ವಿಷಯದ ವಿವರಗಳಿಗೆ ದಾಟಿರಿ

Recent Articles

21
ಏಪ್ರಿಲ್

ಕರ್ನಾಟಕ ಬಿಜೆಪಿಯ ಪ್ರತೀ ನಾಯಕನು ತಾವು ನಡೆದು ಬಂದ ಹಾದಿಯನ್ನು ಒಮ್ಮೆ ಹಿಂದೆ ತಿರುಗಿ ನೋಡುವ ಸಮಯ ಬಂದಿದೆ.!

– ಸಾಮಾನ್ಯ ಕಾರ್ಯಕರ್ತ.

ಉಪಚುನಾವಣೆಯ ಪಲಿತಾಂಶವನ್ನು ನೆಪವಾಗಿ ಇಟ್ಟುಕೊಂಡು ಕರ್ನಾಟಕ ಬಿಜೆಪಿಗೆ ಕೆಲವು ಮಾತುಗಳನ್ನು ಹೇಳಲೇ ಬೇಕಿದೆ. ಜನಸಾಮಾನ್ಯನ ನಡುವೆ ಬದುಕುವ ಕಾರ್ಯಕರ್ತನ ಮಾತು ಜನರ ಮಾತೇ ಆಗಿರುತ್ತದೆ. ಅವರ ಮಾತನ್ನು ಕೇಳಿದರೆ ಉತ್ತಮ ಕೇಳದಿದ್ದರೆ ನಮ್ಮ ಕರ್ಮ ಅಷ್ಟೆ. ಯಡಿಯೂರಪ್ಪನವರ ಬಗ್ಗೆ ಪ್ರತಿ ಪದ ಬರೆಯುವಾಗ ನನ್ನ ಮನಸ್ಸಿನಲ್ಲಿ ಜಾಗ್ರತೆಯ ಭಾವ ಕಣ್ಣರಳಿಸಿ ಕೂರುತ್ತದೆ, ಯಡಿಯೂರಪ್ಪನವರೇ ಹೀಗೆ ಮಾಡಿ, ಹಾಗೆ ಮಾಡಿ ಎನ್ನಲು ನನಗಿರುವ ಯೋಗ್ಯತೆಯಾದರು ಏನು ಎಂದು ನನ್ನ ಮನಸ್ಸು ಯಾವಾಗಲು ಪ್ರಶ್ನಿಸುತ್ತದೆ. ಯಡಿಯೂರಪ್ಪನವರು ನನ್ನ ಪಕ್ಷದ ಬೆಳವಣಿಗೆಗೆ ಸವೆಸಿರುವ ಕಾಲ ಚರ್ಮದ ಮೂಲೆಯಲ್ಲಿರುವ ದೂಳಿಗೆ ಸಮನಲ್ಲ ಎನ್ನುವ ಶ್ರದ್ದೆ ಇಂದಿಗೂ ಎಂದಿಗೂ ನನ್ನ ಮನಸ್ಸಿನಲ್ಲಿ ಉಳಿಸಿಕೊಳ್ಳುತ್ತೇನೆ. ಆದರೆ ಒಂದಿಡೀ ಯುವ ಸಮೂಹ ತಾಯಿಭಾರತಿಯನ್ನು ವಿಶ್ವಗುರು ಸ್ಥಾನದಲ್ಲಿ ಕುಳ್ಳಿರಿಸಲು ಎಲ್ಲವನ್ನು ತೊರೆದು ದುಡಿಯುತ್ತಿರುವಾಗ, ಆ ಕಾರ್ಯ ಸಾಧನೆಗೆ ಪೂರಕವಾಗಿ ನೀವೊಂದಿಷ್ಟು ಜರೂರ್ ಕೆಲಸಗಳನ್ನು ಮಾಡಲೇಬೇಕಾಗಿರುವುದರಿಂದ ಹಾಗು ನೀವು ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಆಗಿರುವುದರಿಂದ ನಿಮ್ಮ ಬಳಿ ದೇಶದ ಯುವ ಸಮೂಹದ ಪರವಾಗಿ ಈ ಕೆಲಸಗಳನ್ನು ದಯಮಾಡಿ ಮಾಡಿ ಎಂದು ಕೇಳಿಕೊಳ್ಳುತ್ತೇನೆ. ಹಾಗು ಬಿಜೆಪಿಯ ನಾಯಕ ಪಟ್ಟ ಅಲಂಕರಿಸಿ ತಮ್ಮ ಸುತ್ತ ಕೋಟೆ ಕಟ್ಟಿಕೊಂಡಿರುವ ಹಲವು ಮಹಾಶಯರಿಗೂ ಬದಲಾಗುತ್ತಿರುವ ಭಾರತದ ರಾಜಕಾರಣವನ್ನೊಮ್ಮೆ ಕಣ್ಣು ಬಿಟ್ಟು ನೋಡಿ ಎಂದು ಹೇಳಲು ಬಯಸುತ್ತೇನೆ. ಮತ್ತಷ್ಟು ಓದು »

15
ಏಪ್ರಿಲ್

ಯಡಿಯೂರಪ್ಪನವರಿಗೊಂದು ಪತ್ರ…

– ಸಂದೀಪ್ ಕುಮಾರ್ ಶೆಟ್ಟಿ

ಪ್ರೀತಿಯ ಯಡಿಯೂರಪ್ಪ ಅವರೆ,

ಪ್ರೇಮಪೂರ್ವಕ ನಮಸ್ಕಾರಗಳು. ಮೊನ್ನೆಯ ದಿನ ಭಾರತೀಯ ಜನತಾ ಪಕ್ಷದ ಪಾಲಿಗೆ ಅಷ್ಟೇನೂ ಆಶಾದಾಯಕವಾದ ದಿನ ಅಲ್ಲ. ಉಪಚುನಾವಣೆಯ ಫಲಿತಾಂಶ ಪಕ್ಷದ ವಿರುದ್ಧವಾಗಿ ಬಂದಿದೆ. ಪಕ್ಷದ ಸಂಘಟನೆಯಲ್ಲಿ ಮೂರು ದಶಕಗಳಿಗೂ ಹೆಚ್ಚಾಗಿ ದುಡಿದ ನಿಮಗೆ ಈ ರೀತಿಯ ಹಿನ್ನಡೆ ಹೊಸದು ಅಲ್ಲ, ತಿಳಿಯದೆ ಇರುವುದೂ ಅಲ್ಲ, ರಾಜಕೀಯ ಜೀವನದಲ್ಲಿ ಇದು ಸಾಮಾನ್ಯ ಮತ್ತು ಸ್ವಾಭಾವಿಕ ಕೂಡ. ಆತ್ಮೀಯ ಸ್ನೇಹಿತ, ಸಂಸದ ಪ್ರತಾಪ ಹೇಳಿದ ರೀತಿಯಲ್ಲಿ ಇದು ಆಳಿಗೊಂದು ಕಲ್ಲು ಅಲ್ಲ ಬದಲಾಗಿ ಇದು ನಿಮ್ಮ ಸುತ್ತ ಮುತ್ತ ಇರುವ, ಆದರೆ ನಿಮ್ಮನ್ನು ಮಾತನಾಡಿಸಲು ಸಾಧ್ಯವಿಲ್ಲದ, ಹಿತೈಷಿಗಳ ಪ್ರತಿನಿಧಿಯಾಗಿ ಈ ಸಂಧರ್ಭದಲ್ಲಿ ಹೇಳಲು ಇಚ್ಛಿಸುತ್ತೇನೆ. ಮತ್ತಷ್ಟು ಓದು »

14
ಏಪ್ರಿಲ್

ಕಮ್ಯುನಿಸಂ ಎಂಬ ಕಾಡಿನ ಬೆಂಕಿಗೆ ಅಂಬೇಡ್ಕರ್ ಸುಟ್ಟು ಹೋಗಬೇಕೆ?

ಡಾ. ರೋಹಿಣಾಕ್ಷ ಶಿರ್ಲಾಲು,ಸಹಾಯಕ ಪ್ರಾಧ್ಯಾಪಕ
  ಕನ್ನಡ ವಿಭಾಗ, ವಿವೇಕಾನಂದ ಕಾಲೇಜು,ಪುತ್ತೂರು.

ಒಂದೆಡೆ ರಕ್ತಕ್ರಾಂತಿಯನ್ನು ಆಹ್ವಾನಿಸುವ ಕಮ್ಯುನಿಸಂ, ಇನ್ನೊಂದಡೆ ರಕ್ತರಹಿತ ಬದಲಾವಣೆಯನ್ನು ನಿರೀಕ್ಷಿಸುವ ಬೌದ್ಧ ತತ್ವ. ಒಂದೆಡೆ ನೂರಾರು ವರ್ಷಗಳಿಂದ ಶೋಷಣೆ, ಅನ್ಯಾಯಗಳಿಗೆ ಒಳಗಾದ ದಲಿತ ಸಮಾಜ, ಇನ್ನೊಂದೆಡೆ ದಲಿತರೊಳಗೆ ಕಾಣಿಸಿಕೊಳ್ಳಲಾರಂಭಿಸಿದ  ಎಚ್ಚರ , ಆವೇಶಗಳು ಸುಲಭದಲ್ಲಿ ಕಮ್ಯೂನಿಸಂನ ತೋಪಿಗೆ ಸಿಡಿಮದ್ದಾಗುವ ಅಪಾಯ, ಇದು ಅಂಬೇಡ್ಕರ್ ಮುಂದಿದ್ದ ಸನ್ನಿವೇಶದ ಕಿರು ಚಿತ್ರಣ. ಒಂದು ಬುದ್ಧನ ಮಾರ್ಗ , ಇನ್ನೊಂದು ಕಾರ್ಲ್ ಮಾರ್ಕ್ಸ್ ನ ಮಾರ್ಗ. ವಿಶ್ವ ತನ್ನ ಮಾರ್ಗವನ್ನು ಈಗ ಆಯ್ಕೆ ಮಾಡಿಕೊಳ್ಳಬೇಕು ಎನ್ನುತ್ತಲೇ ಬೌದ್ಧಧರ್ಮದ ಮಾರ್ಗದಲ್ಲೇ ಉನ್ನತಿಯನ್ನು ಸಾಧಿಸಲು ಸಾಧ್ಯವೆಂದು ಆತ್ಮವಿಶ್ವಾಸದಿಂದ ನುಡಿದ, ನಡೆದ ಅಂಬೇಡ್ಕರ್. ಇದು ಅಂಬೇಡ್ಕರ್ ಮುಂದಿದ್ದ ಕವಲು ದಾರಿ ಮಾತ್ರವಲ್ಲ, ವರ್ತಮಾನದಲ್ಲಿನ ದಲಿತ ಚಳವಳಿಗಳ, ವಿಚಾರವಾದಿಗಳ ಮುಂದಿನ ಕವಲು ದಾರಿಯೂ ಹೌದು. ಅಂಬೇಡ್ಕರ್ ಅವರ ಅಂತಿಮ ಆಯ್ಕೆ ಬುದ್ಧನೋ? ಕಾರ್ಲ್‍ಮಾಕ್ರ್ಸೋ? ಈ ಪ್ರಶ್ನೆ ಬಹಳ ಮುಖ್ಯವಾದುದು ಕೂಡ. ಒಂದೆಡೆ ಮಾರ್ಕ್ಸ್ ವಾದಿಗಳು ಮರೆಯಿಂದ ಅಂಬೇಡ್ಕರ್ ವಿಚಾರಗಳನ್ನು ಮಾತನಾಡುತ್ತಾ , ಕಾರ್ಲ್ ಮಾರ್ಕ್ಸ್ನ ವಿಚಾರಗಳೇ ಅಂಬೇಡ್ಕರ್ ವಿಚಾರವೂ ಆಗಿತ್ತು ಎಂಬಂತೆ ತೋರಿಸುತ್ತಿದ್ದಾರೆ. ಇನ್ನೊಂದೆಡೆ ಕರ್ನಾಟಕವೂ ಸೇರಿದಂತೆ ದೇಶದೆಲ್ಲೇಡೆ ದಲಿತ ಚಳವಳಿಗಳು ಹುಟ್ಟಿ , ಉತ್ಕರ್ಷಕ್ಕೆ ತಲುಪಿ , ಹತ್ತಾರು ಚೂರುಗಳಾಗಿ ಒಡೆದು ಈ ಚಳವಳಿಗಳ ಮುಖ ಅಂಬೇಡ್ಕರ್ ಬದಲು ಮಾರ್ಕ್ಸ್, ಲೆನಿನ್‍ಗಳಾಗಿ, ಕ್ರಾಂತಿ, ಬೆಂಕಿಯ ವಿಚಾರಕ್ಕೆ ಅಂಬೇಡ್ಕರ್ ಮುಖವಾಡವನ್ನು ತೊಡಿಸುತ್ತಿದ್ದಾರೆ.  ಹಾಗಾದರೆ ಸ್ವತಃ ಅಂಬೇಡ್ಕರ್ ಕಾರ್ಲ್ ಮಾರ್ಕ್ಸ್, ಕಮ್ಯುನಿಸಂ ಬಗೆಗೆ ತಳೆದಿದ್ದ  ನಿಲುವು ಏನು? ಎನ್ನುವುದನ್ನು ಪರಿಶೀಲಿಸುತ್ತಾ, ನಮ್ಮ ಬೌದ್ಧಿಕ ವಲಯ ಅಂಬೇಡ್ಕರ್ ಅವರನ್ನು ಅರ್ಥೈಸಿಕೊಂಡ ಬಗೆಯನ್ನು ಚರ್ಚಿಸುವುದೇ ಈ ಬರವಣಿಗೆಯ ಉದ್ದೇಶ.

