ಮರಳಿ ಬಂದವಳು….!!!!
-ಸಂತೋಷ್ ಎನ್ ಆಚಾರ್ಯ
ನಾನು ನೋಡುತ್ತಿರುವುದು ನಿಜವಾಗಿಯೂ ಅವಳನ್ನಾ! ಕಣ್ಣುಗಳನ್ನು ಮತ್ತೆ ಮತ್ತೆ ಉಜ್ಜಿ ನೋಡಿದೆ. ನಿಜಕ್ಕೂ ಅವಳೇ, ಸಂದೇಹವೇ ಇಲ್ಲ. ಸ್ವಲ್ಪ ದಪ್ಪವಾಗಿದ್ದಾಳೆ. ಮುಖದ ಕಾಂತಿ ಈಗಲೂ ಹಾಗೆಯೇ ಇದೆ.
‘ಏನೋ ಹಾಗೆ ನೋಡ್ತಾ ಇದ್ದೀಯಾ?’ ಎಂದಳು.
‘ನೀನು… ಇಲ್ಲಿ…?’ ಮಾತುಗಳ ಪ್ರಶ್ನೆಗಳಿಗಿಂತ ಮುಖದ ಪ್ರಶ್ನೆಗಳೇ ಎದ್ದು ತೋರುತ್ತಿದ್ದವು.
‘ಯಾಕೆ ಬರಬಾರದಾ?’ ಎಂದಳು . ನನಗೆ ಏನು ಉತ್ತರಿಸಬೇಕೆಂದೇ ಗೊತ್ತಾಗಲಿಲ್ಲ.
‘ಏನಾಯ್ತೋ ನಿಂಗೆ, ಓಕೆ, ಕಣ್ತುಂಬಾ ನೋಡೋ ಆಸೆ ನಾ! ನೋಡು ನೋಡು! ಮುಗಿದ ನಂತರ ಹೇಳು ‘ ಎಂದು ಪುನಃ ನಕ್ಕಳು. ಎಷ್ಟೆಂದರೂ ನಗಲೆಂದೇ ಹುಟ್ಟಿದವಳಲ್ಲವೇ? ಆದರೆ ಇವಳೇಕೆ ಇಲ್ಲಿಗೆ ಬಂದಳು? ಮುಗಿದೇ ಹೋದಂತಿದ್ದ ಕಥೆಯನ್ನು ಪುನಃ ಬರೆಯಲು.
‘ಇಲ್ಲ ಹಾಗೇನಿಲ್ಲ ಅವತ್ತು ಹೇಳಿದೆಯಲ್ಲ, ಬರುವುದಾದರೆ ಮತ್ತೆ ಬರುತ್ತೇನೆ ನಿನ್ನ ಬದುಕಿಗೆ ಗೆಳತಿಯಾಗಿ. ಸತ್ಯವಾಗುತ್ತದೆ ಎಂದೆನಿಸಲಿಲ್ಲ’ ಎಂದೆ. ಅವಳ ಸುಂದರ ಮೊಗವನ್ನು ನೋಡುತ್ತಿರುವಾಗ ಎಂದಿನಂತೆ ಹೊಡೆದಿತ್ತು ಮಿಂಚು !
ಅವಳು ಮುಗುಳ್ನಕ್ಕು ,’ಅವತ್ತು ತುಂಬಾ ನೊಂದಿದ್ದೆ ನೋಡು! ಯಾರೂ ಬೇಕೆನಿಸಲಿಲ್ಲ. ಮತ್ತೆ ಯಾಕೋ ಗೊತ್ತಿಲ್ಲ, ನೀನು ಬೇಕು ಅನಿಸತೊಡಗಿತು. ನಿನ್ನ ಜೊತೆ ಕಳೆದ ಕ್ಷಣಗಳು ಎಲ್ಲಾ ನೆನಪಾಗತೊಡಗಿದವು’ ನಾನು ಸುಮ್ಮನಿದ್ದೆ, ‘ನಿನ್ನ ಜೊತೆ ಯಾವುದೇ ಹಂಗು ಇರಲಿಲ್ಲ ನೋಡು. ಯಾವತ್ತೂ ಹೀಗೆ ಮಾಡು ಹಾಗೆ ಮಾಡು ಎಂದು ಆರ್ಡರ್ ಮಾಡಿದವನೇ ಅಲ್ಲ! ನಿನ್ನೊಂದಿಗೆ ಇರೋವಾಗ ನಾನು ನಾನಾಗಿದ್ದೆ’
‘ಆದ್ರೆ ನಾನಂದ್ಕೊಂಡಿದ್ದೆ ಹುಡುಗಿಯರಿಗೆ ಆರ್ಡರ್ ಮಾಡುವವರು ಇಷ್ಟ, ಅವರ ಹಿಂದೂ ಮುಂದೂ ತಿರುಗೋರು ಇಷ್ಟ ಅಂತ’ ಮತ್ತಷ್ಟು ಓದು 
ಪ್ರಪಾತ……ವಿಮಾನಯಾನ ಬಲುಪ್ರಾಚಿನ….!!!
