ಪೇಜಾವರ ಶ್ರೀಗಳಿಗೆ ದಲಿತರ ಮನೆ(ನ) ಇನ್ನೂ ಹತ್ತಿರವಿಲ್ಲವೇ?
ಸಾತ್ವಿಕ್ ಎನ್.ವಿ
ಉಡುಪಿಯಲ್ಲೊಂದು ಪ್ರಸಿದ್ಧ ಕಾಲೇಜು. ಪ್ರತಿವರ್ಷವೂ ಹೊಸದಾಗಿ ಬರುವ ವಿದ್ಯಾರ್ಥಿಗಳ ಜೊತೆ ಆ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಸ್ವಾಮೀಜಿಯವರೊಂದಿಗೆ ಸಂವಾದ ಕಾರ್ಯಕ್ರಮ. ಒಂದು ವರ್ಷವೂ ತಪ್ಪದೇ ಯತಿಗಳಿಗೆ ವಿದ್ಯಾರ್ಥಿಗಳು ಕೇಳುವ ಪ್ರಶ್ನೆ ‘ಸ್ವಾಮೀಜಿ ಕೃಷ್ಣಮಠದಲ್ಲಿ ಸಹಪಂಕ್ತಿ ಭೋಜನ ಯಾಕಿಲ್ಲ’ ಅಂತ. ‘ಅದು ನಮ್ಮ ಮಠದ ಸಂಪ್ರದಾಯ ಕ್ರಮ. ಅಲ್ಲದೇ ಯಾವುದೇ ಬ್ರಾಹ್ಮಣರು ‘ಅನ್ಯ’ರೊಂದಿಗಿನ ಸಹಪಂಕ್ತಿ ಭೋಜನ ಅಷ್ಟಾಗಿ ಇಷ್ಟಪಡುವುದಿಲ್ಲ’ ಎಂಬ ರೆಡಿಮೇಡ್ ಉತ್ತರ ಸ್ವಾಮೀಜಿಗಳಿಂದ. ಮರುಪ್ರಶ್ನೆ ಕೇಳಲು ಹೊರಟ ವಿದ್ಯಾರ್ಥಿಗೆ ಪಕ್ಕದಲ್ಲಿರುವ ಮೇಷ್ಟ್ರುಗಳ ಬಿರುಸುನೋಟ ರೆಡ್ ಸಿಗ್ನಲ್ ಆಗಿರುತ್ತದೆ. ಅಲ್ಲಿಗೆ ಸಂವಾದ ಕಾರ್ಯಕ್ರಮ ಮುಗಿಯುತ್ತದೆ.
ಈ ಪ್ರಸಂಗ ನೆನಪಾದದ್ದು ಪೇಜಾವರ ಶ್ರೀಗಳ ದಲಿತ ಕಾಲೋನಿಗಳ ಭೇಟಿಯನ್ನು ಪತ್ರಿಕೆಯಲ್ಲಿ ನೋಡಿದ ಸಂದರ್ಭದಲ್ಲಿ. ಸ್ವಾಮೀಜಿಯವರು ಅಲ್ಲಿನ ದಲಿತರಿಗೆ ವೈಷ್ಣವ ದೀಕ್ಷೆಯನ್ನು ನೀಡುವ ಮೂಲಕ ಜನರನ್ನು ಉತ್ತಮ ವ್ಯಕ್ತಿಗಳಾಗಿ ಪರಿವರ್ತಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದರೆ ಈ ಪ್ರಕ್ರಿಯೆ ನಮ್ಮಲ್ಲಿ ಸಾಮಾನ್ಯವಾದ ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅವು- ಈವರಗೆ ದಲಿತರು ಉತ್ತಮ ವ್ಯಕ್ತಿಗಳಾಗಿರಲಿಲ್ಲವೇ? ಸಹಪಂಕ್ತಿ ಭೋಜನಕ್ಕೆ ಒಪ್ಪದ ಮನಸ್ಸುಗಳು ಮುಂದೆ ದಲಿತರನ್ನು ಅಥವಾ ಇತರೆ ವೈಷ್ಣವ ದೀಕ್ಷೆ ಪಡೆದ ವ್ಯಕ್ತಿಗಳನ್ನು ತಮ್ಮವರೆಂದು ಒಪ್ಪಿಕೊಳ್ಳುತ್ತಾರೆಯೇ?
ಹೀಗೆಲ್ಲಾ ಉಂಟು!
ಬೃಹತ್ ಬೆಂಗಳೂರಿನ ಕೆಲವು ಅನುಭವಗಳನ್ನು ನಾನೀಗ ಹೇಳ ಹೊರಟಿರುವೆ .ನೆನಪಾದರೆ ನಗು, ಅಳು ಎರಡೂ ಬರುವ ಘಟನೆಗಳವು. ಅದೊಂದು ಶನಿವಾರ ರಜೆಯಿದ್ದ ಕಾರಣ ಸ್ನೇಹಿತೆಯ ರೂಮಿಗೆ ಹೊರಟಿದ್ದೆ. ನಾನಿದ್ದ BTM ನಿಂದ ಅಷ್ಟು ದೂರದ ಕೋರಮಂಗಲಕ್ಕೆ ಆಟೋದಲ್ಲೇ ಹೊರಟಿದ್ದೆ. .