ಬೊಜ್ಜೋ…( ಕೊಂಕಣಿ ಕವನ )
ಪರೇಶ್ ಸರಾಫ್
ಹಾತ್ತಿ ಹಾತ್ತಿ ಫುಲ್ಲಾಚೆ ಹಾರು
ತೊಂಡಾoತು ತುಳ್ಸಿ ಉದಾ
ಪೆಟೆಲೇ ತಾಕ್ಕ ಮೆರವಣಿಗೇರಿ
ಪೂತ್ ಆನಿ ಸೂನ್ ರಡ್ತಾ ಅಸಾಚಿ
ಕಷ್ಟ ಪಾವ್ನ್ ದೋಳೆ ಉದಾ ಹಾಡೋನ್
ಬಾಯ್ಲ್ ರಡ್ತಾ ಅಸ್ಸ ಪಾಪ-
ಬಾಮ್ಮುಣ್ ನಾ ಆಶಿಲ್ ಘರಾಂತ್
ಹಾವ ಆಸುನ್ ಭೀ ನಾ ಅಷಿಲ್ ತಷಿ ಮೋಣು
ಮರೆಯಾಯಿತೇ, ನಮ್ಮ ಕ್ರಿಯಾಶೀಲತೆ ?
–ಮಧುಚಂದ್ರ ಭದ್ರಾವತಿ
ಅಮೇರಿಕ ಖಂಡವನ್ನು ಅನ್ವೇಷಣೆ ಮಾಡಿದ ಸಲುವಾಗಿ ಸ್ಪೇನ್ ದೇಶದ ರಾಣಿ ಇಸಬೆಲ ಒಂದು ಕೂಟವನ್ನು ಏರ್ಪಡಿಸಿದ್ದಳು. ಅಲ್ಲಿಗೆ ಕೊಲಂಬಸ್ ಸಹ ಬಂದಿದ್ದನು. ಎಲ್ಲರೂ ಮೇಜಿನ ಮುಂದೆ ಕುಳಿತಿರುವಾಗ ಅಲ್ಲಿ ನೆರೆದಿದ್ದ ಅಮಂತ್ರಿತರನ್ನು ಕುರಿತು ” ಮೊಟ್ಟೆಯನ್ನು ಯಾರು ಮೇಜಿನ ಮೇಲೆ ನಿಲ್ಲಿಸುತ್ತಿರ ” ಎಂದು ಪ್ರಶ್ನೆಯನ್ನು ಇಟ್ಟಳು. ಅಲ್ಲಿದ್ದ ಮಹಾ ಜನರು ಅದೇನು ಮಹಾ ಎಂದು ಮೊಟ್ಟೆಯನ್ನು ಮೇಜಿನ ಮೇಲೆ ನಿಲ್ಲಿಸಲು ಪ್ರಯತ್ನಿಸಿ ವಿಫಲರಾದರು. ಆಗ ಕೊಲಂಬಸ್ ಬೆಂದ ಮೊಟ್ಟೆಯನ್ನು ಕುಕ್ಕಿ ನಿಲ್ಲಿಸಿದಾಗ ಅಲ್ಲಿ ನೆರೆದಿದ್ದ ಕೆಲವರು ಹೊಗಳಿದರೆ, ಮತ್ತೆ ಕೆಲವರು ಇದನ್ನು ನಾನು ಮಾಡುತಿದ್ದೆ ಇದರಲ್ಲಿ ಏನು ಇದೆ ಎಂದು ತಿರಸ್ಕಾರದಿಂದ ತೆಗಳಿದರು.
ಲಕ್ಷ್ಮೀ ಪುತ್ರರಾಗುವುದು ಹೇಗೆ?
