ನಿಜವಾಗಿ ಇದು ಯಡಿಯೂರಪ್ಪನವರ ಸೋಲು!!
ರಾಘವೇಂದ್ರ ನಾವಡ
ಅ೦ತೂ ಇ೦ತು ಗೌಡರು ಶೆಟ್ಟರಿಗೆ ದಾರಿ ಬಿಟ್ಟಿದ್ದಾರೆ! ಒ೦ದು ಹ೦ತದ ಗೊ೦ದಲಗಳಿಗೆಲ್ಲಾ ಸೂಕ್ತ ಪರಿಹಾರವನ್ನು ಬಾ.ಜ.ಪಾ ಹೈಕಮಾ೦ಡ್ ಕ೦ಡುಕೊ೦ಡಿದ್ದೂ ಅಲ್ಲದೆ, ಪರಿಹಾರಗಳ ಯಥಾವತ್ ಆನುಷ್ಠಾನವೂ ಆಗಿದೆ. ಜಗದೀಶ್ ಶೆಟ್ಟರ್ ಮುಖ್ಯಮ೦ತ್ರಿಯಾಗಿದ್ದಾರೆ!
ಸ್ವಲ್ಪ ಹಿ೦ದಕ್ಕೆ ಹೋಗೋಣ: ಯಡಿಯೂರಪ್ಪನವರ ಆಧಿಕಾರಾವಧಿಯ ಆರ೦ಭದ ದಿನಗಳು. ಶೆಟ್ಟರ್ ರನ್ನು ವಿಧಾನಸಭೆಯ ಅಢ್ಯಕ್ಷ ಪದವಿಗೆ ಆಯ್ಕೆ ಮಾಡಿದಾಗ ( ಇದರ ಹಿ೦ದಿದ್ದದ್ದು ಯಡಿಯೂರಪ್ಪನವರು.. ಶೆಟ್ಟರ್ ರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಿದರೆ, ತನ್ನ ಬಲವಾದ ಪ್ರತಿಸ್ಪರ್ಧಿಯೊಬ್ಬನನ್ನು ರ೦ಗದಿ೦ದ ಆಚೆ ತಳ್ಳಿದ೦ತಾಗುತ್ತದೆ೦ಬ ಚಾಣಾಕ್ಷ ನಡೆಯನ್ನು ಆಗ ಯಡಿಯೂರಪ್ಪ ಇಟ್ಟರು!) ಭಾರೀ ಬೇಸರ ಮಾಡಿಕೊ೦ಡು, ಮನಸ್ಸಿಲ್ಲದ ಮನಸ್ಸಿನಿ೦ದ ವಿಧಾನಸಭಾ ಸ್ಪೀಕರ್ ಸ್ಥಾನವನ್ನು ಶೆಟ್ಟರ್ ಒಪ್ಪಿಕೊ೦ಡಿದ್ದರು! ಆನ೦ತರ ಮ೦ತ್ರಿಯಾಗುವವರೆಗೂ ಕಾದರು.. ಇದೀಗ ಮುಖ್ಯಮ೦ತ್ರಿಯಾಗಿದ್ದಾರೆ! ಆದರೆ ವಿಪರ್ಯಾಸ ನೋಡಿ:
ಭವಿಷ್ಯದ ಜನನಾಯಕನಾಗಬಲ್ಲ ಛಾತಿ ಹಾಗೂ ಅದೇ ತರಹದ ವರ್ಚಸ್ಸು ಮತ್ತು ನಡತೆಯನ್ನು ಅದರೊ೦ದಿಗೆ ತನ್ನ ರಾಜಕೀಯ ಜೀವನವನ್ನು ಮೊದಲಿನಿ೦ದಲೂ ಕಟ್ಟಿಕೊ೦ಡು ಬ೦ದವರು ಜಗದೀಶ್ ಶೆಟ್ಟರ್! ಅವರು ಎಲ್ಲಾ ಪಕ್ಷಗಳಿಗೂ ಎಲ್ಲಾ ಕೋಮುಗಳಿಗೂ ಮಾನ್ಯರು! ಅಜಾತಶತ್ರು.. ಯಾರನ್ನು ಟೀಕಿಸಿದರೂ ಶೆಟ್ಟರ್ ರನ್ನು ಟೀಕಿಸಲು ಸ್ವಲ್ಪ ಹಿ೦ದೆ-ಮು೦ದೆ ನೋಡಬೇಕಾಗುವ೦ಥ ವ್ಯಕ್ತಿತ್ವ ಶೆಟ್ಟರ್ ರವರದ್ದು! ಆದರೆ ಶೆಟ್ಟರ್ ಗೊದಗಿದ ದಯನೀಯ ಸ್ಠಿತಿಯೆ೦ದರೆ ಜನನಾಯಕನಾಗಿ ಅಧಿಕಾರ ಹಿಡಿಯಬೇಕಾಗಿದ್ದ ನಾಯಕನೊಬ್ಬ ಇ೦ದು ಕೇವಲ ಒ೦ದು ವರ್ಗದ ನಾಯಕನಾಗಿ ಅಧಿಕಾರಕ್ಕೆ ಬ೦ದಿದ್ದಾರೆ! ಇದು ಕರ್ನಾಟಕ ಜನತೆಯ ಸೋಲೋ ಅಥವಾ ಸ್ವತ: ಶೆಟ್ಟರ್ ಸೋಲೋ?
