ವಿಷಯದ ವಿವರಗಳಿಗೆ ದಾಟಿರಿ

Recent Articles

29
ಆಗಸ್ಟ್

ವಿಜಯನಗರ ಸಾಮ್ರಾಜ್ಯದ ಧ್ವಜವೇ ಕರ್ನಾಟಕದ ಧ್ವಜವಾಗಲಿ

– ರಾಕೇಶ್ ಶೆಟ್ಟಿ

“ನಿಮ್ಮಲ್ಲಿ ಕತ್ತರಿಸುವ ಕತ್ತರಿಯಿದೆ. ನಮ್ಮಲ್ಲಿ ಹೊಲಿಯುವ ಸೂಜಿಯಿದೆ.ಅಂತಿಮ ಗೆಲುವು ಸೂಜಿಯದ್ದು.ಕತ್ತರಿಯದ್ದಲ್ಲ. #ಬೆಂಕಿ ಆರಿಸಿ ಬೆಳಕು ಹಚ್ಚುವ”  ಹೀಗೊಂದು ಟ್ವೀಟನ್ನು ಬಿಜೆಪಿಯವರನ್ನು ಉದ್ದೇಶಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಟ್ವಿಟರ್ ಖಾತೆಯಿಂದ ಹತ್ತು ದಿನಗಳ ಹಿಂದೆ ಮಾಡಿದ್ದರು.ಅದಾದ ನಂತರ ಸಾಹೇಬರ ಪಕ್ಷ ಮತ್ತು ಸರ್ಕಾರ ರಾಜ್ಯದಲ್ಲಿ ನಡೆಸುತ್ತಿರುವ ಚುನಾವಣಾ ರಾಜಕೀಯದ ಪರಿ ನೋಡಿದರೆ,ಸಿಎಂ ಸಿದ್ಧರಾಮಯ್ಯನವರ ಬಳಿಯಿರುವುದು ಸೂಜಿಯಲ್ಲ, ವಿಭಜನಕಾರಿ “ಕೊಡಲಿ” ಎನ್ನುವುದು ಮನವರಿಕೆಯಾಗುತ್ತಿದೆ.ಭಾಷೆ,ಧರ್ಮ,ಜಾತಿ ಹೀಗೆ ವಿಭಜನೆಯ ಎಲ್ಲಾ ದಾಳಗಳನ್ನು ಬಳಸಿಕೊಂಡು ರಾಜ್ಯ ಹಾಳಾದರೂ ಸರಿಯೇ ಮತ್ತೊಮ್ಮೆ ಅಧಿಕಾರದ ಪೀಠವೇರಬೇಕು ಎಂದು ಹೊರಟು ನಿಂತಿದ್ದಾರೆ. ಪಾಪ! ಸಾಹೇಬರಿಗೆ ಅರ್ಥವಾಗದಿರುವುದೇನೆಂದರೆ ತಾವು ಕುಳಿತಿರುವ ಕೊಂಬೆಯನ್ನೇ ಅವರು ಕಡಿಯುತ್ತಿರುವುದು. ಕೊಂಬೆ ಮುರಿದಾಗ ಅವರು ಸೇರಬಹುದಾದ ಪ್ರಪಾತದ ಅರಿವು ಸಾಹೇಬರಿಗೆ ಇಲ್ಲವೋ ಅಥವಾ ತಮ್ಮ ರಾಜಕೀಯ ಜೀವನದ ಕೊನೆ ಇನ್ನಿಂಗ್ಸನ್ನು ಗೆಲ್ಲಲ್ಲು ಸಮಾಜದ ಏಕತೆಗೆ ಭಂಗವಾದರೂ ಸರಿಯೇ ಎನ್ನುವ ಧೋರಣೆಯಲ್ಲಿದ್ದಾರೆ.

ಪ್ರತ್ಯೇಕ ಲಿಂಗಾಯಿತ ಧರ್ಮ ಬೇಕೆನ್ನುವ ಕೂಗು ಏಳಲು ಕಾರಣವಾಗಿದ್ದೆ ಸಿಎಂ ಅಭಿನಂದನಾ ಸಮಾರಂಭದಲ್ಲಿ ನೀಡಿದ ಹೇಳಿಕೆಯಿಂದಾಗಿ. ಧರ್ಮ,ಮತ, ರಿಲಿಜನ್, ಸಂಪ್ರದಾಯಗಳ ನಡುವಿನ ವ್ಯತ್ಯಾಸ ತಿಳಿಯದವರೆಲ್ಲಾ (ಕೆಲವು ಕಾವಿಧಾರಿಗಳನ್ನೂ ಸೇರಿಸಿ) ಈ ವಿಷಯದ ತರೇವಾರಿ ಮಾತನಾಡುವದು ಕೇಳಿದಾಗ ಸಮಾಜದಲ್ಲಿ ಮೂರ್ಖರ ಸಂಖ್ಯೆಯೇನು ಕಡಿಮೆಯಿಲ್ಲ ಎನ್ನುವುದು ಖಾತ್ರಿಯಾಗುತ್ತದೆ. ಆ ವಿಷಯ ಪಕ್ಕಕ್ಕಿಟ್ಟು ನೋಡಿದರೆ, ನಮ್ಮ ಸಿಎಂ ಸಾಹೇಬರು ಕೊಡಲಿ ಹಿಡಿದು ಹೊರಟಿರುವ ಮತ್ತೊಂದು ವಿಷಯ ರಾಜ್ಯಕ್ಕೊಂದು ಪ್ರತ್ಯೇಕ ಧ್ವಜ ಬೇಕು ಎಂದು ಎಬ್ಬಿಸಿರುವ ಕೂಗಿನಿಂದ. ಈ ರಾಜ್ಯದಲ್ಲಿ (ಅಧಿಕೃತ)ವಲ್ಲದಿದ್ದರೂ 1960ರಲ್ಲಿ ಮ.ರಾಮಮೂರ್ತಿಯವರೂ ಕನ್ನಡಕ್ಕೊಂದು ಧ್ವಜವನ್ನು ರೂಪಿಸಿದ್ದರು. ಇಂದಿಗೂ ಜನಮಾನಸದಲ್ಲಿ ಅದೇ ಧ್ವಜ ಚಿರಸ್ಥಾಯಿಯಾಗಿದೆ. ಗೋಕಾಕ್ ಚಳವಳಿಯಿಂದ ಹಿಡಿದು ಇತ್ತೀಚಿನ ಕಂಬಳ ಹೋರಾಟದಲ್ಲೂ ಸ್ಫೂರ್ತಿ ನೀಡಿದ್ದು ಅದೇ ಅರಿಶಿಣ-ಕುಂಕುಮದ ಧ್ವಜವೇ.

