ವಿಷಯದ ವಿವರಗಳಿಗೆ ದಾಟಿರಿ

Posts tagged ‘ಪ್ರಚಲಿತ’

28
ಜನ

ಮಾಧ್ಯಮಗಳೇಕೆ ಹೀಗೆ ?

-ರೂಪ ರಾವ್
ನಟನೆಗೆ ಚೌಕಟ್ಟು ಇದೆಯೇ……..?
ಇಂತಾಹದೊಂದು ಪ್ರಶ್ನೆ ಕಾಡಿದ್ದು ನೆನ್ನೆ ವಿಜಯ ಕರ್ನಾಟಕದಲ್ಲಿ ಶರಣು ಹುಲ್ಲೂರುರವರ ಸುಮ್ನೇನಾ ಸುಮನ್ ಅನ್ನುವ ಲೇಖನ ಓದಿ.
ಸುಮನ್ ಹಾಗಿದ್ದರು, ಹೀಗಾದರು, ವಿವಾಹ ವಿಚ್ಗೇದನಕ್ಕೆ ಒಳಗಾದರು. “ಇಂತಹ” ಪಾತ್ರಕ್ಕೆ ಬ್ರಾಂಡ್ ಆದರು. ಬರೀ ಇಂತಹದೇ ಪದಗಳು.
ಸುಮನ್ ಅನ್ನು ಒಬ್ಬ ನಟಿಯಾಗಿ ನೋಡದೇ ಒಬ್ಬ  ಹೆಣ್ಣಾಗಿ  ನೋಡಿದಾಗ ಈ ರೀತಿಯ ಯೋಚನೆಗಳು ಬರುತ್ತವೆ.
ಅಷ್ಟಕ್ಕೂ ಪಾತ್ರ ಯಾವುದಾದರೇನು ಅದಕ್ಕೆ ನ್ಯಾಯ ಒದಗಿಸಬೇಕಾದ್ದು ನಟಿಯ ಧರ್ಮ, ಅವರು ಇಂತಹದ್ದೇ ಪಾತ್ರ ಮಾಡಬೇಕೆಂದು ನಿರ್ಧೇಶಿಸುವುದು ನಟಿಯ ಸ್ವಾತಂತ್ರಹರಣ ಎನ್ನುವುದು ನನ್ನ ಅಭಿಪ್ರಾಯ.
ಇಂತಹದೇ ಎನ್ನಲು ಅವರು ಮಾಡಿರುವ ಪಾತ್ರವಾದರೂ ಎಂತಹದ್ದು……
ಅವರ ಲುಕ್, ಅವರ ಗ್ಲಾಮರ್ ಅವರನ್ನು ಇಂತಹ ಪಾತ್ರಕ್ಕೆ ಒಗ್ಗಿಸಿದಲ್ಲಿ ಅದು ಅವರ ಹೆಚ್ಚುಗಾರಿಕೆ, ಅದರಿಂದ ನೋಡುಗರಿಗೆ  ತೊಂದರೆ ಏನು?
ಚಮೇಲಿಯಲ್ಲಿ ಕರೀನಾ , ಡರ್ಟಿ ಪಿಕ್ಚರ‍್ನಲ್ಲಿ  ವಿದ್ಯಾ ಬಾಲನ್,  ಅಷ್ಟೇ ಏಕೆ? ನಮ್ಮ ಚತುರ್ಭಾಷಾ ನಟಿ ಚತುರೆ ಲಕ್ಷ್ಮಿ ಮೇಡಮ್ ಹೂವು ಹಣ್ಮಿನಲ್ಲಿ ನಟಿಸಿದ ಪಾತ್ರಗಳಿಂದ ಅವರ ಅಭಿನಯಕ್ಕಾಗಿ ಹೊಗಳಿಸಿಕೊಂಡಿದ್ದಾರೆಯೇ ಹೊರತು ಇಂತಹ ಪಾತ್ರ ಬೇಕಿತ್ತೇ ಎಂದನಿಸಿಕೊಂಡಿಲ್ಲ. ಪತ್ರಿಕಾ ಮಾಧ್ಯಮದಲ್ಲಿ ತಮಗೆ ಸರಿ ಎನಿಸದ ನಟಿಯರ ಬಗ್ಗೆ ಈ ರೀತಿಯ ಕಾಮೆಂಟ್ಸ್ ಸಹಜವಾಗಿದೆ. ಒಮ್ಮೆಪ್ರಿಯಾ ಮಣಿಯ ಬಗ್ಗೆ ಬರೆಯುತ್ತಾ ರಾವಣ್ ಚಿತ್ರದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದಂತಹ ಪಾತ್ರಗಳನ್ನು ಮಾಡಿ ಎಂಬ ತೆಗಳಿಗೆ ಮಾಡಿದ್ದರು. ಹಾಗೆ ಸೌಂದರ್ಯರವರು  ಯಾವುದೋ ವೇಳೆಯಲ್ಲಿ ಮಾಧ್ಯಮದವರ ಕೈಗೆ ಸಿಗಲಿಲ್ಲ  ಎಂಬ  ಕಾರಣಕ್ಕೆ ಅವರನ್ನು ಅತೀ ಪುರಾತನ ನಟಿ ಎಂಬ “ನಾಮಕರಣ” ಮಾಡಿದ್ದರು.
ಮತ್ತೊಮ್ಮೆ ಪವಿತ್ರ ಲೋಕೇಶ್‌ರವರು ಯಾವುದೋ ಚಿತ್ರದ ಪಾತ್ರವೊಂದಕ್ಕೆ ಒಪ್ಪಲಿಲ್ಲ ಎಂದು ಅವರು ಇಂತಹ ಚಿತ್ರದಲ್ಲಿ “ಅಂತಹ” ಪಾತ್ರ ಮಾಡಿದ್ದರು . ಇಲ್ಲಿ ಏಕೆ ಮಡಿವಂತಿಕೆ ಎಂಬ ಕಾಮೆಂಟ್. ಇಂತಹದೇ ಕಾಮೆಂಟ್ಸ್ ಗಳು ಅತಿಯಾಗಿ ನಟಿಯರ ಮೇಲೆ ಪತ್ರಿಕೆಗಳಲ್ಲಿ ಹಾಕಲ್ಪಟ್ಟಿವೆ, ಹಾಕಲಾಗುತ್ತಿವೆ. ಮತ್ತಷ್ಟು ಓದು »
26
ಜನ