ಕಪಟ ನಾಟಕ ಸೂತ್ರಧಾರಿ ನೀನೇ…
– ಅಶ್ವಿನ್ ಅಮಿನ್
ದೇಶದ ಯಾವುದೇ ಮೂಲೆಯಲ್ಲಿ ಆಡ್ವಾಣಿ, ವಾಜಪೇಯಿಯಂತಹ ಹಿರಿಯ ಬಿಜೆಪಿ ಮುತ್ಸದ್ದಿಗಳು ‘ಜೈ ಶ್ರೀ ರಾಮ್ ಎಂದರೆ ಸಾಕು ಅದು ಮಂಗಳೂರಿನವರ ಬಾಯಲ್ಲಿ ಮಾರ್ದನಿಸುತ್ತದೆ. ಹಿಂದುತ್ವ ಎಂದರೆ ಉಸಿರು, ಹಿಂದುತ್ವ ಎಂದರೆ ಜೀವನ, ಹಿಂದುತ್ವ ಎಂದರೆ ಸರ್ವಸ್ವ ಎಂದು ಹಿಂದುತ್ವವನ್ನೇ ಮೈಗೂಡಿಸಿಕೊಂಡ ನಾಡು ಈ ಕರಾವಳಿಯ ಮಂಗಳೂರು ಹಾಗು ಉಡುಪಿ ಜಿಲ್ಲೆಗಳು… ಬರೀ ವೋಟ್ ಬ್ಯಾಂಕ್ ಗಷ್ಟೇ ಹಿಂದುತ್ವದ ಸೋಗು ಹಾಕಿಕೊಳ್ಳುವ ಈ ಕಾಲದಲ್ಲಿ ಹೃದಯದಿಂದ ಹಿಂದುತ್ವವನ್ನು ಅಪ್ಪಿಕೊಂಡವರಿವರು.ಇಲ್ಲಿ ಬಿಜೆಪಿಯಿಂದ ಹಿಂದುತ್ವ ಬಂದಿಲ್ಲ ಬದಲಾಗಿ ಹಿಂದುತ್ವದಿಂದ ಬಿಜೆಪಿ ಬಂದಿದೆ ಆದರೆ ಈಗ ನಾವೆಷ್ಟು ಮೂರ್ಖರಾಗಿದ್ದೆವು ಎಂಬುದರ ಅರಿವಾಗುತ್ತಿದೆ. ವೋಟ್ ಬ್ಯಾಂಕ್ ಗಾಗಿ ನಮ್ಮ ಹಿಂದುತ್ವವನ್ನು ಬಳಸಿಕೊಂಡರಲ್ಲ ಎಂಬ ಬಗ್ಗೆ ಖೇದವಾಗುತ್ತಿದೆ. ಇದಕ್ಕೆ ಕಾರಣರಾದವರ ಮೇಲೆ ಕೋಪ, ಸಿಟ್ಟು, ಅಸಹನ, ಜೊತೆ ಜೊತೆಗೆ ನಮ್ಮ ಮೇಲೆಯೇ ಅಸಹನೆ ಹುಟ್ಟುತ್ತಿದೆ…!
ಈಗಿನ ಕಾಲಘಟ್ಟದಲ್ಲಿ ಕರ್ನಾಟಕದಲ್ಲಿ ಬಿಜೆಪಿ ನಿಜವಾಗಲೂ ಅದರ ಸಿದ್ಧಾಂತಗಳನ್ನು ಉಳಿಸಿಕೊಂಡಿದ್ದರೆ ಅದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿಯಲ್ಲಿ ಮಾತ್ರವೇನೋ… ಪ್ರತಿ ಸಲದ ಚುನಾವಣೆಯಲ್ಲೂ ಬಿಜೆಪಿಗೆ ಅತ್ಯಧಿಕ ಶಾಸಕರನ್ನು ಕೊಟ್ಟ, ಪಕ್ಷದ ಯಾವ ಕ್ಲಿಷ್ಟ ಸಂದರ್ಭಗಳಲ್ಲೂ ಕೈ ಹಿಡಿಯುವಂತಹ ಜಿಲ್ಲೆಯಿದು. ಆದರೆ ಗೆದ್ದು ಅಧಿಕಾರಕ್ಕೆ ಬಂದ ಮೇಲೆ ಮಾತ್ರ ಎಲ್ಲರಿಂದಲೂ ಕಡೆಗಣಿಸಲ್ಪಟ್ಟಿತು. ಚುನಾವಣಾ ಗೆಲ್ಲುವವರೆಗೆ ಹಿಂದುತ್ವ ಎಂದು ಮಾತನಾಡುತ್ತಿದ್ದ ರಾಜ್ಯದ ಹಿರಿಯ ನಾಯಕರುಗಳು ಲಿಂಗಾಯಿತ, ಒಕ್ಕಲಿಗ ಎಂದು ಶುರುವಿಟ್ಟುಕೊಂಡರು. ‘ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು’ ಎಂದು ಭಾಷಣ ಮಾಡುವ ಮಂದಿ ಜಾತಿ ಲೆಕ್ಕ ಆರಂಭಿಸಿದರು.
