ವಿಷಯದ ವಿವರಗಳಿಗೆ ದಾಟಿರಿ

Posts from the ‘ವಿಜ್ಞಾನ’ Category

4
ಫೆಬ್ರ

ಮಕ್ಕಳೇ, ಕಿಂದರಿಜೋಗಿ ಇಂಟರ್ ನೆಟ್ ನಲ್ಲಿದ್ದಾನೆ

* ಚುಕ್ಕಿಚಂದಿರ

ಇವನು ತುತ್ತೂರಿ ಊದುವ ಕಿಂದರಿಜೋಗಿಯಲ್ಲ. ನಿಮಗೆ ತುತ್ತೂರಿ ಊದಲು, ಚಿತ್ರ ಬಿಡಿಸಲು, ಕತೆಕವನ ಬರೆಯಲು, ಮಕ್ಕಳ ಸೃಜನಾತ್ಮಕತೆ ಬೆಳೆಸಲು ಹೇಳಿಕೊಡುತ್ತಾನೆ. ಒಂದು ಲೆಕ್ಕದಲ್ಲಿ ಇವನು ಮಕ್ಕಳಿಗೆ ಇಂಟರ್ ನೆಟ್ ಮಾಮ. ಮಕ್ಕಳಿಗೆ ಬೇಕಾದ್ದು ಇಂದು ಇಂಟರ್ ನೆಟ್ ನಲ್ಲಿ ಕಡಿಮೆಯಿದೆ. ಅವರ ಸೃಜನಶೀಲತೆ ಬೆಳೆಸಲು ಪೂರಕವಾದ ವೆಬ್ ಸೈಟ್, ಬ್ಲಾಗ್ ಗಳು ಕನ್ನಡದಲ್ಲಿ ಬೆರಳೆಣಿಕೆಯಷ್ಟಿವೆ ಅಷ್ಟೇ. ಚಂದಮಾಮ, ಬಾಲವನ.. ಮತ್ತೊಂದಿಷ್ಟು ಬ್ಲಾಗ್ ಗಳಿವೆ ಅಷ್ಟೇ.

ಹೆಚ್ಚು ಮಕ್ಕಳಿಗೆ ಇಷ್ಟವಾಗುವ ಹೊಸ ಮಕ್ಕಳ ವೆಬ್ ಸೈಟ್ ಇನ್ನೊಂದಿದೆ. ಅದು ಕಿಂದರಿಜೋಗಿ ಅಂತ. “ಕಿಂದರಜೋಗಿ, ಮಕ್ಕಳಿಗಾಗಿ ತೆರೆದಿರುವ ಮುಕ್ತ ತಾಣ. ದಿನನಿತ್ಯದ ಕಲಿಕೆಯಿಂದ ಹಿಡಿದು, ತಾವೇ ತಾವಾಗಿ ಹೊಸತನ್ನೇನಾದರೂ ಮಾಡಬಲ್ಲೆವು ಎಂಬ ಶಕ್ತಿಯನ್ನು ಮಕ್ಕಳಲ್ಲಿ ತುಂಬುವ ಒಂದು ಸಣ್ಣ ಪ್ರಯತ್ನ. ಯಾವುದೇ ತಂಡ ರಚನೆಯಿಲ್ಲದೆ, ಮಕ್ಕಳೊಡನೆ ತನ್ನಲ್ಲಿರುವ ಕಲೆ, ಕಲಿಕೆ, ಜ್ಞಾನ ಇತ್ಯಾದಿಗಳನ್ನು ಹಂಚಿಕೊಳ್ಳುವ ಎಲ್ಲರಿಗೂ ಇದು ವೇದಿಕೆ. ನೀವೂ ನಮ್ಮೊಂದಿಗೆ ಕೈಜೋಡಿಸ್ತೀರಲ್ಲವೇ” ಎಂದು ಕಿಂದರಿಜೋಗಿ ಹೇಳುತ್ತಾನೆ.

