ಕಡಲು ನಿನ್ನದೇ ಹಡಗು ನಿನ್ನದೇ ಮುಳುಗದಿರಲಿ ಬದುಕು -೨
– ಮು ಅ ಶ್ರೀರಂಗ ಬೆಂಗಳೂರು
(ನಿಲುಮೆಯಲ್ಲಿ ೫-೧೨-೨೦೧೩ರಂದು ಪ್ರಕಟವಾದ ‘ದೀಪವೂ ನಿನ್ನದೇ ಗಾಳಿಯೂ ನಿನ್ನದೇ ಆರದಿರಲಿ ಬೆಳಕೂ’.……… . ನೆನಪುಗಳ ಮುಂದುವರೆದ ಭಾಗ)
ಪಿ ಯು ಸಿ ಯಲ್ಲಿ ನನಗೆ ಕೆಮಿಸ್ಟ್ರಿ ಮತ್ತು ಬಯಾಲಜಿ ವಿಷಯಗಳು ಕಷ್ಟವಾಗಿತ್ತು. ಅದರಿಂದ ಬಿಎಸ್ಸಿಯಲ್ಲಿ ಅದನ್ನು ಬಿಟ್ಟು ಫಿಸಿಕ್ಸ್ ಮ್ಯಾಥಮೆಟಿಕ್ಸ್ ಮತ್ತು ಸ್ಟ್ಯಾಟಿಸ್ಟಿಕ್ಸ್ ವಿಷಯಗಳನ್ನು ತೆಗೆದುಕೊಂಡಿದ್ದೆ. ಮೂರು ವರ್ಷಗಳು ಬಿಎಸ್ಸಿಯಲ್ಲಿ ಸ್ಟ್ಯಾಟಿಸ್ಟಿಕ್ಸ್ ಅನ್ನು ಓದಿದ್ದರಿಂದ ಆ ವಿಷಯದಲ್ಲೇ ಎಂಎಸ್ಸಿ ಮಾಡಲು ನಿರ್ಧರಿಸಿದೆ. ಕೋರ್ಸಿಗೆ ಸೇರಿದ್ದಾಯ್ತು. ಆದರೆ ತರಗತಿಯ ಪಾಠಗಳು ಅರ್ಥವಾಗುತ್ತಿರಲಿಲ್ಲ. ಹೀಗಾಗಿ ಮೂರ್ನಾಲಕ್ಕು ತಿಂಗಳ ನಂತರ ಓದನ್ನು ಬಿಟ್ಟು ಊರಿಗೆ ವಾಪಸ್ಸು ಬಂದುಬಿಟ್ಟೆ. ನಮ್ಮ ತಂದೆ ಸ್ಕೂಲಿನ ವೇಳೆ ಮುಗಿದ ನಂತರ ಹತ್ತು ಹದಿನೈದು ಹುಡುಗರಿಗೆ ಮನೆ ಪಾಠ ಮಾಡುತ್ತಿದ್ದರು. ಆಗ ತಿಂಗಳಿಗೆ ಒಬ್ಬ ಹುಡುಗನಿಗೆ ಹತ್ತು ರೂಪಾಯಿ ಫೀಸು. ಅದನ್ನು ಆ ಹುಡುಗರು ಕೊಡಲು ನಿಗದಿತ ದಿನಾಂಕ ಎಂಬುದೇನಿಲ್ಲ. ತಿಂಗಳ ಮೊದಲನೇ ತಾರೀಖಿನಿಂದ ಕೊನೆಯ ದಿನದ ತನಕ ಯಾವಾಗ ಅವರಿಗೆ ಅನುಕೂಲವೋ ಆಗ ಕೊಡುತ್ತಿದ್ದರು. ಜತೆಗೆ ಆ ಸಲ ಹಾಸ್ಟೆಲ್ ನಲ್ಲಿ ಬದಲಾದ ನಿಯಮಗಳಿಂದ ನನಗೆ ಶುಲ್ಕದಲ್ಲಿ ಅರ್ಧ ಮಾಫಿ ಸಿಗಲಿಲ್ಲ. ಎಷ್ಟೇ ಕಷ್ಟವಾದರೂ ನನ್ನ ಮೇಲೆ ಭರವಸೆಯಿಟ್ಟಿದ್ದ ನನ್ನ ಅಪ್ಪನ ಹಣವನ್ನು ಸುಖಾಸುಮ್ಮನೆ ಖರ್ಚು ಮಾಡಿಕೊಂಡು ಬೆಂಗಳೂರಿನಲ್ಲಿರುವುದು ನನಗೆ ಇಷ್ಟವಾಗಲಿಲ್ಲ. ಬಹುಶಃ ನನ್ನ ಬುದ್ಧಿ ಶಕ್ತಿ ಪದವಿ ಮಟ್ಟದ್ದಷ್ಟೇ ಆಗಿರಬೇಕು. ಇದನ್ನೆಲ್ಲಾ ಯೋಚಿಸಿ ನನ್ನ ಅಪ್ಪನಿಗೆ ಒಂದು ಕಾಗದ ಬರೆದೆ. ಅದರಲ್ಲಿ ನನ್ನ ತಳಮಳ, ದುಃಖವನ್ನೆಲ್ಲಾ ವಿವರವಾಗಿ ತಿಳಿಸಿದೆ . ಅದು ತಲುಪಿದ ಮಾರನೇ ದಿನ ಮಧ್ಯಾನ್ಹದ ವೇಳೆಗೆ ನನ್ನ ಅಪ್ಪ ಬಂದರು. ನಮ್ಮ ಹಾಸ್ಟೆಲ್ ಹತ್ತಿರದಲ್ಲಿ ಒಂದು ಪಾರ್ಕಿತ್ತು. ಅಲ್ಲಿಗೆ ಹೋಗಿ ಕಲ್ಲು ಬೆಂಚೊಂದರ ಮೇಲೆ ಇಬ್ಬರೂ ಕುಳಿತೆವು. ತಮ್ಮ ಷರ್ಟಿನ ಜೇಬಿನಿಂದ ನಾನು ಬರೆದ ಪತ್ರವನ್ನು ತೆಗೆದುಕೊಂಡು ಮತ್ತೊಮ್ಮೆ ಓದಿಕೊಂಡು “ನಿನ್ನ ಇಷ್ಟ”ಎಂದು ಹೇಳಿ ಎದ್ದರು. ಹಾಸ್ಟೆಲ್ಲಿಗೆ ವಾಪಸ್ಸು ಬಂದು ಲೆಕ್ಕ ಚುಕ್ತಾ ಮಾಡಿ ನನ್ನ ಗಂಟು ಮೂಟೆಯೊಂದಿಗೆ ಊರಿಗೆ ವಾಪಸ್ಸು ಬಂದೆವು.
ನನ್ನ ಇಂಜಿನಿಯರಿಂಗ್ ಬದುಕಿನ ಕಡೆಯ 22 ಘಂಟೆಗಳು…!!!
– ಪವನ್ ಪಾರುಪತ್ತೇದಾರ್
ಅಂದು ದಿನಾಂಕ ಜೂನ್ 16 2011 ಮಧ್ಯಾಹ್ನ 2 ಘಂಟೆ ಆಗಿತ್ತು ಇಂಜಿನಿಯರಿಂಗ್ ಬದುಕಿನ ಕಟ್ಟ ಕಡೆಯ ಪರೀಕ್ಷೆಗೆ ಕೇವಲ 22 ಘಂಟೆ ಮಾತ್ರ ಉಳಿದಿತ್ತು, ೪ ವರ್ಷಗಳ ಕಠಿಣ ಪರಿಶ್ರಮದ ನಂತರ ಕೊನೆಯ ಸೆಮಿಸ್ಟರ್ ನ ಪ್ರಾಜೆಕ್ಟ್ ವರ್ಕ್ ನಮ್ಮ ಭವಿಷ್ಯವನ್ನು ನಿರ್ಧಾರ ಮಾಡುವುದು. ಅದನ್ನು ಬಹಳ ಕಷ್ಟ ಪಟ್ಟು ಜಯನಗರದಲ್ಲಿನ ಒಂದು consultacy ಅಲ್ಲಿ ಮಾಡಿದ್ದೆವು. ಸಮಾಜದಲ್ಲಿ ಮತದಾನ ಮಾಡುವುದರಲ್ಲಿ ಆಗುವ ಲೋಪದೋಷಗಳನ್ನು ಸರಿಪಡಿಸಲೆಂದು ನಾವು finger print recognisation sensor ಉಪಯೋಗಿಸಿ ಒಂದು ಮಾಡೆಲ್ ರೆಡಿ ಮಾಡಿದ್ದೆವು.ನಾನು ಸಂದೀಪ್ ರಘು ಮತ್ತು ಮಂಜು ಸೇರಿ ಈ ಮಾಡೆಲ್ ಮಾಡಿದ್ದೆವು.
ಮಧ್ಯಾಹ್ನ ಅಮ್ಮ ಮಾಡಿದ ರಾಗಿಮುದ್ದೆ ಮತ್ತು ಸೊಪ್ಪು ಹುಳಿ ಸವಿಯುತ್ತ ಇದ್ದ ನನಗೆ ಮೊಬೈಲ್ ರಿಂಗಣಿಸಿದ್ದು ತಿಳಿಯಲೇ ಇಲ್ಲ, ಕಡೆಗೆ ಅಮ್ಮ ಪವನ್ ಆಗ್ಲಿಂದ ಮೊಬೈಲ್ ಬಡ್ಕೊತಿದೆ ನೋಡೋ ಅಂದಾಗ ರಾಗಿಮುದ್ದೆಯ ಕಡೆಯ ತುಂಡು ನನ್ನ ಬಾಯಲಿತ್ತು. ಹಾ ನೋಡ್ತಿನಮ್ಮ ಎಂದು ಮೊಬೈಲ್ ಬಳಿಗೆ ಹೋಗುವಷ್ಟರಲ್ಲಿ ಕಾಲ್ ಮತ್ತೆ ಕಟ್ ಆಗಿತ್ತು. ಮೊಬೈಲ್ ನ ದಿಸ್ಪ್ಳಿ, 5 missed calls ಎಂದು ತೋರಿಸುತಿತ್ತು. ನೋಡಿದರೆ 4 ಮಿಸ್ ಕಾಲ್ ಸಂದೀಪ್ ಮತ್ತು ಒಂದು ಮಂಜುದು ಆಗಿತ್ತು.ನಾನು ಸಂದೀಪ್ ಗೆ ಕರೆ ಮಾಡಿದೆ, ಸಂದೀಪ್ ಒಂಥರಾ ಗಾಬರಿ ಹುಡುಗ, ನೋಡಲು ಸದೃಢ ಮತ್ತು ಇರೋದು ಶಿವಾಜಿನಗರದಂತ ಸುಂದರ ಏರಿಯದಲ್ಲಿ.ಮನೆಯಲ್ಲಿ ತೆಲುಗು ಭಾಷೆ ಮಾತನಾಡುವರಾದರು ಶಿವಾಜಿನಗರ ಅವನನ್ನು ಅರ್ಧ ತಮಿಳಿಗನಾಗಿ ಮಾಡಿದೆ ಮತ್ತು ಅಲ್ಲಿನ ವಾತಾವರಣ ಅವನನ್ನು ಶಾರ್ಟ್ temperd ಮಾಡಿದೆ. ಸಂದೀಪ್ ಕರೆ recieve ಮಾಡುತ್ತಲೇ ಮಚ್ಚ…… ಅಂತ ಅರಚಿದ, ನಾನು ಏನೋ, ಏನಾಯ್ತೋ, ರಿಪೋರ್ಟ್ ಚೆನ್ನಾಗಿ ಓದಿ ರೆಡಿ ಆಗಿ ಬಾ ನಾಳೆ ಸೆಮಿನಾರ್ ಗೆ ಅಂದೆ. ಅದಕ್ಕವನು ಮಾಡೆಲ್ ಇಲ್ಲಿ ಎಕ್ಕುಟ್ಟಿ ಹೋಗಿದೆ ಇನ್ನು ಸೆಮಿನಾರ್ ಎಲ್ಲಿಂದ ಕೊಡೋದೋ ಅಂದ. ಅ ಮಾತು ಕೇಳಿದ ಒಡನೆ ಇನ್ನೊಂದು ರಾಗಿಮುದ್ದೆ ತಿನ್ನಬೇಕೆನಿಸಿದ್ದ ನನ್ನ ಅಸೆ ಹಾಗೆ ಕರಗಿ ಹೋಯ್ತು 2 ಲೋಟ ನೀರು ಗಟಗಟ ಕುಡಿದು ನಂತರ ಮಾತಿಗಿಳಿದೆ.
ನೈಂಟಿ ಜತೆಗಿನ ನಂಟು!!!
