ವಿಷಯದ ವಿವರಗಳಿಗೆ ದಾಟಿರಿ

Posts from the ‘ಲೇಖನಗಳು’ Category

2
ಫೆಬ್ರ

ಸಾಗುವ ಹಾದಿ ದುರ್ಗಮವಾಗಿದ್ದರೇನು.. ಸಾಧಿಸುವ ಛಲವಿದ್ದಾಗ..!

– ಸುರೇಶ್ ಕುಮಾರ್ ಎಂ.ಆರ್

i3f4urಜಗತ್ತು ಕಂಡ ಶ್ರೇಷ್ಠ ಟೆನಿಸ್ ಆಟಗಾರ್ತಿ, ಟೆನಿಸ್ ಅಂಗಳಕ್ಕಿಳಿದರೆ ಸೋಲಿನ ಮುಖವನ್ನು ನೋಡಲೇಬಾರದು ಎಂಬಂತಹ ಆತ್ಮವಿಶ್ವಾಸ. ಎದುರಾಳಿ ಆಟಗಾರ್ತಿಯ ಬಿರುಸಿನ ಹೊಡೆತಗಳನ್ನು ಲೀಲಾಜಾಲವಾಗಿ ರಿಟರ್ನ್ ಮಾಡುವ ಈಕೆಯದು ಅಂತಿಂತಹ ಶೈಲಿಯಲ್ಲ. ಇವಳಿಗೆ ಇವಳೇ ಸಾಟಿ, ಇವಳ ಹೊಡೆತಗಳನ್ನು ಮಹಿಳಾ ಆಟಗಾರ್ತಿಯರ ಪೈಕಿ ಅತೀ ಬಲಿಷ್ಠ ಹೊಡೆತಗಳು ಎಂದು ಕರೆಯುವುದುಂಟು. ರಷ್ಯಾದ ಮಾರಿಯಾ ಶಾರಪೋವಳ ಹೊಡೆತಗಳಿಗೂ ಬಿರುಸಿನ ಹೊಡೆತಗಳಿವಳವು. ಇವಳ ಅಕ್ಕ ವೀನಸ್ ವಿಲಿಯಮ್ಸ್ ಕೂಡ ಅವಳ ಆಟಕ್ಕೆ ಸಾಟಿಯಲ್ಲ (ಸಾಂದರ್ಭಿಕ). ಅವಳೇ ಸೆರೆನಾ ಜಮೆಕಾ ವಿಲಿಯಮ್ಸ್. ಕೆಲವು ದಿನಗಳ ಹಿಂದೆ ಮುಕ್ತಾಯಗೊಂಡ ಆಸ್ಟ್ರೇಲಿಯನ್ ಓಪನ್ ಟೆನಿಸ್ ಗ್ರಾಂಡ್ ಸ್ಲ್ಯಾಮ್ ಟೂರ್ನಿಯ ಮಹಿಳಾ ವಿಭಾಗದ ಜಯಶಾಲಿ ಈಕೆ, ಅದೂ ತನ್ನ ಅಕ್ಕನನ್ನೇ ಅಂತಿಮ ಹಂತದ ಪೈಪೋಟಿಯಲ್ಲಿ ಅತೀ ಸಲೀಸಾಗಿ ಸೋಲಿಸಿ 23ನೇ ಗ್ರಾಂಡ್‌ ಸ್ಲ್ಯಾಮ್ (ಮಹಿಳಾ ಸಿಂಗಲ್ಸ್ ವಿಭಾಗ) ಎತ್ತಿಹಿಡಿದ ಛಲಗಾರ್ತಿ. ಮತ್ತಷ್ಟು ಓದು »