ಮತ್ತಷ್ಟು ಓದು »

12
ಏಪ್ರಿಲ್

ಅವರ ಸಹಕಾರವಿಲ್ಲದೆ ಈ ಮರಳು ದಂಧೆ ನಡೆಯುತ್ತಾ ?

– ನರೇಂದ್ರ ಎಸ್ ಗಂಗೊಳ್ಳಿ, ವಾಣಿಜ್ಯಶಾಸ್ತ್ರ ಉಪನ್ಯಾಸಕರು.

ಕಳೆದ ಭಾನುವಾರ ರಾತ್ರಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಂಡ್ಲೂರು ಎಂಬಲ್ಲಿ ತಡರಾತ್ರಿ ಅಕ್ರಮ ಮರಳುಗಾರಿಕೆ ದಂಧೆಯ ಕುರಿತಂತೆ ತನಿಖೆ ಮಾಡಲು ತೆರಳಿದ್ದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ತಹಶೀಲ್ದಾರ್ ಶಿಲ್ಪಾ ನಾಗ್ , ಅಂಪಾರು ಗ್ರಾಮಕರಣ ಕಾಂತರಾಜು ಸೇರಿದಂತೆ ಆರು ಜನರ ತಂಡದ ಮೇಲೆ ಈ ಅಕ್ರಮ ದಂಧೆ ನಿರತ ತಂಡ ಹಲ್ಲೆ ನಡೆಸಿ ಕೊಲೆ ಯತ್ನ ನಡೆಸಿದ್ದು ಖಂಡನೀಯ. ಮೊದಲು ಬಿಹಾರ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಇಂತಹ ಘಟನೆಗಳು ಕೇಳಿಬರುತ್ತಿದ್ದವು, ಆದರೆ ಇದೀಗ ಬುದ್ಧಿವಂತರ ಜಿಲ್ಲೆ ಎಂದೆನ್ನಿಸಿಕೊಂಡ ಉಡುಪಿಯಲ್ಲೇ ಇಂತಹ ಘಟನೆ ನಡೆದಿರುವುದು ಇಡೀ ಜಿಲ್ಲೆಯ ಜನರೇ ತಲೆ ತಗ್ಗಿಸುವಂತಾಗಿದೆ.