(ನನ್ನಂತಹ ಇನ್ನೊಂದು ೪ ಜನರಿದ್ದರೆ ಆಟೋದವರ ಹೊಟ್ಟೆಪಾಡು ಬಹು ಸುಲಭ !)ಕೋರಮಂಗಲ (ಮೊನ್ನೆ ಮೊನ್ನೆ ಗೊತ್ತಾಗಿದ್ದು ಹೆಸರು )ದಲ್ಲೊಂದು ಸಿಗ್ನಲ್ ಬಿತ್ತು.ಇಳಿಯಲಿರುವ ಸ್ಟಾಪ್ ಮುಂದಿತ್ತು.ನಾನು ವಾಹನದಲ್ಲಿ ಕೂತ ಪಯಣಿಗರ ಯೋಗಕ್ಷೇಮ ವಿಚಾರಿಸಲು ಬರುತ್ತಿದ್ದ ಭಿಕ್ಷುಕರು ,ಮಾರಾಟಗಾರರನ್ನು ನೋಡುತ್ತಿದ್ದೆ .ಆಗ ನನ್ನ ದೃಷ್ಟಿ ಬಿತ್ತು ನೋಡಿ, ಸಿಗ್ನಲ್ ಕೆಳಗೆ ನಿಂತ ಬೈಕ್ ಸವಾರನ ಜೊತೆ ಜಗಳ ಆಡುತ್ತಿದ್ದ ಒಬ್ಬ ಹಿಜಡಾ ಮೇಲೆ. ನಮ್ಮ ಉಡುಪಿ ,ಕುಂದಾಪುರದ ಕಡೆ ಇವರು ಬೆರಳೆಣಿಕೆಯಷ್ಟು ಇರಬಹುದು ..ಆದ್ರೆ ನಾನಂತೂ ನೋಡಿದ್ದೇ ಇಲ್ಲ, t .v ಲೆಲ್ಲಾ ನೋಡಿದ್ದಾಗ ಭಯಮಿಶ್ರಿತ ಕುತೂಹಲ ಇದ್ದೆ ಇತ್ತು .ನಾ ಕಣ್ಣು ಬಾಯಿ ಬಿಟ್ಟುಕೊಂಡು ಅವಳನ್ನೇ ನೋಡುತ್ತಿದ್ದುದು ಅವಳಿಗೆ ಅದು ಹ್ಯಾಗೆ ಗೊತ್ತಾಯ್ತೋ, ಸ್ಮೈಲ್ ಕೊಡುತ್ತಲೇ ಬಂದುಬಿಟ್ಟಳಲ್ಲ ನಮ್ಮ ಆಟೋದ ಕಡೆ !ನನ್ನ ಫ್ರೆಂಡ್ ಹೇಳಿದ್ದು ನೆನಪಾಯ್ತು ,ಅವರು ಹುಡುಗೀರ ಹತ್ತಿರ ಏನೂ ಕೇಳಲ್ಲ ಅಂತ…. !ಸುಳ್ಳೇ ಸುಳ್ಳು ಕ್ಯಾರೆ ಅನ್ನದೆ ಆಟೋ ಹತ್ತಿ ನನ್ನ ಪಕ್ಕ ಕುಳಿತು ಕೈ ಚಾಚಿದಳು.. ಅಬ್ಬಾ! ಎಂದೂ ನಂಬದ ದೇವರು ಕೂಡ ನೆನಪಿಗೆ ಬಂದುಬಿಟ್ಟ ! ಆಟೋದವರಿಗೆ ಕೊಡಲು ಕೈಯಲ್ಲೇ ಇದ್ದ ನೂರರ ನೋಟನ್ನೇ ನಡುಗುವ ಕೈಯಿಂದ ಕೊಟ್ಟುಬಿಟ್ಟೆ.ಅವಳು ಅದನ್ನು ತೆಗೆದುಕೊಂಡು ತನ್ನಲ್ಲಿದ್ದ ಐವತ್ತರ ನೋಟನ್ನು ಅದು ಹೇಗೋ ತಲೆಗೆ ಸುತ್ತು ಹಾಕಿ (ನಾ ನೋಡಲಿಲ್ಲ) ಕೊಟ್ಟು ಬಿಟ್ಟಳಪ್ಪ.ನಾ ತೊದಲುತ್ತ ಬೇಡ ಬೇಡ ಅಂದಿರಬೇಕು…ಸ್ವರ ಹೊರಗೆ ಬಂದಿದ್ದು ಅನುಮಾನ !ಅವಳು ಬೇಡ ಅನ್ನೋಲ್ಲ, ಒಳ್ಳೆದಾಗುತ್ತೆ ಅಂತ ನನ್ನ ತಲೆ ಮುಟ್ಟಿ ಕೆಳಗಿಳಿದು ಹೋಗಿಬಿಟ್ಟಳು .ಅಲ್ಲಿ ತನಕ ನಾ ಉಸಿರಾಡಿದ್ದರೆ ಕೇಳಿ !……..ಆಗ ಬಾಯಿ ತೆರೆದ ಆಟೋದವನು, “ಮ್ಯಾಡಂ ಅವರನ್ನು ಹಾಗೆಲ್ಲ ನೋಡಬಾರದು ಅಂತ..ನಮಸ್ಕಾರ !ಮೊದಲೇ ಹೇಳಿದ್ದರೆ ಏನಾಗ್ತಿತ್ತೋ !?! ..ಈಗ ಹೋಗೋವಾಗ ಎಲ್ಲಾದರೂ ಅವರನ್ನು ನೋಡಿದರೆ ಕೈಯ್ಯಲ್ಲಿದ್ದ ಮೊಬೈಲ್ ಸ್ವಿಚ್ ಆಫ್ ಆಗಿದ್ದರೂ ಕೂಡ ಅಲ್ಲಾಡದೆ ಅದನ್ನೇ ನೋಡುತ್ತಿರುತ್ತೇನೆ!
