ಬಾಹುಬಲಿ ಹಾಗೂ ಬುದ್ಧಿಜೀವಿಗಳು
– ವಿನಾಯಕ ಹಂಪಿಹೊಳಿ
ಇತ್ತೀಚೆಗೆ ಬಿಡುಗಡೆಯಾದ ಬಾಹುಬಲಿ-೨ ಚಿತ್ರವು ಉಳಿದೆಲ್ಲ ಚಿತ್ರಗಳ ದಾಖಲೆಗಳನ್ನೆಲ್ಲ ಮುರಿದು ಇತಿಹಾಸವನ್ನು ಸೃಷ್ಟಿಸಿತು. ಒಂದು ಸಾವಿರ ಕೋಟಿ ಗಳಿಸಿದ ಮೊತ್ತಮೊದಲ ಭಾರತೀಯ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಜನರು ಬಾಹುಬಲಿ ಚಿತ್ರದ ಎರಡೂ ಸರಣಿಗಳನ್ನು ಮನಸಾರೆ ಆನಂದಿಸಿದರು. ಬಾಹುಬಲಿಯ ಮೊದಲ ಭಾಗದಲ್ಲಿ ಕಂಡು ಬಂದಿದ್ದ ಹಲವಾರು ತಾಂತ್ರಿಕ ಹಾಗ ನಟನೆಯ ನ್ಯೂನತೆಗಳನ್ನೆಲ್ಲ ತಿದ್ದಿಸಿ, ರಾಜಮೌಳಿ ಎರಡನೇ ಭಾಗವನ್ನು ಬಹಳ ಸುಂದರವಾಗಿ ಕಟ್ಟಿಕೊಟ್ಟರು. ಕಥೆಯ ಮೊದಲ ಭಾಗದಲ್ಲಿ ಕಾಡುವ ಎಲ್ಲ ಪ್ರಶ್ನೆಗಳಿಗೂ ಕಾರಣವನ್ನು ಒದಗಿಸಿ, ಯಾವ ಪ್ರಶ್ನೆಯನ್ನೂ ಹಾಗೇ ಉಳಿಸಿಕೊಳ್ಳದೇ, ಕಥೆಯನ್ನು ಮುಗಿಸಿದ ಕೀರ್ತಿ ರಾಜಮೌಳಿಗೆ ಸಲ್ಲಬೇಕು.
ಯುದ್ಧದ ದೃಶ್ಯಗಳಂತೂ ಎರಡೂ ಚಿತ್ರಗಳಲ್ಲಿ ಬಹಳ ಚೆನ್ನಾಗಿ ಮೂಡಿಬಂದಿವೆ. ನಮ್ಮ ಪೂರ್ವಜರು ಯಾವೆಲ್ಲ ತಂತ್ರಗಳನ್ನು ಅನುಸರಿಸಿ ಯುದ್ಧಗಳನ್ನು ನಡೆಸಿದ್ದಾರೋ, ಅವೆಲ್ಲವುಗಳನ್ನೂ ರಾಜಮೌಳಿಯವರು ಕಲಾತ್ಮಕವಾಗಿ ತೋರಿಸಿದ್ದಾರೆ. ಮೇಲ್ನೋಟಕ್ಕೆ ಈ ಎಲ್ಲ ಯುದ್ಧತಂತ್ರಗಳೂ ರಾಜಮೌಳಿಯ ಕಲ್ಪನೆಯಂತೆ ಕಂಡರೂ, ಅವುಗಳಲ್ಲಿ ಬಹಳಷ್ಟು ತಂತ್ರಗಳನ್ನು ಹಿಂದೆ ನಮ್ಮ ಕ್ಷತ್ರಿಯರು ಅನುಸರಿಸಿರುವದಕ್ಕೆ ಚಾರಿತ್ರಿಕ ದಾಖಲೆಗಳಿವೆ. ಶಿವಗಾಮಿ, ದೇವಸೇನಾ, ಅವಂತಿಕಾ ಅಂಥ ಸ್ತ್ರೀ ಪಾತ್ರಗಳೂ ಕ್ಷಾತ್ರಗುಣಗಳಿಂದ ಕೂಡಿದ್ದವು. ಇದೂ ಕೂಡ ನಮ್ಮ ಚರಿತ್ರೆಯಲ್ಲಿ ಹೋರಾಡಿದ ವೀರ ವನಿತೆಯರನ್ನೇ ಬಿಂಬಿಸುತ್ತದೆ.
