ವಿಷಯದ ವಿವರಗಳಿಗೆ ದಾಟಿರಿ

Recent Articles

10
ಆಕ್ಟೋ

ಅಧಿಕಾರ ಸಿಗುವುದಾದರೆ ಇವರು ಕಸಬ್ ಗೂ ಸ್ಮಾರಕ ಕಟ್ಟಲಾರರೆ?

-ಎ ಕೆ ಕುಕ್ಕಿಲ

1984 ಜೂನ್ 5ರಂದು ಭಾರತೀಯ ಸೇನೆಯು ಆಪರೇಶನ್ ಬ್ಲೂಸ್ಟಾರ್ (Operation Blue Star) ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳುತ್ತದೆ. ಪ್ರತ್ಯೇಕತಾವಾದಿಗಳ ಹಿಡಿತದಿಂದ ಸಿಕ್ಖರ ಪವಿತ್ರ ಕ್ಷೇತ್ರ ಸ್ವರ್ಣ ಮಂದಿರವನ್ನು ಬಿಡುಗಡೆಗೊಳಿಸುವುದು ಕಾರ್ಯಾಚರಣೆಯ ಉದ್ದೇಶವೆಂದು ಪ್ರಧಾನಿ ಇಂದಿರಾ ಗಾಂಧಿ ಘೋಷಿಸುತ್ತಾರೆ. ಜನರಲ್ ಎ.ಎಸ್. ವೈದ್ಯ ಮತ್ತು ಲೆಫ್ಟಿನೆಂಟ್ ಜನರಲ್ ಕುಲ್ ದೀಪ್ ಸಿಂಗ್ ಬ್ರಾರ್‍ರ ನೇತೃತ್ವದಲ್ಲಿ ನೂರಾರು ಯೋಧರು ಕಾರ್ಯಾಚರಣೆಗಿಳಿಯುತ್ತಾರೆ. ಜರ್ನೈಲ್ ಸಿಂಗ್ ಬಿಂದ್ರನ್‍ವಾಲೆ ಮತ್ತು ನಿವೃತ್ತ ಮೇಜರ್ ಜನರಲ್ ಶಾಹೆಬ್ ಸಿಂಗ್‍ರ ನೇತೃತ್ವದಲ್ಲಿ ಸ್ವರ್ಣ ಮಂದಿರದೊಳಗೆ ಅಡಗಿ ಕೂತಿದ್ದ ಪ್ರತ್ಯೇಕತಾವಾದಿಗಳು, ಸೇನೆಗೆ ತೀವ್ರ ಪ್ರತಿರೋಧ ಒಡ್ಡುತ್ತಾರೆ. ಟ್ಯಾಂಕ್, ಹೆಲಿಕಾಪ್ಟರ್, ಶಸ್ತ್ರಾಸ್ತ್ರ ವಾಹನಗಳು, ಆರ್ಟಿಲರಿಗಳನ್ನು ಕಾರ್ಯಾಚರಣೆಯ ವೇಳೆ ಸೇನೆ ಬಳಸಿಕೊಂಡರೆ, ಪ್ರತ್ಯೇಕತಾವಾದಿಗಳು ಮೆಶಿನ್ ಗನ್, ಕ್ಷಿಪಣಿಗಳು, ರಾಕೆಟ್ ಲಾಂಚರುಗಳನ್ನು ಬಳಸುತ್ತಾರೆ. ಒಂದು ರೀತಿಯಲ್ಲಿ ಸ್ವರ್ಣ ಮಂದಿರದೊಳಗೆ ಯುದ್ಧವೇ ನಡೆಯುತ್ತದೆ. ಜೂನ್ 3ರಿಂದ 36 ಗಂಟೆಗಳ ಕಾಲ ಇಡೀ ಪಂಜಾಬ್‍ನಲ್ಲೇ ಕಫ್ರ್ಯೂ ವಿಧಿಸಲಾಗಿದ್ದರೂ ಸಂಚಾರ, ವ್ಯಾಪಾರ-ವಹಿವಾಟುಗಳನ್ನು ನಿಷೇಧಿಸಲಾಗಿದ್ದರೂ ವಿದ್ಯುತ್ ಕಡಿತಗೊಳಿಸಿದ್ದರೂ ಸಾವಿರಾರು ಸಂಖ್ಯೆಯಲ್ಲಿ ಸಿಕ್ಖರು ಚೌಕ್ ಮೆಹ್ತಾದಲ್ಲಿ, ಹರಿಕ್ ಪಟನ್‍ನಲ್ಲಿ ನೆರೆಯುತ್ತಾರೆ. ಈ ಮಧ್ಯೆ ಸ್ವರ್ಣ ಮಂದಿರದ ಆಸುಪಾಸಿನ ಹೊಟೆಲ್‍ಗಳಲ್ಲಿ ಉಳಕೊಂಡಿದ್ದ ಎಲ್ಲ ಪತ್ರಕರ್ತರನ್ನೂ ಜೂನ್ 5ರ ಬೆಳಿಗ್ಗೆ 5 ಗಂಟೆಗೆ ಮಿಲಿಟರಿ ವಾಹನದಲ್ಲಿ ಹರ್ಯಾಣಕ್ಕೆ ಸಾಗಿಸಿ ಅಲ್ಲಿ ಬಂಧಿಸಿಡಲಾಗುತ್ತದೆ. ಮಾಧ್ಯಮಗಳನ್ನು ಸಂಪೂರ್ಣ ಸೆನ್ಸಾರ್‍ಶಿಪ್‍ಗೆ ಒಳಪಡಿಸಲಾಗುತ್ತದೆ. ಹೀಗೆ ಹೊರ ಜಗತ್ತಿನಿಂದ ಪಂಜಾಬನ್ನು ಸಂಪೂರ್ಣ ಪ್ರತ್ಯೇಕಿಸಿ ನಡೆಸಲಾದ ಆ ಕಾರ್ಯಾಚರಣೆ ಜೂನ್ 7ರಂದು ಕೊನೆಗೊಳ್ಳುವಾಗ 700ರಷ್ಟು ಯೋಧರೇ ಸಾವಿಗೀಡಾಗಿರುತ್ತಾರೆ. ಬಿಂದ್ರನ್‍ವಾಲೆ, ಶಾಹೆಬ್ ಸಿಂಗ್ ಸಹಿತ 400ರಷ್ಟು ಉಗ್ರವಾದಿಗಳು ಹತ್ಯೆಗೊಳಗಾಗುತ್ತಾರೆ. ಇಷ್ಟಕ್ಕೂ ಸಾವಿಗೀಡಾದ ಸಿಕ್ಖರ ನಿಖರ ಸಂಖ್ಯೆ ಎಷ್ಟು, ಎಷ್ಟು ಮಂದಿ ಗಾಯ ಗೊಂಡರು, ಆ ಕಾರ್ಯಾಚರಣೆ ಹೇಗಿತ್ತು ಎಂಬುದನ್ನೆಲ್ಲಾ ಹೇಳುವುದಕ್ಕೆ ಅಲ್ಲಿ ಅಸೋಸಿಯೇಟೆಡ್ ಪ್ರೆಸ್‍ನ (AP) ವರದಿಗಾರ ಬ್ರಹ್ಮ ಚಲ್ಲಾನಿಯ ಹೊರತು ಇನ್ನಾರೂ ಇದ್ದರಲ್ಲವೇ? ಮಿಲಿಟರಿಯ ಕಣ್ತಪ್ಪಿಸಿ ಅವರು ಮಾಡಿದ ಅಷ್ಟಿಷ್ಟು ವರದಿಯನ್ನು ಮುಂದೆ ನ್ಯೂಯಾರ್ಕ್ ಟೈಮ್ಸ್, ದಿ ಟೈಮ್ಸ್ ಆಫ್ ಲಂಡನ್, ದಿ ಗಾರ್ಡಿಯನ್ ಪತ್ರಿಕೆಗಳೆಲ್ಲಾ ಮುಖಪುಟದಲ್ಲಿ ಪ್ರಕಟಿಸುತ್ತವೆ. ಶವಸಂಸ್ಕಾರ ಮಾಡಿದವರ ಪ್ರಕಾರ, ಒಟ್ಟು 3,300 ಮಂದಿ ಆ ಕಾರ್ಯಾಚರಣೆಯಲ್ಲಿ ಸಾವಿಗೀಡಾಗಿದ್ದಾರೆ. ಇಂದಿರಾ ಗಾಂಧಿಯವರ ಕುರಿತಂತೆ ಪುಸ್ತಕ ಬರೆದಿರುವ ಮಾರ್ಕ್ ಟುಲಿಯ ಪ್ರಕಾರ ಸತ್ತವರ ಸಂಖ್ಯೆ 2,093. ಆದರೂ,

