–ರವಿ ಸಾವ್ಕರ್

ಒಬ್ಬ ಗ್ರಾಹಕನಿಗೆ ಮಾರುಕಟ್ಟೆಯಲ್ಲಿ ಮೋಸವಾಗದಂತೆ ರಕ್ಷಣೆ ಕೊಡಲು “Consumer Protection Act” ಮಸೂದೆಯನ್ನು 1986 ನಲ್ಲಿ ಅಂಗೀಕರಿಸಲಾಯಿತು. ಒಬ್ಬ ಕನ್ನಡಿಗನಿಗೆ ಗ್ರಾಹಕ ಸೇವೆಗಳನ್ನು ಕನ್ನಡದಲ್ಲೇ ಪಡೆಯಲು ಈ ಮಸೂದೆ ಹೇಗೆ ಸಹಕಾರಿಯಾಗಿದೆ ಎಂದು ನೋಡೋಣ.
“Consumer Protection Act” ನಲ್ಲಿ ಗ್ರಾಹಕನ ಕೆಲ ಮೂಲಭೂತ ಹಕ್ಕನ್ನು ಹಾಗೂ ಅವುಗಳನ್ನು ಬಳಸಿಕೊಳ್ಳಬಹುದಾದ ಕೆಲವು ಉದಾಹರಣೆಗಳನ್ನು ಇಲ್ಲಿ ನೋಡೋಣ.
(a) the right to be protected against the marketing of goods and services which are hazardous to life and property;
ಒಬ್ಬ ಗ್ರಾಹಕನಿಗೆ ತನ್ನ ಜೀವಕ್ಕೆ ಅಥವಾ ತನ್ನ ಆಸ್ತಿಗೆ ಹಾನಿ ತರಬಹುದಾದ ಸಾಮಗ್ರಿಗಳ ಮಾರಾಟದಿಂದ ರಕ್ಷಣೆ ಪಡೆಯುವ ಹಕ್ಕು ಇದೆ. ಆದರೆ ನಾವು ದಿನ ನಿತ್ಯ ಬಳಸುವ ಅಡುಗೆ cylinder ಗಳಲ್ಲಿ, ದೀಪಾವಳಿಯಲ್ಲಿ ಸುಡುವ ಪಟಾಕಿಗಳ ಸೂಚನೆಗಳ ಮೇಲೆ , ಔಷಧಿಗಳಲ್ಲಿ ಕನ್ನಡದ ಸೂಚನೆಗಳು ಇಲ್ಲದಾಗಿದೆ. ಸರಿಯಾಗಿ ಬಳಸಲು ಸೂಚನೆಗಳು ಗ್ರಾಹಕರಿಗೆ ಕೊಡದೆ ಇದ್ದುದರಿಂದ ,ಈ ವಸ್ತುಗಳ ಬಳಕೆಗಳಿಂದ ಜನರ ಆಸ್ತಿಗೆ ಅಥವಾ ಜೀವಕ್ಕೆ ಹಾನಿ ಉಂಟಾಗಬಹುದು. ಹಾಗಾಗಿ ಈ ಎಲ್ಲ ವಸ್ತುಗಳ ಮೇಲೂ ಸಹ ಕನ್ನಡದ ಸೂಚನೆ ಇರಲೆಬೇಕಾಗಿದೆ. ವಿಮಾನಗಳಲ್ಲಿ , ರೈಲುಗಳಲ್ಲಿ ,ಸುರಕ್ಷತಾ ಸೂಚನೆಗಳು ಹಾಗೂ ಘೋಷಣೆಗಳು ಇದಕ್ಕೆ ಹೊರತಲ್ಲ