ಜಾತಿ ರಾಜಕೀಯದ ನಡುವೆ ಜಾತಿ ಇಲ್ಲದವನ ಪಾಡು..!
-ಶ್ರೀಧರ್ ಜಿ ಬನವಾಸಿ
ಮೊನ್ನೆ ರಾಜ್ಯ ಒಕ್ಕಲಿಗರ ಸಮಾವೇಷ ಅದ್ದೂರಿಯಾಗಿ ನೇರವೇರಿತು. ಜಗದ್ಗುರು ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರಿಗೆ ಗುರುವಂದನೆ ಸಲ್ಲಿಸಲಾಯಿತು. ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಒಕ್ಕಲಿಗರ ಘಟಾನಘಟಿ ನಾಯಕರುಗಳನ್ನೆಲ್ಲಾ ಒಂದೇ ವೇದಿಕೆಯಲ್ಲಿ ಕೂರಿಸಲಾಗಿತ್ತು. ಒಕ್ಕಲಿಗರ ಬೇರೆ ಬೇರೆ ಮಠದ ಸ್ವಾಮೀಜಿಗಳು ಕೂಡ ಒಂದೇ ವೇದಿಕೆಯಲ್ಲಿ ಸೇರಿಕೊಂಡಿದ್ದು ಆ ದಿನದ ವಿಶೇಷವಾಗಿತ್ತು. ಒಕ್ಕಲಿಗರಲ್ಲಿ ಮೂರ್ನಾಲ್ಕು ಪಂಗಡಗಳಿದ್ದರೂ ನಾವೆಲ್ಲಾ ಒಂದೇ ಅಂತ ತೋರಿಸುವ ಪ್ರಯತ್ನ ಹಾಗೂ ರಾಜಕೀಯ ಪಕ್ಷಗಳ ನಡುವೆಯೂ ಒಕ್ಕಲಿಗರು ಒಂದು ತೋರಿಸವ ಪ್ರಯತ್ನ ಕೂಡ ಮಾಡಲಾಯಿತು. ಮುಖ್ಯಮಂತ್ರಿ ಸದಾನಂದ ಗೌಡರು ತಮಗೆ ಮುಖ್ಯಮಂತ್ರಿ ಪಟ್ಟ ಸಿಕ್ಕಿದ್ದೇ ತಾವು ಒಕ್ಕಲಿಗ ಅನ್ನುವ ಕಾರಣ ಅಂತ ಸಭೆಯಲ್ಲಿ ಉದ್ಗೋಷಿಸಿದರು.
ಮಿಂಚು ಸ್ನೇಹ
– ಪ್ರಶಸ್ತಿ ಪಿ. ಸಾಗರ
ಹೊಸ ನೀರು ಬಂದಾಗ ಹಳೇ ನೀರು ಕೊಚ್ಕೊಂಡು ಹೋಗೋ ತರ ಹೊಸ ಗೆಳೆಯರು ಬಂದಾಗ ಹಳಬ್ರು ಮರ್ತೋಗೋದು ತುಂಬಾ ಕಾಮನ್ನು ಅನ್ನೋ ಹಾಗೆ ಆಗ್ತಾ ಇದೆಯಲ್ಲಾ ಈಗ. ಹೈಟೆಕ್ ಜಮಾನಾದಲ್ಲಿ ತುಂಡಾಗೋ ಹೈ ಸ್ಪೀಡ್ ಸಂಬಂಧಗಳ ಮಧ್ಯೆ ಅಲ್ಲೊಂದು ಇಲ್ಲೊಂದು ಬೆಸುಗೆಗಳು ಕಾಲದೊಂದಿಗೆ ಸವೆಯದೇ ಹಾಗೇ ಉಳ್ಕಂಡು ತಾವೆಷ್ಟು ಗಟ್ಟಿ ಅನ್ನೋದ್ನ ಸಾರ್ತಾ ಇರುತ್ತೆ. ಅದೇ ತರ ಕೆಲ ನೆನಪುಗಳೂ ಸಹ. ಎಷ್ಟೋ ಸಲ ಬಸ್ಸಲ್ಲಿ, ರೈಲಲ್ಲಿ ಹೋಗಿರ್ತೀವಿ.ಈ ತರ ಒಂದೂವರೆ ಘಂಟೆ ಇಂದ , ಒಂದು ದಿನದ ಪ್ರಯಾಣದಲ್ಲಿ ಜೊತೆಯಾಗೋ ಜನರು ನಿರೀಕ್ಷಿಸದ ಸಮಯದಲ್ಲಿ ಮೂಡೋ ಮಿಂಚಂತೆ ಮಿಂಚಿ ನಮಗೇ ಅರಿವಿಲ್ಲದಂತೆ ಆ ಪ್ರಯಾಣದ ಅವಧಿಗೆ ನಮ್ಮ ಸ್ನೇಹಿತರಾಗಿ ಹಾಗೇ ಮರೆಯಾಗಿ ಬಿಡ್ತಾರೆ.ಆದರೆ ಅವರಲ್ಲಿ ಎಷ್ಟೋ ಜನರ ಮಾತುಗಳು, ನೆನಪುಗಳು ಅವರ ಹೆಸರು ಮರ್ತೋದ್ರೂ ನೆನ್ಪಲ್ಲಿ ಉಳ್ದು ಬಿಡುತ್ತೆ.ಅಂಥದೇ ಕೆಲ ನೆನಪುಗಳ ಸುತ್ತ.. ಈ ಬರಹ
