ನಮ್ಮೂರ ಹಬ್ಬ ( ಮೈಸೂರು )
– ವಿಜಯ ನಂಜುಂಡಯ್ಯ
ಭಾರತೀಯರಿಗೆ ಹಬ್ಬ, ಹರಿದಿನಗಳು ಹೊಸದೇನೂ ಅಲ್ಲ. ಹಬ್ಬಗಳು ಹೆಸರೇ ಸೂಚಿಸುವಂತೆ, ಸಂತೋಷ, ಸಡಗರದ ಸಂಕೇತ ವಾಗಿದೆ. ಈ ಹಬ್ಬ, ಸಂತೋಷವನ್ನುಂಟು ಮಾಡುತ್ತದೆ ಎಂದರೆ ನೀವೇ ನೋಡಿ.
ಕೆಲವು ವಸ್ತುಗಳೂ, ವಿಷಯಗಳೂ ಮನಸ್ಸಿಗೆ ಹತ್ತಿರವಾಗಿ ಖುಷಿ ತಂದರೆ,,ಸೌಂದರ್ಯ, ಶೃಂಗಾರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.ಹಾಗೇ ಇಂಪಾದ, ತಂಪಾದ ಪ್ರೀತಿಯ ಮಾತುಗಳು, ಮಧುರವಾದ ಸ್ವರ, ಸಂಗೀತಗಳು ಕಿವಿಗೆ ಹಬ್ಬವನ್ನುಂಟು ಮಾಡುವುದರಲ್ಲಿ ಆಶ್ಚರ್ಯವಿಲ್ಲ. ರುಚಿ, ರುಚಿಯಾದ ತಿಂಡಿ ತೀರ್ಥಗಳು ಬಾಯಿಗೆ ಹಬ್ಬವನ್ನುಂಟು ಮಾಡುತ್ತದೆ.. ಮತ್ತಷ್ಟು ಓದು 
ನಮ್ಮೂರ ಹಬ್ಬ.. ( ಶ್ರೀ ರಂಗನಾಥ ಸ್ವಾಮಿಯ ರಥೋತ್ಸವ )
ಯೋಗಾನಂದಾರಾಧ್ಯ
ನೇರಲವಾಡಿ, ಮಾಗಡಿ ತಾಲ್ಲೂಕು
ರಾಮನಗರ ಜಿಲ್ಲೆ
ಹಬ್ಬಗಳೆಂದರೆ ಸಾಮಾನ್ಯವಾಗಿ ಸಡಗರ ಸಂಭ್ರಮದಿಂದ ಕೂಡಿದ್ದು, ಬಂಧು ಬಾಂಧವರು, ಗೆಳೆಯರು, ಆಯಾ ಸಮುದಾಯದವರು ಒಟ್ಟಿಗೇ ಸೇರಿ ಆಚರಿಸುವ ಮನಶ್ಶಾಂತಿಯ ಮಹತ್ಕಾರ್ಯ..
ಇಂದು ಪ್ರಪಂಚದ ನಾನಾ ಭಾಗಗಳಲ್ಲಿ ಅವರದೇ ಆದ ಸಂಸ್ಕೃತಿಯ ವೈಶಿಷ್ಟ್ಯಗಳಿಂದ ಕೂಡಿದ ಹಲವಾರು ಹಬ್ಬಗಳನ್ನು ಆಚರಿಸುವುದನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಾವು ಕಂಡಿದ್ದೇವೆ.. ಕೆಲವು ಹಬ್ಬಗಳನ್ನು ಜಾಗತಿಕ ಮಟ್ಟದಲ್ಲಿ ಆಚರಿಸಿದರೆ, ಮತ್ತೆ ಕೆಲವು ರಾಷ್ಟ್ರೀಯ ಮಟ್ಟದಲ್ಲಿ, ಇನ್ನೂ ಕೆಲವು ರಾಜ್ಯಮಟ್ಟದಲ್ಲಿ ಹಾಗೆಯೇ ಸಂಪ್ರದಾಯ, ಸಂಸ್ಕೃತಿಗಳ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲೂ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುವುದು ಸರ್ವೇ ಸಾಮಾನ್ಯ… ಮತ್ತಷ್ಟು ಓದು 
ಸಿಡಿಲು ಸನ್ಯಾಸಿಯ ಐದು ನಿಮಿಷದ ಮಾತುಗಳು ಇಡೀ ಜಗತ್ತಿಗೆ ಸನಾತನ ಧರ್ಮದ ಶ್ರೇಷ್ಠತೆಯನ್ನು ಬಿತ್ತರಿಸಿದ್ದವು.
ಶಿವಾನಂದ ಶಿವಲಿಂಗ ಸೈದಾಪೂರ
(ಎಂ.ಎ.ವಿದ್ಯಾರ್ಥಿ.)
ರಾಣಿಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ.
ಸ್ವಾಮಿ ವಿವೇಕಾನಂದರ 115ನೇ ಪುಣ್ಯಸ್ಮರಣೆಯ ವಿಶೇಷ ಲೇಖನ.
ಅದೊಂದು ತಮ್ಮ ಧರ್ಮ ಪ್ರಾಬಲ್ಯವನ್ನು ಜಗತ್ತಿನ ಇತರ ದೇಶದ ಮೇಲೆ ಹರಡಲು ನಡೆಸಿದ ಸಮಾರಂಭ. ಅದಕ್ಕೂ ಒಂದು ಇತಿಹಾಸ, ನೂರ ಐವತ್ತು ವರ್ಷಗಳ ಹಿಂದೆ ಕೊಲಂಬಸ್ ಶೋಧಿಸಿದ್ದು, ಅದರ ಸ್ಮರಣೆಯ ಹೆಸರಲ್ಲಿ ಕ್ರೈಸ್ತ ಧರ್ಮವನ್ನು ಜಗತ್ತಾದ್ಯಂತ ಬಿತ್ತಲು ಆಯೋಜನಗೊಂಡಿದ್ದೇ ವಿಶ್ವ ಸರ್ವಧರ್ಮ ಸಮ್ಮೇಳನ.. ಅದಕ್ಕೆ ಕಾರಣ ಒಂದು ಉದ್ದೇಶ ಹಲವು. ಅಷ್ಟೊತ್ತಿಗೆ ಕ್ರೈಸ್ತ ಧರ್ಮ ಜಗತ್ತಿನ ಹಲವಾರು ದೇಶಗಳನ್ನು ಆಕ್ರಮಿಸಿಕೊಂಡಿತ್ತು. ಅಂತಹ ಆಕ್ರಮಣಕ್ಕೆ ಒಳಗೊಂಡ ದೇಶಗಳಲ್ಲಿ ಭಾರತವು ಒಂದು. ಮತ ಸುಧಾರಣೆಗಾಗಿ ಬುದ್ಧ, ಬಸವ, ಮಹಾವೀರ, ಶಂಕರ, ಮದ್ವಾಚಾರ್ಯರು…. ಹೀಗೆ ಎಲ್ಲರು ಬಂದು ಹೋದರು. ಯಶಸ್ವಿಯು ಇಲ್ಲ, ವಿಫಲವು ಇಲ್ಲ. ಎಲ್ಲವೂ ಮಧ್ಯಂತರದಲ್ಲಿಯೇ ಸಾಗಿತ್ತೇ ಹೊರತು ಅವರ್ಯಾರು ಸಹ ದೇಶದ ಹೋರ ಹೋಗಿ ಸನಾತನ ಧರ್ಮವನ್ನು ಪ್ರಚಾರ ಮಾಡಲಿಲ್ಲ. ಸನಾತನ ಧರ್ಮದ ಮೇಲೆ ದಾಳಿ ಆದಾಗಲೆಲ್ಲ ತಕ್ಕ ಉತ್ತರಕ್ಕೆ ಸಿದ್ಧವಾಗಿಯೇ ಇತ್ತು ಭಾರತ. ತುರ್ಕರ ದಾಳಿಗೆ ವಿಜಯನಗರ, ಮರಾಠರಂತಹ ಮನೆಗಳು ಹುಟ್ಟುತ್ತಲೇ ಬಂದವು. ಮತ್ತಷ್ಟು ಓದು 
ನಾವೇಕೆ ಪಾಶ್ಚಾತ್ಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು? ( ಭಾಗ – ೪ )
ಎಸ್.ಎನ್. ಬಾಲಗಂಗಾಧರ
(ತಿದ್ದುಪಡಿ ಮಾಡಿದ ಅನುವಾದ.
ಮೂಲ ಅನು: ಸಿ.ಎಸ್.ಎಲ್.ಸಿ ಸಂಶೋಧಕರು, ‘ಪೂರ್ವಾವಲೋಖನ’ ಕೃತಿಯಲ್ಲಿ ಪ್ರಕಟವಾಗಿದೆ.)
