ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 25, 2010

9

ನಿಮಗೂ ನಿಮ್ಮೂರು ನೆನಪಾಗುತ್ತಾ? ‍ಭಾಗ-೨

‍ನಿಲುಮೆ ಮೂಲಕ

ದೀಪಕ್ ಮದೆನಾಡು

ಜೂನ್ ತಿಂಗಳ ೧ನೇ ತಾರೀಕು ನಮ್ಮ ಶಾಲೆಯ ಆರಂಭ. ಅಂದೇ ಮಳೆರಾಯನು ನಮ್ಮನ್ನು ಚಂಡಿ-ಪುಂಡಿ ಮಾಡಿ ಖುಷಿ ಪಡುತ್ತಿದ್ದ(ಇತ್ತೀಚಿಗಿನ ದಿನಗಳಲ್ಲಿ ಜುಲೈ ತಿಂಗಳು ಮುಗಿದರೂ ಮಳೆಯರಾಯನ  ಮುಖ ನೊಡಲು ಸಾಧ್ಯವಾಗುತ್ತಿಲ್ಲ!!). ಅಕ್ಕನೊಂದಿಗೆ ದೊಡ್ಡ ಕೊಕ್ಕೆ ಕೊಡೆ ಹಿಡಿದು ಕುಣು-ಕುಣು ಹೆಜ್ಜೆ ಹಾಕುತ್ತಾ ನಾನು  ಶಾಲೆಗೆ ಹೋಗುತ್ತಿದ್ದೆ. ಮೊದಲನೆ ದಿನದ ಜಿಟಿ-ಜಿಟಿ ಮಳೆಯಲ್ಲೂ,  ಶಾಲೆಗೆ ಹೋಗಲು ಏನೋ ಒಂಥರಾ ಸಂಭ್ರಮ. ಕಾಡು ದಾರಿಯಲ್ಲಿ ಮಣ ಭಾರದ ಬ್ಯಾಗು ಹೊತ್ತು ಕೊಂಡು,  ಶಾಲೆಗೆ ಹೋಗಿ ಕಾಲು ನೋಡಿದರೇ ಜಿಗಣೆಗಳು ನೇರಳೆಹಣ್ಣಿನ ಗಾತ್ರವಾಗಿ ರಕ್ತ ಹೀರುತಿರುತ್ತಿದ್ದವು. ಒದ್ದೆಯಾದ ಕಾಲಿನಿಂದ ಜಿಗಣೆ ಬಿಡಿಸುವುದು ಬಲು  ಕಷ್ಟ. ಹೇಗೋ ಹುಡುಕಿ ಕಿತ್ತೆಸೆಯುತ್ತಿದಂತೆ, ಕಚ್ಚಿದಲ್ಲಿಂದ ರಕ್ತದ ನಾಗಾಲೋಟ ಶುರುವಾಗುತ್ತಿತ್ತು. ಗಾಯಕ್ಕೆ ಪೇಪರ್ ಚೂರು ಅಂಟಿಸಿದ ಮೇಲೆಯೇ ರಕ್ತಸ್ರಾವ ನಿಲ್ಲುತ್ತಿತ್ತು. ಮನೆಯಿಂದ   ೨ ಕಿ.ಮೀ. ದೂರದಲ್ಲಿದ್ದ ‘ಕಾಟಕೇರಿ ಹಿರಿಯ ಪ್ರಾಥಮಿಕ ಶಾಲೆ’ಯಲ್ಲಿ ನಾನು ಎರಡನೇ ತರಗತಿ ಓದುತ್ತಿದೆ. ನನ್ನಕ್ಕ ಅದೇ ಶಾಲೆಯ ಆರನೇ ತರಗತಿಯಲ್ಲಿ ಓದುತ್ತಿದ್ದಳು.
ಹಾಡು ಮತ್ತು ನೃತ್ಯದಲ್ಲಿ ನನ್ನಕ್ಕ ಯಾವಗಲು ಮೊದಲಿಗಳು. ಕಲಿಕೆಯಲ್ಲಿ ಸ್ವಲ್ಪ ಹಿಂದಿದ್ದರೂ, ಶ್ರಮವಹಿಸಿ ಓದುತ್ತಿದ್ದಳು. ಬಲು ಮೃದು  ಸ್ವಭಾವದ ಹುಡುಗಿ ಆಕೆ. ನನ್ನ ಕೀಟಲೆಯನ್ನು ಸಹಿಸುವಷ್ಟು ಸಹಿಸಿ, ಕೆಲವೊಮ್ಮೆ ಮುಖ-ಮೂತಿ ನೋಡದೆ ಬಾರಿಸುತ್ತಿದ್ದಳಷ್ಟೇ!! ಪೆಟ್ಟುತಿಂದ ನಾನು ಅಳಲು ಶುರುಮಾಡಿದರೆ ,ಮದೆನಾಡಿನ ಮಳೆಯ ತರಹ ಯಾವಾಗ ಶುರುವಾಗುತ್ತದೆ? ಯಾವಾಗ ನಿಲ್ಲುತ್ತದೆ? ಎಂದು ನಿರ್ಧಿಷ್ಟವಾಗಿ  ಹೇಳಲಾಗದು. ಕೋಪ ಇಳಿದ ಮೇಲೆ  ಅವಳೇ ಬಂದು ಮುದ್ದಿಸುತ್ತಿದ್ದಳು.
