ಕನಸು ನನಸಾದಾಗ…………..
ಅರವಿಂದ್
ಇವತ್ತು ನಿಮ್ಮೊಂದಿಗೆ ಒಂದು ಸುಂದರ ಕನಸುಗಳನ್ನ ಹಂಚಿಕೊಳ್ಳುವ ಇರಾದೆ. ಕನಸುಗಳೆಂದರೆ ಕಪ್ಪು ಬಿಳಿಪಿನ ಕನಸೇ, ಕಲರ್ ಪುಲ್ ಕನಸೇ ? ಅಕಸ್ಮಾತ್ ಕನಸು ಕಪ್ಪು ಬಿಳುಪಾಗಿಯು ಬೀಳ್ತವೆಯೇ ? (ಇದುವರೆಗೂ ಯಾವ ಕನಸು ನನಗಂತೂ ಕಪ್ಪು ಬಿಳುಪಾಗಿ ಬಿದ್ದಿಲ್ಲ ) 🙂 ನನದು ಒಂದು ಕಲರ್ ಪುಲ್ ಕನಸ ಕೇಳಿ ………,

ನೆನ್ನೆ ರಾತ್ರಿ ಮಲಗುವಾಗಲೇ ತಡವಾಯ್ತು ಬಹುಶಃ ಎರಡು ಮೂರು ಘಂಟೆ ಇರಬಹುದು. ಸ್ವಲ್ಪ ಹೊತ್ತಿನಲ್ಲೇ ವಾಸ್ತವದಲ್ಲಿ ನನಗೆ ಪರಿಚಯವಿಲ್ಲದವರೊಬ್ಬರು, ಆದರೆ ತುಂಬಾ ಪರಿಚಿತರಂತೆ ಮಾತನಾಡುತಿದ್ದಾರೆ. ಎಷ್ಟು ಹೊತ್ತಾದರೂ ಅವರ ಮುಖವೇ ಕನಸಿನಲ್ಲಿ ಮೂಡುತ್ತಿಲ್ಲ . ಆದರೆ ಆ ಧ್ವನಿ ನನಗೆ ತುಂಬಾ ಪರಿಚಿತವೇನೋ ಎಂಬಂತೆ, ಎಚ್ಚರವಾದರೂ ಅವರೊಂದಿಗೆ ಮಾತಾನುದುತ್ತಿರುವಂತೆ ಭಾಸ. ಅಷ್ಟರೊಳಗೆ ಬೆಳಗಿನ ಜಾವವಾದ್ದರಿಂದ ನಾನು ನನ್ನ ನಿತ್ಯ ಕೆಲಸಗಳಲ್ಲಿ ತೊಡಗಿಕೊಂಡೆ, ಇಂದು ಮಧ್ಯಾನ್ಹ ೧೨ಕ್ಕೆ ನನ್ನ ಕಚೇರಿಯಲ್ಲಿ ಅಕೌಂಟ್ ಅಸಿಸ್ಟಂಟ್ ಹುದ್ದೆಗೆ ಸಂದರ್ಶನವಿತ್ತು. ಅಷ್ಟರೊಳಗೆ ನಾನು ಆ ಕನಸನ್ನು ಮರೆತುಹೋಗಿದ್ದೆ. ಸಂದರ್ಶನಕ್ಕೆ ಬಂದ ೫ ಜನರಲ್ಲಿ ೨ ಹುಡುಗಿಯರು ಮತ್ತೆಲ್ಲ ಹುಡುಗರು. ಆಗತಾನೆ ಪದವಿ ಮುಗಿಸಿ ಬಂದಿದ್ದ ಹೊಸಬರು. ಒಬ್ಬೊಬ್ಬರಾಗಿ ಸಂದರ್ಶನಕ್ಕೆ ಹಾಜರಾಗುತ್ತಿದ್ದರು. ಇನ್ನೇನು ಎಲ್ಲರ ಸಂದರ್ಶನ ಮುಗಿಸುವ ಹೊತ್ತಿಗೆ ಮತ್ತೊಂದು ಹುಡುಗಿಯು ಸಂದರ್ಶನಕ್ಕೆ ಬಂದಿದ್ದಾಳೆ ಎಂದು ನನ್ನ ಕಚೇರಿಯ ಸ್ವಾಗತಕಾರಿಣಿ ಪೋನ್ ಮೂಲಕ ಮೀಟಿಂಗ್ ರೂಮಲ್ಲಿದ್ದ ನನಗೆ ತಿಳಿಸಿದಳು, ಆಗಲೇ ಘಂಟೆ ೧.೩೦ ಆಗಿತ್ತು. ಸರಿ ಆಕೆಯನ್ನು ಸಂದರ್ಶನಕ್ಕೆ ಬರಲು ಹೇಳಿ, ಈಗಾಗಲೇ ಸಂದರ್ಶಿಸಿದವರಲ್ಲಿ ಯಾರು ಉತ್ತಮರೆಂದು ಮನಸ್ಸಿನಲ್ಲೆ ಲೆಕ್ಕಾಚಾರ ಹಾಕುತ್ತಿದ್ದೆ. ಒಳಗೆ ಬರಬಹುದ ?????????? ಎಂದು ಕೇಳಿದ ಧ್ವನಿಗೆ ಆಶ್ಚರ್ಯಚಕಿತನಾದೆ, ಏಕೆಂದರೆ ಇದೆ ಧ್ವನಿಯನ್ನು ತಾನೇ ಕನಸಿನಲ್ಲಿ ಕೇಳಿದ್ದು. ಒಂದು ಕ್ಷಣ ಮೂಕ ವಿಸ್ಮಿತನಂತಾಗಿ, ಕಮಿನ್ ಎಂದು ಹೇಳಿದೆ. “ನ್ಯೆಸ್ ” ಟೆಲ್ ಮಿ ಅಬೌಟ್ ಯುವರ್ ಸೇಲ್ಪ್ಹ್ ? ಅಂತಷ್ಟೇ ಉಗುಳು ನುಂಗಿಕೊಂಡು ಹೇಳಿದ್ದು. ಆ ಹುಡುಗಿಯ ಹೆಸರು ಮಾನಸ, ಊರು ಶಿವಮೊಗ್ಗದ ಹತ್ತಿರ ಶಿರಾಳಕೊಪ್ಪ, ಆ ಕಡೆಯಿಂದ ಉಳಿಯಿತು ಆ ಧ್ವನಿ. ಆಕೆ ಏನೇನೋ ಹೇಳತೊಡಗಿದಳು, ಒಂದು ಯಾವುದು ಕೇಳಿಸಿದಂತಾಯಿತು. ಒಂದೈದು ನಿಮಿಷ ಕಾಟಾಚಾರಕ್ಕೆ ಮಾತಾಡಿ ಆಕೆಯನ್ನು ಹೊರಡುವಂತೆ ಹೇಳಿ ಹೊರಬಂದೆ. ಮತ್ತಷ್ಟು ಓದು 
ಈಗಿನವರು ಪ್ರೇಮ ಪತ್ರವನ್ನೂ ಬರೆಯುವುದಿಲ್ಲ, ಛೆ!
ಪ್ರೀತಿಯ ಅಮ್ಮ,
ಬೇಡುವ ಆಶೀರ್ವಾದಗಳು. ಹೇಗಿದ್ದೀಯಾ? ಚೆನ್ನಾಗಿದ್ದಿ ತಾನೆ? ಅಪ್ಪ, ಅಣ್ಣ, ಎಲ್ಲರೂ ಕುಶಲವಷ್ಟೇ? ನಾನಂತೂ ತುಂಬಾ ಆರಾಮ.
