ವಿಷಯದ ವಿವರಗಳಿಗೆ ದಾಟಿರಿ

Posts tagged ‘ಕನ್ನಡ’

14
ಆಕ್ಟೋ

ನಮ್ಮ ನಮ್ಮ ಭಾಷೆಯ ಸಮಸ್ಯೆ

– ಡಾ. ಶ್ರೀಪಾದ ಭಟ್

ಸಹಾಯಕ ಪ್ರಾಧ್ಯಾಪಕ, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು.

ಕನ್ನಡ ಕಲಿವಾರಗಳ ಹಿಂದೆ ಭಾರತದ ಖಗೋಳ ವಿಜ್ಞಾನಿಗಳ ತಂಡ ಮಂಗಳನ ಕಕ್ಷೆಗೆ ಉಪಗ್ರಹವನ್ನು ಯಶಸ್ವಿಯಾಗಿ ಸೇರಿಸಿತು. ಈ ಸಂದರ್ಭದಲ್ಲಿ ಬಹುತೇಕ ಕನ್ನಡ ವಾಹಿನಿಗಳು ಚರ್ಚೆಯನ್ನು ಏರ್ಪಡಿಸಿದ್ದವು. ಖಗೋಳ ಅನ್ನುತ್ತಿದ್ದಂತೆ ಈ ಕುರಿತ ಭಾರತದ ಪ್ರಾಚೀನ ಜ್ಞಾನವೇತ್ತರನ್ನು ಹಾಗೂ ಇಂದಿನ ವಿಜ್ಞಾನಿಗಳನ್ನು ಅಥವಾ ಅವರ ಪ್ರತಿನಿಧಿಗಳು ಅಂದುಕೊಂಡವರನ್ನು ಚರ್ಚೆಗೆ ಆಹ್ವಾನಿಸಬೇಕಲ್ಲ? ವಾಹಿನಿಗಳೂ ಹಾಗೆಯೇ ಮಾಡಿದವು. ಎರಡೂ ಕ್ಷೇತ್ರದವರನ್ನು ಜೊತೆಗೆ ನಡುವೆ ವಿಚಾರವಾದಿಗಳನ್ನು ಕರೆತಂದು ಕೂರಿಸಲಾಗಿದ್ದ ಚರ್ಚೆಯೊಂದನ್ನು ನೋಡುತ್ತಿದ್ದೆ. ಜ್ಯೋತಿಷಶಾಸ್ತ್ರದಲ್ಲಿ ಮಂಗಳನ ಬಗ್ಗೆ ಹೀಗೆ ಹೇಳಿದೆ, ಹಾಗೆ ಹೇಳಿದೆ. ಅದೇ ಸತ್ಯ; ಭಾರತೀಯ ಋಷಿ ಮುನಿಗಳು ಅಣುವಿನ ಬಗ್ಗೂ ಪ್ರಸ್ತಾಪಿಸಿದ್ದಾರೆ, ಅವರಿಗೆಲ್ಲ ತಿಳಿದಿತ್ತು ಎಂಬಂತೆ ಆ ಶಾಸ್ತ್ರದವರು ಅನ್ನುತ್ತಿದ್ದರೆ ಮತ್ತೊಂದೆಡೆ ಹಾಗಾದ್ರೆ ಅವರಿಗೆ ಅಣುಬಾಂಬ್ ತಿಳಿದಿತ್ತಾ? ಇದೆಲ್ಲ ನಾನ್ಸೆನ್ಸ್ ಎಂದು ಆಧುನಿಕ ಜ್ಞಾನ ಪ್ರತಿಪಾದಕರು ಬಿಸಿಬಿಸಿ ಚರ್ಚೆ ಮಾಡುತ್ತಿದ್ದರು.ತಮ್ಮ ತಮ್ಮ ಪ್ರತಿಪಾದನೆಗೆ ಎರಡೂ ಗುಂಪಿನವರೂ ಬಲವಾಗಿ ಅಂಟಿಕೊಂಡೇ ಇದ್ದರು. ಸಮಯವಾಯ್ತು, ಚರ್ಚೆ ನಿಂತಿತು. ಇಂಥ ಚರ್ಚೆಗೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ.

ಕಾರಣ ಇಷ್ಟೇ. ಭಾರತದ ಪ್ರಾಚೀನ ಜ್ಞಾನ ಅಂದರೆ ಇಲ್ಲಿ ಚಂದ್ರ, ಸೂರ್ಯ, ಮಂಗಳ ಮೊದಲಾದವುಗಳ ಬಗ್ಗೆ ಜ್ಯೋತಿಷಶಾಸ್ತ್ರದಲ್ಲಿ ಹೇಳಿರುವ ಮಾತುಗಳು ಅಥವಾ ಪಾರಂಪರಿಕ ಜ್ಞಾನ. ಇವುಗಳ ವಿವರ ಭಾಸ್ಕರಾಚಾರ್ಯ, ವರಾಹಮಿಹಿರ ಮೊದಲಾದವರ ಕೃತಿಗಳಲ್ಲಿ ತಕ್ಕಮಟ್ಟಿಗೆ ದೊರೆಯುತ್ತದೆ. ಇದನ್ನು ಇಂದಿನ ಜ್ಯೋತಿಷ್ಕರು ತುಸು ತಿಳಿದಿರುತ್ತಾರೆ. ಇನ್ನು ಆಧುನಿಕ ವಿಜ್ಞಾನ ಕುರಿತು ಮಾತನಾಡುವವರು ವಿಜ್ಞಾನಿಗಳ ಸಾಧನೆಯನ್ನು ಪತ್ರಿಕೆಗಳಲ್ಲಿ ಓದಿದವರೋ ವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಪಾಠ ಮಾಡುವವರೋ ಆಗಿದ್ದವರು. ಇವರಲ್ಲಿ ಎರಡೂ ವರ್ಗದವರೂ ಈ ಎರಡೂ ಕ್ಷೇತ್ರದ ಜ್ಞಾನ ಸೃಷ್ಟಿಗೆ ಕಾರಣರಾದವರಲ್ಲ, ಬದಲಿಗೆ ಯಾರೋ ಮಾಡಿದ ಪ್ರಯೋಗ-ಅದರ ಫಲಿತಗಳ ಅಂತಿಮ ಫಲಾನುಭವಿಗಳು.