– ಫಿಲ್ಮಿ ಪವನ್
ವಿಮಾನ ಎಂದರೆ ಏನೋ ಅಚ್ಚರಿ, ರಾಮಾಯಣದಲ್ಲಿ ಪುಷ್ಪಕ ವಿಮಾನ ಇತ್ತಂತೆ. ಕಾಡಿಂದ ಸೀತೆಯನ್ನು ಅದರಲ್ಲೇ ರಾವಣ ಎತ್ಕೊಂದೋಗಿದ್ದಂತೆ. ಇವೆಲ್ಲ ಕೇಳ್ದಾಗ ನಮ್ಮೋರು ವಿದೆಶಿಯರಿಗಿಂತ ಮುಂಚೆಯೇ ವಿಮಾನ ಕಂಡುಹಿಡಿದಿದ್ರ ಅಂತ ಡೌಟ್ ಬರೋದು ಸಾಮಾನ್ಯ. ಇಂತಹ ಡೌಟ್ clear ಮಾಡೋ ಸಿನಿಮ ನೋಡೋ ಅವಕಾಶ ಈ ನಡುವೆ ಒದಗಿ ಬಂದಿತ್ತು.
ಹೋದವಾರ ಗಣರಾಜ್ಯೋತ್ಸವದ ಪ್ರಯುಕ್ತ ನಮ್ ಕಂಪನಿ ರಜೆ ಇತ್ತು. ಏನು ಮಾಡೋದು ಅಂತ ಯೋಚಿಸುತ್ತಿರುವಾಗಲೇ ನಮ್ಮ ನೆಂಟರೋಬ್ರು ಫೋನ್ ಮಾಡಿ, ಅವರು ಅಬಿನಯಿಸಿರೋ ಚಿತ್ರದ ಉಚಿತ ಪ್ರದರ್ಶನ ಇದೆ ಬಾ ಅಂತ ಕರೆದರು. ಬಿಟ್ಟಿಯಾಗಿ ಆಗೋಹಾಗಿದ್ರೆ 100 ರು ಕೆಲಸಕ್ಕೆ ಇನ್ನೂರು ರು ಖರ್ಚು ಮಾಡಕ್ಕು ತಯಾರು ಅಲ್ವೇ ನಾವು, ಸರಿ ಸರ್ ಬರ್ತೀನಿ ಅಡ್ರೆಸ್ ಕೊಡಿ ಅಂದೆ. ಸೀತ ಸರ್ಕಲ್ ಹತ್ರ ಯೋಗಶ್ರಿ ಆಶ್ರಮ ಸಿನಿಮ ಹೆಸರು ಪ್ರಪಾತ ಅಂದ್ರು. ನನಗೆ ಆ ಸಿನಿಮ ಬಗ್ಗೆ ಮೊದಲೇ ಸ್ವಲ್ಪ ಗೊತ್ತಿತ್ತು. ಥಿಯೇಟರ್ ಅಲ್ಲಿ ರಿಲೀಸ್ ಆಗಲಿ ಅಂತ ಕಾಯ್ತಿದ್ದೆ, ಆದ್ರೆ ಅಲ್ಲಿ ಹೋಗಿ ನೋಡಿದಾಗಲೇ ತಿಳಿದಿದ್ದು ಇದು ಪ್ರಪಾತದ ನೂರ ಎರಡನೇ ಶೋ ಅಂತ. ಅಷ್ಟು ಕಡೆ ಅದು ಸ್ಕ್ರೀನಿಂಗ್ ಆಗಿದೆ ಆದರೆ ಥಿಯೇಟರ್ ಅಲ್ಲಿ ರಿಲೀಸ್ ಆಗೋ ಯೋಗ ಮಾತ್ರ ಬಂದಿಲ್ಲ ಯಾಕೆ ಅಂತ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರೇ ಹೇಳ್ಬೇಕು. ಚಿತ್ರದ ನಿರ್ದೇಶಕ ಕನ್ನಡದ ಕಿರುತೆರೆ ಹಿರಿತೆರೆ ಮತ್ತು ಆಕಾಶವಾಣಿಗೆ ಬಹಳಷ್ಟು ಕೊಡುಗೆ ನಿದಿರುವಂತಹ ವಜ್ರ ಖಂಟದ ಶ್ರೀ ಸುಚೇಂದ್ರ ಪ್ರಸಾದರು. ಆ ದಿನ ಅಲ್ಲಿ ಪ್ರದರ್ಶನ ಹಮ್ಮಿಕೊಂದಿದ್ದವರು ಪ್ರೇರಣ ಟ್ರಸ್ಟ್ ಎಂಬ NGO ಅವರು ಬಡವರಿಗೆ ಉಚಿತ ಡಯಾಲಿಸಿಸ್ ಮಾಡಿಸುವ ಉತ್ತಮ ಕಾರ್ಯಕ್ಕೆ ಕೈ ಹಾಕಿದ್ದಾರೆ. ಮತ್ತಷ್ಟು ಓದು 
ಅಪಘಾತ ಎಂಬ ಬಹಿರಂಗ ಹತ್ಯೆ
– ಚಾಮರಾಜ ಸವಡಿ

ಪುಣೆಯಲ್ಲಿ ಬುಧವಾರ ಸಂಭವಿಸಿದ ಘಟನೆ ನಿರ್ಲಕ್ಷ್ಯದ ಚಾಲನೆ ಅಥವಾ ರೋಷಾವೇಶದ ಚಾಲನೆ ಕುರಿತ ಪ್ರಶ್ನೆಗಳನ್ನು ಮತ್ತೆ ಎತ್ತಿದೆ. ತಲೆ ಕೆಟ್ಟ ಚಾಲಕನೊಬ್ಬ ಸರ್ಕಾರಿ ಬಸ್ಸನ್ನು ಮನಸೋಇಚ್ಛೆ ಚಾಲನೆ ಮಾಡಿ ೧೦ ಜನ ಅಮಾಯಕರ ಸಾವಿಗೆ ಹಾಗೂ ೩೫ಕ್ಕೂ ಹೆಚ್ಚು ಜನ ಗಾಯಗೊಳ್ಳಲು ಕಾರಣನಾಗಿದ್ದಾನೆ.