ಹಾಂ, ಅಮ್ಮ,.. ಮೊನ್ನೆ ನಮಗೆ ಪರೀಕ್ಷೆಯಿತ್ತು. ಪರವಾಗಿಲ್ಲ ಪಾಸಾದೇನು! ಅಂದ ಹಾಗೆ ಅಮ್ಮ, ಇನ್ನೆರಡು ವಾರ ಕಳೆದರೆ ನಮಗೆ ರಜ ಸಿಗುತ್ತದೆ. ಮತ್ತೆ ಮನೆಗೆ ಬಂದು ನಿನ್ನ ಮಡಿಲಲ್ಲಿ ಮಲಗಿ ನಿದ್ರಿಸಬಹುದು…
ಅಮ್ಮ, ಆ ಎಮ್ಮೆ ಈಗ ನೆಟ್ಟಗೆ ಕರೆಯಲು ಬಿಡುತ್ತದೆಯೋ ಇಲ್ಲವೋ? ಮತ್ತೆ ದನ ಕರುಗಳು, ಹಗಲಿರುಳೂ ಸುಮ್ಮನೇ ತಲೆಹರಟೆ ಮಾಡುವ ನಾಯಿ, ಇಲಿಯೊಂದಿಗೆ ಫ್ರೆಂಡ್ ಶಿಪ್ ಮಾಡಿಕೊಂಡಿರುವ ಬೆಕ್ಕು…ಎಲ್ಲವೂ ಏನು ಮಾಡುತ್ತಿವೆ? ಬಂದಾಗ ಎಲ್ಲದರ ಹಣೆಗೂ ಮುತ್ತುಕೊಟ್ಟು ಮುದ್ದಾಡಬೇಕು ನಾನು.
ಸರಿ ಅಮ್ಮ, ಬೇರೇನೂ ವಿಶೇಷವಿಲ್ಲ. ಇಂದಿನಿಂದ ಹದಿನೈದನೇ ದಿನಕ್ಕೆ ಮನೆಯಲ್ಲಿರುತ್ತೇನೆ. ಅಲ್ಲಿಯವರೆಗೆ ನಿನ್ನದೇ ನೆನಪುಗಳು…
ಪ್ರೀತಿಯಿಂದ, ಮತ್ತಷ್ಟು ಓದು 
ಬರಾಕ್ ಓಬಾಮನ ವಿವಿಧ ವೇಷಗಳು
ಅರವಿಂದ್
ಒಬಾಮ ಭಾರತೀಯ ರಾಜಕಾರಣಿಗಳ ವೇಷಧಾರಿಯಾದರೆ ಹೇಗಿರಬಹುದು ?
ಹೀಗೆಲ್ಲಾ ಇರಬಹುದಾ………….
ಸ್ಟೂಡೆಂಟ್ ರಿಪೋರ್ಟರ್ … ಇದು ರಿಯಲ್ ಶೋ…
ಇರ್ಷಾದ್ ಎಂ.ವೇಣೂರು
ಅವತ್ತು ನಾನು ಪತ್ರಿಕೋದ್ಯಮ ತರಗತಿಯಲ್ಲಿದ್ದೆ. ನಮ್ಮ ತರಗತಿ ಪ್ರಾರಂಭವಾಗುವುದು ದಿನಂಪ್ರತೀ ಯಾರಾದರೊಬ್ಬ ವಿದ್ಯಾರ್ಥಿ ಐದು ನಿಮಿಷ ಮಾತನಾಡಿದ ನಂತರವೇ. ನನ್ನ ಸಹಪಾಠಿ ಮಾತನಾಡಲು ಮುಂದೆ ಹೋದಾಗ ಭಾಸ್ಕರ್ ಸರ್ ನನ್ನನ್ನು ಕರೆದು “ಒಂದ್ನಿಮಿಷ…” ಅಂದ್ರು. ಹೋದೆ. “ಸುವರ್ಣ ನ್ಯೂಸ್ನವ್ರು ಒಂದು ರಿಯಾಲಿಟೀ ಶೋ ಮಾಡ್ತಿದ್ದಾರಂತೆ, ಸ್ಟೂಡೆಂಟ್ ರಿಪೋರ್ಟರ್ ಅಂತ. ನಮ್ಮ ಕಾಲೇಜಿನಿಂದ ಎರಡು ಮಂದಿಯನ್ನು ಕಳುಹಿಸುತ್ತಿದ್ದೇನೆ. ಒಂದು ನಿಮ್ಮ ಹೆಸರನ್ನೇ ನಾನು ಸೂಚಿಸಿದ್ದೇನೆ” ಎಂದು