ಒಂದು ದಿನ ಅಕ್ಕನ ತರಗತಿಯ ನಾಯಕ ನನ್ನ ತರಗತಿಗೆ ಬಂದು, ನನ್ನನ್ನು ಟೀಚರ್ ಬರಲು ಹೇಳುತ್ತಿದ್ದಾರೆ ಎಂದ. ನಾನು ಅಕ್ಕನ ತರಗತಿಗೆ ಹೋಗಿ ನೋಡಿದರೆ, ಅಕ್ಕಳನ್ನು ಬಿಟ್ಟು ಉಳಿದವರೆಲ್ಲ ಕುಳಿತ್ತಿದ್ದರು! . “ ಇವ್ಳು ಮನೇಲಿ ಓದ್ತಾಳಾ?.. ಬೆಳಿಗ್ಗೆ  ಎಷ್ಟು ಗಂಟೆಗೆ ಏಳ್ತಾಳೆ?.. ಅಮ್ಮನಿಗೆ ಹೆಲ್ಪ್ ಮಾಡ್ತಾಳ??”  ಎಂದು ಒಂದೇ ಉಸಿರಿನಲ್ಲಿ  ಟೀಚರ್ ನನ್ನನ್ನು ಕೇಳಿದರು. ಅಕ್ಕ ಹೊಡೆದಾಗಲೆಲ್ಲ ಗೊಳೋ ಎಂದು ಅಳುತ್ತಿದ್ದೆ ಹೊರತು, ತಿರುಗಿಸಿ ಹೊಡೆಯುವಷ್ಟು ಶಕ್ತಿ ಇರುತ್ತಿರಲಿಲ್ಲ . ಇಂದು ಸಿಕ್ಕಿದ್ದೆ ಸೀರುಂಡೆ ಎಂದು  ಕೊಂಡೆ.  “ ಬೇಗ ಮಲ್ತಾಳೆ ಟೀಚರ್… ಅಮ್ಮನಿಗೆ ತಿರುಗಿ ಹೇಳ್ತಾಳೇ… ಮತೇ..ಮತೇ.. ನಂಗೆ ಹೊಡಿತ್ತಾಳೆ ಟೀಚರ್ …” ಎಂದೆ. ಕೆಂಡಾಮಂಡಲವಾದ ಟೀಚರ್, ನನ್ನನ್ನು ಹೋಗಲು ಹೇಳಿದವರೆ ಬೆತ್ತ ತೆಗೆದು ರಪ-ರಪನೆ ಅಕ್ಕನಿಗೆ ಬಾರಿಸತೊಡಗಿದರು. ಅಕ್ಕನ ಅಳುವಿನ ಧ್ವನಿ ಹೊರ ಹೋಗುತ್ತಿದ್ದ ನನ್ನ ಕಿವಿಗು ಬೀಳುತ್ತಿತ್ತು! ನನಗೂ ಹೊಟ್ಟೆಯಲ್ಲೆನೋ ಸಂಕಟವಾಗತೊಡಗಿತ್ತು! .
ಎಂದಿನಂತೆ ಸಾಯಂಕಲ  ೪ ಗಂಟೆಗೆ ಶಾಲೆ ಬಿಟ್ಟೊಡನೆ, ಗೇಟಿನ ಬಳಿ ಅಕ್ಕನಿಗಾಗಿ ಕಾಯುತ್ತಾ ನಿಂತಿದ್ದೆ.  ದೂರದಲ್ಲಿ ಬರುತ್ತಿದ್ದ ಅಕ್ಕನ ಮುಖ ಕಪ್ಪಿಟ್ಟಿತ್ತು!, ಕಣ್ಣಿನ ಬಳೆ ಊದಿತ್ತು!.ಪ್ರಕೃತಿಯ ನೀರವ ಮೌನದೊಂದಿಗೆ ನಮ್ಮ ಮೌನವೂ ದನಿಗೂಡಿಸಿತ್ತು! ಜನರೆಲ್ಲ ಕಣ್ಣಿಗೆ ಕಾಣಿಸದಷ್ಟು ದೂರ ಹೋದಮೇಲೆ, ಅಕ್ಕ ಕಾಳಿಕಾ ಮಾತೆಯ ದಿವ್ಯ ರೂಪದಂತೆ ಭಾಸವಗತೊಡಗಿದ್ದಳು!.

