ಚಂದ್ರಮನ ಚಂದ್ರಿಕೆ
– ರಂಜಿತಾ ಅಂಜು
ಅದು ಸುಂದರದ ಆ ಕ್ಷಣ , ಸೂರ್ಯನು ತನ್ನ ಕೋಪವನ್ನು ಇಂಗಿಸುತ್ತಾ , ನೆಮ್ಮದಿಯ ನಿಟ್ಟಿಸಿರು ಬಿಡುತ್ತಾ , ವನ್ಯ ಸಂಕುಲಗಳ ಮೇಲೆ ಪ್ರೀತಿ ತೋರುತ್ತಾ , ಆಗಸದಲ್ಲಿ ಮರೆಯಾಗುತಿದ್ದನು. ಹಕ್ಕಿಗಳು ಚಿಲಿಪಿಲಿ ಸದ್ದಿನೊಂದಿಗೆ , ತಮ್ಮ ಜೊತೆಗಾರರನ್ನು ಸೇರಲು ಗುಂಪಿನೊಂದಿಗೆ ತಮ್ಮ ತಮ್ಮ ಗೂಡನ್ನು ತಾವು ಸೇರಿಕೊಳ್ಳುತ್ತಿದ್ದವು…. ತಂಪನೆಯ ತಂಗಾಳಿ ಇಡೀ ಪ್ರಕೃತಿಗೆ ಉಲ್ಲಾಸದ ಅನುಭವ ನೀಡುತಲಿತ್ತು…
ಆ ರವಿಯ ಶಾಂತತೆಗೆ ಆಗಸವು ನಾಚಿ ತನ್ನ ಹೊಂಬೆಳಕಿನ ಮುಡಿಯಲ್ಲಿ ಕೆಂಪನೆಯ ಗುಲಾಬಿಯನ್ನು ಮುಡಿದಂತೆ , ಇಡೀ ಆಗಸದಲ್ಲಿ ಹಲವು ಬಣ್ಣಗಳ ರಂಗಿನಾಟದಲ್ಲಿ ಮುಳುಗಿತ್ತು. ನಿಸರ್ಗವು ತನ್ನ ನಲ್ಲನು ಅವಳನ್ನು ನೋಡಲು ಬರುತಿಹನೆಂದು ಖಾತರಿ ಪಡಿಸಿ , ತನ್ನನ್ನು ತಾನು ಸಿಂಗರಿಸಿಕೊಳ್ಳಲು ನಿರತಳಾದಳು….
ಬರಹಗಾರನ ಭಾಷೆ ಮತ್ತು ಸ್ಮಾರಕ
ಆರ್. ಕೆ. ನಾರಾಯಣ್ ಯಾರಿಗೆ ಸೇರಿದವರು? ಅವರು ಮೂಲತಃ ತಮಿಳಿಗ, ಕರ್ನಾಟಕದ ಮೈಸೂರಿನಲ್ಲೂ ವಾಸಿಸಿದ್ದರು. ಬರೆದಿದ್ದು ತಮಿಳಿನಲ್ಲೂ ಅಲ್ಲ, ಕನ್ನಡದಲ್ಲೂ ಅಲ್ಲ; ನಮ್ಮ ದೇಶದ್ದೇ ಅಲ್ಲದ ಆಂಗ್ಲ ಭಾಷೆಯಲ್ಲಿ. ಇದೊಂದೇ ಕಾರಣಕ್ಕೆ ಅವರನ್ನು ಕನ್ನಡಿಗರೂ ಅಲ್ಲ, ತಮಿಳರೂ ಅಲ್ಲ ಕೊನೆಗೆ ಭಾರತದವರೇ ಅಲ್ಲ ಎನ್ನಲಾದೀತೆ? ಬರಹಗಳು ಒಂದು ಭಾಷೆ, ರಾಜ್ಯ, ರಾಷ್ಟ್ರಕ್ಕಷ್ಟೇ ಸೀಮಿತವಾದ ಸಂಗತಿಯೇ? ಮನದ ಭಾವನೆ ತುಮುಲಗಳನ್ನು, ಸಮಾಜದ ಜೀವನ ವಿಧಾನವನ್ನು ಬರಹರೂಪದಲ್ಲಿ ಕಟ್ಟಬಯಸುವ ಲೇಖಕನಿಗೆ ತನಗೆ ಹಿಡಿತವಿರುವ ಭಾಷೆಯಲ್ಲಿ ಬರೆಯುವ ಸ್ವಾತಂತ್ರ್ಯವಿದ್ದೇ ಇದೆ. ಪ್ರಾದೇಶಿಕ ಭಾಷೆಗಳ ಪುಸ್ತಕಗಳು ಮೇಲ್ನೋಟಕ್ಕೆ ಆ ಭಾಷಿಗರಿಗಷ್ಟೇ ಸೀಮಿತವೆಂಬಂತೆ ತೋರಿದರೂ ಅನುವಾದಗಳ ಮುಖಾಂತರ ಅನ್ಯಭಾಷಿಗರನ್ನೂ ತಲುಪುತ್ತದೆ. ರಷಿಯನ್ ಭಾಷೆಯಲ್ಲಿ ಬರೆದ ಲಿಯೋ ಟಾಲ್ ಸ್ಟಾಯ್, ದಸ್ತೋವಸ್ಕಿ ಪ್ರಪಂಚವನ್ನೆಲ್ಲ ತಲುಪಲು ಸಾಧ್ಯಾವಾಗಿದ್ದು