1
ಫೆಬ್ರ

ಚಿತ್ತೋರ್ ಘರ್ ಕೋಟೆ

– ಮಯೂರಲಕ್ಷ್ಮೀ

12140744_1332900670100353_513369733292930039_nಭಾರತದ ಅತಿ ದೊಡ್ಡ ಕೋಟೆ ಮೇವಾಡದ ಚಿತ್ತೋರಿನ ಕೋಟೆ. ಬೇರಾಚ್ ನದಿ ಈ ರಾಜ್ಯದ ಜೀವನಾಡಿ ಎಂದೆನಿಸಿತ್ತು. ಇಲ್ಲಿ ಆಳುತಿದ್ದ ರಜಪೂತ ದೊರೆಗಳು ಸೂರ್ಯವಂಶದ ದೊರೆಗಳೆಂದೇ ಪ್ರಸಿದ್ಧರು. ರಾಜಸ್ಥಾನದ ಅಜಮೇರಿನಿಂದ ೨೩೩ ಕೊಲೋಮೀಟರ್ ದೂರದಲ್ಲಿರುವ ಚಿತ್ತೋರ್  ಘರ್ ಕೋಟೆಯ ಮೂಲತಃ ನಿರ್ಮಾತರು ಮೌರ್ಯರು ಎನ್ನುವ ಅಭಿಪ್ರಾಯವಿದೆ.  ಆರ್ಯರ ದೊರೆ ‘ಚಿತ್ರಾಂಗದ ಮೌರ್ಯ’ ನೆನಪಲ್ಲಿ ಚಿತ್ತೋರಿನ ಕೋಟೆಗೆ ಈ ಹೆಸರು ಬಂತು ಎಂದು ಇತಿಹಾಸದಲ್ಲಿದೆ. ಮಹಾಭಾರತದ ಸಮಯದಲ್ಲಿ ಭೀಮ ತನ್ನ ಬಲವಾದ ಹಸ್ತದಿಂದ ನೆಲವನ್ನು ಅಗೆದು ನೀರಿನ ಚಿಲುಮೆಯನ್ನು ನಿರ್ಮಿಸಿದ. ಅದೇ ಅಲ್ಲಿನ ಭೀಮಲತ ಕುಂಡವಾಗಿ ನೀರಿನ ಸರೋವರವಾಯಿತು ಅನ್ನುತ್ತದೆ ಅಲ್ಲಿನ ಪುರಾಣದ ಕಥೆ.

ಮತ್ತಷ್ಟು ಓದು »

1
ಫೆಬ್ರ

“ಜಗತ್ತಿನಲ್ಲಿ ಯಾವ ಬಲಪಂಥವೂ ಇಲ್ಲ. ನೀವದಕ್ಕೆ ಸೇರಬೇಕೆಂಬ ಬಲವಂತವೂ ಇಲ್ಲ”

– ರಾಘವೇಂದ್ರ ಸುಬ್ರಹ್ಮಣ್ಯ

383448-31622-22ಇಡೀ ಜಗತ್ತಿನಲ್ಲಿ ಎಲ್ಲರೂ ‘ಎಡಪಂಥೀಯರು’, ‘ಬಲಪಂಥೀಯರು’ ಎಂಬ ಪದಗಳನ್ನು ಪುಂಖಾನುಪುಂಖವಾಗಿ ಹರಿಬಿಡುತ್ತಾರೆ. ಆದರೆ ಯಾರಿಗೂ ಅವುಗಳ ಬಗ್ಗೆ ಸ್ಪಷ್ಟ ಕಲ್ಪನೆಯಿಲ್ಲ. ಯಾಕೆ ಯಾರನ್ನು ಎಡಪಂಥೀಯರು ಅಂತಾ ಕರೀತಾ ಇದ್ದೀವಿ ಅಂತಲೂ ಗೊತ್ತಿಲ್ಲದೇ ಆ ಪದವನ್ನ ಉಪಯೋಗಿಸ್ತಾ ಇದ್ದಾರೆ. ಎಡಪಂಥೀಯರು ಎಂಬ ಪದ, ಎಡಪಂಥೀಯ ರಾಜಕಾರಣ ಎಂಬ ಪದದಿಂದ ಎರವಲು ಪಡೆದದ್ದು. ಈ ಎಡಪಂಥೀಯ ರಾಜಕಾರಣವೆಂದರೇನು? ಮತ್ತಷ್ಟು ಓದು »

1
ಫೆಬ್ರ

ಕೇಂದ್ರ ಬಜೆಟ್: ಸವಾಲುಗಳು ಹಲವು, ಸಮಾಧಾನವೇ ಉತ್ತರ.

