ವಿಷಯದ ವಿವರಗಳಿಗೆ ದಾಟಿರಿ

Recent Articles

31
ಜನ

ವಿದೇಶ ನೀತಿಯನ್ನು ಮೋದಿ ಬದಲಿಸಿದ್ದು ಹೇಗೆ?


ಅಜಿತ್ ಶೆಟ್ಟಿ ಹೆರಂಜೆ
ಪತ್ರಕರ್ತ

ಈಗಿನ ವಿದೇಶಾಂಗ ನೀತಿ ೩ಡಬ್ಲ್ಯುನಿಂದ ೩ಟಿಗೆ ಬದಲಾಗಿದೆ. ೩ಟಿ ಅಂದರೆ ಟ್ರೇಡ್, ಟೆಕ್ನಾಲಜಿ, ಟೂರಿಸಂ. ಈಗ ಮೋಜು ಮಾಡುತ್ತಾ ವಿದೇಶದಲ್ಲಿ ಕಾಲಹರಣ ಮಾಡಲು ಮೋದಿ ಸರ್ಕಾರ ಯಾವುದೇ ರಾಜತಾಂತ್ರಿಕರಿಗೆ ಬಿಡುತ್ತಿಲ್ಲ. ಬದಲಿಗೆ ಅವರಿಗೆಲ್ಲ ಟಾರ್ಗೆಟ್ ನೀಡಿ ಭಾರತದ ಪ್ರವಾಸೋದ್ಯಮ, ವಿದೇಶಿ ಬಂಡವಾಳ, ರಕ್ಷಣಾ ರ- ಇತ್ಯಾದಿಗಳಿಗೆ ಉತ್ತೇಜನ ಸಿಗುವಂತೆ ಮಾಡುತ್ತಿದೆ.

ವಿಶ್ವದ ಯಾವುದೇ ದೇಶದ ವಿದೇಶಾಂಗ ನೀತಿ ಆ ದೇಶದ ರಾಷ್ಟ್ರೀಯ ಹಿತಾಸಕ್ತಿಯ ಸುತ್ತಲೇ ಕೇಂದ್ರೀಕೃತವಾಗಿರುತ್ತದೆ ಮತ್ತು ಅದು ಹಾಗೇ ಇರಬೇಕು ಕೂಡ. ಭಾರತದಲ್ಲಿ ಕಾಂಗ್ರೆಸ್ ಪಕ್ಷದ ಸುದೀರ್ಘ ೭೦ ವರ್ಷಗಳ ಅಧಿಕಾರದ ಕಾಲದಲ್ಲಿ, ಅದರಲ್ಲೂ ಯುಪಿಎ-೧ ಮತ್ತು ೨ನೇ ಅವಧಿಯಲ್ಲಿ ಇದ್ದ ವಿದೇಶಾಂಗ ನೀತಿಯು ರಾಷ್ಟ್ರೀಯ ಹಿತಾಸಕ್ತಿಗಿಂತ ಹೆಚ್ಚಾಗಿ ಪಕ್ಷದ ಹಿತಾಸಕ್ತಿಯನ್ನು ಕೇಂದ್ರವಾಗಿರಿಸಿಕೊಂಡಿತ್ತು. ಅದು ನಮಗೆ ಸ್ಪಷ್ಟವಾಗಿ ಗೋಚರಿಸಿದ್ದು ಎರಡು ಸಂದರ್ಭದಲ್ಲಿ. ೨೬/೧೧ ಮುಂಬೈ ದಾಳಿಯ ಸಮಯದಲ್ಲಿ ಪಾಕಿಸ್ತಾನಕ್ಕೆ ಪಾಠ ಕಲಿಸಲು ದಾಳಿ ಮಾಡಲು ಸಜ್ಜಾಗಿ ನಿಂತಿದ್ದ ವಾಯಪಡೆಯನ್ನು ಅಂದಿನ ಸರ್ಕಾರ ತಡೆಯಿತು. ಜೊತೆಗೆ ಸೆರೆ ಸಿಕ್ಕ ಪಾಕಿಸ್ತಾನದ ಉಗ್ರ ಅಜ್ಮಲ್ ಕಸಬ್‌ನನ್ನು ಬೆಂಗಳೂರು ಮೂಲದ ಹಿಂದೂ ಉಗ್ರ ಎಂದು ಬಿಂಬಿಸುವ ಪ್ರಯತ್ನ ನಡೆಯಿತು. ಇದನ್ನು ಸ್ವತಃ ಮುಂಬೈ ದಾಳಿಯ ಕಾಲದಲ್ಲಿ ಮುಂಬೈ ಪೊಲೀಸ್ ಕಮಿಷನರ್ ಆಗಿದ್ದ ರಾಕೇಶ್ ಮಾರಿಯಾ ತಮ್ಮ ಜೀವನ ಚರಿತ್ರೆ ‘ಲೆಟ್ ಮಿ ಸೇ ಇಟ್ ನೌ’ ಪುಸ್ತಕದಲ್ಲಿ ಹೇಳಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್ ಪಕ್ಷದ ದಿಗ್ವಿಜಯ್ ಸಿಂಗ್ ಪಾಕಿಸ್ತಾನಿ ಉಗ್ರರು ನಡೆಸಿದ ಈ ಸಂಚನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ಆರೋಪಿಸಿ ಒಂದು ಪುಸ್ತಕವನ್ನೂ ಬರೆದರು.

ಕಾಂಗ್ರೆಸ್‌ನ ಸ್ವ ಹಿತಾಸಕ್ತಿ
ಯುಪಿಎ ೨ನೇ ಅವಧಿಯಲ್ಲಿ ಚೀನಾ ಭಾರತದ ಗಡಿಯುದ್ದಕ್ಕೂ ಪದೇಪದೇ ದಾಂಧಲೆ ಮಾಡುತ್ತಿತ್ತು. ಭಾರತದ ಸೈನ್ಯ ಚೀನಾದ ಗಡಿಯಲ್ಲಿ ಸೈನ್ಯದ ತ್ವರಿತ ಓಡಾಟಕ್ಕೆ ಸಹಾಯಕವಾಗಲು ಉತ್ತಮ ರಸ್ತೆಗಳ ನಿರ್ಮಾಣ ಮಾಡುವಂತೆ ಸರ್ಕಾರಕ್ಕೆ ಹೇಳುತ್ತಾ ಬಂದಿತ್ತು. ಸರ್ಕಾರ ಅವರ ಒತ್ತಡಕ್ಕೆ ಮಣಿಯಿತಾದರೂ ಯಾವ ವೇಗದಿಂದ ಆ ಕೆಲಸಗಳನ್ನು ಮಾಡಬೇಕಿತ್ತೋ ಆ ವೇಗದಲ್ಲಿ ಮಾಡಲಿಲ್ಲ. ಆರಂಭವಾದ ಒಂದಿಷ್ಟು ಯೋಜನೆಗಳು ಕುಂಟು ನೆಪಗಳಿಗೆ ನಿಂತರೆ, ಒಂದಿಷ್ಟು ಯೋಜನೆಗಳು ಕುಂಟುತ್ತಾ ಸಾಗಿದವು. ಇದರಿಂದಾಗಿ ಚೀನಾಕ್ಕೆ ಸಹಾಯವಾಯಿತು. ಆ ವೇಳೆ, ಅಕ್ಸೈ ಚಿನ್ ಮತ್ತು ಸಿಯಾಚಿನ್‌ಗೆ ಹತ್ತಿರದಲ್ಲಿರುವ ದೌಲತ್ ಬೇಗ್ ಓಲ್ಡಿ ವಾಯುನೆಲೆಯಲ್ಲಿ ಭಾರತೀಯ ವಾಯುಪಡೆ ತನ್ನ ಸರಕು ವಿಮಾನ ಸಿ-೧೩೦ಜೆ ಇಳಿಸಲು ಸರ್ಕಾರದ ಅನುಮತಿ ಕೇಳಿತು. ಅಂದಿನ ಸರ್ಕಾರ ಅನುಮತಿ ಕೊಡಲಿಲ್ಲ. ಆಗಿನ ವಾಯುಪಡೆ ಅಧಿಕಾರಿಯಾಗಿದ್ದ ಬೊರ್ಬರ ಅವರು ಸರ್ಕಾರಕ್ಕೆ ಹೇಳದೇ ಅಲ್ಲಿ ಯುದ್ಧ ವಿಮಾನ ಇಳಿಸಿ ದೇಶದ ಗಡಿಯ ರಕ್ಷಣೆ ಮಾಡಿದ್ದರು.

ಚೀನಾ ದೇಶಕ್ಕೆ ಪರೋಕ್ಷ ನೆರವು
ಡೋಕ್ಲಾಂ ಬಿಕ್ಕಟ್ಟಿನ ಸಮಯದಲ್ಲಿ ರಾಹುಲ್ ಗಾಂಧಿ ಚೀನಾದ ರಾಯಭಾರಿಯನ್ನು ಗುಪ್ತವಾಗಿ ಭೇಟಿಯಾಗಿದ್ದು ಈಗ ದೇಶಕ್ಕೇ ಗೊತ್ತಿರುವ ವಿಚಾರ. ಗಡಿಯ ವಿಚಾರದಲ್ಲಿ ಚೀನಾ ಭಾರತದ ವಿರುದ್ಧ ಏನೆಲ್ಲಾ ಸುಳ್ಳುಗಳನ್ನು ಹರಡಲು ಬಯಸುತ್ತದೆಯೋ, ಕಾಂಗ್ರೆಸ್ ಬೆಂಬಲಿಗರು ಭಾರತದೊಳಗೆ ಅಂತಹ ಕತೆಗಳನ್ನು ಹಬ್ಬಿಸಿದರು. ಗಲ್ವಾನ್ ಗಲಾಟೆ ಆದಾಗ ಚೀನಾ ಭಾರತದ ಗಡಿ ದಾಟಿ ನೂರಾರು ಕಿಲೋಮೀಟರ್ ಭೂಭಾಗವನ್ನು ಆಕ್ರಮಿಸಿತು ಎಂದು ಕಾಂಗ್ರೆಸ್ ಬೆಂಬಲಿಗರು ಚೀನಾದ ಪರವಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದು ನೋಡಿದ್ದೇವೆ. ಭಾರತ ಸರ್ಜಿಕಲ್ ದಾಳಿ ನಡೆಸಿದಾಗಲೂ ಇದೇ ವ್ಯವಸ್ಥೆ ಭಾರತದ ಸೈನ್ಯದ ಬಳಿ ಸಾಕ್ಷಿ ಕೇಳಿ ದೇಶಕ್ಕೆ ಮುಜುಗರ ಉಂಟುಮಾಡಿತ್ತು.

೩ ಡಬ್ಲ್ಯು, ೩ಟಿ ಅಂದರೇನು?
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ದೇಶದ ವಿದೇಶಾಂಗ ವ್ಯವಹಾರಗಳು ೩ ಡಬ್ಲ್ಯು ಸುತ್ತ ಇರುತ್ತಿದ್ದವು. ಅದುವೇ ವರ್ಲ್ಡ್ ಟೂರ್, ವೈನ್ ಆಂಡ್ ವುಮನ್. ದೇಶದ ಬಹುತೇಕ ರಾಜತಾಂತ್ರಿಕರು ಮತ್ತು ಸರ್ಕಾರವನ್ನು ಮೆಚ್ಚಿಸುತ್ತಿದ್ದ ಪತ್ರಕರ್ತರಿಗೆ ಸರ್ಕಾರದ ಖರ್ಚಿನಲ್ಲಿ ಇವು ದೊರಕುತ್ತಿದ್ದವು. ಬಡತನ, ಜಾತಿಗಳ ನಡುವಿನ ತಿಕ್ಕಾಟ ಇವುಗಳ ನಡುವೆಯೇ ಭಾರತವನ್ನು ವ್ಯಸ್ತ ಮಾಡಿಟ್ಟಿದ್ದ ಕಾಂಗ್ರೆಸ್ ಪಕ್ಷ ವಿದೇಶ ನೀತಿ, ವಿದೇಶಿ ವ್ಯವಹಾರ ದೇಶದ ಶ್ರೀಮಂತ ವರ್ಗದವರ ವಿಷಯ. ದೇಶದ ಜನಸಾಮಾನ್ಯರಿಗೂ ಇದಕ್ಕೂ ಸಂಬಂಧವೇ ಇಲ್ಲ ಅನ್ನುವಂತೆ ಬಿಂಬಿಸಿತ್ತು. ವಿದೇಶಾಂಗ ಸೇವೆಯಲ್ಲಿರುವುದು ಯಾವುದೋ ದೇವಲೋಕದ ಕೆಲಸ, ಅದೊಂದು ತರಹದಲ್ಲಿ ಜವಾಬ್ದಾರಿಗಳೇ ಇಲ್ಲದ ಅಧಿಕಾರ ಅನ್ನುವಂತೆ ಇತ್ತು. ಮೋದಿ ಸರ್ಕಾರ ಬಂದಮೇಲೆ ಈ ಪದ್ಧತಿ ಬದಲಾಯಿತು.

ಈಗಿನ ವಿದೇಶಾಂಗ ನೀತಿ ೩ ಡಬ್ಲ್ಯುನಿಂದ ೩ಟಿಗೆ ಬದಲಾಗಿದೆ. ೩ಟಿ ಅಂದರೆ ಟ್ರೇಡ್, ಟೆಕ್ನಾಲಜಿ, ಟೂರಿಸಂ. ಈಗ ವಿದೇಶದಲ್ಲಿ ಕಾಲಹರಣ ಮಾಡಲು ಮೋದಿ ಸರ್ಕಾರ ಯಾವುದೇ ರಾಜತಾಂತ್ರಿಕರಿಗೆ ಬಿಡುತ್ತಿಲ್ಲ. ಮೋದಿ ಕೂಡ ತಮ್ಮ ಯಾವುದೇ ವಿದೇಶ ಪ್ರವಾಸದಲ್ಲಿ ಈ ಮೂರು ವಿಷಯಗಳನ್ನು ಅಂದರೆ ವ್ಯಾಪಾರ, ತಂತ್ರಜ್ಞಾನ ಮತ್ತು ಪ್ರವಾಸಗಳ ಸುತ್ತಲೇ ವ್ಯವಹರಿಸುತ್ತಾರೆ. ಅದಕ್ಕೆ ಮೋದಿಯವರ ಇತ್ತೀಚಿನ ಅಮೆರಿಕ ಪ್ರವಾಸವನ್ನೇ ಗಮನಿಸಿ. ಅಲ್ಲಿ ಅವರು ಅಮೆರಿಕದ ಪ್ರಖ್ಯಾತ ಉದ್ಯೋಗಪತಿಗಳ ಜೊತೆ ಮಾತನಾಡುತ್ತಾರೆ. ಭಾರತದಲ್ಲಿ ಬಂಡವಾಳದ ಹೂಡಿಕೆ ಮತ್ತು ತಂತ್ರಜ್ಞಾನದ ಕೊಡುಕೊಳ್ಳುವಿಕೆಯ ಕುರಿತೂ ಮಾತನಾಡುತ್ತಾರೆ.

ಜೊತೆಗೆ ಭಾರತದ ಕಲೆ ಮತ್ತು ಸಂಸ್ಕೃತಿಯ ಅನಾವರಣ ಮಾಡಿ ಭಾರತಕ್ಕೆ ಹೆಚ್ಚು ಹೆಚ್ಚು ಪ್ರವಾಸಕ್ಕೆ ಬರುವಂತೆಯೂ ಪ್ರೋತ್ಸಾಹಿಸುತ್ತಾರೆ. ಮೋದಿಯವರು ತಾವು ನಡೆಸುವ ಪ್ರತಿ ರಾಜತಾಂತ್ರಿಕರ ಸಭೆಯಲ್ಲಿ ಈ ಮೂರು ‘ಟಿ’ ಬಗ್ಗೆ ಪ್ರಸ್ತಾಪಿಸುತ್ತಾರೆ ಮತ್ತು ವಿದೇಶದಲ್ಲಿರುವ ಪ್ರತಿಯೊಬ್ಬ ಭಾರತದ ರಾಜತಾಂತ್ರಿಕರಿಗೆ ಒಂದು ಟಾರ್ಗೆಟ್ ಕೊಟ್ಟು ನಿಮ್ಮಿಂದ ವರ್ಷಕ್ಕೆ ಭಾರತಕ್ಕೆ ಇಷ್ಟು ಪ್ರಮಾಣದ ಬಂಡವಾಳ ಹರಿದು ಬರಲೇಬೇಕು ಎಂದು ತಾಕೀತು ಮಾಡುತ್ತಿದ್ದಾರೆ. ಅದೇ ಕಾರಣಕ್ಕೆ ಈಗ ಭಾರತಕ್ಕೆ ವಿದೇಶಿ ಬಂಡವಾಳ ಹರಿದು ಬರುತ್ತಿರುವುದು. ಭಾರತದ ರಫ್ತು ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು.

ಭಾರತದಿಂದ ಶಸ್ತ್ರಾಸ್ತ್ರ ರಫ್ತು
ಮೋದಿಯವರ ‘ಆಕ್ಟ್ ಈಸ್ಟ್’ ಪಾಲಿಸಿ ಈಗ ಭಾರತದ ರಕ್ಷಣಾ ಉತ್ಪನ್ನಗಳಿಗೆ ಬೃಹತ್ ಮಾರುಕಟ್ಟೆಯನ್ನೇ ತೆರೆದಿದೆ. ದಕ್ಷಿಣ ಚೀನಾ ಸಾಗರ ಪ್ರದೇಶದಲ್ಲಿ ಇರುವ ಎಲ್ಲ ದೇಶಗಳಿಗೆ ಚೀನಾದಿಂದ ಅಭದ್ರತೆ ಕಾಡುತ್ತಿದೆ. ಅದನ್ನು ಸಮರ್ಥವಾಗಿ ಎದುರಿಸಲು ಅವುಗಳಿಗೆ ಸೂಕ್ತವಾದ ಶಸ್ತ್ರಾಸ್ತ್ರಗಳ ಅಭಾವ ಇದೆ. ಹೀಗಾಗಿ ಅವು ಭಾರತದ ಕಡೆ ಮುಖ ಮಾಡಿವೆ. ಇತ್ತೀಚೆಗೆ ಚೀನಾ ಫಿಲಿಪ್ಪೀನ್ಸ್‌ನ ಕಡಲ ತೀರದಲ್ಲಿ ಅದರ ಮೀನುಗಾರಿಕಾ ಹಡಗುಗಳಿಗೆ ತೊಂದರೆ ಕೊಟ್ಟಿತ್ತು. ಚೀನಾದ ಯುದ್ಧ ನೌಕೆಗಳನ್ನು ಸಮರ್ಥವಾಗಿ ಎದುರಿಸಲು ಭಾರತದ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಗಿಂತ ಉತ್ತಮವಾದ ಆಯುಧ ಜಗತ್ತಿನಲ್ಲೇ ಇಲ್ಲ. ಹಾಗಾಗಿ ಫಿಲಿಪ್ಪೀನ್ಸ್ ಅದನ್ನು ಭಾರತದಿಂದ ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ವಿಯೆಟ್ನಾಂ ಕೂಡ ಭಾರತದ ಬ್ರಹ್ಮೋಸ್ ಕ್ಷಿಪಣಿಗೆ ಆಸಕ್ತಿ ಹೊಂದಿದ್ದು, ಮುಂದಿನ ತಿಂಗಳು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಲ್ಲಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಸೌದಿ ಅರೇಬಿಯಾ ಭಾರತದ ಬ್ರಹ್ಮೋಸ್ ಕ್ಷಿಪಣಿಯ ಬಗ್ಗೆ ಆಸಕ್ತಿ ತೋರಿಸಿದೆ. ಇಂಡೋನೇಷ್ಯಾ, ಮಾಲ್ಡೀವ್ಸ್ ಮುಂತಾದ ದೇಶಗಳು ಭಾರತದಿಂದ ಬ್ರಹ್ಮೋಸ್, ಆಕಾಶ್ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸುವಲ್ಲಿ ಆಸಕ್ತಿ ತೋರಿವೆ. ಇದರ ಜೊತೆಗೆ ಭಾರತದ ಲಘು ಹೆಲಿಕಾಪ್ಟರ್‌ಗಳಿಗೆ ವಿಯೆಟ್ನಾಂ ಮತ್ತು ಮಾರಿಷಸ್ ದೇಶಗಳು ಆಸಕ್ತಿ ತೋರಿಸಿವೆ.

೨೦೧೬-೧೭ರಲ್ಲಿ ಭಾರತದ ರಕ್ಷಣಾ ಕ್ಷೇತ್ರದ ರಫ್ತು ೧,೫೨೧ ಕೋಟಿ ರು. ಇದ್ದದ್ದು ೨೦೨೦-೨೧ರಲ್ಲಿ ೮,೪೩೪ ಕೋಟಿ ರು. ಆಗಿದೆ. ೨೦೨೫ಕ್ಕೆ ಇದನ್ನು ೩೫ ಸಾವಿರ ಕೋಟಿ ರು.ಗೆ ತಲುಪಿಸುವುದು ಮೋದಿ ಸರ್ಕಾರದ ಗುರಿ. ಇದಕ್ಕೆ ಭಾರತ ಬ್ರಹ್ಮೋಸ್‌ನಂತೆಯೇ ಉಳಿದ ತಂತ್ರಜ್ಞಾನವನ್ನೂ ಅಭಿವೃದ್ಧಿಪಡಿಸಬೇಕು. ಎಚ್‌ಎಎಲ್ ನಿರ್ಮಿಸಿದ ತೇಜಸ್ ಯುದ್ಧ ವಿಮಾನಕ್ಕೆ ಆಗ್ನೇಯ ಏಷ್ಯಾ ದೇಶಗಳಿಂದ ಬೇಡಿಕೆ ಬರುತ್ತಿದೆ. ದುರಂತ ಅಂದರೆ ಈಗಿನ ಉತ್ಪಾದನಾ ವ್ಯವಸ್ಥೆಯಲ್ಲಿ ಎಚ್‌ಎಎಲ್ ಈ ವಿಮಾನವನ್ನು ಭಾರತದ ವಾಯುಪಡೆಗೆ ನಿಗದಿತ ಸಮಯದಲ್ಲಿ ಮಾಡಿ ಪೂರೈಸಲು ತಿಣುಕಾಡುತ್ತಿದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಈ ವಿಮಾನವನ್ನು ಹೆಚ್ಚು ಪ್ರಚಾರ ಮಾಡಲು ಹೋಗುತ್ತಿಲ್ಲ. ಒಟ್ಟಿನಲ್ಲಿ ಕೇಂದ್ರ ಸರ್ಕಾರದ ಭಾರತದ ಹಿತಾಸಕ್ತಿ ಕೇಂದ್ರಿತ ವಿದೇಶ ನೀತಿಯ ಕಾರಣಕ್ಕೆ ಇವತ್ತು ಭಾರತ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸುತ್ತಿದೆ. ನಿಜಕ್ಕೂ ಭಾರತದ ಭವಿಷ್ಯ ಇವತ್ತು ಸುಭದ್ರವಾಗಿದೆ ಎಂಬ ಭರವಸೆ ಮೂಡುತ್ತಿದೆ.

15
ಡಿಸೆ

ಮೋದಿಯ ಅಂತರಂಗಲ್ಲಿರುವ ಮಾಧವ; ಮಹಾಭಾರತದಲ್ಲಿ ಭೀಷ್ಮ ಮಾಡಿದ ತಪ್ಪನ್ನು ಈ ಭಾರತದಲ್ಲಿ ಮೋದಿಯಿಂದ ಆಗಲು ಬಿಡಲಿಲ್ಲ!