-ವೆಂಕಟೇಶ್ ಗುರುರಾಜ್
ಲಕ್ಷ್ಮೀ ಪುತ್ರರಾಗುವುದು ಹೇಗೆ? ಭಾಗ-೧
ವಿಶ್ವದ ಅತೀ ಶ್ರೀಮಂತರಲ್ಲಿ ಪ್ರಥಮ ಸ್ಥಾನದಲ್ಲಿರುವ ಮೆಕ್ಸಿಕೋದೇಶದ ಕಾರ್ಲೋಸ್, ದ್ವಿತೀಯ ಸ್ಥಾನದ ಅಮೇರಿಕಾದವರಾದ ಬಿಲ್ ಗೇಟ್ಸ್, ಮೂರನೇ ಸ್ಥಾನದ ಅಮೇರಿಕಾದವರೇಆದ ವಾರೆನ್ ಬಫೆಟ್ ಮುಂತಾದ ವಿಶ್ವದ ಅತೀ ಶ್ರೀಮಂತ ೧೦ ವ್ಯಕ್ತಿಗಳು ಹೇಗೆ ಲಕ್ಷ್ಮೀ ಪುತ್ರರಾದರುಎನ್ನುವ ಬಗ್ಗೆ ಒಂದು ಸೊಗಸಾದ ಕಾರ್ಯಕ್ರಮವನ್ನು ಟಿ.ವಿ.೯ ಇತ್ತೀಚೆಗೆ ಪ್ರಸಾರಮಾಡಿತ್ತು. ಚರ್ಚೆಯಲ್ಲಿಭಾಗವಹಿಸಿದ್ದ ವಿಶ್ವದ ಶ್ರೀಮಂತರಲ್ಲಿ ೧೦೫೧ನೇ ಸ್ಥಾನದ ಮತ್ತು ಕರ್ನಾಟಕದ ೬ನೇ ಶ್ರೀಮಂತರಾದ ರಾಜೇಶ್ಎಕ್ಸ್ ಪೋರ್ಟ್ ಸಿ.ಇ.ಒ.ರಾಜೀವ್ ಮೆಹ್ತಾ, ಐ.ಐ.ಎಂ.ನಿರ್ದೇಶಕರಾದ ಮುರಳೀಧರ್ ಮತ್ತು ಹಣಕಾಸು ಹೂಡಿಕೆತಜ್ಞರಾದ ರುದ್ರಮೂರ್ತಿಯವರು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಶ್ರೀಮಂತರಾಗುವುದು ಹೇಗೆ? ಎಂಬ ಮೂಲಭೂತ ವಿಷಯವನ್ನು ಬಹಳ ಚೆನ್ನಾಗಿ ತಿಳಿಯಪಡಿಸಿದರು.
ವಿಲಕ್ಷಣ ದಾರ್ಶನಿಕ ಯೂ.ಜಿ,ಕೃಷ್ಣಮೂರ್ತಿ(ಯೂಜಿ)
-ಡಾ| ಜ್ಞಾನದೇವ್ ಮೊಳಕಾಲ್ಮುರು
ತನ್ನಲ್ಲಿ ನೀಡುವುದಕ್ಕೆ ಯಾವ ಸ೦ದೇಶವೂ ಇಲ್ಲವೆ೦ದು, ಈ ಜಗತ್ತಿನಲ್ಲಿ ನೀವು ಅರ್ಥಮಾಡಿಕೊ೦ಡು ಬದುಕುವ೦ಥದು ಏನೂ ಇಲ್ಲವೆ೦ದು ಸಾರಿಕೊ೦ಡೇ ಜಗತ್ತಿನ ಆಧ್ಯಾತ್ಮಿಕ ಜಿಜ್ಞಾಸುಗಳಲ್ಲಿ, ಚಿ೦ತಕರಲ್ಲಿ ಗಾಢ ಆಸಕ್ತಿ ಕೆರಳಿಸಿದ ಒಬ್ಬ ವರ್ಣರ೦ಜಿತ ದಾರ್ಶನಿಕ ಚಿ೦ತಕ ಉಪ್ಪಾಲೂರಿ ಗೋಪಾಲ ಕೃಷ್ಣಮೂರ್ತಿ.ಯೂಜಿಯೆ೦ದೇ ವಿಶ್ವಾದ್ಯ೦ತ ಚಿರಪರಿಚಿತ. ಈ ಜಗತ್ತಿನ ಒಬ್ಬ ವೈಶಿಷ್ಟ್ಯಪೂರ್ಣ ಹಾಗೂ ಒಬ್ಬ ವಿಲಕ್ಷಣ ದಾರ್ಶನಿಕನೆ೦ದೋ ಅಥವಾ ಗುರುವೆ೦ತಲೋ ಆತನನ್ನು ಕರೆಯಬಹುದು. ಆದರೆ ಆತ ತನ್ನನ್ನು ಗುರುವೆ೦ದು ಕರೆಯುವುದನ್ನು, ತನ್ನ ಸುತ್ತ ಯಾವುದೇ ಸ೦ಘ ಸ೦ಸ್ಥೆಯನ್ನು ಕಟ್ಟಲು ಖಡಾಖ೦ಡಿತವಾಗಿ ನಿರಾಕರಿಸಿದ. ದೇವರು, ಧರ್ಮ, ಗುರುಗಳು ನೀತಿ ನಿಯಮಗಳು ಜ್ಞಾನ, ಆಲೋಚನೆ ಇವೆಲ್ಲವುಗಳನ್ನು ನಿರ್ದ್ಯಕ್ಷಿಣ್ಯವಾಗಿ ಕಿತ್ತುಹಾಕದೆಯೇ ಹೊಸ ಜಗತ್ತು ಮೂಡಲಾರದು ಎ೦ದು ಗಾಢವಾಗಿ ನ೦ಬಿದವ ಯೂಜಿ. ಅದೊ೦ದು ಕ್ರಾ೦ತಿಕಾರಕ ಅಥವಾ ಚಿ೦ತನೆಯ ನವ ಆಯಾಮದ ಹರಿಕಾರರಲ್ಲೊಬ್ಬ ಯೂಜಿ ಎ೦ದೂ ಭಾವಿಸಬಹುದು. ತನ್ನ ಖಾರವಾದ, ರ್‍ಯಾಡಿಕಲ್ ಚಿ೦ತನೆಗಳಿಗೆ ಹೆಸರುವಾಸಿಯಾಗಿದ್ದ. ತನ್ನ ಬಳಿ ಹೋಗುವವರನ್ನು ಪೂರಾ ನಗ್ನಗೊಳಿಸುತ್ತಾನೆ. ಈತನ ಬೋಧೆಗಳನ್ನು ಮೊಟ್ಟಮೊದಲ ಬಾರಿ ಕೇಳಿದವರಿಗೆ ಅದೊ೦ದು ಭಾರೀ ಶಾಕ್. ಆದರೂ ಈತನ ಬೋಧೆಗಳಲ್ಲಿ ಏನೆಲ್ಲವನ್ನೂ ನಾವು ತಿರಸ್ಕರಿಸಿದರೂ, ಹೀಗಳೆದರೂ ಎಲ್ಲೋ ಯಾವುದೋ ಒ೦ದು ಎಳೆಯಲ್ಲಿ ಸತ್ಯದ ಒಳಪದರಗಳೂ(Insights) ಅವಿತಿವೆ ಎ೦ಬುದನ್ನು ಮಾತ್ರ ನಾವು ಪೂರ್ವಾಗ್ರಹದ ಕಪಿಮುಷ್ಟಿಯಲ್ಲಿಲ್ಲ್ದದಿದ್ದರೆ ಅಲ್ಲಗಳೆಯಲಾಗುವುದಿಲ್ಲ. ಅನೇಕರನ್ನು ಪ್ರಭಾವಗೊಳಿಸಿದ್ದಾನೆ. ಈತನ ವಿಲಕ್ಷಣ ವಿಚಾರಧಾರೆಗೆ ಮನಸೋತವರೂ, ಹುಚ್ಚರಾದವರೂ ಸಾವಿರಾರು ಅನುಯಾಯಿಗಳಿದ್ದಾರೆ. ಸ೦ಪ್ರದಾಯವಾದಿಗಳನ್ನು ದ೦ಗುಬಡಿಸಿ ಕೆರಳಿಸಿದ್ದಾನೆ. ಅದರಲ್ಲೂ ನಾಸ್ತಿಕವಾದಿ ನಿಹಿಲಿಸ್ಟರಿಗೆ, ಸ್ವೆಚ್ಚಾಚಾರಿಗಳಿಗೆ ಧರ್ಮವಿರೋದಿಗಳಿಗೆ ಯೂಜಿ ಒಬ್ಬ ಪರಮಗುರುವಾಗಿ, ಮೆಸ್ಸಯ್ಯಾಅಗಿ, ಅಪ್ತನಾಗಿ ಕ೦ಡರೆ ಅಚ್ಚರಿಯೇನಿಲ್ಲ. ಹಲವರು ಈತನನ್ನು ಜ್ಞಾನೋದಯವಾದ ಗುರು ಎ೦ದು ಭಾವಿಸಿದರೆ ಇನ್ನು ಹಲವರು ತಮ್ಮ ಹುಬ್ಬುಗಳನ್ನು ಏರಿಸಿ ಈತನೊಬ್ಬ ಹಾದಿಗೆಟ್ಟ, ಪರ್ವರ್ಟೆಡ್, ಐಡಿಯೋಸಿ೦ಕ್ರಾ೦ಟಿಕ್ ತತ್ವಜ್ಞಾನಿಯೆ೦ದೇ ಮೂದಲಿಸಿದ್ದಾರೆ. “‘ ನೀವು ಬೇರೆ ಯಾರಿ೦ದಲೂ ಕೇಳಿಸಿಕೊಳ್ಳದಿರುವ೦ಥ ಆಲೋಚನೆಯ ಬಗ್ಗೆ ಸ್ವಲ್ಪ ಹೇಳಿ. ಅಲ್ಲಿರುವುದು ಯೋಚನೆ ಮತ್ತು ಯೋಚನೆಯ ಬಗ್ಗೆಯೇ ಅಷ್ಟೇ.” ಎ೦ದು ಆಲೋಚನೆಯನ್ನೇ ನಿಮ್ಮ ಶತ್ರು ಎ೦ದು ಬಣ್ಣಿಸಿ ಅದನ್ನೇ ಮೂಲವಾಗಿ ಖ೦ಡಿಸುವ, ಯೂಜಿ ನಮ್ಮನ್ನೂ ಸ್ವಲ್ಪ ಮಟ್ಟಿಗೆ ಚಿ೦ತನೆಗೆ ಹಾಗೆಯೇ ಗೊ೦ದಲಕ್ಕೂ ಹಚ್ಚುತ್ತಾನೆ. ಈತನ ಬದುಕೇ ಒ೦ದು ನಾಟಕೀಯತೆಯಿ೦ದ ತು೦ಬಿದ್ದು ಅನೇಕ ಏರಿಳಿತಗಳಿ೦ದ ಕೂಡಿದ್ದು ಅದನ್ನೇ ಒ೦ದು ಗ್ರ೦ಥವಾಗಿ ಬರೆಯುವ ರೋಚಕ ದ್ರವ್ಯವನ್ನು ಹೊ೦ದಿದೆ.
ಪರ್ದಾ ಹಿಂದಿನ ಕತ್ತಲ ಕಥೆ – ‘ಗದ್ದಾಮ’
– ಡಾ ಅಶೋಕ್ ಕೆ ಆರ್
ಕೇರಳದಲ್ಲಿ, ಮಂಗಳೂರಿನಲ್ಲಿ, ಮೈಸೂರಿನ ಬನ್ನಿಮಂಟಪದಲ್ಲಿ ದೊಡ್ಡ ದೊಡ್ಡ ಮನೆಗಳನ್ನು ಕಟ್ಟಿಕೊಂಡಿರುವ ಮುಸ್ಲಿಮರನ್ನು, ಕೆಲವು ಹಿಂದೂಗಳನ್ನು ನೋಡಿದಾಗ ನಮ್ಮ ಮನದಲ್ಲಿ ಮೂಡುವ ಮೊದಲ ಅಭಿಪ್ರಾಯ “ದುಬೈಗ್ ಹೋಗಿ ಚೆನ್ನಾಗಿ ದುಡ್ಕೊಂಡ್ ಬಂದಿದಾನ್ ನೋಡು” ಎಂಬುದೇ ಆಗಿರುತ್ತದೆ. ಸ್ವಲ್ಪಮಟ್ಟಿಗದು ಸತ್ಯವೂ ಹೌದು. ಹೆಚ್ಚು ಹಣ ದುಡಿದ ದೊಡ್ಡ ಮನೆಗಳಿಂದಾಚೆಗೆ ಇರುವ ‘ದುಬೈ ರಿಟರ್ನ್ಡ್’ ಬಡಜನರ ಬವಣೆ ನಮ್ಮ ಕಣ್ಣಿಗೆ ಬೀಳುವುದೇ ಇಲ್ಲ. ಐಷಾರಾಮಕ್ಕಲ್ಲದೆ ಜೀವನೋಪಾಯಕ್ಕಾಗಿ ಮನೆಯ ಆರ್ಥಿಕ ಸಂಕಷ್ಟಗಳ ನಿವಾರಣೆಗಾಗಿ ಸೌದಿ ಅರೇಬಿಯಾದಂಥಹ ದೇಶಗಳಿಗೆ ವಲಸೆ ಹೋಗುವ ಜನರ ಪಡಿಪಾಟಲುಗಳನ್ನು ವಿವರಿಸುವ ಚಿತ್ರವೇ ಮಲಯಾಳಂನ ‘ಗದ್ದಾಮ’ ಅರ್ಥಾತ್ ಮನೆಗೆಲಸದವಳು. ಮನೆಗೆಲಸಕ್ಕೆ ಹೋದ ಹೆಣ್ಣುಮಕ್ಕಳ ನೋವು, ಗಾರೆ ಕೆಲಸ, ಡ್ರೈವರ್ ಕೆಲಸಕ್ಕೆ ಹೋದ ಗಂಡಸರ ಆಕ್ರಂದನವನ್ನು ಎಳೆಎಳೆಯಾಗಿ ಬಿಚ್ಚಿಡುತ್ತದೆ ‘ಗದ್ದಾಮ’. ಇವರ ಸಂಕಷ್ಟಗಳ ಜೊತೆಗೆ ಮುಸ್ಲಿಮರ ಪವಿತ್ರ ಸ್ಥಳಗಳಿರುವ ನಾಡಿನ ಅಪವಿತ್ರ ಮನಸ್ಸುಗಳ ಅನಾವರಣವೂ ಆಗುತ್ತದೆ. ಪ್ರವಾದಿ ಹುಟ್ಟಿದ ಓಡಾಡಿದ ನಾಡಿನ ಸೈತಾನರ ಪರಿಚಯ ಮಾಡಿಕೊಡುತ್ತದೆ.ಕಾನೂನಿನಂಗಳ ೮ : ಕಿರುಕುಳ, ಹಿಂಸೆ, ದೌರ್ಜನ್ಯ, ಅತ್ಯಾಚಾರ!