ಮತ್ತಷ್ಟು ಓದು »

12
ನವೆಂ

ರಾಹುಲ್ ಗಾ೦ಧಿ ,ಬೆ೦ಗಳೂರು ರಾಜ್ಯ ಮತ್ತು ಕನ್ನಡ

– ಗುರುರಾಜ ಕೊಡ್ಕಣಿ,ಯಲ್ಲಾಪುರ

Rahul N Kannda’ಕರ್ನಾಟಕ ಮತ್ತು ಬೆ೦ಗಳೂರಿಗೆ ಜನ ಉದ್ಯೋಗ ಅರಸಿ ಹೋಗುತ್ತಾರೆ,ಏಕೆ೦ದರೆ ಇವೆರಡೂ ಕಾ೦ಗ್ರೆಸ್ ಆಡಳಿತವಿರುವ ರಾಜ್ಯಗಳು ’ ಎ೦ದು ಹೇಳಿಕೆ ನೀಡಿದ್ದರೆ೦ಬ ಕಾರಣಕ್ಕೇ ದೇಶದ ಅತೀ ದೊಡ್ಡ ರಾಜಕೀಯ ಪಕ್ಷದ ನಾಯಕ ರಾಹುಲ್ ಗಾ೦ಧಿ ಅಪಹಾಸ್ಯಕ್ಕೀಡಾಗಿದ್ದರು.ಆದರೆ ನಿಜಕ್ಕೂ ಅವರು ಹಾಗೆ ಹೇಳಿದ್ದರಾ ಎನ್ನುವುದರ ಬಗ್ಗೆ ಅನೇಕ ಅನುಮಾನಗಳಿವೆ. ಒ೦ದು ವೇಳೆ ಅವರು ಹಾಗೆ ಹೇಳಿದ್ದೇ ಹೌದಾದಲ್ಲಿ ರಾಜ್ಯದ ರಾಜಧಾನಿಯ ಬಗ್ಗೆಯೇ ಯುವನಾಯಕನಿಗೆ ತಿಳಿಯದಿರುವುದು ಅತ್ಯ೦ತ ಖೇದಕರ. ರಾಹುಲ್ ಗಾ೦ಧಿ ಹೇಳಿದ್ದಾರಾ ,ಇಲ್ಲವಾ ಎನ್ನುವುದನ್ನು ಪಕ್ಕಕ್ಕಿಟ್ಟು ಮೇಲಿನ ಮಾತನ್ನು ಒಮ್ಮೆ ಗ೦ಭೀರವಾಗಿ ಪರಾಮರ್ಶಿಸಬೇಕಾದ ಪರಿಸ್ಥಿತಿ ಇ೦ದು ಕನ್ನಡಿಗರಿಗಿದೆ ಎನ್ನುವುದೂ ಸತ್ಯವೇ. ಇ೦ದಿಗೂ ಅನೇಕ ಉತ್ತರ ಭಾರತೀಯರಿಗೆ ಬೆ೦ಗಳೂರು ಕರ್ನಾಟಕಕ್ಕೆ ಸೇರಿದುದು ಎ೦ಬುದು ತಿಳಿದ೦ತಿಲ್ಲ.ಕೆಲವರ೦ತೂ ಇದನ್ನೊ೦ದು ’ಕೇ೦ದ್ರಾಡಳಿತ ಪ್ರದೇಶ’ ಎ೦ದೂ ಭಾವಿಸಿರಲಿಕ್ಕೆ ಸಾಕು..!!

ಮತ್ತಷ್ಟು ಓದು »

8
ನವೆಂ

ತುಳು ಭಾಷೆಯನ್ನು ‘ಕನ್ನಡ’ ಅಳಿಸುತ್ತಿದೆಯೋ..? ಉಳಿಸಿದೆಯೋ..?

-ತುಳುನಾಡು(ಅಫೀಶಿಯಲ್) ಫೇಸ್ಬುಕ್ ಪೇಜ್

Tulu Naduಕೆಲವು ತುಳುವಾದಿಗಳು ಕರ್ನಾಟಕ ರಾಜ್ಯದಿಂದ ಹೊರ ಬರುವ ಅಥವಾ ಪ್ರತ್ಯೇಕ ತುಳು ರಾಜ್ಯದ ಕಲ್ಪನೆಯನ್ನು ಇಟ್ಟುಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ..! ಇದಕ್ಕೆ ಅವರು ನೀಡುವ ಅತೀ ದೊಡ್ಡ ಕಾರಣ ಕನ್ನಡ ಭಾಷೆಯಿಂದ ತುಳು ಭಾಷೆಗೆ ಕಂಟಕ ಇದೆ ಅನ್ನೋದು..!! ಅದಕ್ಕೆ ಹಲವಾರು ಕಾರಣಗಳೂ ಇವೆ. ಇದು ಸತ್ಯ ಕೂಡ..! ತುಳು ಭಾಷೆಗೆ ಸಿಗಬೇಕಾಗಿದ್ದ ಪ್ರಾಶಸ್ತ್ಯಗಳು, ಸ್ಥಾನಮಾನಗಳು ಇನ್ನೂ ದೊರಕದೆ ಇರುವುದು ದುರ್ದೈವವೇ ಸರಿ. ಹಾಗಂತ ಇದೆಲ್ಲಾ ಕನ್ನಡಿಗರ ‘ಕುತಂತ್ರ’ ಅನ್ನುವವರು ಶತಃ ಮೂರ್ಖರೇ ಸರಿ…!

ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣ ಯಾರು ಅಂತ ಹುಡುಕುತ್ತಾ ಹೊರಟರೆ, ಇದಕ್ಕೆ ಕಾರಣ ತುಳುವರೇ ಹೊರತು ಬೇರಾರೂ ಅಲ್ಲ ಅನ್ನೋದು ಸ್ಪಷ್ಟವಾಗಿ ಗೋಚರಿಸುತ್ತದೆ.