– ಅಜಿತ್ ಶೆಟ್ಟಿ ಹೆರಂಜೆ

ಕುರುಕ್ಷೇತ್ರದಲ್ಲಿ ಭೀಷ್ಮ ಪಿತಾಮಹರು ಕೌರವರ ಪಕ್ಷದಿಂದ ಯುದ್ಧ ಮಾಡುತ್ತಾರೆ. ಕಾರಣ ಅವರು ತೆಗೆದುಕೊಂಡ ಭೀಷಣ ಪ್ರತಿಜ್ಞೆ. ಭೀಷ್ಮರಿಗೂ ಇದರ ಬಗ್ಗೆ ಹೆಮ್ಮೆ ಇತ್ತು. ಆದರೆ ಅವರಿಗೆ ತಮ್ಮ ಬಗ್ಗೆ ಇದ್ದ ಈ ಅಭಿಮಾನದ ಭ್ರಮನಿರಸನವಾಗಿದ್ದು ಧರ್ಮಕ್ಷೇತ್ರ ಕುರುಕ್ಷೇತ್ರದಲ್ಲಿ. ಭೀಷ್ಮರು ಮಹಾಭಾರತ ಕಾಲದಲ್ಲಿ ಅತ್ಯಂತ ಪರಾಕ್ರಮಿ ಮತ್ತು ಶಕ್ತಿಶಾಲಿ ಯೋಧ. ಅವರನ್ನು ಸೋಲಿಸುವ ಒಬ್ಬನೇ ಒಬ್ಬ ಯೋಧ ಇಡೀ ಆರ್ಯವರ್ತದಲ್ಲಿ ಇರಲಿಲ್ಲ. ಆ ಕಾರಣಕ್ಕೆ ಹಸ್ತಿನಾವತಿಯ ಗೃಹ ಕಲಹದ ನಡುವೆಯೋ ಬೇರೆ ರಾಜರು ಹಸ್ತಿನಾವತಿಯ ಮೇಲೆ ಆಕ್ರಮಣ ಮಾಡಲಿಲ್ಲ. ಹದಿನೆಂಟು ದಿನದ ಮಹಾಭಾರತದ ಯುದ್ಧದಲ್ಲಿ 10 ದಿನ ಭೀಷ್ಮರು ಯುದ್ಧ ಮಾಡುತ್ತಾರೆ. ಆ ಹತ್ತೂ ದಿನ ಅವರು ಪಾಂಡವರ ಸೈನ್ಯವನ್ನು ಧ್ವಂಸ ಮಾಡುತ್ತಾರೆ. ಇನ್ನು ಇವರು ಬದುಕುಳಿದರೆ ಪಾಂಡವರ ಜಯ ಅಸಾಧ್ಯ ಎಂದು ಅರಿತ ಕೃಷ್ಣ, ಭೀಷ್ಮರಿಗೆ ಒಂದೋ ಯುದ್ಧಭೂಮಿಯ ತ್ಯಾಗ ಮಾಡಿ, ಇಲ್ಲಾ ನಾನೇ ನಿಮ್ಮನ್ನು ವಧಿಸುತ್ತೇನೆ ಎಂದವನೇ ಚಕ್ರಧಾರಿಯಾಗಿ ರಣರಂಗದಲ್ಲಿ ಶಸ್ತ್ರ ಹಿಡಿಯುವುದಿಲ್ಲ ಎನ್ನುವ ತನ್ನ ಪ್ರತಿಜ್ಞೆಯನ್ನ ತಾನೇ ಮುರಿಯುತ್ತಾನೆ. ಆಗ ಅರ್ಜುನ, ಮಾಧವ ಲೋಕ ನಿನ್ನನ್ನು ವಚನ ಭ್ರಷ್ಟ ಎಂದು ಆಡಿಕೊಳ್ಳುತ್ತದೆ ಅಂದಾಗ, ಕೃಷ್ಣ “ನನಗೆ ಲೋಕ ಹಿತ ಮುಖ್ಯವೇ ಹೊರತು ನನ್ನ ವೈಯಕ್ತಿಕ ಪ್ರತಿಷ್ಠೆಗಳಲ್ಲ. ಒಂದೋ ನೀನು ಭೀಷ್ಮರನ್ನು ಕೊಲ್ಲು, ಇಲ್ಲವಾದರೆ ನಾನು ಕೊಲ್ಲುತ್ತೇನೆ” ಎನ್ನುತ್ತಾನೆ. ಆಗ ಕೃಷ್ಣ ಮತ್ತು ಭೀಷ್ಮರಲ್ಲಿ ಒಂದಷ್ಟು ಧರ್ಮಸೂಕ್ಷ್ಮಗಳ ಚರ್ಚೆ ನಡೆಯುತ್ತದೆ. “ನಾನು ಕೊಟ್ಟ ವಚನವನ್ನು ಸದಾ ನಿಭಾಯಿಸುತ್ತಲೇ ಬಂದೆ. ಎಷ್ಟೇ ಕಷ್ಟವಾದರೂ ನಾನು ನನ್ನ ಪ್ರತಿಜ್ಞೆಯ ಭಂಗ ಮಾಡಲ್ಲಿಲ್ಲ. ಆ ಮೂಲಕ ಸದಾ ಧರ್ಮದ ಮಾರ್ಗದಲ್ಲಿ ನನ್ನ ಜೀವನದ ಉದ್ದಕ್ಕೂ ನಡೆದೆ” ಎನ್ನುತ್ತಾರೆ ಭೀಷ್ಮರು. ಆಗ ಕೃಷ್ಣ “ದೃತರಾಷ್ಟ್ರನಂತಹ ಒಬ್ಬ ಅಪಾತ್ರ ಹಸ್ತಿನಾವತಿಯ ಸಿಂಹಾಸನ ಏರುವುದರಿಂದ ಹಿಡಿದು ಇವತ್ತಿನ ಈ ಭಾರತ ಯುದ್ಧದ ಎಲ್ಲಾ ಅಧರ್ಮಕ್ಕೆ ನಿನ್ನ ಪ್ರತಿಜ್ಞೆಯೇ ಕಾರಣ. ಭಗವಂತ ನಿನ್ನ ಸರ್ವಶಕ್ತನನ್ನಾಗಿ ಮಾಡಿದ್ದ, ನಿನ್ನಲ್ಲಿ ಧರ್ಮ ಜ್ಞಾನ ಇತ್ತು, ಬಾಹುಬಲ ಇತ್ತು. ಈ ಮೂಲಕ ನೀನು ನಿನ್ನ ಪ್ರಜಾ ವರ್ಗದ ಹಿತವನ್ನು ಕಾಪಾಡಬೇಕಿತ್ತು. ಆದರೆ ನಿನ್ನ ಜೀವನದ ಉದ್ದಕ್ಕೂ ಆದ ಅಧರ್ಮಗಳನ್ನು ನೋಡಿ ಅದನ್ನ ತಡೆಯುವ ಸಾಮರ್ಥ್ಯವಿದ್ದರೂ ನಿನ್ನ ಪ್ರತಿಜ್ಞೆಗೆ ಕಟ್ಟುಬಿದ್ದು ಎಲ್ಲವನ್ನೂ ಆಗಲು ಬಿಟ್ಟೆ. ಲೋಕ ಹಿತಕ್ಕೆ ಉಪಯೋಗವಾಗದ ನಿನ್ನ ಸಾಮರ್ಥ್ಯ ಇದ್ದರೆಷ್ಟು ಬಿಟ್ಟರೆಷ್ಟು? ಇದು ನೀನು ಭಗವಂತನಿಗೂ ಮಾಡುವ ಅವಮಾನವಲ್ಲವೇ? ನೀನು ಸದಾ ನಿನ್ನ ಪ್ರತಿಜ್ಞೆಗಾಗಿ ಬದುಕಿದೆಯೇ ಹೊರತು,ಸಮಾಜಕ್ಕಾಗಿ ನಿನ್ನ ಸ್ವಜನರ ಕಲ್ಯಾಣಕ್ಕಾಗಿ ಬದುಕಲೇ ಇಲ್ಲ. ಅದರಿಂದ ಆದ ಅನಾಹುತಗಳು ಅನರ್ಥಗಳೆ ಹೆಚ್ಚು. ಭೀಮನಿಗೆ ವಿಷಪ್ರಾಶನ ಆದಾಗ, ಪಾಂಡವರಿಗೆ ಹಸ್ತಿನಾವತಿಯ ಅಧಿಕಾರ ಸಿಗದಿದ್ದಾಗ, ಅರಗಿನ ಮನೆಯಲ್ಲಿ ಪಾಂಡವರನ್ನು ಸುಡುವ ಯೋಜನೆ ಆದಾಗ, ಮೋಸದ ದ್ಯೂತ ಆಗುವಾಗ, ದ್ರೌಪದಿ ವಸ್ತ್ರಾಪಹರಣ ಆಗುವಾಗ, ಈಗ ಧರ್ಮ ಸ್ಥಾಪನೆಯ ಕಾರಣಕ್ಕೆ ಭಾರತ ಯುದ್ಧ ಆಗುತ್ತಿರುವಾಗಲೂ ನಿನ್ನ ಸಾಮರ್ಥ್ಯವನ್ನು ನಿನ್ನ ಪ್ರತಿಜ್ಞೆಯನ್ನು ಕಾಪಾಡಲು ವಿನಿಯೋಗ ಮಾಡುತ್ತಿರುವೆಯೇ ಹೊರತು ಧರ್ಮದ ರಕ್ಷಣೆಗೆ ನೀನು ಏನೂ ಮಾಡುತ್ತಿಲ್ಲ. ನಿಯತಿ ಕಾರ್ಯಕ್ಕೆ ಅಡ್ಡಿಯಾಗಿ ನಿಂತಿದ್ದೆ. ನನಗೆ ಧರ್ಮ ಸ್ಥಾಪನೆ ಮುಖ್ಯವೇ ಹೊರತು ನನ್ನ ಸ್ವಪ್ರತಿಷ್ಟೆ ಅಲ್ಲ. ಲೋಕ ಕಲ್ಯಾಣಕ್ಕೆ ಇಂತಹ ಸಾವಿರ ಅಪರಾಧಗಳನ್ನು ಬೇಕಿದ್ದರೆ ಸಹಿಸಿಕೊಳ್ಳಬಲ್ಲೆ. ನಾವು ಯಾವುದೋ ಕಾಲಘಟ್ಟದಲ್ಲಿ ಆ ಪರಿಸ್ಥಿಗೆ ಅನುಗುಣವಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿರಬಹುದು. ಆದರೆ ಬದಲಾದ ಸನ್ನಿವೇಶದಲ್ಲಿ ಅದೇ ನಿರ್ಣಯಗಳು ಸಮಾಜದ ಹಿತಕ್ಕೆ ಧಕ್ಕೆ ಆಗುವಂತಿದ್ದರೆ ಅಥವಾ ಅದನ್ನೇ ಕಾರಣ ಮಾಡಿ ದುಷ್ಟರು ಸಮಾಜದಲ್ಲಿ ಅಧರ್ಮ ಮಾಡುತ್ತಿದ್ದಾರೆ ಅಂದಾಗ ಸ್ವಪ್ರತಿಷ್ಟೆಯನ್ನು ಬಿಟ್ಟು ಸಮಾಜದ ಹಿತಕ್ಕಾಗಿ ಅಂತಹ ನಿರ್ಣಯಗಳ ಕೈಬಿಡಬೇಕು. ಅದೇ ಧರ್ಮ!” ಎಂದ ಕೃಷ್ಣ, ಜೀವನಪೂರ್ತಿ ತನ್ನ ಪ್ರತಿಜ್ಞೆಗಾಗಿ ಬದುಕಿದ ಭಿಷ್ಮರನ್ನು ವಧಿಸಲು, ಆ ಮೂಲಕ ಧರ್ಮ ಸ್ಥಾಪನೆ ಮಾಡಲು ತಾನು ಮಾಡಿದ ಪ್ರತಿಜ್ಜೆಯನ್ನೇ ಮುರಿಯಲು ಮುಂದಾಗುತ್ತಾನೆ.

ಪ್ರಧಾನಿ ಮೋದಿ ನವೆಂಬರ್‌ 19ರ ಬೆಳಿಗ್ಗೆ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ ತಾವು ರೈತರ ಹಿತಕಾಯುವ ಉದ್ದೇಶದಿಂದ ಒಂದು ವರ್ಷ ಮೂರು ತಿಂಗಳ ಹಿಂದೆ ಜಾರಿಗೆ ತಂದಿದ್ದ ತ್ರಿವಳಿ ಕೃಷಿ ಸುಧಾರಣಾ ಮಸೂದೆಯನ್ನು ವಾಪಾಸು ಪಡೆಯುವುದಾಗಿ ಘೊಷಣೆ ಮಾಡಿದರು. ಈ ಮೂರು ಕೃಷಿ ಸುಧಾರಾಣಾ ಮಸೂದೆಗಳು ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತ್ಯಂತ ಕ್ರಾಂತಿಕಾರಿ ಸುಧಾರಣೆಗಳಾಗಿದ್ದವು. ಕರ್ನಾಟಕದ ರೈತ ಹೋರಾಟದ ಪಿತಾಮಹಾ ಎಂದೇ ಖ್ಯಾತಿಯಾಗಿದ್ದ ಪ್ರೊ.ನಂಜುಂಡ ಸ್ವಾಮಿಯಿಂದ ಹಿಡಿದು ಉತ್ತರ ಭಾರತದಲ್ಲಿ ರೈತ ಕ್ರಾಂತಿಯ ಹರಿಕಾರ ಚೌಧರಿ ಚರಣ್‌ಸಿಂಗ್ ಆದಿಯಾಗಿ ದಶಕಗಳಿಂದ ಇಟ್ಟ ಬೇಡಿಕೆಗಳು ಅಕ್ಷರಶಃ ಈ ಕಾಯಿದೆಯ ಮುಖಾಂತರ ಅನುಷ್ಠಾನಕ್ಕೆ ಬಂದವು. ಕೇವಲ ದೇಶದ ರೈತ ಹೋರಾಟಗಳು ಮಾತ್ರವಲ್ಲ, ಭಾರತದ ಎಲ್ಲಾ ರಾಜಕೀಯ ಪಕ್ಷಗಳು ಅವರುಗಳು ವಿರೋಧ ಪಕ್ಷದಲ್ಲಿ ಇದ್ದಾಗ ರೈತರ ಇದೇ ಬೇಡಿಕೆಗಳನ್ನು ಮುಂದಿಟ್ಟು ಆಳುವ ಸರಕಾರಗಳ ವಿರುದ್ಧ ಪ್ರತಿಭಟನೆಗೂ ಕೂತಿದ್ದವು. ಅದೆಲ್ಲವನ್ನು ಅಕ್ಷರಶಃ ಅನುಷ್ಟಾನಕ್ಕೆ ತರುವ ಕಾಯಿದೆಯನ್ನು ಮೋದಿ ಸರಕಾರ ಕಳೆದ ವರ್ಷ‌ ಸೆಪ್ಟಂಬರ್‌ ತಿಂಗಳಿನಲ್ಲಿ ತಂದಿತು. ಮಧ್ಯವರ್ತಿಗಳ ಕಪಿಮುಷ್ಠಿಯಿಂದ ರೈತರನ್ನು ಮುಕ್ತಗೊಳಿಸಿ, ರೈತರು ತಾವು ಉತ್ಪಾದಿಸಿದ ಬೆಳೆಗೆ ತಾವೇ ಬೆಲೆ ನಿಗದಿಪಡಿಸಿ ದೇಶದ ಯಾವುದೇ ಭಾಗದಲ್ಲಿ ಮಾರಾಟ ಮಾಡುವ ಸ್ವಾತಂತ್ರ್ಯದ ಜೊತೆಗೆ ವಾಣಿಜ್ಯಕ್ಕೆ ಖಾಸಗೀ ಕಂಪೆನಿಗಳ ಜೊತೆ ಒಡಂಬಡಿಕೆ ಮಾಡಿಕೊಂಡು ಕಾನೂನಿನ ರಕ್ಷಣೆಯೊಂದಿಗೆ ಕೃಷಿ ಮಾಡುವ ಅವಕಾಶವನ್ನೂ ಈ ಕಾಯಿದೆ ರೈತರಿಗೆ ಕೊಟ್ಟಿತು. ದುರಂತ ಅಂದರೆ ಮೋದಿ ಕಳೆದ 7 ವರ್ಷಗಳಿದೆ ಕೇವಲ ವಿರೋಧಿಸುವ ಕಾರಣಕ್ಕೆ ವಿರೋಧ ಮಾಡುತ್ತಿದ್ದ ಎಲ್ಲಾ ವಿರೋಧ ಪಕ್ಷಗಳು ಹಿಂದೆ ತಾವೇ ಧರಣಿ ಕೂತು ಜಾರಿಯಾಗಲೇಬೇಕು ಎಂದ ಕಾನೂನು ಜಾರಿಗೆ ಬಂದಾಗ ಅದನ್ನ ಸ್ವಾಗತಿಸುವ ಬದಲು ವಿರೋಧಿಸಲು ಮುಂದಾದರು. ಕೇಂದ್ರ ಸರಕಾರ ಈ ರೈತ ಸಂಘಟನೆಗಳ ಜತೆಗೆ ಸುಮಾರು 12 ಸುತ್ತಿನ ಮಾತುಕತೆ ನಡೆಸಿದರೂ ಅವರು ತಮ್ಮ ವಿತಂಡವಾದದ ಪಟ್ಟನ್ನು ಸಡಿಸಲೇ ಇಲ್ಲ. ರೈತ ಮಸೂದೆ ಕಾಯಿದೆಯ ಯಾವ ಅಂಶದಲ್ಲಿ ನಿಮಗೆ ಸಮಸ್ಯೆ ಇದೆ ಚರ್ಚಿಸೋಣ ಎಂದರೆ ಅದಕ್ಕೂ ಅವರು ಸಿದ್ದರಿರಲಿಲ್ಲ.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗಿನಿಂದ ಮತ್ತು ಅದಕ್ಕೂ ಪೂರ್ವದ ಬ್ರಿಟಿಷ್‌ ಆಳ್ವಿಕೆಯ ಕಾಲದಲ್ಲಿ ಕೂಡ ಆಳುವ ಸರಕಾರಗಳು ಎಲ್ಲಾ ನಿಲುವುಗಳು ಬಹುತೇಕ ರೈತ ವಿರೋಧಿಗಳೇ ಆಗಿದ್ದವು. 2ನೇ ವಿಶ್ವ ಯುದ್ಧದ ಕಾಲದಲ್ಲಿ ಬ್ರಿಟಿಷ್‌ ಸರಕಾರ ತಂದ ಎಪಿಎಮ್‌ಸಿ ಕಾಯಿದೆ ಭಾರತದಲ್ಲಿ ಕೃತಕ ಅಹಾರ ಧಾನ್ಯಗಳ ಅಭಾವ ಸೃಷ್ಟಿ ಮಾಡಿತು. ಬಂಗಾಳದಲ್ಲಿ 40 ಲಕ್ಷಕ್ಕೂ ಹೆಚ್ಚು ಜನ ಹಸಿವಿನಿಂದ ಸತ್ತರು. ಅಲ್ಲಿಂದ ಪ್ರಾರಂಭವಾಗಿ 2020ರ ಕೃಷಿ ಸುಧಾರಣಾ ನೀತಿ ಬರುವ ತನಕ ಭಾರತದ ರೈತನ ಬದುಕು ಸುಧಾರಿಸುವ ಯಾವುದೇ ನೀತಿಗಳು ಜಾರಿಯಾಗಲೇ ಇಲ್ಲ. ಈ ಕಾರಣಕ್ಕೆ ರೈತರು ಸರಕಾರದ ವಿರುದ್ಧ ನಿರಂತರವಾಗಿ ಪ್ರತಿಭಟಿಸುತ್ತ ಬಂದ. ರೈತನ ಮನಸ್ಸಿನಲ್ಲಿ ಸರಕಾರಗಳು ರೈತವಿ ರೋಧಿಗಳು ಅನ್ನುವ ಭಾವನೆ ಅಚ್ಚೊತ್ತಿತು. ನಮ್ಮ ದೇಶದ ಎಡಪಂಥೀಯ ಪಕ್ಷಗಳಿಗೆ ಇಂತಹಾ ಮನಃಸ್ಥಿತಿಯ ರೈತ ಸಮುದಾಯಗಳನ್ನು ತಮ್ಮತ್ತ ಸೆಳೆದುಕೊಳ್ಳುವುದು ಕಷ್ಟವಾಗಲಿಲ್ಲ. ಇಂತವರ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು ದೇಶದೊಳಗೆ ಹಲವಾರು ವಿಧ್ವಂಸಕ ಕೆಲಸಗಳನ್ನು ಮಾಡುತ್ತಲೇ ಬಂದರು. ಈ ದೇಶದಲ್ಲಿ ರೈತನನ್ನು ಅನ್ನದಾತ ಎಂದೇ ಕಾಣುತ್ತೇವೆ ಮತ್ತು ಸರಕಾರಗಳು ಇವರ ಹೋರಾಟ, ಪ್ರತಿಭಟನೆ ಎಲ್ಲದರ ಬಗ್ಗೆಯ ಹೆಚ್ಚು ಸಹಿಷ್ಣುಗಳಾಗಿರುತ್ತಿದ್ದವು. ರೈತರನ್ನು ಬಳಸಿಕೊಂಡು ಪ್ರತಿಭಟನೆ ಮಾಡಿದರೆ ಸರಕಾರಗಳು ನಮ್ಮನ್ನು ಏನೂ ಮಾಡಲಾರವು. ಒಂದೊಮ್ಮೆ ಅವುಗಳನ್ನು ಬಲಪೂರ್ವವಾಗಿ ಹತ್ತಿಕ್ಕಲು ಸರಕಾರ ಮುಂದಾದರೆ ಅಂತಹಾ ಘಟನೆಗಳನ್ನು ಸಮಾಜ ಯಾವತ್ತೂ ಸಹಿಸಿಕೊಂಡಿರಲಿಲ್ಲ ಅನ್ನುವುದರ ಅರಿವು ಅವರಿಗಿತ್ತು. ಕರ್ನಾಟಕದಲ್ಲಿ 1980ರ ನರಗುಂದ-ನವಲಗುಂದದಲ್ಲಿ ಆದ ರೈತ ಬಂಡಾಯದಲ್ಲಿ ಅಂದಿನ ಸರಕಾರ ತಾಳ್ಮೆ ಕಳೆದುಕೊಂಡ ಮಾಡಿದ ಗೋಲಿಬಾರ್‌ ಮುಂದಿನ ದಿನಗಳಲ್ಲಿ ಗುಂಡೂರಾವ್‌ ಅವರ ಸರಕಾರವನ್ನೇ ಬಲಿತೆಗೆದುಕೊಂಡಿತ್ತು. ಇದೆಲ್ಲದರಿಂದ ಹುಟ್ಟಿದ ಅನೇಕ ರೈತ ಸಂಘಟನೆಗಳು, ಒಂದಷ್ಟು ನಾಯಕರು, ಉದಾಹರಣೆಗೆ ಪ್ರೊ. ನಂಜುಂಡ್‌ಸ್ವಾಮಿ, ಚೌಧರಿ ಚರಣ ಸಿಂಗ್‌, ಟಿಕಾಯತ್‌ ಅಂತವರು ರೈತರ ನೈಜ ಕಾಳಜಿಯನ್ನು ತೋರಿದರಾದರೂ, ಅವರ ನಂತರ ಬಂದವರೆಲ್ಲರೂ ರೈತ ಹೋರಾಟದ ನೆಪದಲ್ಲಿ ತಮ್ಮ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರಗಳಿಗೆ ರೈತ ಹೋರಾಟಗಳನ್ನು ಬಳಸತೊಡಗಿದರು. ರೈತರೂ ತಮಗೆ ಅರಿವಿಲ್ಲದೇ ಈ ವೀಷ ವರ್ತುಲದಲ್ಲಿ ಸಿಕ್ಕಿಕೊಂಡರು. ಇಂತಹಾ ರಾಜಕೀಯ ಸ್ವಾರ್ಥ ಭರಿತ ಹೋರಾಟದ ಉಗ್ರ ಸ್ವರೂಪವೇ ದೆಹಲಿಯಲ್ಲಿ ರಾಕೇಶ್‌ ಸಿಂಗ್‌ ಟಿಕಾಯತ್‌ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆಯುತ್ತಿರುವುದು.

