ಕಾಡು ಮತ್ತು ಕ್ರೌರ್ಯ ( ಪುಸ್ತಕ ಪರಿಚಯ)
– ನಾಗೇಶ ಮೈಸೂರು
ಸಾಧಾರಣವಾಗಿ ತೇಜಸ್ವಿಯರ ಯಾವುದೇ ಪುಸ್ತಕವನ್ನು ಪರಿಚಯ ಮಾಡಿಸುವ ಅಗತ್ಯ ಇರುವುದಿಲ್ಲ. ಅವೊಂದು ರೀತಿ ‘ಸ್ವಯಂಭು’ ಪ್ರವೃತ್ತಿಯ ‘ಸ್ವಯಂದರ್ಶಿ’ ಜಾತಿಗೆ ಸೇರಿದವು. ಆದರೂ ಈ ಪುಸ್ತಕ ನೋಡಿದಾಗ ಒಂದು ಪರಿಚಯ ಮಾಡಿಸುವ ಅಗತ್ಯವಿದೆ ಎನಿಸಿತು. ಅದಕ್ಕೆ ಮೊದಲ ಕಾರಣ – ಇದು ೧೯೬೨ರಲ್ಲಿ ತಮ್ಮ ಎಂ.ಎ. ಮುಗಿಸಿದ ನಂತರದ ದಿನಗಳಲ್ಲಿ ತೇಜಸ್ವಿ ಬರೆದ ಮೊಟ್ಟಮೊದಲ ಕಾದಂಬರಿ. ನಾನಾ ಕಾರಣಗಳಿಂದ ಪ್ರಕಟವಾಗದೆ ತೀರಾ ಈಚೆಗೆ ಬೆಳಕು ಕಂಡ ಕೃತಿ. ಪ್ರಕಾಶಕರ ಮಾತಿನಲ್ಲೇ ಹೇಳಿದಂತೆ ಸ್ವರೂಪ ಮತ್ತು ನಿಗೂಢ ಮನುಷ್ಯರು ಬರೆದಾದ ಮೇಲೆ ಸ್ವತಃ ತೇಜಸ್ವಿಯವರೇ, ಈ ಪುಸ್ತಕ ಪ್ರಕಟಿಸುವ ಮಾತೆತ್ತಿದಾಗ ‘ಹೂಂ’ ಅಥವಾ ‘ಉಹೂಂ’ ಎರಡೂ ಅಲ್ಲದ ತಮ್ಮ ಕಥೆಗಳಷ್ಟೇ ನಿಗೂಢವಾದ ಮುಗುಳ್ನಗೆಯೊಂದನ್ನು ಬಿತ್ತರಿಸಿ ಸುಮ್ಮನಾಗಿಬಿಡುತ್ತಿದ್ದರಂತೆ. ಅಂತಹ ಪುಸ್ತಕವೊಂದು ಕೊನೆಗೂ ೨೦೧೩ ರಲ್ಲಿ, ಬರೆದ ಸುಮಾರು ಐವತ್ತು ವರ್ಷಗಳ ನಂತರ ಪ್ರಥಮ ಮುದ್ರಣ ಭಾಗ್ಯ ಕಂಡಿತೆಂದ ಮೇಲೆ ಅದರ ಕುರಿತಾದ ಪರಿಚಯ ಸಾಕಷ್ಟು ಕುತೂಹಲಕಾರಿಯಾದ ವಿಷಯವೇ ಅಲ್ಲವೇ ? ಬಹುತೇಕ ತೇಜಸ್ವಿ ‘ಪರಮಾಭಿಮಾನಿ’ಗಳಿಗು ಈ ಪುಸ್ತಕ ಪರಿಚಿತವಿರಲಾರದೆಂಬ ಅನಿಸಿಕೆಯಲ್ಲಿ ಹೀಗೊಂದು ಪರಿಚಯದ ಯತ್ನ. ಮತ್ತಷ್ಟು ಓದು 
ಆಡಿಕೊಳ್ಳುವವರ ಮುಂದೆ, ಬಡಿದಾಡಿಯಾದರೂ ಗೆಲ್ಲಬೇಕು.
– ಶ್ರೀಕಾಂತ ಆಚಾರ್ಯ
Don’t try to sell yourotions’ because nobody gonna buy it. ಸತ್ಯದ ಮಾತುಗಳವು. ಇರೋ ‘ಪ್ರಾಬ್ಲಂ’ಗಳಿಗೆ ಪರಿಹಾರ ಕೊಡಿಸೋ ಅಂತ ಗೋಗರೆದರೆ, ಕೇಳಿಸಿಕೊಂಡವ ನಕ್ಕು ಬಿಡುತ್ತಾನೆ. Infact ಅವನಿಗೆ ಇಂತದ್ದೊಂದು ಸಮಸ್ಯೆಗೆ ‘ಸೊಲ್ಯೂಷನ್’ ಕೊಡಬೇಕು ಅಂತನಿಸಲ್ಲ. ಬದಲಾಗಿ ‘He is glad that you have problems. ಅಂತವರ ಎದುರಲ್ಲಿ ಗೋಳಿಟ್ಟುಕೊಂಡು ಪರಿಹಾರಕ್ಕೆ ಅಂಗಲಾಚುವುದು ಮೂರ್ಖತನ. ನಮ್ಮ ಸಮಸ್ಯೆ ಇರೋದು ಇಲ್ಲೆ. ನಮ್ಮ ನೋವುಗಳಿಗೆ ಗ್ರಾಹಕರಾರು? ಯಾರು ಅದಕ್ಕೆ ಅರ್ಹರು? ಹುಡುಕೋದು ಕಷ್ಟ. ಆದರೆ, ಪ್ರತಿಯೊಬ್ಬರ ಜೀವನದಲ್ಲೂ ಒಂದಷ್ಟು ಜನ ‘ಸ್ನೇಹಿತರು’ ಅಂತಿರುತ್ತಾರೆ. ಅದರಲ್ಲಿ ಕೆಲವರು ಮಾತ್ರ ‘Genuine’. ಉಳಿದವರು ಸುಮ್ಮನೆ ಲೆಕ್ಕ ಭರ್ತಿಗಾಗಿ ಇರುವಂತವರು. ಮತ್ತಷ್ಟು ಓದು 
ಮರವನ್ನು ಮರೆತರೆ ಬರ ಬಾರದ್ದು ಬಂದೀತು!