ಅನುವಾದದಿಂದ. ತೆಲುಗಿನ ಯಂಡಮೂರಿ ವಿರೇಂದ್ರನಾಥ್ ನಮ್ಮವನೆನಿಸಿದ್ದು ಅನುವಾದದಿಂದ. ಭಾಷೆಗಿಂತ ಬರಹಗಳಲ್ಲಿನ ಮಾನವೀಯತೆ, ಸಾರ್ವತ್ರಿಕತೆಯಷ್ಟೇ ಕೊನೆಗೆ ಮುಖ್ಯವಾಗುಳಿಯುವುದು. ಆರ್. ಕೆ. ನಾರಾಯಣ್ ರ ಬಹುತೇಕ ಕೃತಿಗಳು ಕನ್ನಡಕ್ಕೆ ಅನುವಾದಗೊಂಡು ಕನ್ನಡಿಗರನ್ನೂ ತಲುಪಿದೆ. ಓದಲು ಬಾರದವರಿಗೆ, ಓದಲು ಇಚ್ಛಿಸದವರಿಗೆ ಶಂಕರ್ ನಾಗ್ ರ ಸಮರ್ಥ ನಿರ್ದೇಶನದಲ್ಲಿ ಮೂಡಿಬಂದ ಮಾಲ್ಗುಡಿ ಡೇಸ್ ಧಾರಾವಾಹಿಯ ಮುಖಾಂತರ ಹಿಂದಿ ಅರ್ಥೈಸಿಕೊಳ್ಳುವ ಜನರಿಗೂ ತಲುಪಿದೆ. ಎಲ್ಲರ ಮನಸ್ಸು ತಟ್ಟುವ ನಮ್ಮದೇ ಜೀವನದ ತುಣುಕುಗಳಂತೆ ಕಾಣುವ ನಾರಾಯಣ್ ರ ಕಥೆಗಳು ಭಾಷೆಯನ್ನು ಮೀರಿ ನಮ್ಮನ್ನು ತಲುಪುತ್ತದೆ.
ಮೈಸೂರಿನಲ್ಲಿ ಆರ್. ಕೆ. ನಾರಾಯಣ್ ವಾಸವಿದ್ದ ಮನೆಯನ್ನು ಸ್ಮಾರಕವಾಗಿಸಬೇಕೆಂಬ ಸರಕಾರದ ಉದ್ದೇಶವನ್ನು ಕನ್ನಡದ ಕೆಲವು ಲೇಖಕರು ವಿರೋಧಿಸಿದ್ದಾರೆ. ‘ಕನ್ನಡಕ್ಕೆ ಆರ್. ಕೆ. ನಾರಾಯಣರ ಕೊಡುಗೆ ಏನು?’ ಎಂದು ಪ್ರಶ್ನಿಸಿದ್ದಾರೆ. ಆರ್. ಕೆ. ನಾರಾಯಣ್ ಕನ್ನಡಿಗರೂ ಅಲ್ಲ, ತಮಿಳರೂ ಅಲ್ಲ, ಭಾರತೀಯರೂ ಅಲ್ಲವೆಂಬ ಭಾವನೆ ಅವರ ಬರಹದ ಭಾಷೆಯ ಚೌಕಟ್ಟಿನಿಂದಾಗಿ ಉದ್ಭವವಾಗುವುದಾದರೆ ಆರ್. ಕೆ. ನಾರಾಯಣ್ ಒಬ್ಬ ಶ್ರೇಷ್ಠ ಸಾಹಿತಿ ಎಂಬ ದೃಷ್ಟಿಕೋನವಾದರೂ ಇರಬೇಕಲ್ಲವೇ? ಇಂಥ ಒಬ್ಬ ಸಾಹಿತಿ ವಾಸವಿದ್ದ, ಬರವಣಿಗೆ ನಡೆಸಿದ ಮನೆಯನ್ನು ಸ್ಮಾರಕ ಮಾಡುವುದನ್ನು ವಿರೋಧಿಸುವುದಕ್ಕೆ ಭಾಷೆಯೊಂದೇ ಕಾರಣವಾಗುವುದು ಸರಿಯಲ್ಲ. ಆರ್. ಕೆ. ನಾರಾಯಣ್ ರ ಸಾಹಿತ್ಯಿಕ ಕೊಡುಗೆಯನ್ನು ಗಮನಿಸುವಾಗ ಭಾಷೆ ಗೌಣವಾಗಬೇಕು. ನಾರಾಯಣ್ ರ ಮನೆಯವರು ಅವರು ವಾಸವಿದ್ದ ಮನೆಯನ್ನು ಸರಕಾರಕ್ಕೆ ‘ಮಾರಿದ್ದಾರೆ’ ಎಂಬ ಆರೋಪವೂ ಇದೆ. ಅದು ಅವರ ಮನೆಯವರ ಅನಿವಾರ್ಯತೆಯೇನೋ? ಖಾಸಗಿ ವ್ಯಕ್ತಿ ಖರೀದಿಸಿ ವಾಸ್ತುವಿನ ಹೆಸರಲ್ಲೋ, ನವೀಕರಣದ ಹೆಸರಲ್ಲೋ ಮನೆಯನ್ನು ಕೆಡವಿ ಕೆಡಿಸುವುದಕ್ಕಿಂತ ಸರಕಾರ ಖರೀದಿಸುವುದೇ ಸೂಕ್ತವಲ್ಲವೇ?