ಹ್ಮ್.. ಇದೊಂದು ಮಾಯಾನಗರೀನೆ ಹೌದು ಕಣ್ರೀ…. ಇದು ಕೊಟ್ಟ ಪಾಡು , ನಾ ಪಟ್ಟ ಬವಣೆ ಎಷ್ಟೆಲ್ಲಾ ಅಂತ ಗೊತ್ತಾ..ಬರೆಯ ಹೋದರೆ ಕಾದಂಬರಿನೇ ಆದೀತು !3 ಸ್ಟಾಪ್ ಹಿಂದೆ ಹೋದರೆ ಸಿಗೋ ಸಿಲ್ಕ್ ಬೋರ್ಡ್ ಗೆ ಹೋಗಲು ಗೊತ್ತಿಲ್ಲದೇ btm ನಿಂದ ಮೆಜೆಸ್ಟಿಕ್ ಹೋಗಿ ಅಲ್ಲಿಂದ ಸಿಲ್ಕ್ ಬೋರ್ಡ್ಗೆ ಹೋದ ಪರಮ ಬುದ್ದಿವಂತೆ ನಾನು !.ಒಬ್ಬ ಆಸಾಮಿನ ಕೇಳಿದ್ದೆ,ಸಿಲ್ಕ್ ಬೋರ್ಡ್ಗೆ ಹೋಗಬೇಕಾದ್ರೆ ಹ್ಯಾಗ್ ಹೋಗ್ಬೇಕು ಅಂತ ! ಪಾಪ ,ಗೊತ್ತಿಲ್ಲ ಅನ್ನೋಕೆ ನಾಚಿಕೆ ಆಗಿರಬೇಕು !ನೆಕ್ಸ್ಟ್ ಸ್ಟಾಪ್ಗೆ ಹೋಗಿ ಯಾರ್ನಾದ್ರೂ ಕೇಳಿ ಅಂದ .ಅದಕ್ಕೆ ಅಲ್ಲಿ ತನಕ ಯಾಕೆ ಹೋಗ್ಬೇಕು ??ಮೆಜೆಸ್ಟಿಕ್ ನಲ್ಲಿ ಎಲ್ಲ ಬಸ್ಸು ಸಿಗತ್ತೆ ಅಂತ ಅಲ್ಲಿಗೆ ಹೋಗೋಕೆ ಬಸ್ ಸ್ಸ್ಟ್ಯಾಂಡ್ ನಲ್ಲಿ ನಿಂತರೆ ಬರೋ ಬಸ್ಸುಗಳ ಮೇಲಿದ್ದ ಹೆಸರು ಕೆಂ.ಬ.ನಿ (!!?!!)ಆಮೇಲೆ ಬಂದ ಬಸ್ಸುಗಳ ಮೇಲೆ ಬರೆದಿತ್ತು ಕೆಂಪೇಗೌಡ ಬಸ್ ನಿಲ್ದಾಣ ಅಂತ !ಓಹೋ ಗೊತ್ತಾಯ್ತು ಗೊತ್ತಾಯ್ತು !ಅಲ್ಲಾ….ನಮ್ಮ ಕಡೆ ಕಂಡಕ್ಟರುಗಳು ಕಿರುಚುತ್ತಾರಪ್ಪ ಪ್ರಸ್ತುತ ನಿಲ್ದಾಣ ಮತ್ತೆ ಹೋಗಲಿರೋ ನಿಲ್ದಾಣದ ಹೆಸರನ್ನು ..ಇವರೆಲ್ಲ ಯಾಕೆ ಹಿಂಗೆ ?!ಛೆ ಸರಿಯಿಲ್ಲಪ್ಪ ಬೆಂಗಳೂರು !ಆಮೇಲೆ ಫ್ರೆಂಡ್ ಮೂಲಕ ಮೆಜೆಸ್ಟಿಕ್ ಮತ್ತೆ ಕೆಂ.ಬ.ನಿ ಎರಡೂ ಒಂದೇ ಅಂತ ಗೊತ್ತಾದಾಗ ನಗು ಬಂತು ..ಸಂಜೆ ಸಿಲ್ಕ್ ಬೋರ್ಡ್ ಅನ್ನೋದು ನಾನಿದ್ದ ಸ್ಟಾಪಿನ ೩ ಸ್ಟಾಪ್ ಹಿಂದೇನೆ ಅಂತ ಗೊತ್ತಾದಾಗ ನಗು ,ಅಳು ಎರಡೂ ಬಂತು ! ಮತ್ತಷ್ಟು ಓದು 
ಮುಖ್ಯಮಂತ್ರಿಯೂ ಮತ್ತು ನಲ್ವತ್ತು ಜನ…
ಭಾಗ ೧
ಭಾರತದ ಇತಿಹಾಸದಲ್ಲೇ ಕಾಣದಷ್ಟು ಕರಾಳ ದಿನ ೨೨ನೇ ಜನವರಿ ೨೦೧೧, ಆಡಳಿತ ಪಕ್ಷವೇ ಬಂದ್ ಕರೆ ನೀಡಿದ್ದು, ದೇಶದಲ್ಲಿ ಇದೇ ಮೊದಲು, ಒಂದೊಮ್ಮೆ ತುರ್ತು ಪರಿಸ್ಥಿತಿ ಎದುರಿಸಿದ್ದ ಭಾರತ ಸರ್ಕಾರ, ಕೆಲವೇ ದಿನಗಳಲ್ಲೇ ತನ್ನ ಸರಿ ದಾರಿಯನ್ನು ಕಂಡುಕೊಂಡು ಮುಂದೆ ಇಂತಹ ಪರಿಸ್ಥಿತಿ ಬಂದೊದಗದಂತೆ ನೋಡಿಕೊಳ್ಳುತ್ತಲೇ ಬಂದಿದೆ. ಇಂತಹ ಭವ್ಯ ಭಾರತದ ಸುದೀರ್ಘ ೬೦ ವರ್ಷಗಳ ಇತಿಹಾಸದಲ್ಲಿ ಇಂದು ಕರ್ನಾಟಕಕ್ಕೆ ಕಪ್ಪುಚುಕ್ಕೆಯಾಗಿ ಪರಿಣಾಮ ಬೀರಿದೆ. ಅಷ್ಟಕ್ಕೂ ಈ ಬಂದ್ ಆಗುವುದಕ್ಕೆ ಕಾರಣವಾದರೂ ಏನು ? ಒಬ್ಬ ಕರ್ನಾಟಕದ ಮುಖ್ಯಮಂತ್ರಿ ಸ್ಥಾನ ಹೊತ್ತ ವ್ಯಕ್ತಿಗೆ ಮತ್ತೊಬ್ಬ ಮಹೋನ್ನತ ಜವಾಬ್ದಾರಿ ಹೊತ್ತ ವ್ಯಕ್ತಿಯು ರಾಜ್ಯಕ್ಕೆ ಮಾಡಿದ ಮೋಸವನ್ನು ಸಾಬೀತುಪಡಿಸಲು ಅವಕಾಶ ನೀಡಿದ್ದು, ಅದು ತಪ್ಪೇ ? ಹಾಗಾದರೆ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿರುವ ವ್ಯಕ್ತಿ ತಪ್ಪೇ ಮಾಡಲಾರನೇ ? ಕೇವಲ ಜನ ಸಾಮಾನ್ಯರು ಮಾತ್ರ ತಪ್ಪು ಮಾಡುವರೇ ? ಅವರಿಗೆ ಮಾತ್ರ ಶಿಕ್ಷೆಯೇ ?
ಆದದ್ದೇನು ………?