ತುಳುನಾಡನ್ನು ಕನ್ನಡೀಕರಣಗೊಳಿಸಿ ಅಂತ ಯಾರೂ ನಮ್ಮ ಮೇಲೆ ದಬ್ಬಾಳಿಕೆ ಮಾಡಿಲ್ಲ. ಎಲ್ಲಾ ತುಳುವರು ಮನಸ್ಸು ಮಾಡಿದರೆ, ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸುವುದು ಹಾಗೂ ಕರ್ನಾಟಕದಲ್ಲಿ ತುಳು ಭಾಷೆ ನಾಳೆಯೇ ಆಡಳಿತ ಭಾಷೆ ಆಗೋದರಲ್ಲಿ ಅನುಮಾನವೇ ಇಲ್ಲ.

ಮತ್ತಷ್ಟು ಓದು »

1
ನವೆಂ

ಕನ್ನಡಕ್ಕೆ ಕನ್ನಡಿ ಹಿಡಿದವನ ನೆನೆಯುತ್ತ

– ನವೀನ್ ನಾಯಕ್

Kittelಕನ್ನಡದ ಬೆಳವಣಿಗೆಗೆ ಎಷ್ಟೋ ಮಹನೀಯರು ತಮ್ಮ ಜೀವನದ ಬಹಳ ಸಮಯವನ್ನು ಈ ಮಹತ್ಕಾರ್ಯಕ್ಕೆ ಉಪಯೋಗಿಸಿದ್ದಾರೆ. ಅವರೆಲ್ಲರ ಪರಿಶ್ರಮದಿಂದ ನಮ್ಮ ಕನ್ನಡ ಇಂದಿಗೆ ಹೆಮ್ಮೆಯ ಸ್ಥಾನ ಪಡೆದಿದೆ.

ದ.ರಾ ಬೇಂದ್ರೆಯವರಿಂದಲೇ, “ಕನ್ನಡಕ್ಕೆ ಕನ್ನಡಿ ಹಿಡಿದು ದುಡಿದವ ನೀನು” ಅನ್ನಿಸಿಕೊಂಡ ಆ ವ್ಯಕ್ತಿ ಯಾರು? ಅವರ ಸಾಧನೆ ಏನು? ಎಂಬ ಕುತೂಹಲವೇ. ಆ ವ್ಯಕ್ತಿ ಜರ್ಮನಿಯಲ್ಲಿ ಜನಿಸಿ ಧಾರವಾಡಕ್ಕೆ ಬಂದು ಕನ್ನಡದ ಇತಿಹಾಸದಲ್ಲಿ ಹಲವಾರು ಸಾಹಸ ಮೆರೆದವರು. ಅವರೇ ರೆವರೆಂಡ್ ಎಫ್ ಕಿಟೆಲ್.

ರೆವರೆಂಡ್ ಎಫ್ ಕಿಟೆಲ್‍ರವರು ಜರ್ಮನಿಯ ಹ್ಯಾನೋವರ್ ಪ್ರಾಂತ್ಯದಲ್ಲಿರುವ ಫ್ರೀಸ್ಲ್ಯಾಂಡ್ ನಲ್ಲಿ 1832 ರಲ್ಲಿ ಗಾಜ್ ಫ್ರೀಟ್ ಮತ್ತು ಟ್ಯುಡೋವ್ ಹೆಲೇನ್ ಹ್ಯೂಬರ್ಟ ದಂಪತಿಗೆ ಜನಿಸಿದರು. ಇವರು ಭಾರತಕ್ಕೆ ಬರುವಾಗಲೇ ಹೀಬ್ರೂ, ಗ್ರೀಕ್, ಲ್ಯಾಟೀನ್,ಫ್ರೆಂಚ್, ಮತ್ತು ಇಂಗ್ಲಿಷ್ ಭಾಷೆಯ ಜ್ಞಾನ ಹೊಂದಿದ್ದರು. ಭಾರತಕ್ಕೆ ಬರುವಾಗಲೇ ಕನ್ನಡವನ್ನು ಕಲಿಯಬೇಕೆಂದು ಮಹದಾಸೆಯನ್ನು ಹೊಂದಿದ್ದರು. ಕಿಟೆಲ್ ರವರು 1850ರಲ್ಲಿ ಬಾಸೆಲ್ ಮಿಶನ್ ಸಂಸ್ಥೆಗೆ ಸೇರಿದರು. ಈ ಮಿಶನ್ ಸಂಸ್ಥೆ 1852 ರಲ್ಲಿ ಕಾಪ್ ಮನ್ ಮತ್ತು ಕಿಟೆಲ್ ರವರನ್ನು ದಕ್ಷಿಣ ಭಾರತದ ದಾವಣಗೆರೆಗೆ ಮತಪ್ರಚಾರಕ್ಕೆ ಕಳುಹಿಸಿಕೊಟ್ಟರು. ಧಾರವಾಡಕ್ಕೆ ಬಂದ ಕಿಟೆಲರಿಗೆ ಸಾಹಿತ್ಯಾಭ್ಯಾಸ ಮಾಡಿ ಹೆಸರುವಾಸಿಯಾಗಿದ್ದ ರೇ.ವೀಗಲ್ ರವರ ಭೇಟಿ ಮಾಡಬೇಕೆಂದುಕೊಂಡಿದ್ದರು. ಅದು ಸಾದ್ಯಾವಾಗದೇ ಇದ್ದಾಗ, ಅದೇ ಊರಿನ ಇನ್ನೊಬ್ಬ ಅಧಿಕಾರಿ ಕೆ ಮೋರಿಕ್ ರವರ ಪರಿಚಯ ಮಾಡಿಕೊಂಡರು. ಕನ್ನಡ ಕಲಿಯಲು ಅದೆಷ್ಟು ಅವರಿಗೆ ಉತ್ಸಾಹವಿತ್ತೆಂದರೆ ಬರೀ ಕಾಲ್ನಡಿಗೆಯಲ್ಲೇ ಗುಡ್ಡಗಾಡುಗಳಲ್ಲಿ, ಕಾಡುಗಳಲ್ಲಿ ಅಲೆದು ಊರೂರು ಅಲೆದು ಆ ಪ್ರದೇಶಗಳ ಆಡು ಭಾಷೆಯನ್ನು ಕಲಿತರು.