ಕಾಯಿದೆ ಜಾರಿಯಾದಾಗಿನಿಂದ ಇಲ್ಲಿಯ ತನಕ ಮಧ್ಯವರ್ತಿಗಳೂ ಒಂದಿಷ್ಟು ಅಮಾಯಕ ರೈತರನ್ನು ಮುಂದಿಟ್ಟು ದೆಹಲಿ ಪರಿಸರದಲ್ಲಿ ಈ ಕಾಯಿದೆಯನ್ನು, ರೈತ ವಿರೋಧಿ ಪ್ರತಿಭಟನೆಯನ್ನಾಗಿ ಮಾಡಲು ಪ್ರಾರಂಭಿದರು. ಹೀಗೆ ಪ್ರಾರಂಭವಾದ ಪ್ರತಿಭಟನೆ ಆರಂಭದಲ್ಲಿ ಇಂದೊದು ಪ್ರತಿಕ್ರಿಯೆ ಅಷ್ಟೇ ಎಂದು ಭಾವಿಸಲಾಗಿತ್ತು. ನಂತರದ ದಿನಗಳಲ್ಲಿ ಆದ ಬೆಳವಣಿಗೆಯಿಂದ ಇದು ದೆಹಲಿಯ CAA ಪ್ರತಿಭಟನೆಯ ಮುಂದುವರಿದ ಭಾಗವಾಗಿದ್ದು. ಇದು ಸಂಪೂರ್ಣ ಪೂರ್ವಯೋಜಿತ ಮತ್ತು ಪೂರ್ವ ನಿರ್ಧಾರಿತ ಅನ್ನುವುದು ಅರಿಯಲು ಬಹಳ ಕಾಲ ಬೇಕಾಗಿರಲಿಲ್ಲ. ದೇಶದ ಹಿತ ದೃಷ್ಟಿಯಿಂದ ಮೋದಿ ಸರಕಾರ ಕೈಗೊಂಡ ಅನೇಕ ನಿರ್ಧಾರಗಳು ಇಷ್ಟು ದಿನ ಭಾರತದ ಆಂತರಿಕ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದ ಅನೇಕ ಸಂಘಟನೆಗಳು ಎನ್‌ಜಿಓಗಳ ಪ್ರಭಾವಗಳನ್ನು ಹತ್ತಿಕ್ಕಿತ್ತು. ವಿದೇಶಗಳಿಂದ ಇಂತಹ ಸಂಘಟನೆಗಳಿಗೆ ಲೆಕ್ಕವಿಲ್ಲದಷ್ಟು ಬರುತ್ತಿದ್ದ ಕೋಟ್ಯಂತರ ರುಪಾಯಿ ವಿದೇಶಿ ಅನುಧಾನಗಳನ್ನು ಮೋದಿಯರು 2020ರಲ್ಲಿ ತಂದ FCRA ತಿದ್ದುಪಡಿ ಕಾಯಿದೆಯಿಂದಾಗಿ ಸರಕಾರಿ ನಿಯಂತ್ರಣಕ್ಕೆ ಬಂದಿತು. ಇದೆಲ್ಲದರ ಜೊತೆಗೆ ಜಾಗತಿಕ ರಾಜಕಾರಣದಲ್ಲಿ ಮೋದಿಯವರ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು. ಯಾವ ವ್ಯಕ್ತಿಗೆ ಅಮೇರಿಕಾ ವಿಸಾ ಕೊಡಬಾರದು ಎಂದು ಅಮೇರಿಕಾದ ಸರಕಾರದ ಮಂದೆ ಮಂಡಿಯೂರಿ ಗೋಗರೆದರೂ ಅದೇ ವ್ಯಕ್ತಿ ಈಗ ಅವರ ಕಣ್ಣಮುಂದೆ ವಿಶ್ವದ ಅತ್ಯಂತ ಪ್ರಭಾವಿ ನಾಯಕನಾಗಿ ಬೆಳದಿದ್ದ. ಹೀಗೆ ದೇದೀಪ್ಯಮಾನವಾಗಿ ಬೆಳಗುತ್ತಿದ್ದ ಮೋದಿ ಮತ್ತು ಭಾರತದ ವರ್ಚಸ್ಸಿಗೆ ಹೇಗಾದರೂ ಮಾಡಿ ಧಕ್ಕೆ ತರಬೇಕಾಗಿತ್ತು. ಭಾರತದ 5G ಇಂಟರ್ನೆಟ್‌ ಸಂಪರ್ಕದ ಗುತ್ತಿಗೆ ಚೀನಾದ ಹ್ವುವೆ ಕಂಪೆನಿಯ ಬದಲು ಭಾರತದ ಜಿಯೋದ ಪಾಲಾಗಿತ್ತು. ಇದರಿಂದ ಚೀನಾಕ್ಕೆ ಜಾಗತಿಕ ಮಟ್ಟದಲ್ಲಿ ಅವಮಾನದ ಜೊತೆಗೆ ಭಾರಿ ಆರ್ಥಿಕ ನಷ್ಟವೂ ಆಗಿತ್ತು. ಅದಕ್ಕೆ ಮೋದಿಯನ್ನು ಹಣಿಯಲು ರೈತ ಕಾಯಿದೆಯನ್ನು ಬಳಸಿಕೊಂಡರು. ಇವರ ಸ್ವಾರ್ಥ ರಾಜಕಾರಣಕ್ಕೆ ಅಮಾಯಕ ರೈತರು ದಾಳವೂ ಆದರು, ಗುರಾಣಿಯೂ ಆದರು. ಈ ಕಾಯಿದೆಯಿಂದ ಪೆಟ್ಟು ಬಿದ್ದದ್ದು ಎಪಿಎಮ್‌ಸಿಯ ಮಧ್ಯವರ್ತಿಗಗಳಿಗೆ, ಅವರು ಹೇಗೆ ಸುಮ್ಮನಿರಲು ಸಾಧ್ಯ? ಆ ಕಾರಣಕ್ಕೆ NDA ಒಕ್ಕೂಟದ ಮಿತ್ರ ಪಕ್ಷವಾಗಿದ್ದ ಶಿರೋಮಣಿ ಅಕಾಲಿ ದಳ ಈ ಕಾಯಿದೆಯನ್ನು ವಿರೋಧಿಸಿ ಸರಕಾರದಿಂದ ಹೊರನಡೆಯಿತು. ಪಂಜಾಬಿನ ಕೃಷಿ ಉತ್ಪನ್ನ ಮಾರುಕಟ್ಟೆಯ ಏಕಸ್ವಾಮ್ಯ ಅವರಲ್ಲಿತ್ತು, ಕೇವಲ ದಲ್ಲಾಳಿಕೆಯಲ್ಲಿ ವಾರ್ಷಿಕ ಸುಮಾರು 400 ಕೋಟಿ ಕಮಿಶನ್‌ ಗಳಿಸುತ್ತಿದ್ದರು. ಈ ವ್ಯವಸ್ಥೆಯನ್ನು ಕಾಪಿಡಲೆಂದೇ ರಾಜಕಾರಣಕ್ಕೆ ಬಂದವರು, ಅದರ ಬುಡಕ್ಕೆ ಪೆಟ್ಟುಬಿದ್ದಾಗ ಸಹಿಸಿಕೊಂಡಾರೋ? ಖಂಡಿತಾ ಇಲ್ಲ. ಪಂಜಾಬಿನ ರೈತರನ್ನು ಕೇಂದ್ರ ಸರಕಾರದ ವಿರುದ್ದ ಎತ್ತಿ ಕಟ್ಟಿದರು. ಇವರ ಜೊತೆಗೆ ಮೋದಿಯಿಂದ ನೊಂದ, ಮೋದಿಯ ಕಾರಣಕ್ಕೆ ತಮ್ಮ ಅಸ್ತಿತ್ವ ಕಳೆದಕೊಳ್ಳುತ್ತಿರುವ ಅಷ್ಟೂ ಸಂಘಟನೆಗಳು, ವ್ಯಕ್ತಿಗಳು ಒಟ್ಟಿಗೆ ಸೇರಿ ರೈತರನ್ನು ಮುಂದೆ ಬಿಟ್ಟು ವ್ಯವಸ್ಥಿತ ಪ್ರತಿಭಟನೆಗೆ ಮುಂದಾದರು. ಇವರ ಉದ್ದೇಶ ಇದ್ದದ್ದು ಇಷ್ಟೆ ಮೋದಿಯವರಿಗೆ ನರ ಹಂತಕ ಎಂಬ ಹಣೆಪಟ್ಟಿ ಕಟ್ಟಬೇಕು, ಮೋದಿಯನ್ನು ರೈತ ವಿರೋಧಿ, ರೈತ ಹಂತಕ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಬೇಕು. ಮೋದಿಯನ್ನು ಈ ವ್ಯೂಹದಲ್ಲಿ ಕೆಡವಬೇಕು ಎನ್ನುವ ಕಾರಣಕ್ಕೆ ರೈತ ಹೋರಾಟದ ಹೆಸರಿನಲ್ಲಿ ಆಡಬಾರದ ಆಟಗಳೆನ್ನಲ್ಲಾ ಆಡಿದರು. ಇಲ್ಲದೇ ಹೋದರೆ ಪಂಜಾಬಿನಲ್ಲಿ ಕೃಷಿ ಮಸೂದೆಯ ವಿರುದ್ಧ ಹೋರಾಟ ಮಾಡುತ್ತಿದ್ದ ರೈತರು ರಾಜ್ಯಾದ್ಯಂತ ಜಿಯೋ ಕಂಪನಿಯ ಮೊಬೈಲ್‌ ಟವರ್‌ ಕೆಡೆಯುವ ಆವಶ್ಯಕತೆ ಏನಿತ್ತು? ಈ ರೈತ ಮಸೂದೆಯ ಹೋರಾಟಕ್ಕೂ ಜೀಯೋ ಕಂಪನಿಯ ಮೊಬೈಲ್‌ ಟವರಿಗೂ ಏನು ಸಂಬಂಧ? ಇವರು 1500 ಮೋಬೈಲ್ ಟವರ್‌ಗಳನ್ನು ದ್ವಂಸಮಾಡಿದರು. ಜನವರಿ 26 2021ರಂದು ದೆಹಲಿಯ ಕೆಂಪುಕೋಟೆಗೆ ನುಗ್ಗಿ ಅಲ್ಲಿ ಭಾರತದ ತ್ರಿವರ್ಣ ಬದಲು ಬೇರೆ ದ್ವಜ ಹಾರಿಸಿದರು. ಈ ಗಲಾಟೆಯಲ್ಲಿ ರೈತರು ತಮ್ಮ ಟ್ರಾಕ್ಟರ್ ಗಳಿಗೆ ಆರ್ಮರ್‌ ಪ್ಲೇಟ್‌ ಹಾಕಿಸಿಕೊಂಡು ಅದನ್ನು ಯೋದ್ಧ ಟ್ಯಾಂಕುಗಳಂತೆ ದೆಹಲಿ ಬೀದಿಬೀದಿಗಳಲ್ಲಿ ಓಡಿಸಿ ದಾಂಧಲೆ ಮಾಡಿದರು. ಈ ಗಲಾಟೆಯಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಪೋಲೀಸರಿಗೆ ಗಾಯವಾದವು, ಕೋವಿಡ್‌ ಸಮಯದಲ್ಲೂ ರೋಗ ಸಂಕ್ರಮಣ ಆಗಬೇಕು ಎಂಬ ದುರದ್ದೇಶದಿಂದಲೇ ಲಸಿಕೆ ಹಾಕಿಸಲು ಬಿಡಲಿಲ್ಲ, ಜೊತೆಗೆ ಲಸಿಕೆಯ ಬಗ್ಗೆ ಅಪಪ್ರಚಾರವನ್ನೂ ಮಾಡಿದರು. ಸಿಂಘೂ ಗಡಿ ಪ್ರದೇಶದಲ್ಲಿ ವಾಸವಿದ್ದ ಹಳ್ಳಿಯ ಜನರು ಇವರ ಮೇಲೆ ಅತ್ಯಾಚಾರ ದರೋಡೆಯಂತಹ ಗಂಬೀರ ಆರೋಪ ಮಾಡಿದರು. ಇದೆಲ್ಲಕ್ಕಿಂತ ಮುಖ್ಯವಾಗಿ ಪಂಜಾಬಿನ ಸಿಕ್ಖರೇ ಹೆಚ್ಚಿದ್ದ ಪ್ರತಿಭಟನೆಯಲ್ಲಿ ಖಲಿಸ್ಥಾನಿಯ ಉಗ್ರರೂ ಸೇರಿಕೊಂಡರು. ಕೆಂಪು ಕೋಟೆಯಲ್ಲಿ ತ್ರಿವರ್ಣಧ್ವಜ ತೆಗೆದು ಮತೀಯ ದ್ವಜ ಹಾರಿಸಿದ ದೀಪ್‌ ಸಿದ್ದುವನ್ನು ಬಂಧಿಸಿದ ಪೋಲಿಸರಿಗೆ, ಈತನಿಗೆ ಖಲಿಸ್ಥಾನಿ ಉಗ್ರ ಸಂಘಟನೆಯ ಭಾಗಾವಗಿರುವ SFJ (Sikhs for Justice) ಎಂಬ ಗುಂಪಿನ ನಡುವೆ ಸಂಪರ್ಕ ಇರುವುದು ತಿಳಿಯಿತು. ಕಳೆದ ಒಂದು ವರ್ಷದಿಂದ ಭಾರತ ಪಾಕಿಸ್ಥಾನ ಗಡಿಯಲ್ಲಿ ಅದರಲ್ಲೂ ಪಂಜಾಬಿನ ಗಡಿ ಪ್ರದೇಶದಲ್ಲಿ ಪಾಕಿಸ್ಥಾನದಿಂದ ಡ್ರೋನ್‌ಗಳು ದೇಶದ ಗಡಿ ಪ್ರವೇಶಿಸಿ ಅದರ ಮುಖಾಂತರ ಶಸ್ತ್ರಾಸ್ತ್ರ, ಡ್ರಗ್‌ಗಳನ್ನು ರವಾನಿಸುವವ ಕೆಲಸ ಹೆಚ್ಚಾಗತೊಡಗಿತು. ಎಲ್ಲಿಯ ತನಕ ಪಂಜಾಬಿನ ಆಡಳಿತದ ಚುಕ್ಕಾಣಿ ಕ್ಯಾಪ್ಟನ್‌ ಅಮರಿಂದರ್ ಅವರ ಬಳಿ ಇತ್ತೋ ಅವರು ರೈತ ಹೋರಾಟ ಮತ್ತು ದೇಶದ ಭದ್ರತೆಯ ನಡುವೆ ಎಲ್ಲೂ ಹೊಂದಾಣಿಕೆಮಾಡಿಕೊಳ್ಳದೆ ಒಂದು ಹಂತದ ತನಕವಷ್ಟೇ ಈ ರೈತ ಹೋರಾಟಕ್ಕೆ ಬೆಂಬಲ ಕೊಡುತ್ತಿದ್ದರು.

ಅಫ್ಘಾನಿಸ್ಥಾದಲ್ಲಿ ತಾಲಿಬಾನಿನ ಆಡಳಿತ ಪ್ರಾರಂಭವಾದ ಮೇಲಂತೂ ಭಾರತದ ಗಡಿಯೊಳಗೆ ದ್ರೋಣ್‌ ಮುಖಾಂತರ ಮಾದಕ ವಸ್ತುಗಳನ್ನು ಕಳಿಸುವ ಪ್ರಮಾಣ ಇನ್ನೂ ಹೆಚ್ಚಾಯಿತು. ಕ್ಯಾಪ್ಟನ್‌ ಅಮರಿಂದರ್‌ ಸಿಂಗ್ ಇರುವ ತನಕ ಇದರ ಬಗ್ಗೆ ರಾಜ್ಯ ಪೊಲೀಸರಿಗೆ ಸಿಗುತ್ತಿದ್ದ ಗುಪ್ತಚರ ಮಾಹಿತಿ ಎಲ್ಲವೂ ಅವರು ಕೆಂದ್ರದ ಜೊತೆ ಹಂಚಿಕೊಳ್ಳುತ್ತಿದ್ದರು. ಯಾವಾಗ ಅವರು ರಾಜಿನಾಮೆ ಕೊಟ್ಟು ಹೊರೆನೆಡದು ಚರಣ್ಜಿತ್ ಸಿಂಗ್ ಚನ್ನಿ ಮುಖ್ಯಮಂತ್ರಿಯಾದರೋ, ಎಲ್ಲವೂ ಬದಲಾಯಿತು. ಗಡಿಯಾಚೆ ಭಾರತದ ವಿರುದ್ಧ ಚೀನಾ ಮತ್ತು ಪಾಕಿಸ್ಥಾನ ಯುದ್ಧದ ತಯಾರಿ ಹೆಚ್ಚಿಸುತ್ತಲೆ ಇದ್ದವು. ಗಡಿಯೊಳಗೆ ಪಾಕಿಸ್ಥಾನ ಡ್ರೋಣ್‌ ಮುಖಾಂತರ ವಿಧ್ವಂಸಕ ಚಟುವಟಿಕೆ ನಡೆಸುವುದು ಹೆಚ್ಚಾಯಿತು. ಇವುಗಳ ತೀವ್ರತೆ ಮನಗೊಂಡ ಕೇಂದ್ರ ಸರಕಾರ ಗುಜರಾತಿನಿಂದ ಬಂಗಾಳದ ತನಕ ದೇಶದ ಅಂತಾರಾಷ್ಟ್ರೀಯ ಗಡಿಯಿಂದ ೫೦ ಕಿಮಿ ಒಳಗಿನ ತನಕ ಯಾವುದೇ ಕಾನೂನು ಸುವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾದರೂ ಅದನ್ನು ಅಲ್ಲಿಯ ಸ್ಥಳಿಯ ಪೊಲೀಸರ ಬದಲು ಗಡಿ ನಿಯಂತ್ರಣ ಪಡೆಯ ಅಧಿಕಾರಿಗಳು ನಿಭಾಯಿಸಬೇಕು ಎಂಬ ಆದೇಶ ಹೊರಡಿಸಿತು. ಇದನ್ನು ಪಂಜಾಬಿನ ಚನ್ನಿ ಸರಕಾರ ಸದನದಲ್ಲಿ ಒಂದು ನಿಲುವಳಿ ಜಾರಿಗೆ ತಂದು ವಿರೋಧಿಸಿತು. ಖಲಿಸ್ಥಾನಿ ಉಗ್ರ ಸಂಘಟನೆಯನ್ನು ಒಬ್ಬಂಟಿಯಾಗಿ ಬಲಪ್ರಯೋಗ ಮುಖಾಂತರ ನಿಭಾಯಿಸಬಹುದು. ಆದರೆ ಅದು ಯಾವಾಗ ರೈತ ಹೋರಾಟದ ಮುಖವಾಡ ಹಾಕುತ್ತದೆಯೋ ಅದನ್ನು ಬಲಪ್ರಯೋಗದ ಮುಖಾಂತರ ಹತ್ತಿಕ್ಕುವುದು ಕಷ್ಟವಾಗುತ್ತದೆ. ಇದರ ಜೊತೆಗೆ ದೇಶದ ನ್ಯಾಯಾಂಗ ವ್ಯವಸ್ಥೆ ಕೂಡ ಇಂತಹಾ ಹೋರಾಟಗಳಿಗೆ ಬೆಂಬಲ ಕೊಡಲು ಪ್ರಾರಂಭ ಮಾಡಿತು. ಕೆಲವೊಮ್ಮೆ ನ್ಯಾಯಾಲಯಗಳು ತೆಗೆದುಕೊಳ್ಳುವ ನಿಲುವುಗಳು ಭಾರತದ ಪ್ರಭುತ್ವದ ಬಗ್ಗೆ ಇರುವ ಬದ್ಧತೆಯನ್ನೇ ಪ್ರಶ್ನೆ ಮಾಡುವಂತೆ ಇರುತ್ತದೆ. ಚೀನಾ ಉತ್ತರದ್ ಖಂಡ್‌ ರಾಜ್ಯದ ಗಡಿಭಾಗದಲ್ಲಿ ತನ್ನ ಸೇನಾ ಜಮಾವಣೆ ಹೆಚ್ಚಿಸುತ್ತಿದೆ. ಅದಕ್ಕೆ ಪ್ರತಿಯಾಗಿ ಭಾರತದ ಸೈನ್ಯ ಕೂಡಾ ತನ್ನ ಸೈನ್ಯ ಜಮಾವಣೆ ಜೊತೆಗೆ ಯುದ್ದೋಪಕರಣಗಳನ್ನು ಸಾಗಿಸಲು ಅಗಲವಾದ ರಸ್ತೆ ಮಾಡಬೇಕಿತ್ತು.

ಸರಕಾರ ಈ ಕೆಲಸವನ್ನು ಕೈಗೆತ್ತಿಕೊಂಡಾಗ Citizen for GreenDoon ಎನ್ನುವ NGO ಒಂದು ಅಲ್ಲಿಯ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದನ್ನು ಹಾಕಿ ರಸ್ತೆ ಅಗಲೀಕರಣ, ಹಿಮಾಲಯದ ಪರಿಸರ ನಾಶಕ್ಕೆ ಎಡೆಮಾಡಿಕೊಡುತ್ತದೆ ಎಂದರು. ನ್ಯಾಯಾಲಯ ಈ ಅರ್ಜಿಯನ್ನು ಪರಿಗಣಿಸಿ ವಿಚಾರಣೆ ಪ್ರಾರಂಭಿಸಿ ದೇಶದ ಭದ್ರತೆಗೆ ಸಂಭಂದ ಪಟ್ಟ ಪ್ರಮುಖ ರಸ್ತೆ ನಿರ್ಮಾಣ ಕಾರ್ಯಕ್ಕೆ ತಡೆ ಒಡ್ಡಿದೆ. ಇತ್ತೀಚೆಗೆ ಕೇಂದ್ರ ಸರಕಾರ ಸಲ್ಲಿಸಿದ ಅಫಿಡವಿಟ್ಟನಲ್ಲಿ ಅಲ್ಲಿ ರಸ್ತೆಗಳು ಸುಮಾರು ೫ ಮೀ ಅಗಲವಿದ್ದು ಅದರಲ್ಲಿ ಸೈನ್ಯಕ್ಕೆ ಅತಿ ಭಾರಿ ವಾಹನಗಳನ್ನ ಬ್ರಹ್ಮೋಸ್‌ ಕ್ಷಿಪಣಿ ವಾಹಕಗಳನ್ನು ಸಾಗಿಸಲು ಆಗುವುದಿಲ್ಲ, ಆ ಕಾರಣಕ್ಕೆ ರಸ್ತೆಯನ್ನು ಕನಿಷ್ಟ ೮ ಮೀ ಅಗಲ ಮಾಡಬೇಕು ಎಂದಿತು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯ ಮೂರ್ತಿಗಳು “ದೇಶದ ಭದ್ರತೆ ಅಗತ್ಯ. ಆದರೆ ಪ್ರಕೃತಿ ನಾಶ ಮಾಡಿ ದೇಶದ ಗಡಿ ಕಾಯಬೇಕಾ?” ಎಂದು ತಮ್ಮ ತೀರ್ಪಿನಲ್ಲಿ ಹೇಳಿದರು. ನ್ಯಾಯಾಲಯಗಳು ದೇಶದ ಭದ್ರತೆಯ ವಿಷಯದಲ್ಲೂ ಇಂತಹ ಅಭಿಪ್ರಾಯ ವ್ಯಕ್ತಪಡಿಸಿದಾಗ ಇವುಗಳ ಮೇಲೆ ಹೇಗೆ ವಿಶ್ವಾಸವಿಟ್ಟು ದೇಶ ನಡೆಸಬೇಕು? ಇಂತಹಾ ನ್ಯಾಯಾಲಯಗಳು, ರೈತರ ಮುಖವಾಡ ಹಾಕಿದ ಖಲಿಸ್ಥಾನಿ ಉಗ್ರರು, ಇಂತಹ ಉಗ್ರರಿಗೆ ಪರೋಕ್ಷ ಬೆಂಬಲ ಕೊಡುತ್ತಿರುವ ಪಂಜಾಬಿನ ಚನ್ನಿ ಸರಕಾರ ಇವೆಲ್ಲದರ ಲಾಭ ಪಡೆದು ಭಾರತದೊಳಗೆ ಅರಾಜಕತೆ ಸೃಷ್ಟಿಸಲು ಕಾಯುತ್ತಿರುವ ಟೂಲ್‌ ಕಿಟ್‌ ಗ್ಯಾಂಗ್‌, ಜೊತೆಗೆ ಭಾರತದ ಗಡಿಯಾಚಗೆ ಯುದ್ದ ದಾಳಿ ಮಾಡಲು ಕಾದು ಕೂತಿರುವ ಪಾಕಿಸ್ಥಾನ ಮತ್ತು ಚೀನಾ.

ಈ ಇಷ್ಟು ಸಮಸ್ಯೆಗಳನ್ನು ಪರಿಗಣಿಸಿ ಮೋದಿಯವರು ನಾನು ರೈತರಿಗೋಸ್ಕರ ಕಾಯಿದೆ ಜಾರಿಗೆ ತಂದೆ, ಈಗ ದೇಶಕ್ಕೋಸ್ಕರ ಹಿಂಪಡೆಯುತ್ತಿದ್ದೇವೆ ಅಂದಿದ್ದು ಈ ಕಾರಣಕ್ಕೆ. ನೇರವಾಗಿ ದಾಳಿಮಾಡುವ ಶತ್ರು ದೇಶಗಳನ್ನು ಮಣಿಸಬಹುದು ಆದರೆ ಆಂತರಿಕ ಶತ್ರುಗಳ ಜೊತೆ ಕಷ್ಟ. ಈ ಆಂತರಿಕ ಶತ್ರುಗಳ ದುಷ್ಟಕೂಟಗಳು ಒಟ್ಟಾಗಿರುವ ಕಾರಣ ರೈತ ಮಸೂದೆ, ರೈತರು ಅನ್ನು ಕಾರಣಕ್ಕೆ ದೇಶದ ಜನತೆ ಕೂಡ ಭಾವನಾತ್ಮಕವಾಗಿ ಅವರ ಜೊತೆ ಕೊಂಚ ವಾಲಿದ್ದಾರೆ. ಭಾರತದ ಪ್ರಥಮ ಸೇನಾ ಮುಖ್ಯಸ್ಥ ( CDS) ಜನರಲ್‌ ಬಿಪಿನ ರಾವತ್‌ ಹೇಳಿದ 2.5 ಫ್ರಂಟ್‌ ಯುದ್ದದ್ದಲ್ಲಿ .5 ಫ್ರಂಟ್‌ ಇದೇ ದೇಶದೊಳಗಿರುವ ಹಿತ ಶತ್ರುಗಳು. ಹಾಗಾಗಿ ಎಲ್ಲದಕ್ಕೂ ಮೂಲವಾದ ರೈತ ಕಾಯಿದೆಯನ್ನೇ ಹಿಂಪಡೆದರೆ ಎಲ್ಲ ಸಮಸ್ಯೆಗಳಿಗೆ ಮಂಗಳ ಹಾಡಿದಂತೆ ಎಂದು ಮನಗೊಂಡ ಸರಕಾರ ಈ ರೈತ ಕಾಯಿದೆಯನ್ನುಹಿಂಪಡೆಯಿತು.

ಈಗ ಮೋದಿ ತನ್ನವರಿಂದಲೇ ಟೀಕಾ ಪ್ರಹಾರಕ್ಕೆ ಗುರಿಯಾದರು. ಮೋದಿ ಹೀಗೆ ಮಾಡಬಾರದಿತ್ತು, ಮೋದಿ ಸೋತರು. ಸುಗ್ರೀವಾಜ್ಞೆಯ ಮುಖಾಂತರ ಜಾರಿಗೆ ತಂದ ಕಾಯಿದೆ, ರೈತರಿಗೆ ಇಷ್ಟು ಅನುಕೂಲ ಮಾಡಿಕೊಡುವ ಕಾಯಿದೆ ಮೋದಿ ಏಕಾಏಕಿ ಹಿಂತೆಗೆದುಕೊಂಡದ್ದು ಸರಿಯಲ್ಲ. ಇದನ್ನು ಜನ ಮೋದಿ ಸರಕಾರದ ದುರ್ಭಲತೆ ಎಂದು ಭಾವಿಸುತ್ತಾರೆ. ಇವತ್ತು ರೈತ ಮಸೂದೆಗೆ ಬಗ್ಗಿದರೆ ನಾಳೆ CAA ಬಗ್ಗೆ ಗಲಾಟೆ ಮಾಡುತ್ತಾರೆ, ತ್ರಿವಳಿ ತಲಾಕ್‌ ಬಗ್ಗೆ ಗಲಾಟೆ ಮಾಡುತ್ತಾರೆ. ಕಾಶ್ಮೀರದ ಕುರಿತು ಧರಣಿ ಕೂರುತ್ತಾರೆ. ನೀವೇ ಎದೆ ತಟ್ಟಿ ತೆಗೆದುಕೊಂಡ ನಿರ್ಣಯ ಈಗ ನೀವೇ ಹಿಂಪಡೆದುದು ದುರ್ಬಲತೆಯ ಲಕ್ಷಣ. ಯುದ್ಧರಂಗದಿಂದ ಪಲಾಯನ ಮಾಡಿದರು ಎಂಬಿತ್ಯಾದಿ ಟೀಕೆಗಳು ಕಳೆದ ಹಲವು ದಿನಗಳಿಂದ ಕೇಳುತ್ತಲೇ ಇದ್ದೇವೆ. ಹಾಗಿದ್ದರೆ ಇವರು ಹೇಳುತ್ತಿರುವುದು ಸರಿಯಾ ಎಂಬ ಪ್ರಶ್ನೆಗೆ ಒಂದಷ್ಟು ಉತ್ತರಗಳೂ ಸಿಗಲಾರಂಭಿಸಿದವು. ಮೋದಿಯವರು ರೈತಮಸೂದೆ ಕಾಯಿದೆಯನ್ನು ವಾಪಾಸು ಮಾಡಿದಾಗ ಈ ರೈತ ಹೋರಾಟಗಾರರು ಕೊಂಚ ವಿಚಲಿತರಾದಂತೆ ಕಂಡರು. ನಾವು ಸಂಸತ್ತಿನಲ್ಲಿ ಕಾಯಿದೆ ವಾಪಾಸು ತೆಗೆಯದ ಹೊರತು ಹೋರಾಟ ಮುಗಿಸುವುದಿಲ್ಲ ಅಂದರು. ಅದೂ ಆಯಿತು. ನಂತರ ತಮ್ಮ ಉಳಿದ ಬೇಡಿಕೆಗೆಗಳನ್ನೂ ಈಡೇರಿಸಿದರೇ ಮಾತ್ರ ಹೋರಾಟದಿಂದ ವಾಪಾಸು ಹೋಗುವುದಾಗಿ ಹೇಳಿದಾಗ ಅಮಿತ ಶಾವರು ಮದ್ಯ ಪ್ರವೇಶಿಸಿ.

ನಕಲೀ ಹೋರಾಟಗಾರಾರ ಮಧ್ಯೆ ಇದ್ದ ಒಂದಷ್ಟು ಅಸಲೀ ಹೋರಾಟಗಾರರ ಮನ ವಲಿಸಿ ಪ್ರತಿಭಟನೆಯನ್ನು ನಿಲ್ಲಿಸುವಲ್ಲಿ ಸಫಲರಾದರು. ಇದರಿಂದ ವಿಚಲಿತರಾದ ನಕಲಿ ಹೋರಾಟಗಾರರೂ ತಮ್‌ ಹೋರಾಟದ ನಾಟಕ ಮುಂದುವರಿಸಲೂ ಆಗದೆ ಇತ್ತ ಅದನ್ನು ನಿಲ್ಲಿಸಲೂ ಆಗದೆ ಒದ್ದಾಡುತ್ತಿರುವುದು ಎಲ್ಲರಿಗೂ ತೋರುತ್ತಿದೆ. ಯಾವಾಗ ಈ ಹೋರಾಟ ರೈತ ಆಶಯಗಳನ್ನು ಬಿಟ್ಟು ಇನ್ನಾವುದೇ ದಿಕ್ಕಿಗೆ ಇವರ ಹೋರಾಟಗಳು ತಿರುಗಿದರೂ ದೇಶದ ಜನರ ಭಾವನೆ ಇವರ ವಿರುದ್ದವಾಗಿಯೇ ಇರುತ್ತದೆ. ಮತ್ತು ಅಂತಹ ಹೋರಾಟಗಳನ್ನು ಹತ್ತಿಕ್ಕುವುದು ಸರಕಾರಕ್ಕೆ ಕಷ್ಟದ ಕೆಲಸವೂ ಅಲ್ಲ. ಅದು ಈ ಸಂಘಟನೆಗಳಿಗೂ ಗೊತ್ತು. ಇನ್ನು ಮೋದಿಯವರು ಅವರದ್ದೇ ನಿರ್ಧಾರಗಳಿಂದ ಹಿಂದೆ ಸರಿದಿದ್ದು ಸರಿ ಅಲ್ಲ, ಒಬ್ಬ ಬಲಿಷ್ಟ ನಾಯಕನ ಲಕ್ಷಣ ಅಲ್ಲ, ಒಮ್ಮೆ ನಿರ್ಧಾರ ತೆಗೆದುಕೊಂಡ ನಂತರ ಅದರಿಂದ ಹಿಂದೆ ಸರಿಯಬಾರದು ಅನ್ನುವವರಿಗೆ ನಾನು ಹೇಳುವುದು ಇಷ್ಟೆ. ಮೋದಿಯ ಅಂತರಂಗಲ್ಲಿದ್ದ ಮಾಧವ ಮಹಾಭಾರತದಲ್ಲಿ ಭೀಷ್ಮ ಮಾಡಿದ ತಪ್ಪನ್ನು ಈ ಭಾರತದಲ್ಲಿ ಮೋದಿಯಿಂದ ಆಗಲು ಬಿಡಲಿಲ್ಲ!

2
ಆಗಸ್ಟ್

ಏನಾಗಿದೆ ಕರ್ನಾಟಕದಲ್ಲಿ ಬಿಜೆಪಿಗೆ?

