ಕಾನೂನು Vs ಪ್ರತ್ಯೇಕತೆ – ಬದಲಾಗಬೇಕಾಗಿದ್ದು ಯಾರು ?
– ಶೈಲೇಶ್ ಕುಲ್ಕರ್ಣಿ
ಕಾಲಕಾಲಕ್ಕೆ ಭಾರತದ ಕೆಲವೊಂದು ರಾಜ್ಯಗಳ ಆಡಳಿತಾರೂಢ ಜನಪ್ರತಿನಿಧಿಗಳೇ ಭಾರತವಿರೋಧಿ ಭಾವನೆಗಳನ್ನ ಸಾರ್ವಜನಿಕವಾಗಿ ಪ್ರದರ್ಶನಕ್ಕಿಡೋದು ಅವ್ಯಾಹತವಾಗಿ ನಡೆದುಕೊಂಡು ಬಂದಿದೆ.ಈಗ್ಗೆ ಸ್ವಲ್ಪ ಸಮಯದ ಕೆಳಗೆ ಜಮ್ಮುಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸಂವಿಧಾನದ ೩೭೦ನೆ ವಿಧಿ ಆ ರಾಜ್ಯದಲ್ಲಿ ಜಾರಿಗೊಂಡ ಪಕ್ಷದಲ್ಲಿ ಆ ರಾಜ್ಯ ಭಾರತದಭಾಗವಾಗಿ ಮುಂದುವರೆಯೋದಿಲ್ಲ ಅಂತ ಸಾರ್ವಜನಿಕವಾಗಿಯೇ ಹೇಳಿದ್ದರು.ಹೀಗೆ ಪ್ರತೀ ಬಾರಿ ಒಡಕಿನ ರಾಗ ಆಲಾಪಿಸಿದಾಗಲೂ ಅವರೆಲ್ಲರ ದುಃಖಕ್ಕೆ AFSPA ನಂಥ ಕಾನೂನನ್ನೇ ಹೊಣೆಯಾಗಿಸೋದು ಮಾಮೂಲಿ ಸಂಗತಿ .
ಜಮ್ಮು-ಕಾಶ್ಮೀರದ ಜೊತೆಗೇ ಭಾರತದ ನೈಋತ್ಯದ ರಾಜ್ಯಗಳ(ಅಸ್ಸಾಂ, ಮಣಿಪೂರ್) ಕೆಲ ಚುನಾಯಿತ ಪ್ರತಿನಿಧಿಗಳು ತಮ್ಮ ರಾಜ್ಯಗಳಲ್ಲಿ ಭಾರತೀಯ ಸೈನ್ಯ AFSPA (ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ೧೯೫೮) ಕಾನೂನಿನ ಅಡಿಯಲ್ಲಿ ಇರೋದನ್ನ ಬಲವಾಗಿ ವಿರೋಧಿಸಿಕೊಂಡೆ ಬಂದಿದ್ದಾರೆ. ಈ ವಿಶೇಷಾಧಿಕಾರದ ಅನ್ವಯದಿಂದ ತಮ್ಮ ರಾಜ್ಯಗಳು ಸೈನ್ಯದ ಛಾಯೆಯಲ್ಲೇ ಬದುಕಬೇಕಾದ ಅನಿವಾರ್ಯಕ್ಕೆ ಸಿಲುಕಿವೆ. ಸಂಪೂರ್ಣರಾಷ್ಟ್ರವೇ ಮಿಲಿಟರಿಯ ಹಂಗಿಲ್ಲದೆ ಮನಸೋಇಚ್ಛೆ ಬಾಳ್ವೆ ನಡೆಸುತ್ತಿರುವಾಗ ಪ್ರಜಾತಂತ್ರದ ಹೆಸರಿನಡಿಯಲ್ಲಿ ಹಾಡುಹಗಲೇ ತಮ್ಮ ಸ್ವಾತಂತ್ರ್ಯಹರಣಕ್ಕೆ ಸೈನ್ಯದಬಳಕೆ ಪ್ರಜಾತಂತ್ರಕ್ಕೆ ಮತ್ತು ಮಾನವೀಯತೆಗೆ ಮಾಡಿದ ಅಪಚಾರ ಅನ್ನೋದು ಅವರ ವಾದ .
ಪರಿಸ್ಥಿತಿಯ ಲಾಭಪಡೆವ ಸೈನ್ಯ ಅಲ್ಲಿನ ಪ್ರಜೆಗಳ ಮೇಲೆ ದೌರ್ಜನ್ಯಕ್ಕೂ ಮುಂದಾಗುತ್ತದೆ ಅನ್ನೋದು ಆ ವಾದದ ಸರಣಿ. .
ಕೂಲಂಕುಶವಾಗಿ ಈ ಎಲ್ಲ ವಾದಗಳ ಮೂಲ ಕೆದಕಿದಲ್ಲಿ ಅಲ್ಲಿ ಅಡಗಿರೋದು ಕ್ಷುದ್ರರಾಜಕಾರಣವಲ್ಲದೆ ಜನಪರ ಕಾಳಜಿ ಅಥವ ಮಾನವಸಂವೇದನೆ ಖಂಡಿತ ಅಲ್ಲ ಅನ್ನೋದು ಸ್ಪಷ್ಟವಾಗಿ ಕಾಣಬಹುದು.