– ಶ್ರೇಯಾಂಕ ಎಸ್ ರಾನಡೆ.
52caa08d272cb98bcc1ad64b810fa9b62ae834b345b1463f69pimgpsh_fullsize_distr(ವಿ.ಸೂ : ಈ ಲೇಖನವನ್ನು ಎರಡು ಭಾಗಗಳಲ್ಲಿ ನೋಡಬಹುದು. ಮೊದಲ ಭಾಗದಲ್ಲಿ ಬಜೆಟ್ ಹಾಗೂ ಈ ಬಾರಿಯ ಬಜೆಟ್‍ಗೆ ಪೂರ್ವಭೂಮಿಕೆ. ಎರಡನೇ ಭಾಗದಲ್ಲಿ ಈ ಬಾರಿಯ ಜೇಟ್ಲಿ ಬಜೆಟ್ ಮುಂದಿರುವ ಸವಾಲು, ನಿರೀಕ್ಷೆ ಹಾಗೂ ಸಾಧ್ಯತೆಗಳು. ಎರಡೂ ಭಾಗಗಳೂ ಅವಿಚ್ಛಿನ್ನ. ಒಂದಕ್ಕೊಂದು ಪೂರಕ.)
ಕೇಂದ್ರ ಸರಕಾರದ ಕಾರ್ಯವೈಖರಿಯ ಪ್ರಮಾಣಪತ್ರವೇ ವರ್ಷಂಪ್ರತಿ ರಾಷ್ಟ್ರಪತಿಗಳ ಪರವಾಗಿ ವಿತ್ತ ಸಚಿವರು ಮಂಡಿಸುವ ದೇಶದ ಮುಂಗಡಪತ್ರ. ಸಂವಿಧಾನದ 112ನೇ ಕಲಂ ಪ್ರಕಾರ ಸರಕಾರ ಪ್ರತೀ ವರ್ಷ ವಾರ್ಷಿಕ ಆಯವ್ಯವನ್ನು ಮಂಡಿಸಬೇಕು. “ಬಜೆಟ್” ಎಂಬ ಪದ ಜನಪ್ರಿಯ ಬಳಕೆಯಷ್ಟೆ.

ಮತ್ತಷ್ಟು ಓದು »

31
ಜನ

ಇಂದು ಕಂಬಳ, ನಾಳೆ ಜೋಡೆತ್ತಿನ ಗಾಡಿ, ಸಂಕ್ರಾಂತಿ, ನಾಡಿದ್ದು ಇನ್ನೇನೋ…?

– ಶಿವಕುಮಾರ ಪಿ.ವಿ.
ಸಂಶೋಧನಾ ವಿದ್ಯಾರ್ಥಿ
ರಾಜ್ಯಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ.

860897a4867e00f161e4236fd7fe5aeeಪ್ರಾಣಿಗಳಿಗೆ ಹಿಂಸೆ ನೀಡಿ ಮನರಂಜನೆ ಪಡೆಯಲಾಗುತ್ತಿದೆ ಎಂಬುದು ಕಂಬಳ, ಜಲ್ಲಿಕಟ್ಟುವಿನಂತ ಕ್ರೀಡೆಗಳನ್ನು ನಿಲ್ಲಿಸಲು ಪ್ರಾಣಿದಯಾ ಸಂಘಗಳು ನೀಡುತ್ತಿರುವ ಕಾರಣ. ನ್ಯಾಯಾಲಯವೂ ಕೂಡ ‘ಪ್ರಾಣಿ ಹಿಂಸೆ’ಯ ಮಾನದಂಡವನ್ನಾದರಿಸಿ ಈ ಕ್ರೀಡೆಗಳಿಗೆ ನಿಷೇಧಾಜ್ಞೆಯನ್ನೂ ಹೇರುತ್ತಿದೆ. ಇದನ್ನಿಟ್ಟುಕೊಂಡೇ ನೋಡಿದರೆ, ಕೋಳಿ-ಕುರಿ, ದನಗಳನ್ನು ಕಡಿದು ತಿನ್ನುವುದು ಅವುಗಳ ಮಾರಣಹೋಮವಾಗಿ ಕಾಣಿಸಬೇಕಿತ್ತು. ಆದರೆ ಹಾಗಾಗುತ್ತಿಲ್ಲ. ಆಶ್ಚರ್ಯವೆಂದರೆ, ಪ್ರಾಣಿ ಹಿಂಸೆ, ಪ್ರಾಣಿ ಬಲಿಯನ್ನು ನಿಷೇಧಿಸಬೇಕೆನ್ನುವ ಸಕಲ ಪ್ರಾಣಿಗಳ ಜೀವಪರ ದಯಾಳುಗಳೆ ಬೀಫ್, ಮತ್ತಿತರ ಮಾಂಸ ಖಾದ್ಯಗಳನ್ನು, ಅವುಗಳ ರಕ್ತದ ಸೂಪನ್ನು ಚಪ್ಪರಿಸುತ್ತಿರುತ್ತಾರೆ. ಅದಕ್ಕಾಗಿ ಹೋರಾಟಗಳನ್ನೂ ಮಾಡುತ್ತಾರೆ. ಪ್ರಾಣಿಗಳನ್ನು ಬೇಕಾದರೆ ಕಡಿದು ತಿನ್ನಿ, ಆದರೆ ಅವುಗಳಿಗೆ ಹಿಂಸೆ ಕೊಡಬೇಡಿ ಎಂಬುದು ಇವರ ಆಕ್ಷೇಪಣೆ! ಹಾಗಾದರೆ, ಪ್ರಾಣಿ ಹಿಂಸೆಯ ಗುರಾಣಿಯ ಹಿಂದಿರುವ ತರ್ಕವೇನು, ಇವರ ನಿಜವಾದ ಕಾಳಜಿ ಪ್ರಾಣಿ ಹಿಂಸೆ ಮಾಡಬಾರದೆನ್ನುವುದೇ? ಮತ್ತಷ್ಟು ಓದು »