ಕೈ ಜಾರುತ್ತಿರುವ ಜಮ್ಮುಕಾಶ್ಮೀರ ; ನೆನಪಾಗುವ ಜಗಮೋಹನ್
– ರಾಕೇಶ್ ಶೆಟ್ಟಿ
ಕಳೆದ 5 ತಿಂಗಳಿನಲ್ಲಿ ಸೇನೆಯ ಮೇಲೆ 7 ದಾಳಿಗಳು ; ಮೇ 2ನೇ ತಾರೀಖು ಇಬ್ಬರು ಭಾರತೀಯ ಯೋಧರ ತಲೆಕಡಿಯಲಾಯಿತು;2 ಬ್ಯಾಂಕುಗಳ ದರೋಡೆ,ಹತ್ಯೆಗಳು; ರಾಜ್ಯ ಸರ್ಕಾರವೇ ಭದ್ರತಾ ದೃಷ್ಟಿಯಿಂದ 40 ಬ್ಯಾಂಕುಗಳಲ್ಲಿ ನಗದು ವ್ಯವಹಾರ ಮಾಡದಂತೆ ಸೂಚಿಸಿದ್ದು; ಸಹೋದರಿಯ ಮದುವೆಗೆಂದು ರಜೆಯಲ್ಲಿ ಮನೆಗೆ ಬಂದಿದ್ದ ಯೋಧನನ್ನು ಅಪಹರಿಸಿ,ಚಿತ್ರಹಿಂಸೆ ನೀಡಿ ಹತ್ಯೆ;ಹುತಾತ್ಮ ಯೋಧನ ಶವಯಾತ್ರೆಯಲ್ಲಿ ಕಲ್ಲು ತೂರಾಟ;ಎನ್ಕೌಂಟರಿನಲ್ಲಿ ಸತ್ತ ಉಗ್ರನ ಶವಯಾತ್ರೆಯಲ್ಲಿ ಪ್ರತ್ಯಕ್ಷವಾದ ಉಗ್ರರಿಂದ ಗಾಳಿಯಲ್ಲಿ ಗುಂಡು,ಪ್ರತೀಕಾರದ ಕೂಗು;ಆಡಳಿತಾರೂಢ ಪಿಡಿಪಿ ಪಕ್ಷದ ಪುಲ್ವಾಮ ಜಿಲ್ಲಾಧ್ಯಕ್ಷನನ್ನು ಗುಂಡಿಕ್ಕಿ ಕೊಲ್ಲಲಾಯಿತು.