ಉಷಾ ಐನಕೈ ಶಿರಸಿ
ಆಧುನಿಕ ಯುಗದಲ್ಲಿ ಮಹಿಳೆಯರು ಪುರುಷರಿಗೆ ಸಮಾನಾಗಿ ನಡೆಯುತ್ತಿರುವುದು ಕಣ್ಣಿಗೆ ಕಾಣುವ ವಾಸ್ತವ, ಮಹಿಳೆಯರು ಸಬಲರಾಗಿದ್ದಾರೆ. ಸ್ವಾಭಿಮಾನಿಗಳಾಗಿದ್ದಾರೆ. ಆರ್ಥಿಕ ಹಾಗೂ ವೈಚಾರಿಕ ಸ್ವಾತಂತ್ರ್ಯವನ್ನು ಹೊಂದುತ್ತಿದ್ದಾರೆ. ಹೀಗಿದ್ದರೂ ಕಾನೂನು ಹಲವು ದೃಷ್ಟಿಯಲ್ಲಿ ಮಹಿಳೆಯರನ್ನು ಅಬಲೆಯರೆಂದೇ ಪರಿಗಣಿಸುತ್ತದೆ. ಇದಕ್ಕೆ ಕಾರಣವೇನೆಂದರೆ ಮಹಿಳೆಯರ ಪ್ರಾಕೃತಿಕ ಲಕ್ಷಣ. ಮಹಿಳೆಯ ದೈಹಿಕ ರಚನೆ ಹಾಗೂ ಮಾನಸಿಕ ಸ್ಥರಗಳು ಪುರುಷರಿಗಿಂತ ಭಿನ್ನವಾಗೇ ಇವೆ. ಆದ್ದರಿಂದ ಕುಟುಂಬದಲ್ಲಿರಲಿ, ಸಮಾಜದಲ್ಲಿರಲಿ ಅಥವಾ ಅವಳು ಕೆಲಸ ಮಾಡುವ ಕಾರ್ಯಕ್ಷೇತ್ರಗಳಲ್ಲಿರಲಿ ಪ್ರತಿಯೊಂದು ರಂಗದಲ್ಲೂ ಮಹಿಳೆಗೆ ಪುರುಷರಿಗಿಂತ ಬೇರೆಯದೇ ರೀತಿಯ ರಕ್ಷಣೆಯ ಅಗತ್ಯವಿದೆ. ಇವನ್ನೆಲ್ಲ ಮನಗಂಡು ಮಹಿಳೆಯರಿ ಗಾಗಿಯೇ ಒಂದಿಷ್ಟು ಕಾನೂನುಗಳು ಅಸ್ತಿತ್ವಕ್ಕೆ ಬಂದಿವೆ.
