ಯಕ್ತಿಗಳ ಕೊಲೆಯಿಂದ ವಿಚಾರವಂತಿಕೆ ಸಾಯುವುದಿಲ್ಲ ಎಂಬುದಕ್ಕೆ ಕೇರಳ ಸಾಕ್ಷಿಯೆಂಬಂತೆ ಕಳೆದ ಹನ್ನೊಂದು ದಿನಗಳಿಂದ ನಡೆಯುತ್ತಿರುವ ಜನರಕ್ಷಾ ಯಾತ್ರೆಯಲ್ಲಿ ರಾಮಚಂದ್ರನ್ ಮಗಳು ದೇವಾಂಗನಾ ವಂದೇ ಮಾತರಂ ಹಾಡುತ್ತಾಳೆ, ತಲಶೇರಿ ಸಂತೋಷ್ ಮಗಳು ವಿಸ್ಮಯಾ ಕಣ್ಣೀರು ಹಾಕುತ್ತಾ ಪಾದಯಾತ್ರೆ ಮಾಡುತ್ತಿದ್ದಾಳೆ, ರಾಧಾಕೃಷ್ಣನ್ ಪತ್ನಿ ವಿಮಲಾ ಮೂಕವಾಗಿ ಪಾದಾಯಾತ್ರೆ ಸಾಗುತ್ತಿದ್ದಾರೆ, ಪಾನೂರು ಚಂದ್ರನ್ ಪತ್ನಿ ಅರುಂಧತಿ ನನ್ನಂಥ ದುಖಃ ಮತ್ತಾರಿಗೂ ಬರಬಾರದೆಂದು ಬಂದಿದ್ದೇನೆ ಎಂದು ಗುಡುಗುತ್ತಾರೆ, ದಿವಂಗತ ಉತ್ತಮನ್ ಅಪ್ಪನೂ, ಮಕ್ಕಳೂ ಯಾತ್ರೆಯಲ್ಲಿ ಪಾಲ್ಗೊಂಡು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಅಶ್ವಿನ್ ಕುಮಾರರ ವೃದ್ದ ತಾಯಿಯ ಮುಖದಲ್ಲಿ ಪುತ್ರಶೋಕಕ್ಕಿಂತಲೂ ಕಮ್ಯುನಿಸ್ಟರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತದೆ. ಅಂದರೆ ಯಾವುದನ್ನು ಸಮೂಲ ನಿರ್ನಾಮ ಮಾಡಬೇಂದು ಕಮ್ಯುನಿಸ್ಟರು ಮತ್ತು ಜಿಹಾದಿಗಳು ರಕ್ತ ಚೆಲ್ಲಿದ್ದರೋ ಆ ಉದ್ದೇಶವಿನ್ನೂ ಕೇರಳದಲ್ಲಿ ಈಡೇರಿಲ್ಲ. ಈಡೇರುವುದೂ ಇಲ್ಲ ಎಂಬುದು ಯಾತ್ರೆಯ ಪ್ರತೀಹೆಜ್ಜೆಯೂ ಸಾರುತ್ತಿದೆ. ಜನರಕ್ಷಾ ಯಾತ್ರೆ ವಿಶೇಷವೆನಿಸುವುದು ಇಷ್ಟಕ್ಕೇ ಮಾತ್ರವಲ್ಲ. ಅದು ರಾಜಕೀಯ ನಡೆಯೂ ಅಲ್ಲ, ಕೇವಲ ಆಕ್ರೋಶದ ಉದ್ದೇಶವೂ ಅಲ್ಲ. ನಿಜಕ್ಕೂ ಅದೊಂದು ವೈಚಾರಿಕ ಸಂಘರ್ಷ.
ಜನರಕ್ಷಾ ಯಾತ್ರೆ : ಕಮ್ಯುನಿಸ್ಟರ ಭದ್ರಕೋಟೆಯಲ್ಲಿ ಕಂಪನ
– ಅಂಜಲಿ ಜಾರ್ಜ್ ಮತ್ತು ಜಯಶಂಕರ್
ಮೂಲ ಲೇಖನ : https://swarajyamag.com/politics/kannurs-jana-raksha-yatra-turning-the-tide-on-the-communists
ಪಿಣರಾಯಿ, ಕೇರಳದ ಮಾರ್ಕ್ಸಿಸ್ಟರಿಗೆ ಬಹಳ ಪ್ರಮುಖವಾಗಿರುವ ಒಂದು ಸಣ್ಣ ಗ್ರಾಮ. ೧೯೩೯ರಲ್ಲಿ ಪಿಣರಾಯಿಗೆ ಸಮೀಪವಿರುವ ಪರಪ್ಪುರಂ ಎಂಬ ಸ್ಥಳದಲ್ಲಿ ಕಮ್ಯುನಿಸ್ಟರು ತಮ್ಮ ಕಾರ್ಯಚಟುವಟಿಕೆಯನ್ನು ಮೊದಲ ಬಾರಿಗೆ ಆರಂಭಿಸಿದರು. ಅಂದಿನಿಂದ ಇಂದಿನವರೆಗೆ ಪಿಣರಾಯಿ ಕೇರಳದ ಕಮ್ಯುನಿಸ್ಟರ ಭದ್ರಕೋಟೆ ಎಂದೇ ಕರೆಯಲ್ಪಡುತ್ತದೆ. ಒಂದು ಕಾಲದಲ್ಲಿ ಕೇವಲ ಕೆಂಪುದ್ವಜಗಳಷ್ಟೇ ಹಾರಾಡುತ್ತಿದ್ದ ಪ್ರದೇಶ ಇದಾಗಿತ್ತು. ಕಮ್ಯುನಿಸ್ಟ್ ಪಾರ್ಟಿಯ ಹತೋಟಿಯಲಿದ್ದ ಈ ಗ್ರಾಮದಲ್ಲಿ ವಿರೋಧಕ್ಕೆ ಆಸ್ಪದವೇ ಇರಲಿಲ್ಲ. ವಿರೋಧಿ ಧ್ವನಿಗಳನ್ನು ಯಾವುದೇ ಕರುಣೆಯಿಲ್ಲದೆ ಮೆಟ್ಟಿಹಾಕಲಾಗುತ್ತಿತ್ತು. ಬಿಜೆಪಿ ಹಾಗು ಸಂಘದ ಕಾರ್ಯಕರ್ತರಾದ ಹುತಾತ್ಮ ಉತ್ತಮನ್ ಹಾಗು ಅವರ ಮಗ ಹುತಾತ್ಮ ರೆಮಿತ್ ರನ್ನು ಇದೇ ಕಮ್ಯುನಿಸ್ಟರು ಕೊಂದದ್ದು ೧೪ ದಿನಗಳ ಜನರಕ್ಷಾಯಾತ್ರೆಗೆ ಮುನ್ನುಡಿ ಬರೆಯಿತು. ಕಮ್ಯುನಿಸ್ಟರು ಮಾಡಿರುವ ರಾಜಕೀಯ ಹತ್ಯೆಗಳನ್ನು ಎತ್ತಿ ತೋರಿಸುತ್ತಿರುವ ಈ ಯಾತ್ರೆ ಕೆಲವು ದಿನದ ಹಿಂದೆ ಪಿಣರಾಯಿ ಗ್ರಾಮವನ್ನು ಪ್ರವೇಶಿಸಿ ಮುಂದುವರೆಯಿತು. ಕೇರಳದ ರಾಜಕೀಯ ಚರಿತ್ರೆಯಲ್ಲಿ ಇದೊಂದು ಮಹತ್ತರ ತಿರುವು
೧೯೭೭ರ ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದ ಸಂಧರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕತ್ವವನ್ನು ಕಂಡ ಬಹಳಷ್ಟು ಮಾರ್ಕ್ಸಿಸ್ಟ್ ನಾಯಕರು ಮತ್ತು ಕಾರ್ಯಕರ್ತರು ಸಂಘವನ್ನು ಸೇರಿಕೊಂಡರು. ಇದಕ್ಕೆ ಬಹುಮುಖ್ಯವಾಗಿ ಎರಡು ಕಾರಣಗಳಿದ್ದವು. ಮೊದಲನೆಯದ್ದು, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಭಾರತೀಯ ಕಮ್ಯುನಿಸ್ಟ್ ಪಾರ್ಟಿ (ಸಿಪಿಐಎಂ) ಕುಯುಕ್ತಿಯಿಂದ ಕಾಂಗ್ರೆಸ್ಸಿನ ಜೊತೆ ಸೇರಿಕೊಂಡು ಸರಕಾರ ರಚಿಸಿತ್ತು ಹಾಗು ಎರಡನೆಯದಾಗಿ, ಸಂಘ ಈ ಹೋರಾಟದ ಮುಂಚೂಣಿಯಲ್ಲಿದ್ದು,ಇಂದಿರಾ ಗಾಂಧಿಯನ್ನು ಎದುರಿಸುವ ಸಾಹಸ ಮಾಡಿತ್ತು, ಇದರ ಫಲ ಸ್ವರೂಪವಾಗಿ ಸಾವಿರಾರು ಸ್ವಯಂಸೇವಕರು ಬಂಧನಕ್ಕೆ ಒಳಗಾಗಿದ್ದರು.. ತಮ್ಮ ನಾಯಕರ ಹೊಣೆಗೇಡಿತನ ಹಾಗು ಕಪಟತನದಿಂದ ಬೇಸತ್ತ ಜನರನ್ನು ಸ್ವಯಂಸೇವಕ ಸಂಘದ ಸನ್ನದ್ಧತೆ ಹಾಗೂ ಜವಾಬ್ದಾರಿಯುತ ನಡವಳಿಕೆ ಆಕರ್ಷಿಸಿತು.
ಆಧ್ಯಾತ್ಮಿಕ ಪ್ರಗತಿ ಮತ್ತು ಭಾರತೀಯ ಸಂಸ್ಕೃತಿ
ಡಾ. ಸಂತೋಷ್ ಕುಮಾರ್ ಪಿ.ಕೆ
ಶಿವಮೊಗ್ಗ.
