ಮುಂದಿನ ಪೀಳಿಗೆಗೆ ನಾವು (ಕನ್ನಡ ಮಾಧ್ಯಮ) ಏನಂತ ಹೇಳಬಹುದು….
-ಅರವಿಂದ್
ಒಂದಾನೊಂದು ಕಾಲದಲ್ಲಿ ಕರ್ನಾಟಕದಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಇತ್ತು. ಆಗ ನಾವುಗಳು ನಮ್ಮ ಗುರುಗಳನ್ನು ಬಹಳ ಗೌರವದಿಂದ, ಭಯಮಿಶ್ರಿತ ಪುಳಕದಿಂದ ಅವರು ನಮ್ಮೆದುರಿಗೆ ಬಂದರೆ ಭೂಮಿಯೇ ನಮ್ಮ ಮೇಲೆ ಬಿದ್ದಂತೆ ಭಾಸವಾಗಿ, ಅವರುಗಳು ಹೇಳಿದ ಪಾಠಗಳನ್ನು, ಪದ್ಯ-ಗದ್ಯಗಳನ್ನು, ಲೆಕ್ಕಗಳನ್ನು, ವ್ಯಾಕರಣವನ್ನು ಚಾಚೂ ತಪ್ಪದೆ ಓದಿಕೊಂಡು ಶಾಲೆಗೆ ಹೋಗುತ್ತಿದ್ದೆವು… ನಾವುಗಳೆಲ್ಲರೂ ಕನ್ನಡದಲ್ಲೇ ಪಾಠ ಕೇಳುತ್ತಿದ್ದೆವು ಮತ್ತು ನಾವುಗಳು ಅದ್ಯಾವುದೇ ಭಾಷೆಯವರಾಗಿದ್ರೂ ಕನ್ನಡದಲ್ಲೇ ಮಾತಾಡ್ತಿದ್ದೆವು.
ನಮ್ಮ ಗುರುಗಳು ತರಗತಿಗೆ ಬಂದ ಕೂಡಲೇ ಗೌರವ ಸೂಚಕವಾಗಿ ನಮಸ್ತೇ ಗುರುಗಳೇ… ಅಂತ ಒಕ್ಕೊರಲಾಗಿ ಹೇಳಿ, ಅವರೂ ಸೂಚಿಸಿದ ನಂತರವೇ ನಮ್ಮ ನಮ್ಮ ಜಾಗದಲ್ಲಿ ಕುಳಿತುಕೊಳ್ಳುತ್ತಿದ್ದೆವು. ನಮ್ಮ ಮಾತೃಭಾಷೆಯಲ್ಲೇ ಪಾಠ ಕೇಳುತ್ತಿದ್ದ ನಾವು, ಜಗತ್ತಿನ ಅದೆಷ್ಟು ವಿಷಯಗಳನ್ನು ಕನ್ನಡದಲ್ಲೇ ತಿಳಿದುಕೊಳ್ಳುತ್ತಿದ್ದೆವು ಗೊತ್ತಾ…
‘ಲೈಫ್ ಆಫ್ ಪೈ’ ಎಲ್ಲರಲ್ಲೂ ಕಾಡುವಂತಾಗಲಿ…
– ಚಕ್ರವರ್ತಿ ಸೂಲಿಬೆಲೆ
ಒಂದು ನಾಟಕ, ಸಿನಿಮಾ, ಕೊನೆಗೆ ಸಂಗೀತವೂ ಕೂಡ.. ಮುಗಿಸಿ ಬಂದ ನಂತರವೂ ಎಷ್ಟು ಹೊತ್ತು ನಿಮ್ಮನ್ನು ಕಾಡುತ್ತಿರುತ್ತದೆ ಎಂಬುದರ ಮೇಲೆ ಅದರ ಸಫಲತೆಯನ್ನು ಅಂದಾಜಿಸಬಹುದು. ಕಾಕತಾಳೀಯ ಅಂತಾದರೂ ಹೇಳಿ, ವಿಶ್ವಪ್ರಜ್ಞೆಯ ಪ್ರೇರಣೆ ಅಂತಲಾದರೂ ಕರೀರಿ. ಓಹ್ ಮೈ ಗಾಡ್ ನೋಡಿದ ಮರುವಾರವೇ ಲೈಫ್ ಆಫ್ ಪೈ ನೋಡುವ ಅವಕಾಶ ದಕ್ಕಿದ್ದು ನನ್ನ ಪಾಲಿಗೆ ವಿಶೇಷವೇ ಸರಿ. ಚಿತ್ರ ರಾತ್ರಿಯಿಡೀ ಕಾಡಿದೆ. ಕೆಲವು ಮಾತುಗಳು ಮತ್ತೆ ಮತ್ತೆ ನೆನಪಾಗುತ್ತಿವೆ. ದೃಶ್ಯಗಳ ವೈಭವದ ಹಿಂದೆ ಅಡಗಿ ಕುಳಿತಿರುವ ಬದುಕಿನ ಸೂಕ್ಷ್ಮ ಅರ್ಥಗಳು ಒಂದೊಂದಾಗಿ ಅನಾವರಣಗೊಳ್ಳುತ್ತವೆ. ದೇವರ ಕುತರಿತಂತೆ, ಮತಗಳ ಕುರಿತಂತೆ ಕೊನೆಗೆ ಬದುಕಿನ ಕುರಿತಂತೆಯೂ ಪೈ ಹುಟ್ಟು ಹಾಕುವ ಪ್ರಶ್ನೆಗಳಿವೆಯಲ್ಲ, ಅವು ನಿಮ್ಮನ್ನು ಕಾಡದಿದ್ದರೆ ಹೇಳಿ.