– ರೋಹಿತ್ ಚಕ್ರತೀರ್ಥ
ಅವೊತ್ತು ಶುಕ್ರವಾರ. ಆಫೀಸಿನಿಂದ ಹೊರಟು ನಗರದ ಮುಖ್ಯರಸ್ತೆಯೊಂದಕ್ಕೆ ಬಂದು ಸೇರಿದಾಗ, ಆ ಸಾಗರದಲ್ಲಾಗಲೇ ಸಾವಿರಾರು ದೋಣಿಗಳು ಹುಟ್ಟುಹಾಕಲಿಕ್ಕೂ ಜಾಗ ಸಿಗದಂತೆ ತುಂಬಿಕೊಂಡಿದ್ದವು. ಯಾಕೆ ಇಷ್ಟೊಂದು ಟ್ರಾಫಿಕ್‍ಜಾಮ್ ಆಗಿದೆ ಎಂದು ಬಾತುಕೋಳಿಗಳಂತೆ ಕತ್ತು ಎತ್ತರಿಸಿ ನಿರುಕಿಸುತ್ತಿದ್ದವರಿಗೆ ದೂರದಲ್ಲಿ ಮಳೆಯ ರಭಸಕ್ಕೆ ಮರವೊಂದು ಮಾರ್ಗಶಾಯಿಯಾಗಿರುವುದು ಕಾಣಿಸಿತು. ಹತ್ತಾರು ಅಡಿಗಳ ರೆಂಬೆಕೊಂಬೆಗಳನ್ನು ದಶದಿಕ್ಕುಗಳಿಗೂ ಚಾಚಿ ಇಷ್ಟುದಿನ ರಸ್ತೆಯ ಬದಿಯಲ್ಲಿ ಗತ್ತಿನಿಂದ ನಿಂತು ನಮಗೆಲ್ಲ ಹಾಯ್ ಹೇಳುತ್ತ ಕೈಬೀಸುತ್ತಿದ್ದ ಈ ಮರ, ಇವೊತ್ತು ಹೃದಯಾಘಾತವಾದಂತೆ ಮಳೆಯ ಹೊಡೆತಕ್ಕೆ ನೆಲಕ್ಕೆ ಬಿದ್ದಿದೆಯಲ್ಲ ಅಂದುಕೊಂಡೆ. ಮರದ ಶವ ಬಿದ್ದಲ್ಲಿ ಹತ್ತಾರು ಅಧಿಕಾರಿಗಳು ನಿಂತು ಚುರುಕಿನ ಕಾರ್ಯಾಚರಣೆ ನಡೆಸುತ್ತಿದ್ದರು. ಅದರ ಕೈಕಾಲುಗಳನ್ನು ಆದಷ್ಟು ಬೇಗ ಕತ್ತರಿಸಿ ಎಲ್ಲಿಗಾದರೂ ಸಾಗಿಸಿಬಿಟ್ಟರೆ ಸಾಕು ಎಂಬ ಧಾವಂತ ಅವರ ಮುಖಗಳಲ್ಲಿ ಕುಣಿದಾಡುತ್ತಿತ್ತು. ಗ್ಯಾಂಗ್ರಿನ್ ಆದ ಕಾಲು ಕತ್ತರಿಸುವ ನಿರ್ಭಾವುಕ ವೈದ್ಯನಂತೆ, ನಾಲ್ಕು ಜನ ಕೆಲಸಗಾರರು ಶಕ್ತಿಮೀರಿ ಬಲಪ್ರಯೋಗಿಸಿ ಅದರ ದೇಹವಿಚ್ಛೇದನದಲ್ಲಿ ನಿರತರಾಗಿದ್ದರು. ಶೋಕೇಸಿನ ಹಲವಾರು ಶೋಪೀಸುಗಳ ನಡುವೆ ಕೈಮೇಲೆತ್ತಿ ನಗುವ ಪುಟ್ಟ ಬುದ್ಧನ ಮೂರ್ತಿಯಂತೆ; ಈ ನಗರದ ಸಾಫ್ಟ್‍ವೇರ್ ತಜ್ಞರು ಬರೆಯುವ ಧೀರ್ಘ ಪ್ರೋಗ್ರಾಮಿನ ಒಂದೇ ಒಂದು ಪುಟ್ಟ ಸಾಲಿನಂತೆ, ಅಥವಾ ಬೀದಿಬದಿಯಲ್ಲಿ ಹುಡುಗ ಮಾರುವ ನೂರಾರು ಪೋಸ್ಟರುಗಳ ನಡುವೆ ತಣ್ಣಗೆ ನಗುತ್ತ ಕೂತ ಹೃತಿಕ್ ರೋಷನ್ನಿನಂತೆ ಇಷ್ಟುದಿನ ಧ್ಯಾನಾಸಕ್ತನಾಗಿ ನಿಂತಿದ್ದ ವೃಕ್ಷ ಇನ್ನು ಅಲ್ಲಿ ಇರುವುದಿಲ್ಲವಲ್ಲ ಅಂತ ಸಂಕಟವಾಯಿತು. ಅದನ್ನು ತುಂಡುತುಂಡಾಗಿ ಕತ್ತರಿಸಿ ತೆಗೆದು ಸ್ಥಳಾವಕಾಶ ಮಾಡಿಕೊಡುತ್ತಲೇ ಅಸಹನೆಯಿಂದ ಕುದಿಯುತ್ತಿದ್ದ ಸವಾರರು ನಿರಾಳತೆಯಿಂದ ನಿಟ್ಟುಸಿರು ಬಿಟ್ಟರು. ಅಣೆಕಟ್ಟಿನ ಬಾಗಿಲು ತೆರೆದಾಗ ಹೊರಹಾರುವ ನೀರಿನ ಧಾರೆಯಂತೆ ಬೈಕು-ಕಾರುಗಳು ಧಿಮ್ಮನೆ ಚಿಮ್ಮಿದವು. ಮತ್ತಷ್ಟು ಓದು 
ತಮ್ಮನ ಪುನರ್ಮಿಲನ
– ರಂಜನ್ ಕೇಶವ
ಪ್ರತಾಪನು ಚೇತಕ್ ನೊಡನೆ ರಣಭೂಮಿಯಿಂದ ತೆರಳಿದಾಗ ಹಲ್ದೀಘಾಟಿಯ ಯುದ್ಧ ಭಾಗಶಃ ಮುಗಿದಿತ್ತು. ಪ್ರತಾಪನಿಗೆ ಒಂದುಕಡೆ ಯುದ್ಧದಲ್ಲುಂಟಾದ ಸೋಲಿನ ನಿರಾಶೆ ಮತ್ತೊಂದೆಡೆ ಮೊಘಲ್ ಸೇನೆಯನ್ನು ಮುಂದೆ ತಡೆಯುವುದು ಹೇಗೆಂಬ ಚಿಂತೆ. ತರಾತುರಿಯಲ್ಲಿ ತೆರಳಿದ್ದಕ್ಕಾಗಿ ಪ್ರತಾಪನು ಏಕಾಂಗಿಯಾಗಿದ್ದ, ಜೊತೆಗೆ ಯಾವೊಬ್ಬ ಸಹಚರನೋ ಸರದಾರರೋ ಇರಲಿಲ್ಲ. ವ್ಯಾಕುಲಗೊಂಡ ಮನಸ್ಸಿನ ಕಾರಣ ಏಕಾಂಗಿತನದ ಅರಿವೂ ಇಲ್ಲ.
ಹೀಗೆ ಸಾಗುತ್ತಿದ್ದ ಪ್ರತಾಪನನ್ನು ಅವನ ಅರಿವಿಗೆ ಬಾರದಂತೆ ಇಬ್ಬರು ಮೊಘಲ್ ಸವಾರರು ಹಿಂಬಾಲಿಸುತಿದ್ದರು ! ಇಬ್ಬರಲ್ಲೂ ಪ್ರತಾಪನನ್ನು ಕೊಂದು ಷೆಹಂಷಾಹ್ ನಿಂದ ಪುರಸ್ಕಾರ ಪಡೆಯುವ ಆಕಾಕ್ಷೆಯಿತ್ತು.
ಚೇತಕ್ ಕುದುರೆ ತನ್ನ ಸ್ವಾಮಿಯನ್ನು ರಕ್ಷಿಸಲೆಂದು ನೆಲದ ಏರಿಳಿತ, ಕಲ್ಲು ಬಂಡೆ ಮತ್ಯಾವ ಅಡೆತಡೆಗಳಿಗೂ ಸ್ವಲ್ಪವೂ ವೇಗ ಕುಗ್ಗಿಸದೇ ಒಂದೇ ರಭಸದಲ್ಲಿ ಓಡುತ್ತಿತ್ತು. ಕಾಲಿನ ಗಾಯದ ರಕ್ತಸ್ರಾವದಲ್ಲೂ ಯಾವ ಬಾಧೆಯನ್ನೂ ಲೆಕ್ಕಿಸದೇ ಮುನ್ನುಗ್ಗುತ್ತಿತ್ತು. ಹೀಗೆ ಸಾಗುತ್ತಾ ಒಂದು ನದಿಯ ಕವಲನ್ನು ಚೇತಕ್ ಒಂದೇ ನೆಗೆತಕ್ಕೆ ದಾಟಿತು. ಆದರೆ ಆ ಮೊಘಲ್ ಸೈನಿಕರ ಕುದುರೆಗಳಿಗೆ ದಾಟಲಾಗದೆಯೇ ಅಲ್ಲೇ ನಿಂತವು. ಮತ್ತಷ್ಟು ಓದು 
ಧಾರಾವಾಹಿಗಳ ಜಗದಲ್ಲೊಂದು ಸುತ್ತು..