ಕಿಂದರಿಜೋಗಿ ಮಕ್ಕಳ ಎಲ್ಲ ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತಾನೆ ಅಂತ ವೆಬ್ ಸೈಟ್ ನೋಡಿದಾಗಲೇ ಅರಿವಾಗುತ್ತದೆ. ಅಲ್ಲಿ ಓದಿ ಕಲಿ, ಕಥೆ, ಕವನ, ಗಣಿತ, ಚಿತ್ರಕಥೆ, ನಾಟಕ, ನೋಡಿ ನಲಿ, ಪ್ರಯೋಗ, ಭೂಮಿ ಮೇಲೆ, ಮಕ್ಕಳ ಸುದ್ದಿ, ಮಾಡಿ ತಿಳಿ, ವಿಜ್ಞಾನ, ವ್ಯಂಗ್ಯಚಿತ್ರಗಳು, ಸಂಗೀತ ಎಲ್ಲವೂ ಇದೆ.

ಒಂದಿಷ್ಟು ಸ್ಯಾಂಪಲ್ ನೋಡಿ
ಇಲ್ಲಿ……………………
ಮತ್ತಷ್ಟು ಓದು »

2
ಫೆಬ್ರ

ಇದೋ ನಿಮಗೆ ಆಹ್ವಾನ…

ಮತ್ತಷ್ಟು ಓದು »

14
ಜನ

ಬೆಂಕಿಯಲ್ಲಿ ಅರಳುವ ಹೂವುಗಳು…

ಇರ್ಷಾದ್ ವೇಣೂರು

ಫಿಟ್ಟಿಂಗ್ ನಲ್ಲಿದೆ ಬದುಕು…

ಎಲ್ಲಿಗೋ ಹೊರಟಿದ್ದಾಗ ವಾಹನ ಇದ್ದಕ್ಕಿದ್ದಂತೆ ಕೈಕೊಡುತ್ತದೆ. ಅದುವರೆಗೂ ಲೀಟರಿಗೆ ಸರಿಯಾಗಿ 55-60 ಮೈಲೇಜ್ ಕೊಡುತ್ತಿದ್ದ ಬೈಕ್ ಅಂದು ಮಾತ್ರ 35 ಮೈಲೇಜ್ ಕೊಟ್ಟು ಅರ್ಧ ದಾರಿಯಲ್ಲಿ ಇಂಗು ತಿಂದ ಮಂಗನ ಸ್ಥಿತಿ ತರಿಸುತ್ತದೆ. ನಿನ್ನೆಯಷ್ಟೇ ಗಾಳಿ ಎಷ್ಟಿದೆ ಎಂದು ಚೆಕ್ ಮಾಡಿ ಮನೆಗೆ ಬಂದು ಶೆಡ್ ನಲ್ಲಿ ನಿಲ್ಲಿಸಿದ್ದ ಕಾರು ಬೆಳಿಗ್ಗೆ ಆಫೀಸಿಗೆ ಹೋಗಬೇಕು ಎಂದು ನೋಡಿದರೆ ಟಯರ್ ಠುಸ್ಸಾಗಿರುತ್ತದೆ. ಯಾವತ್ತೂ ಒಂದೇ ನಿಮಿಷದಲ್ಲಿ ಸ್ಟಾರ್ಟ್ ಆಗುತ್ತಿದ್ದ ಸ್ಕೂಟರ್ ಇಂದು ಜಪ್ಪಯ್ಯಾ ಎಂದರೂ ಸ್ಟಾರ್ಟ್ ಆಗುತ್ತಿಲ್ಲ. ಇಂತಹ ಸಮಸ್ಯೆಗಳು ಎದುರಾದಾಗ ನೆನಪಾಗುವುದೇ ನಮ್ಮೂರಿನ ಫಿಟ್ಟರ್.
ಅದುವರೆಗೂ ಇದ್ದದ್ದೆಲ್ಲಾ ಮಾಡಿ, ದಾರಿ ಹೋಕರಿಗೆ ದಮ್ಮಯ್ಯಾ ಹಾಕಿ ದೂಡಲು ಸಹಾಯ ಮಾಡುವಂತೆ ವಿನಂತಿಸಿ ಏನೆಲ್ಲಾ ಸರ್ಕಸ್ ಮಾಡಿದ್ದರೂ ಸ್ಟಾರ್ಟ್ ಆಗದ ಕಾರು ಫಿಟ್ಟರ್ ಕೈ ಸೋಂಕಿದ ಕೂಡಲೇ ಗುಯ್ ಗುಯ್ ಎನ್ನುತ್ತದೆ. ಒಂದರ್ಥದಲ್ಲಿ ಇವರೆಲ್ಲಾ ಪಲ್ಸ್ ಹಿಡಿದು ಪರೀಕ್ಷಿಸುವ ಡಾಕ್ಟರ್ ತರಹದವರು. ಮುಟ್ಟಿದ ಕೂಡಲೇ ನಾಚಿಕೆ ಮುಳ್ಳು ಮುನಿಯುವಂತೆ ಇವರ ಕೈ ತಾಗಿದ ಕೂಡಲೆ ಸಮಸ್ಯೆ ಸರಿಯಾಗುತ್ತದೆ. ಅಷ್ಟು ಚೆನ್ನಾಗಿ ಯಂತ್ರದ ಭಾಷೆಯನ್ನು ಅರ್ಥೈಸಿಕೊಂಡಿರುವ ಫಿಟ್ಟರ್ ಗಳಿದ್ದಾರೆ. ಮತ್ತಷ್ಟು ಓದು »
28
ಡಿಸೆ