ಕರ್ನಾಟಕದ ಇಂದಿನ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರ ಅಖಂಡ ರಾಜಕೀಯ ಇತಿಹಾಸದಲ್ಲಿ ಸುಮಾರು ವರ್ಷ ವಿರೋಧ ಪಕ್ಷದಲ್ಲೇ ಉತ್ತಮ ಕೆಲಸಮಾಡಿ ಜನಮನ್ನಣೆ ಪಡೆದವರು, ಅಲ್ಲಿ ಯಡಿಯೂರಪ್ಪನವರ ಕೆಲಸಕ್ಕಿಂತ ಕರ್ನಾಟಕದ ಜನತೆಗೆ ಒಂದೇ ಪಕ್ಷ ಅಥವಾ ಆಡಳಿತದ ಚುಕ್ಕಾಣಿ ಹಿಡಿದು ಅಭಿವೃದ್ದಿಯ ಮಂತ್ರವನ್ನಷ್ಟೆ ಜಪಿಸಿ, ಜನರ ಆಕಾಂಕ್ಷೆಗಳಿಗೆ ಮನ್ನಣೆ ನೀಡದೇ ಇದ್ದದ್ದು, ಮತ್ತು ಬಿಜೆಪಿಯ ಮೇಲೆ ಹುಟ್ಟಿದ ಅನುಕಂಪ ೨೦೦೭-೨೦೦೮ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾಯಿತು. ಬಿಜೆಪಿ ದೊರೆತ ಮೊದಲ ಸಲದ ಆಡಳಿತ ಅವಕಾಶದಲ್ಲಿ ಮೊದಲು ನೂರಷ್ಟು ಗೊಂದಲಗಳು, ಅನುಭವದ ಕೊರತೆ ಎದ್ದು ಕಾಣುತ್ತಿತ್ತು. ಮುಖ್ಯಮಂತ್ರಿಯ ಸ್ಥಾನಕ್ಕೆ ಜಗದೀಶ್ ಶೆಟ್ಟರ್, ಅನಂತ್ ಕುಮಾರ್, ಯಡಿಯೂರಪ್ಪ, ಈಶ್ವರಪ್ಪನ ಪಟಾಲಂಗಳು ತಮ್ಮ ತಮ್ಮ ನಾಯಕರಿಗೆ ಮುಖ್ಯಮಂತ್ರಿಯ ಪಟ್ಟವನ್ನು ಅಲಂಕರಿಸಲು ಸಾಕಷ್ಟು ಶ್ರಮವನ್ನು ನಡೆಸಿದರು. ಬಿಜೆಪಿ ಹ್ಯೆಕಮಾಂಡಿನ ಕೃಪಾಕಟಾಕ್ಷದಿಂದ ಯಡಿಯೂರಪ್ಪನವರಿಗೆ ಆ ಪದವಿ ಒಲಿದದ್ದು ಈಗ ಇತಿಹಾಸ. ಮತ್ತಷ್ಟು ಓದು 
ಫೆ.9ರೊಳಗೆ ಗ್ಯಾಸ್ ಏಜೆನ್ಸಿಗೆ ರೇಷನ್ ಕಾರ್ಡ್ ಸಲ್ಲಿಸಿ
ರೇಷನ್ ಕಾರ್ಡ್ ಸಲ್ಲಿಸಿದರೆ ಮಾತ್ರ ಎಲ್ ಪಿ ಜಿ ಲಭ್ಯ – ನಿಮ್ಮ ಗ್ಯಾಸ್ ಏಜಂಟರಿಗೆ ನೀಡಲು ಫೆಬ್ರವರಿ ೯ ರವರೆಗೂ ವಿಸ್ತರಣೆ.
ಸಲ್ಲಿಸಬೇಕಾದ ವಿವರಗಳು :
೧. ನಿಮ್ಮ ಮನೆಯ ವಿದ್ಯುತ್ ಬಿಲ್ಲಿನ ನೆರಳು ಪ್ರತಿ.
೨. ಇತ್ತೀಚಿನ ಗ್ಯಾಸ್ ಡೆಲಿವರಿಯ ರಸೀತಿ.
೩. ರೇಷನ್ ಕಾರ್ಡ್ ನೆರಳು ಪ್ರತಿ (ರೇಷನ್ ಕಾರ್ಡ್ ಇಲ್ಲದವರು “ತಮ್ಮ ಬಳಿ ರೇಷನ್ ಕಾರ್ಡ್ ಇಲ್ಲವೆಂದು” ಪತ್ರ ಬರೆದುಕೊಡಬೇಕು)
ಈ ಮೇಲಿನ ವಿವರಗಳನ್ನು ಸಲ್ಲಿಸದಿದ್ದರೆ, ಗ್ಯಾಸ್ ಏಜೆಂಟರು ಮುಂದೆ ನಿಮ್ಮ ಗ್ಯಾಸ್ ಬುಕಿಂಗ್ ಮಾಡಿಕೊಳ್ಳುವುದಿಲ್ಲ. ಪ್ರಾಯಶಃ ಈ ದಿನಾಂಕವನ್ನು ವಿಸ್ತರಿಸಲೂಬಹುದು, ಆದರೂ ಮುಂದಿನ ದಿನಂಪ್ರತಿ ಕೆಲಸದಲ್ಲಿ ಮರೆತು ಹೋಗಬಹುದಾದ್ದರಿಂದ ಇಂದೇ ಅವಶ್ಯಕ ವಿವರಗಳನ್ನು ಸಲ್ಲಿಸಿ.
ಔಟ್ ಆಫ್ ಸ್ಕೂಲ್! ಶಾಲೆ ಮೆಟ್ಟಿಲು ಹತ್ತದ ೧೧-೧೪ ವರ್ಷದ ಶೇ.೬ರಷ್ಟು ಬಾಲಕಿಯರು
– ಶಂಶೀರ್, ಬುಡೋಳಿ
ಕನ್ನಡಿಗರಲ್ಲಿ ಹೆಚ್ಚುತ್ತಿರುವ ಖಾಸಗಿ ಶಾಲಾ ವ್ಯಾಮೋಹ
ದೇಶದ ಶೈಕ್ಷಣಿಕ ರಂಗ ಬದಲಾವಣೆಯ ಹಂತದಲ್ಲಿದೆ ನಿಜ. ಬಾಲಕಿಯರು ಶೈಕ್ಷಣಿಕವಾಗಿ ಮುಂದೆ ಬರಲು ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ವಿವಿಧ ರೀತಿಯ ಶೈಕ್ಷಣಿಕ ಯೋಜನೆಗಳನ್ನು ಜಾರಿಗೆ ತಂದಿದೆ ನಿಜ. ಆದರೆ ಇವತ್ತು ಭಾರತದ ಗ್ರಾಮೀಣ ಪ್ರದೇಶದ ೧೧ರಿಂದ ೧೪ ವರ್ಷದವರೆಗಿನ ಶೇ. ೬ ರಷ್ಟು ಬಾಲಕಿಯರು ಶಾಲೆಯ ಮೆಟ್ಟಿಲು ಹತ್ತಿಲ್ಲವಂತೆ. ಇದು ಅಸೆರ್-೨೦೧೦ ಇತ್ತೀಚಿಗೆ ಬಿಡುಗಡೆ ಮಾಡಿದ ಅಂಕಿ ಅಂಶ.
