ವಿಷಯದ ವಿವರಗಳಿಗೆ ದಾಟಿರಿ

Posts tagged ‘movie’

3
ಫೆಬ್ರ

ಪ್ರಪಾತ……ವಿಮಾನಯಾನ ಬಲುಪ್ರಾಚಿನ….!!!

 – ಫಿಲ್ಮಿ ಪವನ್

ವಿಮಾನ ಎಂದರೆ ಏನೋ ಅಚ್ಚರಿ, ರಾಮಾಯಣದಲ್ಲಿ ಪುಷ್ಪಕ ವಿಮಾನ ಇತ್ತಂತೆ. ಕಾಡಿಂದ ಸೀತೆಯನ್ನು ಅದರಲ್ಲೇ ರಾವಣ ಎತ್ಕೊಂದೋಗಿದ್ದಂತೆ. ಇವೆಲ್ಲ ಕೇಳ್ದಾಗ ನಮ್ಮೋರು ವಿದೆಶಿಯರಿಗಿಂತ ಮುಂಚೆಯೇ ವಿಮಾನ ಕಂಡುಹಿಡಿದಿದ್ರ ಅಂತ ಡೌಟ್ ಬರೋದು ಸಾಮಾನ್ಯ. ಇಂತಹ ಡೌಟ್ clear ಮಾಡೋ ಸಿನಿಮ ನೋಡೋ ಅವಕಾಶ ಈ ನಡುವೆ ಒದಗಿ ಬಂದಿತ್ತು.

ಹೋದವಾರ ಗಣರಾಜ್ಯೋತ್ಸವದ ಪ್ರಯುಕ್ತ ನಮ್ ಕಂಪನಿ ರಜೆ ಇತ್ತು. ಏನು ಮಾಡೋದು ಅಂತ ಯೋಚಿಸುತ್ತಿರುವಾಗಲೇ ನಮ್ಮ ನೆಂಟರೋಬ್ರು ಫೋನ್ ಮಾಡಿ, ಅವರು ಅಬಿನಯಿಸಿರೋ ಚಿತ್ರದ ಉಚಿತ ಪ್ರದರ್ಶನ ಇದೆ ಬಾ ಅಂತ ಕರೆದರು. ಬಿಟ್ಟಿಯಾಗಿ ಆಗೋಹಾಗಿದ್ರೆ 100 ರು ಕೆಲಸಕ್ಕೆ ಇನ್ನೂರು ರು ಖರ್ಚು ಮಾಡಕ್ಕು ತಯಾರು ಅಲ್ವೇ ನಾವು, ಸರಿ ಸರ್ ಬರ್ತೀನಿ ಅಡ್ರೆಸ್ ಕೊಡಿ ಅಂದೆ. ಸೀತ ಸರ್ಕಲ್ ಹತ್ರ ಯೋಗಶ್ರಿ ಆಶ್ರಮ ಸಿನಿಮ ಹೆಸರು ಪ್ರಪಾತ ಅಂದ್ರು. ನನಗೆ ಆ ಸಿನಿಮ ಬಗ್ಗೆ ಮೊದಲೇ ಸ್ವಲ್ಪ ಗೊತ್ತಿತ್ತು. ಥಿಯೇಟರ್ ಅಲ್ಲಿ ರಿಲೀಸ್ ಆಗಲಿ ಅಂತ ಕಾಯ್ತಿದ್ದೆ, ಆದ್ರೆ ಅಲ್ಲಿ ಹೋಗಿ ನೋಡಿದಾಗಲೇ ತಿಳಿದಿದ್ದು ಇದು ಪ್ರಪಾತದ ನೂರ ಎರಡನೇ ಶೋ ಅಂತ. ಅಷ್ಟು ಕಡೆ ಅದು ಸ್ಕ್ರೀನಿಂಗ್ ಆಗಿದೆ ಆದರೆ ಥಿಯೇಟರ್ ಅಲ್ಲಿ ರಿಲೀಸ್ ಆಗೋ ಯೋಗ ಮಾತ್ರ ಬಂದಿಲ್ಲ ಯಾಕೆ ಅಂತ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರೇ ಹೇಳ್ಬೇಕು. ಚಿತ್ರದ ನಿರ್ದೇಶಕ ಕನ್ನಡದ ಕಿರುತೆರೆ ಹಿರಿತೆರೆ ಮತ್ತು ಆಕಾಶವಾಣಿಗೆ ಬಹಳಷ್ಟು ಕೊಡುಗೆ ನಿದಿರುವಂತಹ ವಜ್ರ ಖಂಟದ ಶ್ರೀ ಸುಚೇಂದ್ರ ಪ್ರಸಾದರು. ಆ ದಿನ ಅಲ್ಲಿ ಪ್ರದರ್ಶನ ಹಮ್ಮಿಕೊಂದಿದ್ದವರು ಪ್ರೇರಣ ಟ್ರಸ್ಟ್ ಎಂಬ NGO ಅವರು ಬಡವರಿಗೆ ಉಚಿತ ಡಯಾಲಿಸಿಸ್ ಮಾಡಿಸುವ ಉತ್ತಮ ಕಾರ್ಯಕ್ಕೆ ಕೈ ಹಾಕಿದ್ದಾರೆ. ಮತ್ತಷ್ಟು ಓದು »