USB ಡ್ರೈವ್ ನಲ್ಲಿ ಲಿನಕ್ಸ್

 ಓಂಶಿವಪ್ರಕಾಶ್ ಎಚ್. ಎಲ್

ಹೊಸದಾಗಿ ಲಿನಕ್ಸ್ ಬಳಸಬೇಕು ಅಂತಿರೋರು, ಹೊಸ ಹೊಸ ಗ್ನು/ಲಿನಕ್ಸ್ ಆವೃತ್ತಿಗಳನ್ನು ಟೆಸ್ಟ ಮಾಡಿನೋಡ್ಬೇಕು ಅಂತಿರೋ ನನ್ನಂತಹವರು ಪ್ರತಿ ಭಾರಿಯೂ ಲಿನಕ್ಸ್ ಅನ್ನು ನಮ್ಮ ಲ್ಯಾಪ್ಟಾಪ್ ಗಳಲ್ಲಿ ಅಥವಾ ಡೆಸ್ಕಾಪ್ ಗಳಲ್ಲಿ ಪುನ: ಪುನ: ಇನ್ಸ್ಟಾಲ್ ಮಾಡ್ಕೊಳ್ಳಿಕ್ಕೆ ಇಷ್ಟ ಪಡಲ್ಲ. ಹಾಗಿದ್ರೆ ಅದನ್ನ ಬಳಸೋದಾದ್ರೂ ಹ್ಯಾಗೆ?

ವರ್ಚುಅಲ್ ಬಾಕ್ಸ್ – ತಂತ್ರಜ್ಞಾನ ಕುರಿತಾದ ಲೇಖನಗಳನ್ನು ನೀವು ಓದ್ತಿದ್ರೆ ಇಷ್ಟೋತ್ತಿಗಾಗಲೇ ಇದರ ಹೆಸರು ನಿಮ್ಮ ಬಾಯಿಂದ ಹೊರಡಿರಬೇಕು. ಹೊಸಬರಿಗೆ ಅದೂ ಸ್ವಲ್ಪ ಕಿರಿ ಕಿರಿ ಅನ್ನಿಸ್ಬಹುದು. ಹಾಗಿದ್ರೆ ಅಂತವರಿಗೆಲ್ಲ ಗು/ಲಿನಕ್ಸ್ ನ ಔತಣವನ್ನ ಹೇಗೆ ಬಡಿಸೋದು ಅನ್ನೊದು ಮುಂದಿನ ಪ್ರಶ್ನೆ.

ಇದಕ್ಕೆ ಒಂದು ಉತ್ತರ ಹೇಳ್ತೀರಾ?

