ಪಕ್ಷ ರಾಜಕಾರಣದ ಮರ್ಮಗಳು
ಡಾ. ಸಂತೋಷ್ ಕುಮಾರ್ ಪಿ.ಕೆ
ಶಿವಮೊಗ್ಗ
ರಾಜಕಾರಣವೆಂಬುದು ಇಂದಿಗೆ ಪಕ್ಷಕ್ಕೆ ಮಾತ್ರ ಸೀಮಿತವಾಗಿ, ಪ್ರದೇಶಗಳು ಎರಡನೇ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಕರ್ನಾಟಕ ಸರ್ಕಾರವೆಂಬುದು ಕಾಂಗ್ರೆಸ್ ಸರ್ಕಾರ ಎಂಬ ಮಿತಿಯ ಒಳಗೆ ಕಾರ್ಯನಿರ್ವಹಿಸಲು ಇಚ್ಚಿಸುತ್ತದೆಯೇ ಹೊರತು ರಾಜ್ಯ ಸರ್ಕಾರವಾಗಿ ಅಲ್ಲ. ಇದು ಕಾಂಗ್ರೆಸ್ ಪಕ್ಷದ ಮಿತಿ ಎಂದು ಭಾವಿಸದೆ ಆಡಳಿತಕ್ಕೆ ಬರುವ ಬಹುತೇಕ ಪಕ್ಷಗಳ ಹಣೆಬರಹವಾಗಿದೆ. ಆದ್ದರಿಂದ ಸರ್ವತೋಮುಖ ಅಭಿವೃದ್ಧಿಯ ಬದಲು ಭಾಗಶಃ ಅಭಿವೃದ್ಧಿಯ ಕಾರ್ಯಚಟುವಟಿಕೆಗಳನ್ನು ಸರ್ಕಾರಗಳು ಕೈಗೆತ್ತಿಕೊಳ್ಳುತ್ತವೆ. ಹಾಗಾಗಿ ತುಷ್ಟೀಕರಣದ ರಾಜಕಾರಣ ಹೆಚ್ಚಾಗಿ ಇಂದು ಕಾಣಬಹುದಾಗಿದೆ. ಮತ್ತಷ್ಟು ಓದು 
ಮದ್ದರೆಯದಿದ್ದರೆ ಈ ಮಾವೋವ್ಯಾಧಿ ನಿದ್ದೆಗೆಡಿಸಲಿದೆ ಎಚ್ಚರ!
– ರೋಹಿತ್ ಚಕ್ರತೀರ್ಥ
ಎರಡು ಸುದ್ದಿಗಳಿವೆ. ಒಂದು – ಉರಿ ಸೇನಾನೆಲೆಯ ಮೇಲೆ ನಾಲ್ಕು ಮಂದಿ ಮುಸ್ಲಿಂ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 17 ಸೈನಿಕರು ಹತರಾಗಿದ್ದಾರೆ. ಎರಡು – ಭಾರತದ ನಕ್ಸಲ್ ಉಗ್ರರು ಜಗತ್ತಿನ ಭಯೋತ್ಪಾದನೆಯ ಪಟ್ಟಿಯಲ್ಲಿ ಕಂಚಿನ ಪದಕವನ್ನು ಜಸ್ಟ್ ಮಿಸ್ ಮಾಡಿಕೊಂಡು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಇವೆರಡರಲ್ಲಿ, ನಕ್ಸಲರ ಸಮಸ್ಯೆಯೇ ದೊಡ್ಡದು ಅನಿಸಿದ್ದರಿಂದ ಅದನ್ನು ಈ ವಾರದ ಅಂಕಣಕ್ಕೆ ಆಯ್ದುಕೊಂಡಿದ್ದೇನೆ. ಯಾಕೆಂದರೆ ಹೊರಗಿನ ಶತ್ರುಗಳನ್ನು ಪ್ರತಿದಾಳಿ ಮಾಡಿಯೋ ಯುದ್ಧ ಘೊಷಿಸಿಯೋ ತಹಬದಿಗೆ ತರಬಹುದೆನ್ನೋಣ; ಆದರೆ, ತಾಯ್ನಾಡಿನ ಒಳಗೇ ಇದ್ದುಕೊಂಡು ಒರಲೆಯಂತೆ ದೇಶವನ್ನು ಕೊರೆದು ಪುಡಿಗುಟ್ಟುವ ಆಂತರಿಕ ಶತ್ರುಗಳನ್ನು ಬಗ್ಗುಬಡಿಯುವುದು ಹೇಗೆ? 2015ರಲ್ಲಿ ಭಾರತದಲ್ಲಿ ನಡೆದ 791 ಭಯೋತ್ಪಾದನಾ ಕೃತ್ಯಗಳಲ್ಲಿ 43% ಅನ್ನು ನಕ್ಸಲೈಟ್ ಸಂಘಟನೆಗಳೇ ಮಾಡಿವೆ ಎಂದು ಅಂತಾರಾಷ್ಟ್ರೀಯ ವರದಿಯೊಂದು ಹೇಳುತ್ತಿದೆ. ಒಂದೇ ವರ್ಷದಲ್ಲಿ ಇವರು ನಡೆಸಿರುವ ದಾಳಿಗಳು 343; ಇವರ ಅಟ್ಟಹಾಸಕ್ಕೆ ಬಲಿಯಾಗಿ ಶವವಾಗಿ ಮಲಗಿದ ಅಮಾಯಕರ ಸಂಖ್ಯೆ 176. 