ನಿರ್ಲಕ್ಷ್ಯದಿಂದ ವಾಹನ ಚಲಾಯಿಸುವ ಘಟನೆಗಳು ಇತ್ತೀಚೆಗೆ ಹೆಚ್ಚುತ್ತಿರುವುದೇಕೆ?
ನಿಜ, ಎಲ್ಲರಿಗೂ ಅವರದೇ ಆದ ವೈಯಕ್ತಿಕ ಸಮಸ್ಯೆಗಳಿದ್ದೇ ಇರುತ್ತವೆ. ಆದರೆ, ಭಾವಾವೇಶಕ್ಕೆ ಒಳಗಾಗಿ ರಸ್ತೆಗಿಳಿಯುವ ಮನಃಸ್ಥಿತಿ ಎಂಥದು? ಅದರಲ್ಲೂ ಪಕ್ಕದಲ್ಲಿ ಹಾಗೂ ಎದುರು ಇರುವ ವಾಹನಗಳನ್ನು ಹಿಂದಿಕ್ಕಿ ಹೋಗಬೇಕೆನ್ನುವ ಚಪಲ ಏಕೆ ಉಂಟಾಗುತ್ತದೆ? ರಸ್ತೆ ಸೂಚನೆಗಳನ್ನು ಉಲ್ಲಂಘಿಸುವ, ಇತರರ ಸರಾಗ ಚಲನೆಗೆ ಅಡ್ಡಿಪಡಿಸುವ ಮನಃಸ್ಥಿತಿ ಏಕೆ ಮೂಡುತ್ತದೆ?
ಹೆಚ್ಚುತ್ತಿರುವ ಒತ್ತಡ
ಇತ್ತೀಚಿನ ದಿನಗಳಲ್ಲಿ ಒತ್ತಡ ಪ್ರಮಾಣ ಹೆಚ್ಚುತ್ತಿದೆ. ಕೆಲಸದ ಸ್ಥಳಗಳ ಒತ್ತಡ ಬಹಳಷ್ಟು ಸಾರಿ ಇಂಥ ತಲೆಕೆಟ್ಟ ನಡತೆಗಳಿಗೆ ಕಾರಣವಾಗಿದ್ದೂ ಉಂಟು. ಮೇಲಧಿಕಾರಿಗಳ ಒತ್ತಡ, ಹಿಂಸೆ, ಸಹೋದ್ಯೋಗಿಗಳ ಕಿರಿಕಿರಿ, ಕೆಲಸದ ಸ್ಥಳದಲ್ಲಿ ಮೂಲಸೌಕರ್ಯಗಳ ಕೊರತೆ, ಅಸ್ತವ್ಯಸ್ತ ಕೆಲಸದ ಅವಧಿ, ರಜೆ ಕೊಡದಿರುವುದು, ಸರಿಯಾದ ವೇತನ/ಸೌಲಭ್ಯ ನೀಡದಿರುವುದು- ಹೀಗೆ ಹಲವಾರು ಕಾರಣಗಳಿಂದ ಒತ್ತಡ ಉಂಟಾಗುತ್ತದೆ. ಇದಕ್ಕೆ ವೈಯಕ್ತಿಕ ಸಮಸ್ಯೆಗಳ ಒತ್ತಡವೂ ಸೇರುತ್ತದೆ. ಮತ್ತಷ್ಟು ಓದು 
ಏನ್ ಗುರು ರಾಜಕೀಯನಾ?
-ಅಶ್ವಿನ್ ಎಸ್ ಅಮೀನ್
ಇತ್ತೀಚೆಗೆ ಬನವಾಸಿ ಬಳಗದವರು ನಡೆಸುತ್ತಿರುವ ‘ಏನ್ ಗುರು’ ಎಂಬ ಬ್ಲಾಗ್ ನಲ್ಲಿ ಪ್ರಕಟವಾದ ‘RSS ಕಣ್ಣಲ್ಲಿ ಭಾಷಾ ನೀತಿ, ಒಕ್ಕೂಟ ಮತ್ತು ಸಮಾಜ’ ಎಂಬ ಲೇಖನವನ್ನು ಓದಿದೆ. ಲೇಖಕರ ಮಾತುಗಳು ಏಕಮುಖಿಯಾಗಿವೆಯೇನೋ ಎನಿಸಿ ಈ ಪ್ರತಿಕ್ರಿಯೆಯನ್ನು ದಾಖಲಿಸುತ್ತಿದ್ದೇನೆ.
ಲೇಖನ ಆರಂಭದಲ್ಲಿ ಅರೆಸ್ಸಿಸಿನ ಧನಾತ್ಮಕ ಅಂಶಗಳ ಕುರಿತು ಲೇಖಕರು ಗಮನ ಸೆಳೆಯುತ್ತಾರೆ. ಆದರೆ ಒಂದು ಕಡೆ ನೆರೆ ಬರ ಹಾಗು ಇತರ ವಿಕೋಪಗಳ ಸಂದರ್ಭದಲ್ಲಿ ಜಾತಿ ಮತ ಲೆಕ್ಕಿಸದೆ ಜನತೆಯ ಸಹಾಯಕ್ಕೆ ಧಾವಿಸುವ ಆರೆಸ್ಸೆಸ್ ನ ಬಗ್ಗೆ ಹೊಗಳುವ ಲೇಖಕರು ಮತ್ತೊಂದು ಕಡೆ ಪ್ರಾಂತೀಯ ವಿರೋಧದ ಬಗ್ಗೆ ಮಾತನಾಡುತ್ತಾರೆ.! ಪ್ರಾಂತೀಯ ಹಾಗು ವೈವಿಧ್ಯತಾ ವಿರೋಧವಿದ್ದರೆ ಆರೆಸ್ಸೆಸ್ ದೇಶದ ಯಾವದೇ ಭಾಗದಲ್ಲಿ ಉಂಟಾಗುವ ವಿಕೋಪಗಳ ಸಂದರ್ಭದಲ್ಲಿ ನೆರವಿಗೆ ಧಾವಿಸುತ್ತಿತ್ತೆ..?!