– ಶಿವಾನಂದ ಹಿರೇಮಠ

ಬಿಜೆಪಿ ಕಾರ್ಯಕರ್ತನೊಬ್ಬನ ಮನದಾಳದ ಮಾತುಗಳು…

ವಿಶ್ವದ ಅತಿದೊಡ್ಡ ಪಕ್ಷ, ಕೋಟ್ಯಾಂತರ ಸದಸ್ಯರು, ಲಕ್ಷಾಂತರ ಕಾರ್ಯಕರ್ತರು, ಸಾವಿರಾರು ಪೂರ್ಣಾವಧಿ ಕಾರ್ಯಕರ್ತರು, ನೂರಾರು ನೇತಾರರು…

ಶೂನ್ಯದಿಂದ ಮೇಲೆದ್ದು ರಾರಾಜಿಸುತ್ತಿರುವರು. ವಿಶ್ವಮಾನ್ಯತೆ ಪಡೆದ ರಾಜಕೀಯ ವಿಚಾರಧಾರೆ, ಧ್ಯೇಯ ಸಿದ್ಧಾಂತ… ಅಧಿಕಾರ ರಾಜಕೀಯದ ಆಸಕ್ತಿ ಇಲ್ಲ, ಆದರೂ ರಾಷ್ಟ್ರಹಿತ ರಾಜಕಾರಣಕ್ಕಾಗಿ ಬಿಜೆಪಿಯ ಬೆನ್ನಿಗೆ ಸದಾಕಾಲ ನಿಂತ ವಿಚಾರ ಪರಿವಾರದವರು.ಎಲ್ಲಕ್ಕಿಂತ ಮಿಗಿಲಾದ ಜನತಾ ಜನಾರ್ದನನ ಕೃಪೆ…

ಇಷ್ಟೆಲ್ಲ ಇದ್ದರೂ ನಾಶದ ಹಾದಿಯಲ್ಲಿ ಸಾಗುತ್ತಿರುವ ಉಳಿದ ರಾಜಕೀಯ ಪಕ್ಷದ ರೋಗಾಣುಗಳು ಬಿಜೆಪಿಯನ್ನು ಪ್ರವೇಶಿಸಿದ ಲಕ್ಷಣ ಗೋಚರವಾಗತ್ತಿರುವುದು ಉತ್ತಮ ಬೆಳವಣಿಗೆಯಲ್ಲ.ಮನಸ್ಸಿಗೆ ಆತಂಕ ಮಾಡುವ ಲಕ್ಷಣಗಳಿವು.

Party with a difference…now party with Differences ಆಗುತ್ತಿದೆಯೇ? ಪ್ರಧಾನಿಯ ಪದವಿಯನ್ನು ಉಳಿಸಿಕೊಳ್ಳಲು ವಾಮಮಾರ್ಗ ಅನುಸರಿಸದೇ ಶ್ರೇಷ್ಠತೆ ಮೆರೆದ ಪಕ್ಷ ಇತಿಹಾಸ ಮರೆಯಿತೇ?

ಮತ್ತಷ್ಟು ಓದು »
23
ಜೂನ್

ಶಿಕ್ಷಣ ತಜ್ಞ ಶ್ಯಾಮಪ್ರಸಾದ್ ಮುಖರ್ಜಿ

– ಅಜಿತ್ ಶೆಟ್ಟಿ ಹೆರಂಜೆ

ಇವತ್ತು ಶ್ಯಾಮಾ ಪ್ರಸಾದ್ ಮುಖರ್ಜಿಯವರು ಹತ್ಯೆಯಾದ ದಿನ. 1953ರ ಈ ದಿನ, ನೆಹರೂ ಸರಕಾರದ ಆದೇಶದ ಮೇರೆಗೆ ಕಾಶ್ಮೀರ ರಾಜ್ಯ ಸರಕಾರ ಅವರನ್ನು ಒಂದು ಅಜ್ಞಾತ ಪ್ರದೇಶದಲ್ಲಿ  ಗೃಹ ಬಂಧನದಲ್ಲಿ ಇಟ್ಟಿತ್ತು. ಕಾಶ್ಮೀರದಲ್ಲಿ ಇದ್ದ ಆರ್ಟಿಕಲ್ 370ರ ವಿರುದ್ಧ ಪ್ರತಿಭಟಿಸಲು ಹೋದಾಗ ನೆಹರೂ ಸರಕಾರ ಇವರ ಬಂಧನಕ್ಕೆ ಆದೇಶ ಹೊರಡಿಸಿತ್ತು. 40 ದಿನಗಳ ಗೃಹ ಬಂಧನದ ಅವಧಿಯಲ್ಲಿ ಅವರ ಆರೋಗ್ಯದಲ್ಲಿ ಇದ್ದಕ್ಕಿದ್ದಂತೆ ಏರುಪೇರಾಗುತ್ತದೆ. ಅವರಿಗೆ ಔಷಧೋಪಚಾರವನ್ನು ಸರಕಾರ ಒದಗಿಸಿತ್ತಾದರೂ ಅವರು ಮರಣ ಹೊಂದುತ್ತಾರೆ.

ಅವರ ಸಾವಿನ ನಂತರ ಅವರ ತಾಯಿ ಜೋಗಮಾಯಾ ದೇವಿಯವರು ತನ್ನ ಮಗನ ಸಾವಿನ ಬಗ್ಗೆ ತಮಗೆ ಅನೇಕ ಅನುಮಾನಗಳಿವೆ, ಅವನ ಬಂಧನದಲ್ಲಿದ್ದಾಗ ಅವನಿಗೆ ಚಿಕಿತ್ಸೆ ಕೊಟ್ಟವರು ಯಾರು? ಯಾವ ರೀತಿಯ ಚಿಕಿತ್ಸೆ ಕೊಡಲಾಯಿತು? ಯಾವ ಕಾಯಿಲೆಗೆ ಕೊಡಲಾಯಿತು? ಇದು ಸಹಜ ಸಾವೋ? ಅಥವಾ ನನ್ನ ಮಗನ ರಾಜಕೀಯ ಚಳುವಳಿಯ ಕಾರಣಕ್ಕೆ  ಸರಕಾರೀ ಪ್ರಾಯೋಜಕತ್ವದಲ್ಲಿ ನಡೆಸಿದ ಕೊಲೆಯೋ ಎಂಬುದರ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು   ಪ್ರಧಾನಿ ನೆಹರುವಿಗೆ ಪತ್ರ ಬರೆಯುತ್ತಾರೆ. ಆದರೆ ಅದು ನೆಹರೂ ಕಛೇರಿಯ ಕಸದ ಬುಟ್ಟಿ ಸೇರುತ್ತದೆ.

ಶ್ಯಾಮಪ್ರಸಾದ್ ಮುಖರ್ಜಿಯವರು ಯಾವುದನ್ನು ವಿರೋಧಿಸಿ ತಮ್ಮ ಸರ್ವೋಚ್ಛ ಬಲಿದಾನವನ್ನು ನೀಡಿದರೋ, ಅದನ್ನ ಮೋದಿ ಸರಕಾರ 2 ವರ್ಷದ ಹಿಂದೆ ತೆಗೆದುಹಾಕಿತು. ಕಾಶ್ಮೀರ ಪೂರ್ಣ ಪ್ರಮಾಣದಲ್ಲಿ ಭಾರತದ ಭಾಗವಾಯಿತು.
ಬಹುತೇಕ ಮಂದಿಗೆ ಶ್ಯಾಮಾ ಪ್ರಸಾದ್ ಮುಖರ್ಜಿಯವರ 30 ವರ್ಷಗಳ ಸುದೀರ್ಘವಾದ ಸಾರ್ವಜನಿಕ ಜೀವನದಲ್ಲಿ ಅವರ ಕೊನೆಯ ಮೂರು ವರ್ಷಗಳ ಪರಿಚಯ ಮಾತ್ರ ಇರುವುದು. 1950ರಲ್ಲಿ ಅವರು ನೆಹರೂ  ಸರಕಾರಕ್ಕೆ ರಾಜಿನಾಮೆ ಕೊಡುತ್ತಾರೆ, 1951ರಲ್ಲಿ ಸಂಘದ ಸಂಪರ್ಕಕ್ಕೆ ಬರುತ್ತಾರೆ, ‘ಜನಸಂಘ’ದ ಸ್ಥಾಪನೆ ಮಾಡುತ್ತಾರೆ. 1952 ರ ಚುನಾವಣೆಯಲ್ಲಿ ಜನಸಂಘ 3 ಸ್ಥಾನವನ್ನು ಗೆಲ್ಲುತ್ತದೆ. 1953ರಲ್ಲಿ ಅವರು ಕಾಶ್ಮೀರದ ವಿಚಾರವಾಗಿ ಹೋರಾಡಿ ನಿಗೂಢವಾಗಿ ಸಾವನ್ನು ಕಾಣುತ್ತಾರೆ ಎನ್ನುವುದಷ್ಟೆ ತಿಳಿದಿರುವ ವಿಚಾರ.

ಶ್ಯಾಮಪ್ರಸಾದ ಮುಖರ್ಜಿ 1934 ರಿಂದ 1938ರ ತನಕ ಕೋಲ್ಕತ್ತಾ ವಿಶ್ವವಿದ್ಯಾನಿಲಯದ ಉಪ ಕುಲಪತಿಯಾಗಿ ಕೆಲಸ ಮಾಡುತ್ತಾರೆ. 1933ರಲ್ಲಿ ಉಪಕುಲಪತಿಯಾಗಿ ನೇಮಕವಾದಾಗ ಅವರ ವಯಸ್ಸು ಇನ್ನೂ 33. ಅವರು ಭಾರತದ ಇತಿಹಾಸದಲ್ಲಿ ಅತ್ಯಂತ ಕಿರಿಯ ವಯಸ್ಸಿಗೆ ವಿಶ್ವವಿದ್ಯಾನಿಲಯದ ಉಪಕುಲಪತಿಯಾದವರು. ಆ ವಯಸ್ಸಿಗಾಗಲೇ ಅವರು ಇಂಗ್ಲೀಷಿನಲ್ಲಿ ಬಿ ಎ, ಬಂಗಾಳಿ ಭಾಷೆಯಲ್ಲಿ ಎಂ ಎ, ಕಾನೂನು ಶಿಕ್ಷಣದಲ್ಲಿ  ಬ್ಯಾಚುಲರ್ ಪದವಿ ಹಾಗು ಇಂಗ್ಲೆಂಡ್ ಗೆ ತೆರಳಿ  ಭ್ಯಾರಿಷ್ಟರ್ ಪದವಿಯನ್ನೂ ಪಡೆದಿದ್ದರು. ಇವರ ತಂದೆ ಆಶುತೋಷ್ ಮುಖರ್ಜಿ ಕೊಲ್ಕತ್ತಾ ವಿಶ್ವವಿದ್ಯಾನಿಲಯದ ಮೊದಲ ಭಾರತೀಯ  ಉಪಕುಲಪತಿಗಳಾಗಿದ್ದವರು. ಶ್ಯಾಮಾ ಪ್ರಸಾದ್ ಮುಖರ್ಜಿಯವರು ಕೊಲ್ಕತ್ತಾ ವಿಶ್ವವಿದ್ಯಾನಿಲಯದ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರಾಗಿದ್ದಾಗಲೆ ವಿಶ್ವವಿದ್ಯಾನಿಲಯದ ಕೆಲಸಗಳಲ್ಲಿ ತಂದೆಗೆ ಸಹಾಯ ಮಾಡಿದ ಅನುಭವವನ್ನು ಹೊಂದಿದ್ದರು.
 
ಶ್ಯಾಮ ಪ್ರಸಾದ್ ಮುಖರ್ಜಿಯವರು ಕೋಲ್ಕತ್ತಾ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾದಾಗ, ವಿಶ್ವವಿದ್ಯಾನಿಲಯಗಳ ಇತಿಹಾಸದಲ್ಲೇ ನಡೆಯದ ಹಲವು ಪ್ರಥಮಗಳಿಗೆ ಮುನ್ನುಡಿಯನ್ನು ಬರೆಯುತ್ತಾರೆ. ಬ್ರಿಟೀಷರ ಆಳ್ವಿಕೆಯಲ್ಲಿ ಭಾರತೀಯ ಮೂಲದ ಶಿಕ್ಷಣ ಪದ್ಧತಿಯ ನಲುಗಿ ಹೋಗಿತ್ತು. ಅದರ ಜೊತೆಗೆ ಬ್ರಟೀಷ್ ಸಾಮ್ರಾಜ್ಯಶಾಹಿ ವ್ಯವಸ್ಥೆ ಹುಟ್ಟು ಹಾಕಿದ ಆಧುನಿಕ ಶಿಕ್ಷಣ ವ್ಯವಸ್ಥೆ, ಸಂಪೂರ್ಣವಾಗಿ ಇಂಗ್ಲೀಷ್ ಮಯವಾಗಿತ್ತು. ಅಲ್ಲಿ ಭಾರತೀಯ ಭಾಷೆಗಳಿಗೆ ಯಾವುದೇ ಪ್ರಾಧಾನ್ಯತೆ ಇರಲಿಲ್ಲ. ಬಂಗಾಳದಲ್ಲಿ  ಬಂಗಾಳದ ಭಾಷೆಯಲ್ಲಿ ಮಕ್ಕಳಿಗೆ ಶಿಕ್ಷಣ ಪಡೆಯುವುದು ಅತ್ಯಂತ ಪ್ರಯಾಸದ ವಿಷಯವಾಗಿತ್ತು ಹಾಗಾಗಿ ತಮ್ಮ ಕಾಲದಲ್ಲಿ ಕೋಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಮತ್ತು ಬಂಗಾಳದ ಶಿಕ್ಷಣ ವ್ಯವಸ್ಥೆಯಲ್ಲಿ ಸ್ಥಳಿಯ ಭಾಷೆಗಳಿಗೆ ಪ್ರಾತಿನಿದ್ಯತೆ ಕೊಡಿಸುವ ತೀರ್ಮಾನ ಮಾಡುತ್ತಾರೆ ಹಾಗು ಬಂಗಾಳಿ ಭಾಷೆಯಲ್ಲೇ ಹತ್ತನೆ ತರಗತಿಯವರೆಗೆ ಶಿಕ್ಷಣ ಪಡೆಯುವ ಅವಕಾಶವನ್ನು ಬಂಗಾಳಿ ವಿಧ್ಯಾರ್ಥಿಗಳಿಗೆ ಮಾಡಿಸಿಕೊಡುತ್ತಾರೆ. ಇದಕ್ಕೆ 1935ರ ‘ಯೂನಿವರ್ಸಿಟಿ ಕಾಯಿದೆ’ಯಲ್ಲಿ ಮಾನ್ಯತೆಯನ್ನೂ ಕೊಡಿಸುತ್ತಾರೆ. 

ವಿವಿಯಲ್ಲಿ ಬ್ರಿಟಿಷರ ಲಾಂಛನ
ಮುಖರ್ಜಿಯವರು ಬದಲಾಯಿಸಿದ ಲಾಂಛನ

ವಿಶ್ವವಿದ್ಯಾನಿಲಯ ಪ್ರಾರಂಭವಾದಾಗಿನಿಂದ ಅಲ್ಲಿಯ ತನಕ  ಬ್ರಿಟೀಷರ ದಾಸ್ಯದ ಚಿಹ್ನೆಯಾಗಿದ್ದ ‘ವಿಶ್ವವಿದ್ಯಾನಿಲಯದ ಚಿಹ್ನೆ’ಯನ್ನು ಬದಲಾಯಿಸಿ ಅದಕ್ಕೆ ಸಂಪೂರ್ಣವಾಗಿ ಭಾರತದ ಆದ್ಯಾತ್ಮ ಸ್ವರೂಪವನ್ನು ಕೊಡುತ್ತಾರೆ.  ಕುದುರೆ ಮತ್ತು ಇಂಗ್ಲೆಂಡಿನ ರಾಜ ಪ್ರಭುತ್ವದ ಸೂಚಕದ ಚಿಹ್ನೆಯನ್ನು ತೆಗೆದು ‘ಕಮಲದ ಹೂವುಗಳ ದಳ ಇರುವ ವ್ರತ್ತಾಕಾರದ ಚಿಹ್ನೆ’ಯನ್ನು ನೀಡುತ್ತಾರೆ. ಇದು ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗುತ್ತದೆ. ವಿಶ್ವವಿದ್ಯಾನಿಲಯದ ಘಟಿಕೋತ್ಸವಕ್ಕೆ ಗುರುದೇವ ರಬೀಂದ್ರನಾಥ ಠಾಗೋರ್ ಅವರನ್ನು ಕರೆಯಿಸಿ ವಿಶ್ವವಿದ್ಯಾನಿಲಯದ ಇತಿಹಾಸದಲ್ಲೇ ಮೊದಲಬಾರಿಗೆ ಘಟಿಕೋತ್ಸವದ ಭಾಷಣ ಬಂಗಾಳಿ ಭಾಷೆಯಲ್ಲಿ ಮಾಡಿಸುತ್ತಾರೆ. ಇದು ಬ್ರಿಟಿಷರನ್ನ ಇನ್ನೂ ಕೆರಳಿಸುತ್ತದೆ. ರಬೀಂದ್ರನಾಥ ಠಾಗೋರರನ್ನು ವಿಶ್ವವಿದ್ಯಾನಿಲಯದಲ್ಲಿ  ಬಂಗಾಳಿ ಭಾಷಾ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕೂಡ ನೇಮಿಸುತ್ತಾರೆ. ಬಂಗಾಳಿ ಭಾಷೆಯಲ್ಲಿ ಹೆಚ್ಚಿನ ಸಾಹಿತ್ಯ ಸೃಷ್ಟಿಸಲು ಪ್ರೇರಣೆ ಸಿಗಲಿ ಎನ್ನುವ ಕಾರಣಕ್ಕೆ ವಿಶ್ವವಿದ್ಯಾನಿಲಯದಿಂದಲೇ ಅನೇಕ ಬಂಗಾಳಿ ಸಾಹಿತ್ಯದ ಕೈಪಿಡಿಗಳನ್ನು ಮುದ್ರಿಸಿ ಪ್ರಕಟಿಸುತ್ತಾರೆ,  ಇವರ ಕಾಲದಲ್ಲೇ, ಅಂದರೆ 1937 ರಲ್ಲಿ ಮೊದಲ ಬಾರಿಗೆ ಬಂಗಾಳಿ ಭಾಷೆಯಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧ ಒಂದಕ್ಕೆ ಡಾಕ್ಟರೇಟ್ ಗೌರವ ಸಿಗುತ್ತದೆ.
 
ಶ್ಯಾಮ ಪ್ರಸಾದ್  ಮುಖರ್ಜಿಯವರು ವಿಶ್ವವಿದ್ಯಾನಿಲಯದಲ್ಲಿ, ಇತರ ಅನೇಕ ಆಧುನಿಕ ಮತ್ತು ಹೊಸತಲೆಮಾರಿಗೆ ಆವಶ್ಯಕವಾಗಿ ಬೇಕಾಗಿದ್ದ ವಿಷಯಗಳ ತರಗತಿಯನ್ನೂ ಪ್ರಾರಂಭಿಸುತ್ತಾರೆ. ಬಂಗಾಳಿ ಭಾಷೆಯ ಜೊತೆಗೆ ಉರ್ದು, ಹಿಂದಿ, ಅಸ್ಸಾಮಿ ಮುಂತಾದ ಸ್ಥಳೀಯ ಭಾರತೀಯ ಭಾಷೆಗಳಿಗೂ ಅವಕಾಶ ಕೊಡಿಸುತ್ತಾರೆ.  ಔದ್ಯೋಗಿಕ ಜಗತ್ತಿಗೆ ಅಗತ್ಯವಿದ್ದ  ತಾಂತ್ರಿಕ ವಿಷಯಗಳ ಬಗ್ಗೆ ತರಬೇತಿ ಕೊಡಿಸುವ ಕೆಲಸ ಮಾಡುತ್ತಾರೆ.  ಇವರು ‘ಅಪ್ಲೈಡ್ ಫಿಸಿಕ್ಸ್’ ವಿಭಾಗವನ್ನು ಆರಂಭಿಸಿ, ಅಲ್ಲಿ ಇವತ್ತಿನ  ಮಾಹಿತಿ ತಂತ್ರಜ್ನಾನದ ಇಂಜಿನೀಯರಿಂಗ್ ಗೆ ಸಮನಾಗಿದ್ದ  ‘ಕಮ್ಯುನಿಕೇಶನ್ ಇಂಜಿನೀಯರಿಂಗ್’ ಪ್ರಾರಂಭಿಸುತ್ತಾರೆ. 1934 ರಲ್ಲಿ ಡಿಸಿಎಸ್ ಪದವಿಯನ್ನು ಪಬ್ಲಿಕ್ ಹೆಲ್ತ್ ವಿಭಾಗದಲ್ಲಿ ಪ್ರಾರಂಭಿಸುತ್ತಾರೆ. ಸೈನ್ಯಕ್ಕೆ ಸೇರಬಯಸುವ ವಿಧ್ಯಾರ್ಥಿಗಳಿಗೆ ತರಬೇತಿ ಕೊಡಿಸುವ ವ್ಯವಸ್ಥೆ ಮಾಡಿಸುತ್ತಾರೆ. ನಂತರದ ದಿನಗಳಲ್ಲಿ ಭಾರತೀಯ ವಾಯುಪಡೆಯೊಂದಿಗೆ ಸೇರಿ  3 ತಿಂಗಳ ಇಂಟರ್ನಶಿಪ್  ಕೋರ್ಸ್‍ಗಳನ್ನು ಪ್ರಾರಂಭಿಸುತ್ತಾರೆ.  ಪ್ರಾಚ್ಯವಸ್ತು ಶಾಸ್ತ್ರ,ಆರೋನಾಟಿಕ್ಸ್ ವಿಭಾಗದಲ್ಲಿ ಬಿಎ, ಖಗೋಳ ಶಾಸ್ತ್ರದಲ್ಲಿ ಪದವಿ, ಗಣಿತದಲ್ಲಿ ಹಾನರರಿ ಕೋರ್ಸ್‍ಗಳನ್ನೂ ಪ್ರಾರಂಭಿಸುತ್ತಾರೆ. ವಿಧ್ಯಾರ್ಥಿಗಳ ಜೊತೆಗೆ ಶಿಕ್ಷಕರಿಗೆ ತರೆಬೇತಿ ಕೊಡಿಸುವ ಕಲಿಕಾ ವ್ಯವಸ್ಥೆಯನ್ನೂ ವಿಶ್ವವಿದ್ಯಾನಿಲಯದಲ್ಲಿ ಆರಂಭಿಸುತ್ತಾರೆ. ಇವರ ಕಾರ್ಯಕಾಲದಲ್ಲಿ ಬಂಗಾಳದಲ್ಲಿ 2 ಪ್ರಮುಖ ಶಿಕ್ಷಕರ ತರಬೇತಿ ಕಾಲೇಜ್ ಗಳನ್ನು ಆರಂಭಿಸುತ್ತಾರೆ. ಮಹಿಳೆಯದ ಶಿಕ್ಷಣಕ್ಕೆ ಒತ್ತುಕೊಡಲು,  ಬಿಹಾರಿಲಾಲ್ ಮಿತ್ರರವರು  ಮಹಿಳೆಯರಿಗಾಗಿ ಹೊಮ್ ಸಯನ್ಸ್ ತರಗತಿಗಳನ್ನು ಪ್ರಾರಂಭಿಸಲು ನಿಶ್ಚಯಿಸಿದಾಗ ಅವರಿಗೆ ಆ ಕಾಲದಲ್ಲೇ 6500 ರೂಪಾಯಿಗಳ ದೇಣಿಗೆ ನೀಡುತ್ತಾರೆ.  ಮುಂದೆ ಅದೇ ಸಂಸ್ಥೆ ಬೆಳೆದು ‘ಬಿಹಾರಿಲಾಲ್ ಕಾಲೇಜ್’ಆಗುತ್ತದೆ. ಶ್ಯಾಮಾಪ್ರಸಾದ ಮುಖರ್ಜಿ ವಿಶ್ವವಿದ್ಯಾನಿಲಯದಲ್ಲಿ  ಏಷಿಯಾದ ಸಂಸ್ಕ್ರತಿಯನ್ನು ಕಲಿಕಾ ವಿಷಯವನ್ನಾಗಿಸುವ ಹೊಸ ಪ್ರಯತ್ನವೊಂದಕ್ಕೆ ಮುಂದಾಗುತ್ತಾರೆ.  ಅವರು  ಚೀನಾ ಮತ್ತು ಟಿಬೇಟಿನ ಭಾಷಾ ಅಧ್ಯಯನ ಕೇಂದ್ರವನ್ನ ಸ್ಥಾಪಿಸುತ್ತಾರೆ. 
 
ವಿದ್ಯಾರ್ಥಿಗಳ ಶಿಕ್ಷಣದ ಜೊತೆಗೆ, ಅವರ ಇತರ ಶಿಕ್ಷಣೇತರ ಹಿತಗಳನ್ನು ಕಾಪಾಡಲು ಅವರು ವಿಶ್ವವಿದ್ಯಾನಿಲಯದಲ್ಲಿ ಒಂದು ಸ್ಟೂಡೆಂಟ್ ವೆಲ್‍ಫೇರ್ ಅಸೋಸಿಯೇಶನ್ ಪ್ರಾರಂಭಿಸುತ್ತಾರೆ. ವಿದ್ಯಾರ್ಥಿಗಳು , ಶಿಕ್ಷಕರು ಮತ್ತು ಭೋಧನೇತರ ಸಿಬ್ಬಂಧಿಗಳ ಒಳಿತಿಗಾಗಿ ಸುಮಾರು 30ಕ್ಕೂ ಹೆಚ್ಚು  ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುತ್ತಾರೆ. ‘ವಿಶ್ವವಿದ್ಯಾನಿಲಯದ ಸಿಬ್ಬಂಧಿಗಳ ಸಂಘಟನೆ’ಯ ಅಧ್ಯಕ್ಷರೂ ಆಗುತ್ತಾರೆ. ವಿಶ್ವವಿದ್ಯಾನಿಲಯದ ಇತಿಹಾಸದಲ್ಲೆ ಮೊದಲ ಬಾರಿಗೆ  ಸಿಬ್ಬಂಧಿಗಳಿಗೆ ‘ಪ್ರಾವಿಡೆಂಟ್ ಫಂಡ್’ ಕೊಡಿಸುವ ಬಗ್ಗೆ ಸಿಂಡಿಕೇಟ್ ಬಳಿ ಪ್ರಸ್ಥಾಪವನ್ನು ಇಡುತ್ತಾರೆ.
 
ಶಿಕ್ಷಣ ಕ್ಷೇತ್ರದಲ್ಲಿ ಶ್ಯಾಮಾ ಪ್ರಸಾದ್ ಮುಖರ್ಜಿಯವರ ಅತ್ಯಂತ ಮಹತ್ವದ ಕೊಡುಗೆ ಅಂದರೆ, ಅವರು ಜಾರಿಗೆ ತಂದ ‘ಪಂಚ ಶೀಲ  ನೀತಿ ಭಾರತದ ಭವಿಷ್ಯವನ್ನು ನಿರ್ಮಿಸುವ ಯುವ ವರ್ಗದ ಶಿಕ್ಷಣ ವ್ಯವಸ್ಥೆ ಸರಿಯಾದ ದಿಕ್ಕಿನಲ್ಲಿ ಸಾಗಿದಾಗ ಮಾತ್ರ, ದೇಶದ ಭವಿಷ್ಯವೂ ಸರಿಯಾದ ದಿಕ್ಕಿನಲ್ಲಿ ಸಾಗಲು ಸಾಧ್ಯ ಎನ್ನುವ  ವಿಷಯವನ್ನು ಪ್ರತಿಪಾದಿಸಿತ್ತಾ ಶ್ಯಾಮಪ್ರಸಾದ ಮುಖರ್ಜಿಯವರು ತನ್ನ 2ನೇ ಘಟಿಕೋತ್ಸವದ ಭಾಷಣದಲ್ಲಿ 5 ವಿಷಯಗಳ ಬಗ್ಗೆ ಪ್ರಸ್ತಾಪ ಮಾಡುತ್ತಾರೆ.