ಬ್ರೇಕಿಂಗ್ ನ್ಯೂಸ್ ಹೇಳಿದಾಗ ಖುಷಿಯಾಯಿತು. ಅಷ್ಟು ಹೊತ್ತಿಗೆ ನನ್ನ ಸಹಪಾಠಿಯ ಮಾತು ಮುಗಿದಿತ್ತು. ಸರ್ ವಿಷಯ ತರಗತಿಯ ಮುಂದಿಟ್ಟರು. ವರದಿಗಾರಿಕೆ, ಛಾಯಾಗ್ರಹಣ, ಪತ್ರಿಕೋದ್ಯಮದಲ್ಲಿ ನಿಮ್ಮ ಆಸಕ್ತಿ ಎಲ್ಲಾ ಗಮನಿಸಿ ಈ ಕಾರ್ಯಕ್ರಮಕ್ಕೆ ಕಳುಹಿಸುತ್ತಿದ್ದೇನೆ. ಒಬ್ಬರನ್ನು ಈಗಾಗಲೇ ಆರಿಸಿದ್ದೇನೆ. ಇನ್ನೊಬ್ಬರು ಬೇಕು. ಆಸಕ್ತಿ ಇದ್ದವರು ಮತ್ತೆ ಭೇಟಿಯಾಗಿ ಎಂದರು. ನನ್ನತ್ತ ತಿರುಗಿ ನಿಮ್ಮ ಬಯೋಡೆಟಾ ಆದಷ್ಟು ಬೇಗ ಕೊಡಿ. ನಾಳೇನೇ ಬೇಕು. ಅದನ್ನು ಸುವರ್ಣ ನ್ಯೂಸ್ ಗೆ ಕಳುಹಿಸಬೇಕು ಎಂದರು.

ಮಿಂಚುಳ್ಳಿ
ಹರ್ಷವರ್ಧನ್ ಶೀಲವಂತ್
ನಿಮ್ಮ ಊರಿನ ಕೆರೆ, ಕಟ್ಟ, ಹೊಂಡಗಳು, ತಲಪೂರಿಕೆ ಹಾಗೂ ಮೀನುಗಳನ್ನು ಸಾಕಿಕೊಂಡಿರುವ ಮಾನವ ನಿರ್ಮಿತ ಕೃಷಿ ಹೊಂಡಗಳ ಬದುವುಗಳಲ್ಲಿ, ನೀರಿನಿಂದ ತುಸು ಮೇಲೆ ನೆಲದಿಂದ ಅತಿ ಕಡಿಮೆ ಎತ್ತರದಲ್ಲಿ ಮಣ್ಣನ್ನು ಕೊರೆದು ಪಕ್ಷಿಯೊಂದು ಮನೆ ಕಟ್ಟಿಕೊಂಡಿದ್ದು ಗಮನಿಸಿದ್ದೀರಾ?
ನಮ್ಮ ಊರು ಧಾರವಾಡದ ಹೊರವಲಯದಲ್ಲಿ ಕೆಲ ದಶಕಗಳ ಹಿಂದೆ ಗಣಿಗಾರಿಕೆ ನಡೆಸಲಾಗುತ್ತಿತ್ತು. ಹಾಗೆ ಗಣಿಗಾರಿಕೆ ನಡೆಸಿ, ನಿರ್ಮಿತವಾದ ಹೊಂಡಗಳಲ್ಲಿ ಇತ್ತೀಚಿನ ಮಳೆಯಿಂದಾಗಿ ಚಿಕ್ಕ ಕೆರೆಗಳು ನಿರ್ಮಾಣಗೊಂಡಿವೆ. ಇಲ್ಲಿ ದನಗಾಹಿಗಳು ನಿತ್ಯ ತಮ್ಮ ಜಾನುವಾರುಗಳ ಮೈ ತೊಳೆಯಲು ಆಗಮಿಸುವುದರಿಂದ ಈ ಪಕ್ಷಿ ಗಣಿಯ ಇಕ್ಕೆಲಗಳ ಗೋಡೆಯಂತಹ ಮಣ್ಣಿನಲ್ಲಿ ಅತ್ಯಂತ ಎತ್ತರದಲ್ಲಿ ತನ್ನ ಗೂಡು ಮಾಡಿಕೊಂಡಿದ್ದನ್ನು ನಾನು ಗಮನಿಸಿದ್ದೇನೆ. ಕೆಲವೊಮ್ಮೆ ವಿದ್ಯುತ್ ತಂತಿಯ ಮೇಲೂ ಬೇಟೆಗಾಗಿ ಕಾಯ್ದು ಕುಳಿತು ಈ ಹಕ್ಕಿ ಗಮನ ಸೆಳೆಯುತ್ತದೆ.
