ಜನಲೋಕಪಾಲ ಅನ್ನುವುದು ಮಾಯದಂಡವೇನಲ್ಲ…!
– ರಾಕೇಶ್ ಶೆಟ್ಟಿ
ಒಂದೆಡೆ ಅಣ್ಣಾರನ್ನ ಬೆಂಬಲಿಸಿ ಜನ ಬೀದಿಗಿಳಿದರೆ, ಇನ್ನೊಂದೆಡೆ ಅಣ್ಣಾ ಹೋರಾಟವನ್ನ ಪ್ರಶ್ನಿಸಿ ಹಲವಾರು ಪ್ರಶ್ನೆಗಳೆದ್ದಿವೆ.
’ಜನಲೋಕಪಾಲ್’ ಬಂದ ತಕ್ಷಣ ಎಲ್ಲ ಭ್ರಷ್ಟರು ಮಾಯವಾಗ್ತಾರೆ ಅಂತ ಖುದ್ದು ಅಣ್ಣಾ ಮತ್ತು ಸಿವಿಲ್ ಸೊಸೈಟಿಯವರ್ಯಾರು ಸಹ ಎಲ್ಲೂ ಹೇಳಿಲ್ಲ.ಹಾಗಾಗ್ಯೂ ಇಂತ ವಾದ ಹುಟ್ಟು ಹಾಕಿದ್ದು ಯಾರು? ಬಹುಷಃ ಕಪಿಲ್ ಸಿಬಲ್ ಇರಬೇಕು ಅದನ್ನೆ ಹಿಡಿದು ಕೆಲವರು ’ಜನಲೋಕಪಾಲ್’ ಬಂದ್ರೆ ಭ್ರಷ್ಟಚಾರ ಮಾಯವಾಗುತ್ತಾ!? ಅಂತ ಕೇಳ್ತಾ ಇದ್ದಾರೆ ಕೆಲವರು. ಅಂತವರಿಗೊಂದು ಪ್ರಶ್ನೆ ಪೋಲಿಸ್ ಇಲಾಖೆ ಅನ್ನುವುದು ಬಂದು ಎಷ್ಟು ವರ್ಷಗಳಾಯ್ತು? ಕಳ್ಳತನ-ಕೊಲೆ-ದರೋಡೆ ನಿಂತಿದೆಯಾ ಸ್ವಾಮಿ!? ಇಲ್ಲ ತಾನೆ..! ಆದರೆ ಜನ್ರಿಗೊಂದು ಹೆದರಿಕೆಯಂತೂ ಇರುತ್ತದೆ ತಪ್ಪು ಮಾಡೋಕೆ ಹಾಗೆ ತಪ್ಪು ಮಾಡಿದವರನ್ನ ಹಿಡಿದು ಜೈಲಿಗೆ ಅವರು ನೂಕುತಿದ್ದಾರಲ್ವಾ? ಹಾಗೆಯೇ ಜನಲೋಕಪಾಲ ಅನ್ನುವುದು ಸಹ.ಅದು ಬಂದ ತಕ್ಷಣ ಎಲ್ಲ ಸರಿ ಹೋಗದು.ಅದು ಸುಧಾರಣೆಯ ಒಂದು ಅಸ್ತ್ರವಷ್ಟೆ.
ಈ ಎಡವಟ್ಟುಗಳು ಯಾಕೆ ಹೀಗೆ ಅಂತ?
– ಸಚಿನ್ ಕೆ
ನಮಸ್ಕಾರ ಸಾ. ಎಂಗಿದೀರಾ.
ನೋಡಿ ಸಾ, ಪ್ರಪಂಚ ಹೆಂಗೈತೆ ಅಂದ್ರೆ ಹಿಂಗೂ ಜನ ಇರ್ತಾರ ಅಂತ ಗೊತ್ತಿರ್ಲಿಲ್ಲ.
ಗಾಂಧಿ ಮಆತ್ಮ್ ನ ತರ ನೀವು ಉಪ್ವಾಸ ಮಾಡಿದ್ರೆ ಜನ ಅದರಲ್ಲೂ ಹುಳುಕು ಕಂಡಿಡಿತಾರೆ ಅಂದ್ರೆ, ಈ ಜನ ಎಷ್ಟು ಗಬ್ಬೆದ್ದು ಹೋಗಿದ್ದಾರೆ ಅಂತ. ಆ ಬ್ರಹ್ಮ ಇವರ ತಲೆ ಒಳಗೆ ಮಿದುಳು ಇಟ್ಟಿಲ್ಲ ಅನ್ಸುತ್ತೆ, ಅದರೆ ಬದಲು ಸಗಣಿ ಮಡಗವ್ನೆ. ಈ ಬಡ್ಡೆತ್ತೇವು ಬರೀ ಉಲ್ಟಾ ಮಾತಾಡೋದೆ ಆಗ್ವಾಯ್ತು.