-> ಲೈವ್ ಸಿ.ಡಿ ಉಪಯೋಗಿಸ್ಬಹುದಲ್ವಾ?

ಟೆಕ್ ತಂಡ ಹೊರತಂದ ಡೆಬಿಯನ್ ಚಿಗುರು ಕೂಡಾ ಲೈವ್ ಸಿ.ಡಿ ಯೇ. ನಿಮ್ಮ ಕಂಪ್ಯೂಟರ್ ಅನ್ನು ಸಿ.ಡಿ ಯಲ್ಲಿ ಬೂಟ್ ಮಾಡಿದರಾಯಿತು. ಮತ್ತಷ್ಟು ಓದು »

15
ಡಿಸೆ

೧೨ ವರ್ಷದ ಪೋರ ಅಲೆಕ್ಸ್ ಮಿಲ್ಲರ್ ನ ಕಥೆ

ಓಂಶಿವಪ್ರಕಾಶ್ ಎಚ್. ಎಲ್.

ಸ್ಕೂಲ್ ಮೆಟ್ಟಿಲೇರುತ್ತ, ಸಣ್ಣ ಪುಟ್ಟ ಲೆಕ್ಕ ಪಾಠಗಳನ್ನು ಕಲಿಯುತ್ತ, ೧೨ನೇ ವರ್ಷದ ಆಸುಪಾಸಿಗೆ ವಿಜ್ಞಾನ ಇತ್ಯಾದಿ ವಿಷಯಗಳ ಬಗ್ಗೆ ಕುತೂಹಲ ಬೆಳೆಸಿಕೊಳ್ಳುತ್ತ ಬೆಳೆದ ನನ್ನ, ನಿಮ್ಮಂತಹವರ ಕಥೆ ಹಳೆಯದಾಯಿತು ಬಿಡಿ. ವಿಶ್ವವ್ಯಾಪಿ ತನ್ನ ಚಾಚನ್ನು ಹರಿಸಿರುವ ಕಂಪ್ಯೂಟರು,  ಕೀಲಿಮಣೆಯ ಮೇಲೆಯೇ ಸಂಪರ್ಕವನ್ನು ನೀಡುವ ಇಂಟರ್ನೆಟ್ ಇರುವ ಈ ಶತಮಾನದಲ್ಲಿ, ಅಪ್ಪ ಅಮ್ಮಂದಿರನ್ನೂ ಮೀರಿಸಿ ತಂತ್ರಜ್ಞಾನವನ್ನು ತಮ್ಮದಾಗಿಸಿಕೊಳ್ಳುತ್ತಿರುವ ಅನೇಕರು ಇಂದು ನಮ್ಮ ಸುತ್ತಮುತ್ತಲಿದ್ದಾರೆ. ವಿಸ್ಮಯಗಳ ಲೋಕದಲ್ಲಿ ಇದೂ ಒಂದು. ಆಗಾಗ್ಗೆ ಹೀಗೆ ನಮ್ಮ ಮಧ್ಯೆ ಕಂಡು ಬರುವ ಇಂತಹವರು ನಮ್ಮ ಹುಡುಗರಿಗೂ ಒಂದಿಷ್ಟು ಸ್ಪೂರ್ತಿಯಾಗಲಿ, ಜೊತೆಗೆ ವೇಳೆ, ತಂತ್ರಜ್ಞಾನ, ಸೌಲಭ್ಯಗಳ ಕೊರತೆ ಇವುಗಳ ಮಧ್ಯೆ ಇದು ನಮ್ಮವರಿಗೆ ಹೊರೆಯೂ ಆಗದಿರಲಿ.

