ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 19, 2010

6

‘ತೆರೆಮರೆಯ ರಾಜಕೀಯ ದೊಂಬರಾಟ, ಜನತೆಗೆ ಉಚಿತ ಮನೋರಂಜನೆ’

‍ನಿಲುಮೆ ಮೂಲಕ

ಕರುಣಾಕರ ಬಳ್ಕೂರು

ಕನ್ನಡ ಉಪನ್ಯಾಸಕ, ಎಕ್ಸ್ ಪರ್ಟ್ ಪಿ.ಯು.ಕಾಲೇಜು, ಮಂಗಳೂರು


ರ್ನಾಟಕ ರಾಜ್ಯಕ್ಕೆ ಏನ್ ಗತಿ ಬಂತು ಅಂತ? ಏನ್ ಗ್ರಹಚಾರ ತಾಗಿದೆಯೊ? ಯಾರ ಕೆಟ್ಟ ಕಣ್ಣು ಬಿದ್ದಿದೆಯೋ? ದೇವರೆ ಬಲ್ಲ! ರಾಜಕೀಯ ತಂತ್ರ-ಕುತಂತ್ರಗಳಿಂದ ಎಲ್ಲಾ ಪಕ್ಷಗಳು ಹೊಲಸೆದ್ದೋಗಿದೆ. ಇಷ್ಟೊಂದು ಕೆಳಮಟ್ಟದ ರಾಜಕೀಯ ಸೃಷ್ಟಿಯಾಗುತ್ತೆ? ಎಂದು ಯಾವ ಪ್ರಜೆಗಳು ಕನಸು ಮನಸುಲೂ  ಅಂದುಕೊಂಡಿಲ್ಲ. ‘ಜನರ ಸೇವೆಯೇ ಜರ್ನಾಧನ ಸೇವೆ’ ಎಂದು ಅಧಿಕಾರ ವಹಿಸಿಕೊಂಡು ಇಂದು ಮತಿಭ್ರಮಣಯಾದವರಂತೆ ವರ್ತಿಸುತ್ತಿದ್ದಾರೆ, ಇದು ನಾಚಿಕೆಗೇಡು. ರಾಜ್ಯ ಉದ್ಧಾರ ಮಾಡ್ತಾರೆ ಅಂತ ಅಧಿಕಾರ ಕೊಡಿಸಿದ್ರೆ, ರಾಜ್ಯದ ಮಾನಮರ್ಯಾದೆಯನ್ನು 3 ಕಾಸಿಗೆ ಹರಾಜ್ ಹಾಕ್ತಾ ಇದ್ದಾರೆ. ಮಹಾಭಾರತದಲ್ಲೂ ಕೂಡ ಇಂತಹ ಕಳಪೆ ಮಟ್ಟದ, ಹೊಲಸು ರಾಜಕೀಯ ಮಾಡಿಲಾ.

ಹೆಣ್ಣು, ಮಣ್ಣು, ಹೊನ್ನುಗೋಸ್ಕರ ಎಷ್ಟೊಂದು ಕೆಳಮಟ್ಟಕ್ಕೆ ಇಲಿಯುತ್ತಾರೆ ಎನ್ನುವುದಕ್ಕೆ, ನೈಜ ಚಿತ್ರಣವೇ ಸಾಕ್ಷಿ. ವಿಧಾನಸೌಧಕ್ಕೆ ಎಷ್ಟು ಪಾವಿತ್ರ್ಯ ಇದೆ, ಕೆಲವು ಕಳಹೀನರು ಮನ ಬಂದಂತೆ ತಳಿಸಿರುವುದು ನೋಡಿ, ಮತಿಭ್ರಮಣೆ ಆಗಿದೆಯೇ ಎನ್ನುವ ಪ್ರಶ್ನೆಯೂ ಕಾಡಿತು. ಕಳಪೆ ರಾಜಕೀಯಕ್ಕೆ ತುತ್ತಾಗುತ್ತಿರುವುದು ನಮ್ಮ ದುರಂತ. ಇಂದಿನ ರಾಜಕಾರಣಿಗಳು ಪ್ರಜಾ ಪ್ರಭತ್ವ ವ್ಯವಸ್ಥೆಗೆ ಬಗೆದ ದ್ರೋಹ. ಅಧಿಕಾರ ಕೈಗೆ ಬಂದಿದ್ದೆ ಬಂದಿದ್ದು, ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತಾಗಿದೆ. ‘ಯಥಾ ರಾಜ ತಥಾ ಪ್ರಜಾ’- ರಾಜ ಸುಖಿಯಾಗಿದ್ದರೆ ಪ್ರಜೆಗಳು ಸುಖಿಯಾಗಿರುತ್ತಾರೆ. ರಾಜ್ಯ ಉದ್ಧಾರ ಮಾಡ್ತಾರೆ ಅಂತ ತಿಳ್‌ಕೊಂಡ್ರೆ, ಗುಡಿಸಿ ಗುಂಡಾಂತರ ಮಾಡ್ತಾ ಇದ್ದಾರೆ. ಕಾಯುವವವರೆ ಹೊಡೆದಾಡಿ ಕೊಳ್ಳುತ್ತಿದ್ದರೆ. ಇನ್ನೂ ಜನ ಸಾಮಾನ್ಯರ ಸ್ಥಿತಿ ಅದೋಗತಿ. ಕುರ್ಚಿ ಆಸೆಗಾಗಿ ವ್ಯಕ್ತಿತ್ವದ ಬಗ್ಗೆ ಆಲೋಚಿಸದೆ ಹಣದ ಹೊಳೆಯಲ್ಲಿ ರಾಜಕೀಯದ ನೈತಿಕತೆಯನ್ನು ಬುಡಮೇಲು ಮಾಡಿದ್ದಾರೆ. ಅಧಿಕಾರ ಬರುವ ಮುಂಚೆ ಸಾಧುವಂತೆ, ಸೌಜನ್ಯಶೀಲತೆ, ಪರಿಪೂರ್ಣ ವ್ಯಕ್ತಿತ್ವ ಹೊಂದಿರುವವಂತೆ ವರ್ತಿಸಿ, ಅಧಿಕಾರ ಬಂದ ತಕ್ಷಣ ತಾನು ಎಲ್ಲಿದಿನಿ ಎನ್ನುವ ಪರಿಜ್ಞಾನವು ಇಲ್ಲದೆ ವ್ಯವಹರಿಸುತ್ತಿರುವ ರಾಜಕಾರಣಿಗಳಿಗೇನು ನಮ್ಮಲಿ ಬರಗಾಲವಿಲ್ಲ.

ರಾಜ್ಯದ ಅಭಿವೃದ್ಧಿ ಹೆಸರಿನಲ್ಲಿ ಭ್ರಷ್ಟಚಾರ?, ಗಣಿ ಮಾಫಿಯಾ?, ಭೂ ಮಾಫಿಯಾ? ಹೀಗೆ ಹನುಮಂತನ ಬಾಲದಂತೆ ಹಗರಣಗಳ ಪಟ್ಟಿಯ ಸರಮಾಲೆಯೇ ಕಣ್ಣ ಮುಂದೆ ಬರುತೆ?. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದವರು ಕಚ್ಚಾಡಿಕೊಳ್ಳುವುದು ನೊಡಿದ್ದರೆ ಇವರಿಗೆ ರಾಜ್ಯದ ಬಗ್ಗೆ ಎಷ್ಟು ಕಾಳಜಿ ಇದೆ ಎನ್ನುವುದು ಗೊತ್ತಾಗುತ್ತೇ?. ಎಲ್ಲರೂ ಮಾಡುವುದು ತಮ್ಮ ತಮ್ಮ ಕಿಸೆ ತುಂಬಿಸಿಕೊಳ್ಳಲು ಕಚ್ಚಾಡಿ ಕೊಳ್ಳುತಾರೆಯೇ ಹೊರತು, ಜನತೆಯ ಪರವಾಗಿ ಅಲ್ಲ ಎನ್ನುವುದು ಕಠೋರ ಸತ್ಯ. ‘ಗಂಡ-ಹೆಂಡತಿಯ ಜಗಳ ಉಂಡು ಮಲಗುವ ತನಕ’ ಆದರೆ ಇವರ ಜಗಳ ಸರಕಾರ ಬಿಳುವ ತನಕ ಮತ್ತೆ ಇವರೆಲ್ಲ ಒಂದೇ. ಗಂಡ ಹೆಂಡತಿಯ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ರಾಜ್ಯದ ಅಭಿವೃದ್ಧಿ, ಜನತೆ ಜನತೆಯ ಕಷ್ಟ-ಸುಖ ಕೇಳುವವರಿಲ್ಲ. ಇವರ ಆಟನೋಡಿ ಜನ ಮಾತ್ರ ಮಂಗ ಆಗ್ತಾ ಇರುವುದು ನೂರಕ್ಕೆ ನೂರು ಸತ್ಯ. ಮುಂದೆ ಯಾವ ಪಕ್ಷಗಳು ಆಡಳಿತಕ್ಕೆ ಬಂದ್ರು ಸರಕಾರದ ಖಜಾನೆಯನ್ನು ದಿವಾಳಿ ಮಾಡಿ ಜನತೆಯ ಕೈಗೆ ಚೆಂಬು ಕೊಡುವುದರಲ್ಲಿ ಎರಡು ಮಾತಿಲ್ಲ. ಇವರುಗಳು ಕುರ್ಚಿಗಾಗಿ ಕಚ್ಚಾಡಿಕೊಳ್ಳುವುದ್ ನೋಡಿದ್ರೆ ಅವರ ಮನೆಯ ಪಿತ್ರಾರ್ಜಿತ ಆಸ್ತಿ ಅಂತ ತಿಳಿದ್ ಕೊಂಡಿದ್ದಾರೆ? ಅಷ್ಟು ಸಾಮಾನ್ಯ ಜ್ಞಾನ ಬೇಡವ?. ಅಲ್ಪಮತಿಗಳು ಸೇರಿ ಇಡೀ ರಾಜಕೀಯ ವ್ಯವಸ್ಥೆಯನ್ನೇ ಹೊಲಸೆಬ್ಬಿಸಿದ್ದಾರೆ. ಇದರಿಂದ ಒಳ್ಳೆಯ ವ್ಯಕ್ತಿಗಳಿಗೂ ಕೆಟ್ಟಹೆಸರು. ಇವರು ಮಾಡುವ ಅನಾಚಾರಕ್ಕೆ ಮತ್ತೆ ಒಂದನೇ ಕ್ಲಾಸ್‌ಗೆ ಕಳುಹಿಸಬೇಕು. ಚಿಕ್ಕಮಕ್ಕಳಾದ್ರು ಎಷ್ಟ ಚೆನ್ನಾಗಿ ವ್ಯವಹರಿಸುತ್ತಾವೆ.

