ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
– ರಾಮಚಂದ್ರ ಹೆಗಡೆ
ಈ ದಿನದ ಸ್ಮರಣೆ: ಕಾರ್ನಾಡ್ ಸದಾಶಿವ ರಾವ್
ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ‘ಸದಾಶಿವ ನಗರ’ ಎಂಬುದು ಎಲ್ಲರಿಗೂ ತಿಳಿದದ್ದೇ. ಆದರೆ ಅದ್ಯಾರು ಸದಾಶಿವ ಎಂಬುದು ಬಹುತೇಕರಿಗೆ ತಿಳಿಯದು. ಆ ಸದಾಶಿವರೇ ಅಪ್ರತಿಮ ದೇಶಭಕ್ತ ದಕ್ಷಿಣ ಕನ್ನಡದ ಗಾಂಧಿ ಎಂದೇ ಸುಪ್ರಸಿದ್ಧರಾದ ಶ್ರೀ ಕಾರ್ನಾಡ್ ಸದಾಶಿವರಾವ್. ಇವರು ಮಂಗಳೂರನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡವರು. ಸದಾಶಿವರಾಯರ ಮನೆ ಸ್ವಾತಂತ್ರ್ಯ ಸಂಗ್ರಾಮದ ತವರು ಮನೆಯಾಗಿತ್ತು. ಮಹಾತ್ಮಾ ಗಾಂಧಿ, ಚಿತ್ತರಂಜನ ದಾಸ, ರಾಜಗೋಪಾಲಾಚಾರಿ ಹಾಗೂ ಸರೋಜಿನಿ ನಾಯ್ಡುರವರಿಗೆ ವಸತಿಗೃಹವಾಗಿತ್ತು. ದೇಶದಲ್ಲಿ ಉಪ್ಪಿನ ಸತ್ಯಾಗ್ರಹ ಪ್ರಾರಂಭವಾದಾಗ ಕಾರ್ನಾಡು ಸದಾಶಿವರಾಯರು ಅಂಕೋಲೆಗೆ ಹೋಗಿ ಅಲ್ಲಿನ ಜನತೆಗೆ ಮಾರ್ಗದರ್ಶನ ನೀಡಿ ಅಲ್ಲಿ ನಾಲ್ಕು ದಿನಗಳಿದ್ದರು. ಮತ್ತಷ್ಟು ಓದು 