ನಮ್ಮೂರು ಸಾಗರದಿಂದ ಶಿವಮೊಗ್ಗಕ್ಕೆ ಒಂದೂವರೆ ಘಂಟೆ ದೂರ .ಈಗಿನ ಬೆಂಗಳೂರಿನ ಟ್ರಾಫಿಕ್ಕಿಗೆ ಹೋಲಿಸಿದ್ರೆ ಅದು ತೀರಾ ಹೆಚ್ಚು ಹೊತ್ತಾಗ್ದೇ ಇದ್ರೂ ಆಗ ನಮಗದು ಸ್ವಲ್ಪ ಜಾಸ್ತೀನೆ ಹೊತ್ತು.ಆಗ ಹೈಸ್ಕೂಲು ದಿನಗಳು. ಬಸ್ಸಲ್ಲಿ ಮೈಮರೆತು ನಿದ್ರೆ ಮಾಡಿದ್ರೆ ಪಕ್ಕಕ್ಕಿರೋರು ದುಡ್ಡು, ಬ್ಯಾಗು ಕದ್ಕೊಂಡು ಹೋಗ್ತಾರೆ ಅಂತ ಲೆಕ್ಕ ಇಲ್ಲದ, ರೆಕ್ಕೆ ಪುಕ್ಕ ಇಲ್ಲದ ಗಾಳಿ ಸುದ್ದಿ ಕಿವಿಗೆ ಬಿದ್ದಿದ್ರ ಪರಿಣಾಮನೋ ಏನೋ ನಾವೆಂತೂ ಬಸ್ಸಲ್ಲಿ ಒಬ್ನೇ ಹೋಗ್ತಾ ಪಕ್ಕಕ್ಕೆ ಬಂದು ಕೂರೋ ಅವ್ರುನ್ನ ಮೊದಲು ಗಮನಿಸ್ತಿದ್ದೆ. ಸ್ವಲ್ಪ ದೊಡ್ಡೋರು ಅಂದ್ರೆ ನೀವೆಲ್ಲಿಗೆ ಹೋಗೋವ್ರು ಅಣ್ಣಾ, ಶಿವಮೊಗ್ಗಕ್ಕಾ ಅಂತನೋ ಏನೋ ಮಾತಿಗೆಳ್ಯೋದು.ಕೆಲೋ ಸಲ ಅವ್ರೇ ನೀವೆಲ್ಲಿಗೆ ಹೋಗೋರು ಅಂತ ಮಾತಿಗೆ ಶುರು ಮಾಡೋರು. ತೀರಾ ಬಿಗುಮಾನ ಇಲ್ದೇ ಮಾತಾಡೋರಾದ್ರೆ ಇಬ್ರಿಗೂ ಒಳ್ಳೇ ಟೈಂ ಪಾಸ್
ಧರ್ಮವೆಂಬ ಅಫೀಮು ಮತ್ತು ಜಾತಿಯೆಂಬ ಮರಿಜುವಾನ….
– ಡಾ. ಅಶೋಕ್ ಕೆ.ಆರ್
ಮಾರ್ಕ್ಸ್ ವಾದ ಮತ್ತದರ ವಿವಿಧ ಸರಣಿವಾದಗಳು ಪದೇ ಪದೇ ವಿಫಲವಾದ ನಂತರೂ ಮತ್ತೆ ಮತ್ತೆ ಪ್ರಸ್ತುತವೆನ್ನಿಸುತ್ತಲೇ ಸಾಗುವುದಕ್ಕೆ ಕಾರಣಗಳೇನು? ಕರ್ನಾಟಕದ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದಾಗ “Religion is opium” ಎಂದು ದಶಕಗಳ ಹಿಂದೆ ಯಾವಗಲೋ ಮಾರ್ಕ್ಸ್ ಹೇಳಿದ್ದ ಮಾತುಗಳು ನೆನಪಾಗದೇ ಇರದು. ‘ಭಿನ್ನ’ ಪಕ್ಷವೆಂದು ತನ್ನ ಬೆನ್ನು ತಾನೇ ತಟ್ಟಿಕೊಳ್ಳುವ ಭಾ.ಜ.ಪದ ಭಿನ್ನತೆ ಇಷ್ಟೊಂದು ಅಸಹ್ಯಕರವಾಗಿರಬಲ್ಲದು ಎಂದು ಸ್ವತಃ ಅದರ ಕಾರ್ಯಕರ್ತರೇ ನಿರೀಕ್ಷಿಸಿರಲಿಲ್ಲವೇನೋ?!
ಸದಾನ೦ದ ಗೌಡರ ತಲೆದ೦ಡ ಭಾ.ಜ.ಪಾಕ್ಕೆ ಭಾರೀ ಹೊರೆಯಾದೀತು !!