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ಓದು ನನಗಿರುವ ಏಕೈಕ ಹವ್ಯಾಸ. ತುಂಬ ಟಿವಿ ನೋಡುವ ಅಭ್ಯಾಸ ನನಗಿಲ್ಲ. ಆಗೊಮ್ಮೆ ಈಗೊಮ್ಮೆ ಕ್ರಿಕೆಟ್ಟು ನೋಡುವುದು ಬಿಟ್ಟರೆ ನಾನು ಟಿವಿಯಿಂದ ದೂರವೇ. ಕೆಲವು ದಿನಗಳ ಹಿಂದೆ ಸುಮ್ಮನೇ ಟಿವಿಯ ರಿಮೋಟಿನ ಬಟನ್ನುಗಳನ್ನು ಒತ್ತುತ್ತಾ ಚಾನಲ್ಲು ಬದಲಿಸುತ್ತಾ ಕುಳಿತಿದ್ದವನ ಕಣ್ಣಿಗೆ ಬಿದ್ದದ್ದು ಹೊಸ ಧಾರಾವಾಹಿಯೊಂದರ ಜಾಹಿರಾತು. ಸುಮಾರು ಐದಾರು ವರ್ಷದ ಬಾಲಕಿಯೊಬ್ಬಳು ಕುಂಟಾಬಿಲ್ಲೆ ಆಟವಾಡುತ್ತ ಮಾತನಾಡುವ ಜಾಹಿರಾತು ಕೆಲಕಾಲ ನನ್ನ ಗಮನವನ್ನು ತನ್ನತ್ತ ಸೆಳೆಯಿತು. ಅಲ್ಲಿ ಆಡುತ್ತಿದ್ದ ಪುಟ್ಟ ಹುಡುಗಿಯ ಗೆಳೆಯನೊಬ್ಬ ಓಡುತ್ತ ಬಂದು,”ಏಯ್ ಗಂಗಾ ನಿನ್ನ ಗಂಡ ಸತ್ತೋದ್ನಡಾ, ನೀ ವಿಧವೆ ಆದ್ಯಡಾ (ಏಯ್ ಗಂಗಾ ನಿನ್ನ ಗಂಡ ಸತ್ತು ನೀನು ವಿಧವೆಯಾದೆಯಂತೆ) ” ಎನ್ನುತ್ತಾನೆ. ಅದಕ್ಕುತ್ತರಿಸುವ ಮುಗ್ದೆ, “ಮಳ್ನಂಗ್ ಮಾತಾಡಡ್ದಾ, ಅವನ್ಯಾರೋ ಸತ್ತೋದ್ರೆ, ನಾ ಹ್ಯಾಂಗ್ ವಿಧವೆ ಆಗ್ತೆ “ಎನ್ನುತ್ತ ತನ್ನ ಆಟವನ್ನು ಮುಂದುವರೆಸುತ್ತಾಳೆ. ಜಾಹಿರಾತಿನ ಕೊನೆಯ ಭಾಗದಲ್ಲಿ “ಗಂಗಾಳ ಕುಂಕುಮ ಕರಗಿಹೋಯ್ತು, ಸವೆಯಿತು ಸೌಭಾಗ್ಯ, ಕಳಚಿತು ಕೊರಳ ಮಾಂಗಲ್ಯ” ಎನ್ನುವ ದನಿಯೊಂದು ಕೇಳಿಬರುತ್ತದೆ. ಇಂಥದ್ದೊಂದು ಪ್ರೋಮೊ ನೋಡಿದ ನನಗೆ ಒಂದರೆಕ್ಷಣ ನಖಶಿಖಾಂತ ಉರಿದುಹೋಯಿತು. ಮತ್ತಷ್ಟು ಓದು 
ಶೂರ್ಪನಖಿ, ಆಹಾ! ಎಂಥಾ ಸುಖಿ!
– ನಾಗೇಶ ಮೈಸೂರು
ನಮ್ಮ ಟೀವಿ ಸೀರಿಯಲ್ಗಳಲ್ಲಿ ಬರುವ ಹೆಣ್ಣು ವಿಲನ್ ಪಾತ್ರಗಳಿಗೆಲ್ಲ ಈ ಶೂರ್ಪನಖಿ ಪಾತ್ರವೂ ಸ್ಪೂರ್ತಿಯಿರಬಹುದೇ?
ಬಹುಶಃ ರಾಮಾಯಣದ ಪಾತ್ರಗಳನ್ನು ವಿಶ್ಲೇಷಣೆಗೆ ಪರಿಗಣಿಸಿದಾಗ, ಅದರಲ್ಲೂ ಮಹಿಳೆಯ ಪಾತ್ರದ ವಿಷಯಕ್ಕೆ ಬಂದರೆ ಸೀತೆ, ಕೈಕೆ, ಮಂಡೋದರಿ, ಮಂಥರೆ ಹೀಗೆ ಎಷ್ಟೋ ಪಾತ್ರಗಳು ಕಣ್ಮುಂದೆ ಬಂದು ನಿಲ್ಲುತ್ತವೆ. ಆದರೆ ಅವುಗಳ ನಡುವೆ ಸಾಮಾನ್ಯವಾಗಿ ಯಾರೂ ಪರಿಗಣಿಸದ ಒಂದು ವಿಶೇಷ ಪಾತ್ರವೆಂದರೆ ಶೂರ್ಪನಖಿಯದು. ತೀರಾ ಪ್ರಖರವಾಗಿ ಎದ್ದು ಕಾಣದೆ, ತೆಳುವಾದ ಮೇಲುಸ್ತರದಲ್ಲೇ ಮುಲುಗಾಡುವ ಈ ಪಾತ್ರ ಇಡೀ ರಾಮಾಯಣದಲ್ಲಿ ಬಂದು ಹೋಗುವ ಆವರ್ತಗಳ ಗಣನೆಯಲ್ಲಿ ಕೆಲವೇ ಕೆಲವಾದರೂ, ಆ ಪಾತ್ರ ಇಡೀ ರಾಮಾಯಣ ಕಥನದಲ್ಲುಂಟುಮಾಡುವ ಪರಿಣಾಮ ನೋಡಿದರೆ, ಈ ಪಾತ್ರದ ಕುರಿತು ಅಷ್ಟಾಗಿ ಪರಿಶೀಲನೆ, ವಿಶ್ಲೇಷಣೆ ನಡೆದಿಲ್ಲವೆಂದೇ ಕಾಣುತ್ತದೆ. ಮತ್ತಷ್ಟು ಓದು 
ಮನುಷ್ಯನಾಗುವುದೆಂದರೇನು?