ಸರಕಾರಿ ರಹಿತ ಸಂಸ್ಥೆಯಾದ ಪ್ರಥಮ್ ದೇಶಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ನಡೆಸಿದ ಶೈಕ್ಷಣಿಕ ಮಟ್ಟದ ಅಂಕಿ ಅಂಶಗಳ ಕುರಿತಾದ ‘ಅಸೆರ್-೨೦೧೦’ ವರದಿಯು ದೇಶದ ಗ್ರಾಮೀಣ ಪ್ರದೇಶದ ಕೌಟುಂಬಿಕ ಪರಿಸ್ಥಿತಿ, ಶೈಕ್ಷಣಿಕ ಅರ್ಹತೆ, ಶಾಲಾ ಶಿಕ್ಷಣ ಮಟ್ಟ ಹೀಗೆ ಮುಂತಾದ ವಿಷಯಗಳನ್ನು ತೆರೆದಿಡುತ್ತದೆ. ಇದೊಂದು ದೇಶದ ಗ್ರಾಮೀಣ ಪ್ರದೇಶವನ್ನು ಗುರಿಯಾಗಿಟ್ಟುಕೊಂಡು ಮಾಡಿದಂತಹ ಅತಿ ದೊಡ್ಡ ಶೈಕ್ಷಣಿಕ ಸಮೀಕ್ಷೆಯಾಗಿದೆ.
ಶಿಕ್ಷಣ ಎಂಬುದು ಉಳ್ಳವರ ಸೊತ್ತಾಗುತ್ತಿದೆ ಎಂದು ಅನಿಸುತ್ತದೆ. ಯಾಕೆಂದರೆ ದೇಶದ ಕೆಲವೊಂದು ರಾಜ್ಯಗಳಲ್ಲಿ ಸಮಾನ ರೀತಿಯಾದಂತಹ ಶಿಕ್ಷಣ ವ್ಯವಸ್ಥೆಯಿದ್ದರೆ , ಈಗಲೂ ಕೆಲವೊಂದು ರಾಜ್ಯಗಳಲ್ಲಿ ಶಿಕ್ಷಣ ಕಲಿಸುವ ಸಮಯದಲ್ಲಿ ಬಾಲಕಿಯರಿಗೆ ಕೇವಲ ಪ್ರಾಥಮಿಕ ಅಥವಾ ಹೈಸ್ಕೂಲ್ ಶಿಕ್ಷಣ ಕಲಿಸಿ ಕಲಿಕೆಯನ್ನು ಕಲಿಸಿ ನಂತರ ಮೊಟಕುಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಹಾಗೆಯೇ ಬಾಲಕರಿಗೆ ಉನ್ನತ ಶಿಕ್ಷಣ ಕಲಿಯುವವರೆಗೆ ಅವಕಾಶ ಕೊಡಲಾಗುತ್ತದೆ. ಹೀಗಾಗಿ ಶೈಕ್ಷಣಿಕ ಮಟ್ಟದಲ್ಲಿ ಲಿಂಗ ತಾರತಮ್ಯವಾಗುತ್ತಿದೆ.
ಪ್ರಾಥಮಿಕ ಹಂತದಲ್ಲಿ ವಿಶೇಷವಾಗಿ ಬಾಲಕಿಯರಿಗಾಗಿ ಯೋಜನೆಗಳನ್ನು ಆಳವಡಿಸಿಕೊಂಡಿರಬಹುದು. ಆದರೆ ಇದು ಸಮರ್ಪಕ ಮಟ್ಟದಲ್ಲಿ ತಲುಪುವವರಿಗೆ ತಲುಪುತ್ತಿಲ್ಲ. ಸರಕಾರಿ ಶಿಕ್ಷಣ ಕೇವಲ ನೆಪ ಮಾತ್ರ ಎಂಬ ಭಾವನೆ ಕೆಲವರಲ್ಲಿ ಇರುವುದರಿಂದ್ದ ಇವತ್ತು ಮಧ್ಯಮ ವರ್ಗದ ಕುಟುಂಬದ ಜೊತೆಗೆ ಕೆಲವು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಸಹ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಲು ಹಿಂದೇಟು ಹಾಕಲಾಗುತ್ತಿದೆ ಎಂಬ ಅಂಶ ಅಚ್ಚರಿ ಮೂಡಿಸುತ್ತದೆ. ಕಾರಣ ಸರಕಾರಿ ಶಾಲೆಯ ಶಿಕ್ಷಣ ಕಲಿಕೆ ಚೆನ್ನಾಗಿಲ್ಲ ಎಂಬುದು. ಮತ್ತಷ್ಟು ಓದು 
ಡಬ್ಬಿಂಗ್ ಬೇಕೋ ಬೇಡವೋ ಅಂತ ನಿರ್ಧರಿಸಬೇಕಾದವನು “ಕನ್ನಡ ಪ್ರೇಕ್ಷಕನೋ?” ಇಲ್ಲ “ಕನ್ನಡ ಚಿತ್ರ ರಂಗವೋ?”