ಈ ಕಥೆ ೧೨ ವರ್ಷದ ಪೋರ ಅಲೆಕ್ಸ್ ಗ್ಲೆನ್ ನದ್ದು. ಪೋರನಾಗಿದ್ದರೂ ಈತ ಸಾಮಾನ್ಯನಲ್ಲ. ಇಂಟರ್ನೆಟ್ ಬ್ರೌಸ್ ಮಾಡಲು ಬಳಸುವ ಮೋಜಿಲ್ಲಾ ಫೈರ್ ಫಾಕ್ಸ್ ನ ಸುರಕ್ಷತೆಯ ಕೊರತೆಗಳನ್ನು ಹೆಕ್ಕಿ ತೆಗೆಯುವುದು ಈತನ ಹವ್ಯಾಸ.  ಎರಡು ವಾರಗಳ ಇವನದೊಂದು ಹುಡುಕು ೩೦೦೦$ ಗಳನ್ನು ನಿರಾಯಾಸವಾಗಿ ಮೋಜಿಲ್ಲಾ ಫೌಂಡೇಶನ್ ನಿಂದ ಸಂಪಾದಿಸುವಂತೆ ಮಾಡಿದೆ.

ಸುರಕ್ಷತೆಗೆ ಪ್ರಾಶಸ್ತ್ಯ ನೀಡುವ ಸಾಪ್ಟ್ವೇರ್ ಕಂಪೆನಿಗಳು, ತಮ್ಮ ತಂತ್ರಾಂಶದ ಸುರಕ್ಷತೆಯ ಕೊರತೆಯ ಬಗ್ಗೆ ಸುಳಿವನ್ನು ನೀಡುವವರಿಗೆ ಡಾಲರುಗಳ ಮೊತ್ತದಲ್ಲಿ ಇನಾಮು ನೀಡುತ್ತವೆ. ಇದೇ ಯುನಿವರ್ಸಿಟಿ ಪ್ರೆಪ್ ಅಕ್ಯಾಡೆಮಿಯಲ್ಲಿ ೭ನೇ ಇಯತ್ತೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅಲೆಕ್ಸ್ ಗೆ ಪ್ರೇರೇಪಣೆ. ತನ್ನ ಕಂಪ್ಯೂಟರಿನ ಬ್ರೌಸರ್ ನಲ್ಲೇ ಇರಬಹುದೇ ಕೊರತೆ ಎಂದು ಇವನು ಪ್ರತಿದಿನ ೯೦ ನಿಮಿಷಗಳಷ್ಟು ಹೊತ್ತು ನೆಡೆಸಿದ ಸಂಶೋಧನೆ ಕೊನೆಗೂ ಫಲ ನೀಡಿದೆ. ಕಂಪ್ಯೂಟರಿನ ಸೃತಿಯಲ್ಲಿನ ಒಂದು ದೋಷವನ್ನು ಕಂಡುಹಿಡಿದ ಈತನ ಸಾಧನೆ ಸಾಮಾನ್ಯವಾದುದ್ದಲ್ಲ ಮತ್ತು ಇಂತಹ ನ್ಯೂನ್ಯತೆಯನ್ನು ಕಂಡು ಹಿಡಿಯುವುದು ನಿಷ್ಣಾತರಿಗೇ ಸೈ ಎಂದು ಮೋಜಿಲ್ಲಾದ ಸೆಕ್ಯೂರಿಟಿ ಕಾರ್ಯಕ್ರಮದ ನಿರ್ವಾಹಕ ಹೇಳುತ್ತಾರೆ. ಮತ್ತಷ್ಟು ಓದು »