ಈ ಘಟನೆಯನ್ನು ಇಂದಿಗೂ ನೆನೆಸಿದರೆ ನನ್ನ ಬೆನ್ನು ಉರಿಯುತ್ತದೆ!!. ಅಕ್ಕನ ಮೊಗದಲ್ಲಿ ಕಿರು ನಗುವಿದ್ದರು, ಕಣ್ಣಂಚಲ್ಲಿ ಮುತ್ತು ಪೋಣಿಸುತ್ತದೆ!!

ಚಿತ್ರ ಕೃಪೆ: ವಿಧ್ಯಾನಿಧಿ ಕಾರಿಂಜೆ

Read more from ಲೇಖನಗಳು
9 ಟಿಪ್ಪಣಿಗಳು Post a comment
  1. mardhani's avatar
    mardhani
    ಆಕ್ಟೋ 26 2010

    cute it is…..keep it up:)

    ಉತ್ತರ
    • deepak madenadu's avatar
      deepak madenadu
      ಆಕ್ಟೋ 26 2010

      thank u soo much…….:)

      ಉತ್ತರ
  2. Reena s's avatar
    Reena s
    ಆಕ್ಟೋ 26 2010

    Very nice article. Now iam remembering and feeling childhood days. Anyway all the best and keep it up.

    ಉತ್ತರ
    • deepak madenadu's avatar
      deepak madenadu
      ಆಕ್ಟೋ 27 2010

      thanks for encouraging me……….

      ಉತ್ತರ
  3. Reena s's avatar
    Reena s
    ಆಕ್ಟೋ 26 2010

    Very nice article. Now iam remembering and feeling childhood days. Anyway all the best and keep it up.Write more valuable articles like sweet and unforgettable memories

    ಉತ್ತರ
    • mardhani's avatar
      mardhani
      ಆಕ್ಟೋ 27 2010

      thanks for encouraging me…….

      ಉತ್ತರ
  4. jayanth's avatar
    jayanth
    ಆಕ್ಟೋ 26 2010

    nanna balyada nenapugalu marukalisidavu….

    ಉತ್ತರ
  5. jayanth's avatar
    ಆಕ್ಟೋ 26 2010

    nanna balyada nenapugalu marukalisidavu……

    ಉತ್ತರ
  6. joyappabr's avatar
    ನವೆಂ 6 2010

    kaledudannu neneyude chanda!
    Ninna Aarambada baravanige mundhe Olleya barahagaranaguva sulivu needide. Samaja ninninda bahalashtannu nirikshisuthide.
    Shubashayagalu,

    Poppa.

    ಉತ್ತರ

Leave a reply to jayanth ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments