ವಿಷಯದ ವಿವರಗಳಿಗೆ ದಾಟಿರಿ

Recent Articles

23
ಫೆಬ್ರ

ಅಂದು ರಾತ್ರಿ

– ಕಾಮನಬಿಲ್ಲು

testಅಂದು ಸಿಕ್ಕ ಪಟ್ಟೆ ಕೆಲಸ ಏನೋ ಒಂದು ಸ್ವಲ್ಪ ಅಂದ್ರೆ ಒಂದು ೧೫ ನಿಮಿಷ ಅಷ್ಟೇ ರೀ ತಡ ಆಯಿತು ನಾನು ಎಂದಿನಂತೆ  ಎಂಟಕ್ಕೆ ಹೊರಡುವಾವಳು ಅಂದು ಸಿಕ್ಕೆ ಸಿಕ್ಕುತ್ತೆ ಬಸ್ ಅಂದು ಕೊಂಡವಳೇ ಹೊರಟೆ ..ಆಫೀಸ್ ನಿಂದ ಬಸ್ ಸ್ಟಾಪ್ ಸುಮಾರು ೫ ೧೦ನಿಮಿಷ ನಡೆದರೆ ಸಾಕು  ಅಂದು ತಡ ಆಗಿರೋದರಿಂದ ಸ್ವಲ್ಪ ಬೇಗ ಬಂದೆ ..ಬಂದವಳೇ ಆ ಕಡೆ ಈ ಕಡೆ ನೋಡಿದೆ ಬಸ್ ಕಾಣಲಿಲ್ಲ ಸರಿ ಎಲ್ಲಿ ಹೋಗುತ್ತೆ ಇನ್ನು ಸಾಕಷ್ಟು ಟೈಮ್ ಇದೆಯಲ್ಲ ..ಬರುತ್ತೆ ಅಂತ ಅಲ್ಲೇ ಕುಳಿತೆ..

ನೋಡ್ತೀನಿ ಗಡಿಯಾರದ ಮುಳ್ಳುಗಳು ಎಂಟು ಗಂಟೆ ನಲವತ್ತು ನಿಮಿಷ ತೋರುಸ್ತ ಇದೆ …ನಾನು ತಕ್ಷಣ ಎದ್ದು ನಿಂತು ಮತ್ತೆ ಯಾವುದಾದರು ಬಸ್ ಬರುತ್ತಾ ಅಂತ ನೋಡ್ತಾ ನಿಂತೇ ..ಆಗ  ಭಯ ಅನ್ನೋದು ಕೊಂಚ ಹತ್ತಿರ ಬಂತು ನಿಂತ ಜಾಗದಲ್ಲೇ ಹೊರಡಲು ಶುರು ಮಾಡಿದೆ ಮನಸ್ಸಲ್ಲಿ ಅಯ್ಯೋ ಇನ್ನೊಂದು ಬಸ್ ಅತ್ತಾ ಬೇಕಲ್ಲ ಇಲ್ಲಿ ತಡ ವಾದರೆ ಅಲ್ಲಿ ಬಸ್ ಸಿಕ್ಕುತ್ತಾ ಅನ್ನೋ ಚಿಂತೆ ಕಾಡಿತ್ತು ..ಮನಸ್ಸಿನಲ್ಲೇ ಎಲ್ಲ ದೇವರನ್ನು ಕರೆಯುತ್ತಾ ಇದ್ದೆ…

ಅಷ್ಟರಲ್ಲಿ ಬಂತು ಅಲ್ಲಿಗೆ ಬಸ್ ಒಂದು ಸ್ವಲ್ಪ ಸಮಾದಾನ ಸರಿ ಬೇಗ ಹೊರಟರೆ ಸಾಕು ಎಂದು ಬಸ್ ಏರಿದೆ ..ಆಗ ನನ್ನ ಗಡಿಯಾರದಲ್ಲಿ ಸಮಯ ಒಂಬತ್ತು ಗಂಟೆ ನಾನು ನವರಂಗ್ ಹೋಗೋ ಅಷ್ಟರಲ್ಲಿ ಸರಿಯಾಗಿ ಒಂಬತ್ತು ಇಪ್ಪತ್ತು ಕೊನೆಗೂ ನವರಂಗ್ ಗೆ ಬಂದೆ.. ಕೊಂಚ ಭಯ ನನ್ನಿಂದ ದೂರ ಸರಿದಿತ್ತು ಆದರೆ ಅಲ್ಲೇ ಅದರ ಹತ್ತು ಪಟ್ಟು ಭಯ ನನ್ನಲ್ಲಿ ಕಾಡೋಕೆ ಶುರು ಮಾಡಿತ್ತು ಏಕೆ ಅಂದ್ರೆ ಆ ಬಸ್ ಸ್ಟಾಪ್ ನಲ್ಲಿ  ವಿಜಯನಗರಕ್ಕೆ ಹೋಗೋ ಬಸ್ ಬಂದೆ ಇರಲಿಲ್ಲ.. ಬಂದೆ ಬರುತ್ತೆ ಎಂಬ ನಂಬಿಕೆ ಧೈರ್ಯ ನನ್ನ ಅಲ್ಲಿ ಇದ್ದಿದ್ದು ಸತ್ಯ ಅದೇನೋ ಅಂತಾರಲ್ಲ ತುಂಬಾ ಆದರೆ ಅಮೃತನು ವಿಷ ಆಗುತ್ತೆ ಅಂತ ಅದೇ ನನಗು ಆಗಿದ್ದು ..

ಮತ್ತಷ್ಟು ಓದು »

21
ಫೆಬ್ರ

ಶಾರ್ಕ್ ಮೀನಿಗೆ ಕ್ಯಾನ್ಸರ್ ಬರೊಲ್ವಂತೆ!! – ಸತ್ಯವೆಷ್ಟು ??

– ಆಜಾದ್ ಐ.ಎಸ್,ಕುವೈತ್

Meenಡಾಕ್ಟ್ರೇ..ಮೀನಿಗೆ ಕ್ಯಾನ್ಸರ್ ಬರೊಲ್ವಂತೆ ನಿಜವೇ…?, ನನಗೆ ಕೆಲವು ಕಡೆ ಎದುರಾಗಿರೋ ಪ್ರಶ್ನೆ ಇದು. ಹೌದೇ..? ನನಗೂ ಜಿಜ್ಞಾಸೆಗೆ ಎಡೆಮಾಡಿದ ವಿಷಯವಾಯಿತು-ಮೀನಿನ ಕ್ಯಾನ್ಸರ್ ನಿರೋಧಕತೆಯ ಪ್ರಶ್ನೆ. ಮೀನಿನ ಆರೋಗ್ಯನಿರ್ವಹಣೆ ನನ್ನ ಸಂಶೋಧನಾ ವಿಷಯವಾದರೂ ಈ ಬಗ್ಗೆ ಹೆಚ್ಚು ಓದಿದ ನೆನಪಿಲ್ಲ. ವಿಷಯ ಜಿಜ್ಞಾಸೆಯ ಹುಳ ತಲೆಗೆ ಹೊಕ್ಕರೆ ಅದರ ಬಗ್ಗೆ ತಿಳಿದುಕೊಳ್ಳುವ ಹುಚ್ಚು ಹಂಬಲ ಎಲ್ಲಾ ಸಂಶೋಧಕರಲ್ಲೂ ಇರುತ್ತೆ ಎನ್ನುವುದಕ್ಕೆ ನಾನು ಹೊರತಾಗಿಲ್ಲವಾದ್ದರಿಂದ ಶೋಧಕಾರ್ಯ ಪ್ರಾರಂಭವಾಯ್ತು.
ಮೀನು ಕಶೇರುಕಗಳ ವಿಕಸನಾ ಹಾದಿಯ ಮೂಲ ಜೀವಿ ಅಲ್ಲಿಂದಲೇ ಮಾನವ ವಿಕಾಸಗೊಂಡಿರುವುದು. ಹಾಗಾಗಿ ಕ್ಯಾನ್ಸರ್ ಬರದೇ ಇರಬಹುದಾದ ಗುಣವಿಶೇಷ ಮೀನುಗಳಲ್ಲಿದೆ ಎನ್ನುವುದೇ ಇಲ್ಲಿಯವರೆಗಿನ ನಡೆದಿರುವ ಸಂಶೋಧನೆಗಳಿಂದ ಸಿಧ್ದವಾಗಿರುವ ವಿಷಯ. ಮೀನು, ಉಭಯ ಜೀವಿ ಮತ್ತು ಉರಗಗಳ ಸುಮಾರು ೪೦೦೦ ಮಾದರಿ (ಸ್ಯಾಂಪಲ್) ಗಳು ಕ್ಯಾನ್ಸರ್ ಹೊಂದಿವೆ ಎನ್ನುವುದನ್ನು ಮಾದರಿಗಳ ಅಧ್ಯಯನದ ಮೂಲಕ ತಿಳಿದುಕೊಳ್ಳಲಾಗಿದೆ. ಹಾಗಾದರೆ ಮೀನುಗಳಲ್ಲಿ ಕ್ಯಾನ್ಸರ್ ವಿರೋಧಿಸುವ ಅಥವಾ ಕ್ಯಾನ್ಸರ್ ಗೆ ಕಡಿಮೆ ಗುರಿಯಾಗುವ ಬಗ್ಗೆ ಸುದ್ದಿಯಾಗಿದ್ದು ಏಕೆ?? ಇದರಲ್ಲಿ ಏನೂ ಹುರುಳಿಲ್ಲವೇ..???
ಮತ್ತಷ್ಟು ಓದು »

18
ಫೆಬ್ರ

ಸಮಾನತೆ, ವಿಶ್ವಭ್ರಾತೃತ್ವ ಮತ್ತು ನಾವು

-ಕ.ವೆಂ.ನಾಗರಾಜ್

Sodarate     “ನನಗೆ ಒಂದು ಕನಸು ಇದೆ. ಅದೆಂದರೆ ನನ್ನ ನಾಲ್ಕು ಮಕ್ಕಳು ಒಂದು ದಿನ ಅವರ ಬಣ್ಣಗಳಿಂದಲ್ಲದೆ ಅವರ ಗುಣಗಳಿಂದ ಗುರುತಿಸಲ್ಪಡುವ ದೇಶದಲ್ಲಿ ಬಾಳುತ್ತಾರೆ ಅನ್ನುವುದು” – ಇದು ಅಮೆರಿಕಾದ ದಿ. ಮಾರ್ಟಿನ್ ಲೂಥರ್ ಕಿಂಗ್ ರವರ ಉದ್ಗಾರ. ಇದು ಸಮಾನತೆಯನ್ನು ಬಯಸಿದ, ಅಲ್ಲಿ ಪ್ರಚಲಿತವಿದ್ದ ಕಪ್ಪು-ಬಿಳಿ ಜನಾಂಗ ದ್ವೇಷದ ವಿರುದ್ಧ ಹೋರಾಡಿದ್ದ ವ್ಯಕ್ತಿಯ ಕನಸು. ಸಮಾನತೆ ಅನ್ನುವ ಕಲ್ಪನೆ ಯಾವುದೇ ಆದರ್ಶಮಾನವನ ಗುರಿ. ಸಮಾನತೆ ಅಂದರೇನು ಅನ್ನುವುದಕ್ಕೆ ವಿವರಣೆ ನೀಡುವುದು ಕಷ್ಟವೇ ಸರಿ. ಸರಿಸಮ ಎಂಬುದು ನಿಘಂಟಿನ ಅರ್ಥ. ವ್ಯಾವಹಾರಿಕ ಜಗತ್ತಿನಲ್ಲಿ ಸಮಾನತೆಯ ಕಲ್ಪನೆಯ ಸಾಕಾರ ಹೇಗೆ ಎಂಬುದರ ಕುರಿತು ಚಿಂತಿಸಬೇಕಿದೆ. ಭಾರತದ ಸಂವಿಧಾನದಲ್ಲಿ ದೇಶದ ನಾಗರಿಕರಲ್ಲಿ ಜಾತಿ, ಮತ, ಲಿಂಗ, ಭಾಷೆ – ಇಂತಹ ಯಾವುದೇ ಕಾರಣದಿಂದ ಭೇದ ಕೂಡದು, ಎಲ್ಲರಿಗೂ ಸಮಾನವಾದ ಹಕ್ಕು ಇದೆ ಎಂದಿದೆ. ಆದರೆ ಇಲ್ಲಿ ಜಾತಿಯ ಹೆಸರಿನಲ್ಲಿ, ಮತದ ಹೆಸರಿನಲ್ಲಿ, ಲಿಂಗದ ಹೆಸರಿನಲ್ಲಿ, ಭಾಷೆಯ ಹೆಸರಿನಲ್ಲಿ ಭೇದ ಭಾವ ತಾಂಡವವಾಡುತ್ತಿರುವುದು ದುರ್ದೈವ. ಯಾರು ಈ ಸಮಾನತೆಯನ್ನು ಸಾಧಿಸಬೇಕಿದೆಯೋ ಆ ಆಳುವ ಸ್ಥಾನದಲ್ಲಿರುವ ಜನಪ್ರತಿನಿಧಿಗಳೇ ಇಂತಹ ಭೇದ ಭಾವಗಳನ್ನು ಉಳಿಸಿ, ಪೋಷಿಸಿಕೊಂಡು ಬರುತ್ತಿರುವುದು ಘೋರ ಸತ್ಯ.

ಮತ್ತಷ್ಟು ಓದು »

16
ಫೆಬ್ರ

ಮನದಾಳದ ಮೌನ ಮಾತಾದಾಗ : ಬಾಲ್ಯದ ಮುಗ್ಧ ಭಾವಗಳು -೧

– ರಂಜಿತಾ

mugdteಮುಗ್ಧ ಮನಸ್ಸುಗಳ ಆ ನಮ್ಮ ಮುಗ್ಧತೆಯ ದಿನಗಳನ್ನು ನೆನಪಿಸಿಕೊಂಡರೆ ಎದೆಯಾಳದ ಕಡಲಲ್ಲಿ ಅವಿತಿರುವ ಆ ಸುಂದರ ಮುಗುಳ್ನಗೆಯು ನಮಗೆ ಅರಿವಿಲ್ಲದೆ ತುಟಿಯಂಚಿನಲ್ಲಿ , ಅಮಾವಾಸೆಯ ಕತ್ತಲಲ್ಲೂ ಚಂದ್ರನನ್ನು ಕಂಡಂತೆ ಮೂಡಿಬರುವುದು.ಆಗಿದ್ದ ಆ ನಿಷ್ಕಲ್ಮಶ ಹೃದಯಕ್ಕೆ ಈಗಿನ ಕೋಟ್ಯಂತರ ಬೆಲೆಬಾಳುವ ಸಾವಿರಾರು ಕೋಹಿನುರು ವಜ್ರಗಳ ಬೆಲೆಯೂ ಸಹ ಸರಿಸಾಟಿ ಆಗದು….
ನಕ್ಷತ್ರಗಳಂತೆ ಮಿಂಚುವ ಆ ಕಣ್ಣುಗಳ ಕಾಂತಿಯು ಪ್ರತಿಯೊಂದು ವಸ್ತುವಿನಲ್ಲು ವಿಶೇಷತೆ ಕಂಡು ಅದರ ಸೌಂಧರ್ಯವ ಆಸ್ವಾದಿಸುತಿತ್ತು.. ಅದರ ವಿಷಶತೆಯನ್ನು ಅರಿಯಲು ಮನಸ್ಸು ಚಡಪಡಿಸುತಿತ್ತು… ಆದರೆ ಇಂದಿನ ಈ ದಿನಗಳಲ್ಲಿ ವಿಶೇಷತೆಯ  ವಸ್ತುವನ್ನು ಕಂಡರೂ ಕೇವಲ ಅಥವಾ ಸಹಜ ವೆಂಬ ಪ್ರತಿಕ್ರಿಯೆ ನೀಡುತ್ತೇವೆ..

ಅಂದು ಮಾತಡುತಿದ್ದ ಆ ಮಾತುಗಳಲ್ಲಿ ಸ್ಪಷ್ಟತೆ ಕಾಣದಿದ್ದರೂ , ತೊದಲು ನುಡಿಯ ಮಾತಲ್ಲೇ ಎಲ್ಲರ ಮನ ಗೆಲ್ಲುತಿದ್ದೆವು..ಎಲ್ಲರ ಮುಗುಳ್ನಗೆಗೂ ಕಾರಣವಾಗಿರುತ್ತಿದ್ದೆವು …ತತ್ ಕ್ಷಣಕ್ಕೆ ಅವರ ಎಲ್ಲ ನೋವುಗಳನ್ನು ಮರೆತು ನಮ್ಮ ತುಂಟಾಟಗಳ ಜೊತೆ ಬೆರೆತು ನಗುವಿನ ರಥದಲ್ಲಿ ಸಂಚರಿಸುತ್ತಿದ್ದರು.. ಆದರೆ ಇಂದಿನ ನಮ್ಮ ಈ ಸ್ಪಷ್ಟವಾದ ಮಾತುಗಳು ಒಬ್ಬರಿಗೆ ಹಿತವೆನಿಸಿದರೆ ಮತ್ತೊಬ್ಬರಿಗೆ ಕಹಿ ಬೇವಿನ ರುಚಿಯನ್ನು ಪರಿಚಯಿಸುತ್ತದೆ .. ಒಬ್ಬರಿಗೆ ಸರಿ ಎನ್ಸಿದರೆ ಮತ್ತೊಬ್ಬರಿಗೆ ಆ ಸ್ಪಷ್ಟವಾದ ಮಾತಲ್ಲೂ ತಪ್ಪನ್ನು ಹುಡುಕುವ ತವಕ..

ಅಂದು ನಮ್ಮದು , ನನ್ನವರು ಎಂಬ ನಮ್ಮೊಳಗಿನ ” ಅಹಂ ವೆಂಬ ಪುಟ್ಟ ಮಾನವ ” ತನಗೆ ಹಾಗು ತನ್ನನ್ನು ಇರಿಸಿಕೊಂದವರಿಗೆ ಎಷ್ಟು ಬೇಕೋ ಅಷ್ಟಕ್ಕೇ ಮಾತ್ರ ಸೀಮಿತವಾಗಿದ್ದ ಅವನು ” ಆರೋಗ್ಯಕರ ಅಹಂ ” ಎಂಬ ಬಿರುದಿಗೆ ಮಾತ್ರ ಪಾತ್ರನಾಗಿದ್ದ , ತನ್ನ ಬೇಲಿಯೊಳಗೆ ಮಾತ್ರ ಸಂಚಾರಿಸುತಿದ್ದ.. ಆದರೆ ಇಂದು ಅದೇ ಅಹಂ ಎಂಬ ಮಾನವ ಬೆಳೆದು ದೊಡ್ಡವನಾಗಿ ನಾನು , ನನ್ನದು , ನನಗೆ ಮಾತ್ರ , ನನ್ನ ಸಂತೋಷ , ನನ್ನ ಇಷ್ಟ ಎಂಬ ಇತ್ಯಾದಿ ಗುಣಗಳನ್ನು ಬೆಳೆಸಿಕೊಂಡು ” ಆರೋಗ್ಯ ಹಾನಿಕಾರ ಅಹಂ ” ಎಂಬ ಛೀಮಾರಿ ಹಾಕಿಸಿಕೊಂಡು , ತನ್ನ ತಪ್ಪನ್ನು ತಿಳಿದಿದ್ದರೂ ತಿದ್ದಿಕೊಳ್ಳದೆ , ತನ್ನನ್ನು ಇರಿಸಿಕೊಂದವರಿಗೆ ಹಾಗು ಸುತ್ತಮುತ್ತಲಿನವರಿಗೂ ಸದಾಕಾಲ ಕೇಡು ಬಯುಸುವವನಾಗಿದ್ದಾನೆ.. ತನ್ನ ಬೇಲಿಯನ್ನು ದಾಟಿ , ಇತರರ ಬೇಲಿಯೋಲಗು  ಪ್ರವೇಶಿಸಿ ತನ್ನ ಅಟ್ಟಹಾಸವ  ಮೆರೆದು , ಕೊಪಾಗ್ನಿಯಲ್ಲಿ ಮಿಂದು ಇತರರ ಸಂತಸಕ್ಕೆ ಯಮನಾಗಿದ್ದಾನೆ….

ಮತ್ತಷ್ಟು ಓದು »

14
ಫೆಬ್ರ

ವ್ಯಾಲೆಂಟೈನ್ಸ್ ಡೇ ಮತ್ತು ಅದರ ಒಳ ಸುಳಿಗಳು

ಮಹೇಶ್ ಪ್ರಸಾದ್ ನೀರ್ಕಜೆ

ವ್ಯಾಲೆಂಟೈನ್ಸ್ ಡೇಹೌದ್ರೀ, ನಾನು ಕನ್ನಡ ಪ್ರೇಮಿಯೇ. ಇಂಗ್ಲಿಷ್ ವ್ಯಾಮೋಹದಿಂದ ಶೀರ್ಷಿಕೆಯಲ್ಲಿ ‘ಪ್ರೇಮಿಗಳ ದಿನ’ ಅನ್ನದೇ ವ್ಯಾಲೆಂಟೈನ್ಸ್ ಡೇ ಅಂದಿದ್ದಲ್ಲ. ಪ್ರೇಮಿಗಳ ದಿನ ಅಂತ ಹೇಳದೇ ಇದ್ದಿದ್ದಕ್ಕೆ ಕಾರಣ ತುಂಬಾ ಇದೆ. ಯಾಕೆಂದರೆ ವ್ಯಾಲೆಂಟೈನ್ಸ್ ಡೇ ಎನ್ನುವುದರ ಅರ್ಥ ನಾವೆಲ್ಲರು ತಿಳಿದಿರುವಂತೆ ಪ್ರೇಮಿಗಳ ದಿನ ಅಲ್ಲ! ಅದು ಹೇಗೆ ಅಂತ ಹೇಳುವ ಮೊದಲು ಇನ್ನೊಂದು ವಿಷಯ ಸ್ಪಷ್ಟಪಡಿಸುತ್ತೇನೆ. ಸಾಮಾನ್ಯವಾಗಿ ವ್ಯಾಲ್ಲೆಂಟೈನ್ಸ್ ಡೇ ವಿರೋಧಿಸುವ ಬಲ ಪಂಥೀಯರಿಗೂ, ಅಥವಾ ಏನೇ ಇದ್ದರೂ ವ್ಯಾಲೆಂಟೈನ್ಸ್ ಡೇ ಎನ್ನುವುದನ್ನು ಮಾನವತೆಯ ಮಟ್ಟಕ್ಕೆ ಎತ್ತರಿಸಿ ಸಮರ್ಥಿಸುವ ಎಡ ಪಂಥೀಯರಿಗೂ (ಕೆಲ ಎಡಪಂಥೀಯರು ಕೂಡ ಬೇರೆ ಕಾರಣಕ್ಕೆ ವ್ಯಾಲೆಂಟೈನ್ಸ್ ಡೇ ವಿರೋಧಿಸುತ್ತಾರೆ) ಈ ಬರಹ ಅಪಥ್ಯವಾಗಬಹುದು. ನನ್ನ ಪ್ರಯತ್ನವೇನಿದ್ದರೂ ಇವೆರಡನ್ನು ಬಿಟ್ಟು ಅವುಗಳಿಗಿಂತಲೂ ಮೇಲಿನ ಮಟ್ಟದಲ್ಲಿ ಮೂರನೇ ದೃಷ್ಟಿಕೋನವೊಂದನ್ನು ಅನ್ವೇಷಿಸುವುದು.

ಮೊದಲನೆಯದಾಗಿ ವ್ಯಾಲೆಂಟೈನ್ಸ್ ಡೇ ಮೂಲ ಕೆದಕಿದರೆ ನಮಗೆ ಇತಿಹಾಸದಲ್ಲಿ ಸಿಗುವುದು ಒಬ್ಬ ಪ್ರೇಮಿಯೋ ರಸಿಕನೋ ಅಥವಾ ಒಂದು ಪೌರಾಣಿಕ ಕಥೆಯ ಜನಪ್ರಿಯ ಪಾತ್ರವೋ ಅಲ್ಲ. ವ್ಯಾಲೆಂಟೈನ್ಸ್ ಎಂಬುದು ಮೂಲತಹ ಒಬ್ಬ ಸಂತನ ಹೆಸರು. ಇನ್ನೂ ಸರಿಯಾಗಿ ಹೇಳಬೇಕೆಂದರೆ ಕ್ರಿಶ್ಚಿಯಾನಿಟಿ ಇನ್ನೂ ಪಸರಿಸುತ್ತಿದ್ದ ಕಾಲದಲ್ಲಿ ಪೆಗನರ (ಶಬ್ದಾರ್ಥ : ಅನಾಗರಿಕ) ಕೈಯಲ್ಲಿ ಸಾಯುತ್ತಿದ್ದ ಕ್ರೈಸ್ತ ಸಂತರನ್ನು ವ್ಯಾಲೆಂಟೈನ್ ಎಂದು ಕರೆಯಲಾಗುತ್ತಿತ್ತಂತೆ. ಮತ್ತಷ್ಟು ಓದು »

13
ಫೆಬ್ರ

ಹಿಮ್ಮೇಳ – ಪಳಿಯುಳಿಕೆ ಒಂದರ ಉಳಿವಿಗೆ ಒಂದು ಪ್ರಯತ್ನ

– ರಾಗು ಕಟ್ಟಿನಕೆರೆ,ಯಕ್ಷಮಿತ್ರ

himmela_n“ಹೋರಾಟ ಅಂದ್ರೆ ಹೊಡೆದಾಟ ಅಲ್ಲ ಕಾಣ್ರೋ” ಅಂತ ನಮ್ಮ ಮಾಸ್ತರು ಒಬ್ರು ಹೇಳ್ತಾ ಇದ್ರು. ನಮ್ಮ ಕನ್ನಡ ಸಂಸ್ಕೃತಿ ಉಳಿಬೇಕು ಅಂತ ನಾವು ಕಲ್ಲು ತೂರಾಡ್ಲೂ ಬಹುದು ಅಥವಾ ನಮ್ಮ ಸಂಸ್ಕೃತಿ ಯಾವುದು, ನಾವು ದಿನನಿತ್ಯ ಅದನ್ನ ಪಾಲಿಸ್ತಾ ಇದೀವಾ ಅಂತ ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಲೂ ಬಹುದು. ಕನ್ನಡದಲ್ಲಿ ಬೋರ್ಡೇ ಹಾಕಲ್ಲ ಅನ್ನೋ ನಾವು, ಹಾಕಿರೋ ಬೋರ್ಡಗಳಲ್ಲಿ ಎಷ್ಟು ಕೆಟ್ಟದಾಗಿ ಕನ್ನಡ ಬರಿತೀವಿ, ಎಷ್ಟು ತಪ್ಪು ತಪ್ಪಾಗಿ ಬರಿತೀವಿ ಅಂತ ನೋಡ್ತೀವಾ, ಪ್ರತಿಭಟಿಸ್ತೀವಾ? ಬೆಂಗಳೂರು ಬಸ್ ನಿಲ್ದಾಣಗಳಲ್ಲೇ ನೋಡಿ: ಅಲ್ಸಸೂರು, ಹೊಯ್ಸಸಳ, ವಟರ್ ಟ್ಯಾಂಕ್ ಇತ್ಯಾದಿ. ನಮ್ಮ ಕನ್ನಡದ ಕಲೆಗಳು ನಮ್ಮ ಸಂಸ್ಕೃತಿಯ ಮೂರ್ತರೂಪಗಳು. ಈ ಕಲೆ ರೂಪದಲ್ಲಾದ್ರು ನಮ್ಮ ಸಂಸ್ಕೃತಿ ಉಳಿಬಹುದು ಅಂದ್ಕೋಬಹುದು. ಆದ್ರೆ ನಮ್ಮದೇ ಆದ ಕಲೆಗಳು ನಾಶ ಆಗ್ತಾ ಇದ್ರೂ ನಾವು ಫಿಲ್ಮ್ ನೋಡ್ಕೊಂಡು ಅರಾಮಿದ್ರೆ ನಮ್ಮ ಸಂಸ್ಕೃತಿ ಉಳಿಯತ್ತಾ? ಉಳಿಯತ್ತೋ ಇಲ್ವೋ ಆದ್ರೆ ಎನ್ ಕಳ್ಕೊಳ್ತಾ ಇದೀವಿ ಎನಾದ್ರು ಮಾಡ್ಲಿಕ್ಕೆ ಸಾದ್ಯನಾ ಅಂತಾದ್ರೂ ನೋಡ್ಬೇಕಲ್ವಾ?

ಕಲೆಗಳು ಅಂದ ತಕ್ಷಣ ನಮ್ಮ ಕನ್ನಡದ ಕಲೆಗಳಲ್ಲಿ ಎದ್ದು ಕಾಣೋದು ಯಕ್ಷಗಾನ ಬಯಲಾಟ. ಯಕ್ಷಗಾನ ಬಯಲಾಟ ಕೇವಲ ಕಲೆಯಷ್ಟೇ ಅಲ್ಲ ಇದು ನಮ್ಮ ಸಂಸ್ಕೃತಿಯ ಪಳಿಯುಳಿಕೆನೂ ಹೌದು. ಯಕ್ಷಗಾನದಲ್ಲಿ ಮಾತಾಡೋ ತರಾನೇ ಬೇರೆ – ಒಂದು ರೀತಿ ಚಂದ, ಶೃತಿ ಬದ್ಧ. ಇವತ್ತಿಗೂ ಹಳ್ಳಿಕಡೆ ಹೋದ್ರೆ ನಮ್ಮ ಈಡಿಗ ಸಮುದಾಯದವರು, ಹವ್ಯಕರು ಎಲ್ಲರೂ ಒಂತರಾ ಹಾಡಿದಾಗೆ ಶೃತಿಗೆ ಸರಿಯಾಗಿ ಮಾತಾಡ್ತಾರೆ. ಅದು ನಮ್ಮ ಮೂಲ ಕನ್ನಡ ಮಾತಾಡೊ ರೀತಿ ಇದ್ದಿರಬಹುದು. ಅದು ಯಕ್ಷಗಾನದಲ್ಲಿ ಉಳ್ಕೊಂಡಿದೆ ಅಂತ ಅನ್ನಿಸುತ್ತೆ. ಈಗ ತಮಿಳುನಾಡಿನಲ್ಲೇ ಹೆಚ್ಚು ಪ್ರಸಿದ್ಧವಾಗಿ ಇರೋ ನಮ್ಮ ಕರ್ನಾಟಕ ಸಂಗೀತದಲ್ಲಿನ ತಾಳಗಳ ಮೂಲರೂಪ ನಮ್ಮ ಯಕ್ಷಗಾನದಲ್ಲಿ ಇದೆ ಅಂತ ಡಾ.ರಾಘವ ನಂಬಿಯಾರ್ ಅಂತ ಒಬ್ಬ ಯಕ್ಷಗಾನ ಸಂಶೋಧಕರು ಪ್ರತಿಪಾದಿಸಿದಾರೆ. ಎಷ್ಟೋ ತಾಳಗಳು, ಕುಣಿತದ ಶೈಲಿ, ಹಾಡಿನ ಧಾಟಿ ಎಲ್ಲಾ ಕಳದು ಹೋಗಿದೆ ಅಂತೆ. ನಮ್ಮ ಬಾಡಿ ಲಾಂಗ್ವೇಜೇ ಬದಲಾಗಿಲ್ವಾ? ಇವನ್ನೇಲ್ಲಾ ನಂಬಿಯಾರರು ತಮ್ಮ ಪುಸ್ತಕ “ಹಿಮ್ಮೇಳ” ಅನ್ನೋದ್ರಲ್ಲಿ ಬರೆದಿಟ್ಟು ನಮ್ಮ ಯಕ್ಷಾಗನ ಮೂಲರೂಪ ಹಾಳಾಗದಹಾಗೆ ಉಳಿಬೇಕು ಅಂತ ಪ್ರಯತ್ನ ಮಾಡ್ತಾ ಇದಾರೆ.