– ರಶ್ಮಿ.ಕಾಸರಗೋಡು
ನೈಂಟಿ! ಅದೊಂದು ಥರಾ ಕಿಕ್ ಕೊಡುವಂತದ್ದೇ. ಅರೇ..ನೀವು ಉದ್ದೇಶಿಸುತ್ತಿರುವ ‘ಬಾಟಲಿ’ ಬಗ್ಗೆ ನಾನು ಹೇಳುತ್ತಿಲ್ಲ. ನಾನು ಹೇಳೋಕೆ ಹೊರಟಿರುವುದು 90ರ ದಶಕದ ಟಿವಿ ಕಾರ್ಯಕ್ರಮಗಳ ಬಗ್ಗೆ. ದೂರದರ್ಶನ ಅದೊಂದೇ ಚಾನೆಲ್ ಸಾಕು…ಎಲ್ಲ ತಿಳಿಯೋಕೆ, ಕಲಿಯೋಕೆ. ಹಿಂದಿ ಅರ್ಥವಾಗುತ್ತಿಲ್ಲವಾದರೂ ಟಿವಿ ಮುಂದೆ ನಾವು ಹಾಜರು. ಆವಾಗನಮ್ಮ ಮನೆಯಲ್ಲಿ ಟಿವಿ ಇರಲಿಲ್ಲ, ಆದರೂ ಒಂದು ಕಿಮೀ ನಡೆದು ಪಕ್ಕದ ಮನೆಗೆ ಟಿವಿ ನೋಡಲು ಹೋಗುತ್ತಿದ್ದೆ. ಅದೂ ಮಹಾಭಾರತ ನೋಡಲು. ಮಹಾ….ಭಾರತ್ ಅಂತ ಅದರ ಹಾಡು ಶುರುವಾಗುವ ಹೊತ್ತಿಗೆ ನಾವು ಮೂವರು (ಜತೆಗೆ ಅಣ್ಣ, ಅಕ್ಕ) ಅಲ್ಲಿ ಹಾಜರು. ಅಲ್ಲಿ ಯುದ್ಧ ನಡೆಯುತ್ತಿದ್ದರೆ ಕಣ್ಣು ಮುಚ್ಚಿ ನೋಡುವುದು, ಮರಣ ಶಯ್ಯೆಯಲ್ಲಿರುವ ಬೀಷ್ಮನನ್ನು ನೋಡಿ ಅಳುವುದು ಹೀಗೆ ಸಾಗುತ್ತಿತ್ತು ನಮ್ಮ ‘ಮಹಾ’ ಭಾರತ. ಆಮೇಲೆ ನಮ್ಮ ಮನೆಗೂ ಬ್ಲಾಕ್ ಆ್ಯಂಡ್ ವೈಟ್ ಟಿವಿ ಬಂತು. ಟಿವಿ ಬಂದ ಮೊದಲ ದಿನ ಫುಲ್ ಚಾಲೂ. ಪ್ರೋಗ್ರಾಂ ಮುಗಿದು ಬಣ್ಣ ಬಣ್ಣದ ಸ್ಟೈಪ್ ಕಾಣಿಸಿಕೊಂಡರೂ ಅದನ್ನೇ ನೋಡುತ್ತಾ ಕುಳಿತಿರುತ್ತಿದ್ದೆವು. ರುಕಾವಟ್ ಕೆ ಲಿಯೆ ಕೇದ್ ಹೈ ಅಂದ್ರೆ ಏನೂ ಅಂತಾ ಗೊತ್ತಿಲ್ಲದಿದ್ದರೂ ಸ್ವಲ್ಪ ಸಮಯದ ನಂತರ ಪ್ರೋಗ್ರಾಂ ಬರುತ್ತೆ ಅಂತಾ ಗೊತ್ತಿತ್ತು. “ಟಿವಿ ಬಂತಾ…ಇನ್ನು ಮಕ್ಕಳು ಓದಲ್ಲ ಬಿಡಿ” ಅಂತಾ ಅಮ್ಮನಿಗೆ ಚಾಡಿ ಹೇಳುವ ನೆರೆಯವರು ಬೇರೆ. ಅಂತೂ ಟಿವಿಯ ಮೂಲಕ ಹಿಂದಿ ಬೇಗನೆ ಕಲಿತುಕೊಳ್ಳುವಂತಾಯಿತು.