ಅವಯ್ಯ ದೇಸಾನ ಏನೋ ಬದಲಾವ್ಣೆ ಮಾಡ್ತೀನಿ ಅಂತ ಮಾತಾಡ್ತಿಲ್ಲ. ಲಂಚ ತಿನ್ನೋ ಎಲ್ಲ ಬೇವರ್ಸಿ ಮುಂಡೇವು ಗಳಿಗೆ ಸರ್ಯಾದ ಸಿಕ್ಸೆ ಆಗ್ಲಿ ಅಂತ ಗೋರ್ಮೆಂಟ್ ನೋರು ಸರಿಯಾದ ರೂಲ್ಸ್ ಮಾಡ್ಲಿ ಅಂತ. ಆದರೆ ಈ ಉಲ್ಟಾ ಮಾತಾಡ್ತ ಇರೋ ಈ ಹೈಕಳು ಕೇಳೋ ಪ್ರಸ್ನೆಗಳನ್ನು ನೋಡಿದ್ರೆ ನಗ ತಡ್ಯಾಕಾಗ್ತಿಲ್ಲ.
ಭ್ರಷ್ಟಾಚಾರ ಎಂದರೆ ಅನುಕೂಲ ಸಿಂಧು
– ಪವನ್ ಪರುಪತ್ತೆದಾರ
ನನಗೊಬ್ಬ ಸ್ನೇಹಿತ ಇದ್ದಾನೆ ಪ್ರವೀಣ್ ಅಂತ, ನನ್ನ ಜೊತೆ ಓದಿಲ್ಲವಾದರೂ ನನ್ನ ಸಹಪಾಠಿ ಅವನು, ಒಂದೇ ತರಗತಿ ಆದರೆ ಬೇರೆ ಶಾಲೆ. ಅವನ ಕೆಲಸ ತಾಲ್ಲೂಕು ಕಚೇರಿಯಲ್ಲಿ. ಸರ್ಕಾರದಿಂದ ಕೊಟ್ಟ ಕೆಲಸ ಅಲ್ಲ, ಅವನೇ ಹುಡುಕಿ ಕೊಂಡಿರುವ ವೃತ್ತಿ. ನಿಜ ಹೇಳಬೇಕೆಂದರೆ ನಮ್ಮೂರಿನ ತಾಲ್ಲೂಕು ಕಚೇರಿಯೋಳಗಿರುವರಿಗಿಂತ ಇವನು ಹೆಚ್ಚು ಕೆಲಸ ಮಾಡುತ್ತಾನೆ. ಪಹಣಿ, registration, ಖಾತೆ ಬದಲಾವಣೆ, encumberance ಸರ್ಟಿಫಿಕೇಟ್, survey sketch ಕಾಪಿ, ನಿಮಗೇನು ಬೇಕು?? ತಾಲ್ಲೂಕು ಕಚೇರಿಯ ಗೇಟ್ ನ ಪ್ಯೂನ್ ಇಂದ ಹಿಡಿದು ತಹಶೀಲ್ದಾರ್ ತನಕ, ಏನು ಕೆಲಸ ಬೇಕಾದರುಮಾಡಿಕೊಡುತ್ತಾನೆ(ಮಾಡಿಸಿಕೊಡುತ್ತಾನೆ).
ಇತ್ತೀಚಿಗೆ ನನಗೆ ಬಹಳ ಜರೂರಾಗಿ ನಮ್ಮ ಜಮೀನಿನ ಪಹಣಿ ಬೇಕಾಗಿತ್ತು. ನಮ್ಮ ಊರಿನ ಪಹಣಿ ಕೇಂದ್ರ ಬಹಳ ದಿನಗಳಿಂದ ದುರಸ್ಥಿಯಲ್ಲಿತ್ತು. ಆಗಷ್ಟೇ ಕೊಡಲು ಶುರು ಮಾಡಿದ್ದರು. ಅದ್ದರಿಂದ ತಾಲ್ಲೂಕು ಕಚೇರಿ ಬಳಿ ಹೋಗಿ ಸಾಲು ನೋಡಿದೊಡನೆ ಭಯವಾಯ್ತು. ಅದರಲ್ಲೂ ನಮ್ಮ ಸರ್ಕಾರೀ ಕಛೇರಿಯೋಳಗಿನ ಗಣಕ ಯಂತ್ರಗಳು ಯಾವಾಗ ಕೆಡುತ್ತವೋ ಗೊತ್ತಿಲ್ಲ. ಇವತ್ತು ಕೆಟ್ಟರೆ ಇನ್ನು ರಿಪೇರಿ ಆಗುವುದು ಯಾವಾಗಲೋ??? ಅಲ್ಲಿವರೆಗೂ ನನಗೂ ಕಾಯುವ ಅವಕಾಶವಿರಲಿಲ್ಲ. ಮತ್ತಷ್ಟು ಓದು 
ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ…!
– ರಾಕೇಶ್ ಶೆಟ್ಟಿ
ಇವತ್ತು ೬೫ನೇ ಸ್ವಾತಂತ್ರ್ಯ ಸಂಭ್ರಮ,ದೆಹಲಿಯ ಕೆಂಪು ಕೋಟೆಯ ಮೇಲೆ ಧ್ವಜಾರೋಹಣ ಮಾಡಿ ಭಾಷಣ ಮಾಡಲಿದ್ದಾರೆ ನಮ್ಮ ಪ್ರಾಮಾಣಿಕ ಪ್ರಧಾನಿ.ಮತ್ತೆ ನಾಳೆ ಇದೇ ಪ್ರಾಮಾಣಿಕ ಪ್ರಧಾನಿಯ
ಸರ್ಕಾರದ ಅನೈತಿಕತೆಯ ವಿರುದ್ಧ ಅಣ್ಣಾ ಹಜ಼ಾರೆ ಮತ್ತೆ ಉಪವಾಸ ಕೂರುತಿದ್ದಾರೆ.ಅಣ್ಣಾ ಇದನ್ನ ಎರಡನೇ ಸ್ವಾತಂತ್ರ್ಯ ಹೋರಾಟ ಅನ್ನುತಿದ್ದಾರೆ.ಆದರೆ ಮೊದಲ ಸ್ವಾತಂತ್ರ್ಯ ಹೋರಾಟದ ಆಳ-ಅಗಲಗಳನ್ನ ಸರಿಯಾಗಿ ತಿಳಿಯಲಾಗದೇಯೆ ಶಾಲೆ-ಕಾಲೇಜು ಪಾಸಾಗಿ ಬಂದ ನಮ್ಮಲ್ಲಿ ಅದಿನ್ನೆಷ್ಟು ಜನಕ್ಕೆ ಈ ಎರಡನೇ ಹೋರಾಟ ಕಿಚ್ಚು ಹಚ್ಚಬಹುದು,ಅದನ್ನ ಕಾಲವೇ ಉತ್ತರಿಸಲಿದೆ.
ಅಣ್ಣಾ ಉಪವಾಸ ಹೋರಾಟಕ್ಕೆ ಜಯವಾಗಲಿ ಅಂತ ಹಾರೈಸುತ್ತ,ಅಣ್ಣಾ ಉಪವಾಸ ಸತ್ಯಾಗ್ರಹಕ್ಕೆ ಆರಂಭದಲ್ಲೆ ಕಲ್ಲು ಹಾಕಿ ತಲೆಕೆಟ್ಟವರಂತೆ ಮಾತನಾಡುತ್ತಿರುವ ಕಾಂಗ್ರೆಸ್ಸಿನ ಮಂದಿಗೂ ಮತ್ತು ಕೇಂದ್ರ ಗೃಹ ಸಚಿವರಿಗೂ ಮತ್ತು ಕನಿಷ್ಠ ದೆಹಲಿ ಪೋಲಿಸ್ ಪರ್ಮಿಷನ್ ಸಹ ಕೊಡಿಸಲಾಗದ ಅಸಾಹಯಕ ಆದರೆ At the same time ಪ್ರಾಮಾಣಿಕ ಪ್ರಧಾನಿಯ ಶೋಚನೀಯ ಸ್ಥಿತಿಗೆ ಕಂಬನಿ ಮಿಡಿಯುತ್ತ, ಉಪವಾಸ ಸತ್ಯಾಗ್ರಹದಂತ ಹೋರಾಟದ ಅಸ್ತ್ರ ಹಿಡಿದು ನಿಲ್ಲುವವರ ಮನಸ್ಥಿತಿಯ ಕುರಿತಾಗಿ ಮಹಮ್ಮದ್ ಅಲಿ ಜಿನ್ನಾ ಹೇಳಿರುವ ಮಾತುಗಳು ನೆನಪಿಸಿಕೊಳ್ಳುತಿದ್ದೇನೆ.
“ಯಾವ ಮನುಷ್ಯ ಉಪವಾಸ ಸತ್ಯಾಗ್ರಹಕ್ಕೆ ಇಳಿಯುತ್ತಾನೋ ಅಂತವನು ಅವನ ಮನಸಿನ ಮಾತಿನಂತೆ ನಡೆಯುತ್ತಾನೆ ಮತ್ತು ಅವನಿಗೆ ಅವನೇನು ಮಾಡುತ್ತಿದ್ದಾನೆ ಎಂಬುದರ ಸಂಪೂರ್ಣ ಅರಿವಿರುತ್ತದೆ.ಅವರನ್ನು ಹಾದಿ ತಪ್ಪಿದವರು ಅನ್ನುವ ಮೊದಲು ಅವರನ್ನು ಹಾದಿ ತಪ್ಪಿಸಿರುವುದು ಈ ವ್ಯವಸ್ತೆ ಅನ್ನುವುದನ್ನ ಮರೆಯಬಾರದು,ಮತ್ತು ಈ ವ್ಯವಸ್ತೆಯ ವಿರುದ್ಧ ಯುವಕರು ಸಿಡಿದಿದ್ದಾರೆ” . ಅವರು ಹಾಗೇ ಹೇಳಿದ್ದು ಕ್ರಾಂತಿಕಾರಿ ಭಗತ್ ಸಿಂಗ್ ಮತ್ತು ಸಂಗಡಿಗರು ಬ್ರಿಟಿಶ್ ಕೈದಿಗಳಂತೆ ಭಾರತೀಯ ಕೈದಿಗಳಿಗೂ ಜೈಲಿನಲ್ಲಿ ಸಮಾನ ಹಕ್ಕು ನೀಡುವಂತೆ ಆಗ್ರಹಿಸಿ ನಡೆಸುತ್ತಿದ್ದ ಹೋರಾಟವನ್ನ ಬಹಿರಂಗವಾಗಿ ಬೆಂಬಲಿಸಿ.ಆಗಲೂ ಸಹ ಕಾಂಗ್ರೆಸ್ಸ್ ಭಗತ್ ಸಿಂಗ್ ಅವರ ಉಪವಾಸದ ಹೋರಾಟದ ಬಗ್ಗೆ ಈಗ ಅಣ್ಣಾ ಅವರ ಹೋರಾಟದ ವಿರುದ್ಧ ಇರುವಂತೆಯೆ ಇತ್ತು. ಅದಿರಲಿ, ಈ ಹೋರಾಟ ನಡೆದಿದ್ದು ಬರೋಬ್ಬರಿ ೬೩ ದಿನಗಳ ಕಾಲ! ಕಡೆಗೂ ಭಗತ್ ಸಿಂಗ್ ಮತ್ತವರ ಗೆಳೆಯರ ಎದುರು ಬ್ರಿಟಿಷ್ ಸರ್ಕಾರ ಮಂಡಿಯೂರಲೇ ಬೇಕಾಯಿತು,ಆದರೆ ಅಷ್ಟರೊಳಗಾಗಲೇ ನಾವು ’ಜತೀನ್ ದಾ’ ಅವರನ್ನ ಕಳೆದುಕೊಂಡಾಗಿತ್ತು 😦
ಸತ್ಯೇಂದ್ರನಾಥ್ ಬೋಸ್ – Another Forgotten Hero…