ಮಹಿಳಾ ದೌರ್ಜನ್ಯ
ಮಹಿಳಾ ದೌರ್ಜನ್ಯ ಎಂದರೆ ಮಹಿಳೆಯರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಎರಡೂ ರೀತಿಯಿಂದ ವಿನಾಕಾರಣ ಒತ್ತಡ ಹೇರುವುದು. ಹಾಗಾದರೆ ಈ ದೌರ್ಜನ್ಯಗಳ ಸಮರ್ಥನೆಗೆ ಮಾನ ದಂಡಗಳಾವವು? ದೈಹಿಕ ದೌರ್ಜನ್ಯಕ್ಕೆ ಕುರುಹುಗಳು ಸಿಗಬಹುದು. ಮಾನಸಿಕ ದೌರ್ಜನ್ಯಕ್ಕೆ ಸಾಕ್ಷಿ ಎಲ್ಲಿ? ಹಾಗಾಗಿ ಬಹುತೇಕ ಸಂದರ್ಭಗಳಲ್ಲಿ ಮಾನಸಿಕ ದೌರ್ಜನ್ಯಗಳಿಗೆ ಸಾಕ್ಷಾಧಾರಗಳಿಲ್ಲದೇ ಕೇವಲ ಆರೋಪ ಪ್ರತ್ಯಾರೋಪಗಳ ಹಂತದಲ್ಲೇ ನಿಂತುಬಿಡುತ್ತದೆ. ಮಹಿಳೆಯ ಮೇಲಿನ ಅತ್ಯಾಚಾರ, ಲೈಂಗಿಕ ಕಿರುಕುಳ, ವರದಕ್ಷಿಣೆ ಹಿಂಸೆ, ಕೌಟುಂಬಿಕ ಹಿಂಸೆಗಳನ್ನೆಲ್ಲ ಕಾನೂನಿನ ಪರಿಭಾಷೆಯಲ್ಲಿ ‘ದೌರ್ಜನ್ಯ’ ಎಂದು ಪರಿಗಣಿಸಲಾಗುತ್ತದೆ. ಮೇಲಿನ ಎಲ್ಲವನ್ನೂ ಕಾನೂನು ಪ್ರತ್ಯೇಕವಾಗಿ ವ್ಯಾಖ್ಯಾನಿಸುತ್ತದೆ.
ಹಳ್ಳಕ್ಕೆ ಬಿದ್ದವರ ಮೇಲೆ ಕಲ್ಲು ಹಾಕುವುದು ಯಾವ ಸೀಮೆ ಕನ್ನಡತನ ಸ್ವಾಮಿ?
-ಸುನಿಲ್ ಜಿ.ಆರ್
ಈ ನಡುವೆ ಕನ್ನಡ ಹೋರಾಟದ ಪೇಟೆಂಟ್ ತೆಗೆದುಕೊಂಡ ಹೈ-ಟೆಕ್ ಕನ್ನಡ ಓರಾಟಗಾರರ ‘ನುಡಿ ಮುತ್ತು’ಗಳಿಗೆ ಕೊನೆಯೇ ಇಲ್ಲದ್ದಾಗಿದೆ. ತರಕಾರಿ ಹೆಚ್ಚೋದ್ರಿಂದ ಹಿಡಿದು, ISROದವರು Mars Mission ಮಾಡಬೇಕೋ ಬೇಡವೋ ಎನ್ನುವವರೆಗೂ ಇವರ ಅಪ್ಪಣೆ ತಗೋಬೇಕು.ತಾವೂ ಕೆಲಸ ಮಾಡಲ್ಲ, ಮಾಡೋವ್ರಿಗೂ ಬಿಡಲ್ಲ.
‘ಅಸ್ಸಾಂ ಉಳಿಸಿ ಹೋರಾಟ ಸಮಿತಿ’ ಮೊನ್ನೆ ಬೆಂಗಳೂರಿನಲ್ಲಿ ಮಾಡಿರುವ ಪ್ರತಿಭಟನೆಗೆ ಸ್ವಾಗತಾರ್ಹ. ಎಲ್ಲೋ ಇರುವ ಅಸ್ಸಾಂಗೂ ಕರ್ನಾಟಕಕ್ಕೂ ಏನು ಸಂಬಂಧವೆಂದು ಕೇಳುವ ಇವರಿಗೆ, ನೆನ್ನೆ ಕಾಶ್ಮೀರ ಪಂಡಿತರ ಸ್ಥಿತಿ, ಇವತ್ತು ಅಸ್ಸಾಮಿಗಳದ್ದು, ನಾಳೆ ಕನ್ನಡಿಗರಾದ್ದಾಗಬಹುದೆಂಬ ಸರಳ ಆಲೋಚನೆಯೂ ಇಲ್ಲ.ಕಾಶ್ಮೀರ ಉರಿಯುತ್ತಿದ್ದಾಗ, ಅಸ್ಸಾಮಿಗಳು ಸುಮ್ಮನಿದ್ದರು. ಇಂದು ಅಸ್ಸಾಂ ಉರಿಯುತ್ತಿದ್ದಾಗ, ಕನ್ನಡಿಗರು ಸುಮ್ಮನಿದ್ದರೆ ನಾಳೆ ನಮಗೂ ಅದೇ ಗತಿಯಾಗುತ್ತದೆ.