ಇನ್ನು ಲೇಖಕರ ಮನೆಯನ್ನು ಸ್ಮಾರಕವನ್ನಾಗಿಸಿ ಪ್ರವಾಸಿ ತಾಣದಂತೆ ಮಾರ್ಪಡಿಸುವುದು ಎಷ್ಟರಮಟ್ಟಿಗೆ ಸಾಹಿತ್ಯಕ್ಕೆ ಉಪಯೋಗಕಾರಿ? ಸ್ಮಾರಕಗಳಿಗೆ ವೆಚ್ಚ ಮಾಡುವ ಹಣವನ್ನು ಸಾಹಿತಿಯ ಪುಸ್ತಕಗಳನ್ನು ಮುದ್ರಿಸಿ ಜನರಿಗೆ ತಲುಪಿಸುವುದು ಹೆಚ್ಚು ಸೂಕ್ತವೆಂಬ ವಾದವೂ ಇದೆ. ಪ್ರತಿಮೆಗಳಿಗೆ ವೆಚ್ಚ ಮಾಡುವುದನ್ನು ವಿರೋಧಿಸುವುದು ಅರ್ಥಪೂರ್ಣ. ಆದರೆ ಸ್ಮಾರಕಗಳಿಂದ ಸಾಹಿತ್ಯಿಕ ಉಪಯೋಗವಿಲ್ಲ ಎಂಬುದನ್ನು ಸಂಪೂರ್ಣವಾಗಿ ಒಪ್ಪುವುದು ಕಷ್ಟ. ಮೋಜಿಗಾಗಿ, ಪ್ರವಾಸಕ್ಕಾಗಿ ಇಂಥ ಸ್ಮಾರಕಗಳಿಗೆ ಭೇಟಿ ನೀಡುವವರು ಇದ್ದಾರಾದರೂ ಸಾಹಿತಿಯ ಬರಹಗಳನ್ನು ಓದಿದ ಓದುಗನಿಗೆ ಆ ಸಾಹಿತಿ ಓಡಾಡಿದ, ಆ ಸಾಹಿತ್ಯ ಪಡಿಮೂಡಿದ ಜಾಗವನ್ನು ನೋಡುವ ಕುತೂಹಲವೂ ಇರುತ್ತದೆ. ಪುತ್ತೂರಿನ ಶಿವರಾಮ ಕಾರಂತ ಬಾಲವನ, ಕುವೆಂಪುರವರ ಕುಪ್ಪಳ್ಳಿಗೆ ಭೇಟಿ ನೀಡಿದಾಗ ಓದುಗರಿಗೆ ಸಿಗುವ ಉಲ್ಲಾಸ, ‘ನಾನೂ ಬರೆಯಬೇಕೆಂದು’ ಕೊಂಡವರಿಗೆ ಸಿಗುವ ಉತ್ಸಾಹ – ಪ್ರೇರಣೆಯನ್ನು ಕಡೆಗಣಿಸಲಾದೀತೆ? ಪುಸ್ತಕಗಳನ್ನು ಜನರಿಗೆ ತಲುಪಿಸುವುದು ಸಾಹಿತಿಗೆ ತೋರುವ ಶ್ರೇಷ್ಠ ಗೌರವವೆಂಬುದು ಸತ್ಯ, ಇದರೊಟ್ಟಿಗೆ ಸಾಹಿತಿಗಳ ಮನೆಯನ್ನು ಸ್ಮಾರಕವಾಗಿಸುವುದು ಕೂಡ ಅವರನ್ನು ಮತ್ತಷ್ಟು ಅರಿಯಲು, ಮಗದಷ್ಟು ಓದಲು ಸಹಾಯಕ.
ಚಿತ್ರಗಳು – ಡಾ ಅಶೋಕ್ ಕೆ ಆರ್, churumuri
ಇಂಗ್ಲೀಷ್ ಹೋಯ್ತು ಹಿಂದಿ ಬಂತು ಢುಂ ಢುಂ ಢುಂ…
ನಾನು ಮೊದಲೇ ಒಂದು ವಿಷಯ ಸ್ಪಷ್ಟಪಡಿಸಿ ಬರಹವನ್ನು ಮುಂದುವರೆಸುತ್ತೇನೆ. ನನಗೆ ಕನ್ನಡ ಬಿಟ್ಟು ಯಾವ ಭಾಷೆಯೂ ಸರಿಯಾಗಿ ಬರುವುದಿಲ್ಲ. ಇಂಗ್ಲಿಷ್ ‘ಕೊಂಚ ಕೊಂಚ’ ಅರ್ಥವಾದರೂ, ಹಿಂದಿ ‘ಸುಟ್ಟು ತಿನ್ನಲಿಕ್ಕೂ’ ಬರುವುದಿಲ್ಲ. ಬರುವುದಿಲ್ಲ ಎಂಬುದು ಹೆಮ್ಮೆಯ ವಿಷಯವಲ್ಲದಿದ್ದರೂ ಕಲಿಯಲು ಪ್ರಯತ್ನಿಸಿ ಸೋತಿದ್ದೇನೆ. ಇರಲಿ ಈಗ ನೇರ ವಿಷಯಕ್ಕೆ ಬರೋಣ. ಹಿಂದೆ ಒಮ್ಮೆ ಲೇಖನವೊಂದನ್ನು ಓದುವಾಗ- ಹಿಂದಿ ರಾಷ್ಟ್ರಭಾಷೆ, ಅದನ್ನು ಕಲಿಯುವುದು ನಮ್ಮ ದೇಶದ ಏಕತೆಯ ಸಂಕೇತ. ಇಂಗ್ಲೀಷ್ ಎಂಬುದು ಪರಕೀಯ ಭಾಷೆ. ಅದನ್ನು ಉಪಯೋಗಿಸಿಯೇ ಬ್ರಿಟಿಷರು ನಮ್ಮನ್ನು ೨೦೦ ಹೆಚ್ಚು ವರ್ಷ ಆಳಿದರು. ಇಂಥ ದಾಸ್ಯದ ಸಂಕೇತವನ್ನು ಒಪ್ಪಬೇಕೆ? ಅಂತೆಲ್ಲ ಬರೆದಿದ್ದರು.