1.           ಸಮಾಜದಲ್ಲಿ  ಯುವಕರ ಸರ್ವಾಂಗೀಣ ಅಭಿವೃದ್ದಿಗೆ  ಸಹಾಯವಾಗಲು, ಶಿಕ್ಷಣ ಸಮಾಜದ ಎಲ್ಲಾ ವರ್ಗಗಳಲ್ಲೂ ಸಿಗಬೇಕು.
2.           ಸಂಸ್ಕೃತಿ ಮತ್ತು ವಿಜ್ಞಾನದ  ಸರಿಯಾದ ಸಮನ್ವಯ ಶಿಕ್ಷಣ ವ್ಯವಸ್ಥೆಯೊಳಗಿರಬೇಕು.
3.           ದೇಶದ ಆಯಾಯ ಪ್ರದೇಶದ ಸಂಸ್ಕೃತಿಗೆ ಅನುಗುಣವಾಗಿ ಶಿಕ್ಷಕರು ಶಿಕ್ಷಣವನ್ನು ಕೊಡಬೇಕು.
4.           ಶಿಕ್ಷಣ ವ್ಯವಸ್ಥೆ ಸಮಾಜದೊಳಗೆ ಸ್ವಸ್ಥ, ಸುಂದರ ಮತ್ತು ಭಯ ಮುಕ್ತ ವಾತಾವರಣದ ನಿರ್ಮಾಣಕ್ಕೆ ಪೂರಕವಾಗಿರಬೇಕು.
5.           ಶಿಕ್ಷಣ ಹೆಚ್ಚು ಹೆಚ್ಚು ಸರಕಾರಿ ಪ್ರಾಯೋಜಕತ್ವದಲ್ಲೇ ದೊರಕಬೇಕು.


ಶ್ಯಾಮಾ ಪ್ರಸಾದ್ ಮುಖರ್ಜಿಯರ ಈ ನೀತಿಯನ್ನು, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವವರು ಅನುಷ್ಟಾನಕ್ಕೆ ತರುವ ಪ್ರಯತ್ನ ಮಾಡಿದರು. ಅವರು ವಿಶ್ವವಿಧ್ಯಾನಿಲಯದಲ್ಲಿ  ಪ್ರಾರಂಭಿಸದ ಅನೇಕ ವಿಷಯಗಳು ಮುಂದಿನ ದಿನಗಳಲ್ಲಿ ಪ್ರತ್ಯೇಕ ಶಿಕ್ಷಣ ಪ್ರಭೇದಗಳಾಗಿ ವಿಶ್ವವಿದ್ಯಾನಿಲಯಗಳಲ್ಲಿ ಬೋದಿಸಲ್ಪಡುತ್ತದೆ.  ವರ್ತಮಾನದ ಕೇಂದ್ರ ಸರ್ಕಾರ ರೂಪಿಸಿರುವ ‘ಹೊಸ ಶಿಕ್ಷಣ ನೀತಿ’ಯು ಕೂಡ ಶ್ಯಾಮಾ ಪ್ರಸಾದ ಮುಖರ್ಜಿವರ ಶಿಕ್ಷಣ ನೀತಿಯಂದ ಪ್ರೇರಣೆ ಪಡೆದಿದೆ.
 
ಕೋಲ್ಕತ್ತಾ ವಿಶ್ವವಿದ್ಯಾನಿಲಯದ ಅವರ ಅನುಭವ, ಅವರು ಮುಂದೆ ದೇಶದ ಕೈಗಾರಿಕೆ ಮತ್ತು ಸರಬರಾಜು ಮಂತ್ರಿಗಳಾಗಿ ಕಾರ್ಯನಿರ್ವಹಿಸುವಾಗ ಸಹಾಯಕ್ಕೆ ಬರುತ್ತದೆ. ಅವರು ತಮ್ಮ ಕಾರ್ಯಕಾಲದಲ್ಲಿ ವಿಶ್ವವಿದ್ಯಾನಿಲಯದಲ್ಲಿ ಪ್ರಾರಂಭಿಸಿದ ಅನೇಕ ವೃತ್ತಿಪರ ಶಿಕ್ಷಣ ಮಾದರಿಯಲ್ಲಿ ಕಲಿತವರೇ ದೇಶದ ಪ್ರಖ್ಯಾತ ಉದ್ದಿಮೆಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸುತ್ತಾರೆ. ಈ ಕಾರಣಕ್ಕೆ ಅವರಿಗೆ ಕೈಗಾರಿಕೆ ಮತ್ತು ಅವುಗಳ ಸವಾಲುಗಳನ್ನು ಆಧರಿಸಿ ಉದ್ದಿಮೆ ಮತ್ತು ಕಾರ್ಮಿಕರಿಬ್ಬರ ಹಿತವನ್ನೂ ಕಾಯುವ, ಅವರ ನಡುವೆ ಸಂಭವಿಸುತ್ತಿದ್ದ ಸಂಘರ್ಷಗಳನ್ನ ತಡೆದು, ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರದ ಜೊತೆಗೆ ಅವುಗಳ ಮೂಲವನ್ನು ಅರಿತು ಪರಹಾರ ಕಂಡುಕೊಳ್ಳುವುದು ಸುಲಭವಾಯಿತು. ಕೈಗಾರಿಕೆಗಳು ದೇಶದ ಅಭಿವೃದ್ದಿಗೆ ಮತ್ತು ಕೈಗಾರಿಕೆ ಬೇಕಿರುವ ವೃತ್ತಿ ಕೌಶಲ್ಯ ಹೊಂದಿರುವ, ನುರಿತ ತರಬೇತಿ ಪಡೆದಿರುವ ಕಾರ್ಮಿಕ ವರ್ಗದ ಪೂರೈಕೆಗೆ ಅಗತ್ಯವಿರುವ ದೂರಗಾಮಿ ಯೋಜನೆಗಳನ್ನು ರೂಪಿಸುವಲ್ಲಿ ಸಹಾಯ ಮಾಡಿತು. ಶ್ಯಾಮಾ ಪ್ರಸಾದ್
ಮುಖರ್ಜಿಯವರು ರಾಜಕಾರಣದ ಕಾರಣಕ್ಕೆ ಈ ದೇಶಕ್ಕೆ ಎಷ್ಟು ಪ್ರಸ್ತುತವೋ,  ಅವರು ಒಬ್ಬ ಶಿಕ್ಷಣ ತಜ್ಞನಾಗಿ, ಒಬ್ಬ ನುರಿತ ಆಡಳಿತಗಾರನಾಗಿ, ಒಬ್ಬ ಒಳ್ಳೆಯ ಸಮಾಜ ಚಿಂತಕನಾಗಿ, ಕೂಡ ನಮಗೆ ಇಂದಿಗೂ ಅಷ್ಟೇ ಪ್ರಸ್ತುತ.

1
ಜೂನ್

ತೈಲ ಬೆಲೆಯೇರಿಕೆಯೆಂಬ ರಾಜಕೀಯ ದಾಳ

– ಬೇಲಾಡಿ ದೀಪಕ್ ಶೆಟ್ಟಿ, ನ್ಯಾಯವಾದಿಗಳು ಹೈಕೋರ್ಟ್ ಕರ್ನಾಟಕ

ತೈಲ ಬೆಲೆಯೇರಿಕೆ ಎನ್ನುವ ಶಬ್ಧ ಯಾವತ್ತೂ ವಿರೋಧ ಪಕ್ಷಗಳಿಗೆ ನೆಚ್ಚಿನ ಶಬ್ದ. ಅಲ್ಲದೇ ಆಡಳಿತ ಪಕ್ಷವನ್ನು ವಿರೋಧಿಸಲು ಸುವರ್ಣ ಅವಕಾಶ ಮಾಡಿಕೊಡುವ ಸುವರ್ಣ ಶಬ್ದಗಳು. ಅದು ಯಾರೇ ಇರಲಿ ಮತ್ತು ಯಾವುದೇ ಪಕ್ಷವಿರಲಿ . ಬಿಜೆಪಿಯು ಈ ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದಲ್ಲಿ ರಸ್ತೆಗಳಲ್ಲಿ ಇಳಿದು ಜನಾಂದೋಲನ ರೂಪಿಸಿ ಹೋರಾಟಕ್ಕೆ ಇಳಿದಿತ್ತು . ಈಗ ಅದನ್ನು ಕಾಂಗ್ರೆಸ್ ಮಾಡುತ್ತಿದೆ. ಆದರೆ ಇವೆರಡರಲ್ಲಿ ಸಾಮಾನ್ಯ ಸಂಗತಿ ಏನೆಂದರೆ ತೆರಿಗೆದಾರರಾದ ಜನಸಾಮಾನ್ಯರು ತಮ್ಮ ಮೇಲಿನ ಹೊರೆಗೆ, ಬದುಕಲು ಪಕ್ಷ ನೋಡದೇ ವಿಷಾಯಾಧಾರಿತ ಬೆಂಬಲ ನೀಡುತ್ತಿರುವುದು.

ಇನ್ನು ಪೆಟ್ರೋಲ್ ಡಿಸೆಲ್ ವಿಷಯಕ್ಕೆ ಬಂದರೆ ಮೋದಿಯವರನ್ನು ಟೀಕಿಸಲು ವಿರೋಧಿಗಳು ಅವರ 2012ನೇ ಇಸವಿಯ ಟ್ವೀಟ್ ಅನ್ನು ಉಲ್ಲೇಖಿಸುತ್ತಾರೆ. ಇವರು ವಿರುದ್ದವಾಗಿ ಕಾಂಗ್ರೆಸ್ ಸಮಯದ ಪಾಲಿಸಿಗಳಿಂದ ಆದ ತೊಂದರೆ ಮತ್ತು ಎಡವಟ್ಟುಗಳನ್ನು ಉಲ್ಲೇಖಿಸುತ್ತಾರೆ. ಎಲ್ಲಾ ಕಡೆ ರಾಜಕೀಯ ಕಾಣುತ್ತದೆಯೇ ವಿನಃ ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ನಾಯಕರಲ್ಲಿ ಪಕ್ಷಾತೀತವಾಗಿ ಇಚ್ಚಾಶಕ್ತಿ ಕೊರತೆ ಎದ್ದು ಕಾಣುತ್ತದೆ.

ಮೋದಿಯವರು ತೈಲವನ್ನು ಜಿ ಎಸ್ ಟಿ ವ್ತಾಪ್ತಿಯಲ್ಲಿ ತಂದರೆ ಇದನ್ನು ಕಾಂಗ್ರೆಸ್ಸಿಗರು ಮತ್ತು ಮಹಾಘಟಬಂಧನದ ಮಹಾನಾಯಕರು ವಿರೋಧ ಮಾಡುತ್ತಾರೆ ಎಂಬುದು ಬಿಜೆಪಿಗರ ವಾದ. ಬಿಜೆಪಿ ನಾತಕರ ಗಮನಕ್ಕೆ ಕಾಂಗ್ರೆಸಿನ ಸರ್ವೋಚ್ಚ ನಾಯಕ ರಾಹುಲ್ ಗಾಂಧಿ 2017 ರಲ್ಲಿಯೇ ತೈಲಗಳನ್ನು ಜಿಎಸ್ಟಿ ಗೆ ತನ್ನಿ ಅಂತ ಆಗ್ರಹಿಸುತ್ತಾರೆ. ಉತ್ತಮ ಆಂಗ್ಲಭಾಷಾ ಸಾಮರ್ಥ್ಯ ಹೊಂದಿದ ಪಂಡಿತರಾದ ಶಶಿತರೂರವರು ಇತ್ತೀಚೆಗೆ ಇದನ್ನು ಸಮರ್ಥಿಸುವ ಟ್ವೀಟ್ ಕೂಡಾ ಮಾಡಿ ಸರ್ಕಾರಕ್ಕೆ ಆಗ್ರಹ ಮಾಡಿರುತ್ತಾರೆ. ಇದರಲ್ಲಿ ಗಮನಾರ್ಹ ಅಂಶ ಏನೆಂದರೆ ಇವರಿಬ್ಬರೂ ಕೇರಳದ ಸಂಸದರು ಮತ್ತು ಕೇರಳದ ಆಶೋತ್ತರಗಳನ್ನು ಸರ್ಕಾರಕ್ಕೆ ತಲುಪಿಸುವವರು. ಒಂದು ವೇಳೆ ಮೋದಿ ಸರ್ಕಾರ ಜಿಎಸ್ಟಿ ತೈಲಗಳಿಗೂ ಅನ್ವಯಿಸಿದಲ್ಲಿ ಇವರ ಬೆಂಬಲ ಇದೆ ಎಂದು ಆಯಿತು. ಇವರು ಮಹಾಘಟಬಂಧನದ ನಾಯಕರಿಗೂ ಅರ್ಥ ಮಾಡಿಸುತ್ತಾರೆ ಮತ್ತು ಕೇರಳದಲ್ಲಿ ಇದರ ಸಮರ್ಪಕ ಜಾರಿಯನ್ನು ಇವರು ವಹಿಸಿಕೊಳ್ಳುತ್ತಾರೆ ಎಂದು ಭಾವಿಸೋಣ. ಆಗ ಇದರ ವಿರುದ್ಧ ಹೊರಾಡಲು ಬಂದರೆ ಜನರೇ ಇವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.

ಆದರೆ ಬಿಜೆಪಿ ಮುಖಂಡರಾದ ಸುಶಿಲ್ ಮೋದಿ ಇನ್ನು ಏಳೆಂಟು ವರ್ಷಕ್ಕೆ ಇದು ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೇ ವಿತ್ತೀಯ ಮಂತ್ರಿಗಳು ಅಂತಹ ಪ್ರಸ್ತಾಪ ಸದ್ಯ ಸರ್ಕಾರದ ಎದುರಿಗೆ ಇಲ್ಲ ಎಂದಿದ್ದಾರೆ. ಪ್ರಯತ್ನ ಮಾಡದೇ ಅವರು ವಿರೋಧಿಸುತ್ತಾರೆ ಎಂಬುದಕ್ಕೆ ಸುಮ್ಮನಿದ್ದೇವೆ ಎಂಬುದು ಹಾಸ್ಯಾಸ್ಪದ ಅಲ್ಲವೇ. ಕೊನೆಪಕ್ಷ ನಾವು ಇನ್ನು ಮೂರರಿಂದ ಆರು ತಿಂಗಳ ಒಳಗೆ ಸದನದ ಮುಂದಿಟ್ಟು ಜಿ ಎಸ್ಟಿಯನ್ನು ಪೆಟ್ರೋಲ್ ಡೀಸೆಲ್ ಗಳಿಗೆ ಅಸ್ವಯಿಸುತ್ತೇವೆ ಎಂಬ ಹೇಳಿಕೆಯನ್ನಾದರೂ ನೀಡಿ. ಆಗ ವಿರೋಧಪಕ್ಷಗಳು ವಿರೋಧಿಸಲು ಬಂದರೆ ಜನರೇ ನೋಡಿಕೊಳ್ಳುತ್ತಾರೆ. ಯಾಕೆಂದರೆ ಇದರಿಂದ ತುಂಬಾ ಅನುಕೂಲವಾಗುವುದು ಅವರಿಗೆ ತಾನೇ. ಆದ್ದರಿಂದ ವಿರೋಧ ಪಕ್ಷಗಳಲ್ಲಿ ಒಂದು ಮನವಿ, ಬೆಲೆಯೇರಿಕೆ ಬಗ್ಗೆ ಹೊರಳಾಡುವ ಬದಲು ತೈಲೋತ್ಪನ್ನಗಳಿಗೆ ಜಿಎಸ್ಟಿ ಅನ್ವಯಿಸಲು ಹೋರಾಡಿ ಮತ್ತು ಜನಾಂದೋಲನ ರೂಪಿಸಿ.

ಇನ್ನು ಪೆಟ್ರೋಲ್ ಡಿಸೆಲ್ ನಿಂದ ಮಾತ್ರವೇ ಸರ್ಕಾರದ ಬೊಕ್ಕಸ ತುಂಬುವುದು ಎಂಬ ಕಲ್ಪನೆಯ ವಾದ ವಿಚಿತ್ರವಾಗಿ ಕಾಣುತ್ತದೆ. ಒಂದು ಸಣ್ಣ ಬೆಂಕಿಪೆಟ್ಟಿಗೆಯಿಂದ ಎಲ್ಲಾ ವಸ್ತುಗಳಿಗೂ ತೆರಿಗೆ ಇದೆ. ಡೈರೆಕ್ಟ್ ಟ್ಯಾಕ್ಷ್ ಮತ್ತು ಇನ್ಡೈರೆಕ್ಟ್ ಟ್ಯಾಕ್ಸ್ ಎರಡೂ ಟ್ಯಾಕ್ಷೇಷನ್ ಅಳವಡಿಸಿಕೊಂಡಿರುವ ದೇಶ ನಮ್ಮದು. ಸಮಸ್ಯೆ ಇರುವುದು ತೆರಿಗೆ ಸಂಗ್ರಹದಲ್ಲಿ ಅಲ್ಲ ಅದರ ವಿನಿಯೋಗದಲ್ಲಿ. ಮಾಡಿರುವ ಸಾಲಗಳೂ ಕಾರಣ. ಇದಕ್ಕೆ ಸ್ವಾತಂತ್ರ್ಯ ನಂತರದ ಎಲ್ಲಾ ಸರ್ಕಾರಗಳು ಕಾರಣ. ಈ ಹಣದ ಖಜಾನೆಗಳು ರಾಜಕಾರಣಿಗಳ ಮನೆ ತುಂಬಿರೋದು ಒಂದು ಕಾರಣ. ಈ ಕಾರಣಕ್ಕೆ ಇವತ್ತು ಚುನಾವಣೆಗಳಲ್ಲಿ ಖರ್ಚುಗಳು ಕೋಟಿ ಲೆಕ್ಕದಲ್ಲಿ ನಡೆಯುತ್ತಿರುವುದು. ಈಗಿನ ಸರ್ಕಾರ ರಾಜಕೀಯ ನೋಡದೇ ಹಗರಣದ ಲೆಕ್ಕ ಮಾಡಿ ಅವರಿಂದ ವಸೂಲಿಗೆ ಕ್ರಮ ಕೈಗೊಂಡರೆ ಆದೀತು. ನನ್ನ ಪ್ರಕಾರ ಇದು ಪ್ರಾಕ್ಟಿಕಲಿ ಎದೆಗಾರಿಕೆ ತೋರಿಸಿ ಮಾಡಬಹುದಾದ ಕಷ್ಟಸಾಧ್ಯವಾದ ಕೆಲಸ. ನೀವೆ ಆಲೋಚನೆ ಮಾಡಿ ಕಲ್ಲಿದ್ದಲು, ಕಾಮನ್ವೆಲ್ತ್ ಮತ್ತು 2ಜಿ ಹಗರಣದ ಒಟ್ಟು ಮೊತ್ತ ಎಷ್ಟಿರಬಹುದು. ದೇಶದ ರಾಜಕಾರಣಿಗಳು ಲೂಟಿ ಹೊಡೆದಿರುವ ಸಂಪೂರ್ಣ ದುಡ್ಡನ್ನು ಇಲ್ಲಿಯೇ ಬಂಡವಾಳ ಹೂಡಿದ್ದರೆ ಕೊನೆಪಕ್ಷ ಸ್ಥಳಿಯರಿಗೆ ಉದ್ಯೋಗ ಸೃಷ್ಟಿಸಿ ಇಲ್ಲಿಯ ಅಭಿವೃದ್ಧಿ ಮತ್ತು ಆರ್ಥಿಕತೆಗೆ ಇನ್ನೊಂದು ರೀತಿಯಲ್ಲಿಯಾದರೂ ಕೊಡುಗೆ ನೀಡಿದ್ದಾರೆ ಅಂತ ಹೇಳಬಹುದಿತ್ತು. ಬೇನಾಮಿ ಹೆಸರಲ್ಲಿ ವಿದೇಶಗಳಲ್ಲಿ ಮಾಡಿರುವ ಉದ್ದಿಮೆ ಮತ್ತು ಬಂಡವಾಳ ಹೂಡಿಕೆಯನ್ನು ಪತ್ತೆ ಹಚ್ಚಲು ಕೂಡಾ ಸರ್ಕಾರವೇ ವೆಚ್ಚ ಮಾಡಬೇಕಾದ ಸ್ಥಿತಿ.

ಇನ್ನೊಂದು ವಿಪರ್ಯಾಸದ ವಿಷಯವೇನೆಂದರೆ ವಿರೋಧಪಕ್ಷಗಳು ಜನತೆಯ ಹಿತಕ್ಕಾಗಿ ಆಲೋಚಿಸದೇ ವಿರೋಧ ಮಾಡಬೇಕೆಂದು ವಿರೋಧ ಮಾಡುತ್ತಿರುವುದು. ನಾಯಕರು ಮತ್ತು ಕಾರ್ಯಕರ್ತರ ನಡುವೆ ವಿಷಯಾಧಾರಿತ ಗೊಂದಲಗಳಿರುವುದು . ಇದಕ್ಕೆ ಮುಖ್ಯಕಾರಣ ಸಿದ್ದಾಂತ ಹೊಂದಿರುವ ರಾಜಕೀಯ ಪರಿಚಯವಿರದೇ ಇರುವುದು. ಕರ್ನಾಟಕವನ್ನೇ ತೆಗೆದುಕೊಳ್ಳಿ ತೈಲಬೆಲೆ ಏರಿಕೆ ಬಗ್ಗೆ ಜೆಡಿಎಸ್ ಪಕ್ಷ ಹೋರಾಟ ಮಾಡುತ್ತದೆ ಮತ್ತು ಆ ಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಿಎಸ್ಟಿಯನ್ನು ಪೇಟ್ರೋಲಿಯಂ ತೈಲೋತ್ಪನ್ನಗಳಿಗೆ ಅನ್ವಯಿಸುವುದನ್ನು ವಿರೋಧಿಸುತ್ತಾರೆ. ಈವಾಗ ಹೇಳಿ ಜಿಎಸ್ಟಿ ಅನ್ವಯಿಸಿದರೆ 28% ಅಂತ ಲೆಕ್ಕ ಹಾಕಿ 10% ಸೆಸ್ ಹಾಕಿದ್ರೂ ಪೆಟ್ರೋಲ್ ಬೆಲೆ 60 ರೂಪಾಯಿ ಅಸುಪಾಸು ಆಗುತ್ತದೆ. ಜನರಿಗೆ ಇದರಿಂದ ಲಾಭ ತಾನೇ. ಜಿಎಸ್ಟಿ ವಿರೋಧಿಸುವ ತಾವು ತಮ್ಮ ಕಾರ್ಯಕರ್ತರಿಗೆ ಪಕ್ಷದ ವತಿಯಿಂದ ಬೆಲೆಯೇರಿಕೆ ಬಗ್ಗೆ ಹೋರಾಡಲು ಹೇಗೆ ನಿರ್ದೇಶನ ನೀಡುತ್ತೀರಿ?

ಇನ್ನು ಅಗತ್ಯವಸ್ತುಗಳ ಬೆಲೆಯೇರಿಕೆ. ಹೌದು ಡಿಸೆಲ್ ಏರಿಕೆಗೆ ಸಾಗಾಟದ ವೆಚ್ಚ ಹೆಚ್ಚು ಆಗಿ ಬೆಲೆ ಏರುತ್ತದೆ ಆದರೆ ಇದೊಂದೇ ಕಾರಣವಲ್ಲ. ಮಧ್ಯವರ್ತಿಗಳು ಸೃಷ್ಟಿಸುವ ಕೃತಕ ಕ್ಷಾಮವೂ ಕಾರಣ. ಒಂದು ರೈತ ಬೆಳೆಗೆ ಬೆಲೆ ಸಿಗುತ್ತಿಲ್ಲ ಅಂತ ರಸ್ತೆಗೆ ಸುರಿಯುತ್ತಿದ್ದಾನೆ. ಅಂದ್ರೆ ಬೆಳೆ ಯೇಥೇಚ್ಚ ಆಗಿ ಬೇಡಿಕೆಗಿಂತ ಸಪ್ಲೈ ಜಾಸ್ತಿ ಆಗಿರಬೇಕು ತಾನೇ. ಅಂದರೆ ಮಾರುಕಟ್ಟೆಯಲ್ಲೂ ಕೂಡಾ ಜನರು ಖರೀದಿಸುವಾಗ ಬೆಲೆ ಕಡಿಮೆ ಇರಬೇಕಲ್ಲ. ಹಾಗಾಗುತ್ತಿಲ್ಲವಲ್ಲ ಯಾಕೆ? ಯಾಕೆಂದರೆ ಮಾರುಕಟ್ಟೆ ಮೇಲೆ ದಲ್ಲಾಳಿಗಳ ಹಿಡಿತ ಇದು ಹೋಗಿ ಮುಕ್ತ ಮಾರುಕಟ್ಟೆ ಬಂದರೆ ಬೇರೆಯವರೂ ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿ ಜಡ್ಡುಗಟ್ಟಿರುವ ಸರ್ಧೆ ನೀಡಿದರೆ ಕೃಷಿಗೆ ಬಂಡವಾಳ ಹರಿದು ಬಂದು ರೈತನಿಗೂ ದುಡ್ಡಿನ ಹರಿವು ಹೆಚ್ಚಾಗಿ ಕೃಷಿ ರಂಗದ ಪುನಶ್ಚೇತನ ಆಗಬಹುದು. ಸ್ಪರ್ಧಾತ್ಮಕ ವ್ಯಾಪಾರ ವ್ಯವಸ್ಥೆ ಹುಟ್ಟಿ ಗ್ರಾಹಕರಿಗೂ ಲಾಭ ಆಗುತ್ತದೆ. ಇದು ಬೆಲೆ ಏರಿಕೆ ಸಮಸ್ಯೆಗಳಲ್ಲಿ ಪರಿಹಾರೋಪಾಯಗಳಲ್ಲಿ ಒಂದಾಗಬಹುದು .

ಈ ವ್ಯವಸ್ಥೆ ಸರಿಪಡಿಸಲು ಕಾನೂನು ತೊಂದ್ರೆ ರಸ್ತೆಗಳಲ್ಲಿ ಇಳಿದು ವಿರೋಧ ಪಕ್ಷಗಳು ತೋರಿದ ವಿರೋಧ ಮತ್ತು ಅಂತಾರಾಷ್ಟ್ರೀಯವಾಗಿ ರಚಿಸಿದೆ ಷಡ್ಯಂತ್ರಗಳು ಹೇಗೆ ಮರೆಯಲು ಸಾಧ್ಯ. ಕಾನೂನು ರಚಿಸುವುದಷ್ಟೇ ಸರ್ಕಾರದ ಕಾರ್ಯ ಅಲ್ಲ ಜನತೆಗೆ ಮನದಟ್ಟು ಮಾಡಿಸಬೇಕು. ಹೀಗಾಗಿ ಅದನ್ನು ಜನರಿಗೆ ಅರ್ಥ ಮಾಡಿಸುವಲ್ಲಿ ಮೋದಿ ಸರ್ಕಾರ ಎಡವಿದೆ ಅಂತ ನನ್ನ ಅಭಿಪ್ರಾಯ.

