ಪ್ರತಿಯೊಬ್ಬ ವ್ಯಕ್ತಿಯೂ ಅದ್ವಿತೀಯ
– ಎ.ವಿ.ಜಿ ರಾವ್
ಪ್ರತಿಯೊಬ್ಬ ವ್ಯಕ್ತಿಯೂ ಅದ್ವಿತೀಯ. ಎಲ್ಲ ಗುಣಲಕ್ಷಣಗಳನ್ನು ಒಟ್ಟಾರೆಯಾಗಿ ಪರಿಗಣಿಸಿದರೆ ಈ ಭೂಮಿಯ ಮೇಲೆ ಒಬ್ಬ ವ್ಯಕ್ತಿಗೆ ಪ್ರತಿಶತ ೧೦೦ ರಷ್ಟು ಸರಿಸಾಟಿಯಗಬಲ್ಲ ಇನ್ನೊಬ್ಬ ವ್ಯಕ್ತಿ ಇರುವುದಿಲ್ಲ. ಏಕಾಂಡಜ ಯಮಳರ ನಡುವೆ (ಐಡೆಂಟಿಕಲ್ ಟ್ವಿನ್ಸ್-ಇವರ ಜೈವಿಕ ಆನುವಂಶೀಯತೆ ಒಂದೇ ಆಗಿರುತ್ತದೆ) ಕೂಡ ಪ್ರತಿಶತ ೧೦೦ರಷ್ಟು ಸಮತೆ ಇರುವುದಿಲ್ಲ. ಅಂದ ಮಾತ್ರಕ್ಕೆ, ಮಾನವರಲ್ಲಿ ಸಮತೆ ಇಲ್ಲವೇ ಇಲ್ಲ ಎಂದು ತೀರ್ಮಾನಿಸ ಕೂಡದು. ಸಮತೆ ಮತ್ತು ವಿವಿಧತೆ ಇವೆರಡನ್ನೂ ಮಾನವರಲ್ಲಿ ಕಾಣಬಹುದು. ಯಾವದೇ ಒಂದು ಜೀವಿಜಾತಿಯನ್ನು ವೀಕ್ಷಿಸಿದರೂ ಸಾರ್ವತ್ರಿಕ ಲಕ್ಷಣಗಳಲ್ಲಿ ಸಮತೆಯೂ ನಿರ್ದಿಷ್ಟ ಲಕ್ಷಣಗಳಲ್ಲಿ ವಿವಿಧತೆಯೂ ಇರುವುದು ಗೋಚರಿಸುತ್ತದೆ. ಅಳತೆ ಮಾಡಬಹುದಾದ ಯಾವುದೇ ಮಾನವ ಲಕ್ಷಣವನ್ನು ಅಧ್ಯಯಿಸಿದರೂ ಈ ನಿಸರ್ಗ ನಿಯಮ ಸ್ಪಷ್ಟವಾಗುತ್ತದೆ. ಜೈವಿಕ ಆನುವಂಶೀಯತೆ ಮತ್ತು ಪರಿಸರಗಳ ನಡುವಿನ ಅನ್ಯೋನ್ಯಕ್ರಿಯೆಯೇ ಈ ವೈಚಿತ್ರ್ಯಕ್ಕೆ ಕಾರಣ.
ಸಹೋದರ ಸಹೋದರಿಯರ ಜನ್ಮದಾತೃಗಳು ಉಭಯಸಾಮಾನ್ಯರಾಗಿದ್ದರೂ ಅವರ ಜೈವಿಕ ಆನುವಂಶೀಯತೆ ಒಂದೇ ಆಗಿರುವುದಿಲ್ಲ. ವಂಶಪಾರಂಪರ್ಯವಾಗಿ ಬರಬಹುದಾದ ಗುಣಗಳ ವಾಹಕಗಳು ವಂಶವಾಹಿ (ಜೀನ್)ಗಳು ಎಂಬ ತಥ್ಯ ನಿಮಗೆ ತಿಳಿದಿದೆ. ಏಕಾಂಡಜ ಯಮಳರನ್ನು ಹೊರತುಪಡಿಸಿದರೆ ಬೇರೆ ಯಾವ ಇಬ್ಬರಲ್ಲಿಯೂ (ಅವರಿಬ್ಬರೂ ಒಂದೇ ಜನ್ಮದಾತೃಗಳಿಂದ ತಮ್ಮ ವಂಶವಾಹಿಗಳನ್ನು ಪಡೆದಿದ್ದರೂ) ಇವುಗಳು ಒಂದೇ ಆಗಿರುವುದು ಸಾಧ್ಯವೇ ಇಲ್ಲ. ಅಂದ ಮೇಲೆ, ಪ್ರತಿಯೊಬ್ಬ ವ್ಯಕ್ತಿಯ ಜೈವಿಕ ಆನುವಂಶೀಯತೆ ಅದ್ವಿತೀಯ ಅನ್ನುವುದರಲ್ಲಿ ಭಿನ್ನಾಭಿಪ್ರಾಯವಿಲ್ಲ. ವ್ಯಕ್ತಿಗಳ ಅದ್ವಿತೀಯತೆಗೆ ಇದು ಒಂದು ಕಾರಣ
ಕಂದಮ್ಮನಿಗೆ ಎಲ್ಲವೂ ಅರ್ಥವಾಗುತ್ತೆ!