ಮತ್ತಷ್ಟು ಓದು »

12
ಏಪ್ರಿಲ್

ಅಕ್ಷರ ಕಡಿತಕ್ಕೆ ತಮಿಳು ಮಾದರಿ?

-ಡಾ. ಅಜಕ್ಕಳ ಗಿರೀಶ್ ಭಟ್

ನನ್ನ ” ಕನ್ನಡಕ್ಕೇಕೆ ಶಂಕರ ಬಟ್ಟರ ಕತ್ತರಿ? ” ಎಂಬ ಪುಸ್ತಕದ ಕೆಲವು ಭಾಗಗಳು.

ಅಕ್ಷರ ಕಡಿತಕ್ಕೆ ತಮಿಳು ಮಾದರಿ?

ಹಿರಿಯ ಭಾಷಾವಿದ್ವಾಂಸರಾದ ಡಾ. ಡಿ. ಎನ್. ಶಂಕರ ಭಟ್ಟರು ಈಚಿನ ವರ್ಷಗಳಲ್ಲಿ” ಹೊಸ ಕನ್ನಡ”ವನ್ನು ಪ್ರತಿಪಾದಿಸುತ್ತಿದ್ದಾರೆ. ಕನ್ನಡದ ಅಕ್ಷರಗಳನ್ನು ಕಡಿಮೆ ಮಾಡಬೇಕು ಹಾಗೂ ಸಂಸ್ಕೃತದಿಂದ ಬಂದ ಪದಗಳನ್ನು ಬಿಟ್ಟುಬಿಡಬೇಕು ಎನ್ನುವುದು ಅವರ ವಾದದ ಮುಖ್ಯಾಂಶ. ಅವರ ಇತ್ತೀಚಿನ ಪುಸ್ತಕಗಳು ಅವರದೇ ಆದ ಹೊಸ ಕನ್ನಡದಲ್ಲಿ ಬರುತ್ತಿವೆ.

ಪರಂಪರೆ ಮತ್ತು ಸಂಸ್ಕೃತಿಗಳ ಬಗ್ಗೆ ಡಿ.ಎನ್.ಎಸ್. ಬರಹಗಳಲ್ಲಿ ವ್ಯಕ್ತವಾಗುವ ನಿಲುವೇನು ಎಂದು ನೋಡಬೇಕು. ಅವರು ಒಂದೆಡೆ ಸ್ವಾಭಿಮಾನ, ಸ್ವಸಂಸ್ಕೃತಿ ಬಗ್ಗೆ ಮಾತಾಡುತ್ತಾರೆ; ಇನ್ನೊಂದೆಡೆ ವ್ಯಾವಹಾರಿಕ ಪ್ರಯೋಜನಗಳ ಬಗ್ಗೆ ಮಾತಾಡುತ್ತಾರೆ.ಇನ್ನೊಂದೆಡೆ ವರ್ತಮಾನ ಕಾಲವನ್ನೂ ಈಚಿನ ಕೆಲ ಶತಮಾನಗಳ ಇತಿಹಾಸವನ್ನೂ ನಿರಾಕರಿಸುತ್ತಾರೆ.

ತಮಿಳನ್ನು ಅನುಸರಿಸುವುದೇ ಕನ್ನಡದ ಸಂಸ್ಕೃತಿಯನ್ನು ಹಾಗೂ ಸೊಗಡನ್ನು ಉಳಿಸುವ ದಾರಿ ಎಂದು ಡಾ.ಡಿ.ಎನ್.ಎಸ್. ಹೇಳುತ್ತಾರೆ. ಆರ್. ಗಣೇಶ್ ಹೇಳುವಂತೆ , ಈ ಸುಧಾರಣೆಯು ” ಒಂದು ಶತಾಬ್ಧಿಗೂ ಮುನ್ನ ತಮಿಳುನಾಡಿನಲ್ಲಿ ವೀರ ತಮಿಳರು ನಡೆಸಿದ ಅವಿಚಾರಿತ ಸುಧಾರಣೆಯ ಸವಕಲು ಅನುಕರಣೆಯೆಂಬುದನ್ನು ಬಲ್ಲವರೆಲ್ಲ ಬಲ್ಲರು.ಇಷ್ಟಾಗಿಯೂ ತಮಿಳು ಜಾಗತಿಕ ಸ್ತರದಲ್ಲಿ ತಾನೊಂದು ಭಾಷೆಯಾಗಿ ಏನನ್ನೂ ಸಾಧಿಸಲಾಗಲಿಲ್ಲ.ತಮಿಳರಿಗೆ ಜೀವಿಕೆಯ ಅನಿವಾರ್ಯತೆಯಿಂದ ವ್ಯವಹಾರಮಾತ್ರಕ್ಕಾಗಿ ಕಲಿಯಬೇಕಾಗಿ ಬರುವ ಇನ್ನಿತರ ಭಾಷೆಗಳನ್ನರಿಯಲೂ ಅದು ಸಹಕಾರಿಯಾಗಿಲ್ಲ.” ಕೆ.ವಿ.ತಿರುಮಲೇಶ್ ಅವರು ಕೂಡ ತಮಿಳರ ಈ ಮಾದರಿ ಕನ್ನಡಕ್ಕೆ ಅನುಸರಣಯೋಗ್ಯವಲ್ಲ ಎಂದು ತುಂಬ ಸ್ಪಷ್ಟವಾಗಿಯೇ ಹೇಳಿದ್ದಾರೆ.