30
ಜನ

ಜಲ್ಲಿಕಟ್ಟು ಹೆಸರಿನಲ್ಲಿ ಹೊಸದೊಂದು ಸಂಸ್ಕೃತಿ ಸಾಧ್ಯವಿಲ್ಲ ಅಂತೀರಾ?

– ನರೇಂದ್ರ ಎಸ್ ಗಂಗೊಳ್ಳಿ

08ma_jallikattu_dg_1748590fನಾಡು ನುಡಿ ಸಂಸ್ಕೃತಿ ಸಂಪ್ರದಾಯದ ಅಭಿಮಾನದ ವಿಚಾರಕ್ಕೆ ಬಂದಾಗ ತಮಿಳುನಾಡಿನ ಜನರು ಯಾವತ್ತಿಗೂ ಒಂದು ಹೆಜ್ಜೆ ಮುಂದೆ ನಿಲ್ಲುತ್ತಾರೆ. ಇದು ಹೊಗಳಿಕೆ ಅಂತೇನೂ ಅಲ್ಲ. ನಮ್ಮ ಜನರ ಅಭಿಮಾನದ ನೆಲೆಯಲ್ಲಿ ನೋಡಿದಾಗ ಹಾಗನ್ನಿಸುವುದು ಸಹಜ. ಮೊನ್ನೆ ಮೊನ್ನೆ ಪ್ರಸ್ತುತ ಜಲ್ಲಿಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ನಡೆದ ಹೋರಾಟದ ಪರಿ ಇದೆಯಲ್ಲಾ ಅದು ನಿಜಕ್ಕೂ ಪ್ರತಿಯೊಬ್ಬರಿಗೂ ಪ್ರೇರಣೆಯನ್ನು ನೀಡುವಂತಾದ್ದು. ಅವರಿಗೊಂದು ಮೆಚ್ಚುಗೆಯಿರಲಿ. ಆದರೆ ಈ ಜಲ್ಲಿಕಟ್ಟು ವಿಚಾರವನ್ನು ತೀರಾ ಭ್ರಮೆಗಳಿಗೆ ಕಟ್ಟುಬೀಳದೆ ವಾಸ್ತವದ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿ ತೀರ್ಮಾನಕ್ಕೆ ಬರುವ ಅವಶ್ಯಕತೆ ಇಲ್ಲ ಎನ್ನುತ್ತೀರಾ? ಮತ್ತಷ್ಟು ಓದು »

29
ಜನ

ಓಡುವ ಕೋಣದ ಹಿಂದೆ ಎಷ್ಟೆಲ್ಲಾ ಅಡಗಿದೆ?