ಪ್ರಜಾಪ್ರಭುತ್ವದ ಶಿಕ್ಷಣ

-ರಾವ್ ಎವಿಜಿ

ಪ್ರಜಾಪ್ರಭುತ್ವ ಒಂದು ಸುಂದರ ಪರಿಕಲ್ಪನೆ ಎಂಬುದರ ಕುರಿತಾಗಲಿ, ನಮಗೆ ತಿಳಿದಿರುವ ಪ್ರಭುತ್ವದ ನಮೂನೆಗಳ ಪೈಕಿ ಅತ್ಯಂತ ಶ್ರೇಷ್ಠವಾದದ್ದು ಎಂಬುದರ ಕುರಿತಾಗಲಿ ಯಾವ ಸಂಶಯವೂ ನನಗಿಲ್ಲವಾದರೂ ನಮಗೆ, ಅರ್ಥಾತ್ ಈ ಕರ್ಮಭೂಮಿಯ ಪ್ರಜೆಗಳಿಗೆ ಪ್ರಜಾಪ್ರಭುತ್ವ ಪದ್ಧತಿಯನ್ನು ಅಳವಡಿಸಿಕೊಳ್ಳಲು ಅಗತ್ಯವಾದ ಅರ್ಹತೆ ಇದೆಯೇ ಎಂಬುದರ ಕುರಿತು ಸಂಶಯ ಇದೆ. ನನಗೆ ತಿಳಿದ ಮಟ್ಟಿಗೆ ಪ್ರಜಾಪ್ರಭುತ್ವದ ಯಶಸ್ಸು ಪ್ರಜೆಗಳ, ಅರ್ಥಾತ್  ಮತದಾರನ ವಿವೇಕವನ್ನು ಆಧರಿಸಿರುತ್ತದೆ.

  • ಹಣ, ಹೆಂಡ. ಸೀರೆ ಮೊದಲಾದವನ್ನು ಧಾರಾಳವಾಗಿ ಕೊಡುವವರನ್ನೇ ಆಗಲಿ ಚುನಾವಾಣೆಯಲ್ಲಿ ಗೆದ್ದು ಬಂದರೆ ಉಚಿತವಾಗಿ ‘ಕಲರ್’ಟಿವಿ,’ಮಿಕ್ಸಿ’ ನಗಣ್ಯ ಅನ್ನಬಹುದಾದಷ್ಟು ಕಡಿಮೆ ಬಡ್ಡಿಯ ಸಾಲ ಮುಂತಾದವನ್ನು ಕೊಡುವುದಾಗಿ ಭರವಸೆ ನೀಡುವ ಮಂದಿಯನ್ನು ಆಯ್ಕೆ ಮಾಡುವ ನಾವು ವಿವೇಕಿಗಳೇ?
  • ನಮ್ಮ ಮತದವ, ನಮ್ಮ ಜಾತಿಯವ, ನಮ್ಮ ಊರಿನವ ಎಂಬ ಕಾರಣಕ್ಕಾಗಿ ನಾಯಕನನ್ನು ಆಯ್ಕೆ ಮಾಡುವ ನಾವು ವಿವೇಕಿಗಳೇ ? ಮತ್ತಷ್ಟು ಓದು »
5
ಜನ

ಅಗೋಚರತೆ (ಇನ್ವಿಸಿಬಿಲಿಟಿ)

ರಾವ್ ಎವಿಜಿ

ಮಿಸ್ಟರ್ ಇಂಡಿಯ, ಹ್ಯಾರಿ ಪಾಟ್ಟರ್, ಟಾಮ್ ಅಂಡ್ ಜೆರ್ರಿ ಇವೇ ಮೊದಲಾದ ಕೆಲವು ಚಲನಚಿತ್ರಗಳಲ್ಲಿ ಏನೋ ಒಂದು ದ್ರಾವಣ ಕುಡಿಯುವುದರಿಂದಲೋ, ಒಂದು ವಿಶಿಷ್ಟ ಮೇಲಂಗಿ ಅಥವ ಹೊದಿಕೆಯನ್ನು ಧರಿಸುವುದರಿಂದಲೋ, ಉಂಗುರವೊಂದನ್ನು ವಿಶಿಷ್ಟ ರೀತಿಯಲ್ಲಿ ಹಾಕಿಕೊಳ್ಳುವುದರಿಂದಲೋ ತಮಗೆ ಬೇಕೆನಿಸಿದಾಗ ಅದೃಶ್ಯರಾಗುವ ಪಾತ್ರಗಳನ್ನು ನೀವು ಗಮನಿಸಿರುತ್ತೀರಿ. ಬೇಕೆನಿಸಿದಾಗ ಅದೃಶ್ಯವಾಗುವುದು, ಅರ್ಥಾತ್ ಅಗೋಚರತೆ ಸಾಧನೀಯವೇ?