ಮತ್ತಷ್ಟು ಓದು »

24
ಸೆಪ್ಟೆಂ

ಕನ್ನಡದಲ್ಲಿ ಉನ್ನತ ವ್ಯಾಸಾಂಗ

– ಬಿಂದುಮಾಧವಿ ಪಿ,ಹೈದರಾಬಾದ್

ನಮ್ಮ ದೇಶವು ವಿದ್ಯೆಯಲ್ಲಿ ಯಾವ ದೇಶಕ್ಕೂ ಕಡಿಮೆಯಿಲ್ಲ. ವಿದ್ಯಾವಂತರಿಗೆ ಬರವಿಲ್ಲ. ಹಾಗಿದ್ದರೂ ನಮ್ಮ ದೇಶದಿಂದ ಹೊಸ ಹೊಸ ಸಂಶೋಧನೆಗಳು ವಿರಳವಾಗಿವೆ. ಸಿ.ವಿ ರಾಮನ್, ಹರಗೋವಿಂದ ಖೊರಾನ ಇವರುಗಳ ಹೆಸರನ್ನೇ ಅನೇಕ ದಶಕಗಳಿಂದ ಹೇಳುತ್ತಿದ್ದೇವೆ. ಇದೇಕೆ ಹೀಗೆ?

ಗಣಿತದಲ್ಲಿ ಭಾರತೀಯರು ಎಂದೂ ಮುಂದು.ಅಮೇರಿಕದಲ್ಲಿ ಅನೇಕ ಸ್ಪರ್ಧೆಗಳಲ್ಲಿ ಭಾರತೀಯ ಮೂಲದ ಬಾಲಕರೇ ಮೊದಲ ಸ್ಥಾನ ಗಳಿಸುತ್ತಾರೆ. ಹಾಗಿರುವಾಗ Inventions and Discoveries ಪಟ್ಟಿಯಲ್ಲಿ ನಮ್ಮ ದೇಶದ ಹೆಸರು ಏಕೆ ಕಾಣುವುದಿಲ್ಲ?

ಇದಕ್ಕೆ ಉತ್ತರ ನಮ್ಮ ಮಾಧ್ಯಮ. ಒಂದರಿಂದ ಏಳನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ನಾನು, ಅಲ್ಲಿಯವರೆಗೆ ಯಾವತ್ತೂ ತರಗತಿಯಲ್ಲಿ ಮೊದಲಿಗಳಾಗಿರುತ್ತಿದ್ದೆ. ನಂತರ ಪ್ರೌಢಶಾಲೆಯಲ್ಲಿ ಆಂಗ್ಲ ಮಾಧ್ಯಮ ಅದೂ ಮರಿಮಲ್ಲಪ್ಪ ಶಾಲೆಯಲ್ಲಿ. ಅಲ್ಲಿ ಅಪರೂಪಕ್ಕೆ ಮೂರನೇ ಅಥವಾ ನಾಲ್ಕನೆಯ ಸ್ಥಾನ ಬಂದರೆ ಅದೇ ಹೆಚ್ಚು. ಪದವಿ ಪೂರ್ವ ಕಾಲೇಜಿನಲ್ಲಿ, ನಂತರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಾಗೂ ಹೀಗೂ ಮೊದಲ ದರ್ಜೆಯಲ್ಲಿ ಉತ್ತೀರ್ಣಳಾಗುವುದೇ ಹೆಚ್ಚಾಯಿತು. ಏಕೆ ಹೀಗೆ? ಬಹುಶ: ನಾನು ಕನ್ನಡ ಮಾಧ್ಯಮದಲ್ಲೇ ಮುಂದುವರೆದಿದ್ದರೆ ಎಂದಿಗೂ ಮೊದಲ ಸ್ಥಾನದಲ್ಲಿ ಇರುತ್ತಿದ್ದೆನೇನೊ?
ಮತ್ತಷ್ಟು ಓದು »

4
ಜುಲೈ

ಮಾತೃಭಾಷೆಯಲ್ಲಿಯೇ ಶಿಕ್ಷಣ-ಮಕ್ಕಳ ಹಕ್ಕನ್ನು ರಕ್ಷಿಸಿ

– ಪಂಡಿತಾರಾಧ್ಯ,ಮೈಸೂರು

ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಬೇಕೆಂಬ ಜಗತ್ತಿನ ಎಲ್ಲ ಶ್ರೇಷ್ಠ ಶಿಕ್ಷಣ ತಜ್ಞರ ವಿಚಾರಗಳು ಮತ್ತು ನ್ಯಾಯಾಲಯಗಳ ತೀರ್ಪುಗಳನ್ನು ಪರಿಶೀಲಿಸಿ ಕರ್ನಾಟಕ ಸರಕಾರವು ತನ್ನ ಭಾಷಾನೀತಿಯನ್ನು ಅಂತಿಮವಾಗಿ ರೂಪಿಸಿತು(೧೯೯೪). ಅದರ ಪ್ರಕಾರ ಒಂದರಿಂದ ಐದನೇ ತರಗತಿಯವರೆಗೆ ಮಾತೃಭಾಷೆ/ರಾಜ್ಯಭಾಷೆ ಮಾತ್ರ ಕಡ್ಡಾಯ. ಕನ್ನಡ ಮಾತೃಭಾಷೆಯಲ್ಲದವರಿಗೆ ಒಂದನೆಯ ತರಗತಿಯಲ್ಲಿ ಪರಿಸರಭಾಷೆ/ರಾಜ್ಯಭಾಷೆಯಾದ ಕನ್ನಡವೂ ಕಡ್ಡಾಯ ಕಲಿಕೆಯ ವಿಷಯವಲ್ಲ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಅವರಿಗೆ ರಾಜ್ಯಭಾಷೆ ಕನ್ನಡ ಐಚ್ಛಿಕ ಕಲಿಕೆಯ ವಿಷಯ ಮಾತ್ರ; ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಕನ್ನಡ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಮಾತ್ರ ಇಂಗ್ಲಿಷ್ ಮಾತೃಭಾಷೆಯಲ್ಲದ ಮಕ್ಕಳಿಗೆ ಇಂಗ್ಲಿಷ್ ಐಚ್ಛಿಕ ಕಲಿಕೆಯ ವಿಷಯ, ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಇಂಗ್ಲಿಷ್ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಕರ್ನಾಟಕ ಸರಕಾರದ ಈ ಭಾಷಾನೀತಿಯನ್ನು ಸರ್ವೋನ್ನತ ನ್ಯಾಯಾಲಯವೂ ಪ್ರಶಂಸಿಸಿ ಅನುಮೋದಿಸಿತ್ತು(೧೯೯೩).