ಹೊಲಸು ರಾಜಕೀಯದಿಂದ ರಾಜ್ಯದ ಅಭಿವೃದ್ಧಿ ಮೇಲೆ ಬೀರುವ ಪರಿಣಾಮದ ಬಗ್ಗೆ ಮುಂದಾಲೋಚನೆಯೇ ಇಲ್ಲದ ಕೂಪಮಂಡಕಗಳೇ ಹಾಗೇ ವರ್ತಿಸುತ್ತಿದ್ದಾರೆ. ಅಧಿಕಾರಕ್ಕಾಗಿ ತಮ್ಮ ಮಾನ ಮರ್ಯಾದೆ ಹೋದ್ರು ಪರವಾಗಿಲ್ಲ, ಕುರ್ಚಿ ಸಿಕ್ಕಿದ್ರೆ ಸಾಕು. ತಮ್ಮ ಕಿಸೆ ತುಂಬಿಸಿಕೊಳ್ಳಬಹುದಲ್ಲವಾ? ಎನ್ನುವ ದುರಾಲೋಚನೆ? ಇಂಥವರಿಂದ ನಾವು ಏನು ನಿರೀಕ್ಷೆ ಮಾಡಲು ಸಾಧ್ಯ?. ನಮ್ಮ ಅದೃಷ್ಟವೋ? ದುರಾದುಷ್ಟುವೋ? ಭಗವಂತಂಗೇ ಗೊತ್ತು? ನಮ್ಮ ಕಷ್ಟ ಯಾರಲ್ಲಿ ಹೇಳ್ಲಿ? ಗೂಂಡಾಗಿರಿ, ಹಣದ ಹೊಳೆ, ರೇಸಾರ್ಟ್ ಹೀಗೆ ಅನ್ಯ ಮಾರ್ಗಗಳನ್ನು ಹಿಡಿದು ರಾಜಕೀಯ ವ್ಯವಸ್ಥೆಯನ್ನೇ ಬುಡಮೇಲು ಮಾಡ್ತಾ ಇರುವ ಕೆಳಮಟ್ಟದ ರಾಜಕಾರಣಿಗಳಿಂದ ತುಂಬಿಹೋಗಿದೆ. ಇದೇ ರೀತಿ ಮುಂದೆ ನಡೆದರೆ ಭವಿಷ್ಯತ್‌ನಲ್ಲಿ ರಾಜಕೀಯಕ್ಕೆ ಆಯುಷ್ಯವಿಲ್ಲನ್ನುವುದು ಅಷ್ಟೇ ಕಟು ಸತ್ಯ?. ಅಧಿಕಾರಕ್ಕೆ ಬರುವ ತನಕ ಜನತೆಯ ನೆನಪು ಇರುತ್ತೇ? ಆದರೆ ಕರ್ಚಿ ಸಿಕ್ಕಿದ ಮೇಲೆ ಜನತೆ ಯಾರೋ? ಇವರ್‍ಯಾರೋ? ಎಲ್ಲಿದ್ದೀನಿ ಎನ್ನುವ ಪರಿವು ಇರುವುದಿಲ್ಲ. ಯಾವುದೋ ಒಂದು ಪಕ್ಷ ಆಡಳಿತ ನಡಸ್ತಾ ಇದೆ ಪರವಾಗಿಲ್ಲ ನಡ್ಸಿಲ್ಲಿ ಅವರು ಎಲ್ಲಿ ದಾರಿ ತಪ್ಪುತ್ತಾರೆ ಅದನ್ನು ಗುರುತ್ತಿಸುವುದ್ ಬಿಟ್ಟು ಸುಮ್ಮನೆ ನೈತಿಕತೆ ಇದ್ರೆ ರಾಜೀನಾಮೆ ಕೊಡಿ ಎಂದು ಕಾಲಹರಣ ಮಾಡಿ, ಕೊಳಕು ಮಾತಿನ ಕೆಸರಾಟದಲ್ಲಿ ತೊಡಗುವುದೆ ತಮ್ಮ ಕಾಯಕ ಅಂತ ಕೆಲವರು ತಿಳಿದಕೊಂಡಿದ್ದಾರೆ. ರಾಜ್ಯದ ಅಭಿವೃದ್ಧಿಯ ಪರಿಕಲ್ಪನೆಯೇ ಇಲ್ಲದ ರಾಜಕಾರಣಿಗಳು ಇದ್ದರೆಷ್ಟು? ಇಲ್ಲದಿದ್ದರೆಷು? ಎನ್ನುವ ಪ್ರಶ್ನೆ ಎಲ್ಲರಿಗೂ ಕಾಡುತ್ತದೆ. ಚಿಕ್ಕ ಮಕ್ಕಳು ತಪ್ಪು ಮಾಡಿದ್ರೆ ಹೇಳಬಹುದು, ಆದರೆ ಇವರೆಲ್ಲ ಬುದ್ಧಿ, ತಿಳುವಳಿಕೆ ಇದ್ದವರೆ ಹಿಂಗೆ ಮಾಡಿದ್ರೆ ಇನ್ನೂ ಇಲ್ಲದವರು?. ನೈಜ ಚಿತ್ರಣ ಕಾಣ್ತಾ ಇಲ್ಲವಾ?