ದೀನ್ ದಯಾಳ್ ಉಪಾಧ್ಯಾಯ, ಪ್ರಾಯಶಃ ಇವರ ಹೆಸರನ್ನು ನಮ್ಮ ಪೀಳಿಗೆ ಹೆಚ್ಚಾಗಿ ಕೇಳಿಲ್ಲ ಎಂದರೂ ತಪ್ಪಾಗಲಾರದು. ಇಂದಿನ ಭಾರತೀಯ ಜನತಾ ಪಕ್ಷದ ಮೂಲ ಪಕ್ಷವಾದ ಜನಸಂಘವನ್ನು ಸ್ಥಾಪಿಸಿದ ಮಹಾ ನಾಯಕ ದೀನ್ ದಯಾಳ್ ರವರು. ಯಾವುದೋ ರಾಜಕೀಯ ಲಾಭ ಅಥವಾ ವೈಯುಕ್ತಿಕ ಹಿತಾಸಕ್ತಿಗೋಸ್ಕರ ರಾಜಕೀಯ ಪಕ್ಷವನ್ನು ಅವರು ಹುಟ್ಟುಹಾಕಲಿಲ್ಲ. ಬದಲಾಗಿ, ಅವರಲ್ಲಿದ್ದ ಅಧಮ್ಯ ರಾಷ್ಟ್ರಪ್ರೇಮ ಹಾಗೂ ರಾಜಕೀಯ ಸ್ಥಿತ್ಯಂತರಗಳನ್ನು ಸಕಾರಾತ್ಮಕ ದಿಕ್ಕಿಗೆ ತೆಗೆದುಕೊಂಡು ಹೋಗುವ ಇರಾದೆಯಿಂದ ರಾಜಕೀಯ ಪಕ್ಷವನ್ನು ಕಟ್ಟಿದರು. ಇಂದಿನ ಬಹುತೇಕ ರಾಜಕಾರಣಿಗಳಿಗೆ ರಾಜಕಾರಣ ಮಾಡುವುದರಲ್ಲಿ ಕೌಶಲ್ಯವಿದೆಯೇ ಹೊರತು, ರಾಜಕೀಯವನ್ನು ಏಕೆ ಮಾಡಬೇಕು, ಅದರ ಫಲಿತಾಂಶಗಳೇನು ಎನ್ನುವ ಸಮಗ್ರ ಜ್ಞಾನ ಇರುವುದು ಅಪರೂಪ. ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವಂತೆ, ಬಹಳ ಸ್ಪಷ್ಟವಾಗಿ ಸಂಸ್ಕೃತಿ ಹಾಗೂ ರಾಜಕಾರಣದ ಕುರಿತು ಅಪಾರ ಜ್ಞಾನವನ್ನು ಹೊಂದಿದ್ದ ವ್ಯಕ್ತಿ ಎಂದರೆ ಉಪಾಧ್ಯಾಯರು. ಸಂಸ್ಕೃತಿಯ ಆಳ ಅಗಲಗಳನ್ನು ಅಮೂಲಾಗ್ರವಾಗಿ ಬಲ್ಲಂತಹ ಹಾಗೂ ನಿರ್ಧಿಷ್ಟವಾಗಿ ರಾಜಕೀಯ ವ್ಯವಸ್ಥೆಯ ಉದ್ದೇಶ ಹಾಗೂ ಅದು ತಲುಪಬೇಕಾದ ಗುರಿಗಳನ್ನು ಸ್ಪಷ್ಟೀಕರಿಸಿದ ಮೊದಲ ಭಾರತೀಯ ವ್ಯಕ್ತಿ ಎಂದರೂ ಅತಿಶಯೋಕ್ತಿಯಾಗಲಾರದು. ಈ ಪುಟ್ಟ ಬರವಣಿಗೆಯಲ್ಲಿ ಅವರ ಕೆಲವು ವಿಚಾರಧಾರೆಗಳನ್ನು ಪರಿಚಯಿಸುವ ಮೂಲಕ ನಮ್ಮ ರಾಜಕೀಯ ವ್ಯವಸ್ಥೆಯನ್ನು ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಲಾಗುತ್ತದೆ. ಮತ್ತಷ್ಟು ಓದು 