ಆರೆಸ್ಸೆಸಿನ ಪೂಜನೀಯ ಗುರುಗಳಾದ ಮಾಧವ ಸದಾಶಿವ ಗೋಳವಾಲ್ಕರ್ ಗುರೂಜಿಯವರ ‘ಚಿಂತನ ಗಂಗಾ’ ಪುಸ್ತಕವನ್ನಾಧರಿಸಿ ಆ ಲೇಖನವನ್ನು ಬರೆಯಲಾಗಿದೆ. ಆ ಸಮಗ್ರ ಗ್ರಂಥವನ್ನು ಲೇಖಕರು ಓದಿರುವುದು ಸಂತೋಷದಾಯಕ. ಆದರೆ ಅದನ್ನು ಸರಿಯಾಗಿ ಅರ್ಥೈಸುವಲ್ಲಿ ಎಡವಿದ್ದಾರೆ ಎಂಬುದೇ ವಿಪರ್ಯಾಸ.! ಮತ್ತಷ್ಟು ಓದು 
ನಿಮ್ಮ XP SERVICE PACK 2 ಅನ್ನು SERVICE PACK 3 ಗೆ ಬದಲಾಯಿಸಿ.
-ಆದೇಶ್ ಕುಮಾರ್
ನಿಮ್ಮ XP SERVICE PACK 2 ಅನ್ನು SERVICE PACK 3 ಗೆ ಬದಲಾಯಿಸಿ.
ಕೆಲವೊಮ್ಮೆ ನೀವು ನಿಮ್ಮ ಗಣಕಕ್ಕೆ ಕೆಲವೊಂದು ತಂತ್ರಾಂಶಗಳನ್ನು ಇನ್ಸ್ಟಾಲ್ ಮಾಡಬೇಕಾಗಿರುತ್ತದೆ. ಈ ತಂತ್ರಾಂಶಗಳು ಕೆವಲ SP3 ಅಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತವೆ. ಆದರೆ ನಿಮ್ಮ ಗಣಕದಲ್ಲಿ XP SP 2 ಇನ್ಸ್ಟಾಲ್ ಮಾಡಿರುತ್ತೀರಿ.
ಈಗ ಹೊಸದಾಗಿ SP3 ಇನ್ಸ್ಟಾಲ್ ಮಾಡುವ ಬದಲು, SP2 ಅನ್ನೇ SP3 ಅನ್ನಾಗಿ ಬದಲಾಯಿಸಬಹುದು.
೧)ಮೊದಲು Registery Editor(Start–>Run ಅಲ್ಲಿ regedit ಎಂದು ಟೈಪಿಸಿ Enter ಒತ್ತಿ) ತೆರೆಯಿರಿ.
೨)ಈಗ Registery Editor ನ ಎಡ ಭಾಗದಲ್ಲಿರುವ ತೆರೆಯ ಮೂಲಕ ಕೆಳಗಿನಂತೆ ಹೋಗಿ.
HKEY_LOCAL_MACHINE >>> SYSTEM >>> CurrentControlSet >>>Control >>> Windows
ಗೆ ಹೋಗಿ
ಈಗ ನಿಮ್ಮ ಬಲ ಭಾಗದಲ್ಲಿರುವ “CSDVersion” ಮೇಲೆ ಎರಡು ಬಾರಿ ಕ್ಲಿಕ್ಕಿಸಿ, ತದನಂತರ ತೆರೆದುಕೊಳ್ಳುವ ತೆರೆಯಲ್ಲಿ Value data: ಅನ್ನು 200 ರ ಬದಲು 300 ಎಂದು ಬದಲಾಯಿಸಿ OK ಒತ್ತಿ ನಂತರ ನಿಮ್ಮ ಗಣಕವನ್ನು ರಿಸ್ಟಾರ್ಟ್ ಮಾಡಿ.
ಈ ಒಂದು ತಂತ್ರ SP3 ಅಲ್ಲಿ ಮಾತ್ರ ಕೆಲಸ ಮಾಡುವ ತಂತ್ರಾಂಶಗಳನ್ನು SP2 ವಿನಲ್ಲೂ ಕೆಲಸ ಮಾಡುವಂತೆ ಮಾಡುತ್ತದೆ.
ಪ್ರತಿಕ್ರಿಯಿಸಲು ಮರೆಯಬೇಡಿ.