ಇನ್ನು ತೈಲೋತ್ಪನ್ನಗಳ ಮೇಲೆ ಜಿಎಸ್ಟಿ ವಿಧಿಸೋದರಿಂದ ಸರ್ಕಾರದ ವರಮಾನ ಕಡಿಮೆ ಆಗುತ್ತದೆ ಎಂಬ ವಾದ. ಈಗಿರುವ ಪೆಟ್ರೋಲಿಯಂ ತೈಲಗಳ ಟ್ಯಾಕ್ಸ್ ಸರಿ ಸುಮಾರು 100 ರಿಂದ 120% . ಜಿಎಸ್ಟಿ ಆಕ್ಟಿಗೆ ತಿದ್ದುಪಡಿ ತಂದು ತೈಲೋತ್ಪನ್ನಗಳ ಮೇಲೆ ಅತೀ ಹೆಚ್ಚಿನ 28% ಸ್ಲಾಬ್ ಅನ್ನು 30 % ಅಥವಾ 50% ಏರಿಸಲಿ. ತೆರಿಗೆಯ ಆದಾಯ ಕಡಿಮೆಯಾದರೂ ಅದನ್ನು ಬೇರೆ ಮೂಲಗಳಲ್ಲಿ ಹೆಚ್ಚಿಸಲು ನೋಡಲಿ. ಮನುಷ್ಯ ಸಹಜ ಗುಣ ಪ್ರಕಾರ ಆದಾಯ ಕಡಿಮೆಯಾದಾಗ ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಲೇಬೇಕು. ಹೀಗೆ ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಲಿ, ಬಿಳಿಯಾನೆಗಳ ಸಾಕುವಿಕೆ ಸ್ವಲ್ಪ ಕಡಿಮೆ ಮಾಡಲಿ. ಮೋದಿ ಸರ್ಕಾರ ಈ ವಿಷಯದಲ್ಲಿ ಸ್ವಲ್ಪ ಮಟ್ಟಿಗೆ ಗಮನ ಕೊಟ್ಟಿದೆ ಕೂಡ. ಭಾರತಕ್ಕೆ ಚುನಾವಣೆ ವೆಚ್ಚವೂ ಒಂದು ಅತಿವೆಚ್ಚದ ವಿಷಯವೇ. ಭಾರತೀಯರು ದೇಶದ ಒಂದಲ್ಲ ಒಂದು ಭಾಗದಲ್ಲಿ ಹಬ್ಬದಂತೆ ವರ್ಷಂಪ್ರತಿ ಚುನಾವಣೆ ಮಾಡುತ್ತಿರುತ್ತಾರೆ . ಅದೇ ಒಂದೇ ಖರ್ಚಿನಲ್ಲಿ ಎಲ್ಲಾ ಚುನಾವಣೆಗಳನ್ನು ಒಂದೇ ಸಲ 5 ವರ್ಷಕೊಮ್ಮೆ ನಡೆಸಿದರೆ ಸುಮಾರು ವೆಚ್ಚವನ್ನು ಕಡಿಮೆ ಮಾಡಬಹುದು. ಜಿಎಸ್ಟಿಯನ್ನು ತೈಲೋತ್ಪನ್ನಗಳಿಗೆ ಅನ್ವಯಿಸಿ ಒಂದು ದೇಶ ಒಂದು ಚುನಾವಣೆ ನಡೆಸಿ ಚುನಾವಣಾ ವೆಚ್ಚ ಕಡಿಮೆ ಮಾಡಿ ಸ್ವಲ್ಪ ಮಟ್ಟಿಗೆ ಸರಿದೂಗಿಸಬಹುದಲ್ಲ.

ಈಗ ಜನರಿಗೆ ಪೆಟ್ರೋಲ್ ಮತ್ತು ಡಿಸೇಲ್ ತೆರಿಗೆ ಅರ್ಥವೇ ಆಗುವುದಿಲ್ಲ. ನೀವು ಒಂದು ಬಟ್ಟೆ ತೆಗೆದುಕೊಂಡರೆ , ಅದನ್ನು ತೊಳೆಯುವ ಸೋಪು ತೆಗೆದುಕೊಂಡರೆ ಅಥವಾ ಒಂದು ಪ್ಲೇಟ್ ಇಡ್ಲಿ ತಿಂದರೆ ಕೂಡಾ ಬಿಲ್ಲಿನಲ್ಲಿ ರಾಜ್ಯಕ್ಕೆ ಇಷ್ಟು ತೆರಿಗೆ ಕೊಟ್ಟಿದ್ದಿರಾ ಮತ್ತು ಕೇಂದ್ರಕ್ಕೆ ಇಷ್ಟು ತೆರಿಗೆ ಕೊಟ್ಟಿದ್ದಿರಾ ಅಂತ ತಿಳಿಯುತ್ತೆ. ಆದರೆ ಈ ಪೆಟ್ರೋಲಿನ ವಿಷಯದಲ್ಲಿ ಹಾಗಿಲ್ಲ. ತೆರಿಗೆ ಎಷ್ಟು ನೀಡಿದ್ದೇವೆ ಎಂದು ಬಿಲ್ಲಲ್ಲಿ ತಿಳಿಯೋದೇ ಇಲ್ಲ. ಇದು ವಂಚನೆಯಲ್ಲವೇ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಸೆಸ್ ಗಳು . ಆ ಸೆಸ್ ಗಳ ಬಳಕೆಯನ್ನು ಬೇರೆ ಉದ್ದೇಶಕ್ಕೆ ಮಾಡುವಂತಿಲ್ಲ. ಕೆಲವೊಮ್ಮೆ ಫಂಡಿನ ಬಳಕೆ ಮಾಡಲು ಯಾವುದೊ ಒಂದು ಸಮಾರಂಭ, ಯೋಜನೆಯ ಹೆಸರಿನಲ್ಲಿ ಕೊಟಿ ಕೋಟಿಯಲ್ಲಿ ಬಿಲ್ ಮಾಡಿ ಫಂಡಿನ ವಿನಿಯೋಗ ಮಾಡ್ತಾರೆ. ಕೊನೆಪಕ್ಷ ನಾವು ಯಾವ ಕಾರಣಕ್ಕೆಲ್ಲ ಸೆಸ್ ಕೊಡ್ತಾ ಇದ್ದೇವೆ ಎಂದು ಬಿಲ್ಲಿನಲ್ಲಿ ತಿಳಿಯಬೇಕು ತಾನೇ?

ದುಡ್ಡು ಮಾಡುವ ಇಂತಹ ವಿಷಯಗಳಲ್ಲಿ ಮಾತ್ರ ಪಕ್ಷಾತೀತವಾಗಿ ಒಗ್ಗೂಡುತ್ತಾರೆ. ಯಾವುದೇ ವಿರೋಧ ಪಕ್ಷದ ನಾಯಕನೂ ಈ ವಿಚಾರಗಳನ್ನು ಎತ್ತುವುದಿಲ್ಲ. ಯಾಕೆಂದರೆ ಜನರಿಗೆ ಮಾಹಿತಿ ಕೊಡದೇ ಕತ್ತಲೆಯಲ್ಲಿ ಇಟ್ಟರೆ ಆತನಿಗೆ ತಾನು ನೀಡುತ್ತಿರುವ. ತೆರಿಗೆ ಎಷ್ಟು ಎಂದು ಗೊತ್ತಾಗೋಲ್ಲ ಮತ್ತು ಸರ್ಕಾರವನ್ನು ಮತ್ತು ತನ್ನ ನಾಯಕರನ್ನೂ ಪ್ರಶ್ನಿಸುವ ಗೋಜಿಗೂ ಹೋಗೋದಿಲ್ಲ. ಇದರಿಂದ ವಿರೋಧವನ್ನೂ ಮಾಡುವ ಅವಶ್ಯಕತೆ ಬರೋಲ್ಲ. ಎಲ್ಲರೂ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಹಾಯಾಗಿ ರಾಜ್ಯಭಾರ ಮಾಡಿಕೊಂಡಿರಬಹುದು. ಇದೇ ತೈಲೋತ್ಪನ್ನಗಳ ಜಿ ಎಸ್ಟಿ ಬಂದರೆ ಬಿಲ್ಲಿನಲ್ಲಿ ರಾಜ್ಯಕ್ಕೆ ಇಷ್ಟು ತೆರಿಗೆ ನೀಡಿದೆ ಮತ್ತು ಕೇಂದ್ರಕ್ಕೆ ಇಷ್ಟು ತೆರಿಗೆ ನೀಡಿದೆ ಅಂಥ ಗೊತ್ತಾಗುತ್ತೆ. ಇದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಸ್ಪರ ಬೆಟ್ಟು ಮಾಡಿ ತೋರಿಸಿ ಪರಸ್ಪರರ ಮೇಲೆ ಆಪಾದನೆ ಮಾಡಿ ರಾಜಕೀಯ ಮಾಡುವುದೂ ತಪ್ಪುತ್ತದೆ.

ವಿರೋಧ ಪಕ್ಷಗಳು ಸ್ವಲ್ಪ ಇಸ್ರೇಲಿನ ವಿರೋಧ ಪಕ್ಷಗಳನ್ನು ನೋಡಿ ಕಲಿಯಬೇಕು. ನನ್ನ ಹೈಸ್ಕೂಲ್ ಜೀವನದ ಸಂದರ್ಭದಲ್ಲಿ ನಾವು ನೋಡಿದ ಈ ದೇಶದ ಅತ್ಯುತ್ತಮ ಪ್ರಧಾನಿ ನೆಚ್ಚಿನ ನಾಯಕ ಅಟಲ್ ವಾಜಪೇಯಿಯವರ ಮಾತುಗಳಾದ ಸರ್ಕಾರಗಳು ಬರುತ್ತವೆ ಹೋಗುತ್ತವೆ ಆದರೆ ದೇಶ ಉಳಿಯಬೇಕು ಎಂಬ ವಿಚಾರವನ್ನು ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕು.

ಹಾಗಂತ ನಾನು ಮೋದಿಯವರು ಎಲ್ಲದರಲ್ಲೂ ಪ್ರಶಂಸನೀಯರು ಅಂತ ಹೇಳಲ್ಲ. ಅವರೇನು ಭಗವಂತರಲ್ಲವಲ್ಲ. ಮಾನವ ಸಹಜ ಇತಿಮಿತಿಗಳು ಇರುತ್ತದೆ. ರಾಜಕೀಯದ ಲೆಕ್ಕಾಚಾರಗಳಿರುತ್ತದೆ. ಆದರೆ ತೈಲದ ವಿಷಯದಲ್ಲಿ ಮತ್ತು ಅದಕ್ಕೆ ಜಿ ಎಸ್ಟಿ ಅನ್ವಯಿಸುವ ವಿಷಯದಲ್ಲಿ ಅವರು ಇಚ್ಚಾಶಕ್ತಿ ಸಾಲದು , ಇನ್ನಷ್ಟು ಎದೆಗಾರಿಕೆ ತೋರಿಸಬೇಕು, ತೋರಿಸುತ್ತಾರೆ ಎಂಬ ಆಶಾಭಾವನೆ ನಮ್ಮದು. ಅಷ್ಟೇ ಅಲ್ಲದೇ ವಿರೋಧಪಕ್ಷಗಳು ಯಾವತ್ತಿನಂತೆಯೇ ವಿನಾ ಕಾರಣ ತೊರಿಸುವ ವಿರೋಧ ತೋರದೇ ಜನಹಿತಕೋಸ್ಕರ ಕೇಂದ್ರ ನಡೆಗೆ ಬೆಂಬಲ ಸೂಚಿಸಿಬೇಕು ಮತ್ತು ಇದು ಜನರು ಈ ವಿಷಯದಲ್ಲಿ ವಿರೋಧ ಪಕ್ಷಗಳಿಂದ ಅಪೇಕ್ಷಿಸುವ ನಡೆ ಕೂಡಾ ಆಗಿರುತ್ತದೆ.

ಚಿತ್ರಕೃಪೆ : Business Today

25
ಮೇ

ಫಾರ್ಮಾ ಲಾಬಿ Vs ಮೋದಿಯವರ ಭಾರತ

– ಅಜಿತ್ ಶೆಟ್ಟಿ ಹೆರಂಜೆ

ಜಗತ್ತಿನ ತಥಾಕಥಿತ ಮುಂದುವರಿದ  ರಾಷ್ಟ್ರಗಳಿಗೆ, ಭಾರತದ ಸಾಮರ್ಥ್ಯವನ್ನು ಒಪ್ಪಿ ಅರಗಿಸಿಕೊಳ್ಳಲು ಇಂದಿಗೂ ಕಷ್ಟ ಆಗುತ್ತಿರುವುದಂತೂ ಸತ್ಯ.

ಕೋವಿಡ್ ಇಡೀ ವಿಶ್ವಕ್ಕೆ ಸಂಕಷ್ಟದ ಜೊತೆಗೆ‌ ಜಗತ್ತಿನ ರಾಷ್ಟ್ರಗಳಿಗೆ  ಔಷಧೀಯ ಕ್ಷೇತ್ರದಲ್ಲಿ ತಮ್ಮ‌ ತಮ್ಮ‌ ಸಾಮರ್ಥ್ಯವನ್ನು ಸಾಬೀತುಪಡಿಸುವ ಒಂದು‌ ವೇದಿಕೆಯನ್ನೂ‌ ನಿರ್ಮಾಣ‌ ಮಾಡಿಕೊಟ್ಟಿತು.‌‌ ಯಾವುದೇ ರೋಗ ಮತ್ತು ಅದರ ಔಷಧಿ ಎರಡೂ ಒಂದಕ್ಕೊಂದು ಸಮಾನಾಂತರವಾಗಿ ಅಥವಾ ಒಂದರ ಹಿಂದೆ ಇನ್ನೊಂದು ಅಷ್ಟೇ ವೇಗದಲ್ಲಿ‌‌‌ ಚಲಿಸುವ ಸರಳ‌ ರೇಖೆಯಂತೆ. ಅದು ಯಾವುದೇ ಕಾಯಿಲೆ ಇರಲಿ. ಪೋಲಿಯೋ, ಕ್ಷಯ, ಕ್ಯಾನ್ಸರ್, ಏಡ್ಸ್ ಹೀಗೆ. ಒಂದೋ‌ ಈ ರೋಗಗಳಿಗೆ  ಚಿಕಿತ್ಸೆ ಕೊಟ್ಟು ಅವುಗಳನ್ನು ನಿಯಂತ್ರಿಸುವುದು ಅಥವಾ ‌ಅವುಗಳಿಗೆ ಮದ್ದು ಕಂಡು ಹಿಡಿದು ರೋಗವನ್ನು ವಾಸಿ ಮಾಡುವುದು. ಅಂದಹಾಗೆ ಇವೆರಡೂ ವ್ಯವಸ್ಥೆಯ ನಿಯಂತ್ರಣ, ‌ಇಂದಿಗೂ‌ ಯಾವುದೇ ದೇಶದ ಸರಕಾರಗಳ ಬಳಿ‌ ಇಲ್ಲ. ಅವುಗಳ ನಿಯಂತ್ರಣ ಇರುವುದು‌ ಈ‌ ಔಷಧ‌‌ ಕಂಪೆನಿಗಳ‌ ಕಪಿ ಮುಷ್ಟಿಯಲ್ಲಿ. ಅವುಗಳು ಪೇಂಟೆಂಟ್ ಎನ್ನುವ ಕೃತಿ ‌ಸೌಮ್ಯದ ಹಕ್ಕನ್ನು ‌ಕಾಯ್ದಿರಿಸುವ ಮೂಲಕ‌  ಬಹುತೇಕ ಅಮೇರಿಕಾ ಮತ್ತು ಪಾಶ್ಚಿಮಾತ್ಯ ದೇಶಗಳೇ ಇದರ‌ ಪಾರುಪತ್ಯ ನಡೆಸುತ್ತಿವೆ.  ಈ ಪೇಟೆಂಟ್ ಮತ್ತು ಯಾವ ರೋಗಕ್ಕೆ ಔಷಧ ಕಂಡು‌ಹಿಡಿದರೆ ಹೆಚ್ಚು ಲಾಭ? ಹಾಗೆಯೇ ಯಾವ ರೋಗಕ್ಕೆ ಔಷಧಿ ಕಂಡು‌ಹಿಡಿಯದೇ ಇದ್ದರೆ ಅಥವಾ ಕಂಡು‌ಹಿಡಿದರೂ ಅದನ್ನು ಜಗತ್ತಿಗೆ ಕೊಡದೇ ಇದ್ದರೆ ಔಷಧ‌‌ ಕಂಪೆನಿಗಳಿಗೆ  ಹೆಚ್ಚು ಲಾಭ? ಅನ್ನುವ ಲೆಕ್ಕಾಚಾರ ಇವರ ಕಾರ್ಯ ಯೋಜನೆಯನ್ನು ನಿರ್ಧಾರ ಮಾಡುತ್ತದೆ.

ಉದಾಹರಣೆಗೆ ಕ್ಯಾನ್ಸರ್ ರೋಗವನ್ನೇ ತೆಗೆದುಕೊಳ್ಳಿ!

ಈ ರೋಗ ಮನುಕುಲವನ್ನು ಕ್ರಿ. ಪೂರ್ವ 3000 ದಿಂದಲೇ ಕಾಡಲು ಶುರು ಮಾಡಿದೆ. ಮನುಷ್ಯ ಇವತ್ತು ವಿಜ್ಞಾನ ತಂತ್ರಜ್ಞಾನದ ಮುಖಾಂತರ ಸೌರಮಂಡಲದ ಆಚೆಗೂ ಹೋಗಿದ್ದಾನೆ  ಆದರೆ 5000 ವರ್ಷಗಳಷ್ಟು ಹಳೆಯ ಕ್ಯಾನ್ಸರ್ ರೋಗಕ್ಕೆ ಮದ್ದು ಕಂಡು ಹಿಡಿಯಲು ಸಾಧ್ಯವಾಗಲಿಲ್ಲ ಅಂದ್ರೆ ಇದು ತಮ್ಮನ್ನು ತಾವು ಆಧುನಿಕರು, ವೈಜ್ಞಾನಿಕರು ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವವರಿಗೆ   ನಾಚಿಕೆಯ ವಿಷಯ ಅಲ್ವಾ? 

ನಾಚಿಕೆ ಯಾಕೆ ಆಗಬೇಕು ಹೇಳಿ! ಈ ರೋಗ 2019ರ ಹೊತ್ತಿಗೆ $ 1,18,352 ಮಿಲಿಯನ್ ಡಾಲರ್ ಮಾರುಕಟ್ಟೆ, 2027ರ ಹೊತ್ತಿಗೆ ಇದು ಇನ್ನೂ 7% ಬೆಳವಣಿಗೆ ಸಾಧಿಸಲಿದೆ ಅಂತೆ. ಈ ರೋಗಕ್ಕೆ ಇರುವ  ಜನಜನಿತ ಚಿಕಿತ್ಸೆ ಕಿಮೋ ಥೆರಪಿ ಯ  ಒಟ್ಟು  ವಾರ್ಷಿಕ ವಹಿವಾಟು ಸುಮಾರು 74.3 ಬಿಲಿಯನ್ ಡಾಲರ್.  ಜಗತ್ತಿನ ಔಷಧಿ ಕಂಪೆನಿ ಗಳಿಗೆ, ಆಸ್ಪತ್ರೆಗಳಿಗೆ  ಕ್ಯಾನ್ಸರ್ ಒಂದು ಚಿನ್ನದ ಮೊಟ್ಟೆ ಇಡುವ ಕೋಳಿ. ಇಂತಿಪ್ಪ ಕಾಯಿಲೆಗೆ ಔಷಧಿ ಕಂಡು ಹಿಡಿದು  ತಮ್ಮ  ಉದ್ಯಮದ ಬುಡಕ್ಕೆ ತಾವೇ ಪೆಟ್ಟು ಕೊಟ್ಟುಕೊಂಡಾರಾ?  ಖಂಡಿತಾ ಇಲ್ಲ! ಸಾವಿರ ವರ್ಷ ಹೋದರೂ ಇವ್ರು ಕ್ಯಾನ್ಸರ್ ರೋಗಕ್ಕೆ ಮದ್ದು ಕಂಡುಹಿಡಿಯೋಲ್ಲ. ಒಂದೊಮ್ಮೆ ಕಂಡು ಹಿಡಿದರೂ ಅದನ್ನು ಗುಪ್ತವಾಗಿಯೇ ಇಡುತ್ತಾರೆ. ಜಗತ್ತಿನ ಯಾವುದೋ ಪ್ರಭಾವಿ ವ್ಯಕ್ತಿಯ ಜೀವ ರಕ್ಷಣೆಗೆ ಮಾತ್ರ ಉಪಯೋಗಿಸಿಯಾರು ಅಷ್ಟೇ! ಜನಸಮಾನ್ಯನ ಕೈಗೆ ಖಂಡಿತ ಅದು ಸಿಗಲಿಕ್ಕೆ ಇಲ್ಲ.

ನಾಗರಿಕತೆಯ ಇತಿಹಾಸವನ್ನೇ ತೆಗೆದು ನೋಡಿ! ಮಾನವ ಭೂಮಿಯ ಮೇಲೆ ಬದುಕಿದ್ದ ಅಷ್ಟು ಸಮಯ ರೋಗರುಜಿನಗಳ ಜೊತೆಗೆ ಬದುಕಿದ. ತನ್ನ ಅನುಭವದ ಆಧಾರದ ಮೇಲೆ  ಕೆಲವೊಂದಿಷ್ಟು ರೋಗಗಳಿಗೆ ಔಷಧೋಪಚಾರ ವನ್ನೂ ಕಂಡುಹಿಡಿದ. ಇದು ಜಗತ್ತು ಕಂಡ ಎಲ್ಲಾ ನಾಗರೀಕತೆಯಲ್ಲೂ ಇತ್ತು.ಅಮೇರಿಕಾದ ಮಾಯನ್ ನಾಗರೀಕತೆ ಇರಲಿ, ಈಜಿಪ್ಟಿನ ನಾಗರೀಕತೆ ಇರಲಿ, ರೋಮನ್ ನಾಗರೀಕತೆ, ಮಸೊಪೊಟೋಮಿಯಾ,  ಚೀನಾದ ನಾಗರೀಕತೆಯೇ ಇರಲಿ ಅಥವಾ ಭಾರತದ ಸಿಂಧೂ ಕಣಿವೆಯ ನಾಗರೀಕತೆಯೇ ಇರಲಿ,ಈ ಎಲ್ಲಾ ಸಮಾಜಗಳಲ್ಲೂ ರೋಗಗಳು ಕಾಡುತ್ತಿದ್ದವು ಹಾಗು ಅವರು ಅವುಗಳೊಡನೆ ಸೆಣಸಾಡಲು ತಮ್ಮದೇ ರೀತಿಯ  ಔಷಧೋಪಚಾರದ ಪದ್ದತಿಯನ್ನು ಬೆಳೆಸಿಕೊಂಡರು. ಇಲ್ಲಿ ಯಾವತ್ತೂ ಸರಕಾರದ ಹಸ್ತಕ್ಷೇಪ ಇರಲಿಲ್ಲ. ಪ್ರತಿ ಸಮಾಜದ ಒಂದು‌ ವರ್ಗ ಔಷಧಯ ಪದ್ದತಿಯನ್ನು ಸಂಶೋಧನೆ ಮಾಡುತ್ತಾ ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸಿ ಕೊಂಡು ಬಂದರು. ಎಲ್ಲೂ ಯಾರೂ ಯಾವತ್ತೂ ಇಂತಾ ರೋಗಕ್ಕೆ ಇಂತವರೇ ಔಷಧೋಪಚಾರ ಮಾಡಬೇಕು, ಇಂತವರು ಹೇಳಿದ್ದರೆ ಮಾತ್ರ ಅದು ಔಷಧ, ಈ ರೋಗಕ್ಕೆ ನಾನು ಮಾತ್ರ ಔಷಧ ಕಂಡುಹಿಡಿಯ ಬೇಕು, ಬೇರೆಯವರು ಕಂಡುಹಿಡಿಯಲು ಅನುಮತಿ ಕೊಡ ಬಾರದು ಇಂತಹ ಯಾವುದೇ ವಿಲಕ್ಷಣ ಕಟ್ಟುಪಾಡುಗಳು ಇರಲಿಲ್ಲ.

ಯಾವ ರೋಗಕ್ಕೆ ಯಾರಬಳಿ ಔಷಧ ತೆಗೆದು ಕೊಳ್ಳಬೇಕು ಎಂದು ಜನತೆಯೇ ತೀರ್ಮಾನ ಮಾಡುತ್ತಿದ್ದರು. ಬಹುತೇಕ  ಔಷಧೋಪಚಾರ ಮಾಡುವವರು ತಾವೇ ಖುದ್ದಾಗಿ ಔಷಧ ತಯಾರು  ಮಾಡುತ್ತಿದ್ದರು. ಇಂದಿನ ಹಾಗೆ ಯಾರೋ ಮಾಡಿದ ಔಷಧಿಗೆ ಪಟ್ಟಿ ಬರೆದು ಕೊಡುವ ಡಾಕ್ಟರ್ ಅಲ್ಲ. ಆದರೆ ಈ ಆಧುನಿಕ ವೈದ್ಯಕೀಯ ವಿಜ್ಞಾನ, ಎಲ್ಲಾ ಸ್ಥಳೀಯ ಔಷಧಿ ಪದ್ಧತಿಗಳನ್ನು ಕೊಲ್ಲುತ್ತಾ ಬಂತು, ವಿಜ್ಞಾನದ ಹೆಸರಿನಲ್ಲಿ ಇವುಗಳ ವಿಶ್ವಾಸಾರ್ಹತೆಯನ್ನು ಪ್ರಶ್ನೆ ಮಾಡುತ್ತಾ ಬಂದರು. ಜನರಿಗೂ ಹಿತ್ತಲ‌ಗಿಡ ಮದ್ದಲ್ಲ ಅನ್ನಿಸತೊಡಗಿತು. ಕೊನೆಗೆ ರೋಗಗಳಿಗೆ ಇಂಗ್ಲಿಷ್ ಮದ್ದು ಬಿಟ್ಟರೆ ಬೇರೆ ಉಪಾಯ ಇಲ್ಲ ಅನ್ನುವಷ್ಟು ಜನ ಇವರ ಮೇಲೆ ಅವಲಂಬಿತರಾದರು. 

ಈ ಜಾಗತೀಕರಣ ಉಳಿದ ಎಲ್ಲಾ ಸ್ಥಳೀಯ ಸಂಸ್ಕೃತಿಗಳಂತೆಯೇ ಸ್ಥಳೀಯ ಔಷದೀಯ ವ್ಯವಸ್ಥೆಯನ್ನು ಆಪೋಷಣೆಗೆ ತೆಗೆದುಕೊಂಡಿತು.  ಈಗ ಪ್ರಪಂಚದಲ್ಲಿ ಹುಟ್ಟಿದ ಯಾವುದೇ ರೋಗಕ್ಕೆ ಇವರೇ ಔಷಧ ಕಂಡು ಹಿಡಿಯವ ದೊಣ್ಣೆ ನಾಯಕರು, ಇವರು ಹೇಳಿದ ಮಾತೇ ವೇದ ವಾಕ್ಯ, ಇವರು ಹೇಳಿದ್ದನ್ನು ಮಾತ್ರ ಜಗತ್ತು ಕೇಳಬೇಕು. ಉಳಿದ ಯಾವುದೇ ಚಿಕಿತ್ಸಾ ವಿಧಾನಕ್ಕೆ ಇದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಬೌದ್ದಿಕ ಸಾಮರ್ಥ್ಯ ಇಲ್ಲ. ಒಂದೊಮ್ಮೆ ಅವರು ಅಂತಹಾ ಸಾಮರ್ಥ್ಯವನ್ನು ತೋರಿಸಿದರೂ ಅವರಿಗೆ ಡಾ.ಗಿರಿಧರ್ ಕಜೆ, ಬಾಬಾ ರಾಮ ದೇವ್ ಅಥವಾ ಈಗ ಆಂದ್ರಧಲ್ಲಿ ಸುದ್ದಿ ಮಾಡುತ್ತಿರುವು ಆನಂದಯ್ಯಾ ಅವರಿಗೆ ಆದ ಪರಿಸ್ಥಿತಿಯೇ ಆಗುತ್ತದೆ.