ಈ ಭಾಷಾನೀತಿಗೆ ಇದ್ದ ತಡೆಯಾಜ್ಞೆಯನ್ನು ತೆರವುಗೊಳಿಸುವ ಸಂದರ್ಭದಲ್ಲಿ ಅದನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸೀಮಿತಗೊಳಿಸಿತು. ಪೂರ್ವ ಪ್ರಾಥಮಿಕವೂ ಸೇರಿದಂತೆ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಮಾತೃಭಾಷೆಯಲ್ಲದವರಿಗೂ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಡೆಸಲು ಅನುದಾನರಹಿತ ಖಾಸಗಿ ಶಾಲೆಗಳಿಗೆ ಮುಕ್ತ ಅವಕಾಶ ನೀಡಿತು(೨೦೦೮). ಇದು ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕೆಂಬ ಮಕ್ಕಳ ಶೈಕ್ಷಣಿಕ ಹಕ್ಕಿನ ನೀತಿಗೆ ವಿರುದ್ಧವಾಗಿದೆ. ಇದರಿಂದ ಮಕ್ಕಳು ಆರಂಭದ ಹಂತದಲ್ಲಿಯೇ ‘ಸಮಾನ ಅವಕಾಶ-ಸಮಾನ ಸ್ಪರ್ಧೆ’ ಎಂಬ ಸಮಾನತೆಯ ನ್ಯಾಯದಿಂದ ವಂಚಿತರಾಗಿದ್ದಾರೆ.

ಮತ್ತಷ್ಟು ಓದು »

2
ಜುಲೈ

ಕನ್ನಡ/ಇಂಗ್ಲೀಷ್ ಮಾಧ್ಯಮದ ಜೊತೆಗೆ ಏಕರೂಪ ಶಿಕ್ಷಣದ ಬಗ್ಗೆಯೂ ಚರ್ಚೆ ಆಗಬೇಕಲ್ಲವೇ?

– ರಾಕೇಶ್ ಶೆಟ್ಟಿ

ಕಡೆಗೂ ‘ಸರ್ಕಾರ ಏಕರೂಪ ಶಿಕ್ಷಣ ನೀತಿ ಜಾರಿಗೆ ತರುವ ನಿಟ್ಟಿನಲ್ಲಿ ಚಿಂತಿಸಬೇಕು’ ಅನ್ನುವ ಮಾತುಗಳನ್ನು ಕಸಪಾ ಅಧ್ಯಕ್ಷ ಪುಂಡಲೀಕ ಹಾಲಂಬಿ ಹೇಳಿದ್ದಾರೆ.ಕಳೆದ ಹಲವು ದಿನಗಳಿಂದ ಇಂಗ್ಲೀಷ್ ಮಾಧ್ಯಮದ ಸುತ್ತ ನಡೆಯುತ್ತಲಿರುವ ಚರ್ಚೆಯಲ್ಲಿ ನಾನು ನಿರೀಕ್ಷಿಸುತಿದ್ದ ಮಾತು “ಏಕರೂಪ ಶಿಕ್ಷಣ”ದ ಬಗ್ಗೆ.ಪೇಟೆಯ/ಉಳ್ಳವರ ಮಕ್ಕಳಿಗೊಂದು ಶಿಕ್ಷಣ,ಹಳ್ಳಿಯ/ಬಡವರ ಮಕ್ಕಳಿಗೊಂದು ಶಿಕ್ಷಣ ಕೊಟ್ಟು ಕಡೆಗೆ ಸಮಾನತೆ,ಸಾಮಾಜಿಕ ನ್ಯಾಯ,ಭಾಷೆ,ನಾಡು-ನುಡಿಯ ಅಳಿವು ಉಳಿವು ಅಂತ ಮಾತನಾಡುವುದೆಷ್ಟು ಸರಿ?

೧೦ನೆ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದ ನನಗೆ ಮಾತೃ ಭಾಷೆಯಲ್ಲಿ ಕಲಿಯುವುದೆಷ್ಟು ಸುಲಭ,ಆನಂದದ ವಿಷಯ ಅನ್ನುವುದರ ಅರಿವಿದೆ ಹಾಗೆಯೇ ೧೦ರ ನಂತರ ಇಂಗ್ಲೀಷ್ ಮಾದ್ಯಮಕ್ಕೆ (ಪಿಯುಸಿಯಲ್ಲಿ ಆಯ್ದುಕೊಂಡಿದ್ದು ವಿಜ್ಞಾನ ವಿಷಯ) ಕಾಲಿಟ್ಟಾಗ ಅನುಭವಿಸಿದ ಕಷ್ಟ,ಕೀಳರಿಮೆಯ ಅನುಭವಗಳು ಇವೆ.ಹಾಗಾಗಿ ಈ ಚರ್ಚೆಯಲ್ಲಿ ಮತ್ತು ಈಗಿನ ನಮ್ಮ ಶೈಕ್ಷಣಿಕ ಪರಿಸ್ಥಿತಿಯಲ್ಲಿ ನಾನು ಇಂಗ್ಲೀಷ್ ಮೀಡಿಯಂ ಬೇಕು ಅನ್ನುವುದರ ಪರವೇ ನಿಲ್ಲುತ್ತೇನೆ.