ಇವೆಲ್ಲ ಘನಂಧಾರಿ ಸಾಧನೆಗಳಾಗಿರುವುದು ಆಗುತ್ತಿರುವುದು ಜಮ್ಮುಕಾಶ್ಮೀರ ರಾಜ್ಯದಲ್ಲಿ.ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಉಗ್ರ ಬರ್ಹಾನ್ ವನಿಯ ಹತ್ಯೆಯ ನಂತರ ಭುಗಿಲೆದ್ದ ಹಿಂಸಾಚಾರ, Demonetization ಮತ್ತು ಸರ್ಜಿಕಲ್ ಸ್ಟ್ರೈಕ್ ನಂತರ ತಾತ್ಕಾಲಿಕವಾಗಿ ತಣ್ಣಗಾಗಿತ್ತಾದರೂ ಈಗ ಭೀಕರ ಹಂತಕ್ಕೆ ಹೊರಟಿರುವಂತೆ ತೋರುತ್ತಿದೆ.ಜಮ್ಮುಕಾಶ್ಮೀರ ರಾಜ್ಯದಿಂದ ಈಗ ಬರುತ್ತಿರುವ ಸುದ್ದಿಗಳು 90ರ ದಶಕವನ್ನು ಮತ್ತೊಮ್ಮೆ ನೆನಪಿಸುತ್ತಿರುವುದು ಸುಳ್ಳಲ್ಲ. 90ರ ದಶಕದಲ್ಲೂ ಹೀಗೆ ಕಾನೂನು-ಸುವ್ಯವಸ್ಥೆಯೆನ್ನುವುದು ಹಾಳು ಬಿದ್ದು ಹೋಗಿತ್ತು.ಆಗಲೂ ಹೀಗೆ ಉಗ್ರಗಾಮಿಗಳು ಕಾಶ್ಮೀರಿಗಳ ಮನೆಬಾಗಿಲು ತಟ್ಟುತ್ತಿದ್ದರು,ಅನಾಮತ್ತಾಗಿ ಮನೆಯಿಂದ ಎತ್ತಾಕಿಕೊಂಡು ಹೋಗಿ ಚಿತ್ರಹಿಂಸೆ ಕೊಟ್ಟು ಕೊಲ್ಲುತ್ತಿದ್ದರು.ಈಗ ಹೊತ್ತಿ ಉರಿಯುತ್ತಿರುವ ದಕ್ಷಿಣ ಕಾಶ್ಮೀರದ ಸ್ಥಿತಿ ಮತ್ತೆ 90ರ ದಶಕಕ್ಕೆ ಹೊರಳಿ ನಿಂತಂತಿದೆ.
ಅಂಕಣರಂಗ-೨ : ಡಿ. ವಿ. ಪ್ರಹ್ಲಾದ್ ಅವರ ‘ಹೊಳೆದದ್ದು ತಾರೆ … ಕೆಲವು ಸಂಪಾದಕೀಯಗಳು’ ಪುಸ್ತಕ ಪರಿಚಯ
– ಮು. ಅ ಶ್ರೀರಂಗ ಬೆಂಗಳೂರು
ಹೊಳೆದದ್ದು ತಾರೆ:
ಬೆಂಗಳೂರಿನಿಂದ ಪ್ರಕಟವಾಗುವ ಸಂಚಯ ಸಾಹಿತ್ಯ ಪತ್ರಿಕೆಯ ಸಂಪಾದಕರಾದ ಡಿ ವಿ ಪ್ರಹ್ಲಾದ್ ಅವರು ಈ ಪುಸ್ತಕದಲ್ಲಿ ‘ನಿಮ್ಮೊಡನೆ’ ಎಂಬ ಶೀರ್ಷಿಕೆಯಲ್ಲಿ ಓದುಗರ ಜತೆ ತಾವು ನಡೆದು ಬಂದ ದಾರಿಯನ್ನು ಈ ರೀತಿ ಹಂಚಿಕೊಂಡಿದ್ದಾರೆ. ‘೧೯೮೭ರಿಂದ ಬರೆದಿರುವ ಸಂಪಾದಕೀಯಗಳಲ್ಲಿ ಆಯ್ದ ಕೆಲವು ಈ ಹೊತ್ತಿಗೆಯ ರೂಪದಲ್ಲಿದೆ. ಮೊದಲ ಸಂಚಿಕೆಯಿಂದಲೂ ಸಂಪಾದಕೀಯ ಆಯಾ ಸಂದರ್ಭಕ್ಕೆ ಪ್ರತಿಸ್ಪಂದನದ ರೂಪದಲ್ಲಿರುತ್ತಿತ್ತು. ಜೆರಾಕ್ಸ್ ಫೋಟೋ ಪ್ರತಿಯ ಪತ್ರಿಕೆಯಾಗಿ ಪ್ರಕಟಗೊಳ್ಳುತ್ತಿದ್ದ ಪತ್ರಿಕೆಯ ಮೊದಲ ಬೆನ್ನುಪುಟದಲ್ಲಿ ಒಂದು ಪ್ಯಾರದಷ್ಟು ಬರೆಯಲು ಜಾಗವಿರುತ್ತಿತ್ತು. ಹಾಗೇ ಮೊದಮೊದಲ ಹದಿನಾರು ಪುಟಗಳ ಪ್ರಿಂಟು ಅವತರಣಿಕೆಯಲ್ಲೂ. ‘ಸಂಚಯ’ ಎನ್ನುವ ಗೆಳೆಯರ ಗುಂಪಿನ ಭಾಗವಾಗಿದ್ದ ಈ ಸಾಹಿತ್ಯ ಪತ್ರಿಕೆ ಮೊದಲು ಕೆಲವು ಕಾಲ ಡಿ ವಿ ಪ್ರಹ್ಲಾದ್ ಮತ್ತು ಮಂಡಳಿ ಅಂತ ಪ್ರಕಟಗೊಳ್ಳುತ್ತಿತ್ತು’. ಮಂಡಳಿಗಳು ಮುಗಿದು ಚದುರಿದ ಮೇಲೆ ಪ್ರಹ್ಲಾದರೂ ಸೇರಿದಂತೆ ಉಳಿದವರು ಮೂವರು ಮಾತ್ರ . ‘ಕೊನೆಗೆ ಉಳಿದದ್ದು ಪ್ರಹ್ಲಾದ್ ಅವರೊಬ್ಬರೇ’. ಮತ್ತಷ್ಟು ಓದು 
ಬರಗಾಲದಲ್ಲಿ ವರವಾದ ಶ್ರೀಸಂಕಲ್ಪ
– ಶಿಶಿರ್ ಅಂಗಡಿ
ಈ ಬಾರಿಯ ಭೀಕರ ಬರಗಾಲ ಮತ್ತು ಸರಕಾರದ ಅನರ್ಥದ ಕಾನೂನುಗಳು ಬೆಟ್ಟದ ತಪ್ಪಲಿನ ಸಾವಿರಾರು ಗೋವುಗಳನ್ನು ಹಾಗೂ ನೂರಾರು ಗೋಪಾಲಕರನ್ನು ಹಸಿವಿನಿಂದ ನರಳುವಂತೆ ಮಾಡಿ ಅಕ್ಷರಶಃ ಕಂಗೆಡಿಸಿದೆ.. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಅಲ್ಲಿನ ಗೋವುಗಳಿಗೆ ಮೇವೊದಗಿಸುವ ಮೂಲಕ ಆಪದ್ಬಾಂಧವರಂತೆ ಗೋವು ಮತ್ತು ಗೋವಳರ ಕಷ್ಟಕ್ಕೊದಗಿ ಬಂದವರು ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರು. ಈ 44 ದಿನಗಳಿಂದೀಚೆಗೆ ಸತತವಾಗಿ ಬೆಟ್ಟಕ್ಕೆ ಮಠ ಪೂರೈಸಿದ ಮೇವಿನ ಒಟ್ಟು ಮೊತ್ತ ೨೧೦೦ ಟನ್ ದಾಟಿದೆ. ೨ ಲಕ್ಷ ಕೇಜಿ ಮೇವುಗಳನ್ನು ದಿನವೊಂದಕ್ಕೆ ೨.