ನೀನ್ಯಾರಿಗಾದೆಯೋ ಎಲೆ ಮಾನವ!
ಇತ್ತೀಚೆಗೆ ಗುಜರಾತ್ ಹಾಗೂ ಮಧ್ಯಪ್ರದೇಶಗಳಲ್ಲಿ ಗೋರಕ್ಷಕರಿಂದ ದಲಿತರು ಹಾಗೂ ಮುಸ್ಲಿಂ ಸ್ತ್ರೀಯರ ಮೇಲೆ ಹಲ್ಲೆಗಳು ನಡೆದ ಪ್ರಕರಣಗಳು ವರದಿಯಾಗಿ ಸುದ್ದಿಯಾದವು. ನಂತರ ಇದಕ್ಕೆ ಪ್ರತಿಕ್ರಿಯೆಯಾಗಿ ನರೇಂದ್ರ ಮೋದಿಯವರಿಂದ ಖಂಡನೆಯ ಮಾತುಗಳು ಕೂಡ ಬಂದವು. ನರೇಂದ್ರ ಮೋದಿಯವರ ಖಂಡನೆಗೆ ಹಿಂದುತ್ವದವರಿಂದ ಹಾಗೂ ಪ್ರಗತಿಪರರಿಂದ ಪ್ರತಿಕ್ರಿಯೆಗಳೂ ಬಂದಿವೆ. ನರೇಂದ್ರ ಮೋದಿಯವರ ಹೇಳಿಕೆ ಯಾವುದೇ ಕಾರಣಕ್ಕೆ ಬಂದಿರಲಿ, ಈ ಗೋರಕ್ಷಣೆಯ ರಾಜಕೀಯವು ಸೃಷ್ಟಿಸುತ್ತಿರುವ ಸಮಸ್ಯೆಗಳ ಕುರಿತು ಹಿಂದುತ್ವದ ಮುಂದಾಳುವೇ ಈ ರೀತಿ ಹೇಳಿಕೆ ನೀಡುವ ಅಗತ್ಯವಂತೂ ಖಂಡಿತಾ ಇತ್ತು. ಇಂದು ಹಿಂದುತ್ವ ರಾಜಕೀಯ ಧುರೀಣರನ್ನು ಹಾಗೂ ಹೋರಾಟಗಾರರನ್ನು ನೋಡಿದರೆ ಒಂದೋ ಹಿಂದೂಸಂಸ್ಕೃತಿ, ಗೋವು, ಪೂಜಾಸ್ಥಳಗಳು, ದೇವತೆಗಳು, ಧಾರ್ಮಿಕ ಆಚರಣೆ ಇವೆಲ್ಲ ಇವರಿಗೆ ಸಾಂಸ್ಕೃತಿಕ ಕಾಳಜಿಗಿಂತ ರಾಜಕೀಯದ ಸರಕುಗಳಾಗಿಬಿಟ್ಟಿವೆ, ಇಲ್ಲಾ, ಭಾರತೀಯ ಸಂಸ್ಕೃತಿಯ ಕುರಿತು ಇವರಿಗೆ ತಪ್ಪು ತಿಳಿವಳಿಕೆಗಳಿವೆ. ಹಾಗಾಗಿ ಈ ರಾಜಕೀಯವು ನಮ್ಮ ಜನರಿಗೆ ಹಾಗೂ ದೇಶಕ್ಕೆ ಏಕೆ ಬೇಕು ಎಂಬ ಪರಾಮರ್ಶೆ ಕೂಡ ಜೊತೆಜೊತೆಯಲ್ಲೇ ನಡೆಯಬೇಕಾದ ಅಗತ್ಯವಿದೆ. ಇಲ್ಲದಿದ್ದಲ್ಲಿ ಈ ರಾಜಕೀಯವು ಜನರಿಂದ ದೂರವಾಗಿ, ಜನಕಂಟಕವಾಗಿ ಪರಿಣಮಿಸುವ ಸಾಧ್ಯತೆ ಇರುತ್ತದೆ. ಮತ್ತಷ್ಟು ಓದು 
ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
ದಿನ – 8
ಮೇಡ೦ ಭಿಕಾಜಿ ಕಾಮಾ:
– ರಾಮಚಂದ್ರ ಹೆಗಡೆ