ಅಪಾರದರ್ಶಕ, ಅರ್ಥಾತ್ ಅಪಾರಕ ವಸ್ತುವಿನ ಮೇಲೆ ಬಿದ್ದ ಬೆಳಕಿನ ಕಿರಣಗಳು ಪ್ರತಿಫಲನಗೊಂಡು ನಮ್ಮ ಅಕ್ಷಿಪಟಲದ ಮೇಲೆ ಬಿಂಬವನ್ನು ಮೂಡಿಸಿದರೆ ಅದು ನಮಗೆ ಗೋಚರಿಸುತ್ತದೆ (ಚಿತ್ರ ೧). ಇದಕ್ಕೆ ಬದಲಾಗಿ ವಸ್ತು ತನ್ನ ಮೇಲೆ ಬಿದ್ದ ಬೆಳಕಿನ ಕಿರಣಗಳನ್ನು ಸಂಪೂರ್ಣವಾಗಿ ಹೀರಿಕೊಂಡರೆ ಏನಾಗುತ್ತದೆ ಊಹಿಸಬಲ್ಲಿರಾ? ಶಾಸ್ತ್ರ ರೀತ್ಯಾ ಆ ವಸ್ತು ನಮಗೆ ಗೋಚರಿಸಕೂಡದಾದರೂ ಅದರ ಆಸುಪಾಸಿನ ಎಲ್ಲ ವಸ್ತುಗಳೂ ನಮಗೆ ಗೋಚರಿಸುವುದರಿಂದ ಆ ವಸ್ತು ಎಷ್ಟು ಸ್ಥಳವನ್ನು ಆಕ್ರಮಿಸಿಕೊಂಡಿದೆಯೋ ಅಷ್ಟು ಸ್ಥಳ ಕಪ್ಪಾಗಿ ಗೋಚರಿಸುತ್ತದೆ! ಅದರ ಹಿಂದೆ ಏನಿದೆಯೋ ಅದು ನಮಗೆ ಗೋಚರಿಸುವುದಿಲ್ಲ (ಚಿತ್ರ ೨). ತತ್ಪರಿಣಾಮವಾಗಿ, ಆ ವಸ್ತುವಿನ ಸ್ವರೂಪ ನಮಗೆ ಗೋಚರಿಸದೇ ಇದ್ದರೂ ಅಲ್ಲಿ ಏನೋ ಒಂದು ಇದೆ ಎಂಬುದು ತಿಳಿಯುತ್ತದೆ. ಪರಿಪೂರ್ಣ ಅಗೋಚರತೆ ಆಗಬೇಕಾದರೆ ವಸ್ತು ನಮಗೆ ಗೋಚರಿಸ ಕೂಡದು, ಅದರ ಹಿಂದಿರುವ ವಸ್ತುಗಳು ನಮಗೆ ಗೋಚರಿಸಬೇಕು (ಚಿತ್ರ ೩). ವಸ್ತು ಯಾವದೋ ಒಂದು ತಂತ್ರದಿಂದ ಪಾರಕವಾದರೆ ಇಂತು ಆಗ ಬೇಕಲ್ಲವೇ? ಇಂತಾಗುವುದರಲ್ಲಿ ಒಂದು ಸಮಸ್ಯೆ ಇದೆ. ಈ ರೀತಿ ಅಗೋಚರವಾದ ವ್ಯಕ್ತಿಯ ಮೂಲಕ, (ಅಕ್ಷಿಪಟಲವೂ ಸೇರಿದಂತೆ ಪ್ರತಿಯೊಂದು ಅಂಗದ ಮೂಲಕ) ಬೆಳಕಿನ ಕಿರಣಗಳು ಹಾದು ಹೋಗುವುದರಿಂದ ಅವನಿಗೆ ಏನೂ ಕಾಣಿಸುವದಿಲ್ಲ. ಅರ್ಥಾತ್, ಆತ ಸಂಪೂರ್ಣ ಕುರುಡು ವ್ಯಕ್ತಿ ಆಗಲೇ ಬೇಕು!! ಇಂಥ ಅಗೋಚರತೆಯಿಂದ ಏನು ಲಾಭ?

ಮತ್ತಷ್ಟು ಓದು »

4
ಜನ

ಸ್ಥಳೀಯ ಭಾಷೆಗಳ ಬಳಕೆಯ ಬಗೆಗೆ RBI ಹಾಗೂ BCSBI ಏನು ಹೇಳುತ್ತದೆ?