ಸಾಮಾನ್ಯವಾಗಿ ಪಶ್ಚಿಮದಲ್ಲಿ ನಮ್ಮ ಸಂಸ್ಕೃತಿಗೆ ಸಂಬಂಧಿಸಿದಂತೆ ಪದೇಪದೇ ಕೇಳಿಬರುವ ಈ ಪ್ರಶ್ನೆಗಳನ್ನು ಗಮನಿಸಿ. ನೀವು ಹಣೆಗೆ ತಿಲಕ ಇಡುವುದೇಕೆ? ಗೋಮಾಂಸವನ್ನು ನೀವೇಕೆ ತಿನ್ನುವುದಿಲ್ಲ? ನೀವು ಶಿಶ್ನವನ್ನು ಪೂಜೆ ಮಾಡುತ್ತೀರಂತೆ ಹೌದೆ? ಜಾತಿ ಪದ್ಧತಿಯ ಬಗ್ಗೆ ನಿಮ್ಮ ಅನಿಸಿಕೆಯೇನು? ಈಗಲೂ ಭಾರತದಲ್ಲಿ ವಿಧವೆಯರನ್ನು ಸುಡುತ್ತಾರೆಯೇ? ನಿಮ್ಮ ದೇವರುಗಳಿಗೇಕೆ ಆರೆಂಟು ಕೈಗಳು ಇರುತ್ತವೆ? ನಿಮ್ಮ ರಿಲಿಜನ್ನಿನ ಚಿಹ್ನೆ ಯಾವುದು? ನೀವು ದೇವಸ್ಥಾನದಲ್ಲಿ ಮೂರ್ತಿಪೂಜೆ/idolatry ಮಾಡುತ್ತೀರಾ? ನೀವು ದೇವರನ್ನು ನಂಬುತ್ತೀರಾ? Are you religious? ಇತ್ಯಾದಿ. ಈ ರೀತಿಯ ಪ್ರಶ್ನೆಗಳು ಎದುರಾದಾಗ ಯಾರಾದರೂ ಹೇಗೆ ಪ್ರತಿಕ್ರಿಯಿಸಬಹುದು? ಸ್ಥೂಲವಾಗಿ ಹೇಳುವುದಾದರೆ, ಇದಕ್ಕೆ ಎರಡು ವಿಧದಲ್ಲಿ ಪ್ರತಿಕ್ರಿಯಿಸಬಹುದು. ಮೊದಲನೆಯದು, ಈ ಪ್ರಶ್ನೆಗಳು ಗ್ರಹಿಸಲು ಸಾಧ್ಯವಾಗುವಂಥ ಮತ್ತು ನಮಗೆ ಅರ್ಥವಾಗುವ ಪ್ರಶ್ನೆಗಳು ಎಂಬ ಊಹೆಯೊಂದಿಗೆ ಈ ಪ್ರಶ್ನೆಗಳಿಗೆ ಉತ್ತರ ನೀಡುವುದು. ಸುಧಾರಣಾವಾದಿಗಳ ಕಾಲದಿಂದ ಇಂದಿನವರೆಗೆ ನಾವು ಅನುಸರಿಸಿದ ಮಾರ್ಗ ಇದೇ. ಆದರೆ ಅಮೆರಿಕೆಯಲ್ಲಿ ನೆಲೆಸುವ ಭಾರತೀಯರ [ಅಷ್ಟೇ ಏಕೆ, ಸಂಕುಚಿತಗೊಳ್ಳುತ್ತಿರುವ ಆ ಜಗತ್ತಿನಲ್ಲಿ, ಭಾರತದಲ್ಲಿನ ಭಾರತೀಯರ] ಪರಿಸ್ಥಿತಿ ಇಂದು ಬದಲಾಗಿದೆ: ಹಿಂದಿನ ಕಾಲದ ಸುಧಾರಕರು ಭಾರತೀಯ ಸಂದರ್ಭದಲ್ಲಿ ಮಾತನಾಡುತ್ತಿದ್ದರು, ಆದರೆ ನಾವಿಂದು ಪಾಶ್ಚಾತ್ಯ ಸಂಸ್ಕೃತಿಯ ಸಂದರ್ಭದಲ್ಲಿ ನಿಂತು ಮಾತನಾಡುತ್ತಿದ್ದೇವೆ. ಬದಲಾದ ಈ ಸಾಂಸ್ಕೃತಿಕ ಪರಿಸ್ಥಿತಿಯಲ್ಲಿ ನಾವೂ ನಮ್ಮ ಸುಧಾರಣಾವಾದಿಗಳು ನಡೆದ ಮಾರ್ಗವನ್ನು ಅನುಸರಿಸಿದರೆ ಉಂಟಾಗುವ ಪರಿಣಾಮವನ್ನು ಗ್ರಹಿಸುವುದು ಬಹಳ ಮುಖ್ಯವಾಗಿದೆ. ಮತ್ತಷ್ಟು ಓದು 
ನಾವೇಕೆ ಪಾಶ್ಚಾತ್ಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು..? ( ಭಾಗ – ೩ )
ಎಸ್.ಎನ್. ಬಾಲಗಂಗಾಧರ
(ತಿದ್ದುಪಡಿ ಮಾಡಿದ ಅನುವಾದ.