ಮತ್ತಷ್ಟು ಓದು »

28
ಆಗಸ್ಟ್

ಕಾಂಗ್ರೆಸ್ಸಿನ ವೈಚಾರಿಕತೆಯು ಇಸ್ಲಾಮಿಕ್ ಐಡಿಯಾಲಜಿಯ ಸೆಕ್ಯುಲರ್ ರೂಪವೇ?

– ವಿನಾಯಕ ಹಂಪಿಹೊಳಿ

ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷಗಳ ಪರ ವಹಿಸುವ ಬುದ್ಧಿಜೀವಿಗಳು ಮತ್ತು ಜಾಕೀರ್ ನಾಯ್ಕ್ ಮುಂತಾದ ಇಸ್ಲಾಮಿಕ್ ಐಡಿಯಾಲಜಿಯ ಪ್ರಚಾರಕರು ವಾದಿಸುವ, ಪ್ರತಿಕ್ರಿಯಿಸುವ, ಸಮರ್ಥಿಸಿಕೊಳ್ಳುವ, ವಿರೋಧಿಸುವ ರೀತಿಗಳಲ್ಲಿ ಬಹಳ ಸಾಮ್ಯತೆಗಳಿವೆ ಎಂದು ನನಗೆ ಹಲವು ಸಲ ಅನಿಸಿದ್ದಿದೆ. ಈ ಎರಡೂ ಪಂಗಡಗಳು ಬೇರೆ ಬೇರೆ ಐಡಿಯಾಲಜಿಗಳನ್ನೇ ಹೊಂದಿದ್ದರೂ ಕೂಡ ಇವು ಮಂಡಿಸುವ ವಾದಗಳ ರೂಪರೇಷೆಗಳು ಒಂದೇ ತೆರನಾಗಿವೆ. ಇದನ್ನು ಅರಿಯಲು ಈ ಎರಡೂ ಗುಂಪುಗಳ ವಾದಸರಣಿಗಳನ್ನು ಹಾಗೂ ಪ್ರತಿಕ್ರಿಯೆಗಳನ್ನು ನೋಡೋಣ.

ಇಸ್ಲಾಮಿಕ್ ಸಂಘಟನೆಗಳಿಗೆ ಇಸ್ಲಾಮಿಕ್ ಐಡಿಯಾಲಜಿಯೇ ಸರ್ವಶ್ರೇಷ್ಠವಾಗಿದೆ. ಉಳಿದ ರಿಲಿಜನ್ನುಗಳು ಸುಳ್ಳು ರಿಲಿಜನ್ನುಗಳಾಗಿವೆ. ಸಂವಿಧಾನಕ್ಕಿಂತ ಕುರಾನೇ ಶ್ರೇಷ್ಠವಾಗಿದೆ. ಆದರೆ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಬುದ್ಧಿಜೀವಿಗಳು ತಾವು ಸೆಕ್ಯುಲರ್ ಆಗಿದ್ದು, ಮೂಲಭೂತವಾದಿಗಳಲ್ಲ ಎಂಬುದನ್ನು ಪದೇ ಪದೇ ಹೇಳುತ್ತಿರುತ್ತಾರೆ. ಭಾರತದಲ್ಲಿ ಸಂವಿಧಾನವೇ ಶ್ರೇಷ್ಠವಾಗಿದ್ದು, ರಿಲಿಜನ್ನುಗಳು ವೈಯಕ್ತಿಕವೆಂದು ಅವರು ಒಪ್ಪುತ್ತಾರೆ. ಇಸ್ಲಾಮಿಕ್ ಐಡಿಯಾಲಜಿಯ ಪ್ರಚಾರಕರಂತೆ ಕುರಾನೇ ಶ್ರೇಷ್ಠವೆಂಬ ಭಾವನೆ ಬುದ್ಧಿಜೀವಿಗಳಲ್ಲಿಲ್ಲ. ಅವರು ಕುರಾನ್ ಹಾಗೂ ಬೈಬಲ್ಲನ್ನು ಏಕರೀತಿಯಲ್ಲಿ ಗೌರವಿಸಬಲ್ಲರು ಹಾಗೂ ಎರಡರಿಂದಲೂ ಸಮಾನ ಅಂತರವನ್ನು ಕಾಯ್ದುಕೊಳ್ಳಬಲ್ಲರು. ಆದರೆ ಹಿಂದೂಗಳ ಕುರಿತು, ಹಿಂದೂ ಧರ್ಮಗ್ರಂಥಗಳೆಂದು ಕರೆಯಲ್ಪಡುವ ಕೃತಿಗಳ ಕುರಿತು ಬುದ್ಧಿಜೀವಿಗಳ ಅಭಿಪ್ರಾಯವು ಇಸ್ಲಾಂ ಮುಂತಾದ ಐಡಿಯಾಲಜಿಯನ್ನು ಪ್ರತಿಪಾದಿಸುವವರ ಅಭಿಪ್ರಾಯಕ್ಕಿಂತ ಎಷ್ಟು ಭಿನ್ನವಾಗಿದೆ ಎನ್ನುವದು ಈಗಿನ ಪ್ರಶ್ನೆ.