– ಭೀಮ ಸೇನ್ ಪುರೋಹಿತ್
ನಮ್ಮ ದೇಶದ ಸ್ವಾತಂತ್ರ್ಯಹೋರಾಟಕ್ಕೆ ಅತಿಹೆಚ್ಚು ಹಾಗು ಪ್ರಖರ ಕೊಡುಗೆಗಳನ್ನು ನೀಡಿದ ಯಶಸ್ಸು ‘ಪಶ್ಚಿಮ ಬಂಗಾಳ’ ರಾಜ್ಯಕ್ಕೆ ಸಲ್ಲುತ್ತದೆ. ಆ ಬಂಗಾಳದ ಮತ್ತೊಂದು ಹುಲಿಯೇ “ಸತ್ಯೇಂದ್ರನಾಥ್ ಬೋಸ್”. ಇವನ ಇಡೀ ಕುಟುಂಬವೇ ಸ್ವಾತಂತ್ರ್ಯಹೋರಾಟದಲ್ಲಿ ಭಾಗಿಯಾಗಿತ್ತು. ಅವನ ತಂದೆ ‘ರಾಜನಾರಾಯಣ ಬೋಸ್’, ಸಹೋದರರಾದ ‘ಜ್ಞಾನೇಂದ್ರನಾಥ್ ಬೋಸ್’,’ಭೂಪೆಂದ್ರನಾಥ್ ಬೋಸ್’,ಎಲ್ಲರೂ ಸ್ವಾತಂತ್ರ್ಯ ಹೋರಾಟಗಾರರೆ.. ಮಿಡ್ನಾಪುರ್ ಜಿಲ್ಲೆಯಲ್ಲಿ ಜನಿಸಿದ ಸತ್ಯೇನ್, ಓದಿನಲ್ಲಿ ಜಾಣ. ಬಿ.ಎ ತನಕ ಓದಿದರೂ, ಮುಂದೆ ಓದಲಾಗಲಿಲ್ಲ..ಇನ್ನೊಂದು ವಿಶೇಷ ಅಂದ್ರೆ, ಈ ಸತ್ಯೇಂದ್ರನಾಥ್, ಶ್ರೀ ಅರವಿಂದ್ ಘೋಶರಿಗೆ ಸಂಬಂಧಿ…
“ಅಲಿಪುರ ಬಾಂಬ್ ಪ್ರಕರಣ” ಮತ್ತು “ಮಾಣಿಕ್ ತೊಲಾ ಗಾರ್ಡನ್ ಬಾಂಬ್ ಪ್ರಕರಣ”, ಈ ಎರಡು ಪ್ರಕರಣಗಳೂ, ಸ್ವಾತಂತ್ರ್ಯಹೋರಾಟದ ಸಮಯದಲ್ಲಿ, ಬಂಗಾಳ ಪ್ರಾಂತದಲ್ಲಿ ನಡೆದ ಬಹುದೊಡ್ಡ ಬ್ರಿಟಿಶ್ ವಿರೋಧಿ ಕಾರ್ಯಗಳು.. ಇವೆರಡರ ಹಿಂದೆ ಇದ್ದಿದ್ದು ಬಂಗಾಳದ “ಅನುಶೀಲನ ಸಮಿತಿ” ಹಾಗು “ಯುಗಾಂತರ ಸಮಿತಿ”ಯ ಕ್ರಾಂತಿಕಾರಿಗಳು, ಹಾಗು ಈ ಕ್ರಾಂತಿಕಾರಿಗಳನ್ನ ಪ್ರೆರೆಪಿಸಿದವ್ರು, ಮಹಾನ್ ರಾಷ್ಟ್ರವಾದಿ ( ನಾನಂತೂ ಅವರನ್ನ ‘ಮಹರ್ಷಿ’ ಅಂತಾನೆ ಕರೆಯೋದು ) ಶ್ರೀ ಅರವಿಂದ್ ಘೋಷ್…. ಈ ಎರಡು ಪ್ರಕರಣಗಳಾದ ಮೇಲೆ ಬ್ರಿಟಿಷರು ಎಚ್ಚೆತ್ತು ತನಿಖೆ ಶುರು ಮಾಡಿದ್ರು.. ಎರಡರಲ್ಲಿಯೂ ಬಳಸಲಾದ ಬಾಂಬ್ ಗಳು ಒಂದೇ ಥರದ್ದು ಅಂತ ಗೊತ್ತಾಯ್ತು. ಹೀಗಾಗಿ ಅನುಶೀಲನ ಸಮಿತಿ ಹಾಗು ಯುಗಾಂತರದ ಕೆಲವು ಕ್ರಾಂತಿಕಾರಿಗಳನ್ನ ಬಂಧಿಸಲಾಯ್ತು. ಜೊತೆಗೆ ಇವರೆಲ್ಲರ ಹಿಂದೆ ಇರೋರು ಅರವಿಂದ ಘೋಶರೆ ಅಂತ ಅಪಾದನೆ ಹೊರಿಸಿ ಅವರನ್ನೂ ಜೈಲಿಗೆ ಕಳಿಸಿದರು..ಇದು ಕ್ರಾಂತಿಕಾರಿಗಳಲ್ಲಿ ಬೇಸರ ಹಾಗು ಆಕ್ರೋಶವನ್ನ ಮೂಡಿಸ್ತು..