ನನಗೆ ಅರ್ಥವಾಗದೇ ಇರುವುದು ಯಾವುದು ನಮ್ಮ ರಾಷ್ಟ್ರ ಭಾಷೆ? ಹಿಂದಿಗೂ ದೇಶಪ್ರೇಮಕ್ಕೂ ಏನು ಸಂಬಂಧ? ಸಮಾನತೆಯ ತಳಹದಿಯ ಮೇಲೆ ನಿಂತಿರುವ ಸಂವಿಧಾನವಿರುವ ಭಾರತದಲ್ಲಿ ಹೆಚ್ಚು ಜನ ಒಂದು ಭಾಷೆಯನ್ನು ಮಾತಾಡುತ್ತಾರೆಂಬ ಕಾರಣಕ್ಕೆ ಅದನ್ನು ರಾಷ್ಟ್ರ ಭಾಷೆ ಎಂದು ಕರೆದು ಉಳಿದ ಭಾಷೆಗಳನ್ನು ಅಧೀನ ಭಾಷೆಗಳೆಂದು ಘೋಷಿಸಲು ಸಾಧ್ಯವೇ? (ಹಿಂದಿ ನಮ್ಮ ಸೇನೆಯ ಭಾಷೆಯಾಗಿದೆ. ಅದು ಅಗತ್ಯ. ಹಲವಾರು ರಾಜ್ಯಗಳಿಂದ ಬಂದ ಸಿಪಾಯಿಗಳು ಅಲ್ಲಿದ್ದು ಅವರು ಇಂಗ್ಲೀಷ್ ಗಿಂತ ಹಿಂದಿಯನ್ನು ಸುಲಭವಾಗಿ ಕಲಿಯಬಲ್ಲರೆಂಬ ಕಾರಣವಿರಬಹುದು. ಇದನ್ನು ನಮ್ಮ ಚರ್ಚೆಯಿಂದ ಹೊರಗಿಡುವ) ಹಿಂದಿಯನ್ನು ನಾವು ತೃತೀಯ ಭಾಷೆಯಾಗಿ ಕಲಿಯುತ್ತೇವೆ, ಯಾವ ಹಿಂದಿಯಾಡುವ ರಾಜ್ಯ, ಇತರೆ ಭಾರತೀಯ ಭಾಷೆಗಳನ್ನು ತಮ್ಮ ವಿದ್ಯಾರ್ಥಿಗಳಿಗೆ ಕಲಿಸುತ್ತಿದೆ? ಈ ದ್ವಂದ್ವ ನಿಲುವು ಯಾಕೆ? ಇದು ಹಿಂದಿಯೇತರ ವಿದ್ಯಾರ್ಥಿಗಳಿಗೆ ಹೊರೆಯಲ್ಲವೇ? ಸ್ವಲ್ಪ ಯೋಚಿಸಿ. ಭಾಷೆ ಎಂಬುದು ಕೇವಲ ಮಾಧ್ಯಮ ಮಾತ್ರ ಅಲ್ಲ. ಅದೊಂದು ಸಂಸ್ಕೃತಿವಾಹಕ ಕೂಡ. ಒಂದು ಭಾಷೆ ಬಂತು ಎಂದಾದರೆ ಅದರ ಜೊತೆಯಲ್ಲೇ ಅಲ್ಲಿನ ಸಂಸ್ಕೃತಿಯ ತುಣುಕುಗಳನ್ನು ಕಲಿಯುವ ವ್ಯಕ್ತಿಗಳಲ್ಲಿ ತುರುಕುತ್ತದೆ. ಮತ್ತಷ್ಟು ಓದು 
ಕಾಯಕ ಯೋಗಿಗೊಂದು ನಮನ
ಮಧುಚಂದ್ರ ಭದ್ರಾವತಿ
ಭರತ ಖಂಡದ ಅಸಂಖ್ಯ ಭೂ ಪ್ರದೇಶಕ್ಕೆ ನೀರು ಹರಿಸಿದ ಇವರನ್ನು ಭಗೀರಥನೆನ್ನ ಬೇಕೆ?. ಪ್ರತಿಯೊಬ್ಬ ಪ್ರಜೆಗೆ ಮೂಲಭೂತ ಹಕ್ಕಾದ ಶಿಕ್ಷಣವನ್ನು ನೀಡಲು ಶ್ರಮಿಸಿದ ಸರಸ್ವತಿ ಪುತ್ರನೆನ್ನ ಬೇಕೆ ? ಭರತ ಖಂಡವೇ ಆಂಗ್ಲರ ವಿರುದ್ದ ಹೋರಾಟ ಮಾಡುತ್ತಿದ್ದಾಗ ಅದೇ ಅಂಗ್ಲರನ್ನು ಉಪಯೋಗಿಸಿಕೊಂಡು ದೇಶದ ಅಭಿರುದ್ದಿಗೆ ಶ್ರಮಿಸಿದ ಚಾಣಾಕ್ಯನೆನ್ನ ಬೇಕೆ? ಅತ್ತ ಕಡೆ ಪರಕೀಯರು, ಇತ್ತ ಕಡೆ ದೂರ ದೃಷ್ಟಿಯಿಲ್ಲದ ಸ್ವದೇಶಿಯರು, ಸಾಲದೇ ಪ್ರಾಮಾಣಿಕತೆಯಿಲ್ಲದ ಅಧಿಕಾರಿಗಳ ವರ್ಗ ಅವರೆಲ್ಲರನ್ನು ಮೀರಿ ಕಾರ್ಯ ಸಾಧನೆ ಮಾಡಿದ ಭೀಷ್ಮನೆ ?. ಆಂಗ್ಲರು ತಮ್ಮ ಸಚಿವ ಮಂಡಳಿಯಲ್ಲಿ ನೀಡಿದ ಸಚಿವ ಸ್ಥಾನವನ್ನು ನಯವಾಗಿ ನಿರಾಕರಿಸಿ ದೇಶಪ್ರೇಮ ಮೆರದ ದೇಶಭಕ್ತನೆ?.ಕೇವಲ ಭರತ ಖಂಡಕ್ಕೆ ಅಲ್ಲದೆ ಇಡಿ ವಿಶ್ವದ ಮನುಕುಲದ ಉದ್ದಾರಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡ ವಿಶ್ವಮಾನವನೆನ್ನ ಬೇಕೆ ?..