ಹೀಗೆ ಕಾಡುತ್ತಾನೆಂದೇ ಅವನು ’ಪೈ’. ಫ್ರಾನ್ಸಿನ ಸ್ವಚ್ಛ ನೀರಿನ ಈಜುಕೊಳದಿಂದಾಗಿ ಬಂದ ಹೆಸರು ಅವನದ್ದು. ಪಿಸಿನ್ ಪಟೇಲ್. ಉಳಿಯೋದು ಪೈ. ಅದೆಷ್ಟು ಸಾಂಕೇತಿಕವೆಂದರೆ, ಪೈನ ಬದುಕು ಗಣಿತದ ಪೈನಂತೆಯೇ. ಅದೊಂದು ಇರ‍್ಯಾಷನಲ್ ನಂಬರ್. ಆದರೆ ಗಣಿತದ ಸಮಸ್ಯೆಗಳನ್ನು ಪರಿಹರಿಸಲು ರ‍್ಯಾಷನಲ್ ಆಗಿಯೇ ಬಳಸಲ್ಪಡುತ್ತದೆ. ಭಗವಂತನೂ ಹಾಗೆಯೇ. ಯಾರೂ ಕಾಣಲೇ ಇಲ್ಲ. ಆದರೆ ಎಲ್ಲರೂ ಕಂಡಿದ್ದೇವೆ ಎಂಬಂತೆ ಜೊತೆಯಲ್ಲಿಟ್ಟುಕೊಂಡೇ ಬದುಕು ನಡೆಯುತ್ತದೆ. ಪೈ ವೃತ್ತದ ಪರಿಧಿ ಮತ್ತು ವ್ಯಾಸಗಳ ಅನುಪಾತವನ್ನು ತೋರಿಸುವ ಸಂಖ್ಯೆ. ವ್ಯಾಸವನ್ನು ಬದುಕಿನ ಯಾತ್ರೆ ಅಂತ ಭಾವಿಸುವುದಾದರೆ ಪರಿಧಿ ಧರ್ಮ, ದೇವರು, ವಿಶ್ವಾಸಗಳು. ಬದುಕು ಯಾರದ್ದಾದರೂ ಆಗಿರಲಿ, ಆತ ಆಸ್ತಿಕನಾಗಿರಲಿ, ನಾಸ್ತಿಕನೇ ಆಗಲಿ. ಕೊನೆಗೆ ಅವಕಾಶವಾದಿ ಆಸ್ತಿಕನಾದರೂ ಸರಿ. ಈ ಪರಿಧಿಯೊಳಗಿನ ವ್ಯಾಸವಾಗಿಯೇ ಬದುಕಬೇಕು. ಅದು ಪೈನಂತೆ ಸ್ಥಿರಾಂಕ!
ಸ್ವದೇಶಿ ಚಿಂತನೆಯ ಹರಿಕಾರ ರಾಜೀವ್ ದೀಕ್ಷಿತ್
– ಶ್ರೀವಿದ್ಯಾ,ಮೈಸೂರು
ಭಾರತದಲ್ಲಿ ಸ್ವಾತಂತ್ರ್ಯ ನಂತರ ಗುಲಾಮಿ ಮಾನಸಿಕತೆ ಬೆಳೆಯುತ್ತಿದ್ದ ಕಾಲಘಟ್ಟದಲ್ಲಿ ಸ್ವದೇಶಿ ಚಿಂತನೆಯ ಮೂಲಕ ಭಾರತೀಯರಲ್ಲಿ ಸ್ವಾಭಿಮಾನವನ್ನು ಬಡಿದೆಬ್ಬಿಸಿದ ಧೀರ ನಾಯಕ ರಾಜೀವ್ ದೀಕ್ಷಿತ್
“ವಿದೇಶಿ ಬಹುರಾಷ್ಟ್ರೀಯ ಕಂಪೆನಿಗಳು ಬಂಡವಾಳವನ್ನು ತರುತ್ತದೆ. ಉದ್ಯೋಗವನ್ನು ಸೃಷ್ಟಿಸುತ್ತದೆ. ಅದರಿಂದ ದೇಶದ ರಫ್ತು ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತದೆ.ಅಷ್ಟೇ ಅಲ್ಲ, ನಮ್ಮ ದೇಶಕ್ಕೆ ಅತ್ಯಾಧುನಿಕ ತಂತ್ರಜ್ಞಾನ ತರುತ್ತಾರೆ. ನಮ್ಮ ದೇಶದಲ್ಲಿ ಬಂಡವಾಳ ತೊಡಗಿಸುವಂತೆ ಬಹುರಾಷ್ಟ್ರೀಯ ಕಂಪನಿಗಳನ್ನು ಆಹ್ವಾನಿಸುತ್ತಿರುವ ಸರಕಾರ ಈ ರೀತಿಯ ಕಾರಣ, ನೆಪಗಳನ್ನು ಕೊಟ್ಟು ನಿಮ್ಮನ್ನು ಸಮಾಧಾನಪಡಿಸುತ್ತಿದೆ. ಆದರೆ ವಾಸ್ತವದಲ್ಲಿ ವಿದೇಶಿ ಕಂಪನಿಗಳ ಆಗಮನದಿಂದಾಗಿ ನಮ್ಮ ದೇಶದ ಸಂಪತ್ತು ಹೊರಕ್ಕೆ ಹರಿದುಹೋಗುತ್ತಿದೆ, ಲೂಟಿಯಾಗುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳ ಆಗಮನದಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬ ಮಾತೂ ಶುದ್ಧ ಸುಳ್ಳು. ಖಾಸಗಿ ಕಂಪನಿಗಳಿಂದಾಗಿ ಸ್ಥಳೀಯ ಸಣ್ಣಉದ್ದಿಮೆಗಳು ನಾಶಗೊಂಡು ಭಾರೀ ಪ್ರಮಾಣದ ನಿರುದ್ಯೋಗ ಸೃಷ್ಟಿಯಾಗುತ್ತದೆ ಹಾಗೂ ಆರ್ಥಿಕ ಅಸಮಾನತೆಯುಂಟಾಗುತ್ತದೆ. ರಫ್ತು ಪ್ರಮಾಣ ಹೆಚ್ಚಾಗುತ್ತದೆ ಎಂಬ ಮಾತೂ ಕೂಡ ಸತ್ಯಕ್ಕೆ ದೂರವಾದುದು. ವಾಸ್ತವದಲ್ಲಿ ವಿದೇಶಿ ಕಂಪನಿಗಳಿಂದಾಗಿ ಆಮದು ಪ್ರಮಾಣಹೆಚ್ಚಾಗುತ್ತಿದೆ. ಅವು ತಮ್ಮ ದೇಶದ ಸರಕುಗಳನ್ನು ಭಾರತಕ್ಕೆ ತಂದು ಮಾರಾಟ ಮಾಡುತ್ತಿವೆಯಷ್ಟೇ. ಅಂದರೆ ತಮ್ಮ ದೇಶದ ಕಚ್ಚಾವಸ್ತು ಗಳನ್ನು ಇಲ್ಲಿಗೆ ತಂದು, ಸರಕನ್ನಾಗಿ ಪರಿವರ್ತಿಸಿ ಭಾರೀ ಲಾಭವನ್ನಿಟ್ಟು ಮಾರಾಟ ಮಾಡುತ್ತಿವೆಯಷ್ಟೇ. ಮತ್ತಷ್ಟು ಓದು 
ಓ ಗಂಡಸರೇ…ನೀವೆಷ್ಟು ಒಳ್ಳೆಯವರು!