ಮೊದಲು ಜಾಕೀರ್ ನಾಯ್ಕ್ ಮುಂತಾದ ಇಸ್ಲಾಮಿಕ ಪ್ರಚಾರಕರು ಕೆಲವು ಪ್ರಶ್ನೆಗಳನ್ನು ಹೇಗೆ ಉತ್ತರಿಸುತ್ತಾರೆ ಎಂಬುದನ್ನು ಗಮನಿಸಿ. ಉದಾಹರಣೆಗೆ, ಅಸ್ಪೃಶ್ಯತೆಗೂ ಹಾಗೂ ಮನುಸ್ಮೃತಿಗೂ ಸಂಬಂಧವಿದೆಯೇ ಎಂದು ಜಾಕೀರ್ ಮುಂತಾದವರಿಗೆ ಕೇಳಿದರೆ ಅವರು ನಿರ್ಭಿಡೆಯಿಂದ ಹೌದು ಎನ್ನುತ್ತಾರೆ. ಮನುಸ್ಮೃತಿಯಲ್ಲಿ ಶೂದ್ರರ ಮೇಲಿರುವ ನಿಬಂಧನೆಗಳನ್ನು ತಿಳಿಸುವ ಶ್ಲೋಕಗಳನ್ನೆಲ್ಲ ಉದಾಹರಿಸಿ ಅದನ್ನು ಸಾಧಿಸುತ್ತಾರೆ. ಆಗ ಅದೇ ಸ್ಮೃತಿಯಲ್ಲಿ ಬರುವ ಬ್ರಾಹ್ಮಣರ ಮೇಲಿರುವ ನಿಬಂಧನೆಗಳನ್ನು ಹಾಗೂ ಶೂದ್ರರಿಗಿರುವ ವಿನಾಯಿತಿಗಳನ್ನು ಬೇಕೆಂದೇ ಮರೆಮಾಚುತ್ತಾರೆ.

ಮತ್ತಷ್ಟು ಓದು »

27
ಆಗಸ್ಟ್

ನಮ್ಮೂರ ಹಬ್ಬ : ಚೌತ

– ಸುಜೀತ್ ಕುಮಾರ್

ಸಾಂದರ್ಭಿಕ ಚಿತ್ರ

ನಮ್ಮೂರ ಹಬ್ಬ ಪ್ರಬಂಧ ಸ್ಪರ್ಧೆಯಲ್ಲಿ ಐದನೇ ಸ್ಥಾನ ಪಡೆದ ಲೇಖನ

ಕಾಲ ವಸಂತವನ್ನು ಕಳೆದು ಉರಿ ಬೇಸಿಗೆಗೆ ಒಗ್ಗತೊಡಗಿತ್ತು. ರೆನೊಲ್ಡ್ಸ್ ಹಾಗು ‘ಟಿಕ್- ಟಿಕ್’ ಪೆನ್ನುಗಳೊಟ್ಟಿಗೆ ಗಾಜಿನ ದೇಹದಂತಹ ಪ್ಲಾಸ್ಟಿಕ್ನ ಪೆನ್ನುಗಳೂ ಮಕ್ಕಳ ಕೈಸೇರತೊಡಗಿದ್ದವು. ಟಿ.ವಿ.ಎಸ್ ಹಾಗು ಬಜಾಜ್ ಬೈಕುಗಳೊಟ್ಟಿಗೆ ಓತಿಕ್ಯಾತದ ಮುಖಕ್ಕೆ ಹೋಲುವ ಹೆಡ್ಲೈಟ್ ನ  ನವ ಮಾದರಿಯ ಬೈಕುಗಳು ರಸ್ತೆಯ ಮೇಲೆ ಕಾಣತೊಡಗಿದ್ದವು, ಫೋನೆಂದರೆ ರಸ್ತೆ ಬದಿಯ ಬೋರವೆಲ್ ನ ಕುತ್ತಿಗೆಯನ್ನು ಸಾಧ್ಯವಾದಷ್ಟು ಮೇಲಕ್ಕೆಳೆದು ನಿಲ್ಲಿಸಿರಿವ ಕಂಬಗಳು ಹಾಗು ಅವುಗಳ ಬುಡದಲ್ಲಿ ಶಾವಿಗೆ ಪಾಯಸದ ಶಾವಿಗೆಗಳಂತೆ ನುಲಿದುಕೊಂಡಿರುವ ರಾಶಿ ರಾಶಿ ವೈರುಗಳು ಎಂದರಿತ್ತದ್ದ ಎಷ್ಟೋ ಜನರಿಗೆ ಇವುಗಳ್ಯಾವುದರ  ಕಿರಿ- ಕಿರಿ ಇಲ್ಲದೆ ಜೇಬಿನ ಒಳಗೆ ಎಲ್ಲೆಂದರಲ್ಲಿಗೆ ಕೊಡೊಯ್ಯಬಲ್ಲ ಫೋನುಗಳು ಬರುತ್ತಿದೆ ಎಂದು ಕೇಳಿ ಆಶ್ಚರ್ಯ ಚಕಿತವಾಗುತ್ತಿದ್ದ ಕಾಲವದು.. ಅಲ್ಲದೆ ಪ್ರಪಂಚದ ಯಾವುದೇ ಸಮಸ್ಯೆಗಳಿಗೂ ಒಂದಿಲ್ಲೊಂದು ಉತ್ತರವನ್ನು ಕೊಡಬಲ್ಲ ‘ಗೂಗಲ್’ ಎಂಬೊಂದು ಯಂತ್ರವಿದೆ ಎಂದರೆ ಕೇಳಿದವರು ಗಹಗಹನೇ ನಕ್ಕಿ ಸುಮ್ಮನಾಗಿಬಿಡುತ್ತಿದ್ದರು. ಒಟ್ಟಿನಲ್ಲಿ ಕಾಲ ವಸಂತವನ್ನು ಕಳೆದು ಉರಿ ಬೇಸಿಗೆಗೆ ಒಗ್ಗತೊಡಗಿತ್ತು. ಮತ್ತಷ್ಟು ಓದು »