“ಮಚ್ಚು,ಲಾಂಗು,ಲೀಟರ್ ಗಟ್ಲೆ ರಕ್ತ ಬಿಟ್ಟು ಬೇರೆ ಇನ್ನೆನಪ್ಪ ಇದೆ ನಿಮ್ಮ ಕನ್ನಡ ಚಿತ್ರಗಳಲ್ಲಿ?, ವರ್ಷಕ್ಕೆ ಬರೋ ಚಿತ್ರಗಳಲ್ಲಿ ಅರ್ದಕ್ಕರ್ಧ ರಿಮೇಕ್ ಚಿತ್ರಗಳೇ.ಯಪ್ಪಾ!! ಬಿಡೋ ಹೋಗ್ಲಿ… ” ಅಂತ ನನ್ನ ಅನ್ಯ ಭಾಷೆಯ ಗೆಳೆಯರು ಕೂಡಿ ಗೇಲಿ ಮಾಡಿ ನಗ್ತಾ ಇದ್ರು.ನಾನಾದರು ಏನಂತ ಉತ್ತರ ಕೊಡ್ಲಿ, ಇರೋ ವಿಷ್ಯಾನೆ ತಾನೇ ಪಾಪ ಅವ್ರು ಹೇಳ್ತಾ ಇರೋದು.ಅದ್ರಲ್ಲಿ ತಪ್ಪೇನಿದೆ?,ಒಬ್ಬ ಕನ್ನಡ ಸಿನೆಮಾ ಅಭಿನಯದ ಅಭಿಮಾನಿಯಾಗಿದ್ದಕ್ಕೆ ಇಂತ ಮಾತುಗಳನ್ನ ಕೇಳಲೆಬೇಕಾಗಿತ್ತು.
ಅವ್ರು ಹೇಳಿದ್ ಮಾತ್ಗಳನ್ನ ಒಮ್ಮೆ ಕೂತು ಯೋಚಿಸಿ ನೋಡಿದೆ.ಹೌದಲ್ಲ! ನಮ್ಮ ಚಿತ್ರರಂಗದವರು ‘ಓಂ’ ಚಿತ್ರ ಗೆದ್ದಾದ ಮೇಲೆ ದಶಕಗಳ ಕಾಲ ಮಚ್ಚು,ಲಾಂಗು ಹಿಡಿದು ಟಿ.ಎಂ.ಸಿಗಟ್ಲೆ ರಕ್ತ ಚೆಲ್ಲಾಡಿ,ಮಧ್ಯೆ ‘ತವರಿನ’ ನೆನಪಾಗಿ ತೊಟ್ಟಿಲು,ಬಟ್ಟಲು,ಬಿಂದಿಗೆ,ಚೊಂಬು ಎಲ್ಲ ತಂದು,ಕಡೆಗೆ ‘ಮುಂಗಾರು ಮಳೆ’ ಬಂದ್ ಮೇಲೆ ಪ್ರವಾಹದ ರೀತಿಯಲ್ಲಿ ಪ್ರೀತಿಯ ಮಳೆ ಸುರಿಸುತ್ತಾ,ಒಂದ್ಸರಿ ತಮಿಳು ಸಿನೆಮ, ಇನ್ನೊಂದ್ಸರಿ ತೆಲುಗು ಸಿನೆಮ,ಟೈಮ್ ಸಿಕ್ಕಾಗ ಮಲಯಾಳಂ,ಹಿಂದಿ ಸಿನೆಮಾಗಳನ್ನ ನೋಡಿ ಆ ರೀಲುಗಳನ್ನ ಇಲ್ಲಿಗ್ ತಗಂಡ್ ಬಂದು,ಅದನ್ನ ಇಲ್ಲಿ ಬಿಚ್ಚಿ ಅದೇ ಕತೆಗೆ ಕನ್ನಡದ ಬಣ್ಣ (ಅದನ್ನು ಸರಿಯಾಗ್ ಬಳಿಯೋದಿಲ್ಲ ಎಷ್ಟೋ ಜನ,ಅದು ಇರ್ಲಿ ಬಿಡಿ) ಬಳಿದು ಮೇಲ್ಗಡೆ ಆ ಸ್ಟಾರು,ಈ ಸ್ಟಾರು ಅಂತ ಹೆಸ್ರಾಕಂಡು ರಿಲೀಸ್ ಮಾಡ್ತಾರೆ.ಜನ ಬಂದ್ ನೋಡ್ತಾರಾ?,ಎಲ್ಲೋ ನಮ್ಮಂತ ಕನ್ನಡ ಚಿತ್ರಗಳನ್ನ ಮಾತ್ರ ನೋಡೋ ಮಂದಿ ವಿಧಿಯಿಲ್ಲದೇ ಬಂದು ನೋಡ್ತಾರೆ.ಉಳಿದವರು ‘ಬನ್ರೋ,ಆ ಸಿನೆಮ ಬಂದೈತೆ ನೋಡನ’ ಅಂದ್ರೆ ‘ಹೇಯ್,ಹೋಗಲೇ ಅದನ್ನ ಆ ಭಾಷೆಯಲ್ಲೇ ನೋಡಿವ್ನಿ.ಯಾವ್ದಾದ್ರು ಇವರೇ ಮಾಡಿರೋ ಕತೆಯಿದ್ರೆ ಹೇಳು ಬತ್ತಿನಿ ನೋಡಕೆ’ ಅಂತಾರೆ. ಮತ್ತಷ್ಟು ಓದು 
28 ವರ್ಷಗಳ ಬಳಿಕ ಬ್ಲೂ ಪಡೆ ಗೆಲ್ಲಬಹುದೇ ವಿಶ್ವಕಪ್!?
– ಶಂಶೀರ್ ಬುಡೋಳಿ
ಜನವರಿ ೧೭. ಫೆಬ್ರವರಿ ೧೯ರಿಂದ ಎಪ್ರಿಲ್ ೨ ರವರೆಗೆ ಭಾರತ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ದೇಶಗಳ ಅತಿಥೇಯತ್ವದಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್‌ಗಾಗಿ ೧೫ ಮಂದಿ ಸದಸ್ಯರ
ಭಾರತ ತಂಡವನ್ನು ಪ್ರಕಟಿಸಿದ ದಿನ. ಸಮತೋಲನ ರೀತಿಯಲ್ಲಿ ವಿಶ್ವಕಪ್‌ಗಾಗಿ ತಂಡವನ್ನು ಆಯ್ಕೆ ಮಾಡಿರುವ ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷ ಕೃಷ್ಣಮಾಚಾರಿ ಶ್ರೀಕಾಂತ್ ಜೊತೆಗೆ ಯಶ್ಪಾಲ್ ಶರ್ಮಾ, ಸುರೇಂದ್ರ ಭಾವೆ, ನರೇಂದ್ರ ಹಿರ್ವಾನಿ ಹಾಗೂ ರಾಜಾ ವೆಂಕಟ್ ಸಮಿತಿಯು ಇಪ್ಪತ್ತೆಂಟು ವರ್ಷಗಳ ಬಳಿಕ ಭಾರತ ತಂಡ ವಿಶ್ವಕಪ್ ಗೆಲ್ಲಬೇಕೆಂಬ ನೆಲೆಯಲ್ಲಿ ತಂಡವನ್ನು ಪ್ರಕಟಿಸಿದಂತಿದೆ.