ಏನ್ ಕಾಲ ಬಂತು ಅಂಥಾ ರಾಜಕೀಯಕ್ಕೆ? ದಿನದಿಂದ ದಿನಕ್ಕೆ, ಕ್ಷಣದಿಂದ ಕ್ಷಣಕ್ಕೆ ಆಗುತ್ತಿರುವ ಬೆಳವಣಿಗೆ ಗಮನಹರಿಸಿದ್ರೆ ಮುಂದಿನ ದಿನ ಯುವ ಸಮುದಾಯ ಖಂಡಿತವಾಗಲೂ ರಾಜಕೀಯಕ್ಕೆ ಬರೋದೆ ಇಲ್ಲ? ಒಟ್ಟನಲ್ಲಿ ಇಂದಿನ ದೊಂಬರಾಟದ ರಾಜಕೀಯದಿಂದ ಜನತೆ ತಲೆತಗ್ಗಿಸುವಂತಾಗಿದೆ..! ಇಷ್ಟಲ್ಲ ತಪ್ಪು ಮಾಡಿ ಕೆಲವರು ಸಮರ್ಥಿಸಿಕೊಳ್ಳುವವರು ತಮ್ಮ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಇನ್ನೂ ಬದಲಾವಣೆ ಆಗದೇ ಇದ್ರೆ ಮುಂದೆ ನಿಧನರಾದ ಮೇಲೆ ಸ್ವರ್ಗ ಅಂತೂ ಖಂಡಿತ ಇವರಿಗೆ ಸಿಗುವುದಿಲ್ಲ, ನರಕವೇ ಗತಿ. ಇನ್ನಾದರೂ ಆಲೋಚನೆ ಮಾಡುವುದು ಒಳಿತು. ಮತ್ತೆ ಕಳಪೆ ಮಟ್ಟದ ರಾಜಕೀಯ ಮಾಡಿದ್ರೆ ಜನತೆ ಕುಡ ನಂಬಿಕೆಗಳನ್ನು ಕಳೆದು ಕೊಳ್ಳುವುದರಲ್ಲಿ ಎರಡು ಮಾತಿಲ್ಲ. ಮುಂದೆ ಚುನಾವಣೆ ಸಂದರ್ಭದಲ್ಲಿ ಮತ ಬೇಕು ಅಂತ ಮನೆ ಬಾಗಿಲ ಬಳಿ ಹೋದ್ರೆ ಛಿ..ತೂ.. ಅಂತ ಉಗಿಯುವುದರಲ್ಲೂ ಆಶ್ಚರ್ಯವಿಲ್ಲ. ಒಟ್ಟನಲ್ಲಿ ಕರ್ನಾಟಕದ ಜನತೆಗೆ ಉಚಿತ ಮನೋರಂಜನೆ ಸಿದ್ತಾ ಇದೆ ಆದ್ರೆ,  ಕೊಳಕು ರಾಜಕೀಯದಿಂದ ಜನ ರೊಸಿ ಹೋಗಿದ್ದಾರೆ. ಇದಕ್ಕೆಲ್ಲಾ ಕಾಲವೇ ಉತ್ತರಿಸಬೇಕು?.