ಭಾರತದ ಮುಂದಿರುವ ಡೊಕ್ಲಮ್ ಸವಾಲು…
– ಶ್ರೇಯಾಂಕ ಎಸ್ ರಾನಡೆ
ಡೊಕ್ಲಮ್, ಭಾರತ-ಭೂತಾನ್-ಚೀನಾ ಮೂರು ದೇಶಗಳ ನಡುವಿನ ಬಹು ಆಯಕಟ್ಟಿನ 89 ಚದರ ಕಿಲೋಮೀಟರ್‍ಗಳ ವ್ಯಾಪ್ತಿಯಲ್ಲಿರುವ ಸಂಕೀರ್ಣ ಪ್ರದೇಶ. ಇದು ಭೂತಾನ್‍ನ ಪಶ್ಚಿಮ ಗಡಿ ಭಾಗದಲ್ಲಿದೆ. ಅಂದರೆ ಟಿಬೆಟ್‍ನ ಆಗ್ನೇಯ ದಿಕ್ಕಿನಲ್ಲಿದೆ. ಮುಖ್ಯವಾಗಿ ಇದು ಭಾರತಕ್ಕೆ ಮುಖ್ಯವಾಗಿರುವ ಚುಂಬಿ ಕಣಿವೆಯ ಸಂಯೋಗ ಸ್ಥಾನದಲ್ಲಿದೆ. ಅದು ಅಧಿಕೃತವಾಗಿ ಭೂತಾನ್‍ನ ಭೂಭಾಗ. ಅನೇಕ ಕಾರಣಗಳಿಂದ ಮೂರು ದೇಶಗಳಿಗೂ ಬಹುಮುಖ್ಯ ಭೂಪ್ರದೇಶ. ಈ ಪ್ರದೇಶದ ಮೇಲೆ ಹಿಡಿತ ಸಾಧಿಸುವುದೆಂದರೆ ಸಿಕ್ಕಿಂನ ಬಹು ಮೌಲ್ಯಯುತ ಚುಂಬಿ ಕಣಿವೆ, ಭೂತಾನ್ ಹಾಗೂ ಇನ್ನೂ ಮುಖ್ಯವಾಗಿ ಸಿಲಿಗುರಿ ಕಾರಿಡಾರ್ ಮುಖೇನ ಈಶಾನ್ಯ ಭಾರತದ ಎಲ್ಲಾ ಚಟುವಟಿಕೆಗಳ ಪ್ರತ್ಯಕ್ಷ ನಿಗಾ ಹಾಗೂ ಪರೋಕ್ಷವಾಗಿ ತಮ್ಮ ಹಿತಾಸಕ್ತಿಗಳಿಂದ ಪ್ರಾದೇಶಿಕ ಪ್ರಾಬಲ್ಯ ಪಡೆದಂತಾಗುತ್ತದೆ. ಹಾಗಾಗಿಯೇ ಇದು ಕೇವಲ ಮೇವು ಬೆಳೆಯುವ ಖಾಲಿ ಗುಡ್ಡದ ನಿಸ್ತೇಜ ಜಾಗವಲ್ಲ. ಮೂರು ದೇಶಗಳ ಮೇಲೆ ಪ್ರಾಬಲ್ಯ ಸಾಧಿಸಬಲ್ಲ ಶಕ್ತಿಯುಳ್ಳ ಆರ್ಥಿಕ, ರಾಜಕೀಯ, ರಾಜತಾಂತ್ರಿಕ ಮತ್ತು ಮಿಲಿಟರಿ ಕಾರಣಗಳಿಂದ ಶಕ್ತಿಸಂಪನ್ನವಾಗಿರುವ ಸುರಕ್ಷಿತ, ಅನುಕೂಲಕರ ತಾಣ. ಈ ಮೂಲಭೂತ ಉದ್ದೇಶದಿಂದ ಇದರ ಮೇಲೆ ಚೀನಾ ಹಾಗೂ ಭಾರತ ಅಪಾರ ಆಸಕ್ತಿ ವಹಿಸಿವೆ. ಮತ್ತಷ್ಟು ಓದು 
ಚೀನಾದೊಂದಿಗೆ ಭಾರತಕ್ಕೆ ಯುದ್ಧ ಬೇಕೆ?