ಮತ್ತಷ್ಟು ಓದು »

11
ಫೆಬ್ರ

ಮಂಗಳನ ಜೀವಿಗಳು ಭೂಮಿಗೆ ಬರುತ್ತಿವೆ

-ವಿಷ್ಣು ಪ್ರಿಯ

Mangalaಮಂಗಳನಲ್ಲಿ ಇರುವಂಥ ಜೀವಿಗಳನ್ನು ನಾವು ಭೂಮಿಗೆ ತೆಗೆದುಕೊಂಡು ಬರುತ್ತಿದ್ದೇವೆ. ನೀಲಿ ಬಣ್ಣದ ಈ ಜೀವಿಗಳ ಬಗ್ಗೆ ಭೂಮಿಯಲ್ಲಿಯೇ ಅಧ್ಯಯನ ನಡೆಸುತ್ತೇವೆ. ಅವು ಭೂಮಿಯಲ್ಲಿ ಬದುಕುವ ಶಕ್ತಿ ಹೊಂದಿವೆಯೇ ಎಂಬುದನ್ನು ಪರೀಕ್ಷಿಸುತ್ತೇವೆ….

ಹೀಗಂತ ನಾಸಾದ ವಿಜ್ಞಾನಿಗಳು ಘೋಷಿಸಿದ್ದಾರೆ. ಮಂಗಳನ ಜೀವಿಗಳು ಎಂದಾಕ್ಷಣ ಹಾಲಿವುಡ್ ಚಲನಚಿತ್ರಗಳು ನೆನಪಾದರೆ ಅದರಲ್ಲಿ ಅಚ್ಚರಿಯಿಲ್ಲ. ಸ್ಫೀಶೀಸ್-2, ಮೆನ್ ಇನ್ ಬ್ಲಾಕ್ 3, ಪ್ರಾಮೆಥೌಸ್ ಮೊದಲಾದ ಚಿತ್ರಗಳೆಲ್ಲ ಅನ್ಯಗ್ರಹಗಳ ಜಿವಿಗಳ ಕಲ್ಪನೆಯನ್ನಿಟ್ಟುಕೊಂಡೇ ನಿರ್ಮಿಸಿರುವಂಥದ್ದು. ಬೇರೆ ಗ್ರಹದ ಜೀವಿಗಳು ಭೂಮಿಗೆ ಬಂದರೆ ಹೇಗಿರುತ್ತದೆ ಎಂಬುದನ್ನು ಹಲವು ಶತಮಾನಗಳ ಹಿಂದಿನಿಂದಲೇ ನಾವು ಕಲ್ಪಿಸಿಕೊಳ್ಳುವುದಕ್ಕೆ ಶುರು ಮಾಡಿದ್ದೆವು. ಆದರೆ ಆ ಕಲ್ಪನೆಗಳು ವಾಸ್ತವ ರೂಪಕ್ಕೆ ಬರುತ್ತಿರುವುದು ಮಾತ್ರ ಈಗ!ಮಂಗಳನಲ್ಲಿರುವ ಜೀವಿಗಳು ಇಲ್ಲಿಗೆ ಬರುತ್ತಿವೆ ಎಂದರೆ ಅವು ಹೇಗಿರಬಹುದು ಎಂಬ ಯೋಚನೆ ಹುಟ್ಟಿಕೊಳ್ಳುವುದು ಸಹಜ. ಸಿನೆಮಾಗಳಲ್ಲಿ ನೋಡಿದಂತೆ ಚಿತ್ರ-ವಿಚಿತ್ರ ಆಕಾರದ ಮಾನವರಂಥ ಜೀವಿಗಳು, ತಲೆ ಮೇಲೆ ಕೋಡು ಇರುವಂಥ ಮನುಷ್ಯರು, ಹಾರು ತಟ್ಟೆಗಳಲ್ಲಿ ಹಾರಾಡಿಕೊಂಡು ಬಂದು ಮನುಷ್ಯರ ಮೇಲೆ ಯುದ್ಧ ಮಾಡುವಂಥ ಜೀವಿಗಳು… ಅಲ್ಲ, ಈ ಸಿನೆಮಾಗಳು, ಫಿಕ್ಷನ್ನುಗಳಲ್ಲಿ ಅನ್ಯಗ್ರಹ ಜೀವಿಗಳ ಬಗೆಗಿನ ಕಲ್ಪನೆಯೇ ಅದ್ಭುತ. ಆದರೆ ಮಂಗಳಗ್ರಹದಿಂದ ತರಲಾಗುತ್ತಿರುವ ಜೀವಿಗಳು ಇಂಥವಲ್ಲ.

ಮತ್ತಷ್ಟು ಓದು »

5
ಫೆಬ್ರ

ವಸಾಹತು ಪ್ರಜ್ಞೆಯ ವಿಶ್ವರೂಪ ೧ : ನಮ್ಮೊಳಗಿನ ಎರಡು ಜಗತ್ತುಗಳು

Prof Baluಕನ್ನಡ ನಿರೂಪಣೆ: ರಾಜಾರಾಮ ಹೆಗಡೆ

ಭಾರತೀಯ ವಿದ್ಯಾವಂತರಲ್ಲಿ ಇರಬಹುದಾದ ಎರಡು ಜಗತ್ತುಗಳ ಕುರಿತು ಗಮನ ಹರಿಸೋಣ: ಒಂದು ಜಗತ್ತು ಸಾಂಪ್ರದಾಯಿಕವಾಗಿ ನಾವು ಬೆಳೆದು ಬಂದ ಜಗತ್ತಾಗಿದೆ. ಅಲ್ಲಿ ನಮ್ಮ ಅಪ್ಪ ಅಮ್ಮ, ಬಂಧು-ಬಳಗ, ನೆರೆ-ಹೊರೆಯವರು ನಮಗೆ ಈ ಪ್ರಪಂಚದಲ್ಲಿ ಹೇಗೆ ವ್ಯವಹರಿಸಬೇಕೆಂಬುದನ್ನು ಕಲಿಸಿರುತ್ತಾರೆ. ಅನೇಕ ಆಚರಣೆಗಳನ್ನು, ಆಲೋಚನಾ ಕ್ರಮವನ್ನು ಒಳಗೊಂಡ ಜೀವನ ಶೈಲಿಯನ್ನು ಕಲಿಸಿರುತ್ತಾರೆ.