ತುಷ್ಟೀಕರಣ ನಿಲ್ಲದ ಹೊರತು ಕಾಶ್ಮೀರ ತಣಿಯದು
– ಯೋಗೀಶ ತೀರ್ಥಪುರ
ಕಾಶ್ಮೀರ ಹಿಂದೂಗಳ ಪಾಲಿಗೆ ನರಕವಾಗಿ ಪರಿವರ್ತಿತವಾಗಿದೆ. ಹಿಂಸೆ, ಶೋಷಣೆಯ ದಳ್ಳುರಿಯಲ್ಲಿ ಇಲ್ಲನ ಹಿಂದೂಗಳ ಸ್ಥಿತಿ ತೀರಾ ದಯನೀಯವಾಗಿದೆ. ಇಷ್ಟೆಲ್ಲ ನಡೆದಿದ್ದರೂ ಕಾಶ್ಮೀರ ಸರ್ಕಾರ ಹಾಗೂ ಕೇಂದ್ರ ಸರ್ಕಾರ ತುಷ್ಟೀಕರಣ ರಾಜಕಾರಣದಲ್ಲೇ ಮುಂದುವರಿದಿರುವುದು ದುರದೃಷ್ಟಕರ.
1947ರ ವಿಭಜನೆಯ ನಂತರದ ಕಾಲದಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ದಿಂದ ಸುಮಾರು 4.5 ಲಕ್ಷ ಹಿಂದುಗಳು ಕಾಶ್ಮೀರಕ್ಕೆ ಸ್ಥಳಾಂತರಗೊಂಡರು. ಈ ಹಿಂದುಗಳಿಗೆ ಕಾಶ್ಮೀರದಲ್ಲಿ ಮತದಾನದ ಹಕ್ಕಿಲ್ಲ ಮತ್ತು ಯಾವುದೇ ಪರಿಸ್ಥಿತಿಯಲ್ಲಿ ಹಿಂದುಗಳಿಗೆ ವಿಧಾನಸಭೆಯಲ್ಲಿ 31% ರಷ್ಟೇ ಪ್ರತಿ ನಿಧಿತ್ವ ಸಿಗುವಂತೆ ಒಟ್ಟು ಸ್ಥಾನಗಳ ಹೊಂದಾಣಿಕೆಯನ್ನು ಮಾಡಲಾಗಿದೆ.
ಕಾಶ್ಮೀರಿ ಹಿಂದುಗಳಲ್ಲಿ ಸಾಕ್ಷರತಾ ಪ್ರಮಾಣವು 88%ರಷ್ಟು ಇದ್ದರೂ ರಾಜ್ಯ ಸರಕಾರದ ಸೇವೆ, ಸಾರ್ವಜನಿಕವಲಯ ಮತ್ತು ಸರಕಾರಿ ಕಂಪೆನಿಗಳಲ್ಲಿ ಹಿಂದು ಕಾರ್ಮಿಕರ ಪ್ರಮಾಣವು 4.8% ರಷ್ಟು ಮಾತ್ರ ಇದೆ. 1980 ರಿಂದ 1990ರ ಅವಧಿಯಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚಾದ ಮೇಲೆ ಈ ಪ್ರಮಾಣವು 1.7%ಕ್ಕೆ ಇಳಿಯಿತು. ಕಾಶ್ಮೀರದಲ್ಲಿನ ಯಾವ ಆರ್ಥಿಕ ವ್ಯವಹಾರವೂ ಹಿಂದೂಗಳ ಕೈಯಲ್ಲಿ ಇಲ್ಲ. ಕಾಶ್ಮೀರದ 97.4% ಭೂಮಿಯು ಮುಸಲ್ಮಾನರ ಒಡೆತನದಲ್ಲಿದೆ. ಕೇವಲ 2.6% ಭೂಮಿಯು ಮಾತ್ರ ಹಿಂದು ಮತ್ತು ಇತರ ಅಲ್ಪಾಸಂಖ್ಯಾತರ ಒಡೆತನದಲ್ಲಿದೆ. 1985ರಲ್ಲಿ ಕಾಶ್ಮೀರದಲ್ಲಿ ನೋದವಣೆ ಮಾಡಲ್ಪಟ್ಟ ಲಘು ಉದ್ಯೋಗಗಳ ಸಂಖ್ಯೆ 46,293 ಇತ್ತು. ಇದರಲ್ಲಿ 0.01% ರಷ್ಟು ಉದ್ಯೋಗಗಳು ಹಿಂದುಗಳ ಒಡೆತನದಲ್ಲಿದ್ದವು ಮತ್ತು ವಿದ್ಯುತ್ ಆಧಾರಿತ ಉದ್ಯೋಗಗಳ ಪೈಕಿ 98.9%ರಷ್ಟು ಮುಸಲ್ಮಾನರ ಒಡೆತನದ್ದಲಿವೆ. ಕಾಶ್ಮೀರದಲ್ಲಿನ 96%ರಷ್ಟು ಸೇಬು ತೋಟಗಳ ಜಮೀನು ಮುಸಲ್ಮಾನರ ಒಡೆತನದ್ದಲಿದೆ.