೫ ಲಕ್ಷ ರೂಪಾಯಿ ವೆಚ್ಚದಲ್ಲಿ ಹದಿಮೂರು ಕೇಂದ್ರಗಳಲ್ಲಿ ಪ್ರತಿದಿನ ಸುಮಾರು ೨೦-೨೫ ಸಾವಿರ ಗೋವುಗಳಿಗೆ ಮೇವು ಒದಗಿಸಲಾಗುತ್ತಿದೆ. ದಶಕಗಳಿಂದ ಗೋರಕ್ಷಣೆಗೆ ಕಟಿಬದ್ಧರಾಗಿರುವ ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರು, ಸಾವಿನ ಅಂಚಿನಲ್ಲಿರುವ ಗೋವುಗಳನ್ನು ರಕ್ಷಿಸುವ ಮಹದುದ್ದೇಶದಿಂದ ಬೆಟ್ಟದ ತಪ್ಪಲಿನ ಎಲ್ಲ ಗೋವುಗಳಿಗೂ ಮಳೆಗಾಲ ಪ್ರಾರಂಭದವರೆಗೂ ಮೇವು ಒದಗಿಸುವ ಭರವಸೆ ನೀಡಿದ್ದರು. ಮತ್ತಷ್ಟು ಓದು 
ಕೇಳುತ್ತಿದೆಯಾ ಗೋವಿನ ಆಕ್ರಂದನ…
– ಶಾರದ ಡೈಮಂಡ್
ಜನನದಿಂದ ಮರಣ ಪರ್ಯಂತ ಹುಲು ಮಾನವರಿಗೆ ಅಮೃತ ಸಮಾನವಾದ ಹಾಲನ್ನುಣಿಸುವವಳು ಗೋಮಾತೆ. “ಗವಾಂ ಅಂಗೇಷು ತಿಷ್ಟಂತಿ ಭುವನಾನಿ ಚತುರ್ದಶ” – ಗೋವಿನ ದೇಹದ ಕಣಕಣಗಳಲ್ಲೂ ಹದಿನಾಲ್ಕು ಲೋಕಗಳನ್ನು ವ್ಯವಸ್ಥಿತವಾಗಿ ನಡೆಸತಕ್ಕ ಮೂವತ್ಮೂರು ಕೋಟಿ ದೇವತೆಗಳು ಅನ್ಯಾನ್ಯ ಸ್ಥಳಗಳಲ್ಲಿ ನೆಲೆಸಿರುತ್ತಾರೆ. ಗೋವಿನಿಂದ ದೊರಕುವ ಹಾಲು, ಮೊಸರು, ಬೆಣ್ಣೆ, ತುಪ್ಪ ಮನುಷ್ಯ ಸ್ವಾಸ್ಥಮಯ ಜೀವನವನ್ನು ನಡೆಸಲು ಆಧಾರವಾಗಿದೆ. ಗೋಮೂತ್ರ, ಗೋಮಯ ಕೃಷಿಗೆ ಜೀವಾಳ. ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಕಾಮಧೇನುವಾಗಿ ನಮ್ಮನ್ನು ಸಲಹುತ್ತಿರುವ ಗೋವಿಗೆ ಭಾರತದಲ್ಲಿ ವಿಶೇಷವಾದ ಸ್ಥಾನವಿದೆ. ಮತ್ತಷ್ಟು ಓದು 
ನನ್ನ ಮೇಲೂ ನಡೆದಿತ್ತು ಆಪರೇಷನ್ ಶಿಲುಬೆ!