25
ಆಕ್ಟೋ

ಉಪ್ಪಿಗಿಂತ ರುಚಿಯಿಲ್ಲ, ಅತಿಯಾದರೆ ಅಪಾಯ ತಪ್ಪಿದ್ದಲ್ಲ

ಡಾ.ಪ್ರಶಾಂತ ನಾಯ್ಕ ಬೈಂದೂರು
ಜೀವವಿಜ್ಞಾನ ವಿಭಾಗ
ಮಂಗಳೂರು ವಿಶ್ವವಿದ್ಯಾನಿಲಯ

‘ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ’ ಎನ್ನುವ ಗಾದೆ ಮಾತು ಸರ್ವತಾ ಸತ್ಯ. ಸಕ್ಕರೆ ಇಲ್ಲದ ಚಹಾ, ಕಹಿಕಹಿ ಎನಿಸಿದರೂ ಕುಡಿಯಬಹುದು. ಆದರೆ ಉಪ್ಪಿಲ್ಲದೆ ಮಾಡಿದ ಅಡುಗೆಯನ್ನು ಊಟ ಮಾಡುವುದು ಬಹಳ ಕಷ್ಟ. ಉಪ್ಪು ಕೇವಲ ರುಚಿಗೆ ಸೀಮಿತವಲ್ಲ. ನಮ್ಮ ದೇಹದಲ್ಲಿ ನಡೆಯುವ ಅನೇಕ ಶಾರೀರಿಕ ಕ್ರಿಯೆಗಳಿಗೆ ಬೇಕಾಗಿರುವ ಸೋಡಿಯಂ ಮತ್ತು ಕ್ಲೋರೈಡ್ ಎನ್ನುವ ಎರಡು ವಿದ್ಯುದ್ವಾಹಕ ಲವಣಗಳನ್ನು ಪೂರೈಸಲು ಉಪ್ಪು ಅಗತ್ಯ. ಶರೀರದಲ್ಲಿ ದ್ರವಗಳ ಸಮತೋಲನೆಯನ್ನು ಕಾಪಾಡಲು, ಆಮ್ಲ-ಪ್ರತ್ಯಾಮ್ಲತೆಯನ್ನು ಸಮಸ್ಥಿತಿಯಲ್ಲಿಡಲು, ನರವ್ಯೂಹದ ಕಾರ್ಯನಿರ್ವಹಣೆಯಲ್ಲಿ, ಸ್ನಾಯುಗಳ ಚಲನಾಕ್ರಿಯೆಗೆ, ರಕ್ತದೊತ್ತಡವನ್ನು ನಿಯಂತ್ರಿಸಲು, ಉಪ್ಪಿನಲ್ಲಿರುವ ಸೋಡಿಯಂ ಮತ್ತು ಕ್ಲೋರೈಡ್ ಲವಣಗಳು ವಹಿಸುವ ಪಾತ್ರ ಮುಖ್ಯವಾದದ್ದು. ಈ ಎಲ್ಲ ಶಾರೀರಿಕ ಕ್ರಿಯೆಗಳಿಗೆ ಅತ್ಯವಶ್ಯವಿರುವ ಈ ಎರಡು ಲವಣಗಳು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವುದಿಲ್ಲ. ಸ್ವಲ್ಪ ಪ್ರಮಾಣದಲ್ಲಿ ಈ ಎರಡು ಲವಣಗಳು ಇತರ ಆಹಾರ ಮೂಲಗಳಿಂದ (ಹಣ್ಣು, ತರಕಾರಿ, ಧಾನ್ಯ, ಹಾಲು, ಮೀನು, ಮಾಂಸ ಇತ್ಯಾದಿ) ಸಿಗುತ್ತದೆಯಾದರೂ,
ದೇಹಕ್ಕೆ ಸಮರ್ಪಕ ಪ್ರಮಾಣದಲ್ಲಿ ಅವುಗಳನ್ನು ಪಡೆಯಲು ಉಪ್ಪನ್ನು ಉಪಯೋಗಿಸಲೇಬೇಕು. ನಾವು ಉಪಯೋಗಿಸುವ ಉಪ್ಪುಗಳಲ್ಲಿ ಮೂರು ವಿಧ. ಐಯೋಡಿನ್‌ಯುಕ್ತ ಉಪ್ಪು (ಇದರಲ್ಲಿ ಸೋಡಿಯಂ-ಕ್ಲೋರೈಡ್ ಜೊತೆಗೆ ಥೈರಾಡ್ ಹಾರ್ಮೋನ್‌ಗಳ ಉತ್ಪತ್ತಿಗೆ ಅವಶ್ಯವಿರುವ ಅಯೋಡಿನ್ ಇರುತ್ತದೆ), ಸಂಸ್ಕರಿಸಿದ/ಶುದ್ಧ ಉಪ್ಪು (ಸೋಡಿಯಂ ಮತ್ತು ಕ್ಲೋರೈಡ್ ಲವಣಗಳನ್ನು ಮಾತ್ರ ಹೊಂದಿರುತ್ತದೆ) ಮತ್ತು ಸಮುದ್ರ ಉಪ್ಪು (ಕಲ್ಲುಪ್ಪು). ಮತ್ತಷ್ಟು ಓದು »

