ವಿಷಯದ ವಿವರಗಳಿಗೆ ದಾಟಿರಿ

Posts tagged ‘ಗಡ್ಕರಿ’

12
ನವೆಂ

ಕೋಳಿಮೊಟ್ಟೆ ನ್ಯಾಯ ಅರಿಯುವ ತುರ್ತಿದೆ

– ಚಕ್ರವರ್ತಿ ಸೂಲಿಬೆಲೆ

‘ಇವನ್ಯಾಕೋ ಏಳು ತಿಂಗಳಿಗೇ ಹುಟ್ಟಿದವನ ಹಾಗೆ ಆಡ್ತಾನಲ್ಲ!’ ಹಾಗಂತ ಹೇಳೋದನ್ನು ಕೇಳಿದ್ದೀರಾ? ಪ್ರತಿಯೊಂದನ್ನೂ ತುರ್ತುತುರ್ತಾಗಿ, ಮುಂದಾಲೋಚನೆ ಇಲ್ಲದೆ ಅರ್ಧಂಬರ್ಧ ಕೇಳಿ ನಿರ್ಣಯ ತೆಗೆದುಕೊಳ್ಳೋರಿಗೆ ಹೇಳುವ ಮಾತು ಇದು. ಕೆಲವೊಮ್ಮೆ ಹೀಗೆ ಮಾಡಿದ ಕೆಲಸಗಳು ತಮಾಷೆಯಾಗಿರ‍್ತವೆ, ಕೆಲವೊಮ್ಮೆ ಬೋಧಪ್ರದವಾಗಿರುತ್ತವೆ, ಮತ್ತು ಕೆಲವೊಮ್ಮೆ ಭಯಾನಕ ಪರಿಣಾಮವನ್ನೂ ಉಂಟು ಮಾಡುತ್ತವೆ.

ಕುರುಕ್ಷೇತ್ರ ಯುದ್ಧದಲ್ಲಿ ಅಶ್ವತ್ಥಾಮನೆಂಬ ಆನೆ ಸತ್ತಾಗ ಧರ್ಮರಾಯ ಹೇಳಿದ ಮಾತು ಹಾಗೇ ಅಲ್ಲವೆ? ’ಅಶ್ವತ್ಥಾಮೋ ಹತಃ’ ಇಷ್ಟು ಮಾತನ್ನು ಕೇಳುತ್ತಲೇ ಪುತ್ರವ್ಯಾಮೋಹಿಯಾದ ದ್ರೋಣರು ಶಸ್ತ್ರತ್ಯಾಗ ಮಾಡಿ ರಣರಂಗ ಮಧ್ಯದಲ್ಲಿ ಕುಳಿತುಬಿಟ್ಟರು. ಅಲ್ಲೇ ಅವರ ವಧೆಯಾಯಿತು. ’ಕುಂಜರಃ’ ಎಂದು ಹೇಳಿದ್ದನ್ನು ಕೇಳುವ ವ್ಯವಧಾನ ಅವರಿಗಿರಲಿಲ್ಲ, ಅಥವಾ ಬಹುಶಃ ಧರ್ಮರಾಯನೇ ಹೇಳಿದ್ದು ಸರಿಯಾಗಿ ಕೇಳುವಂತಿರಲಿಲ್ಲ.

’ಅಹಿಂಸಾ ಪರಮೋಧಮಃ’ ಎಂಬ ವಾಕ್ಯವನ್ನ ಪದೇಪದೇ ಕೇಳಿದ್ದೇವಲ್ಲ, ಅದೊಂಥರಾ ನಮ್ಮ ಘೋಷ ವಾಕ್ಯ. ಅದರ ಆಧಾರದ ಮೇಲೆಯೇ ರಾಷ್ಷ್ರವನ್ನು ಕಟ್ಟುವ ಭ್ರಮೆಯ ಮೇಲಿದ್ದೇವೆ ನಾವು. ಹಾಗೆನ್ನುತ್ತಲೇ ಬ್ರಿಟಿಷರ ಲಾಠಿಗೆ ಎದೆ ಕೊಟ್ಟೆವು, ಪಾಕಿಸ್ತಾನ ಕಳಕೊಂಡೆವು. ಹಾಗೆನ್ನುತ್ತಲೇ ಚೀನಾಕ್ಕೆ ಸಾವಿರಾರು ಹೆಕ್ಟೇರ್‌ಗಳಷ್ಟು ಭೂಮಿಯನ್ನು ಬಿಟ್ಟುಕೊಟ್ಟೆವು. ಅಹಿಂಸೆಯ ಆರಾಧನೆ ಮಾಡುತ್ತಲೇ ಕಸಬ್‌ನನ್ನು ಅಳಿಯನಂತೆ ಗೌರವದಿಂದ ಸಾಕಿಕೊಂಡೆವು. ಆದರೆ ಇದೇ ವಾಕ್ಯದ ಉತ್ತರಾರ್ಧ ’ಧರ್ಮ ಹಿಂಸಾ ತಥೈವ ಚ’ ನಮಗೆ ಕೇಳಿಸಲೇ ಇಲ್ಲ. ಧರ್ಮ ಸ್ಥಾಪನೆಗೋಸ್ಕರ ಹಿಂಸೆ ಮಾಡಿದರೆ ತಪ್ಪಲ್ಲ ಎನ್ನುವುದೂ ಈ ರಾಷ್ಟ್ರದ ಘೋಷ ವಾಕ್ಯವೇ. ಹೀಗಾಗಿಯೇ ಪರಮ ಶಾಂತ, ಧ್ಯಾನ ಸಿದ್ಧರೂ ಹತ್ತು ಕೈಗಳಲ್ಲಿ ಆಯುಧ ಹಿಡಿದ ದೇವಿಯನ್ನೇ ಪೂಜಿಸುವುದು. ಧರ್ಮ, ಶಾಂತಿ, ಹಿಂಸೆಗಳ ಪರಿಧಿಯನ್ನು ಚೆನ್ನಾಗಿ ಅರಿತವನು ಅವನು.

ಮತ್ತಷ್ಟು ಓದು »

7
ನವೆಂ

ಜ್ಞಾನಿಗಳಿಗೆ ಸಾವಿಲ್ಲ. ಆದರೆ ಗಡ್ಕರಿ, ದಾವೂದ್ ನಂತಹ ಬುದ್ದಿವಂತರಿಗೆ ಸಾವಿದೆ!

– ಮಹೇಂದ್ರ ಕುಮಾರ್

           ಸ್ವಾಮಿ ವಿವೇಕಾನಂದರು ಮತ್ತು ದಾವೂದ್ ಇಬ್ರಾಹಿಂ, ಇಬ್ಬರೂ ಸಮಾನ ಬುದ್ದಿವಂತರು. ಸ್ವಾಮಿ ವಿವೇಕಾನಂದರು ತಮ್ಮ ಬುದ್ದಿವಂತಿಕೆಯನ್ನು ಸದುಪಯೋಗ ಪಡಿಸಿಕೊಂಡರು. ಆದರೆ ದಾವೂದ್ ಇಬ್ರಾಹಿಂ ದುರುಪಯೋಗ ಪಡಿಸಿಕೊಂಡ. ಈ ಹೇಳಿಕೆಯನ್ನು ದೇಶದ ಮಹಾನ್ ರಾಷ್ಟ್ರಭಕ್ತಿಯ  ಪ್ರತೀಕ ಎಂದು ಹೇಳಿಕೊಳ್ಳುವ ಭಾರತೀಯ ಜನತಾಪಕ್ಷದ, ಆರ್ ಎಸ್ ಎಸ್ ಗರಡಿಯಲ್ಲಿ ಪಳಗಿ ಏಕಾಏಕಿ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಬಾಯಿಂದ ಉದುರಿರುವ ಅಣಿಮುತ್ತುಗಳು..

ಹೇಳಿಕೇಳಿ ಈತ ದೇಶಭಕ್ತರನ್ನು ಹುಟ್ಟು ಹಾಕುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಟ್ಟಾಳು. ಪ್ರತೀ ವರ್ಷ ವಿವೇಕಾನಂದ ಜಯಂತಿಯನ್ನು ಆಚರಿಸುವ ಪಕ್ಷದ ರಾಷ್ಟ್ರನಾಯಕ. ಇಷ್ಟೇ ಅಲ್ಲದೇ ರಾಷ್ಟ್ರೀಯ  ಕಾರ್ಯಕಾರಣಿಗಳಿಂದ ಹಿಡಿದು ಸಣ್ಣ ಸಣ್ಣ ಕಾರ್ಯಕ್ರಮಗಳವರೆಗೂ ವಿವೇಕಾನಂದರ ಭಾವಚಿತ್ರಗಳನ್ನು ಬಳಸಿಕೊಳ್ಳುವ ರಾಜಕೀಯ ಪಕ್ಷದ ಮುಂದಾಳು.

ಈ ಹೇಳಿಕೆಯನ್ನು ಕೊಡುವಾಗ ಒಂದೋ ತಲೆ ಕೆಟ್ಟಿರಬೇಕು, ಇಲ್ಲವಾದಲ್ಲಿ ವಿವೇಕಾನಂದರ ಬಗ್ಗೆ ಮತ್ತು ಅವರ ಆದರ್ಶ ಚಿಂತನೆಗಳ ಬಗ್ಗೆ ಯಾವುದೇ ಅರಿವಿಲ್ಲದೇ ಒಬ್ಬ ಸಾದಾರಣ ಇವರ ನಾಯಕರೆಂದು ಭಾವಿಸಿರಬೇಕು.. ವಿವೇಕಾನಂದರ ಬಗ್ಗೆ ಸಣ್ಣ ಅರಿವೂ ನಿತಿನ್ ಗಡ್ಕರಿಗೆ ಇದ್ದಿದ್ದೇ ಆದಲ್ಲಿ ಆತನ ಬಾಯಿಂದ ಈ ಮಾತುಗಳು ಹೊರಬರುತ್ತಿರಲಿಲ್ಲ. ಇವರುಗಳಿಗೆ ಆದರ್ಶ ವ್ಯಕ್ತಿಗಳು ಬಳಕೆಗೆ ಮಾತ್ರಾ…

ಮತ್ತಷ್ಟು ಓದು »

5
ನವೆಂ

ಗಡ್ಕರಿಯ ಅ”ವಿವೇಕ” ಮತ್ತು ಸಂಘದ “ಸ್ವಾಮಿ”ನಿಷ್ಠೆ…!

– ರಾಕೇಶ್ ಶೆಟ್ಟಿ

“ಇನ್ನೊಬ್ಬ ವಿವೇಕಾನಂದನಿದ್ದಿದ್ದರೆ ಅವನಿಗೆ ತಿಳಿಯುತಿತ್ತು – ಈ ವಿವೇಕಾನಂದ ಏನು ಮಾಡಿದ್ದಾನೆ ಎಂದು… ಇರಲಿ, ಕಾಲಾಂತರದಲ್ಲಿ ಮತ್ತೆಷ್ಟು ಮಂದಿ ವಿವೇಕಾನಂದರು ಉದಿಸಲಿರುವರೋ!” ಸ್ವಾಮೀಜಿ ದೇಹತ್ಯಾಗದ ದಿನ ತಮ್ಮಷ್ಟಕ್ಕೆ ತಾವೇ ಹೇಳಿಕೊಂಡ ಮಾತುಗಳಿವು. ನಿಜ ವಿವೇಕಾನಂದ ಮಾಡಿ ಹೋಗಿದ್ದೇನು? ಯಾರನ್ನಾದರು ಕೇಳಿ ನೋಡಿ, ತಟ್ಟನೆ “ಅವರು ಸರ್ವ ಧರ್ಮ ಸಮ್ಮೇಳನದಲ್ಲಿ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದರು” ಅಂತಲೇ ಹೇಳುತ್ತಾರೆ..ಮುಂದೇನು ಮಾಡಿದ್ದರು ಅಂತ ಕೇಳುವಷ್ಟರಲ್ಲಿ ಮಾತು ತಡವರಿಸುತ್ತದೆ… ಬಹುಷಃ ಇದೆಲ್ಲವನ್ನೂ ಅರಿತೇ ಸ್ವಾಮೀಜಿ ಬಹುಷಃ ಮೇಲಿನ ಮಾತನ್ನು ಹೇಳಿದ್ದರು ಅನ್ನಿಸುತ್ತದೆ.

ಆದರೆ,ಮುಂದೊಂದು ದಿನ ತಾನು ಪ್ರತಿಪಾದಿಸುತ್ತಿರುವ “ರಾಷ್ಟ್ರೀಯತೆ(?)” ಅನ್ನುವ ಪದವನ್ನು ಹಿಡಿದು ಪಕ್ಷವೊಂದು ಉದಯಿಸಬಹುದು ಮತ್ತು ಅದಕ್ಕೊಬ್ಬ ಮೇಧಾವಿ ಅಧ್ಯಕ್ಷ ಬಂದು ಅವನು “ಸ್ವಾಮಿ ವಿವೇಕಾನಂದರ ಬುದ್ದಿಮತ್ತೆಯನ್ನು ಮುಂಬೈನ ಕಪ್ಪು ಜಗತ್ತಿನ ಕಳ್ಳನಾಗಿದ್ದವನ ಬುದ್ದಿ ಮತ್ತೆಗೆ ಸರಿಸಮ” ಅಂತೇಳಬಹುದು ಅನ್ನುವುದನ್ನು ಮಾತ್ರ ಊಹಿಸಿರಲಿಕ್ಕಿಲ್ಲ…!

ಮತ್ತಷ್ಟು ಓದು »

20
ಆಕ್ಟೋ

ಬಿಜೆಪಿಯ ಅಪಸ್ವರಕ್ಕೆ ‘ಆರ್.ಎಸ್.ಎಸ್’ನದ್ದೇ ಟ್ಯೂನ್

– ರಾಕೇಶ್ ಶೆಟ್ಟಿ

ಅಂದು ಪಾಕಿಸ್ತಾನದ ನೆಲದಲ್ಲಿ ನಿಂತು “ಜಿನ್ನಾ ಜಾತ್ಯಾತೀತರಾಗಿದ್ದರು” ಅನ್ನುವ ಸತ್ಯ ಹೇಳಿದ್ದೆ ಆ ಹಿರಿಯ ಮಾಡಿದ ದೊಡ್ಡ ತಪ್ಪು(!).ಆ ಒಂದು ಮಾತು ಅವರು ಅಲ್ಲಿವರೆಗೂ ದೇಶದ ಮೂಲೆ ಮೂಲೆಗೆ ಹೋಗಿ ಅವರು ಪಕ್ಷಕಟ್ಟಲು ಪಟ್ಟ ಶ್ರಮ,೨ ಸೀಟಿನಿಂದ ಅಧಿಕಾರದ ಚುಕ್ಕಾಣಿ ಹಿಡಿಯುವವರೆಗೂ ಪಕ್ಷ ಸಾಗಿ ಬಂದ ಹಾದಿಯಲ್ಲಿ ಅವರು ವಹಿಸಿದ ಜವಬ್ದಾರಿ ಎಲ್ಲವನ್ನು ಮರೆಸಿಹಾಕಿತ್ತು.ಧುತ್ತನೆ ಅವರ ಮಾತೃ ಸಂಘಟನೆಗೆ ಈ ಹಿರಿಯ ನಾಯಕ ಮತ್ತು ಮುಂದಿನ ಲೋಕಸಭೆ ಚುನಾವಣೆಯ ಪ್ರಧಾನಿ ಅಭ್ಯರ್ಥಿಯಾಗಿದ್ದವರಿಗೆ ವಯಸ್ಸಾಯಿತು ಅನ್ನುವ ಜ್ನಾನೋದಯ ಅರ್ಧ ರಾತಿಯಲ್ಲಿ ಆಗಿಬಿಟ್ಟಿತ್ತಲ್ಲ,ಅಷ್ಟೇ ಸಾಕಿತ್ತು ಅವಮಾನಕಾರಿಯಾಗಿ ಅವರನ್ನು ಪಕ್ಕಕ್ಕೆ  ತಳ್ಳಿ,ಅಲ್ಲಿಯವರೆಗೂ ಮಹಾರಾಷ್ಟ್ರ ಬಿಟ್ಟು ಹೊರಗೆ ಹೆಸರೇ ಕೇಳಿರದ ‘ಯುವ ನಾಯಕ(?)’ ನನ್ನು ಪಕ್ಷದ ರಾಷ್ಟ್ರಾಧ್ಯಕ್ಷ ಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು.

ಇವತ್ತಿಗೆ ‘ಆ ಹಿರಿಯ’ರನ್ನು ಮರೆತು ಮುಂದೆ ಹೋದ ಆ ಪಕ್ಷದ ಪಾಡು, ಅಹಂಕಾರದಿಂದ ಕೃಷ್ಣ ಪರಮಾತ್ಮನನ್ನು ಬಿಟ್ಟು ಬಿಲ್ವಿದ್ಯೆ ಮರೆತು ನಿಂತ ‘ಅರ್ಜುನ’ನಂತೆಯೇ ಆಗಿದೆ.ಕೂದಲು ಬೆಳೆಯೋ ಜಾಗವೆಲ್ಲ ತಲೆ ಅಂದುಕೊಂಡವರಂತೆ ಆ ಪಕ್ಷದಲ್ಲಿರುವ ಜನರೆಲ್ಲಾ ತಾವೇ ‘ಪ್ರಧಾನಿ ಅಭ್ಯರ್ಥಿ’ಗಳು ಅಂದುಕೊಂಡಿದ್ದಾರೆ.ಅಂದ ಹಾಗೆ,ಆ ಹಿರಿಯರ ಹೆಸರು ಲಾಲ್ ಕೃಷ್ಣ ಅಡ್ವಾಣಿ,ಪಕ್ಷ ಬಿಜೆಪಿ,ಮಾತೃ ಸಂಘಟನೆಯ ಹೆಸರು ‘ಆರ್.ಎಸ್.ಎಸ್’ ಮತ್ತೆ ಆ ಯುವನಾಯಕ(?) ಮೊನ್ನೆ ಮೊನ್ನೆ ತಾನೇ ಎಕರೆಗಟ್ಟಲೆ ರೈತರ ಜಮೀನು ಸ್ವಾಹ ಮಾಡಿದ್ದಾರೆ ಅನ್ನುವ ಆರೋಪ ಹೊತ್ತ ನಿತಿನ್ ಗಡ್ಕರಿ.

ಮತ್ತಷ್ಟು ಓದು »