ಒಂದು ವೇಳೆ ಸಾಹಿತಿಗಳು ಒತ್ತಾಯಿಸುತ್ತಿರುವಂತೆ ಪ್ರಾಥಮಿಕ ಶಿಕ್ಷಣ ಮಾತೃ ಭಾಷೆಯಲ್ಲೇ ಆಗಬೇಕು ಅನ್ನುವುದಾದರೆ ಅದು ಈ ರಾಜ್ಯದಲ್ಲಿರುವ ಸರ್ಕಾರಿ/ಅನುದಾನಿತ/ಕೇಂದ್ರೀಯ/ಖಾಸಗಿ ಶಾಲೆಗಳಿಗೂ ಏಕರೂಪವಾಗಿ ಅನ್ವಯವಾಗಲಿ. ಅದನ್ನು ಬಿಟ್ಟು ಸರ್ಕಾರಿ ಶಾಲೆಗಳಲ್ಲಿ ಮಾತ್ರ ಕನ್ನಡ ಕಡ್ಡಾಯವಾಗಲಿ ಆ ಮೂಲಕ ಬಡವರ ಮಕ್ಕಳು ಮಾತ್ರ ಕನ್ನಡದಲ್ಲಿ ಕಲಿತು ಮುಂದೆ ಇಂಗ್ಲೀಷ್ ಲೋಕಕ್ಕೆ ಕಾಲಿಟ್ಟು ಅರ್ಧಕರ್ಧ ಜನ ಕೀಳರಿಮೆ,ಹೆದರಿಕೆಯಿಂದಾಗಿ ಹಿಂದೆ ಬೀಳಲಿ ಅನ್ನುವುದು ಇಬ್ಬಗೆಯ ನೀತಿಯಾಗುತ್ತದೆ.

ಏಕರೂಪ ಶಿಕ್ಷಣ ಅನ್ನುವಾಗ ಇನ್ನೊಂದು ಅಂಶವನ್ನ ನಾವು ಗಮನಕ್ಕೆ ತೆಗೆದುಕೊಳ್ಳಬೇಕು.ಮಕ್ಕಳನ್ನು ಶಾಲೆಗೇ ಸೇರಿಸುವಾಗ ಅದು ಇಂಗ್ಲೀಷ್ ಮೀಡಿಯಂ ಶಾಲೆಯೇ ಅಂತ ಮಾತ್ರ ಈಗಿನ ಪೋಷಕರು ನೋಡುತ್ತಿಲ್ಲ,ಅದರ ಜೊತೆಗೆ ಅವರು ಅಲ್ಲಿರುವುದು ಸೆಂಟ್ರಲ್ ಸಿಲ್ಲಬಸ್ಸೋ,ಐ.ಸಿ.ಎಸ್.ಈ ಸಿಲ್ಲಬಸ್ಸೋ (ಅಥವಾ ಇನ್ಯಾವುದೋ) ಅನ್ನುವುದನ್ನು ನೋಡುತಿದ್ದಾರೆ.ನಮ್ಮ ಮಕ್ಕಳು ಇಂತ ಸಿಲಬಸ್ಸ್ ಇರೋ ಶಾಲೆಯಲ್ಲಿ ಓದುತಿದ್ದಾರೆ ಅಂತ ಹೇಳಿಕೊಳ್ಳುವುದು ಈಗಿನ ಪೋಷಕರಿಗೆ ಗರ್ವದ ವಿಷಯವಾಗಿದೆ. ಅಸಲಿಗೆ ಈ ರೀತಿ ಬೇರೆ,ಬೇರೆ ಸಿಲ್ಲಬಸ್ಸಿನ ಅಗತ್ಯ ಶಾಲಾ ಮಟ್ಟದಲ್ಲಿ ಏನು ಅನ್ನುವುದು ಸಹ ಚರ್ಚೆಯಾಗಬೇಕಲ್ಲವೇ?

ಮತ್ತಷ್ಟು ಓದು »

12
ಏಪ್ರಿಲ್

ಕನ್ನಡದಲ್ಲೂ ಮಾಹಿತಿ ಮುದ್ರಿತವಾಗಲಿ

– ರವಿ ಸಾವ್ಕರ್

ಇತ್ತೀಚಿಗೆ ಪೆಪ್ಸಿಕೋ ರವರ ಲೇಸ್ , ಮ್ಯಾಕ್ ಡೋನಾಲ್ದ್ ರವರ ಬರ್ಗರ್ ಗಳಲ್ಲಿ ಆರೋಗ್ಯಕ್ಕೆ ಹಾನಿಕಾರವಾಗುವಂಥಹ ಕೊಬ್ಬಿನಂಶ ಹೆಚ್ಚಾಗಿ ಇದೆ ಅನ್ನೋದರ ಬಗ್ಗೆ ಸುದ್ದಿ ಪ್ರಚಾರದಲ್ಲಿದೆ. ತಯಾರಕರು ತಮ್ಮ ಉತ್ಪಾದನೆಗಳಲ್ಲಿ ಯಾವ ಸಾಮಗ್ರಿ ಎಷ್ಟು ಪ್ರಮಾಣದಲ್ಲಿದೆ ಎಂದು ಗ್ರಾಹಕನಿಗೆ ಸರಿಯಾಗಿ ತಿಳಿಸುವುದು ಅವರ ಕರ್ತವ್ಯ. ಹಾಗೆಯೇ ಅದನ್ನು ಕೇಳಿ ಪಡೆಯುವುದೂ ಸಹ ಒಬ್ಬ ಗ್ರಾಹಕನಹಕ್ಕು ಆಗಿದೆ. Centre for Science and Environment (CSE) ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ.