ಭಾರತದ ಸ್ವಾತ೦ತ್ರ್ಯ ಸ೦ಗ್ರಾಮದ ಇತಿಹಾಸದಲ್ಲಿ ಧ್ರುವತಾರೆಯಾಗಿ ಮೆರೆದ ಮಹಿಳೆಯರಲ್ಲಿ ಒಬ್ಬರು ಮು೦ಬೈನ ಮೇಡ೦ ಭಿಕಾಜಿ ಕಾಮಾ. ಮೇಡಂ ಕಾಮಾ ಚಿಕ್ಕಂದಿನಿಂದಲೂ ಆಪಾರ ದೇಶಾಭಿಮಾನಿ. ತೀವ್ರ ಪ್ಲೇಗ್ ರೋಗಕ್ಕೆ ತುತ್ತಾಗಿ ಆಕೆ ಬಂಧುಗಳ ಒತ್ತಾಯದ ಮೇರೆಗೆ ದೇಶ ತ್ಯಜಿಸಿ ಲಂಡನ್ ಗೆ ಹೋಗಬೇಕಾಯಿತು. ಅಲ್ಲಿ ಗುಣಮುಖಳಾದ ಕಾಮಾ ಅಲ್ಲೇ ತನ್ನ ರಾಷ್ಟ್ರ ಜಾಗೃತಿಯ ಕಾರ್ಯಗಳನ್ನು ಆರಂಭಿಸಿದಳು. ಪರದೇಶದಲ್ಲೇ ಇತರ ದೇಶಭಕ್ತರೊಡಗೂಡಿ ಭಾರತದ ಧ್ವಜವನ್ನು ರೂಪಿಸಿದ ಮೇಡಂ ಕಾಮಾ ಜರ್ಮನಿಯ ಸ್ಪಟ್‌ಗಾರ್ಟ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಸಮಾಜವಾದಿ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿ ಅಲ್ಲಿ ಭಾರತೀಯರ ಕಷ್ಟ ಕಾರ್ಪಣ್ಯ ಹಾಗೂ ಬ್ರಿಟಿಷರ ದೌರ್ಜನ್ಯಗಳ ಕುರಿತು ದಿಟ್ಟವಾಗಿ ವಾದ ಮಂಡಿಸಿದಳು. ಅಲ್ಲೇ ಭಾರತ ಧ್ವಜವನ್ನು ಹಾರಿಸಿ ನೆರೆದಿದ್ದ ಎಲ್ಲರೂ ಅದಕ್ಕೆ ಗೌರವ ಸಲ್ಲಿಸುವಂತೆ ಮಾಡಿದಳು. ಮತ್ತಷ್ಟು ಓದು 
ಎನ್‍ಜಿಓ: ಪರದೆ ಹಿಂದಿನ ಕತೆ
– ರೋಹಿತ್ ಚಕ್ರತೀರ್ಥ
ನರೇಂದ್ರ ಮೋದಿಯ ಬಿಜೆಪಿ ಸರಕಾರ 2014ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಮಾಡಿದ ಮೊದಲ ಕೆಲಸವೇನೆಂದರೆ ಅದುವರೆಗೆ ಭಾರತದಲ್ಲಿ ಬೇರುಬಿಟ್ಟು ಹೆಮ್ಮರಗಳೂ ಹೆಮ್ಮಾರಿಗಳೂ ಆಗಿ ವಿಜೃಂಭಿಸುತ್ತಿದ್ದ ಎನ್‍ಜಿಓಗಳಿಂದ ಅವುಗಳ ಹಣಕಾಸು ವ್ಯವಹಾರಗಳ ಲೆಕ್ಕ ಕೇಳಿದ್ದು ಮತ್ತು ಹಾಗೆ ಲೆಕ್ಕ ಕೊಡದೆ ಅಂಗಡಿ ತೆರೆದಿರುವ ಎಲ್ಲ ಎನ್‍ಜಿಓಗಳಿಗೂ ಬಾಗಿಲು ಹಾಕಿಸಿ ಬೀಗ ಜಡಿಯುತ್ತೇನೆಂದು ಖಡಕ್ ಸೂಚನೆ ಇತ್ತಿದ್ದು. ಯಾವ್ಯಾವುದೋ ಬೇನಾಮಿ ಹೆಸರು ಮತ್ತು ಖಾತೆಗಳಿಂದ ಧನಸಹಾಯ ಪಡೆಯುತ್ತ ಆರಾಮಾಗಿದ್ದ ಎನ್‍ಜಿಓಗಳಿಗೆ ಕೇಂದ್ರ ಸರಕಾರ ಹೀಗೆ ಚಾಟಿ ಬೀಸತೊಡಗಿದ್ದೇ ಕಣ್ಣುಕತ್ತಲೆ ಬಂದಂತಾಯಿತು. ಕೇಂದ್ರದ ಗೃಹಖಾತೆ 2015ರ ಎಪ್ರೀಲ್‍ನಲ್ಲಿ ಗ್ರೀನ್‍ಪೀಸ್ ಎಂಬ ಅಂತಾರಾಷ್ಟ್ರೀಯ ಎನ್‍ಜಿಓದ ಮಾನ್ಯತೆ ರದ್ದುಮಾಡಿದ್ದೇ ತಡ, ಇನ್ನು ಕೆಲವೇ ದಿನಗಳಲ್ಲಿ ತಮ್ಮ ಬುಡಕ್ಕೂ ಕೊಡಲಿಯೇಟು ಬೀಳುವುದು ಖಚಿತವೆಂದು ತಿಳಿದ ಉಳಿದ ಎನ್‍ಜಿಓಗಳು ಚಿರೋಬರೋ ಅಳತೊಡಗಿದವು. ಬಿಲಕ್ಕೆ ಹೊಗೆ ಹಾಕಿದಾಗ ದಂಶಕಗಳು ದಿಕ್ಕಾಪಾಲಾಗಿ ಹೊರಗೋಡಿಬರುವುದು ಸಾಮಾನ್ಯವೇ ತಾನೇ? ಗ್ರೀನ್‍ಪೀಸ್ ಸಂಸ್ಥೆಗೆ ಬರೆ ಎಳೆದೊಡನೆ ಫೋರ್ಡ್ ಫೌಂಡೇಶನ್, ಆಮ್ನೆಸ್ಟಿ ಇಂಟರ್‍ನ್ಯಾಷನಲ್, ವಿಶ್ವಸಂಸ್ಥೆ ಎಲ್ಲವೂ ಕೋರಸ್‍ನಲ್ಲಿ ಕೂಗು ಹಾಕಿದವು. ಗ್ರೀನ್‍ಪೀಸ್ ಮತ್ತು ಉಳಿದ ದೇಶದ್ರೋಹಿಗಳ ನೆಟ್‍ವರ್ಕ್ ಹೇಗಿದೆ ಎಂಬುದನ್ನು ಯಾವ ತನಿಖೆಯೂ ಇಲ್ಲದೆ ಸರಕಾರಕ್ಕೆ ನೋಡಲು ಅವಕಾಶವಾಯಿತು. ನಂಬಿದರೆ ನಂಬಿ, ಆ ಕಾಲಕ್ಕೆ ಭಾರತದಲ್ಲಿ ಯಾರ ನಿಯಂತ್ರಣ ಇಲ್ಲದೆ ಸಿಕ್ಕಸಿಕ್ಕ ಮೂಲಗಳಿಂದ ಧನಸಹಾಯ ಪಡೆದುಕೊಂಡು ಆಯಾ ವ್ಯಕ್ತಿ/ಸಂಸ್ಥೆಗಳಿಗೆ ಬೇಕಾದಂತೆ ಕೆಲಸ ಮಾಡಿಕೊಡುತ್ತಿದ್ದ ಎನ್‍ಜಿಓಗಳ ಸಂಖ್ಯೆ ಒಟ್ಟು 42,273! ಮತ್ತಷ್ಟು ಓದು 
ಅಂದು ಜೆ ಎನ್ ಯು, ಇಂದು ಬೆಂಗಳೂರು
– ತನ್ಮಯೀ ಪ್ರೇಮ್ ಕುಮಾರ್
ಜೆಎನ್‌ಯುನಲ್ಲಿ ನಡೆದ ದೇಶದ್ರೋಹದ ಕೆಲಸಗಳು, ಘೋಷಣೆಗಳು, ಬೌದ್ಧಿಕ ದಾರಿದ್ರ್ಯತನವನ್ನು, ವೈಚಾರಿಕ ಗುಲಾಮಿತನದ ಪರಿಸ್ಥಿತಿ ಕಂಡು ಮರುಗಿದ್ದೆ. ಎಷ್ಟೋ ಅಸಹನೆಯ ರಾತ್ರಿಗಳನ್ನು ನಿದ್ದೆಯಿಲ್ಲದೆ ಕಳೆದಿದ್ದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಭಟನೆ, ವಿಚಾರ ಸಂಕಿರಣ, ಆಂದೋಲನದ ಭಾಗವಾಗಿದ್ದೆ ಕೂಡ. ಆದರೆ ಶಾಂತಿಪ್ರಿಯ ಬೆಂಗಳೂರಿನಲ್ಲಿ ಇಂಥದೇ ಘಟನೆ ನಡೆಯಬಹುದೆಂಬ ಕಲ್ಪನೆ ಕನಸಿನಲ್ಲೂ ಬಂದಿರಲಿಲ್ಲ. ಮೊನ್ನೆ ಜೆಎನ್‌ಯು ವಿವಿಯ ಸ್ನೇಹಿತೆಯೊಬ್ಬಳು ಸಿಕ್ಕಾಗಲೂ ಕರ್ನಾಟಕ ಇಂಥ ಘಟನೆಗಳಿಂದ ಮುಕ್ತವಾಗಿದೆ ಎಂಬ ಗರ್ವದಿಂದ ಮಾತನಾಡಿದ್ದೆ. ಮೊನ್ನೆಯವರೆಗೆ ಎಲ್ಲರ ನಂಬಿಕೆಯೂ ಅದೇ ಆಗಿತ್ತು. ಆದರೆ ಆಗಸ್ಟ್ 13ರ ಸಂಜೆ ಭಾರತ 70ನೇ ಸ್ವಾತಂತ್ರ್ಯ ಸಂಭ್ರಮದ ಹೊಸ್ತಿಲಲ್ಲಿ ನಿಂತ ಸಂದರ್ಭದಲ್ಲಿ ನಮ್ಮ ವಿಶ್ವಾಸಕ್ಕೆ, ನೆಮ್ಮದಿಯ ಬಾಳಿಗೆ ಕೊಡಲಿ ಪೆಟ್ಟು ಬೀಳುವಂತ ಘಟನೆ ನಡೆದಿದೆ. ಮತ್ತಷ್ಟು ಓದು 
ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
ದಿನ – 7:
ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಷ್ಫಾಕ್ ಉಲ್ಲಾ ಖಾನ್
– ರಾಮಚಂದ್ರ ಹೆಗಡೆ
ಭಾರತ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಷ್ಫಾಕ್ ಉಲ್ಲಾ ಖಾನ್ ರದ್ದು ಒಂದು ವಿಶೇಷ ಅಧ್ಯಾಯ. ಹಿಂದೂ ಮುಸ್ಲಿಂ ಭ್ರಾತೃತ್ವದ ಒಂದು ಅಪರೂಪದ ಉದಾಹರಣೆ ಈ ಇಬ್ಬರದು. ಇವರಿಬ್ಬರ ಮಧ್ಯೆ ಮತೀಯ ಸಂಘರ್ಷ ತಂದಿಡುವ ಬ್ರಿಟಿಷರ ಹುನ್ನಾರಕ್ಕೆ ದಿಟ್ಟ ಉತ್ತರವಾಗಿ ನೇಣಿಗೇರುವವರೆಗೂ ಒಂದಾಗಿ ರಾಷ್ಟ್ರೀಯ ಚಿಂತನೆಗೆ ತಮ್ಮನ್ನು ಅರ್ಪಿಸಿಕೊಂಡ ಮಹಾನ್ ದೇಶಭಕ್ತರು. ತಮ್ಮ ತಮ್ಮ ಧರ್ಮಗಳಿಗೆ ಬದ್ಧರಾಗಿಯೂ ಈ ದೇಶಕ್ಕೆ ನಿಷ್ಠರಾಗಲು ಸಾಧ್ಯ ಎಂಬುದನ್ನು ಈ ದೇಶಭಕ್ತ ಜೋಡಿ ತೋರಿಸಿಕೊಟ್ಟಿದೆ ಹಾಗೂ ಇಂದಿನ ಪ್ರತ್ಯೇಕತಾವಾದಿಗಳಿಗೆ ಇವರ ಬದುಕು ಒಂದು ಪಾಠ. ಮತ್ತಷ್ಟು ಓದು 
ಕನ್ನಡದ ಮೊದಲ ಕೋಮುವಾದಿ ಈ ಮುಮ್ಮಡಿ ಬಲ್ಲಾಳ ವೀರ!