ಅತ್ಯಂತ ಚುರುಕಾದ, ಮಿರಿ ಮಿರಿ ಮಿಂಚುವ ನೀಲಿ ಮೈಬಣ್ಣ ಹೊಂದಿದ ಗುಬ್ಬಚ್ಚಿ ಗಾತ್ರದ ಈ ಹಕ್ಕಿಗೆ ‘ಕಿರು ಮಿಂಚುಳ್ಳಿ’- ‘Small Blue Kingfisher’ ಎಂದು ಕರೆಯುತ್ತಾರೆ. ಮೊನ್ನೆ ಛಾಯಾಪತ್ರಕರ್ತ-ಮಿತ್ರ ಜೆ.ಜಿ.ರಾಜ್ ಅವರೊಂದಿಗೆ ಧಾರವಾಡದಿಂದ ಮುಕುಟಖಾನ್ ಹುಬ್ಬಳ್ಳಿ (ಎಂ.ಕೆ. ಹುಬ್ಬಳ್ಳಿ ಸಕ್ಕರೆ ನಾಡು ಕೂಡ ಹೌದು.) ವರೆಗೆ ನೈಸರ್ಗಿಕವಾಗಿ ನಿರ್ಮಾಣಗೊಂಡಿರುವ ಕೆರೆಗಳ ಸ್ಥಿತಿ-ಗತಿ, ಬದುಕು-ಬವಣೆ ಗುರುತಿಸಲು ತೆರಳಿದ್ದೆವು. ಆಗ ಈ ಅಪರೂಪದ ಮಿತ್ರ ಮೀನು ಬೇಟೆಗಾರನಾಗಿ ನಮ್ಮ ಕಣ್ಣಿಗೆ ಕಂಡ. ಐತಿಹಾಸಿಕ ಮಹತ್ವದ ಕಿತ್ತೂರು ಸಮೀಪದ ‘ಕೆಂಪಗೇರಿ ಕಟ್ಟೆ’ ಕೆರೆಯಲ್ಲಿ ಈ ‘ಕಿರು ಮಿಂಚುಳ್ಳಿ’ ಕಿತ್ತೂರಿನ ಮೀನುಗಾರ ಶಿವಪ್ಪ ಅವರೊಂದಿಗೆ ಮೀನು ಬೇಟೆಯಲ್ಲಿ ತೊಡಗಿದ್ದ.
ಬಿಳಿ ಮಿಂಚುಳ್ಳಿ (ಪೈಡ್ ಕಿಂಗಫಿಷರ್), ಗದ್ದೆ ಮಿಂಚುಳ್ಳಿ (ವೈಟ್ ಬ್ರೆಸ್ಟೆಡ್ ಕಿಂಗಫಿಷರ್), ಹೆಮ್ಮಿಂಚುಳ್ಳಿ (ಸ್ಟ್ರೋಕ್ ಬಿಲ್ಡ್ ಕಿಂಗಫಿಷರ್) ಇವುಗಳಲ್ಲಿ ನಾವು ಕೆಂಪಗೇರಿ ಕಟ್ಟೆಯಲ್ಲಿ ಕಂಡ ಕಿರು ಮಿಂಚುಳ್ಳಿ (ಸ್ಮಾಲ್ ಬ್ಲೂ ಕಿಂಗಫಿಷರ್) ಅತ್ಯಂತ ಉಜ್ವಲ ವರ್ಣದ ಆಕರ್ಷಕ ಹಕ್ಕಿ. ಕುತ್ತಿಗೆ ಮತ್ತು ಹೊಟ್ಟೆಗೆ ಹೊಂಬಣ್ಣದ ಚೆಲುವು. ಬಲವಾದ ನೀಲಿ ಮಿಶ್ರಿತ ಕಪ್ಪು ಬಣ್ಣದ ಉದ್ದ ಕೊಕ್ಕು, ಚೋಟುದ್ದ ಕಾಲುಗಳು ಮಿಂಚುಳ್ಳಿಯ ದುಂಡನೆಯ ಆಕೃತಿಗೆ ಮೆರಗು ತೊಡಿಸಿವೆ.