27
ಆಗಸ್ಟ್

ನಮ್ಮೂರ ಹಬ್ಬ : ಪರಿಸರಸ್ನೇಹಿ ದೊಡ್ಡಹಬ್ಬ

– ಮಾಲತಿ ಹೆಗಡೆ

ನಮ್ಮೂರ ಹಬ್ಬ ಪ್ರಬಂಧ ಸ್ಪರ್ಧೆಯಲ್ಲಿ ಏಳನೇ ಸ್ಥಾನ ಪಡೆದ ಲೇಖನ

ಬಾಲ್ಯದಲ್ಲಿ ಕಂಡ ಮಲೆನಾಡಿನ ಪರಿಸರದ ಸ್ನೇಹಿಯಾದ ದೀಪಾವಳಿ ಮನದಲ್ಲಿ ನಂದಾದೀಪದಂತೆ ಬೆಳಗುತ್ತಲೇ ಇರುತ್ತದೆ. ಅಲ್ಲಿ ದೀಪಾವಳಿಗೆ ದೊಡ್ಡಹಬ್ಬ ಎಂದು ಕರೆಯುವ ವಾಡಿಕೆ. ಮಳೆಗಾಲದ ಆರಂಭದಲ್ಲಿ ಗೊಂಡೆರು ಹೂವಿನ (ಚೆಂಡು ಹೂವಿನ) ಬೀಜ ಹಾಕಿದರೆ ದೀಪಾವಳಿಯಲ್ಲಿ ಹೂವು ಸಿಗುತ್ತದೆ ಎಂಬ ಕರಾರುವಾಕ್ಕಾದ ಲೆಕ್ಕಾಚಾರದಲ್ಲಿ ಹಬ್ಬದ ತಯಾರಿ ಶುರುವಾಗುತ್ತಿತ್ತು. ಹಬ್ಬಕ್ಕೆ ವಾರದ ಮೊದಲು ಮನೆಯ ಹೊರ ಗೋಡೆಗೆ ಹಳದಿ ಮಣ್ಣು, ಅಡುಗೆ ಮನೆಗೆ ಕೆಮ್ಮಣ್ಣು, ಕಟ್ಟಿಗೆ ಒಲೆ ಇರುವೆಡೆಗೆ ಕಪ್ಪು ಮಸಿಯನ್ನೆ ಸಾರಣೆ ಮಾಡುತ್ತಿದ್ದೆವು. ಅಣಲೆಕಾಯಿ ಮಸಿ, ಕೆಮ್ಮಣ್ಣು, ಹಳದಿ ಮಣ್ಣು ಎಲ್ಲಾ ನೀರಿನಲ್ಲಿ ಕದಡಿ ಹತ್ತಿಯ ಬಟ್ಟೆ ಮುಳುಗಿಸಿ ಮಣ್ಣಿನ ಗೋಡೆಗೆ ಬರೆಸುತ್ತಾ ಹೋಗುವ ಸಂಭ್ರಮದಲ್ಲಿ ಹಿರಿಯರೊಂದಿಗೆ ನಾವೂ ಭಾಗಿಗಳು. ಮತ್ತಷ್ಟು ಓದು »

26
ಆಗಸ್ಟ್

ನಮ್ಮೂರ ಹಬ್ಬ : ಮುಗಬಾಳ ಕರಗ ಸಂಪ್ರದಾಯ

– ಸುರೇಶ್ ಮುಗಬಾಳ್

ನಮ್ಮೂರ ಹಬ್ಬ ಪ್ರಬಂಧ ಸ್ಪರ್ಧೆಯಲ್ಲಿ ಆರನೇ ಸ್ಥಾನ ಪಡೆದ ಲೇಖನ ..