ಕೋರ್ಟ್ ನಲ್ಲಿ ವಿಚಾರಣೆ ಆರಂಭವಾಯ್ತು. ಬ್ರಿಟಿಷರು ಎಂದಿನಂತೆ ಕ್ರಾಂತಿಕಾರಿಗಳಿಗೆ ಚಿತ್ರಹಿಂಸೆ ಕೊಟ್ಟು ಬಾಯಿಬಿಡಿಸೋದಕ್ಕೆ ಪ್ರಯತ್ನಿಸಿದರು.. ಅದಕ್ಕೆ ಹೆದರಿ, ಬ್ರಿಟಿಷರ ಆಮಿಷಕ್ಕೆ ಸೋತು, ‘ನರೇನ್ ಗೋಸ್ವಾಮಿ’ ಅನ್ನೋನು approver ಆಗ್ಬಿಟ್ಟ.. ಭಾರತದ ಇತಿಹಾಸದುದ್ದಕ್ಕೂ ದೇಶಭಕ್ತರಷ್ಟೇ, ದೇಶದ್ರೋಹಿಗಳೂ ಇದಾರೆ..!!!
ಇತ್ತ ಕೋರ್ಟ್ ನಲ್ಲಿ ನರೇನ್ ಎಲ್ಲರ ವಿರುದ್ಧ ಸಾಕ್ಷಿ ಹೇಳೋದಕ್ಕೆ ಶುರು ಮಾಡಿದ. ಅಷ್ಟೇ ಆಗಿದ್ರೆ ಸುಮ್ನಿರ್ತಿದ್ರೆನೋ.. ಆದ್ರೆ ನರೇನ್, ಅರವಿಂದ ಘೋಷ್ ವಿರುದ್ಧನೂ ಸಾಕ್ಷಿ ಹೇಳೋದಕ್ಕೆ ತಯಾರಾದ.ಅಲ್ಲಿಗೆ ಕ್ರಾಂತಿಕಾರಗಳ ಸಿಟ್ಟು ಮಿತಿ ಮೀರಿತು..ಜೈಲಿನ ಒಳಗಿದ್ದ ‘ಸತ್ಯೇಂದ್ರನಾಥ್’ ಹಾಗು ಅವನ ಗೆಳೆಯ ‘ಕನ್ನಯ್ಯಲಾಲ್ ದತ್ತ’ ಇಬ್ರೂ ಸೇರಿ ಆ ದ್ರೋಹಿ ನರೇನ್ ಸಂಹಾರಕ್ಕೆ ಪ್ಲಾನ್ ಹಾಕಿದರು…
ಕಾಂಗ್ರೆಸ್ಸಿನ ದೇವರು ಮತ್ತು ಪೂಜಾರಿಗಳು..!
– ಸಚಿನ್.ಕೆ
ಯುಪಿಎ ಒಕ್ಕೂಟದ ಅಧ್ಯಕ್ಷರು ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಆದ ಶ್ರೀಮತಿ ಸೋನಿಯ ಗಾಂಧಿ ಸರ್ವೈಕಲ್ ಕ್ಯಾನ್ಸರ್ ನಿಂದ ಬಳಲುತಿದ್ದು ಅಮೆರಿಕದ ಪ್ರಖ್ಯಾತ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಷಯ ಎಲ್ಲರಿಗೂ ಗೊತ್ತಿರುವಂತಹದ್ದು. ಅವರು ಬೇಗ ಗುಣಮುಖರಾಗಲಿ ಎಂದು ದೇಶದ ಬಹುತೇಕ ಜನರು ದೇವರಲ್ಲಿ ಪ್ರಾರ್ಥಿಸುತಿದ್ದಾರೆ. ನಾವು ಸಹ ಅವರು ಶೀಘ್ರ ಗುಣಮುಖರಾಗಲಿ ಎಂದು ಆಶಿಸುತ್ತೇವೆ.
ಇಂದು ಮತ್ತು ಮೊನ್ನೆಯ ಕೆಲ ಮುಖ್ಯ ಘಟನೆಗಳನ್ನು ನಾನು ಇಲ್ಲಿ ಪ್ರಸ್ತಾಪಿಸಬೇಕೆಂದಿದ್ದೇನೆ.
ಬಳ್ಳಾರಿಯಲ್ಲಿ ಪ್ರತಿಪಕ್ಷದ ಮುಖಂಡರಾದ ಶ್ರೀ ಸಿದ್ದರಾಮಯ್ಯ ನವರು ಶ್ರೀ ದುರ್ಗಮ್ಮ ದೇವಸ್ಥಾನದಲ್ಲಿ ೧೦೧ ತೆಂಗಿನಕಾಯಿ ಹೊಡೆದು ಮೇಡಂ ಬೇಗ ಗುಣಮುಖರಾಗಲಿಎಂದು ಪೂಜೆ ಸಲ್ಲಿಸಿದರು
ಕಾರ್ಯಕರ್ತ
– ಪವನ್ ಪರುಪತ್ತೆದಾರ
ಊರಲೆಲ್ಲ ತಲೆಯ ಮೇಲೆ ಹಾರ್ನ್ ಹೊತ್ತ ಆಟೋ ಒಂದೇ ಡೈಲಾಗ್ ಅನ್ನು ಹೇಳುತ್ತಾ ತಿರುಗಾಡುತಿತ್ತು,ಮರಯದಿರಿ ಮತ ಬಾಂಧವರೆ ಮರೆತು ನಿರಾಶರಾಗದಿರಿ, ಈಗ ಮರೆತು ಮುಂದೆ ಯಾಕಾದರೂ ಇಂತಹ ತಪ್ಪು ಮಾಡಿದೆನೋ ಎಂದು ಮರುಗದಿರಿ, ನಿಮ್ಮ ಮತವನ್ನು ನಮ್ಮ ಕಮಲಣ್ಣನ ಪಾರ್ಟಿಯ ಅಭ್ಯರ್ಥಿಯಾದಂಥ ಬಡವರ ಬಂಧು ಧಿಮಂತ ನಾಯಕ ಶ್ರೀಮಾನ್ ಸಿದ್ದಣ್ಣ ನವರಿಗೆ ನೀಡಿ, ಸಿದ್ದಣ್ಣ ನವರಿಗೆ ಮತ ನಮ್ಮೂರಿನ ಜನತೆಗೆ ಹಿತ ಇದನ್ನೇ ಮತ್ತೆ ಮತ್ತೆ ಅರಚುತ್ತ ಸಾಗುತಿದ್ದ ಆಟೋ ಒಳಗಿಂದ ಸುರೇಶ ಸಿದ್ದಣ್ಣನ ಹೆಸರಿನಲ್ಲಿರುವಂತಹ ಒಂದು pamplet ಅನ್ನು ಹಂಚುತಿದ್ದ, ಅದಕ್ಕಾಗಿ ಮಕ್ಕಳು ಆ ಆಟೋ ಹಿಂದೆಯೇ ಓಡುತ್ತಾ ಇದ್ದರು………
ಅಂಗಡಿ ಬೀದಿಯಲ್ಲಿ ಅಬ್ಧುಲ್ಲ ತನ್ನ ಒಂದು ಸಣ್ಣ ಗುಂಪನ್ನು ಕಟ್ಟಿಕೊಂಡು ಅಲ್ಲಿರುವ ಕರೆಂಟ್ ಕಂಬಗಳನೆಲ್ಲ ನೋಡುತ್ತಾ, ಅರೆ ಇಸ್ಕಿ ಕ್ಯಾ ರೆ ಕಮಲಣ್ಣನ ಪಾರ್ಟಿ ಅವ್ರು ಆಗಲೇ banner ಗೆ ಕಟ್ಬಿಟ್ಟಿ ಅವ್ರೆ. ನಮ್ದುಕೆ ಇನ್ನು ಎಲ್ಡು ಅಡಿ ಮೇಲಕ್ಕೆ ಕಟ್ಟೋಣ ಅಂತ ತನ್ನ ಶಿಷ್ಯನ್ನ ಕರೆದ, ಹೇ ಪಟ್ಟೆ ಅರೆ ಇದರ್ ಅಂತ ಕಂಬ ಹತ್ತಿಸಿ ಹಸ್ತಣ್ಣನ ಪಾರ್ಟಿ ಕಡೆ ಇಂದ ನಿಂತಿದ್ದ ಸನಾಉಲ್ಲ ನ ಫೋಟೋ ಸಮೇತ ಇರೋ ಹಸ್ತಣ್ಣನ ಪಾರ್ಟಿಗೆ ಮತ ನಮ್ಮೂರಿನ ಜನಕ್ಕೆ ಹಿತ. ಅಂತ ಇರೋ banner ಗಳನ್ನ ಕಟ್ಟಿಸ್ತ ಇದ್ದ. ಅಷ್ಟರಲ್ಲೇ ಅಲ್ಲಿದ್ದ ಕೆಲವರು ಗುಂಪು ಸೇರಿ ಇವರು ಮಾಡುತ್ತಾ ಇದ್ದ ಕೆಲಸವನ್ನು ಗಮನಿಸ್ತ ಇದ್ರು, ಅವರನ್ನ ನೋಡಿದ ಅಬ್ದುಲ್ಲ ಹೇ ಅಣ್ಣ ನಮಸ್ಕಾರ ನಮ್ಮ ನೆಚ್ಚಿನ ನಾಯಕ, ಬಡವರ್ಗೆ ಸಹಾಯ ಮಾಡೋದ್ರಾಗ ಎತ್ತಿದ ಕೈ ನಮ್ ಸನಾಉಲ್ಲಾದು. ನಿಮ್ಮದು ಎಲ್ಲರ್ದುಗೆ ಓಟು ನಮ್ದು ಹಸ್ತಣ್ಣ ಪಾರ್ಟಿ ಗೆ ಹಾಕಿ ಅಂತ ಭಾಷಣ ಮಾಡಿದ. ಅದೇ ಬೀದಿಲಿ ಹಾದು ಹೋಗುತ್ತಿದ್ದ ಕಮಲಣ್ಣನ ಪಾರ್ಟಿಯ ಒಬ್ಬ ವ್ಯಕ್ತಿ ಇದನ್ನ ನೋಡಿ ಮಖ ಕೆಂಪಗ ಮಾಡಿಕೊಂಡು ಹೋದ……. ಮತ್ತಷ್ಟು ಓದು 
ಸಂಸ್ಕೃತಿ ಸಂಕಥನ – ೪
– ರಮಾನಂದ ಐನಕೈ
ಧರ್ಮದ ಮೈಮೇಲೆ – ರಿಲಿಜನ್ನಿನ ಅಂಗಿ
ವಿಪರ್ಯಾಸ ನೋಡಿ. ಒಂದು ಕಡೆ ‘ಹಿಂದೂ ಧರ್ಮ’ ಅನ್ನುತ್ತೇವೆ. ಇನ್ನೊಂದು ಕಡೆ ಅದನ್ನೇ ‘ಹಿಂದೂ ರಿಲಿಜನ್’ ಅನ್ನುತ್ತೇವೆ. ಯಾವುದೇ ಭಾರತೀಯರನ್ನು ಕೇಳಿದರೆ ಇವೆರಡರ ನಡುವೆ ವ್ಯತ್ಯಾಸವೇ ಇಲ್ಲ ಎಂದು ಆತ್ಮವಿಶ್ವಾಸದಿಂದ ಪ್ರತಿಪಾದಿಸುತ್ತಾರೆ. ಇವೆರಡರ ವ್ಯತ್ಯಾಸ ತಿಳಿಯದಿದ್ದದ್ದೇ ಭಾರತೀಯರ ಮುಖ್ಯ ಮಾನಸಿಕ ತೊಂದರೆ. ಹಾಗಾಗೇ ನಿತ್ಯ ಗೊಂದಲದಲ್ಲಿ ಒದ್ದಾಡುತ್ತೇವೆ.
‘ರಾಜಕೀಯದಲ್ಲಿ ಧರ್ಮ ಇರಬಾರದು’, ‘ಸಾಹಿತ್ಯದಲ್ಲಿ ಧರ್ಮ ಬರಬಾರದು’, ‘ಕೋಮು ಗಲಭೆಗೆ ಧರ್ಮ ಕಾರಣ’ – ಇತ್ಯಾದಿ ಹೇಳಿಕೆ ಕೇಳಿದಾಗ ನಮಗೆ ಪುನಃ ಗೊಂದಲ. ಏಕೆಂದರೆ ಈ ಹೇಳಿಕೆಯನ್ನು ತೇಲಿ ಬಿಡುವವರು ಬುದ್ಧಿಜೀವಿಗಳು. ಅವರು ರಿಲಿಜನ್ ಎಂಬ ಪರಿಕಲ್ಪನೆಯ ಮೇಲೆ ಪ್ರಜ್ಞಾಪೂರ್ವಕವಾಗಿ ವಾದಿಸುತ್ತಾರೆ. ಆದರೆ ನಾವು ಸಾಮಾನ್ಯ ನಾಗರಿಕರು ಧರ್ಮ ಎಂಬ ಅರ್ಥದ ನೆಲೆಯಲ್ಲಿ ಅದನ್ನು ಗ್ರಹಿಸುತ್ತೇವೆ. ಹಾಗಾಗಿ ಎಲ್ಲವೂ ನಮ್ಮ ಮನಸ್ಸಿಗೆ ಅರ್ಧಸತ್ಯ ಅನಿಸುತ್ತದೆ. ಧರ್ಮ ಬೇಡ ಅಂದರೆ ಪ್ರತಿಯೊಂದಕ್ಕೂ ಅದರದ್ದೇ ಆದ ಕರ್ತವ್ಯ ಬೇಡವೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅಂದರೆ ಧರ್ಮ ಹಾಗೂ ರಿಲಿಜನ್ ಮಧ್ಯೆ ವ್ಯತ್ಯಾಸ ಇರಲೇಬೇಕೆಂಬುದು ನಮ್ಮ ಗೃಹಿಕೆಗೆ ಸೂಚಿಸುತ್ತದೆ. ಎರಡೂ ಒಂದೇ ಆಗಿದ್ದರೆ ಈ ರೀತಿ ಗೊಂದಲ ಏಕೆ ಸೃಷ್ಟಿಯಾಗುತ್ತದೆ? ಇದೇ ಅರ್ಥವಾಗದ ಒಗಟು.
