ತಲೆಕೆಟ್ಟ ಕಾನೂನುಗಳು ಮತ್ತು ಸ್ವಂತ ಬುದ್ಧಿಯಿಲ್ಲದ ಜೀವಿಗಳು
– ರಾಕೇಶ್ ಶೆಟ್ಟಿ
ಇತ್ತೀಚೆಗೆ ಮತ್ತೂರಿನಲ್ಲಿ ನಡೆದ ಸೋಮಯಾಗದಲ್ಲಿ ಸಂಕೇತಿ ಬ್ರಾಹ್ಮಣರು ಮೇಕೆ ಬಲಿ ಕೊಟ್ಟು ತಿಂದರಂತೆ, ಸೋಮರಸ ಕುಡಿದರಂತೆ ಅಂತ ಪ್ರಗತಿಪರರ ವಾಣಿಯೊಂದು ಸುಳ್ಳು ಸುದ್ದಿ ಬರೆಯಿತು. ಈ ಸುದ್ದಿಯಿಂದಾಗಿ ಟೌನ್ ಹಾಲ್ ಮುಂದೆ ನಿಂತು ದನ ತಿನ್ನುವುದನ್ನು ಬೆಂಬಲಿಸುವ ಕಬಾಬ್ ಕ್ರಾಂತಿಕಾರಿಗಳಿಗೂ ಹೊಟ್ಟೆನೋವು ಕಾಣಿಸಲಾರಂಭಿಸಿತು. ಇವರನ್ನು ಕರೆಯದೇ ತಿಂದರೂ ಎಂದು ಹೊಟ್ಟೆ ನೋವಾಗಿತ್ತೋ ಏನೋ. PhD ಮಹಾಶಯನೊಬ್ಬ ಬ್ರಾಹ್ಮಣರು ಮಾಂಸ ತಿನ್ನಲು ಶುರು ಮಾಡಿದರೆ ರೇಟ್ ಜಾಸ್ತಿಯಾಗುತ್ತೆ ಅಂತ ಅಳ್ತಾ ಇದ್ದ. ಎಂತೆಂತವರೆಲ್ಲ ವಿವಿಗಳಲ್ಲಿ ಪಾಠ ಮಾಡುತ್ತಾರಪ್ಪಾ ಅನಿಸಿತು. ಎಲ್ಲಾ (ಜಾತಿ/ಪಂಗಡದ) ಬ್ರಾಹ್ಮಣರು ಸಸ್ಯಹಾರಿಗಳು ಅನ್ನೋದು “ಮೂಢನಂಬಿಕೆ”. ಸಿದ್ರಾಮಯ್ಯನವರಿಗೆ ಹೇಳಿ ಮೌಢ್ಯ ನಿಷೇಧ ಕಾಯ್ದೆಯ ಮೂಲಕ ಈ ಮೂಢನಂಬಿಕೆಯನ್ನು ನಿಷೇಧಿಸಬೇಕು. ಕಾಶ್ಮೀರಿ ಪಂಡಿತರಿಗೆ ಶಿವರಾತ್ರಿ ಹಬ್ಬದಂದು ಮಾಂಸದಡುಗೆಯೇ ವಿಶೇಷವಾದದ್ದು. ಬಂಗಾಳಿ, ಓಡಿಶಾದ ಬ್ರಾಹ್ಮಣರೂ, ಗೌಡ ಸಾರಸ್ವತ ಬ್ರಾಹ್ಮಣರಲ್ಲೂ ಮಾಂಸಹಾರಿಗಳಿದ್ದಾರೆ. Read more
Sin ಅನ್ನು ಭಾಷಾಂತರಿಸಿದ ಪಾಪವೇ ವಸಾಹತುಪ್ರಜ್ಞೆ
– ವಿನಾಯಕ ಹಂಪಿಹೊಳಿ
Sin ಶಬ್ದದ ಅರ್ಥವೇನು ಎಂದು ಕೇಳಿದರೆ ಎಗ್ಗಿಲ್ಲದೇ ಪಾಪ ಎಂದು ಉಚ್ಚರಿಸಿಬಿಡುತ್ತೇವೆ. ಇದರಲ್ಲಿ ಅಷ್ಟು ತಲೆಕೆಡಿಸಿಕೊಳ್ಳುವಂಥದ್ದೇನೂ ಇಲ್ಲ ಎಂದೇ ಅನ್ನಿಸುತ್ತದೆ. ಮಾಡಬಾರದ್ದನ್ನು ಮಾಡುವದು ಪಾಪ ಎಂದು ನಾವೂ ಹೇಳುತ್ತೇವೆ. ಪಾಶ್ಚಿಮಾತ್ಯ ಕ್ರೈಸ್ತರೂ ಹೇಳುತ್ತಾರೆ. ಹೀಗಾಗಿ ಒಂದು ಹಂತದಲ್ಲಿ Sin=ಪಾಪ ಎನ್ನುವದು ಒಪ್ಪಿತವೇ. ಹಾಗೆಯೇ sinner=ಪಾಪಿ ಎಂಬುದೂ ಸರಿ. ಆದರೆ ಇಲ್ಲೊಂದು ಸಮಸ್ಯೆಯಿದೆ. ಪಾಪದ ವಿರುದ್ಧ ಪದ ಏನು ಎಂದಾಗ ಕ್ಷಣವೂ ತಡಮಾಡದೇ ಪುಣ್ಯ ಎನ್ನುತ್ತೇವೆ. ಆದರೆ Sin ಶಬ್ದದ ವಿರುದ್ಧ ಪದ ಏನು ಎಂದು ಕೇಳಿದರೆ?
ಮುಗ್ಗರಿಸಿ ಬಿದ್ದ ಅನುಭವವಾಯಿತಲ್ಲವೇ? ಇರಲಿ, Thesaurus ನಲ್ಲಿ Sin ಗೆ ಎಷ್ಟೊಂದು ವಿರುದ್ಧಪದಗಳಿವೆಯೋ ಅವನ್ನೆಲ್ಲ ಗಮನಿಸೋಣ, ಅವುಗಳು advantage, good, goodness, good deed, kindness, obedience, right, virtue, perfection, behavior, morality.ಇವೆಲ್ಲ ಶಬ್ದಗಳೂ ಪುಣ್ಯದ ಸುತ್ತ ಗಿರಕಿ ಹೊಡೆಯುತ್ತವೆಯೇ ವಿನಃ ಒಂದಾದರೂ ಪುಣ್ಯವನ್ನು ಸಂಪೂರ್ಣವಾಗಿ ಪ್ರತಿನಿಧಿಸುವಷ್ಟು ಪುಣ್ಯ ಕಟ್ಟಿಕೊಂಡಿದೆಯೇ? “ನೀವು ಜೀವನದಲ್ಲಿ ಬಹಳಷ್ಟು ಪುಣ್ಯ ಗಳಿಸಿದ್ದೀರಿ” ಎನ್ನುವದನ್ನು ಹೇಗೆ ಭಾಷಾಂತರಿಸುತ್ತೀರಿ?
5ನೇ ವರ್ಷಕ್ಕೆ,ನಾಡಿನ ಬೌದ್ಧಿಕ ಕ್ಷೇತ್ರಕ್ಕೆ ನಿಲುಮೆಯಿಂದ 3 ಪುಸ್ತಕಗಳು
ಅಂದು ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ,”ಇವರಂತೆ ನಮ್ಮದು ವಿಧ್ವಂಸಕ ಮಾರ್ಗವಲ್ಲ;ನಮ್ಮದು ಜ್ಞಾನ ಮಾರ್ಗ”ವೆಂದಾಗ,ನನ್ನ ಮುಖಾಮುಖಿಯಾಗಿದ್ದವರು “ಮೊದಲ ಬಾರಿ ಕ್ಯಾಮೆರಾ ಮುಂದೆ ಬಂದಿರುವ ಜೋಷ್ ಹೀಗೆಲ್ಲ ಮಾತನಾಡಿಸುತ್ತದೆ” ಅನ್ನುವ ಅರ್ಥದಲ್ಲೆನೋ ವ್ಯಂಗ್ಯವಾಡಿದ್ದರು.ನನಗದು ಕೇಳಿಸಿತಾದರೂ,ಉತ್ತರಿಸಬೇಕಾದ ಸಮಯ ಅದಲ್ಲ ಅಂತ ಸುಮ್ಮನಾಗಿದ್ದೆ…
Read more