ನಾ ಅರಿಯೇ.
ಮುಲ್ಲಾ ಇಸ್ಲಾಂ ಮತ್ತು ಮಹಾತ್ಮರ ಘನತೆ
-ಡಾ ಅಶೋಕ್ ಕೆ ಆರ್
ವರುಷದ ಹಿಂದೆ ಸಂದರ್ಶನವೊಂದರಲ್ಲಿ ಶಾರೂಕ್ ಖಾನ್ ‘ಮುಲ್ಲಾಗಳ ಇಸ್ಲಾಂ ಮತ್ತು ಅಲ್ಲಾಹುವಿನ ಇಸ್ಲಾಂ’ ಎಂಬ ಮಾತು ಹೇಳಿದ್ದರು. ಮುಲ್ಲಾಗಳ ಇಸ್ಲಾಂನಿಂದ ಇಸ್ಲಾಂ ಧರ್ಮಕ್ಕೆ ಮತ್ತು ಮುಖ್ಯವಾಗಿ ಮನುಷ್ಯತ್ವಕ್ಕೆ ಆಗುತ್ತಿರುವ ಹಾನಿಯನ್ನು ವಿವರಿಸಿದ್ದರು ಶಾರೂಕ್. ಚಲನಚಿತ್ರವೊಂದರ ಸಂಬಂಧವಾಗಿ ಲಿಬಿಯಾ ಮತ್ತಿತರ ಮುಸ್ಲಿಂ ಬಾಹುಳ್ಯದ ದೇಶಗಳಲ್ಲಿ ನಡೆಯುತ್ತಿರುವ ವಿನಾಕಾರಣದ ಹಿಂಸಾಚಾರದ ವರದಿಗಳನ್ನು ಓದಿದಾಗ ಶಾರುಕ್ ಮಾತುಗಳು ನೆನಪಾದವು. ಮಾನವೀಯ ಮೌಲ್ಯಗಳ ಬಗ್ಗೆ ಮಾತನಾಡುವ ಕೆಲವು ಚಲನಚಿತ್ರಗಳನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಆಯಾ ದೇಶ – ಧರ್ಮ –ಪ್ರದೇಶಕ್ಕೆ ಸೀಮಿತವಾದಂತಹ ಚಿತ್ರಗಳಷ್ಟೇ. ಇದೇ ಕಾರಣದಿಂದ ಭಾರತದ ಚಿತ್ರಗಳಲ್ಲಿ ಪಾಕಿಸ್ತಾನ ಶತ್ರುವಾಗಿ ಚಿತ್ರಿಸಲ್ಪಡುತ್ತದೆ, ಅಮೆರಿಕಾದ ಚಿತ್ರಗಳಲ್ಲಿ ರಷಿಯನ್ನರು ಅಮಾನವೀಯರಂತೆ ತೋರಿಸಲ್ಪಡುತ್ತಾರೆ. ನಾವು ಭಾರತದವರಾಗಿದ್ದರೆ ಚಿತ್ರ ಹಿಡಿಸುತ್ತದೆ, ಮನುಷ್ಯ ನಿರ್ಮಿತ ಗಡಿಯಾಚೆಗೆ ಹುಟ್ಟಿದ್ದರೆ ಚಿತ್ರ ಕೋಪ ಮೂಡಿಸುತ್ತದೆ. ಮತಿಗೆಟ್ಟ ಧರ್ಮಾಂಧರು ಅನ್ಯಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಎಲ್ಲ ಧರ್ಮದಲ್ಲೂ ಸಾಮಾನ್ಯ, ಮುಸ್ಲಿಮರೂ ಇದಕ್ಕೆ ಹೊರತಲ್ಲ. ಅಂಥವನೇ ಒಬ್ಬ ಯಹೂದಿ ತನ್ನ ನಿರ್ದೇಶನದ ಚಿತ್ರದಲ್ಲಿ ಮುಸ್ಲಿಮರ ಬಗ್ಗೆ, ಪ್ರವಾದಿಯ ಬಗ್ಗೆ, ಇಸ್ಲಾಮಿನ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಬಳಸಿದ್ದಾನೆ ಎಂಬುದೇ ನೆಪವಾಗಿ ಮುಲ್ಲಾಗಳ ಇಸ್ಲಾಂ ವಿಜ್ರಂಭಿಸುತ್ತಿದೆ.