– ಸಂತೋಷ್ ತಮ್ಮಯ್ಯ

860897a4867e00f161e4236fd7fe5aeeಕರಾವಳಿಯ ಖ್ಯಾತ ಕನ್ನಡ ಮತ್ತು ತುಳು ಕಾದಂಬರಿಗಾರ ದಿವಂಗತ ಬೋಳ ಚಿತ್ತರಂಜನ್ ದಾಸ್ ಶೆಟ್ಟಿಯವರು ತಮ್ಮ  “ಅಳಿದುಳಿದವರು” ಕಾದಂಬರಿಯಲ್ಲಿ ಕಂಬಳವನ್ನು ವಿವರಿಸುವುದು ಹೀಗೆ : ಎಲ್ಲಾ ಒಕ್ಕಲು ಮಕ್ಕಳು, ಮನೆಯವರೂ ಅಂದು ಸಡಗರದಿಂದಿದ್ದರು. ಏಕೆಂದರೆ ಅಂದು ಗದ್ದೆಯ ನಾಟಿ ಕಾರ್ಯದ ಕಡೆಯ ದಿನ. ನಸುಬೆಳಕಿನಲ್ಲೇ ಎತ್ತುಗಳು, ಕೋಣಗಳನ್ನು ಬಾಕಿಮಾರು ಗದ್ದೆಗೆ ಇಳಿಸಲಾಯಿತು. ಹತ್ತು ಜೋಡೆತ್ತುಗಳು ನಿಂತರೂ ತುಂಬದ ಆ ಬಾಕಿಮಾರು ಗದ್ದೆಯ ಕಡೆಯ ನಾಟಿ ಎಂದರೆ ಆ ಗುತ್ತಿಗಷ್ಟೇ ಅಲ್ಲ, ಊರಿಗೇ ಒಂದು ಸಂಭ್ರಮ. ಹೆಂಗಸರು ಗದ್ದೆಗೆ ತಣಿ ಎರೆದರು, ಸುಳಿ ಬಾಳೆ ಎಲೆಗಳಿಂದ ನಾಗನಿಗೆ ನೈವೇದ್ಯ ಅರ್ಪಿಸಿದರು.ಕೆಲವರು ಬೊಂಡಗಳನ್ನು ಇಟ್ಟು ಪ್ರಾರ್ಥನೆ ಸಲ್ಲಿಸಿದರು. ನಾಟಿಗದ್ದೆಯನ್ನು ಅದಾಗಲೇ ಉತ್ತಾಗಿತ್ತು. ಇನ್ನು ಅದನ್ನು ಹಸನು ಮಾಡಬೇಕು. ಎತ್ತು-ಕೋಣಗಳಿಗೆ ಕಟ್ಟಿದ್ದ ನೊಗವನ್ನು ಹಾಗೇ ಬಿಟ್ಟು ಹಲಗೆಯನ್ನು ಅದಕ್ಕೆ ಬಿಗಿಯಲಾಯಿತು. ಗದ್ದೆಯಲ್ಲಿ ಕೆಸರು ಎಂದರೆ ಮೂರ್ನಾಲ್ಕು ಇಂಚು ಕಾಲು ಹೂತುಹೋಗುವಷ್ಟು ಆಳ. ಆ ಹಲಗೆಯ ಮೇಲೆ ಒಂದು ಕಾಲಿಟ್ಟು. ಕೆಸರಿನಲ್ಲಿ ಇನ್ನೊಂದು ಕಾಲಿಟ್ಟು ಹಲಗೆ ಕಟ್ಟಿದ ಕೋಣಗಳನ್ನು ನಡೆಸಬೇಕು. ಅದನ್ನು ಆದಷ್ಟೂ ಬೇಗ ಮಾಡಬೇಕು. ಆ ಬಾಕಿಮಾರು ಎಂಬ ದೇವರ ಗದ್ದೆಯೋ ಉದ್ದಕ್ಕೆ ಮಲಗಿದೆ. ಬೇಗ ಸಮಾ ಮಾಡದಿದ್ದರೆ ಬೇಗ ನಾಟಿ ಆರಂಭವಾಗುವುದಿಲ್ಲ.

ಮತ್ತಷ್ಟು ಓದು »

29
ಜನ

ಪ್ರಾಣಿಗಳ ಕ್ರೀಡೆ ಮತ್ತು ಐಡೆಂಟಿಟಿ

– ವಿನಾಯಕ ಹಂಪಿಹೊಳಿ

imagesಪೆಟಾ ಹಾಗೂ ಇನ್ನಿತರ ಪ್ರಾಣಿದಯಾ ಸಂಘದವರು ಪ್ರಾಣಿಗಳನ್ನು ಆಹಾರವಾಗಿ ಹೊರತುಪಡಿಸಿ ಉಳಿದೆಲ್ಲ ಕಾರ್ಯಸಾಧನೆಗಾಗಿ ಬಳಸಿಕೊಳ್ಳುವ ಪ್ರಕ್ರಿಯೆಯನ್ನು ವಿರೋಧಿಸುತ್ತಾರೆ. ಅವುಗಳನ್ನು ಮೋಜಿಗಾಗಿ ಪಂದ್ಯಗಳಲ್ಲಿ ಬಳಸುವುದನ್ನು, ಮೆರವಣಿಗೆಯಲ್ಲಿ ಉಪಯೋಗಿಸುವುದನ್ನು, ಅವುಗಳ ಚರ್ಮದಿಂದ ಉಪಯೋಗಿ ವಸ್ತುಗಳನ್ನು ನಿರ್ಮಿಸುವುದನ್ನು, ಸರ್ಕಸ್ಸಿನಲ್ಲಿ ಪ್ರಾಣಿಗಳನ್ನು ಹೊಡೆದು ಪಳಗಿಸುವುದನ್ನು ವಿರೋಧಿಸುತ್ತಾರೆ. ಮೋಜಿಗಾಗಿ ಪ್ರಾಣಿಗಳನ್ನು ಹೊಡೆದೋಡಿಸುವ ಆಟಗಳನ್ನು, ಕೊಲ್ಲುವ ಆಚರಣೆಗಳನ್ನು, ನಿಷೇಧಿಸಬೇಕೆಂದು ಈ ಪ್ರಾಣಿದಯಾ ಸಂಘಗಳು ಪ್ರಯತ್ನಿಸುತ್ತವೆ. ಪ್ರಾಣಿದಯಾ ಸಂಘಗಳ ಈ ಕಾಳಜಿಯು ಜನಸಾಮಾನ್ಯ ಭಾರತೀಯರಿಗೆ ಮೇಲ್ನೋಟಕ್ಕೆ ಅರ್ಥವಾಗಿರುವಂತೆಯೇ ಭಾಸವಾಗುತ್ತದೆ. ಮತ್ತಷ್ಟು ಓದು »