          ಮತ್ತಷ್ಟು ಓದು »

10
ಆಕ್ಟೋ

ಅಭಿವೃದ್ಧಿಯ ಸೋಗಿನಲ್ಲಿ ನಶಿಸುತ್ತಿರುವ ನನ್ನೂರು !!

ಅಶೋಕ್ ಕುಮಾರ್ ವಳದೂರು (ಅಕುವ)

ಉಡುಪಿ ಜಿಲ್ಲೆಯ ಕಾಪು ವ್ಯಾಪ್ತಿಯಲ್ಲಿ ಬರುವ ಪಾದೂರು ಈಗ ಜನಜನಿತ. ಪಾದೂರು ಮಜೂರು ರಸ್ತೆಯಲ್ಲಿ ಇಂದು ಜನರಿಗಿಂತ  ಟಿಪ್ಪರ್ ಗಳ ಓಡಾಟವೇ ಜಾಸ್ತಿಯಾಗಿದೆ. ಅಭಿವೃದ್ಧಿಯ  ಹೆಸರಿನಲ್ಲಿ  ಧೂಳೆಬ್ಬಿಸಿ, ಕೆಸರು ರಟ್ಟಿಸಿ ಓಡುವ ಟಿಪ್ಪರ್ ಗಳ ರೋಷದೆದುರು ನಾಗರಿಕರ ಜೀವನದ ಗತಿ ಕ್ಷಿಣಿಸಿದೆ.ಪಾದೂರು ಸುತ್ತಮುತ್ತಲ ಊರವರಿಗೆ ತಾವು ಎನೋ ಕಳೆದುಕೊಂಡ ಕಳವಳ.ಪಾದೂರಿನ ಗುಡ್ಡೆಯಲ್ಲಿ ಕುಪ್ಪಳಿಸಿದ ಆ ದಿನಗಳು ಇನ್ನು ಕೇವಲ ನೆನಪು ಮಾತ್ರ. ಆ ಅಡ್ಡ ಪಾದೆಯ ಜಾರು ಬಂಡಿಯು ಇನ್ನು ಇತಿಹಾಸ. “ಪೆಚ್ಚು ಗಟ್ಟಿಸುವ ಹುಲಿ ಗುಹೆ ” ಮಾಯವಾಗಿದೆ. ಆಶಾಡ (ಆಟಿ ತಿಂಗಳು)ದಲ್ಲಿ ಆ ಬಿರುಸು ಮಳೆಗೆ ಹಸಿರು ಸೊಪ್ಪಿಗಾಗಿ ಜಾತ್ರೆಯಂತೆ ಪಾದೂರಿನ ಗುಡ್ದೆಯಲ್ಲಿ ಸೇರುತ್ತಿದ್ದ ಜನಜಾತ್ರೆ ಯಾವತ್ತೊ ಮಾಯವಾಗಿದೆ.ದನ,ಕೋಣ,ಜಾನುವಾರುಗಳ ಮೇವು  ಹುಲ್ಲಿನ ಆಗಾಧ ಪಾದೂರು ಗುಡ್ದೆ ಅಭಿವೃದ್ಧಿಯ ಕರಡಾತನದಲ್ಲಿ ಬರಡಾಗುತ್ತಿದೆ. ಚಿಕ್ಕಂದಿನಿಂದ ಗುಡ್ಡೆಯ ಸಂದು ಬಿಡದೆ ಓಡಾಡಿದ, ನಲಿದಾಡಿದ,ಕೇಕೆ ಹಾಕಿ ಕುಣಿದ ನಮಗೆ ನಮ್ಮ ಮೌಂಟ್ ಎವರೆಸ್ಟ್ ಆಗಿದ್ದ “ಉಕ್ಕುಡ” ಅತಿ ಎತ್ತರದ ಬಂಡೆಯಾಗಿತ್ತು.ಈ ಉಕ್ಕುಡ ಬಂಡೆಯ ನೆತ್ತಿ ಏರುವುದು ಸಾಹಸದ ಕೆಲಸವೇ ಆಗಿತ್ತು. ಅದರ ತುತ್ತ ತುದಿಯಿಂದ ಪಶ್ಚಿಮಕ್ಕೆ ಕಾಪು ದೀಪ ಸ್ಥಂಬ, ಉತ್ತರಕ್ಕೆ ಶ್ರೀಕ್ಷೇತ್ರ ಕುಂಜಾರು ಗಿರಿಯ ದರ್ಶನವಾಗುತಿತ್ತು.ಮಳೆಯ ನೀರು ರಭಸದಿಂದ ಹರಿದು ನರ್ಸಿಕೆರೆಯೇ ಮಹಾಸಾಗರವಾಗುತಿತ್ತು. ಈಗ ಎಲ್ಲಾ ಮಾಯವಾಗಿದೆ. ನರ್ಸಿಕೆರೆ ಮಣ್ಣು ತುಂಬಿ ಹೇಳಹೆಸರಿಲ್ಲದಂತಾಗಿದೆ. ಕೃಷಿಕಾರ್ಯದಲ್ಲಿ ಸದಾ ಮಗ್ನವಾಗುತ್ತಾ ನೆಮ್ಮದಿಯಿಂದ ಉತ್ತದ್ದನ್ನು ಸಂತೋಷವಾಗಿ ಸಂಭ್ರಮಿಸುತ್ತಿದ್ದ ನನ್ನ ಊರಿನ(ವಳದೂರಿನ) ಜನರಿಗೆ ಪ್ರಾಣಸಂಕಟವಾಗಿ ಮಾರಕವಾಗಿದೆ ಪಾದೂರಿನಲ್ಲಿ ಸ್ಥಾಪನೆಯಾಗುತ್ತಿರುವ ತೈಲ ಸಂಗ್ರಹಣ ಘಟಕ.

ಮತ್ತಷ್ಟು ಓದು »

9
ಆಕ್ಟೋ

ಟೆಕ್ಕಿಗಳಿಂದ ಕನ್ನಡ ಹಾಸ್ಯ ನಾಟಕೋತ್ಸವ

ಪವನ್ ಪಾರುಪತ್ತೇದಾರ

ಪ್ರತಿದಿನ C++, Java,.net ಸರ್ವರ್ರುಗಳ ಮಧ್ಯೆ ಇರುವ ಸಾಫ್ಟ್ವೇರ್ ಇಂಜಿನಿಯರುಗಳ ತಂಡವೇ ರಂಗತಂತ್ರ. 2008ರಲ್ಲಿ ಸ್ಥಾಪಿತವಾದ ಈ ತಂಡ, ಹವ್ಯಾಸಿ ನಾಟಕಕಾರರನ್ನು ಹೊಂದಿದ್ದು, ಇಲ್ಲಿಯವರೆಗೂ 8 ಪ್ರದರ್ಶನಗಳನ್ನು ನೀಡಿದೆ. ಈ ಹವ್ಯಾಸಿ ಟೆಕ್ಕಿ ಕಲಾವಿದರು ತಮ್ಮ ಕಚೇರಿಯ ಬಿಡುವಿಲ್ಲದ ಸಮಯದ ಮಧ್ಯೆ, ತಮ್ಮ ವೀಕೆಂಡುಗಳನ್ನೆಲ್ಲ ಬದಿಗಿಟ್ಟು, ಬಹಳಷ್ಟು ಕಷ್ಟ ಪಟ್ಟು ಅಭ್ಯಾಸ ಮಾಡಿ, ಅಕ್ಟೋಬರ್ ತಿಂಗಳಲ್ಲಿ ನಿಮ್ಮ ಮುಂದೆ ಹಾಸ್ಯ ನಾಟಕೋತ್ಸವ ನಡೆಸಲು ಸಜ್ಜಾಗಿದ್ದಾರೆ.