2010ರಿಂದ 2015ರವರೆಗಿನ ಅವಧಿಯಲ್ಲಿ ದೇಶದೊಳಗೆ ನಡೆದ ಭಯೋತ್ಪಾದನಾ ಕೃತ್ಯಗಳಲ್ಲಿ 2162 ನಾಗರಿಕರು, 802 ಭದ್ರತಾ ಸಿಬ್ಬಂದಿ ಹತರಾಗಿದ್ದಾರೆಂದು ಕೇಂದ್ರದ ಗೃಹಸಚಿವಾಲಯದ ವರದಿ ಹೇಳುತ್ತಿದೆ. ಜಗತ್ತಿನಲ್ಲಿ ತಾಲಿಬಾನ್, ಐಸಿಸ್ ಮತ್ತು ಬೊಕೋ ಹರಾಮ್ ಎಂಬ ಉಗ್ರಗಾಮಿ ಸಂಘಟನೆಗಳ ನಂತರದ ಸ್ಥಾನವನ್ನು ಭಾರತದ ನಕ್ಸಲ್ ಚಳವಳಿ ತನ್ನ ಮುಡಿಗೇರಿಸಿಕೊಂಡಿದೆ. ಭಾರತ ಪ್ರಪಂಚದೆದುರು ತಲೆ ತಗ್ಗಿಸುವಂಥ ವಿಚಾರವಿದು. ಕರ್ನಾಟಕದ ಸಂದರ್ಭದಲ್ಲಿ ನಕ್ಸಲೈಟ್ ಚಳವಳಿಯ ನೆಲೆ-ಬೆಲೆಗಳೇನು ಎಂಬುದನ್ನು ವಿಮರ್ಶಿಸುವುದೇ ಪ್ರಸ್ತುತ ಲೇಖನದ ಉದ್ದೇಶ. ಮತ್ತಷ್ಟು ಓದು 
ಅಂದು ಸಿದ್ದರಾಮಯ್ಯನವರನ್ನು ಪ್ರೋತ್ಸಾಹಿಸಿದ್ದಕ್ಕೆ ಹೆಗಡೆ ಅವರ ಆತ್ಮ ಇಂದು ಅದೆಷ್ಟು ನೊಂದುಕೊಳ್ಳುತ್ತಿದೆಯೋ
– ಶ್ರೀನಿವಾಸ್ ರಾವ್
ನಮ್ಮಲ್ಲಿ ವೀರರನ್ನು ಬಣ್ಣಿಸುವುದಕ್ಕೆ, ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಗುಣವನ್ನು ಬಣ್ಣಿಸಲು “ಹೇಳುವುದನ್ನೇ ಮಾಡುತ್ತಾನೆ” ಎಂಬ ಮಾತನ್ನು ಬಳಸುತ್ತೇವೆ, ಈಗ ಸಿದ್ದರಾಮಯ್ಯನವರನ್ನು ನೋಡಿದರೆ ಹಾಗೆಯೇ ಅನಿಸುತ್ತಿದೆ. ಈಗ್ಗೆ ಮೂರು ವರ್ಷಗಳ ಹಿಂದೆ ನವನಿರ್ಮಾಣ ವೇದಿಕೆ ಆಯೋಜಿಸಿದ್ದ ರಾಮಕೃಷ್ಣ ಹೆಗಡೆ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ “ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಇದ್ದ ರಾಜಕಾರಣಕ್ಕೂ ಇಂದಿನ ರಾಜಕಾರಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ” ನಾನು ನೂರಕ್ಕೆ ನೂರರಷ್ಟು ಪ್ರಾಮಾಣಿಕನಾಗಿದ್ದೇನೆ ಎಂದು ಹೇಳಿದರೆ ನನಗೆ ನಾನೇ ಸುಳ್ಳು ಹೇಳಿಕೊಂಡಂತೆ” ಎಂಬ ಅಣಿ ಮುತ್ತುಗಳನ್ನು ಉದುರಿಸಿದ್ದರು. ಇತ್ತೀಚಿನ ದಿನಗಳಲ್ಲಿ ಅವರು ಅಂದು ಹೇಳಿದ ಮಾತನ್ನು ಸತ್ಯ ಎಂದು ನಿರೂಪಿಸಲು ಅದೆಷ್ಟು ಕಷ್ಟ ಪಡುತ್ತಿದ್ದಾರೆ ಎಂಬುದು ಬಹುಶಃ ಅವರೊಬ್ಬರಿಗೇ ಗೊತ್ತಿರಬೇಕು. ಮತ್ತಷ್ಟು ಓದು 
ಹಳಿ ತಪ್ಪಿರುವ ಚಾಲಕನಿಗೆ ತಿಳಿಹೇಳುವವರು ಯಾರು?