ಎಷ್ಟು ಕಷ್ಟ ಒಂದ್ ಮದ್ವೆ ಅಂದ್ರೆ
-ಪರೇಶ್ ಸರಾಫ್
ಡಾಕ್ಟರ್ ಮಾಮನ ಆಸ್ಪತ್ರೆಯ ಹಿಂದಿನ ಹಾಲ್ನಲ್ಲಿ ಆಗಾಗ ಚಿಕ್ಕ ಪುಟ್ಟ ಸಮಾಜ ಸೇವಾ ಕಾರ್ಯಕ್ರಮಗಳು ನಡೆಯುವುದು ಸಾಮಾನ್ಯ. ಅದರಲ್ಲಿ ಪ್ರತಿ ರವಿವಾರ ನಡೆಯುವ ಮ್ಯಾರೇಜ್ ಬ್ಯುರೋ ಸಹ ಒಂದು. ನಮ್ಮ ಸಮುದಾಯದ ಹುಡುಗ, ಹುಡುಗಿಯರ ಮಾಹಿತಿ ಸಂಗ್ರಹ, ಜಾತಕ ಮೇಳಾಮೇಳಿ
, ಮಾತುಕತೆಯಿಂದ ಹಿಡಿದು, ಬಡವರಿದ್ದರೆ ಮದುವೆಗೆ ಸಹಾಯ ಮಾಡುವಷ್ಟರವರೆಗೆ ಸಮಾಜಸೇವೆ ನಡೆಯುತ್ತಿತ್ತು. ಪ್ರಭು ಮಾಸ್ತರರು, ಮಹಾಲೆ ಮಾಮನ ಸಾರಥ್ಯದಲ್ಲಿ ಈ ಕಾರ್ಯ ಬಹಳ ಸಮರ್ಥವಾಗಿ ಮುಂದುವರೆದುಕೊಂಡು ಹೋಯಿತು. ಬರೀ ವಧು ವರರ ಮಾಹಿತಿ ನೀಡುವುದಷ್ಟೇ ಅಲ್ಲದೇ ಹುಡುಗನ, ಹುಡುಗಿಯ ಹಿನ್ನೆಲೆಗಳನ್ನು ನೋಡಿ, ಜೋಡಿ ಸರಿ ಹೊಂದುತ್ತದೆಯೋ, ಹುಡುಗನಿಗೆ ವ್ಯಸನಗಳಿವೆಯೋ ಎಂಬುದನ್ನೆಲ್ಲ ಪರೀಕ್ಷಿಸಿ ತಮ್ಮ
ಕೈಲಾದ ಮಟ್ಟಿಗೆ ಉತ್ತಮ ಸೇವೆ ನೀಡಿ, ಮದುವೆಯ ನೈತಿಕ ಹೊಣೆಯನ್ನು ಸಹ ಹೊತ್ತು ಮನೆ ಮಾತಾದರು. ಹೀಗೆ ಬರುವವರ ಸಂಖ್ಯೆ ಸಹ ಜಾಸ್ತಿಯಾಗುತ್ತ ಹೋಯಿತು. ಸಂಖ್ಯೆಗಳು ಜಾಸ್ತಿಯಾದಂತೆ ಹಲವು ಸಿಹಿ ಕಹಿ ಅನುಭವಗಳು ಸಹ ಆಗುತ್ತಾ ಹೋಯಿತು. ಪ್ರತಿ ಅನುಭವವೂ ಈಗಿನ ಸಾಮಾಜಿಕ ಜೀವನ,
ಕೈ ಹಿಡಿದವಳು…..!!
ಸೂರ್ಯ ಅವಿ
ಅವಳಿಗಾಗಿ ನಾನು ಕಾದು ಕುಳಿತಿದ್ದೆ. ಅದು ಮಳೆಗಾಲದ ದಿನಗಳು. ಅವಳು, ಇಂದು ಭೇಟಿ ಆಗುತ್ತೇನೆ ಎಂದು ಕರೆ ಮಾಡಿ ಹೇಳಿದಳು. ಸೂರ್ಯ ತನ್ನ ದಿನ ನಿತ್ಯದ ಕೆಲಸ ಮುಗಿಸಿ ಉಷೆಗೆ ಕೆಂಪು powder ಹಚ್ಚಿ ಬೆಳಕಿನ ರಂಗಿನಾಟ ಮುಗಿಸಿ ಮೆಲ್ಲಮೆಲ್ಲಗೆ ದೂರ ದಿಗಂತದಿ ಜಾರಿಕೊಂಡ. ಬಹು ದೂರದಲ್ಲಿ ಕಪ್ಪು ಮೋಡಗಳು ಮಳೆ ಹನಿಗಳ ತುಂಬಿಕೊಂಡು, ಗರ್ಭಿಣಿಯಂತೆ ಹೆಜ್ಜೆ ಇಡುತ್ತ, ಮುಗಿಲ ಸರೋವರದಿ ಒಮ್ಮೆಗೆ ಧಾವಿಸಿದವು. ಬೀಸುತಿದ್ದ ಗಾಳಿಯ ರಭಸಕ್ಕೆ ಅಲ್ಲೊಂದು ಇಲ್ಲೊಂದು ಪುಟ್ಟ ಹಕ್ಕಿಗಳು ತಮ್ಮ ಗೂಡು ಸೇರಿಕೊಳ್ಳಲಾರಂಭಿಸಿದವು .ದಿಟ್ಟ ಕಾಗೆಯೊಂದು ಗಾಳಿಯ ರಭಸದೆಡೆಗೆ ಸೂತ್ರ ಮುರಿದ ಗಾಳಿಪಟದ ಹಾಗೆ ಅತ್ತಿತ್ತ ತೇಲುತ್ತ ಮುಂದೆ ಹಾರಿತು…