ಕರದಲ್ಲಿ ಮುಟ್ಟದೆ, ರುಂಡದಲ್ಲಿ ಧರಿಸಿ ಚಲಿಸುವುದೇ “ಕರಗ”, ಸ್ತ್ರೀ ವೇಷಧಾರಿ ಪುರುಷ (ಕರಗ ಪೂಜಾರಿ) ತನ್ನ ತಲೆಯ ಮೇಲೆ ಕರಗವನ್ನು ಹೊತ್ತು ಕುಣಿಯುವುದನ್ನು ಕಣ್ತುಂಬಿಕೊಳ್ಳುವುದೇ ಸೊಗಸು, ಮೂರು ಕಳಶಗಳನ್ನು ಒಂದರ ಮೇಲೊಂದರಂತೆ ಜೋಡಿಸಿ, ಕಳಶಗಳನ್ನು ಸುಗಂಧ ಬೀರುವ ಮಲ್ಲಿಗೆ ಹೂಗಳಿಂದ ಸಿಂಗರಿಸಿ, ಅಲಂಕೃತಗೊಂಡ ಕರಗವನ್ನು ತಲೆಯಮೇಲೆ ಹೊರುವ ಕರಗ ಪೂಜಾರಿಯು, ಎಲ್ಲೂ ಸಮತೋಲನವನ್ನು ತಪ್ಪದೆ, ಬಲಗೈನಲ್ಲಿ ಕತ್ತಿ (ಬಾಕು), ಎಡಗೈನಲ್ಲಿ ಮಂತ್ರದಂಡವನ್ನು ಹಿಡಿದು, ಘಂಟೆ ಪೂಜಾರಿಯ ಘಂಟೆ ಸದ್ದಿಗೆ, ವೀರಕುಮಾರರ “ಗೋವಿಂದ-ಗೋವಿಂದ” ಕೂಗಿಗೆ ತಾಳಬದ್ಧವಾಗಿ ಕುಣಿಯುವ ಆಚರಣೆ ಕರಗ ಶಕ್ತ್ಯೋತ್ಸವ ಎನಿಸಿಕೊಂಡಿದೆ, ಕರಗ ಪೂಜಾರಿಯು ಕಳಶವನ್ನು ತಲೆಯಮೇಲೆ ಹೊತ್ತು ಕುಣಿಯುವಾಗ ಎಂತಹ ನಾಸ್ತಿಕನ ಎದೆಯಲ್ಲೂ ಆಸ್ತಿಕತೆಯ ಪ್ರಜ್ಞೆಯನ್ನು ಬಡಿದೆಬ್ಬಿಸಿಬಿಡುತ್ತದೆ. “ಕರಗ” ಎಂದೊಡನೆ ಬೆಂಗಳೂರು ಕರಗ ನೆನಪಾಗುವುದು ಸಾಮಾನ್ಯ.. ಮೈಸೂರಿನ ದಸರ ಬಿಟ್ಟರೆ ಸಾಂಸ್ಕೃತಿಕ ಐತಿಹ್ಯವನ್ನು ಹೊಂದಿದ ಮತ್ತೊಂದು ಆಚರಣೆಯೇ ಬೆಂಗಳೂರಿನ ದ್ರೌಪತಾಂಭ ದೇವಿ ಕರಗ. ಬೆಂಗಳೂರು ಕರಗವನ್ನು ಸುಮಾರು 800 ವರುಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ ಎಂಬ ಮಾಹಿತಿ ಧರ್ಮರಾಯಸ್ವಾಮಿ ದೇವಸ್ಥಾನದ ಮೂಲ ದಾಖಲೆಗಳಲ್ಲಿ ಉಲ್ಲೇಖಿತವಾಗಿದೆ. ಬೆಂಗಳೂರು ಕರಗದ ರೀತಿಯಲ್ಲೇ ಬೆಂಗಳೂರು ನಗರದ ಸುತ್ತ-ಮುತ್ತ ಕರಗವನ್ನು ಆಚರಿಸಿಕೊಂಡು ಬರುವ ಪದ್ಧತಿಯಿದೆ. ಮುಖ್ಯವಾಗಿ ಹೊಸಕೋಟೆ, ಮಾಲೂರು, ವರ್ತೂರು, ಕೆಂಗೇರಿ ಹಾಗೂ ಆನೇಕಲ್ ಭಾಗಗಳಲ್ಲಿ ಕರಗ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗಿದೆ. ಈ ಎಲ್ಲಾ ಕರಗ ಆಚರಣೆಗಳು ಭೌಗೋಳಿಕವಾಗಿ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಆಚರಿಸಲಾಗುವುದರಿಂದ ಹೆಚ್ಚು ಪ್ರಸಿದ್ಧಿ ಪಡೆದಿವೆ. ಮತ್ತಷ್ಟು ಓದು »

25
ಆಗಸ್ಟ್

ನಮ್ಮೂರ ಹಬ್ಬ : ಗಣೇಶ ಹಬ್ಬ

ಗೀತಾ ಜಿ.ಹೆಗಡೆ, ಕಲ್ಮನೆ.