– ರೋಹಿತ್ ಚಕ್ರತೀರ್ಥ
ಮೂಕಂ ಕರೋತಿ ವಾಚಾಲಂ. ಹಾಗಾಗಿದೆ ನನಗೆ. ಬರೆಯಬೇಕಿದ್ದ ಕೈ ಓಡುತ್ತಿಲ್ಲ. ಮನಸ್ಸು ಹೆಪ್ಪುಗಟ್ಟಿ ಕೂತಿದೆ. ಏನು ಅಂತ ಬರೆಯಲಿ? ಏನನ್ನು ಹೇಳಲಿ? ಕತ್ತಲಿಗೆ ಹತ್ತೆ ತಲೆ? ನೂರಾರೆ? ಅದು ಅಸಂಖ್ಯ! ಕತ್ತರಿಸಿದರೆ ಬೆಳೆವ, ಬೆಳೆದು ಕತ್ತಿಗೆ ಬರುವ ಅನಾದಿ; ಕೋದಂಡದಂಡವೂ ಹೀಗೆ ದಂಡ ಎನ್ನುವ ಗೋಪಾಲಕೃಷ್ಣ ಅಡಿಗರ ಸಾಲುಗಳು ತಲೆಯೊಳಗೆ ಅಪ್ಪಾಲೆತಿಪ್ಪಾಲೆಯಂತೆ ಸುತ್ತುತ್ತಿವೆ. ಮಳೆಗಾಲದ ಕಾರ್ಮೋಡಗಳು ಸುತ್ತ ಇಳಿಬಿದ್ದಿರುವಂತೆ ಹೃದಯದ ತುಂಬೆಲ್ಲ ಕತ್ತಲೆ ತೂಗುತ್ತಿದೆ. ಮೈ ಮಂಜುಗಟ್ಟಿದೆ. ಬರೆಯುವುದನ್ನು ಉಸಿರಾಟದಷ್ಟೇ ಸಹಜವಾಗಿ ಮಾಡಬಲ್ಲ ನನಗೂ ಕೈಯನ್ನು ಯಾರೋ ಎಳೆದುಕಟ್ಟಿರುವಂಥ ಭಾವ. ಮತ್ತಷ್ಟು ಓದು 
ಸಂಪುಟ ಪುನಾರಚನೆಯ ಸುದ್ದಿ ಕೇಳಿ ದಿಕ್ಕಾಪಾಲಾಗಿ ಓಡಿದ ಜನ
ಪ್ರವೀಣ್ ಕುಮಾರ್, ಮಾವಿನಕಾಡು
ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಪುನರ್ ರಚನೆಯ ಬಗ್ಗೆ ಪಕ್ಷದ ಹಲವಾರು ಹಿರಿಯ ಮುಖಂಡರು, ಹಲವು ಜಾತಿಯ ನಾಯಕರುಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರಿಂದಾಗಿ ಇನ್ನೆರಡು ದಿನಗಳಲ್ಲಿ ಕೆಲವು ಸಚಿವರನ್ನು ಕೈ ಬಿಟ್ಟು ಅವರ ಬದಲಿಗೆ ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಮತ್ತೊಮ್ಮೆ ಮಂತ್ರಿಮಂಡಲವನ್ನು ಪುನರ್ ರಚಿಸಲಾಗುವುದು ಎಂದು ಮುಖ್ಯಮಂತ್ರಿಗಳು ಇಂದು ತಿಳಿಸಿದರು. ಮತ್ತಷ್ಟು ಓದು 
ಸಾವರ್ಕರ್ ಬಗ್ಗೆ ಮಾತಾಡುವುದಕ್ಕೂ ಯೋಗ್ಯತೆ ಬೇಕು
-ಡ್ಯಾನಿ ಪಿರೇರಾ
ಹಳ್ಳಿಮೈಸೂರು-573210
23-03-2016 ರಂದು ಭಗತ್ ಸಿಂಗ್, ರಾಜಗುರು ಸುಖದೇವರ ಬಲಿದಾನದ ದಿನ ಸಾಮಾಜಿಕ ಜಾಲತಾಣದಲ್ಲಿ ಇದ್ದಕ್ಕಿದ್ದಂತೆ ಒಂದು ಸುದ್ಧಿ ಕಾಣಿಸಿತು. ಅದು ಕಾಂಗ್ರೆಸ್ಸಿನ ಅಧಿಕೃತ ಐಎನ್‍ಸಿ ಟ್ವಿಟರ್ ನಲ್ಲಿ ಪ್ರಕಟವಾದ ಸಂದೇಶ ವಾಗಿತ್ತು. ಅದರಲ್ಲಿ ಹೇಳುತ್ತಿರುವುದೇನು?! ಭಗತ್ ಸಿಂಗ್, ಸ್ವಾತಂತ್ರ್ಯವೀರ ಸಾವರ್ಕರ್‍ರ ಭಾವಚಿತ್ರದಡಿಯಲ್ಲಿ ಒಬ್ಬರನ್ನು ದೇಶಭಕ್ತ ಮತ್ತೊಬ್ಬರನ್ನು ದೇಶದ್ರೋಹಿ ಎಂದು ಟ್ವಿಟ್ ಮಾಡಲಾಗಿರುವ ಸಂದೇಶವದು! ಈ ದೇಶದ ಸ್ವಾತಂತ್ರ್ಯ ಯೋಧರ ಬಗೆಗಿನ ಕಾಂಗ್ರೆಸ್ಸಿನ ಮಾನಸೀಕತೆಯನ್ನು ಬಲ್ಲವರಿಗೆ ಈ ಹೇಳಿಕೆಯನ್ನು ನೋಡಿದಾಗ ಆಶ್ಚರ್ಯವಾಗುವುದಿಲ್ಲವಾದರೂ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲಾತಾಣಗಳಲ್ಲಿ ಒಂದಷ್ಟು ಹುಡುಕಾಟ ನಡೆಸುವ ಯುವ ಮನಸ್ಸುಗಳಿಗೆ ಸ್ವಾತಂತ್ರ್ಯ ಹೋರಾಟಗಾರನೊಬ್ಬನ ಮಾತ್ರವಲ್ಲದೇ ಇಡೀ ಜೀವನವನ್ನೇ ದೇಶ ಮಾತೆಯ ಸೇವೆಗಿಟ್ಟ ಮಹಾನ್ ವ್ಯಕ್ತಿಯ ವ್ಯಕ್ತಿತ್ವ ಪ್ರೇರಣೆ ಕೊಡಬೇಕಾಗುವ ವಿಷಯವಾಗಬೇಕಾದ ಹಿನ್ನೆಲೆಯಲ್ಲಿ ಅವರ ಬಗೆಗಿನ ಕಾಂಗ್ರೆಸ್ ಪಕ್ಷದ ಮಾತು ನಿಜಕ್ಕೂ ತಪ್ಪು ಸಂದೇಶ ಕೊಡುವಂತದ್ದು! ಇವರೇಕೆ ಹೀಗೆ? ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ನಡುವೆ ಭಿನ್ನಾಭಿಯವಿದ್ದೊಡನೇ ಆ ವ್ಯಕ್ತಿ ವಿದ್ರೋಹಿ ಆಗಬಲ್ಲನೇ?! ಮತ್ತಷ್ಟು ಓದು 
ಕಾಂಗ್ರೆಸ್ ಮುಕ್ತ ಸುಳ್ಯದಲ್ಲಿ ಅರಳಿದ ಕಮಲ
– ತಾರನಾಥ ನಡುಮನೆ
ಸುಳ್ಯ- ಇಂದು ಇದು ರಾಜಕೀಯವಾಗಿ ದಕ್ಷಿಣಕನ್ನಡಕ್ಕೆ ಸೇರಿದರೂ, ಇನ್ನೂ ಕೊಡಗಿನ ಕೆಲವು ಸಂಪ್ರದಾಯವನ್ನು ಉಳಿಸಿಕೊಂಡು ಬಂದ ಪ್ರದೇಶ. ಕರ್ನಾಟಕದ ಪ್ರಮುಖ ತೀರ್ಥಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವನ್ನು ಹೊಂದಿರುವ ತಾಲೂಕು.
ಸುಳ್ಯ ಪರಿಸರ ಮಂಗಳೂರಿನಂತೆ ಸಮತಟ್ಟಾಗಿರದೆ , ಕೊಡಗಿನಂತೆ ಸಣ್ಣ ಬೆಟ್ಟ-ಗುಡ್ಡ ವನ್ನು ಹೊಂದಿರೋ ಪ್ರದೇಶ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಹಸಿರು ಸಿರಿಯಲ್ಲಿ ಮಲಗಿರುವ ಊರು. ಇಲ್ಲಿನ ಜನ ಸ್ವಾಭಿಮಾನಿಗಳು , 1837 ರಲ್ಲಿ ನಡೆದ ಅಮರ ಸುಳ್ಯದ ರೈತ ದಂಗೆ ಇದಕ್ಕೆ ಸಾಕ್ಷಿ. ಅಂದು ಕಂದಾಯ ಪಾವತಿ ಹಾಗೂ ಕೊಡಗಿನ ಅರಸ ಚಿಕ್ಕವೀರರಾಜೇಂದ್ರನ ಪದಚ್ಯುತಿ ಕಾರಣಕ್ಕಾಗಿ ತಮ್ಮನಾಳುತ್ತಿದ್ದ ಬ್ರಿಟಿಷರ ವಿರುದ್ದ ದಂಗೆ ಎದ್ದ ರೈತರು ಮಂಗಳೂರಿಗೆ ಮುತ್ತಿಗೆ ಹಾಕಿದ್ದರು. ಮೊದಲು ಮಂಗಳೂರನ್ನು ಗೆದ್ದರೂ ನಂತರ ಆಂಗ್ಲರಿಗೆ ಬಿಟ್ಟು ಕೊಡಬೇಕಾಯಿತು.