– ವಿಷ್ಣುಪ್ರಿಯ
ಮಕ್ಕಳು ಮೂರೇ ತಿಂಗಳು ಪ್ರಾಯವಾಗಿದ್ದಾಗಲೇ ಅಮ್ಮನ ಮಾತುಗಳನ್ನು ಅರ್ಥ ಮಾಡಿಕೊಳ್ಳುವ ಸಾಮಥ್ರ್ಯ ಹೊಂದಿರುತ್ತವಂತೆ. ಒಂದು ಜೀವ ತಾಯಗರ್ಭದಲ್ಲಿ ಮೊಳಕೆಯೊಡೆಯಬೇಕು
ಎಂದಾದರೆ ಅಲ್ಲಿ ತಂದೆಯ ರೇತಸ್ಸು (ವೀರ್ಯ) ಮತ್ತು ತಾಯಿ ಆತ್ಮಭೂಯದ (ಅಂಡಾಣು ಎನ್ನಬಹುದು) ಮಿಲನವಾಗಬೇಕು. ಗರ್ಭದಲ್ಲಿರುವ ಮಗುವಿನ ನಾಭಿಯಿಂದ ಹೊರಟಂಥ ಕರುಳಬಳ್ಳಿ ತಾಯಿಯ ಜೊತೆಗೆ ನಂಟು ಬೆಳೆಸುತ್ತದೆ. ತಾಯಿಯ ಆತ್ಮಭೂಯ ಮತ್ತು ತಂದೆಯ ರೇತಸ್ಸಿನಲ್ಲಿ ಹಲವು ತಲೆಮಾರುಗಳ ವಂಶವಾಹಿಗಳು ಹರಿಯುವುದರಿಂದ ಸಂಬಂಧ ಬಹಳ ದೂರದವರೆಗೆ ವಿಸ್ತರಿಸುತ್ತದೆ.
ಮಕ್ಕಳ ಗ್ರಹಣಶಕ್ತಿ ಎಷ್ಟಿರುತ್ತದೆ? ಯಾವಾಗಿನಿಂದ ಮಕ್ಕಳಿಗೆ ಈ ಶಕ್ತಿ ಲಭ್ಯವಾಗುತ್ತದೆ? ಎಂಬೆಲ್ಲ ವಿಚಾರಗಳ ಬಗ್ಗೆ ಹಲವು ವರ್ಷಗಳಿಂದ ಜಿಜ್ಞಾಸೆ ಇದೆ. ಮಕ್ಕಳಿಗೆ ಬುದ್ಧಿ ಬರುವಾಗ ಮೂರ್ನಾಲ್ಕು ವರ್ಷ ಆಗುತ್ತೆ. ಅಲ್ಲಿಯವರೆಗೆ ಆವರಿಗೆ ಏನೂ ಅರ್ಥ ಆಗಲ್ಲ ಅಂತ ಒಂದು ವಾದ ಹೇಳಿದರೆ, ನಮ್ಮ ಪುರಾಣಗಳು ಮಗು ಅಮ್ಮನ ಗರ್ಭದಲ್ಲಿರುವಾಗಲೇ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತದೆ ಎಂದು ಹೇಳುತ್ತವೆ. ಹೀಗಿರುವಾಗ ಯಾವುದು ಸರಿ ಎಂಬ ಗೊಂದಲವೂ ಕಾಡುವುದು ಸಹಜ. ಪುರಾಣಗಳನ್ನು, ವೇದ, ಉಪನಿಷತ್ತುಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದವರು, ಸಾಧ್ಯವಿದ್ದರೂ ಅವುಗಳತ್ತ ಕಣ್ಣೆತ್ತಿಯೂ ನೋಡದವರು, ವೇದ, ಉಪನಿಷತ್ತುಗಳು, ಪುರಾಣಗಳೆಂದರೆ ಕಟ್ಟುಕಥೆಗಳೆಂದು ಭಾವಿಸುವವರು ಮೊದಲಿನ ವಾದವನ್ನೇ ಒಪ್ಪಬಹುದು. ವೇದ, ಉಪನಿಷತ್ತುಗಳು ಮತ್ತು ಪುರಾಣಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡುವವರು ಖಂಡಿತಕ್ಕೂ ಮೊದಲ ವಾದನನ್ನು ಸಾರಾಸಗಟು ತಳ್ಳಿಹಾಕುತ್ತಾರೆ.





