ವಿಷಯದ ವಿವರಗಳಿಗೆ ದಾಟಿರಿ

Posts tagged ‘ಪಂಜಾಬ್’

12
ಆಗಸ್ಟ್

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

ದಿನ – 3
ಸದ್ಗುರು ರಾಮಸಿಂಗ್ ಕೂಕಾ
– ರಾಮಚಂದ್ರ ಹೆಗಡೆ

download (1)ದೇಶದ ಸ್ವಾತಂತ್ರ್ಯ ಇತಿಹಾಸದಲ್ಲಿ ಪಂಜಾಬಿ ಸಿಖ್ಖರ ಪಾತ್ರ ಬಹಳ ದೊಡ್ಡದು. ಅಪ್ರತಿಮ ದೇಶಭಕ್ತರ ಸಂಪ್ರದಾಯವದು. ಇಂದಿಗೂ ಭಾರತೀಯ ಸೈನ್ಯದಲ್ಲಿ ಸಿಖ್ ರೆಜಿಮೆಂಟ್ ಎಂದರೆ ಪರಮ ಪರಾಕ್ರಮಿಗಳ ದಂಡು. ಅಂತಹ ಪಂಜಾಬಿ ಸಿಖ್ಖರ ‘ನಾಮಧಾರಿ ಸಂಪ್ರದಾಯ’ ಅಥವಾ ‘ಕೂಕಾ ಪಂಥ’ ದ ಸ್ಥಾಪಕ ಸದ್ಗುರು ರಾಮಸಿಂಗ್ ಕೂಕಾ. ಮೂಲತಃ ಬಡಗಿ ವೃತ್ತಿಯ ಕುಟುಂಬದ ರಾಮಸಿಂಗ್ ತಾನೂ ತನ್ನ ತಂದೆಯ ಬಡಗಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ನೆರವಾಗುತ್ತಿದ್ದ. ಆದರೆ ಮಿತಿಮೀರಿದ ಬ್ರಿಟಿಷರ ದೌರ್ಜನ್ಯ ಹಾಗೂ ಅಲ್ಲಿಯ ಜನರ ನಿರಭಿಮಾನ ಅವನನ್ನು ರೊಚ್ಚಿಗೆಬ್ಬಿಸಿತು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ಮಿಷನರಿಗಳು ಮತಾಂತರದಲ್ಲಿ ನಿರತರಾಗಿದ್ದವು. ಇದನ್ನೆಲ್ಲಾ ಕಂಡ ರಾಮಸಿಂಗ್ ಜನರನ್ನು ಆಧ್ಯಾತ್ಮಿಕವಾಗಿ ಮೇಲ್ಮಟ್ಟಕ್ಕೆ ಒಯ್ಯುವ, ಅವರೊಳಗೆ ದೇಶಾಭಿಮಾನ ಬೆಳೆಸುವ, ಧಾರ್ಮಿಕ, ಸಾಮಾಜಿಕ, ರಾಜಕೀಯ ಜನಜಾಗೃತಿ ನಿರ್ಧಾರದಿಂದ ಕೂಕಾ ಪಂಥವನ್ನು ಆರಂಭಿಸಿದ. ರಾಮಸಿಂಗ್ ಸದ್ಗುರು ರಾಮಸಿಂಗ್ ಆದ. ರಾಮಸಿಂಗ್ ನ ಕೂಕಾ ಪಂಥದ ಪ್ರಸಿದ್ಧಿ ಎಲ್ಲೆಡೆಗೆ ಹರಡಿ ಸಾವಿರಾರು ಜನ ಈ ಪಂಥಕ್ಕೆ ಸೇರ್ಪಡೆಯಾದರು. ಪಂಜಾಬ ಪ್ರಾಂತದ ೨೧ ಜಿಲ್ಲೆಗಳಲ್ಲೂ ಕೂಕಾಗಳ ಚಟುವಟಿಕೆಗಳ ಜಾಲ ಹಬ್ಬಿತು. ಮತ್ತಷ್ಟು ಓದು »

17
ಏಪ್ರಿಲ್

ಪಂಜಾಂಬಿನಲ್ಲಿ ಖಲಿಸ್ತಾನಿ ಕರಾಳ ದಿನಗಳು ಮರುಕಳಿಸಲಿವೆಯೇ?

– ರಾಕೇಶ್ ಶೆಟ್ಟಿ

OBS ಆ ದಂಪತಿಗಳು  ಮರುದಿನ ಸಂಜೆ ರಜೆಯ ಮೇಲೆ ಮಣಿಲಕ್ಕೆ ಹೊರಡುವವರಿದ್ದರು.ಪ್ರಯಾಣದ ಟಿಕೆಟ್ಟು ಎಲ್ಲವೂ ನಿಗದಿಯಾಗಿತ್ತು.ಅಷ್ಟರಲ್ಲಿ ಟೆಲಿಫೋನ್ ರಿಂಗಣಿಸಿತ್ತು.ಕರೆ ಸ್ವೀಕರಿಸಿದವರಿಗೆ ಮರುದಿನ ತುರ್ತು ಮಾತುಕತೆಗಾಗಿ ದೆಹಲಿಗೆ ಬರುವ ಆದೇಶ ಸಿಕ್ಕಿತು.

ಹೆಂಡತಿಯ ಜೊತೆ ಮೀರತ್ ಬಿಟ್ಟು ದೆಹಲಿಯ ಕಡೆ ಹೊರಟವರು, ಸಂಜೆಯೊಳಗೆ ಬರುವೆ ಮಣಿಲಕ್ಕೆ ಹೊರಟು ಬಿಡೋಣ ಅಂತೇಳಿ, ಚಾಂದಿಮಂದಿರದ II ಕಾರ್ಪ್ಸ್ ಅರ್ಮಿ ಹೆಡ್ ಕ್ವಾರ್ಟರ್ ತಲುಪಿಕೊಂಡರು.ತಲುಪಿಕೊಂಡವರೇ ಆಪರೇಷನ್ ರೂಮಿನೊಳ ಹೊಕ್ಕರು.ಅಲ್ಲಿ ಅಮೃತಸರದ ಗೋಲ್ಡನ್ ಟೆಂಪಲ್ ನಕ್ಷೆಗಳನ್ನು ಹರವಿ ಕುಳಿತಿದ್ದರು ಸೈನ್ಯಾಧಿಕಾರಿಗಳು.ಒಳ ಬಂದವರಿಗೆ ಏನೊಂದು ಅರ್ಥವಾಗುವ ಮೊದಲೇ “ನಿನಗೆ ಅಮೃತಸರದ ಪರಿಸ್ಥಿತಿ ಕೈ ತಪ್ಪುತ್ತಿರುವುದು ಗೊತ್ತಿದೆಯಲ್ಲ?,ಆದಷ್ಟು ಬೇಗ ನೀನು ಅಮೃತಸರ ತಲುಪಿಕೊಂಡು ಸ್ವರ್ಣಮಂದಿರದೊಳಗೆ ಸೇರಿಕೊಂಡಿರುವ ಖಲಿಸ್ತಾನಿ ಉಗ್ರಗಾಮಿಗಳನ್ನ ಹೊರಹಾಕಬೇಕು” ಅಂತ ಆದೇಶಿಸಲಾಯಿತು.ಹಾಗೆ,ಇದ್ದಕ್ಕಿದ್ದಂತೆ ಸಿಕ್ಕ ಅಪ್ಪಣೆಯನ್ನು ಯಶಸ್ವಿಯಾಗಿ ನಿರ್ವಹಿಸಿ,ಪಂಜಾಬ್ ರಾಜ್ಯ ಭಾರತದಿಂದ ಸಿಡಿದು “ಖಲಿಸ್ತಾನ” ಆಗುವುದನ್ನು ತಪ್ಪಿಸಿದ್ದು “ಆಪರೇಷನ್ ಬ್ಲೂ-ಸ್ಟಾರ್” ಅನ್ನುವ ಮಿಲಿಟರಿ ಕಾರ್ಯಾಚರಣೆ ಮತ್ತದರ ನೇತೃತ್ವ ವಹಿಸಿದ್ದ ಆ ಯೋಧನ ಹೆಸರು ಜನರಲ್.ಕೆ.ಎಸ್ ಬ್ರಾರ್.

ಆವತ್ತು ಅಮೃತಸರಕ್ಕೆ ಬಂದಿಳಿದ ಬ್ರಾರ್ ಅವರಿಗೆ ಸರಿಯಾಗಿ ಸ್ವರ್ಣಮಂದಿರದ ನಕ್ಷೆಯೂ ಗೊತ್ತಿರಲಿಲ್ಲ.ತಕ್ಷಣ ಅವರು ಅಲ್ಲಿನ ಸರ್ಕಾರಿ ಅಧಿಕಾರಿಗಳು ಮತ್ತು ಪೋಲಿಸರನ್ನು ಭೇಟಿಯಾಗಿ ಹೆಚ್ಚಿನ ಮಾಹಿತಿ ಕೇಳಿದರು.ಊಹೂಂ! ಅವರಲ್ಲಿ ಯಾವ ಮಾಹಿತಿಯೂ ಇರಲಿಲ್ಲ.ತಿಂಗಳುಗಟ್ಟಲೆ ಕೆಲಸವಿಲ್ಲದೆ ಕುಳಿತಿದ್ದ ಅವರಿಂದ ಏನು ನಿರೀಕ್ಷಿಸುವಂತೆಯೂ ಇರಲಿಲ್ಲ.ಭಿಂದ್ರನ್ ವಾಲೆಯ ಕಪಿಮುಷ್ಟಿಗೆ ಅದಾಗಲೇ ಸ್ವರ್ಣಮಂದಿರ ಸಿಕ್ಕಿಯಾಗಿತ್ತು.ಒಳಗೇನು ನಡೆಯುತ್ತಿದೆ ಯಾರಿಗೂ ಗೊತ್ತಿರಲಿಲ್ಲ.ಭಿಂದ್ರನ್ ವಾಲೆಯ ಖ್ಯಾತಿ ಆಗ ಪಂಜಾಬಿನಲ್ಲಿ ಉತ್ತುಂಗಕ್ಕೇರಿದ ಸಮಯ.ಜನ ಅವನನ್ನು ದೈವತ್ವಕ್ಕೇರಿಸುವ ಮಟ್ಟಕ್ಕೇ ಅವನ ಅಮಲೇರಿತ್ತು.

ಮತ್ತಷ್ಟು ಓದು »