ರಿಯಾಲಿಟಿ ಷೋ ಎಂಬ ಹೆಸರಲ್ಲಿ ನಡೆಯುವ ಅಪಸವ್ಯಗಳು..!
– ಶ್ರೀಧರ ಭಟ್ಟ, ಹೊನ್ನಾವರ
‘ಹಳ್ಳಿ ಹೈದ ಪ್ಯಾಟೆಗ್ ಬಂದ’ ಎಂಬ ರಿಯಾಲಿಟಿ ಷೋ ಒಂದರಲ್ಲಿ ನಮ್ಮ ಹೊನ್ನಾವರದ ಯುವಕರೊಬ್ಬರು ಭಾಗವಹಿಸಿದ್ದಾರೆ ಎಂಬ ವಿಷಯವನ್ನು ಕೇಳಿದಾಗ ನನಗೆ ನಂಬಲು ಸಾಧ್ಯವೇ ಆಗಲಿಲ್ಲ. ಶ್ರೀರಾಮ ಎಂಬ ಆ ಯುವಕ, ಹೊನ್ನಾವರ ಪಟ್ಟಣದ ಭಾಗವಾಗಿರುವ ರಾಯಲಕೇರಿಯವರು, ಸುತ್ತಮುತ್ತಲಿನ ಊರುಗಳಲ್ಲಿ ಹೆಸರುವಾಸಿಯಾಗಿರುವ ಅಶೋಕ ಜಾದೂಗಾರ ಅವರ ಮಗ ಎನ್ನುವ ಸಂಗತಿಯನ್ನು ಅರಗಿಸಿಕೊಳ್ಳುವುದಕ್ಕೂ ಆಗಲಿಲ್ಲ. ಸುವರ್ಣ ವಾಹಿನಿಯವರ ಕಣ್ಣಿಗೆ ನಮ್ಮ ಪಟ್ಟಣ ಅದ್ಯಾವ ಕೋನದಿಂದ ಹಳ್ಳಿಯಂತೆ ಕಂಡಿತೋ? ತಂದೆಯಂತೆ ಜಾದೂಗಾರರೇ ಆಗಿರುವ ಶ್ರೀರಾಮ ಅವರಿಗೆ ತಾನು ಹಳ್ಳಿ ಹೈದನಾಗಬೇಕು ಎಂದು ಏಕೆ ಅನಿಸಿತೋ? ಗೊತ್ತಿಲ್ಲ. ಮತ್ತಷ್ಟು ಓದು 
ಕನ್ನಡಮ್ಮನ ಹೆಮ್ಮೆಯ ಪುತ್ರನೂ ಅಣ್ಣಾವರ ಮಗನೂ
– ಜಿ.ವಿ ಜಯಶ್ರೀ
ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಚಂದ್ರ ಮೇಲೆ ಬಂದ
ಮಿನುಗು ತಾರೆ ಅಂದ ನೋಡು ಎಂಥ ಚಂದ
ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ,
ಇದು ಎಂಬತ್ತರ ದಶಕದ ಹಾಡು. ತುಂಬಾ ಇಷ್ಟ ಪಟ್ಟು ಈಗಲೋ ಕೇಳುವಂತಹ ಸುಂದರ ಗೀತೆ.ಈ ಚಿತ್ರದಲ್ಲಿ ನಟಿಸಿದ ಪುನೀತ್ ರಾಜ್ ಕುಮಾರ್ ನಟನೆಯಷ್ಟೇ ಮನಸೆಳೆದ ಸಂಗತಿ ಅಂದ್ರೆ ಅವರು ಹಾಡಿದ ಈ ಹಾಡು .
ಮೊದಲಿನಿಂದ ವೀಕ್ಷಕ ದೇವರ ಮನ ಸೆಳೆದ ಕಲಾವಿದ ಪುನೀತ್. ಅವರ ಅಣ್ಣಂದಿರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಖುದ್ದು ಪುನೀತ್ ವಿಷಯದಲ್ಲಿ ತೋರುವ ಅಭಿಮಾನ ಅಪಾರ.
ಈತನ ಬಗ್ಗೆ ತಮಗೆ ತುಂಬಾ ಹೆಮ್ಮೆ ಇದೆ. ಅಪ್ಪಾಜಿಯ ನಂತರ ಬಣ್ಣ ಹಚ್ಚಿದ (ಪೂರ್ಣಿಮಾ ಸಹ ಹಚ್ಚಿದ್ದಾರೆ ) ಪುನೀತ್ ತಮಗೆ ಮಾದರಿ ಎನ್ನುವ ಮಾತು ಹೇಳಿರುವುದು ಅವರು ತಮ್ಮನ ಮೇಲೆ ಇಟ್ಟಿರುವ ಪ್ರೀತಿಯನ್ನು ಎತ್ತಿ ತೋರುತ್ತದೆ.
ಶಿವಣ್ಣ ಜೀ ಕನ್ನಡ ವಾಹಿನಿಯಲ್ಲಿ ಕಾರ್ಯಕ್ರಮ ನಡೆಸಿ ಕೊಟ್ಟಾಗ ಅಪಾರ ಸಂಖ್ಯೆಯ ವೀಕ್ಷಾಕಾಭಿಮಾನ ಹೊಂದಿದ್ದರು.ಆ ಕಾರ್ಯಕ್ರಮದ ಮೂಲಕ ಹೆಚ್ಚು ಗೊತ್ತಾದರೂ ಶಿವಣ್ಣ. ಕಾರಣ ಇಷ್ಟೇ ಸಿನಿಮಾದಲ್ಲಿ ಗಿಣಿಗೆ ಕಲಿಸಿದ ಪಾಠದಂತೆ ಡೈಲಾಗ್ ಹೇಳುವ ಶಿವಣ್ಣನಿಗಿಂತ ತನ್ನ ಹೃದಯದಿಂದ ಮಾತನಾಡಿದ ಶಿವಣ್ಣ ಇಷ್ಟ ಆಗಿತ್ತು.. ಮಾತಲ್ಲಿ ಯಾವುದೇ ರೀತಿಯ ನಾಟಕೀಯತೆ, ಕಲಿತ ಮಾತು ಇರದೇ ಸಾಮಾನ್ಯ ಮನೆಕನ್ನಡ ಮಾತಾಡಿ , ತಮ್ಮ ಸರಳತೆ, ವಿಶೇಷ ವ್ಯಕ್ತಿತ್ವ್ದದಿಂದ ಗೆದ್ದಿದ್ದರು.