ತಂಡದ ಮೇಷ್ಟ್ರು ಮಹದೇವ್ ಪ್ರಸಾದ್ ಯುವಪಡೆಯೊಂದನ್ನು ಸಜ್ಜು ಮಾಡಿಕೊಂಡಿದ್ದು, ನಾಟಕ ಪ್ರಿಯರಿಗೆ ನಗೆಯ ಹಬ್ಬದೂಟ ಬಡಿಸಲು ತಯಾರಿ ನಡೆಸುತಿದ್ದಾರೆ. ಲಾಕ್ ಔಟ್ ಅಲ್ಲ ನಾಕೌಟ್, ಶ್ರೀ ಕೃಷ್ಣ ಸಂಧಾನ ಮತ್ತು ಬಂಡ್ವಾಳವಿಲ್ಲದ ಬಡಾಯಿಯಂತಹ ಪ್ರಸಿದ್ಧ ಹಾಸ್ಯ ನಾಟಕಗಳನ್ನು ನಿಮ್ಮ ಮುಂದಿಡಲು ಕಾತುರದಿಂದ ಕಾಯುತಿದ್ದಾರೆ. ನಾಟಕ ಪ್ರಿಯರೆಲ್ಲ ಬಂದು ಸಾಫ್ಟ್ ವೇರ್ ಟೆಕ್ಕಿಗಳ ಪ್ರಯತ್ನವನ್ನು ಪ್ರೋತ್ಸಾಹಿಸಿ ಹರಸಬೇಕಾಗಿ ವಿನಂತಿ.

ನಾಟಕ ಪ್ರದರ್ಶನ ನಡೆಯುವ ದಿನಾಂಕಗಳು ಕೆಳಗಿನಂತಿವೆ.

ಅಕ್ಟೋಬರ್ 12 – ಶ್ರೀ ಕೃಷ್ಣ ಸಂಧಾನ

ಅಕ್ಟೋಬರ್ 13 – ಬಂಡ್ವಾಳವಿಲ್ಲದ ಬಡಾಯಿ

ಶ್ರೀ ಕೃಷ್ಣ ಸಂಧಾನ : ರಚನೆ : ವಿ ಎನ್ ಅಶ್ವಥ್

ವಿದ್ಯೆ ಇಲ್ಲದ ಹಳ್ಳಿ ಜನ ನಾಟಕ ಮಾಡಲು ಹೊರಟಾಗ ಎದುರಾಗುವ ಛಾಲೆಂಜುಗಳೇನು, ಅ ಹಳ್ಳಿ ಜನಕ್ಕೆ ನಾಟಕ ಹೇಳಿಕೊಡಲು ಬರುವ ಮೇಷ್ಟ್ರಿಗೆ ಅದರ ಅರಿವಿರೋದಿಲ್ಲ. ಬಂದು ಇವ್ರಿಗೆ ನಾಟಕ ಹೇಳಿಕೊಡಕ್ಕೆ ಶುರು ಮಾಡಿ ಗೆಜ್ಜೆಗ್ ಪೂಜೆ ಮಾಡ್ಸೋ ಅಷ್ಟ್ರಲ್ಲಿ ಮೇಷ್ಟ್ರು ಗೋಳು ಕೇಳಕ್ಕಾಗಲ್ಲ. ಅಂತಹ ಮೇಷ್ಟ್ರು ಮತ್ತೆ ಶಿಶ್ಯಂದಿರ ನಡುವೆ ನಡೆವ ನಗೆ ನಾಟಕ ಕೃಷ್ಣ ಸಂಧಾನ. ಈ ನಾಟಕ ಈಗಾಗ್ಲೆ ಕನ್ನಡದ ನಾಟಕ ಪ್ರಿಯರಿಗೆಲ್ಲ ಚಿರಪರಿಚಿತ. ಆದಕ್ಕೆ ಕಾರಣ ನಾಟಕದ ಪ್ರತಿಯೊಂದು ಸಾಲಿನಲ್ಲು ಇರುವ ನಗೆಮಿಠಾಯಿ ಅಂದ್ರೆ ತಪ್ಪಾಲ್ಲ ಬಿಡಿ. ನಾಟಕದ ಪ್ರತಿಯೊಂದು ಲೈನ್ ಸಹ ಪಂಚ್ ಲೈನ್. ನೀವೆಷ್ಟು ಬಾರಿ ನೋಡಿದರೂ ಬೇಜಾರಾಗದ ನಾಟಕ ಇದು. ಇಂತಹ ನಗೆಯ ರಸಾಯನ ಸಹ ರಂಗತಂತ್ರದ ಹಾಸ್ಯೋತ್ಸವದ ಕೊಡುಗೆ. 

ಮತ್ತಷ್ಟು ಓದು »