* * * * * * *
ಚಿತ್ರಕೃಪೆ : madrasgeek.com
ಷೇರು ಮಾರುಕಟ್ಟೆ
-ಸಂದೀಪ್ ಬೆಂಗಳೂರು
ಸ್ಟಾಕುಗಳ ಖರೀದಿ ಮತ್ತು ಮಾರಾಟ ಮಾಡುವ ಸ್ಥಳವನ್ನು “ಷೇರು ಮಾರುಕಟ್ಟೆ” ಎಂದು ಕರೆಯುತೇವೆ . ಒಂದು ದೇಶದ ಆರ್ಥಿಕ ಆರೋಗ್ಯ ನಿಕಟವಾಗಿ ಷೇರುಪೇಟೆಗಳ ಮೇಲೆ ಅವಲಂಬಿತವಾಗಿರುತ್ತದೆ. Stock ಒಂದು ಕಂಪನಿಯ ಭಾಗಶಃ ಮಾಲೀಕತ್ವವನ್ನು ಪ್ರತಿನಿಧಿಸುವ ಒಂದು ಸಣ್ಣ ಪಾಲು. ಒಂದು ಕಂಪನಿಯು ತನ್ನ ಅಭಿವೃಧಿಗಾಗಿ ಮತ್ತು ಹೆಚ್ಹು ಬಂಡವಾಳದ ಅವಶ್ಯಕತೆಗಾಗಿ ಹಣವನ್ನು ಹೂಡಿಕೆದಾರರಿಂದ ಸಂಗ್ರಹಿಸಿ ಅದನ್ನು ಷೇರುಗಳ ರೂಪದಲ್ಲಿ ಪರಿವರ್ತಿಸುತ್ತಾರೆ. ಇದರಿಂದ ಬಂದ ಆದಾಯದಲ್ಲಿ ವಾರ್ಷಿಕ/ಅರ್ಧ ವಾರ್ಷಿಕಕ್ಕೆ ಒಮ್ಮೆ ಲಾಭಾಂಶವನ್ನು ಹೂಡಿಕೆದಾರರಿಗೆ ನೀಡುತ್ತಾರೆ.ಹೂಡಿಕೆ ಮಾಡುವ ಮೊದಲು ಕಂಪನಿಯ ಮೌಲ್ಯ,ಗುಣಮಟ್ಟ , ಅದರ ಹಿಂದಿನ ಆದಾಯದ ಬಗ್ಗೆ ಪರೀಕ್ಷಿಸಿ ಕೊಂಡರೆ ಉತ್ತಮ. ಷೇರುಗಳನ್ನು ಕೊಳ್ಳಲು ಅಥವಾ ಮಾರಲು ಆಯಾ ದೇಶಗಳಲ್ಲಿ ಒಂದು ನಿರ್ದಿಷ್ಟ ಮಾರುಕಟ್ಟೆಗಳಿರುತ್ತವೆ. ಉದಾ: ಬಾರತದಲ್ಲಿ “ಬಿ.ಎಸ್.ಇ”(ಬಾಂಬೆ ಸ್ಟಾಕ್ ಎಕ್ಸ್ಚೇಂಜ್), “ಎನ್.ಎಸ್.ಇ” (ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್) ಗಳು ಇವೆ. ಹೂಡಿಕೆದಾರರು ಅವನ ವ್ಯವಹಾರಗಳಿಗೆ ಮಧ್ಯವರ್ತಿಯನ್ನು ನೇಮಿಸಿಕೊಳಬೇಕು. ಮದ್ಯವರ್ಥಿಯು ಆಯಾ ದೇಶದ ಮಾರುಕಟ್ಟೆಗಳಲ್ಲಿ ನೊಂದಾಯಿತನಾಗಿರುತ್ತಾನೆ.
ಇಂದಿನ ರಾಜಕೀಯ ಮತ್ತು ಮಾಧ್ಯಮಗಳ ನಡುವೆ ಕಂಡುಬರುವಂತಹ ಸಾಮ್ಯತೆಗಳು
-ರಾಜುವಿನಯ್ ದಾವಣಗೆರೆ
ಇತ್ತೀಚಿಗೆ ನಾವು ಪ್ರಚಲಿತ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ.ಇಂದಿನ ರಾಜಕೀಯ ವ್ಯವಸ್ಥೆಗೂ, ಇಂದಿನ ಮಾಧ್ಯಮ (ದೃಶ್ಯ)ಗಳಿಗೂ ವ್ಯತ್ಯಾಸಗಳೇ ಕಾಣುತ್ತಿಲ್ಲ.
———–*ಪಕ್ಷಾಂತರ*———–
ನೆನಪಿನ ಮೂಸೆಯಲಿ ‘ಕೋಲ್ಕಾತ್ತಾದ ಕಾಲೇಜಿನಲ್ಲಿ’
-ನಟರಾಜು
ಒಂದು ಬಾರಿ ಗೆಳೆಯನೊಬ್ಬನ ಜೊತೆ ಕೊಲ್ಕತ್ತಾದ ವೈದ್ಯ ವಿದ್ಯಾಲಯದ ಕ್ಯಾಂಪಸ್ ಗೆ ಹೋಗಿದ್ದೆ. ಅಂದು ಪ್ರಥಮ ವರ್ಷದ ಎಂಬಿಬಿಎಸ್ ಪದವಿಯ ಪ್ರವೇಶಕ್ಕಾಗಿ ಕೌಂಸಿಲಿಂಗ್ ನಡೆಯುತ್ತಿತ್ತು. ಆ ಜಾಗದಲ್ಲಿ ರಾಜಕೀಯ ಪಕ್ಷಗಳ ವತಿಯಿಂದ ಮೂರ್ನಾಲ್ಕು ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ರಾಜಕೀಯ ಪಕ್ಷದ ಮಾಹಿತಿ ಇರುವ ದೊಡ್ಡ ದೊಡ್ಡ ಬ್ಯಾನರ್ ಗಳನ್ನು ನೋಡಿ, ಕಾಲೇಜಿನ ಆವರಣದಲ್ಲಿ ರಾಜಕೀಯ ಪಕ್ಷದವರಿಗೇನು ಕೆಲಸ ಅಂತ ನಾನು ಕುತೂಹಲದಿಂದ ಆ ಮಳಿಗೆಯ ಬಳಿ ಹೋಗಿದ್ದೆ. ಆ ಮಳಿಗೆಯ ಒಬ್ಬ ವ್ಯಕ್ತಿ ನಾನು ಹೊಸ ವಿದ್ಯಾರ್ಥಿ ಇರಬೇಕು ಅಂತ ತಮ್ಮ ಸಂಘದ ಭಿತ್ತಿ ಪತ್ರವೊಂದನು ಕೈಗಿತ್ತಿದ್ದ. ಬೆಂಗಾಳಿ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲಿದ್ದ ಭಿತ್ತಿ ಪತ್ರವನು ಓದಿ ನನ್ನ ಗೆಳೆಯನೆಡೆಗೆ ತಿರುಗಿದ್ದೆ. ಆತ ಮುಗಳ್ನಕ್ಕಿದ್ದ. ಕಾಲೇಜಿಗೆ ಪ್ರವೇಶ ಪಡೆದ ಮೊದಲ ದಿನದಿಂದಲೇ ತಮ್ಮ ತಮ್ಮ ರಾಜಕೀಯ ಪಕ್ಷದ ಒಲವನ್ನು ವಿದ್ಯಾರ್ಥಿಗಳು ತಮಗಿಷ್ಟ ಬಂದ ಪಕ್ಷದ ವಿದ್ಯಾರ್ಥಿ ಸಂಘದಲಿ ನೋಂದಾಯಿಸುವುದರ ಮೂಲಕ ವ್ಯಕ್ತಪಡಿಸಬಹುದು ಅಂತ ನನ್ನ ಗೆಳೆಯ ಹೇಳಿದ್ದ.