25
ಜನ

ಕಂಬಳ : ಸಂಸ್ಕೃತಿ ಉಳಿಸಲು ಬೇಕು ನಿಮ್ಮ ಬೆಂಬಲ

– ಡಾ. ಸಂತೋಷ್ ಕುಮಾರ್ ಪಿ.ಕೆ

860897a4867e00f161e4236fd7fe5aeeಕಂಬಳ : ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆಯುವ ಈ ಜಾನಪದ ಶೈಲಿಯ ಕ್ರೀಡೆಯು ಕೇವಲ ಮನೊರಂಜನೆ ಸರಕಾಗಿ ಮಾತ್ರ ಉಳಿದಿರದೆ, ಸಂಸ್ಕೃತಿಯ ಭಾಗವಾಗಿಯೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡುಬಂದಿದೆ. ಜನಮಾನಸದಲ್ಲಿ ಹಚ್ಚಹಸುರಾಗಿ ಉಳಿಯುವ ಹಲವಾರು ಸಂಗತಿಗಳಲ್ಲಿ ಸಂಸ್ಕೃತಿಯ ಭಾಗವಾಗಿರುವ ಇಂತಹ ಕೆಲವಾರು ಸಂಗತಿಗಳು ಎನ್ನಬಹುದು. ಕರ್ನಾಟಕದ ಹಲವಾರು ಭಾಗಗಳಲ್ಲಿ ಇಂತಹ ವಿಶೇಷ ಸಾಂಸ್ಕೃತಿಕ ಆರಣೆಗಳು ಇನ್ನೂ ಅಸ್ತಿತ್ವದಲ್ಲಿವೆ. ಅವುಗಳ ಮೂಲಕವೆ ಆಯಾ ಭಾಗದ ಸಂಸ್ಕೃತಿ ಮೆರುಗು ಪಡೆಯುವ ಜೊತೆಗೆ, ತನ್ನನ್ನು ತಾನು ಬಿಂಬಿಸಿಕೊಳ್ಳುತ್ತದೆ. ಇವುಗಳನ್ನು ಸರಿಯಾದ ಕ್ರಮದಲ್ಲಿ ಅರ್ಥೈಸಿಕೊಂಡರೆ ಭಾರತೀಯ ಸಂಪ್ರದಾಯ ಮತ್ತು ಅದರ ಸತ್ವದ ನೈಜ ಅರಿವು ನಮಗೆ ದೊರಕುತ್ತದೆ. ಆದರೆ, ಆಧುನಿಕರಾಗುವ ಭರದಲ್ಲಿ ಅವುಗಳನ್ನು ಬದಿಗೆ ತಳ್ಳುತ್ತಿರುವ ಸೋ ಕಾಲ್ಡ್ ಆಧುನೀಕರು ಒಂದೆಡೆಯಾದರೆ, ಅದನ್ನು ಶತಾಯಗತಾಯ ಹತ್ತಿಕ್ಕುವ ನಶೆ ಸರ್ಕಾರಗಳಿಗೆ ಮತ್ತು ದಯಾ ಪರಪರ ಸಂಘಗಳಿಗೆ ಏರಿರುವುದು ಮತ್ತೊಂದು ಕಡೆ. ಸಂಪ್ರದಾಯ ಸಂಸ್ಕೃತಿಗಳಿಗೆ ಬಲವಾದ ಪೆಟ್ಟು ನೀಡುವುದು ಬ್ರಿಟೀಷರ ಸರ್ಕಾರದಿಂದ ಹಿಡಿದು ಆಧುನಿಕ ಸರ್ಕಾರ, ನ್ಯಾಯಾಂಗಗಳವರೆಗೂ ಯಾವುದೇ ಅಡೆತಡೆಯಿಲ್ಲದೆ ಬೆಳೆದುಕೊಂಡುಬಂದಿದೆ. ಇದರ ಒಂದು ಝಲಕ್ ಇತ್ತೀಚೆಗೆ ಕಂಬಳದಿಂದ ಪ್ರಾರಂಭವಾಗಿದೆ. ಮತ್ತಷ್ಟು ಓದು »