ಗಿರಿಧರ ಕಜೆಯವರು ಔಷಧಿ ಕಂಡುಹಿಡಿದಾಗ ಅವರಿಗೆ ಮತ್ತು ಅವರ ಔಷದಕ್ಕೆ ಅಪ‌ಪ್ರಚಾರ ಮಾಡಲು ತಾ ಮುಂದು ನಾ ಮುಂದು‌ ಎಂದು ನಿಂತರು, ಇವರು ಕಜೆಯವರನ್ನು ಕೇಳಿದ ಒಟ್ಟು ಪ್ರಶ್ನೆಗಳ ಸಾರಂಶ ಇಷ್ಟೆ, ಅಲ್ಲಾ ನಾವು ಕೋಟಿಗಟ್ಟಲೆ ಹಣ ಹಾಕಿ ಅಷ್ಟು ದೊಡ್ಡ ಕಂಪೆನಿ‌ ಜಗತ್ತಿನಾದ್ಯಂತ ಮಾಡಿದ್ದೇವೆ ನೀನು‌ ಪುಸಕ್ಕನೆ ಬಂದು ಈ ನಾಕಾಣೆ ಗಿಡಮೂಲಿಕೆ ಔಷಧ ಮಾಡಿ  ಜನರಿಗೆ ಕೊಟ್ಟರೆ ನಾವು ಹಾಕಿದ ಕೋಟ್ಯಾಂತರ ರೂಪಾಯಿ ಬಂಡವಾಳ ಯಾವ ಸಮುದ್ರದಿಂದ ವಾಪಾಸ್ ತೆಗೆಯೋದು?.  ಇದನ್ನ ಅವರು ನೇರವಾಗಿ ಹೇಳದ ವಿಜ್ಞಾನದ ಭಾಷೆ ಅಂದ್ರೆ ಸೈಂಟಿಫಿಕ್ ಲಾಂಗ್ವೇಜ್‌ ಮುಖಾಂತರ ಹೇಳಿದರು. ಕೊನೆಗೆ ಈ ಲಾಬಿಗೆ ಮಣಿದ ಕಜೆಯವರು ಇದೇ ಔಷಧಿಯನ್ನು ಇಮ್ಯುನಿಟಿ ಬೂಷ್ಟರ್ ಹೆಸರಿನಲ್ಲಿ ಕೊಡಬೇಕಾಯಿತು. ಕಜೆಯವರಿಗೆ ಬೈದ ಅದೆಷ್ಟು ಮಂದಿ ಅವರ ಕ್ಲಿನಿಕ್ ಮುಂದೆ ಬಂದು ನಿಂತು ಮುಖ ಮುಚ್ಚಿಕೊಂಡು ಅವರ ಔಷಧ ಕೊಂಡು ಹೋಗಿಲ್ಲ?. ಅನ್ ಅಫೀಷಿಯಲ್ಲಿ ಅವರ ಮದ್ದು ಕರೋನ ಒಂದರ ಅಲೆಯ ಸಂದರ್ಭದಲ್ಲಿ ಬಹುತೇಕ ಎಲ್ಲ ಮನೆಯಲ್ಲೂ ಇತ್ತು. ಅವರ ಕಂಪೆನಿ‌ ಈ ಔಷಧದ ಉತ್ಪಾದನೆ ಹಗಲೂ ರಾತ್ರಿ ಮಾಡಬೇಕಾಯಿತು.  ಅಧೀಕೃತವಾಗಿ ವಿರೋಧ ವ್ಯಕ್ತಪಡಿಸಿದ  ಆರೋಗ್ಯ ಇಲಾಖೆಯ ಅಧಿಕಾರಿ ಕೂಡ ತನ್ನ ಮನೆಯವರಿಗೆ ಕರೋನ ಬಂದಾಗ ಇದೆ ಔಷಧ ಕೊಟ್ಟು ಸಂಬಾಳಿಸಿದ್ದು ನನಗೆ ಗೊತ್ತಿದೆ. ಆದರೆ ಆತ ಅದನ್ನ ಬಹಿರಂಗವಾಗಿ ಹೇಳುವಂತಿಲ್ಲ. ಬಾಬಾ ರಾಮ್‌ದೇವ್ ಅವರ ಕರೊನಿಲ್ ಔಷಧಯ ವಿರುದ್ಧ ಎಂತಹಾ ಅಪಪ್ರಚಾರ  ಮಾಡಿದರು. ಕೊನೆಗೆ ಸರಕಾರಕ್ಕೂ ಮುಜುಗರ ಆಗುವಂತೆ ಮಾಡಿ ಅದನ್ನ ಇಮ್ಯುನಟಿ ಭೂಸ್ಟರ್ ಎಂದು ಮಾರುಕಟ್ಟೆಗೆ ತಂದರು. ಈಗ ಕೋವಿಡ್ ರೋಗಕ್ಕ ಡಿ.ಆರ್.ಡಿ.ಒ ಮತ್ತು ರೆಡ್ಡಿ ಲೆಬೋರಟರಿ ಜಂಟಿಯಾಗಿ ಔಷಧ ಕಂಡುಹಿಡಿದು ‌ ಮಾರುಕಟ್ಟೆಗೆ ತಂದರು. ಬಹುಶಃ ಇದು ವಿಶ್ವದ ಮೊದಲ ಕೋವಿಡ್ ಔಷಧ. ಈ ಮದ್ದು ಹೊರಗೆ ಬಂದು ಜನಮಾನಸದ ನಡುವೆ ವಿಶ್ವಾಸ ಮೂಡುವ ತನಕ ಎಲ್ಲೂ ಇದರ  ಮೂಲ ಬಾಬಾ ರಾಮ್ ದೇವ್ ಅವರ ಪತಂಜಲಿ  ಮಾಡಿದ‌ ಸಂಶೋಧನೆಯ ಆಧಾರದ ಮೇಲೆ ಎಂದು ಹೇಳಲಿಲ್ಲ. ಹೇಳಿದ್ದರೆ ಪಾಶ್ಚಾತ್ಯ ಆಧುನಿಕ‌ ವೈದ್ಯಕೀಯ ಜಗತ್ತು ಕಜೆಯವರನ್ನು ಪ್ರಶ್ನೆ ಮಾಡಿದಂತೆ ಇದನ್ನೂ‌ ಮಾಡುತ್ತಿತ್ತು. ಒಂದು ವಾರದಿಂದ ಆಂಧ್ರ ಪ್ರದೇಶದ ಒಂದು ಪುಟ್ಟ ಹಳ್ಳಿಯ ನಾಟೀ ವೈದ್ಯರು ಒಬ್ಬರು ಕರೋನಾಕ್ಕೆ ಕೊಡುತ್ತಿರುವ ನಾಟಿ ಔಷದ ಅವರನ್ನ ಇವತ್ತು  ಜಗತ್ತಿನಾದ್ಯಂತ ಹೆಸರುವಾಸಿ ಮಾಡಿದೆ. ಇವರ ಇರುವ ಎರಡೂ ಹಳ್ಳಿಗೆ ಇವರ ಮದ್ದಿನ ಕಾರಣ ಕರೋನ ಬಂದೇ ಇಲ್ಲ ಇವರ ಕೊಟ್ಟ ಔಷದಿಯ ಪ್ರಭಾವಕ್ಕೆ! ಇವರು ಈ ಔಷದವನ್ನ ಹಣಕ್ಕೂ ಮಾರುತ್ತಿರಲಿಲ್ಲ. ಜನರು ಮುಗಿಬಿದ್ದರು. ಮಾಧ್ಯಮಕ್ಕೆ ಗೊತ್ತಾಯಿತು, ಸರಕಾರಕ್ಕೆ ಇದು ಮುಜುಗರ, ಮೂಢನಂಬಿಕೆ ‌ಎಂಬಂತೆ ಭಾಸವಾಯಿತು, ಬಂಧಿಸಿದರು, ಜನರು ದಂಗೆ ಎದ್ದರು. ಅದು ಉಪರಾಷ್ಟ್ರಪತಿ ವೇಂಕಯ್ಯ ನಾಯ್ಡು  ಅವರ ಕ್ಷೇತ್ರ ಹಾಗು‌  ಆನಂದಯ್ಯನವರ ಪರಿಚಯ ಅವರಿಗೂ ತಕ್ಕಮಟ್ಟಿಗೆ ಇರುವ ಕಾರಣ ಕೂಡಲೆ ಆಂದ್ರಪ್ರದೇಶದ ಸರಕಾರ ಅವರನ್ನು ಬಿಡುಗಡೆ ಮಾಡಿ ಅವರಿಗೆ ಜಡ್ + ಭದ್ರತೆ ಒದಗಿಸುವಂತೆ ಹೇಳಿದರು ಜೊತೆಗೆ ಅವರ ಔಷಧದ ಸ್ಯಾಂಪಲ್ ಐಎಮ್ ಆರ್ ಸಿ ಗೆ ಪರೀಕ್ಷೆಗೆ ಕಳುಹಿಸಲಾಯಿತು. ಒಟ್ಟಿನಲ್ಲಿ  ಕೇಂದ್ರ ಸರಕಾರದ ಮುಂಜಾಗ್ರತೆಯಿಂದ ಒಬ್ಬ ನಾಟೀ ವೈದ್ಯರ ಮತ್ತು ಅವರ ಜ್ಞಾನದ ರಕ್ಷಣೆ ಮಾಡುವಲ್ಲಿ ಸದ್ಯಕ್ಕೆ ಸಫಲ ಆಯಿತು. ನೋಡಿತ್ತಿರಿ  ಈ ನಾಟಿ ವೈದ್ಯರ ಔಷಧಿಯ ಮಾನ ಹಾರಾಜು ಹಾಕಲು ಈ ಫಾರ್ಮಾ ಲಾಭಿಗಳು ಮಾಧ್ಯಮಕ್ಕೆ ಹೇಗೆ ಹಣ ಸುಪಾರಿ ಕೊಡಲಿದ್ದಾರೆ ಎಂದು. ಅವರು ಮಾಡುವುದೇ ಇದನ್ನು, ಮೊದಲು ಸಾದ್ಯವಾದರೆ ವ್ಯಕ್ತಿಯ ಪ್ರಾಣ ಹರಣ, ಇಲ್ಲವೋ ಮಾನ ಹರಣ. ನೀವು ಒಮ್ಮೆ ಭಾರತದ ಅಣು ವಿಜ್ಞಾನದ ಪಿತಾಮಹ ಹೋಮೀ ಬಾಬಾ ಅವರ ಸಾವು ಹೇಗಾಯಿತು ಎಂದು ಗೂಗಲ್ ಮಾಡಿ. ನಿಮಗೇ ತಿಳಿಯುತ್ತದೆ, ಈ ಪಾಶ್ಚಾತ್ಯ ದೇಶಗಳು ಭಾರತವನ್ನ ಹೇಗೆ ನಡೆಸಿಕೊಳ್ಳುತ್ತವೆ ಎಂದು. 

ಕೋವಿಡ್ ಕಾಯಿಲೆಗ  ಔಷಧ ಕಂಪೆನಿಗಳು ಮೊದಮೊದಲು ಔಷಧ ಕಂಡುಹಿಡಿಯಲು ಬಹುಕಾಲ ತಗೆದುಕೊಳ್ಳತ್ತದೆ ಎಂದರೂ ಕೊನೆಗೆ ರೋಗದ ಒತ್ತಡ ತೀವ್ರತೆ ಅರಿತು ತ್ವರಿತವಾಗಿ ಔಷಧ ಕಂಡುಹಿಡಿಯುವ ಪ್ರಕ್ರಿಯೆ ಆರಂಭಿಸಿದರು. ಭಾರತ ಸೇರಿದಂತೆ ಬಹತೇಕರು ಈ ರೋಗಕ್ಕೆ ಅಮೇರಿಕಾ ಇಲ್ಲಾ ಯುರೋಪ್ ದೇಶಗಳು ಔಷಧ ಕಂಡುಹಿಡಿಯುತ್ತವೆ ಅಂದುಕೊಂಡಿದ್ದರು. ಮೊದಲಬಾರಗೆ ಈ ಪ್ರಕ್ರಿಯೆಯುಲ್ಲಿ ಭಾರತ ಸರಕಾರ ಈ  ಸಂಪೂರ್ಣ ನೇತ್ರತ್ವ ವಹಿಸಿತು. ಭಾರತ ಬಯೋಟೆಕ್ ಸೇರಿದಂತೆ ನಾಲ್ಕೈದು ಫಾರ್ಮಾ ಕಂಪೆನಿಗಳಿಗೆ ಅಗತ್ಯ ಕಾನೂನು ಮತ್ತು ಹಣಕಾಸಿನ ಸಹಾಯ ಮಾಡಿ ಔಷಧಿ ತಯಾರಿಕೆಗೆ ವೇಗ ಕೊಟ್ಟಿತು. ಜಗತ್ತಿನ ಫಾರ್ಮಾ ಕಂಪೆನಿಯ ದೈತ್ಯ ಫೈಜರ್ ಕಂಪೆನಿ ತನ್ನ ಲಸಿಕೆ ಮಾರುಕಟ್ಟೆಗೆ ಪರಿಚಯಿಸವ ಸಮಯಕ್ಕೆ ಸರಿಯಾಗಿ ಭಾರತದ ಭಾರತ್ ಬಯೋಟೆಕ್ ಕಂಪೆನಿಯ ಕೋವ್ಯಾಕ್ಸ್ಇನ್ ಹೊರಬಂತು. ಇದರ ಜೊತೆಗೆ ಮೋದಿ ‌ಸರಕಾರ ಇದರ ಬೆಲೆ  ಪ್ರತೀ ಡೋಸಿಗೆ ಇನ್ನೂರೈವತ್ತು ನಿಗದಿ ಮಾಡಿತು. ಮತ್ತು ಜಗತ್ತಿನ ಸುಮಾರು ನೂರು ದೇಶಗಳಿಗೆ  ಕೊಟ್ಟಿತು. ದಕ್ಷಿಣ ಆಫ್ರಿಕಾದೊಂದಿಗೆ ಸೇರಿ ಲಸಿಕೆಯ ಪೇಟೆಂಟ್ ತೆಗೆದು ಈ ಲಸಿಕೆಗಳು ಜಗತ್ತಿನ ಎಲ್ಲಾ ದೇಶಗಳಿಗೂ ಕೈಗೆಟಕುವ ದರಕ್ಕೆ ಸಿಗಲಿ ಎಂದಿತು. ಇದು ವಿಶ್ವದ ಫಾರ್ಮಾ ಲಾಭಿಗಳ ನಿದ್ದೆಗೆಡಿಸಿತು. ಆಗ ಕೋವ್ಯಾಕ್ಸಿನ್ ವಿಶ್ವಾಸಾರ್ಹತೆ ಹಾಳು ಮಾಡುವ ಎಲ್ಲಾ ಪ್ರಯತ್ನ ಕಾಂಗ್ರಸ್ ಪಕ್ಷದ ನೇತ್ರತ್ವದಲ್ಲಿ ನಡೆಯಿತು. ಭಾರತದ ಜನರು ಕೊಂಚಮಟ್ಟಿಗೆ ಇದನ್ನ ನಂಬಿದರು. ಕಾರಣ ಜಗತ್ತಿನ ಯಾವ ಮುಂದುವರಿದ ರಾಷ್ಟ್ರಗಳು ಭಾರತ ಇವುಗಳಿಗೆ ಸರಿಸಮಾನವಾಗಿ ಅವುಗಳಿಗಿಂತ ಕಮ್ಮಿ ಬೆಲೆಯ ಮತ್ತು ಹೆಚ್ಚು ಸಮರ್ಥ ಲಸಿಕೆ ಕಂಡುಹಿಡುತ್ತದೆ ಎಂಬ ನಿರೀಕ್ಷೆಯಲ್ಲಿ ಇರಲೇ ಇಲ್ಲ. ಇವರ ಲೆಕ್ಕಾಚಾರವೇ ಬೇರೆ ಇತ್ತು. ಭಾರತ ಒಂದು ದೊಡ್ಡ ಮಾರುಕಟ್ಟೆ , ತಮ್ಮ  ಈಕೊ ಸಿಸ್ಟಮ್ ಬಳಸಿ ಭಾರತ ಸರ್ಕಾರದ ಮೇಲೆ ಒತ್ತಡ ಹೇರಿ ತಾವು ಹೇಳಿದ ಬೆಲೆಗೆ ಮತ್ತು ತಾವು ಹೇಳಿದ ಷರತ್ತಿಗೆ ಭಾರತ ಸರಕಾರವನ್ನು ಸಿಕ್ಕಿಸಿ ಇಲ್ಲಿ‌ ಲಸಿಕೆ ಮಾರಬಹುದು ಅಂದುಕೊಂಡಿದ್ದರು. ಇದರಲ್ಲಿ ಅಮೇರಿಕಾದ ಫೈಜರ್ ಕಂಪೆನಿಯ ಪಾತ್ರ ಬಹಳಾ ದೊಡ್ಡದು. ತನ್ನ ಬಳಿ ಮಿಲಿಯನ್ ಗಟ್ಟಲೆ ಲಸಿಕೆ ಶೇಖರಿಸಿ ಇಟ್ಟಿದ್ದ ಈ ಕಂಪೆನಿ ತನ್ನ ಲಸಿಕೆ ಬೇಕಾದರೆ ನೀವು ನಿಮ್ಮ ಮಿಲಟರಿ ನೆಲೆಗಳನ್ನು ನಮಗೆ ಅಡಮಾನವಾಗಿಡಿ ಎಂದು ಲ್ಯಾಟಿನ್ ಅಮೆರಿಕ ದೇಶಗಳಿಗೆ ನಿಬಂಧನೆ ಹಾಕಿತ್ತು. ಒಂತರಾ ಈಷ್ಟ್ ಇಂಡಿಯಾ ಕಂಪೆನಿ ಭಾರತದಲ್ಲಿ ಹಿಂದೆ ಮಾಡಿದ ರೀತಿಯಲ್ಲೇ. ನೋಡಿ ಸರಕಾರದ ಅಸಹಾಯಕತೆಯನ್ನ ಈ ದೈತ್ಯ ಕಂಪೆನಿಗಳು ಹೇಗೆ ಬಳಸಕೊಳ್ಳುತ್ತವೆ ಎಂದು. ಭಾರತದಲ್ಲೂ ಅದೇ ರೀತಿಯಲ್ಲಿ ಹೊಗಬಹುದು ಎಂದು ಯೋಚಿಸಿತು. ಇದೇ ಸಮಯದಲ್ಲಿ ನಮ್ಮ ದೇಶದ ವಿರೋಧ ಪಕ್ಷಗಳು ಒಂದಷ್ಟು ಬುದ್ದಿ ಜೀವಿಗಳು, ಸುದ್ದಿ ಸಂಸ್ಥಗಳು ಒಂದು ಹಂತದ ಲಸಿಕೆ ಯೋಜನೆಯನ್ನ ಅಪ್ರಚಾರದ ಸುಳಿಗೆ ಸಿಕ್ಕಿಸಿ ಎರಡನೇ ಹಂತದ ಅಪ ಪ್ರಚಾರದಲ್ಲಿ ತೊಡಗಿದ್ದವು. “ಭಾರತದಲ್ಲಿ‌ ಲಸಿಕೆ ಸಾಲುತ್ತಿಲ್ಲ, ವಿದೇಶದಿಂದಾದರೂ ಲಸಿಕೆ ತಂದು ಕೊಡಿ” ಇದು ಸಿದ್ದರಾಮಯ್ಯನವರು ಮೋದಿಗೆ ಹೇಳಿದ ಮಾತು.  ಈ ರೀತಿ ಸರಕಾರದ ಮೇಲೆ ಇನ್ನೊಂದು ಹಂತದ ಒತ್ತಡ ಹೇರುವ ಪ್ರಯತ್ನ ನಡೆಯಿತು‌. ಇದರ ನಡುವೆ ಫೈಜರ್ ಭಾರತ ಸರಕಾರದ ಮುಂದೆ ಪ್ರಸ್ತಾಪ ಇಟ್ಟಿತು,  ಭಾರತ ಈ ಕಂಪೆನಿಗೆ ಎರಡು ನಿಭಂದನೆ ಇಟ್ಟಿತು. ನಿಮ್ಮ‌ ಲಸಿಕೆ ಭಾರತದಲ್ಲಿ ಉಪಯೋಗಿಸಲು ಯೋಗ್ಯಾವಾ ಎಂದು ಒಂದು ಸಣ್ಣ ಪ್ರಾಯೋಗಿಕ ಪರೀಕ್ಷೆ ಮಾಡಿ, ಇನ್ನೊಂದು ನಿಮ್ಮ‌ ಲಸಿಕೆಯುಂದ ತೊಂದರೆಗೆ ಒಳಗಾದ ಯಾರಾದರೂ ನಿಮ್ಮ ಮೇಲೆ ಕಾಂಪನ್ಸೇಶನ್ ಕೇಳಿ ಕೇಸು ಹಾಕಿದರೆ ಅದಕ್ಕೇ ನೀವೆ ಜವಾಬ್ದಾರರು ಎಂದಿತು. ಫೈಜರ್ ಇವೆರಡಕ್ಕೂ ಒಪ್ಪಲಿಲ್ಲ. ಮೋದಿ ಸರಕಾರ ಈ ಶರತ್ತಿಗೆ ಒಪ್ಪದೆ ಇದ್ದರೆ ‌ನಿಮಗೆ ಭಾರತದ ಮಾರುಕಟ್ಟಗೆ ಪ್ರವೇಶ ಇಲ್ಲ ಎಂದಿತು. ಇದರ ಬೆನ್ನಲ್ಲೇ ಮತ್ತೆ ಸರಕಾರದ ಲಸಿಕೆ ಜನರಿಗೆ ತಲುಪುತ್ತಿಲ್ಲ ಎಂಬ ಮಾಧ್ಯಮ ಮತ್ತು ವಿಪಕ್ಷಗಳ ಹಾಹಾಕಾರ ಜೋರಾಯಿತು. ಮೋದಿ‌ಸರಕಾರ ನೀತಿಆಯೋಗದೊಂದಿಗೆ ಒಂದು ಹೊಸ ಪ್ರಸ್ತಾವನೆ ಇಟ್ಟಿತು. ಭಾರತದ  ಎರಡು ಕಂಪೆನಿ ಸೇರಿದಂತೆ ವಿಶ್ವದ ಒಟ್ಟು ಎಂಟು ಕಂಪೆನಿಗಳ ಸಹಯೋಗದೊಂದಿಗೆ ಡಿಸೆಂಬರ ಒಳಗೆ ಭಾರತದ ಅಷ್ಟೂ ಜನರಿಗೆ ವ್ಯಾಕ್ಸಿನ್ ಹಾಕಿಸುವ ಯೋಜನೆ ಜನರ ಮುಂದೆ ಇಟ್ಟಿತು. ಇಲ್ಲೂ ಅಮೇರಿಕಾದ ಫೈಜರ್ ಕಂಪೆನಿಗೆ ಅವಕಾಶ ಇರಲಿಲ್ಲ. ಈಗ ಮೋದಿ‌ಸರಕಾರ ಯಾವುದಕ್ಕೂ ಅಷ್ಟು ಸುಲಭಾಗಿ ಜಗ್ಗುವುದಿಲ್ಲ ಎಂದು ಮನಗಂಡು ಭಾರತದ ಮಾರುಕಟ್ಟೆ ಕಳೆದುಕೊಂಡರೆ ಆಗುವ ನಷ್ಟವನ್ನು ತಪ್ಪಿಸಲು ಭಾರತ ಸರಕಾರ ಹಾಕಿದ ಷರತ್ತು ಒಪ್ಪಿ ಲಸಿಕೆ ಪೂರೈಸುವ ಬಗ್ಗೆ ಮತ್ತೊಂದು ಪ್ರಸ್ತಾಪ ಇಟ್ಟಿರುವುದು ಮಾಧ್ಯಮಗಳಲ್ಲಿ ವರದಿಯಗಿದೆ.

ಇದು ಇಷ್ಟಕ್ಕೆ ನಿಲ್ಲುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆ  ತನ್ನ ಲಸಿಕೆ ಪಟ್ಟಿಯಲ್ಲಿ ಭಾರತದ ಕೊ ವ್ಯಾಕ್ಸಿನನ್ನು ಸೇರಿಸುವುದಿಲ್ಲ. ಹೀಗಾದಾಗ ವಿಶ್ವದ ಇತರ ದೇಶಗಳು ಈ ಲಸಿಕೆಯನ್ನು ಬಳಸುವಲ್ಲಿ ಒಮ್ಮೆ ಯೋಚಿಸುತ್ತವೆ. ಒಟ್ಟಿನಲ್ಲಿ ಭಾರತ ಇವರ ಯಾವುದೇ ಪಟ್ಟುಗಳಿಗೆ ಬಗ್ಗದೆ ಇರುವುದು ಈ ಫಾರ್ಮ ಲಾಬಿಗಳಿಗೆ ನುಂಗಲಾರದ ತುತ್ತಾಗಿದೆ. ಭಾರತದ ಸೇವೆಯ ಭಾವ ಇವರ ವ್ಯವಹಾರಕ್ಕೆ ಅಡ್ಡಗಾಲಾಗುತ್ತಿದೆ. ಹಾಗಾಗಿ ಅವಕಾಶ ಸಿಕ್ಕ ಕಡೆಯಲ್ಲಾ ಭಾರತವನ್ನು ಹಣಿಯಬೇಕು, ಅವಮಾನಿಸಬೇಕು. ಮೊನ್ನೆ ಬೆಂಗಳೂರಿನ ಮಹಿಳ ಇನ್ಸ್ಪೆಕ್ಟರ್ ಒಬ್ಬರು ಇದೇ ಫಾರ್ಮಾ ಲಾಭಿಯ ಬೆನ್ನು ಮುರಿಯಲು ಹೋಗಿ ಸಸ್ಪೆಂಡ್ ಆಗಿ ಮನೆಯಲ್ಲಿ ಕೂತಿದ್ದಾರೆ. ಮೋದಿಯನ್ನೇ ಬಿಡದ ಈ ಫಾರ್ಮಾ ಲಾಭಿಗಳು, ಇವರ ವಿರುದ್ಧ ತೊಡೆ ತಟ್ಟುವ ದಕ್ಷ ಅಧಿಕಾರಿಗಳನ್ನು ಸುಮ್ಮನೆ ಬಿಟ್ಟಾರಾ?  ಇವರು ಭಾರತವನ್ನು ಹಿಂದೆ ಗುಲಾಮಿತನಕ್ಕೆ ತಳ್ಳಿದ ಈಸ್ಟ್ ಇಂಡಿಯಾ ಕಂಪೆನಿಗೆ ಯಾವ ಲೆಕ್ಕದಲ್ಲೂ ಕಮ್ಮಿ ಇಲ್ಲ..!! 