ಕರ್ನಾಟಕದಲ್ಲೇ ಹಲವು ಸಮಸ್ಯೆಗಳಿರುವಾಗ ದೂರದ ಅಸ್ಸಾಂ ಸಮಸ್ಯೆಗೆ ಆದ್ಯತೆ ಯಾಕೆ ಎಂದು ಕೇಳಿದ್ದಾರೆ. ಅಲ್ಲ ಸ್ವಾಮಿ, ಕರ್ನಾಟಕದಲ್ಲಿ ಹಲವು ಸಾವಿರ ದಾರಿಗಳಿಂದ ಇವರು ಅದ್ಭುತ ಸೇವೆಗಳನ್ನು ಮಾಡುತ್ತಿರುವುದು ನಿಮ್ಮ ಕಣ್ಣಿಗೆ ಕಾಣಲ್ವೆ (ವನವಾಸಿ, ಏಕಲ್ ವಿದ್ಯಾಲಯ, ನೆಲೆ… ಇತ್ಯಾದಿ)? ಎಲ್ಲರಿಗೂ ‘misplaced priorities’ ಅಂತ ಬುದ್ದಿವಾದ ಹೇಳೋ ಇವರದ್ದು ‘dangerously misplaced priorities’ ಅಲ್ಲವೆ? ಮೊದಲು ಶತ್ರುಗಳನ್ನ ಹಿಡಿದು, ನಂತರ ಕಳ್ಳರನ್ನ ಹಿಡಿಬೇಕು.
ಎಲ್ಲಿದೇ ನಮ್ಮಲ್ಲಿ ಭಾರತೀಯತೆ?
-ಮಧುಚಂದ್ರ ಭದ್ರಾವತಿ
ಆಗಸ್ಟ್ ೧೫ರ ಸಂಭ್ರಮ ನೋಡಿ ಏನಾದ್ರು ಬರೆಯಲೇ ಬೇಕೆನಿಸಿತು. ೧೪ನೆ ತಾರಿಖು ಮಧ್ಯರಾತ್ರಿ ೧೧.೫೯ ರಿಂದ ೧೨.೦೦ಗೆ ಸರಿಯಾಗಿ ಗಡಿಯಾರದ ಮುಳ್ಳು ತಿರುಗಿದಾಗ ಮನೆಯ ಹೊರಗೆ ಪಟಾಕಿ ಶಬ್ಧದ ಅಬ್ಬರ ಕೇಳಿಸಿತು. ಒಂದರ್ಥದಲ್ಲಿ ಭಾರತ ಯಾವುದಾದರು ಕ್ರೀಡೆಯಲ್ಲಿ(ಕೇವಲ ಕ್ರಿಕೆಟ್ ಮಾತ್ರ) ವಿಜಯಿ ಆದರೆ ಆಚರಿಸುವ ಪಟಾಕಿಯ ಸಂಭ್ರಮ ಅದು. ಭಾರತೀಯರಿಗೆ ಭಾರತೀಯತೆ ಅರಿವು ಮೂಡುವುದು ಎರಡು ಸಂದರ್ಭದಲ್ಲಿ ಮಾತ್ರ ಒಂದು ಸ್ವತಂತ್ರ ದಿವಸದಂದು ಮತ್ತೊಂದು ಕ್ರಿಕೆಟ್ನಲ್ಲಿ ಗೆದ್ದಾಗ ಬಿಟ್ಟರೆ, ಸತ್ – ಪ್ರಜೆಗಳು ಉಳಿದ ೩೬೩ ದಿನ ಬೇರೆಯವರ ಗುಲಾಮರಗಿರುತ್ತಾರೆ. ಒಂದೆಡೆ ಮಾಹಿತಿ ತಂತ್ರಜ್ಞಾನವೆಂಬ ಗುಲಾಮ ಗಿರಿಯಲ್ಲಿ ಜ್ಞಾನಿಗಳು ಮತ್ತೊಂದೆಡೆ ಗಣಿಗಾರಿಕೆ,ಬ್ರಷ್ಟಚಾರ,ಸ್ವಜನ ಪಕ್ಷಪಾತ ಹೆಸರಿನಲ್ಲಿ ಅಜ್ಞಾನಿಗಳು.ಇಂತಹವರನ್ನು ತನ್ನ ಮಡಿಲಲ್ಲಿಟ್ಟು ಸಲಹುತ್ತಿರುವ ಕರುಣಾ ಮಾಯಿ ಭಾರತ ಮಾತೆ ಎಷ್ಟು ದಿನ ಸಹಿಸಿಯಾಳು?ಚಿನ್ನದ ಬಾಗಿಲಿಗೆ ‘ದೋಷ’ವಿಲ್ಲವೇ?!