ರಾಷ್ಟ್ರದ ಹಿತ ದೃಷ್ಟಿಯಿಂದಾದರು ಈ ಭಯೋತ್ಪಾದನೆಯ ರಾಜಕೀಯಕ್ಕೆ ಅಂತ್ಯ ಹಾಡಬೇಕಲ್ಲವೇ?
– ಅನಿಲ ಚಳಗೇರಿ
ಡಿಸೆಂಬರ್ ೩೧ ರ ರಾತ್ರಿ ಶಂಕಿತ ಉಗ್ರರ ಹಡಗನ್ನು ನೌಕ ಪಡೆ ಪತ್ತೆ ಹಚ್ಚಿ ಅದನ್ನು ಹಿಂಬಾಲಿಸಿ ಹೋದಾಗ ಅದರಲ್ಲಿರುವವರು ಹಡಗನ್ನು ಸ್ಪೋಟಿಸಿದರು ಎನ್ನುವ ವಿಷಯ ತಿಳಿದೊಡನೆ ನಮ್ಮಲ್ಲಿ ಅನೇಕರಿಗೆ ನೌಕಾಪಡೆಗೆ ಒಂದು ಶಬ್ಭಾಶ್ ಹೇಳಬೇಕೆನ್ನಿಸಿರಬಹುದು, ಅದಾಗಲೇ ರಾಜಕೀಯ ಪಕ್ಷಗಳು ಇಂತಹ ಒಂದು ಹಡಗು ಇತ್ತಾ? ಅದರಲ್ಲಿ ನಿಜವಾಗಲು ಉಗ್ರರಿದ್ದರಾ ? ಅದು ಪಾಕಿಸ್ತಾನಕ್ಕೆ ಸೇರಿದ ಹಡಗಾಗಿತ್ತಾ ? ಹಾಗಿದ್ದರೆ ಅವುಗಳ ದಾಖಲೆ ವೀಡಿಯೊ ದೃಶ್ಯಗಳನ್ನು ಬಿಡುಗಡೆ ಮಾಡಿ, ನಮಗೆ ಇದರ ಮೇಲೆ ಶಂಕೆಯಿದೆಯೆಂದು ಪ್ರಶ್ನಿಸಲು ಪ್ರಾರಂಭಿಸಿದನ್ನು ನೋಡಿ ನೋಡಿ ನಮ್ಮಲ್ಲಿ ಅನೇಕರಿಗೆ ಬೇಜಾರಾಗಿರಬೇಕು. ಪ್ರತಿ ಬಾರಿ ಉಗ್ರಗಾಮಿಯೊಬ್ಬ ಸಿಕ್ಕಾಗ, ಬಾಂಬ್ ದಾಳಿಯಾದಾಗ ಅಥವಾ ಯಾವುದೇ ಉಗ್ರ ಚಟುವಟಿಕೆ ನಡೆದಾಗ, ತನಿಖೆಯ ಪ್ರಾರಂಭದಿಂದಲೇ ಒಂದಲ್ಲ ಒಂದು ರಾಜಕೀಯ ಪಕ್ಷಗಳು ಅಥವಾ ಬುದ್ಧಿ ಜೀವಿಗಳು ಈ ಶಕಿಂತ ಆರೋಪಿಗಳ ನಿಂತೇಬಿಡುತ್ತಾರೆ. ತನಿಖೆ ನಡೆಯುತ್ತಿರುವಾಗಲೇ ಕ್ಲೀನ್ ಚಿಟ್ ಕೊಡುವದು, ರಾಜಕೀಯ ಬಣ್ಣ ಕಟ್ಟಲು ಪ್ರಯತ್ನಿಸುವದು ಅಥವಾ ಇಂತಹ ಗಂಭೀರ ವಿಷಯದಲ್ಲಿ ಜಾತಿ ಅಥವಾ ಧರ್ಮದ ಮಾತುಗಳನ್ನು ಆಡುವದು ನೋಡುತ್ತಲೇ ಇರುತ್ತೇವೆ, ಕೆಲವಿರಿಗೆ ಇದು ಇದು ಓಲೈಕೆಯ ಒಂದು ಭಾಗವಾದರೆ ಇನ್ನು ಕೆಲವರಿಗೆ ಇದು ಕೇವಲ ಪ್ರಚಾರ ಗಿಟ್ಟಿಸಿಕೊಳ್ಳಲು ಒಂದು ಗಿಮಿಕ್. ಇಂತಹ ಹೇಳಿಕೆಗಳನ್ನು IC – 814 ಹೈ ಜಾಕ್ ನಿಂದ ಹಿಡಿದು ಅಫ್ಜಲ್ ಗುರು, ಬಾಟ್ಲ ಹೌಸ್ ಎನ್ಕೌಂಟರ್, ಇಶ್ರಾತ್ ಜಹಾ ಎನ್ಕೌಂಟರ್, ಹೈದರಾಬಾದ್ ಬ್ಲಾಸ್ಟ್, ಜರ್ಮನ್ ಬೇಕರಿ ಬ್ಲಾಸ್ಟ್ ಹಾಗು ಮುಂಬೈ ತಾಜ್ ಅಟ್ಯಾಕ್ ಆದಗಲು ಕೇಳುತ್ತಲೇ ಬಂದಿದ್ದೇವೆ. ಪ್ರತ್ಯೇಕತೆಯ ಹೆಸರಿನಲ್ಲಿ ಉಗ್ರವಾದ, ನಕ್ಸಲ್ ಹೆಸರಿನಲ್ಲಿ ಉಗ್ರವಾದ ಹಾಗು ಮಾವೋವಾದಿಗಳ ಉಗ್ರ ಚಟುವಟಿಕೆಯನ್ನು ವಹಿಸಿಕೊಂಡು ಮಾತನಾಡುವಂತಹ ಬುದ್ಧಿ ಜೀವಿಗಳು ಇಡೀ ದೇಶದಲ್ಲಿ ತುಂಬಿದ್ದಾರೆ. ಕೆಲವೊಮ್ಮ ರಾಜಕೀಯ ಪಕ್ಷಗಳ ಜೊತೆ, ಕೆಲವೊಮ್ಮೆ ಮಾಧ್ಯಮಗಳ ಜೊತೆ ಇನ್ನು ಕೆಲವೊಮ್ಮೆ ಮಾನವ ಹಕ್ಕು ಹೋರಾಟದ ನೆಪದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ದಶಕಗಳ ಹಿಂದೆಯೇ ಧರ್ಮ ಮತ್ತು ರಾಜಕೀಯದ ಹೆಸರಿನಲ್ಲಿ ಇಂಥಹ ಸಂಘಟನೆಗಳನ್ನು ಸಮರ್ಥಿಸಿಕೊಂಡ ಪಾಕಿಸ್ತಾನ, ಆಫ್ತಾನಿಸ್ತಾನ, ಇರಾಕ್ ಹಾಗು ಇಂತಹ ಅನೇಕ ರಾಷ್ಟ್ರಗಳು ತಾವೇ ಬೆಳಸಿದ ಈ ಉಗ್ರರಿಂದ ತಮ್ಮ ದೇಶವನ್ನು ಕಾಪಾಡಿಕೊಳ್ಳಲು ಇಂದು ಕಷ್ಟಪಡುತ್ತಿರುವದನ್ನು ನಾವೆಲ್ಲ ನೋಡುತ್ತಿದ್ದೇವೆ.
ಮತ್ತಷ್ಟು ಓದು 
ಕಾಂಗ್ರೆಸ್ ರಹಿತ ಭಾರತ ಸಾಧ್ಯವೇ?
– ಡಾ.ಅಶೋಕ್. ಕೆ. ಆರ್
‘ಯಥಾಸ್ಥಿತಿಗೋ ಬದಲಾವಣೆಗೋ ಸ್ಥಿರತೆಗೋ ಅಭಿವೃದ್ಧಿಗೋ ಸ್ಥಳೀಯ ಅನಿವಾರ್ಯತೆಗೋ ಮತ್ತೊಂದಕ್ಕೋ ಮಗದೊಂದಕ್ಕೋ ಒಟ್ಟಿನಲ್ಲಿ ಹೋಗಿ ವೋಟ್ ಮಾಡಿ!’
ಮೋದಿ ಜಪದ ಭಾಜಪ ಕಾಂಗ್ರೆಸ್ಸನ್ನು ಭಾರತದಿಂದ ಸಂಪೂರ್ಣ ನಿರ್ನಾಮವಾಗಿಸುವುದೇ ನಮ್ಮ ಗುರಿ ಎಂದು ಬಹಳಷ್ಟು ಪ್ರಚರಿಸುತ್ತಿದೆ. ಅನೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಏಳಿಗೆಯಿಂದ ರಾಷ್ಟ್ರೀಯ ಪಕ್ಷಗಳೆನ್ನಿಸಿಕೊಂಡ ಕಾಂಗ್ರೆಸ್ ಮತ್ತು ಭಾಜಪ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲೂ ಎಣಗುತ್ತಿರುವ ಪರಿಸ್ಥಿತಿಯಿದೆ. ಒಂದಷ್ಟು ರಾಜ್ಯಗಳಲ್ಲಿ ಭಾಜಪ ಪ್ರಭಾವಶಾಲಿಯಾಗಿ ಮಗದೊಂದಷ್ಟು ಕಡೆ ಕಾಂಗ್ರೆಸ್ ಪ್ರಭಾವಶಾಲಿಯಾಗಿ ಮತ್ತೊಂದು ಪಕ್ಷದ ಏಳಿಗೆಗೆ ಅಡ್ಡಿಯಾಗಿದ್ದರೆ ಇನ್ನುಳಿದವುಗಳಲ್ಲಿ ಮತದಾರ ಒಮ್ಮೆ ಕಾಂಗ್ರೆಸ್ಸಿಗೆ ಮತ್ತೊಮ್ಮೆ ಭಾಜಪಕ್ಕೆ ಅವಕಾಶ ನೀಡುವ ಮನಸ್ಸು ಮಾಡಿದ್ದಾನೆ.
ಕಾಂಗ್ರೆಸ್ಸಿಗರು ಮಾಡುವ ಭ್ರಷ್ಟಾಚಾರದಿಂದ ರೋಸಿ ಹೋಗಿ ಬೇರೊಂದು ಪಕ್ಷಕ್ಕೆ ಮತ ಹಾಕುವ ಜನರ ತೀರ್ಮಾನ ಬಹಳಷ್ಟು ಸಲ ಬೆಂಕಿಯಿಂದ ಬಾಣಲೆಗೆ ಹಾಕಿಸಿಕೊಂಡಂತೆ ಆಗುತ್ತಿದೆ. ಮತ್ತಷ್ಟು ಓದು 
ಗೆದ್ದಿದ್ದು ಕಾಂಗ್ರೆಸ್ಸ್ ಅಲ್ಲ ’ಸೋತಿದ್ದು ಬಿಜೆಪಿ’
– ರಾಕೇಶ್ ಶೆಟ್ಟಿ
ಮೇ೮ರಂದು ರಾಜ್ಯದ ರಾಜಕೀಯ ಪಂಡಿತರ ಲೆಕ್ಕಾಚಾರಗಳೆಲ್ಲ ತಲೆಕೆಳಕಾಗಿ ಖುದ್ದು ಕಾಂಗ್ರೆಸ್ಸಿಗರೇ ತಮ್ಮ “ಕೈ” ಚಿವುಟಿ ಚಿವುಟಿ ಕನಸೋ ನನಸೋ ಅನ್ನುವಷ್ಟರಲ್ಲಿ ಕಾಂಗ್ರೆಸ್ಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.ಪರಮೇಶ್ವರ್ ಸೋಲಿನಿಂದ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿಯೂ ಆಗಿಬಿಟ್ಟರು.
ಅತ್ತ ಕಾಂಗ್ರೆಸ್ಸ್ ಗೆದ್ದಿದ್ದೇ ತಡ,ಇತ್ತ ನಮ್ಮ ನಾಡಿನ ಪ್ರಗತಿಪರರು,ಬುದ್ದಿಜೀವಿಗಳು,ಸಾಕ್ಷಿಪ್ರಜ್ನೆಗಳು ಚುನಾವಣಾ ಫಲಿತಾಂಶದ ಬಗ್ಗೆ ಬರೆಯಲು ಕುಳಿತರು ನೋಡಿ. ಶುರುವಾಯ್ತು ಪದಪುಂಜಗಳ ಪಟ್ಟಿ.ಹೆಚ್ಚು ಕಡಿಮೆ ಆ ಎಲ್ಲಾ ಬರಹಗಳೂ ಈ ಧಾಟಿಯಲ್ಲಿದ್ದವು.
“ಸಂಘ ಪರಿವಾರದ ಪುಂಡಾಟಿಕೆಯಿಂದ,ವಿಷಮಯವಾದ ಹಿಂದುತ್ವದ ಅಜೆಂಡಾ,ಮತಾಂಧತೆ ಇತ್ಯಾದಿ ಇತ್ಯಾದಿಗಳಿಂದ ಅಲ್ಪಸಂಖ್ಯಾತರ ಜೀವನ ನರಕವಾಗಿದ್ದ ಕರ್ನಾಟಕ”ವನ್ನು ನೋಡಿ ಸಹಿಸಲಾಗದ ನಾಡಿನ ಪ್ರಜ್ಞಾವಂತ, ಪ್ರಗತಿಪರ,ಸಂವೇದನಾಶೀಲ,ಸಾಕ್ಷಿಪ್ರಜ್ನೆ ಕನ್ನಡಿಗರು ಕಾಂಗ್ರಸ್ ಪರ ನಿಂತರಂತೆ…!
ನಿಜವಾಗಿಯೂ ಕನ್ನಡಿಗರು ಕಾಂಗ್ರೆಸ್ಸ್ ಪರ ಮತ ಚಲಾಯಿಸದರೆ ಅಂತ ನೋಡ ಹೊರಟರೆ, ೬ ಸ್ಥಾನ ಗೆದ್ದ ಕೆ.ಜೆ.ಪಿ ೩೯ ಸ್ಥಾನಗಳಲ್ಲಿ ಎರಡನೇ ಸ್ಥಾನದಲ್ಲಿದ್ದರೆ,ಬಿ.ಜೆ.ಪಿ ಸುಮಾರು ೩೦ ಸ್ಥಾನಗಳಲ್ಲಿ ಎರಡನೇ ಸ್ಥಾನದಲ್ಲಿದ್ದರೆ,ಬಿ.ಆಸ್.ಆರ್ ಗೆದ್ದಿದ್ದು ೪ ಸೀಟುಗಳನ್ನು.ಅಂದರೆ ಬಿಜೆಪಿ+ಕೆಜೆಪಿ+ಬಿ.ಆಸ್.ಆರ್ ನಡುವೆ ಮತಗಳು ಚೆಲ್ಲಾಪಿಲ್ಲಿಯಾಗಿರುವುದರಿಂದ ಕಾಂಗ್ರೆಸ್ಸು ಗೆದ್ದಿದೆ.ಬಹುಷಃ ಬಿಜೆಪಿಯಿಂದ ಯಡ್ಯೂರಪ್ಪ ಹೊರಹೋಗದಿದ್ದರೆ ೮೦ರ ಹತ್ತಿರ ಬಂದು ತಲುಪುತಿತ್ತು.ಇನ್ನೂ ಸರಳವಾಗಿ ಹೇಳಬೇಕೆಂದರೆ ಗೆದ್ದಿದ್ದು ಕಾಂಗ್ರೆಸ್ಸ್ ಅಲ್ಲ ’ಸೋತಿದ್ದು ಬಿಜೆಪಿ’ ಅಷ್ಟೆ.ಗೆಲ್ಲಲ್ಲಿಕ್ಕೆ ಕಾಂಗ್ರೆಸ್ಸ್ ಏನಾದರೂ ವಿರೋಧ ಪಕ್ಷ ಕೆಲಸವನ್ನಾದರೂ ಸರಿಯಾಗಿ ನಿಭಾಯಿಸಿತ್ತೇ? ಇದೊಂತರ ಕೋಗಿಲೆ ಗೂಡಲ್ಲಿ ಕಾಗೆ ಮೊಟ್ಟೆ ಇಟ್ಟ ಹಾಗೆ …!!! ಬಿಜೆಪಿಯ ಭ್ರಷ್ಟಾಚಾರವನ್ನು ಬಯಲಿಗೆಳೆದು ಸಮರ್ಥ ವಿರೋಧ ಪಕ್ಷದ ಕೆಲಸ ಮಾಡಿದ್ದು ಜೆಡಿಎಸ್,ಗೆದ್ದಿದ್ದು ಕಾಂಗ್ರೆಸ್ಸ್ …!!!
ಇನ್ನು ಬಿಜೆಪಿ ಸೋಲಿಗೆ ಕಾರಣಗಳನ್ನು ದುರ್ಬೀನು ಹಾಕಿಕೊಂಡೇನು ಹುಡುಕಬೇಕಿಲ್ಲ.ಸಾಲು ಸಾಲು ಡಿ-ನೋಟಿಫಿಕೇಷನ್,ಭ್ರಷ್ಟಾಚಾರದ ಹಗರಣಗಳು,ಬ್ಲೂ-ಫಿಲಂ ಕರ್ಮಕಾಂಡ ಅದು ಇದು ಅಂತಲೇ ಪಟ್ಟಿ ಮಾಡಿಬಿಡಬಹುದು.ಇವೆಲ್ಲಕ್ಕೂ ಕಳಶವಿಟ್ಟಂತೆ ಬಿಜೆಪಿಯ ಮಾಸ್ ನಾಯಕ ಯಡ್ಯೂರಪ್ಪರನ್ನು, ಬೆಂಗಳೂರಿನ ತನ್ನ ಕ್ಷೇತ್ರವೊಂದನ್ನು ಬಿಟ್ಟು ಇನ್ನೆಲ್ಲೂ ನಿಂತು ಒಂದು ಸಂಸದನ ಸ್ಥಾನ ಗೆಲ್ಲಲಾಗದ ರಾಷ್ಟ್ರೀಯ ನಾಯಕ(?)ರೊಬ್ಬರ ಕುತಂತ್ರದಿಂದ ಪಕ್ಷ ತೊರೆದು ಹೋಗುವಂತೆ ಮಾಡಿದ್ದು ಮುಖ್ಯ ಕಾರಣ.ಇನ್ನು ದಕ್ಷಿಣ ಕನ್ನಡದಲ್ಲಿ ಹಾಲಾಡಿ,ಯೋಗಿಶ್ ಭಟ್,ನಾಗರಾಜ್ ಶೆಟ್ಟಿ ಅಂತವರ ವಿಷಯದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ನಡೆದುಕೊಂಡ ರೀತಿಯಿಂದ ಮತ್ತು ಸದಾನಂದ ಗೌಡರನ್ನ ವಿನಾಕಾರಣ ಕುರ್ಚಿಯಿಂದ ಇಳಿಸಿದ್ದು ಬಿಜೆಪಿಗೆ ಮುಳುವಾಯಿತು.