ಮತ್ತಷ್ಟು ಓದು »

6
ಏಪ್ರಿಲ್

ಎಳ್ಳಷ್ಟೂ ಒಳ್ಳೆಯದನ್ನು ಮಾಡದ ಇವರು ಹಿಮಾಲಯದಷ್ಟು ಕೆಟ್ಟದನ್ನೆ ಮಾಡುತ್ತಿದ್ದಾರೆ!!!

ಶಿವಾನಂದ ಶಿವಲಿಂಗ ಸೈದಾಪೂರ (ಎಂ.ಎ. ವಿದ್ಯಾರ್ಥಿ)
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ
ಎಬಿವಿಪಿಯ ರಾಜ್ಯ ಕಾರ್ಯಕಾರಣಿ ಸದಸ್ಯರು

ಇವರು ಬುದ್ದಿ ಜೀವಿಗಳೊ ಇಲ್ಲ ಬೌದ್ಧಿಕ ಭಯೋತ್ಪಾದಕರೊ..?
ಬುದ್ದಿ ಜೀವಿ ಎನ್ನಿಸಿಕೊಂಡವರು ಯಾವಾಗಲೂ ಭಾಜಪವನ್ನು ಓಪ್ಪಿಕೊಳ್ಳುವುದಿಲ್ಲವೆಂಬುವುದು ತೆರೆದ ಸತ್ಯ. ನಿರಂತರವಾಗಿ ಅದನ್ನು ತೆಗಳುವುದರಲ್ಲಿಯೇ ಕಾಲ ಕಳೆಯುತ್ತಾರೆಂಬುವುದು ವಾಸ್ತವಿಕ ಸತ್ಯ. ಚುನಾವಣೆಗಳಲ್ಲಿ ಭಾಜಪ ಯಾವಾಗ ಎದುರಾಳಿಗಳನ್ನು ಹೀನಾಯವಾಗಿ ಸೋಲಿಸಿ ಕೇಂದ್ರದ ಚುಕ್ಕಾಣಿ ಹಿಡಿಯಿತೋ ಅದಾಗಲೇ ವಿವಿಧ ಬಗೆಯ ಸೊಗಲಾಡಿತನದ ನಾಟಕಗಳು ಪ್ರದರ್ಶನವಾಗತೊಡಗಿದವು. ಆರಂಭದಲ್ಲಿ ಖರೀದಿಸಿದ ಪ್ರಶಸ್ತಿ ವಾಪಸಿಕರಣದ ಜೊತೆಗೆ ಅಸಹಿಷ್ಣುತೆಯ ಆಟ ಆರಂಭಿಸಿ ಜೆ.ಎನ್.ಯು, ಹೈದರಾಬಾದ್ ವಿವಿಗಳತ್ತ ಸುತ್ತ ಹಾಯ್ದವು. Surgical strike ಬಗ್ಗೆ ಸಂಶಯ ವ್ಯಕ್ತ ಪಡಿಸಿ, Demonetisation ವಿರೋಧಿಸಿದರು. ಆಶ್ಚರ್ಯದ ಸಂಗತಿ ಎಂದರೆ ವಿರೋಧಿಸಿ ವೀಡಿಯೊ ಹೇಳಿಕೆ ನೀಡಿರುವ ಕುಖ್ಯಾತ ವಿಚಾರವಾದಿಯೊಬ್ಬರ ಮನೆಯಲ್ಲಿ ಕೆಲವೆ ದಿನದಲ್ಲಿ ಗರಿ ಗರಿ ಹೊಸ ನೋಟಿನ ಸುರುಳಿಗಳೆ ಸಿಕ್ಕವು. ಅದು ಬೇರೆ ವಿಷಯ. ಮತ್ತಷ್ಟು ಓದು »

5
ಏಪ್ರಿಲ್

ಸಂಸ್ಕೃತಿ ಸರಣಿ 5

“ಎಲ್ಲಿ ಸ್ತ್ರೀಯರು ಪೂಜಿಸಲ್ಪಡುತ್ತಾರೋ, ಅಲ್ಲಿ ದೇವತೆಗಳು ಸಂತೋಷಗೊಳ್ತಾರೆ” ಅಂತ ಅಂದಕೂಡಲೇ,
“ನಮ್ಮನ್ನು ಮನುಷ್ಯರನ್ನಾಗಿ ನೋಡಿ, ನಿಮ್ಮ ಪೂಜೆಯ ಅಗತ್ಯವಿಲ್ಲ” ಅಂತ ಕೆಲ ಸ್ತ್ರೀಯರು ಯಾಕೆ ಪ್ರತಿಕ್ರಿಯಿಸುತ್ತಾರೆ.. ಅದರ ಹಿಂದಿನ ಕಾರಣ ಏನು?