– ಶ್ರೇಯಾಂಕ ಎಸ್ ರಾನಡೆ
ಯುದ್ಧವಾಗಲಿದೆ. ಯುದ್ಧಕ್ಕೆ ಸನ್ನದ್ಧ. ಇನ್ನೇನು ಯುದ್ಧ ಆಗೇ ಬಿಟ್ಟಿತು. ನಾಳೆಯೇ ಯುದ್ಧ ಎಂಬಂತಹ ಪರಿಸ್ಥಿತಿಗಳು ಭಾರತ-ಚೀನಾದ ಮಧ್ಯೆ ಉದ್ಭವವಾಗಿರುವುದು ಇದೇ ಮೊದಲೇನಲ್ಲ. ಜನರ ಗಮನಕ್ಕಾಗಿ ಹಾತೊರೆಯುವ ಎರಡೂ ಕಡೆಯ ಆಕ್ರಮಣಕಾರಿ ಮಾಧ್ಯಮಗಳು, ಅವನ್ನೇ ನೆಚ್ಚಿಕೊಂಡು ವಾಸ್ತವತೆಯ ಕನಿಷ್ಟ ಮಾಹಿತಿಯೂ ಇಲ್ಲದ ದೇಶಭಕ್ತರು ಅದಾಗಲೇ ಯುದ್ಧಕ್ಕೆ ರಣಕಹಳೆಯನ್ನು ಮೊಳಗಿಸಿಯಾಗಿದೆ. ಇನ್ನು ಬಾಕಿಯಿರುವುದು ಕೇವಲ ಸೇನೆಗಳ ಗುಂಡಿನ ದಾಳಿಯಷ್ಟೇ! ಮತ್ತು ಭಾರತದ ಗೆಲುವಷ್ಟೇ. ಹೀಗೆ ಆಗಬೇಕೆನ್ನುವುದು ಎಲ್ಲಾ ಭಾರತೀಯರ ಆಸೆಯೂ ಕೂಡ. ಮತ್ತಷ್ಟು ಓದು 
ಉಪರಾಷ್ಟ್ರಪತಿ ಹುದ್ದೆಯ ಆಯ್ಕೆ ಮತ್ತವರ ಕರ್ತವ್ಯಗಳು…
– ಶ್ರೇಯಾಂಕ ಎಸ್ ರಾನಡೆ
ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ 13ನೇ ಉಪರಾಷ್ಟ್ರಪತಿ ಚುನಾವಣೆ ನಡೆದಿದೆ. ನಿರೀಕ್ಷೆಯಂತೆ ಎನ್.ಡಿ.ಎ ಮೈತ್ರಿಕೂಟದ ಅಭ್ಯರ್ಥಿ ಮಾನ್ಯ ವೆಂಕಯ್ಯನಾಯ್ಡು ನೂತನ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಗೋಪಾಲಕೃಷ್ಣ ಗಾಂಧಿಯವರನ್ನು ಬಹು ಅಂತರದಿಂದ ಸೋಲಿಸಿದ್ದಾರೆ. ಅದಕ್ಕಾಗಿ ಅವರಿಗೂ, ಅವರನ್ನು ಉಪರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಮಾಡಿದ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೂ ಶುಭಾಶಯಗಳು. ಈ ಹೊತ್ತಿನಲ್ಲಿ ರಾಷ್ಟ್ರಪತಿಗಳ ಕೆಲಸ, ಕರ್ತವ್ಯ ಹಾಗೂ ಇನ್ನಿತರ ಸಂಗತಿಗಳ ಕುರಿತು ಬೆಳಕು ಚೆಲ್ಲುವ ಬರಹ. ಮತ್ತಷ್ಟು ಓದು 
ಡೊಕ್ಲಮ್ ಸದ್ದು, ಚೀನಾ ದರ್ದು: ಭಾರತ-ಚೀನ ಪ್ರಚಲಿತ ಕಥನ
– ಶ್ರೇಯಾಂಕ ಎಸ್ ರಾನಡೆ
ಡೊಕ್ಲಮ್ ಒಳಗಿರ್ದುಂ ಬೆವರ್ದನಾ ಡ್ರ್ಯಾಗನ್ ಪತಾಕಂ
ನಾವು ನಮ್ಮ ಸ್ನೇಹಿತರನ್ನು ಆಯ್ಕೆಗೆ ತಕ್ಕಂತೆ ಬದಲಾಯಿಸಬಹುದು ಆದರೆ ಭೌಗೋಳಿಕವಾಗಿ ಬೆಸೆದುಕೊಂಡಿರುವ ನೆರೆಹೊರೆಯ ದೇಶ-ಪ್ರದೇಶಗಳನ್ನಲ್ಲ. “ನಾ ಕೊಡೆ ಎನ್ನುವ ಭಾರತ, ತಾ ಬಿಡೆ ಎನ್ನುವ ಚೀನಾ ಹಠ. ಮಧ್ಯದಲ್ಲಿ ಬಿಕ್ಕಟ್ಟಿಗೆ ಸಿಲುಕಿರುವ ಡೊಕ್ಲಮ್ ಪ್ರದೇಶದ ವಾರಸುದಾರ ಭೂತಾನ್”. 