ರಾಘವೇಂದ್ರ ನಾವಡ
ನಾಟಕದ ಎರಡನೇ ಅ೦ಕಕ್ಕೆ ತೆರೆಬಿದ್ದಿದೆ! ಸದಾನ೦ದ ಗೌಡರು ಕೆಳಗಿಳಿದಿದ್ದಾರೆ. ನಿರೀಕ್ಷಿತವಾಗಿ ಶೆಟ್ಟರ್ ಮೇಲೆದ್ದಿದ್ದಾರೆ! “ ಪರವಾಗಿಲ್ಲ “ ಏನೋ ಒ೦ದು ದಾರಿಗೆ ಬರ್ತಾ ಇದ್ದಾರೆ.. ಮುಖ್ಯವಾಗಿ ಕರ್ನಾಟಕದಲ್ಲಿ ಬಿ.ಜೆ.ಪಿಗೆ ಅ೦ಟಿಕೊ೦ಡಿದ್ದ ಕೆಟ್ಟ ವರ್ಚಸ್ಸು ಬದಲಾಗುವ ಎಲ್ಲಾ ಲಕ್ಷಣಗಳೂ ಚಿಗುರುತ್ತಿವೆ, ಎ೦ದು ಸಮಾಧಾನಪಡುತ್ತಿದ್ದಾಗಲೇ ಮತ್ತೊಮ್ಮೆ ಬಿ.ಜೆ.ಪಿ.ಯಲ್ಲಿ ಮಹಾ ಪ್ರಹಸನವೊ೦ದು ಜರುಗಿ, ಜಾತಿ ರಾಜಕಾರಣ ಮೊದಲ್ಗೊ೦ಡು, ಮಾಜಿ ಮುಖ್ಯಮ೦ತ್ರಿಗಳ ವೈಯಕ್ತಿಕ ಹಠ-ಪ್ರತಿಷ್ಠೆಯ ವಿಜಯದೊ೦ದಿಗೆ ಸದಾನ೦ದಗೌಡರ ತಲೆದ೦ಡವನ್ನು ಆ ಪಕ್ಷದ ಹೈಕಮಾ೦ಡ್ ಪಡೆದಿದೆ!
ಸದಾನ೦ದ ಗೌಡರ ತಲೆದ೦ಡ ಮು೦ಬರುವ ವಿಧಾನಸಭಾ ಚುನಾವಣೆಯಲ್ಲಿ ಭಾ.ಜ.ಪಾ ಕ್ಕೆ ಭಾರೀ ಹೊರೆಯಾದೀತೆ೦ಬ ಸ೦ಶಯ ಕಾಲದ ಕನ್ನಡಿಗೆ!ಕಳೆದ ನಾಲ್ಕು ವರ್ಷದಿ೦ದಲೂ ಕಚ್ಚಾಡುತ್ತಲೇ ಇದ್ದ ಬಿ.ಜೆ.ಪಿ. ಯ ಆ೦ತರಿಕ ಕಲಹ ಹಾಗೂ “ ಯಡಿಯೂರಪ್ಪ“ ಎ೦ಬ ಮಾಜಿ ಮುಖ್ಯಮ೦ತ್ರಿಯ ವೈಯಕ್ತಿಕ ಹತಾಶೆ, ಹಟ, ಪ್ರತಿಷ್ಠೆಗಳು, ಅಧಿಕಾರ ದಾಹ ತನ್ಮೂಲಕ ತುಳಿದ ಅನೀತಿಯ ಹಾದಿಗಳೆಲ್ಲಾ ಸೇರಿ ಸದಾನ೦ದ ಗೌಡರನ್ನು ಪಟ್ಟದಿ೦ದ ಕೆಳಗಿಳಿಸಿವೆ! ಹೇಗೋ ಕಳೆದ ೯ ತಿ೦ಗಳಿ೦ದ ಸಕಾಲದ೦ತಹ ಯೋಜನೆಗಳನ್ನು ಜಾರಿಗೆ ತ೦ದು ಭ್ರಷ್ಟಾಚಾರ ಮುಕ್ತ ( ಅವರೇ ಹೇಳಿದ೦ತೆ) ಯಾವುದೇ ಹಗರಣಗಳಿಲ್ಲದ (ಸುರೇಶ್ ಕುಮಾರ್ ಪ್ರಕರಣವೊ೦ದನ್ನು ಹೊರತು ಪಡಿಸಿ ) ಹಾಗೂ ಹೀಗೂ ಕರ್ನಾಟಕದಲ್ಲಿ ಸರ್ಕಾರವೆ೦ಬ ನೌಕೆಯನ್ನು ನಿಧಾನವಾಗಿ ದಡ ಸೇರಿಸುವಷ್ಟರಲ್ಲಿ, ಸದಾನ೦ದ ಗೌಡರ ಪಟ್ಟ ಅಲುಗಾಡಿತು! ಶೆಟ್ಟರ್ ಮುಖ್ಯಮ೦ತ್ರಿ ಗಾದಿಗೇರುವ ಹೊಸ ಮನುಷ್ಯರು~ ಶೆಟ್ಟರ್ ಹೇಳಿ- ಕೇಳಿ ಗೋವಿನ೦ಥವರು. ಸದಾನ೦ದಗೌಡರಷ್ಟೂ ಗಡಸು ಅವರಲ್ಲ! ಉಳಿದ ಅವಢಿಯನ್ನ೦ತೂ ಪೂರೈಸಬಲ್ಲರೇನೋ? ಅಥವಾ ಅವಧಿಪೂರ್ವ ಚುನಾವಣೆಗೆ ಕರ್ನಾಟಕ ಹೆಜ್ಜೆಯಿಡುತ್ತೋ ಕಾದು ನೋಡಬೇಕು!