 

 

http://

4
ಏಪ್ರಿಲ್

ಚೆನಾನಿ – ನಶ್ರಿ ಏಷ್ಯಾದ ಅತೀ ದೊಡ್ಡ ಹಾಗೂ ಭಾರತದ ಅತೀ ಉದ್ದದ ಸುರಂಗ ಮಾರ್ಗ…

-ಶ್ರೇಯಾಂಕ ಎಸ್ ರಾನಡೆ.
ಈ ಕಣಿವೆ ಜಮ್ಮು ಕಾಶ್ಮೀರದ ಜೀವಸೆಲೆ; ಭಾರತದ ಇಂಜಿನಿಯರಿಂಗ್ ಅದ್ಭುತಕ್ಕೆ ಸಾಕ್ಷಿ.

– ಏಪ್ರಿಲ್ 2ರಂದು ಪ್ರಧಾನಿ ನರೇಂದ್ರ ಮೋದಿಯವರು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಭಾರತದ ಅತೀ ಉದ್ದದ, ಏಷ್ಯಾದ ಅತೀ ದೊಡ್ಡ, ಎಲ್ಲಾ ರೀತಿಯ ಹವಾಮಾನಗಳಿಗೂ ಒಪ್ಪುವ ದ್ವಿಮುಖ ಸಂಚಾರ ವ್ಯವಸ್ಥೆಯಿರುವ ಸುರಂಗ ರಸ್ತೆ ಮಾರ್ಗವನ್ನು ಲೋಕಾರ್ಪಣೆಗೊಳಿಸಿದ್ದರು. ಕಳೆದ ಐದು ವರ್ಷ ಐದು ತಿಂಗಳ ಅವಧಿಯಲ್ಲಿ 3,720 ಕೋಟಿ ವೆಚ್ಚದಲ್ಲಿ ಈ ಸುರಂಗ ಮಾರ್ಗವನ್ನು ತಯಾರಿಸಲಾಗಿದೆ. ಕಲೆ ಮತ್ತು ವಿಜ್ಞಾನದ ಇಂಜಿನಿಯರಿಂಗ್ ತಾಂತ್ರಿಕತೆಯನ್ನು ಬಳಸಿಕೊಂಡು ನಿರ್ಮಿಸಲಾಗಿರುವ ಈ ಸುರಂಗ ಮಾರ್ಗ ಅನೇಕ ಕಾರಣಗಳಿಂದ ವಿಶೇಷವಾಗಿದೆ. ಮತ್ತಷ್ಟು ಓದು »

3
ಏಪ್ರಿಲ್

ಪೀರಾಯರ ಒಂದು ಕಥಾನಕ (ನೀಳ್ಗತೆ ಭಾಗ-೫)

