ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಬಣ್ಣದ ಬದುಕು 6 – ಕುಣಿಯಲು ಕಲಿತವರೇ …
ನನ್ನ ಇನ್ನೊಬ್ಬ ಗೆಳೆಯರಾದ ಕೆ.ಪಿ. ಗೋಪಾಲಕೃಷ್ಣ ಭಟ್ಟರು ಸಲಹೆ ನೀಡುವವರೆಗೂ ಮೇಳಕ್ಕೆ ಸೇರಿ ವೃತ್ತಿಪರ ಕಲಾವಿದನಾಗುವ ಯೋಚನೆ ನನ್ನ ತಲೆಯಲ್ಲೇ ಸುಳಿದಿರಲಿಲ್ಲ.
ಕೆಲವೊಂದು ಕಡೆ ಆಟಗಳಿಂದ ಆಕರ್ಷಿತನಾದಾಗ, ಒಂದೆರಡು ವೇಷಗಳು ನನ್ನ ಮೇಲೆ ಪ್ರಭಾವ ಬೀರಿದಾಗ ‘ನಾನು ಹಾಗೆ ಕುಣಿಯಲಾಗುತ್ತಿದ್ದರೆ?’ ಎಂದುಕೊಂಡಿದ್ದೆಯೇ ಹೊರತು, ಆರು ತಿಂಗಳ ಕಾಲ ಎಡೆಬಿಡದೆ ಪ್ರತಿ ರಾತ್ರೆಯೂ ಗೆಜ್ಜೆ ಕಟ್ಟುವ ಯೋಚನೆ ಮಾಡಿರಲಿಲ್ಲ.
ಮೇಳಗಳ ನೇರ ಸಂಪರ್ಕವಿರಲಿಲ್ಲವಾದರೂ, ವೇಷ ಹಾಕುವವರು ಕೆಲವರ ಗುರುತಿತ್ತು. ವೇಷಧಾರಿಗಳ ಜೀವನದ ‘ಸೊಗಸು’ ಕಾಣಿಸಿತ್ತು.
ಅವರು ಯಾವ ದೇವಿಯ ವರಪ್ರಸಾದದಿಂದಾಗಿಯೇ ಕಲಾವಿದರಾಗಿರಲಿ, ಬೇರೇನೂ ಉದ್ಯೋಗ ದೊರೆಯದೆಯೇ ಆಟದ ಮೇಳ ಸೇರಲು ಬಂದವರು ಎನ್ನುವ ಭಾವನೆ ಜನರಲ್ಲಿ ಬೇರೂರಿತ್ತು. ಕೆಲವರಂತೂ, ಆ ಭಾವನೆಯನ್ನು ಮತ್ತೂ ಬೆಳೆಸಲು ಸಹಕರಿಸಿದ್ದರೆಂದರೆ ಹೆಚ್ಚಲ್ಲ.
ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಬಣ್ಣದ ಬದುಕು 4 – ಐದು ವರ್ಷಗಳಲ್ಲಿ ಆಸ್ತಿ ಅಡವು
1931ರ ಆರ್ಥಿಕ ಮುಗ್ಗಟ್ಟಿನ ದಿನಗಳ ನೆನಪಿರುವವರು ಬಹಳ ಮಂದಿ. ನಮ್ಮ ನಾಟಕ ಮಂಡಳಿಯಿಂದಾಗಿ ನನಗೂ ಆ ದಿನಗಳ ನೆನಪು ಉಳಿದಿದೆ; ಅಂದಿನ ಮತ್ತು ಇಂದಿನ ಪರಿಸ್ಥಿತಿಗಳ ವ್ಯತ್ಯಾಸವನ್ನು ಜ್ಞಾಪಿಸಿಕೊಳ್ಳುವ ಹಾಗಾಗಿದೆ.
ಆಗ ಊರಿಂದೂರಿಗೆ ಸಾಮಾನು ಸಾಗಿಸುವ ಲಾರಿಗಳ ಸೌಕರ್ಯವಿರಲಿಲ್ಲ. ಸಾಗಾಟಕ್ಕೆ ಸಿಗುತ್ತಿದ್ದುದು ಎತ್ತಿನ ಗಾಡಿಗಳು ಮಾತ್ರ.
ದಶಾವತಾರದ ಮೇಳಗಳಲ್ಲಿ ಇರುತ್ತಿದ್ದ ಸಾಮಾನುಗಳನ್ನು ಸಾಗಿಸಲು ಬಹಳ ಕಷ್ಟವಾಗುತ್ತಿರಲಿಲ್ಲ. ಪರದೆ ಇತ್ಯಾದಿಗಳ ತೊಡಕು ಇಲ್ಲದ ಕಾರಣ, ಕೆಲವು ಪೆಟ್ಟಿಗೆಗಳನ್ನು ತಲೆ ಹೊರೆಯಲ್ಲಿ ಸಾಗಿಸಲು ಸಾಧ್ಯವಾಗುತ್ತಿತ್ತು. ಸಂಚಾರಕ್ಕೆ ರಸ್ತೆಯ ಅನುಕೂಲವಿದ್ದರೆ ಒಂದು ಗಾಡಿಯನ್ನು ಬಾಡಿಗೆಗೆ ಹಿಡಿದರೆ ಸಾಕಾಗುತ್ತಿತ್ತು. ಊರು ಸೇರಿದ ತರುವಾಯ ಡೇರೆಯ ವ್ಯವಸ್ಥೆಯೂ ಬೇಕಾಗುತ್ತಿರಲಿಲ್ಲ. ಹೆಚ್ಚಾಗಿ ಬಯಲಾಟಗಳೇ ಅಂದು ನಡೆಯುತ್ತಿದ್ದುವು.