ಎಷ್ಟು ಸಮಯವಾದರೂ ಅವಳ ಸುಳಿವು ಇರಲಿಲ್ಲ, ಬೀದಿಯ ಕಡೆ ನೋಡಿದರೂ ಅವಳು ಬರುವ ಮುನ್ಸೂಚನೆ ಇರಲಿಲ್ಲ. ತಕ್ಷಣಕ್ಕೆ ಗುಡುಗಿನ ಶಬ್ದ ಕೇಳಿ ಬಂತು. ತಲೆಯೆತ್ತಿ ಮೇಲೆ ನೋಡಿದೆ. ಮೋಡಗಳ ಗರ್ಭದಿಂದ ಭಾವದ್ಗೊನನವಾದ ಮೊದಲ ಮಳೆ ಹನಿ ನನ್ನ ಕಣ್ಣ ರೆಪ್ಪೆ ಮೇಲೆ ಬಂದು ತಾಕಿತು. ಪುಟ್ಟ ಮಗುವಿನ ಹಾಗೆ ಕಣ್ಣ ಉಜ್ಜಿಕೊಂಡು ತಲೆ ಎತ್ತಿದೆ, ಇದಕ್ಕಿದ್ದ ಹಾಗೆ ಅಸಂಖ್ಯಾತ , ಕೋಟಿ ಕೋಟಿ ಮಳೆ ಹನಿಗಳ ರಾಶಿ ಒಮ್ಮೆಗೆ ಭೂಮಿಯೆಡೆಗೆ ಧಾವಿಸಿದವು, ಚಿಟರ್ ಪಟರ್ ಎಂದು ಸದ್ದು ಮಾಡುತ್ತ ವಾತಾವರಣದಿ ತುಂಬಿದ ಮೌನವ ಮುರಿದವು.
ಚಿಕಾಗೋದಲ್ಲಿ ಹರಿದ ವಿವೇಕಾಮೃತ ಧಾರೆ
– ಚಕ್ರವರ್ತಿ ಸೂಲಿಬೆಲೆ
ಸ್ವಾತಂತ್ರ್ಯ ಹೋರಾಟದ ಹೊತ್ತು. ಕ್ರಾಂತಿಕಾರಿಯೊಬ್ಬ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಸಂದರ್ಭ. ಪ್ರೀತಿಲತಾ ವಡ್ಡೆದಾರ್ ಎಂಬ ಮತ್ತೊಬ್ಬ ಮಹಿಳಾ ಕ್ರಾಂತಿಕಾರಿಗೆ ಜೈಲಿನಿಂದಲೇ ಪತ್ರ ಬರೆದ. ಅಚಾನಕ್ಕಾಗಿ ನಿನ್ನ ತೋಳಿನ ರವಿಕೆಯ ಮೇಲಿದ್ದ ವಿವೇಕಾನಂದರ ಚಿತ್ರ ನನ್ನ ಕಣ್ಣಿಗೆ ಬಿತ್ತು. ಬಹಳ ಆನಂದವಾಯ್ತು. ನಮ್ಮ ಕಾಲದ ಋಷಿ ಆತ. ಆತನನ್ನು ಅನುಸರಿಸುವುದು ಒಳಿತು.ಮುಂದೆ ಪೊಲೀಸರೊಂದಿಗಿನ ಕದನದಲ್ಲಿ ಆ ಹುಡುಗಿ ಅಸುನೀಗಿದಳು.
ಇದು ಸ್ವಾಮಿ ವಿವೇಕಾನಂದರ ದೇಹತ್ಯಾಗದ ಬಹು ವರ್ಷಗಳ ನಂತರ ನಡೆದ ಘಟನೆ. ಅವರು ಬದುಕಿದ್ದಾಗಲೇ ಅಪರೂಪದ ಮತ್ತೊಂದು ಘಟನೆ ಜರುಗಿತ್ತು.
ಸ್ವಾಮೀಜಿ ಪ್ರಯಾಣಿಸುತ್ತಿದ್ದ ರೈಲು ತಮ್ಮೂರನ್ನು ಹಾದುಹೋಗಲಿದೆ ಎಂದರಿತ ಒಂದು ಊರಿನ ಜನ ತಮ್ಮ ಊರಿನಲ್ಲಿ ರೈಲು ನಿಲ್ಲಿಸುವಂತೆ ಕೇಳಿಕೊಂಡರು. ಅದನ್ನು ನಿಯಮ ಬಾಹಿರವೆಂದು ಸ್ಟೇಷನ್ ಮಾಸ್ಟರ್ ನಿರಾಕರಿಸಿದಾಗ ಅವರು ಗೋಗರೆದರು. ಆಗಲೂ ಕೇಳುವ ಲಕ್ಷಣಗಳು ಕಾಣದಾದಾಗ ಊರಿನ ಜನ ರೈಲು ಹಳಿಗಳ ಮೇಲೆ ಅಂಗಾತ ಮಲಗಿಬಿಟ್ಟರು. ಶ್ರೇಷ್ಠ ಸಂತನೊಬ್ಬನ ಪಾದಸ್ಪರ್ಷ ನಮ್ಮೂರಿನ ನೆಲಕ್ಕೆ ಆಗಲಿಲ್ಲವೆಂದರೆ ನಮ್ಮೆಲ್ಲರ ಬದುಕು ವ್ಯರ್ಥ ಎನ್ನುವುದು ಅವರ ನಿಲುವಾಗಿತ್ತು. ರೈಲು ಬಂತು. ಆನರು ಹಳಿಯಿಂದ ಅಲುಗಾಡುವ ಲಕ್ಷಣ ಕಾಣದಿದ್ದಾಗ ಸ್ಟೇಷನ್ ಮಾಸ್ಟರ್ ಗಾಬರಿಗೊಂಡು ನಿಲುಗಡೆ ಸೂಚಿಸಿದ. ಜನ ಫ್ಲಾಟ್ಫಾರಮ್ನತ್ತ ಧಾವಿಸಿದರು. ಸ್ವಾಮೀಜಿ ಮೆಟ್ಟಿಲ ಬಳಿ ಬಂದು, ನಿಂತಿದ್ದ ಜನರತ್ತ ಕೈಬೀಸಿದರು. ರೈಲು ಮತ್ತೆ ಹೊರಟಿತು.