ನಿಲುಮೆ ಮಂಥನ
-ತ್ರಿವೇಣಿ, ಮ್ಯೆಸೂರು
ನಿಲುಮೆಯ ಆತ್ಮೀಯ ಬೆಂಬಲಿಗರೇ,
ನಿಲುಮೆಯು ಸತತ ಒಂದು ವರ್ಷಕ್ಕೂ ಹೆಚ್ಚಿನ ಸಮಯದಿಂದ ಕನ್ನಡ ಸಾರಸತ್ವ ಲೋಕದಲ್ಲಿ ಸತತವಾಗಿ ಲೇಖನ, ಕವನ, ಚರ್ಚೆ, ಪ್ರಚಲಿತ ವಿದ್ಯಮಾನ, ಸಂಸ್ಕೃತಿ, ಕನ್ನಡ, ಕರ್ನಾಟಕ, ಭಾರತ, ವಿಜ್ಣಾನ, ಕನ್ನಡಿಗರಿಗೆ ಉದ್ಯೋಗ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನ ಛಾಪನ್ನು ಮೂಡಿಸುತ್ತ ಬರುತ್ತಲಿದೆ. ಇದಕ್ಕೆ ಬೆನ್ನುತಟ್ಟಲು ನಿಮ್ಮೆಲ್ಲರ ಬೆಂಬಲವಿಲ್ಲದೆ ಅದು ಸಾಧ್ಯವಾಗಿಯೂ ಇಲ್ಲ, ಅನ್ನೋದು ಮರೆತಿಲ್ಲ. ಅದೆಷ್ಟೊ ಲಕ್ಷ ಓದುಗರು ನಿಲುಮೆಯೊಂದಿಗೆ ಅವಿನಾನುಭಾವ ಸಂಬಂಧ ಬೆಸೆದುಕೊಂಡಿರುವರು. ಈ ಹಂತಕ್ಕೆ ನಿಲುಮೆ ಬೆಳೆದು ಬರಲು ಹಾದಿಯೇನು ಅಷ್ಟು ಸುಲಭವಾಗೇನು ಇರಲಿಲ್ಲ. ಮೊದಲಿಗೆ ಸ್ನೇಹಿತರ ಸಣ್ಣ ಗುಂಪೊಂದು ವರ್ಡ್ ಪ್ರೆಸ್ಸಿನಲ್ಲಿ ತನ್ನ ಖಾತೆಯನ್ನು ತೆರೆದಾಗ ಅರವಿಂದ್ ಎಂಬುವವರ ಮೊದಲ ಲೇಖನ ರಂಗೋಲಿ.. ಚಿತ್ತ ಚಿತ್ತಾರಗಳ ನಡುವೆ ಎಂಬ ಶೀರ್ಷಿಕೆಯೊಂದಿಗೆ ೫ನೇ ಅಕ್ಟೋಬರ್ ೨೦೧೦ ಪ್ರಕಟವಾಯ್ತು. ಅಸಲಿಗೆ ನಿಲುಮೆ ನಾನು ನೋಡಿದ್ದು, ರಂಗೋಲಿಗಳು ಎಂದು ಗೂಗಲಿನಲ್ಲಿ ಹುಡುಕಲು ಹೋದಾಗ ನಾನು ಹುಡುಕ ಹೊದದ್ದೇ ಒಂದು, ಸಿಕ್ಕಿದ್ದು ಮಾತ್ರ ಭರಪೂರ ರೋಮಾಂಚನ, ನಿಲುಮೆ ಹೆಸರು ಯಾಕೋ ಅಂದು ಬಹಳ ಇಷ್ಟವಾಗಿತ್ತು. ನಂತರ ದಿನಕ್ಕೊಂದರಂತೆ ಅತ್ಯುತ್ತಮ ಲೇಖನಗಳು ಬರತೊಡಗಿದಾಗ ಆ ಬ್ಲಾಗ್ ದಿನಕ್ಕೆ ಒಂದೆರಡು ಸಾರಿಯಾದರೂ ತೆರೆಯದೆ ಇರುವ ಮನಸ್ಸಾಗದೇ ಇರಲಿಲ್ಲ. ಆ ಲೇಖನಗಳ ಸ್ಪೂರ್ತಿಯಿಂದ ನನ್ನಲ್ಲು ಬರೆಯುವ ಅಮಿತ ಉತ್ಸಾಹವಿದ್ದರೂ ಬರೆದದ್ದೂ ಮಾತ್ರ ಈಗಲೇ, ನನ್ನಂತವಳಲ್ಲಿ ಲೇಖಕಿಯನ್ನು ಬೆಳೆಸಿದ ನಿಲುಮೆಗೆ ಅನಂತ ಧನ್ಯವಾದಗಳು. ನನ್ನ ನೆನಪಂತೆ ದಿನಕ್ಕೆ ಕೆಲವೇ ಕೆಲವು ಬೆಂಬಲಿಗರು ಬಂದು ನಿಲುಮೆಯ ಕದ ತಟ್ಟಿ ಹೋಗುತ್ತಿದ್ದರು. ಅಂದಿಗೆ ದಿನದ ಭೇಟಿಗಳು ಹೆಚ್ಚೆಂದರೆ ನೂರರ ಆಸುಪಾಸಿನಲ್ಲಿ ಓಡಾಡುತ್ತಿತ್ತು.