ಆದರೆ ಯಕ್ಷಗಾನ ನಾಟಕ ಕಂಪೆನಿಯ ಹೊಣೆ ಹೊತ್ತ ನಮ್ಮ ಪರಿಸ್ಥಿತಿ ಅದಕ್ಕೆ ತೀರಾ ವ್ಯತಿರಿಕ್ತವಾಗಿತ್ತು.
ದೃಶ್ಯಾವಳಿಗಳಿಗಾಗಿ ಪರದೆಗಳು, ‘ಪಕ್ಕದ ರೆಕ್ಕೆ’ಗಳು, ಆಸನ- ಪೀಠೋಪಕರಣಗಳು, ಕಿರೀಟ-ಆಯುಧ, ಅಲಂಕಾರಗಳು ಇವೆಲ್ಲವುಗಳ ಜೊತೆಗೆ ಸಾಕಷ್ಟು ಫರ್ನಿಚರ್‌ಗಳನ್ನು ಸಾಗಿಸಲು ಎಂಟು ಹತ್ತು ಗಾಡಿಗಳನ್ನು ಅನುವು ಮಾಡಿಕೊಳ್ಳಬೇಕಾಗುತ್ತಿತ್ತು. ಎಷ್ಟೇ ಜನಪ್ರಿಯತೆ ಗಳಿಸಿದರೂ, ಕೆಲವು ದಿನಗಳ ತರುವಾಯ ಊರು ಬದಲಾಯಿಸಲೇಬೇಕಾಗುವುದಷ್ಟೇ.
ಊರಿಂದೂರಿಗೆ
ಬಟ್ಟೆಯ ಡೇರೆಗೆ ಬೇಕಾದ ಅನುಕೂಲ ನಮಗೆ ಇರಲಿಲ್ಲ. ಆದುದರಿಂದ ಪ್ರತಿಯೊಂದು ಊರಿನಲ್ಲೂ ”ಥಿಯೇಟರ್” ಕಟ್ಟಿಸಬೇಕಾಗುತ್ತಿತ್ತು. ಸರಾಸರಿ ಒಂದು ಸಾವಿರ ರೂ. ಅದಕ್ಕಾಗಿ ವೆಚ್ಚವಾಗುತ್ತಿತ್ತು.
ಮತ್ತಷ್ಟು ಓದು 
ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಬಣ್ಣದ ಬದುಕು 3 – ನಜ್ಜು ಗುಜ್ಜಾಗುವ ಪ್ರಹ್ಲಾದ
ಮನೆಯಲ್ಲೊಂದು ದಿನ ಯಾವುದೋ ಶುಭಕಾರ್ಯ ನಿಮಿತ್ತ ನೆರೆಕರೆಯವರು ಸೇರಿದ್ದರು. ನಮ್ಮ ಊರಿನತ್ತ ಯಾವುದೇ ಕಾರ್ಯಕ್ಕಾಗಿ ಭೇಟಿ ಕೊಟ್ಟರೆ ‘ಉಂಡೊಡನೆ ಊರು ಬಿಡುವ’ ಕ್ರಮವಿರುವುದಿಲ್ಲ.
ಆ ದಿನ ಸಂಜೆಯ ಹೊತ್ತಿಗೆ ತೆರಳುವವರು ತೆರಳಿದ ತರುವಾಯವೂ, ಕೆಲವರು ಸಮೀಪದವರು ಉಳಿದಿದ್ದರು. ಬಂಧುಗಳೂ ಇದ್ದರು.
ಊರಿನ ಹಲವು ಸಮಸ್ಯೆಗಳ, ಜನರ ನಡೆನುಡಿಯ ವಿಚಾರಗಳ ಚರ್ಚೆ ಮಾತುಕತೆಗಳಲ್ಲಿ ಆಗುತ್ತಿತ್ತು. ಅಂತೆಯೇ ಮಾತು ಮುಂದುವರಿದು ತಾಳಮದ್ದಳೆಯ ಕಡೆಗೂ ತಿರುಗಿತು. ಬರಿಯ ಮಾತಿನಿಂದ ಪಾತ್ರ ಪೋಷಣೆಯಾಗುವುದಿಲ್ಲ, ಸಜೀವ ಚಿತ್ರಣವಾಗುವುದಿಲ್ಲ ಎಂದು ಒಬ್ಬರು ಹೇಳಿದರು.
”ಪಾತ್ರ ಚಿತ್ರಣ ಬೇಕಾದರೆ ಬಯಲಾಟವನ್ನೇ ನೋಡಬೇಕು” ಎಂದರು ಇನ್ನೊಬ್ಬರು.
ಮಳೆಗಾಲ ಕಳೆದಿದ್ದು, ಮೇಳಗಳು ಹೊರಡುವುದಕ್ಕೆ ಇನ್ನೂ ಸಮಯವಿದ್ದುದಾಗಿ ನನ್ನ ನೆನಪು.
ಮತ್ತಷ್ಟು ಓದು 