ಯಾವ್ ಜಾತಿಯ ಮುಖ್ಯಮಂತ್ರಿ ಬೇಕು!?
– ರಾಕೇಶ್ ಶೆಟ್ಟಿ
ಯಡ್ಡಿ ಕೆಳಗಿಳಿದಾಗ ಬರೆದಿದ್ದು.. ಈಗ ಸದಾ ಇಳಿಯುವಾಗಲೂ ಅಪ್ಪ್ಲೈ ಆಗುತ್ತೆ…! ಅತಿ ಕೆಟ್ಟ ರಾಜಕಾರಣಕ್ಕೆ ನಮ್ಮ ರಾಜ್ಯ ಸಾಕ್ಷಿಯಾಗಿರುವುದು ದೌರ್ಭಾಗ್ಯ…!
———————————————————————————————————————————————-
ಅಂತು ಬಿಜೆಪಿ ಹೈಕಮಾಂಡ್ ಧೈರ್ಯ ಮಾಡಿದೆ…! ಯಡ್ಯೂರಪ್ಪನವ್ರಿಗೆ ಕುರ್ಚಿ ಬಿಡಿ ಅನ್ನುವ ಸಂದೇಶವನ್ನ ರವಾನಿಸಿದೆ.ಸಂದೇಶ ಮಾಧ್ಯಮದ ಮೂಲಕ ಬಂದಿದ್ದು ನಿನ್ನೆ ಬೆಳಿಗ್ಗೆಯೇ.ಆದ್ರೆ ಇನ್ನ ಯಡ್ಯೂರಪ್ಪ ಮಾತ್ರ ಜಪ್ಪಯ್ಯ ಅನ್ನುತ್ತಿಲ್ಲ..!
ಕಳೆದ ೧೦-೧೫ ದಿನಗಳಿಂದ ಕರ್ನಾಟಕ ಸರ್ಕಾರ ಜನರ ಸಮಸ್ಯೆಯನ್ನ ನೋಡೋದು ಬಿಟ್ಟು ತನ್ನ ಬುಡ ಭದ್ರ ಮಾಡಿಕೊಳ್ಳುವ ಬಗ್ಗೆಯೇ ತಲೆಕೆಡಿಸಿಕೊಂಡು ಕೂತಿದೆ.ಕಳೆದ ಹತ್ತು ದಿನ ಬಿಡಿ, ಉತ್ತರ ಕರ್ನಾಟಕದಲ್ಲಿ ನೆರೆ ಬಂದು ಜನ ತುತ್ತು ಅನ್ನಕ್ಕೆ ಸೂರಿಗೆ ಪರದಾಡುತ್ತಿರುವಾಗಲೇ ರೆಡ್ಡಿಗಳು ಬಂಡಾಯದ ಬಾವುಟ ಹಾರಿಸಿದಾಗಲೂ ಜನ ಸತ್ತರೆ ಸಾಯಲಿ ಕುರ್ಚಿ ಉಳಿದರೆ ಸಾಕು ಅಂತ ಬಿಜೆಪಿ ಸರ್ಕಾರವೇ ದೆಹಲಿಗೆ ಓಡಿ ಹೋಗಿತ್ತು…! ಹಾಗೇನಾದರೂ ಯಡ್ಯೂರಪ್ಪ ಬಂಡಾಯಕ್ಕೆ ಬಗ್ಗದೇ ರಾಜೀನಾಮೆ ಕೊಟ್ಟಿದ್ದರೆ ಜನ ಮತ್ತೆ ಗೆಲ್ಲಿಸಿ ಕಳಿಸುತಿದ್ದರೇನೋ.ಆದರೆ ಯಡ್ಯೂರಪ್ಪ ಶರಣಾಗಿ ಕುರ್ಚಿಯ ಮುಂದೆ ಬೋರಲು ಬಿದ್ದಿದ್ದರು..!
ಹಾಗೇ ನೋಡಿದರೆ ಈ ಸರ್ಕಾರ ರೆಡ್ಡಿಗಳ ಬಂಡಾಯದ ಸಮಯದಲ್ಲಿ ಉತ್ತರ ಕರ್ನಾಟಕ ಪ್ರವಾಹಕ್ಕೆ ಸಿಕ್ಕಿ ತತ್ತರಿಸುತ್ತಿದ್ದರೂ ಹಾಳು ಬಿದ್ದು ಹೋಗಿ ಅನ್ನುವಂತೆ ಸುಮ್ಮನಿದ್ದಿದ್ದೇ ಕಡೆ ಬಾರಿಯೇನಲ್ಲ,ಅದಾದ ಮೇಲೆ ರೆಸಾರ್ಟ್ನಲ್ಲಿ ಕತ್ತೆ ವ್ಯಾಪರಕ್ಕಿಳಿದಾಗಲೂ ತಿಂಗಳುಗಟ್ಟಲೇ ರಾಜ್ಯ ಅನಾಥವಾಗಿತ್ತು.ಸರ್ಕಾರಿ ಯಂತ್ರಕ್ಕೆ ತುಕ್ಕು ಹಿಡಿದಿತ್ತು.