ಓಂ ನಮೋ ನಮಃಸ್ತುಭ್ಯಂ
ಗಣರಾಜ ಮಹೇಶ್ವರಃ
ಸರ್ವ ವಿಘ್ನ ಹರೋದೇವಾ
ಪ್ರಥಮಂ ತವ ವಂದನಾ||

ಈ ಶ್ಲೋಕ ನನ್ನ ಆಯಿ(ಅಮ್ಮ) ದಿನವೂ ದೇವರಿಗೆ ನಮಸ್ಕಾರ ಮಾಡುವಾಗ ಮೂರೊತ್ತೂ ಹೇಳುತ್ತಿದ್ದರು. ದಿನವೂ ಕೇಳುವ ಕಿವಿಗಳು ನನ್ನ ಬಾಯಲ್ಲಿ ಉದುರಲು ಪ್ರಾರಂಭವಾಗಿರೋದು ತೊದಲು ನುಡಿಗಳ ವಯಸ್ಸಿನಲ್ಲಿ. ಅದೂ ಆಯಿಯೊಂದಿಗೆ ಕ್ರಮೇಣ ದಿನವೂ ಲೊಚ ಲೊಚ ಭಾಷೆಯಲ್ಲಿ ಹೇಳುವಾಗ ಆಯಿಯ ಮುಖದಲ್ಲಿ ಗಿಕಿ ಗಿಕಿ ನಗು, ತನ್ನ ಮಗಳು ಮಹಾ ಬುದ್ಧಿವಂತೆ ಎಂದು ಎಲ್ಲರೆದುರು ಕೊಚ್ಚಿಕೊಂಡಿದ್ದೇ ಕೊಚ್ಚಿಕೊಂಡಿದ್ದು. ಮತ್ತಷ್ಟು ಓದು »

21
ಆಗಸ್ಟ್

ಕೇವಲ ಲಕ್ಷದಷ್ಟು ಇಂಗ್ಲಿಷ್ ಸೈನಿಕರು ಇಡೀ ಭರತಖಂಡವನ್ನು ಬುಗುರಿಯಂತೆ ಆಡಿಸಿದಾದರೂ ಹೇಗೆ?

– ಸುಜಿತ್ ಕುಮಾರ್

ಈಸ್ಟ್ ಇಂಡಿಯಾ ಕಂಪನಿಯಿಂದ ಬ್ರಿಟಿಷ್ ರಾಜ್ ವರೆಗಿನ ನಡೆ.

ಬಾಲ ಬಿಚ್ಚಿ ಕುಣಿದಾಡುತ್ತಿದ್ದ ದೇಶಗಳೆಲ್ಲವನ್ನು ಜುಟ್ಟು ಹಿಡಿದು ಟೊಂಕ ಮುರಿದು ಬಡಿದು ಹಾಕಿದ  ದೇಶವದು. ಅಮೇರಿಕ ಆಸ್ಟ್ರೇಲಿಯಾದಂತ  ಬಲಿಷ್ಠ ದೇಶಗಳೇ ಗಪ್ ಚುಪ್ ಎನ್ನುತ ಅವರ ಅಧಿಕಾರದವನ್ನು ತಮ್ಮ ಮೇಲೆ ಹರಿಯಬಿಟ್ಟುಕೊಂಡಿದ್ದವು. ಪ್ರಸ್ತುತ ಜಗತ್ತಿನ  ಕೇವಲ ಇಪ್ಪತ್ತರಿಂದ ಇಪ್ಪತ್ತೆರಡು ದೇಶಗಳನ್ನು ಒರತುಪಡಿಸಿದರೆ ಉಳಿದೆಲ್ಲ ದೇಶಗಳು ಒಂದಿಲ್ಲೊಂದು ಇತಿಹಾಸದ ಕಾಲಘಟ್ಟದಲ್ಲಿ  ಈವೊಂದು ಪುಟ್ಟ ದೇಶದಿಂದ ಆಳ್ವಿಕೆಗೊಳಲ್ಪಟ್ಟಿವೆ! ಹೆಚ್ಚೆಂದರೆ ನಮ್ಮ ಉತ್ತರಪ್ರದೇಶ ರಾಜ್ಯದಷ್ಟಿರುವ ಈ ದೇಶ ಅದೇಗೆ ವಿಶ್ವದ ನಾಲ್ಕನೇ ಒಂದರಷ್ಟು ಭಾಗವನ್ನು ತನ್ನ ಹಿಡಿತಕ್ಕೆ ಒಳಪಡಿಸಿಕೊಂಡಿತ್ತು ಎಂಬುದೇ ಪ್ರೆಶ್ನೆ. ಇನ್ನು ನಮ್ಮ ಭಾರತದ ವಿಷಯಕ್ಕೆ ಬಂದರೆ ಸಾವಿರಾರು ಮೈಲುಗಳ ದೂರ ಹಡಗುಗಳಲ್ಲಿ ಕ್ರಮಿಸಿ ಭರತಖಂಡವೆಂಬ ವಿಶ್ವದ ಏಳನೇ ಅತಿ ದೊಡ್ಡ ದೇಶವನ್ನು ಒಳಹೊಕ್ಕು ಸುಮಾರು ಇಪ್ಪತೈದು ಕೋಟಿ  ಜನರನ್ನು ಸುಮಾರು ಎರಡು ಶತಮಾನಗಳಿಗೂ ಹೆಚ್ಚಿನ ಕಾಲ ಹಿಂಡಿ ಹಿಪ್ಪೆಮಾಡಿಯಾಕಲು ಕೇವಲ ತೋಳ್ಬಲದ ಶಕ್ತಿಯೊಂದೇ ಸಾಕಾಗಿತ್ತೇ ಅಥವಾ ಕಾಲಕ್ಕೆ ತಕ್ಕಂತೆ ಹಂತ ಹಂತವಾಗಿ ಉಸಿರುಗಟ್ಟಿಸುವ ಬೇರೊಂದು ಯುಕ್ತಿಯೇ ಬೇಕಿತ್ತೆ? ಅಂತಹದೊಂದು ಕುತಂತ್ರಿ ಯುಕ್ತಿಯ ಪರಿಣಾಮವೇ ಅಂದು ಕೇವಲ ಲಕ್ಷದಷ್ಟು ಇಂಗ್ಲಿಷ್ ಸೈನಿಕರು ಇಡೀ ಭರತಖಂಡವನ್ನು ಬುಗುರಿಯಂತೆ ಆಡಿಸಲು ಸಾಧ್ಯವಾದದ್ದು. ಮತ್ತಷ್ಟು ಓದು »