1962ರ ಪರಿಸ್ಥಿತಿ ಈಗಿಲ್ಲ. ಎರಡೂ ಪರಮಾಣುಶಕ್ತಿಯ ಶಕ್ತಿಶಾಲಿ ದೇಶಗಳು. ಅದೇ ಹೊತ್ತಿಗೆ ಇಬ್ಬರೂ ನ್ಯೂಕ್ಲಿಯರ್ ಶಸ್ತ್ರಗಳ “ಮೊದಲ ಬಳಕೆ ಇಲ್ಲ”(ನೋ ಫಸ್ಟ್ ಯೂಸ್) ಎಂಬ ತತ್ವ ಪಾಲಿಸುವ ಜವಾಬ್ದಾರಿ ಹೊತ್ತಿವೆ. ಅಂದಿಗೆ “ಹುಲ್ಲುಕಡ್ಡಿಯೂ ಬೆಳೆಯದ ಬರಡು ಭೂಮಿ”(1962, ಅಂದಿನ ಪ್ರಧಾನ ಮಂತ್ರಿ, ನೆಹರೂ ಜವಾಹರ್ ಲಾಲ್ ಮಾತುಗಳು, ಚೀನಾದ ಅತಿಕ್ರಮಣ ಪ್ರವೇಶಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿನ ಹೇಳಿಕೆ) ಎಂದು ನಿರ್ಲಕ್ಷಿಸಲಾಗಿದ್ದ, ಆದರೆ ಇಂದಿಗೆ ಚೀನಾದ ಸಾರ್ವಭೌಮತೆಯ ಪ್ರತಿಷ್ಟೆ ಹಾಗೂ ಭಾರತದ ಆಂತರಿಕ ಭದ್ರತೆಯ ಅನಿವಾರ್ಯತೆಯ ದೃಷ್ಟಿಯಿಂದ ಅಸ್ಪಷ್ಟ ಗಡಿಯಲ್ಲಿನ ಆಯಕಟ್ಟಿನ ಪ್ರದೇಶಗಳು ಈವರೆಗಿನ ಭಾರತ-ಚೀನಾ ಗಡಿ ವಿವಾದದ ಜ್ವಲಂತತೆಗೆ ಮೂಲ. ಅದೀಗ “ಡೊಕ್ಲಮ್” ಕಾರಣದಿಂದ ಮತ್ತೆ ಮುನ್ನೆಲೆಗೆ ಬಂದಿದೆ. ಬೂದಿಮುಚ್ಚಿದ ಕೆಂಡದಂತಿರುವ ಈ ಸರ್ವಋತು ಸಮಸ್ಯೆ 52 ದಿನಗಳ ಬಿಗಿ ಸಂಘರ್ಷಾತ್ಮಕ ವಾತಾವರಣದಿಂದ ಬದಲಾವಣೆಯ ಮುಂದಿನ ದಾರಿಕಾಣದೆ ವಿಚಲಿತವಾಗಿದೆ. ಮತ್ತಷ್ಟು ಓದು 
2004ರಲ್ಲಿ ಆಗಿದ್ದು, 2019ರಲ್ಲಿ ಆಗದಿದ್ದರೆ… ಭಾರತ ತಲೆ ಎತ್ತಿ ನಿಲ್ಲಬಹುದು..!
– ಕೆ ಎಸ್ ರಾಘವೇಂದ್ರ ನಾವಡ,ಹೊರನಾಡು
2004 ನೇ ಇಸವಿ ಕಣ್ಮುಂದೆ ಬರುತ್ತೆ! ಲೋಕಸಭೆಗೆ ಅವಧಿಪೂರ್ವ ಚುನಾವಣೆ ಘೋಷಿಸಿದ ಭಾಜಪಾ ಸರ್ಕಾರ. “ಪ್ರಕಾಶಿಸುತ್ತಿದೆ ಭಾರತ”ಎಂಬ ಭಾಜಪದವರ ಸ್ಲೋಗನ್…
ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಲಾಲ ಕೃಷ್ಣ ಅಡ್ವಾಣಿ ಹೆಸರು ಘೋಷಣೆ.. ಮತಕೇಳಲು ಬೆನ್ನ ಹಿಂದಿದ್ದ ಸಾಲು ಸಾಲು ಅಭಿವೃದ್ಧಿ ಯೋಜನೆಗಳ ಸಮರ್ಪಕ ಅನುಷ್ಠಾನ.. ಶತ್ರುಗಳೂ ಒಪ್ಪುವ ಅಟಲ್ ಬಿಹಾರೀ ವಾಜಪೇಯಿಯವರ ಸ್ನೇಹ ಬಂಧನ.ಎಲ್ಲಾ ಮೈತ್ರಿ ಪಕ್ಷಗಳೂ ಮತ್ತೊಮ್ಮೆ ಒಟ್ಟಿಗೇ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ತೆಗೆದುಕೊಂಡಿದ್ದು.ಎಲ್ಲವೂ ಸರಿಯೇ..!! ವಾಜಪೇಯಿಯವರು ಮತ್ತೊಮ್ಮೆ ಆರಿಸಿಬರಲು ಸಾಕಷ್ಟು ಅಂಶಗಳು ನೆರವಿಗಿದ್ದವು! ಆದರೆ ಬೇಕಾದುದೇ ಇರಲಿಲ್ಲ! ಸ್ವತಃ ವಾಜಪೇಯಿಯವರೇ ಲೋಕಸಭೆಯ ಅವಧಿ ಪೂರ್ವ ವಿಸರ್ಜನೆಗೆ ವಿರೋಧ ವ್ಯಕ್ತಪಡಿಸಿದ್ದರು.ಆಡಳಿತಾರಂಭದ ದಿನಗಳಲ್ಲಿ ಭಾರತಾದ್ಯಂತ ಇದ್ದ ಕೇಂದ್ರ ಸರ್ಕಾರದ ಪರವಾದ ಅಲೆ ಅಥವಾ “ಆಡಳಿತದ ಪರ ಅಲೆ”ಎಂಬ ಭದ್ರವಾದ ಗೋಡೆಯಲ್ಲಿ ಸಣ್ಣ ಸಣ್ಣ ಬಿರುಕುಗಳು ಕಾಣತೊಡಗಿದ್ದವು. ಜನ ಬದಲಾವಣೆಯನ್ನು ಬಯಸುತ್ತಿದ್ದುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು! “ಯಾಕೋ ಎಲ್ಲಿಯೋ ಏನೋ ಎಡವಟ್ಟಿದೆ” ಎಂಬುದು ಭಾಜಪಾದ “ಚಿಂತಕರ ಚಾವಡಿ”ಗೆ ಗೊತ್ತಾಗದಿದ್ದರೂ ವಾಜಪೇಯಿಯವರ ಸೂಕ್ಷ್ಮ ಮನಸ್ಸಿಗೆ ಹೊಳೆದು ಬಿಟ್ಟಿತ್ತು.