ನಂತರ ನಾವು ವಿದ್ಯಾವಂತರಾದಂತೆಲ್ಲ ಮತ್ತೊಂದು ಜಗತ್ತಿಗೆ ತೆರೆದುಕೊಳ್ಳುತ್ತೇವೆ. ಇದು ವಿಚಾರಗಳ ಜಗತ್ತು. ಅದು ನಮ್ಮ ಆಧುನಿಕ ಶಿಕ್ಷಣವು ನಮಗೆ ಪರಿಚಯಿಸುವ ಜಗತ್ತು. ನಮ್ಮ ಕುಟುಂಬ, ಜಾತಿ ಮುಂತಾದ ಸಾಂಪ್ರದಾಯಿಕ ಸಮಾಜದಾಚೆಗೆ ಇರಬಹುದಾದ ಸಾರ್ವಜನಿಕ ಜಗತ್ತು ಇಂಥ ವಿಚಾರಗಳ ತಳಹದಿಯ ಮೇಲೆ ನಿರ್ಮಾಣವಾಗಿದೆ. ಹಾಗಾಗಿ ಅದು ನಮಗೆಲ್ಲ ಒಂದು ಆದರ್ಶ ಮಾದರಿ ಎಂದುಕೊಂಡಿರುತ್ತೇವೆ.

ಮತ್ತಷ್ಟು ಓದು »

4
ಫೆಬ್ರ

“ವಿಶ್ವರೂಪ” ದರ್ಶನವಂತೂ ಆಗುತ್ತಿದೆ….!

– ಚಕ್ರವರ್ತಿ ಸೂಲಿಬೆಲೆ

Vishwaroopamಸೆಕ್ಯುಲರ್ ಭಾರತ!
ಇನ್ನಾದರೂ ಹಾಗೆ ಕರೆಯೋಕೆ ನಾಚ್ಕೋಬೇಕು. ಇಸ್ಲಾಮ್ ಭಾರತ ಅಂತಾನೋ ಹಿಂದೂ ವಿರೋಧಿ ಭಾರತ ಅಂತಾನೋ ಕರೆದರೆ ಒಂದಷ್ಟು ಅತೃಪ್ತ ಆತ್ಮಗಳು ತೃಪ್ತಿಗೊಂಡಾವು. ಕಳೆದ ಎಂಟ್ಹತ್ತು ದಿನಗಳ ನಾಟಕ ನೋಡಿದರೆ ಹಾಗನ್ನಿಸುವುದು ಸಹಜವೇ.

‘ವಿಶ್ವರೂಪಮ್’ ಬಿಡುಗಡೆಗೆ ಕಿರಿಕ್ ಅಯ್ತು. ಹತ್ಯೆ ಮಾಡುವ ಮುನ್ನ ಭಯೋತ್ಪಾದಕ ಅಲ್ಲಾಹನಿಗೆ ವಂದಿಸಿ ಹೊರಡುವುದನ್ನು ತೋರಿಸಿರುವುದೇ ಗಲಾಟೆಗೆ ಕಾರಣವಂತೆ. ತಮಿಳುನಾಡು ಸರ್ಕಾರ ಸಿನೆಮಾ ತಡೆಹಿಡಿಯಿತು. ಬೇರೆಬೇರೆ ರಾಜ್ಯಗಳಲ್ಲಿ ಬಿಡುಗಡೆಗೆ ಮುನ್ನ ಮುಸಲ್ಮಾನ ಸಂಘಟನೆಗಳು ಪ್ರತಿಭಟನೆ ಮಾಡಿದವು. ದಾವಣಗೆರೆಯಲ್ಲಿ ಕೋಮು ಗಲಭೆಯೇ ನಡೆಯಿತು. ತಮಿಳುನಾಡಿನ ಸಿನೆಮಾ ಮಂದಿರದಲ್ಲಿ ಪೆಟ್ರೋಲ್ ಬಾಂಬ್ ಎಸೆಯಲಾಯ್ತು. ಅಚ್ಚರಿಯೇನು ಗೊತ್ತೆ? ಜನಾರ್ಧನ ಪೂಜಾರಿಯವರು ಬಾಯಿ ತೆರೆಯಲೇ ಇಲ್ಲ. ಬುದ್ಧಿ ಮಾರಿಕೊಂಡು ಬದುಕುವ ಕೆಲವರು ಬೆಂಗಳೂರಿನಲ್ಲಿ ತಣ್ಣಗೆ ಕುಳಿತುಬಿಟ್ಟಿದ್ದಾರೆ.

ಯಾಕೆ ಸ್ವಾಮಿ? ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆಯೇ ಇಲ್ವೆ? ಈಗ ನಿಮಗೆ ಧರ್ಮದ ಹೆಸರಲ್ಲಿ ಕ್ರೌರ್ಯ ಕಾಣುವುದೆ ಇಲ್ಲವೆ?

ಮತ್ತಷ್ಟು ಓದು »

31
ಜನ

ಕುಚ್ಚಿನ ಟೋಪಿಯ ಬೆಚ್ಚನೆ ಬೇಂದ್ರೆ, ನೆನಪುಗಳ ಗುಂಗಿನಲ್ಲಿ…

– ಅಶೋಕ ಶೆಟ್ಟರ್

Bendre(ಇಂದು, ಅಂದರೆ ಜನವರಿ ಮೂವತ್ತೊಂದು., ದ.ರಾ ಬೇಂದ್ರೆ ಜನಿಸಿದ ದಿನ. ಬೇಂದ್ರೆ ಕಾವ್ಯ ಒಂದು ಕಣಜ. ಮೊಗೆದಷ್ಟೂ ಒಸರುವ ಒರತೆ. ಜಗತ್ತಿನ ಶ್ರೇಷ್ಠ ಕವಿಗಳ ಸಾಲಿನಲ್ಲಿ ನಿಲ್ಲಬಲ್ಲ ಪ್ರತಿಭೆ.ಅವರು ಕನ್ನಡ ಕಾವ್ಯದ ಬಹುಮುಖ್ಯ ಧ್ವನಿ.ಅವರ ಕುರಿತಾಗಿ ಅಶೋಕ್ ಶೆಟ್ಟರ್ ಅವರು ೨ ವರ್ಷದ ಹಿಂದೆ ಬರೆದ ಈ ಲೇಖನ ಈಗ ಇಲ್ಲಿ, “ನಿಲುಮೆ”ಯ ಓದುಗರಿಗಾಗಿ – ನಿಲುಮೆ)

“ಅಲ್ಲಿ ಸಂಪಿಗೆಯಿತ್ತು ಪಾರಿಜಾತಕವಿತ್ತು
ಮಾವು ಮಲ್ಲಿಗೆಯಿತ್ತು ಮನೆಯಿದುರು
ಮುಗಿಲ ಮಲ್ಲಿಗೆಯಿತ್ತು ತೆಂಗಿತ್ತು ಹಲಸಿತ್ತು
ನಿಂಬಿಯ ಇಂಬಿತ್ತು ಎಡೆಎಡೆಗೆ
ಹೊಂಗೆಯ ಸಾಲಿತ್ತು ಕಣ್ಮುಂದೆ ಕೆರೆಯಿತ್ತು
ಗುಡ್ಡದ ನೆರೆಯಿತ್ತು ಅದರಾಚೆಗೆ… …..”