21
ಜನ

ಪೀರಾಯರ ಒಂದು ಕಥಾನಕ – ನೀಳ್ಗತೆ ಭಾಗ 1

– ಮು. ಅ. ಶ್ರೀರಂಗ,ಬೆಂಗಳೂರು

oldman-walkingಪದ್ಮನಾಭರಾಯರು (ಪೀರಾಯರು) ಕೇಂದ್ರ ಸರ್ಕಾರದ ಗ್ರಾಹಕ  ಸೇವಾ  ಕಚೇರಿಯೊಂದರಲ್ಲಿ ಸುಮಾರು ಮೂವತ್ತು ಮೂರು ವರುಷ ಕೆಲಸಮಾಡಿ ಸ್ವಯಂ ನಿವೃತ್ತಿ ಹೊಂದಿ (ವಿ ಆರ್ ಎಸ್ ) ಇಂದಿಗೆ ಐದು ವರುಷಗಳಾದವು. ನಿನ್ನೆಯ ವರ್ತಮಾನ ಪತ್ರಿಕೆಯಲ್ಲಿ ಕೇಂದ್ರ ಸರ್ಕಾರದ ನೌಕರರಿಗೆ ‘ಅಚ್ಛೆದಿನ್’ ಎನ್ನಬಹುದಾದ ಏಳನೇ ವೇತನ ಆಯೋಗದ ವರದಿ ಓದಿದ ಮೇಲೆ ತಾನು ಅವಸರ ಪಟ್ಟು   ವಿ ಆರ್ ಎಸ್ ತೆಗೆದುಕೊಂಡು,  ಮನೆಗೆ ಬರುತ್ತಿದ್ದ ಧನಲಕ್ಷ್ಮಿಗೆ ಬಾಗಿಲು ಹಾಕಿದೆನೇನೋ  ಎಂಬ  ಸಣ್ಣ ಎಳೆಯ ವಿಷಾದಾವೊಂದು ಅವರ ಮನಸ್ಸಿನಲ್ಲಿ ಬಂದಿದ್ದು ಸುಳ್ಳಲ್ಲ. ಇನ್ನೂ ಐದು ವರ್ಷ ಸರ್ವಿಸ್ ಬಾಕಿ  ಇತ್ತು. ಕಮ್ಮಿ ಎಂದರೂ ಒಂದು ಹತ್ತು ಹನ್ನೆರೆಡು ಲಕ್ಷ  ಹೆಚ್ಚಾಗಿ ಬರುತ್ತಿತ್ತು. ಅವರು ವಿ ಆರ್ ಎಸ್ ಅನ್ನು ತೀರಾ ಆತುರ ಪಟ್ಟು ತೆಗೆದುಕೊಂಡಿರಲಿಲ್ಲ. ತಮ್ಮ ಇಲಾಖೆಗೆ ಮೂರು ತಿಂಗಳ ಮುಂಚಿತವಾಗಿಯೇ ನೋಟಿಸ್ ಕೊಡಬೇಕಾಗಿತ್ತು. ಕೊಟ್ಟರು. ಆ ಅವಧಿಯಲ್ಲಿ ಒಮ್ಮೆ ತಮ್ಮ ಅರ್ಜಿಯನ್ನು ವಾಪಸ್ ತೆಗೆದುಕೊಂಡಿದ್ದರು. ಮತ್ತೆ ವಿ ಆರ್ ಎಸ್ ಗೆ ಅರ್ಜಿ ಹಾಕಿದರು. ಮೂರು ತಿಂಗಳ ಅವಧಿಯಲ್ಲಿ ಬೇಕಾದರೆ ಕೊನೆಯ ದಿನವೂ ಸಹ ವಿ ಆರ್ ಎಸ್ ಬೇಡ ಎಂದು ಅರ್ಜಿಯನ್ನು  ವಾಪಸ್ ಪಡೆಯುವ ಅವಕಾಶವಿತ್ತು. ಅವರ ಮೇಲಾಧಿಕಾರಿ ದೂರವಾಣಿಯಲ್ಲಿ ಮಾತಾಡಿ ‘ರಾಯರೇ ನಿಮ್ಮ ಫೈಲಿನಲ್ಲಿ ಮೂರು ಅರ್ಜಿಗಳಿವೆ. ಇಂದು ಕೊನೆಯ ಅವಕಾಶ. ಏನು ಮಾಡೋಣ ನೀವೇ ಹೇಳಿ’ ಎಂದಾಗ ಕುರುಕ್ಷೇತ್ರದ ಯುದ್ಧ ಇನ್ನೂ ನಡೆಯುತ್ತಿರುವಾಗಲೇ ಶರ ಶಯ್ಯೆಯಲ್ಲಿ ಮಲಗುವ ಪ್ರತಿಜ್ಞೆ ಮಾಡಿದ ಭೀಷ್ಮನಂತೆ ತಮ್ಮ ಸ್ವಯಂ ನಿವೃತ್ತಿಯ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದರು.