ಮತ್ತೆ ಮುಖ್ಯಮಂತ್ರಿಯ ವಿರುದ್ಧ ಪ್ರಾಸಿಕ್ಯೂಶನ್ಗೆ ರಾಜ್ಯಪಾಲರು ಅನುಮತಿ ನೀಡಿದಾಗ ಖುದ್ದು ಆಡಳಿತ ಪಕ್ಷವೇ ಬಂದ್ ಕರೆ ಕೊಟ್ಟೂ ವೋಟ್ ಹಾಕಿ ಕಳುಹಿಸಿದ ಜನಸಾಮಾನ್ಯರಿಗೆ ತೊಂದರೆ ಕೊಟ್ಟಿದ್ದು ಮಹಾನ್ ಸಾಧನೆಯೇ (?) ಸರಿ.ಅದೆಲ್ಲಾ ಆಗಿ ಮತ್ತೆ ಸುಪ್ರಿಂ ಕೋರ್ಟ್ ತೀರ್ಪು ಬಂದ ಮೇಲೂ ಮತ್ತೆ ದೆಹಲಿಯಲ್ಲಿ ಕುರ್ಚಿ ಸವಾರಿ ಮಾಡಿ ಬಂದಾಗಲೂ ಕರ್ನಾಟಕ ಅನಾಥವಾಗಿತ್ತು.
ಖೆಡ್ಡ :೩ – ಕುರ್ಚಿಗಳು!
ಹೇಮಂತ್ ಕುಮಾರ್
ಸೂರ್ಯ ಎಂದಿನಂತೆ ಬೆಳಕನ್ನು ಕಕ್ಕುತ್ತಲಿದ್ದ ಆದರೆ ಇಂದಿನ ಬೆಳಗ್ಗೆ ಎಂದಿನಂತಿರಲಿಲ್ಲ. ಅಪ್ಪ ಅಮ್ಮ, ಅವರ ಎಂಟು ವರ್ಷದ ಮಗ ಎಂದಿನಂತೆಯೇ ಸ್ನಾನಾದಿ ತಿಂಡಿ ತೀರ್ಥಗಳನ್ನು ಗಡಬಡನೇ ಮುಗಿಸಿ ಟಿಫಿನ್ ಬಾಕ್ಸುಗಳನ್ನು ಸಿದ್ಧಗಳೊಸಿಕೊಂಡು, ಮಗ ಶಾಲೆಯ ಸಮವಸ್ತ್ರ, ಅಪ್ಪ ಅಮ್ಮ ಆಫೀಸಿನ ಐಡೆಂಟಿಟಿ ಕಾರ್ಡು, ಊಟದ ಬುತ್ತಿಯನ್ನು ಹೊತ್ತುಕೊಂಡು ಮನೆಯಿಂದ ಹೊರಡುತ್ತಾ ಮೂವರೂ ಒಂದೊಂದು ಕುರ್ಚಿಗಳನ್ನು ಹೊತ್ತುಕೊಂಡು ಮನೆ ಬೀಗ ಹಾಕಿ ಹೊರಡುವರು. ಅಕ್ಕ ಪಕ್ಕದ ಮನೆಯವರೂ ಸಹ ಅದೇ ರೀತಿ ಸಂಸಾರ ಸಮೇತ ಕುರ್ಚಿಗಳನ್ನು ಹೊತ್ತುಕೊಂಡು ಸೈಕಲ್ ಗಳಿದ್ದ ಮಕ್ಕಳು ಸೈಕಲ್ಲಿನಲ್ಲಿ, ದ್ವಿಚಕ್ರವಾಹನಗಳಿದ್ದವರು, ಕಾರಿದ್ದವರು, ಬಸ್ಸಿನಲ್ಲಿ ಹೊರಡುವವರು ಎಲ್ಲರ ಕೈಗಳಲ್ಲೂ ಹೆಗಲ ಮೇಲೂ ಒಂದೊಂದು ಕುರ್ಚಿಗಳು. ಇಡೀ ಊರಿಗೆ ಊರೇ ಒಬ್ಬರನ್ನೊಬ್ಬರು ನೋಡುತ್ತಾ ಮುಗುಳ್ನಗುತ್ತಾ ಗೊತ್ತಿದ್ದವರೊಂದಿಗೆ ಮಾತನಾಡುತ್ತಾ ಬಣ್ಣ ಬಣ್ಣದ ಕುರ್ಚಿಗಳನ್ನು ಹಿಡಿದುಕೊಂಡು ಒಂದೇ ದಾರಿಯಲ್ಲಿ ಸಾಗುತ್ತಿರುವುದು. ದೊಡ್ಡ ಲಾರಿಯೊಂದು ಅದರ ಭರ್ತಿ ಕುರ್ಚಿಗಳನ್ನು ಹೊತ್ತುಕೊಂಡು ಜನರ ನಡುವಿನಲ್ಲಿ ಜಾಗ ಮಾಡಿಕೊಂಡು ಮುಂದುವರೆಯಿತು.