ಉದ್ಯೋಗಾವಕಾಶ ಅಲ್ಲಲ್ಲಿ…
ಕೆನರಾ ಬ್ಯಾಂಕ್ ಕೆನರಾ ಬ್ಯಾಂಕ್‌ನಲ್ಲಿ 2000 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-02-2012. ಹುದ್ದೆ ಹೆಸರು: ಪ್ರೊಬೇಷನರಿ ಆಫೀಸರ್ಸ್ ಒಟ್ಟು ಹುದ್ದೆ: 2000
ವೇತನ ಶ್ರೇಣಿ: ರೂ.14500-25700/-
ವಯೋಮಿತಿ: ಕನಿಷ್ಠ 21 ವರ್ಷ. ಗರಿಷ್ಠ 30 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಪದವಿ ಹಾಗೂ ಐಬಿಪಿಎಸ್ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು.
ಅರ್ಜಿ ಶುಲ್ಕ: ರೂ. 100/-
ಆಯ್ಕೆ ವಿಧಾನ: ಐಬಿಪಿಎಸ್ ನಡೆಸಿದ ಲಿಖಿತ ಪರೀಕ್ಷೆ ಅಂಕಗಳ ಆಧಾರದ ಮೇಲೆ, ಗುಂಪು ಸಂದರ್ಶನ ಹಾಗೂ ಸಂದರ್ಶನ ಹೆಚ್ಚಿನ ಮಾಹಿತಿಗೆ http://www.canarabank.com ವೆಬ್‌ಸೈಟ್ ಸಂಪರ್ಕಿಸಿ.
ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್
ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್ (ಐಟಿಬಿಪಿ)ನಲ್ಲಿ 618 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24-02-2012.
ಹುದ್ದೆ ಹೆಸರು: 1) ಹೆಡ್-ಕಾನ್‌ಸ್ಟೇಬಲ್ (ಮೋಟಾರ್ ಮೆಕಾನಿಕ್)
ಒಟ್ಟು ಹುದ್ದೆ: 58 ವೇತನ ಶ್ರೇಣಿ: ರೂ.5200-20200/-
ವಯೋಮಿತಿ: ಕನಿಷ್ಠ 19 ವರ್ಷ.ಗರಿಷ್ಠ 25 ವರ್ಷ.
ವಿದ್ಯಾರ್ಹತೆ: ಮೆಟ್ರಿಕುಲೇಷನ್ ಅಥವಾ 10ನೇ ತರಗತಿ ಉತ್ತೀರ್ಣ. ಮೋಟಾರ್ ಮೆಕಾನಿಕಲ್‌ನಲ್ಲಿ ಸರ್ಟಿಫಿಕೇಟ್.
ಹುದ್ದೆ ಹೆಸರು: 2) ಕಾನ್‌ಸ್ಟೇಬಲ್ (ಮೋಟಾರ್ ಮೆಕಾನಿಕ್)
ಒಟ್ಟು ಹುದ್ದೆ: 135
ವೇತನ ಶ್ರೇಣಿ: ರೂ.5200-20200/-
ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 25 ವರ್ಷ.
ವಿದ್ಯಾರ್ಹತೆ: ಮೆಟ್ರಿಕುಲೇಷನ್ ಅಥವಾ 10ನೇ ತರಗತಿ ಉತ್ತೀರ್ಣ. ಆಟೊ ಮೊಬೈಲ್ ಎಂಜಿನಿಯರಿಂಗ್‌ನಲ್ಲಿ ಸರ್ಟಿಫಿಕೇಟ್.