-ರಾಜಕುಮಾರ.ವ್ಹಿ.ಕುಲಕರ್ಣಿ, ಮುಖ್ಯಗ್ರಂಥಪಾಲಕ
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ
ಮೊನ್ನೆ ನನ್ನೂರಿನ ಆ ಹಳ್ಳಿಗೆ ಹೋಗಿದ್ದೆ. ಊರ ಹೆಬ್ಬಾಗಿಲಲ್ಲಿ ಪರಿಚಿತರೋರ್ವರು ಭೇಟಿಯಾದರು. ಅದು ಇದು ಮಾತನಾಡುತ್ತ ತಮ್ಮ ಅಣ್ಣನ ಮಗನಿಗೆ ಸರ್ಕಾರಿ ಕೆಲಸ ಸಿಕ್ಕ ವಿಷಯ ತಿಳಿಸಿದರು. ವಿಷಯ ಕೇಳಿ ತುಂಬ ಸಂತೋಷವಾಯಿತು. ಬಾಲ್ಯದಿಂದಲೂ ಬಡತನದಲ್ಲೇ ಬೆಳೆದ ಹುಡುಗ ಪರಿಶ್ರಮ ಪಟ್ಟು ಓದಿ ಡಿಪ್ಲೋಮ ಡಿಗ್ರಿ ಸಂಪಾದಿಸಿದ್ದ. ಆತನ ಅರ್ಹತೆಗೆ ತಕ್ಕುದಾದ ಹುದ್ದೆ ಲೋಕೋಪಯೋಗಿ ಇಲಾಖೆಯಲ್ಲಿ ಲಭಿಸಿತ್ತು. ನನ್ನ ಪರಿಚಿತರು ತಮ್ಮ ಅಣ್ಣನ ಮಗನ ಕುರಿತು ಅಭಿಮಾನದಿಂದ ಮಾತನಾಡಿದರು. `ನೋಡ್ರಿ ಅವ್ನಿಗಿ ಭಾಳ ಛಲೋ ಡಿಪಾರ್ಟ್‍ಮೆಂಟ್ ಸಿಕ್ಕಾದ. ಇನ್ನ ಮುಂದ ಅವ್ನಿಗಿ ಯಾರೂ ಹಿಡಿಯೋ ಹಂಗಿಲ್ಲ. ಯಾಕಂದ್ರ ಮುಂದ ಸುರಿಯೋದೆಲ್ಲ ರೊಕ್ಕದ ಮಳಿನಾ. ಬ್ಯಾಡ ಅಂದ್ರೂ ಮಂದಿ ಮನಿಗಿ ಬಂದು ರೊಕ್ಕ ಕೊಡ್ತಾರ. ರೊಕ್ಕ ಎಣಿಸಾಕ ಅಂವ ಒಂದು ಆಳ ಇಟ್ಕೊಬೇಕಾಗ್ತದ. ಎರ್ಡ ವರ್ಷದಾಗ ಅಂವ ಹ್ಯಾಂಗ ಮನಷ್ಯಾ ಆಗ್ತಾನ ನೋಡ್ರಿ’ ಒಂದು ಕ್ಷಣ ಕಾಲ ಸ್ತಬ್ಧವಾದಂತಾಯಿತು. ಹಾಗಾದರೆ ಅವರ ದೃಷ್ಟಿಯಲ್ಲಿ ಮನುಷ್ಯನಾಗುವುದೆಂದರೇನು. ಸರ್ಕಾರಿ ನೌಕರಿಗೆ ಸೇರಿ ಲಂಚ ಹೊಡೆಯುತ್ತ, ಬಂಗ್ಲೆ ಮೇಲೆ ಬಂಗ್ಲೆ ಕಟ್ಟಿಸಿ, ಹವಾನಿಯಂತ್ರಿತ ಕಾರುಗಳಲ್ಲಿ ಓಡಾಡುತ್ತ ಐಷಾರಾಮಿ ಬದುಕು ನಡೆಸುವಾತನೇ ನಿಜವಾದ ಮನುಷ್ಯ ಎನ್ನುವ ಅವರ ಯೋಚನಾ ಲಹರಿ ಅರೇ ಕ್ಷಣ ನನ್ನನ್ನು ನಾನು ಯಾರು? ಎನ್ನುವ ಯೋಚನೆಗೆ ಹಚ್ಚಿತು. ಒಂದಿಷ್ಟು ಶೃದ್ಧೆ, ನಿಷ್ಟೆ, ಪ್ರಾಮಾಣಿಕತೆಯ ನೆರಳಲ್ಲಿ ಬದುಕು ನೂಕುತ್ತಿರುವ ಜನ ಮನುಷ್ಯರೇ ಅಲ್ಲ ಎನ್ನುವ ಅಭಿಪ್ರಾಯ ಅವರ ಮಾತಿನುದ್ದಕ್ಕೂ ಇಣುಕುತ್ತಿತ್ತು. ಮತ್ತಷ್ಟು ಓದು 
ವಿಡಂಬನೆ: ಸಾಹಿತ್ಯ ಗದ್ದುಗೆ ಹಾಗೂ ಮಣ್ಣಂಗಟ್ಟಿ ಸಾಹಿತ್ಯ!