ಶೇರು ಮಾರುಕಟ್ಟೆ : ಭಾಗ -೨
– ವೆಂಕಟೇಶ್ ಗುರುರಾಜ್
ನಮ್ಮ ದೇಶದ ಗುಜರಾತಿಗಳು ಮತ್ತು ಮಾರ್ವಾಡಿಗಳು ಈ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವುದು ಹೆಚ್ಚಾಗಿ ಕಂಡುಬರುತ್ತದೆ. ನಮ್ಮ ಕನ್ನಡಿಗರು ಹೆಚ್ಚಾಗಿ ಬ್ಯಾಂಕ್/ಅಂಚೆ ಕಛೇರಿ ಗಳಲ್ಲಿ ನಿಶ್ಚಿತ ಠೇವಣಿಗಳಲ್ಲಿ ಹಣ ಇಟ್ಟು ಅವರು ಕೊಡುವ ೧೦-೧೧% ವಾರ್ಷಿಕ ಬಡ್ಡಿಗೆ ತೃಪ್ತಿಪಟ್ಟುಕೊಳ್ಳುತ್ತಾರೆ. ಇನ್ನು ಕೆಲವರು ಚಿನ್ನವನ್ನು ಒಡವೆ ರೂಪದಲ್ಲಿ ಇಟ್ಟುಕೊಂಡು ತಮ್ಮ ಕಷ್ಟ ಕಾಲದಲ್ಲಿ ಉಪಯೋಗಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ಭೂಮಿಯ ಮೇಲೆ ಹಣವನ್ನು ವಿನಿಯೋಗಿಸುತ್ತಾರೆ. ಕನ್ನಡಿಗರು ಈ ಶೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುವುದು ಬಹಳ ಕಡಿಮೆ. ಒಂದು ಜ್ಞಾನದ ಕೊರತೆಯಾದರೆ, ಮತ್ತೊಂದು ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲು ಹೆಚ್ಚಾಗಿ ಕನ್ನಡಿಗರು ಇಷ್ಟಪಡುವುದಿಲ್ಲ. ಆದ ಕಾರಣ ನಮ್ಮಲ್ಲಿ ಈ ಶೇರು ಮಾರುಕಟ್ಟೆಯ ಬಗ್ಗೆ ಕನ್ನಡದಲ್ಲಿ ಬಂದಿರುವ ಪುಸ್ತಕಗಳು ಬಹಳ ಕಡಿಮೆ. ಕೆಲವು ಪತ್ರಿಕೆಗಳು ಲೇಖನಗಳನ್ನು ಆಗಾಗ ಪ್ರಕಟಿಸುತ್ತವೆ. ಆದರೆ ಅದು ಬಹಳ ಕಡಿಮೆ. ನಮ್ಮ ಕನ್ನಡಿಗರು ಈ ಮಾರುಕಟ್ಟೆಯಿಂದ ದೂರ ಇರಲು ಇದೂ ಸಹ ಒಂದು ಕಾರಣವಿರಬಹುದು. ಆಂಗ್ಲ ಭಾಷೆಯಲ್ಲಿ ಈ ಮಾರುಕಟ್ಟೆಯ ಬಗ್ಗೆ ಸಂಭೃದ್ದ ಮಾಹಿತಿ ಇದೆ. ಗೊಗಲ್ ನಲ್ಲಿಯೂ ಸಹ ಅನೇಕ ಮಾಹಿತಿ ಪಡೆಯಬಹುದು.
ಪ್ರಪಂಚದ ೩ನೇ ಅತೀ ದೊಡ್ಡ ಶ್ರೀಮಂತ ವಾರನ್ ಬಫೆಟ್ ಶೇರು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಹಣ ಸಂಪಾದಿಸಿರುವ ವ್ಯಕ್ತಿ. ಇವರ ಹೂಡಿಕೆ ಕಂಪನಿಯ ಹೆಸರು ” ಬರ್ಕ್ ಶೈರ್ ಹಾಥ್ ವೇ ’ ಇವರು ತಮ್ಮ ೧೩-೧೪ನೇ ವಯಸ್ಸಿನಲ್ಲಿ ಈ ಶೇರು ಮಾರುಕಟ್ಟೆಯ ವ್ಯವಹಾರದಲ್ಲಿ ಇಳಿದು, ” ಬಫೆಟ್ ಲೀ ” ಮುಂತಾದ ಕೆಲವು ಕಂಪನಿಗಳನ್ನೂ ಸೃಷ್ಟಿಸಿದ್ದಾರೆ. ಭಾರತದಲ್ಲಿ ಶೇರು ಮಾರುಕಟ್ಟೆಯ ರಾಜನೆಂದು ಪ್ರಸಿದ್ದಿಗೆ ಬಂದವರು ರಾಕೇಶ್ ಜುಂಜುನ್ ವಾಲ. ಇವರು ಅತಿ ದೊಡ್ಡ ಮಾರುಕಟ್ಟೆಯ ವಿಶ್ಲೇಷಕರು ಹಾಗೂ ನಮ್ಮ ಶೇರು ಮಾರುಕಟ್ಟೆಯ ದೊಡ್ದ ಹೂಡಿಕದಾರರಲ್ಲಿ ಒಬ್ಬರು.
ಕಾಡುವಂತ ಗೆಳೆಯ ಬೇಕು..
– ಅನಿತ ನರೇಶ್ ಮಂಚಿ