ಮೂಲ ಅನು: ಸಿ.ಎಸ್.ಎಲ್.ಸಿ ಸಂಶೋಧಕರು, ‘ಪೂರ್ವಾವಲೋಖನ’ ಕೃತಿಯಲ್ಲಿ ಪ್ರಕಟವಾಗಿದೆ.)
ಒಂದು ಹೋಲಿಕೆ
ವಸಾಹತುಶಾಹಿ ಕಾಲದ ಭಾರತೀಯ ಬುದ್ಧಿಜೀವಿಗಳು ಈ ಕಥೆಯನ್ನು ಸಾರಾಸಗಟಾಗಿ ನಂಬಿದ್ದರು. (ಏಕೆ ಎಂಬುದು ಒಂದು ಮುಖ್ಯ ಪ್ರಶ್ನೆಯಾದರೂ, ಈ ಲೇಖನದಲ್ಲಿ ನಾನದನ್ನು ಚರ್ಚೆಗೆತ್ತಿಕೊಳ್ಳುವುದಿಲ್ಲ). ಇದು ಎರಡು ಪರಸ್ಪರ ವಿರುದ್ಧವಾದ ಪ್ರತಿಕ್ರಿಯೆಗಳಿಗೆ ದಾರಿಮಾಡಿತು: ಒಂದೆಡೆ ಕೆಲವು ಜನರು ಹಿಂದುಗಳ ರಿಲಿಜನ್ನಿನ ಪುನರುತ್ಥಾನಕ್ಕಾಗಿ ಪರಿಶ್ರಮಿಸಿದರು. ವೇದ ಉಪನಿಷತ್ತುಗಳಲ್ಲಿರುವ ಶುದ್ಧವಾದ ರಿಲಿಜನ್ನಿಗೆ ಹಿಂದಿರುಗಬೇಕು ಎಂದು ಅವರು ವಾದಿಸಿದರು. ಇನ್ನೊಂದೆಡೆಯಲ್ಲಿ ಹಿಂದೂಯಿಸಂ ಈಗ ಹೇಗಿದೆಯೋ ಅದೇ ಸರಿ ಎಂದು ಗಂಟಾಘೋಷವಾಗಿ ಸಮರ್ಥಿಸುವವರೂ ಇದ್ದರು. ಈ ಎರಡು ತುದಿಗಳ ನಡುವೆ ಹಲವು ವಿವಿಧ ನಿಲುವುಗಳೂ ನಿಧಾನವಾಗಿ ಹರಳುಗಟ್ಟಿದ್ದವು. ಮತ್ತಷ್ಟು ಓದು 
ನಾವೇಕೆ ಪಾಶ್ಚಾತ್ಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು..? ( ಭಾಗ – ೨ )
ಎಸ್.ಎನ್. ಬಾಲಗಂಗಾಧರ
(ತಿದ್ದುಪಡಿ ಮಾಡಿದ ಅನುವಾದ.
ಮೂಲ ಅನು: ಸಿ.ಎಸ್.ಎಲ್.ಸಿ ಸಂಶೋಧಕರು, ‘ಪೂರ್ವಾವಲೋಖನ’ ಕೃತಿಯಲ್ಲಿ ಪ್ರಕಟವಾಗಿದೆ.)