8
ಆಕ್ಟೋ

ಕದ್ದ ಸಿನಿಮಾದ ಆಸ್ಕರ್ ಪಯಣ

ಡಾ ಅಶೋಕ್ ಕೆ ಆರ್

“ಬಿಡ್ರೀ ರೀ. ಆಸ್ಕರ್ ಪ್ರಶಸ್ತಿ ಕೊಡೋದು ಪರದೇಶದೋರು. ಅದು ಸಿಗದಿದ್ರೆ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು” ಎಂದು ನಮಗೆ ನಾವೇ ಸಮಾಧಾನ ಪಟ್ಟುಕೊಳ್ಳುತ್ತೇವಾದರೂ ‘ಸ್ಲಂ ಡಾಗ್ ಮಿಲೇನಿಯರ್’ ಚಿತ್ರದ ಸಂಗೀತಕ್ಕೆ ಎ. ಆರ್. ರೆಹಮಾನ್ ಗೆ ಆಸ್ಕರ್ ಪ್ರಶಸ್ತಿ ಬಂದಾಗ ಖುಷಿಪಟ್ಟಿದ್ದು ಸುಳ್ಳಲ್ಲ. ಮುಂದೊಂದು ದಿನ ಭಾರತೀಯ ಭಾಷೆಯ ಚಿತ್ರವೊಂದಕ್ಕೆ ಆಸ್ಕರ್ ದೊರೆತರೆ ಅಭೂತಪೂರ್ವವಾಗಿ ಸಂಭ್ರಮಿಸುವುದೂ ಸತ್ಯ. ಇಲ್ಲಿಯವರೆಗೆ ಭಾರತ ನಲವತ್ತೈದು ಚಿತ್ರಗಳನ್ನು ಆಸ್ಕರ್ ಪ್ರಶಸ್ತಿಗೆಂದು ಕಳುಹಿಸಿದೆಯಾದರೂ ಯಾವೊಂದು ಚಿತ್ರವೂ ಪ್ರಶಸ್ತಿ ಪಡೆದಿಲ್ಲ. ಪ್ರಶಸ್ತಿಯ ಸನಿಹಕ್ಕೆ ಬಂದಿದ್ದು ಬೆರಳೆಣಿಕೆಯ ಚಿತ್ರಗಳಷ್ಟೇ. ಭಾರತೀಯ ಚಿತ್ರವೆಂದರೆ ಹಿಂದಿ ಚಿತ್ರಗಳು ಮಾತ್ರ ಎಂಬ ಪೂರ್ವಗ್ರಹವೂ ಇದಕ್ಕೆ ಕಾರಣ ಎಂದರೆ ತಪ್ಪಲ್ಲ. ನಲವತ್ತೈದು ಚಿತ್ರಗಳಲ್ಲಿ ಮೂವತ್ತು ಹಿಂದಿ ಭಾಷೆಯವು, 8 ತಮಿಳು, ಮಲಯಾಳಂ, ಮರಾಠಿ ಬಂಗಾಳಿಯ ಎರಡು ಮತ್ತು ಉರ್ದುವಿನ ಒಂದು ಚಿತ್ರ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಕಳುಹಿಸಲಾಗಿದೆ. ಈ ವರ್ಷ ಆಸ್ಕರ್ ಗೆ ಭಾರತದಿಂದ ಆಯ್ಕೆ ಮಾಡಿ ಕಳುಹಿಸಿದ ಚಿತ್ರ ಅನುರಾಗ್ ಬಸು ನಿರ್ದೇಶನದ ಹಿಂದಿ ಚಿತ್ರ ‘ಬರ್ಫಿ’. ನಿಜಕ್ಕೂ ಇದು ಆಸ್ಕರ್ ಮೆಟ್ಟಿಲೇರಲು ಸಮರ್ಥವಾದ ಚಿತ್ರವೇ?

ಮತ್ತಷ್ಟು ಓದು »

6
ಆಕ್ಟೋ

ಕೈಲಾಗದ ರಾಜಕಾರಣಿಗಳ ಕೊಲವೆರಿ, ಕನ್ನಡಿಗರ ಜೀವನಾಡಿ ಕಾವೇರಿ

– ರಾಕೇಶ್ ಶೆಟ್ಟಿ

ಅವತ್ತು ಬೆಳ್ಳಂಬೆಳಗ್ಗೆ ತಮ್ಮ ಹಿಂಬಾಲಕರ ಹಿಂಡು,ಕ್ಯಾಮೆರಾ ದಂಡಿನೊಂದಿಗೆ ಮೀಡಿಯಾ ಡಾರ್ಲಿಂಗ್ ಕಾನೂನು ಸಚಿವ ಸುರೇಶ್ ಕುಮಾರ್, ಗೃಹ ಸಚಿವ ಅಶೋಕ್ ಬೆಂಗಳೂರಿನಿಂದ ಗುಳೆ ಹೊರಟಿದ್ದ ಅಸ್ಸಾಂ ಜನರನ್ನು ಸಂತೈಸಲು ರೈಲ್ವೇ ನಿಲ್ದಾಣಕ್ಕೆ ಹೋಗಿ ನಿಂತಿದ್ದರು.ಆದರೆ ಈಗ ನೋಡಿ ಕಳೆದ ಇಪ್ಪತ್ತು ದಿನದಿಂದ ಕಾವೇರಿಕೊಳ್ಳದ ರೈತರು ಕಣ್ಣೀರಿಡುತಿದ್ದಾರೆ.ಬಂದ್,ಹರತಾಳಗಳಿಂದ ರಾಜ್ಯದ ಕಾನೂನು ಹದಗೆಡುತ್ತಿದೆ ಆದರೆ ಮಾನ್ಯ ಕಾನೂನು ಸಚಿವರು ನಾಪತ್ತೆಯಾಗಿದ್ದಾರೆ…! ಈ ನಡುವೆ ಗೃಹ ಸಚಿವರು ಅಸ್ಸಾಂಗೆ ಹೋಗಿದ್ದಾರಾ? ತಮಿಳುನಾಡಿಗೆ ಹೋಗಿ ಜಯಲಲಿತಾಗೂ ವಸ್ತುಸ್ಥಿತಿ ತಿಳಿಸಬಹುದಿತ್ತಲ್ಲಾ,ಯಾಕೆ ಹೋಗಲಿಲ್ಲ?