ಚಿತ್ರಕೃಪೆ: ಗೂಗಲ್ ಇಮೇಜ್

Read more from ಲೇಖನಗಳು
6 ಟಿಪ್ಪಣಿಗಳು Post a comment
  1. ರಾಘವೇ೦ದ್ರ ಹೊಳ್ಳ's avatar
    ರಾಘವೇ೦ದ್ರ ಹೊಳ್ಳ
    ಆಕ್ಟೋ 19 2010

    ರಾಜ್ಯದ ಜನತೆಯಲ್ಲಿ ವಿನಮ್ರ ವಿನ೦ತಿ,
    ಈ ಹೊಲಸು ರಾಜಕೀಯದ ಬಗ್ಗೆ ಚರ್ಚೆ ಮಾಡುವುದು ಬಿಟ್ಟು ನಮ್ಮ ನಮ್ಮ ಕೆಲಸದ ಬಗ್ಗೆ ಗಮನ ನೀಡೊಣ. ಮೊರ್ಖರ ಬಗ್ಗೆ ಮಾತಾನಡಿ ನಮ್ಮ ಸಮಯ ಹಾಳು ಮಾಡುವುದು ಯಾಕೆ? ನಮ್ಮ ಭೀಕ್ಷೆಯಿ೦ದ ಚುನಾಯಿತರಾಗಿ ನಮ್ಮ ಬಗ್ಗೆ, ರಾಜ್ಯದ ಬಗ್ಗೆ ಸ್ವಲ್ಪ್ವವು ಕಾಳಜಿ ಇಲ್ಲದವರು ನ೦ಬೆಕೆಗೆ ಅನಹ್ರರು. ಮು೦ದಿನ ಬಾರಿ ಮತದಾನ ಮಾಡಬೇಕೆ ಯಾ ಬೇಡವೆ ನಿರ್ದಾರ ಮಾಡಿ

    ಉತ್ತರ
  2. h n eshakumae's avatar
    h n eshakumae
    ಆಕ್ಟೋ 19 2010

    janaru yaavaga tamma matavannu jaatige,duddige atava innaavudo aamishakke maarikondaro adaada nantara naavu kaanalu siguvudu inta raajakiyave moulyayuta vaada raajakiyavalla..olleya baraha..

    ಉತ್ತರ
  3. Ragavend's avatar
    Ragavend
    ಆಕ್ಟೋ 20 2010

    Very Good Artical. Congarts…

    ಉತ್ತರ
  4. Ragavend's avatar
    Ragavend
    ಆಕ್ಟೋ 20 2010

    nice gud.

    ಉತ್ತರ
  5. udayaraj Shetty's avatar
    udayaraj Shetty
    ಆಕ್ಟೋ 23 2010

    Holasu Manosthiya Rajakaaranigaligenu gotthu Samskruti,sadachara,samvidanada Moulya. Gellisi adalitha madi yendu Kaluhisida Moorkarunavallave?
    Yara thegali Yenu Prayojana…..

    I think this is the opportunity to wake up to youngster..

    ಉತ್ತರ

Leave a reply to h n eshakumae ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments