ಬಾಜಿರಾಯನ ಉತ್ತರದ ದಂಡಯಾತ್ರೆ
-ರಂಜನ್ ಕೇಶವ
ಬಾಜಿರಾಯನ ಅಶ್ವದಳ ತಲ್ಕತೋರಾ ಎಂಬಲ್ಲಿ ಕೆಂಪುಕೋಟೆ ತೋರುವಲ್ಲೇ ಡೇರೆ ಹಾಕಿತ್ತು. ಮರಾಠರ ಖಡ್ಗಗಳನ್ನು ಹೊತ್ತ ಈ ಅಶ್ವಬಲ ದಿನಕ್ಕೆ ನಲವತ್ತು ಕಿಲೋಮೀಟರ್ ವೇಗದಲ್ಲಿ ಒಂದೇ ಸಮನೇ ಯಾವ ಮುನ್ಸೂಚನೆಯಿಲ್ಲದೇ ಒಂದೇ ರಭಸಕ್ಕೆ ದೆಹಲಿಯ ಸರಹದ್ದನ್ನು ತಲುಪಿತ್ತು. ಇದರ ಸುದ್ದಿ ಹಬ್ಬಿದಂತೆ ಮೊಘಲ್ ಸಿಂಹಾಸನ ಗಡ ಗಡ ನಡುಗಿ ಅಲ್ಲಿಂದ ಕಾಲ್ಕೀಳಲು ದೋಣಿಗಳನ್ನು ಸಿದ್ಧಪಡಿಸಿದರು. ಅದರಲ್ಲೂ ಬಾಜಿರಾಯನ ಸೋಲಿಲ್ಲದ ಜಯಭೇರಿ ಭಾರತದುದ್ದಗಲಕ್ಕೂ ಹಬ್ಬಿತ್ತು. ಅವನ ಪರಾಕ್ರಮವನ್ನೆದುರಿಸುವ ಧೈರ್ಯ ಇವರಿಗೆಲ್ಲಿಂದ ಬರಬೇಕು ಪಾಪ. ಸಾವಿರ ವರ್ಷದ ಹಿಂದೆ ಇಮ್ಮಡಿ ಪುಲಕೇಶಿ ದಕ್ಷಿಣದಿಂದ ಉತ್ತರಕ್ಕೆ ಜಯಭೇರಿ ಬಾರಿಸಿದ್ದ. ಅದರ ನಂತರ ಈಗ ಬಾಜಿರಾಯ ಎರಡನೆಯ ಬಾರಿ ಉತ್ತರ ಭಾರತವನ್ನು ರಕ್ಷಿಸಲು ಕುದುರೆಯೇರಿ ಬಂದಿದ್ದ. ಮತ್ತಷ್ಟು ಓದು 
ಬೇಕಾಗಿರುವುದು ರಾಜಕೀಯ ಅಸ್ತಿತ್ವವೇ ವಿನಃ ಕೇವಲ ಭ್ರಷ್ಟಚಾರ ನಿಗ್ರಹವಲ್ಲ
– ನವೀನ್ ನಾಯಕ್
ಅಣ್ಣಾ ನೇತೃತ್ವದ ಜನಲೋಕಪಾಲ ಹೋರಾಟದಿಂದ ಪ್ರಸಿದ್ದರಾದ ಅರವಿಂದ್ ಕೇಜ್ರಿವಾಲ್ ದೆಹಲಿ ಗದ್ದುಗೆಗೇರಿ ಬದಲಾವಣೆಯ ಪರ್ವ ತರಲು ಹೊರಟಿದ್ದಾರೆ. ಸರಕಾರ ರಚಿಸಲು ಜನರ ಅಭಿಪ್ರಾಯ ಸಂಗ್ರಹಿಸಿದ ಕಾರಣಕ್ಕೆ ಹಗಲು ರಾತ್ರಿ ಮಾಧ್ಯಮಗಳು ತಲೆದೂಗಿದ್ದೇ ತೂಗಿದ್ದು. ಎಲ್ಲಾ ಮಾಧ್ಯಮಗಳಲ್ಲಿ ಒಂದೇ ಕೂಗು. ಇದೇ ನೈಜ ಪ್ರಜಾಪ್ರಭುತ್ವ!. ಈ ಮಾಧ್ಯಮಗಳ ಕಣ್ಣಿಗೆ ಮೂರು ರಾಜ್ಯಗಳಲ್ಲಿ ಭರ್ಜರಿ ಜಯಗಳಿಸಿದ ಮತ್ತು ದೆಹಲಿಯಲ್ಲಿ ಮೊದಲ ಸ್ಥಾನ ಪಡೆದ ಬಿಜೆಪಿ ನೈಜ ಪ್ರಜಾಪ್ರಭುತ್ವದಲ್ಲಿ ಗೆದ್ದಿದ್ದಲ್ಲ ! ಪಕ್ಷ ಕಟ್ಟಿ ಒಂದು ವರ್ಷದಲ್ಲೇ ಎರಡನೆಯ ಸ್ಥಾನಕ್ಕೆ ಬರುವುದು ಅಚ್ಚರಿಯೇ, ಅವರ ಪ್ರಯತ್ನಕ್ಕೆ ನಾವು ಶಹಭಾಸ್ ಹೇಳಲೇ ಬೇಕು. ದೇಶದ ಭವಿಷ್ಯಕ್ಕೆ ಉತ್ತಮ ಆಡಳಿತ ನೀಡಲು ಆಪ್ ಪಕ್ಷವೇ ಮುಂಚೂಣಿಗೆ ಬರಬೇಕೆಂಬ ನಿರ್ಧಾರವನ್ನು ಕೇಜ್ರಿವಾಲ್ ಯಶಸ್ವಿಯಾಗಿ ಯುವಕರ ಮನಸ್ಸಲ್ಲಿ ತುಂಬಿದ್ದರು. ರಾಜಕೀಯ ಮಾಡುವುದು ಹೇಗೆ ಅಂತ ನಾವು ಕಲಿಸುತ್ತೇವೆ, ನಮಗೆ ಕೆಂಪು ಗೂಟದ ಕಾರು ಬೇಕಿಲ್ಲ, ನಮಗೆ ಭದ್ರತೆ ಬೇಕಿಲ್ಲ, ಸರಕಾರಿ ಭವ್ಯ ಮನೆಯೂ ಬೇಕಿಲ್ಲ ಹೀಗೆ ಒಂದರ ಮೇಲೊಂದಂತೆ ಘೋಷಿಸತೊಡಗಿದರು. ಯುವಕರ ಉತ್ಸಾಹ ಇಮ್ಮಡಿಯಾಗಿತ್ತು. ತಮ್ಮ ನಾಯಕನಿಗೆ ಈ ಜಗದಲ್ಲಿ ಬೇರಾರು ಸರಿಸಾಟಿ ಇಲ್ಲವೆಂಬತೆ ವರ್ತಿಸತೊಡಗಿದರು. ಅಣ್ಣಾ ಹಜಾರೆಯವರು ಯಾವಾಗ ತನ್ನ ಹೆಸರನ್ನು ರಾಜಕೀಯಕ್ಕೆ ದುರುಪಯೋಗ ಪಡಿಸಿಕೊಳ್ಳಬೇಡಿ ಎಂದರೋ ಕೇಜ್ರಿವಾಲ್ ಅಭಿಮಾನಿಗಳು ಬುಸುಗುಡತೊಡಗಿದರು. ಸಾಲದೇ ಐಎಸಿ ಚಳುವಳಿಯ ಹಣದ ಲೆಕ್ಕ ಕೇಳಿದರೋ ಎಲ್ಲ ಅಭಿಮಾನಿಗಳು ಸಿಡಿದೆದ್ದರು. ಅಣ್ಣಾ ಮುದುಕರಾಗಿದ್ದಾರೆ ಹುಚ್ಚರಂತೆ ವರ್ತಿಸುತಿದ್ದಾರೆ ಎಂಬ ಕ್ಷುಲ್ಲಕ ಮಾತುಗಳನ್ನು ಸಾಮಾಜಿಕ ತಾಣದ ತುಂಬ ಪಸರಿಸತೊಡಗಿದರು. ಯಾರ ಏಳಿಗೆಗೆ ಯಾರು ಕಾರಣರಾಗಿದ್ದರೋ ಅವರು ಮದುಕರಾಗಿದ್ದರು ಹುಚ್ಚರಾಗಿದ್ದರು.
ಸೆಮಿಫೈನಲ್ ಮತ್ತು ಫೈನಲ್
-ನವೀನ್ ನಾಯಕ್
ಭಾರತದ ಸೆಮಿಫೈನಲ್ ಎಂದೇ ಬಿಂಬಿತವಾಗಿದ್ದ ಪಂಚರಾಜ್ಯಗಳ ಚುನಾವಣೆ ಹಲವು ಹೊಸ ವಿಚಾರಗಳನ್ನು ತೆರೆದಿಟ್ಟಿದೆ.
1) ನೋಟ ( none of the above ) ಬಳಸಲು ಮೊದಲು ಶುರು ಮಾಡಿದ್ದು.
2) ಜನಲೋಕಪಾಲ್ ಹೋರಾಟದಿಂದ ಬಂದ ರಾಜಕೀಯ ಪಕ್ಷ ಆಪ್
3) ಇನ್ನಾರು ತಿಂಗಳಲ್ಲಿ ಲೋಕಸಭೆ ಚುನಾವಣೆ ಇರುವುದರಿಂದ ಎಲ್ಲಾ ರಾಜಕೀಯ ಪಕ್ಷಗಳಿಗೆ ಪೂರ್ವ ತಯಾರಿಗೆ ಜನರ ನಾಡಿ ಮಿಡಿತ ತಿಳಿಯಲು ಸಿಕ್ಕ ಒಂದು ಅವಕಾಶ.
4) ಮೋದಿ ಮತ್ತು ಕಾಂಗ್ರೆಸ್ ಹಣಾಹಣಿ.
ಇಡೀ ದೇಶದ ಪ್ರಜೆಗಳನ್ನು ಡಿಸೆಂಬರ್ 8 ಕ್ಕೆ ಗಮನೀಯವಾಗುವಂತೆ ಮಾಡಿದ್ದು ಈ ನಾಲ್ಕು ಕಾರಣಗಳಿಗಾಗಿ. ಪ್ರಸಕ್ತ ರಾಜಕಾರಣದ ವೈಫಲ್ಯದಿಂದಾಗಿ ಹೈರಾಣಾಗಿರುವ ಜನರು ರಾಜಕೀಯಕ್ಕೆ ಯಾವ ಪಾಠ ಕಲಿಸಬಹುದೆಂದು ಎಲ್ಲರೂ ತಿಳಿಯಲು ಬಯಸುತಿದ್ದರು. ಮತದಾರ ಪ್ರಭು ಇಲ್ಲಿ ಯಾವ ಅಂಶ ಮುಖ್ಯವಾಗಿ ಗಣನೆಗೆ ತೆಗೆದುಕೊಳ್ಳಬಹುದು, ಆತನ ಸಧ್ಯದ ಮನಸ್ಥಿತಿ ಏನು. ಇದು ಆಯಾ ರಾಜ್ಯಕ್ಕೆ ಸಂಬಂದಪಟ್ಟರೂ ದೇಶಕ್ಕೆ ಖಂಡಿತಾ ಮೇಲಿನ ನಾಲ್ಕು ಕಾರಣಗಳಿಗಾಗಿ ಮಾರ್ಗದರ್ಶಿಯಾಗಿದೆ.
1) ನೋಟ- ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕನ್ನು ಸುಪ್ರೀಂ ತೀರ್ಪಿನ ಅನ್ವಯ ವೋಟಿಂಗ್ ಮೆಷೀನಲ್ಲಿ ಬಳಸಲಾಯಿತು. ಇದೊಂದು ಕ್ರಾಂತಿಕಾರಕ ಬದಲಾವಣೆಯಾದರೂ ಅಭ್ಯರ್ಥಿಗಳ ಮೇಲೆ ಇದರ ಪ್ರಭಾವ ಬೀರದಂತಿದೆ. ಚುನಾವಣ ಆಯೋಗ ಇದನ್ನು ಬೆಲೆ ಇಲ್ಲದ ಮತಗಳು ಎಂದು ಪರಿಗಣಿಸಿವೆ. ಏಕೆಂದರೆ ನೋಟದ ಬಗ್ಗೆ ಇನ್ನೂ ಸ್ಪಷ್ಟ ತೀರ್ಮಾನಗಳನ್ನು ಆಯೋಗ ಕಂಡುಕೊಂಡಿಲ್ಲ. ಅದೇನೆ ಇರಲಿ, ಇದರಿಂದ ನಿಂತಿರುವವರೆಲ್ಲ ಕಳ್ಳರೇ ನಂಗೆ ಯಾರೂ ಇಷ್ಟವಿಲ್ಲದ ಕಾರಣ ಮತದಾನ ಮಾಡುತ್ತಿಲ್ಲ ಎಂದು ನೆಪವೊಡ್ಡಿ ನಿರ್ಲಕ್ಷ್ಯವಹಿಸುತಿದ್ದ ಸುಶಿಕ್ಷಿತರ ಪ್ರತಿಕ್ರಿಯೆ ತಿಳಿಯಬಹುದಿತ್ತು. ನಾಲ್ಕು ರಾಜ್ಯದಲ್ಲಿ 11.53 ಕೋಟಿ ಮತ ಚಲಾವಣೆಯಾಗಿದೆ ಅದರಲ್ಲಿ 1.31 ಶೇಕಡಾ ಮತದಾರರು ಈ ವ್ಯವಸ್ತೆಯನ್ನು ಬಳಸಿದ್ದಾರೆ.
ಎಎಪಿ ಗೆಲುವಿನ ಗುಂಗಿನಲ್ಲಿ ‘ಪೊರಕೆ’ ಹಿಡಿಯಲು ಹೊರಟವರು
– ರಾಕೇಶ್ ಶೆಟ್ಟಿ
ಮಿನಿ ಲೋಕಸಭಾ ಚುನಾವಣೆ ಎಂದೇ ಪರಿಗಣಿತವಾಗಿದ್ದ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಸಮೀಕ್ಷೆಯಂತೆಯೇ ೪ ರಾಜ್ಯಗಳಲ್ಲಿ ಬಿಜೆಪಿ ಮತ್ತು ೧ ರಾಜ್ಯದಲ್ಲಿ ಕಾಂಗ್ರೆಸ್ಸ್ ತನ್ನ ಮುದ್ರೆಯೊತ್ತಿದೆ.ಆದರೆ,ಆಮ್ ಆದ್ಮಿ ಪಕ್ಷಕ್ಕೆ ೨೮ ಸ್ಥಾನಗಳನ್ನು ನೀಡುವ ಮೂಲಕ ಅಚ್ಚರಿಯ ಫಲಿತಾಂಶ ನೀಡಿದ್ದು ದೆಹಲಿಯ ಮತದಾರರು.
ಎಲ್ಲಾ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಎಎಪಿ ಪಕ್ಷ ೧೦-೧೫ ಸೀಟು ಪಡೆಯಬಹುದು ಮತ್ತು ಆ ಮೂಲಕ ಸರ್ಕಾರ ರಚಿಸುವಲ್ಲಿ ನಿರ್ಣಾಯಕ ಪಾತ್ರವಹಿಸಬಹುದು ಅನ್ನುವ ಅಭಿಪ್ರಾಯಗಳೇ ಬಂದಿತ್ತು.ಆದರೆ ಮತದಾರಪ್ರಭು ಕೇಜ್ರಿವಾಲ್ ನೇತೃತ್ವದ ಎಎಪಿ ಪಕ್ಷದೆಡೆಗೆ ಹೆಚ್ಚು ಉದಾರಿಯಾಗಿದ್ದಾನೆ.’ರಾಜಕಾರಣಿಗಳೆಲ್ಲ ಭ್ರಷ್ಟರು’ ಅನ್ನುತಿದ್ದ ಕೇಜ್ರಿವಾಲ್ ತಾವೇ ಒಂದು ರಾಜಕೀಯ ಪಕ್ಷ ಸ್ಥಾಪಿಸುತ್ತೇವೆ ಅಂತ ಹೊರಟು ನಿಂತು ಪ್ರಸಕ್ತ ರಾಜಕೀಯ ಪಕ್ಷಗಳಿಗಿಂತ ವಿಭಿನ್ನವಾಗಿ ಅದನ್ನು ಕಟ್ಟಿಕೊಳ್ಳುತ್ತ ಹೊರಟಾಗ ಯಾವ ರಾಜಕಾರಣಿಗಳು ಅದನ್ನು ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ. ದೆಹಲಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸ್ ನಡುವೆ ನೇರಾನೇರ ಹಣಾಹಣಿ ನಡೆಯಲಿದೆ ಅನ್ನುವಷ್ಟು ನಿರ್ಲಕ್ಷ್ಯದಲ್ಲಿದ್ದ ಶೀಲಾ ದಿಕ್ಷೀತ್ ಕೂಡ,ಕೇಜ್ರಿವಾಲ್ ಮುಂದೆ ಸೋತು ಸುಣ್ಣವಾಗಿದ್ದಾರೆ.