-ರಶ್ಮಿ ಕಾಸರಗೋಡು
ನೀನು ಹುಡುಗ ನಮ್ಮ ಜತೆ ಬರಬಾರದು… ನಾವು ಆವಾಗ ಮೂರನೇ ಕ್ಲಾಸು. ನಮ್ಮ ಜತೆಯಲ್ಲೇ ಆಟವಾಡುತ್ತಿದ್ದ ನಮ್ಮ ಸಹಪಾಠಿಯಾಗಿದ್ದ ಆ ಹುಡುಗ ನಾವೆಲ್ಲಾ ಹುಡುಗಿಯರು ಕೈ ಕೈ ಹಿಡಿದು “ಒಂದಕ್ಕೆ” ಹೋಗುವಾಗ ಆತ “ನಾನೂ ಬರ್ತೇನೆ”ಎಂದು ರಾಗ ಎಳೆದಿದ್ದ…ಆವಾಗ ನಾವೆಲ್ಲರೂ ನೀನು ಹುಡುಗ ನಮ್ಮ ಜತೆ ಬರಬಾರದು…ಎಂದು ಒಕ್ಕೊರಲಿನಿಂದ ಹೇಳಿದ್ದೆವು.
ನಮ್ಮ ಉತ್ತರ ಅವನಿಗೆ ಬೇಸರ ತರಿಸಿತ್ತು ಎಂದು ಅವನ ಮುಖ ನೋಡಿದಾಗಲೇ ಗೊತ್ತಾಗಿತ್ತು. ಕ್ರಮೇಣ ನಾವು ಬೆಳೆಯುತ್ತಾ ಬಂದಂತೆ ಹುಡುಗರು-ಹುಡುಗಿಯರ ಅಂತರ ಹೆಚ್ಚುತ್ತಾ ಹೋಯ್ತು. ಹೈಸ್ಕೂಲ್ ಮೆಟ್ಟಲು ಹತ್ತಿದಾಗಲಂತೂ ಅವರು ‘ಹುಡುಗರು’..ನಾವು ದೊಡ್ಡ ಹುಡುಗೀರು. ನಮ್ಮೂರು ಹಳ್ಳಿಯಾಗಿರುವುದರಿಂದ ಹುಡುಗರು ಹುಡುಗಿಯರು ನಡುವೆ ಅಂತರ ಕಾಯ್ದುಕೊಳ್ಳಲೇ ಬೇಕಿತ್ತು. ಸಂಬಂಧಿಕರಾಗಿರಲಿ, ಗೆಳೆಯರಾಗಿರಲಿ ಅಲ್ಲೊಂದು ಲಿಂಗಬೇಧದ ಗೆರೆಯಿರುತ್ತಿತ್ತು. ಹುಡುಗರ ಮುಂದೆ ಹೇಗೆ ಮಾತನಾಡಬೇಕು, ಅವರ ಮುಂದೆ ಹೇಗೆ ನಿಲ್ಲಬೇಕು, ನಮ್ಮ ಡ್ರೆಸ್…ಕೂದಲು..ಕಣ್ಣು, ಹಾವಭಾವ ಎಲ್ಲದಕ್ಕೂ ‘ನೀನು ಹುಡುಗಿ’ ‘ಅವನು ಹುಡುಗ’ ಹಾಗೆಲ್ಲಾ ಮಾಡಬಾರದೆಂಬ ಉಪದೇಶದ ಲೇಪ ಇದ್ದೇ ಇರುತ್ತಿತ್ತು.
ಭಾಷಣ ಮಾಡುವ ಕ(ಕೊ)ಲೆ
– ಅರೆಹೊಳೆ ಸದಾಶಿವ ರಾವ್
ಇದೇನು ಹೊಸ ರೀತಿಯ ಕೊಲೆ ಎಂದು ಹುಬ್ಬೇರಿಸಬೇಡಿ. ಶೀರ್ಷಿಕೆ ಹೇಳುವಂತೆ ಈ ಭಾಷಣ ಎನ್ನುವುದು ಒಂದು ಕಲೆಯೂ ಹೌದು, ಸ್ವಲ್ಪ ವ್ಯಾಕರಣ ದೋಷ ಕಾಣಿಸಿಕೊಂಡರೆ ಅದು ಕೊಲೆಯೂ ಹೌದು.
ಉತ್ತಮವಾದ ಮಾತುಗಾರಿಕೆ, ಮಾತುಗಾರಿಕೆಯಲ್ಲಿ ವ್ಯಾಕರಣ ಬದ್ಧ, ತೂಕಸಹಿತ ಮಾತು, ಸಿಹಿಯಾದ ನುಡಿಮುತ್ತು, ಸಾಹಿತ್ಯದ ಸಾಂಗತ್ಯ, ಹದಕ್ಕೆ ಬೇಕಾದಷ್ಟು ಏರಿಳಿತ ಮತ್ತು ನಿರರ್ಗಳತೆ, ಇವು ಮೇಳೈವಿಸಿದರೆ ಅದು ಭಾಷಣ ಮಾಡುವ ‘ಕಲೆ’ ಎನಿಸಿಕೊಳ್ಳುತ್ತದೆ. ಇದರಲ್ಲಿ ಯಾವುದಾದರೂ ಒಂದು ಕೈ ಕೊಟ್ಟರೆ ಅದು ಭಾಷಣ ಮಾಡುವ ‘ಕೊಲೆ’ ಆಗುತ್ತದೆ.