ಆದರೆ ಇಂಥಹ ಚರ್ಚೆಗಳಲ್ಲಿ ಈ ಮಾಹಿತಿಯನ್ನು ಜನರು ಅರಿಯಬೇಕಾದರೆ ಅದು ಜನರ ಭಾಷೆಯಲ್ಲಿ ಇರಬೇಕು ಅನ್ನೋ ಅತಿ ಮುಖ್ಯವಾದ ಅಂಶವನ್ನು ಮರೆತ ಹಾಗಿದೆ. ಒಂದು ವರದಿಯ ಪ್ರಕಾರ ನಮ್ಮ ದೇಶದಲ್ಲಿ ೭% ಜನರಿಗೆ ಮಾತ್ರ ಇಂಗ್ಲಿಷ್ ನಲ್ಲಿ ಇರುವುದನ್ನು ಅರ್ಥಮಾಡಿಕೊಳ್ಳಬಲ್ಲರು. ಮಿಕ್ಕ ೯೩% ಜನರಿಗೆ ಇಂಗ್ಲಿಷ್ ನಲ್ಲಿ ಮಾಹಿತಿ ತಲುಪಿಸಲಾಗದ ಪರಿಸ್ಥಿತಿ ಇರುವಾಗ , ಕೇವಲ ಇಂಗ್ಲಿಷ್ನಲ್ಲಿ ಮಾಹಿತಿಯನ್ನು ನಮೂದಿಸಿದರೆ ನಮ್ಮ ಜನರಿಗೆ ಹೇಗೆ ಅರ್ಥವಾದೀತು? ಒಬ್ಬ ಕನ್ನಡ ಮಾತ್ರ ಬರುವ ಗ್ರಾಹಕನೂ ಸಹ ಅಷ್ಟೇ ದುಡ್ಡು ಕೊಟ್ಟು ಖರೀದಿ ಮಾಡಿರುತ್ತಾನೆ. ಅವನಿಗೆ ಆ ಸಾಮಗ್ರಿಯ ಬಗೆಗೆ ಮಾಹಿತಿಯನ್ನು ತಿಳಿಸದಿರುವುದು ಯಾವ ನ್ಯಾಯ ?

ಮತ್ತಷ್ಟು ಓದು »

31
ಮಾರ್ಚ್

ಶಿಕಾರಿ ಮಿಸ್ ಆಯ್ತು..!

– ಶ್ರೀಧರ್ ಜಿ.ಸಿ ಬನವಾಸಿ

ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ಸಂಪೂರ್ಣನಾಯಕನಾಗಿ ಅಭಿನಯಿಸಿದ ಮಲಯಾಳಂ ಸೂಪರ್ ಸ್ಟಾರ್ ಮುಮ್ಮುಟ್ಟಿ ಅಭಿನಯದ `ಶಿಕಾರಿ’ ಬಿಡುಗಡೆಯ ಭಾಗ್ಯವನ್ನು ಕಂಡಿದೆ. ಪ್ರಶಸ್ತಿ ಪುರಸ್ಕೃತ
`ಗುಬ್ಬಚ್ಚಿಗಳು’ಸಿನಿಮಾ ಖ್ಯಾತಿಯ ಅಭಯಸಿಂಹ ನಿರ್ದೇಶಕರು. ಚಿತ್ರ ನೋಡಿಬಂದ ಮೇಲೆ ನನಗೆ ಚಿತ್ರದ ಬಗ್ಗೆ ನನಗನಿಸಿದ ಅಂಶಗಳು:
ಇಡೀ ಚಿತ್ರಕ್ಕೆ ಮುಮ್ಮಟ್ಟಿ ಬೇಕಿತ್ತೋ, ಅಥವಾ ಇಲ್ಲವೋ ಅಂತ ನಾವು ತರ್ಕ ಹಾಕಿ ನೋಡಿದಾಗ ಮುಮ್ಟಟ್ಟಿ ಬದಲು ನಮ್ಮ ಕನ್ನಡದಲ್ಲಿಯ ಯಾವುದಾದರೂ ಹೀರೋಗಳನ್ನು ಬಳಸಿಕೊಳ್ಳಬಹುದಿತ್ತು ಎಂಬುದನ್ನು  ಒಂದೇ ಮಾತಿನಲ್ಲಿ ಹೇಳಬಹುದು. ಇಲ್ಲವೇ ಕನ್ನಡದಲ್ಲಿರುವ ದೇವರಾಜ್ ರಂತಹ ಜನಪ್ರಿಯ ಗಡಸು ದನಿಯ ಕಲಾವಿದರು ಮುಮ್ಮುಟ್ಟಿ ಪಾತ್ರಕ್ಕೆ ದನಿ ನೀಡಬಹುದಿತ್ತು. ಚಿತ್ರದಲ್ಲಿ ಅದು ಆಗಲಿಲ್ಲ. ಅದಕ್ಕೆ ಕಾರಣ ಕೂಡ ಸ್ಟಷ್ಟವಾಗಿದೆ, ಮುಮ್ಮಟ್ಟಿ ಕನ್ನಡದಲ್ಲಿ ಮಾತನಾಡಲು ರಿಸ್ಕು ತೆಗೆದುಕೊಂಡಿದ್ದು, ಕೊನೆಪಕ್ಷ ಮಾತನಾಡಿಸಿದ್ದರೂ, ಡಬ್ಬಿಂಗ್ನಲ್ಲಿ ನಿರ್ದೇಶಕರು ಸ್ವಲ್ಪ ಹುಷಾರಾಗಿರಬೇಕಿತ್ತು.ಮುಮ್ಮಟ್ಟಿ ಕನ್ನಡ ಮಾತನಾಡುತ್ತಿದ್ದಾರೋ, ಮಲಯಾಳಂ ಮಾತನಾಡುತ್ತಿದ್ದಾರೋ ಎಂಬುದು ಅರ್ಥವಾಗುವುದೇ ಇಲ್ಲ. ಏಷ್ಟೋ ಸೀನ್ಗಳಲ್ಲಿ ಅವರು ಶಬ್ಗಗಳನ್ನು ನುಂಗಿ ಮಾತನಾಡುತ್ತಾರೆ. ಅವರು ಏನು ಹೇಳಿದರು ಅನ್ನುವುದೇ ಅರ್ಥವಾಗುವುದೇ ಇಲ್ಲ.  ಮುಮ್ಮಟ್ಟಿ ಮಾತನಾಡಿದ ಕನ್ನಡ,ನಮ್ಮ ಕನ್ನಡದವರಿಗೆ ಅರ್ಥವಾಗುವುದು ತುಂಬಾ ಕಷ್ಟ.  ಅದೇನಿದ್ದರೂ ಮಲಯಾಳಂ ಶೈಲಿಯಲ್ಲಿ ಕನ್ನಡ ಮಾತನಾಡುವ ಮಲ್ಲುಗಳಿಗೆ ಮಾತ್ರ ಅರ್ಥವಾದೀತು. ಹೆಚ್ಚಿನವರಿಗೆ ಇದು ಇಷ್ಟವಾಗಲೂಬಹುದು.