ಮತ್ತಷ್ಟು ಓದು 
ಕಳ್ಳಹೊಳೆ ಮತ್ತು ಹೇಮಾವತಿ
– ಹಂಸಾನಂದಿ
ನಮ್ಮೂರ ಹತ್ತಿರ ಹರಿಯೋ ಯಗಚೀನ ಕಳ್ಳ ಹೊಳೆ ಅಂತಿದ್ದರಂತೆ. ಯಾಕಂದ್ರೆ, ಅದರ ಹರಿವು ಸಣ್ಣದು, ಆದರೆ, ಎಲ್ಲೋ ಇಪ್ಪತ್ತು ಮೂವತ್ತು ಮೈಲಿ ಹಿಂದೆ ಮಳೆಯಾದರೆ ಯಗಚಿಯಲ್ಲಿ ಇದ್ದಕ್ಕಿದ್ದಂತೆ ನೆರೆ ಬಂದು ಬಿಡುತ್ತಿತ್ತಂತೆ. ಅಂತಹ ಸಂದರ್ಭದಲ್ಲಿ, ಹೊಳೆಯ ಪಾತ್ರದಲ್ಲಿ ಆಟವಾಡುತ್ತಿದ್ದ ಮಕ್ಕಳು, ದನ ಕರುಗಳೆಲ್ಲ ಕೊಚ್ಚಿಕೊಂಡು ಹೋಗುತ್ತಿದ್ದವಂತೆ. ಯಾವಾಗ ನೀರು ಬರುತ್ತೆ ಅನ್ನೋದು ಗೊತ್ತಾಗದೇ, ಕಳ್ಳನ ತರಹ ಜನ ಜಾನುವಾರನ್ನೆಲ್ಲ ನುಂಗಿಕೋತಾ ಇದ್ದಿದ್ದರಿಂದಲೇ ಇದು ಕಳ್ಳ ಹೊಳೆ ಅಂತ ಹೆಸರಾಗಿತ್ತಂತೆ. ಇವೆಲ್ಲ ನಾನು ಗೊರೂರು ರಾಮಸ್ವಾಮಿ ಅಯ್ಯಂಗಾರರ ಪುಸ್ತಕದಲ್ಲಿ ಓದಿದ್ದ ವಿಷಯಗಳು.
ಮೂರನೇ ತರಗತಿಯಲ್ಲಿ ನಮಗೆ ಎರಡು ಪಠ್ಯ ಪುಸ್ತಕಗಳಿದ್ದವು – ಒಂದು ನಮ್ಮ ರಾಜ್ಯ ಅಂತ, ಮತ್ತೊಂದು ನಮ್ಮ ಜಿಲ್ಲೆ ಅಂತ. ನಮ್ಮ ಜಿಲ್ಲೆ ಅಂದರೆ ನೋಡುವ ಸ್ಥಳಗಳು ಬೇಲೂರು ಹಳೇಬೀಡು ಶ್ರವಣಬೆಳಗೊಳ; ಬೆಳೆಯೋ ಬೆಳೆಗಳು ರಾಗಿ ಆಲೂಗೆಡ್ಡೆ ಕಾಫಿ ಬೀಜ; ಕೈಗಾರಿಕೆ ಅಂದರೆ ಯಂತ್ರಭಾಗಗಳ ಕಾರ್ಖಾನೆ, ಕಾಫಿ ಬೀಜ ಸಂಸ್ಕರಣೆ ಅಂತ ನಾವು ಓದಿಕೊಂಡಿದ್ದೇ ಓದಿಕೊಂಡಿದ್ದು. ಅದರಲ್ಲಿ ಜಿಲ್ಲೆಯ ನದಿಗಳು ಅಂದರೆ ಕಾವೇರಿ ಹೇಮಾವತಿ ಮತ್ತೆ ಯಗಚಿ ಅಂತಲೂ ಇರ್ತಿತ್ತು. ನನ್ನ ಊರಿಗೆ ತೀರ ಹತ್ತಿರವಿದ್ದ ಯಗಚಿಯ ಹರಿವನ್ನ ನಾನು ನೋಡಿದ್ದೇ ಕಡಿಮೆ. ಊರಿನ ಪಶ್ಚಿಮದ ಹಾಲುಬಾಗಿಲು ಅನ್ನುವ ಕಡೆ ಯಗಚಿ ಹೊಳೆ ಪಕ್ಕದಲ್ಲಿ ಒಂದು ನೀರನ್ನು ಶುಚಿಮಾಡಿ, ಊರಿಗೆ ಸರಬರಾಜು ಮಾಡುವ ವ್ಯವಸ್ಥೆ ಇತ್ತು. ಕೆಲವೊಮ್ಮೆ ನಮ್ಮ ತರಗತಿಯ ಕೆಲವು ಹುಡುಗರು ಹಾಲುಬಾಗ್ಲಿನಲ್ಲಿ ಹೋಗಿ ಈಜಿ ಬಂದೆವು ಅಂತ ಹೇಳ್ತಿದ್ದಿದ್ದೂ ಉಂಟು.