– ಪ್ರವೀಣ್ ಕುಮಾರ್ ಮಾವಿನಕಾಡು
ಬೆಂಗಳೂರಿಗೆ ಕಾಲಿಟ್ಟು ಕೆಲವೇ ಸಮಯವಾಗಿತ್ತು. ಮಾರಾಟ ಪ್ರತಿನಿಧಿಯಾಗಿ ಮನೆ ಮನೆಮನೆಗಳ ಮೆಟ್ಟಿಲು ಹತ್ತಿಳಿಯುತ್ತಿದ್ದ ಸಮಯದಲ್ಲೇ ಪರಿಚಯವಾದವರು ರಾಜು ಮೆನನ್ ಎಂಬ ಕೇರಳ ಮೂಲದ ವ್ಯಕ್ತಿ. ಪರಿಚಯ ಸ್ನೇಹವಾಗಿ ಸ್ನೇಹ ವ್ಯವಹಾರಕ್ಕೆ ತಿರುಗಿದಾಗ ಪ್ರಾರಂಭವಾಗಿದ್ದೇ ಇಮೇಜ್ ಮೇಕರ್ಸ್ ಎನ್ನುವ ಕಲರ್ ವಿಸಿಟಿಂಗ್ ಕಾರ್ಡ್ ಮುದ್ರಿಸುವ ಸಣ್ಣದೊಂದು ವ್ಯವಹಾರ. ಕೇವಲ ಐದು ಸಾವಿರ ಮುಂಗಡದೊಂದಿಗೆ ಬಾಣಸವಾಡಿ ಮುಖ್ಯರಸ್ತೆಯಲ್ಲಿ ಪ್ರಾರಂಭಿಸಿದ ಆ ನಮ್ಮ ವ್ಯವಹಾರ ನಾವಂದುಕೊಂಡಷ್ಟಲ್ಲದಿದ್ದರೂ ಒಂದು ಮಟ್ಟದ ಯಶಸ್ಸು ಕಾಣತೊಡಗಿತು. ಆದರೆ ಆ ವೇಳೆಗಾಗಲೇ ಮದುವೆಯಾಗಿ ಒಂದು ಮಗುವನ್ನೂ ಹೊಂದಿದ್ದ ರಾಜು ಮೆನನ್ ಮಾಡಿಕೊಂಡ ಸಾಲ ವಿಪರೀತವಾಗಿ ವಿಸಿಟಿಂಗ್ ಕಾರ್ಡ್ಸ್ ಮುದ್ರಿಸಲು ಗಿರಾಕಿಗಳಿಂದ ನಾವು ಸಂಗ್ರಹಿಸಿದ್ದ ಮುಂಗಡ ಹಣವೂ ಸೇರಿದಂತೆ ಇದ್ದ ಬದ್ದ ಹಣವನ್ನೆಲ್ಲಾ ಎತ್ತಿಕೊಂಡು ರಾತ್ರೋ ರಾತ್ರಿ ಪರಾರಿಯಾಗಿದ್ದ. ಮತ್ತಷ್ಟು ಓದು 
ಸತ್ಯಕ್ಕೆ ಸಾವಿಲ್ಲವೆನ್ನುವುದೇನೋ ನಿಜ, ಆದರೆ ಸುಳ್ಳಿಗೆ ಕೈಕಾಲುಗಳಿವೆಯಲ್ಲಾ!
– ಹನುಮಂತ ಕಾಮತ್
ಲೋಕ ಕಲ್ಯಾಣಕ್ಕಾಗಿ ತಪೋನಿರತ ಋಷಿಮುನಿಗಳಿಗೆ ರಾಕ್ಷಸರು ಉಪಟಳವನ್ನು ಕೊಡುತ್ತಿದ್ದರು, ಋಷ್ಯಾಶ್ರಮಗಳಿಗೆ ದಾಳಿ ಮಾಡುತ್ತಿದ್ದರು ಎನ್ನುವ ಕಥೆಗಳು ಪುರಾಣಗಳಲ್ಲಿ ಪದೇಪದೇ ಬರುತ್ತವೆ. ತ್ರೇತಾಯುಗದಲ್ಲೂ, ದ್ವಾಪರದಲ್ಲೂ ರಾಕ್ಷಸರದ್ದು ಅದೇ ಬುದ್ಧಿ, ಅದೇ ಚಾಳಿ. ಲೋಕಕಲ್ಯಾಣಕ್ಕೆ ಅಡ್ಡಗಾಲು ಹಾಕುವುದೆಂದರೆ ದುಷ್ಟಶಕ್ತಿಗಳಿಗೆ ಏನೋ ಖುಷಿ. ಅಂದರೆ ಸಮಾಜದಲ್ಲಿ ಸಾತ್ವಿಕ ಗುಣ ವೃದ್ಧಿಯಾದಾಗಲೆಲ್ಲಾ ಅದನ್ನು ತಡೆಯುವ ಪ್ರವೃತ್ತಿ ಅನಾದಿಯಿಂದಲೂ ಸೃಷ್ಟಿಯಲ್ಲಿ ನಡೆಯುತ್ತಾ ಬಂದಿವೆ.