24
ಆಕ್ಟೋ

ವಿಜ್ಞಾನಿ ಅಜಯ್ ಶರ್ಮ ಅವರಿಂದ ವಿನೂತನ ಆವಿಷ್ಕಾರ

ಕರುಣಾಕರ ಬಳ್ಕೂರು

ದ್ರವ್ಯ ರಾಶಿ ಶಕ್ತಿ ಸಮಾನತೆಯ  E=mc2ಇದನ್ನು ನೀವು ಬಾಲ್ಯದಿಂದ ವಿಜ್ಞಾನ ಓದಿದ್ದರೆ ನೋಡಿದ ತಕ್ಷಣ ನೆನಪಿಗೆ ಬಂದೇ ಬರುತ್ತೆ. ಈ ಸೂತ್ರದ ಹರಿಕಾರ ಶ್ರೇಷ್ಠ ವಿಜ್ಞಾನಿ ಐನ್‌ಸ್ಟೀನ್. ಈತ ವಿಜ್ಞಾನ ಕ್ಷೇತ್ರಕ್ಕೆ ತನ್ನದೇ ಆದ ಬಹಳಷ್ಟು ಕೊಡುಗೆಗಳನ್ನು ನೀಡಿದ್ದಾನೆ. ಭೌತಶಾಸ್ತ್ರ ಕ್ಷೇತ್ರದಲ್ಲಿ ಆಗಿರುವ ವಿಸ್ಮಯಗಳು ಐನ್‌ಸ್ಟೀನ್‌ನ ಆವಿಷ್ಕಾರಗಳನ್ನು ವಿಜ್ಞಾನ ಕ್ಷೇತ್ರ ಒಪ್ಪಿಕೊಂಡಿದೆ. ಆದರೆ ಹಲವು ದಿನಗಳಿಂದ ‘ದ್ರವ್ಯ ರಾಶಿ ಶಕ್ತಿ ಸಮಾನತೆಯ  E=mc2ಸೂತ್ರದ’ ಬಗ್ಗೆ ಇತರ ವಿಜ್ಞಾನಿಗಳು ತಕರಾರು ಎvರುವ ಪ್ರಶ್ನೆಗಳು ಗೊತ್ತಿರಬಹುದು. ಹಲವು ವರ್ಷಗಳಿಂದ ವಿಜ್ಞಾನಿಗಳಿಗೆ ಈ ಸೂತ್ರವು ಅಷ್ಟೊಂದು ಸಮರ್ಪಕವಾಗಿಲ್ಲ ಎಂದು ಕೆಲವೊಂದು ವಿಜ್ಞಾನಿಗಳ ತಂಡ ಬಹಿರಂಗಪಡಿಸಿದೆ. ಭೌತಶಾಸ್ತ್ರದಲ್ಲಿ ಈ ಸೂತ್ರ ಅಷ್ಟೊಂದು ಸಮರ್ಪಕವಾಗಿಲ್ಲ ಎನ್ನುವ ಬಗ್ಗೆ ಹಲವಾರು ವಿಜ್ಞಾನಿಗಳಿಂದ ಆಕ್ಷೇಪಗಳು ಹಿಂದಿನಿಂದಲು ಕೇಳಿಬರುತ್ತಿತು. ಮತ್ತೆ ಇದು ಹುರುಳಿಲ್ಲದ ಸೂತ್ರ ಎನ್ನುವ ಬಗ್ಗೆಯೂ ವಿಮರ್ಶಕರು ಕರೆದ್ದುಂಟು. ಆದರೆ ಇದೀಗ ಎಲ್ಲರ ಊಹಾಪೋಹಗಳಿಗೆ ತೆರೆಬಿದ್ದಿದೆ. ಈ ಸೂತ್ರದ ಬಗ್ಗೆ ಆಳವಾಗಿ ಅದ್ಯಾಯನ ಮಾಡಿ, ಸೂತ್ರಕ್ಕೆ ಮೋಕ್ಷವನ್ನು ಕೊಡುವಲಿ ಕಾರಣಿಕರ್ತರಾದವರು ಪ್ರಖ್ಯಾತ ವಿಜ್ಞಾನಿ ಅಜಯ್ ಶರ್ಮ. ವಿನೂತನ ಆವಿಷ್ಕಾರದ ಮೂಲಕ ಯಶಸ್ವಿಯಾಗಿದ್ದಾರೆ.