ಭಾಷಣ ಮಾಡುವ ‘ಕೊಲೆ’ಯಲ್ಲಿ ಮೊದಲ ಬಲಿಪಶುವಾಗುವುತು ಭಾಷೆ. ನಮ್ಮ ಕರುನಾಡ ಮಾತೃ ಭಾಷೆಯ ಪರಿಸ್ಥಿತಿಯಂತೂ ಇಂದು ಹೇಳತೀರದಷ್ಟು ಹದಗೆಟ್ಟಿದೆ. ಮೊದಲೇ ತಮಿಳು, ಮಲಯಾಳಿ, ಮರಾಠಿ, ತೆಲುಗರಿಂದಾಗಿ ಕನ್ನಡವನ್ನು ಹುಡುಕಿದರೂ, ಹುಡುಕಿದಾತನೇ ಹಾಸ್ಯಾಸ್ಪದವಾಗುತ್ತಿದ್ದಾನೆ. ದುರಂತವೆಂದರೆ ಈ ಭಾಷೆಗಳ ಹೊಡೆತದ ನಡುವೆಯೂ ಅಲ್ಲಲ್ಲಿ ಉಳಿದಿರುವ ಕನ್ನಡಕ್ಕೆ ಇಂಗ್ಲೀಷ್‍ನ ಬೆರಕೆಯಾದ ನಂತರ ಕನ್ನಡವೆನ್ನುವುದು ಕಲಬೆರಕೆ ಆಗಿಬಿಟ್ಟಿದೆ.
ಅದಿರಲಿ ಬಿಡಿ. ನಾವಿಲ್ಲಿ ಭಾಷಾ ಸಮಸ್ಯೆಗಿಂತ ಭಾಷಣದ ಸಮಸ್ಯೆಯ ಬಗ್ಗೆ ಮಾತಾಡ ಹೊರಟಿದ್ದೇವೆ. ಅಳಿದುಳಿದ ಕನ್ನಡದ ಭಾಷೆಯನ್ನು ತನ್ನ ಹರಿಬಿಟ್ಟ ನಾಲಿಗೆಯಿಂದ ಭಾಷಣಕಾರ ಕೊಲ್ಲುತ್ತಲೇ ಇದ್ದರೆ ಹರಿಯೂ ಅದನ್ನು ರಕ್ಷಿಸಲಾರ. ಹಾಗೆಂದಾಗ ಅದು ಭಾಷಣ ಮಾಡುವ ಕೊಲೆಯಾಗುತ್ತದೆ.
ಅಪರೂಪದ ಪರಿಸರವಾದಿ ಕಲಾವಿದೆ ಕೆನಡಾ ದೇಶದ ಪ್ರಾಂಕೆ ಜೇಮ್ಸ್
ಇತ್ತೀಚಿನ ದಿನಗಳಲ್ಲಿ ನನ್ನ ಮೇಲೆ ಬಹಳ ಪ್ರಬಾವ ಬಿದ್ದಿರುವ ವ್ಯಕ್ತಿಯೊಬ್ಬರು ಎಂದರೆ ಕಲಾವಿದೆ ಹಾಗೂ ಪರಿಸರ ಹೋರಾಟಗಾರ್ತಿ ಕೆನಡಾ ದೇಶದ ಫ್ರಾಂಕೆ ಜೇಮ್ಸ್. ಅವರ ಚಿತ್ರ ಪ್ರಬಂದಗಳು ಪರಿಸರಾಂದೋಲನಗಳು ಅಧ್ಬುತ ಎನ್ನಬೇಕು. ಸುಮಾರು ಎರಡು ವರ್ಷಗಳಿಂದ ಇವರ ಚಟುವಟಿಕೆ ಮೇಲೆ ಗಮನವಿಟ್ಟಿರುವ ನಾನು ಈಗ ಅನಿಸಿಕೆ ಹಂಚಿಕೊಳ್ಳುತ್ತಿದ್ದೇನೆ.
ಪ್ರಶಾಂತ ಹಿಮಾಲಯದ ಅಶಾಂತ ಗಡಿ….
-ಪ್ರೇಮ ಶೇಖರ್
(ಶನಿವಾರ, ಡಿಸೆಂಬರ್ ೧, ೨೦೧೨ರಂದು ಭಾರತ – ಚೀನಾ ಗಡಿಸಮಸ್ಯೆಯ ಬಗೆಗಿನ ನನ್ನ “ಪ್ರಶಾಂತ ಹಿಮಾಲಯದ ಅಶಾಂತ ಗಡಿ” ಕೃತಿ ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಆ ಪುಸ್ತಕದ ಮೊದಲ ಅಧಯಾಯ ಇಲ್ಲಿದೆ )
ಮೂವತ್ತೆರಡು ಲಕ್ಷ ಚದರ ಕಿಲೋಮೀಟರ್ ವಿಸ್ತೀರ್ಣದ ನೆಲದೊಂದಿಗೆ ವಿಶ್ವದಲ್ಲಿ ಭೌಗೋಳಿಕವಾಗಿ ಏಳನೆಯ ದೊಡ್ಡ ದೇಶವಾದ ಭಾರತ ಸುಮಾರು ಹದಿನಾಲ್ಕು ಸಾವಿರ ಕಿಲೋಮೀಟರ್ ಉದ್ದದ ನೆಲಗಡಿಯನ್ನೂ, ಐದುಸಾವಿರದ ಐನೂರು ಕಿಲೋಮೀಟರ್ ಉದ್ದದ ಜಲಗಡಿಯನ್ನೂ ಹೊಂದಿದೆ. ಬಹುತೇಕ ಈ ಎಲ್ಲಾ ನೆಲಗಡಿಗಳು ಹಿಂದಿನ ಬ್ರಿಟಿಷ್ ವಸಾಹತುಶಾಹಿ ಆಡಳಿತದಿಂದ ಸ್ವತಂತ್ರ ಭಾರತಕ್ಕೆ ಬಂದ ಬಳುವಳಿಗಳಾಗಿವೆ.