– ಮು. ಅ ಶ್ರೀರಂಗ ಬೆಂಗಳೂರು

ಪೀರಾಯರು ನಾಲ್ಕೈದು ದಿನಗಳಲ್ಲಿ ತಾವು ಬರೆಯಬೇಕೆಂದುಕೊಂಡಿದ್ದ ಕಥೆಯನ್ನು ಬರೆದು ಮುಗಿಸಿದರು. ಕೊನೆಯ ಸಾಲು ಬರೆದು ಮುಗಿಸಿದಾಗ ಏನೋ ಒಂದು ಭಾರ ತಲೆಯಿಂದ ಇಳಿದ ಹಾಗೆ ಅನಿಸಿತು. ಇದುವರೆಗೆ ಭಾರ ಹೊತ್ತುಕೊಂಡವನಂತೆ ಇದ್ದದ್ದು ಈಗ ನಿರಾಳ ಅನಿಸುತ್ತಿದೆ ಎಂದು ಭಾವಿಸುವುದು ಕೇವಲ ನನ್ನ ಕಲ್ಪನೆಯೇ? ಹೀಗೆಲ್ಲಾ ನನ್ನ ಬೆನ್ನನ್ನು ನಾನೇ ತಟ್ಟಿಕೊಳ್ಳಬಾರದೆಂದು ಅನಿಸಿತು. ತಮ್ಮ ಗಂಡ ಮೂರ್ನಾಲಕ್ಕು ದಿನಗಳಿಂದ ಸಂಜೆ ವಾಕಿಂಗೂ ಬಿಟ್ಟು ಮತ್ತೆ ಲಾಪ್ಟಾಪ್ ಹಿಡಿದು ಕುಳಿತಿದ್ದು ಕಂಡು ರಾಯರ ಹೆಂಡತಿ ‘ಏನು ಮತ್ತೆ ಶುರು ಮಾಡಿದಿರಲ್ಲ ನಿಮ್ಮ ಹಳೇ ಚಾಳಿ? ಸಂಜೆ ವಾಕಿಂಗೂ ಬಿಟ್ಟಿದ್ದೀರಿ. ಏಕೆ? ಯಾರ ಜೊತೆಯಾದರೂ ಚಾಟಿಂಗೋ?’ ಮತ್ತಷ್ಟು ಓದು »

1
ಏಪ್ರಿಲ್

ಈ ದೇಶದಲ್ಲಿ ಫಾರೂಕ್ ಯಾಕೆ ಹುತಾತ್ಮ ಅನ್ನಿಸಿಕೊಳ್ಳುವುದಿಲ್ಲ..?

– ಅಜಿತ್ ಹನುಮಕ್ಕನವರ್

ಫಸ್ಟ್ ಆಫ್ ಆಲ್, ಈ ಫಾರೂಕ್ ಯಾರು ಅನ್ನೋದನ್ನ ಒಮ್ಮೆ ಹೇಳಿಬಿಡ್ತೀನಿ. ಆತ ಮೂಲತಃ ತಮಿಳುನಾಡಿನ ಕೊಯಮತ್ತೂರು ಕಡೆಯವನು. ವಯಸ್ಸು ಮೂವತ್ತೊಂದು. ಮದುವೆ ಆಗಿ ಎರಡು ಮಕ್ಕಳ ತಂದೆಯೂ ಆಗಿದ್ದ ಕಬ್ಬಿಣದ ವ್ಯಾಪಾರಿ. ಮೊನ್ನೆ ಹದಿನಾರನೇ ತಾರೀಖು ರಾತ್ರಿ, ಏನೋ ಅರ್ಜೆಂಟ್ ಕೆಲಸ ಇದೆ ಆತನನ್ನ ಮನೆಯಿಂದ ಹೊರಗೆ ಕರೆಸಿಕೊಂಡ ನಾಲ್ಕು ಜನ ನಡುರಸ್ತೆಯಲ್ಲಿ ಕತ್ತರಿಸಿ ಕೊಂದುಬಿಟ್ಟರು. ಮತ್ತಷ್ಟು ಓದು »

30
ಮಾರ್ಚ್

ಪೂಜೆಯ ಬಗ್ಗೆ ತಪ್ಪು ಕಲ್ಪನೆಗಳು ಮತ್ತು ಕಾರಣಗಳು.

ಭಾರತೀಯರ ಭಾಷೆ ಮತ್ತು ಚಿಂತನೆಯ ಮೇಲೆ ಅಬ್ರಹಾಮಿಕ್ ಮತಗಳ ಪ್ರಭಾವ ಹೇಗೆ ಆಗಿದೆ  ಹಾಗೂ  ಸುಶಿಕ್ಷಿತ ವರ್ಗದಲ್ಲಿ ಭಾರತೀಯತೆಯ ಬಗ್ಗೆ ತಾತ್ಸಾರಕ್ಕೆ ಕಾರಣಗಳು ಏನು ?

http://