ಮತ್ತಷ್ಟು ಓದು 
ಪ್ರತಿಷ್ಠೆ ಮತ್ತು ಅನುಕಂಪದ ಸುಳಿಯಲ್ಲಿ ಉಪಚುನಾವಣೆಗಳು
– ಗೋಪಾಲಕೃಷ್ಣ
‘ಸೋ-ಕಾಲ್ಡ್ ಸ್ವಾಭಿಮಾನ’ಕ್ಕೆ ನಡೆದದ್ದು ನಂಜನಗೂಡು ಉಪಚುನಾವಣೆ, ಗೆದ್ದದ್ದು ಮಾತ್ರ ಸಿದ್ದರಾಮಯ್ಯನವರ ‘ಪ್ರತಿಷ್ಠೆ’. ‘ಪ್ರಜಾತಂತ್ರದ ಮೂಲ ಉದ್ದೇಶ’ಕ್ಕೆ ಕೊಡಲಿ ಪೆಟ್ಟು ಕೊಟ್ಟು ಗುಂಡ್ಲುಪೇಟೆಯಲ್ಲಿ ‘ಅನುಕಂಪ’ ಗೆಲುವಿನ ನಗೆ ಬೀರಿತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ಒಂದು ದೇಶ, ಒಂದು ಚುನಾವಣೆ’ಯ ಬಗ್ಗೆ ಚರ್ಚೆ ಹುಟ್ಟು ಹಾಕುತ್ತಿರುವಾಗ ಹಾಗೂ ಇದಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರೂ ದನಿಗೂಡಿಸಿರುವ ಈ ಸಂಧರ್ಭದಲ್ಲಿ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಗಳ ಅವಲೋಕನ ನಡೆಯಬೇಕಾದ ಅಗತ್ಯವಿದೆ. ಮತ್ತಷ್ಟು ಓದು 
ಅನಿವಾರ್ಯತೆ…!
– ಗೀತಾ ಹೆಗ್ಡೆ
ನಮ್ಮಿಷ್ಟದಂತೆ ಜೀವನ ಸಾಗಿಸುವುದು ಅಷ್ಟು ಸುಲಭದಲ್ಲಿಲ್ಲ. ಕೆಲವೊಂದು ಅನಿವಾರ್ಯತೆಗಳು ಎದುರಾದಾಗ ನಾವು ತಲೆ ಬಾಗಲೇ ಬೇಕು. ಹಾಗೆ ಬದುಕುವುದು ನಮಗೆ ಇಷ್ಟವಿಲ್ಲದಿದ್ದರೂ ನಮಗಾಗಿ ಅಲ್ಲದಿದ್ದರೂ ಹೆತ್ತವರಿಗಾಗಿಯೋ, ಹೆಂಡತಿಗಾಗಿಯೋ, ಮಕ್ಕಳಿಗಾಗಿಯೋ, ಬಂಧು ಬಾಂಧವರಿಗಾಗಿಯೋ ಅಥವಾ ಈ ಸಮಾಜಕ್ಕಾಗಿಯೋ ನಮ್ಮತನವನ್ನು ಬಿಟ್ಟು ಹೊಂದಾಣಿಕೆ ಮಾಡಿಕೊಳ್ಳಲೇ ಬೇಕಾಗುತ್ತದೆ. ಆಗೆಲ್ಲ ಮನಸ್ಸಿಗೆ ಅತ್ಯಂತ ನೋವಾದರೂ ಅಥವಾ ನಮ್ಮ ಕಠಿಣ ನಿರ್ಧಾರದಿಂದ ಬೇರೆಯವರಿಗೆ ನೋವಾಗುವಂತಿದ್ದರೂ ಹಾಗಿರದೆ ಗತಿ ಇಲ್ಲ. ಕಾರಣ ನಾವು ಈ ಸಮಾಜದಲ್ಲಿ ಬದುಕುತ್ತಿರುವವರು. ನಾವು ಮನುಷ್ಯ ಜನ್ಮದಲ್ಲಿ ಜನಿಸಿದವರು. ಇಲ್ಲಿ ಇತಿಹಾಸದಿಂದಲೂ ರೂಢಿಯಲ್ಲಿರುವ ಅನೇಕ ಕಟ್ಟುಪಾಡುಗಳಿವೆ. ರೀತಿ ರಿವಾಜುಗಳಿವೆ. ಇದನ್ನು ಮೀರಿ ನಡೆಯಲು ಸಾಧ್ಯವಿಲ್ಲ. ಹಾಗೇನಾದರೂ ನಡೆದುಕೊಂಡರೆ ಅದು ಹುಟ್ಟಿದ ವಂಶಕ್ಕೆ ಕಳಂಕ ತರುವುದರಲ್ಲಿ ಸಂಶಯವಿಲ್ಲ. ಮತ್ತಷ್ಟು ಓದು 
ಸಿದ್ಧಾಂತಕ್ಕಾಗಿ ಬದುಕುವ ಜೀವನ ಯಾವ ಸಂತರಿಗೂ ಕಡಿಮೆಯದ್ದಲ್ಲ..
– ಅರುಣ್ ಬಿನ್ನಡಿ
೨೫ ವರ್ಷಗಳ ಪ್ರಚಾರಕ್ ಜೀವನದಲ್ಲಿ ಗಳಿಸಿದ ಆಸ್ತಿ ಮೂರೂ ಜೊತೆ ಪಂಚೆ,ಎರಡು ಜುಬ್ಬ, ಎರಡು ಮೊಬೈಲ್, ಪುಸ್ತಕಗಳು ಜೊತೆಗೆ ಪ್ರಾಣಕೊಡುವ ಅಸಂಖ್ಯಾತ ಕಾರ್ಯಕರ್ತರು….
ಕೆಲವೊಮ್ಮೆ ಇಂದಿನ ಕರ್ನಾಟಕ ಬಿಜೆಪಿ ಯ ಸೈದ್ಧಾಂತಿಕ ತಿಕ್ಕಾಟಗಳಿಗೆ ನರೇಂದ್ರ ಮೋದಿಯೆ ಕಾರಣ ಎನ್ನಿಸಿ ಬಿಡುತ್ತದೆ, ಯುವ ಸಮುದಾಯವನ್ನು ಕಾಂಗ್ರೆಸಿನ ಪಾರಂಪರಿಕ ಓಲೈಕೆ ಹಾಗು ಜಾತಿ ರಾಜಕಾರಣದಿಂದ ರಾಷ್ಟ್ರೀಯತೆಯ ಸೈದ್ಧಾಂತಿಕ ರಾಜಕಾರಣಕ್ಕೆ, ಅಭಿವೃದ್ಧಿ ರಾಜಕಾರಣಕ್ಕೆ, ನೈತಿಕ ರಾಜಕಾರಣಕ್ಕೆ ಬದಲಾಯಿಸಿದ್ದೆ ದೊಡ್ಡ ಅಪರಾಧವಾಗಿಬಿಟ್ಟಿದೆ ಎನ್ನಬಹುದು. ಮತ್ತಷ್ಟು ಓದು 