ಧೋನಿ ನೇತೃತ್ವದ ಭಾರತೀಯ ತಂಡ ಫೇವರೀಟ್ ತಂಡಗಳಲ್ಲೊಂದು ಎಂಬುದು ಸಂಶಯವಿಲ್ಲ. ಟೆಸ್ಟ್ ಅಗ್ರಸ್ಥಾನಿ ಹಾಗೂ ಏಕದಿನ ರ‍್ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನದಲ್ಲಿರುವ ಭಾರತ ಕ್ರಿಕೆಟ್ ತಂಡ ೨೦೧೧ರ ವಿಶ್ವಕಪ್ ಕ್ರಿಕೆಟ್‌ನಲ್ಲಿ ವಿಶ್ವಕಪ್ ಗೆಲ್ಲುವುದು ಅನಿವಾರ್ಯವೆಂದು ಗುರಿ ಇಟ್ಟುಕೊಂಡರೆ ಫೈನಲ್ ಹಾದಿಗೇರಬಹುದು. ತಂಡದ ಆಯ್ಕೆ ಸಮತೋಲನವಾಗಿದೆ. ಈ ಜೊತೆಗೆ ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ, ನ್ಯೂಝಿಲೆಂಡ್ ವಿರುದ್ಧ ಯಾವ ರೀತಿಯ ಪ್ರದರ್ಶನ ನೀಡುತ್ತದೆಯೆಂಬುದು ಕೌತುಕವಾಗಿದೆ. ಯಾಕೆಂದರೆ ಇವರೆಗೆ ತವರಿನಲ್ಲಿ ನಡೆದ ಸರಣಿ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಭಾರತ, ಈ ಬಾರಿಯ ವಿಶ್ವಕಪ್, ತವರಿನಲ್ಲಿ ನಡೆಯುವುದರಿಂದ್ದ ವಿಶ್ವಕಪ್ ಜಯಿಸುವ ಫೇವರೀಟ್ ತಂಡಗಳಲ್ಲೊಂದಾಗಿದೆ. ಗ್ರೂಪ್ ಬಿಯಲ್ಲಿ ಸ್ಥಾನ ಪಡೆದಿರುವ ಭಾರತದ ಫೈನಲ್ ಹಾದಿ ಸುಗಮವಾಗಿದೆ ಎಂದು ಹೇಳಬಹುದು. ಯಾಕೆಂದರೆ ಗ್ರೂಪ್ ಬಿಯಲ್ಲಿ ಭಾರತದ ಜೊತೆಗೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್‌ಇಂಡೀಸ್, ಬಾಂಗ್ಲಾದೇಶ, ಐರ್ಲೆಂಡ್ ಹಾಗೂ ಹಾಲೆಂಡ್ ತಂಡಗಳು ಸ್ಥಾನ ಪಡೆದಿವೆ.
ಕರ್ನಾಟಕವೂ ಸಹ ಭಾರತದ ಭಾಗವಾಗಿರಲಿಲ್ಲ!
– ರಾಕೇಶ್ ಶೆಟ್ಟಿ
ಅಲ್ಲಿ ರಾಷ್ಟ್ರ ಧ್ವಜ ಹಾರುತ್ತದೋ ಇಲ್ವೋ? ಹಾರಿದರೆ ಏನಾಗುತ್ತೆ? ಅನ್ನೋದಕ್ಕೆಲ್ಲ ಬಹುಷಃ ಜನವರಿ ೨೬ರ ಇಂದಿನ ದಿನ ಉತ್ತರ ಸಿಗಲಿದೆ.Fine ನಾನೀಗ ಅರುಂಧತಿ ರಾಯ್ ಅವರ ಹೇಳಿಕೆಯ ಸುತ್ತ ಮಾತಾಡ ಹೊರಟೆ.
‘ಕಾಶ್ಮೀರ ಭಾರತದ ಭಾಗವಾಗಿರಲಿಲ್ಲ’ ಅಂತೇಳಿದ ಸುದ್ದಿ ಜೀವಿ ಅರುಂಧತಿ ರಾಯ್ ಅವರಿಗೆ ‘ಕರ್ನಾಟಕವೂ ಸಹ ಭಾರತದ ಭಾಗವಾಗಿರಲಿಲ್ಲ’, ಹಾಗೆ ಇನ್ನ ಸ್ವಲ್ಪ ಕೆದಕುತ್ತ ಹಿಂದೆ ಹೋದರೆ ಖುದ್ದು ‘ಭಾರತವೂ ಸಹ ಭಾರತದ ಭಾಗವಾಗಿರಲಿಲ್ಲ’ ಅನ್ನೋದು ಗೊತ್ತಿಲ್ಲ ಅನ್ನಿಸುತ್ತೆ.
ಅಸಲಿಗೆ ಉಪಖಂಡವನ್ನ ಆಡಳಿತದ ಕಾರಣಕ್ಕಾಗಿ ‘ಭಾರತ’ ಅಂತ ಹಿಡಿದಿಟ್ಟವರು ಬ್ರಿಟಿಷರು.೪೭ರಲ್ಲಿ ಅವರು ಸ್ವಾತಂತ್ರ್ಯ ಕೊಟ್ಟು ಹೊರಡುವಾಗ ಇಲ್ಲಿ ೫೫೦ಕ್ಕು ಹೆಚ್ಚು ಸಣ್ಣ ಪುಟ್ಟ ರಾಜ ಸಂಸ್ಥಾನಗಳಿದ್ದವು. ಅವೆಲ್ಲ ಪಟೇಲರ ಮಂತ್ರದಂಡಕ್ಕೆ ತಲೆಬಾಗಿ ಭಾರತದ ಒಕ್ಕೊಟವನ್ನ ಸೇರಿಕೊಂಡವು.