– ತುರುವೇಕೆರೆ ಪ್ರಸಾದ್
ತರ್ಲೆಕ್ಯಾತನಳ್ಳಿ ಖ್ಯಾತ ಸಾಹಿತಿ ಅನಂತ ಜೋಷಿ ಮತ್ತು ತಾಲ್ಲೂಕ ಸಾಹಿತ್ಯ ಸಭೆಯ ನೂತನ ಅಧ್ಯಕ್ಷ ಗುದ್ಲಿಂಗ ಜಮಖಂಡಿ ಅವರ ಮಧ್ಯೆ ನಡೆದ ಫೋನ್ ಸಂಭಾಷಣೆ ಹೀಗಿದೆ:
‘ನಮಸ್ಕಾರ್ರೀ ! ನಾನ್ ಜಮಖಂಡಿ ಮಾತಾಡಕ್ ಹತ್ತೀನಿ’
‘ಓಹೋ! ಜಮಖಂಡಿ ಅವರು!ಏನ್ರಪ್ಪಾ! ಆರಾಮದೀರೇನು?’
‘ಹಾಂ! ಆರಾಮದೀನಿ..ವಿಷ್ಯ ತಿಳೀತೇನ್ರೀ ಎಪ್ಪಾ?’
‘ಯಾವ ವಿಷ್ಯ ಹೇಳಕ್ ಹತ್ತೀರಿ ನೀವು? ಕೊಶ್ನೆ ಪೇಪರ್ ಲೀಕಾಯ್ತಲ್ಲ ಅದಾ ? ಇಲ್ಲ ಯಡಿಯೂರಪ್ಪಗೆ ಅಧ್ಯಕ್ಷ ಪಟ್ಟ ಸಿಕ್ತಲ್ಲ ಅದಾ?’
‘ಏ ! ಅವೆಲ್ಲಾ ಹಳೇದಾತ್ ಬಿಡ್ರಿ, ಈಗ ನಂಗ್ ಸಾಹಿತ್ಯ ಸಭೆ ಅಧ್ಯಕ್ಷಗಿರಿ ಸಿಕ್ಕೈತೆ, ಮೊನ್ನೆ ಯುಗಾದಿ ಮುಂದ ಪೇಪರ್ನಾಗ್ ಬಂದಿತ್ತು, ನೀವು ನೋಡ್ಲಿಲ್ಲೇನು?’
‘ಅರೆ! ಹೌದಾ? ನಿಮ್ಗೆ ಅಧ್ಯಕ್ಷಗಿರಿ ಕಟ್ಯಾರಾ? ಅಂದ್ರೆ ಹಾರ ತುರಾಯಿ ಹಾಕಿಸ್ಕೊಳೋಕ್ ಕೊಳ್ ಚಾಚ್ಕಂಡ್ ಕುಂತ್ ಬಿಟ್ರಿ ಅನ್ನಿ, ಇಂದ್ರಾಬಾಯವ್ರು ನಮಗಾ ಒಂದ್ ಮಾತೂ ಕೇಳ್ದ, ಸಭೆನೂ ಕರೀದೆ ನಿಮ್ಮನ್ನ ಹೆಂಗ್ ಅಧ್ಯಕ್ಷ ಮಾಡಾರೆ?’
‘ನಿಮ್ಗೆ ಇದ್ ಕೇಳಿದ್ ಕೂಡ್ಲೆ ಹೊಟ್ಟೆನಾಗೆ ಮೆಣಸಿನಕಾಯ್ ಕಿವುಚಿದಂಗಾಗ್ತದೆ ಅಂತ ನಂಗೊತ್ತಿತ್ತು ಬಿಡ್ರಲಾ! ಅದೆಂಥ ಹೊಟ್ಟೆ ಉರೀನ್ರೀ ನಿಮ್ದು..! ಇನ್ನೊಬ್ರಿಗೆ ಒಳ್ಳೇದಾತು ಅಂದ್ರೆ ಸಹಿಸೋ ಮಂದಿ ಅಲ್ಲ ನೀವು’ ಮತ್ತಷ್ಟು ಓದು 
ಸಾಯಣರ ವೇದವ್ಯಾಖ್ಯಾನವು ಏನನ್ನು ತಿಳಿಸುತ್ತದೆ?