ಹಿನ್ನೆಲೆ:
ಭಾರತದ ಹಲವು ಪ್ರದೇಶಗಳ ಮೇಲೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ತನ್ನ ಹಿಡಿತವನ್ನು ಬಿಗಿಗೊಳಿಸಿ, ಅದರ ಆಡಳಿತಾಧಿಕಾರಿಗಳು ಆಳುವವರ ಸ್ಥಾನಕ್ಕೆ ಬಂದಾಗ, ಭಾರತೀಯ ಸಂಪ್ರದಾಯಗಳ ಕುರಿತಂತೆ ಒಂದು ವಿಶೇಷ ಹಗೆತನವು ವಸಾಹುತು ಆಡಳಿತ ನೀತಿಯ ಹೆಗ್ಗುರುತಾಯಿತು. ಈ ಹಗೆತನಕ್ಕೆ ಬಹಳ ಪುರಾತನ ಇತಿಹಾಸವಿರುವುದು ನಿಜ. ಹಿಂದೂಗಳ ‘ರಿಲಿಜನ್’ ಆದ ‘ಹಿಂದೂಯಿಸಂ’ನ ಪ್ರತಿ ಅಂಶವೂ ಅವರಿಗೆ ಆಕ್ಷೇಪಾರ್ಹ ಮತ್ತು ಅಸಂಗತವಾಗಿ ಕಂಡಿದ್ದು ಹಳೆಯ ವಿಚಾರ. ಬಾಲ್ಯವಿವಾಹ, ಸತಿ ಪದ್ಧತಿ ಮುಂತಾದ ಅಸಹನೀಯ ಮತ್ತು ಅನೈತಿಕ ಆಚರಣೆಗಳನ್ನು ಅವರು ಭಾರತದಲ್ಲಿ ‘ಕಂಡುಕೊಂಡಿದ್ದರಿಂದ’ ಮಾತ್ರವೇ ಈ ಹಗೆತನವು ಬೆಳೆದದ್ದಲ್ಲ. ಅವರ ಹಗೆತನಕ್ಕೆ ಸಾಕಷ್ಟು ಆಳವಾದ ಬೇರುಗಳಿವೆ: ತಮ್ಮ ರಿಲಿಜನ್ನಿನ ಕನ್ನಡಕದಿಂದ ನೋಡಿದಾಗ, ಇಂತಹ ವಿಕೃತ ಆಚರಣೆಗಳು ಸುಳ್ಳು ರಿಲಿಜನ್ಗಳ ಅವಿಭಾಜ್ಯ ಅಂಗಗಳು ಎಂದು ಅವರಿಗೆ ಅನಿಸಿತ್ತು. ‘ಹಿಂದೂಯಿಸಂ’ ಎನ್ನುವುದು ಸುಳ್ಳು ಮತ್ತು ಅವನತಿ ಹೊಂದಿದ ರಿಲಿಜನ್ನಾದ್ದರಿಂದ, ಇಂತಹ ಅರ್ಥಹೀನ ವಿಕೃತ ಆಚರಣೆಗಳು ಕೇವಲ ಆಕಸ್ಮಿಕಗಳಲ್ಲ, ಬದಲಿಗೆ ಅದರ ಅಗತ್ಯ ಲಕ್ಷಣಗಳು ಎಂದು ಅವರು ನಂಬಿದ್ದರು. ಮತ್ತಷ್ಟು ಓದು 
ನಾವೇಕೆ ಪಾಶ್ಚಾತ್ಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು..? ( ಭಾಗ – ೧ )
ಎಸ್.ಎನ್. ಬಾಲಗಂಗಾಧರ
(ತಿದ್ದುಪಡಿ ಮಾಡಿದ ಅನುವಾದ.
ಮೂಲ ಅನು: ಸಿ.ಎಸ್.ಎಲ್.ಸಿ ಸಂಶೋಧಕರು, ‘ಪೂರ್ವಾವಲೋಖನ’ ಕೃತಿಯಲ್ಲಿ ಪ್ರಕಟವಾಗಿದೆ.)