18
ಆಗಸ್ಟ್

ಭಾರತದ ಮುಂದಿರುವ ಡೊಕ್ಲಮ್ ಸವಾಲು…

– ಶ್ರೇಯಾಂಕ ಎಸ್ ರಾನಡೆ

ಡೊಕ್ಲಮ್, ಭಾರತ-ಭೂತಾನ್-ಚೀನಾ ಮೂರು ದೇಶಗಳ ನಡುವಿನ ಬಹು ಆಯಕಟ್ಟಿನ 89 ಚದರ ಕಿಲೋಮೀಟರ್‍ಗಳ ವ್ಯಾಪ್ತಿಯಲ್ಲಿರುವ ಸಂಕೀರ್ಣ ಪ್ರದೇಶ. ಇದು ಭೂತಾನ್‍ನ ಪಶ್ಚಿಮ ಗಡಿ ಭಾಗದಲ್ಲಿದೆ. ಅಂದರೆ ಟಿಬೆಟ್‍ನ ಆಗ್ನೇಯ ದಿಕ್ಕಿನಲ್ಲಿದೆ. ಮುಖ್ಯವಾಗಿ ಇದು ಭಾರತಕ್ಕೆ ಮುಖ್ಯವಾಗಿರುವ ಚುಂಬಿ ಕಣಿವೆಯ ಸಂಯೋಗ ಸ್ಥಾನದಲ್ಲಿದೆ. ಅದು ಅಧಿಕೃತವಾಗಿ ಭೂತಾನ್‍ನ ಭೂಭಾಗ. ಅನೇಕ ಕಾರಣಗಳಿಂದ ಮೂರು ದೇಶಗಳಿಗೂ ಬಹುಮುಖ್ಯ ಭೂಪ್ರದೇಶ. ಈ ಪ್ರದೇಶದ ಮೇಲೆ ಹಿಡಿತ ಸಾಧಿಸುವುದೆಂದರೆ ಸಿಕ್ಕಿಂನ ಬಹು ಮೌಲ್ಯಯುತ ಚುಂಬಿ ಕಣಿವೆ, ಭೂತಾನ್ ಹಾಗೂ ಇನ್ನೂ ಮುಖ್ಯವಾಗಿ ಸಿಲಿಗುರಿ ಕಾರಿಡಾರ್ ಮುಖೇನ ಈಶಾನ್ಯ ಭಾರತದ ಎಲ್ಲಾ ಚಟುವಟಿಕೆಗಳ ಪ್ರತ್ಯಕ್ಷ ನಿಗಾ ಹಾಗೂ ಪರೋಕ್ಷವಾಗಿ ತಮ್ಮ ಹಿತಾಸಕ್ತಿಗಳಿಂದ ಪ್ರಾದೇಶಿಕ ಪ್ರಾಬಲ್ಯ ಪಡೆದಂತಾಗುತ್ತದೆ. ಹಾಗಾಗಿಯೇ ಇದು ಕೇವಲ ಮೇವು ಬೆಳೆಯುವ ಖಾಲಿ ಗುಡ್ಡದ ನಿಸ್ತೇಜ ಜಾಗವಲ್ಲ. ಮೂರು ದೇಶಗಳ ಮೇಲೆ ಪ್ರಾಬಲ್ಯ ಸಾಧಿಸಬಲ್ಲ ಶಕ್ತಿಯುಳ್ಳ ಆರ್ಥಿಕ, ರಾಜಕೀಯ, ರಾಜತಾಂತ್ರಿಕ ಮತ್ತು ಮಿಲಿಟರಿ ಕಾರಣಗಳಿಂದ ಶಕ್ತಿಸಂಪನ್ನವಾಗಿರುವ ಸುರಕ್ಷಿತ, ಅನುಕೂಲಕರ ತಾಣ. ಈ ಮೂಲಭೂತ ಉದ್ದೇಶದಿಂದ ಇದರ ಮೇಲೆ ಚೀನಾ ಹಾಗೂ ಭಾರತ ಅಪಾರ ಆಸಕ್ತಿ ವಹಿಸಿವೆ. ಮತ್ತಷ್ಟು ಓದು »

17
ಆಗಸ್ಟ್

ಚೀನಾದೊಂದಿಗೆ ಭಾರತಕ್ಕೆ ಯುದ್ಧ ಬೇಕೆ?