ಭಾರತ, ಪಾಕಿಸ್ತಾನ, ಶ್ರೀಲಂಕಾ ಹಾಗೂ ಭರ್ಮಾಗಳಲ್ಲಿ ಕಾಣಸಿಗುವ ಕಿರು ಮಿಂಚುಳ್ಳಿಯಲ್ಲಿ ಗಂಡು ಮತ್ತು ಹೆಣ್ಣು ಪಕ್ಷಿಗಳಲ್ಲಿ ಹೇಳಿಕೊಳ್ಳುವಂತಹ ವ್ಯತ್ಯಾಸಗಳಿಲ್ಲ. ಮಾರ್ಚ್ ನಿಂದ ಜೂನ್ ತಿಂಗಳುಗಳಲ್ಲಿ ಹೊಳೆ-ಹಳ್ಳಗಳ ಕಡಿದಾದ ದಂಡೆಗಳಲ್ಲಿ ನೆಲಕ್ಕೆ ಸಮಾನಾಂತರವಾಗಿ ಪೊಟರೆ ಕೊರೆದು ಗೂಡು ಕಟ್ಟುತ್ತವೆ. ಸುಮಾರು ೫೦ ಸೆಂ.ಮೀ. ಉದ್ದದ ಈ ಮಣ್ಣಿನ ಪೊಟರೆಯಲ್ಲಿ ೫ ರಿಂದ ೭ ಮೊಟ್ಟೆಗಳನ್ನು ಹೆಣ್ಣು ಮಿಂಚುಳ್ಳಿ ಹಾಕುತ್ತದೆ. ಮೊಟ್ಟೆಗಳು ಶುಭ್ರ ಬಣ್ಣದ, ಮಿರಿ ಮಿರಿ ಮಿಂಚುವ ಗೋಲಿಯಂತೆ ದುಂಡಗಿರುತ್ತವೆ. ಮೊಟ್ಟೆ ಇರುವ ಗೂಡಿನ ಜಾಗ ಮಾತ್ರ ಅಗಲವಾಗಿದ್ದು, ತಾಯಿ-ತಂದೆ ಹಕ್ಕಿ ಜೋಡಿಯಾಗಿ ಮೊಟ್ಟೆಗಳ ಮೇಲೆ ಕುಳಿತು ಕಾವು ಕೊಡಲು ಅನುವಾಗುವಂತೆ ಇರುತ್ತದೆ. ಸಂತಾನೋತ್ಪತ್ತಿ ಕಾಲದಲ್ಲಿ ಮಾತ್ರ ಜೋಡಿಯಾಗಿ ಕಾಣುವ ಕಿರು ಮಿಂಚುಳ್ಳಿ, ಬಹುತೇಕ ಒಂಟಿಯಾಗಿಯೇ ಇರಲು, ಬೇಟೆಯಾಡಲು ಬಯಸುತ್ತದೆ. ಮತ್ತಷ್ಟು ಓದು 
ಭಾರತಕ್ಕೆ ಒಬಾಮ ಹಾಕಿದ ಟೋಪಿ!
ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಬಂದಿದ್ದಾರೆ. ತನ್ನ ದೇಶದಲ್ಲಿ ಐವತ್ತು ಸಾವಿರ ಉದ್ಯೋಗಗಳನ್ನು ಸಷ್ಟಿಸಲು 44 ಸಾವಿರ ಕೋಟಿ ರೂಪಾಯಿ ಒಪ್ಪಂದವನ್ನು ಮಾಡಿಕೊಂಡಿದ್ದಾರೆ. ಅಮೆರಿಕದ ರಫ್ತು ದ್ವಿಗುಣ ಮಾಡುವುದೇ ತನ್ನ ಗುರಿ ಎಂದು ಇಂಡಿಯಾಕ್ಕೆ ಭರ್ಜರಿ ಟೋಪಿ ಹಾಕಿದ್ದಾರೆ. ಭಾರತದ ಶಸ್ತ್ರಾಸ್ತ್ರ ಮಾರುಕಟ್ಟೆಯ ಮೇಲೂ ಕಣ್ಣು ಹಾಕಿದ್ದಾರೆ. ನಮ್ಮ ದೇಶವನ್ನು ಇಕ್ಕಟ್ಟಿಗೆ ಸಿಲುಕಿಸಲೆಂದೇ ಪರಮಾಣು ಪೂರೈಕೆದಾರರ ಕೂಟದಲ್ಲಿ (ಎನ್‌ಎಸ್‌ಜಿ) ಭಾರತಕ್ಕೆ ಪೂರ್ಣ ಪ್ರಮಾಣದ ಸದಸ್ಯತ್ವ ದೊರಕಿಸಿಕೊಡುವ ಆಶ್ವಾಸನೆಯನ್ನು ನೀಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಈ ದೇಶದ ಸಂಪನ್ಮೂಲಗಳನ್ನು ಲೂಟಿ ಮಾಡಲು ಏನೇನು ಮಾಡಬೇಕೋ ಅದನ್ನೆಲ್ಲ ಮಾಡಿದ್ದಾರೆ.
ಬರಾಕ್ ಒಬಾಮ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಾಗ ಅಮೆರಿಕಕ್ಕೊಬ್ಬ ಕಪ್ಪು ವರ್ಣಿಯ ವ್ಯಕ್ತಿ ನಾಯಕತ್ವ ವಹಿಸಿದನೆಂದು ಸಂಭ್ರಮ ಪಟ್ಟವರಿದ್ದರು. ನಮ್ಮ ದೇಶದಲ್ಲೂ ಇಂಥ ವಿಜಯೋತ್ಸಾಹ ಕಂಡು ಬಂದಿತ್ತು. ಆದರೆ, ಎಡ ಪಂಥಿಯರಲ್ಲಿ ಯಾವುದೇ ಭ್ರಮೆ ಇರಲಿಲ್ಲ. ಯಾವುದೇ ಬಣ್ಣದ ವ್ಯಕ್ತಿ ಅಧಿಕಾರಕ್ಕೆ ಬಂದನೆಂದ ಮಾತ್ರಕ್ಕೆ ಒಂದು ಸಾಮ್ರಾಜ್ಯಶಾಹಿ ದೇಶದ ನೀತಿ ಧೋರಣೆಗಳು ಒಮ್ಮಿಂದೊಮ್ಮೆಲೆ ಬದಲಾಗಿ ಬಿಡುವುದಿಲ್ಲ. ಬರಾಕ್ ಒಬಾಮ ಒಳ್ಳೆಯವರೇ ಇರಬಹುದು. ವರ್ಣಭೇದದ ಬೆಂಕಿಯಲ್ಲಿ ನಲುಗಿದವರಿರಬಹುದು. ಮತ್ತಷ್ಟು ಓದು 
ಎರಡೇ ಎರಡು ಹನಿಗಳು
ದಯಾಳು
ಯಾಕೋ ಇಂದು
ಧರಣಿ ಮಂಡಲ ಮಧ್ಯದೊಳಗೆ
ಹಾಡು ನೆನಪಾಗುತಿದೆ
ಪುಣ್ಯಕೋಟಿಯ ಜೊತೆ
ಚಂಡವ್ಯ್ಯಾಘ್ರನ ನೆನಪೂ
ಬಹಳ ಕಾಡುತಿದೆ
ಆತನೇನು ಕಡಿಮೆ ದಯೆಯಲ್ಲಿ
ಪುಣ್ಯಕೋಟಿಗಿಂತ