ಹುದ್ದೆ ಹೆಸರು: 3) ಕಾನ್‌ಸ್ಟೇಬಲ್ (ಡ್ರೈವರ್)
ಒಟ್ಟು ಹುದ್ದೆ: 425
ವೇತನ ಶ್ರೇಣಿ: ರೂ.5200-20200/-
ವಯೋಮಿತಿ: ಕನಿಷ್ಠ 20 ವರ್ಷ. ಗರಿಷ್ಠ 25 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿದ್ಯಾರ್ಹತೆ: ಮೆಟ್ರಿಕುಲೇಷನ್ ಅಥವಾ 10ನೇ ತರಗತಿ ಉತ್ತೀರ್ಣ. ಅರ್ಜಿ ಶುಲ್ಕ: ರೂ. 50/- ವಿಳಾಸ: ಇನ್‌ಸ್ಪೆಕ್ಟರ್ ಜನರಲ್ (ನಾರ್ಥ್) ಫ್ರಾಂಟಿಯರ್, ಐಟಿಬಿಪಿ, ಪೋಸ್ಟ್-ಸೀಮದ್ವಾರ್ (ಇಂದಿರಾ ನಗರ), ಡಿಸ್ಟ್ರಿಕ್ಟ್ ಡೆಹಡ್ರೂನ್-248156 (ಉತ್ತರಾಖಂಡ) ಹೆಚ್ಚಿನ ವಿವರ ಹಾಗೂ ಮಾಹಿತಿಗೆ http://itbp.gov.in/ ವೆಬ್‌ಸೈಟ್ ಸಂಪರ್ಕಿಸಿ.
ಪಂಜಾಬ್ ನ್ಯಾಷನಲ್ ಬ್ಯಾಂಕ್
ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ)ನಲ್ಲಿ 775 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13-02-2012.
ಹುದ್ದೆ ಹೆಸರು: ಮ್ಯಾನೇಜ್‌ವೆುಂಟ್ ಟ್ರೈನೀಸ್
ಒಟ್ಟು ಹುದ್ದೆ: 775
ವೇತನ ಶ್ರೇಣಿ: ರೂ.14500-25700/-
ವಯೋಮಿತಿ: ಕನಿಷ್ಠ 20 ವರ್ಷ. ಗರಿಷ್ಠ 28 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಪದವಿ ಹಾಗೂ ಐಬಿಪಿಎಸ್ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು.
ಅರ್ಜಿ ಶುಲ್ಕ: ರೂ. 200/-
ಆಯ್ಕೆ ವಿಧಾನ: ಐಬಿಪಿಎಸ್ ನಡೆಸಿದ ಲಿಖಿತ ಪರೀಕ್ಷೆ ಅಂಕಗಳ ಆಧಾರ ಮೇಲೆ ಹಾಗೂ ಸಂದರ್ಶನ * ಏಪ್ರಿಲ್-ಮೇನಲ್ಲಿ (2012) ನಡೆಯಲಿದೆ. ಹೆಚ್ಚಿನ ಮಾಹಿತಿಗೆ http://www.pnbindia.in ವೆಬ್‌ಸೈಟ್ ಸಂಪರ್ಕಿಸಿ. ದಿ ಓರಿಯಂಟಲ್ ಇನ್ಸುರೆನ್ಸ್ ದಿ ಓರಿಯಂಟಲ್ ಇನ್ಸುರೆನ್ಸ್ ಕಂಪೆನಿ ಲಿಮಿಟೆಡ್‌ನಲ್ಲಿ 477 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13-02-2012. ಲಿಖಿತ ಪರೀಕ್ಷೆ: 08-04-2012
ಹುದ್ದೆ ಹೆಸರು: ಅಡ್ಮಿನಿಸ್ಟ್ರೇಟೀವ್ ಆಫೀಸರ್ (ಎಒ)
ಒಟ್ಟು ಹುದ್ದೆ: 477
ವೇತನ ಶ್ರೇಣಿ: ರೂ.17240-32640/-
ವಯೋಮಿತಿ: ಕನಿಷ್ಠ 21 ವರ್ಷ. ಗರಿಷ್ಠ 30 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ
ಅರ್ಜಿ ಶುಲ್ಕ: ರೂ. 500/- * ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ. ವಿದ್ಯಾರ್ಹತೆ ಹಾಗೂ ಹೆಚ್ಚಿನ ಮಾಹಿತಿಗೆ http://www.orientalinsurance.org.in ವೆಬ್‌ಸೈಟ್ ಸಂಪರ್ಕಿಸಿ.
ರಿಸರ್ವ್ ಬ್ಯಾಂಕ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 7 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24-02-2012. ಲಿಖಿತ ಪರೀಕ್ಷೆ ದಿನಾಂಕ: 22-04-2012.
ಹುದ್ದೆ ಹೆಸರು: ಅಸಿಸ್ಟೆಂಟ್ ಮ್ಯಾನೇಜರ್ (ರಾಜಭಾಷಾ) ಗ್ರೇಡ್-ಎ
ಒಟ್ಟು ಹುದ್ದೆ: 07
ವೇತನ ಶ್ರೇಣಿ: ರೂ.17100-33200/-
ವಯೋಮಿತಿ: 30 ವರ್ಷ ದಾಟಿರಬಾರದು.
ಅರ್ಜಿ ಶುಲ್ಕ: ರೂ. 100/-
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ * ಬೆಂಗಳೂರಿನಲ್ಲೂ ಪರೀಕ್ಷೆ ಇದೆ. * ಪೋಸ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-03-2012
ವಿಳಾಸ: ಜನರಲ್ ಮ್ಯಾನೇಜರ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸರ್ವೀಸ್ ಬೋರ್ಡ್, ಪೋಸ್ಟ್ ಬಾಕ್ಸ್ ನ. 4618, ಮುಂಬೈ ಸೆಂಟ್ರಲ್ ಪೋಸ್ಟ್ ಆಫೀಸ್, ಮುಂಬೈ-400008
ಹೆಚ್ಚಿನ ಮಾಹಿತಿಗೆ http://www.rbi.org.in ವೆಬ್‌ಸೈಟ್ ಸಂಪರ್ಕಿಸಿ. http://www.canarabank.com/ http://www.canarabank.com