ಬನ್ನಿ ಅಜಯ್ ಶರ್ಮ ಅವರ ಹೊಸ ಸೂತ್ರದ ವಿವರಣೆಯನ್ನು ತಿಳಿದುಬರೋಣ. ಐನ್‌ಸ್ಟೀನಿನ ದ್ರವ್ಯ ರಾಶಿ ಶಕ್ತಿ ಸಮಾನತೆಯ E=mc2 ಸೂತ್ರಕ್ಕೆ ಹೊಸ ರೂಪವಾಗಿ DE= DAmc2 ಅನ್ನು ಸಿದ್ಧಪಡಿಸಿ ಮಂಡಿಸಿದ್ದಾರೆ.  ಆ ಮುಖೇನ ಹೊಸ ಕ್ರಾಂತಿಯನ್ನೆ ಮಾಡಿದ್ದಾರೆ. ಅಜಯ್ ಶರ್ಮರವರು ಆಕ್ಸ್‌ಫರ್ಡ್ ಮತ್ತು ಹಾವರ್ಡ್ ವಿಶ್ವವಿದ್ಯಾನಿಲಯಗಳಿಂದ ಗುರುತಿಸಲ್ಪಟ್ಟು ಅಂತರಾಷ್ಟ್ರೀಯ ಪ್ರಖ್ಯಾತಿ ಪಡೆದ ವಿಜ್ಞಾನಿ. ಮೂಲತಃ ಹಿಮಾಚಲ ಪ್ರದೇಶದವರು.
ಅಜಯ್ ಶರ್ಮರವರು ಸುಮಾರು ೨೮ ವರ್ಷಗಳ ಕಾಲ ಈ ಸಮೀಕರಣದ ಮೇಲೆ ಪ್ರಯೋಗಾತ್ಮಕವಾಗಿ ಅಧ್ಯಾಯನ ಮಾಡಿದರು. ಸತತ ಪ್ರಯೋಗದ ಮೂಲಕ ಕೊನೆಗೂ ಯಶಸ್ಸನ್ನು ಈ ಸಮೀಕರಣದಲ್ಲಿ ಕಂಡುಕೊಂಡಿದ್ದಾರೆ. ಈ ವಿಷಯದ ಕುರಿತಂತೆ ಇಂಗ್ಲೇಂಡ್, ಯು.ಎಸ್.ಎ, ಕೆನಡಾ, ಮಾಸ್ಕೋ, ಪೊಲಾಂಡ್, ಮುಂತಾದ ಹಲವಾರು ದೇಶಗಳಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಈ ಸೂತ್ರದ ಬಗ್ಗೆ ಮಂಡಿಸಿ ಸಮರ್ಥಿಸಿದ್ದಾರೆ. ಈ ವಿಷಯಕ್ಕೆ ಸಂಬದಿಸಿದಂತೆ ಸುಮಾರು ೧೮ ಲೇಖನಗಳನ್ನು ವಿವಿಧ ರಾಷ್ಟ್ರಮಟ್ಟದ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ೨೦೦೯-೧೦ರಲ್ಲಿ ಯು.ಎಸ್.ಎ ಮತ್ತು ಜರ್ಮನಿಯಲ್ಲಿ ಎರಡು ಪುಸ್ತಕಗಳನ್ನು ಪ್ರಕಟಗೊಳಿಸಿದ್ದಾರೆ. ಮತ್ತಷ್ಟು ಓದು »