-ರವಿ ಸಾವ್ಕರ್

ಇತ್ತೀಚಿಗೆ ಹಲವಾರು ಕನ್ನಡಿಗ ಗ್ರಾಹಕರು ತಮಗೆ ಬ್ಯಾಂಕ್ ಗಳಲ್ಲಿ ಕನ್ನಡದಲ್ಲಿ ಸೇವೆ ಕೊಡಬೇಕು ಎಂದು ಬ್ಯಾಂಕ್ ಗಳಿಗೆ ದೂರನ್ನು ಕೊಟ್ಟಿದಾರೆ. ಕೆಲವು ಬ್ಯಾಂಕ್ ಗಳು ಗ್ರಾಹಕರ ದೂರಿಗೆ ಸ್ಪಂದಿಸಿ ಕನ್ನಡದಲ್ಲಿ ಸೇವೆ ಕೊಟ್ಟಿದಾರೆ. ಮತ್ತೆ ಕೆಲವರು ಕೊಡುವುದಿಲ್ಲ ಎಂದು ಸಾರಾಸಗಟಾಗಿ ತಿರಸ್ಕರಿಸಿದ ಸಂಗತಿಗಳು ಇದೆ.

RBI ಹಾಗೂ BCSBI ಭಾಷೆಯ ಬಳಕೆಯ ಬಗ್ಗೆ ಏನು ಹೇಳುತ್ತದೆ ಹಾಗೂ ಕನ್ನಡದಲ್ಲಿ ಸೇವೆ ಕೊಡಲು ನಿರಾಕರಿಸಿದರೆ ಬ್ಯಾಂಕ್ ಗಳ ಲೋಕಪಾಲರಿಗೆ(Banking ombudsman) ದೂರು ಕೊಡುವುದು ಹೇಗೆ ಅಂತ ಇಲ್ಲಿ ಕಲೆ ಹಾಕಲಾಗಿದೆ. ಕನ್ನಡದಲ್ಲಿ ಸೇವೆ ಸಿಗದೇ ಹೋದರೆ ಈ ನಿಯಮಗಳನ್ನು ತಿಳಿಸಿ ಬ್ಯಾಂಕ್ ಗಳಿಗೆ ದೂರು ಕೊಡಿ.

ಭಾಷಾ ಆಯಾಮದಲ್ಲಿ RBI ನಿರ್ದೇಶನ ಹೀಗಿದೆ
“In order to ensure that banking facilities percolate to the vast sections of the population,banks should make available all printed material used by retail customers including account opening forms, pay-in-slips, passbooks etc. in trilingual form i.e. English, Hindi and the concerned Regional Language.”
http://rbi.org.in/scripts/BS_ViewMasCirculardetails.aspx?Id=2673&Mode=0
“ಎಲ್ಲ ಜನರಿಗೆ ಉಪಯೋಗ ಆಗುವಂತೆ ಚೆಕ್ಕು, ಪಾಸ್ ಬುಕ್ ಗಳು ಸೇರಿದಂತೆ ಎಲ್ಲ ಮುದ್ರಿತ ಸಾಮಗ್ರಿಗಳನ್ನು (printed material) ಸ್ಥಳೀಯ ಭಾಷೆಗಳಲ್ಲಿಯೂ ಕೊಡಬೇಕು ”

ಭಾಷಾ ಆಯಾಮದಲ್ಲಿ Code of Banks Commitment to Customers ಏನು ಹೇಳುತ್ತದೆ?
“Key commitment of BCSBI is to help You To Understand How Our Financial Products And Services Work By Giving you information about them in any one or more of the following languages – Hindi, English or the appropriate local language

http://www.bcsbi.org.in/pdf/CodeOfBanks_Aug09.pdf ಮತ್ತಷ್ಟು ಓದು »