– ಸಂತೋಷ್ ತಮ್ಮಯ್ಯ
ಕ್ರಿ.ಶ ೧೩೧೦. ಅದು ಮುಸಲ್ಮಾನರ ರಂಜಾನ್ ತಿಂಗಳಿನ ೨೨ನೇ ದಿನ, ಭಾನುವಾರ. ಆ ಪವಿತ್ರ ತಿಂಗಳಿನ ೨೧ ದಿನಗಳೂ ಮುಸಲ್ಮಾನರು ದಕ್ಷಿಣ ಭಾರತದಲ್ಲಿ ನಿರಂತರ ಲೂಟಿ ನಡೆಸಿದ್ದರು. ಕಾಫಿರರ ಕೊಲೆ ಮಾಡಿದ್ದರು, ವಿಗ್ರಹ ಭಂಜನೆ ನಡೆಸಿದ್ದರು, ಮತಾಂತರಗಳು ನಡೆದಿದ್ದವು.
ರಂಜಾನಿನ ೨೨ನೇ ದಿನದಂದು ಅವರು ಲೂಟಿಗೆ ಆರಿಸಿಕೊಂಡದ್ದು ಶ್ರೀಮಂತ ದ್ವಾರಸಮುದ್ರವನ್ನು. ಮಲ್ಲಿಕಾಫರ್ ಎಂಬ ಒಂದು ಕಾಲದ ಬ್ರಾಹ್ಮಣ ಮತಾಂತರವಾದೊಡನೆಯೇ ವಿಪರೀತ ಕ್ರೂರಿಯೂ, ಮಾತೃ ಧರ್ಮದ ದ್ವೇಷಿಯೂ ಆಗಿ ಬದಲಾಗಿದ್ದ. ಹಿಂದೂ ಧರ್ಮದ ಯಾವ ನರವನ್ನು ಮೀಟಿದರೆ ಲಾಭ ಎಂಬುದನ್ನು ಉಳಿದ ದಾಳಿಕೋರರಿಗಿಂತ ಆತ ಚೆನ್ನಾಗಿ ಬಲ್ಲವನಾಗಿದ್ದ. ಅಲ್ಲಾವುದ್ದೀನ್ ಖಿಲ್ಜಿಯ ಕೂಲಿ ಮಾಡುತ್ತಿದ್ದ ಆತ ದಣಿಯನ್ನು ಮೆಚ್ಚಿಸಲು ಏನು ಮಾಡಲೂ ಹಿಂಜರಿಯುತ್ತಿರಲಿಲ್ಲ. ದ್ವಾರಸಮುದ್ರವನ್ನು ಲೂಟಿಮಾಡಬೇಕು ಎಂದು ಆತನೇ ಮುಹೂರ್ತ ನಿಗದಿಪಡಿಸಿದ್ದ. ಏಕೆಂದರೆ ಆ ಹೊತ್ತಲ್ಲಿ ದ್ವಾರಸಮುದ್ರದ ರಾಜ ರಾಜಧಾನಿಯಲ್ಲಿರಲಿಲ್ಲ. ನಿಶ್ಚಯವಾದಂತೆ ದ್ವಾರಸಮುದ್ರದ ಮೇಲೆ ದಾಳಿಯಾಯಿತು. ನಿರಂತರ ೧೩ ದಿನ ಲೂಟಿ ನಡೆಯಿತು. ದೇವಸ್ಥಾನಗಳು ಧ್ವಂಸವಾದವು. ಅತ್ತ ರಾಜ ರಾಜಧಾನಿಗೆ ದೌಢಾಯಿಸಿ ಬಂದಾಗ ಕಾಲ ಮಿಂಚಿಹೋಗಿತ್ತು. ಮಲ್ಲಿಕಾಫರನಿಗೆ ಶರಣಾಗದೆ ಆತನಿಗೆ ಬೇರೆ ದಾರಿಯಿರಲಿಲ್ಲ. ದುಷ್ಟ ಮಲ್ಲಿಕಾಫರ್ ಆತನಿಗೆ ಎರಡು ಆಯ್ಕೆಗಳನ್ನು ನೀಡಿದ. ಒಂದೋ ಇಸ್ಲಾಮಿಗೆ ಮತಾಂತರವಾಗಬೇಕು. ಇಲ್ಲವೇ ತಮಿಳು ಪಾಂಡ್ಯರನ್ನು ಗೆಲ್ಲಲು ಸಹಾಯ ಮಾಡಬೇಕು ಮತ್ತು ದ್ವಾರಸಮುದ್ರದಲ್ಲಿ ಮುಸಲ್ಮಾನ ಸೈನ್ಯವನ್ನು ಇರಿಸಿಕೊಳ್ಳಬೇಕು. ರಾಜ ಮತಾಂತರಕ್ಕೆ ಒಪ್ಪಿಗೆ ನೀಡಲಿಲ್ಲ. ಉಳಿದ ಷರತ್ತುಗಳಿಗೆ ಒಪ್ಪಿದ. ಮಲ್ಲಿಕಾಫರ್ ದ್ವಾರಸಮುದ್ರದ ಸೈನ್ಯದ ಬಲದಿಂದ ತಮಿಳು ಪಾಂಡ್ಯರನ್ನು ಗೆದ್ದು ಲೂಟಿಗೈದು ದೆಹಲಿಗೆ ಹೊರಟುಹೋದ. ಮತ್ತಷ್ಟು ಓದು 
ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
ದಿನ – 6:
ಭೂಪೇಂದ್ರನಾಥ ದತ್ತ :
– ರಾಮಚಂದ್ರ ಹೆಗಡೆ
ದೇಶವನ್ನು ದಾಸ್ಯದಿಂದ ಮುಕ್ತಿಗೊಳಿಸಲು ಒಂದೇ ಕುಟುಂಬದ ತಾಯಿ ಮಗ ಸೊಸೆ ಸೆರೆವಾಸ ಅನುಭವಿಸಿದ ಕಥೆಯನ್ನು ನಿನ್ನೆಯ ಮೈಲಾರ ಮಹಾದೇವರ ಸ್ಮರಣೆಯಲ್ಲಿ ಓದಿದ್ದೇವೆ. ದೇಶಾದ್ಯಂತ ಹಾಗೆ ಅನೇಕ ಕುಟುಂಬಗಳು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ತಮ್ಮನ್ನು ಸಂಪೂರ್ಣ ದಾಸ್ಯ ವಿಮೋಚನೆಯ ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಇದು ಅಂತಹದೇ ಮತ್ತೊಂದು ದೇಶಭಕ್ತ ಕುಟುಂಬದ ಸ್ಮರಣೆ. ಇದು ಕಲಕತ್ತೆಯ ವಿಶ್ವನಾಥ ದತ್ತ ಹಾಗೂ ಭುವನೇಶ್ವರಿ ದೇವಿ ದಂಪತಿಗಳ ಇಬ್ಬರು ಪುತ್ರರತ್ನಗಳು ದೇಶದ ದಾಸ್ಯ ವಿಮುಕ್ತಿ ಹಾಗೂ ಭವಿಷ್ಯದ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ಅರ್ಪಿಸಿಕೊಂಡ ಪ್ರೇರಣಾದಾಯಿ ಕಥೆ. ಒಬ್ಬರು ನರೇಂದ್ರನಾಥ ದತ್ತ ಮುಂದೆ ‘ಸ್ವಾಮಿ ವಿವೇಕಾನಂದ’ ರಾಗಿ ಭಾರತದ ಆಧ್ಯಾತ್ಮ ಯೋಗ ವೇದಾಂತಗಳ ಸಾರವನ್ನು ಜಗತ್ತಿಗೇ ಬೋಧಿಸಿ ವಿಶ್ವದ ಮನಗೆದ್ದರೆ ಮತ್ತೊಬ್ಬರು ಭೂಪೇಂದ್ರನಾಥ ದತ್ತ ಶ್ರೇಷ್ಠ ಕ್ರಾಂತಿಕಾರಿಯಾಗಿ ಭಾರತೀಯ ಸ್ವಾತಂತ್ರ್ಯ ಚಳುವಳಿಯ ಕ್ರಾಂತಿಕಾರಿ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದರು. ಭೂಪೇಂದ್ರರು ಕ್ರಾಂತಿಕಾರಿ ಸಂಘಟನೆಗಳಾದ ಯುಗಾಂತರ ಹಾಗೂ ಅನುಶೀಲನ ಸಮಿತಿಯ ಪ್ರಮುಖ ಸದಸ್ಯರಾಗಿದ್ದರು. ಬ್ರಿಟಿಷರನ್ನು ಹೊಡೆದೋಡಿಸಲು ಹಾಗೂ ಭಾರತವನ್ನು ಸ್ವಾತಂತ್ರ್ಯಗೊಳಿಸಲು ಕ್ರಾಂತಿಯೇ ಸರಿಯಾದ ಮಾರ್ಗ ಎಂಬುದು ಯುಗಾಂತರದ ನಂಬಿಕೆಯಾಗಿತ್ತು. ಮತ್ತಷ್ಟು ಓದು 
ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
ದಿನ– 5 : ಮೈಲಾರ ಮಹದೇವ
– ರಾಮಚಂದ್ರ ಹೆಗಡೆ
1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲಿನಿಂದಲೇ ಆರಂಭಿಸಿ, ಕ್ವಿಟ್ ಇಂಡಿಯಾ ಚಳುವಳಿ, ನಂತರ ಬ್ರಿಟಿಷರು ಭಾರತ ಬಿಟ್ಟು ತೊಲಗುವವರೆಗೆ ಕರ್ನಾಟಕದಲ್ಲೂ ದೊಡ್ಡ ಮಟ್ಟದಲ್ಲಿ ವಿವಿಧ ರೀತಿಯ ಹೋರಾಟಗಳು ನಡೆದವು. ಹೋರಾಟದ ಕಿಚ್ಚು, ಕ್ರಾಂತಿಯ ಕಿಡಿ ವಿವಿಧ ರೂಪದಲ್ಲಿ ಪ್ರಕಟಗೊಂಡು ಸಾವಿರಾರು ಮಂದಿ ಭಾರತ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದರು. ಹಾಗೆ ಬ್ರಿಟಿಷರ ಗುಂಡಿಗೆ ಎದೆಕೊಟ್ಟು ವೀರಸ್ವರ್ಗವೇರಿದ ಅಪ್ರತಿಮ ಬಲಿದಾನಿಗಳಲ್ಲಿ ಹಾವೇರಿ ಜಿಲ್ಲೆ ಮೋಟೆಬೆನ್ನೂರಿನ ಮೈಲಾರ ಮಹದೇವ ಅವರ ಪಾತ್ರ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿದೆ. ಸ್ವಾತಂತ್ರ್ಯಾಂದೋಲನದಲ್ಲಿ ಮಹದೇವರ ತಾಯಿ ಬಸಮ್ಮ ಕೂಡಾ ಸೆರೆಮನೆವಾಸ ಅನುಭವಿಸಿದವರು. ಮತ್ತಷ್ಟು ಓದು 
ವೇದಾಂತದ ಕಥೆಗಳ ಆಧಾರದಲ್ಲಿ ಇತಿಹಾಸ ಶಬ್ದದತ್ತ ಕಿರುನೋಟ
– ವಿನಾಯಕ ಹಂಪಿಹೊಳಿ
ಹಿಸ್ಟರಿ ಎನ್ನುವ ಶಬ್ದದ ಸ್ವರೂಪವು ಬೈಬಲ್ಲಿನ ಥಿಯಾಲಜಿಯಲ್ಲಿ ನಮಗೆ ಕಾಣಸಿಗುತ್ತದೆ. ಪ್ರತಿಯೊಂದು ಸಮಾಜಕ್ಕೂ ಗಾಡ್ ತನ್ನ ಸಂದೇಶಗಳನ್ನು ಪ್ರವಾದಿಗಳ ಮೂಲಕ ತಲುಪಿಸಿರುತ್ತಾನೆ. ಇದು ಒಂದಾನೊಂದು ಕಾಲದಲ್ಲಿ ಆ ಸಮಾಜದಲ್ಲಿ ನಡೆದಿರುವ ಘಟನೆಯಾಗಿರುತ್ತದೆ. ಆ ಸಮಾಜದ ಜನರನ್ನು ಅರಿತುಕೊಳ್ಳಲು ಹಾಗೂ ಅಲ್ಲಿನ ಜನರು ಆಚರಿಸುವ ಪದ್ಧತಿಗಳಲ್ಲಿ ರಿಲಿಜಿಯಸ್ ಯಾವುದು ಎಂದು ಗುರುತಿಸಿಕೊಳ್ಳಲು ಈ ಸಂದೇಶಗಳು ಅಗತ್ಯ. ಹೀಗಾಗಿ ಸಮುದಾಯವೊಂದನ್ನು ಅಧ್ಯಯನ ಮಾಡುವಾಗ ಆ ಸಮುದಾಯದಲ್ಲಿ ಗಾಡ್ ಯಾವಾಗ ಮಧ್ಯಪ್ರವೇಶಿಸಿ ತನ್ನ ಸಂದೇಶಗಳನ್ನು ನೀಡಿದ್ದ ಎನ್ನುವುದನ್ನು ಕಂಡುಕೊಳ್ಳುವದು ಅಗತ್ಯ. ಹಿಸ್ಟರಿ ಎನ್ನುವ ಅಧ್ಯಯನ ಕ್ರಮವು ಈ ಪ್ರಕ್ರಿಯೆಯಿಂದಲೇ ಹುಟ್ಟಿರುತ್ತದೆ. ಲಭ್ಯವಿರುವ ಶಾಸನಗಳ ಆಧಾರದಲ್ಲಿ ಸಮಂಜಸವಾದ ವಿವರಣೆಯೊಂದನ್ನು ಕಟ್ಟಿಕೊಡುವುದೇ ಹಿಸ್ಟರಿಯ ಧ್ಯೇಯ. ಹಿಸ್ಟರಿ ಶಬ್ದಕ್ಕೆ ಪರ್ಯಾಯವಾಗಿ ನಾವು ಇತಿಹಾಸ ಎಂಬ ಶಬ್ದವನ್ನು ಬಳಸುತ್ತ ಬಂದಿದ್ದೇವೆ. ಆದರೆ ವಸಾಹತು ಪ್ರಜ್ಞೆಗೂ ಪೂರ್ವದಲ್ಲಿ ಇತಿಹಾಸ ಎಂಬ ಶಬ್ದವು ಏನನ್ನು ಪ್ರತಿನಿಧಿಸುತ್ತಿತ್ತು? ಸದ್ಯಕ್ಕೆ ಉಪನಿಷತ್ತುಗಳ ಕಥೆ ಮತ್ತು ಅದಕ್ಕೆ ಶಂಕರಾಚಾರ್ಯರು ಬರೆದ ಭಾಷ್ಯಗಳನ್ನು ಆಧಾರವಾಗಿಟ್ಟುಕೊಂಡು ಚರ್ಚಿಸೋಣ. ಮತ್ತಷ್ಟು ಓದು 
ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
ದಿನ – 4:
ಖುದಿರಾಮ್ ಬೋಸ್ (ಡಿಸೆಂಬರ್ 3, 1889 – ಆಗಸ್ಟ್ 11, 1908)
– ರಾಮಚಂದ್ರ ಹೆಗಡೆ
ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಮುಖರು. ಅತೀ ಚಿಕ್ಕ ವಯಸ್ಸಿಗೇ ಕೇವಲ 19 ರ ಹರೆಯದಲ್ಲಿ ನೇಣುಗಂಬವೇರಿದ ಪ್ರಥಮ ಬಲಿದಾನಿ ಖುದಿರಾಮ್ ಬೋಸ್. ‘ಕಿಂಗ್ಸ್ ಫೊರ್ಡ್’ ಎಂಬ ಬ್ರಿಟೀಷ್ ನ್ಯಾಯಧೀಶ ಕಲ್ಕತ್ತಾದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಘೋರಾತಿಘೋರ ಶಿಕ್ಷೆಗಳನ್ನು ಕೊಡುತ್ತಾ ವಿಕೃತ ಆನಂದವನ್ನು ಅನುಭವಿಸುತ್ತಿದ್ದ. ಭಾರತೀಯರ ಮೇಲೆ ಆತನ ದೌರ್ಜನ್ಯ ಮಿತಿಮೀರಿತ್ತು. ಈತನ ಕ್ರೌರ್ಯಕ್ಕೆ ಕೊನೆಹಾಡಬೇಕೆಂದು ನಿರ್ಧರಿಸಿದ ಖುದಿರಾಮ್ ಕಿಂಗ್ಸ್ ಫೊರ್ಡ್ ನನ್ನ ಕೊಲ್ಲುವ ಯತ್ನ ಮಾಡಿದ. ಆದರೆ ಕಿಂಗ್ಸ್ ಫೊರ್ಡ್ ಬಚಾವಾದ. ಆದರೂ ಆ ಪ್ರಯತ್ನದಲ್ಲಿ ಈ ಪ್ರಖರ ದೇಶಭಕ್ತನಿಗೆ ಗಲ್ಲು ಶಿಕ್ಷೆಯಾಯ್ತು. ಮತ್ತಷ್ಟು ಓದು 