“ಸಖಿಗೀತ”ದಲ್ಲಿ ಬರುವ ಈ ಸಾಲುಗಳು ಬೇಂದ್ರೆ ಕಂಡ ಸಾಧನಕೇರಿಯ ಶಬ್ದಚಿತ್ರಗಳು.ನಿನ್ನೆ ಅಂದರೆ ೨೯ ಜನವರಿ ೨೦೧೧ ರಂದು ಮಧ್ಯಾಹ್ನ ಒಂದೆರಡು ತಾಸು ಧಾರವಾಡದ ಬೇಂದ್ರೆ ಭವನದಲ್ಲಿ ಇದ್ದೆ. ಬೇಂದ್ರೆ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಶಾಮಸುಂದರ ಬಿದರಕುಂದಿಯವರೊಂದಿಗೆ ಮಾತಾಡಿ ಆಮೇಲೆ ಬೇಂದ್ರೆಯವರ ಮೂಲನಿವಾಸ “ಶ್ರೀಮಾತಾ”ದಲ್ಲೇ ಇರುವ ಅವರ ಪುತ್ರ ವಾಮನ ಬೇಂದ್ರೆಯವರ ಜೊತೆ ಸ್ವಲ್ಪ ಹೊತ್ತು ಕಳೆದೆ. ಬೇಂದ್ರೆ ಭವನದ ಮೇಲಂತಸ್ತಿನ ಬಾಲ್ಕನಿಯಿಂದ ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ನವೀಕೃತ ಸಾಧನಕೆರೆಗೆ ಹೋಗುವ ದಾರಿ,ಉದ್ದಕ್ಕೂ ಕಟಾಂಜನ ಇವನ್ನೆಲ್ಲ ನೋಡುತ್ತಿದ್ದಾಗ ನನ್ನ ಮನಸಿನಲ್ಲಿ ಅಚ್ಚೊತ್ತಿದಂತಿರುವ ಆ ಪರಿಸರದ ಬೇರೆಯದೇ ಚಿತ್ರದ ಮೇಲೆ ನಾನು ಇವುಗಳನ್ನು ಸುಪರಿಂಪೋಸ್ ಮಾಡಬೇಕಾಗಿ ಬಂತು.ನನ್ನ ಮನಸಿನಲ್ಲಿ ಸುಳಿಯುತ್ತಿದ್ದುದು ೩೦-೩೫ ವರ್ಷಗಳ ಹಿಂದೆ ಬೇಂದ್ರೆ ಮನೆ ಇರುವ ಸಾಲಿಗೆ ಎದುರಾಗಿ,ಗೋವಾಕ್ಕೆ ಹೋಗುವ ಮುಖ್ಯರಸ್ತೆಯಾಚೆ, ಸಾಧನಕೆರೆಯ ಒಂದು ಮೇರೆಯಾಗಿರುವ, ನಾನು ಪೋಲಿಸ್ ವಸತಿಗೃಹಗಳಿಗೆ ಸಾಗಿ ಹೋಗುತ್ತಿದ್ದ, ಕಿರಿದಾದ ಮಣ್ಣ ರಸ್ತೆ, ಸಾಧನಕೆರೆಯ ಇನ್ನೊಂದು ಮೇರೆಯಾಗಿ ಆ ಕೆರೆಯ ಏರಿ, ಅದರಾಚೆ ಭತ್ತದ ಗದ್ದೆ, ತೋಟ ಪಟ್ಟಿಗಳು,ಆಗೊಂದು ಈಗೊಂದರಂತೆ ಗೋವಾಕ್ಕೆ ಹೋಗುತ್ತಿದ್ದ ಖಾಸಗಿ ಅಥವಾ ಸರಕಾರಿ ವಾಹನಗಳು,ಕೆಲಗೇರಿ ಹಾಗು ಮುಗದ ಗ್ರಾಮಗಳ ನಡುವಿನ ಕುರುಚಲು ಕಾಡುಗಳಲ್ಲಿ ಸಂಗ್ರಹಿಸಿದ ಕಟ್ಟಿಗೆಗಳ ಹೊರೆ ಹೊತ್ತು ಓಟದ ನಡಿಗೆಯಲ್ಲಿ ಧಾರವಾಡದತ್ತ ಹೋಗುತ್ತಿದ್ದ ಬಡಪಾಯಿ ಹೆಂಗಳೆಯರು, ಮುಕ್ತಾಯಗೊಳ್ಳಬೇಕು ಎಂಬ ಯಾವ ಧಾವಂತವೂ ಇಲ್ಲದೇ ನಿಷ್ಕಾರಣವೆಂಬಂತೆ ನಿಷ್ಕರುಣೆಯಿಂದ ಸುರಿಯುತ್ತಿದ್ದ ಜಿಡ್ಡುಮಳೆ,ಅಂಚಿನಲ್ಲೆಲ್ಲ ಜೊಂಡು ಬೆಳೆದಿದ್ದ ಚಿಕ್ಕದೂ ಅಲ್ಲದ ಬಹಳ ವಿಸ್ತಾರವೂ ಅಲ್ಲದ ಸಾದನಕೆರೆ..ಹಳೆ ಕಾಲದ ಕೆಂಪು ಹಂಚಿನ ಮನೆಗಳು,ಸುಶಿಕ್ಷಿತ ಜನ..ಆ ಪರಿಸರದಲ್ಲಿದ್ದಷ್ಟೂ ಹೊತ್ತು ಮನಸಿನಲ್ಲಿ ನೆನಪುಗಳ ಸಂತೆ ನೆರೆದಿತ್ತು. “ಸಾಧನಕೇರಿಯ ಸಂಜೆ ಮಳೆ ಸೆಳಕುಗಳು” ಎಂಬ ನನ್ನದೊಂದು ಕವಿತೆಯಲ್ಲಿ ಸಾದನಕೇರಿಯ ಇತರೆ ಚಿತ್ರಗಳೊಂದಿಗೆ ಬೇಂದ್ರೆ ನನ್ನ ಮನಸಿನಲ್ಲಿ ಮೂಡಿದ್ದು ಹೀಗೆ:
ಮತ್ತಷ್ಟು ಓದು »