ಐದು ವರ್ಷಗಳ ಹಿಂದೆ ಗಾಂಧೀ ಜಯಂತಿ ಆದ ಮಾರನೇ ದಿನ ಅಕ್ಟೋಬರ್ ಮೂರರಂದು ಆಫೀಸು ಪ್ರಾರಂಭವಾದ ಮೇಲೆ ಹನ್ನೊಂದು ಗಂಟೆಯ ಹೊತ್ತಿಗೆ  ತಾವು ಕೆಲಸ ಮಾಡುತ್ತಿದ್ದ ಖುರ್ಚಿ ಬಿಟ್ಟು ಮೇಲೆದ್ದರು. ಅಂದು ಅವರ ಕಣ್ಣು ಸ್ವಲ್ಪ ಜಾಸ್ತಿಯೇ ಒದ್ದೆಯಾಯಿತು. ತಮ್ಮ ಕೆಲಸವನ್ನು  ಅವರು  ತುಂಬಾ  ಇಷ್ಟಪಟ್ಟು,ಬೇಸರವಿಲ್ಲದೆ ಮಾಡಿಕೊಂಡು ಬಂದಿದ್ದರು. ರಾಯರು  ತಮ್ಮ ಕೆಲವು ಮೇಲಾಧಿಕಾರಿಗಳು,ಕೆಲ ಸಹೋದ್ಯೋಗಿಗಳು ಹಾಗೂ ಗ್ರಾಹಕರ ಜತೆ ಸಾಕಷ್ಟು ಕಿರಿಕಿರಿ ಅನುಭವಿಸಿದ್ದರು. ಇಲ್ಲವೆಂದಲ್ಲ. ಆದರೆ ಅದೆಲ್ಲಾ part and parcel of the game ಎಂದು ಅಂದಂದಿಗೆ ಬಿಟ್ಟುಬಿಡುತ್ತಿದ್ದರು. ನಿನ್ನೆಯ ನ್ಯೂಸ್ ಪೇಪರ್ ಸುದ್ದಿ  ನೋಡಿದ ಮೇಲೆ, ಇಂದು ಬೆಳಗ್ಗೆ ಎದ್ದು ಕಾಫಿ ಕುಡಿದ ನಂತರ ತಮ್ಮ ಲ್ಯಾಪ್ ಟಾಪ್ ತೆಗೆದು  ಇಂಟರ್ನೆಟ್ ನಲ್ಲಿ ಗೂಗಲ್ ಸರ್ಚ್ ಗೆ ಹೋಗಿ ತಮ್ಮ ನಿವೃತ್ತಿ ವೇತನ ಎಷ್ಟು ಹೆಚ್ಚಾಗಬಹುದೆಂದು ನೋಡಿದರು. ಅವರು ತಮ್ಮ ಇಲಾಖೆಯ ಅಕೌಂಟ್ಸ್ ವಿಭಾಗದಲ್ಲಿ ಒಂದು ದಿನವೂ ಕೆಲಸ ಮಾಡಿದವರಲ್ಲ. ಇತರೇ ವಿಭಾಗದಲ್ಲೇ ತಮ್ಮ ಇಡೀ ಸರ್ವಿಸ್ ಮುಗಿಸಿದ್ದರು. ಹೀಗಾಗಿ ಏಳನೇ ವೇತನ ಆಯೋಗದ ಮುಖ್ಯಾಂಶಗಳನ್ನು ಓದಿದಾಗ  ಆ  ಗೂಢ, ತಾಂತ್ರಿಕ ಪದಗಳಾವುವೂ ಅವರಿಗೆ ಅರ್ಥವಾಗಲಿಲ್ಲ. ದುಡ್ಡು ಕೈಗೆ  ಬಂದಾಗ ಹೇಗೂ ತಿಳಿಯುತ್ತದಲ್ಲ ಎಂದು ನಿರ್ಲಿಪ್ತರಾಗಿ ಪೇಪರ್ ಓದಲು ಕುಳಿತರು.

ಮತ್ತಷ್ಟು ಓದು »