ನನ್ನ ಅನುಭವವೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಮೂಲಕ ಈ ಲೇಖನವನ್ನು ಪ್ರಾರಂಭಿಸುತ್ತೇನೆ. ಅಮೇರಿಕಾದಲ್ಲಿರುವ ಅನಿವಾಸಿ ಭಾರತೀಯರ ಬಾಯಲ್ಲಿ ನಾನು ಈ ಕೆಳಗಿನ ಮಾತುಗಳನ್ನು ಪದೇ ಪದೇ ಕೇಳಿದ್ದೇನೆ: “ನಾನು ಹಲವು ದಶಕಗಳ ಹಿಂದೆ ಅಮೇರಿಕಕ್ಕೆ ಬಂದಾಗ ನನಗೆ ಹಿಂದೂಯಿಸಂನ ಕುರಿತು ಅಷ್ಟಾಗಿ ತಿಳಿದಿರಲಿಲ್ಲ. ನನ್ನ ಈ ಅಜ್ಞಾನದ ಕುರಿತು ನನಗೆ ಅರಿವು ಮೂಡಿದ್ದೇ ನನ್ನ ಮಕ್ಕಳು ಹಿಂದೂಯಿಸಂ ಎಂದರೆ ಏನು ಎಂದು ಪ್ರಶ್ನಿಸಲು ಆರಂಭಿಸಿದಾಗ. ನಾನು ಅವರಿಗೆ ಹಿಂದೂಯಿಸಂ ಎಂದರೇನು ಎಂದು ಕಲಿಸಬೇಕಿತ್ತು, ಆದ್ದರಿಂದ ನಾನೂ ಹಿಂದೂಯಿಸಂ ಕುರಿತು ಭಾರತದಲ್ಲಿದ್ದಾಗ ತಿಳಿದುಕೊಂಡದ್ದಕ್ಕಿಂತ ಹೆಚ್ಚು ಅಮೆರಿಕೆಯಲ್ಲಿ ಕುಳಿತು ತಿಳಿದುಕೊಂಡೆ. (ಈ ವಿಚಾರದಲ್ಲಿ ಆ ಸ್ವಾಮಿ ಅಥವಾ ಈ ಸಂಘಟನೆ ನನಗೆ ಸಹಾಯ ಮಾಡಿತು. ಅವರಿಗೆ ನನ್ನ ಕೃತಜ್ಞತೆಗಳು).” ಮತ್ತಷ್ಟು ಓದು 
ಯಶಸ್ಸಿನಿಂದ ಮುನ್ನುಗ್ಗುತ್ತಿರುವ #ಗೋಪ್ರಾಣಭಿಕ್ಷೆ
-ಶಿಶಿರ್ ಅಂಗಡಿ
ಸಾಮೂಹಿಕ ಪ್ರಾರ್ಥನೆ,ಸಮಾಜದ ಸಹಾಕರ ~ ಯಶಸ್ಸಿನಿಂದ ಮುನ್ನುಗ್ಗುತ್ತಿರುವ #ಗೋಪ್ರಾಣಭಿಕ್ಷೆ
ಪ್ರಾರ್ಥನೆ ಅಂದ್ರೆ ನಿಸ್ವಾರ್ಥವಾಗಿ ಒಳ್ಳೆಯ ಕೆಲಸಗಳನ್ನು ಮಾಡೋದು.ಪ್ರಾರ್ಥನೆ ಅಂದ್ರೆ ರಸ್ತೆ ದಾಟಲು ಕಷ್ಟ ಪಡುತ್ತಿರುವ ವೃದ್ಧರಿಗೆ, ಮಕ್ಕಳಿಗೆ ಸಹಾಯ ಮಾಡುವದು.ಪ್ರಾರ್ಥನೆ ಅಂದ್ರೆ ಇನ್ನೊಬ್ಬರಿಗೆ ಹೃದಯಾಂತರಾಳದಿಂದ ಶುಭವನ್ನು ಹಾರೈಸುವುದು.ಸಾಮೂಹಿಕ ಪ್ರಾರ್ಥನೆಗೆ ದೇವರನ್ನೇ ಧರೆಗಿಳಿಸುವ ಶಕ್ತಿ ಇದೆ ಅಂತ ಹೇಳ್ತಾರೆ.ಪ್ರಾರ್ಥನೆ ಎಂದರೆ ದೇವರ ಎದುರಿನಲ್ಲಿ ಬೇಡುವುದು ಎಷ್ಟು ಸರಿಯೋ, ಇನ್ನೊಬ್ಬರಿಗೆ ಒಳಿತು ಬಯಸುವುದು, ಒಳಿತನ್ನು ಮಾಡುವುದು ಕೂಡ ಅಷ್ಟೇ ಸರಿ ಎನ್ನುತ್ತಾರೆ ಬಲ್ಲವರು.
ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಸಾವಿನಂಚಿನಲ್ಲಿರುವ ಗೋವುಗಳ ಶೋಷನೀಯ ಸ್ಥಿತಿ ಮನಗಂಡು ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರು ಕೊಟ್ಟ ಒಂದು ಕರೆಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಗೋಪ್ರೇಮಿಗಳು ದೇಶದ ಉದ್ದಗಲಗಳಿಂದ ದೊಡ್ಡ ಮಟ್ಟದಲ್ಲಿ ಸ್ಪಂದಿಸಿ ಸರಳ ಭೋಜನ – ಸರಳ ಜೀವನದೊಟ್ಟಿಗೆ ವಾರಕ್ಕೆ ಒಂದು ಹೊತ್ತಿನ ಊಟ ಬಿಟ್ಟು ಆ ಹಣವನ್ನು ಗೋಪ್ರಾಣಭಿಕ್ಷೆಗೆ ಸಮರ್ಪಿಸಿದ್ದಾರೆ. ಈ ಮೂಲಕ ಸಾವಿರಾರು ಟನ್ ಮೇವು ಖರೀದಿಗೆ ಸಹಕರಿಸಿದ್ದಾರೆ. ನೂರಾರು ಕಾರ್ಯಕರ್ತರು ಬೆಟ್ಟದ ತಪ್ಪಲಿನಲ್ಲಿ ಅವಿಶ್ರಾಂತವಾಗಿ ಸೇವೆ ಸಲ್ಲಿಸುತ್ತಾ ದಿನನಿತ್ಯ ಸಮಯಕ್ಕೆ ಸರಿಯಾಗಿ ಗೋವಿಗೆ ಮೇವು ತಲುಪುವಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ #GiveUpAMeal ಅಭಿಯಾನಗಳ ಮೂಲಕ ದೇಶದ ಒಳ ಹೊರಗಿನ ಒಂದು ಮಿಲಿಯನಗೂ ಅಧಿಕ ಜನರನ್ನು ತಲುಪಿದ್ದು ಬಹುಪಾಲು ಜನ ಈ ಅಭಿಯಾನಕ್ಕೆ ತನು-ಮನ-ಧನದ ಸಹಕಾರ ನೀಡಿದ್ದಾರೆ.
ಹಾಗೇಯೆ ದೃಶ್ಯ ಹಾಗೂ ಪತ್ರಿಕಾ ಮಾಧ್ಯಮಗಳೂ, ನ್ಯೂಸ್ ಪೋರ್ಟಲ್,ಬ್ಲಾಗುಗಳೂ ಕೂಡ ಅಭಿಯಾನದ ಪ್ರತಿಹಂತದಲ್ಲೂ ವಿಷಯಗಳನ್ನು ಸಮಾಜಕ್ಕೆ ತಲುಪಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿವೆ.
ಯಕ್ಷಗಾನದಲ್ಲಿ ಏಸುಕ್ರಿಸ್ತ
– ವಿನಾಯಕ ಹಂಪಿಹೊಳಿ
ಏಸುಕ್ರಿಸ್ತನ ಜೀವನ ಕಥೆಯನ್ನು ಯಕ್ಷಗಾನದ ಆಟದ ರೂಪದಲ್ಲಿ ತೋರಿಸುವ ಪ್ರಯತ್ನವೊಂದು ಈಗ ಚರ್ಚೆಗೆ ಗ್ರಾಸವಾಗಿದೆ. ಒಂದು ಗುಂಪು ಇಂಥದೊಂದು ಪ್ರಯತ್ನವು ಕ್ರಿಶ್ಚಿಯಾನಿಟಿಯನ್ನು ಹರಡುವ ಹುನ್ನಾರದ ಭಾಗವೆಂದು ಭಾವಿಸಿದೆ. ಏಸುಕ್ರಿಸ್ತನ ಜೀವನವನ್ನು ಭಾರತೀಯ ಕಲೆಯೊಂದರ ಮೂಲಕ ತೋರಿಸಿ, ಏಸುವು ಇಡೀ ಮಾನವ ಸಮುದಾಯವನ್ನು ರಕ್ಷಿಸಲು ಹುಟ್ಟಿದ್ದಾನೆ ಎಂಬ ಕ್ರಿಶ್ಚಿಯಾನಿಟಿಯ ನಂಬಿಕೆಯೊಂದನ್ನು ಹರಡಿ, ಜನರನ್ನು ಮತಾಂತರಗೊಳಿಸುವ ಯೋಜನೆಯ ಒಂದು ಭಾಗ ಎಂಬುದು ಮೊದಲನೇ ಗುಂಪಿನ ವಾದವಾಗಿದೆ. ಹೀಗಾಗಿ ಇಂಥ ಪ್ರಯೋಗಗಳು ಉಚಿತವಲ್ಲ ಎಂಬುದು ಈ ಗುಂಪಿನವರ ಅಭಿಪ್ರಾಯ.
ಇನ್ನೊಂದು ಗುಂಪು ಇಂಥ ಹೊಸ ಪ್ರಯತ್ನವನ್ನು ಸ್ವಾಗತಿಸುತ್ತದೆ. ಕಲೆಗೆ ಯಾವುದೇ ನಿರ್ಬಂಧಗಳಿರಕೂಡದು. ಯಕ್ಷಗಾನವು ಯಾರೊಬ್ಬರ ಸೊತ್ತೂ ಅಲ್ಲ. ಭಾರತದಲ್ಲಿರುವ ಕ್ರಿಶ್ಚಿಯನ್ನರು ತಮ್ಮ ಯಕ್ಷಗಾನ ಕಲೆಯಲ್ಲಿ ಏಸುವನ್ನೇಕೆ ರೂಪಿಸಿಕೊಳ್ಳಬಾರದು ಎನ್ನುವದು ಎರಡನೇ ಗುಂಪಿನವರ ವಾದವಾಗಿದೆ. ಯಕ್ಷಗಾನದಲ್ಲಿ ಹೊಸ ಪ್ರಯೋಗಗಳು ನಡೆಯಬೇಕು. ಈ ರೀತಿಯ ಪ್ರಯೋಗಗಳು ಕೋಮು ಸೌಹಾರ್ದಕ್ಕೆ ಅಡಿಗಲ್ಲಾಗಿರುತ್ತವೆ. ಆ ನಿಟ್ಟಿನಲ್ಲಿ ಇಂಥ ಪ್ರಯೋಗಗಳನ್ನು ಅನುಮತಿಸಬೇಕು ಎನ್ನುವದು ಈ ಗುಂಪಿನವರ ಅಭಿಪ್ರಾಯವಾಗಿದೆ.
ಯಕ್ಷಗಾನದಲ್ಲಿ ಏಸುವಿನ ಕತೆಯನ್ನು ಅಳವಡಿಸುವದು ಚರ್ಚುಗಳ ಹುನ್ನಾರವೇ ಆಗಿರಬೇಕೆಂಬುದು ಕೇವಲ ಅನುಮಾನವಷ್ಟೇ ಆಗಿದೆ, ಒಂದು ವೇಳೆ ಅದು ಹುನ್ನಾರವೇ ಆಗಿದ್ದರೂ, ಆಗಿರದಿದ್ದರೂ ಅದೊಂದೇ ಕಾರಣವು ಅಂತಹ ಪ್ರಯೋಗಗಳನ್ನು ನಿಲ್ಲಿಸಲು ಸಮರ್ಥವಾದ ವಾದವಾಗುವದಿಲ್ಲ. ಅಲ್ಲದೇ ಕಲಾವಿದನಿಗೆ ಸ್ವಾತಂತ್ರ್ಯವಿರಬೇಕೆಂಬುದು ಎಲ್ಲರಿಗೂ ಒಪ್ಪಿತವಾಗುವ ಅಂಶವೇ ಆಗಿದೆ. ಹೀಗಾಗಿ ಯಕ್ಷಗಾನದಲ್ಲಿ ಏಸುವಿನ ಕತೆಯು ಅಳವಡಿಸಲ್ಪಡಬಾರದು ಎನ್ನುವ ವಾದವು ತರ್ಕಬದ್ಧವಾಗಿ ಯೋಚಿಸಿದಾಗ ಸಮರ್ಪಕವೆಂದು ಅನಿಸುವದಿಲ್ಲ.
ಅಕ್ಷ ತೃತೀಯ – ವೈಶಿಷ್ಟ್ಯ
– ಮಯೂರಲಕ್ಷ್ಮೀ
ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಮನುಷ್ಯನ ಆವಿಷ್ಕಾರದೊಡನೆ ಬದಲಾಗುವ ಋತು ಋತುಗಳೊಡನೆ ಸರ್ವತೋಮುಖ ಅಭಿವೃದ್ಧಿಯಲ್ಲಿ ಪರಿಪೂರ್ಣತೆಯತ್ತ ಕೊಂಡೊಯ್ಯಲು ಅತ್ಯಂತ ಮಹತ್ತರ ಪಾತ್ರ ವಹಿಸುತ್ತದೆ. ಹೊಸ ಸಂವತ್ಸರದೊಡನೆ ಯುಗಾದಿಯಿಂದ ಆರಂಭವಾಗಿ ಚೈತ್ರ ಮಾಸ, ಶುಕ್ಲ ಪಕ್ಷ, ವಸಂತ ಋತುವಿನಲ್ಲಿ ದೇಶದಾದ್ಯಂತ ಸಂಭ್ರಮದಿಂದ ಆಚರಿಸಲ್ಪಡುವ “ಅಕ್ಷ ತೃತೀಯ” ಅತ್ಯಂತ ಮುಖ್ಯವಾದದು.
ಅಕ್ಷ ತೃತೀಯ ಎಂದರೇನು? ಮತ್ತಷ್ಟು ಓದು 