ಕನ್ನಡ ಸಾಹಿತ್ಯ ಸಮ್ಮೇಳನ – ಬಂತು ನಮ್ ಬೆಂಗಳೂರಿಗೆ !
— ವಸಂತ್ ಶೆಟ್ಟಿ
41 ವರ್ಷಗಳ ದೊಡ್ಡ ಅಂತರದ ನಂತರ ಕನ್ನಡ ಸಾಹಿತ್ಯ ಸಮ್ಮೇಳನ ರಾಜಧಾನಿ ಬೆಂಗಳೂರಿಗೆ ಬರುತ್ತಿದೆ. 1970ರ ಬೆಂಗಳೂರಿಗೂ, 2011ರ ಬೆಂಗಳೂರಿಗೂ ಆಕಾಶ-ಭೂಮಿಗಿರುವಷ್ಟು
ಅಂತರವಿದೆ. ಬೆಂಗಳೂರಿನ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳಲ್ಲಿ ಗಣನೀಯವಾದ ಬದಲಾವಣೆಯಾಗಿದೆ. ಜಾಗತೀಕರಣದ ನಂತರ ಶುರುವಾದ ಐಟಿ ಕ್ರಾಂತಿ, ತದನಂತರ ಕೋಡಿ ಬಿದ್ದ ಕೆರೆಯಂತೆ ಹರಿದು ಬಂದ ವಲಸಿಗರ ಅಬ್ಬರದಲ್ಲಿ ಬೆಂಗಳೂರು ಖಂಡಿತ ಬದಲಾಗಿದೆ. ಇಂತಹ ಸಂದರ್ಭದಲ್ಲಿ ಬೆಂಗಳೂರಿಗೆ ಬರುತ್ತಿರುವ ಸಮ್ಮೇಳನ ಖಂಡಿತವಾಗಿಯೂ ಪ್ರಮುಖವಾದದ್ದು, ಅಲ್ಲಿ ಆಗಬೇಕಾದ ಚರ್ಚೆ, ನಡೆಯಬೇಕಾದ ವಿಚಾರ-ವಿಮರ್ಷೆ, ತೆಗೆದುಕೊಳ್ಳಬೇಕಾದ ನಿಲುವು ಎಲ್ಲವೂ ಬೆಂಗಳೂರು, ಕರ್ನಾಟಕದ ಮುಂದಿನ ದಾರಿಗೆ ದಿಕ್ಸೂಚಿಯಾಗಬಲ್ಲಂತದ್ದು ಅನ್ನುವುದು ನನ್ನ ಅನಿಸಿಕೆ.
ಇದೆಲ್ಲ ಸರಿ, ಆದ್ರೆ ಬೆಂಗಳೂರಲ್ಲಿ ಸಾಹಿತ್ಯ ಸಮ್ಮೇಳನ ಆದ್ರೆ ಅದಕ್ಯಾಕೆ ಅಷ್ಟು ಮಹತ್ವ ಅನ್ನಿಸಬಹುದು. ಬೆಂಗಳೂರು ಅನ್ನುವುದು ಕರ್ನಾಟಕದ ಬೇರೆ ಊರುಗಳಂತಲ್ಲ. ಇಡೀ ಕರ್ನಾಟಕದ, ಕನ್ನಡಿಗರ ಕಲಿಕೆ, ದುಡಿಮೆ, ಬದುಕು ರೂಪಿಸಬೇಕಾದ ವ್ಯವಸ್ಥೆಯಾದ ಸರ್ಕಾರ ಇಲ್ಲೇ ನೆಲೆಗೊಂಡಿರುವುದು. ಕರ್ನಾಟಕದ ಸಾಂಸ್ಕೃತಿಕ ಗುರುತುಗಳಲ್ಲೊಂದಾದ ಕನ್ನಡ ಚಿತ್ರೋದ್ಯಮ ಇಲ್ಲೇ ನೆಲೆಗೊಂಡಿರುವುದು. ಕರ್ನಾಟಕದ ಕಳೆದ 60 ವರ್ಷಗಳ ಇತಿಹಾಸದಲ್ಲಿ ರೂಪುಗೊಂಡ ಹತ್ತು ಹಲವು ನಾಡ ಪರ, ಭಾಷೆ ಪರ ಚಳುವಳಿಗಳಿಗೆ ಹೊಸ ದಿಕ್ಕು ತೋರಿಸಿದ, ಜನಾಭಿಪ್ರಾಯ ರೂಪಿಸುವಲ್ಲಿ ಕೆಲಸ ಮಾಡಿದ ಹತ್ತು ಹಲವು ಕನ್ನಡ ಚಿಂತಕರು, ಸಂಘಟನೆಗಳಿಗೂ ಬೆಂಗಳೂರು ಕೇಂದ್ರ ಸ್ಥಾನ. ಕರ್ನಾಟಕದ ರಾಜಕೀಯ, ಆಡಳಿತ ವ್ಯವಸ್ಥೆಯನ್ನು ಹದ್ದಿನ ಕಣ್ಣಿನಿಂದ ಬೆನ್ನು ಬಿಡದೇ ಕಾಯುತ್ತಿರುವ ಸುದ್ದಿ, ದೃಶ್ಯ ಮಾಧ್ಯಮಗಳಿಗೂ ಬೆಂಗಳೂರೇ ಕೇಂದ್ರ ಸ್ಥಾನ. ಇವೆಲ್ಲದಕ್ಕೂ ಮಿಗಿಲಾಗಿ ಕರ್ನಾಟಕದ ಆರ್ಥಿಕ ವ್ಯವಸ್ಥೆಯನ್ನು ಬಹು ಪಾಲು ನಿಯಂತ್ರಿಸುತ್ತಿರುವುದು ಬೆಂಗಳೂರೆಂಬ ಕೆಂಪೇಗೌಡರ ಊರು. ಕರ್ನಾಟಕದ ಪಾಲಿನ ಹೆಚ್ಚಿನ ಎಲ್ಲ stakeholders ಇರೋ ಬೆಂಗಳೂರಲ್ಲಿ, ಇವರೆಲ್ಲರ ನಡುವೆ ನಡಿತಿರೋ ಈ ಸಮ್ಮೇಳನ ನಿಜಕ್ಕೂ ಮಹತ್ವದ್ದೇ. ಮತ್ತಷ್ಟು ಓದು