– ವಿನಾಯಕ ಹಂಪಿಹೊಳಿ
ಸಾಯಣಾಚಾರ್ಯರು ಋಗ್ವೇದಕ್ಕೆ ಭಾಷ್ಯವನ್ನು ಬರೆಯುವಾಗ ಮೊದಲು ವೇದ ಎಂದರೇನು ?, ಅದರ ಲಕ್ಷಣವೇನು ಎಂಬುದರ ಕುರಿತು ಒಂದು ದೀರ್ಘ ಚರ್ಚೆಯನ್ನು ಮಾಡಿದ್ದಾರೆ. ಅದರಲ್ಲಿ ಪೂರ್ವಪಕ್ಷದ ವಾದಗಳನ್ನೆಲ್ಲ ಒಂದೊಂದಾಗಿ ಪರಿಗಣಿಸಿ, ವೇದದ ಲಕ್ಷಣದ ಕುರಿತು ತಮ್ಮ ಸಿದ್ಧಾಂತವನ್ನು ಮಂಡಿಸಿ, ಪೂರ್ವಪಕ್ಷಿಯ ಸಂದೇಹಗಳನ್ನೆಲ್ಲ ಪರಿಹರಿಸುತ್ತಾ ಸಾಗಿದ್ದಾರೆ. ಆ ಚರ್ಚೆ ಏನು ಎಂಬುದು ಮುಖ್ಯವಲ್ಲ. ಆ ಚರ್ಚೆಯಲ್ಲಿ ಪೂರ್ವಪಕ್ಷಿಗಳು ಮತ್ತು ಸಿದ್ಧಾಂತಿಗಳು ವೇದದ ಕುರಿತು ಯಾವ ದೃಷ್ಟಿಕೋಣವನ್ನು ಇಟ್ಟುಕೊಂಡಿದ್ದರು ಎಂಬುದು ಇಲ್ಲಿ ಮುಖ್ಯ. ಹೀಗಾಗಿ ಆ ಚರ್ಚೆಯ ಆದಿಭಾಗದ ಸಾರಾಂಶವನ್ನು ಮಾತ್ರ ನೋಡೋಣ. ಮೊದಲು ಪೂರ್ವಪಕ್ಷದ ವಾದಗಳನ್ನು ಪಟ್ಟಿ ಮಾಡಿ ನಂತರ ಸಾಯಣರು ಕೊಟ್ಟ ವೇದದ ವ್ಯಾಖ್ಯಾನವನ್ನು ನೀಡಲಾಗಿದೆ. ಪೂರ್ವಪಕ್ಷದ ಮತ: ವೇದ ಎನ್ನುವದು ಯಾವದನ್ನು? ವೇದಕ್ಕೆ ಲಕ್ಷಣಗಳೇನಾದರೂ ಇವೆಯೇ? ಪ್ರತ್ಯಕ್ಷ, ಅನುಮಾನ ಮತ್ತು ಆಗಮ ಎಂಬ ಮೂರು ಪ್ರಮಾಣಗಳಿವೆಯಲ್ಲ (ಊಟ ಮಾಡಿದರೆ ಹೊಟ್ಟೆ ತುಂಬುತ್ತದೆ ಎನ್ನುವದಕ್ಕೆ ಪ್ರತ್ಯಕ್ಷ ಪ್ರಮಾಣ, ಹೊಗೆಯಾಡುತ್ತಿರುವಲ್ಲಿ ಬೆಂಕಿಯಿರಬಹುದೆಂಬುದಕ್ಕೆ ಅನುಮಾನ ಪ್ರಮಾಣ, ಯಾಗದಿಂದ ಸ್ವರ್ಗಪ್ರಾಪ್ತಿ ಎಂಬುದಕ್ಕೆ ಆಗಮ ಪ್ರಮಾಣ), ಅವುಗಳಲ್ಲಿ ಕೊನೆಯ ಆಗಮ ಪ್ರಮಾಣವೆಂಬುದೇ ವೇದದ ಲಕ್ಷಣವೆನ್ನಲು ಸಾಧ್ಯವಿಲ್ಲ. ಏಕೆಂದರೆ ಮನ್ವಾದಿ ಸ್ಮೃತಿಗಳೂ ಆಗಮಗಳಾಗಿವೆ. ವೇದ ಎನ್ನುವದು ಸ್ವರ್ಗ ಅಥವಾ ಮೋಕ್ಷಕ್ಕೆ ಸಾಧನ ಎಂಬ ಲಕ್ಷಣವನ್ನೂ ಹೇಳಲು ಸಾಧ್ಯವಿಲ್ಲ ಕಾರಣ ಇತಿಹಾಸ ಪುರಾಣಗಳೂ ಸ್ವರ್ಗ ಅಥವಾ ಮೋಕ್ಷಕ್ಕೆ ಸಾಧನಗಳಾಗಿರುತ್ತವೆ. ಆಗಮವೇ ವೇದದ ಲಕ್ಷಣ ಎನ್ನುವದು ಅತಿವ್ಯಾಪ್ತಿದೋಷ ಒಳಗೊಂಡಿದೆ. ಬೆಳ್ಳಗಿರುವದು ಹಾಲಿನ ಲಕ್ಷಣ ಎಂದರೆ, ಸುಣ್ಣವೂ ಬೆಳ್ಳಗಿರುವದರಿಂದ, ಈ ಲಕ್ಷಣವಾಕ್ಯವು ಅತಿವ್ಯಾಪ್ತಿದೋಷ (Necessary But Not Sufficient) ಎಂಬ ದೋಷವನ್ನು ಹೊಂದಿರುತ್ತದೆ. ಮತ್ತಷ್ಟು ಓದು 
ಶನಿಯ ಬೆನ್ನೇರಿದ ಕಾಕ, ಇದೆಲ್ಲ ನಾಟಕ ಯಾಕ?