‘ಭಾಗ್ಯ’ವಂತರೇ, “ಒಳ್ಳೆಯ ದಿನಗಳು ಸುಮ್ಮನೆ ಬರುವುದಿಲ್ಲ”
– ಗೋಪಾಲಕೃಷ್ಣ
‘ಭಾಗ್ಯ’ವಂತರೇ, “ಒಳ್ಳೆಯ ದಿನಗಳು ಸುಮ್ಮನೆ ಬರುವುದಿಲ್ಲ”
ಮೂರು ವರ್ಷಗಳಲ್ಲಿ ಮೋದಿಯ ಪುಕ್ಸಟ್ಟೆ ಸಾಧನೆಗಳು “ಹಾಸಿಗೆ ನಿಮ್ಮದು, ನಿದ್ದೆಯೂ ನಿಮ್ಮದು; ಸ್ಮಾರ್ಟ್ ಸಿಟಿ ಕನಸು ನಿಮ್ಮದೇ..”, “ಮಗಳು ನಿಮ್ಮವಳೇ, ಜವಾಬ್ದಾರಿನೂ ನಿಮ್ಮದು; ಭೇಟಿ ಪಡಾವೋ, ಭೇಟಿ ಬಚಾವೋ…” , “ದೇಹ ನಿಮ್ಮದು ಚಾಪೇನೂ ನಿಮ್ಮದು, ಯೋಗ ದಿನವೂ ನಿಮ್ಮದು..” , “ಅಕೌಂಟೂ ನಿಮ್ಮದು, ಧನವೂ ನಿಮ್ಮದು..”, “ಪೊರಕೆ ನಿಮ್ಮದು, ಕಸ ಬೀದಿದು; ಸ್ವಚ್ಛಭಾರತ” ಇದಕ್ಕಿಂತಲೂ ತುಟ್ಟಿ/ಬಿಟ್ಟಿ ಯೋಜನೆಗಳಿವೆಯೇ? ಇತ್ತೀಚಿನ ದಿನಗಳಲ್ಲಿ ಈ ರೀತಿಯ ಪೋಸ್ಟ್ ಗಳು ಫೇಸ್‍ಬುಕ್‍ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ದೇಶದ ಅಭಿವೃದ್ಧಿಯನ್ನು ಗಮನಿಸುತ್ತಿರುವವರು ನರೇಂದ್ರ ಮೋದಿಯವರನ್ನು ಬೆಂಬಲಿಸುತ್ತಿರುವುದು ನಿಜ, ಮೋದಿ ಭಕ್ತರಿಗಂತೂ ಮೋದಿ ಹೇಳಿದ್ದು, ಮಾಡಿದ್ದೆಲ್ಲವೂ ಸರಿಯಿರಬಹುದು! ಆದರೆ ಮೋದಿಯನ್ನು ವಿರೋಧಿಸುವವರು ಹಾಗೂ ವಿರೋಧಿಸಲಿಕ್ಕಾಗಿಯೇ ವಿರೋಧಿಸುವವರು ನರೇಂದ್ರ ಮೋದಿಯವರನ್ನು ಪವಾಡ ಪುರುಷನಂತೆ ನೋಡುತ್ತಿರುವುದೇ ಆಶ್ಚರ್ಯ ಉಂಟು ಮಾಡುತ್ತಿದೆ. ಇದಕ್ಕೆ ಮೇಲಿನ ಪೋಸ್ಟ್ ಒಂದು ಚಿಕ್ಕ ನಿದರ್ಶನ ಅಷ್ಟೇ. ಮತ್ತಷ್ಟು ಓದು 
ಪಂಡಿತ್ ದೀನದಯಾಳ ಉಪಾಧ್ಯಾಯ – ಶತಮಾನೋತ್ಸವ ಸ್ಮರಣೆ
– ವಿಘ್ನೇಶ್, ಯಲ್ಲಾಪುರ
ಅವರು ಹುಟ್ಟಿದ್ದು 1916ರ ಸೆಪ್ಪೆಂಬರ್ 25ರಂದು, ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ತರ್ ಆಗಿ ಕೆಲಸ ಮಾಡುತ್ತಿದ್ದ ಅಜ್ಜನ ಮನೆಯಲ್ಲಿ; ಇನ್ನೂ ಎರಡೂವರೆ ವರ್ಷವಾಗುವಷ್ಟರಲ್ಲೇ ತಂದೆ ಪಂ|| ಭಗವತಿಪ್ರಸಾದರ ದೇಹಾಂತ್ಯವಾಯಿತು; ತಾಯಿ ರಾಮಪ್ಯಾರಿ ಪುಟ್ಟ ಮಗು ಶಿವದಯಾಳನನ್ನು ಮಡಿಲಲ್ಲಿಟ್ಟುಕೊಂಡು, ಇವರನ್ನು