– ಶ್ರೇಯಾಂಕ ಎಸ್ ರಾನಡೆ

ಯುದ್ಧವಾಗಲಿದೆ. ಯುದ್ಧಕ್ಕೆ ಸನ್ನದ್ಧ. ಇನ್ನೇನು ಯುದ್ಧ ಆಗೇ ಬಿಟ್ಟಿತು. ನಾಳೆಯೇ ಯುದ್ಧ ಎಂಬಂತಹ ಪರಿಸ್ಥಿತಿಗಳು ಭಾರತ-ಚೀನಾದ ಮಧ್ಯೆ ಉದ್ಭವವಾಗಿರುವುದು ಇದೇ ಮೊದಲೇನಲ್ಲ. ಜನರ ಗಮನಕ್ಕಾಗಿ ಹಾತೊರೆಯುವ ಎರಡೂ ಕಡೆಯ ಆಕ್ರಮಣಕಾರಿ ಮಾಧ್ಯಮಗಳು, ಅವನ್ನೇ ನೆಚ್ಚಿಕೊಂಡು ವಾಸ್ತವತೆಯ ಕನಿಷ್ಟ ಮಾಹಿತಿಯೂ ಇಲ್ಲದ ದೇಶಭಕ್ತರು ಅದಾಗಲೇ ಯುದ್ಧಕ್ಕೆ ರಣಕಹಳೆಯನ್ನು ಮೊಳಗಿಸಿಯಾಗಿದೆ. ಇನ್ನು ಬಾಕಿಯಿರುವುದು ಕೇವಲ ಸೇನೆಗಳ ಗುಂಡಿನ ದಾಳಿಯಷ್ಟೇ! ಮತ್ತು ಭಾರತದ ಗೆಲುವಷ್ಟೇ. ಹೀಗೆ ಆಗಬೇಕೆನ್ನುವುದು ಎಲ್ಲಾ ಭಾರತೀಯರ ಆಸೆಯೂ ಕೂಡ. ಮತ್ತಷ್ಟು ಓದು »

17
ಆಗಸ್ಟ್

ಸ್ವಾತಂತ್ರ್ಯದ ಒಕ್ಕೊರಲ ರಾಗ “ರಾಗ್ ದೇಶ್”

– ಶ್ರೇಯಾಂಕ ಎಸ್ ರಾನಡೆ.

ಭಾರತ ದೇಶಕ್ಕೆ ಸ್ವಾತಂತ್ರ್ಯ ಹೇಗೆ ಬಂತು? ಈ ಪ್ರಶ್ನೆಯನ್ನು ನಿಮ್ಮ ಆಪ್ತರ, ಸಹೋದ್ಯೋಗಿಗಳ ಹಾಗೂ ಯಾವುದೇ ವಿದ್ಯಾರ್ಥಿಗಳ ಬಳಿ ಕೇಳಿ ನೋಡಿ. ಅದಕ್ಕೆ ನಿಮಗೆ ಸಿಗುವ ಉತ್ತರ ಗಾಂಧೀಜಿ ಕೇಂದ್ರಿತವಾಗಿರುತ್ತದೆ. ಖಂಡಿತವಾಗಿಯೂ ಸ್ವಾತಂತ್ರ್ಯ ಚಳುವಳಿಯ ಕೊನೆಯ ಘಟ್ಟದಲ್ಲಿ 1915-1947 ಗಾಂಧೀಜಿಯ ಪಾಲು ಬಹುಮುಖ್ಯವಾದದ್ದು. ಆದರೆ ಈ ದೇಶದ ಜನರ ಆಸ್ಥೆ, ಗಾಂಧೀಜಿಯ ಅಹಿಂಸಾ ಸತ್ಯಾಗ್ರಹ ಮಾತ್ರವೇ ದಪ್ಪ ಚರ್ಮದ ಬ್ರಿಟಿಷರ ಸೊಕ್ಕು ಮುರಿಯಲಿಲ್ಲ. ಅನೇಕ ಕ್ರಾಂತಿಕಾರಿಗಳು, ಸಣ್ಣ-ಪುಟ್ಟ ಹಳ್ಳಿ, ಪ್ರಾಂತ್ಯ-ಪ್ರದೇಶಗಳಲ್ಲಿ ರೈತ, ಬುಡಕಟ್ಟು ಹೀಗೆ ಅಸಂಖ್ಯಾತ ಜನರು ಆಗಾಗ್ಗೆ ಇಂಗ್ಲೀಷರ ಅಹಂಕಾರಕ್ಕೆ ಪೆಟ್ಟುಕೊಟ್ಟರೆ; ಹೊರಗಿನಿಂದ ನೇರವಾಗಿ ಹಾಗೂ ಒಳಗಿನಿಂದ ಪರೋಕ್ಷವಾಗಿ ಬ್ರಿಟಿಷರ ಸೊಕ್ಕನ್ನು, ಅವರ ಬೃಹತ್ ವಸಾಹತು ಸಾಮ್ರಾಜ್ಯದ ಅಸ್ಮಿತೆಯನ್ನೇ ಕಂಪಿಸುವಂತೆ ಮಾಡಿದ್ದು, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂದು ಹೊರಟಿದ್ದು ಸುಭಾಷ್ ಚಂದ್ರ ಬೋಸ್‍ರ ಇಂಡಿಯನ್ ನ್ಯಾಷನಲ್ ಆರ್ಮಿ. ಮತ್ತಷ್ಟು ಓದು »