ಅಬ್ಬ! ಇದು ವ್ಯಕ್ತಿಯೊಬ್ಬನಿಗೆ ಸಿಗಬಹುದಾದ ಅತ್ಯಂತ ಶ್ರೇಷ್ಠ ಗೌರವ. ಆತನ ಚಿಂತನೆಗಳನ್ನು ಅನುಸರಿಸುತ್ತ ಜೀವ ತೆರುವುದು ಒಂದೆಡೆಯಾದರೆ ಆತನಿಗಾಗಿ ಬಯಸಿ ಪ್ರಾಣ ಕೊಡಲು ಸಿದ್ಧವಾಗುವುದು ಮತ್ತೊಂದು. ಸ್ವಾಮೀಜಿ ಎರಡೂ ರೀತಿಯ ಅನುಯಯಿಗಳನ್ನು ಹೊಂದಿದ್ದ ಅಪರೂಪದ ವ್ಯಕ್ತಿಯಾಗಿದ್ದರು.
ರಾಂಬೋ ಮೇನಿಯಾ.. ಶರಣ್ ದೇ ದುನಿಯಾ
ಫಿಲ್ಮಿ ಪವನ್
ಈ ನಡುವೆ ಯಾಕೋ ಲೇಖನ ಅಂದ್ರೆ ಸ್ವಲ್ಪ ಸೋಂಬೇರಿಯಾಗಿಬಿಡುತಿದ್ದೆ, ಸುಲಭವಾಗಿ ಕವನ ಬರೆದುಬಿಡೋಣ, ಯಾರು ಅಷ್ಟುದ್ದ ಟೈಪ್ ಮಾಡೋರು ಅನ್ನೋ ಆಲಸಿತನ. ಆದ್ರು ಈ ಸಿನಿಮಾ ನಂಗೆ ಬಹಳಾ ಹತ್ತಿರವಾಗಿದ್ದು ಮತ್ತೆ ತುಂಬಾ ಚೆನ್ನಾಗಿರೋದ್ರಿಂದ ಸುಮಾರು ದಿನಗಳ ಮೇಲೆ ಸಿನಿಮಾ ಲೇಖನ ಬರೀತಿದ್ದೀನಿ.
ಶರಣು ಶರಣಾರ್ಥಿ ಅಂತ ತೆರೆಮೇಲೆ ಒಂದು ಪತ್ರ ಕಡೆಯಲ್ಲಿ ಶರಣ್ ಹಸ್ತಾಕ್ಷರ ಹಿಂದೆ ಶರಣ್ ಕಂಠ ಸಿನಿಮಾ ಪ್ರಾರಂಭಕ್ಕೆ ಬಂದು ಶರಣ್ ಬಗ್ಗೆ ಒಂದಷ್ಟು ವಿಷಯಗಳು ತಿಳಿಯುತ್ತದೆ, ೯೯ ಸಿನಿಮಾಗಳು ಸಹಾಯಕ ನಟನಾಗಿ ದುಡಿದ ಶರಣ್, ನಾಯಕನಾಗಲು ಇಷ್ಟು ದಿನ ಯಾಕೆ ತೊಗೊಂಡ್ರು ಅಂತ ಒಮ್ಮೆ ಅನಿಸಿದ್ರೆ ಅದ್ರಲ್ಲಿ ತಪ್ಪೇನು ಇಲ್ಲ, ಶರಣ್ ನೂರನೆ ಚಿತ್ರ ಅವರದೇ ಬ್ಯಾನರ್ ನಲ್ಲಿ ಬಂದಿರೋದು ನಿಜಕ್ಕು ಅವರಿಗೇ ಹೆಮ್ಮೆ, ಲಡ್ಡು ಪ್ರೊಡಕ್ಷನ್ಸ್ ಅಂತ ಹೆಸರಿಟ್ಟಾಗಲೆ ಇವರ ಸಿನಿಮಾ ಹಿಟ್ ಆಗಿತ್ತು ಅನ್ಸುತ್ತೆ, ಯಾಕಂದ್ರೆ ಆ ಪ್ರೊಡಕ್ಷನ್ ಹೆಸರು ನೋಡಿದೊಡನೆ ಚಿತ್ರಮಂದಿರದಲ್ಲಿ ಒಮ್ಮೆ ನೆಗೆಯ ಬುಗ್ಗೆ ಒಡೆದಿತ್ತು.