ಸುದ್ದಿ ಮಾಡಲು ಇದೇನು “ಭಾರತ”ದ ವಿಷಯವೋ ಅಥವಾ ಅವರ ಸಂಘ ಪರಿವಾರದ “ದೇಶ ಭಕ್ತಿ”ಯ ವಿಷಯವೋ ಅಲ್ಲವಲ್ಲ.ಇದು ಬರಿ ಕಾವೇರಿಯ ವಿಷ್ಯ,ಇದು ಕರ್ನಾಟಕದ ಜನತೆಯ ಪ್ರಾದೇಶಿಕತೆಯ ಸಂಕುಚಿತತೆಯ ಹೋರಾಟ ಅನ್ನಿಸರಬೇಕು.ಒಂದೆಡೆ ಇಂತ ದೇಶಭಕ್ತ ಕಾನೂನು ಸಚಿವ.ಮತ್ತೊಂದೆಡೆ ಸುಪ್ರೀಂ ಕೋರ್ಟ್ ಮುಂದೆ ನಿಂತು ೧೦ ಟಿಎಂಸಿ ನೀರು ನಾವೇ ಕೊಡ್ತೀವಿ ಅಂತ ಮುಂಚಿತವಾಗಿ ಬರೆದು ಕೊಟ್ಟ ಜಲಸಂಪನ್ಮೂಲ ಸಚಿವ ಮತ್ತು ಇಂತ ಎಡವಟ್ಟು ಸಚಿವರಿಗೊಬ್ಬ ಕಳಸವಿಟ್ಟ ಮುಖ್ಯಮಂತ್ರಿ.

ಕಾವೇರಿ ಪ್ರಾಧಿಕಾರದ ಸಭೆಯಲ್ಲಿ ಪ್ರಧಾನಿ ತೀರ್ಪನ್ನು ವಿರೋಧಿಸಿ, ಕುರ್ಚಿ ಬೇಕಾದರೂ ಬಿಡುತ್ತೇನೆ, ಕಾವೇರಿ ಬಿಡಲಾರೆ ಅಂದ ಶೆಟ್ಟರ್ ಮುಖಾಂತರ ಒಬ್ಬ ಹೀರೊನನ್ನು ಹುಡುಕಲು ರಾಜ್ಯದ ರೈತರು ಕನಸು ಕಾಣುತಿದ್ದರು.ಆದರೆ ಅವರಿಗೆ ಕಾವೇರಿಗಿಂತ ಕುರ್ಚಿಯೇ ಹೆಚ್ಚಾಯಿತು ನೋಡಿ.ರಾತ್ರೋ ರಾತ್ರಿ ನೀರು ಹರಿಸಲು ಶುರು ಮಾಡಿದ್ದಾರೆ.ಹೀರೊ ಆಗೋದು ಬಿಡಿ ಕಡೆ ಪಕ್ಷ ಜೀರೊ ಆದರು ಅಂತೇಳಿದರೆ, ಅದು ನಾವು ಆ “ಜೀರೊ” ಅನ್ನೋ ಪದಕ್ಕೆ ಅವಮಾನ ಮಾಡಿದಂತೆ. ಇಡೀ ರಾಜ್ಯ ಬಂದ್ ಮಾಡಿ ಹೊತ್ತಿ ಉರಿಯುತಿದ್ದರೆ ಮಾನ್ಯ ಮುಖ್ಯಮಂತ್ರಿಗಳು ಪೋಲಿಸ್ ಸರ್ಪಗಾವಲಿನೊಂದಿಗೆ ಭದ್ರವಾಗಿ ಮನೆಯಲ್ಲಿ ಕುಳಿತಿದ್ದಾರೆ, ರೋಮ್ ಹತ್ತಿ ಉರಿಯುತಿದ್ದಾಗ ಪಿಟೀಲು ಕುಯ್ಯುತಿದ್ದ ನೀರೋನಂತೆ…!

ಮತ್ತಷ್ಟು ಓದು »

6
ಆಕ್ಟೋ

ಕಾವೇರಿಗಾಗಿ ಕರ್ನಾಟಕದ ಜನರ ಜೊತೆಯಾಗಿ

6
ಆಕ್ಟೋ

ಆಯಸ್ಕಾಂತ

-ಪ್ರಜ್ವಲ್ ಕುಮಾರ್

ಈ ಮೊಬೈಲ್ ಅಲ್ಲಿ ಬ್ಯಾಟರಿನೆ ಇರಲ್ಲ ಗೇಮ್ ಆಡೋಣ ಅಂದ್ರೆ”,

“ಲೋ! ಬ್ಯಾಟಲ್ ಫೀಲ್ಡ್ ಗೇಮ್ ಸಿ.ಡಿ. ಇದ್ರೆ ಕೊಡೋ ಆ ಗೇಮ್ ಆಡಿಲ್ಲ ನಾನು”,

“ಒಂಥರಾ ಬೋರ್ ಹೊಡೀತಾ ಇದೆ ಕಣೆ! ಯಾವ್ದಾದ್ರು ಮೂವಿ ನೋಡೋಣ? ಟಿ.ವಿ. ಆನ್ ಮಾಡು, ಹೇಯ್! ಹ್ಯಾರಿ ಪಾಟರ್ ಬರ್ತಾ ಇದೆ ಕಣೆ. ಇರ್ಲಿ ಬಿಡು”

ಪೇಟೆಯಲ್ಲಿಯೇ ಹುಟ್ಟಿ, ಬೆಳೆದ ಅದೆಷ್ಟೋ ಸಣ್ಣ ಮಕ್ಕಳು ಇಷ್ಟು ಹೊತ್ತಿನ ತನಕ ಹೇಳಿದ ರೀತಿಲೇ ಮಾತಾಡ್ತಾ ಇರೋದನ್ನ ಕೇಳ್ತಾ ಇರ್ತೀವಿ. ಅದ್ಯಾಕೋ ಗೊತ್ತಿಲ್ಲ, ಕೆಲವು ಜನ ತಮ್ಮ ಮಕ್ಕಳಿಗೆ ಮತ್ತಷ್ಟು ಓದು »

5
ಆಕ್ಟೋ

ಬೆಂಗಳೂರು ಕನ್ನಡಿಗರಿಗೊಂದು ಬಹಿರಂಗ ಪತ್ರ

-ಭರತ್ ಬಿಕೆ

ಬೆಂಗಳೂರಲ್ಲೀ ಇದೀರಾ ? ಬೆಂಗಳೂರಿಗೆ ಬಂದ್ರಾ ?? ಸಂತೋಷ 🙂 ಬೆಂಗಳೂರಲ್ಲೇ ಹುಟ್ಟೀ, ಬೆಂಗಳೂರಲ್ಲೇ ಬೆಳೆದ್ರಾ ?? ತುಂಬಾ ಸಂತೋಷ 🙂

ಬೆಂಗಳೂರಲ್ಲೇ ಬದುಕಬೇಕು ಅಂತಾ ಇದೀರಾ ?? ಇನ್ನೂ ಸಂತೋಷ:)

ಆದರೇ ಇಲ್ಲಿನ ಭಾಷೆ, ನೆಲ, ಜಲ, ವ್ಯವಸ್ಥೆ, ಅವಸ್ಥೆ,ಸಮಸ್ಯೆಗಳ ಬಗ್ಗೆ ಸ್ವಲ್ಪ ಯೋಚನೆ ಮಾಡಿದ್ದೀರಾ?  ಅದಕ್ಕಾಗಿ, ಅದಕ್ಕೆ ಸಂಬಂಧಿಸಿದ ವಿಚಾರಗಳಲ್ಲೀ ಭಾಗವಹಿಸಿದ್ದೀರಾ ??

ಸಾರ್ವಜನಿಕವಾಗಿ ?? ವಯಕ್ತಿಕವಾಗಿ ??

ಅಷ್ಟೆಲ್ಲಾ ಯಾಕೇ ಬಿಡಿ.. ಫೇಸ್ ಬುಕ್ ಪ್ರೋಫೈಲಲ್ಲೀ ಪೋಸ್ಟ್ ಮಾಡಿದಿರಾ ? ಸಂಬಂಧಿಸಿದ ಪೋಸ್ಟ್ ಗಳಿಗೇ ಲೈಕ್ ಮಾಡಿಡ್ಡೀರಾ ?? ಕಮೇಂಟ್ ಕೊಟ್ಟಿದ್ದೀರಾ ??

ಮತ್ತಷ್ಟು ಓದು »

5
ಆಕ್ಟೋ

ಹೀಗೊಂದು ಅಧುನಿಕ ತುಘಲಕ್ ಸಂಸ್ಕೃತಿ

ಮಧುಚಂದ್ರ ಭದ್ರಾವತಿ

ಅಲ್ಲೊಂದು ದೇವಸ್ಥಾನದ ವಿಮಾನ ಗೋಪುರದ ಪ್ರತಿಷ್ಠಾಪನೆಯ  ಕಾರ್ಯಕ್ರಮ. ಕಾರ್ಯಕ್ರಮ ಅಂದರೆ ವೆಲ್ಕಮ್ ಕಮಿಟಿ ಅಂತ ಒಂದು ಕಾಲದಲ್ಲಿ ಇರುತಿತ್ತು . ಅವರು  ಮಾತ್ರ ದೇವಸ್ಥಾನದ ರಾಜ ಬೀದಿಯಲ್ಲಿ  ” ಕಾರ್ಯಕ್ರಮಕ್ಕೆ  ಆಗಮಿಸುವ ಭಕ್ತಾದಿಗಳಿಗೆ ಶುಭ ಕೋರುತ್ತಿದ್ದೇವೆ ” ಅಂತ ಎಲ್ಲೋ ಒಂದು ಬೋರ್ಡ್ ಹಾಕಿ ಕೈ ತೊಳೆದುಕೊಳ್ಳುತಾ ಇದ್ದರು .

ಈಗ ಕಾಲ ಬದಲಾಗಿದೆ  ” ವಿಮಾನ ಗೋಪುರದ ಪ್ರತಿಷ್ಠಾಪನೆಯ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಭಕ್ತರಿಗೆ ಶುಭ ಕೋರುವವರು ..” ಎಂದು  ಮೂವತ್ತೆರಡು  ದಂತ ಪಂಕ್ತಿ ಗಳನ್ನು  ಪ್ರದರ್ಶಿಸುತ್ತಾ  ಕಾಲ್ಗಟೆ ಸ್ಮೈಲ್ ಕೊಡುತ್ತ ನಿಂತಿರುವ  ನರ ರೊಪದ ಅಧುನಿಕ ತುಘಲಕ  ಭಾವ ಚಿತ್ರಗಳು  ಎಲ್ಲ್ ಎಲ್ಲಿ ನೋಡಿದರು ರಾರಾಜಿಸುತ್ತಿರುತ್ತವೆ .

ಈ ರೀತಿಯ ಹುಚ್ಚು ಮನಸ್ಸಿನ ಅವಿವೇಕ ಎಲ್ಲಿಂದ ಬಂತೋ ಗೊತ್ತಿಲ್ಲ. ಕೇವಲ ಪ್ರಚಾರ ಮತ್ತು ರಾಜಕೀಯ ಲಾಭ ಮಾಡಿಕೊಳ್ಳಲು ತಮ್ಮ ಇರುವಿಕೆ ಮತ್ತು ಶಕ್ತಿ ಪ್ರದರ್ಶನ ಮಾಡಲು  ಕೀಳು ಮಟ್ಟಕ್ಕೆ ಪುಡಾರಿಗಳು ಇಳಿಯುತ್ತಾರೆ. ಆವರಿಗೆ ಸಾತ್ ನೀಡಲು ನಮ್ಮ ನೆಚ್ಚಿನ ಜನ ನಾಯಕ  ಎಂದು ಅವರ ಪಕ್ಕದಲ್ಲಿ ತಮ್ಮದೊಂದು ಮುಖಾರವಿಂದ ಇರಲಿ ಎಂದು  ಮರಿ ಪುಡಾರಿಗಳು ಊರ ತುಂಬೆಲ್ಲ ಫ್ಲೆಕ್ಷ್ ಹಾಕಿ ಮೆರೆಯುತ್ತಾರೆ.

 ಮಳೆಗಾಲಕ್ಕೆ ಸರಿಯಾಗಿ ಮಳೆ ಬರುತ್ತೋ ಇಲ್ಲವೋ, ಹಿಂದೂಗಳ ಹಬ್ಬ ಬಂದಾಗ ಹಿಂದುಗಳಿಗೆ , ಮುಸ್ಲಿಂರ ಹಬ್ಬಕ್ಕೆ ಮುಸ್ಲಿಮರಿಗೆ , ಕ್ರಿಶ್ಚಿಯನ್ನರ ಹಬ್ಬ ಬಂದಾಗ ಕ್ರಿಶ್ಚಿಯನ್ನರಿಗೆ ಶುಭಾಶಯಗಳ ಫ್ಲೆಕ್ಷ್ ಬ್ಯಾನರ್ ಮಾತ್ರ ಬಂದೆ ಬರುತ್ತೆ.

ಮತ್ತಷ್ಟು ಓದು »

3
ಆಕ್ಟೋ

ಕಾನೂನಿನಂಗಳ ೯ : ಹೆಣ್ಣಿಗೆ ಆಸ್ತಿಯಲ್ಲಿ ಸಮಾನ ಹಕ್ಕು

ಉಷಾ ಐನಕೈ  ಶಿರಸಿ

ಭಾರತೀಯ ಸಂಸ್ಕೃತಿಗೆ ಜಾಗತಿಕ ಮಟ್ಟದಲ್ಲಿ ಒಂದು ವಿಶಿಷ್ಟವಾದ ಸ್ಥಾನಮಾನ ಇದೆ. ವೈವಿಧ್ಯಮಯವಾದ ಭೌಗೋಲಿಕ ಸ್ವರೂಪ, ವಿಭಿನ್ನವಾದ ಭಾಷೆ, ಆಚಾರ, ರೂಢಿ ಹೀಗೆ ಭಾರತದಲ್ಲಿ ಸಾಂಸ್ಕೃತಿಕ ವೈವಿಧ್ಯತೆ ಅಪಾರ. ಈ ಕಾರಣಕ್ಕಾಗೇ ಭಾರತದೇಶ ಜಾಗತಿಕ ಕುತೂಹಲದ ತಾಣವಾಗಿದೆ. ಭಾರತೀಯ ಸಮಾಜಕ್ಕೆ ಸಾವಿರಾರು ವರ್ಷಗಳ ಪರಂಪರೆ ಇದೆ. ಇಷ್ಟೊಂದು ವರ್ಷ ಈ ಸಂಸ್ಕೃತಿ ಸುಸಂಬದ್ಧವಾಗಿ ಸಾಗಿಬಂದಿದೆ ಅಂದರೆ ಇದರ ಹಿಂದೆ ನ್ಯಾಯ, ನೀತಿ, ಧರ್ಮ ಮುಂತಾದವುಗಳು ಇದೆ ಅಂತಲೇ ಅರ್ಥ. ಅಂದರೆ ಒಂದು ರೀತಿಯ ಕಾನೂನುಗಳ ಪರಿಕಲ್ಪನೆಯಲ್ಲೇ ನಮ್ಮ ಸಂಸ್ಕೃತಿ ಸಾಗಿಬಂದಿದೆ. ಅದನ್ನೇ ಸಂಪ್ರದಾಯ, ರೂಢಿ, ಶ್ರುತಿ, ಸ್ಮೃತಿ, ಉಪನಿಷತ್ ಮುಂತಾದವುಗಳಾಗಿ ಕಾನೂನಿನ ಅಂಗವೆಂದು ಗುರುತಿಸಲ್ಪಟ್ಟಿವೆ. ನಾವಿಂದು ನೋಡುತ್ತಿರುವ ಹಿಂದೂ ಕಾನೂನು ಪ್ರಾಚೀನ ಭಾರತದಲ್ಲಿನ ಸಂಪ್ರದಾಯ, ಪದ್ದತಿ, ಸ್ಮೃತಿಗಳನ್ನಾಧರಿಸಿಯೇ ಇದೆ.

ಈ ಹಿಂದೂ ಕಾನೂನು ಎನ್ನುವುದು ಎಲ್ಲ ಭಾರತೀಯರಿಗೆ ಅಥವಾ ಹಿಂದೂಗಳು ಎನಿಸಿಕೊಂಡ ಭಾರತೀಯರಿಗೆ ಅನ್ವಯಿಸುತ್ತದೆ. ಇದರಲ್ಲಿ ವಿವಾಹ, ಜೀವನಾಂಶ, ದತ್ತಕ, ವಾರಸಾ, ಸಂರಕ್ಷ ಅಧಿನಿಯಮ, ಆಸ್ತಿ ವಿಭಾಗ ಮುಂತಾದವುಗಳೆಲ್ಲ ಬರುತ್ತವೆ.

ಮತ್ತಷ್ಟು ಓದು »