ನೇಪಾಲ ಜತೆಗಿನ ೧,೬೯೦ ಕಿಲೋಮೀಟರ್ ಗಡಿಯನ್ನು ಬ್ರಿಟಿಷರು ರೂಪಿಸಿದ್ದಂತೇ ಸ್ವತಂತ್ರ ಭಾರತ ಉಳಿಸಿಕೊಂಡರೆ ಭೂತಾನದ ಜತೆಗಿನ ೬೦೫ ಕಿಲೋಮೀಟರ್ ಗಡಿಯಲ್ಲಿ ಮಾತ್ರ ಸ್ವಲ್ಪ ಬದಲಾವಣೆಯನ್ನು ಮಾಡಲಾಯಿತು. ಹತ್ತೊಂಬತ್ತನೇ ಶತಮಾನದ ಮಧ್ಯದಲ್ಲಿ ಬ್ರಿಟಿಷರು ಆಕ್ರಮಿಸಿಕೊಂಡಿದ್ದ ದಕ್ಷಿಣ ಭೂತಾನದ ಕೆಲವು ಪ್ರದೇಶಗಳನ್ನು ಆ ದೇಶಕ್ಕೆ ಮರಳಿಸುವ ನಿರ್ಧಾರವನ್ನು ಸ್ವತಂತ್ರ ಭಾರತ ಮಾಡಿದ್ದು ಆ ಬದಲಾವಣೆಗೆ ಕಾರಣ. ಮಿಯಾನ್ಮಾರ್(ಹಿಂದಿನ ಬರ್ಮಾ) ಜತೆಗಿನ ಗಡಿಯ ಬಗ್ಗೆ ಹೇಳುವುದಾದರೆ ೧೯೩೭ರಲ್ಲಿ ಬ್ರಿಟಿಷರು ಆ ದೇಶವನ್ನು ಭಾರತದಿಂದ ಬೇರ್ಪಡಿಸಿದಾಗ ರೂಪಿಸಿದ ಗಡಿಯಲ್ಲಿದ್ದ ಕೆಲವು ಗೊಂದಲಗಳನ್ನು, ಮುಖ್ಯವಾಗಿ ಅರುಣಾಚಲ ಪ್ರದೇಶ ಮತ್ತು ಉತ್ತರ ಬರ್ಮಾದ ನಡುವಿನ ತಿರಾಪ್ ಕಣಿವೆ ಮತ್ತು ಮಣಿಪುರದ ಗಡಿಯ ಬಗ್ಗೆ ಇದ್ದ ಅಸಮರ್ಪಕತೆಗಳನ್ನು ಸ್ವಾತಂತ್ರಾನಂತರ ದ್ವಿಪಕ್ಷೀಯ ಮಾತುಕತೆಗಳು ಮತ್ತು ಒಪ್ಪಂದದ ಮೂಲಕ ಸ್ನೇಹಯುತವಾಗಿ ಸರಿಪಡಿಸಿಕೊಳ್ಳಲಾಯಿತು. ಬಾಂಗ್ಲಾದೇಶದ ಜತೆಗಿನ ೪,೦೫೩ ಕಿಲೋಮೀಟರ್ ಉದ್ದದ ಗಡಿ ನಲವತ್ತೇಳರಲ್ಲಿ ಸರ್ ಸಿರಿಲ್ ರ‍್ಯಾಡ್‌ಕ್ಲಿಫ್ ನೇತೃತ್ವದ “ಗಡಿ ಸಮಿತಿ” (Boundary Commission) ಭಾರತ ಮತ್ತು ಪೂರ್ವ ಪಾಕಿಸ್ತಾನಗಳ ನಡುವೆ ಎಳೆದ ಗಡಿಯಾಗಿದೆ. ಈ ಗಡಿಯ ಐತಿಹಾಸಿಕ ಹಿನ್ನೆಲೆಯನ್ನು ಅನ್ವೇಷಿಸಿದರೆ ಇದು ೧೯೦೫ರಲ್ಲಿ ವೈಸ್‌ರಾಯ್ ಲಾರ್ಡ್ ಕರ್ಜನ್ ಬಂಗಾಲವನ್ನು ವಿಭಜಿಸಿದಾಗ ಎಳೆದ ರೇಖೆ ಮತ್ತು ೧೯೪೩ರಲ್ಲಿ ವೈಸ್‌ರಾಯ್ ಲಾರ್ಡ್ ವೇವಲ್ ದೇಶವಿಭಜನೆಗಾಗಿ ಸೂಚಿಸಿದ ರೇಖೆಗಳ ಆಧಾರದ ಮೇಲೆ ರಚಿತವಾದದ್ದು ಎಂಬ ಅಂಶ ಸ್ಪಷ್ಟವಾಗುತ್ತದೆ. ಈ ಧೀರ್ಘ ಗಡಿ ಬಹುತೇಕ ವಿವಾದಾತೀತವಾಗಿದ್ದರೂ ಅದರ ಕೆಲವು ಪುಟ್ಟ ತುಣುಕುಗಳು ಢಾಕಾದಲ್ಲಿ ಅಧಿಕಾರ ಹಿಡಿಯುವ ರಾಜಕೀಯ ಪಕ್ಷಗಳ ಮರ್ಜಿಗನುಗುಣವಾಗಿ ಆಗಾಗ ಸುದ್ಧಿಯಾಗುತ್ತದೆ. ಮತ್ತಷ್ಟು ಓದು 
ಕರ್ನಾಟಕದಲ್ಲಿ ಈ ಬಾರಿ ಪ್ರಾದೇಶಿಕ ಪಕ್ಷಗಳಿಗೆ ಕಾಲ ಕೂಡಿ ಬಂದಿದೆಯೇ?
ಭಾರತ ಒಕ್ಕೂಟದ ಮೇಲೊಂದು ಹಿನ್ನೋಟ
ಭಾರತ ಒಕ್ಕೂಟ ಅಸ್ತಿತ್ವಕ್ಕೆ ಬಂದ ದಿನಗಳನ್ನು ಒಮ್ಮೆ ಸುಮ್ಮನೆ ನೆನೆಸಿಕೊಳ್ಳಿ. ವಿವಿಧ ನುಡಿಯಾಡುವ, ವಿವಿಧ ಆಚರಣೆ, ಆಹಾರ, ಜೀವನವಿಧಾನವನ್ನೇ ಹೊಂದಿರುವ ಭಾರತ ಒಕ್ಕೂಟದ ಜನರನ್ನು ಭಾವನಾತ್ಮಕವಾಗಿ ಬೆಸೆದಿದ್ದು ನಮ್ಮೆಲ್ಲಗಿಂತಲೂ ಆರ್ಥಿಕವಾಗಿ, ತಾಂತ್ರಿಕವಾಗಿ ಮುಂದುವರೆದಿದ್ದ ಬ್ರಿಟಿಷ್ ಎಂಬ ಸಾಮಾನ್ಯ ಶತ್ರು. ಈ ಶತ್ರುವಿನ ವಿರುದ್ದ ಭಾರತ ಒಕ್ಕೂಟದ ಜನರನ್ನು ಸಂಘಟಿತರನ್ನಾಗಿಸಿ ಹೋರಾಟಕ್ಕೆ ಮೊನಚು ತಂದ ನಾಯಕರಿದ್ದದ್ದು ಕಾಂಗ್ರೆಸ್ ಅನ್ನುವ ಅಂದಿನ ಪಕ್ಷದಲ್ಲಿ. ಬ್ರಿಟಿಷರು ಭಾರತ ಬಿಟ್ಟು ಹೋದಾಗ ಜನರ ಮನದಲ್ಲಿದ್ದ “ಕಾಂಗ್ರೆಸ್ಸಿನವರು ಸ್ವಾತಂತ್ರಕ್ಕೆ ಕಾರಣರಾದರು” ಅನ್ನುವ ಭಾವನೆಯನ್ನೇ ಬಂಡವಾಳವಾಗಿಸಿಕೊಂಡು ದೇಶಾದ್ಯಂತ ಕಾಂಗ್ರೆಸ್ ಪಕ್ಷ ರಾಜಕೀಯ ನೆಲೆ ಕಂಡುಕೊಂಡಿತು. ಈ ಭಾವನಾತ್ಮಕ ಬಂಡವಾಳ ಗಟ್ಟಿಯಾಗಿದ್ದರಿಂದ ಸ್ವಾತಂತ್ರ್ಯ ನಂತರದ ಮೊದಲೆರಡು ದಶಕ ದೇಶಕ್ಕೆ ಒಂದೇ ಪಕ್ಷ ಅನ್ನುವಂತೆ ಕಾಂಗ್ರೆಸಿನ ಪಾರುಪತ್ಯ ನಡೆದಿತ್ತು.
ಒಂದು ಪಕ್ಷ, ಒಬ್ಬ ವ್ಯಕ್ತಿ ಒಕ್ಕೂಟವನ್ನಾಳುವುದು ಅಸಹಜ !
ಹೀಗೆ ಬ್ರಿಟಿಷರನ್ನು ಹೊಡೆದೊಡಿಸಲು ರೂಪುಗೊಂಡಿದ್ದ ಹೋರಾಟದಿಂದಾಗಿ ನೆಲೆ ಕಂಡಿದ್ದ ಭಾವನಾತ್ಮಕ ಒಗ್ಗಟ್ಟು ಅನ್ನುವ ತೆಳು ಅಂಟು ಕೆಲ ಸಮಯದಲ್ಲಿ ಖಾಲಿಯಾಗುತ್ತಲೇ ನಮ್ಮ ನಮ್ಮಲ್ಲಿನ ಆಸೆ, ಆಶೋತ್ತರಗಳು, ಏಳಿಗೆಯ ಕಲ್ಪನೆಗಳಲ್ಲಿನ ವೈವಿಧ್ಯತೆಗಳು ಹಂತ ಹಂತವಾಗಿ ಹೊರ ಹೊಮ್ಮತೊಡಗಿದವು. ಇಷ್ಟು ವ್ಯಾಪಕವೂ, ವೈವಿಧ್ಯಮಯವೂ ಆದ ಒಕ್ಕೂಟವೊಂದನ್ನು ಒಂದು ಪಕ್ಷ, ಒಬ್ಬ ವ್ಯಕ್ತಿ ದೆಹಲಿಯಿಂದ ಆಳುವುದು ಅತ್ಯಂತ ಅಸಹಜವೂ, ಆಳಲಸಾಧ್ಯವಾದದ್ದು (unwieldy) ಅನ್ನುವುದು ಅರ್ಥವಾಗತೊಡಗಿತು. ನೂರು ಕೋಟಿಗೂ ಮಿಗಿಲಾದ ಜನರ ಆಶೋತ್ತರಗಳನ್ನು ಒಂದು ಪಕ್ಷ, ಒಬ್ಬ ವ್ಯಕ್ತಿಯಿಂದ ಎಂದಿಗೂ ಈಡೇರಿಸಲಾಗದು ಅನ್ನುವ ಪ್ರಾಕ್ಟಿಕಲ್ ಆದ ತಿಳಿವೇ ಮುಂದಿನ ದಿನಗಳಲ್ಲಿ ಕಾಂಗ್ರೆಸಿನ ಪಾರಮ್ಯವನ್ನು ಮುರಿದು ದೇಶದ ಹಲವೆಡೆ ಪ್ರಾದೇಶಿಕ ಶಕ್ತಿಗಳು ಉದಯಿಸುವಂತೆ ಮಾಡಿದ್ದು ಅನ್ನುವುದನ್ನು ಗಮನಿಸಬೇಕಿದೆ. 1990ರ ಈಚೆಗೆ ಆರ್ಥಿಕ, ಸಾಮಾಜಿಕ ನೆಲೆಗಟ್ಟಿನಲ್ಲಾದ ತುರ್ತಿನ ಬದಲಾವಣೆಗಳು ಈ ಪ್ರಕ್ರಿಯೆಗೆ ಇನ್ನಷ್ಟು ವೇಗ ಒದಗಿಸಿದೆ ಅಂದರೆ ತಪ್ಪಾಗಲಾರದು. ಮತ್ತಷ್ಟು ಓದು 
ಸ್ವಾಭಿಮಾನದ ಬದುಕು ಕಟ್ಟಿಕೊಟ್ಟ “ಸರ್ಕಾರ್ “
-ಅಜಿತ್ ಎಸ್ ಶೆಟ್ಟಿ
ಕೇಸರಿ ಅಂಗಿ, ಕೇಸರಿ ಶಾಲು, ಕೇಸರಿ ಟೋಪಿ , ಕೇಸರಿ ಶೂಗಳು , ಕೇಸರಿ ಬಣ್ಣದ ಸೈಕಲ್ , ಅದಕ್ಕೆ ಕೇಸರಿ ಬಣ್ಣದ ಚಕ್ರಗಳು ,ಕೇಸರಿ ಪೆನ್ ಯಿಂದ ಹಿಡಿದು ಕೇಸರಿ ಬಣ್ಣದ ಮೊಬೈಲ್ ತನಕ ಎಲ್ಲವೂ ಕೆಸರಿನೇ. ಹಿಂದುತ್ವವಾದಿ ಯಾದರೂ ಮನೆಯಲ್ಲಿ ಯಾವದೇ ದೇವರ ಫೋಟೋ ಇಲ್ಲ. ಇರುವದು ಎರಡೇ ಎರಡು ಫೋಟೋಗಳು ಅವರುಗಳೇ ಇವನ ಪಾಲಿಗೆ ದೇವರು. ಆ ಫೋಟೋ ಗಳು ಬೇರೆ ಯಾರದ್ದು ಅಲ್ಲಾ ಮರಾಠ ಸೇನಾಧಿಪತಿ , ಹಿಂದೂ ಹೃದಯ ಸಾಮ್ರಾಟ್ , ಹುಲಿ, ಬಾಳಾ ಸಾಹೇಬ್ ಠಾಕ್ರೆ ಮತ್ತು ಅವರ ಪತ್ನಿ ಮೀನಾ ಅವರದ್ದು . ಅವರನ್ನು ಅರಾಧಿಸುತಿರುವವರು 52 ರ ಹರೆಯದ ಪೂನಾ ಜಿಲ್ಲೆಯ ನಂಗೋನ್ ಎಂಬಲ್ಲಿನ ಮಹಾದೇವ್ ಯಾದವ್. ನಾವು ಇಂಥ ಸಾವಿರಾರು ಠಾಕ್ರೆ ಅಭಿಮಾನಿಗಳನ್ನು ಮಹಾರಾಷ್ಟ್ರದಲ್ಲಿ ನೋಡಬಹುದು .
ಇಂದು ಬಾಳಾ ಸಾಹೇಬ್ ಯನ್ನು “ತಮಿಳು ವಿರೋಧಿ” “ಕನ್ನಡಿಗರ ಪಾಲಿನ ಶತ್ರು ” ಉತ್ತರ ಭಾರತೀಯರು ಮತ್ತು ಗುಜರಾತಿಗಳ ಪಾಲಿಗೆ ಕಂಟಕರಾಗಿದ್ದವರೆಂದು ಬೆರಳೆಣಿಕೆ ಎಷ್ಟು ಇರುವ ಅವರ ವಿರೋಧಿಗಳು ಕರೆಯಬಹುದು . ಆದರೆ ಅದು ಬಾಳಾ ಸಾಹೇಬ್ ಠಾಕ್ರೆ ಯವರ ವ್ಯಕ್ತಿತ್ವದ ಮುಂದೆ ಗೌಣವಾಗುತದೆ . ಠಾಕ್ರೆ ವ್ಯಕ್ತಿತ್ವ ಅಂತಹುದು ತನ್ನ ನಿಲುವನ್ನು ಸ್ಪಷ್ಟವಾಗಿ ಹೇಳುತಿದ್ದ . ಎಲ್ಲಿಯೂ ಎಡಬಿಡಂಗಿ ತರ ವರ್ತಿಸುತಿರಲಿಲ್ಲ. ಉದಾಹರಣೆ ಸಮೇತ ಸಮರ್ಥಿಸಿಕೊಳ್ಳುತಿದ್ದರು. ಅದು ಇಂದಿರೆ ಹೇರಿದ ತುರ್ತು ಪರಿಸ್ಥಿತಿಯಿಂದ ಹಿಡಿದು ಹಿಟ್ಲರ್ ಬಗೆಗಿನ ಠಾಕ್ರೆ ಅಭಿಮಾನದವರೆಗೆ. ದೇಶಕ್ಕೆ ಕಳಂಕದಂತಿದ್ದ , ಗುಲಾಮತೆಯ ಪ್ರತೀಕದಂತೆ ಭಾಸವಾಗುತಿದ್ದ ಬಾಬ್ರಿ ಮಸೀದಿ ದ್ವಂಸದಿಂದ, ಭಾರತ-ಪಾಕ್ ಕ್ರಿಕೆಟ್ ಪಂದ್ಯದ ತನಕ. ಎಲ್ಲಿಯೂ ರಾಜಿ ಇರಲಿಲ್ಲ. ಬಾಳಾ ಸಾಹೇಬ್ ಠಾಕ್ರೆ ಒಬ್ಬ ಭಾಷಾಪ್ರೇಮಿಯಾಗಿದ್ದರು ಅಪ್ರತಿಮ ದೇಶಭಕ್ತ, ಒಬ್ಬ ಹುಟ್ಟು ಹೋರಾಟಗಾರ, ಅಂಜದೇ ಅಳುಕದೇ ಯಾರಿಗೂ ತಲೆಬಾಗದೆ ತಾನು ನಂಬಿಕೊಂಡು ಬಂದಿರುವ ತತ್ವ ಸಿದ್ದಾಂತವನ್ನು ಪ್ರತಿಪಾದಿಸುವವ. ತಮ್ಮವರ ಹಕ್ಕಿಗಾಗಿ ಹೋರಾಡಿದ ಧೀಮಂತ ನಾಯಕ. ತನ್ನ ಶಕ್ತಿಯ ಮೇಲೆ, ತನ್ನ ಜನರ ನಂಬಿಕೆ ಮೇಲೆ ಅಪಾರ ಭರವಸೆ ಇಟ್ಟುಕೊಂಡಿದ್ದ ಅದ್ಬುತ ಮಾತುಗಾರ. ತನ್ನ ನಂಬಿರುವ ತನ್ನ ಜನರ ಭರವಸೆ ಎಂದು ಹುಸಿಗೊಳಿಸದ, ಅವರಿಗೆ ಸ್ವಾವಲಂಬಿ ಬದುಕು ಕಟ್ಟಿಸಿಕೊಟ್ಟ “ಸರ್ಕಾರ್” . ಉಳಿದವರಿಗೆ ಸ್ಪೂರ್ತಿಯ ಚಿಲುಮೆ . ಒಬ್ಬ ವ್ಯಂಗ್ಯ ಚಿತ್ರಗಾರ ನಾಗಿ ಬದುಕು ಪ್ರಾರಂಭಿಸಿದ ಬಾಳಾ ಸಾಹೇಬ್ ಠಾಕ್ರೆ ಬೆಳೆದು ಬಂದ ಅವನ ವಿರೋಧಿಗಳು ಮೆಚ್ಚುವಂಥಹುದು . ಅದಕ್ಕೊಂದು ಸಲಾಂ ಹೇಳಲೇ ಬೇಕು. ವಿವಾದಾತ್ಮಕ ವಾಗಿದ್ದರೂ ವರ್ಣರಂಜಿತ ಬದುಕು.
ಮತ್ತಷ್ಟು ಓದು 
ಹುಚ್ಚರ ಮದುವೆಯಲ್ಲಿ ಉ೦ಡವನೇ ಜಾಣ!!
– ಕೆ ಎಸ್ ರಾಘವೇಂದ್ರ ನಾವಡ
ಅ೦ತೂ ಇ೦ತೂ ಕೆಜಿಪಿ. ಯಡಿಯೂರಪ್ಪ ನವರ ತೆಕ್ಕೆಗೆ ಬಿದ್ದಿದೆ. ಧನ೦ಜಯ ಕುಮಾರ್ ಅಧ್ಯಕ್ಷರಾಗಿಯೂ ಕೆಜಿಪಿಯ ಹಳೇ ಮಾಲೀಕರಾಗಿದ್ದ ಪ್ರಸನ್ನಕುಮಾರ್ ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಗಳು ಮತ್ತು ಇತರೆ ಪದಾಧಿಕಾರಿಗಳ ನೇಮಕವೂ ಆಗಿದೆ.. ಎಲ್ಲರಿಗೂ ಗೊತ್ತಿದೆ.. ಧನ೦ಜಯ ಕುಮಾರ್ ಹೆಸರಿಗೆ ಮಾತ್ರ ಅಧ್ಯಕ್ಷರಾಗಿರುವುದು.. ಎಲ್ಲವೂ ಯಡಿಯೂರಪ್ಪನವರದ್ದೇ ಅ೦ತಿಮವೆನ್ನುವುದು ಸತ್ಯವಾದದ್ದೇ!
ಯಡಿಯೂರಪ್ಪನವರ ಹಟವೇ ಅ೦ಥಾದ್ದು! ಚೆಡ್ಡಿ ದೋಸ್ತಿಯಾಗಿದ್ದ ಈಶ್ವರಪ್ಪನವರ ವೈರವನ್ನೂ ಅವರೀಗ ಕಟ್ಟಿಕೊ೦ಡಿದ್ದಾರೆ. ಮು೦ದಿನ ಚುನಾವಣೆಯಲ್ಲಿ ತನ್ನ ಆ ದೋಸ್ತಿಯ ಎದುರೇ ಸ್ಪರ್ಧಿಸಲೂ ಹಿ೦ದೇಟು ಹಾಕರು ಯಡಿಯೂರಪ್ಪ! ತಾನಿಲ್ಲದ ಬಿ.ಜೆ.ಪಿಯನ್ನು ಯಡಿಯೂರಪ್ಪ ಈಗಾಗಲೇ ಕಲ್ಪಿಸಿಕೊ೦ಡಿದ್ದಾರೆ! ಅದಕ್ಕೆ ತಕ್ಕ೦ತೆ ಅವರ ಈಗಿನ ನಡೆಗಳೂ ಕೂಡಾ! ಅವರನ್ನು ಬಿ.ಜೆ.ಪಿಯಲ್ಲಿಯೇ ಉಳಿಸಿಕೊಳ್ಳಲು ವರಿಷ್ಟರು ಹರಸಾಹಸ ಪಡುತ್ತಿದ್ದಾರೆ! ಸ೦ಧಾನಕ್ಕಾಗಿ ಒಬ್ಬರ ಮೇಲೊಬ್ಬರನ್ನು ಕಳುಹಿಸಿದರೂ ಮುಗುಮ್ಮಾಗಿರುವ ಯಡಿಯೂರಪ್ಪನವರ್ ಮುಖ ಅರಳುತ್ತಿಲ್ಲ. ಅವರಾಗಲೇ ಮಾನಸಿಕವಾಗಿ ಬಿ.ಜೆ,ಪಿ.ಯನ್ನು ಬಿಟ್ಟು ಬಹಳ ದೂರ ಹೋಗಿಯಾಗಿದೆ! ಹಿ೦ದೆ ಬಿ.ಬಿ.ಶಿವಪ್ಪನವರಿಗಾದ ಗತಿಯೇ ಇ೦ದು ಯಡಿಯೂರಪ್ಪನವರಿಗೂ ಆಗಿದೆ. ಬಿ.ಬಿ.ಶಿವಪ್ಪ ಹೊಸ ಪಕ್ಷ ಕಟ್ಟಲಿಲ್ಲ.. ಅದರೆ ಯಡಿಯೂರಪ್ಪ ಅನಾಥವಾಗಿದ್ದ ಕೆ,ಜಿ.ಪಿ.ಗೆ ಬಲ ತು೦ಬಿದ್ದಾರಷ್ಟೇ!