ಸಂಸ್ಕೃತಿ ಸಂಕಥನ – ೩
– ರಮಾನಂದ ಐನಕೈ
ವಿದ್ಯಾವಂತರೆನಿಸಿಕೊಂಡ ನಮಗೆಲ್ಲ ಒಂದು ತೊಂದರೆ ಇದೆ. ಅದೇನೆಂದರೆ ನಮ್ಮ ಜೀವನಶೈಲಿಯೊಂದಿಗೆ ಅನಿವಾರ್ಯವಾಗಿ ಪಾಲಿಸಲೇಬೇಕಾದ ಸಂಪ್ರದಾಯಗಳು. ಇದನ್ನು ಪಾಲಿಸದಿದ್ದರೆ ನಾವು ಸಮುದಾಯದಿಂದ ಹೊರಗುಳಿಯತ್ತೇವೆ. ಕೆಲವೊಮ್ಮೆ ಮಾನಸಿಕವಾಗಿ ನಮ್ಮೊಳಗೇ ಅಭದ್ರತೆಗೊಳಗಾಗುತ್ತೇವೆ. ಹಾಗಂತ ಸಂಪ್ರದಾಯವನ್ನು ಪಾಲಿಸಲು ನಮ್ಮ ವೈಚಾರಿಕತೆ ಅನುವು ಮಾಡಿಕೊಡುವುದಿಲ್ಲ. ನಾವು ಭೌತಿಕವಾಗಿ ಬದುಕುತ್ತಿರುವುದು ಸಂಪ್ರದಾಯದ ಸಮಾಜದಲ್ಲಿ. ಮಾನಸಿಕವಾಗಿ ಬದುಕುತ್ತಿರುಉವದು ವೈಚಾರಿಕತೆಯೆಂಬ ಭ್ರಮೆಯಲ್ಲಿ. ಯಾಕೆ ಹೀಗಾಗುತ್ತಿದೆ? ನಮ್ಮ ಸಂಪ್ರದಾಯಗಳಲ್ಲಿ ನಮಗೇಕೆ ಅರ್ಥ ಕಾಣುತ್ತಿಲ್ಲ? ಅಥವಾ ಅರ್ಥ ಹುಡುಕುವ ಹಠವಾದರೂ ಏಕೆ? ಇವುಗಳಿಗೆಲ್ಲ ಅರ್ಥ ಇರಲೇಬೇಕೆಂದಿದೆಯೇ? ಸ್ವತಂತ್ರ ಭಾರತದ 60 ವರ್ಷ ಕಳೆದರೂ ಇಂಥ ಗೊಂದಲಗಳಿಂದ ಮುಕ್ತರಾಗದೇ ಇದ್ದದ್ದು ನಿಜಕ್ಕೂ ಗಂಭೀರವಾಸ್ತವ.
ಸಂಪ್ರದಾಯ ಅಂದರೆ ತಲೆತಲಾಂತರದಿಂದ ನಡೆಸಿಕೊಂಡು ಬಂದ ಆಚರಣೆಗಳು. ನಮ್ಮ ಹಿರಿಯರು ಅವರ ಹಿರಿಯರನ್ನು ಅನುಕರಿಸಿದರು. ಅವರ ಹಿರಿಯರು ಅವರ ಹಿರಿಯರನ್ನು… ಹೀಗೆ ಯಾಕೆ ಆಚರಿಸಬೇಕೆಂದು ಯಾರೂ ಯಾರನ್ನೂ ಪ್ರಸ್ನಿಸಲಿಲ್ಲ. ಪ್ರಶ್ನಿಸುವ ಜಿಜ್ಞಾಸ ಹುಟ್ಟಲೇ ಇಲ್ಲ. ಏಕೆಂದರೆ ಎಲ್ಲರೂ ಅದು ತಮ್ಮದು ಎಂದು ನಂಬಿದ್ದರು. ಪ್ರೀತಿಸುತ್ತಿದ್ದರು. ಸ್ವಾತಂತ್ರ್ಯಾನಂತರ ನಮಗೆ ಸಂಪ್ರದಾಯಗಳ ಕುರಿತು ಹೆಚ್ಚು ಪ್ರಶ್ನೆಗಳು ಏಳಲು ಶುರುವಾಗಿವೆ. ಅದಕ್ಕೆ ಕಾರಣ ನಾವು ಪ್ರಭಾವಿಸಿಕೊಂಡ ಎರವಲು ವೈಚಾರಿಕತೆ ಅಥವಾ ವಿಚಾರವಾದ. ಅದು ನಮ್ಮ ಶಿಕ್ಷಣ ಹಾಗೂ ಓದುತ್ತಿರುವ ಸಮಾಜವಿಜ್ಞಾನಗಳಿಂದ ಸೃಷ್ಟಿಯಾದದ್ದು. ಪರೋಕ್ಷವಾಗಿ ಹೇಳಬಹುದಾದರೆ ಪಾಶ್ಚಾತ್ಯರು ಹೇಳಿಕೊಟ್ಟ ಕಂಠಪಾಠ. ಅವರ ಪ್ರಕಾರ ವೈಚಾರಿಕತೆಯತ್ತ ಸಾಗುವುದೇ ಪ್ರಗತಿ ಅಥವಾ ನಾಗರಿಕತೆಯ ಲಕ್ಷಣ. ಭಾರತೀಯ ಸಂಪ್ರದಾಯಗಳು (ಹಿಂದೂ ರಿಲಿಜನ್) ಅವೈಚಾರಿಕವಾದ್ದರಿಂದ ಭಾರತ ಹಿಂದುಳಿದ ದೇಶ. ಇಲ್ಲಿಯ ಜನ ಮೂಢರು ಮತ್ತು ದಡ್ಡರು. ಅರ್ಥವಿಲ್ಲದ ಆಚರಣೆಗಳನ್ನು ಮಾಡುವವರು ಎಂಬಿತ್ಯಾದಿ. ಇದೇ ನಿಜ ಎಂದು ನಾವೆಲ್ಲ ನಂಬಿಕೊಂಡಿದ್ದರಿಂದ ನಮ್ಮ ಸಂಪ್ರದಾಯಗಳು ನಮಗೆ ಅರ್ಥಹೀನ ಅನಿಸುತ್ತದೆ.