ಚಿತ್ರಕೃಪೆ : biospace.com

12
ಫೆಬ್ರ

ರೈತ ಹೋರಾಟದ ಸೋಗಿನಲ್ಲಿ ಮಹಾಸಂಚು

– ರಾಕೇಶ್ ಶೆಟ್ಟಿ 

ಕಳೆದ ಮೂರ್ನಾಲ್ಕು ತಿಂಗಳಿಂದ ದೆಹಲಿಯ ಬಾಗಿಲಿಗೆ ಬಂದು ನಿಂತಿರುವ ಪಂಜಾಬ್, ಹರ್ಯಾಣ ರೈತರ ಪ್ರತಿಭಟನೆ ದಿನ ಕಳೆದಂತೆ ತನ್ನ ಅಸಲಿ ರೂಪವನ್ನು ಅದು ತೋರಿಸಲಾರಂಭಿಸಿದೆ.

ರೈತರ ಪ್ರತಿಭಟನೆಯ ನಾಯಕತ್ವ ವಹಿಸಿರುವ “ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು)” ಅಧ್ಯಕ್ಷ ರಾಕೇಶ್ ಟಿಕಾಯತ್ ಅವರು ಜೂನ್ 2020ರಲ್ಲಿ ನೀಡಿದ ಹೇಳಿಕೆಯಲ್ಲಿ, ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ಸ್ವಾಗತಿಸಿದ್ದರು. ನಮ್ಮ ಬಹುಕಾಲ ಬೇಡಿಕೆ ಈಡೇರಿತು ಎಂದಿದ್ದರು. ಆದರೆ, ಈಗ ಅದೇ ರಾಕೇಶ್ ಟಿಕಾಯತ್ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಕುಳಿತಿದ್ದಾರೆ.

ಮತ್ತೊಂದು ಕಡೆ, ತನ್ನ ಪ್ರಣಾಳಿಕೆಯಲ್ಲಿ APMC ಹಾಗೂ Essential Commodities Act ಅನ್ನು ತೆಗೆದು ಹಾಕುವುದಾಗಿ ಹೇಳಿಕೊಂಡಿತ್ತು. ಆದರೆ, ಈಗ ಅದೇ ಕಾಂಗ್ರೆಸ್ಸು ಪ್ರತಿಭಟನೆಗೆ ಬೇಕಾದ ಸಪ್ಲೈ ಮಾಡುತ್ತಿದೆ. ರೈತರನ್ನು ಎತ್ತಿಕಟ್ಟುತ್ತಿದೆ.

ಜನವರಿ 26ರ ಗಣತಂತ್ರ ದಿನದಂದು, ಈ ರೈತರ ವೇಷದ ಪ್ರತಿಭಟನಾಕಾರರು ದೆಹಲಿಯೊಗೆ ನುಗ್ಗಿ ನಡೆಸಿದ ದಾಂಧಲೆಯನ್ನೂ, ಕೆಂಪುಕೋಟೆಗೆ ಲಗ್ಗೆಯಿಟ್ಟು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದನ್ನು ಇಡೀ ಜಗತ್ತಿನ ಕಣ್ಣುಗಳು ನೋಡಿದವು. ಆವತ್ತಿನ ದಿನ ಇವರು ನಡೆಸಿದ ದಾಂಧಲೆಗೆ ಪ್ರತಿಯಾಗಿ ಪೋಲಿಸರು ಗೋಲಿಬಾರ್ ಮಾಡಬೇಕು ಮತ್ತು ಆ ಗುಂಡಿಗೆ ಒಂದಷ್ಟು ಹೆಣ್ಣು ಉರುಳಬೇಕು ಎಂದು ರೈತ ಹೋರಾಟದ ವೇಷ ತೊಟ್ಟ ತೋಳಗಳು ಬಯಸಿದ್ದವು.   ಆದರೆ, ದೆಹಲಿ ಪೋಲಿಸರು ತಾವು ಪೆಟ್ಟು ತಿಂದರೆ ಹೊರತು ಪ್ರತಿದಾಳಿ ಮಾಡದೇ ಇವರ ಪ್ಲಾನ್ ಹಾಳುಗೆಡವಿದರು. ರೈತ ನಾಯಕನೆಂದು ಕಳೆದುಕೊಳ್ಳುವ  ರಾಕೇಶ್ ಟಿಕಾಯತ್ ಅವರೇ, ಪೋಲಿಸರೇಕೆ ಗುಂಡು ಹಾರಿಸಲಿಲ್ಲ ಎಂದು ಕೇಳುತ್ತಾರೆ ಎಂದರೆ, ಇವರ ಉದ್ದೇಶ ಅರ್ಥವಾಗದೇ?

ಅವನೊಬ್ಬ ಪೋಲಿಸರ ಮೇಲೆ ಟ್ರ್ಯಾಕ್ಟರ್ ಹತ್ತಿಸಲು ಬಂದು ಪಲ್ಟಿಯಾಗಿ ಬಿದ್ದು ಸತ್ತಾಗ ಪತ್ರಕರ್ತ ರಾಜದೀಪ ಸರ್ದೇಸಾಯಿ, ಸಂಸದ ಶಶಿತರೂರ್ ಮತ್ತಿತ್ತರರು ಪೋಲಿಸರು ಗುಂಡು ಹಾರಿಸಿ ಕೊಂದರು ಎಂದು ಸುಳ್ಳು ಹರಡಲು ನೋಡಿದರು. ಅಂದರೆ ಇವರ ಇರಾದೆ ಪಕ್ಕಾ ಇತ್ತು. ಕೇಂದ್ರ ಸರ್ಕಾರ ರೈತರ ಮಾರಣ ಹೋಮ ನಡೆಸಿದೆ ಎಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುವ ಎಲ್ಲಾ ಪ್ಲಾನ್ ರೆಡಿಯಾಗಿತ್ತು.

ಅಂತಹ ದೊಡ್ಡ ಸಂಚಿನ ಸಣ್ಣ ಭಾಗವಾದ ಡಾಕ್ಯುಮೆಂಟ್ ಒಂದು ಅಪ್ಪಿತಪ್ಪಿ ಹೊರಬಿದ್ದಿದೆ.

ಸೋ ಕಾಲ್ಡ್ ರೈತ ಪ್ರತಿಭಟನೆಯೊಂದನ್ನು ಹೇಗೆ ವ್ಯವಸ್ಥಿತವಾಗಿ ನಿರ್ವಹಿಸಬೇಕು ಎನ್ನುವುದನ್ನು  ನಗರನಕ್ಸಲರು + ಖಲಿಸ್ತಾನಿಗಳಿಂದ ಕಲಿಯಬೇಕು ನೋಡಿ. ಯಾವಾಗ ದೇಶದ ಮುಂದೆ ಜನವರಿ 26ರಂದು ಇವರು ಬೆತ್ತಲಾದರೋ, ಮುಂದಿನ ಹಾರಿಸಿದ ಮೊದಲೇ ನಿರ್ಧರಿಸಿದಂತೆ ವಿದೇಶಿ ಸೆಲೆಬ್ರಿಟಿಗಳನ್ನು ಮುಂದೆ ತಂದು ನಿಲ್ಲಿಸಿದರು. ಹಾಗೆ ಎದುರು ಬಂದು ನಿಂತ ಒಂದು ಪುಟ್ಟ ಹುಡುಗಿ ಗ್ರೇಟಾ ಥುನ್ಬರ್ಗ್. ಪರಿಸರ ಹೋರಾಟಗಾರ್ತಿ ಎಂದು ಈಕೆಯನ್ನು ಪಾಶ್ಚಿಮಾತ್ಯ ಮಾಫಿಯಾಗಳು ಬಿಂಬಿಸಿ ಸೆಲೆಬ್ರಿಟಿ ಪಟ್ಟ ಕಟ್ಟಿವೆ. 

ಈ ಎಳಸು ಹುಡುಗಿ, ಫೆಬ್ರುವರಿ 3ರಂದು ರೈತ ಹೋರಾಟಕ್ಕೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿ, ಅದರಲ್ಲಿ ಎಡವಟ್ಟಾಗಿ ಈ ಮಹಾ ಹಂಚಿನ Document ಹೊರಗೆ ಬಿಟ್ಟಿದ್ದಾಳೆ. (ಕಡೆಗೆ ಆ ಟ್ವೀಟನ್ನು ಅವಳಿಂದ ಡಿಲೀಟ್ ಮಾಡಿಸಿದ್ದಾರೆ)

ಆ ಡಾಕ್ಯುಮೆಂಟಿನಲ್ಲಿ ಹೇಗೆ ಟ್ವೀಟ್ ಮಾಡಬೇಕು, ಯಾರನ್ನು ಟ್ಯಾಗ್ ಮಾಡಬೇಕು ಎನ್ನುವ ಮಾಹಿತಿಗಳಿವೆ. ವಿಶ್ವಸಂಸ್ಥೆ, ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳು, ಬ್ರಿಟನ್ ಪ್ರಧಾನಿಯನ್ನು ಭಾರತದ ಮೇಲೆ ಒತ್ತಡ ಹೇರಲು ಏನೆಲ್ಲಾ ಮಾಡಬೇಕು ಎಂದು ಅದರಲ್ಲಿ ಬರೆಯಲಾಗಿದೆ. ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಪ್ರತಿಭಟನೆಯಲ್ಲಿ ನೂರಾರು ರೈತರು ಸತ್ತಿದ್ದಾರೆ, ನೂರಾರು ಜನರನ್ನು ಸರ್ಕಾರ ನಾಪತ್ತೆ ಮಾಡಿದೆ ಅಂತೆಲ್ಲಾ ಸುಳ್ಳೇ ಬರೆಯಲಾಗಿದೆ.

ದೇಶದ ವಿರುದ್ಧ ಹೇಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟ ಹೆಸರು ಮೂಡಿಸುವ ಪ್ರಯತ್ನ ನೋಡಿ. 26ನೇ ತಾರೀಖಿನಂದು ಇವರು ಗಲಭೆ ಎಬ್ಬಿಸಿದಾಗ ಅಪ್ಪಿ ತಪ್ಪಿ ಪೋಲಿಸರು ಒಂದೇ ಒಂದು ಗುಂಡು ಹಾರಿಸಿ ಯಾವನಾದರೂ ಸತ್ತಿದ್ದರೆ, #AskIndiaWhy  ಎಂದು ದೊಡ್ಡ ಮಟ್ಟದ ಟ್ವಿಟರ್ ವಾರ್ ನಡೆಯಲಿಕ್ಕಿತ್ತು.

ಆ ಡಾಕ್ಯುಮೆಂಟಿನಲ್ಲಿ ಇರುವ ಮತ್ತೊಂದು ಅಂಶ ಅಂಬಾನಿ-ಅದಾನಿಯವರ ಜೊತೆ ಸೇರಿ ಮೋದಿ ರೈತರನ್ನು ಮುಗಿಸಲು ಹೊರಟಿದ್ದಾರೆ. ಅಂಬಾನಿ-ಅದಾನಿಗಳ ಕಂಪೆನಿಗಳ ಎದುರು ಪ್ರತಿಭಟಿಸಿ ಅವರ ವಸ್ತುಗಳನ್ನು ಬಹಿಷ್ಕರಿಸಿ ಎಂದು ಕರೆ ನೀಡಿದ್ದಾರೆ. ಆದರೆ, ವಿಚಿತ್ರವೆಂದರೆ ಈ ರೈತರ ಐಷಾರಾಮಿ ಪ್ರತಿಭಟನೆಗೆ ವಿದೇಶಿ ಕಾರ್ಪೋರೇಟ್  ಶಕ್ತಿಗಳ ನಿಗೂಢ ಬೆಂಬಲವಿದೆ. ಹೊಲದ ಕೆಲಸ ಬಿಟ್ಟು ಎರಡ್ಮೂರು ದಿನ ನಂಟರ ಮನೆಗೆ ಹೋಗಲಾಗದ ಸರಾಸರಿ ಭಾರತೀಯ ರೈತರು ಒಂದು ಕಡೆಯಿದ್ದರೆ, ಈ ಸೋಕಾಲ್ಡ್ ರೈತರು ತಿಂಗಳಾನುಗಟ್ಟಲೆ ಜಮೀನು ಬಿಟ್ಟು ಬಂದಿದ್ದಾರೆ. ಕೇಂದ್ರ ಸರ್ಕಾರ ಕಾಯ್ದೆಯನ್ನು ಎರಡರ ವರ್ಷ ತಡೆ ಹಿಡಿಯುತ್ತೇವೆ. ಪ್ರತಿಭಟನೆ ನಿಲ್ಲಿಸಿ ಎಂದರೂ ಇವರು ಕಲ್ಲು ತಯಾರಿಲ್ಲ. ಇವರ ಪ್ರತಿಭಟನೆಗೆ ದೊಡ್ಡ ದೊಡ್ಡ ಟೆಂಟುಗಳಿವೆ. ತರಹೇವಾರಿ ತಿಂಡಿ,ತಿನಿಸುಗಳಿವೆ. ಪಿಜ್ಜಾ ಪಾರ್ಟಿ, ಮದ್ಯದ ಪಾರ್ಟಿ, ಡಿಜೆ , ಸಿನಿಮಾ ಪ್ರದರ್ಶನ, ವಾಷಿಂಗ್ ಮಷೀನು, ರೊಟ್ಟಿ, ಚಪಾತಿ ಮಾಡುವ ಮಷೀನ್ ಎಲ್ಲವೂ ಇವೆ. ಇವಿಷ್ಟೇ ಅಲ್ಲ ಇವರ ಹಾರಾಟವನ್ನು ಬೆಂಬಲಿಸಿದ ಪಾಪ್ ಗಾಯಕಿ ರಿಹಾನಳ ಒಂದೇ ಒಂದು ಟ್ವೀಟಿಗೆ 2.5 ಮಿಲಿಯನ್ ಸಂದಾಯವಾಗಿದೆ ಎನ್ನುವ ಸುದ್ದಿ ಹೊರಬಿದ್ದಿದೆ. ಅಂಬಾನಿ,ಅದಾನಿಯನ್ನು ವಿರೋಧಿಸುವ ಈ ಹೋರಾಟಗಾರರಿಗೆ ಇಂತಹ ಐಷಾರಾಮಿ ಸವಲತ್ತುಗಳನ್ನು ಒದಗಿಸುತ್ತಿರುವ ಕೋಟ್ಯಾಧೀಪತಿಗಳು ಯಾರು?

ವಿಷಯ ಸ್ಪಷ್ಟವಿದೆ.  ಇವರ ಹೋರಾಟ ರೈತ ಕಾಯ್ದೆಗಳ ಬಗ್ಗೆ ಅಲ್ಲವೇ ಅಲ್ಲ. ರೈತರನ್ನು ಮುಂದಿಟ್ಟುಕೊಂಡು ನರೇಂದ್ರ ಮೋದಿಯನ್ನು ಹಣಿಯುವ, ಹಿಂಸಾಚಾರದ ಮೂಲಕ ಸರ್ಕಾರವನ್ನು ಗೋಲಿಬಾರಿನಂತ ಕಡೆಯ ಅಸ್ತ್ರ ಪ್ರಯೋಗ ಮಾಡಿಸುವುದು ಮತ್ತು ಆ ಮೂಲಕ ದೇಶದಲ್ಲಿ ಮಿಲಿಟರಿ ಆಡಳಿತವಿದೆಯೆಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುವ ಮಹಾ ಸಂಚು ಇದು.

ಆದರೆ, ಈ ನೆಲದ ಅದೃಷ್ಟ ದೊಡ್ಡದು. ದೇಶವನ್ನು ಹಾಳು ಗೆಡವಲು ಸಾವಿರಾರು ಕಳ್ಳರು ಒಂದಾದರೂ, ಅಗೋಚರ ಶಕ್ತಿಯೊಂದು ಇಂದಿಗೂ ತಲೆ ಕಾಯುತ್ತಿದೆ.

ಆಟ ಇನ್ನೂ ಮುಗಿದಿಲ್ಲ. ಈ ಅಂತರರಾಷ್ಟ್ರೀಯ ಕಳ್ಳರ ಕೂಟವನ್ನು ಮೋದಿಯವರು ಹೇಗೆ ಎದುರಿಸುತ್ತಾರೆ ಕಾದು ನೋಡಬೇಕು.

26
ಆಕ್ಟೋ

ಈಗ ರೈತನಿಗೂ ಅನಿಸುತ್ತಿದೆ, ಇದು ೨೦೨೦ರ ಭಾರತ ಎಂದು

– ಅಜಿತ್ ಶೆಟ್ಟಿ ಹೆರಂಜೆ

ಪ್ರಧಾನಿ ಮೋದಿಯವರು ೨೦೨೨ರ ಹೊತ್ತಿಗೆ ದೇಶದ ರೈತರ ಆದಾಯ ದ್ವಿಗುಣ ಮಾಡುವ ಬಗ್ಗೆ ಮಾತನಾಡಿದ್ದರು. ಇದೇ ನಿಟ್ಟಿನಲ್ಲಿ ಮೋದಿ ಸರ್ಕಾರ ಕಳೆದ ಆರು ವರ್ಷಗಳಿಂದ ದೇಶದ ಬಡವರ ಮತ್ತು ಕೃಷಿಕರ ಶ್ರೇಯೋಭಿವೃದ್ಧಿಯತ್ತ ಕೆಲಸಮಾಡಿದೆ. ಆ ಕಾರಣಕ್ಕೆ ಮೋದಿಯವರು ಜಾರಿಗೆ ತಂದ ಯೋಜನೆಗಳಾದ ಯೂರಿಯಾಕ್ಕೆ ಬೇವಿನ ಲೇಪನ ಮಾಡಿದ್ದು, ಜನ್‌ಧನ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ, ಕಿಸಾನ್ ಸಿಂಚಾಯಿ ಯೋಜನೆ, ಒಂದು ರಾಷ್ಟ್ರ ಒಂದು ಪಡಿತರ ಚೀಟಿ, ಆಯುಷ್ಮಾನ್ ಭಾರತ್ ಯೋಜನೆ, ಫಸಲ್ ಭೀಮಾ ಯೋಜನೆ, ಸೋಯ್ಲ್ ಹೆಲ್ತ್ ಕಾರ್ಡ್ ಯೋಜನೆ, ಪಾರಂಪರಿಕ ಕೃಷಿ ಯೋಜನೆ ಅಥವಾ ಇತ್ತೀಚೆಗೆ ಜಾರಿಗೆ ತಂದಿರುವ ಕೃಷಿ ಸುಧಾರಣಾ ಮಸೂದೆ ೨೦೨೦ ಇವೆಲ್ಲವೂ ಮೋದಿಯವರು ರೈತರಿಗೆ ಕೊಟ್ಟ ಮಾತಿಗೆ ಪೂರಕವಾಗಿ ಬಂದ ಯೋಜನೆಗಳು. ಚೀನಿಯರು ಭಾರತದ ಗಡಿಯಲ್ಲಿ ನಿಂತು ನಾವು ನಿಮ್ಮನ್ನು ೬೨ರಂತೆ ಹೊಸಕಿ ಹಾಕುತ್ತೇವೆ ಅಂದಾಗ ಅದಕ್ಕೆ ಅಂದಿನ ರಕ್ಷಣಾ ಮಂತ್ರಿಗಳಾದ ದಿವಂಗತ ಅರುಣ್ ಜೇಟ್ಲಿಯವರು ಮಾರ್ಮಿಕವಾಗಿ ಇದು ೬೨ರ ಭಾರತ ಅಲ್ಲ, ೨೦೨೦ರ ಭಾರತ ಅಂದಿದ್ದರು. ಅವರು ಹೇಳಿದ್ದು ದೇಶದ ಸೈನ್ಯ ಶಕ್ತಿಯ ಮಟ್ಟಿಗೆ ಸರಿಯಾಗೆ ಇತ್ತು. ಆದರೆ ಅಂದು ದೇಶದ ರೈತನಿಗೆ ಬಹುಶಃ ಇದು ೨೦೨೦ರ ಭಾರತ ಅನ್ನಿಸಿರಲಿಕ್ಕಿಲ್ಲ. ಕಾರಣ ಅವನು ಮೋದಿಯವರು ಕೃಷಿ ಸುಧಾರಣಾ ಕಾನೂನು ೨೦೨೦ ತರುವ ತನಕ ಬ್ರಿಟೀಷರ ಕಾಲೋನಿಯಲ್ ಕಾನೂನುಗಳ ಸಂತ್ರಸ್ತನಾಗಿಯೆ ಇದ್ದ. ರೈತ ತನಗೆ ಇಷ್ಟ ಬಂದ ಬೆಳೆಯನ್ನೇನೋ ಬೆಳೆಯುತ್ತಿದ್ದ. ಆದರೆ ಆತ ಅದನ್ನು ತನಗೆ ಇಷ್ಟ ಬಂದ ಜಾಗದಲ್ಲಿ ಇಷ್ಟ ಬಂದ ಬೆಲೆಗೆ, ತನಗೆ ಇಷ್ಟ ಬಂದ ವ್ಯಕ್ತಿಗೆ ಮಾರುವ ಅವಕಾಶದಿಂದ ವಂಚಿತನಾಗಿದ್ದ. ಇವನನ್ನು ದಾಸ್ಯದ ಸಂಕೋಲೆಯಿಂದ ಬಿಡುಗಡೆ ಮಾಡಿದ್ದು ಕೃಷಿ ಮಸೂದೆ-೨೦೨೦. ಮತ್ತಷ್ಟು ಓದು »

4
ಆಕ್ಟೋ

ಬಿಚ್ಚಿಟ್ಟ ದಲಿತ ಚರಿತ್ರೆ

– ಶಿವರಾಮ್ ಕಾನ್ಸೇನ್

ಐತಿಹಾಸಿಕ ವ್ಯಕ್ತಿಗಳಾದ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಪುಲೆ ಮುಂತಾದವರ ಸಾಲಿನಲ್ಲಿ ಸದಾ ನೆನಪಿಸಿಕೊಳ್ಳಬೇಕಾದ ಮತ್ತೊಬ್ಬ ಸುಧಾರಣಾವಾದಿಯ ಹೆಸರು “ಮಹಾಪ್ರಾಣ್ ಜೋಗೇಂದ್ರನಾಥ್ ಮಂಡಲ್”. ಸಾಮಾಜಿಕ-ಆರ್ಥಿಕ-ರಾಜಕೀಯ ಸ್ಥಿತ್ಯಂತರದಲ್ಲಿ ಮಹಾನ್ ವ್ಯಕ್ತಿಗಳ ಹೆಸರುಗಳು ಅನುಕೂಲಸಿಂಧು ಅನುಯಾಯಿ-ಅಭಿಮಾನಿಗಳಿಂದಾಗಿ ಹಾಗೂ ಮತರಾಜಕಾರಣದಿಂದಾಗಿ ಸದ್ಬಳಕೆಯಾದ್ದಕ್ಕಿಂತಲೂ ದುರ್ಬಳಕೆಯಾದದ್ದೇ ಹೆಚ್ಚು.!

ಬಹುಶಃ ಜೋಗೇಂದ್ರನಾಥ್ ಮಂಡಲ್ ಹೆಸರನ್ನು ಉಲ್ಲೇಖಿಸಿದರೆ ಅಥವಾ ಸ್ಮರಿಸಿದರೆ ಯಾವುದೇ ಸವಲತ್ತು-ಪದವಿ-ಪುರಸ್ಕಾರ-ಪ್ರಶಸ್ತಿಯೂ ಸಿಗದೆಂಬ ಖಾತರಿಯಿಂದಾಗಿ ಇವರನ್ನು ಇತಿಹಾಸಕಾರರು ಮರೆಮಾಚಿರಬಹುದು ! ಯಾರು ಮರೆತರೇನು? ನಿಲುಮೆಯ ರಾಕೇಶ್ ಶೆಟ್ಟಿಯವರು ಇತಿಹಾಸದ ಗರ್ಭದಿಂದ ಜೋಗೇಂದ್ರನಾಥ್ ಎಂಬ ಮಹಾಶಕ್ತಿಮಂಡಲವನ್ನು ಹೊರತೆಗೆದು ಪ್ರಾಣ ತುಂಬಿದ್ದಾರೆ.  “ಮುಚ್ಚಿಟ್ಟ ದಲಿತ ಚರಿತ್ರೆಯನ್ನು ಬಿಚ್ಚಿಟ್ಟ” ಗೆಳೆಯ ರಾಕೇಶ್ ಶೆಟ್ಟಿಯವರಿಗೆ ಹಾಗೂ ನಿಲುಮೆ ಬಳಗಕ್ಕೆ ಅಭಿನಂದನೆಗಳು. ಮತ್ತಷ್ಟು ಓದು »

27
ಸೆಪ್ಟೆಂ

ರಾಷ್ಟ್ರೀಯತೆ ಮತ್ತು ಚುನಾವಣೆ

ವರುಣ್ ಕುಮಾರ್

ಭಾರತದಲ್ಲಿ ಚುನಾವಣೆಗಳಿಗೇನೂ ಕಮ್ಮಿಯಿಲ್ಲ. ತಳಮಟ್ಟದ ಪಂಚಾಯತ್ ಗಳಿಂದ ಹಿಡಿದು ಲೋಕಸಭೆವರೆಗೂ ನಮ್ಮ ಚುನಾವಣೆಗಳ ಪಟ್ಟಿ ಇಡುತ್ತಾ ಹೋಗಬಹುದು.ಆಡಳಿತವು ಎಲ್ಲರಿಗೂ ಸಿಗಬೇಕೆನ್ನುವ ದೃಷ್ಟಿಯಲ್ಲಿ ಈ ರೀತಿಯ ವ್ಯವಸ್ಥೆಯು ಸೃಷ್ಟಿ ಮಾಡಿರುವುದು ಪ್ರಜಾಪ್ರಭುತ್ವದ ವೈಶಿಷ್ಟತೆಯೇ ಸರಿ. ಚುನಾವಣೆಯಲ್ಲಿ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಹಲವು ರೀತಿಯ ವಿಷಯಗಳು ಅವರ ಬಳಿ ಇಟ್ಟು ಪಕ್ಷಗಳು ಮತಗಳನ್ನು ಯಾಚಿಸುತ್ತವೆ. ಮತದಾರ ಯಾರಿಗೆ ಒಲಿಯುತ್ತಾನೋ ಆ ಪಕ್ಷವು ಆಡಳಿತವನ್ನು ಪಡೆಯುವಲ್ಲಿ ಸಫಲವಾಗುತ್ತದೆ.ಇದರಲ್ಲಿ ಕೆಲ ವಿಷಯಗಳು ಚುನಾವಣೆಗಳ ದಿಕ್ಕನ್ನೇ ಬದಲಿಸುವ ಸಾಧ್ಯತೆಗಳು ಇರುವುದು ವಿಶೇಷ. ೮ ತಿಂಗಳಗಳ ಹಿಂದೆಯಷ್ಟೇ ಅಭೂತಪೂರ್ವವಾಗಿ ಗೆಲುವು ಸಾಧಿಸಿದ ಬಿಜೆಪಿಯು ಇತ್ತೀಚಿಗೆ ನಡೆದ ವಿವಿಧ  ಅಸೆಂಬ್ಲಿ ಚುನಾವಣೆಗಳಲ್ಲಿ ತನ್ನ ಬಲವನ್ನು ಕಳೆದುಕೊಳ್ಳುತ್ತಿರುವ ಬಗ್ಗೆ ಒಂದಿಷ್ಟು ಮೆಲುಕು ಹಾಕೋಣ. ಮತ್ತಷ್ಟು ಓದು »