– ಡಾ. ಅಶೋಕ್ ಕೆ.ಆರ್
ಕೆಲವು ದಿನಗಳ ಹಿಂದೆ ವಿಜಯ್ ಮಲ್ಯರವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಎಂಭತ್ತು ಲಕ್ಷ ಬೆಲೆಬಾಳುವ ಚಿನ್ನದ ಬಾಗಿಲನ್ನು ದಾನವಾಗಿ ನೀಡಿದ್ದಾರೆ. ತಿಂಗಳುಗಳ ಹಿಂದೆ ಅವರು ಹೊತ್ತಿದ್ದ ಹರಕೆಯಂತೆ ಅದು. ಮತ್ತೊಂದು ಬಾಗಿಲನ್ನು ದಾನವಾಗಿ ನೀಡುತ್ತಾರಂತೆ. ಕಿಂಗ್ ಫಿಷರ್ ಏರ್ ಲೈನ್ಸಿನ ಸಿಬ್ಬಂದಿಗಳಿಗೆ ಸಂಬಳ ಸರಿಯಾಗಿ ನೀಡದ ಮಲ್ಯ ಲಕ್ಷಾಂತರ ರುಪಾಯಿಗಳನ್ನು ಹೀಗೆ ‘ದಾನ’ದ ರೂಪದಲ್ಲಿ ಕೊಟ್ಟಿರುವುದು ಕೆಲವರ ಕಣ್ಣು ಕೆಂಪಗಾಗಿಸಿದೆ. ಇದೇ ದುಡ್ಡನ್ನು ಸಮಾಜದ ಕೆಳಸ್ತರದಲ್ಲಿರುವವರಿಗೆ ನೀಡಬಹುದಿತ್ತಲ್ಲ? ಎಂದೂ ಹಲವರು ಪ್ರಶ್ನಿಸುತ್ತಿದ್ದಾರೆ. ಬಿಡಿ, ಮೊದಲನೆಯದು ಅವರ ವ್ಯವಹಾರಕ್ಕೆ ಸಂಬಂಧಿಸಿದ್ದು, ಎರಡನೆಯದು ಅವರ ಭಕ್ತಿಗೆ ಸಂಬಂಧಿಸಿದ್ದು. ಹರಕೆ ತೀರಿಸುವುದಕ್ಕೆ ಲಕ್ಷಾಂತರ ರುಪಾಯಿ ವ್ಯಯಿಸುವುದು ಅವರ ಮರ್ಜಿ. ಆದರೆ ಅವರೆಲ್ಲಿದ್ದಾರೆ ಹಿಂದೂ ಧರ್ಮ ‘ರಕ್ಷಕರು’, ಪೇಜಾವರ ಸ್ವಾಮಿಗಳು, ಮುಖ್ಯವಾಗಿ ಅವರೆಲ್ಲಿದ್ದಾರೆ ಆ ದೇವರು?!ಹೊಸಬರಿಗೆ ಉದ್ಯೋಗವಕಾಶ -ಬಿಇ, ಬಿಟೆಕ್, ಎಂಇ, ಎಂಟೆಕ್, ಎಂಸಿಎ. – ಕನ್ನಡಿಗರಿಗೆ ಆದ್ಯತೆ
-ಅರವಿಂದ್
ಮೊಬ್ಯೆಲ್ ಟೆಕ್ನಾಲಜಿ ಕ್ಷೇತ್ರದಲ್ಲಿ ವಿಶ್ವದಲ್ಲೇ ಎರಡನೇ ಅತ್ಯುತ್ತಮ ಕಂಪೆನಿಯಾದ ರಿನೆಸೆಸ್ ಮೊಬ್ಯೆಲಿನಲ್ಲಿ ಉದ್ಯೋಗವಕಾಶ.
ಅಭ್ಯರ್ಧಿಗಳು ತಮ್ಮ ಪರಿಚಯ ಪತ್ರವನ್ನು ೩೦ನೇ ಆಗಸ್ಟ್ ೨೦೧೨ರ ಗುರುವಾರದೊಳಗೆ ಕೆಳಗಿನ ಮಿಂಚೆಗ ಕಳುಹಿಸಬೇಕು, ನಂತರ ಬರುವ ಅರ್ಜಿಗಳು ಮಾನ್ಯವಿರುವುದಿಲ್ಲ.
ವಿದ್ಯಾರ್ಹತೆ : ೨೦೧೨ ರ ಸಾಲಿನಲ್ಲಿ ಶ್ಯೆಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾದವರಿಗೆ ಆದ್ಯತೆ.