– ರೋಹಿತ್ ಚಕ್ರತೀರ್ಥ
ನಮ್ಮ ದೇಶದಲ್ಲಿ ಖರ್ಚಿಲ್ಲದೆ ಪ್ರಸಿದ್ಧಿ ಒದಗಿಸುವ ಎರಡು ಸಂಗತಿಗಳಿವೆ. ಒಂದು ಬುದ್ಧಿಜೀವಿಯಾಗುವುದು, ಇನ್ನೊಂದು ಮಹಿಳಾವಾದಿಯಾಗುವುದು. ಬುದ್ಧಿಜೀವಿಯಾಗಬೇಕಾದರೆ ನೀವು ಸೆಕ್ಯುಲರ್ ಎಂದು (ಏನೆಂದು ಗೊತ್ತಿರದಿದ್ದರೂ) ತೋರಿಸಿಕೊಳ್ಳಬೇಕು. ಹಿಂದೂಗಳನ್ನು, ಅವರ ಆಚರಣೆ, ಪದ್ಧತಿ, ಹಬ್ಬಹರಿದಿನಗಳನ್ನು ಬಯ್ಯಬೇಕು. ಹಿಂದೂ ದೇವರನ್ನು, ದೇವಾಲಯಗಳನ್ನು ಪ್ರಶ್ನಿಸಬೇಕು. ಮುಸ್ಲಿಂ ಮತ್ತು ಕ್ರಿಶ್ಚಿಯನ್ ರಿಲಿಜನ್ನುಗಳನ್ನು ಓಲೈಸಬೇಕು. ಮೋದಿಯನ್ನು ತೆಗಳಬೇಕು. ಭಯೋತ್ಪಾದಕರನ್ನು, ನಕ್ಸಲರನ್ನು ಬೆಂಬಲಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಿಮಗೆ ಬೆನ್ನುಮೂಳೆ ಇರಬಾರದು. ಜೊತೆಗೆ, ಅರ್ಥವತ್ತಾದ ಮಾತು, ತರ್ಕಬದ್ಧವಾದ ಚಿಂತನೆ – ಇವೆರಡರ ಬಗ್ಗೆ ನೀವು ಎಂದೆಂದೂ ತಲೆ ಕೆಡಿಸಿಕೊಂಡಿರಬಾರದು. ಹಾಗೆಯೇ, ಮಹಿಳಾವಾದಿಯಾಗುವುದು ಕೂಡ ಸುಲಭ. ಮೊದಲಿಗೆ ಮಹಿಳಾವಾದ = ಪುರುಷದ್ವೇಷ ಎಂಬ ಸಮೀಕರಣ ಬರೆಯಿರಿ. ಮಹಿಳೆಗೆ ಸ್ವಾತಂತ್ರ್ಯ ಬೇಕು ಅನ್ನಿ. ಉದ್ಯೋಗದಲ್ಲಿ, ಸಂಸತ್ತಿನಲ್ಲಿ, ಬಸ್ಸಿನಲ್ಲಿ, ಚಿತ್ರಮಂದಿರದಲ್ಲಿ, ನಡೆದಾಡುವ ರಸ್ತೆಯಲ್ಲಿ – ಹೀಗೆ ಎಲ್ಲೆಲ್ಲೂ ಹೆಣ್ಣಿಗೆ ಸಮಾನತೆ ಬೇಕೆಂದು ಬೊಬ್ಬೆ ಹೊಡೆಯಿರಿ. ಉದ್ಧೇಶವೇ ಇಲ್ಲದೆ ಪ್ರತಿಭಟನೆ ಮಾಡಿದರೂ ಓಕೆ. ವಿರೋಧಿಸದವರಿಗೂ ಧಿಕ್ಕಾರ ಕೂಗಿದರೂ ಓಕೆ. ಒಟ್ಟಲ್ಲಿ ನಿಮ್ಮ ಮಾತು, ಕೂಗಾಟ, ಹಾರಾಟ, ಹೋರಾಟವೆಲ್ಲ ನಾಲ್ಕು ಜನಕ್ಕೆ ಗೊತ್ತಾಗಬೇಕು, ಪತ್ರಿಕೆ ಟಿವಿಗಳಲ್ಲಿ ಬರಬೇಕು. ಮತ್ತು ಇವೆಲ್ಲದರ ಜೊತೆ, ನೀವು, ಮೇಲೆ ಹೇಳಿದ ಬುದ್ಧಿಜೀವಿಯೂ ಆಗಿರಬೇಕಾದ್ದು ಅನಿವಾರ್ಯ. ಎರಡು ವರ್ಷಗಳ ಹಿಂದೆ ಒಂದು ಬುದ್ಧಿಜೀವಿ ಮಹಿಳಾಪರ ಲೇಖಕಿ, “ಮೋದಿಯ ಮುಖ ನೋಡಿದರೇನೇ ಆತ ಸ್ತ್ರೀದ್ವೇಷಿ ಅನ್ನೋದು ಗೊತ್ತಾಗುತ್ತದೆ” ಎಂದಿದ್ದರು. ಇಂಥ ಹೇಳಿಕೆ ಕೊಡುವವರಿಗೆ ಮಹಿಳಾಪರ ಸಂಘಟನೆಗಳಲ್ಲಿ ಒಳ್ಳೆಯ ಬೇಡಿಕೆ ಇದೆ. ಮತ್ತಷ್ಟು ಓದು 