ಕೈ ಹಿಡಿದು ಕರೆದುಕೊಂಡು ಹೋಗಿದ್ದು ತನ್ನ ತಮ್ಮನ ಮನೆಗೆ.. ಸೋದರಮಾವನ ಮನೆಯಲ್ಲಿ ನಾಲ್ಕೈದು ವರ್ಷ ಕಳೆಯಿತು ಎನ್ನುವಾಗ ತಾಯಿ ರಾಮಪ್ಯಾರಿ ರಾಮನಿಗೆ ಪ್ರಿಯಳಾದಳು, ವೈಕುಂಠಧಾಮ ಸೇರಿದಳು.. ಮುಂದೆ ಹತ್ತು ವರ್ಷ ಕಳೆಯುವಷ್ಟರಲ್ಲಿ ಇವರಿಗಿಂತ ಎರಡು ವರ್ಷಕ್ಕೆ ಚಿಕ್ಕವನಾದ ತಮ್ಮ ಶಿವದಯಾಳ ಗುಣವಾಗದ ಜ್ವರದಿಂದ ಇಹಲೋಕ ತ್ಯಜಿಸಿದ. ಅಲ್ಲಿಗೆ ತಮ್ಮ ಹದಿನೆಂಟರ ಹರೆಯದಲ್ಲೇ ಮೊದಲನೇ ಸುತ್ತಿನ ರಕ್ತಸಂಬಂಧಿಗಳೆಲ್ಲರನ್ನೂ ಕಳೆದುಕೊಂಡು ‘ವಿರಕ್ತ’ ರಾದರೀತ. ಆದರೆ, ಆ ವಿರಕ್ತಿಯಾದರೂ ವ್ಯಕ್ತಿಗತ ‘ಸಂಸಾರ’ವನ್ನು ಕುರಿತುದಾಗಿತ್ತಷ್ಟೆ; ‘ಸಮಷ್ಟಿಸಂಸಾರ’ದ ಸೇವೆಯಲ್ಲಿ ಅವರನ್ನು ಅನುರಕ್ತರನ್ನಾಗಿಸಿತು. ಕಾಲೇಜು ಶಿಕ್ಷಣದ ಸಮಯದಲ್ಲಿ ಬಾಳಾಸಾಹೇಬ ದೇವರಸರ ಸಂಪರ್ಕಕ್ಕೆ ಬಂದಮೇಲೆ ಅವರ ಜೀವನದ ದಾರಿ-ದಿಕ್ಕುಗಳು ಸ್ಪಷ್ಟವಾದುವು. ಅಲ್ಲಿಂದ ಮುಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರೂ ಆದರು. ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು; ಸಂಘಟನೆಯ ಅಪೇಕ್ಷೆಯಂತೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ರಾಜಕೀಯ ಕ್ಷೇತ್ರ ಪ್ರವೇಶಿಸಿದರು; ಜನಸಂಘದ ಜವಾಬ್ದಾರಿ ಹೊತ್ತರು. ವ್ಯಕ್ತಿಗತ ಜೀವನದಲ್ಲಿ ಪಾರದರ್ಶಕತೆ, ತಾವು ನಂಬಿದ ಸಿದ್ಧಾಂತದ ಅನುಷ್ಠಾನದಲ್ಲಿ-ಬೋಧನೆಯಲ್ಲಲ್ಲ-ಏಕನಿಷ್ಠೆ, ಆಚರಣೆಯ ಮೂಲಕ ಅನುಕರಣೀಯರಾಗುವ ಮೇಲ್ಪಂಕ್ತಿ, ಸಮಾಜದ ಎಲ್ಲ ಸ್ತರದ ಜನರನ್ನೂ ಜೀವನವನ್ನೂ ಕುರಿತು ಕಳಕಳಿ, ಭಾರತೀಯ ಸಂಸ್ಕೃತಿ-ಪರಂಪರೆಯನ್ನು ಕುರಿತ ಆತ್ಯಂತಿಕ ಶ್ರದ್ಧೆ – ಇವೆಲ್ಲವುಗಳಿಂದಾಗಿ ಅವರು ಕೇವಲ ಸಂಘದ, ಜನಸಂಘದ ವಲಯದಲ್ಲಷ್ಟೇ ಅಲ್ಲ; ಇಡೀ ದೇಶದಾದ್ಯಂತ ಪರಿಚಿತರಾದರು. ಪಕ್ಷಭೇದವಿಲ್ಲದೆ ಎಲ್ಲರ ಗೌರವಕ್ಕೆ ಪಾತ್ರರಾದರು. ಮತ್ತಷ್ಟು ಓದು 




